ಅಂದು ಇಂದು

ಸಮೂಹ ಅಂದು, ಇಂದು

ಅಂದು,
ಒಂದು ಮನೆಯಿಂದ ಐದಾರು ಮಂದಿ ಒಟ್ಟಿಗೆ ಒಂದೇ ಕಾರಿನಲ್ಲಿ ಒಂದು ಸ್ಥಳಕ್ಕೆ ಹೋಗತ್ತಿದ್ದೆವು.

ಇಂದು,
ಒಂದು ಮನೆಯಿಂದ ಒಂದು ಸ್ಥಳಕ್ಕೆ ಐದಾರು ಮಂದಿ ಐದಾರು ಕಾರಿನಲ್ಲಿ ಹೋಗುತ್ತೇವೆ.

ಅಂದು,
ಒಂದು ಕೋಣೆಯಿರುವ ಮನೆಯಲ್ಲಿ ಹತ್ತಾರು ಮಂದಿ ವಾಸಿಸುತ್ತಿದ್ದೆವು.

ಇಂದು,
ಹತ್ತಾರು ಕೋಣೆಯಿರುವ ಮನೆಯಲ್ಲಿ ಒಂದೋ ಎರಡೋ ಮಂದಿ ವಾಸಿಸುತ್ತಿದ್ದೇವೆ.

ಅಂದು,
ನೂರು ರೂಪಾಯಿ ಕೊಟ್ಟರೆ ಒಂದು ಚೀಲ ತುಂಬಾ ಸಾಮಾಗ್ರಿ ತರುತ್ತಿದ್ದವು.

ಇಂದು,
ಒಂದು ಚೀಲ ತುಂಬಾ ಹಣ ಕೊಟ್ಟು ಒಂದೋ ಎರಡೋ ಸಾಮಾಗ್ರಿ ಖರೀದಿಸುತ್ತೇವೆ.

ಅಂದು,
ಹತ್ತು ಜನ ಊಟ ಮಾಡಲು ಎಂಟು ಜನರಿಗಾಗುವಷ್ಟು ಊಟ ತಯಾರಿಸಿ ಹನ್ನೆರಡು ಮಂದಿ ಊಟ ಮಾಡುತ್ತಿದ್ದೆವು.

ಇಂದು,
ಹತ್ತು ಜನ ಊಟ ಮಾಡಲು, ಇಪ್ಪತ್ತು ಜನರಿಗಾಗುವಷ್ಟು ಊಟ ತಯಾರಿಸಿ, ಎಂಟು ಮಂದಿ ಊಟ ಮಾಡಿ , ಬಾಕಿ ಕಸದ ತೊಟ್ಟಿಗೆ ಹಾಕುತ್ತೇವೆ.

ಅಂದು,
ಸಾವಿರ ಮಂದಿಗೆ ಸಹಾಯ ಮಾಡಿದವರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಇಂದು ,
ಒಬ್ಬನಿಗೆ ಸಹಾಯ ಮಾಡಿದರೆ ಸಾವಿರ ಮಂದಿಗೆ ಗೊತ್ತಾಗುತ್ತದೆ.

ಅಂದು,
ಅರ್ಧ ಹೊಟ್ಟೆ ತುಂಬಿಸಲು ಬೇಕಾಗಿ ಕಿಲೋಮೀಟರ್ ವರೆಗೆ ನಡೆದು ಹೋಗಿ ಕೆಲಸ ಮಾಡತ್ತಿದ್ದೆವು.

ಇಂದು,
ಹೊಟ್ಟೆ ಕರಗಿಸಲು ಬೇಕಾಗೆ ಕಿಲೋಮೀಟರ್ ವರೆಗೆ ನಡೆಯುತ್ತೇವೆ.

ಅಂದು,
ಜೀವಿಸಲಿಕ್ಕಾಗಿ ತಿನ್ನುತ್ತಿದ್ದೆವು.

ಇಂದು,
ತಿನ್ನಲಿಕ್ಕೊ ಸ್ಕರ ಜೀವಿಸುತ್ತಿದ್ದೇವೆ.

ಅಂದು ,
ಮನೆಯೊಳಗೆ ಊಟ ಮಾಡಿ ಹೊರಗಡೆ ಶೌಚಾಲಯಕ್ಕೆ ಹೋಗುತ್ತಿದ್ದೆವು.

ಇಂದು,
ಹೊರಗಡೆ ಊಟ ಮಾಡಿ ಒಳಗೆ ಶೌಚಾಲಯಕ್ಕೆ ಹೋಗುತ್ತೇವೆ.

ಅಂದು,
ಮಾನ ಮುಚ್ಚಲು ವಸ್ತ್ರ ಧರಿಸುತ್ತಿದ್ದೆವು.

ಇಂದು,
ಮಾನ ಇತರರಿಗೆ ತೋರಿಸಲು ವಸ್ತ್ರ ಧರಿಸುತ್ತಿದ್ದೇವೆ.

ಅಂದು ,
ಅಧ್ಯಾಪಕರ ಕೈಯಿಂದ ಪೆಟ್ಟು ಸಿಗಬಾರದು ಎಂದು ಪ್ರಾರ್ಥಿಸುತ್ತಿದ್ದವು.

ಇಂದು,
ವಿದ್ಯಾರ್ಥಿಗಳ ಕೈಯಿಂದ ಪೆಟ್ಟು ಸಿಗದೆ ಇರಲು ಅಧ್ಯಾಪಕರು ಪ್ರಾರ್ಥಿಸುತ್ತಿದ್ದಾರೆ.

ಬದಲಾಗಿರುವುದು ನಾವೇ ಹೊರತು, ಕಾಲವಲ್ಲ.

$$$$$$$$$$

ಯಾರೋ ಸಂಗ್ರಹಿಸಿದ ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ – ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.

೦೧) “ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!”
ಆದರೆ….
“ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ…!!”
“ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!”
“”””””””””””””””””””””””””””””

೦೨) ತುಳಿಯುವವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು.
“”””””””””””””””””””””””””””””

೦೩) ಪ್ರಯತ್ನ ಎಂಬುದು ಬೀಜದ ಹಾಗೆ. ಬಿತ್ತುತ್ತಲೇ ಇರಿ. ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೇ ಕೊಡುತ್ತದೆ….
“”””””””””””””””””””””””””””””

೦೪) ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಏಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.
“”””””””””””””””””””””””””””””

೦೫) ಒಂದು ಕಾಲು ಮುಂದೆ ಒಂದು ಕಾಲು ಹಿಂದೆ. ಆದರೆ ಮುಂದಿನದಕ್ಕೆ ಗರ್ವವಿಲ್ಲ, ಹಿಂದಿನ ಅದಕ್ಕೆ ಬೇಸರವಿಲ್ಲ, ಏಕೆಂದರೆ ಇದು ಕ್ಷಣಿಕ.
“”””””””””””””””””””””””””””””

೦೬) ಸಮುದ್ರ ಎಂದೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ
ಯಶಸ್ಸು ಮತ್ತು ಕೀರ್ತಿಗಳೂ ಹಾಗೆಯೇ. ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತವೆ.
“”””””””””””””””””””””””””””””

೦೭) ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ, ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.
“”””””””””””””””””””””””””””””

೦೮) ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.
“”””””””””””””””””””””””””””””

೦೯) ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ ” ಮತ್ತೆ ” ಬಂತು ಇದೇ – Recycling ??
“”””””””””””””””””””””””””””””

೧೦) ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ, ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.
“”””””””””””””””””””””””””””””

೧೧) ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.
“”””””””””””””””””””””””””””””

೧೨) ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಏಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
“”””””””””””””””””””””””””””””

೧೩) ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ….
“”””””””””””””””””””””””””””””

೧೪) ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು ಚಿಂತಿಸಬೇಕಿಲ್ಲ.
“”””””””””””””””””””””””””””””

೧೫) ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆ ಪಾದುಕೆಯಾಗುವುದು ಶ್ರೇಷ್ಠ…!
ಕಾಲೆಳೆವವರ ನಾಯಕನಾಗುವುದಕ್ಕಿಂತ ಕೈಹಿಡಿವವರ ಸೇವಕನಾಗುವುದು ಉತ್ಕೃಷ್ಟ..!
“”””””””””””””””””””””””””””””

೧೬) ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ, ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ. ಏಕೆಂದರೆ ಸಮಯ ಎಂದೂ ಭೇದ ತೋರುವುದಿಲ್ಲ.
“”””””””””””””””””””””””””””””

೧೭) ಚಿಂತೆಗೂ, ಚಿತೆಗೊ ಇರುವ ವ್ಯತ್ಯಾಸ ಒಂದು “೦” ಮಾತ್ರ…

ಚಿತೆ ಸತ್ತ ದೇಹವನ್ನು ಸುಡುತ್ತದೆ, ಚಿಂತೆ ಬದುಕಿರುವ ದೇಹವನ್ನೇ ಸುಡುತ್ತದೆ.!!
“”””””””””””””””””””””””””””””””

೧೮) ಸಹನೆ ನಿನ್ನದಾದರೆ ಸಕಲ ನಿನ್ನದೇ ವಿನಯ ನಿನ್ನದಾದರೆ ವಿಜಯ ನಿನ್ನದೇ.

೧೯) ಕತ್ತಲೆ ಆವರಿಸಿಕೊಳ್ಳದೆ ನಕ್ಷತ್ರಗಳು ಮಿನುಗುವುದಿಲ್ಲ ಹಾಗೆಯೇ ಕಷ್ಟಗಳು ಬಾರದೆ ವ್ಯಕ್ತಿಯ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯವಿಲ್ಲ.
“”””””””””””””””””””””””””””””””

೨೦) ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ.
“”””””””””””””””””””‘”””””””””‘””

೨೧) ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು ಅವರು ನಿನ್ನ ಮುಂದೆ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.
“”””””””””””””””””””””””””””””””

೨೨) ನಿಮ್ಮ ನಗು ಜಗತ್ತನ್ನು ಬದಲಿಸಲಿ. ಆದರೆ ನಿಮ್ಮ ನಗುವನ್ನು ಬದಲಿಸಲು ಜಗತ್ತಿಗೆ ಅವಕಾಶ ಕೊಡಬೇಡಿ.
“”””””””””””””””””””””””””””””””’

೨೩) “ಸಮಯಕ್ಕೆ ರಜೆ ಇಲ್ಲ ಸ್ವಪ್ನಕ್ಕೆ ಅಂತಿಮ ತಾರೀಖು ಇಲ್ಲ ಜೀವನದಲ್ಲಿ ತಾತ್ಕಾಲಿಕ ವಿರಾಮ ಕೀಲಿ ಇಲ್ಲ …ಜೀವಿಸಿ….ಪ್ರೀತಿಸಿ… ಜೀವನದಲ್ಲಿನ ಪ್ರತೀ ಕ್ಷಣ ಅನುಭವಿಸಿ ಆನಂದಿಸಿ “
“””””””””””””””””””””””””””””

೨೪) ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ. ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ.
“”””””””””””””””””””””””””””””””

೨೫) ಇಲ್ಲಿ ಎಲ್ಲರೂ ಹುಟ್ಟಿದ್ದು ಅಳುವಿನಿಂದ ನಗುವಿಗಾಗಿ ಜೀವನಪರ್ಯಂತ ಶ್ರಮಪಡಲೇ ಬೇಕು.
“”””””””””””””””””””””””””””””””

೨೬) ನಿಮಗೆ ಶತ್ರುಗಳು ಹುಟ್ಟಬೇಕೆಂದರೆ ನೀವು ಅನ್ಯಾಯ ಮಾಡಬೇಕೆಂದಿಲ್ಲ, ಕೆಲವೊಮ್ಮೆ ಜೀವನದಲ್ಲಿ ನೀವು ಸಾಧಿಸುವ ಯಶಸ್ಸುಗಳೇ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತವೆ.
“”””””””””””””””””””””””””””””””

೨೭) ಬೈಯ್ಯೋರು ಬದುಕೋಕೆ ಹೇಳಿದರು…ಹೋಗಳೋರು ಹಾಳಾಗೋಕೆ ಹೇಳಿದರು…

ಬೈಯೋರು ಬಾಗಿಲೊಳಗಿರಬೇಕು, ಹೋಗಳೋರು ಬಾಗಿಲಾಚೆ ಇರಬೇಕು.
“”””””””””””””””””””””””””””””””

೨೮) ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಿಲ್ಲ, ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ ಏಕೆಂದರೆ ಸತ್ತ ಮೇಲೆ ಹೆಗಲು ಕೊಡುವವರು ಅವರೇ, ಶ್ರೀಮಂತರು ನೇರವಾಗಿ ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ”
“””””””””””””””””””””””””””””””

೨೯) ದಾನ ಧರ್ಮಕ್ಕೇ ಕಣ್ಣಿಲ್ಲ ನ್ಯಾಯ ನೀತಿಗೆ ಸಾವಿಲ್ಲ…, ಜೀವ ಚಿಕ್ಕದು ಜೀವನ ದೊಡ್ಡದು…, ಸತ್ತವನಿಗೆ ಒಂದು ದಾರಿ, ಸಾಧಿಸಿದವನಿಗೆ ಸಾವಿರ ದಾರಿ.
“””””””””””””””””””””””‘”””””””

೩೦) ಹಣತೆ ಮಣ್ಣಿನದಾಗಿರಲಿ, ಬಂಗಾರದ್ದಾಗಿರಲಿ ಅದು ಮುಖ್ಯವಲ್ಲ. ಕತ್ತಲಾದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ
ಹಾಗೆಯೇ ಗೆಳೆಯ ಬಡವನಾಗಿರಲಿ ಶ್ರೀಮಂತನಾಗಿರಲಿ ಅದು ಮುಖ್ಯವಲ್ಲ, ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ
“”””””””””””””””””””””””””””””

೩೧) ಗಡಿಯಾರವನ್ನು ನೋಡಿ ಕೆಲಸ ಮಾಡುವವರು ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿಯುತ್ತಾರೆ

ಗಡಿಯಾರವನ್ನು ನೋಡದೆ ದುಡಿಯುವವರು ಮಾಲಿಕರಾಗಿ ಬೆಳೆಯುತ್ತಾರೆ
🌹🌹🌹🙏🏻🙏🏻🙏🏻🙏🏻🙏🏻

ಸಿಮ್ ಜೋಪಾನ.

ಸಿಮ್ ಜೋಪಾನ!
Wednesday, 11.04.2018.
| ಟಿ. ಜಿ. ಶ್ರೀನಿಧಿ

ನಿಮ್ಮ ಮೊಬೈಲ್ ಫೋನ್ ಎಷ್ಟೇ ಅತ್ಯಾಧುನಿಕವಾಗಿರಲಿ, ಅದರಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿ, ಪರಿಣಾಮಕಾರಿ ಬಳಕೆ ಸಾಧ್ಯವಾಗಬೇಕೆಂದರೆ ಅದರಲ್ಲೊಂದು ಸಿಮ್ ಇರಲೇಬೇಕು. ‘ಸಿಮ್ ಎಂಬ ಹೆಸರು ‘ಸಬ್ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್’(ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಚಂದಾದಾರರ ಗುರುತು ದೃಢೀಕರಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಸಿಮ್ ಪಾತ್ರ ಮಹತ್ವದ್ದು.

ಚಂದಾದಾರರಿಗೆ ಸಂಪರ್ಕ ನೀಡುವುದೇನೋ ಸರಿ, ಅದಕ್ಕೆ ಮೊದಲು ಯಾವ ಚಂದಾದಾರರು ಯಾವ ಸಿಮ್ ಬಳಸುತ್ತಿದ್ದಾರೆ ಎನ್ನುವುದು ಮೊಬೈಲ್ ಸಂಸ್ಥೆಗೆ ಗೊತ್ತಾಗಬೇಕಲ್ಲ! ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್(ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಸಂಖ್ಯೆ, ಪ್ಯಾನ್, ಆಧಾರ್ ಎಲ್ಲ ಇದ್ದ ಹಾಗೆಯೇ ಇದು ನಮ್ಮ ಸಿಮ್ ಅನ್ನು ನಿರ್ದಿಷ್ಟವಾಗಿ ಗುರುತಿಸಬಲ್ಲ ಸಂಖ್ಯೆ.

ಪ್ರಪಂಚದ ಪ್ರತಿಯೊಂದು ಸಿಮ್ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ. ನಮ್ಮ ಖಾತೆಯ ವಿವರಗಳನ್ನು ನಿರ್ದಿಷ್ಟ ಸಿಮ್ೆ ಹೊಂದಿಸಲು, ನಮಗೆ ಬರುವ ಕರೆ, ಸಂದೇಶಗಳನ್ನು ಎಲ್ಲಿಗೆ ಕಳಿಸಬೇಕು ಎನ್ನುವುದನ್ನು ತಿಳಿಯಲು ಮೊಬೈಲ್ ಸಂಸ್ಥೆಗಳು ಈ ಸಂಖ್ಯೆಯನ್ನು ಬಳಸುತ್ತವೆ. ಬ್ಯಾಂಕಿನಿಂದ ಬರುವ ಓಟಿಪಿ, ಕಚೇರಿಯಿಂದ ಬರುವ ದೂರವಾಣಿ ಕರೆಯೇ ಇರಲಿ. ಅದು ನಮ್ಮನ್ನು ತಲುಪಬೇಕೆಂದರೆ ಮೊಬೈಲ್ ಸಂಸ್ಥೆಯಲ್ಲಿ ನಮ್ಮ ಸಿಮ್ ಸಂಖ್ಯೆ(ಐಸಿಸಿಐಡಿ) ಸರಿಯಾಗಿ ದಾಖಲಾಗಿರಬೇಕು.

ಮೊದಲ ಬಾರಿಗೆ ಸಿಮ್ ಪಡೆದುಕೊಂಡಾಗ, ನಮ್ಮ ಖಾತೆ ಆಕ್ಟಿವೇಟ್ ಆಗುವಾಗ ಈ ಸಂಖ್ಯೆಯನ್ನು ಮೊಬೈಲ್ ಸಂಸ್ಥೆಯ ಸಿಬ್ಬಂದಿ ನಮ್ಮ ಖಾತೆಯೊಡನೆ ಜೋಡಿಸಿರುತ್ತಾರೆ. ಯಾವುದೇ ಕಾರಣದಿಂದ ನಾವು ಸಿಮ್ ಬದಲಿಸಿದರೆ ಮಾತ್ರ ಹೊಸ ಸಂಖ್ಯೆಯನ್ನು ಮೊಬೈಲ್ ಸಂಸ್ಥೆಯೊಡನೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೊಸ ಸಿಮ್ ನೀಡಿದ ಸಂದರ್ಭಗಳಲ್ಲಿ ಸಿಮ್ ಸಂಖ್ಯೆಯನ್ನು ನಿರ್ದಿಷ್ಟ ಸಂಖ್ಯೆಗೆ ಎಸ್ಸೆಮ್ಮೆಸ್ ಮೂಲಕ ಕಳಿಸುವಂತೆ ಹೇಳುತ್ತಾರಲ್ಲ, ಅದರ ಉದ್ದೇಶ ಇದು.

ಬ್ಯಾಂಕ್ ಖಾತೆ, ಮೊಬೈಲ್ ವ್ಯಾಲೆಟ್ ಸೇರಿ ಸಕಲವೂ ನಮ್ಮ ಫೋನಿನ ಮೂಲಕವೇ ಕೆಲಸಮಾಡುವ ಈ ದಿನಗಳಲ್ಲಿ ಮೇಲೆ ಹೇಳಿದ ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಎಚ್ಚರವಾಗಿರಬೇಕಾದ್ದು ಅನಿವಾರ್ಯ. ಗ್ರಾಹಕರಿಗೆ ವಂಚಿಸಿ ಅವರ ಖಾತೆಯನ್ನು ತಮ್ಮಲ್ಲಿರುವ ಸಿಮ್ೆ ಜೋಡಿಸಲು ಪ್ರಯತ್ನಿಸುವ ‘ಸಿಮ್ ಸ್ವಾಪ್’ ಹಗರಣದ ಕುರಿತು ಜಾಗೃತರಾಗಿರಬೇಕಾದ್ದು ಈ ಎಚ್ಚರಿಕೆಯ ಒಂದು ಭಾಗ. ಮೊಬೈಲ್ ಸಂಸ್ಥೆಯಿಂದ ಕರೆಮಾಡುತ್ತಿದ್ದೇವೆ, ಇಪ್ಪತ್ತು ಅಂಕಿಯ ಸಂಖ್ಯೆಯೊಂದನ್ನು ಎಸ್ಸೆಮ್ಮೆಸ್ ಮಾಡದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತದೆ ಎಂದೆಲ್ಲ ಹೆದರಿಸುತ್ತಾರಲ್ಲ, ಅವರನ್ನು ಸಾರಾಸಗಟಾಗಿ ಉಪೇಕ್ಷಿಸುವುದು ಒಳ್ಳೆಯದು. ಅವರು ಹೇಳುತ್ತಿರುವುದರ ಬಗ್ಗೆ ಪ್ರಶ್ನೆಗಳಿದ್ದರೆ ಮೊಬೈಲ್ ಸಂಸ್ಥೆಯ ಗ್ರಾಹಕ ಸೇವಾ ವಿಭಾಗಕ್ಕೆ ಕರೆಮಾಡಿ ವಿಚಾರಿಸಿಕೊಳ್ಳುವುದು ಉತ್ತಮ. ಅದರ ಬದಲು ಅವರು ಹೇಳಿದಂತೆ ಮೆಸೇಜ್ ಮಾಡಿದರೆ ನಮ್ಮ ಸಿಮ್ ನಿಷ್ಕ್ರಿಯವಾಗುವುದಷ್ಟೇ ಅಲ್ಲ, ಹೊಸ ಸಿಮ್ ಮೂಲಕ ನಮ್ಮ ಬ್ಯಾಂಕ್ ಖಾತೆಯ ನಿಯಂತ್ರಣ ಖದೀಮರ ಕೈಸೇರುವ ಸಾಧ್ಯತೆಯೂ ಇರುತ್ತದೆ.(ಇಂತಹ ಪ್ರಕರಣಗಳು ನಮ್ಮ ದೇಶದಲ್ಲೂ ಹೆಚ್ಚುತ್ತಿರುವ ಬಗ್ಗೆ ಈಚೆಗೆ ಅನೇಕ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕುರಿತು ಎಚ್ಚರಿಸುವ ಸಂದೇಶಗಳನ್ನು ಮೊಬೈಲ್ ಸಂಸ್ಥೆಗಳೂ ಗ್ರಾಹಕರಿಗೆ ಕಳಿಸುತ್ತಿವೆ).

ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡ್ಗಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೇವಲ್ಲ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಮೊಬೈಲಿನಿಂದ ಸಿಮ್ ಹೊರತೆಗೆದಾಗ ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು, ಮೊಬೈಲ್ ಫೋನ್ ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ಈ ಮೂಲಕ ತಡೆಯಬಹುದು. ಸಿಮ್ ಮಾಹಿತಿ ನಕಲಿಸಿಕೊಂಡು ಬಳಸುವ ಈ ಹಗರಣಕ್ಕೆ ಸಿಮ್ ಕ್ಲೋನಿಂಗ್ ಎಂದು ಹೆಸರು. ನಮ್ಮ ಮೊಬೈಲ್ ಖಾತೆಯ ಚಟುವಟಿಕೆಯ ಬಗ್ಗೆ, ಬಿಲ್ನಲ್ಲಿರುವ ವಿವರಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಸಂಸ್ಥೆಯ ಗ್ರಾಹಕ ಸೇವಾ ವಿಭಾಗವನ್ನು ಸಂರ್ಪಸುವುದು ಒಳ್ಳೆಯದು.

ಚಂದಾದಾರರನ್ನು ಪರೀಕ್ಷಿಸುವ ಸಾಧನ

ಯಾವುದೇ ಮೊಬೈಲ್ ಸಂಸ್ಥೆಯ ಸಿಮ್ ಬಳಸುತ್ತಿರುವವರು ಆ ಸಂಸ್ಥೆಯ ಚಂದಾದಾರರೋ ಅಲ್ಲವೋ ಎಂದು ಪರೀಕ್ಷಿಸಿದ ನಂತರವೇ ಅವರಿಗೆ ಜಾಲದ ಸಂಪರ್ಕ ಒದಗಿಸಿಕೊಡಲಾಗುತ್ತದೆ. ಈ ಉದ್ದೇಶಕ್ಕಾಗಿ ಇಂಟರ್ನ್ಯಾಶನಲ್ ಮೊಬೈಲ್ ಸಬ್ಸ್ಕ್ರೈಬರ್ ಐಡೆಂಟಿಟಿ(ಐಎಂಎಸ್ಐ) ಎಂಬ ವಿಶಿಷ್ಟ ಸಂಖ್ಯೆ ಬಳಕೆಯಾಗುತ್ತದೆ. ಮೊಬೈಲ್ ಚಂದಾದಾರರನ್ನು ಗುರುತಿಸಲು, ಅವರಿಗೆ ಜಾಲದ ಸಂಪರ್ಕ ಒದಗಿಸಿಕೊಡಲು ಬಳಕೆಯಾಗುವ ಈ ಸಂಖ್ಯೆ ಸಿಮ್ಲ್ಲಿ ಶೇಖರವಾಗಿರುತ್ತದೆ. ಫೋನ್ ವಿಷಯ ಐಎಂಇಐ ಎಂಬ ಇನ್ನೊಂದು ಸಂಖ್ಯೆಯ ಪ್ರಸ್ತಾಪ ಬರುತ್ತದಲ್ಲ, ಅದು ‘ಇಂಟರ್ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ’ ಎಂಬ ಹೆಸರಿನ ಹ್ರಸ್ವರೂಪ. ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸಲು ಅದು ಬಳಕೆಯಾಗುತ್ತದೆ. ಐಎಂಎಸ್ಐ ಹಾಗೂ ಐಎಂಇಐ ಪರಸ್ಪರ ಬೇರೆಯವೇ ಆದ ಸಂಖ್ಯೆಗಳು.

ಒನ್ನಿಮಿಷ! ಇದನ್ನು ಓದಿಬಿಡಿ.
ಖಾಸಗಿ ಜೀವನದಲ್ಲಿ ಎಲ್ಲವನ್ನೂ ಅವಡುಗಚ್ಚಿ ಸಹಿಸಿಕೊಂಡು, ತಮ್ಮ ನಡೆವಳಿಕೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ವ್ಯಕ್ತಿಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಇವೆಲ್ಲ ಕಷ್ಟವಾಗಿಬಿಡುತ್ತವೆ. ಕಚೇರಿಯಲ್ಲಿ, ಮನೆಯಲ್ಲಿ ಉತ್ತಮ ವ್ಯಕ್ತಿ ಎನ್ನಿಸಿಕೊಂಡವರು, ಸಾರ್ವಜನಿಕ ವಲಯದಲ್ಲಿ ಅದೇ ಅಭಿಪ್ರಾಯ ಕಾಯ್ದುಕೊಳ್ಳುವಲ್ಲಿ ಸೋಲುವುದೇಕೆ?

‘ಉತ್ತಮ ನಾಗರೀಕರು’ಎಂದೆನಿಸಿಕೊಳ್ಳುವುದು ಕೂಡ ಒಂದು ಜವಾಬ್ದಾರಿ. ಒಂದಲ್ಲಾ ಒಂದು ರೀತಿಯಲ್ಲಿ ಹೊರ ಜಗತ್ತಿನ ಒಡನಾಟಕ್ಕೆ ಬೀಳುವ ನಾವು, ಸದಾ ಸಾರ್ವಜನಿಕ ಪ್ರಪಂಚದಲ್ಲಿಯೇ ಬದುಕುವುದು ಅನಿವಾರ್ಯ. ನಮ್ಮ ವ್ಯಕ್ತಿತ್ವ, ಪ್ರಭಾವ ಹೇಗೇ ಇದ್ದರೂ, ಸಮಾಜದ ಪರಿಧಿಯಲ್ಲಿ ನಾವು ಜನಸಾಮಾನ್ಯರೇ. ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ವರ್ತನೆಯನ್ನ ಕಾಯ್ದುಕೊಳ್ಳಲು ನಮ್ಮಲ್ಲಿಯ ಸ್ಥಿತಪ್ರಜ್ಞತೆ ಸದಾ ಜಾಗ್ರತವಾಗಬೇಕು. ಆದರೆ, ನಮ್ಮ ಸಮಾಜದ ಸ್ಥಿತಿ ಹೇಗಿದೆ ಅಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೊಳಗೂ, ಒಬ್ಬ ತಾಳ್ಮೆಗೇಡಿ ಎದ್ದು ಕುಳಿತುಬಿಡುತ್ತಾನೆ. ಆತ ಒಮ್ಮೊಮ್ಮೆ ಯಾವುದಕ್ಕೂ, ಯಾರಿಗೂ ಕಾಳಜಿ ತೋರಿಸದ ಒರಟನಾಗಿಬಿಡುತ್ತಾನೆ. ತನ್ನ ಜತೆಗಿರುವವರು, ತನ್ನಂತೇ ಮನುಷ್ಯರು ಎಂಬ ಸಂಗತಿಯನ್ನೂ ಮರೆತು, ಅವರೊಂದಿಗೆ ಸ್ಪರ್ಧೆಗೆ ಬಿದ್ದುಬಿಡುತ್ತಾನೆ.

ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ, ಸಾಮಾನ್ಯವಾಗಿ ನಮ್ಮ ಅನುಭವಕ್ಕೆ ಬರುವ ಸಮಸ್ಯೆ ಅಂದರೆ ತಳ್ಳಾಟ. ಮೊದಲು ವಾಹನವನ್ನು ಏರಿ, ತನ್ನ ಸೀಟನ್ನು ಭದ್ರಗೊಳಿಸಿಕೊಳ್ಳಬೇಕು ಎಂಬ ತವಕ. ಆ ಸಂದರ್ಭದಲ್ಲಿ ಅಡ್ಡಬರುವ ಯಾವುದಕ್ಕೂ ಮೌಲ್ಯವೇ ಇಲ್ಲ. ಅದು ವಸ್ತುವಾಗಿರಲಿ, ಪ್ರಾಣಿಯಾಗಿರಲಿ, ಅಥವಾ ಸಹಪ್ರಯಾಣಿಕರೇ ಆಗಿರಲಿ ಅದೇನೇ ಇದ್ದರೂ ಒಮ್ಮೆಲೆ ಅವುಗಳನ್ನೆಲ್ಲ ನೂಕಿ ವಾಹನದೊಳಗೆ ತೂರಿಕೊಳ್ಳಬೇಕು ಅಷ್ಟೆ! ಇಲ್ಲಿ ಉಳಿದವರ ಬಗ್ಗೆ ಕಿಂಚಿತ್ತೂ ಯೋಚಿಸದೇ, ಕೇವಲ ಸ್ವಾರ್ಥ ಮಾತ್ರ ತಲೆಯಲ್ಲಿಟ್ಟುಕೊಂಡವರೇ ಎಲ್ಲೆಡೆ ಸಹಜವಾಗಿ ಕಾಣಸಿಗುತ್ತಾರೆ.

ಇನ್ನು, ಬಸ್ಸಿನಲ್ಲಿ ಕುಳಿತಿರುವ ಸಂದರ್ಭವನ್ನೇ ತೆಗೆದುಕೊಳ್ಳಿ, ಅಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ತೀರ ಅಪರೂಪ. ತುಂಬಿ ತುಳುಕುವ ಬಸ್ಸಿನಲ್ಲಿ ವೃದ್ಧರೋ, ಕೈಲಾಗದ ಅಂಗವಿಕಲರೋ, ಗರ್ಭಿಣಿಯರೋ, ರೋಗಿಗಳೋ ಕಷ್ಟಪಡುತ್ತಿರುವುದು ಕಾಣಿಸಿದರೂ ಕೂಡ ಅದು ತನ್ನ ಕಷ್ಟವಲ್ಲ ಎಂಬ ಧೋರಣೆಯಿಂದ ತಾವು ಕುಳಿತ ಸೀಟಿನಲ್ಲಿ ಇನ್ನಷ್ಟು ಗಟ್ಟಿಯಾಗಿ ಕುಳಿತುಬಿಡುತ್ತಾರೆ. ನಿರ್ವಾಹಕನೇ ಬಂದು ಏಳಿ, ಸೀಟ್ ಬಿಟ್ಟುಕೊಡಿ ಎಂದು ಕೋರಿಕೊಂಡರೂ ಅಲುಗಾಡದ ಜನ ಇದ್ದಾರೆ. ತಮ್ಮಂತೆಯೇ ಬಸ್ಸಿನಲ್ಲಿ ಬಂದಿರುವ ಅಸಹಾಯಕ ಪರಿಸ್ಥಿತಿಯ ಜನರಿಗೆ ನೆರವಾಗುವ ಕಿಂಚಿತ್ತೂ ಜವಾಬ್ದಾರಿಯನ್ನು ತೋರಿಸದವರು ಹೇಗೆ ನಾಗರೀಕರೆನ್ನಿಸಿಕೊಳ್ಳುತ್ತಾರೆ? ಸಾರ್ವಜನಿಕವಾಗಿ ಇಂಥ ಉದಾಸೀನದ ಮನಸ್ಥಿತಿಯನ್ನು ತೋರಿಸುವ ಜನ ತಮಗೆ ಸಂಬಂಧಪಟ್ಟ ಜನರೊಂದಿಗೆ ತಮ್ಮ ನಡೆವಳಿಕೆಯನ್ನು ಬದಲಿಸಿಕೊಳ್ಳುತ್ತಾರೆ ಎನ್ನುವುದು ಗಮನಾರ್ಹ ಅಂಶ.

ತಮ್ಮ ಕುಟುಂಬಸ್ಥರೋ, ರಕ್ತಸಂಬಂಧಿಗಳಿಗೋ ಸಹಕರಿಸುವ ಭಾವನೆ ಇಟ್ಟುಕೊಂಡಿರುವ ಶ್ರೀಸಾಮಾನ್ಯನೊಬ್ಬ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ತನ್ನ ಸಹಕಾರ ಮನೋಭಾವನೆಯನ್ನ ಕಳೆದುಕೊಂಡುಬಿಡುತ್ತಾನೆ. ಉದಾ: ವಿದ್ಯುತ್ ಬಿಲ್ ಪಾವತಿಸಲು ಇರುವ ಕೊನೆಯ ದಿನ ಅಂದು. ಬೆಳಗ್ಗೆಯಿಂದಲೇ ಸರದಿಸಾಲಿನಲ್ಲಿ ಜನ ನಿಂತೇ ಇದ್ದಾರೆ. ಜನರ ಉದ್ದನೆಯ ಸಾಲು, ಪಕ್ಕದಲ್ಲಿಯೇ ಇರುವ ಬಸ್‌ಸ್ಟಾಪ್ ತನಕ ಬಂದಿತ್ತು. ಬೆಳಗ್ಗೆ ಸುಮಾರು 11 ಗಂಟೆಯ ವೇಳೆ ಅದು. ಸಾಲಿನಲ್ಲಿ ನಿಂತವರಲ್ಲಿ ಛತ್ರಿ ಹಿಡಿದು ನಿಂತಿದ್ದ ಓರ್ವ ಮಹಿಳೆ, ಸರದಿಯಲ್ಲಿ ನಿಂತು ಯಾರನ್ನೋ ನಿರೀಕ್ಷಿಸುತ್ತಿದ್ದಳು. ಅವಳ ನಿರೀಕ್ಷೆಯಂತೆ ಆಕೆಯ ಗಂಡ ಬಂದು, ಅವಳ ಜಾಗದಲ್ಲಿ ತಾನು ನಿಂತು, ಅವಳಿಗೆ ವಿಶ್ರಮಿಸುವುದಕ್ಕಾಗಿ ಬಸ್‌ಸ್ಟಾಪ್ ಒಳಗೆ ಕಳುಹಿಸಿಕೊಟ್ಟ. ಅವನಿಗಿಂತ ಹಿಂದೆ ನಿಂತಿದ್ದ ವೃದೆಟಛಿಯೊಬ್ಬಳು ಬಿಸಿಲಿನಿಂದ ಬಳಲಿ, ತಲೆ ಸುತ್ತಿ ಬಿದ್ದೇಬಿಟ್ಟಳು.

ಅಲ್ಲಿರುವ ಕೆಲವರು ಅವಳನ್ನ ನೆರಳಿಗೆ ಕರೆತಂದು, ನೀರು ಕೊಟ್ಟು ಸಂತೈಸಿದ್ದಲ್ಲದೇ, ಅವರಲ್ಲೊಬ್ಬ ವೃದೆಟಛಿಯ ಬಿಲ್ ಪಾವತಿಸಲು ಸರದಿ ಸಾಲನ್ನ ಬಿಟ್ಟು ಖುದ್ದು, ಪಾವತಿ ಕೇಂದ್ರದೊಳಕ್ಕೆ ಹೋದ. ಅಲ್ಲದೆ, ಅಲ್ಲಿ ಪರಿಸ್ಥಿತಿ ವಿವರಿಸಿ, ಆಕೆಯ ಬಿಲ್ಲನ್ನು ಪಾವತಿಸಿ ಆತ ವಾಪಾಸ್ ಬರುತ್ತಿದ್ದಂತೆ, ಸಾಲಿನಲ್ಲಿ ನಿಂತಿದ್ದ ಜನ ಕ್ಯಾತೆ ತೆಗೆದರು. ಅವರೆಲ್ಲರ ಮುಖಂಡತ್ವ ವಹಿಸಿದ್ದೇ, ಹೆಂಡತಿಗೆ ನೆರವಾಗಲು ಬಂದಿದ್ದ ಆ ಗಂಡ ಮಹಾಶಯ. ಸರದಿ ಬಿಟ್ಟು ತಮ್ಮೆಲ್ಲರಿಗಿಂತ ಹಿಂದೆ ನಿಂತಿದ್ದ ವೃದ್ಧಯ ಬಿಲ್ ಪಾವತಿಸಿಕೊಂಡು ಬಂದಿದ್ದಕ್ಕೆ ಆ ಯುವಕ ಬೈಗುಳ ತಿನ್ನಬೇಕಾಯಿತು. ಆತನೂ ವಾದಿಸಲು ಪ್ರಯತ್ನಪಟ್ಟನಾದರೂ, ಅವರೆಲ್ಲರ ಜಗಳಕ್ಕೆ ಆತ ಸುಮ್ಮನಾಗಬೇಕಾಯಿತು. ಇಲ್ಲಿ ಈ ಸಂದರ್ಭದಲ್ಲಿ, ತನ್ನ ಹೆಂಡತಿಗೆ ಬಿಸಿಲು ಹೆಚ್ಚಾಗಬಹುದು ಎಂಬ ಕಾಳಜಿಯಿಂದ ಅಂಗಡಿಯ ಕೆಲಸ ಬಿಟ್ಟು ಬಂದು, ತಾನು ಸರದಿ ಸಾಲಿನಲ್ಲಿ ನಿಂತಿದ್ದ ಆ ವ್ಯಕ್ತಿಗೆ ತನ್ನ ತಾಯಿಯ ವಯಸ್ಸಿನ ವೃದ್ಧ ನೆರವಾಗುವುದು ಬೇಕಿರಲಿಲ್ಲ.

ಬೇರೆಯೊಬ್ಬ ಸಹಾಯ ಮಾಡಿದ್ದಕ್ಕೆ ಮಾಡಬಾರದ ಪ್ರಮಾದವಾಗಿದೆ ಎಂಬ ರೀತಿಯಲ್ಲಿ ವರ್ತಿಸಿಬಿಟ್ಟ. ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಒಂದಲ್ಲಾ ಒಂದು ಘಟನಾವಳಿಗಳು ಸದಾ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತವೆ. ಸಾರ್ವಜನಿಕರ ಸರದಿ ಸಾಲು ಅಂದಾಕ್ಷಣ ಒಬ್ಬಲ್ಲಾ ಒಬ್ಬ ಕೂಗಾಡುತ್ತಿರುವುದನ್ನೋ, ನೂಕಾಡುತ್ತಿರುವ ದೃಶ್ಯ ಅತ್ಯಂತ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಬಸ್‌ಸ್ಟಾಪ್‌ನಲ್ಲಿ, ದೂರವಾಣಿ, ವಿದ್ಯುತ್ ಬಿಲ್ ಪಾವತಿಸುವ ವೇಳೆ, ಪಡಿತರಚೀಟಿಯಿಂದ ಸಾಮಾನು ಖರೀದಿಸುವ ವೇಳೆ ಸಾರ್ವಜನಿಕ ಎಂಬಾತನಲ್ಲಿ ತಾಳ್ಮೆ ಕಣ್ಮರೆಯಾಗಿರುತ್ತದೆ. ಖಾಸಗಿ ಜೀವನದಲ್ಲಿ ಎಲ್ಲವನ್ನೂ ಅವಡುಗಚ್ಚಿ ಸಹಿಸಿಕೊಂಡು, ತಮ್ಮ ನಡುವಳಿಕೆಗಳನ್ನ ಹಿಡಿತದಲ್ಲಿಟ್ಟುಕೊಳ್ಳುವ ವ್ಯಕ್ತಿಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಇವೆಲ್ಲ ಕಷ್ಟವಾಗಿಬಿಡುತ್ತವೆ.

ಕಚೇರಿಯಲ್ಲಿ, ಮನೆಯಲ್ಲಿ ಒಂದೊಳ್ಳೆ ವ್ಯಕ್ತಿಯಾಗಿರುವಾತ, ಆದರ್ಶ ಸಾರ್ವಜನಿಕನಾಗಿರುತ್ತಾನೆ ಎನ್ನುವಂತಿಲ್ಲ. ಪ್ರಜ್ಞಾವಂತನಾಗಿದ್ದರೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಆತನ ವರ್ತನೆ ಬೇರೆಯದೇ ಆಗಿರಬಹುದು. ಇದೆಲ್ಲ ಏಕೆ ಎಂದು ಹುಡುಕುತ್ತಾ ಹೋದರೆ, ಅಲ್ಲಿ ಸ್ಥಿತಪ್ರಜ್ಞತೆಯ ಕೊರತೆ ಕಾಣುತ್ತದೆ. ಕಚೇರಿಯಲ್ಲಾಗಲಿ, ಮನೆಯಲ್ಲಾಗಲಿ ಅಥವಾ ತಮಗೆ ಸಂಬಂಧಪಟ್ಟ ಇನ್ಯಾವುದೇ ಸ್ಥಳದಲ್ಲಾಗಲಿ ಅವನದ್ದೇ ಆದ ಪರಿಧಿಯೊಳಗೆ ಜೀವಿಸುವಾತ ಅವನ ಸುತ್ತ ಒಂದು ಕಂಫರ್ಟ್ ರೆನನ್ನು ನಿರ್ಮಾಣ ಮಾಡಿಕೊಂಡಿರುತ್ತಾನೆ. ಆತ ಆ ವರ್ತುಲದಲ್ಲಿ ಸುಖವಾಗಿದ್ದುಬಿಡುತ್ತಾನೆ. ಆದರೆ ಅದರ ಹೊರತಾಗಿರುವ ಸಾರ್ವಜನಿಕ ಜಗತ್ತಿನಲ್ಲಿ ಅವನ ಕಂಫರ್ಟ್ ರೆನಿಗೆ ಸವಾಲು ನೀಡುವಂಥ ಸ್ಥಿತಿ ಎದುರಾಗಬಹುದು. ಅಂಥ ಸಂದರ್ಭವೇ ಆ ವ್ಯಕ್ತಿಯ ನೈಜ ವರ್ತನೆ ಹೊರ ಬರುತ್ತದೆ.

ಸಾರ್ವಜನಿಕ ಜೀವನದಿಂದ ಹೊರತಾಗಿ ಬದುಕುವುದಕ್ಕೆ ಯಾವೊಬ್ಬ ವ್ಯಕ್ತಿಗೂ ಸಾಧ್ಯವಿಲ್ಲ. ಹಲವು ಬಗೆಯ ಜನರೊಂದಿಗೆ, ಹಲವು ಬಗೆಯ ಪರಿಸ್ಥಿತಿಯಲ್ಲಿ, ಹಲವಾರು ಸಂದರ್ಭಗಳಲ್ಲಿ ತಮ್ಮ ನಡುವಳಿಕೆಯನ್ನ ಸ್ಥಿರವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಎದುರಾಗುವ ಸವಾಲು. ಇಲ್ಲಿ ಸಹಾಯಕ್ಕೆ ಬರುವುದೇ ಸ್ಥಿತಪ್ರಜ್ಞತೆ. ಸಮಸ್ಯೆ ಎದುರಾದ ಸಂದರ್ಭವನ್ನ ನಿರ್ವಹಿಸುವುದಕ್ಕೆ ಒಂದು ಮಟ್ಟದ ಸ್ಥಿತ ಪ್ರಜ್ಞತೆ ಬೇಕಾಗುತ್ತದೆ. ಅಂದರೆ, ಗೊಂದಲದ ಆ ಕ್ಷಣಗಳನ್ನ ತಿಳಿಗೊಳಿಸುವುದಕ್ಕಾಗಿ ಪ್ರಜ್ಞಾಪೂರ್ವಕವಾಗಿ ನಾವು ಸುಮ್ಮನಿರಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಲ್ಪಮಟ್ಟಿಗಿನ ಕಿರಿಕಿರಿಯನ್ನು ಸಹಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ, ಪ್ರಜ್ಞಾಪೂರ್ವಕವಾದ ತಟಸ್ಥ ಧೋರಣೆಯನ್ನ ಅನುಸರಿಸಿದರೆ, ಪರಿಸ್ಥಿತಿ ತಿಳಿಗೊಳ್ಳುವುದಕ್ಕೆ ಬಹಳ ಸಮಯ ಬೇಡವೇ ಬೇಡ.

ಇದಕ್ಕೊಂದು ಉದಾಹರಣೆ ಹೇಳಬೇಕೆಂದರೆ, ಬೆಂಗಳೂರಿನಂಥ ನಗರದ ರಸ್ತೆಗಳಲ್ಲಿ, ಓಡಾಡುವ ವಾಹನಗಳ ನಡುವೆ ಅಲ್ಲಲ್ಲಿ ಚಿಕ್ಕಪುಟ್ಟ ತಿಕ್ಕಾಟವಾದಾಗ, ಅದನ್ನೇ ದೊಡ್ಡದಾಗಿ ವೈಭವೀಕರಿಸಿ, ಜಗಳವಾಡಿ ಟ್ರಾಫಿಕ್ ಜಾಮ್ ಮಾಡುವಂಥ ಸಾರ್ವಜನಿಕರು ಸ್ಥಿತಪ್ರಜ್ಞರಲ್ಲ. ಚಿಕ್ಕಪುಟ್ಟ ತಿಕ್ಕಾಟಕ್ಕೆ ಅತಿಯಾಗಿ ವರ್ತಿಸುವ ಇದೇ ಮಂದಿ, ದೊಡ್ಡ ಅಪಘಾತವಾಗಿ ರಕ್ತಪಾತವಾಗಿರುವ ಸಮಯದಲ್ಲಿ ತಟಸ್ಥರಾಗಿಬಿಡುತ್ತಾರೆ. ಗಾಯಾಳುಗಳ ಬಗ್ಗೆ ಸ್ವಲ್ಪವೂ ಕಾಳಜಿ ತೋರಿಸದೇ ತಮ್ಮಪಾಡಿಗೆ ತಾವು ಹೊರಟುಹೋಗುವಂಥ ಧೋರಣೆಯನ್ನ ವ್ಯಕ್ತಪಡಿಸಿಬಿಡುತ್ತಾರೆ. ಇದೆಂಥಾ ವಿಪರ್ಯಾಸ ಅಲ್ಲವೇ? ಹೀಗಾಗಬಾರದು. ಇಂಥ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಸಮಯಪ್ರಜ್ಞೆ ಮುಖ್ಯ. ಸಮಯ ಪ್ರಜ್ಞೆ ಮತ್ತು ಸ್ಥಿತಪ್ರಜ್ಞೆಯನ್ನ ಸಂದರ್ಭಕ್ಕೆ ಸರಿಯಾಗಿ ಉಪಯೋಗಿಸುವಷ್ಟು ವಿಚಾರ ಶಕ್ತಿ ನಮ್ಮಲ್ಲಿರಬೇಕು.

ಸ್ಥಿತಪ್ರಜ್ಞ ಧೋರಣೆಯನ್ನ ಯಾವಾಗ ತೆಗೆದುಕೊಳ್ಳುತ್ತೇವೆ ಎಂಬುದು ಕೂಡ ಬಹಳ ಮುಖ್ಯ. ತಟಸ್ಥವಾಗಿರುವ ಮೂಲಕ ಸಾರ್ವಜನಿಕ ಪ್ರಪಂಚದಲ್ಲಿ ನಾವು ಮುಖ್ಯ ಪಾತ್ರ ವಹಿಸಬಹುದು ಮತ್ತು ಇದರಿಂದ ಹಲವು ಅಹಿತಕರ ಘಟನೆಗಳನ್ನ ತಡೆಯಬಹದು ಕೂಡ. ತಾಳ್ಮೆಗೆಟ್ಟು ಸುತ್ತಲಿನ ವಾತಾವರಣವನ್ನೇ ಹಾಳುಗೆಡಹುವಂಥ ವರ್ತನೆಯನ್ನು ತಟಸ್ಥನಾಗಿದ್ದು ನಿಭಾಯಿಸಬಹುದು. ಇಲ್ಲಿ ನಾವು ಹೇಳಲು ಹೊರಟಿರುವ ಸ್ಥಿತಪ್ರಜ್ಞತೆ, ನಿರ್ಲಕ್ಷ್ಯವಲ್ಲ. ಇದರಿಂದ ನನಗೇನೂ ಆಗಬೇಕಾಗಿಲ್ಲ. ಅದಕ್ಕೆ ತಟಸ್ಥವಾಗಿದ್ದೇನೆಂಬ ಮನಸ್ಥಿತಿಯದಲ್ಲ.

ಪರಿಸ್ಥಿತಿಯನ್ನ ಸುಧಾರಿಸುವುದಕ್ಕಾಗಿ ಸಾರ್ವಜನಿಕ ತೆಗೆದುಕೊಳ್ಳಲೇಬೇಕಾದ ಪ್ರಜ್ಞಾಪೂರ್ವಕ ತಟಸ್ಥ ಧೋರಣೆ ಇದು. ಆ ಗಳಿಗೆ ಮುಗಿದರೆ ಎಲ್ಲವೂ ಸರಿ ಹೋಗುತ್ತದೆ, ಎಂಬ ಮಾತಿನಂತೆ ನಮ್ಮ ಒಂದೇ ಒಂದು ಕ್ಷಣದ ತಾಳ್ಮೆಯಿಂದ ಸಾರ್ವಜನಿಕವಾಗಿ ನಡೆಯಲಿದ್ದ ಅಹಿತಕರ ಘಟನೆ ಅಲ್ಲಿಗೇ ಮುಗಿದುಹೋಗಬಹುದು. ಮೇಲೆ ಹೇಳಿದ ಘಟನಾವಳಿಯಲ್ಲಿಯೂ ಕೂಡ, ಆ ವ್ಯಕ್ತಿಯಲ್ಲಿ ಸ್ಥಿತಪ್ರಜ್ಞೆ ಇದ್ದಿದ್ದರೆ, ವೃದ್ಧೆಯೊಬ್ಬಳಿಗೆ ಯಾರೋ ಮಾಡಿದ ಸಹಾಯವನ್ನು ಪ್ರಶ್ನೆ ಮಾಡಿ, ಅದಕ್ಕಾಗಿಯೇ ಜಗಳ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ.

ಸ್ಥಿತಪ್ರಜ್ಞೆ ಮನುಷ್ಯನ ಪರಿಪಕ್ವತೆಯನ್ನು ತೋರಿಸುತ್ತದೆ. ಹರುಷಕ್ಕೆ ಹಿಗ್ಗದ ದುಃಖಕ್ಕೆ ಬಗ್ಗದ, ನೋವು ನಲಿವಿಗೆ ಸ್ಥಿರವಾಗಿ ನಿಲ್ಲುವಾತ ಸ್ಥಿತಪ್ರಜ್ಞೆ ಎಂದು ಅರ್ಥೈಸಬಹುದು. ಆದರೆ, ಸಾರ್ವಜನಿಕ ಜಗತ್ತಿನ ಸ್ಥಿತಪ್ರಜ್ಞೆಗೆ ಅಂಥ ಬಿಗಿತ ಇಲ್ಲ. ಇಲ್ಲಿಯ ಸ್ಥಿತಪ್ರಜ್ಞೆ ಅಂದರೆ ತಕ್ಷಣಕ್ಕೆ ಭುಗಿಲೆದ್ದುಬಿಡುವ ಒಂದು ಗಲಾಟೆ, ದೊಂಬಿಯನ್ನ ನಿಯಂತ್ರಿಸಬಲ್ಲ ಒಂದು ತಟಸ್ಥ ಧೋರಣೆ ಅಷ್ಟೆ. ದೊಡ್ಡ ಗಲಾಟೆಗಳು, ಹೊಡೆದಾಟಗಳು ಕೂಡ ಶುರುವಾಗುವುದು ಯಾವನೋ ಒಬ್ಬ ಸಾರ್ವಜನಿಕನ ಅಸಮಾಧಾನದಿಂದಲೇ ತಾನೆ? ಹೀಗಾಗಿ ಸಾರ್ವಜನಿಕ ಜೀವನವನ್ನ ಸುಸ್ಥಿತಿಯಲ್ಲಿಡುವಂಥ ಮನಸ್ಥಿತಿ ಸಾರ್ವಜನಿಕರಲ್ಲಿ ಬೆಳೆದುಬರಬೇಕು.

ಇಂದಿನ ಜವಾಬ್ದಾರಿಯುತ ನಾಗರೀಕರು ತಾಳ್ಮೆ, ಸಂಯಮ, ಸಹನೆಯ ಲೇಪನವಿರುವ ಸ್ಥಿತ ಪ್ರಕ್ಞೆ ರೂಢಿಸಿಕೊಂಡರೆ, ಎಲ್ಲರ ಮನಸ್ಸಿನಲ್ಲಿ ಇಂಥ ಸ್ಥಿತಪ್ರಾಜ್ಞನೊಬ್ಬ ನೆಲೆಸಿಬಿಟ್ಟರೆ, ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡುವ ನೂಕು ನುಗ್ಗಲು, ಕಾಲ್ತುಳಿತ, ತಳ್ಳಾಟ, ಹೊಡೆದಾಟ, ಜಗಳ ಇಂಥ ಎಷ್ಟೋ ಅಹಿತಕರ ಘಟನೆ ನಡೆಯುವುದೇ ಇಲ್ಲ. ನೀವೇನಂತೀರಿ?

ಅಮೃತಾ ಹೆಗಡೆ

ಬಕ್ರೀದ್ ತ್ಯಾಗ ಬಲಿದಾನದ ಸಂಕೇತ.

image

ಬಕ್ರೀದ್ ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.

ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಈ ಹಬ್ಬದ ಹಿನ್ನೆಲೆ, ಮಹತ್ವ ಹೀಗಿದೆ.

ರಮಝಾನ್ ಮತ್ತು ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಎರಡು ಅತಿದೊಡ್ಡ ಹಬ್ಬಗಳು. ರಮಝಾನ್ ಸಂದರ್ಭದಲ್ಲಿ ಮುಸ್ಲಿಮರು ಇಡಿ ಒಂದು ಮಾಸ ಉಪವಾಸಾಚರಣೆ ಆಚರಿಸಿ ಕೊನೆ ದಿನ ಈದ್-ಉಲ್-ಫಿತರ್ ಹಬ್ಬದ ಮೂಲಕ ಭಾವೈಕ್ಯ ಮರೆಯುತ್ತಾರೆ.

ಆದರೆ, ಬಕ್ರೀದ್ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ. ಈ ಪೈಕಿ ಪವಿತ್ರ ಯಾತ್ರಾ ಸ್ಥಳವಾದ ಕಾಬಾದ ದರ್ಶನ ಹಾಗೂ ಕೆಟ್ಟಗುಣಗಳ ಸಂಕೇತವಾದ ಸೈತಾನನಿಗೆ ಸಾಂಕೇತಿಕವಾಗಿ ಕಲ್ಲು ಹೊಡೆಯುವ ಸಂಪ್ರದಾಯ ಅತ್ಯಂತ ಪ್ರಮುಖವಾದದ್ದು.

ವಿಶ್ವದ ಮೂಲೆಮೂಲೆಗಳಿಂದ ಬಂದು ಹಜ್ಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಬಕ್ರೀದ್ ಹಬ್ಬದ ದಿನದಂದು ತಮ್ಮ ಯಾತ್ರೆಯನ್ನು ಪೂರೈಸಿ ತಮ್ಮ ತಮ್ಮ ತಾಯಿನಾಡಿಗೆ ಮರಳುತ್ತಾರೆ. ಒಟ್ಟಾರೆ, ಹಜ್ಜ್ ಯಾತ್ರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆಯುವ ಕ್ರಿಯೆ. ಇದೇ ವೇಳೆ ಬಕ್ರೀದ್ ಹಬ್ಬವನ್ನು ವಿಶ್ವದ್ಯಂತ ಮುಸ್ಲಿಮರು ಭಕ್ತಿ-ಶ್ರದ್ಧೆಯಿಂದ ಆಚರಿಸುತ್ತಾರೆ. ಇದಕ್ಕೊಂದು ಹಿನ್ನೆಲೆಯಿದೆ. ಧರ್ಮ ಪ್ರವಾದಿಗಳಾದ ಹಜರತ್ ಇಬ್ರಾಹಿ೦ ಖಲೀಲುಲ್ಲಾಹ್‌ರವರ ಸತ್ವಪರೀಕ್ಷೆ ಮಾಡಲು ಅಲ್ಲಾಹ್‌ನು ಒಮ್ಮೆ ಅವರಿಗೆ “ನಿನ್ನ ಅತಿ ಪ್ರೀತ್ಯಾದರಗಳಿಗೆ ಪಾತ್ರವಾದ ಜೀವ ಒ೦ದನ್ನು ಬಲಿ ಕೊಡಬಲ್ಲೆಯೋ?” ಎಂದು ಕೇಳಿದನು. ಪಿತೃವಾತ್ಸಲ್ಯದ ಪ್ರತೀಕವೆನಿಸಿದ ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ್ ಬಲಿದಾನ ಮಾಡಬೇಕೆ೦ಬುದು ಭಗವ೦ತನ ಇಚ್ಛೆ ಎಂದು ಅವರಿಗೆ ಮನವರಿಕೆಯಾಯತು. ಮಗನನ್ನು ಬಲಿ ಕೊಡಲು ಸಿದ್ಧರಾದರು.

ಆದರೆ ಅನೇಕ ಸಲ ಪ್ರಯತ್ನ ಪಟ್ಟರೂ ಮಗನ ಕತ್ತಿನ ಮೇಲಿಟ್ಟ ಕತ್ತಿ ಹರಿಯಲಿಲ್ಲ. ಇದನ್ನು ಕ೦ಡ ಮಗ ಇಸ್ಮಾಯಿಲ್, ತನ್ನ ತ೦ದೆಗೆ ಹೀಗೆ ಹೇಳಿದರು: “ಅಪ್ಪಾ, ನಿನ್ನನ್ನು ಪುತ್ರವಾತ್ಸಲ್ಯ ಕಾಡಿಸುತ್ತಿದೆ. ಆದ್ದರಿ೦ದ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊ೦ಡು ಕತ್ತಿ ಹರಿಸು”. ಇದನ್ನು ಕೇಳಿದ ತ೦ದೆ ಇಬ್ರಾಹಿಮ್ ಖಲೀಲುಲ್ಲಾಹ್‌ರವರು ತಮ್ಮ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿ “ಬಿಸ್ಮಿಲ್ಲಾ” ಎಂದು ಹೇಳಿ ಒಮ್ಮೆಲೇ ಮಗನ ಮೇಲೆ ಕತ್ತಿಯನ್ನು ಜೋರಾಗಿ ಹರಿಸಿದರು. ಕತ್ತಿ ಎಷ್ಟೇ ಹರಿಸಿದರು ದೈವಿ ಕಾರಣದಿಂದ ಕತ್ತಿ 🗡ಇಸ್ಮಾಯಿಲರ ಕತ್ತನ್ನು ಕುಯ್ಯುವುದಿಲ್ಲ.

ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‌ರನ್ನು ಒತ್ತಟ್ಟಿ ಅವರ ಬದಲು ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞೆಪಿಸುತ್ತಾರೆ. ಈ ಕಾರಣ ಬಲಿ ಕೊಡಲ್ಪಟ್ಟ ಜೀವ ಒಂದು ಕುರಿ 🐏ಆಗುತ್ತದೆ. ಜತೆಗೆ ಪ್ರವಾದಿ ಇಬ್ರಾಹಿಮರು ಸೃಷ್ಟಿಕರ್ತನಾದ ಅಲ್ಲಾನಲ್ಲಿಟ್ಟಿರುವ ಸತ್ಯನಿಷ್ಠೆಯ ಸತ್ವಪರೀಕ್ಷೆಯೂ ನಡೆದಿರುತ್ತದೆ. ಹೀಗೆ , ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಾ ಬಂದಿದೆ. ಅಲ್ಲದೇ, ಹಬ್ಬದ ದಿನದಂದು ಶಕ್ತ ಮುಸ್ಲಿಮರು ಕುರಿಯನ್ನು ತ್ಯಾಗ-ಬಲಿದಾನದ ಪ್ರತೀಕವಾಗಿ ಬಲಿ ಕೊಡುವುದು ಹಾಗೂ ಅದರ ಪಾಲನ್ನು ಬಂದುಭಾಂದವರು ಹಾಗೂ ನೆರೆಹೊರೆಯವರಿಗೆ ಸಮಾನವಾಗಿ ಹಂಚುವ ಸಂಪ್ರದಾಯ ಬೆಳೆದು ಬಂದಿದೆ. ಒಟ್ಟಿನಲ್ಲಿ ಜೀವಜ೦ತುವಿನ ಬಲಿದಾನದ ಮೂಲಕ ಈ ಹಬ್ಬ ಆಚರಿಸಲ್ಪಡುತ್ತದೆ.

ಬಲಿಯಾದ ಜೀವಜ೦ತು ಮುಂದೆ ಸಂಬಂಧಿಸಿದವರಿಗೆ ಪರೋಕ್ಷವಾಗಿ ಸಹಕಾರಿಯಾಗುತ್ತದೆ. ಪ್ರಪ೦ಚವು ಕೊನೆಗೊಳ್ಳುವಾಗ ಒಂದು ದೊಡ್ಡ ಪ್ರಳಯವಾಗುತ್ತದೆ. ಇದನ್ನು “ಖಯಾಮತ್” ಎನ್ನುವರು. ಆಗ ಮಾನವನ ಒಳ್ಳೆಯ ಹಾಗೂ ಕೆಟ್ಟ ನಡತೆಗಳ ತುಲಾಭಾರವಾಗುತ್ತದೆ. ಒಂದು ವೇಳೆ ಕೆಟ್ಟ ನಡತೆಗಳ ತಕ್ಕಡಿಯ ಭಾಗ ಭಾರವಾಗಿ ಕೆಳಗಿಳಿದರೆ, ಬಲಿ ಕೊಡಲ್ಪಟ್ಟ ಜ೦ತು ಕೂಡಲೇ ಬ೦ದು ಅತ್ತ ಕಡೆಯ ಭಾಗದಲ್ಲಿ ತನ್ನ ಭಾರವನ್ನು ಬಿಟ್ಟು ನೆರವು ನೀಡುತ್ತದೆ ಎ೦ಬ ನ೦ಬಿಕೆ ಇದೆ. ಆದುದರಿ೦ದಲೇ ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಕುರಿ, ಒ೦ಟೆಗಳನ್ನು ಹೆಚ್ಚು ಹೆಚ್ಚಾಗಿ ಬಲಿ ಕೊಡುತ್ತಾರೆ. ಇದನ್ನು “ಖುರ್ಬಾನಿ” ಎಂದು ಕರೆಯುತ್ತಾರೆ.

ಈ ರೀತಿ ಬಲಿ ಕೊಟ್ಟ ಪ್ರಾಣಿಯ ಮಾ೦ಸವನ್ನು ಮೂರು ಭಾಗಗಳಾಗಿ ವಿ೦ಗಡಿಸಿ ಒಂದು ಭಾಗವನ್ನು ನೆ೦ಟರಿಗೆ ಕೊಡುತ್ತಾರೆ. ಎರಡನೆಯ ಭಾಗವನ್ನು ಬಡವರಿಗೆ ಹ೦ಚುತ್ತಾರೆ. ಉಳಿದ ಮೂರನೆಯ ಭಾಗವನ್ನು ಮನೆಯವರಿಗಾಗಿ ಉಳಿಸಿಕೊಳ್ಳುತ್ತಾರೆ. ಇಬ್ರಾಹಿಮ್‌ರವರ ಆ ದೈವಾಜ್ಞೆ ಪಾಲನೆಯ ನೆನಪನ್ನು ಬಲಿದಾನದ ಮೂಲಕ ಆಚರಿಸುತ್ತಾರೆ ಎನ್ನಬಹುದು.

ಈ ಹಬ್ಬದ ದಿವಸ ಮುಸ್ಲಿಮರು ರ೦ಜಾನ್ ಹಬ್ಬದ ಹಾಗೆಯೇ “[[ಈದ್‌ಗಾಹ್]]”ಗೆ ಹೋಗಿ ಪ್ರಾರ್ಥನೆ ಇತ್ಯಾದಿಗಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಮುಸ್ಲಿಮರಲ್ಲಿ ಹಬ್ಬಗಳ ಆಚರಣೆಯಲ್ಲಿ ಒಂದು ಬಗೆಯ ವೈಶಿಷ್ಟ್ಯವಿದೆ. ಅವು ಆ ಜನರಲ್ಲಿ ಒಂದು ಬಗೆಯ ಚೈತನ್ಯವನ್ನೂ, ಸೋದರ ಭಾವನೆಯನ್ನೂ ಉ೦ಟು ಮಾಡುತ್ತದೆ. ಈದ್‌ಗಾಹ್‌ಗಳಲ್ಲಿ ಇಮಾಮರ ಹಿ೦ದೆ ಸಾಲುಸಾಲಾಗಿ ನಿ೦ತು “ಅಲ್ಲಾಹು ಅಕ್ಬರ್”, “ಅಲ್ಲಾಹು ಅಕ್ಬರ್” ಎಂದು ಘೋಷಣೆ ಮಾಡುತ್ತಾ ಸ೦ವ್ಯೂಹಕವಾಗಿ ಎಲ್ಲರೂ ತಲೆ ಬಾಗುವ, ದೇವರಿಗೆ ಶರಣು ಹೋಗುವ ಆ ಅಭೂತಪೂರ್ವ ದೃಶ್ಯ ರೋಮಾ೦ಚನಕಾರಿಯಾಗಿಯೂ, ನಯನ ಮನೋಹರವಾಗಿಯೂ ಇರುತ್ತದೆ. ನಮಾಜ್ ನಂತರ ಒಬ್ಬರನೊಬ್ಬರು ಆಲಿ೦ಗನ ಮಾಡಿಕೊಳ್ಳುವುದು, ಕೈ ಕುಲುಕುವುದು, “ಈದ್ ಮುಬಾರಕ್” ಅ೦ದರೆ “ಈ ಹಬ್ಬ ನಿಮಗೆ ಶುಭವನ್ನು೦ಟು ಮಾಡಲಿ” ಎನ್ನುವುದು ಗಮನಾರ್ಹ.

ಈ ಸ೦ದರ್ಭದಲ್ಲಿ ಬಡವ – ಬಲ್ಲಿದ, ಶತೃ – ಮಿತ್ರ, ಪರಿಚಿತ – ಅಪರಿಚಿತ ಎ೦ಬ ಭಾವನೆ ಎಲ್ಲರ ಮನಸಿನಲ್ಲೂ ಉ೦ಟಾಗುವುದು. ಬಕ್ರೀದ್ ಹಬ್ಬಗಳಲ್ಲಿ ನಮಾಜ್ ನಿ೦ದ ಮನೆಗಳಿಗೆ ಮರಳಿದಾಗ ಅವರ ಸಹೋದರಿಯರು ಸುಣ್ಣಮಿಶ್ರಿತ ಅರಿಶಿನದ ನೀರಿನ ಪಾತ್ರೆಗಳನ್ನು ಕೈಯಲ್ಲಿ ಹಿಡಿದು ಬಾಗಿಲ ಬಳಿಯೇ ಕಾದು ನಿ೦ತಿರುತ್ತಾರೆ. ತು೦ಬಾ ಉತ್ಸಾಹದಿ೦ದಿರುವ ಇವರಿಗೆ ತಮ್ಮ ಅಣ್ಣ ತಮ್ಮ೦ದಿರಿಗಾದ ದೃಷ್ಟಿಯನ್ನು ಹೋಗಲಾಡಿಸಲು ಏನು ಗುಲ್ಲು ಅವರದು!!!!
ದೃಷ್ಟಿ ತೆಗೆಯುವ ನೆಪದಲ್ಲಿ ಅವರು ಹಬ್ಬದ “ಈದೀ” ಅ೦ದರೆ ಇನಾ೦ ವಸೂಲು ಮಾಡದೇ ಬಿಡುವುದಿಲ್ಲ. ಪ್ರಾರ್ಥನೆಯಿ೦ದ ಹಿ೦ದಿರುಗಿದ ನಂತರ ಕಿರಿಯರು ಸಾಮಾನ್ಯವಾಗಿ ತಮ್ಮ ತ೦ದೆ, ತಾಯಿ, ಅಣ್ಣ, ಅಕ್ಕ೦ದಿರು ಮೊದಲಾದ ಹಿರಿಯರ ಬಳಿ ಹೋಗಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ಮುಸ್ಲಿಮರಲ್ಲಿ ಒಂದು ಸ೦ಪ್ರದಾಯ. ಆಗ ಹಿರಿಯರು ಅವರನ್ನು ಯಥೇಚ್ಛವಾಗಿ ಹರಸುತ್ತಾರೆ.

ಈ ಹಬ್ಬಗಳಲ್ಲಿ ಎಲ್ಲರಿಗೂ ಎಲ್ಲಾ ಮನೆಗಳಲ್ಲೂ ಆಮ೦ತ್ರಣ. ಸ್ವಲ್ಪವಾದರೂ ತಿನ್ನಲೇಬೇಕು. ಉಕ್ಕಿ ಬರುವ ಆನ೦ದವನ್ನು ಎಲ್ಲರೂ ಹ೦ಚಿಕೊಳ್ಳಬೇಕು.

ಹಬ್ಬದ ದಿನ ಆನ೦ದ ಪಡೆಯದವನು ಅಭಾಗ್ಯನೆ೦ದು ಹೇಳಿಕೊಳ್ಳುವುದು ಮುಸ್ಲಿಮರ ಒಂದು ವಾಡಿಕೆ.

ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಷಯಗಳು.

Medical fitness

*MEDICAL FITNESS*
((( PREVENTION IS BETTER THAN CURE )))

MEDICAL FITNESS:-
———————-

       *CHOLESTEROL*
           ——————
Cholesterol —   <  200
HDL  —  40  —  60
LDL  —    <  100
VLDL —     <  30
Triglycerides —     240
V.High —    >  250
—————————-

            *LDL*
           ——
Borderline –130 —159
High —  160  —  189
V.High —  > 190
—————————-

           *TRIGLYCERIDES*
           —————–
Borderline – 150 — 199
High —   200  —  499
V.High —     >   500
—————————-

       
        *PLATELETS COUNT*
       ———————-
1.50  Lac  —-  4.50 Lac
—————————-

              *BLOOD*
             ———–
Vitamin-D —  50   —-  80
Uric Acid —  3.50  —  7.20
—————————-

            *KIDNEY*
           ———-
Urea  —   17   —   43
Calcium —  8.80  —  10.60
Sodium —  136  —  146
Protein  —   6.40  —  8.30
—————————-

           *HIGH BP*
          ———-
120/80 —  Normal
130/85 –Normal  (Control)
140/90 —  High
150/95 —  V.High
—————————-

         *LOW BP*
        ———
120/80 —  Normal
110/75 —  Normal  (Control)
100/70 —  Low
90//65 —   V.Low
—————————-

              *SUGAR*
             ———
Glucose (F) —  70  —  100
(12 hrs Fasting)
Glucose (PP) —  70  — 140
(2 hrs after eating)
Glucose (R) —  70  —  140
(After 2 hrs)
—————————-
    
             *HAEMOGLOBIN*
            ——————-
Male —  13  —  17
Female —  11 —  15
RBC Count  — 4.50 — 5.50
                           (million)
—————————-

           *PULSE*
          ——–
72  per minute (standard)
60 — 80 p.m. (Normal)
40 — 180  p.m.(abnormal)
—————————-

          *TEMPERATURE*
          —————–
98.4 F    (Normal)
99.0 F Above  (Fever)

Please help your Relatives, Friends by sharing this information….

*Heart Attacks And Drinking Warm Water:*

This is a very good article. Not only about the warm water after your meal, but about Heart Attack’s . The Chinese and Japanese drink hot tea with their meals, not cold water, maybe it is time we adopt their drinking habit while eating. For those who like to drink cold water, this article is applicable to you. It is very Harmful to have Cold Drink/Water during a meal. Because, the cold water will solidify the oily stuff that you have just consumed. It will slow down the digestion. Once this ‘sludge’ reacts with the acid, it will break down and be absorbed by the intestine faster than the solid food. It will line the intestine. Very soon, this will turn into fats and lead to cancer . It is best to drink hot soup or warm water after a meal.

*French fries and Burgers*
are the biggest enemy of heart health. A coke after that gives more power to this demon. Avoid them for
your Heart’s & Health.

Drink one glass of warm water just when you are about to go to bed to avoid clotting of the blood at night to avoid heart attacks or strokes.

A cardiologist says if everyone who reads this message sends it to 10 people, you can be sure that we’ll save at least one life. …

So, please be a true friend and send this article to people you care about.

ಕ್ರೆಡಿಟ್ ಕಾರ್ಡ್.

ಬಡ್ಡಿ ಸಹಿತ ಕ್ರೆಡಿಟ್ ಕಾರ್ಡ್!

ಕ್ರೆಡಿಟ್ ಕಾರ್ಡ್ ಸಾಲದ ಮರುಪಾವತಿಯಲ್ಲಿ ಎಚ್ಚರವಿರಲಿ. ಪಾವತಿ ಮಾಡುವಾಗ ಬಿಲ್ ಅವಧಿ ಮೀರಬೇಡಿ. ಒಂದೇ ದಿನ ವಿಳಂಬವಾದರೂ ಠೇವಣಿಯಿಂದ ಬ್ಯಾಂಕ್​ಗಳು ಹಣ ಹಿಂಪಡೆಯುತ್ತವೆ. ಇದು ಎಫ್​ಡಿ ಖಾತೆಗೆ ಹೊಡೆತ ನೀಡುತ್ತದೆ. ಠೇವಣಿ ಮೇಲಿನ ಬಡ್ಡಿ ಮೊತ್ತ ಕಡಿಮೆಯಾಗುತ್ತದೆ. ಖಾತೆಯ ಇತಿಹಾಸದಲ್ಲಿ ಇದುಕಪ್ಪು ಚುಕ್ಕೆ ಇಡುತ್ತದೆ. ಇಂಥ ಸನ್ನಿವೇಶ ಎದುರಾಗದಂತೆ ನಿರ್ವಹಿಸುವುದು ಜವಾಬ್ದಾರಿ ಬಳಕೆದಾರನದ್ದು.

ಹಲವು ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್​ಗಳು ತಮ್ಮ ಅಸ್ತಿತ್ವ ಕಂಡುಕೊಳ್ಳುವ ಸಮಯದಲ್ಲಿ ಕ್ರೆಡಿಟ್ ಕಾರ್ಡ್​ನ ಕ್ರೇಜ್ ಆರಂಭಿಸಿದ್ದವು. ಇದು ಕೊಳ್ಳುವವರಿಗೂ ಆಕರ್ಷಕವಾಗಿತ್ತು. ಆದರೆ ಕಾಲಕ್ರಮೇಣ ಬ್ಯಾಂಕಗಳೂ ಪಾಠ ಕಲಿತವು. ಗ್ರಾಹಕರೂ ಪೆಟ್ಟು ತಿಂದರು. ಈಗ ಕ್ರೆಡಿಟ್ ಕಾರ್ಡ್ ಉದ್ಯಮ ಸ್ಥಿರತೆ ಕಂಡಿದೆ. ಬ್ಯಾಂಕ್​ಗಳು ಸೂಕ್ತ ಹಿನ್ನೆಲೆ ವಿಚಾರಿಸದೇ ಕಾರ್ಡ್ ವಿತರಿಸುವುದಿಲ್ಲ. ಹಾಗೆಯೇ ಜನರೂ ಕಾರ್ಡ್ ಅಗತ್ಯವಿದ್ದರೆ, ಮರುಪಾವತಿ ಸಾಮರ್ಥ್ಯವಿದ್ದರೆ ಮಾತ್ರ ಕೊಳ್ಳುತ್ತಿದ್ದಾರೆ. ಇದು ಕೆಲವರಿಗೆ ನಿಜಕ್ಕೂ ತೊಂದರೆಯುಂಟು ಮಾಡಿದೆ. ಮರುಪಾವತಿ ಸಾಮರ್ಥ್ಯವಿದ್ದೂ, ಸರಿಯಾದ ಟ್ರ್ಯಾಕ್ ರೆಕಾರ್ಡ್ ಇಲ್ಲದಿದ್ದರೆ ಅಥವಾ ಉತ್ತಮ ಸಂಬಳ ಬರುವ ಉದ್ಯೋಗವಿಲ್ಲದಿದ್ದರೆ, ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಕ್ರೆಡಿಟ್ ಕಾರ್ಡ್ ಸಿಗುವುದಿಲ್ಲ. ಹೀಗಾಗಿ ಇತ್ತೀಚೆಗೆ ಹೊಸದೊಂದು ವಿಧಾನ ಚಾಲ್ತಿಗೆ ಬಂದಿದೆ. ಬ್ಯಾಂಕ್​ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ, ಅದರ ಆಧಾರದ ಮೇಲೆ ಬ್ಯಾಂಕ್​ಗಳು ಕ್ರೆಡಿಟ್ ಕಾರ್ಡ್ ವಿತರಿಸುತ್ತವೆ.

ಇದು ಬ್ಯಾಂಕ್​ಗಳಿಗೆ ಅತ್ಯಂತ ಸುರಕ್ಷಿತ ವಿಧಾನ. ಅಷ್ಟೇ ಅಲ್ಲ, ಕಾರ್ಡ್ ಪಡೆದವರಿಗೂ ಅನುಕೂಲವೇ. ಯಾಕೆಂದರೆ ಒಂದೆಡೆ ಠೇವಣಿಗೆ ಬಡ್ಡಿ ಲಭ್ಯವಾಗುತ್ತದೆ. ಇನ್ನೊಂದೆಡೆ ಕೈಗೆ ಕಾರ್ಡ್ ಕೂಡ ಸಿಗುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳು, ಪತಿಯ ಸಂಬಳವನ್ನೇ ಆಧರಿಸಿರುವ ಮಹಿಳೆಯರಿಗೆ, ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಇದು ಅತ್ಯಂತ ಅನುಕೂಲ. ಫಿಕ್ಸೆಡ್ ಡೆಪಾಸಿಟ್ 25 ಸಾವಿರ ರೂ.ನಿಂದ 25 ಲಕ್ಷ ರೂ.ವರೆಗೆ ಮಾಡಬಹುದು. ಕನಿಷ್ಠ ಆರು ತಿಂಗಳವರೆಗೆ ಡೆಪಾಸಿಟ್ ಇಡಬೇಕು. ಡೆಪಾಸಿಟ್ ಮೇಲೆ ಶೇ.80ರಿಂದ 85ರವರೆಗೆ ಕಾರ್ಡ್ ಲಿಮಿಟ್ ಇರುತ್ತದೆ. ಕಾರ್ಡ್ ತೆಗೆದುಕೊಂಡ ಮಾತ್ರಕ್ಕೆ ಠೇವಣಿ ಬಗ್ಗೆ ಚಿಂತೆ ಮಾಡಬೇಕಿಲ್ಲ. ಅದಕ್ಕೆ ನಿಗದಿತ ಮೊತ್ತದ ಬಡ್ಡಿ ಬರುತ್ತದೆ. ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾದ ಸಮಯಕ್ಕೆ ಪಾವತಿ ಮಾಡದೇ ಡಿಫಾಲ್ಟರ್ ಆದರೆ, ಬಾಕಿ ಮೊತ್ತವನ್ನು ಎಫ್​ಡಿಯಿಂದ ಪಡೆದುಕೊಳ್ಳಲಾಗುತ್ತದೆ.

ಬ್ಯಾಂಕ್​ಗಳ ಬಳಿ ಠೇವಣಿ ಭದ್ರತೆ ಇರುವುದರಿಂದ ಯಾವ ಹೆಚ್ಚುವರಿ ದಾಖಲೆಗಳ ತಾಪತ್ರಯವಿಲ್ಲ. ಡೆಪಾಸಿಟ್ ಇರುವ ಯಾರು ಬೇಕಾದರೂ ಕಾರ್ಡ್ ಪಡೆಯಬಹುದು. ಕ್ರೆಡಿಟ್ ಇತಿಹಾಸ, ಆದಾಯದ ಮೂಲ ಹಾಗೂ ಇತರ ಯಾವ ಮಾಹಿತಿಯೂ ಬ್ಯಾಂಕ್​ಗಳಿಗೆ ಅಗತ್ಯವಿರುವುದಿಲ್ಲ. ತೀರಾ ಕನಿಷ್ಠ ದಾಖಲೆ ಅಗತ್ಯದಲ್ಲೇ ಕಾರ್ಡ್ ಕೈಗೆ ಬರುತ್ತದೆ. ಈವರೆಗೆ ಸಾಲವನ್ನೇ ಪಡೆಯದವರೂ ಈ ವಿಧಾನದಲ್ಲಿ ಕಾರ್ಡ್ ಪಡೆಯಬಹುದು. ಅದೂ ಅಲ್ಲದೆ ಈ ವಿಧದ ಕಾರ್ಡ್​ಗಳಲ್ಲಿ ವಿಶೇಷ ಸೌಲಭ್ಯವೊಂದಿದೆ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಖರೀದಿಸಿದರೆ ಮರುಪಾವತಿ ಮಾಡಲು 21 ರಿಂದ 25 ದಿನಗಳ ಅವಧಿ ಸಿಗುತ್ತದೆ. ಆದರೆ ಈ ಕಾರ್ಡ್​ಗಳಲ್ಲಿ 48 ರಿಂದ 55 ದಿನಗಳವರೆಗೂ ಸಿಗುತ್ತದೆ. ಅಂದರೆ ಒಂದು ಸಾಮಗ್ರಿಯನ್ನು ಖರೀದಿಸಿದ ನಂತರ ಸುಮಾರು ಎರಡೂವರೆ ತಿಂಗಳು ನೀವು ಪಾವತಿ ಮಾಡುವ ಗೋಜಿಗೇ ಹೋಗಬೇಕಿಲ್ಲ. ಅಲ್ಲಿಯವರೆಗೂ ನೀವು ಕೊಂಡ ಸಾಮಗ್ರಿಯ ಮೊತ್ತ ಬಡ್ಡಿ ರಹಿತವಾಗಿರುತ್ತದೆ.

ಸಾಮಾನ್ಯ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲು ಒಂದೇ ದಿನ ವಿಳಂಬವಾದರೂ ಬ್ಯಾಂಕ್​ಗಳು ಜೀವ ಹಿಂಡಿಬಿಡುತ್ತವೆ. ಬ್ಯಾಂಕ್​ನಿಂದ ದಿನದ ಮೂರು ಹೊತ್ತೂ ಕರೆಗಳು ಬರುತ್ತವೆ. ಸಾಮಾನ್ಯ ಕ್ರೆಡಿಟ್ ಕಾರ್ಡ್​ಗಳು ಬ್ಯಾಂಕ್​ಗಳಿಗೆ ಒಂದು ಹೊರೆ. ಹೀಗಾಗಿ ಮರುಪಾವತಿ ಸಮಯಕ್ಕೆ ಸರಿಯಾಗಿ ಮಾಡುವಂತೆ ಗ್ರಾಹಕರನ್ನು ಪ್ರೇರೇಪಿಸುತ್ತವೆ. ಇದಕ್ಕಾಗಿ ಭಾರಿ ಮೊತ್ತದ ದಂಡ ವಿಧಿಸುವುದಲ್ಲದೆ, ರಿಕವರಿ ಏಜೆನ್ಸಿಗಳನ್ನು ನೇಮಿಸಿಕೊಂಡು ನಿಮ್ಮ ಮನೆಗೇ ರಿಕವರಿ ಏಜೆಂಟರನ್ನು ಕಳಿಸುತ್ತವೆ. ಇವೆಲ್ಲವೂ ಬ್ಯಾಂಕ್​ಗಳು ತಮ್ಮ ಸುರಕ್ಷತೆಯ ದೃಷ್ಟಿಯಿಂದ ರೂಪಿಸಿಕೊಂಡ ನಿಯಮಗಳು. ಆದರೆ ಎಫ್​ಡಿ ಮೇಲೆ ನೀಡಲಾಗುವ ಕ್ರೆಡಿಟ್ ಕಾರ್ಡ್​ಗಳಲ್ಲಿ ಈ ತೊಂದರೆ ಇಲ್ಲವೇ ಇಲ್ಲ. ಕೊನೆಯ ಅವಧಿಯವರೆಗೂ ಬಿಲ್ ಪಾವತಿಯಾಗದಿದ್ದರೆ, ನಿಮಗೆ ಕರೆ ಮಾಡಿ ತೊಂದರೆ ಕೊಡುವುದಿಲ್ಲ. ಏಜೆಂಟ್​ಗಳು ನಿಮ್ಮ ಮನೆಗೆ ಬರುವುದೂ ಇಲ್ಲ. ನೇರವಾಗಿ ನಿಮ್ಮ ಠೇವಣಿಯಿಂದ ಹಣ ಕಡಿತಗೊಳಿಸಿ ಕಾರ್ಡ್​ಗೆ ಪಾವತಿ ಮಾಡುತ್ತವೆ.

ಬಿಲ್ ಭಾಗಶಃ ಪಾವತಿ ಮಾಡುವ ಸೌಲಭ್ಯ ಇದರಲ್ಲಿಲ್ಲ. ಸಾಮಾನ್ಯ ಕಾರ್ಡ್​ಗಳಲ್ಲಿ ಬಿಲ್​ನ ಕನಿಷ್ಠ ಮೊತ್ತವನ್ನು ಪಾವತಿ ಮಾಡಿದರೆ, ಒಂದೆರಡು ತಿಂಗಳ ನಂತರ ಬಡ್ಡಿ ಸಮೇತ ಪಾವತಿ ಮಾಡಬಹುದಾಗಿರುತ್ತದೆ. ಇದರ ಹೊರತಾಗಿ ಉಳಿದ ಎಲ್ಲ ಶುಲ್ಕಗಳು ಮತ್ತು ಸೌಲಭ್ಯಗಳು ಸಾಮಾನ್ಯ ಕ್ರೆಡಿಟ್ ಕಾರ್ಡ್​ನಂತೆಯೇ ಇರುತ್ತದೆ. ಈಗಾಗಲೇ ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಕೋಟಕ್ ಮಹಿಂದ್ರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್​ಗಳು ಈ ಸೌಲಭ್ಯ ಹೊಂದಿವೆ. ಕೆಲವು ಬ್ಯಾಂಕ್​ಗಳು ನಿರ್ದಿಷ್ಟ ವಿಧದ ಎಫ್​ಡಿ ಮೇಲಷ್ಟೇ ಕ್ರೆಡಿಟ್ ಕಾರ್ಡ್ ವಿತರಿಸುತ್ತವೆ.

ಆದರೆ ಮರುಪಾವತಿಯಲ್ಲಿ ಎಚ್ಚರವಿರಲಿ. ಪಾವತಿ ಮಾಡುವಾಗ ಬಿಲ್ ಅವಧಿ ಮೀರಬೇಡಿ. ಒಂದೇ ದಿನ ವಿಳಂಬವಾದರೂ ಠೇವಣಿಯಿಂದ ಬ್ಯಾಂಕ್​ಗಳು ಹಣ ಹಿಂಪಡೆಯುತ್ತವೆ. ಇದು ಎಫ್​ಡಿ ಖಾತೆಗೆ ಹೊಡೆತ ನೀಡುತ್ತದೆ. ಠೇವಣಿ ಮೇಲಿನ ನಿಮ್ಮ ಬಡ್ಡಿ ಮೊತ್ತ ಕಡಿಮೆಯಾಗುತ್ತದೆ. ಖಾತೆಯ ಇತಿಹಾಸದಲ್ಲಿ ಇದು ಕಪ್ಪು ಚುಕ್ಕೆ ಇಡುತ್ತದೆ. ಇಂಥ ಸನ್ನಿವೇಶ ಎದುರಾಗದಂತೆ ನಿರ್ವಹಿಸುವುದು ನಿಮ್ಮ ಜವಾಬ್ದಾರಿ. ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡುವುದನ್ನು ಮರೆಯುವುದು ನಿಮ್ಮ ಖಾತೆ ಆರೋಗ್ಯಕ್ಕೆ ಒಳ್ಳೆಯದಲ್ಲ.

Posted from WordPress for Android

ಚಿತ್ರರಚನಿಯಿಂದ ಚಿಂತೆ ದೂರ.

image

ಪರೀಕ್ಷೆ ಹತ್ತಿರ ಬರುತ್ತಿದೆ ಎಂದರೆ ಟೆನ್ಷನ್, ಫಲಿತಾಂಶ ಬಂತೆಂದರೆ ಟೆನ್ಷನ್. ಕಾಲೇಜಿಗೆ ಲೇಟಾದರೆ ಟೆನ್ಷನ್, ಅಸೈನ್​ವೆುಂಟ್, ಪ್ರಾಜೆಕ್ಟ್ ವರ್ಕ್ ಪೂರ್ತಿಯಾಗದಿದ್ದರೆ ಟೆನ್ಷನ್. ಒಟ್ಟಿನಲ್ಲಿ ಜೀವನಪೂರ್ತಿ ಟೆನ್ಷನ್, ಟೆನ್ಷನ್, ಟೆನ್ಷನ್… ಹಾಗಿದ್ದರೆ ಇದರಿಂದ ಪಾರಾಗುವುದು ಹೇಗೆ? ಇಲ್ಲಿ ವಿವರಿಸಿದ್ದಾರೆ ಯುವಮಿತ್ರರು…

ನಮ್ಮ ದೌರ್ಬಲ್ಯದಿಂದಾಗಿಯೇ ಹೊರಗಿನ ಸವಾಲುಗಳು ಕಿರಿಕಿರಿಯಾಗುತ್ತವೆ, ಒತ್ತಡಗಳನ್ನು ಹೇರುತ್ತವೆ. ನನ್ನ ಮನಸ್ಸು ಹದಗೆಟ್ಟಾಗ ಅಥವಾ ಒತ್ತಡಗಳಿಂದ ಹೊರಬರಬೇಕೆಂದು ಬಯಸಿದಾಗ ಪೇಂಟಿಂಗ್ ಮಾಡುತ್ತೇನೆ. ಚಿತ್ರಕಲೆ ನನ್ನ ಮನಸ್ಸನ್ನು ಪ್ರಫುಲ್ಲವಾಗಿಡುತ್ತದೆ. ಪೆನ್ಸಿಲ್ ಸ್ಕೆಚ್ ಹಾಗೂ ಪೇಂಟಿಂಗ್ ನನ್ನ ಚಿತ್ತವನ್ನು ಏಕಾಗ್ರತೆಯಲ್ಲಿರುವಂತೆ ಮಾಡುತ್ತವೆ. ಚಿತ್ರ ಬಿಡಿಸುವುದರಲ್ಲೇ ದೀರ್ಘ ಸಮಯವನ್ನು ಕಳೆಯಲು ಇಚ್ಛಿಸುತ್ತೇನೆ. ಬಿಡಿಸುತ್ತಿರುವ ಚಿತ್ರಕ್ಕೆ ಭಾವವನ್ನು ತುಂಬುವುದರಲ್ಲೇ ಮನಸ್ಸು ತೊಡಗಿಸಿಕೊಂಡಾಗ ಯಾವ ಚಿಂತೆಗಳೂ ನನ್ನತ್ತ ಸುಳಿಯುವುದಿಲ್ಲ. ಚಿತ್ರ ಅಂದುಕೊಂಡಂತೆ ಮೂಡಿ ಬರುವವರೆಗೂ ಬಿಡಿಸುತ್ತಲೇ ಇರುತ್ತೇನೆ. ಬಿಡಿಸಿದ್ದು ಸ್ವಲ್ಪ ಕೆಟ್ಟರೂ ಚಿತ್ರವನ್ನು ಇಡಿಯಾಗಿ ಹಾಳು ಮಾಡುವುದರಲ್ಲಿಯೂ ನನಗೆ ಖುಷಿ ಸಿಗುತ್ತದೆ!

| ಸುಷ್ಮಾ ಉಪ್ಪಿನ್ ಇಸಳೂರ ಪ್ರಥಮ ಎಂ.ಸಿ.ಜೆ., ಎಸ್.ಡಿ.ಎಂ. ಕಾಲೇಜು, ಉಜಿರೆ

ಕಷ್ಟಗಳು ಕ್ಷಣಿಕ

ಸುತ್ತುವ ಭೂಮಿಯು ಹೇಗೆ ಹಗಲಿರುಳುಗಳನ್ನು ಅನುಭವಿಸುತ್ತ ಸಾಗುವುದೋ, ಮನುಷ್ಯನ ಜೀವನವೂ ಹಾಗೆಯೇ. ಹಗಲಿರುಳುಗಳು ನಮ್ಮ ಜೀವನದ ಸುಖ-ದುಃಖಗಳನ್ನು ಹೋಲುತ್ತವೆ. ಹಗಲು ಬಂದಾಗ ಹಿಗ್ಗಿ, ಕತ್ತಲು ಬಂದಾಗ ಕುಗ್ಗಿ ಭೂಮಿ ಎಂದೂ ತನ್ನ ಚಲನೆಯನ್ನು ನಿಲ್ಲಿಸುವುದಿಲ್ಲ. ಪ್ರಕೃತಿಯ ಅದಮ್ಯ ಶಕ್ತಿಯಿಂದ ನಾವು ಕಲಿಯುವುದು ಸಾಕಷ್ಟಿದೆ. ಬರೀ ನೋವು ಅಥವಾ ಬರಿಯ ನಲಿವು, ಯಾರ ಜೀವನದಲ್ಲೂ ಇರುವುದಿಲ್ಲವೆಂಬ ಸತ್ಯವನ್ನು ಮೊದಲು ಅರಿತುಕೊಳ್ಳಬೇಕು. ಜೀವನ ನಮಗೆ ಒಡ್ಡುವ ಕಷ್ಟಗಳಿಂದ ನಾವು ತಾತ್ಕಾಲಿಕವಾಗಿ ನೋವುಂಡರೂ ಅದರಿಂದ ಕಲಿಯುವ ಪಾಠ ಶಾಶ್ವತ. ಎಂತಹ ಕಲ್ಲು ಹೃದಯದವರೂ ಕಷ್ಟಗಳು ಬಂದಾಗ ಒತ್ತಡಗಳಿಗೆ ಸಿಲುಕುವುದು ಸಹಜ. ಒತ್ತಡದಲ್ಲಿದ್ದಾಗ ವ್ಯಕ್ತಿಯು ತನ್ನ ಆಲೋಚನಾ ಸಾಮರ್ಥ್ಯ, ವಿವೇಚನೆ, ಮನಸಿನ ನಿಗ್ರಹ ಶಕ್ತಿಗಳನ್ನು ಕಳೆದುಕೊಳ್ಳುತ್ತಾನಲ್ಲದೆ, ಸಿಟ್ಟು, ಕಣ್ಣೀರು, ಕೆಲಸದಲ್ಲಿ ನಿರಾಸಕ್ತಿಗಳ ಜತೆಗೆ, ದುಶ್ಚಟಗಳನ್ನು ಮೈಗೂಡಿಸಿಕೊಳ್ಳುತ್ತಾನೆ. ದುಃಖದ ದಿನಗಳು ಬಂದೊದಗಿದಾಗ ನಮ್ಮ ಮನಸ್ಸಿಗೆ ನಾವೇ ಹೇಳಬೇಕಾದ ಕಿವಿಮಾತು: ಈ ಕಷ್ಟಗಳು ಕ್ಷಣಿಕ. ಧೈರ್ಯಗೆಟ್ಟ ಮನಸ್ಸಿಗೆ ಬೇಕಾಗಿರುವುದು ಆತ್ಮಸ್ಥೈರ್ಯ ತುಂಬುವ ನುಡಿಗಳು. ನಮ್ಮನ್ನು ತುಳಿಯುವ ಜನರಿಂದ ದೂರವಿದ್ದು, ನಮ್ಮ ಒಳಿತು ಬಯಸುವವರೊಂದಿಗೆ ಕೆಲ ಸಮಯ ಕಳೆದರೆ, ಬೇಸರ ದೂರ ಸರಿಯುವುದು. ಗೋಳಿಡುವ ಧಾರಾವಾಹಿ, ಕಾದಂಬರಿ, ಚಲನಚಿತ್ರಗಳನ್ನು ನೋಡುವ ಬದಲು ಹಾಸ್ಯಪ್ರಧಾನ ಪುಸ್ತಕಗಳು, ಮನೋಲ್ಲಾಸಕರ ಆಟೋಟಗಳಲ್ಲಿ ತೊಡಗಬೇಕು. ಹಸನ್ಮುಖಿಯಾಗಿದ್ದರೆ, ಎಷ್ಟೋ ನೊಂದ ಮನಗಳಿಗೆ ನಗಲು ಸ್ಪೂರ್ತಿ ದೊರೆಯುತ್ತದೆ. ಒತ್ತಡದ ದಿನಗಳಲ್ಲಿ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಮನಸ್ಸು ಸಹಜ ಸ್ಥಿತಿಗೆ ಮರಳಿದಾಗ ಆಲೋಚಿಸಿ ಮುನ್ನಡೆದರೆ ಬದುಕು ಬಂಗಾರವಾಗುತ್ತದೆ.

| ಅನುಷಾ ಆರ್. ಬಡಿಗೇರ್ ಚಿತ್ರದುರ್ಗ

ನೀವೂ ಪ್ರತಿಕ್ರಿಯಿಸಿ

ನೀವು ಒತ್ತಡದಿಂದ ಮುಕ್ತರಾಗಲು ಯಾವ ತಂತ್ರಗಳನ್ನು ಅನುಸರಿಸುತ್ತಿದ್ದೀರಿ? ಅದರಿಂದ ನಿಮ್ಮ ಜೀವನದಲ್ಲಾಗಿರುವ ಧನಾತ್ಮಕ ಪರಿಣಾಮಗಳೇನು? ನಿಮ್ಮ ಅನಿಸಿಕೆ, ಅನುಭವಗಳನ್ನು ನಮ್ಮೊಡನೆ ಹಂಚಿಕೊಳ್ಳಿ. ಆಯ್ದ ಬರೆಹಗಳನ್ನು ಪ್ರಕಟಿಸಲಾಗುವುದು. ನಿಮ್ಮ ಬರೆಹ 200 ಪದಗಳನ್ನು ಮೀರದಿರಲಿ. ನಿಮ್ಮ ಹೆಸರು, ತರಗತಿ, ಕಾಲೇಜು ಹಾಗೂ ಊರಿನ ಹೆಸರನ್ನು ಸ್ಪಷ್ಟವಾಗಿ ಬರೆದಿರಿ. ಪುಟ್ಟದೊಂದು ಭಾವಚಿತ್ರವೂ ಜತೆಗಿರಲಿ. e-mail: masthvv@gmail.com

ಮಹಿಳಾ ಸಮಾನತೆ.

💃🏽ಮಹಿಳಾ ಸಮಾನತೆಗೆ ಜೈಕಾರ ದೇಶದ ಏಳಿಗೆ ಸಾಕಾರ👫

ಭಾರತದ ಪುತ್ರರು ಹಾಗೂ ಪುತ್ರಿಯರು ತಾಯಿ ಭಾರತಿಯ ಎರಡು ಕೈಗಳಿದ್ದಂತೆ, ಅವರನ್ನು ಸಮಾನವಾಗಿ ಕಾಣಬೇಕು. ಎರಡೂ ಕೈಗಳು ಸಮನ್ವಯದಿಂದ ಕೆಲಸಮಾಡದಿದ್ದರೆ ತಾಯ್ನೆಲದ ಅಭಿವೃದ್ಧಿ ಸಾಧ್ಯವಿಲ್ಲ.
ಸಮಾನತೆಯ ಅಂಶಗಳು ಸಮರ್ಪಕವಾಗಿ ಜಾರಿಗೊಳ್ಳಬೇಕಾದರೆ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಅಗತ್ಯ.

✍ ಸಜನ್ ಪೂವಯ್ಯ.

ವ್ಯಕ್ತಿಯೊಬ್ಬನಿಗೆ ಯಾವುದೋ ಒಂದು ವಿಷಯದ ಬಗ್ಗೆ ಅತ್ಯುತ್ಸಾಹ ಇದ್ದಲ್ಲಿ, ಅದನ್ನು ಅಂಧಾಭಿಮಾನ ಎನ್ನುತ್ತಾರೆ. ಅದೇ ರೀತಿ, ಧರ್ಮದ ಬಗ್ಗೆ ಅತ್ಯುತ್ಸಾಹ ಅಥವಾ ತಪ್ಪುಗ್ರಹಿಕೆ ಇದ್ದಲ್ಲಿ ಅದನ್ನು ಮತಾಂಧತೆ ಎನ್ನುತ್ತಾರೆ. ಮನುಷ್ಯ ನಡವಳಿಕೆಯನ್ನು ಪರಿಶುದ್ಧವಾಗಿಸುವ ಏಕಮಾತ್ರ ಉದ್ದೇಶದೊಂದಿಗೆ ಧರ್ಮಸ್ಥಾಪನೆಯಾಗಿದೆ. ಅಂದರೆ, ಪ್ರತಿಯೊಬ್ಬನ ಆತ್ಮೋದ್ಧಾರ ಅಥವಾ ಪರಿಪೂರ್ಣತೆಯೆಡೆಗೆ ಸಾಗುವ ಪಯಣ ಅರ್ಥಾತ್ ಮೋಕ್ಷ ಪ್ರಾಪ್ತಿಯ ಹಾದಿ ಎಂದರ್ಥ. ಆದರೆ, ಈ ಆದರ್ಶವನ್ನು ಜನ ಮರೆತು, ಬಾಹ್ಯ ನಡವಳಿಕೆ ಮತ್ತು ಕ್ರಿಯೆಗಳಿಗೆ ಸಂಬಂಧಿಸಿದ ಸಾಮಾನ್ಯ ನಿಯಮಗಳಿಗೆ ಜೋತುಬಿದ್ದಿದ್ದಕ್ಕೆ ಏನೆನ್ನಬೇಕು? ಇದೇ ನಿಯಮಗಳೀಗ ಪದ್ಧತಿಯಾಗಿಯೇ ಮಾರ್ಪಟ್ಟಿವೆ. ಎಷ್ಟರಮಟ್ಟಿಗೆಂದರೆ, ಪರಿಷ್ಕರಿಸಲಾಗದ ಮಟ್ಟಿಗೆ ಜನಜೀವನದೊಂದಿಗೆ ಬೆರೆತುಹೋಗಿದೆ ಮತ್ತು ಈ ನಿಯಮಗಳಿಗೆ ಗುರುಗಳು, ಪಾದ್ರಿಗಳು ಮತ್ತು ಮುಲ್ಲಾಗಳು ರಕ್ಷಕರಾಗಿದ್ದಾರೆ. ಇಂತಹ ಸನ್ನಿವೇಶಗಳೇ ಕ್ರಮೇಣ ಕೋಮುವಾದ ಹಾಗೂ ಮತಾಂಧತೆಗೆ ಕಾರಣವಾದವು. ಇನ್ನೊಂದೆಡೆ, ಮಹಿಳೆಯರ ಸ್ಥಿತಿಗತಿ ಕುಸಿಯುತ್ತಲೇ ಬಂದು ಅವರನ್ನು ಕೇವಲ ಮಕ್ಕಳನ್ನು ಹೆರುವ ಯಂತ್ರಗಳಂತೆ ಪರಿಭಾವಿಸಲಾಯಿತು.

ಎಲ್ಲ ವರ್ಗ, ಸಮುದಾಯದವರನ್ನು ಯಾವುದೇ ಭೇದವಿಲ್ಲದೆ ಏಕವೇದಿಕೆಯಡಿ ತರುವ ಪ್ರಯತ್ನ ಅಂದರೆ ಸಮಾನ ನಾಗರಿಕ ಸಂಹಿತೆ ರೂಪಿಸುವ ಆಲೋಚನೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೂ ಇತ್ತು ಮತ್ತು ನಂತರ ಸಂವಿಧಾನ ರಚಿಸುವಾಗಲೂ ಇತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಅಷ್ಟೆ. ಆದಾಗ್ಯೂ, ಸ್ವಾತಂತ್ರ್ಯೊತ್ತರದ ಕಾಲಮಾನದಲ್ಲಿ ಹಿಂದು ಕಾನೂನಿನ ಕೆಲವು ಭಾಗಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ. ಕೊನೆಗೆ, ಭಾರತದಲ್ಲಿ ಸ್ತ್ರೀಯರ ಸ್ಥಾನಮಾನದ ಕುರಿತಾಗಿ ಅಧ್ಯಯನ ನಡೆಸಲು ಒಂದು ಸಮಿತಿ ರಚಿಸಲಾಯಿತು. ಇದು ತನ್ನ ವರದಿಯನ್ನು 1975ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದಕ್ಕೆ ದೇಶದಲ್ಲಿ ಚಾಲ್ತಿಯಲ್ಲಿರುವ ಅನೇಕ ವೈಯಕ್ತಿಕ ಕಾನೂನುಗಳು ಅಡ್ಡಿಯಾಗಿವೆ; ಕೆಲವು ವೈಯಕ್ತಿಕ ಕಾನೂನುಗಳು ಮಹಿಳೆಯರ ಬಗ್ಗೆ ತಾರತಮ್ಯ ನೀತಿ ಹೊಂದಿವೆ. ವಾಸ್ತವದಲ್ಲಿ ಇವು ಮೂಲಭೂತ ಹಕ್ಕುಗಳಿಗೂ ವಿರುದ್ಧವಾಗಿವೆ ಎಂದು ಆ ಸಮಿತಿ ವರದಿಯಲ್ಲಿ ಹೇಳಿತ್ತು.

ಸತಿಪದ್ಧತಿ, ವಿಧವೆಯರನ್ನು ಕೀಳಾಗಿ ನಡೆಸಿಕೊಳ್ಳುವುದು, ಬಾಲ್ಯವಿವಾಹ, ಬಹುಪತ್ನಿತ್ವ, ಅಸ್ಪೃಶ್ಯತೆ, ದೇಶದ ಕೆಲವು ಭಾಗಗಳಲ್ಲಿ ಮತ್ತು ಕೆಲವು ಸಮುದಾಯಗಳಲ್ಲಿರುವ ಅವಕುಂಠನ(ಪರ್ಧಾ) ವ್ಯವಸ್ಥೆ ಮತ್ತು ನರಬಲಿ ಮುಂತಾದವು ಮಹಿಳೆಯರ ಸ್ವಾತಂತ್ರ್ಯ ಅಭಿವೃದ್ಧಿ ಹಾಗೂ ಉನ್ನತೀಕರಣದ ದಾರಿಯಲ್ಲಿ ದೊಡ್ಡ ತಡೆಗೋಡೆಗಳಾಗಿವೆ. ಇಂತಹ ಅನಿಷ್ಟಗಳ ನಿದರ್ಶನಕ್ಕಾಗಿ ಬಹಳ ಹಿಂದೇನೂ ಹೋಗಬೇಕಿಲ್ಲ. ಸತಿಪದ್ಧತಿಗೆ ಬಲಿಯಾದ ರೂಪಾ ಕನ್ವರ್, ಸುಶಿಕ್ಷಿತ ಮುಸ್ಲಿಂ ಪುರುಷನ ಜತೆಗೆ 50 ವರ್ಷ ಸಂಸಾರ ನಡೆಸಿದ ಬಳಿಕ ತಲಾಕ್ ಪಡೆದು ನಲುಗಿದ ಶಾ ಬಾನೋ ಎಂಬ ತೀರಾ ಇತ್ತೀಚಿನ ಪ್ರಕರಣಗಳು ನಿಮಗೂ ನೆನಪಿರಬೇಕು. ನನ್ನ ಪ್ರಕಾರ, ಇಂಥ ಎಲ್ಲ ಅನಿಷ್ಟಗಳನ್ನು ನಿವಾರಿಸುವ ಉತ್ತಮ ಉಪಾಯ ಎಂದರೆ, ಸಮಾನ ನಾಗರಿಕ ಸಂಹಿತೆಯ ಜಾರಿ.

ಸಂವಿಧಾನದ ಅನುಚ್ಛೇದ 15ರ ಪ್ರಕಾರ, ಜನ್ಮಸ್ಥಳ, ಲಿಂಗ, ಜಾತಿ, ಕೋಮು, ಧರ್ಮಗಳ ಆಧಾರದಲ್ಲಿ ಯಾವುದೇ ರೀತಿ ತಾರತಮ್ಯ ಮಾಡಬಾರದು. ತಾರತಮ್ಯ ಎಂದರೆ ನಡೆಸಿಕೊಳ್ಳುವ ರೀತಿಯಲ್ಲಿನ ವ್ಯತ್ಯಾಸ. ಅಂದರೆ, ವ್ಯತಿರಿಕ್ತವಾಗಿ ನಡೆಸಿಕೊಳ್ಳುವುದು ಅಥವಾ ಇತರರಿಗಿಂತ ಭಿನ್ನವಾಗಿ ನಡೆಸಿಕೊಳ್ಳುವುದು.

ಹಿಂದು ಕಾನೂನನ್ನು ಪರಿಷ್ಕರಿಸಿ ಮಹಿಳೆಯರಿಗೂ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂದು ಭಾರತದ ಕಾನೂನು ಆಯೋಗ ತನ್ನ 174ನೇ ವರದಿಯಲ್ಲಿ ಶಿಫಾರಸು ಮಾಡಿತ್ತು. ಮಿತಾಕ್ಷರ ವ್ಯವಸ್ಥೆ ಪ್ರಕಾರ, ಆಸ್ತಿಯಲ್ಲಿ ಸಮಪಾಲು ಮತ್ತು ಆನುವಂಶಿಕ ಪ್ರಾಪ್ತಿಯ ವಿಚಾರ ಪುತ್ರಿಗೆ ಆನುವಂಶಿಕ ಹಕ್ಕಲ್ಲ. ಬದಲಾಗಿ ಯಾರೂ ವಾರಸುದಾರರಿರದ್ದಾಗ ಆಕೆಗೆ ಅದು ದಕ್ಕುತ್ತದೆ. ಮಹಿಳೆ ಎನ್ನುವ ಕಾರಣಕ್ಕೆ ಪುತ್ರಿಗೆ ಆನುವಂಶಿಕ ಆಸ್ತಿಯ ಸಮಪಾಲು ನೀಡದೆ ತಾರತಮ್ಯ ಮಾಡುವುದು ಸಮಾನತೆಯ ಮೂಲಭೂತ ಹಕ್ಕಿಗೆ ವಿರುದ್ಧವಾದುದು. ಸಂವಿಧಾನದ ಅನುಚ್ಛೇದ 14ರ ಪ್ರಕಾರ ಸಮಾನತೆ ಮತ್ತು ಸಮಾನ ಸಂರಕ್ಷಣೆಯ ಕಾನೂನುಗಳು ಖಾತರಿಪಡಿಸಲ್ಪಟ್ಟಿವೆ. ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಗಳು ಕೂಡ ಈ ಪರಿಚ್ಛೇದದಲ್ಲಿ ಒಳಗೊಂಡಿರುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಅದೃಷ್ಟವಶಾತ್ ನಮ್ಮ ದೇಶದ ಹಿಂದು ಕಾನೂನು ಪರಿಷ್ಕರಣೆಗೊಳಪಟ್ಟಿದ್ದು, ಹಿಂದು ಕುಟುಂಬಗಳ ಪುತ್ರಿಯರಿಗೆ ಪುತ್ರರಷ್ಟೇ ಸಮಾನ ಹಕ್ಕು ಲಭಿಸಿದೆ. ಆದಾಗ್ಯೂ, ಅಂತಹ ಪ್ರಯೋಜನಗಳು ದೇಶದ ಇತರೆ ಸಮುದಾಯದ ಹೆಣ್ಮಕ್ಕಳಿಗೆ ಸಿಕ್ಕಿಲ್ಲ ಎಂಬುದು ವಿಪರ್ಯಾಸವೇ ಸರಿ.

ನಿಮೂಲನೆಗೊಳಿಸಲೇಬೇಕಾದ ಇನ್ನೊಂದು ಸಾಮಾಜಿಕ ಪಿಡುಗು ವರದಕ್ಷಿಣೆಯದ್ದು. ಈ ಸಂಬಂಧ ಕಾನೂನು ಇದ್ದರೂ ಅದು ಪರಿಣಾಮಕಾರಿಯಾಗಿಲ್ಲವಾದ್ದರಿಂದ ಈ ಪಿಡುಗನ್ನು ಆಮೂಲಾಗ್ರ ನಿವಾರಿಸುವುದು ಸಾಧ್ಯವಾಗಿಲ್ಲ. ಶಿಕ್ಷಣ, ಜಾಗೃತಿ ಹಾಗೂ ಮಹಿಳೆಯರ ಬಗ್ಗೆ ಗೌರವ ಮೂಡಿಸಿದಾಗ ಮಾತ್ರ ಈ ಪಿಡುಗನ್ನು ನಿಮೂಲನೆ ಮಾಡಬಹುದು.

☆ ಲಿಂಗ ಸಮಾನತೆ

ದೈಹಿಕ ರಚನೆಯ ಕಾರಣಕ್ಕಾಗಿ ಪುರುಷರು ಮಾಡುವ ಎಲ್ಲ ಕೆಲಸಗಳನ್ನೂ ಮಹಿಳೆ ಮಾಡಲಿಕ್ಕಾಗದು. ಈ ಕಾರಣದಿಂದ ಕೆಲವೊಮ್ಮೆ ಆಕೆಗೆ ರಕ್ಷಣೆ ಅಗತ್ಯವಾಗಬಹುದು. ಆದರೆ ಸಂಪೂರ್ಣ ಲಿಂಗ ಸಮಾನತೆಯು ಇಂಥದನ್ನು ಒಪ್ಪುವುದಿಲ್ಲ. ಹೀಗಾಗಿ ಅಂತಹ ಸಂದರ್ಭದಲ್ಲಿ ಮಹಿಳೆಯನ್ನು ಶೋಷಣೆಯಿಂದ ರಕ್ಷಿಸಲು ಯಾವ ಬಗೆಯ ರಕ್ಷಣಾ ಕ್ರಮಗಳು ಅಗತ್ಯ ಮತ್ತು ನಿರಂತರವಾಗಿ ಈ ರಕ್ಷಣಾ ಕ್ರಮಗಳನ್ನು ಜಾರಿಯಲ್ಲಿಡಬಹುದೇ ಎಂಬ ಪ್ರಶ್ನೆಗಳೂ ಇಂಥ ಸಂದರ್ಭದಲ್ಲಿ ಉದ್ಭವಿಸುತ್ತವೆ.

ಎಲ್ಲ ಮಾನವರೂ ಸಮಾನರು ಎಂದು ವಿಶ್ವಸಂಸ್ಥೆ ಪ್ರತಿಪಾದಿಸುತ್ತದೆ. ಆದರೆ, ಮೂಲಭೂತ ಮಾನವ ಹಕ್ಕುಗಳ ವಿಷಯಕ್ಕೆ ಬಂದಾಗ ಸ್ತ್ರೀಯರ ರಕ್ಷಣಾ ಕ್ರಮಗಳು ತಾರತಮ್ಯ ನೀತಿಯದ್ದು ಎಂದು ವಿಶ್ವಸಂಸ್ಥೆಯೂ ಪರಿಗಣಿಸಲ್ಪಡುವುದಿಲ್ಲ ಎಂಬುದು ಗಮನಾರ್ಹ. ಮಹಿಳೆಯರ ವಿರುದ್ಧದ ತಾರತಮ್ಯ ನಿಮೂಲನಾ (1967) ಘೊಷಣೆಯ 10.3ನೇ ವಿಧಿ ಪ್ರಕಾರ, ‘…..ಮಹಿಳೆಯರ ಶರೀರ ಪ್ರಕೃತಿಯ ಕಾರಣಕ್ಕೆ ಕೆಲವೊಂದು ಉದ್ಯೋಗಗಳಲ್ಲಿ ಅವರ ರಕ್ಷಣೆಗಾಗಿ ಇರುವ ನಿಯಮಗಳನ್ನು ತಾರತಮ್ಯವೆಂದು ಪರಿಗಣಿಸಬಾರದು’.

ಇತಿಹಾಸದ ಪುಟಗಳನ್ನು ತೆರೆದರೆ, ಪ್ರಗತಿಪರ ರಾಷ್ಟ್ರ ಎಂದು ಬೀಗುವ ಅಮೆರಿಕದಲ್ಲೂ ಮಹಿಳೆಯರು ತಾರತಮ್ಯ ನೀತಿಗೊಳಗಾಗಿದ್ದು ಕಂಡುಬರುತ್ತದೆ. ಸಂವಿಧಾನದ 14ನೇ ತಿದ್ದುಪಡಿ ಮೂಲಕ ‘ಎಲ್ಲ ವ್ಯಕ್ತಿಗಳೂ ಸಮಾನ’ರೆಂದು ಹೇಳಲಾಯಿತು. ಆದರೂ, ‘ಮಹಿಳೆಯರ ಶರೀರ ವಿನ್ಯಾಸವು ಅವರನ್ನು ಪುರುಷರಿಂದ ಪ್ರತ್ಯೇಕಿಸುತ್ತಿದ್ದು, ಅವರು ಪುರುಷರು ಮಾಡುವ ಕೆಲವೊಂದು ಶ್ರಮದ ಕೆಲಸಗಳನ್ನು ಮಾಡಲಾರರು. ಇದನ್ನು ಕೂಡ ಪರಿಗಣಿಸಬೇಕಾಗುತ್ತದೆ’ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಕೆಲ ವರ್ಷಗಳ ಹಿಂದೆ ತೀರ್ಪು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಅಮೆರಿಕದ ಸುಪ್ರೀಂ ಕೋರ್ಟ್ ಸಮಾನತೆಯನ್ನು ಉಗ್ರವಾಗಿ ಪ್ರತಿಪಾದಿಸುತ್ತದೆ. ಹಾಗಿದ್ದರೂ, ಮಹಿಳೆಯರ ವಕೀಲಿಕೆ ಹಕ್ಕು, ನಿಗದಿತ ಮಿತಿಯನ್ನು ಮೀರುವ ಭಾರ ಎತ್ತುವ ಅಥವಾ ಹೊರುವ ಕೆಲಸಗಳು ಅಥವಾ ತಡರಾತ್ರಿ ತನಕ ಮಾಡಬೇಕಾದ ಕೆಲಸಗಳು ಮುಂತಾದವುಗಳನ್ನು ನಿಷೇಧಿಸಿದ ಹಾಗೂ ದಿನ ಮತ್ತು ವಾರದಲ್ಲಿ ಎಷ್ಟು ಗಂಟೆ ಮಹಿಳೆಯರು ಕೆಲಸ ಮಾಡಬಹುದು ಎಂಬುದನ್ನು ನಿರ್ದೇಶಿಸುವ ಕಾನೂನುಗಳ ಮಾನ್ಯತೆಯನ್ನು ಅದು ಎತ್ತಿಹಿಡಿದ ನಿದರ್ಶನಗಳು ಕೂಡ ನಮಗೆ ಸಿಗುತ್ತವೆ.

ಮಹಿಳೆಯರ ಶರೀರ ಪ್ರಕೃತಿಯ ಕಾರಣದಿಂದಾಗಿ 18ನೇ ಶತಮಾನದಲ್ಲಿ ಅವರಿಗೆ ಕೆಲವು ಮಿತಿಗಳನ್ನು ವಿಧಿಸಲಾಗಿತ್ತು. ಅದೇ ಕಟ್ಟುಪಾಡುಗಳು ಮುಂದೆ ಮಹಿಳಾ ವಿಮೋಚನಾ ಚಳವಳಿಗೆ ನಾಂದಿಹಾಡಿದವು. ಎಲ್ಲ ವಿಷಯಗಳಲ್ಲಿಯೂ ಮಹಿಳೆಯನ್ನು ಸಮಾನವಾಗಿ ನೋಡಬೇಕು ಎಂಬ ಹಕ್ಕೊತ್ತಾಯ ಕೇಳಿಬಂದು, ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ವ್ಯಾಪಕ ಬದಲಾವಣೆಗೆ ಕಾರಣವಾಯಿತು. ಪರಿಣಾಮ, ಇಂದು ಅಮೆರಿಕದಲ್ಲಿ ಮಹಿಳೆಯರನ್ನು ಪುರುಷರಿಗೆ ಸರಿಸಮಾನವಾಗಿ ಕಾಣಲಾಗುತ್ತದೆ.

☆ ಮಹಿಳಾ ಪರ ನೀತಿ.

ಶತಶತಮಾನಗಳಿಂದ ಮಹಿಳೆಯರನ್ನು ಅಸಮಾನತೆಯಿಂದ ಕಂಡ ಪರಿಣಾಮ ಸಾಮಾಜಿಕ ನ್ಯೂನತೆಗೆ ಕಾರಣವಾದದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಮ್ಮ ದೇಶದ ಸಂವಿಧಾನ ನಿರ್ವತೃರು ಈ ಕಟುವಾಸ್ತವವನ್ನು ಅರ್ಥೈಸಿಕೊಂಡು ಲೋಪವನ್ನು ಸರಿಪಡಿಸುವ ಪ್ರಯತ್ನ ನಡೆಸಿದರು. ಇದರಂತೆ, ಸಂವಿಧಾನದ ಅನುಚ್ಛೇದ 15(3)ರಲ್ಲಿ ಮಹಿಳೆಯರ ಪರವಾಗಿ ‘ರಕ್ಷಣಾತ್ಮಕ ತಾರತಮ್ಯ’ ಅಂಶವನ್ನು ಸೇರ್ಪಡೆಗೊಳಿಸಿದರು. ಕೆಲ ವಿಚಾರಗಳಲ್ಲಿ ಪುರುಷರಿಗೆ ಹೋಲಿಸಿದರೆ ಹೆಚ್ಚು ಮಹಿಳಾಪರ ನೀತಿ ಅನುಸರಿಸಬಹುದು; ಇದರಿಂದ ಸಮಾನತೆಯ ಹಕ್ಕಿಗೆ ಭಂಗವೇನೂ ಆಗದು ಎಂಬುದು ಈ ನೀತಿಯ ಒಟ್ಟಾರೆ ಸಾರಾಂಶ. ತಾರತಮ್ಯ ವಿರೋಧಿ ನಿಯಮಕ್ಕೆ ಇದೊಂದು ಅಪವಾದೆನ್ನಬಹುದು.

ಉದಾಹರಣೆಗೆ ಹೇಳುವುದಾದರೆ, ಮಹಿಳಾ ಕೆಲಸಗಾರರಿಗೆ ನೀಡುವ ಹೆರಿಗೆ ರಜೆಯನ್ನು ತಾರತಮ್ಯ ವಿರೋಧಿ ನೀತಿಗೆ ವಿರುದ್ಧವಾದುದು ಎನ್ನಲಾಗದು. ಅದೇ ರೀತಿ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವಾಸ್ತವ್ಯ, ಪ್ರವೇಶದ್ವಾರ ಇತ್ಯಾದಿ ಸವಲತ್ತುಗಳನ್ನು ಕಲ್ಪಿಸುವುದು ಸಂವಿಧಾನ ಸಮಾನತೆಯ ಹಕ್ಕಿಗೆ ವಿರುದ್ಧವಾಗದು. ಮಹಿಳಾ ಕೆಲಸಗಾರರ ಕೆಲಸದ ಅವಧಿಗೆ ಮಿತಿ ಹೇರುವುದು ಅಥವಾ ಅದನ್ನು ನಿಯಂತ್ರಿಸುವುದು ಕೂಡ ಮಹಿಳಾಪರ ರಕ್ಷಣಾ ತಾರತಮ್ಯವೇ ಆಗುತ್ತದೆ. ಇಂತಹ ಕ್ರಮಗಳು ‘ಪುರುಷ ಕೆಲಸಗಾರ’ರಿಗೆ ಅಗತ್ಯವಿರುವುದಿಲ್ಲ.

ಭಾರತದಲ್ಲಿ ಮಹಿಳೆಯರಿಗಿರುವ ವಿಶಿಷ್ಟ ಸಾಮಾಜಿಕ ಸ್ಥಾನಮಾನದ ಹಿನ್ನೆಲೆಯಲ್ಲಿ ಅವರಿಗೆ ನೀಡುವ ವಿಶೇಷ ಆದರವೂ ಸಮರ್ಥನೀಯವಾದುದೇ. ನೈನ್ ಸುಖ್ ವರ್ಸಸ್ ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ, ತಾರತಮ್ಯ ನೀತಿ ವಿರುದ್ಧದ ಸಾಮಾನ್ಯ ನಿಷೇಧವನ್ನು ರಾಜಕೀಯ ಹಕ್ಕುಗಳಿಗೂ ವಿಸ್ತರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದ್ದರಿಂದಲೇ, ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕ ಮಹಿಳಾ ಪ್ರಾತಿನಿಧ್ಯವನ್ನು ಕೋರ್ಟುಗಳು ಎತ್ತಿಹಿಡಿದಿರುವುದು.

ಸಂವಿಧಾನದಲ್ಲಿ ಕೊಡಮಾಡಲ್ಪಟ್ಟಿರುವ ಸಮಾನತೆಯ ಹಕ್ಕುಗಳನ್ನು ಉಲ್ಲಂಘಿಸದೆ, ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ನೀಡಲಾಗಿರುವ ವಿಶೇಷ ಸವಲತ್ತುಗಳನ್ನು ಸಮಗ್ರವಾಗಿ ಪಟ್ಟಿಮಾಡುವುದು ಅಷ್ಟು ಸುಲಭವಲ್ಲ ಬಿಡಿ. ಅದು ಮಹಿಳೆಯರ ವಿಶೇಷ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ. ಆದಾಗ್ಯೂ ಅಮೆರಿಕದ ಸುಪ್ರೀಂ ಕೋರ್ಟ್, ಮುಲ್ಲರ್ ವರ್ಸಸ್ ಒರೆಗಾನ್ ಪ್ರಕರಣದಲ್ಲಿ ಇಂಥ ಸವಲತ್ತುಗಳನ್ನು ಪಟ್ಟಿ ಮಾಡಲು ಪ್ರಯತ್ನಿಸಿತ್ತು. ಪುರುಷ ಹಾಗೂ ಸ್ತ್ರೀಯರ ಶಾರೀರಿಕ ಭಿನ್ನತೆ, ಇಬ್ಬರೂ ನಿರ್ವಹಿಸುವ ಕೆಲಸಗಳ ಭಿನ್ನತೆ, ದೈಹಿಕ ಬಲ, ನಿರಂತರ ಶ್ರಮದ ಕೆಲಸಗಳನ್ನು ಮಾಡುವ ಸಾಮರ್ಥ್ಯ, ಗೃಹಕೃತ್ಯಗಳ ಸಮರ್ಪಕ ನಿರ್ವಹಣೆ, ಮಕ್ಕಳ ಲಾಲನೆ, ಪಾಲನೆ, ಅವರ ಶಿಕ್ಷಣ ಸೇರಿ ಮಾತೃತ್ವದ ಹೊಣೆಗಾರಿಕೆ, ವಿಧವೆ ಹಾಗೂ ವಿಧುರರ ನಡುವಿನ ಆರ್ಥಿಕ ತಾರತಮ್ಯ… ಇತ್ಯಾದಿಯಾಗಿ ಪಟ್ಟಿ ಸಾಗಿತ್ತು. ಇದಕ್ಕೆ ಅನುಗುಣವಾಗಿ ವಿಶ್ವಸಂಸ್ಥೆ 1967ರಲ್ಲಿ ಹೊರಡಿಸಿದ ‘ಮಹಿಳೆಯರ ವಿರುದ್ಧದ ತಾರತಮ್ಯ ನಿಮೂಲನಾ ಘೊಷಣೆ’ಯ ವಿಧಿ 10.3ರನ್ನು ರೂಪಿಸಲಾಗಿದೆ.

ನಮ್ಮ ಸಂವಿಧಾನ ನಿರ್ವಪಕರು ಅನುಚ್ಛೇದ 15(3) ರೂಪಿಸುವಾಗ ಮತ್ತು ಮಹಿಳಾ ಪರವಾದ ರಕ್ಷಣಾ ತಾರತಮ್ಯದ ನಿಯಮಗಳನ್ನು ರೂಪಿಸುವಾಗ ಅಮೆರಿಕದ ‘ಮುಲ್ಲರ್ ವರ್ಸಸ್ ಒರೆಗಾನ್’ ಪ್ರಕರಣದಿಂದ ಪ್ರೇರಣೆಗೊಳಗಾಗಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಸ್ತ್ರೀ ಹಾಗೂ ಪುರುಷರು ಸಮಾನ ಸನ್ನಿವೇಶದಲ್ಲಿದ್ದಾಗ ತಾರತಮ್ಯ ಎಸಗುವುದು ಸಮಾನ ರಕ್ಷಣೆಯ ಹಕ್ಕನ್ನು ನಿರಾಕರಿಸಿದಂತೆ ಎಂದು ನಮ್ಮ ಕೋರ್ಟುಗಳು ಕಾಲಾನುಕಾಲಕ್ಕೆ ಎಚ್ಚರಿಸುತ್ತ ಬಂದಿರುವುದನ್ನೂ ನಾವಿಲ್ಲಿ ಪರಿಗಣಿಸಬೇಕಾಗುತ್ತದೆ.

ಭಾರತದ ಪುತ್ರರು ಹಾಗೂ ಪುತ್ರಿಯರು ತಾಯಿ ಭಾರತಿಯ ಎರಡು ಕೈಗಳಿದ್ದಂತೆ, ಅವರನ್ನು ಸಮಾನವಾಗಿ ಕಾಣಬೇಕು. ಪುತ್ರಿಯರ ವಿರುದ್ಧ ಭೇದ ಎಣಿಸುವುದೆಂದರೆ ತಾಯಿ ಭಾರತಿಯ ಒಂದು ಕೈಯನ್ನು ಕಟ್ಟಿಹಾಕಿದಂತೆ ಮತ್ತು ಆಕೆ ಒಂದೇ ಕೈಯಿಂದ ಕೆಲಸ ನಿರ್ವಹಿಸುವಂತೆ ಮಾಡಿದಂತೆಯೇ ಸರಿ. ಎರಡೂ ಕೈಗಳು ಸಮನ್ವಯದಿಂದ ಕೆಲಸಮಾಡದಿದ್ದರೆ ತಾಯ್ನೆಲದ ಅಭಿವೃದ್ಧಿ ಸಾಧ್ಯವಿಲ್ಲ. ಏನಂತೀರಿ?

ಝೈಕಾ ವೈರಸ್ ಸಂಶೋಧನಾ ತಂಡದಲ್ಲಿ ಭಾರತದ ದೇವಿಕಾ ಸಿರೋಹಿ.

ಝೈಕಾ ವೈರಸ್ ಲಕ್ಷಣ ಸಂಶೋಧನೆ ದೇವಿಕಾಳಿಗಾಗಿ ಕಾಯುತ್ತಿದೆ ಮೀರಟ್‌

image

ಮೀರಟ್‌ (ಪಿಟಿಐ): ಝೈಕಾ ವೈರಸ್ ಜೈವಿಕ ಲಕ್ಷಣವನ್ನು ಸಂಶೋಧನೆ ಮಾಡಿದ ವಿಜ್ಞಾನಿಗಳ ತಂಡದಲ್ಲಿದ್ದ  ಭಾರತದ ದೇವಿಕಾ ಸಿರೋಹಿ (29) ಅವರ ಪೋಷಕರಿಗೆ ಈಗ ಹೆಮ್ಮೆ ಪಡುವ ಸಮಯ.

ವಿಜ್ಞಾನಿಗಳ ತಂಡದಲ್ಲೇ ದೇವಿಕಾ ಅತ್ಯಂಕ ಕಿರಿಯ ಸದಸ್ಯೆ. ದೇವಿಕಾ ಇದ್ದ ತಂಡ ಝೈಕಾ ವೈರಸ್‌ನ ಜೈವಿಕ ಲಕ್ಷಣವನ್ನು  ಪತ್ತೆ ಮಾಡಿದ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಲ್ಲಿರುವ ಅವರ ತಂದೆ– ತಾಯಿಯನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ.

ದೇವಿಕಾ ತಂದೆ ಮತ್ತು ತಾಯಿ ಇಬ್ಬರೂ ವೈದ್ಯರಾಗಿದ್ದು, ತಮ್ಮ ಮಗಳನ್ನು ಕೇಳಿಕೊಂಡು ಬರುವ ಜನರನ್ನು ಕಂಡು ಅವರು ಸಂತಸ ವ್ಯಕ್ತಪಡಿಸುತ್ತಾರೆ.

ಬಂದವರೆಲ್ಲಾ ದೇವಿಕಾಳಿಗೆ ಅನಂದನೆ ಸಲ್ಲಿಸುತ್ತಾರೆ. ಜತೆಗೆ ಆಕೆ ದೇಶ ಹೆಮ್ಮೆ ಪಡುವ ಕೆಲಸ ಮಾಡಿದ್ದಾಳೆ ಎಂದು ಖುಷಿ ಪಡುತ್ತಾರೆ ಎಂದು ದೇವಿಕಾ ತಾಯಿ ಡಾ. ರೀನಾ ಸಿರೋಹಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಅವರೂ, ‘ಟ್ವೀಟ್‌’ ಮೂಲಕ ದೇವಿಕಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಎಸ್‌ಸಿ ಪದವಿ ಪಡೆದಿರುವ ದೇವಿಕಾ ಈಗ ಅಮೆರಿಕದ ಪರ್ಡ್ಯು ವಿ.ವಿಯಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಅಂತಿಮ ವರ್ಷದ ವೈದ್ಯಕೀಯ ಪದವಿಯಲ್ಲಿರುವ ಆಕೆಯ ಬರುವಿಕೆಗಾಗಿ  ಇಲ್ಲಿನ ಡಿಫೆನ್ಸ್ ಕಾಲೊನಿ ಕಾಯುತ್ತಿದೆ. ಡೆಂಗಿ ವೈರಸ್‌ ಕುರಿತು ಮೊದಲ ಬಾರಿ ಅಧ್ಯಯನ ನಡೆಸಿದ್ದ ವಿಜ್ಞಾನಿಗಳ ತಂಡದಲ್ಲೂ ದೇವಿಕಾ ಇದ್ದರು.