2015 ರ ವರೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು.

ಕ್ರ.ಸಂ  /  ಇಸ್ವಿ.  /   ಸ್ಥಳ  /    ಅಧ್ಯಕ್ಷರು

೧ ೧೯೧೫  ಬೆಂಗಳೂರು ಎಚ್.ವಿ.ನಂಜುಂಡಯ್ಯ
೨ ೧೯೧೬  ಬೆಂಗಳೂರು ಎಚ್.ವಿ.ನಂಜುಂಡಯ್ಯ
೩ ೧೯೧೭  ಮೈಸೂರು ಎಚ್.ವಿ.ನಂಜುಂಡಯ್ಯ
೪ ೧೯೧೮  ಧಾರವಾಡ ಆರ್.ನರಸಿಂಹಾಚಾರ್
೫ ೧೯೧೯  ಹಾಸನ ಕರ್ಪೂರ ಶ್ರೀನಿವಾಸರಾವ್
೬ ೧೯೨೦  ಹೊಸಪೇಟೆ ರೊದ್ದ ಶ್ರೀನಿವಾಸರಾವ
೭ ೧೯೨೧  ಚಿಕ್ಕಮಗಳೂರು ಕೆ.ಪಿ.ಪುಟ್ಟಣ್ಣ ಶೆಟ್ಟಿ
೮ ೧೯೨೨  ದಾವಣಗೆರೆ ಎಂ.ವೆಂಕಟಕೃಷ್ಣಯ್ಯ
೯ ೧೯೨೩  ಬಿಜಾಪುರ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦ ೧೯೨೪  ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
೧೧ ೧೯೨೫  ಬೆಳಗಾವಿ ಬೆನಗಲ್ ರಾಮರಾವ್
೧೨ ೧೯೨೬  ಬಳ್ಳಾರಿ ಫ.ಗು.ಹಳಕಟ್ಟಿ
೧೩ ೧೯೨೭  ಮಂಗಳೂರು ಆರ್.ತಾತಾಚಾರ್ಯ
೧೪ ೧೯೨೮  ಕಲಬುರ್ಗಿ ಬಿ ಎಂ ಶ್ರೀ
೧೫ ೧೯೨೯  ಬೆಳಗಾವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬ ೧೯೩೦  ಮೈಸೂರು ಆಲೂರು ವೆಂಕಟರಾಯರು
೧೭ ೧೯೩೧  ಕಾರವಾರ ಮುಳಿಯ ತಿಮ್ಮಪ್ಪಯ್ಯ
೧೮ ೧೯೩೨  ಮಡಿಕೇರಿ ಡಿ ವಿ ಜಿ
೧೯ ೧೯೩೩  ಹುಬ್ಬಳ್ಳಿ ವೈ.ನಾಗೇಶ ಶಾಸ್ತ್ರಿ
೨೦ ೧೯೩೪  ರಾಯಚೂರು ಪಂಜೆ ಮಂಗೇಶರಾಯರು
೨೧ ೧೯೩೫  ಮುಂಬಯಿ ಎನ್.ಎಸ್.ಸುಬ್ಬರಾವ್
೨೨ ೧೯೩೭  ಜಮಖಂಡಿ ಬೆಳ್ಳಾವೆ ವೆಂಕಟನಾರಣಪ್ಪ
೨೩ ೧೯೩೮  ಬಳ್ಳಾರಿ ರಂಗನಾಥ ದಿವಾಕರ
೨೪ ೧೯೩೯  ಬೆಳಗಾವಿ ಮುದವೀಡು ಕೃಷ್ಣರಾಯರು
೨೫ ೧೯೪೦  ಧಾರವಾಡ ವೈ.ಚಂದ್ರಶೇಖರ ಶಾಸ್ತ್ರಿ
೨೬ ೧೯೪೧  ಹೈದರಾಬಾದ್ ಎ.ಆರ್.ಕೃಷ್ಣಶಾಸ್ತ್ರಿ
೨೭ ೧೯೪೩  ಶಿವಮೊಗ್ಗ ದ.ರಾ.ಬೇಂದ್ರೆ
೨೮ ೧೯೪೪  ರಬಕವಿ ಎಸ್.ಎಸ್.ಬಸವನಾಳ
೨೯ ೧೯೪೫  ಮದರಾಸು ಟಿ ಪಿ ಕೈಲಾಸಂ
೩೦ ೧೯೪೭  ಹರಪನಹಳ್ಳಿ ಸಿ.ಕೆ.ವೆಂಕಟರಾಮಯ್ಯ
೩೧ ೧೯೪೮  ಕಾಸರಗೋಡು ತಿ.ತಾ.ಶರ್ಮ
೩೨ ೧೯೪೯  ಕಲಬುರ್ಗಿ ಉತ್ತಂಗಿ ಚನ್ನಪ್ಪ
೩೩ ೧೯೫೦  ಸೊಲ್ಲಾಪುರ ಎಮ್.ಆರ್.ಶ್ರೀನಿವಾಸಮೂರ್ತಿ
೩೪ ೧೯೫೧  ಮುಂಬಯಿ ಗೋವಿಂದ ಪೈ
೩೫ ೧೯೫೨  ಬೇಲೂರು ಎಸ್.ಸಿ.ನಂದೀಮಠ
೩೬ ೧೯೫೪  ಕುಮಟಾ ವಿ.ಸೀತಾರಾಮಯ್ಯ
೩೭ ೧೯೫೫  ಮೈಸೂರು ಶಿವರಾಮ ಕಾರಂತ
೩೮ ೧೯೫೬  ರಾಯಚೂರು ಶ್ರೀರಂಗ
೩೯ ೧೯೫೭  ಧಾರವಾಡ ಕುವೆಂಪು
೪೦ ೧೯೫೮  ಬಳ್ಳಾರಿ ವಿ.ಕೆ.ಗೋಕಾಕ
೪೧ ೧೯೫೯  ಬೀದರ ಡಿ.ಎಲ್.ನರಸಿಂಹಾಚಾರ್
೪೨ ೧೯೬೦  ಮಣಿಪಾಲ ಅ.ನ. ಕೃಷ್ಣರಾಯ
೪೩ ೧೯೬೧  ಗದಗ ಕೆ.ಜಿ.ಕುಂದಣಗಾರ
೪೪ ೧೯೬೩  ಸಿದ್ದಗಂಗಾ ರಂ.ಶ್ರೀ.ಮುಗಳಿ
೪೫ ೧೯೬೫  ಕಾರವಾರ ಕಡೆಂಗೋಡ್ಲು ಶಂಕರಭಟ್ಟ
೪೬ ೧೯೬೭  ಶ್ರವಣಬೆಳಗೊಳ ಆ.ನೇ.ಉಪಾಧ್ಯೆ
೪೭ ೧೯೭೦  ಬೆಂಗಳೂರು ದೇ.ಜವರೆಗೌಡ
೪೮ ೧೯೭೪  ಮಂಡ್ಯ ಜಯದೇವಿತಾಯಿ ಲಿಗಾಡೆ
೪೯ ೧೯೭೬  ಶಿವಮೊಗ್ಗ ಎಸ್.ವಿ.ರಂಗಣ್ಣ
೫೦ ೧೯೭೮  ದೆಹಲಿ ಜಿ.ಪಿ.ರಾಜರತ್ನಂ
೫೧ ೧೯೭೯  ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
೫೨ ೧೯೮೦  ಬೆಳಗಾವಿ ಬಸವರಾಜ ಕಟ್ಟೀಮನಿ
೫೩ ೧೯೮೧  ಚಿಕ್ಕಮಗಳೂರು ಪು.ತಿ.ನರಸಿಂಹಾಚಾರ್
೫೪ ೧೯೮೧  ಮಡಿಕೇರಿ ಶಂ.ಬಾ.ಜೋಶಿ
೫೫ ೧೯೮೨  ಶಿರಸಿ ಗೊರೂರು ರಾಮಸ್ವಾಮಿ ಐಯಂಗಾರ್
೫೬ ೧೯೮೪  ಕೈವಾರ ಎ.ಎನ್.ಮೂರ್ತಿ ರಾವ್
೫೭ ೧೯೮೫  ಬೀದರ್ ಹಾ.ಮಾ.ನಾಯಕ
೫೮ ೧೯೮೭  ಕಲಬುರ್ಗಿ ಸಿದ್ದಯ್ಯ ಪುರಾಣಿಕ
೫೯ ೧೯೯೦  ಹುಬ್ಬಳ್ಳಿ ಆರ್.ಸಿ.ಹಿರೇಮಠ
೬೦ ೧೯೯೧  ಮೈಸೂರು ಕೆ.ಎಸ್. ನರಸಿಂಹಸ್ವಾಮಿ
೬೧ ೧೯೯೨  ದಾವಣಗೆರೆ ಜಿ.ಎಸ್.ಶಿವರುದ್ರಪ್ಪ
೬೨ ೧೯೯೩  ಕೊಪ್ಪ್ಪಳ ಸಿಂಪಿ ಲಿಂಗಣ್ಣ
೬೩ ೧೯೯೪  ಮಂಡ್ಯ ಚದುರಂಗ
೬೫ ೧೯೯೬  ಹಾಸನ ಚನ್ನವೀರ ಕಣವಿ
೬೬ ೧೯೯೭  ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
೬೭ ೧೯೯೯  ಕನಕಪುರ ಎಸ್.ಎಲ್.ಭೈರಪ್ಪ
೬೮ ೨೦೦೦  ಬಾಗಲಕೋಟೆ ಶಾಂತಾದೇವಿ ಮಾಳವಾಡ
೬೯ ೨೦೦೨  ತುಮಕೂರು ಯು.ಆರ್. ಅನಂತಮೂರ್ತಿ
೭೦ ೨೦೦೩  ಮೂಡುಬಿದಿರೆ ಕಮಲಾ ಹಂಪನಾ
೭೨ ೨೦೦೬  ಬೀದರ್ ಶಾಂತರಸ ಹೆಂಬೆರಳು
೭೩ ೨೦೦೭  ಶಿವಮೊಗ್ಗ ನಿಸಾರ್ ಅಹಮ್ಮದ್
೭೪ ೨೦೦೮  ಉಡುಪಿ ಎಲ್. ಎಸ್. ಶೇಷಗಿರಿ ರಾವ್
೭೫ ೨೦೦೯  ಚಿತ್ರದುರ್ಗ ಎಲ್. ಬಸವರಾಜು
೭೬ ೨೦೧೦  ಗದಗ ಡಾ. ಗೀತಾ ನಾಗಭೂಷಣ
೭೭ ೨೦೧೧  ಬೆಂಗಳೂರು ಜಿ. ವೆಂಕಟಸುಬ್ಬಯ್ಯ
೭೮ ೨೦೧೨  ಗಂಗಾವತಿ ಸಿ.ಪಿ ಕೃಷ್ಣಕುಮಾರ್
೭೯ ೨೦೧೩  ವಿಜಾಪುರ ಕೋ.ಚನ್ನಬಸಪ್ಪ
೮೦ ೨೦೧೪  ಕೊಡಗು ನಾ ಡಿಸೋಜ
೮೧ ೨೦೧೫  ಶ್ರವಣಬೆಳಗೊಳ ಡಾ.ಸಿದ್ದಲಿಂಗಯ್ಯ

ಪ್ರಪಂಚದ ದೇಶಗಳು ಮತ್ತು ಅವುಗಳ ರಾಜಧಾನಿ.

ಪ್ರಪಂಚದ ದೇಶಗಳು ಮತ್ತು ರಾಜಧಾನಿ
•••••••••••••••••••••••••••••••••••••••••••••
1. ಅಫ್ಘಾನಿಸ್ತಾನ -ಕಾಬೂಲ್
2. ಅಕ್ರೋತಿರಿ ಮತ್ತು ಧೆಕೆಲಿಯಾ- ಎಪಿಸ್ಕೋಪಿ ಕಂಟೋನ್ಮೆಂಟ್
3. ಅಲ್ಬೇನಿಯಾ -ಟಿರಾನಾ
4. ಅಲ್ಜೀರಿಯಾ -ಅಲ್ಜೀರಿಸ್
5. ಅಮೇರಿಕನ್ ಸಮೋವಾ ಪಾಗೋ- ಪಾಗೋ
6. ಅಂಡೋರಾ- ಅಂಡೋರಾ ಲಾ ವೆಲ್ಲಾ
7. ಅಂಗೋಲಾ- ಲುಆಂಡಾ
8. ಆಂಗ್ವಿಲಾ- ದಿ ವ್ಯಾಲ್ಲಿ
9. ಆಂಟಿಗುವಾ ಮತ್ತು ಬಾರ್ಬಡಾ -ಸೇಂಟ್ ಜಾನ್ಸ್
10. ಅರ್ಜೆಂಟೀನಾ- ಬ್ಯುನೋಸ್ ಐರಿಸ್
11. ಅರ್ಮೇನಿಯಾ- ಯೆರೆವಾನ್
12. ಅರುಬಾ ಓರನ್- ಜೆಸ್ತಾದ್
13. ಆಸ್ಟ್ರೇಲಿಯಾ -ಕ್ಯಾನ್ಬೆರಾ
14. ಆಸ್ಟ್ರಿಯಾ- ವಿಯೆನ್ನಾ
15. ಅಝರ್ಬೆಜಾನ್- ಬಾಕು
16. ಬಹಾಮಾಸ್- ನಾಸ್ಸಾಉ
17. ಬಹ್ರೇನ್ -ಮನಾಮಾ
18. ಬಾಂಗ್ಲಾದೇಶ್ -ಢಾಕಾ
19. ಬಾರ್ಬಡೋಸ್ -ಬ್ರಿಡ್ಜಟೌನ್
20. ಬೆಲಾರೂಸ್ ಮಿನ್ಸ್ಕ್
21. ಬೆಲ್ಜಿಯಮ್- ಬ್ರುಸ್ಸೆಲ್ಸ್
22. ಬೆಲಿಝ್ -ಬೆಲ್ಮೊಪಾನ್
23. ಬೆನಿನ್ ಪೊರ್ಟೋ-ನೋವೋ
24. ಬರ್ಮುಡಾ -ಹ್ಯಾಮಿಲ್ಟನ್
25. ಭೂತಾನ್ -ಥಿಂಪು
26. ಬೊಲಿವಿಯಾ -ಸುಕ್ರೆ / ಲಾ ಪಾಝ್
27. ಬೋಸ್ನಿಯಾ ಮತ್ತು ಹರ್ಝೆಗೋವಿನಾ- ಸರಜೆವೋ
28. ಬೋಟ್ಸ್ವಾನಾ -ಗೆಬರೋನ್
29. ಬ್ರಾಝಿಲ್ -ಬ್ರಾಸಿಲಿಯಾ
30. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್- ರೋಡ್ ಟೌನ್
31. ಬ್ರುನಿ ಬಂದಾರ್ ಸೇರಿ -ಬೇಗವಾನ್
32. ಬಲ್ಗೇರಿಯಾ -ಸೋಫಿಯಾ
33. ಬರ್ಕಿನಾ ಫಾಸೋ- ಉಆಗಡೌಗು
34. ಬುರುಂಡಿ- ಬುಜುಂಬುರಾ
35. ಕಾಂಬೋಡಿಯಾ- ಫೆನೋಮ್ ಪೆನ್
36. ಕ್ಯಾಮರೂನ್- ಯಾಂಡೇ
37. ಕೆನಡಾ -ಒಟ್ಟಾವಾ
38. ಕೇಪ್ ವರ್ಡ್- ಪ್ರೈಯಾ
39. ಕೇಮನ್ ಐಲ್ಯಾಂಡ್ಸ್ -ಜಾರ್ಜ್ ಟೌನ್
40. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್- ಬಾಂಗೈ
41. ಚಾಡ್ ಎನ್ ’ -ಜಮೇನಾ
42. ಚಿಲಿ -ಸ್ಯಾಂಟಿಯಾಗೋ
43. ಕ್ರಿಸ್ ಮಸ್ ಐಲ್ಯಾಂಡ್- ಫ್ಲಾಯಿಂಗ್ ಫಿಶ್ ಕೋವ್
44. ಕೊಕೋಸ್ ಐಲ್ಯಾಂಡ್ – ವೆಸ್ಟ್ ಐಲ್ಯಾಂಡ್
45. ಕೊಲಂಬಿಯ- ಬೊಗೊಟಾ
46. ಕೊಮೊರೋಸ್- ಮೊರೊನಿ
47. ಕುಕ್ ಐಲ್ಯಾಂಡ್ಸ್- ಅವರುಆ
48. ಕೋಸ್ಟಾ ರಿಕಾ- ಸ್ಯಾನ್ ಜೋಸ್
49. ಕ್ರೊಯೇಷಿಯಾ- ಝಾಗ್ರೇಬ್
50. ಕ್ಯೂಬಾ- ಹವಾನಾ
51. ಸಿಪ್ರಸ್- ನಿಕೋಸೊಯಾ
52. ಝೆಕ್ ಗಣರಾಜ್ಯ -ಪ್ರೇಗ್
53. ಕೋಟ್ ಡೆ ಐವರಿ- ಯಾಮೊಸೊಕ್ರೋ
54. ಕಾಂಗೋ ಪ್ರಜಾ ಗಣರಾಜ್ಯ -ಕಿನ್ಸ್ಹಾಸಾ
55. ಡೆನ್ಮಾರ್ಕ್ -ಕೋಪನ್ ಹೇಗನ್
56. ಜಿಬೌತಿ -ಜಿಬೌತಿ
57. ಡೊಮಿನಿಕಾ -ರೊಸ್ಯು
58. ಡೊಮಿನಿಕಾ ಗಣರಾಜ್ಯ-ಸ್ಯಾಂಟೋ ಡೊಮಿಂಗೋ
59. ಪೂರ್ವ ತಿಮೋರ್ -ಡಿಲಿ
60. ಇಕ್ವೆಡಾರ್- ಕ್ವಿಟೋ
61. ಈಜಿಪ್ಟ್ -ಕೈರೋ
62. ಎಲ್ ಸಾಲ್ವಡೋರ್- ಸಾನ್ ಸಾಲ್ವಡೋರ್
63. ಎಕ್ವೆಟೋರಿಯಲ್ ಗಿನಿಯಾ – ಮಲಬೊ
64. ಎರಿತ್ರಿಯಾ -ಅಸ್ಮಾರಾ
65. ಎಸ್ಟೋನಿಯಾ- ಟಾಲಿನ್
66. ಇಥಿಯೋಪಿಯಾ- ಆಡಿಸ್ ಅಬಾಬಾ
67. ಫಾಲ್ಕಲ್ಯಾಂಡ್ ದ್ವೀಪಗಳು- ಸ್ಟ್ಯಾನ್ಲಿ
68. ಫೆರೋ ದ್ವೀಪಗಳು -ಟೋರ್ಶ್ವಾನ್
69. ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ – ಪಾಲಿಕಿರ್
70. ಫಿಜಿ -ಸುವಾ
71. ಫಿನ್ ಲ್ಯಾಂಡ್- ಹೆಲ್ಸಿಂಕಿ
72. ಫ್ರಾನ್ಸ್- ಪ್ಯಾರಿಸ್
73. ಫ್ರೆಂಚ್ ಪಾಲಿನೇಷಿಯಾ- ಪಪೆಟ
74. ಗಬೊನ್-ಲಿಬ್ರವಿಲ್ಲೆ
75. ಗಾಂಬಿಯಾ- ಬಂಜುಲ್
76. ಜಾರ್ಜಿಯಾ- ಬಿಲಿಸಿ
77. ಜರ್ಮನಿ -ಬರ್ಲಿನ್
78. ಘಾನಾ- ಆಕ್ರಾ
79. ಜಿಬ್ರಾಲ್ಟರ್- ಜಿಬ್ರಾಲ್ಟರ್
80. ಗ್ರೀಸ್- ಅಥೆನ್ಸ್
81. ಗ್ರೀನ್ ಲ್ಯಾಂಡ್ -ನೂಕ್
82. ಗ್ರೆನಾಡಾ -ಸೇಂಟ್ ಜಾರ್ಜ್
83. ಗ್ವಾಮ್ -ಹಗತ್ನಾ
84. ಗ್ವಾಟೆಮಾಲಾ -ಗ್ವಾಟೆಮಾಲಾ ನಗರ
85. ಗೆರ್ನ್ಸೆ -ಸೇಂಟ್ ಪೀಟರ್ ಪೋರ್ಟ್
86. ಗಿನಿಯಾ- ಕೊನಾಕ್ರಿ
87. ಗಿನಿಯಾ- ಬಿಸಾಉ ಬಿಸಾಉ
88. ಗಯಾನಾ- ಜಾರ್ಜ್ ಟೌನ್
89. ಹೈಟಿ ಪೋರ್ಟ್- ಔ ಪ್ರಿನ್ಸ್
90. ಹೊಂಡುರಾಸ್- ತೆಗುಸಿಗಲ್ಪಾ
91. ಹಂಗರಿ- ಬುಡಾಪೆಸ್ಟ್
92. ಐಸ್ ಲ್ಯಾಂಡ್ -ರೆಯ್ಕಜಾವಿಕ್
93. ಭಾರತ -ನವದೆಹಲಿ
94. ಇಂಡೋನೇಷಿಯಾ -ಜಕಾರ್ತಾ
95. ಇರಾನ್- ತೆಹರಾನ್
96. ಇರಾಕ್ -ಬಾಗ್ದಾದ್
97. ಐರ್ ಲ್ಯಾಂಡ್- ಡಬ್ಲಿನ್
98. ಐಲ್ ಆಫ್ ಮ್ಯಾನ್ -ಡಗ್ಲಾಸ್
99. ಇಸ್ರೇಲ್- ಜೆರುಸಲೇಮ್
100. ಇಟಲಿ- ರೋಮ್
101. ಜಮೈಕಾ -ಕಿಂಗಸ್ಟನ್
102. ಜಪಾನ್- ಟೊಕಿಯೋ
103. ಜರ್ಸಿ- ಸೇಂಟ್ ಹೀಲರ್
104. ಜೋರ್ಡಾನ್ -ಅಮ್ಮಾನ್
105. ಕಝಕಿಸ್ತಾನ್- ಅಸ್ತಾನಾ
106. ಕೀನ್ಯಾ- ನೈರೋಬಿ
107. ಕಿರಿಬಾತಿ -ದಕ್ಷಿಣ ತರಾವಾ
108. ಕೊಸೊವೋ- ಪ್ರಿಸ್ಟಿನಾ
109. ಕುವೈತ್- ಕುವೈತ್ ನಗರ
110. ಕಿರ್ಗಿಸ್ತಾನ್- ಬಿಶ್ಕೇಕ್
111. ಲಾವೊಸ್- ವಿಯೆನ್ಶಿಯೇನ್
112. ಲಾತ್ವಿಯಾ- ರಿಗಾ
113. ಲೆಬನಾನ್ -ಬೀರತ್
114. ಲೆಸೋತೊ- ಮಾಸೇರು
115. ಲೈಬೀರಿಯಾ- ಮೊನ್ರೋವಿಯಾ
116. ಲಿಬಿಯಾ- ತ್ರಿಪೋಲಿ
117. ಲೀಶೆನ್ ಸ್ಟೈನ್ – ವಾಡುಝ್
118. ಲಿಥುಯೇನಿಯಾ- ವಿಲ್ನಿಯಸ್
119. ಲುಕ್ಸೆಂಬರ್ಗ್ -ಲುಕ್ಸೆಂಬರ್ಗ್ ನಗರ
120. ಮಸಿಡೋನಿಯಾ- ಸ್ಕೋಜೆ
121. ಮಡಗಾಸ್ಕರ್- ಅಂಟಾನನರಿವೊ
122. ಮಾಲಾವಿ -ಲಿಲೊಂಗ್ವೆ
123. ಮಲೇಷಿಯಾ- ಕೌಲಾಲಂಪುರ /
ಪುತ್ರಾಜಯಾ
124. ಮಾಲ್ಡೀವ್ಸ್ -ಮಾಲೆ
125. ಮಾಲಿ- ಬಮಾಕೊ
126. ಮಾಲ್ಟಾ -ವೆಲೆಟ್ಟಾ
127. ಮಾರ್ಷಲ್ ದ್ವೀಪಗಳು- ಮಜುರೊ
128. ಮಾರಿಷಿಯಾನಾ- ನೌಕ್ಚೋಟ್
129. ಮಾರಿಷಿಯಸ್ -ಪೋರ್ಟ್ ಲೂಯಿಸ್
130. ಮೇಯೊಟ್ -ಮಾಮೌಡ್ಝು
131. ಮೆಕ್ಸಿಕೋ -ಮೆಕ್ಸಿಕೋ ನಗರ
132. ಮಾಲ್ಡೋವಾ- ಚಿಸಿನಾಉ
133. ಮೊನಾಕೋ- ಮೊನಾಕೊ
134. ಮಂಗೋಲಿಯಾ- ಉಲಾನ್ ಬತಾರ್
135. ಮಾಂಟೆನೆಗ್ರೋ- ಪೊಡ್ಗೋರಿಕಾ
136. ಮಾಂಟ್ಸೆರಾಟ್- ಪ್ಲೈಮೌಥ್
137. ಮೊರೊಕ್ಕೋ -ರಾಬಾತ್
138. ಮಾಝಾಂಬಿಕ್- ಮಾಪುಟೋ
139. ಮಯನ್ಮಾರ್- ನೇಪಿಡಾ
140. ನಮೀಬಿಯಾ -ವಿಂಢೋಕ್
141. ನೌರು- ಯಾರೆನ್
142. ನೇಪಾಳ -ಕಠ್ಮಂಡು
143. ನೆದರ್ ಲ್ಯಾಂಡ್ಸ್- ಆ್ಯಮ್
ಸ್ಟರಡಾಮ್
144. ನೆದರ್ ಲ್ಯಾಂಡ್ಸ್ ಆ್ಯಂಟಿಲ್ಸ್- ವಿಲ್ಲೆಮಸ್ಟಾಡ್
145. ನ್ಯೂ ಕ್ಯಾಲೆಡೋನಿಯಾ -ನೌಮಿಯಾ
146. ನ್ಯೂಝೀಲ್ಯಾಂಡ್,- ವೆಲಿಂಗ್ಟನ್
147. ನಿಕಾರಾಗುಆ- ಮನಾಗುಆ
148. ನೈಗರ್- ನಿಯಾಮಿ
149. ನೈಜೀರಿಯಾ- ಅಬುಜಾ
150. ನ್ಯೂ (niue) -ಅಲೋಫಿ
151. ನೊರ್ಫೋಕ್ ದ್ವೀಪಗಳು- ಕಿಂಗಸ್ಟನ್
152. ಉತ್ತರ ಕೊರಿಯಾ,- ಪ್ಯೋಂಗ್ ಯಾಂಗ್
153. ಉತ್ತರ ಸಿಪ್ರಸ್ -ನಿಕೋಸಿಯಾ
154. ಉತ್ತರ ಐರ್ ಲ್ಯಾಂಡ್ -ಬೆಲ್ಫಾಸ್ಟ್
155. ಉತ್ತರ ಮರಿಯಾನಾ ದ್ವೀಪಗಳು- ಸ
ೈಪಾನ್
156. ನಾರ್ವೆ- ಓಸ್ಲೋ
157. ಓಮನ್ -ಮಸ್ಕತ್
158. ಪಾಕಿಸ್ತಾನ್- ಇಸ್ಲಾಮಾಬಾದ್
159. ಪಲಾಉ ಗೆರುಲ್- ಮಡ್
160. ಪ್ಯಾಲೆಸ್ತೀನ್ -ಉತ್ತರ
ಜೆರುಸಲೇಮ್
161. ಪನಾಮಾ- ಪನಾಮಾ ನಗರ
162. ಪಪುವಾ ನ್ಯೂ ಗಿನಿಯಾ- ಪೋರ್ಟ್ ಮಾರ್ಸ್ ಬೀ
163. ಪೆರುಗ್ವೆ -ಅಸುನ್ಶಿಯಾನ್
164. ಚೀನಾ- ಬೀಜಿಂಗ್
165. ಪೆರು -ಲಿಮಾ
166. ಫಿಲಿಪ್ಪೀನ್ಸ್ -ಮಣಿಲಾ
167. ಪಿಟ್ ಕೇರ್ನ್ ದ್ವೀಪಗಳು- ಆ್ಯಡಮ್ಸ್ ಟೌನ್
168. ಪೋಲಂಡ್- ವಾರ್ಸಾ
169. ಪೋರ್ತುಗಲ್ -ಲಿಸ್ಬನ್
170. ಪೋರ್ಟೋ ರಿಕೊ -ಸಾನ್ ಜುಆನ್
172. ಕತಾರ್- ದೋಹಾ
173. ತೈವಾನ್- ತೈಪೈ
174. ಕಾಂಗೋ -ಬ್ರಾಝಾವಿಲ್ಲೆ
175. ರೊಮಾನಿಯಾ -ಬುಕಾರೆಸ್ಟ್
176. ರಷಿಯಾ -ಮಾಸ್ಕೋ
177. ರ್ವಾಂಡ -ಕಿಗಾಲಿ
178. ಸೇಂಟ್ ಬಾರ್ಥೆಲೆಮಿ- ಗುಸ್ತಾವಿಯಾ
179. ಸೇಂಟ್ ಹೆಲೆನಾ -ಜೇಮ್ಸ್ ಟೌನ್
180. ಸೆಂಟ್ ಕೀಟ್ಸ್ ಮತ್ತು ನೆವಿಸ್
-ಬ್ಯಾಸ್ಸೆಟೆರೆ
181. ಸೇಂಟ್ ಲೂಯಿಸ್- ಕ್ಯಾಸ್ಟ್ರೀಸ್
182. ಸೇಂಟ್ ಮಾರ್ಟಿನ್- ಮಾರಿಗೋಟ್
183. ಸೇಂಟ್ ಪಿಯರೆ ಮತ್ತು ಮಿಕೆಲೋನ್- ಸೇಂಟ್ ಪಿಯರೆ
184. ಸೇಂಟ್ ವಿನ್ಸೆಂಟ್ ಮತ್ತು ದಿ
ಗ್ರೆನೆಡೈನ್ಸ್- ಕಿಂಗ್ಸ್ ಟೌನ್
185. ಸಮೋವಾ -ಏಪಿಯಾ
186. ಸಾನ್ ಮರಿನೋ- ಸಾನ್ ಮರಿನೋ
187. ಸೌದಿ ಅರೇಬಿಯಾ- ರಿಯಾದ್
188. ಸ್ಕಾಟ್ ಲ್ಯಾಂಡ್ -ಎಡಿನ್ ಬರೋ
189. ಸೆನೆಗಲ್- ದಕಾರ್
190. ಸರ್ಬಿಯಾ -ಬೆಲ್ಗ್ರೇಡ್
191. ಸಿಶೆಲ್ಲಿಸ್ -ವಿಕ್ಟೋರಿಯಾ
192. ಸಿಯೆರಾ ಲಿಯೋನ್ -ಫ್ರೀ ಟೌನ್
193. ಸಿಂಗಾಪೂರ್- ಸಿಂಗಾಪುರ್
194. ಸ್ಲೋವಾಕಿಯಾ -ಬ್ರತಿಸ್ಲಾವಾ
195. ಸ್ಲೊವೇನಿಯಾ -ಜುಬ್ಲಜಾನಾ
196. ಸೊಲೊಮನ್ ದ್ವೀಪಗಳು- ಹೊನಿಯಾರಾ
197. ಸೊಮಾಲಿಯಾ,- ಮಾಗಾದಿಶು
198. ಸೊಮಾಲಿಲ್ಯಾಂಡ್ -ಹರ್ಗೇಸಿಯಾ
199. ದಕ್ಷಿಣ ಆಫ್ರಿಕಾ- ಪ್ರೆಟೋರಿಯಾ
200. ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್ ವಿಚ್ ದ್ವೀಪಗಳು – ಗೃತ್ವಿಕೇನ್
201. ದಕ್ಷಿಣ ಕೊರಿಯಾ- ಸಿಯೋಲ್
202. ಸ್ಪೇನ್ -ಮ್ಯಾಡ್ರಿಡ್
203. ಶ್ರೀಲಂಕಾ – ಶ್ರೀ ಜಯವರ್ಧನೆ ಪುರ
204. ಸುಡಾನ್- ಖಾರ್ತೂಮ್
205. ಸುರಿನಾಮಾ -ಪರಮರಿಬೊ
206. ಸ್ವಾಝಿಲ್ಯಾಂಡ್- ಬಬಾನೆ
207. ಸ್ವೀಡನ್- ಸ್ಟಾಕ್ ಹೋಮ್
208. ಸ್ವಿಟ್ಜರಲ್ಯಾಂಡ್- ಬರ್ನ್
209. ಸಿರಿಯಾ- ಡಮಾಸ್ಕಸ್
210. ಸಾಓ ತೋಮೆ ಮತ್ತು ಪ್ರಿನ್ಸಿಪ್ ಸಾಓ -ತೋಮೆ
211. ತಜಕಿಸ್ತಾನ್- ದುಶಾಂಬೆ
212. ತಾಂಝಾನಿಯಾ -ಡೊಡೊಮೋ
213. ಥಾಯ್ಲ್ಯಾಂಡ್ -ಬ್ಯಾಂಕಾಕ್
214. ಟೋಗೋ- ಲೋಮೆ
215. ಟೋಂಗಾ-ನುಕು ಅಲೋಫಾ
216. ಟ್ರಾನ್ಸಿಸ್ಟ್ರಿಯಾ- ತಿರಾಸ್ಪೋಲ್
217. ಟ್ರಿನಿಡಾಡ್ ಮತ್ತು ಟೊಬಾಗೋ – ಪೋರ್ಟ್ ಆಫ್ ಸ್ಪೇನ್
218. ಟುನಿಸಿಯಾ- ಟ್ಯುನಿಸ್
219. ಟರ್ಕಿ- ಅಂಕಾರಾ
220. ತುರ್ಕಮೆನಿಸ್ತಾನ್ -ಅಶ್ಗಬಾತ್
221. ಟರ್ಕ್ ಮತ್ತು ಕೈಕೋಸ್ ದ್ವೀಪಗಳು- ಕಾಕ್ ಬರ್ನ್ ಟೌನ್
222. ತುವಾಲು- ಫುನಾಫುಟಿ
223. ಉಗಾಂಡಾ- ಕಂಪಾಲಾ
224. ಉಕ್ರೇನ್- ಕೀವ್
225. ಅರಬ್ ಸಂಯುಕ್ತ ಸಂಸ್ಥಾನ- ಅಬು ಧಾಬಿ
226. ಇಂಗ್ಲೆಂಡ್ -ಲಂಡನ್
227. ಅಮೆರಿಕಾ ಸಂಯುಕ್ತ ಸಂಸ್ಥಾನ – ವಾಷಿಂಗ್ಟನ್
228. ಯುನೈಟೆಡ್ ಸ್ಟೇಟ್ಸ್ ವರ್ಜಿನ್ ದ್ವೀಪಗಳು -ಚಾರ್ಲೋಟ್ ಅಮೇಲೀ
229. ಉರುಗ್ವೆ -ಮಾಂಟೇ ವಿಡಿಯೋ
230. ಉಜ್ಬೇಕಿಸ್ತಾನ್ -ತಾಶ್ಕೆಂಟ್
231. ವನೌತು ಪೋರ್ಟ್ -ವಿಲಾ
232. ವ್ಯಾಟಿಕನ್ ನಗರ -ವ್ಯಾಟಿಕನ್ ನಗರ
233. ವೆನೆಝುವೆಲಾ- ಕಾರ್ಕಾಸ್
234. ವಿಯೆಟ್ನಾಂ- ಹನೋಯ್
235. ವೇಲ್ಸ್ -ಕಾರ್ಡಿಫ್
236. ವಾಲಿಸ್ ಮತ್ತು ಫ್ಯುಚುನಾ ಮಾಟಾ-ಉಟು
237. ದಕ್ಷಿಣ ಸಹಾರಾ-ಲಾಯೋನ್
238. ಯೆಮೆನ್- ಸನಾ
239. ಝಾಂಬಿಯಾ- ಲುಸಾಕಾ
240. ಝಿಂಬಾಬ್ವೆ- ಹರಾರೆ

‘ಜನನ ಪ್ರಮಾಣ ಪತ್ರ’ ದ ಪ್ರಯೋಜನಗಳು.

ಜನನ ಹಾಗೂ ಮರಣ ಪ್ರಮಾಣ ಪತ್ರಗಳಿಂದ ಸಿಗುವ ಸೌಲಭ್ಯಗಳು

ಜನನ ಹಾಗೂ ಮರಣ ನಿಮ್ಮ ಕುಟುಂಬದಲ್ಲಿ ಸಂಭವಿಸಿದಾಗ ಮೊದಲು  ನಿಮ್ಮ ಸ್ಥಳೀಯ ರಿಜಿಸ್ಟ್ರಾರ್ ರಲ್ಲಿ ಅವಶ್ಯ ನೋಂದಣಿ ಮಾಡಿಸಿರಿ.

ಜನನ ಪ್ರಮಾಣ ಪತ್ರದಿಂದ ಸಿಗುವ ಸೌಲಭ್ಯಗಳು

🌷 ಶಾಲೆಗೆ ಸೇರಿಸಲು
🌷 ಉದ್ಯೋಗಕ್ಕಾಗಿ
🌷 ಮತದಾನದ ಹಕ್ಕು ಪಡೆಯಲು
🌷 ಡ್ರೈವಿಂಗ್ ಲೈಸೆನ್ಸ್ ಪಡೆಯಲು
🌷 ಪಾಸ್ ಪೋರ್ಟ್ ಪಡೆಯಲು
🌷 ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು
🌷 ಪಡಿತರ ಚೀಟಿಯಲ್ಲಿ ಹೆಸರನ್ನು ಸೇರಿಸಲು
🌷 ವಿವಾಹ ನೋಂದಣಿ ಮಾಡಿಸಲು
🌷 ದೇಶದ ಪ್ರಜೆಯೆಂದು ಸಾಬೀತುಪಡಿಸಲು
🌷 ದೇಶದ ಜನಸಂಖ್ಯೆಯನ್ನು ಅಂದಾಜು ಮಾಡಲು

# ಮರಣ ಪ್ರಮಾಣ ಪತ್ರದಿಂದ ಸಿಗುವ ಸೌಲಭ್ಯಗಳು.

* ವಿಮಾ ಹಣವನ್ನು ಪಡೆಯಲು
* ಆಸ್ತಿಯ ಉತ್ತರಾಧಿಕಾರಿಯಾಗಲು
* ಆಸ್ತಿಯ ಹಕ್ಕನ್ನು ಇತ್ಯರ್ಥ ಮಾಡಲು
* ಪಿಂಚಣಿ ಹಕ್ಕನ್ನು ಹೊಂದಲು
* ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು
* ನೈಸರ್ಗಿಕ ಪ್ರಕೋಪದಲ್ಲಿ ಸಾವಿಗೀಡಾದರೆ ಪರಿಹಾರ ಭತ್ಯೆ ಪಡೆಯಲು
* ಅಪಘಾತದಲ್ಲಿ ಮರಣಿಸಿದರೆ ಪರಿಹಾರ ಭತ್ಯೆ ಪಡೆಯಲು
* ಆರೋಗ್ಯ ಕಾರ್ಯಕ್ರಮಗಳಿಗೆ ನೆರವಾಗಲು.

# ವಿಶೇಷ ಸೂಚನೆ

* ಮೇಲಿನ ಪ್ರಮಾಣ ಪತ್ರಗಳನ್ನು 21 ದಿನಗಳೊಳಗಾಗಿ ನೋಂದಾಯಿಸಿ ಪ್ರಮಾಣ ಪತ್ರವನ್ನು ನೋಂದಣಾಧಿಕಾರಿಯಿಂದ ಉಚಿತವಾಗಿ ಪಡೆಯಬಹುದು.ಕಾನೂನಿನ ಪ್ರಕಾರ ನೋಂದಣಿ ಕಡ್ಡಾಯ. ವಿಳಂಬ ನೋಂದಣಿಗೂ ಸಹ ಅವಕಾಶವಿದೆ.

* ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರು ಮತ್ತು ಪ್ರಾಥಮಿಕ / ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲ್ಲೂಕು / ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು, ಪಟ್ಟಣ ಪ್ರದೇಶಗಳಾದ ಮಹಾನಗರಪಾಲಿಕೆಗಳಲ್ಲಿ ಆರೋಗ್ಯಾಧಿಕಾರಿಗಳು ಹಾಗೂ ನಗರಸಭೆ, ಪುರಸಭೆ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿಗಳಾಗಿರುತ್ತಾರೆ.

*ಹೆಚ್ಚಿನ ಮಾಹಿತಿಗಾಗಿ  http://www.ejanma.kar.nic.in

ಪ್ರಮುಖ ದಿನಾಚರಣೆಗಳು.

Important Dates/ Days for Competitive Exams:
*********************************************
***************
January 1 ——— Global Family Day
January 15 ——— Army Day
January 23 ——— Netaji Subhash Chandra Bose’s birth anniversary
January 26 ——— Republic Day
January 26 ——— International Customs day
January 28 ——— Birth anniversary of Lala Lajpat Rai
January 28 ——— Data Protection Day
January 30 ——— World Leprosy Eradication Day
Important Days/ Dates in February:
February 4 ——— World Cancer Day
February 5 ——— Kashmir Day
February 6 ——— International Day against Female Genital Mutilation
February 12 ——— Darwin Day
February 12 ——— World Day of the Sick
February 14 ——— Valentine’s Day
February 20 ——— World Day of Social Justice
February 21 ——— International Mother Language Day
February 22 ——— World Scout Day
February 23 ——— World Peaces and Understanding Day
February 24: Central Excise Day.
February 28 : National Science Day.
Important Days/Dates in March:
March 4 ——— World Day of the Fight Against Sexual Exploitation
March 8 ——— International Womens’ Day
March 13 ——— World Kidney Day
March 13 ——— World Rotaract Day
March 15 ——— World Consumer Rights Day
March 20 ——— International Day of the Francophonie
March 20 ——— World Day of Theatre for Children and Young People
March 21 ——— World Sleep Day
March 21 ——— World Forestry Day
March 21 ——— International Day for the Elimination of Racial Discrimination.
March 22 ——— World Water Day
March 23 ——— World Meteorological Day
March 24 ——— World TB Day
March 24 ——— International Day for Achievers
March 25 ——— International Day of Remembrance – Victims of Slavery and Transatlantic Slave Trade
March 27 ——— World Drama Day
Important Days/ Dates in April:
April 2 ——— World Autism Awareness Day
April 7 ——— World Health Day
April 17 ——— World Haemophilia Day
April 18 ——— World heritage Day
April 22 ——— Earth Day
April 23 ——— World Book and Copyright Day
April 25 ——— World Malaria Day
April 29 ——— International Dance Day
Important Days/ Dates in May:
May 1 ——— International Labour day
May 3 ——— Press Freedom Day
May 4 ——— Coal Miners day
May 8 ——— World Red Cross day
May 9 ——— – Victory Day
May 11 ——— National Technology Day
May 12 ——— International Nurses day
May 14 ——— World Migratory day
May 15 ——— International Day of the Family
May 17 ——— World Information Society Day
May 21 ——— Anti-Terrorism Day
May 31 ——— World No Tobacco Day
Important Days/ Dates in June:
June 4 ——— International day of Innocent Children Victims of Aggression
June 5 ——— World Environment Day
June 7 ——— International Level Crossing Awareness Day
June 8 ——— World oceans Day
June 12 ——— World Day against Child Labour
June 14 ——— World Blood Donor day
June 17 ——— World Day to Combat Desertification and Drought
June 20 ——— World Refugee Day
June 23 ——— United Nations Public Service Day
June 23 ——— International widow’s day
June 26 ——— International Day against Drug Abuse and IIlicit Trafficking
June 27 ——— International Diabetes Day
Important Days/ Dates in July:
July 1 ——— National doctor’s Day
July 11 ——— World Population Day
July 12 ——— Malala Day
July 18 ——— Nelson Mandela International Day
July 28 ——— World Nature Conservation day
July 30 ——— International Day of Friendship
Important Days/ Dates in August:
August 3 ——— Independence Day of Niger
August 5 ——— Independence Day of Upper Volta
August 9 ——— International day of the World’s Indigenous People
August 12 ——— International Youth Day
August 15 ——— Independence Day (India )
August 23 ——— Internatinal Day for the Remembrance of the Slave Trade and its Abolition
August 29 ——— National Sports Day ( Birthday of Dhyan Chand )
Important Days/Dates in September:
September 5 ——— Teacher’s Day (Dr. Radhakrishnan’s Birth Day)
September 7 ——— Forgiveness Day
September 8 ——— International Literacy Day
September 14 ——— Hindi day,World First Aid Day
September 16 ——— World Ozone Day
September 21 ——— International Day of Peace, World Alzheimer’s day
September 25 ——— Social Justice Day
September 27 ——— World Tourism Day
Important Days/ Dates in October:
October 1 ——— International Day of Older Persons
October 2 ——— International day of Non-Violence
October 3 ——— World Nature Day, World Habitat Day
October 4 ——— World Animal Day
October 5 ——— World Teacher’s Day
October 8 ——— Indian Airforce Day
October 9 ——— World Post Day
October 11 ——— International Girl Child Day
October 12 ——— World Arthritis Day
October 14 ——— World Standards Day
October 15 ——— World Students Day
October 16 ——— World Food day
October 17 ——— International Day for the Eradication of Poverty
October 20 ——— World Statistics Day
October 24 ——— United Nations Day
October 31 ——— World Thrift Day
Important Days/ Dates in November:
November 1 ——— world vegan Day
November 5 ——— World Radiography Day
November 9 ——— World Services Day
November 14 ——— Children’s Day ( Birth Anniversary of Jawaharlal Nehru )
November 16 ——— International Day for Endurance
November 17 ——— International students Day
November 17 ——— National Journalism Day
November 18 ——— World Adult Day
November 19 ——— World Citizen Day
November 20 ——— Universal Children’s Day
November 21 ——— World Television Day
November 21 ——— World Fisheries day
November 25 ——— World Non-veg Day
November 26 ——— Law Day
November 30 ——– Flag Day
Important Days/ Dates in December:
December 1 ——— World AIDS Day
December 2 ——— World Computer Literacy Day
December 2 ——— International Day for the Abolition of Slavery
December 3 ——— International Day of People with Disability
December 3 ——— World Conservation Day
December 4 ——— Navy Day
December 5 ——— International Volunteer Day for Economic and Social Development
December 7 ——— International Civil Aviation Day
December 9 ——— The International Day Against Corruption
December 10 ——— International Day of Broadcasting
December 10 ——— Human Rights Day
December 11 ——— International Mountain Day
December 14 ——— World Energy Day
December 18 ——— International Migrants Day
December 19 ——— Goa’s Liberation Day
December 20 ——— International Human Solidarity Day
December 29 ——— International Biodiversity Day.

ಮುಳುಗಿದ ನಗರಗಳ ತೇಲುವ ಕಥೆ.

ಮುಳುಗಿದ ನಗರಗಳ ತೇಲುವ ಕಥೆ.                       *************************

image

   #ನೆರೆಯ ಹಾವಳಿಯಿಂದ ಚೆನ್ನೈ ನಲುಗುತ್ತಿದೆ. ದೂರದೃಷ್ಟಿಯಿಲ್ಲದ ಯೋಜನೆಗಳೊಂದಿಗೆ ಪ್ರಾಕೃತಿಕ ವೈಪರೀತ್ಯವೂ ಆ ನಗರಿಯನ್ನು ಇಂದು ಈ ಸ್ಥಿತಿಗೆ ದೂಡಿವೆ. ಕಡಲತಡಿಯ ನಗರವೊಂದು ನೀರಿನಾರ್ಭಟಕ್ಕೆ ತತ್ತರಿಸಿದ್ದು ಇದೇ ಮೊದಲೇನಲ್ಲ ಎನ್ನುತ್ತಿದೆ ಇತಿಹಾಸ. ಅತಿ ವೈಭವದಿಂದ ಮಿನುಗುತ್ತಿದ್ದ ಅವೆಷ್ಟೋ ನಗರಿಗಳು ಕ್ಷಣಮಾತ್ರದಲ್ಲಿ ನೀರುಪಾಲಾಗಿ, ತಮ್ಮ ಅವಶೇಷಗಳನ್ನಷ್ಟೇ ಇಂದು ಪ್ರಪಂಚದೆದುರು ಪ್ರಕಟಪಡಿಸುತ್ತಿವೆ. ಕಡಲಗರ್ಭದಲ್ಲಿ ಅಡಗಿರುವ ಇಂಥ ನಗರಗಳ ಪುಟ್ಟ ಪರಿಚಯ ಇಲ್ಲಿದೆ.

* ಧನುಷ್ಕೋಟಿ

ಭಾರತ ಮತ್ತು ಶ್ರೀಲಂಕ ಮಧ್ಯೆಯಿದ್ದ ಏಕೈಕ ಭೂ ಗಡಿಯಾಗಿತ್ತು ಧನುಷ್ಕೋಟಿ. ಈ ಚಿಕ್ಕ ಪಟ್ಟಣ 1964ರ ಚಂಡಮಾರುತಕ್ಕೆ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ಇದಕ್ಕೂ ಮುಂಚೆ ಇದು ಪ್ರವಾಸಿಗರ ನೆಚ್ಚಿನ ತಾಣವಾಗಿತ್ತು. ಈ ಪಟ್ಟಣದಲ್ಲಿ ಹೋಟೆಲ್‌ಗಳು, ಜವಳಿ ಅಂಗಡಿಗಳಿದ್ದವು. ಇಲ್ಲಿ ರೈಲು ಮಾರ್ಗವೂ ಇತ್ತು. ರೇಲ್ವೆ ಆಸ್ಪತ್ರೆ, ಪ್ರಾಥಮಿಕ ಶಾಲೆಗಳು, ಅಂಚೆ ಕಚೇರಿ, ಕಸ್ಟಮ್ ಮತ್ತು ಪೋರ್ಟ್ ಕಚೇರಿಗಳು, ಇನ್ನಿತರ ಕಟ್ಟಡಗಳಿದ್ದವು. ಸ್ವಾಮಿ ವಿವೇಕಾನಂದರು ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರವಾಸ ಮುಗಿಸಿ, 1897ರಲ್ಲಿ ವಾಪಸ್ ಬಂದು ಮೊದಲು ಪಾದ ಇಟ್ಟಿದ್ದು ಇದೇ ನೆಲದಲ್ಲಿ.

ರಾಮೇಶ್ವರ ಸುತ್ತಮುತ್ತ ಆಗಾಗ ಭಾರಿ ತೀವ್ರತೆಯ ಚಂಡಮಾರುತಗಳು ಬೀಸುತ್ತಲೇ ಇದ್ದವು. 1948 ಮತ್ತು 1949ರಲ್ಲಿ ಧನುಷ್ಕೋಟಿ ಪಟ್ಟಣ ಭಾಗಶಃ ಅಂದರೆ, 16 ಅಡಿಯಷ್ಟು ಭೂಮಿ ಸಮುದ್ರಪಾಲಾಯಿತು. ಇದರ ಪರಿಣಾಮವಾಗಿ ಉತ್ತರಿಂದ ದಕ್ಷಿಣದವರೆಗೆ 31 ಮೀ. ಅಗಲ ಮತ್ತು 7 ಕಿ.ಮೀ. ಉದ್ದದಷ್ಟು ಭೂಮಿ ಸಮುದ್ರದಲ್ಲಿ ಮುಳುಗಿತು. ಆ ಪ್ರದೇಶದಲ್ಲಿದ್ದ ದೇವಾಲಯಗಳು, ಮನೆಗಳು, ರಸ್ತೆ, ಇತರೆ ಕಟ್ಟಡಗಳೂ ನೀರು ಪಾಲಾದವು. ಇದೇ ವೇಳೆ, ತಂಜಾವೂರು ರಾಜರ ಚೌಲ್ಟ್ರಿ ಕೂಡ ನೀರಿನಲ್ಲಿ ಮುಳುಗಿತು. ಇಲ್ಲಿಗೆ ಬರುತ್ತಿದ್ದ ಭಕ್ತಾದಿಗಳಿಗೆ ಇದು ಧರ್ಮಶಾಲೆಯಾಗಿತ್ತು.

1964ರ ಡಿಸೆಂಬರ್ 22ರ ರಾತ್ರಿ 653ರ ಸಂಖ್ಯೆಯ ಪಂಬನ್-ಧನುಷ್ಕೋಟಿ ಪ್ಯಾಸೇಂಜರ್ ರೈಲು ಪಂಬನ್ ನಿಲ್ದಾಣವನ್ನು 110 ಪ್ರಯಾಣಿಕರೊಂದಿಗೆ ಹೊರಟಿತ್ತು. ಇದರಲ್ಲಿ ಐವರು ರೈಲ್ವೆ ಸಿಬ್ಬಂದಿ ಇದ್ದರು. ರೈಲು ಧನುಷ್ಕೋಟಿಯನ್ನು ಇನ್ನೇನು ಪ್ರವೇಶಿಸಬೇಕು ಅಷ್ಟರಲ್ಲಿ ಬೃಹತ್ ಗಾತ್ರದ ಅಲೆಗಳು ರೈಲಿಗೆ ಅಪ್ಪಳಿಸಿದವು. ರೈಲು ಸಿಗ್ನಲ್ ಕೂಡ ಕೈ ಕೊಟ್ಟಿತು. ಕತ್ತಲು ಕವಿದಿದ್ದ ಆ ರಾತ್ರಿಯಲ್ಲಿ ರೈಲು ಚಾಲಕ ಗಟ್ಟಿ ಮನಸ್ಸು ಮಾಡಿ ರೈಲು ಹಾಗೆ ಓಡಿಸಲಾರಂಭಿಸಿದರು. ಅಷ್ಟೊತ್ತಿಗೆ ಮತ್ತೊಂದು ಬೃಹತ್ ಅಲೆ ಅಪ್ಪಳಿಸಿತು. ಆಗ ರೈಲಿನ ಆರು ಬೋಗಿಗಳು ನೀರಿನಲ್ಲಿ ಮುಳುಗಿ ಹೋದವು. ಇಡೀ ರೈಲು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. 115 ಜನರು ಪ್ರಾಣ ತೆತ್ತರು. ವಿಪರ್ಯಾಸವೆಂದರೆ, ದುರ್ಘಟನೆ ನಡೆದ 48 ಗಂಟೆ ನಂತರ ಹೊರ ಜಗತ್ತಿಗೆ ಈ ವಿಷಯ ಗೊತ್ತಾಯಿತು! 1964ರ ಚಂಡಮಾರುತಕ್ಕೆ ಒಟ್ಟು 1,800 ಜನರು ಸಾವಿಗೀಡಾದರು. ಇಡೀ ಧನುಷ್ಕೋಟಿ ನೀರುಪಾಲಾಯಿತು.

* ದ್ವಾರಕಾ

ಮಹಾಭಾರತದ ಮೌಸಲ ಪರ್ವದಲ್ಲಿ ದ್ವಾರಕಾ ನಗರಿಯ ವರ್ಣನೆಯಿದೆ. ಅಲ್ಲದೇ ಈ ಕೃಷ್ಣಪುರಿ, ಪ್ರಭಾಸ ಸಮುದ್ರದಲ್ಲಿ ಮುಳುಗಿ ಅಂತ್ಯಕಂಡ ಉಲ್ಲೇಖವೂ ಇದೆ. ಮೌಸಲ ಪರ್ವ ಮತ್ತು ಮಹಾಭಾರತ ಕುರಿತಾದ ಇನ್ನಿತರ ಪುಸ್ತಕಗಳು ವಿದ್ವಾಂಸರ ಗಮನ ಸೆಳೆಯಲು ಯಶಸ್ವಿಯಾಗಿದ್ದವು. ಈ ನಗರಿ ಈಗಿನ ಗುಜರಾತ್ ಅಥವಾ ಮಹಾರಾಷ್ಟ್ರದಲ್ಲಿದ್ದರಬಹುದೆಂಬ ಎಣಿಕೆಗಳೂ ಸೃಷ್ಟಿಯಾದವು. ಸಮುದ್ರತಳ ಸೇರಿದ ದ್ವಾರಕೆಯನ್ನು ಹುಡುಕಬೇಕೆಂಬ ಪುರಾತತ್ವ ಇಲಾಖೆಯ ಮಹೋನ್ನತ ಆಸೆಗೆ ಹಣ ನೀಡಿ ಪ್ರೋತ್ಸಾಹಿಸಿತು ಕೇಂದ್ರ ಸರ್ಕಾರ. ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ಸಮುದ್ರವಿಜ್ಞಾನ ಇಲಾಖೆ 1955ರಿಂದ ದ್ವಾರಕೆಯ ಸಂಶೋಧನೆಯಲ್ಲಿ ನಿರತವಾದವು.

ಅದರಲ್ಲೂ ಈ ಪ್ರಯತ್ನದಲ್ಲಿ ಮೇಲುಗೈ ಸಾಧಿಸಿದ್ದು ಭಾರತದ ಖ್ಯಾತ ಪುರಾತತ್ವ ಶಾಸ್ತ್ರಜ್ಞ, ಕನ್ನಡಿಗ ಡಾ. ಶಿಕಾರಿಪುರ ರಂಗನಾಥ್ ರಾವ್ ನೇತೃತ್ವದ ತಂಡದ. ದ್ವಾರಕಾಧೀಶ ಮಂದಿರದ ಉಪಸ್ಥಿತಿಯಿಂದ ಪ್ರೇರಣೆಗೊಂಡಿದ್ದ ಮೇಲಿನ ಎರಡೂ ಇಲಾಖೆಗಳು ‘ಸಾಗರ ಪುರಾತತ್ವಶಾಸ್ತ್ರ ಘಟಕ’ವನ್ನು ಸ್ಥಾಪಿಸಿದವು. ಅತ್ಯುತ್ತಮ ಈಜುಗಾರರು, ಫೋಟ್ರೋಗ್ರಾಫರ್‌ಗಳು, ಸಂಶೋಧಕರನ್ನೊಳಗೊಂಡ ತಂಡದ ನೇತೃತ್ವ ರಾವ್ ಅವರ ಹೆಗಲಿಗೇರಿತು. ಪ್ರತಿಧ್ವನಿ ಸಂಕೇತ ಸಾಧನಗಳು, ನೀರೊಳಗಿನ ಲೋಹ ಶೋಧಕಗಳು ಇತ್ಯಾದಿ ಉಪಕರಣಗಳು ಈ ತಂಡಕ್ಕೆ ಆಸರೆಯಾದವು. ಸಮುದ್ರ ಶೋಧದಲ್ಲಿ ಇವರಿಗೆ ಸಿಕ್ಕ ವಸ್ತುಗಳನ್ನು ಕಾರ್ಬನ್ ಡೇಟಿಂಗ್, ಥರ್ಮೋ ಲ್ಯೂಮಿನಿನ್ಸ್ ಮತ್ತು ಇನ್ನಿತರ ಆಧುನಿಕ ತಂತ್ರಜ್ಞಾನಗಳಿಂದ ಪರೀಕ್ಷಿಸಲಾಯಿತು. 1983 ಮತ್ತು 1990ರಲ್ಲಿ ಅರ್ಧ ಮೈಲು ವ್ಯಾಪ್ತಿಯ ಪುರಾಣಪ್ರಸಿದ್ಧ ದ್ವಾರಕಾನಗರಿಯ ಪತ್ತೆಯಾಯಿತು. ಹೀಗೆ ದೊರೆತ ಅವಶೇಷಗಳು, ಇಂದಿನ ದ್ವಾರಕಾ ನಗರವನ್ನು ತಾಕುವ ಸಮುದ್ರದ ಒಡಲಲ್ಲೇ ಇವೆ.

* ಪಾವ್ಲೊಪೆಟ್ರಿ ನಗರಿ, ಗ್ರೀಸ್

ಗ್ರೀಸ್‌ನ ಪುರಾಣ ಪ್ರಸಿದ್ಧ ಪಾವ್ಲೊಪೆಟ್ರಿ ನಗರಿ ಕ್ರಿಸ್ತಪೂರ್ವ 1000ನೇ ಇಸವಿಯಲ್ಲಿ ಕಡಲೊಡಲು ಸೇರಿಕೊಂಡಿತು. ಪೆಲೊಪೋನೀಸ್ ಎಂಬ ದ್ವೀಪದ ಭಾಗವಾಗಿದ್ದ ಈ ನಗರ ಭೂಕಂಪದಿಂದಾಗಿ ಜಲಾವೃತವಾಯಿತು. 1967ರಲ್ಲಿ ಕೇಂಬ್ರಿಜ್ ಮತ್ತು ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಮೆಡಿಟರೇನಿಯನ್ ಸಮುದ್ರದಲ್ಲಿ ಅತಿ ದೀರ್ಘಕಾಲದಿಂದ ಮುಳುಗಡೆಯಾಗಿರುವ ಈ ನಗರಿಯ ಅವಶೇಷಗಳನ್ನು ಪತ್ತೆಹಚ್ಚಿದವು. ಪ್ರಾಚೀನ ಗ್ರೀಸ್‌ನ ಕಂಚಿನ ಯುಗದ ಅಂತ್ಯದಲ್ಲಿ ಈ ನಗರದ ನಿರ್ಮಾಣವಾಗಿತ್ತೆಂದು ಮೊದಲು ಹೇಳಲಾಯಿತಾದರೂ, ನಂತರದ ಸಂಶೋಧನೆಗಳು ಆ ಅವಧಿಗಿಂತ 12,00 ವರ್ಷಗಳ ಹಿಂದೆಯೇ ಪಾವ್ಲೊಪೆಟ್ರಿ ಬೆಳೆದು ನಿಂತಿತ್ತು ಎಂದು ಹೇಳಿದವು. ಶತಮಾನಗಳಿಂದ ಈ ನಗರಿ ನೀರಿನಲ್ಲೇ ಇದ್ದರೂ, ಅದರ ವಿನ್ಯಾಸಕ್ಕೆ ಮಾತ್ರ ಹೆಚ್ಚಿನ ಧಕ್ಕೆಯಾಗಿಲ್ಲ. ಸುಮಾರು 15 ಕಟ್ಟಡಗಳ ಅವಶೇಷಗಳು 1-13 ಅಡಿ ನೀರಿನಲ್ಲಿ ಪತ್ತೆಯಾಗಿವೆ. ಸಮುದ್ರತಳದಲ್ಲಿ ಸ್ಪಷ್ಟವಾಗಿ ಗೋಚರಿಸುವ ಪ್ರಮುಖ ಬೀದಿಗಳು, ಕಟ್ಟಡಗಳು, ಸಭಾಂಗಣ, ಮಂದಿರಗಳು ಮತ್ತು ಗೋರಿಗಳ ಅವಶೇಷಗಳು ಗತವೈಭವದ ನೀಲನಕ್ಷೆಯನ್ನು ಎದುರಿಡುತ್ತಿವೆ. ಇದೀಗ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಪುರಾತತ್ವ ಪರಿಣತರು ಪಾವ್ಲೊಪೆಟ್ರಿ ನಗರದ ಪೂರ್ಣ ನಕಾಶೆಯನ್ನು ಸಿದ್ಧಪಡಿಸುವಲ್ಲಿ ಸಫಲರಾಗುತ್ತಿದ್ದಾರೆ. ಪ್ರವಾಸಿಗರು, ಬೋಟ್‌ಗಳ ಲಂಗರು ಮತ್ತು ನಿಧಿ ಅನ್ವೇಷಕರೊಡ್ಡುತ್ತಿರುವ ಅಪಾಯದಿಂದ ಈ ಅವಶೇಷಗಳನ್ನು ರಕ್ಷಿಸಲು ಯುನೆಸ್ಕೋ, ಈ ಪ್ರದೇಶವನ್ನು ‘ಅಂಡರ್‌ವಾಟರ್ ಕಲ್ಚರಲ್ ಹೆರಿಟೇಜ್’ ಎಂದು ಘೋಷಿಸಿದೆ.

* ಜಮೈಕಾದ ಫಟಿಂಗ ನಗರ

ಕಡಲುಗಳ್ಳರಿಂದ ”ಪ್ರಪಂಚದ ಅತಿ ದುಷ್ಟ , ಫಟಿಂಗ ನಗರ,” ಎಂದು ಕರೆಸಿಕೊಂಡ ಜಮೈಕಾದ ‘ಪೋರ್ಟ್‌ರಾಯಲ್’ ನಗರಿ 1692ರಲ್ಲಿ ಸಮುದ್ರತಳ ಸೇರಿತು. ಆಧುನಿಕ ಯುಗದ ಅತಿದೊಡ್ಡ ಯುರೋಪಿಯನ್ ನಗರಗಳಲ್ಲೊಂದಾಗಿದ್ದ ಪೋರ್ಟ್ ರಾಯಲ್, ಸೂಳೆಗಾರಿಕೆ, ಹೆಂಡದಂಗಡಿಗಳು, ಅಹೋರಾತ್ರಿ ಮನೋರಂಜನೆಗಳಿಂದಾಗಿ ಕುಖ್ಯಾತವಾಗಿತ್ತು. ಅತಂತ್ರ ಮರಳಿನ ಅಡಿಪಾಯದ ಮೇಲೆ ಆಡಂಬರ ಮೆರೆಯುತ್ತಿದ್ದ ಪೋರ್ಟ್ ರಾಯಲ್, 323 ವರ್ಷಗಳ ಹಿಂದೆ 7.5 ರಿಕ್ಟರ್ ಪ್ರಮಾಣದಲ್ಲಿ ಅಪ್ಪಳಿಸಿದ ಭೂಕಂಪದಿಂದ ಕುಸಿದುಹೋಯಿತು. ಆ ಬಂದರಿನಲ್ಲಿದ್ದ ಸುಮಾರು 2,000 ಜನ ಮೃತಪಟ್ಟರು.

20ನೇ ಶತಮಾನದ ಆರಂಭದವರೆಗೂ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಪೋರ್ಟ್ ರಾಯಲ್‌ನ ಅವಶೇಷಗಳು ಈಗ ಅಜಮಾಸು ಮರಳಿನಿಂದ ಮುಚ್ಚಿಹೋಗಿದ್ದು, 43 ಅಡಿ ಆಳದಲ್ಲಿವೆ. ಪುರಾತತ್ವ ಸಂಶೋಧಕರಿಗೆ ದೊರೆತಿರುವ ಆ ಕಾಲದ ಪಾತ್ರೆಪಗಡೆಗಳು ಈಗಲೂ ಉತ್ತಮ ಸ್ಥಿತಿಯಲ್ಲಿಯೇ ಇವೆ. ವಿಶೇಷವೆಂದರೆ ಆ ಕಾಲದ ಪಾಕೆಟ್ ವಾಚ್ ಕೂಡ ಅವರಿಗೆ ದೊರೆತಿದ್ದು , 1686ರಂದು, 11 ಗಂಟೆ 46 ನಿಮಿಷಕ್ಕೆ (ಪೋರ್ಟ್ ರಾಯಲ್ ನೀರಲ್ಲಿ ಸೇರುವುದಕ್ಕೆ ಆರು ವರ್ಷಗಳ ಹಿಂದೆ) ಈ ಗಡಿಯಾರವೂ ನಿಂತು ಹೋಗಿತ್ತು!

*ಕ್ಯೂಬಾದ ಗುಹ್ಯ ನಗರಿ

ಭಾರತೀಯ ಪುರಾತತ್ವಶಾಸ್ತ್ರಜ್ಞರು ದ್ವಾರಕೆಯ ಹುಡುಕಾಟ ನಡೆಸುತ್ತಿರುವ ವೇಳೆಯಲ್ಲೇ, ದೂರದ ಕ್ಯೂಬಾದಲ್ಲೂ ಹಳೆಯ ನಗರಿಯೊಂದರ ಅವಶೇಷಗಳು ಕಡಲಾಳದಲ್ಲಿ ಪತ್ತೆಯಾದವು. ಕಡಲಲ್ಲಿ ಸಂಶೋಧನೆ ನಡೆಸುತ್ತಿದ್ದ ಪೌಲಿನಾ ಝೆಲಿಟ್ಸ್‌ಕಿ ದಂಪತಿಗೆ, ಗ್ರಾನೈಟ್‌ನಿಂದ ನಿರ್ಮಿಸಲಾದ ಬೃಹತ್ ಶಿಲಾ ರಚನೆಗಳು ಕಂಡವು. ಈ ಶಿಲೆಗಳ ಮೇಲೆ ಚಿತ್ರಲಿಪಿ ಶೈಲಿಯ ಪ್ರಾಚೀನ ಬರಹಗಳಿವೆ. ಆದರೆ ಇಂದಿಗೂ ವಿಜ್ಞಾನಿಗಳಿಗೆ ಆ ಬರಹವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅದೂ ಅಲ್ಲದೇ, ಕ್ಯೂಬನ್ ಆಡಳಿತ ವಲಯದಿಂದ ಪುರಾತತ್ವ ಇಲಾಖೆಗೆ ಸರಿಯಾದ ಅನುದಾನವೂ ಸಿಗದ ಕಾರಣ ಈ ಅವಶೇಷಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸುವುದಕ್ಕೂ ಸಾಧ್ಯವಾಗಿಲ್ಲ. ತಮ್ಮ ಪೂರ್ವಿಕರ ಬದುಕಿನ ಬಗ್ಗೆ ಹೊಸ ಅಸ್ಪಷ್ಟ ಚಿತ್ರಣ ಕಟ್ಟಿಕೊಡುತ್ತಿರುವ ಈ ಶಿಲೆಗಳನ್ನು ನೋಡಿ ಅಲ್ಲಿನ ಜನರು ಆಶ್ಚರ್ಯಪಡುತ್ತಿದ್ದಾರಷ್ಟೆ!

*ಒಂಟಾರಿಯೋದ ಹಳ್ಳಿಗಳು

ಕಡಲಲ್ಲಿ ಕಣ್ಮರೆಯಾದ ಪುರಾತನ ಪ್ರದೇಶಗಳ ಬಗ್ಗೆಯೇ ಹೆಚ್ಚು ಮಾತನಾಡಲಾಗುತ್ತದೆಯಾದರೂ, ಅವಷ್ಟೇ ನೀರಲ್ಲಿರುವ ನಾಗರಿಕತೆಯ ಕುರುಹುಗಳಲ್ಲ. ಕೃತಕ ಸರೋವರಗಳು ಮತ್ತು ನದಿಗಳ ಪಥ ಬದಲಾವಣೆಗಳಿಂದಾಗಿ ಈ ಕಾಲದಲ್ಲೂ ಅನೇಕ ಪ್ರದೇಶಗಳು ನೀರುಪಾಲಾಗಿವೆ. 1958ರಲ್ಲಿ ಕೆನಡಾ ಸರ್ಕಾರ ಸೇಂಟ್ ಲಾರೆನ್ಸ್ ಸೀ ವೇ ನಿರ್ಮಾಣ ಕೈಗೊಂಡಾಗ, ಒಂಟಾರಿಯೋ ಪ್ರದೇಶದಲ್ಲಿದ್ದ ಹಲವಾರು ಹಳ್ಳಿಗಳು ಕೊಚ್ಚಿಹೋದವು. ಇಷ್ಟು ವರ್ಷಗಳಾದರೂ ಆ ಹಳ್ಳಿಗಳ ಕಾಲುದಾರಿಗಳು ಮತ್ತು ಕಟ್ಟಡಗಳನ್ನು ಮೇಲಿನಿಂದ ಕಾಣಬಹುದು. ನೀರಲ್ಲಿ ಮುಳುಗುವ ಮುನ್ನ ಈ ಹಳ್ಳಿಗಳಲ್ಲಿನ ಕೆಲವು ವಸ್ತುಗಳನ್ನು, ಸ್ಮಾರಕಗಳನ್ನು ಕಾಪಾಡಿ, ವಸ್ತು ಸಂಗ್ರಹಾಲಯದಲ್ಲಿಡಲಾಗಿದೆ,.

*ಅಟ್ಲಾಂಟಿಸ್

ಅಟ್ಲಾಂಟಿಸ್‌ನ ಅವಸಾನದ ಕಥೆಯನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಈ ಮಿಥ್ ಆರಂಭವಾದದ್ದು ಗ್ರೀಕ್ ತತ್ವಶಾಸ್ತ್ರಜ್ಞ ಪ್ಲಾಟೋ, ಕ್ರಿಸ್ತಪೂರ್ವ 360ರಲ್ಲಿ ಬರೆದ ಪುಸ್ತಕದಿಂದಾಗಿ. ಲಿಬ್ಯಾ ಮತ್ತು ಏಷ್ಯಾವನ್ನು ಸೇರಿಸಿದರೆ ಸೃಷ್ಟಿಯಾಗುವ ಪ್ರದೇಶಕ್ಕಿಂತಲೂ ಅಟ್ಲಾಂಟಿಸ್ ದ್ವೀಪ ಬೃಹತ್ ಆಗಿತ್ತೆಂದು ಆತ ಹೇಳಿದ್ದ.

ಪ್ಲಾಟೋನ ಪ್ರಕಾರ, ಅತಿ ಶಕ್ತಿಶಾಲಿ ನೌಕಾ ಪಡೆಯಾಗಿದ್ದ ಅಟ್ಲಾಂಟಿಗರು, ಅತಿಯಾಸೆಯಿಂದ ನೈತಿಕ ದಿವಾಳಿಯೆದ್ದಿದ್ದರು. ಅಥೆನ್ಸ್ ಮೇಲೆ ಇವರೆಲ್ಲ ವಿಫಲ ದಾಳಿ ನಡೆಸಿದ್ದ ವೇಳೆಯಲ್ಲೇ ಅಟ್ಲಾಂಟಿಸ್ ನಗರ ನೈಸರ್ಗಿಕ ವಿಕೋಪಕ್ಕೆ ಗುರಿಯಾಗಿ ಗುರುತು ಹಚ್ಚಲೂ ಸಾಧ್ಯವಾಗದಂತೆ ಜಲಪಾಲಾಯಿತು. ಪ್ಲಾಟೋನ ಕಥೆಗೆ ಯಾವ ಪ್ರದೇಶ ಸ್ಫೂರ್ತಿಯಾಗಿರಬಹುದು ಎನ್ನುವುದಕ್ಕೆ ಅನೇಕ ಥಿಯರಿಗಳಿವೆ. ಉದಾಹರಣೆಗೆ, ಜರ್ಮನ್ ಭೌತಶಾಸ್ತ್ರಜ್ಞ ರೇನರ್ ಕನ್ಹ್, ”ಕ್ರಿಸ್ತಶಕ 800ರಲ್ಲಿ ಕಣ್ಮರೆಯಾದ ದಕ್ಷಿಣ ಸ್ಪ್ಯಾನಿಷ್ ಕಡಲ ತೀರವೇ ಪ್ಲಾಟೋನ ತಲೆಯಲ್ಲಿದ್ದಿರಬಹುದು,” ಎನ್ನುತ್ತಾರೆ. ಕೆಸರಿನಲ್ಲಿ ಹೂತಿರುವ ಅಲ್ಲಿನ ಆಯತಾಕಾರದ ನಿರ್ಮಾಣಗಳು, ಪ್ಲಾಟೋ ವಿವರಿಸಿದ ಮಂದಿರಗಳೇ ಆಗಿದ್ದಿರಬಹುದು ಎನ್ನುವುದು ಅವರ ವಾದ.

ಸ್ವೀಡಿಷ್ ಭೂವಿಜ್ಞಾನಿ ಅಲ್ಫ್ ಎರ್ಲಿಂಗ್‌ಸನ್, ”ಐರ್ಲೆಂಡ್ ಪ್ಲಾಟೋನ ವಿವರಣೆಗೆ ಹೋಲುತ್ತದೆ,” ಎನ್ನುತ್ತಾರೆ. ಇನ್ನೂ ಕೆಲವರು 11,500 ವರ್ಷಗಳ ಹಿಂದೆ ಮುಳುಗಿದ ಸ್ಪಾರ್ಟೆಲ್ ದ್ವೀಪವೇ ಅಟ್ಲಾಂಟಿಸ್ ಎನ್ನುವುದುಂಟು. ಈ ಥಿಯರಿಗಳನ್ನೆಲ್ಲ ಅಲ್ಲಗಳೆಯುವ ತತ್ವಜ್ಞಾನಿ ಜೂಲಿಯಾ ಅನ್ನಾಸ್, ”ಸರಕಾರ ಮತ್ತು ಅಧಿಕಾರದ ಬಗ್ಗೆ ಜನರ ಪರಿಕಲ್ಪನೆಗಳನ್ನು ಪರೀಕ್ಷೆಗೊಳಪಡಿಸುವ ಉದ್ದೇಶ ಪ್ಲಾಟೋನಿಗಿತ್ತು. ಈ ಮುಖ್ಯಸಂಗತಿಯ ಬಗ್ಗೆ ಯೋಚಿಸುವುದನ್ನು ಬಿಟ್ಟು ಸಮುದ್ರದಲ್ಲಿ ಡುಬಕಿ ಹೊಡೆಯಲು ನಾವೆಲ್ಲ ಹೋಗುತ್ತಿದ್ದೇವೆ” ಎನ್ನುತ್ತಾರೆ!

*ಕ್ಲಿಯೋಪಾತ್ರಾಳ ರಾಜಧಾನಿ ಅಲೆಕ್ಸಾಂಡ್ರಿಯಾ

ಪ್ರಾಚೀನ ಈಜಿಪ್ಟ್ ಆಡಳಿತಗಾರ್ತಿ ಕ್ಲಿಯೋಪಾತ್ರಾಳ ರಾಜಧಾನಿ ಅಲೆಕ್ಸಾಂಡ್ರಿಯಾ. ಈ ನಗರ 1600 ವರ್ಷಗಳ ಹಿಂದೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ದಂತಕಥೆಗಳಲ್ಲಿ ಅಲೆಕ್ಸಾಂಡ್ರಿಯಾ ಇನ್ನು ಉಳಿದುಕೊಂಡಿದೆ. 1998ರಲ್ಲಿ ಈಗಿನ ಅಲೆಕ್ಸಾಂಡ್ರಿಯಾ ಕರಾವಳಿಯಲ್ಲಿ ಸಮುದ್ರ ಪ್ರಾಕ್ತನಶಾಸ್ತ್ರಜ್ಞರ ತಂಡ ಕಡಲಾಳದಲ್ಲಿ ಉತ್ಖನನ ನಡೆಸಿದಾಗ ಈ ನಗರಿಯ ಸ್ಮಾರಕಗಳು ಈಗಲೂ ನೆಲೆ ನಿಂತಿರುವುದು ಕಂಡುಬಂತು. ಭೂಕಂಪದಿಂದಾಗಿ ಈ ನಗರ ಸಮುದ್ರಪಾಲಾಗಿರುವುದು ತಿಳಿದು ಬಂತು. ಇತಿಹಾಸಕಾರರಿಗೆ ಕ್ಲಿಯೋಪಾತ್ರಾಗಳಿಗೆ ಸೇರಿದ ಅರಮನೆಯ ಅಡಿಪಾಯ, ಪ್ರತಿಮೆಗಳು, ದೇಗುಲಗಳು, ವಾಸ್ತುಶಿಲ್ಪಗಳು ದೊರೆತಿವೆ. ಜಗತ್ತಿನ ಅತ್ಯಂತ ಶ್ರೀಮಂತ ಪಾರಂಪಾರಿಕ ತಾಣವೆಂದು ಅಲೆಕ್ಸಾಂಡ್ರಿಯಾವನ್ನು ಪರಿಗಣಿಸಲಾಗುತ್ತದೆ. ಗ್ರೀಕ್ ಭೌಗೋಳಶಾಸ್ತ್ರಜ್ಞರು ಮತ್ತು ಇತಿಹಾಸಕಾರರ ಪ್ರಕಾರ ಈ ನಗರ 2000 ವರ್ಷಗಳ ಹಿಂದಿನಿಂದ ಅಸ್ತಿತ್ವದಲ್ಲಿತ್ತು. ಇದನ್ನು ಅಲ್ಲಿರುವ ಬೃಹತ್ ಸ್ಮಾರಕಗಳು, ದೊರೆತಿರುವ ನಾಣ್ಯಗಳು, ಪ್ರತಿನಿತ್ಯ ಜನರು ಬಳಸುತ್ತಿದ್ದ ವಸ್ತುಗಳು ಪುಷ್ಟೀಕರಿಸುತ್ತವೆ. ಇದಲ್ಲದೆ ಮಾರ್ಕ್ ಅಂಟೋನಿ, ರಾಣಿಯ ಪುತ್ರ ಮತ್ತು ತಂದೆಯ ಪ್ರತಿಮೆಗಳು ಕೂಡ ದೊರೆತಿವೆ. ಕಾಲಗರ್ಭದಲ್ಲಿ ಅಡಗಿರುವ ಈ ನಗರ ವಿಸ್ಮಯ ಹುಟ್ಟಿಸುತ್ತಿದೆ.

*ಚೀನಾದ ಸಿಂಹನಗರಿ

ಅಲೆಕ್ಸಾಂಡ್ರಿಯಾದ ಕುರಿತು ಮತ್ತಷ್ಟು ಅನ್ವೇಷಣೆ ನಡೆಯುವವರೆಗೂ, ಚೀನಾದ ಲಯನ್ ಸಿಟಿಯನ್ನು ‘ವಿಶ್ವದ ಅತ್ಯದ್ಭುತ ಜಲಾಂತರಾಳ ನಗರಿ’ ಎನ್ನಬಹುದು! ಚೀನಾದ ಕೆಂಡಾವೋ ಲೇಕ್(ಸಾವಿರ ದ್ವೀಪಗಳ ಕೆರೆ)ನಲ್ಲಿ 85-131 ಅಡಿ ಆಳದಲ್ಲಿ ‘ಲಯನ್ ಸಿಟಿ’ ಯ ಅವಶೇಷಗಳು ಪತ್ತೆಯಾಗಿವೆ. 1950ರಲ್ಲಿ ಡ್ಯಾಂ ನಿರ್ಮಿಸಲೋಸುಗ ಉದ್ದೇಶಪೂರ್ವಕವಾಗಿಯೇ ಈ ಪ್ರದೇಶದಲ್ಲಿ ನೀರು ಹರಿಸಲಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಹ್ಯಾನ್ ಸಾಮ್ರಾಜ್ಯ ಲಯನ್ ಸಿಟಿ(ಶಿ ಚೆಂಗ್)ಯನ್ನು ನಿರ್ಮಿಸಿತ್ತು. ಈ ನಗರಿ 62 ಫುಟ್‌ಬಾಲ್ ಮೈದಾನಗಳಷ್ಟು ವಿಶಾಲವಾಗಿತ್ತು ಎನ್ನಲಾಗುತ್ತದೆ. ಇಷ್ಟೊಂದು ಅಮೂಲ್ಯ ನಗರಿಯನ್ನು ಚೀನಿಯರು ಅದೇಕೆ ನೀರುಪಾಲು ಮಾಡಿದರೆನ್ನುವುದಕ್ಕೆ ಸ್ಪಷ್ಟ ಉತ್ತರಗಳಂತೂ ಇಲ್ಲ.

ಕನ್ನಡ ಭಾಷೆಯಲ್ಲಿ ಸಿ.ಇ.ಟಿ. ಕೈಪಿಡಿ.

ಗ್ರಾಮಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೆರವು-

ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವುದರಿಂದ ಹಿಡಿದು ಸೀಟು ಆಯ್ಕೆ ವಿಧಾನದವರೆಗೆ ಎಲ್ಲ ವಿವರಗಳನ್ನೂ ಒಳಗೊಂಡ ಕೈಪಿಡಿಯನ್ನು ಕನ್ನಡದಲ್ಲೂ ಆನ್‌ಲೈನ್‌ನಲ್ಲಿ ಒದಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ.

ಇದರಿಂದ ಪ್ರತಿಷ್ಠಿತ ಅಥವಾ ಡೀಮ್ಡ್ ವಿವಿಗಳ ಹೆಸರಿನಲ್ಲೇ ಸ್ಥಾಪನೆಯಾಗಿರುವ ಕೆಲ ಕಾಲೇಜುಗಳ ಬಗ್ಗೆ ಸರಿಯಾದ ಕೋಡ್ ಹಾಗೂ ವಿಳಾಸ ತಿಳಿಯದ ಗ್ರಾಮೀಣ ವಿದ್ಯಾರ್ಥಿಗಳು ಮೂಲ ಸೌಲಭ್ಯಗಳೇ ಇಲ್ಲದ ಅದೇ ಹೆಸರಿನ ಮತ್ಯಾವುದೋ ಕಾಲೇಜುಗಳಲ್ಲಿ ಸೀಟು ಆಯ್ಕೆ ಮಾಡಿಕೊಂಡು ಮೋಸ ಹೋಗುವುದನ್ನು ತಪ್ಪಿಸಲು ಇದರಿಂದ ಅನುಕೂಲವಾಗಬಹುದು ಎಂದು ಕೆಇಎ ನಿರೀಕ್ಷಿಸಿದೆ.

ಪ್ರತಿಭಾನ್ವಿತ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳು ಕಾಲೇಜುಗಳ ಪೂರ್ವಾಪರವನ್ನೆಲ್ಲ ಜಾಲಾಡಿ ಉತ್ತಮ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಕಂಪ್ಯೂಟರ್‌ನ ಮುಖವನ್ನೇ ನೋಡದ ಅನಕ್ಷರಸ್ಥ ಪೋಷಕರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವುದು ಅಥವಾ ಸೀಟು ಆಯ್ಕೆ ಮಾಡಿಕೊಳ್ಳುವುದು ಇನ್ನೂ ಕಷ್ಟವಾಗಿ ಪರಿಣಮಿಸಿದೆ.

ಕಣ್ಮುಚ್ಚಿ ಸರಕಾರದ ಅನುಮತಿ

ವೈದ್ಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಗತ್ಯ ಮೂಲ ಸೌಕರ‌್ಯಗಳು ಇವೆಯೇ ಇಲ್ಲವೇ ಎಂಬುದನ್ನು ಸರಿಯಾಗಿ ಪರಿಶೀಲನೆ ನಡೆಸದೆಯೇ ಸರಕಾರ ಪ್ರಾರಂಭಕ್ಕೆ ಅನುಮತಿ ನೀಡಿದರೆ, ವಿದ್ಯಾರ್ಥಿಗಳು ಪ್ರವೇಶಾತಿ ಪಡೆದ ನಂತರ ಎಂಸಿಐ ಅಥವಾ ವಿಟಿಯು ಕಾಲೇಜಿನ ಮಾನ್ಯತೆ ರದ್ದುಪಡಿಸುವ ತೀರ್ಮಾನ ಪ್ರಕಟಿಸುತ್ತದೆ. ಇದರಿಂದ ಖಾಸಗಿ ಆಡಳಿತ ಮಂಡಳಿಗಳು ನ್ಯಾಯಾಲಯದ ಮೆಟ್ಟಿಲೇರಿ ಕೊನೇ ಗಳಿಗೆಯಲ್ಲಿ ಪ್ರವೇಶಾತಿಗೆ ಅನುಮತಿ ಪಡೆಯುತ್ತಿವೆ.

ಇನ್ನೂ, ಕೆಲವು ಕಾಲೇಜುಗಳು ಮಾನ್ಯತೆಯೇ ಇಲ್ಲದ ಕೋರ್ಸ್‌ಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುತ್ತಿವೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಹೋದಾಗ ಅನಿವಾರ್ಯವಾಗಿ ಬೇರೆ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ಕಾಲೇಜುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಸರಕಾರ ಅಸಹಾಯಕತೆ ಪ್ರದರ್ಶಿಸುತ್ತಿದೆ.

ಸೀಟು ಹಂಚಿಕೆ ವಿವರ ಪ್ರಕಟ ವಿಳಂಬ ಗೊಂದಲ

ಪ್ರತಿ ವರ್ಷವೂ ವೈದ್ಯ ಹಾಗೂ ಆಯುಷ್ ಸೀಟು ಹಂಚಿಕೆ ಪಟ್ಟಿಯನ್ನು ಸರಕಾರ ಕೊನೇ ಗಳಿಗೆಯಲ್ಲಿ ಪ್ರಕಟಿಸುತ್ತಿದೆ. ಈ ಬಗ್ಗೆ ಕೆಇಎ ಸರಕಾರ, ಎಂಸಿಐ ಹಾಗೂ ಆಯುಷ್ ನಿರ್ದೇಶನಾಲಯಕ್ಕೆ ಪತ್ರ ಬರೆದರೂ ಪ್ರಯೋಜನ ಇಲ್ಲದಂತಾಗಿದೆ.

ಪ್ರವೇಶಾತಿಗೆ ಒಂದು ದಿನ ಬಾಕಿಯಿರುವಾಗ ಅಂದರೆ, ಸೆಪ್ಟೆಂಬರ್ ಅಂತ್ಯದಲ್ಲಿ ಈ ವರ್ಷ ವೈದ್ಯಕೀಯ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಒಂದೇ ದಿನದಲ್ಲಿ ವಿದ್ಯಾರ್ಥಿ ಪ್ರವೇಶ ಪಡೆಯಲಾಗದೆ ಖಾಸಗಿ ಕಾಲೇಜುಗಳಿಗೆ ಲಾಭವಾಗುತ್ತಿದೆ. ಆಯುಷ್ ಸೀಟುಗಳ ಹಂಚಿಕೆ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಹೀಗಾಗಿ, ಈ ವರ್ಷವಾದರೂ ಸರಕಾರ ವೈದ್ಯ ಹಾಗೂ ಆಯುಷ್ ಸೀಟು ಹಂಚಿಕೆ ಪಟ್ಟಿಯನ್ನು ನಿಗದಿತ ಸಮಯದಲ್ಲಿ ಬಿಡುಗಡೆ ಮಾಡಿ ಗೊಂದಲಗಳಿಗೆ ತೆರೆ ಎಳೆಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಅಂಕ ಪಟ್ಟಿ ವಾಪಸ್ ಪಡೆಯಲು ಪರದಾಟ

ಪರಿಶಿಷ್ಟರು ಹಾಗೂ ಪ್ರವರ್ಗ-1ರ ಗುಂಪಿಗೆ ಸೇರಿದ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ 2.5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ವರಮಾನ ಹೊಂದಿರುವ ಗುಂಪಿನ ವಿದ್ಯಾರ್ಥಿಗಳು ಪ್ರವೇಶಾತಿಗೆ ಸರಕಾರ ನಿಗದಿಪಡಿಸಿದ ಶುಲ್ಕವನ್ನು ಕೆಇಎನಲ್ಲಿ ಪಾವತಿಸಬೇಕು. ಆ ಸೀಟುಗಳಿಗೆ ಮಾನ್ಯತೆ ಸಿಕ್ಕ ನಂತರ ಕೆಇಎ ಆ ಶುಲ್ಕವನ್ನು ಸಂಬಂಧಪಟ್ಟ ಕಾಲೇಜುಗಳಿಗೆ ವರ್ಗಾಯಿಸುತ್ತದೆ. ಒಂದು ವೇಳೆ ಸಿಇಟಿ ಹೊರತುಪಡಿಸಿ ಬೇರೆ ಪರೀಕ್ಷೆಗಳ ಮೂಲಕ ಸೀಟು ಗಿಟ್ಟಿಸಿದಲ್ಲಿ ಈ ಶುಲ್ಕದ ಮೊತ್ತವನ್ನು ವರ್ಗಾಯಿಸಲು ಅವಕಾಶ ಇರುವುದಿಲ್ಲ. ಇದರಿಂದ ಶುಲ್ಕ ವಾಪಸು ಬರದೆ ಪೋಷಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಒಬ್ಬ ವಿದ್ಯಾರ್ಥಿ ನಿರ್ದಿಷ್ಟ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದನೆಂದರೆ, ಆನಂತರ ಆಡಳಿತ ಮಂಡಳಿಗಳು ಶುಲ್ಕ ಅಥವಾ ಅಂಕಪಟ್ಟಿ ಹಿಂತಿರುಗಿಸುವುದಿಲ್ಲ. ಹೀಗಾಗಿ, ಮತ್ತೊಂದು ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಕ್ಕರೂ ವಿದ್ಯಾರ್ಥಿಗಳು ಮೊದಲಿನ ಕಾಲೇಜು ಬಿಟ್ಟು ಬೇರೆ ಕಾಲೇಜಿಗೆ ಪ್ರವೇಶ ಪಡೆಯಲಾಗದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. —

ಸಿಇಟಿಗೆ ಅರ್ಜಿ ತುಂಬುವ ವಿಧಾನ ಹಾಗೂ ಸೀಟು ಆಯ್ಕೆ ಪ್ರಕ್ರಿಯೆ ಕುರಿತು ಇದುವರೆಗೆ ಇಂಗ್ಲಿಷ್‌ನಲ್ಲಿ ಲಭ್ಯವಾಗುತ್ತಿದ್ದ ಎಲ್ಲ ಮಾಹಿತಿಯನ್ನು ಈ ವರ್ಷ ಕನ್ನಡದಲ್ಲೂ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದೆಂದು ನಿರೀಕ್ಷಿಸಲಾಗಿದೆ.

– ಗಂಗಾಧರಯ್ಯ, ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?

ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದರಿಂದ ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಬ್ಯಾಂಕ್ ಗಳಲ್ಲಿ ಇದನ್ನು ಕೆವೈಸಿ ಯನ್ನಾಗಿಯೂ ಬಳಸಿಕೊಳ್ಳಬಹುದು. ಅಲ್ಲದೇ ಇದೊಂದು ಬಹು ವಿಧದ ಗುರುತಿನ ಚೀಟಿಯಾಗಿ ಬಳಕೆಯಾಗುತ್ತದೆ.
ಕೇವಲ ಆಧಾರ್ ಕಾರ್ಡ್ ಹೊಂದಿದ್ದರೆ ಮಾತ್ರ ಸಾಲದು, ಅದನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದಾಗ ಮಾತ್ರ ಸರ್ಕಾರ ನೀಡುವ ಸಬ್ಸಿಡಿ ಮತ್ತಿತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.

#ಎಸ್ ಬಿಐ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳುವ ಹಂತಗಳನ್ನು ನೋಡೋಣ
1. ಎಸ್ ಬಿಐ ಆಧಾರ್ ಲಿಂಕ್ ಅರ್ಜಿಯನ್ನು ಡೌನ್ ಕೋಡ್ ಮಾಡಿಕೊಳ್ಳಿ

2. ನೀಡಿರುವ ಎಲ್ಲ ವಿವರಗಳನ್ನು ದರಿಯಾಗಿ ಭರ್ತಿ ಮಾಡಿ

3. ನಿಮ್ಮ ಆಧಾರ್ ಕಾರ್ಡ್ ನ ಪ್ರತಿ, ಪಾನ್ ಕಾರ್ಡ್, ಪಾಸ್ ಬುಕ್ ಫೋಟೋ ಕಾಪಿ ತೆಗೆದುಕೊಳ್ಳಿ

4. ಎಲ್ಲ ದಾಖಲೆಗಳನ್ನು ಬ್ಯಾಂಕ್ ಗೆ ನೀಡಿ
ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿರುವಂತೆ ಬ್ಯಾಂಕ್ ಖಾತೆ ತೆರಯಲು ಆಧಾರ್ ಕಾರ್ಡ್ ಇದ್ದರೆ ಸಾಕು. ಎಲ್ ಪಿಜಿ ಸಬ್ಸಿಡಿ ಪಡೆಯುತ್ತಿರುವವರು ಆಧಾರ್ ನಂಬರ್ ಹೊಂದಿರದಿದ್ದರೆ ಸಮಸ್ಯೆಯಿಲ್ಲ. ಅವರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ಪಡೆದುಕೊಳ್ಳುತ್ತಾರೆ.

ಒಂದು ವೇಳೆ ನೀವು ಶಾಶ್ವತ ಅಕೌಂಟ್ ನಂಬರ್ ಗೆ ಅರ್ಜಿ ಹಾಕುತ್ತಿದ್ದರೆ ಆ ವೇಳೆಗೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಅದನ್ನು ಸಲ್ಲಿಸಿ ಬ್ಯಾಂಕ್ ಖಾತೆ ಮಾಡಿಕೊಳ್ಳಬಹುದು.
******************************************

“ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿದೆಯೇ ಪರಿಶೀಲಿಸಿ”

ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ನ್ನು ಅನೇಕ ಸೌಲಭ್ಯಗಳಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಿದೆ. ವಿಳಾಸ ದೃಢೀಕರಣ ಸೇರಿದಂತೆ ಹಲವೆಡೆ ಬಳಸಿಕೊಳ್ಳಬಹುದು.
ಆಧಾರ್ ಸಂಖ್ಯೆ ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳಿಗೂ ಅಗತ್ಯ. ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದಾಗ ಮಾತ್ರ ಸರ್ಕಾರ ನೀಡುವ ಸಬ್ಸಿಡಿ ಮತ್ತಿತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.

#ಪರಿಶೀಲನೆ ಮಾಡುವುದು ಹೇಗೆ?

* ನಿಮ್ಮ ಮೊಬೈಲ್ ನಿಂದ *99*99*# ಕ್ಕೆ ಡಯಲ್ ಮಾಡಿ

* ನಂತರ ಬರುವ ಸೂಚನೆಯಂತೆ 12 ಅಂಕೆಗಳ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ

* ನಂತರ ಸೆಂಡ್ ಬಟನ್ ಒತ್ತಿ

* ಸರಿಯಾಗಿದ್ದರೆ ಕನ ಫರ್ಮ್ ಬಟನ್ ಒತ್ತಿ, ಇಲ್ಲವಾದಲ್ಲಿ ಸಂಖ್ಯೆ 2 ನ್ನು ಒತ್ತಿ ಬದಲಾವಣೆ ಮಾಡಬಹುದು.

* ನಂತರ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆಯೇ ಇಲ್ಲವೇ ಎಂಬ ಸಂದೇಶ ಬರುತ್ತದೆ. ಲಿಂಕ್ ಆಗಿದ್ದರೆ ನಿಮ್ಮ ಆಧಾರ್ ಹೆಸರಿನೊಂದಿಗೆ ಬ್ಯಾಂಕ್ ಹೆಸರು ಸಹ ಡಿಸ್ಪ್ಲೇ ಆಗುವುದು.

ಕಾರ್ಪೋರೇಟ್ ಕಂಪನಿಗಳು ಮತ್ತು ಅವುಗಳ ಸ್ಥಾಪಕರು.

🏼ಜಗತ್ತಿನ ಪ್ರಮುಖ ಕಾರ್ಪೋರೇಟ್ ಕಂಪನಿಗಳು ಮತ್ತು ಅವುಗಳ ಸ್ಥಾಪಕರು
🏼
1.ಗೂಗಲ್ (Google) ┈ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್.
2.ಫೇಸ್ ಬುಕ್ (Facebook) ┈ ಮಾರ್ಕ್ ಜ್ಯೂಕರ್ಬರ್ಗ್.
3. ಯಾಹೂ (Yahoo) ┈ ಡೇವಿಡ್ ಪಾಸ್ಟಾ ಸನ್ ಮತ್ತು ಜೆರ್ರಿ ಯಾಂಗ್.
4. ಟ್ವಿಟ್ಟರ್ (Twitter) ┈ ಜ್ಯಾಕ್ ಡಾರ್ಸೆ ಮತ್ತು ಡಿಕ್ ಕೊಸ್ಟಲೊ.
5.ಇಂಟರ್ನೆಟ್ (Internet) ┈ ಟಿಮ್ ಬರ್ನರ್ಸ್ ಲೀ.
6. ಲಿಂಕಡ್ ಇನ್ (LinkedIn) ┈ ರೀಡ್ ಹಾಫ್ಮನ್, ಅಲೆನ್ ಬ್ಲೂ ಮತ್ತು ಕೂನ್ಸ್ಟಾಂಟೀನ್ ಗ್ಯೂರಿಕ್.
7.ಇ-ಮೇಲ್ (Email) ┈ ಶಿವ ಅಯ್ಯಾದುರೈ.
8.ಜಿ ಟಾಕ್ (Gtalk) ┈ ರಿಚರ್ಡ್ ವಾಹ್ ಕನ್.
9.ವ್ವಾಟ್ಸ್ ಅಪ್ (Whats up) ┈ ಲಾರೆಲ್ ಕಿರ್ಟ್ಜ್.
10.ಹೊಟ್ ಮೈಲ್ (Hotmail) ┈ ಸಬೀರ್ ಭಾಟಿಯಾ.
11.ವಿಕಿ ಪೆಡಿಯಾ (Wikipedia) ┈ ಜಿಮ್ಮಿ ವೇಲ್ಸ್.
12.ಯು ಟೂಬ್ (You tube) ┈ ಸ್ಟೀವ್ ಚೆನ್ ಚಾಡ್ ಹರ್ಲೆ ಮತ್ತು ಜಾವೆದ್ ಕರೀಮ್.
13.ರೆಢೀಪ್ (Rediff) ┈┈ ಅಜಿತ್ ಬಾಲಕೃಷ್ಣನ್.
14.ನಿಂಬುಜ್ (Nimbuzz) ┈ ಮಾರ್ಟಿನ್ ಸ್ಮಿಂಕ್ ಮತ್ತು ಎವರ್ಟ್ ಜಾಪ್ ಲುಪ್ಟ್.
15.ಮೈ ಸ್ಪೇಸ್ (Myspace) ┈ ಕ್ರಿಸ್ ಡೆವೂಲ್ಫ್ ಮತ್ತು ಟಾಮ್ ಆಂಡರ್ಸನ್.
16. ಇಬಿಬೋ (Ibibo) ┈ ಆಶಿಶ್ ಕಶ್ಯಪ್.
17. ಓಎಲ್ಎಕ್ಸ್ (OLX) ┈ ಅಲೆಕ್ ಓಕ್ಸೆನ್ ಫೋರ್ಡ್ ಮತ್ತು ಫ್ಯಾಬ್ರಿಸ್ ಗ್ರಿಂಡಾ.
18.ಸ್ಕೈಫೈ (Skype) ┈ ವಿದ್ ನಿಕ್ಲಾಸ್ ಜೆನ್ಸ್ಟ್ರಮ್, ಜಾನೂಸ್ ಪ್ರೀಸ್ ಮತ್ತು ರೀಡ್ ಹಾಫ್ಮನ್.
19.ಓಪೆರಾ (Opera) ┈ ಜಾನ್ ಸ್ಟೀಫನ್ ಸನ್ ವಾನ್ ಟಿಚ್ನೆರ್ ಮತ್ತು ಗೇರ್ ಇವರ್ಸೋಯ್.u
20.ಮೊಜಿಲ್ಲಾ ಫೈರ್ ಬಾಕ್ಸ್ (Mozilla Firefox) ┈┈ ಡೇವ್ ಹ್ಯಾಟ್ ಮತ್ತು ಬ್ಲೇಕ್ ರೋಸ್.
21.ಬ್ಲಾಗರ್ (Blogger) ┈ ಇವಾನ್ ವಿಲಿಯಮ್ಸ

P U C II ದ್ವೀಪ್ರತಿ ಅಂಕಪಟ್ಟಿ ಪಡೆಯುಯುವುದು ಹೇಗೆ?

ದ್ವಿತೀಯ ಪಿ.ಯು.ಸಿ ಮೂಲ ಅಂಕಪಟ್ಟಿ ಕಳೆದುಹೋದಲ್ಲಿ, ದ್ವಿಪ್ರತಿ ಪ್ರಮಾಣ ಪತ್ರವನ್ನು ಪಡೆಯುವ ಕ್ರಮಗಳು

🌷 ಅರ್ಜಿಗಳು ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ.

🌷 ಅರ್ಜಿಯನ್ನು ನಿರ್ದೇಶಕರ ಕಛೇರಿ,  ಪದವಿ ಪೂರ್ವ ಶಿಕ್ಷಣ ಇಲಾಖೆ,  ಪದವಿ ಪೂರ್ವ ಶಿಕ್ಷಣ ಭವನ, 18 ನೆಯ ಅಡ್ಡರಸ್ತೆ, ಮಲ್ಲೇಶ್ವರಂ, ಸಂಪಿಗೆ ರಸ್ತೆ,  ಬೆಂಗಳೂರು – 560003 ಎಂಬ ವಿಳಾಸಕ್ಕೆ ಬರೆಯಬೇಕು.

🌷 ನಿಗದಿತ ಶುಲ್ಕವನ್ನು (250 ರೂ.) ಖಜಾನೆಗೆ ಪಾವತಿ ಮಾಡಿ ಮೂಲ ಚಲನ್ ಗಳನ್ನು ಅರ್ಜಿಯೊಂದಿಗೆ ಸಲ್ಲಿಸುವುದು. [ಯಾವುದೇ ಕಾರಣಕ್ಕೂ ಬ್ಯಾಂಕಿನ ಬೇಡಿಕೆ ಹುಂಡಿಯನ್ನು (ಡಿ.ಡಿ) ಪರಿಗಣಿಸಲಾಗುವುದಿಲ್ಲ.

🌷 ಪ್ರಮಾಣ ಪತ್ರವು ಕಳೆದುಹೋಗಿರುವುದಾಗಿಯೂ ಪರೀಕ್ಷಾ ಫಲಿತಾಂಶವನ್ನು ತಿರಸ್ಕರಿಸಿಲ್ಲವೆಂದೂ ಮತ್ತು ಯಾವುದೇ ಕಾಲೇಜಿನಲ್ಲಿ ದಾಖಲಾಗಿಲ್ಲವೆಂದೂ ಅಭ್ಯರ್ಥಿಯು ಪ್ರಮಾಣೀಕರಿಸುವ 20 ರೂಪಾಯಿ ಛಾಪಾ ಕಾಗದದಲ್ಲಿ ಕೋರ್ಟ್ ನಿಂದ  ಅಥವಾ ನೋಟರಿಯವರಿಂದ ಅಫಿಡವಿಟ್  ಸಲ್ಲಿಸಬೇಕು.

🌷 ಪ್ರಮಾಣ ಪತ್ರವು ಕಳೆದುಹೋಗಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ದೂರಿನ ಸ್ವೀಕೃತಿ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

🌷 ದ್ವಿತೀಯ ಪಿ.ಯು.ಸಿ ಮೂಲ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ಲಭ್ಯವಿದ್ದರೆ ಅರ್ಜಿಯೊಂದಿಗೆ ಲಗತ್ತಿಸಬೇಕು.

🌷 ದ್ವಿಪ್ರತಿ ಪ್ರಮಾಣ ಪತ್ರವನ್ನು ಅಭ್ಯರ್ಥಿಗೆ ನೇರವಾಗಿ ನೀಡಲಾಗುವುದಿಲ್ಲ. ವ್ಯಾಸಂಗ ಮಾಡಿದ ಕಾಲೇಜಿಗೆ ಪ್ರಮಾಣ ಪತ್ರವನ್ನು ಕಳುಹಿಸಲಾಗುವುದು. ಕಾಲೇಜಿನ ಪ್ರಾಂಶುಪಾಲರು ಸದರಿ ಅಂಕಪಟ್ಟಿಯನ್ನು ಪರಿಶೀಲಿಸಿ ವಿತರಣಾ ವಹಿಯಲ್ಲಿ ನಮೂದಿಸಿ ಸಂಬಂಧಿಸಿದ ಅಭ್ಯರ್ಥಿಯ ಸಹಿ ಪಡೆದು ವಿತರಿಸುವುದು.

🎓 ಶುಲ್ಕದ ವಿವರಗಳು 🎓

🌴 ಉತ್ತೀರ್ಣ ಪ್ರಮಾಣ ಪತ್ರಕ್ಕೆ🌴

💐 ದ್ವಿಪ್ರತಿ ಪ್ರಮಾಣ ಪತ್ರಕ್ಕೆ 👉🏻 250 ರೂ.

💐 ತ್ರಿಪ್ರತಿ ಪ್ರಮಾಣ ಪತ್ರಕ್ಕೆ 👉🏻 750 ರೂ.

🌴 ಅನುತ್ತೀರ್ಣ ಅಂಕಪಟ್ಟಿಗೆ🌴
👇🏻👇🏻👇🏻👇🏻👇🏻

💐 ಫಲಿತಾಂಶ ಪ್ರಕಟವಾದ  2 ವರ್ಷಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ 👉🏻 50 ರೂ.

💐 ಫಲಿತಾಂಶ ಪ್ರಕಟವಾದ  2 ವರ್ಷಗಳ ನಂತರ ಹಾಗೂ 10 ವರ್ಷಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ 👉🏻 100 ರೂ.

💐 ಫಲಿತಾಂಶ ಪ್ರಕಟವಾದ 10 ವರ್ಷಗಳ ನಂತರ ಅರ್ಜಿ ಸಲ್ಲಿಸಿದಲ್ಲಿ 👉🏻 200 ರೂ.

🎓 ದ್ವಿತೀಯ ಪಿ.ಯು.ಸಿ. ಅಂಕಪಟ್ಟಿಯಲ್ಲಿ ಹೆಸರು ತಿದ್ದುಪಡಿ ಮಾಡುವ ಬಗ್ಗೆ🎓
👇🏻👇🏻👇🏻👇🏻👇🏻

💐 ನಿಗದಿತ ತಿದ್ದುಪಡಿ ನಮೂನೆಯಲ್ಲಿ ಅರ್ಜಿ ಭರ್ತಿಮಾಡಿ ಕಳುಹಿಸಬೇಕು ( ನಮೂನೆಯಲ್ಲಿ ವಿದ್ಯಾರ್ಥಿಯ ಹೆಸರನ್ನು,  ತಂದೆಯ ಹೆಸರನ್ನು ಆಂಗ್ಲ ಭಾಷೆಯಲ್ಲಿ ದಪ್ಪ ಅಕ್ಷರಗಳಲ್ಲಿ ಭರ್ತಿ ಮಾಡಿ
ಕಳುಹಿಸುವುದು)

💐 ಅಭ್ಯರ್ಥಿಯ / ತಂದೆಯ / ತಾಯಿಯ ಹೆಸರು ತಿದ್ದುಪಡಿಗೆ ಯಾವುದೇ ಶುಲ್ಕವಿರುವುದಿಲ್ಲ.

💐 ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಮೂಲ ಪ್ರಮಾಣಪತ್ರವನ್ನು ಸಲ್ಲಿಸುವುದು.

💐 ಅಂಕಪಟ್ಟಿಯಲ್ಲಿ ಲ್ಯಾಮಿನೇಷನ್ ಮಾಡಿಸಿದ್ದರೆ ತಿದ್ದುಪಡಿ ಮಾಡಲು ಬರುವುದಿಲ್ಲ. ಆದ್ದರಿಂದ ಲ್ಯಾಮಿನೇಶನ್ ತೆಗೆದು ಸಲ್ಲಿಸುವುದು ಅಥವಾ ದ್ವಿಪ್ರತಿ ಪ್ರಮಾಣ ಪತ್ರವನ್ನು ತಿದ್ದುಪಡಿಯೊಂದಿಗೆ ಪಡೆಯಲು ನಿಗಧಿತ ಶುಲ್ಕವನ್ನು ಭರ್ತಿಮಾಡಿ ಅರ್ಜಿ  ಸಲ್ಲಿಸುವುದು.

🎓 ಅಂಕಪಟ್ಟಿಯಲ್ಲಿ ತಿದ್ದುಪಡಿ ಮಾಡಬೇಕಾದ ಹೆಸರು ಪೂರ್ಣ ಬದಲಾವಣೆ ಯಾಗಿದ್ದರೆ🎓
👇🏻👇🏻👇🏻👇🏻👇🏻

💐 ನ್ಯಾಯಾಲಯದ ಆದೇಶದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸುವುದು.

💐 ಕಾಲೇಜಿನಲ್ಲಿರುವ ದಾಖಲಾತಿ ಪುಸ್ತಕದ ಅಭ್ಯರ್ಥಿಯ ಮಾಹಿತಿಯಿರುವ ಹಾಳೆಯನ್ನು ಜೆರಾಕ್ಸ್ ಮಾಡಿಸಿ, ಪ್ರಿನ್ಸಿಪಾಲರಿಂದ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಧೃಢೀಕರಿಸಿ ಸಲ್ಲಿಸಬೇಕು.

💐 ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತೀರ್ಣ  ಹೊಂದಿದ ನಂತರ ಎಸ್ಸೆಸ್ಸೆಲ್ಸಿ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಯ / ತಂದೆಯ / ತಾಯಿಯ ಹೆಸರನ್ನು ತಿದ್ದುಪಡಿ ಮಾಡಿಕೊಂಡಿದ್ದರೆ ಕಾಲೇಜಿನ ದಾಖಲಾತಿ ಪುಸ್ತಕದಲ್ಲಿ ಎಸ್ಸೆಸ್ಸೆಲ್ಸಿ ಪ್ರಮಾಣ (ತಿದ್ದುಪಡಿ ಮಾಡಿರುವಂತೆ) ಪತ್ರದಲ್ಲಿರುವಂತೆ ತಿದ್ದುಪಡಿ ಮಾಡಿ ಆ ಹಾಳೆಯನ್ನು ಜೆರಾಕ್ಸ್ ಮಾಡಿಸಿ ಪ್ರಿನ್ಸಿಪಾಲರಿಂದ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ  ಉಪನಿರ್ದೇಶಕರಿಂದ ಧೃಢೀಕರಿಸಿ ಸಲ್ಲಿಸಬೇಕು.

[ ಬರವಣಿಗೆ / ಮಾಹಿತಿ ಸಂಗ್ರಹಣೆ 👉🏻 ಅರುಲ್  ಡಿಸೋಜ ]