ಕೋಚಿಂಗ್ ಇಲ್ಲದೆ ಪರೀಕ್ಷೆಗೆ ತಯಾರಿ ಹೇಗೆ?

ಕೋಚಿಂಗ್ ಇಲ್ಲದೆ ಪರೀಕ್ಷೆಗೆ ತಯಾರಿ ಹೇಗೆ?
    
ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಕೋಚಿಂಗ್ ಕೇಂದ್ರಗಳಲ್ಲಿ ತರಬೇತು ಪಡೆಯಲೇಬೇಕು ಎಂಬ ಮಿಥ್ಯೆ ಹಲವರಲ್ಲಿ ಇದೆ. ಆದರೆ, ಕೋಚಿಂಗ್ ಕೇಂದ್ರಗಳ ನೆರವು ಪಡೆಯದೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬಹುದೆಂದು ಸಾಕಷ್ಟು ಅಭ್ಯರ್ಥಿಗಳು ತೋರಿಸಿಕೊಟ್ಟಿದ್ದಾರೆ.

ಮನೆಯಲ್ಲೇ ಕುಳಿತು ಸ್ವಯಂ ಬುದ್ಧಿಶಕ್ತಿಯಿಂದ ಪರೀಕ್ಷೆಗೆ ಸಿದ್ಧರಾಗಲು ಇಲ್ಲಿದೆ ಟಿಪ್ಸ್. ಮೊದಲಿಗೆ ಕೋಚಿಂಗ್ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ರೀತಿಯ ಸಿದ್ಧತೆ ನಡೆಸಲಾಗುತ್ತದೆ ಎಂದು ತಿಳಿದುಕೊಳ್ಳೋಣ. ಕೋಚಿಂಗ್ ಕ್ಲಾಸ್ನಲ್ಲಿ ನಿಯಮಿತ ಕ್ಲಾಸ್ ಇರುತ್ತದೆ.

ಪ್ರತಿಯೊಂದು ವಿಷಯಕ್ಕೂ ಗಮನ ನೀಡಲು ಸಾಧ್ಯವಾಗುತ್ತದೆ. ಪ್ರತಿವಾರದ ಅಂತ್ಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗೆ ಬೇಕಾದ ಸ್ಟಡಿ ಮೆಟಿರಿಯಲ್ ಲಭ್ಯತೆಯೂ ಅಲ್ಲಿ ಸಾಕಷ್ಟಿರುತ್ತದೆ. ಅಲ್ಲಿ ನಿಮ್ಮೊಂದಿಗೆ ಸಾಕಷ್ಟು ಇತರ ವಿದ್ಯಾರ್ಥಿಗಳೂ ಇರುತ್ತಾರೆ. ಅವರೊಂದಿಗೆ ಸಾಕಷ್ಟು ಚರ್ಚೆಗಳನ್ನೂ ನಡೆಸಬಹುದು. ಏನಾದರೂ ಸಂಶಯಗಳಿದ್ದಲ್ಲಿ ಪರಿಹರಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಉತ್ತಮವಾದ ತರಬೇತುದಾರರಿರುತ್ತಾರೆ.

ಈಗಾಗಲೇ ಪರೀಕ್ಷೆ ಬರೆದವರೂ ಇರುತ್ತಾರೆ. ಮನೆಯಲ್ಲೇ ತಯಾರಿ ನಡೆಸಿ ನಿಮ್ಮ ಮನೆಯಲ್ಲಿ ಕೋಚಿಂಗ್ ಸೆಂಟರ್ನಂತೆ ಓದುವ ವಾತಾವರಣ ಇರುವುದು ಕಷ್ಟ. ಆಟವಾಡುವ ಮಕ್ಕಳ ಸದ್ದು, ಅಡುಗೆಮನೆಯಿಂದ ಬರುವ ಸುವಾಸನೆ, ಧಾರಾವಾಹಿಯ ಡೈಲಾಗ್ಗಳು, ಆಗಾಗ ಬರುವ ಅತಿಥಿಗಳು, ಪಕ್ಕದ ಬೀದಿಯಲ್ಲಿ ಕಾಣಿಸುವ ಚಂದದ ಹುಡುಗಿ… ಹೀಗೆ ನಿಮ್ಮ ಓದಿಗೆ ಭಗ್ನ ತರುವ ಸಾಕಷ್ಟು ಅಂಶಗಳಿರಬಹುದು. ಆದರೂ, ಮನಸ್ಸು ಮಾಡಿದರೆ ಮನೆಯಲ್ಲಿ ಕುಳಿತು ಓದಿ ಯಶಸ್ಸು ಪಡೆಯಬಹುದು.

*ನಿಯಮಿತ ಅಧ್ಯಯನ.

ಪ್ರತಿದಿನ ಇಂತಿಷ್ಟು ಗಂಟೆ ಪರೀಕ್ಷೆಗೆ ಸಿದ್ಧತೆ ಮಾಡಲೇಬೇಕು ಎಂದು ಟೈಂಟೇಬಲ್ ಹಾಕಿಕೊಳ್ಳಿ.ಕಷ್ಟಪಟ್ಟು ಸಾಕಷ್ಟು ಸಮಯವನ್ನು ಓದಲು ಮತ್ತು ವಿಷಯಗಳ ಮನನ ಮಾಡಲು ವಿನಿಯೋಗಿಸಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ, ಡಯೆಟ್, ವಿಶ್ರಾಂತಿ ತೆಗೆದುಕೊಳ್ಳಲು ಮರೆಯದಿರಿ.

*ಸಿಲೆಬಸ್ ಇರಲಿ.

ನೀವು ಬರೆಯಲಿರುವ ಪರೀಕ್ಷೆಗೆ ಸಂಬಂಧಪಟ್ಟ ಸಿಲೆಬಸ್, ಕೊಶ್ಚನ್ ಪೇಪರ್ಗಳನ್ನು ಪಡೆದುಕೊಳ್ಳಿ. ಇಂತಹ ಸರಕುಗಳು ಯುಪಿಎಸ್ಸಿ, ಕೆಪಿಎಸ್ಸಿ ಇತ್ಯಾದಿ ವೆಬ್ಸೈಟ್ಗಳಲ್ಲೇ ದೊರಕುತ್ತದೆ. ಆಯಾ ಸಿಲೆಬಸ್ಗೆ ತಕ್ಕಂತಹ ಪುಸ್ತಕಗಳನ್ನು ಸಂಗ್ರಹಿಸಿಕೊಳ್ಳಿರಿ.

*ರಿವಿಷನ್.

ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ನೀವು ಓದಿರುವ ಸಿಲೆಬಸ್ಗಳನ್ನು ಓದಿಕೊಳ್ಳಿ. ವಿಷಯಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಿ. ಇದರಿಂದ ನಿಮ್ಮ ಮೆಮೊರಿ ಪವರ್ ಸಹ ಉತ್ತಮಗೊಳ್ಳುತ್ತದೆ.

*ಹಳೆ ಪ್ರಶ್ನೆಪತ್ರಿಕೆ.

ಈ ಹಿಂದಿನ ವರ್ಷ ನಡೆಸಿದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಕಂಡುಹಿಡಿಯಿರಿ. ಇದರಿಂದ ನಿಮಗೆ ಸಮಯದ ನಿರ್ವಹಣೆ, ವಿಷಯದ ಕುರಿತು ಅರಿವು ಇತ್ಯಾದಿ ಅನೇಕ ಲಾಭಗಳಿವೆ.

*ಹೊಸ ಪುಸ್ತಕಗಳನ್ನು ಖರೀದಿಸಿ.

ನೀವು ಓದಲೇಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿ. ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಗಳನ್ನು ಓದಿ. ವಿಕೆ ಮಿನಿಯಲ್ಲಿ ಪ್ರಕಟಗೊಳ್ಳುವ ಪ್ರಶ್ನೋತ್ತರ, ಮಾಹಿತಿಗಳನ್ನು ಓದಿ ತಿಳಿದುಕೊಳ್ಳಿ. ಸಮೀಪದ ಲೈಬ್ರೇರಿಗಳಿಗೆ ಭೇಟಿ ನೀಡುತ್ತಿರಿ.

*ಇಂಟರ್ನೆಟ್ ನೆರವು.

ನಿಮ್ಮಲ್ಲಿ ಇಂಟರ್ನೆಟ್ ಸೌಲಭ್ಯವಿದ್ದರೆ ದೊಡ್ಡ ಲೈಬ್ರೇರಿ ನಿಮ್ಮ ಬಳಿ ಇದ್ದಂತೆ. ಇಂಟರ್ನೆಟ್ ಮೂಲಕ ನಿಮ್ಮ ಪರೀಕ್ಷೆಗೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವೆಬ್ಸೈಟ್ಗಳು, ಚರ್ಚಾ ತಾಣಗಳಿಗೆ ಭೇಟಿ ನೀಡುತ್ತಿರಿ.

*ಸ್ಮಾರ್ಟ್ಫೋನ್ ಮೂಲಕ.

: ನಿಮ್ಮ ಕೈಯಲ್ಲಿರುವ ಪುಟ್ಟ ಮೊಬೈಲ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಬಿಡುವು ಸಿಕ್ಕಾಗ ಅಧ್ಯಯನ ಮಾಡಿ. ಬಸ್, ರೈಲು ಇತ್ಯಾದಿಗಳಲ್ಲಿ ಪ್ರಯಾಣ ಕೈಗೊಂಡಾಗಲೂ ಆ್ಯಪ್ ಮೂಲಕ ಅಧ್ಯಯನ ನಡೆಸಬಹುದು.

*ಗುಂಪು ಚರ್ಚೆ.

ನಿಮ್ಮೂರಿನಲ್ಲಿ ನಿಮ್ಮಂತೆ ಪರೀಕ್ಷೆ ಬರೆಯುವವರಿದ್ದರೆ ಅವರ ಸ್ನೇಹ ಬೆಳೆಸಿಕೊಳ್ಳಿ. ಅವರೊಂದಿಗೆ ಗುಂಪು ಚರ್ಚೆ ನಡೆಸಿ.

Medical fitness

*MEDICAL FITNESS*
((( PREVENTION IS BETTER THAN CURE )))

MEDICAL FITNESS:-
———————-

       *CHOLESTEROL*
           ——————
Cholesterol —   <  200
HDL  —  40  —  60
LDL  —    <  100
VLDL —     <  30
Triglycerides —     240
V.High —    >  250
—————————-

            *LDL*
           ——
Borderline –130 —159
High —  160  —  189
V.High —  > 190
—————————-

           *TRIGLYCERIDES*
           —————–
Borderline – 150 — 199
High —   200  —  499
V.High —     >   500
—————————-

       
        *PLATELETS COUNT*
       ———————-
1.50  Lac  —-  4.50 Lac
—————————-

              *BLOOD*
             ———–
Vitamin-D —  50   —-  80
Uric Acid —  3.50  —  7.20
—————————-

            *KIDNEY*
           ———-
Urea  —   17   —   43
Calcium —  8.80  —  10.60
Sodium —  136  —  146
Protein  —   6.40  —  8.30
—————————-

           *HIGH BP*
          ———-
120/80 —  Normal
130/85 –Normal  (Control)
140/90 —  High
150/95 —  V.High
—————————-

         *LOW BP*
        ———
120/80 —  Normal
110/75 —  Normal  (Control)
100/70 —  Low
90//65 —   V.Low
—————————-

              *SUGAR*
             ———
Glucose (F) —  70  —  100
(12 hrs Fasting)
Glucose (PP) —  70  — 140
(2 hrs after eating)
Glucose (R) —  70  —  140
(After 2 hrs)
—————————-
    
             *HAEMOGLOBIN*
            ——————-
Male —  13  —  17
Female —  11 —  15
RBC Count  — 4.50 — 5.50
                           (million)
—————————-

           *PULSE*
          ——–
72  per minute (standard)
60 — 80 p.m. (Normal)
40 — 180  p.m.(abnormal)
—————————-

          *TEMPERATURE*
          —————–
98.4 F    (Normal)
99.0 F Above  (Fever)

Please help your Relatives, Friends by sharing this information….

*Heart Attacks And Drinking Warm Water:*

This is a very good article. Not only about the warm water after your meal, but about Heart Attack’s . The Chinese and Japanese drink hot tea with their meals, not cold water, maybe it is time we adopt their drinking habit while eating. For those who like to drink cold water, this article is applicable to you. It is very Harmful to have Cold Drink/Water during a meal. Because, the cold water will solidify the oily stuff that you have just consumed. It will slow down the digestion. Once this ‘sludge’ reacts with the acid, it will break down and be absorbed by the intestine faster than the solid food. It will line the intestine. Very soon, this will turn into fats and lead to cancer . It is best to drink hot soup or warm water after a meal.

*French fries and Burgers*
are the biggest enemy of heart health. A coke after that gives more power to this demon. Avoid them for
your Heart’s & Health.

Drink one glass of warm water just when you are about to go to bed to avoid clotting of the blood at night to avoid heart attacks or strokes.

A cardiologist says if everyone who reads this message sends it to 10 people, you can be sure that we’ll save at least one life. …

So, please be a true friend and send this article to people you care about.

ಕೂಲಿಯ ಮಗ, ಇಂದು ಐದು ಕಂಪನಿಗಳ ಮಾಲೀಕ!

image

ಕೂಲಿಯ ಮಗ, ಇಂದು ಐದು ಕಂಪನಿಗಳ ಮಾಲೀಕ!
ಓದಿನಲ್ಲಿ ಮುಂದಿದ್ದರೂ ಬಡತನದಿಂದಾಗಿ ಬಾಲ್ಯದಲ್ಲೇ ಬಾಡಿದ ಪ್ರತಿಭೆಗಳಿಗೆ ಲೆಕ್ಕವಿಲ್ಲ. ಇಂಗ್ಲಿಷ್ ಬಾರದ ಕಾರಣ ಓದನ್ನೇ ತ್ಯಜಿಸಿದ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಈ ಎರಡೂ ಸಮಸ್ಯೆಗಳನ್ನು ಜಯಿಸಿ, ಸಮಾಜದಲ್ಲಿ ಬೆಳೆದವರೂ ನಮ್ಮ ನಡುವೆ ಇದ್ದಾರೆ. ಅಂತಹ ಸಾಧಕರಲ್ಲಿ ಕಟೀಲು ಮೂಲದ ಗೌರೀಶ್ ಕುಮಾರ್ ಕೂಡ ಒಬ್ಬರು. 32 ವರ್ಷದ ಗೌರೀಶ್ ಇವತ್ತು ಐದು ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಅವರ ಜೀವನದ ರೋಚಕ ಕಥೆಯನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಓದಿ ಅವರದ್ದೇ ಮಾತುಗಳಲ್ಲಿ…|ಬ್ಯಾಡನೂರು ಹರ್ಷವರ್ಧನ್, ಬೆಂಗಳೂರುಬಡತನವನ್ನು ಹೊದ್ದು ಮಲಗಿದ ಬಾಲ್ಯನಾನು ಹುಟ್ಟಿ, ಬೆಳೆದದ್ದು ಕಟೀಲಿನಲ್ಲಿ. ಅಪ್ಪ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಮ್ಮ ಮನೆಯಲ್ಲಿ ಇದ್ದರು. ನಾನೇ ದೊಡ್ಡ ಮಗ. ನನಗೆ ಮೂವರು ತಮ್ಮಂದಿರು, ಒಬ್ಬ ತಂಗಿ. ಹೀಗಾಗಿ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು. ಅಪ್ಪನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಬರುತ್ತಿತ್ತು. ಅದರಲ್ಲೇ ಏಳು ಮಂದಿಯ ಹೊಟ್ಟೆ ತುಂಬಿಸಬೇಕಿತ್ತು.ಶಾಲೆಗೆ ಹೋಗುತ್ತಿರುವಾಗ ಮನೆಯಲ್ಲಿ ಒಂದು ಹೊತ್ತು ಊಟ ಮಾತ್ರ ಸಿಗುತ್ತಿತ್ತು. ಬೆಳಗ್ಗೆ ಮನೆಯಲ್ಲಿ ತಿಂಡಿಯಿರುತ್ತಿರಲಿಲ್ಲ. ಶಾಲೆಯಲ್ಲಿ ಮಧ್ಯಾಹ್ನದ ಊಟವಾಗುತ್ತಿತ್ತು. ನಂತರ ರಾತ್ರಿ ಮನೆಯಲ್ಲಿ ಊಟ. ಹೀಗೆ ಕಷ್ಟಗಳನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಆದರೆ ಅಪ್ಪ ದೊಡ್ಡವನಾದ ನೀನು ಓದನ್ನು ಬಿಟ್ಟುಕೆಲಸ ಮಾಡು ಅಂತ ಒತ್ತಡ ಹೇರುತ್ತಿರಲಿಲ್ಲ. ಸಣ್ಣ ವಯಸ್ಸಿನಲ್ಲೆ ಮನೆಯ ಕಷ್ಟವನ್ನರಿತ ನಾನೇ, ನಾಲ್ಕನೇ ತರಗತಿಯಲ್ಲಿ ಅವರಿಗೆ ಕೆಲಸ ಮಾಡಿಕೊಂಡು ಓದುತ್ತೇನೆ ಅಂತ ಹೇಳಿಬಿಟ್ಟೆ. ಸಂಜೆ 5ರಿಂದ ರಾತ್ರಿ 8ರವರೆಗೆ ಹೋಟೆಲ್​ನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದೆ. ಪ್ರತಿದಿನ 10ರಿಂದ 15 ರೂಪಾಯಿ ಸಿಗುತ್ತಿತ್ತು. ಹೀಗೆ ನನ್ನ ಶಿಕ್ಷಣದ ಖರ್ಚನ್ನು ನಾನೇ ಭರಿಸುತ್ತಿದ್ದೆ. ನಂತರ ಪಿಯು, ಡಿಗ್ರಿ ಸಮಯದಲ್ಲಿ ರಜೆ ದಿನಗಳಲ್ಲಿ ಕೂಲಿ, ಗಾರೆ, ಪೇಂಟಿಂಗ್ ಕೆಲಸ ಮಾಡುವ ಮೂಲಕ ಓದಿನ ಖರ್ಚಿಗೆ ಹಣ ಸಂಪಾದಿಸಿಕೊಳ್ಳುತ್ತಿದ್ದೆ. ಬಿಕಾಂ ಕೂಡ ಕಟೀಲಿನಲ್ಲೆ ಮುಗಿಸಿದೆ. ಪದವಿ ಮುಗಿಯುವವರೆಗೂ ಮನೆಯಲ್ಲಿ ಸರಿಯಾದ ವಿದ್ಯುತ್ ಸಂಪರ್ಕವಿರಲಿಲ್ಲ. ಪಿಯುಸಿಗೆ ಹೊಲಿಸಿದ್ದ ಎರಡು ಪ್ಯಾಂಟುಗಳಲ್ಲೇ ಮೂರು ವರ್ಷಗಳ ಡಿಗ್ರಿ ಮುಗಿಸಿದ್ದೇನೆ.ಬೆಂಗಳೂರಿಗೆ ಬಂದಿದ್ದೇ ದೊಡ್ಡ ಸಾಧನೆಬಿಕಾಂ ಓದುತ್ತಿರುವಾಗಲೇ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಮಾಡುವ ಆಸೆ ಚಿಗುರಿತು. ತಡ ಮಾಡದೇ ಆಗಿನಿಂದಲೇ ಸಿದ್ಧತೆ ಪ್ರಾರಂಭಿಸಿದೆ. ಹಣವಿಲ್ಲದ ಕಾರಣ ಕಟೀಲಿನ ವಿಜಯ ಬ್ಯಾಂಕ್​ನಲ್ಲಿ ಲೋನ್ ಕೇಳಿದೆ. ಆಗ ಸಿಎ ಶಿಕ್ಷಣಕ್ಕೆ ಲೋನ್ ನೀಡುತ್ತಿರಲಿಲ್ಲ. ಆದರೆ ಯೋಗಾನಂದ್ ಎಂಬುವವರು ಪರ್ಸನಲ್ ಲೋನ್ ಕೊಡಿಸಿಕೊಟ್ಟರು. ನನ್ನ ಸಿಎ ಓದಿಗೆ ಮನೆಯಲ್ಲಿ ಬೆಂಬಲ ಇದ್ದರೂ, ಸಂಬಂಧಿಗಳ ವಿರೋಧವಿತ್ತು. ಆದರೆ ಐದು ವರ್ಷ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ ಎಂದು ಪಾಲಕರಿಗೆ ಹೇಳಿದೆ. ಅವರೂ ಒಪ್ಪಿಕೊಂಡರು. ಹೀಗೆ ಪದವಿ ಮುಗಿದ ತಕ್ಷಣ ಸಿಎ ಕನಸು ಹೊತ್ತು 2003ರಲ್ಲಿ ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದಿದ್ದೇ ನನ್ನ ದೊಡ್ಡ ಸಾಧನೆಗಳಲ್ಲಿ ಒಂದು. ಆದರೆ ಇಲ್ಲಿ ನಾನು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಚಿಕ್ಕ ರೂಮಿನಲ್ಲಿಮೂವರು ಸ್ನೇಹಿತರು ಬಾಡಿಗೆಗೆ ಸೇರಿಕೊಂಡೆವು. ಪ್ರತಿ ತಿಂಗಳ ಖರ್ಚಿಗೆ 650 ರೂಪಾಯಿ ಬೇಕಿತ್ತು.ಆದರೆ ನನ್ನ ಬಳಿ ಇರುತ್ತಿದ್ದುದೇ ಇನ್ನೂರು ರೂಪಾಯಿ. ಹೀಗಾಗಿಯೇ ಪ್ರತಿದಿನ ಬಿಟಿಎಂ ಲೇಔಟ್​ನಿಂದ ಕಸ್ತೂರಿ ಬಾ ರಸ್ತೆಯಲ್ಲಿದ್ದ ಕಚೇರಿಗೆ 11 ಕಿಲೋಮೀಟರ್ ನಡೆದುಕೊಂಡೇ ಓಡಾಡುತ್ತಿದ್ದೆ. ಮೊದಲ ಎರಡು ಮೂರು ತಿಂಗಳು ಪ್ರತಿದಿನ 22 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಓಡಾಟ. ಇದುವರೆಗೂ ನಾನು ಈ ಕಷ್ಟಗಳನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಹೀಗಾಗಿಯೇ ಈಗ ನನ್ನನ್ನು ನೋಡಿದವರು ಶ್ರೀಮಂತ ಕುಟುಂಬದಿಂದ ಬಂದಿರುವವನು ಎಂದೇ ಅಂದುಕೊಳ್ಳುತ್ತಾರೆ.ಬ್ರಾಹ್ಮರಿ ಅಕಾಡೆಮಿನಾನು ಓದಿನಲ್ಲಿ ಮುಂದಿದ್ದ ಕಾರಣ ನನ್ನ ಬಳಿ ಪಾಠ ಹೇಳಿಸಿಕೊಳ್ಳಲು ಮೊದಲು ಮೂವರು ಬಂದರು, ಮೂವರೂ ಪಾಸ್ ಆದರು. ಅವರನ್ನು ನೋಡಿ ಏಳು ಮಂದಿ ಬಂದರು. ಅವರಲ್ಲೂ ನಾಲ್ವರು ಪಾಸ್. ಕ್ರಮೇಣ ಕಲಿಸುವುದೇ ಪ್ಯಾಶನ್ ಆಯಿತು. ನಂತರ ಮಕ್ಕಳೇ ಬಂದು ನಾವೇ ಜಾಗ ಕೊಡುತ್ತೇವೆ, ನೀವು ಪಾಠ ಮಾಡಿ ಸಾಕು ಎಂದರು. ಅವರಿಗೆಲ್ಲ ಕೋಚಿಂಗ್ ಕ್ಲಾಸ್ ಶುರುಮಾಡಿದೆ. ಹೀಗೆ ಬ್ರಾಹ್ಮರಿ ಅಕಾಡೆಮಿ ಪ್ರಾರಂಭವಾಯಿತು. ಮೊದಲ ಮೂರು ಬ್ಯಾಚ್​ವರೆಗೂ ನಾನು ಹಣ ಪಡೆದಿರಲಿಲ್ಲ. ಕ್ರಮೇಣ ಅವರೇ ಹಣ ನೀಡತೊಡಗಿದರು. ಈ 8 ವರ್ಷಗಳಲ್ಲಿ ಬೆಂಗಳೂರು, ಕೇರಳ, ಪುಣೆ, ಹೈದರಾಬಾದ್, ಮಂಗಳೂರು, ಮೈಸೂರು, ವಿಜಯವಾಡಾಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಸಿಎ ಟೂಷನ್ಸ್ ಮಾಡಿದ್ದೇನೆ. ಇದು ನನಗೆ ದೊಡ್ಡ ಹೆಸರು ನೀಡಿತು. ನನ್ನ ವಿದ್ಯಾರ್ಥಿಗಳು ಸಿಎ ಪರೀಕ್ಷೆಯಲ್ಲಿ ಭಾರತದಲ್ಲೆ ಮೊದಲ ರ್ಯಾಂಕ್ ಪಡೆದಿದ್ದಾರೆ, ಸಿಎಸ್​ನಲ್ಲಿ ನಾಲ್ಕನೇ ರ್ಯಾಂಕ್, 11ನೇ ರ್ಯಾಂಕ್ ಪಡೆದಿದ್ದಾರೆ. ಹೀಗೆ ಸುಮಾರು 60ಕ್ಕೂ ಹೆಚ್ಚು ಮಂದಿ ರ್ಯಾಂಕ್ ಬಂದಿದ್ದಾರೆ. ಈಗ ವಿದ್ಯಾರ್ಥಿಗಳಿಗಾಗಿಯೇ ಆಪ್ ಕೂಡ ಮಾಡುತ್ತಿದ್ದೇವೆ.ಕನ್ನಡ ಮೀಡಿಯಂನಿಂದ ಇಂಗ್ಲಿಷ್​ಗೆನಾನು ಓದಿರೋದು ಕನ್ನಡ ಮೀಡಿಯಂ. ಆದರೆ ಸಿಎಗಾಗಿ ಇಂಗ್ಲಿಷ್ ಕಲಿಯಬೇಕಿತ್ತು. ಹೀಗಾಗಿ ಬೆಂಗಳೂರಿಗೆ ಬಂದ ಮೊದಲ ಎರಡು ವರ್ಷ ತುಂಬ ಕಷ್ಟವಾಯಿತು. ಆದರೆ ನನಗೆ ಗೊತ್ತಿದ್ದಿದ್ದು ಒಂದೇ, ಅದುಓದು. ಉಳಿದದ್ದೆಲ್ಲವನ್ನು ದೇವರ ಮೇಲೆ ಹಾಕಿ ಓದತೊಡಗಿದೆ. ಪುಸ್ತಕಗಳನ್ನು ಓದಿಯೇ ಇಂಗ್ಲಿಷ್ ಕಲಿತೆ. ನಂತರ ಸಿಎಸ್ (ಕಂಪನಿ ಸೆಕ್ರೆಟರಿ), ಎಂ.ಕಾಂ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಕೋರ್ಸ್ ನಂತರ ಈಗ ಪಿಎಚ್​ಡಿ ಮಾಡುತ್ತಿದ್ದೇನೆ.ಭವಿಷ್ಯದ ಯೋಜನೆಗಳುನನಗೆ ಗೊತ್ತಿರುವುದು ಬೆಳೆಯುವುದು, ಅದಕ್ಕೆ ಬೇಕಾದಷ್ಟು ಕಷ್ಟಪಡುವುದು. ಈ ಸಂಸ್ಥೆಯನ್ನು ಬೆಳೆಸಬೇಕು, ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡಬೇಕು. 2020ಕ್ಕೆ ನಾವು 202 ಉದ್ಯೋಗಿಗಳಾಗುವಷ್ಟರ ಮಟ್ಟಿಗೆ ಬೆಳೆಯುವ ಗುರಿಯಿದೆ. ಇನ್ನು 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಪಾಲಿಸಿ ಮಟ್ಟಕ್ಕೆ ಬೆಳೆಯಬೇಕು. ಈಗಾಗಲೇ ನಮ್ಮ ಸಂಸ್ಥೆ ಬೆಂಗಳೂರು, ಮೈಸೂರು, ಮಂಗಳೂರು, ಕೇರಳಗಳಲ್ಲಿದೆ. ಅದನ್ನು ಪುಣೆ, ಮುಂಬೈಗಳಿಗೆ ವಿಸ್ತರಣೆ ಮಾಡುವ ಪ್ಲ್ಯಾನ್ ಇದೆ. ಈಗ ವಾರ್ಷಿಕವಾಗಿ ಎರಡೂವರೆ ಕೋಟಿರೂಪಾಯಿ ಟರ್ನ್ ಓವರ್ ಆಗುತ್ತದೆ. 2020ಕ್ಕೆ ಅದನ್ನು 10 ಕೋಟಿಗೆ ಹೆಚ್ಚಿಸುವ ಗುರಿಯಿದೆ. ನಮ್ಮ ಕಂಪನಿಯೀಗ 5ರಿಂದ 6 ಕೋಟಿ ಬಾಳುತ್ತದೆ. ಅದು 2020ಕ್ಕೆ 25 ಕೋಟಿಗೆ ಏರಲಿದೆ.ಸಿಎ ಪಾಸ್ ಆಗಿದ್ದು ಸಿಎ ಮಾಡಿದ್ದು ಸಾಧನೆ ಅನ್ನೋದಕ್ಕಿಂತ ನನ್ನ ಹಠ ಅಂತ ಹೇಳಲು ಇಷ್ಟಪಡುತ್ತೇನೆ. ನಾನು ಬೆಂಗಳೂರಿನಲ್ಲಿ ಸಿಎ ಓದುವಾಗ ಅಮ್ಮ ಹುಷಾರು ತಪ್ಪಿದರು. ಅದರಿಂದಾಗಿ ಕೆಲ ತಿಂಗಳು ನಾನು ಓದು ನಿಲ್ಲಿಸಿ ಕೆಲಸಕ್ಕೆ ಸೇರಬೇಕಾಯಿತು. ಅಮ್ಮನ ಆರೋಗ್ಯ ಸರಿಹೋದ ಬಳಿಕ ಮತ್ತೆ ಸಿಎ ಮುಂದುವರಿಸಿದೆ. 2010ರಲ್ಲಿ ಸಿಎ ಮುಗಿಯಿತು. ಇನ್ಪೋಸಿಸ್​ನಲ್ಲಿ ಕೆಲಸ ದೊರೆಯಿತು. ಬಳಿಕ ಡೆಲಾಯ್್ಟ್ಸಲ್ಲಿ ಕೆಲಸ ಮಾಡಿದೆ. ಹೀಗೆ ನಾಲ್ಕು ವರ್ಷಗಳ ಕಾಲ ಅನುಭವ ಪಡೆದೆ. ನಂತರ ನಾನೇ ಏನಾದರೂ ಸ್ವಂತಮಾಡಲು ಯೋಚಿಸಿದೆ. ಹೀಗೆ ಪ್ರಾರಂಭವಾಗಿದ್ದು ಜಿಕೆಸಿ ಆಂಡ್ ಕಂಪನಿ.ಜಿಕೆಸಿಎ ಪ್ರಾರಂಭನಾನೀಗ ಐದು ಕಂಪನಿಗಳನ್ನು ಮುನ್ನಡೆಸುತ್ತಿದ್ದೇನೆ. ಬ್ರಾಹ್ಮರಿ ಅಕಾಡೆಮಿ (ಟೂಷನ್ಸ್), ಜಿಕೆಸಿ ಆಂಡ್ ಕಂಪನಿ (ಚಾರ್ಟರ್ಡ್ ಅಕೌಂಟ್), ಜಿಕೆ ಕಾರ್ಪೆರೇಟ್ ಅಡ್ವೈಸರಿ ಪ್ರೖೆವೇಟ್ ಲಿಮಿಟೆಡ್ (ಸ್ಟ್ರಾಟೆಜಿಕ್ ಕನ್ಸಲ್ಟನ್ಸಿ), ಬ್ರಾಹ್ಮರಿ ಫೌಂಡೇಶನ್ (ಎನ್​ಜಿಒ). ಇಲ್ಲಿ ಒಟ್ಟು 37 ಜನ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ 10 ಮಂದಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಎ, ಸಿಎಸ್ ಉಚಿತ ತರಬೇತಿ ನೀಡುತ್ತೇವೆ. ನಮ್ಮ ಕಚೇರಿಗೆ ಟೀ ಕೊಡಲು ಬರುತ್ತಿದ್ದ ಹುಡುಗನನ್ನೇ ಕೆಲಸ ಬಿಡಿಸಿ ಶಾಲೆಗೆ ಸೇರಿಸಿದ್ದೇವೆ. ಆಗಾಗ ಎನ್​ಜಿಒಗಳಿಗೆ ಆಹಾರ ಧಾನ್ಯ ನೀಡುತ್ತೇವೆ. ನನ್ನ ಬಾಲ್ಯದಲ್ಲಿನನಗೂ ಇಂತಹ ಸಹಾಯಗಳು ಬಂದಿದ್ದವು. ಈಗ ನಾನು ಬೇರೆಯವರಿಗೆ ಅದೇ ರೀತಿ ಸಹಾಯ ಮಾಡುತ್ತಿದ್ದೇನೆ.ನಂಬಿಕೆಯೇ ಸಾಧನೆಯ ತಳಹದಿಪಿಯುಸಿ ಓದುವಾಗ ಒಬ್ಬರು ಲೆಕ್ಚರರ್ ನನ್ನನ್ನು ಕರೆದು ಚೆನ್ನಾಗಿ ಓದು ನಿನಗೆ ಒಳ್ಳೆ ಭವಿಷ್ಯವಿದೆ ಅಂತ ಹೇಳಿದರು. ಹಾಗೇ ಬೆಳೆಯಲು ಎರಡು ದಾರಿಯಿದೆ. ಒಂದು ಶಿಕ್ಷಣದ ಆಧಾರದ ಮೇಲೆ ಮತ್ತೊಂದುನೇಮ್ ಫೇಮ್ ಮೂಲಕ ಎಂದರು. ನನಗೆ ಎರಡನೇ ಆಯ್ಕೆಯಿಲ್ಲ. ಹೀಗಾಗಿಯೇ ಓದನ್ನು ಆಯ್ಕೆ ಮಾಡಿಕೊಂಡು, ಮುಂದಿನ ಐದು ವರ್ಷಗಳ ಕಾಲ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ಅದೇ ನನ್ನ ಈ ಬೆಳವಣಿಗೆಗೆಕಾರಣ. ಇದುವರೆಗಿನ ಸಾಧನೆ, ಮುಂದೆ ಮಾಡುವ ಸಾಧನೆ ಎಲ್ಲವನ್ನು ನಾನು ಕಟೀಲು ದುರ್ಗಾಪರಮೇಶ್ವರಿಗೆ ಅರ್ಪಿಸಬೇಕು ಅಂತ ಇಷ್ಟಪಡುತ್ತೇನೆ. ಯಾಕೆಂದರೆ ಆ ಕ್ಷೇತ್ರದ ಮಹಿಮೆಯೇ ಅಂಥದ್ದು. ನಾನು ಅಲ್ಲಿರದಿದ್ದರೆ, ಈ ಮಟ್ಟಿಗೆಬೆಳೆಯಲು ಸಾಧ್ಯವಾಗುತ್ತಿರಲಿಲ್ಲವೇನೋ. ಒಟ್ಟಿನಲ್ಲಿ ಗಟ್ಟಿಯಾದ ನಂಬಿಕೆಯೇ ನನ್ನ ಸಾಧನೆಯ ತಳಹದಿ.ಯುವಪೀಳಿಗೆಗೆ ಕಿವಿಮಾತುನನಗೆ ಹೇಳಿಕೊಟ್ಟವರು ಕಡಿಮೆ. ಕನಸು ಕಾಣಬೇಕು. ಗುರಿ ಇರಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಈಗ್ಗೆ ಏಳೆಂಟು ವರ್ಷಗಳ ಹಿಂದೆ ನನ್ನ ಬಳಿ ಏನೂ ಇರಲಿಲ್ಲ. ಇವತ್ತು ನನ್ನದೇ ಕಂಪನಿಗಳಿವೆ. ನೀವು ಕಷ್ಟಪಡಲು ರೆಡಿಯಿದ್ದರೆ, ಎಲ್ಲವೂ ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ. ನನಗೆ ಗೊತ್ತಿರುವಂತೆ ಒಂದೊಂದು ದಿನ 18ರಿಂದ 19 ತಾಸು ಓದಿರುವ ನೆನಪೂ ಇದೆ. ಹಣವಿಲ್ಲದಿದ್ದರೆ, ಪಾರ್ಟ್ ಟೈಮ್ ಕೆಲಸ ಮಾಡಿ.ಸಾಧನೆ ಮಾಡುವಾಗ ಅವಮಾನಗಳು ಇದ್ದಿದ್ದೇ. ಅದರ ಬಗ್ಗೆ ಯೋಚಿಸಲೇಬೇಡಿ. ಒಂದು ಸರಿಯಾದ ಗುರಿ ಇರಬೇಕು, ಅದನ್ನು ಪಡೆಯುವ ಛಲ ಇರಬೇಕು. ಅವೆರಡೂ ಇದ್ದರೆ ಎಷ್ಟೇ ಕಷ್ಟ ಬಂದರೂ ಸಾಧಿಸಬಹುದು. ಕಷ್ಟಗಳು ಕ್ಷಣಿಕ.

ಗುರುವನ್ನು ಸ್ಮರಿಸುವ ಪುಣ್ಯ ದಿನ.

image

ಇಂದು(19-7-2016) ‘ವ್ಯಾಸಪೂರ್ಣಿಮೆ’, ಗುರುವನ್ನು ಸ್ಮರಿಸುವ ಪುಣ್ಯ ದಿನ.
ವ್ಯಾಸಪೂರ್ಣಿಮೆಯಿಂದ ಚಾತುರ್ಮಾಸ್ಯ ವ್ರತಪ್ರಾರಂಭ.

ಗುರು ಪೂರ್ಣಿಮೆಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನ ನೀಡಲಾಗಿದ್ದು, ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯನ್ನು ವಿಶೇಷ ಮಹತ್ವ ನೀಡಲಾಗಿರುವ ಗುರು ಪರಂಪರೆಯನ್ನು ಸ್ಮರಿಸಿ ಪೂಜಿಸುವ ದಿನವನ್ನಾಗಿ ಆಚರಿಸಲಾಗುತ್ತದೆ.ವೇದಗಳನ್ನು ವಿಂಗಡಿಸಿ ಮಾನವ ಕುಲದ ಉದ್ಧರಿಸುವುದಕ್ಕಾಗಿ ಸಾಕ್ಷಾತ್ ವಿಷ್ಣುವೇ ವ್ಯಾಸರ ರೂಪದಲ್ಲಿ ಅವತರಿಸುತ್ತಾನೆ, ವೇದಗಳನ್ನು ವಿಂಗಡಿಸಿದ ಕಾರಣದಿಂದ ವ್ಯಾಸರಿಗೆ ವೇದ ವ್ಯಾಸ ಎಂಬ ಹೆಸರು ಬಂದಿದ್ದು, ವೇದವ್ಯಾಸರು ಅವತರಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನೇ ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆಯೆಂದು ಆಚರಿಸಲಾಗುತ್ತದೆ. ಈ ಬಾರಿ ಜು.19 ರಂದು ವ್ಯಾಸ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ವೇದ, ಪುರಾಣ,ಶಾಸ್ತ್ರಾದಿಗಳೆಲ್ಲವೂ ಓರ್ವ ವ್ಯಕ್ತಿಗೆ ಗುರುವಿನ ಮಾರ್ಗದರ್ಶನ ಹಾಗೂ ಅಗತ್ಯತೆಯನ್ನು ಸ್ಪಷ್ಟವಾಗಿ ತಿಳಿಸಿದ್ದು ಗುರುವಿನ ಮಹಿಮೆಯನ್ನುಕೊಂಡಾಡಿವೆ.  ಭಾರತದಲ್ಲಿ ಈ ವರೆಗೂ ಅದೆಷ್ಟೋ ಗುರುಗಳು ಆಗಿಹೋಗಿದ್ದಾರೆ. ಆದರೆ ವ್ಯಾಸ ಪೂರ್ಣಿಮೆಯಂದೇ ಗುರುವನ್ನು ಆರಾಧಿಸಲು ಮುಖ್ಯ ಕಾರಣವೇನೆಂದರೆ  ‘ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ, ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ’ ಎಂದು ಹೇಳಿರುವಂತೆ ವ್ಯಾಸರುವೇದಗಳನ್ನು ನೀಡಿದ ಸಾಕ್ಷಾತ್ ವಿಷ್ಣುವಿನ ಅವತಾರವಾಗಿರುವುದರಿಂದ ವ್ಯಾಸ ಪೂರ್ಣಿಮೆಯ ದಿನದಂದೇ ಗುರುವನ್ನು ಪೂಜಿಸಲಾಗುತ್ತದೆ.ಆಷಾಢ ಹುಣ್ಣಿಮೆಯಂದು ವ್ಯಾಸಪೂಜೆ ಮಾಡುವ ಮೂಲಕ ಸನ್ಯಾಸಿಗಳು(ಯತಿಗಳು) ಚಾತುರ್ವಸ್ಯವ್ರತದ ಸಂಕಲ್ಪ ಮಾಡು ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆಯ ಮತ್ತೊಂದು ವಿಶೇಷ. ಪರಿವ್ರಾಜಕರಾಗಿರುವ ಸನ್ಯಾಸಿಗಳು ಒಂದು ಪಕ್ಷವನ್ನು ಒಂದು ಮಾಸದಂತೆ ಗಣಿಸಿ ಒಟ್ಟು ಎರಡು ತಿಂಗಳುಗಳಲ್ಲಿ ಚಾತುರ್ವಸ್ಯವನ್ನು ಪೂರೈಸುವ ಪರಿಪಾಠ ಇದೆ. ಚಾತುರ್ಮಾಸ್ಯಕ್ಕೆ ಸಂಕಲ್ಪಿದ ದಿನದಿಂದ ಸನ್ಯಾಸಿಗಳು ಎರಡು ತಿಂಗಳ ಕಾಲ(ಅಧಿಕ ಮಾಸ ಬಂದಲ್ಲಿ ಮೂರು ತಿಂಗಳು) ತನಕ ಸಂಚಾರ ಕೈಗೂಳ್ಳದೆ; ವ್ರತ ಕೈಗೊಂಡ ಕ್ಷೇತ್ರದ ವ್ಯಾಪ್ತಿಯಲ್ಲೇ ವ್ರತಕಾಲವನ್ನು ಕಳೆಯುತ್ತಾರೆ. ವ್ರತಸಮಾಪ್ತಿಯ ಬಳಿಕ ಸೀಮೋಲ್ಲಂಘನ ಮಾಡಿ ಮತ್ತೆ ಸಂಚಾರ ಪ್ರಾರಂಭ ಮಾಡುತ್ತಾರೆ.ವ್ಯಾಸ ಪೂಜೆ ವಿಧಾನ:ವ್ಯಾಸ ಪೂಜೆ ಅಂಗವಾಗಿ ನಡೆಸಲಾಗುವ ಗುರುಪೂಜೆ ವೇಳೆ ಪ್ರತಿ ಗುಂಪಿನಲ್ಲೂ 5(ಪಂಚಕ) ಆಚಾರ್ಯಾರನ್ನೊಳಗೊಂಡ 3 ಗುಂಪಿಗೆ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ಪೂಜೆ ಕೃಷ್ಣ ಪಂಚಕ ಇಲ್ಲಿ ಶ್ರೀ ಕೃಷ್ಣನನ್ನು ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿ ಕೃಷ್ಣನ ಸುತ್ತ ಸನಕ, ಸನಂದನ, ಸನತ್ ಕುಮಾರ, ಸನತ್ ಸುಜಾತರುಗಳನ್ನು ಅನುಕ್ರಮವಾಗಿ ಪೂರ್ವ, ದಕ್ಷಿಣ ಪಶ್ಚಿಮ ಹಾಗೂ ಉತ್ತರಕ್ಕೆ ಪ್ರತಿಷ್ಠಾಪಿಸಿ ಕೃಷ್ಣ ಅಷ್ಟೋತ್ತರ ಅರ್ಚನೆ ಮೂಲಕ ಪೂಜೆ ಸಲ್ಲಿಸಲಾಗುತ್ತೆ.ಇನ್ನು ಎರಡನೇ ಹಂತದಲ್ಲಿ ವ್ಯಾಸ ಪಂಚಕಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ವೇದ ವ್ಯಾಸರನ್ನು ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿ ಅವರ ನಾಲ್ವರು ಶಿಷ್ಯರಾದ ಸುಮಂತು, ಜೈಮಿನಿ, ವೈಶಂಪಾಯನ, ಪೈಲ ಮಹರ್ಷಿಗಳನ್ನು ಅನುಕ್ರಮವಾಗಿ ವ್ಯಾಸರ ಪೂರ್ವ ದಕ್ಷಿಣ, ಪಶ್ಚಿಮ ಹಾಗೂ ಉತ್ತರಕ್ಕೆ  ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.ಮೂರನೇ ಹಾಗೂ ಕೊನೆಯ ಹಂತದಲ್ಲಿ ಅದ್ವೈತ ಸಿದ್ಧಾಂತದ ಯತಿಗಳು ಶಂಕರಾಚಾರ್ಯ ಪಂಚಕಕ್ಕೆ ಪೂಜೆ ಸಲ್ಲಿಸುತ್ತಾರೆ. ( ಅದ್ವೈತ ಸಿದ್ಧಾಂತದ ಹೊರತಾಗಿರುವ ಮಠಗಳಲ್ಲಿ ಆಯಾ ಮಠದ ಸಂಪ್ರದಾಯ ಪಾಲಿಸಲಾಗುತ್ತದೆ) ಇಲ್ಲಿ ಆದಿ ಶಂಕರಾಚಾರ್ಯರನ್ನು ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿ ಶಂಕರರ ನಾಲ್ವರು ಶಿಷ್ಯರಾದ ಪದ್ಮಪಾದಾಚಾರ್ಯ, ಸುರೇಶ್ವರಾಚಾರ್ಯ, ಹಸ್ತಾಮಲಕಾಚಾರ್ಯ ಹಾಗೂ ತೋಟಕಾಚಾರ್ಯರನ್ನು ನಾಲ್ಕೂ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸದಾಶಿವ, ವೇದವ್ಯಾಸರಿಂದ ಪ್ರಾರಂಭವಾಗಿ ಆಯಾ ಮಠಗಳ ಗುರು ಪರಂಪರೆಗೂ ಸಹ ಪೂಜೆ ಸಲ್ಲಿಸಿ, ಅಲ್ಲಿನ ಪೀಠಾಧಿಪತಿಗಳು, ಯತಿಗಳು ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಳ್ಳುತ್ತಾರೆ.

ಪಾಕೆಟ್ ಸ್ಕ್ಯಾನರ್ ಜೇಬಲ್ಲೇ ಒಯ್ಯಬಹುದಾದ ಸಾಧನ.

ಪಾಕೆಟ್ ಸ್ಕ್ಯಾನರ್ ಜೇಬಲ್ಲೇ ಒಯ್ಯಬಹುದಾದ ಸಾಧನ

ಕಿರಣ್ ಇಜಿಮಾನ್, ಬೆಂಗಳೂರು
ಇದು ಮಾಹಿತಿ ಯುಗ, ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕೆಲಸಕ್ಕೆ ಮತದಾರರ ಗುರುತು ಕಾರ್ಡ್, ಆಧಾರ್ ಕಾರ್ಡ್, ವಿದ್ಯಾಭ್ಯಾಸದ ಪ್ರಮಾಣ ಪತ್ರಗಳು, ವಿವಿಧ ಸರ್ಟಿಫಿಕೇಟ್​ಗಳು ಎಂದೆಲ್ಲ ವಿವಿಧ ಕಡತಗಳು, ಪತ್ರಗಳು ಬೇಕಾಗುತ್ತವೆ. ಅವೆಲ್ಲವನ್ನೂ ಎಲ್ಲೆಡೆಗೂ ಒಯ್ಯುವುದು ಕಷ್ಟ. ಇತ್ತೀಚೆಗೆ ಎಲ್ಲ ವಿಧದ ಕೆಲಸ ಕಾರ್ಯಕ್ಕೆ ಆನ್​ಲೈನ್ ಅರ್ಜಿ ಸಹ ಬೇಕಾಗುತ್ತದೆ. ಅದಕ್ಕೆ ನಾವು ಹಲವು ಐಡಿ ಕಾರ್ಡ್​ಗಳು, ಫೋಟೋ, ಸರ್ಟಿಫಿಕೇಟ್ ಎಂದೆಲ್ಲ ಲಗತ್ತಿಸಬೇಕಾಗುತ್ತದೆ, ಅವುಗಳನ್ನು ಸ್ಕ್ಯಾನ್ ಮಾಡಿ ಜೆಪೆಗ್ ಫಾರ್ಮಟ್​ಗೆ ಪರಿವರ್ತಿಸಿ ಅಪ್​ಲೋಡ್ ಮಾಡಬೇಕಿರುತ್ತದೆ. ಆನ್​ಲೈನ್​ನಲ್ಲೂ ಸಾಫ್ಟ್​ಕಾಪಿಗಳನ್ನು ಹೊಂದಿರುವುದು ಅಗತ್ಯವಾಗಿರುತ್ತದೆ. ಇಂಥ ಸಂದರ್ಭದಲ್ಲಿ ನಾವು ಸ್ಕ್ಯಾನರ್​ಗಳನ್ನು ಅವಲಂಬಿಸುವುದು ಅನಿವಾರ್ಯ. ಕೆಲವೊಮ್ಮೆ ನಮಗೆ ಬೇಕಾದಾಗ ಮತ್ತು ಬೇಕಿರುವ ಸ್ಥಳದಲ್ಲಿ ಸ್ಕ್ಯಾನರ್ ಸೌಲಭ್ಯ ದೊರೆಯದೆ ಪರದಾಡಬೇಕಾಗುತ್ತದೆ.

ಇಂಥ ಸಂದರ್ಭದಲ್ಲಿ ಸರಳ ಉಪಾಯದ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇದಕ್ಕೆ ಮಾಡಬೇಕಾಗಿರುವುದಿಷ್ಟೆ, ಸ್ಮಾರ್ಟ್​ಫೋನ್​ನಲ್ಲಿ ಡ್ಯಾಕುಮೆಂಟ್-ಫೋಟೋ ಸ್ಕ್ಯಾನರ್ ಆಪ್ ಹಾಕಿಕೊಂಡರೆ ಸಾಕು. ಪ್ಲೇಸ್ಟೋರ್, ಆಪ್ ಸ್ಟೋರ್​ನಲ್ಲಿ ಉಚಿತವಾಗಿ ದೊರೆಯುವ ಕೆಲವು ಡ್ಯಾಕುಮೆಂಟ್ ಸ್ಕ್ಯಾನರ್​ಗಳ ಪರಿಚಯ ಇಲ್ಲಿದೆ. ಇವುಗಳ ಮೂಲಕ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ, ಕಳುಹಿಸುವುದು, ಅಟ್ಯಾಚ್ ಮಾಡುವುದು ತೀರಾ ಸರಳ. ಅಗತ್ಯದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸ್ಮಾರ್ಟ್​ಫೋನ್​ನಲ್ಲಿ ಇಟ್ಟುಕೊಳ್ಳುವುದೂ ಪ್ರಯೋಜನಕಾರಿ.

ಆಫೀಸ್ ಲೆನ್ಸ್:

ಆಂಡ್ರಾಯ್್ಡ ಐಒಎಸ್ ಮತ್ತು ವಿಂಡೋಸ್​ಗೆ ಲಭ್ಯ
ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿರುವ ಈ ಆಪ್ ಸರಳವಾಗಿ ಸ್ಕ್ಯಾನ್ ಅಗತ್ಯಗಳನ್ನು ಪೂರೈಸುತ್ತದೆ. ಫೋಟೋ, ಸರ್ಟಿಫಿಕೇಟ್ ಸ್ಕ್ಯಾನ್ ಮಾಡುತ್ತಿದ್ದಂತೆ ಅದನ್ನು ಬೇಕಾದಷ್ಟು ಕ್ರಾಪ್ ಮಾಡುತ್ತದೆ, ಅಗತ್ಯವಿಲ್ಲದ ಸ್ಥಳವನ್ನು ಕ್ಲೀನ್ ಮಾಡಿ, ನೀಟಾದ ಫೈಲ್ ಸಿದ್ಧಪಡಿಸುತ್ತದೆ. ನಂತರ ಅದನ್ನು ನೀವು ಬಯಸಿದ ರೀತಿ ಜೆಪೆಗ್, ಎಂಎಸ್ ವರ್ಡ್, ಪವರ್​ಪಾಯಿಂಟ್ ಅಥವಾ ಪಿಡಿಎಫ್​ಗೆ ಪರಿವರ್ತಿಸುತ್ತದೆ.

ಕ್ಯಾಮ್್ಕ್ಯಾನರ್:

ಆಂಡ್ರಾಯ್್ಡ ಐಒಎಸ್ ಮತ್ತು ವಿಂಡೋಸ್​ಗೆ ಲಭ್ಯ
ಜಗತ್ತಿನಾದ್ಯಂತ 10 ಕೋಟಿಗೂ ಹೆಚ್ಚು ಜನರು ಬಳಸುವ ಕ್ಯಾಮ್್ಕ್ಯಾನರ್ ಒಂದು ಉಚಿತ ಆಪ್. ಅತ್ಯಂತ ಜನಪ್ರಿಯವಾಗಿದೆ. ಸ್ಕ್ಯಾನ್, ಶೇರ್, ಸ್ಟೋರ್ ಮತ್ತು ಸಿಂಕ್ ಎಂಬೆಲ್ಲ ಹಲವು ಆಯ್ಕೆಗಳನ್ನು ನೀಡಿರುವ ಈ ಆಪ್ ಸ್ಮಾರ್ಟ್​ಫೋನ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್​ನಲ್ಲೂ ಬಳಕೆಯಾಗುತ್ತಿದೆ. ಸ್ಕ್ಯಾನ್ ಮಾಡಿದ ಫೈಲ್​ಗೆ ಬೇಕಾದಂತೆ ಎಡಿಟ್ ಮಾಡುವ ಆಯ್ಕೆ, ಅದಕ್ಕೆ ಅಗತ್ಯವಿದ್ದಲ್ಲಿ ಹೆಚ್ಚುವರಿ ಟೆಕ್ಸ್ಟ್, ಗ್ರಾಫಿಕ್ ಸೇರಿಸುವ ಸೌಲಭ್ಯವೂ ಕ್ಯಾಮ್್ಕ್ಯಾನರ್​ನಲ್ಲಿದೆ. ಫೈಲ್​ಗಳನ್ನು ಹಂಚಿಕೊಳ್ಳಲು ಹಲವು ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ.

ಫಾಸ್ಟ್ ಸ್ಕ್ಯಾನರ್:

ಆಂಡ್ರಾಯ್್ಡ ಮತ್ತು ಐಒಎಸ್​ಗೆ ಲಭ್ಯ
ಪುಸ್ತಕ, ಹಲವು ಪುಟ ಹೊಂದಿರುವ ಫೈಲ್​ನ್ನು ಸುಲಭವಾಗಿ ಈ ಅಪ್ ಸ್ಕ್ಯಾನ್ ಮಾಡುತ್ತದೆ. ಸ್ಪಷ್ಟ ಚಿತ್ರ ಸ್ಕ್ಯಾನ್ ಇದರ ವಿಶೇಷ, ಜೆಪೆಗ್, ಪಿಡಿಎಫ್ ಆಯ್ಕೆಯೂ ಇದೆ. ಹಲವು ಪುಟ ಹೊಂದಿದ್ದರೆ ಈ ಆಪ್ ನಿರಂತರ ಪ್ರತಿ ಪುಟವನ್ನೂ ವೇಗವಾಗಿ ಸ್ಕ್ಯಾನ್ ಮಾಡಿ ಒಂದೇ ಫೈಲ್ ಬೇಕಾದಲ್ಲಿ ಆಯ್ಕೆ ನೀಡುತ್ತದೆ.

ಎವರ್​ನೋಟ್ ಸ್ಕ್ಯಾನೇಬಲ್:

ಐಒಎಸ್​ಗೆ ಲಭ್ಯ
ಎವರ್​ನೋಟ್ ಆಭಿವೃದ್ಧಿಪಡಿಸಿರುವ ಈ ಆಪ್ ನೀವು ಬಯಸಿದಂತೆ ನಿಮ್ಮ ಫೈಲ್​ಗಳನ್ನು ಸ್ಕ್ಯಾನ್ ಮಾಡಲು ಸಹಕಾರಿ. ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ನೀಡುತ್ತದೆ ಈ ಅಪ್, ಆಪಲ್​ನ ಕ್ಯಾಮರಾ ಮೂಲಕ. ಡ್ಯಾಕುಮೆಂಟ್ ಮೇಲೆ ಫೋಕಸ್ ಮಾಡುತ್ತಿದ್ದಂತೆ ತಾನಾಗಿಯೇ ಈ ಆಪ್ ಸ್ಕ್ಯಾನ್ ಮುಗಿಸುತ್ತದೆ. ನಂತರ ಅದನ್ನು ಎಡಿಟ್ ಮಾಡಿ ಬೇಕಾದ ಫಾರ್ಮಟ್​ಗೆ ಪರಿವರ್ತಿಸಬಹುದು, ಜತೆಗೆ ಇ ಮೇಲ್ ಅಥವಾ ಎಸ್​ಎಂಎಸ್ ಮೂಲಕವೂ ಸ್ಕ್ಯಾನ್ ಮಾಡಿದ ಫೈಲ್ ಹಂಚಿಕೊಳ್ಳುವ ವ್ಯವಸ್ಥೆ ಇದೆ.

ಜೀನಿಯಸ್ ಸ್ಕ್ಯಾನ್:

ಆಂಡ್ರಾಯ್್ಡ ಐಒಎಸ್ ಮತ್ತು ವಿಂಡೋಸ್​ಗೆ ಲಭ್ಯ
ಜೀನಿಯಸ್ ಒಂದು ಉತ್ತಮ ಸ್ಕ್ಯಾನರ್ ಆಪ್ ಆಗಿದ್ದು, 15 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿದೆ. ಜೀನಿಯಸ್ ಆಪನ್ನು ಗ್ರಿಝ್ಜಿ ಲ್ಯಾಬ್ಸ್ ಅಭಿವೃದ್ಧಿಪಡಿಸಿದೆ. ಎಲ್ಲ ವಿಧದ ಫೋಟೋ, ಡಾಕ್ಯುಮೆಂಟ್​ಗಳನ್ನು ಈ ಆಪ್ ಸ್ಕ್ಯಾನ್ ಮಾಡುತ್ತದೆ. ನಂತರ ಬೇಕಾದಂತೆ ಜೆಪೆಗ್ ಅಥವಾ ಪಿಡಿಎಫ್ ತಯಾರಿಸಲು ನೆರವಾಗುತ್ತದೆ. ಸ್ಕ್ಯಾನ್ ಮಾಡಿದ ಫೈಲ್​ಗಳನ್ನು ಹಂಚಿಕೊಳ್ಳುವುದು ಕೂಡಾ ತೀರಾ ಸುಲಭ. ಸ್ಕ್ಯಾನ್ ಮಾಡಿದ ಫೈಲ್​ನ್ನು ಕಪ್ಪು-ಬಿಳುಪು ಆಗಿ ಕೂಡಾ ಪರಿವರ್ತಿಸುತ್ತದೆ.

ಈ ಆಯ್ಕೆ ಕೆಲವು ಸಂದರ್ಭದಲ್ಲಿ ಪ್ರಯೋಜನಕಾರಿ. ಜತೆಗೆ ಬೇಸಿಕ್ ಎಡಿಟಿಂಗ್ ಆಯ್ಕೆ ಕೂಡಾ ಲಭ್ಯ.

ಕಾಗೋ ಕಳ್ಳಸಾಗಣೆ ಪತ್ತೆಗೂ ಸ್ಕ್ಯಾನರ್:
ಅಂತಾರಾಷ್ಟ್ರೀಯ ಕಾಗೋ ಶಿಪ್​ಗಳು ನೂರಾರು ಬೃಹತ್ ಕಂಟೇನರ್​ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಪ್ರತಿಯೊಂದನ್ನು ಶೋಧಿಸುವುದು, ಪತ್ತೆ ಹಚ್ಚುವುದು ಸುಲಭವಲ್ಲ. ಇದರಿಂದಾಗಿ, ಕಂಟೇನರ್ ಮೂಲಕ ಸುಲಭವಾಗಿ ಮೌಲ್ಯಯುತ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಲಂಡನ್​ನ ಯುನಿವರ್ಸಿಟಿ ಕಾಲೇಜ್​ನ ಕಂಪ್ಯೂಟರ್ ಸೈನ್ಸ್ ವಿಭಾಗದವರು ಇದಕ್ಕೊಂದು ಪರಿಹಾರ ಕಂಡುಹಿಡಿದಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸುವ ಎಕ್ಸ್ ರೇ ಕಿರಣದ ಪರೀಕ್ಷೆಯನ್ನು ಕಂಟೇನರ್ ಸ್ಕ್ಯಾನ್​ಗೆ ಬಳಸಿ ಯಶಸ್ವಿಯಾಗಿದ್ದಾರೆ. ಕಂಟೇನರ್ ಮೂಲಕ ಇದನ್ನು ಹಾಯಿಸಿ ಪರೀಕ್ಷಿಸಿದಾಗ ಸ್ಕ್ಯಾನರ್​ನಲ್ಲಿ ಕಂಟೇನರ್ ಒಳಗೇನಿದೆ ಎಂಬ ಮಾಹಿತಿ ಮತ್ತು ಚಿತ್ರ ಸ್ಕ್ರೀನ್​ನಲ್ಲಿ ಮೂಡುತ್ತದೆ. ಮುಖ್ಯವಾಗಿ ಕಾರುಗಳನ್ನು ಕಂಟೇನರ್ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದು, ಇದರ ಪತ್ತೆಯಲ್ಲಿ ಈ ಸ್ಕ್ಯಾನರ್​ಗಳು ಶೇ. 100 ಯಶಸ್ವಿಯಾಗಿವೆ. ಈ ರೀತಿಯ ಸಂಶಯಾತ್ಮಕ ವಸ್ತುಗಳು ಕಾಗೋದಲ್ಲಿ ಪತ್ತೆಯಾದಾಗ ಸ್ಕ್ಯಾನರ್ ಅಲರ್ಟ್ ನೀಡುತ್ತದೆ. ಈ ಪರೀಕ್ಷೆಯನ್ನು ಸಣ್ಣ ಪ್ರಮಾಣದಲ್ಲಿ ಮೆಟ್ರೋ, ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ಸ್ಕ್ಯಾನರ್​ಗೆ ಬಳಸುತ್ತಿದ್ದರೂ ಇದೀಗ ಕಾಗೋ ಕಂಟೇನರ್​ನಲ್ಲಿ ಬಳಸಿರುವುದರಿಂದ ಕಳ್ಳಸಾಗಣೆ ಪತ್ತೆ ಸುಲಭವಾಗಲಿದೆ.

ಇ–ಫೈಲಿಂಗ್‌: ‘ಫಾರಂ 16’ ಬಳಕೆ ಹೇಗೆ?

ಇ–ಫೈಲಿಂಗ್‌: ‘ಫಾರಂ 16’ ಬಳಕೆ ಹೇಗೆ?

6 Jul, 2016
@ ಅರ್ಚಿತ್‌ ಗುಪ್ತ ಮತ್ತು ಆನಂದ್‌ ಧೆಲಿಯಾ.
  
ಮಾಸಿಕ ವೇತನ ಪಡೆಯುವವರು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದರೆ, ಪ್ರತಿ ವರ್ಷ ಜುಲೈ ತಿಂಗಳಲ್ಲಿ ತಮ್ಮ ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್‌) ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇದಕ್ಕೆ ಉದ್ಯೋಗದಾತರು ನೀಡುವ ‘ಫಾರಂ ನಂಬರ್‌ 16’ ಆಧರಿಸಿ ‘ಇ–ಫೈಲಿಂಗ್‌’ ಮಾಡುವ ಅಗತ್ಯವನ್ನು ಅರ್ಚಿತ್‌ ಗುಪ್ತ  ಮತ್ತು ಆನಂದ್‌ ಧೆಲಿಯಾ ಅವರು ಇಲ್ಲಿ ವಿವರಿಸಿದ್ದಾರೆ.

ಉದ್ಯೋಗದಲ್ಲಿದ್ದು, ಸಂಬಳದ ರೂಪದಲ್ಲಿ ಆದಾಯ ಪಡೆಯುತ್ತಿರುವವರಿಗೆ ‘ಫಾರಂ ನಂಬರ್‌ 16’ ಅತ್ಯಂತ ಮುಖ್ಯ ದಾಖಲೆ. ಉದ್ಯೋಗದಾತರಿಂದ  ಉದ್ಯೋಗಿಗಳು ಪಡೆಯುವ ಈ ದಾಖಲೆ ನಿಜವಾಗಿಯೂ ಒಂದು ಪ್ರಮಾಣಪತ್ರ.

ಈ ‘ಫಾರಂ 16’  ಅನ್ನು ಉದ್ಯೋಗ ನೀಡಿದ್ದಕ್ಕೆ ಮತ್ತು ಮಾಡಿದ ಕೆಲಸಕ್ಕೆ ಪಡೆಯುವ ವೇತನಕ್ಕೆ ಪುರಾವೆ ಎಂದೂ ನಾವು ಭಾವಿಸಬಹುದು. ಒಂದು ನಿರ್ದಿಷ್ಟ ಅವಧಿಗೆ ಉದ್ಯೋಗದಾತರಿಂದ ಸಂಬಳ ಪಡೆದಿದ್ದೀರಿ ಮತ್ತು ಮಾಲೀಕರು  ನೀಡಿದ ಸಂಬಳದಲ್ಲಿ ಮೂಲದಲ್ಲಿಯೇ ತೆರಿಗೆ ಕಡಿತ ಮಾಡಿಕೊಂಡಿದ್ದಾರೆ (ಟಿಡಿಎಸ್‌) ಎಂಬುದನ್ನು ಇದು ಪ್ರಮಾಣೀಕರಿಸುತ್ತದೆ.

ವೇತನ ಪಡೆಯುವ ಉದ್ಯೋಗಿಗಳು ಹಣಕಾಸು ವರ್ಷ ಕೊನೆಗೊಂಡ ಬಳಿಕ ವರ್ಷಕ್ಕೆ ಒಮ್ಮೆ ಈ ‘ಫಾರಂ 16’ ಪಡೆಯುತ್ತಾರೆ. ಸಾಮಾನ್ಯವಾಗಿ ಮೇ ಅಥವಾ ಜೂನ್‌ನಲ್ಲಿ ಈ ‘ಫಾರಂ 16’ ಉದ್ಯೋಗಿಗಳ ಕೈಸೇರುತ್ತದೆ.

ಆದಾಯ ತೆರಿಗೆ ಲೆಕ್ಕಪತ್ರ  (ಐ.ಟಿ ರಿಟರ್ನ್ಸ್‌) ಸಲ್ಲಿಸುವ ಒಂದೆರಡು ತಿಂಗಳ ಮೊದಲೇ ‘ಫಾರಂ 16’  ಬಗ್ಗೆ ಮಾತು ಕೇಳಿ ಬರತೊಡಗುತ್ತವೆ. ತೆರಿಗೆ ರಿಟರ್ನ್ಸ್‌ನಲ್ಲಿ ಭರ್ತಿ ಮಾಡಬೇಕಾದ ಬಹುತೇಕ ಎಲ್ಲ ಮಾಹಿತಿಗಳು ಈ ‘ಫಾರಂ 16’ ನಲ್ಲಿ ಇರುತ್ತದೆ.

‘ಫಾರಂ 16’ನಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ವಿಭಾಗಗಳಿವೆ. ‘ಎ’ ವಿಭಾಗದಲ್ಲಿ ಉದ್ಯೋಗದಾತರ ವಿವರ,   ಸಂಸ್ಥೆಯಲ್ಲಿ ಉದ್ಯೋಗದ ಅವಧಿಯ ಮಾಹಿತಿ ಇರುತ್ತದೆ. ‘ಬಿ’ ವಿಭಾಗ ಬಹಳ ಮುಖ್ಯವಾದುದು. ಅದರಲ್ಲಿ  ವೇತನದ ವಿವರವಾದ ಬಿಡಿ ಬಿಡಿ ವಿವರಗಳು ಇರುತ್ತವೆ. ಕೆಲವು ಹೂಡಿಕೆಗಳು ಮತ್ತು ವೆಚ್ಚಗಳ ರೂಪದಲ್ಲಿ ನೀವು ಕ್ಲೇಮು ಮಾಡಿಕೊಂಡಂತಹ ತೆರಿಗೆ ಉಳಿತಾಯದ ಕಡಿತಗಳ ಮಾಹಿತಿ ಅಲ್ಲಿರುತ್ತದೆ.

ಉದ್ಯೋಗಿಗಳಿಗೆ ‘ಫಾರಂ 16’  ನೀಡುವುದು   ಉದ್ಯೋಗದಾತರ ಕರ್ತವ್ಯ. ಯಾಕೆಂದರೆ  ನೌಕರರ ಆದಾಯದ ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಂಡಿರುವವರು ಉದ್ಯೋಗದಾತರು. ಯಾರೇ ಆಗಲಿ ‘ಫಾರಂ 16’  ಪಡೆದಿಲ್ಲವೆಂದಾದರೆ  ಉದ್ಯೋಗದಾತರಲ್ಲಿ ಕೇಳಿ ಅದನ್ನು ಪಡೆದುಕೊಳ್ಳಬೇಕು. ಇದು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳದಂತಹ ದಾಖಲೆ.

‘ಫಾರಂ 16’  ಬಳಸಿ ಇ–ಫೈಲಿಂಗ್ ಮಾಡಿ
ಆದಾಯ ತೆರಿಗೆ ಇಲಾಖೆಯ ಅಂತರ್ಜಾಲ ತಾಣದಲ್ಲಿ ‘ಫಾರಂ 16’ ರಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ ತೆರಿಗೆ ರಿಟರ್ನ್ಸ್‌ಗಳನ್ನು ‘ಇ–ಫೈಲ್‌’ ಮಾಡಬಹುದು. ಸಂಬಂಧಪಟ್ಟ ವಿಭಾಗಗಳಲ್ಲಿ ಉದ್ಯೋಗಿಯೆ ಕೈಯಾರೆ ಮಾಹಿತಿಗಳನ್ನು ತುಂಬಬೇಕು.

‘ಕ್ಲಿಯರ್‌ ಟ್ಯಾಕ್ಸ್‌’ನಂತಹ ಖಾಸಗಿ ತೆರಿಗೆ ಫೈಲಿಂಗ್‌ ವೇದಿಕೆಗಳಲ್ಲಿ ‘ಫಾರಂ 16’  ಅನ್ನು ಅಪ್‌ಲೋಡ್ ಮಾಡಿದರೆ ಮುಗಿಯಿತು. ವೆಬ್‌ಸೈಟ್‌ ಸ್ವಯಂಚಾಲಿತವಾಗಿ ರಿಟರ್ನ್‌ಗಳನ್ನು ತಯಾರಿಸಿಕೊಡುತ್ತದೆ. ತೆರಿಗೆಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಎಲ್ಲ ಮಾಹಿತಿಗಳೂ ಇವೆ ಎಂದಾದರೆ ‘ಫಾರಂ 16’  ಇಲ್ಲದೆ ಇದ್ದರೂ ‘ಇ – ಫೈಲ್’ ಮಾಡಬಹುದು.

ಇತರ ಫಾರಂ 16:
‘ಫಾರಂ 16ಎ’ ನಂತಹ ಇತರ ದಾಖಲೆಯೂ ಇದೆ. ‘ಫಾರಂ 16’ ರಲ್ಲಿ ವೇತನದ ವಿವರ ಇದ್ದರೆ, ‘ಫಾರಂ 16 ಎನಲ್ಲಿ ಇತರ ಆದಾಯಗಳ ಮೂಲದಿಂದ ತೆರಿಗೆ ಕಡಿತಗೊಂಡಿರುವ ವಿವರ ಇರುತ್ತದೆ. ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿ, ವಿಮೆ ಕಮಿಷನ್‌, ಮನೆ ಆಸ್ತಿಗಳಂತಹ ಆದಾಯಗಳು ಈ ‘ಫಾರಂ 16 ಎ’ನಲ್ಲಿ ಸೇರುತ್ತದೆ.

‘ಫಾರಂ 16ಎ’ ಅನ್ನು ತೆರಿಗೆ ಮುರಿದುಕೊಳ್ಳುವವರು ನೀಡುತ್ತಾರೆ. ಇಂತಹ ತೆರಿಗೆ ಮುರಿದುಕೊಳ್ಳುವವರು ಹಲವು ಮಂದಿ ಇರಬಹುದು. ಉದಾಹರಣೆಗೆ,  ಯಾರಾದರು ಎರಡು ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಹೊಂದಿದ್ದರೆ ಮತ್ತು ಈ ಎರಡೂ ಕಡೆಗಳಲ್ಲಿ ಟಿಡಿಎಸ್‌ ಕಡಿತಗೊಳ್ಳುತ್ತಿದ್ದರೆ, ಎರಡೂ ಬ್ಯಾಂಕ್‌ಗಳು ‘ಫಾರಂ 16ಎ’ ಗಳನ್ನು ಪ್ರತ್ಯೇಕವಾಗಿ ನೀಡುತ್ತವೆ.

‘ಫಾರಂ 16’  ಎಂಬುದು ತೆರಿಗೆ ಲೆಕ್ಕಪತ್ರ ಪಾವತಿ ಮಾಡುವಾಗ ಇರುವಂತಹ ಅವಿಭಾಜ್ಯ ದಾಖಲೆ. ಟಿಡಿಎಸ್‌ ಮುರಿದುಕೊಂಡ ಬಳಿಕವೂ  ಉದ್ಯೋಗದಾತರು ‘ಫಾರಂ 16’  ನೀಡದೆ ಇದ್ದರೂ ನೀವು ರಿಟರ್ನ್ ಸಲ್ಲಿಸಲೇಬೇಕು.

‘ಫಾರಂ 16’  ಕೊಡದೆ ಇರುವುದು ಉದ್ಯೋಗದಾತರ ತಪ್ಪು ಮತ್ತು ಅದಕ್ಕೆ ದಂಡವನ್ನೂ ಪಾವತಿಸಬೇಕಾಗುತ್ತದೆ. ತೆರಿಗೆ ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ನೀವು ಗಳಿಸುತ್ತಿದ್ದರೆ ತೆರಿಗೆ ರಿಟರ್ನ್ಸ್‌ ಸಲ್ಲಿಸುವುದು ನಿಮ್ಮ ಹೊಣೆಗಾರಿಕೆ ಹಾಗೂ ‘ಫಾರಂ 16’ ನಿಮ್ಮ ಈ ಕೆಲಸವನ್ನು ಸುಲಭಗೊಳಿಸುತ್ತದೆ.

ಮಾಹಿತಿ ಮುಚ್ಚಿಡುವಂತಿಲ್ಲ
ದೇಶದ ಜನಸಂಖ್ಯೆಯಲ್ಲಿ ಸುಮಾರು ಶೇ 4ರಷ್ಟು ಮಂದಿ ಮಾತ್ರ ತೆರಿಗೆ ಪಾವತಿಸುತ್ತಾರೆ ಹಾಗೂ ಅದಕ್ಕಿಂತಲೂ ಕಡಿಮೆ ಮಂದಿ ತೆರಿಗೆ ರಿಟರ್ನ್ಸ್‌  ಸಲ್ಲಿಸುತ್ತಾರೆ. ಎಲ್ಲ ತೆರಿಗೆ ಪಾವತಿಸಿ ಆಗಿದೆ, ತೆರಿಗೆ ರಿಟರ್ನ್ಸ್‌ ಸಲ್ಲಿಸಿದ್ದೇ ಆದರೆ ಇನ್ನಷ್ಟು ತೆರಿಗೆಗೆ ಬೇಡಿಕೆ ಬರಬಹುದು ಅಥವಾ ಲೆಕ್ಕಪರಿಶೋಧನೆ ನಡೆಯಬಹುದು ಎಂದೇ  ರಿಟನ್ಸ್‌ ಫೈಲ್‌ ಮಾಡದ ಅನೇಕರು ಭಾವಿಸುತ್ತಾರೆ.

ಎಲ್ಲಾ ಸಂದರ್ಭಗಳಲ್ಲೂ ಇದು ಸತ್ಯವಲ್ಲ.  ತೆರಿಗೆ ರಿಟರ್ನ್ಸ್‌ಗಳನ್ನು ಸರಿಯಾಗಿ ಸಲ್ಲಿಸಲಾಗಿದೆಯೇ ಎಂದು ಪರಿಶೀಲಿಸುವ ಅಗತ್ಯ ಇದ್ದೇ ಇದೆ. ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ಸ್ವಲ್ಪ ಎಚ್ಚರ ವಹಿಸಿದರೆ ಮುಂದೆ ತೆರಿಗೆ ಪಾವತಿಸಲು ಬೇಡಿಕೆ ಬರುವುದು ಅಥವಾ ನೋಟಿಸ್‌ ಪಡೆದುಕೊಳ್ಳುವ ಪ್ರಮೇಯದಿಂದ ಪಾರಾಗಬಹುದು.

‘ಫಾರಂ 26ಎಎಸ್‌’  ವ್ಯಕ್ತಿಯ ಆದಾಯದ ಮೂಲದಿಂದ ತೆರಿಗೆ ಕಡಿತ ಮಾಡಿಕೊಂಡಿದ್ದನ್ನು ತಿಳಿಸುವ ಸಂಪೂರ್ಣ ಮಾಹಿತಿ ಕಣಜವಾಗಿರುತ್ತದೆ. ಅದರಲ್ಲಿ ಅಡ್ವಾನ್‌್ಸ ಟ್ಯಾಕ್ಸ್ ಅಥವಾ ಸ್ವಯಂಘೋಷಿತ ತೆರಿಗೆಗಳಂತಹ ತೆರಿಗೆಗಳೂ ಸೇರಿಕೊಂಡಿರುತ್ತವೆ. ತೆರಿಗೆ ಕಡಿತ ಮಾಡಿದ್ದಕ್ಕೆ ಪ್ರತಿಯಾಗಿ   ನೀಡಿದಂತಹ ಆದಾಯದ ಮಾಹಿತಿಯೂ ಅದರಲ್ಲಿ ಇರುತ್ತದೆ. ‘ಫಾರಂ 26ಎಎಸ್‌’ನಲ್ಲಿನ ಮಾಹಿತಿಗೂ, ತೆರಿಗೆ ರಿಟರ್ನ್ಸ್‌ಗೂ ಹೊಂದಾಣಿಕೆ ಆಗದಿದ್ದರೆ ನೋಟಿಸ್‌
ಜಾರಿಗೊಳ್ಳುವ ಸಾಧ್ಯತೆಯೂ ಇರುತ್ತದೆ.

ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಸೂಕ್ತ ರೀತಿಯ ಫಾರಂ ಬಳಸುವುದು ಬಹಳ ಮುಖ್ಯ.  ವೇತನ, ಒಂದು ಮನೆಯ ಆಸ್ತಿ ಮತ್ತು ಇತರ ಆದಾಯ ಮೂಲಗಳಿದ್ದರೆ ‘ಐಟಿಆರ್‌–1’ ಅನ್ನು ಬಳಸಬೇಕು.   ಒಂದಕ್ಕಿಂತ ಅಧಿಕ ಮನೆಗಳಿಂದ ಆದಾಯ ಬರುತ್ತಿದ್ದರೆ ಅಥವಾ ನಷ್ಟಗಳೇನಾದರೂ ಇದ್ದರೆ ‘ಐಟಿಆರ್‌–2ಎ’ ಬಳಸಬೇಕು. ಬಂಡವಾಳ ಗಳಿಕೆ ಲಾಭ (ಕ್ಯಾಪಿಟಲ್‌ ಗೇನ್‌) ಇದ್ದಲ್ಲಿ, ವಿದೇಶದಲ್ಲಿ ಆಸ್ತಿ ಹೊಂದಿದ್ದರೆ ಅಥವಾ ತೆರಿಗೆ ಒಪ್ಪಂದದಂತೆ ಪರಿಹಾರ ಪಡೆದುಕೊಳ್ಳುವುದೇನಾದರೂ ಇದ್ದಲ್ಲಿ ‘ಐಟಿಆರ್‌–2’ ಅನ್ನು ಸಲ್ಲಿಸಬೇಕಾಗುತ್ತದೆ.

ತೆರಿಗೆ ರಿಟರ್ನ್ಸ್‌ ಫಾರಂನಲ್ಲಿ ಈ ವರ್ಷ ಸೇರ್ಪಡಗೊಂಡಿರುವ ಹೊಸ ವಿಷಯವೇನೆಂದರೆ, ಒಟ್ಟು ಆದಾಯ ₹ 50 ಲಕ್ಷಕ್ಕಿಂತ ಅಧಿಕ ಇದ್ದರೆ, ಭಾರತದಲ್ಲಿ  ಹೊಂದಿರುವ ಆಸ್ತಿಗಳು ಮತ್ತು ಸಾಲಗಳ ಬಗ್ಗೆ ಹಣಕಾಸು ವರ್ಷದ ಕೊನೆಯಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಬೇಕಿರುವುದು. ಹೀಗೆ ಮಾಹಿತಿ ನೀಡುವಲ್ಲಿ ಈ ಕೆಳಗಿನ ವಿಚಾರಗಳನ್ನು ನಮೂದಿಸಬೇಕಾಗುತ್ತದೆ.

ಹೊಂದಿರುವ ಜಮೀನು, ಕಟ್ಟಡ, ಆಭರಣ, ಚಿನ್ನ, ವಾಹನಗಳು, ದೋಣಿ, ವಿಮಾನಗಳ ಮಾಹಿತಿ ನೀಡಬೇಕು. ಇಂತಹ ಆಸ್ತಿಗಳನ್ನು ಉಡುಗೊರೆ ರೂಪದಲ್ಲಿ ಅಥವಾ ಹಿರಿಯರಿಂದ ಬಳುವಳಿಯಾಗಿ ಬಂದಿದ್ದರೆ, ಈ ಹಿಂದಿನ ಮಾಲೀಕರು ಭರಿಸಿದಂತಹ ವೆಚ್ಚದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ.

ವಿದೇಶದಲ್ಲಿ ಬ್ಯಾಂಕ್‌ ಖಾತೆಗಳಂತಹ ಆಸ್ತಿಗಳು ಇದ್ದರೆ, ಅಂತಹ ಖಾತೆಗಳಲ್ಲಿ ವ್ಯವಹಾರ ಇಲ್ಲದಿದ್ದರೂ ತೆರಿಗೆ ರಿಟರ್ನ್ಸ್‌ನಲ್ಲಿ ಅದರ ವಿವರ ನೀಡಲೇಬೇಕು.ಉದ್ಯೋಗದಾತರ ವಿದೇಶಿ ಮಾತೃ ಸಂಸ್ಥೆಯಿಂದ ಷೇರುಗಳನ್ನು ಪಡೆದಿದ್ದರೆ ಸಹ ಅದನ್ನು ರಿಟರ್ನ್ಸ್‌ನಲ್ಲಿ ತೋರಿಸಬೇಕಾಗುತ್ತದೆ.

ಕಳೆದ ವರ್ಷದಿಂದೀಚೆಗೆ ಎಲ್ಲ ಉಳಿತಾಯ ಮತ್ತು ಚಾಲ್ತಿ ಬ್ಯಾಂಕ್‌ ಖಾತೆಗಳು, ಆ ವರ್ಷ ಕೊನೆಗೊಳಿಸಿದಂತಹ ಖಾತೆಗಳ ವಿವರಗಳನ್ನು ನೀಡಬೇಕಾಗುತ್ತದೆ. ಅದಕ್ಕಿಂತ ಮೊದಲು ತೆರಿಗೆ ಹಣ ವಾಪಸ್‌ ಪಡೆದುಕೊಳ್ಳಲು ಒಂದು ಬ್ಯಾಂಕ್‌ ಖಾತೆಯ ವಿವರ ನೀಡಿದ್ದರೆ ಸಾಕಾಗುತ್ತಿತ್ತು. ನಿಮ್ಮ ಉಳಿತಾಯ ಬ್ಯಾಂಕ್‌ ಖಾತೆಗೆ ಬರುವಂತಹ ಬಡ್ಡಿಯ ವಿವರವನ್ನೂ ನೀಡುವುದಕ್ಕೆ ಮರೆಯಬೇಡಿ. ಈ ಬಡ್ಡಿಗೆ ₹ 10 ಸಾವಿರದ ತನಕ ತೆರಿಗೆ ಕಡಿತದ ಅವಕಾಶ ಇದೆ.

‘ಇ–ಫೈಲಿಂಗ್‌’ ನಂತರ ರಿಟರ್ನ್ಸ್‌ ಅನ್ನು ಡಿಜಿಟಲ್‌ ರೂಪದಲ್ಲಿ ಸಹಿ ಮಾಡದೆ ಇದ್ದಲ್ಲಿ, ನಿಮ್ಮ ತೆರಿಗೆ ರಿಟರ್ನ್ಸ್‌ ಬಗ್ಗೆ 120 ದಿನದೊಳಗೆ ಪರಿಶೀಲನೆ ನಡೆಸಬೇಕು. ಅದಕ್ಕಾಗಿ ಸಹಿ ಮಾಡಿದಂತಹ ಐಟಿಆರ್‌–5 ಅನ್ನು ಆದಾಯ ತೆರಿಗೆ ಇಲಾಖೆಯ ಕೇಂದ್ರೀಕೃತ ನಿರ್ವಹಣಾ ಕೇಂದ್ರಕ್ಕೆ ಕಳುಹಿಸಬೇಕು ಅಥವಾ ಎಲೆಕ್ಟ್ರಾನಿಕ್‌ ವೆರಿಫಿಕೇಷನ್‌ ಕೋಡ್‌ನ   ಆನ್‌ಲೈನ್‌ ವೆಲಿಡೇಷನ್ ಗಮನಿಸಬೇಕು.

ಈ ರೀತಿ ಮಾಡದೆ ಇದ್ದಲ್ಲಿ ನಿಮ್ಮ ತೆರಿಗೆ ರಿಟರ್ನ್ಸ್‌ ಸಂಸ್ಕರಣೆ ನಡೆದಿಲ್ಲ ಮತ್ತು ನೀವು ಸಲ್ಲಿಸಿದ ರಿಟರ್ನ್ಸ್‌ ಅಸಮರ್ಪಕ ಎನಿಸುತ್ತದೆ. ತೆರಿಗೆ ರಿಟರ್ನ್ಸ್‌ ಗೆ ಸಂಬಂಧಿಸಿದಂತೆ ಹೀಗೆ ಮಾಡಬೇಕು, ಹೀಗೆ ಮಾಡಬಾರದು ಎಂಬ ದೊಡ್ಡ ಪಟ್ಟಿಯೇ ಇದೆ. ಇಲ್ಲಿ ತಿಳಿಸಿದ ವಿಚಾರಗಳನ್ನು ಅನುಸರಿಸಿದ್ದೇ ಆದಲ್ಲಿ ರಿಟರ್ನ್ಸ್‌ ಸಲ್ಲಿಕೆಯ ತಪ್ಪುಗಳನ್ನು ಮತ್ತು ಅದಕ್ಕಾಗಿ ನೋಟಿಸ್‌ ಪಡೆಯುವುದನ್ನು ತಪ್ಪಿಸಬಹುದು.

(ಅಜಿತ್‌– ಕ್ಲಿಯರ್‌ ಟ್ಯಾಕ್‌್ಸ ಸಂಸ್ಥೆಯ  ಸಂಸ್ಥಾಪಕ ಮತ್ತು ಸಿಇಒ) (ಆನಂದ್‌ ಧೆಲಿಯಾ–ಪೀಪಲ್‌ ಅಡ್ವೈಸರಿ ಸರ್ವೀಸಸ್‌ನ ತೆರಿಗೆ ನಿರ್ದೇಶಕ. ಹಿರಿಯ ತೆರಿಗೆ ತಜ್ಞ ಅಮ್ನು ಸದಾನಂದನ್‌ ಸಹ ಪೂರಕ ಮಾಹಿತಿ ನೀಡಿದ್ದಾರೆ)

ಕಲಿಕೆಯೆಡೆಗೆ ಒಲವು ಹೆಚ್ಚಿಸುತ್ತಿರುವ ಬೈಜುಸ್.

ಕಲಿಕೆಯೆಡೆಗೆ ಒಲವು ಹೆಚ್ಚಿಸುತ್ತಿರುವ ಬೈಜುಸ್.

ಕೇವಲ ಪರೀಕ್ಷೆಯಲ್ಲಿ ಪಾಸಾಗುವ ಉದ್ದೇಶದಿಂದ ಕಲಿತರೆ ಸಾಲದು, ಬದಲಿಗೆ ಕಲಿಕೆಯನ್ನು ಪ್ರೀತಿಸುವಂತಾಗಬೇಕು. ಕಲಿಕೆ ಒಂದು ರೀತಿಯ ಚಟ ಆಗಬೇಕು, ಆಗಲೇ ಅದು ಪರಿಣಾಮಕಾರಿಯಾಗಲು ಸಾಧ್ಯ ಎಂಬುದು ಬೈಜುಸ್ ಕ್ಲಾಸ್​ನ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಅಭಿಪ್ರಾಯ. ಈ ಮೂಲ ಮಂತ್ರವನ್ನೇ ಮುಂದಿಟ್ಟುಕೊಂಡು, ಇಂದು ಶಾಲೆಗಳು ಡಿಜಿಟಲೀಕರಣಗೊಂಡಿದ್ದರೂ, ಅಲ್ಲಿ ಅಳವಡಿಸಿಕೊಂಡಿರುವ ಪಠ್ಯಕ್ರಮ ಹಾಗೂ ಬೋಧನಾ ವಿಧಾನದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿಲ್ಲ, ಜೊತೆಗೆ ಮಕ್ಕಳ ಕಲಿಕಾ ಸಾಮರ್ಥ್ಯದಲ್ಲೂ ಸಾಕಷ್ಟು ವ್ಯತ್ಯಾಸವಿರುವುದರಿಂದ ಮಕ್ಕಳಿಗೆ ವಿಭಿನ್ನ ರೀತಿಯ ಬೋಧನಾ ಕ್ರಮ ಅಳವಡಿಕೆಯ ಅಗತ್ಯವಿದೆ. ಅದಕ್ಕಿಂತಲೂ ಹೆಚ್ಚಾಗಿ, ಉತ್ತಮ ಶಿಕ್ಷಕರ ಕೊರತೆ ಎಲ್ಲೆಡೆ ಕಾಡುತ್ತಿದೆ. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಕರು ಸಿಗುವುದಿಲ್ಲ ಎಂಬ ಮೂಲ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಲಿಕೆಯನ್ನು ಸುಗಮ ಹಾಗೂ ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ಬೈಜುಸ್ ಕ್ಲಾಸಸ್ ಆರಂಭಿಸಿ, ಎಲ್ಲಾ ತರಹದ ವಿದ್ಯಾರ್ಥಿಗಳಿಗೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಯುವ ಅವಕಾಶ ಕಲ್ಪಿಸಲಾಗಿದೆ.

ಬೈಜುಸ್ ಕ್ಲಾಸಸ್ 2007ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಶಿಕ್ಷಣ ತಂತ್ರಜ್ಞಾನ(ಎಡ್-ಟೆಕ್) ಸಂಸ್ಥೆ. ಇದರ ಸಂಸ್ಥಾಪಕ ಬೈಜು ರವೀಂದ್ರನ್, ಸಾಮಾನ್ಯ ದಾಖಲಾತಿ ಪರೀಕ್ಷೆ (ಇಅಖ) ಗೆ ತಯಾರಿ ನಡೆಸುತ್ತಿದ್ದ ಕೆಲ ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಿದರು. ಖುದ್ದು ಎರಡು ಬಾರಿ 100ಕ್ಕೆ ನೂರು ಅಂಕ ಗಳಿಸುವ ಮೂಲಕ ಅಂಖಿ ಅಗ್ರಸ್ಥಾನಿಯಾಗಿರುವ ರವೀಂದ್ರನ್ ಬೋಧನೆಯೆಡೆಗಿನ ತಮ್ಮ ಒಲವು ಹಾಗೂ ಕಲಿಕೆಯಲ್ಲಿ/ಬೋಧನಾ ಕ್ರಮದಲ್ಲಿ ಅಗತ್ಯವಿದ್ದ ಬದಲಾವಣೆಗಳನ್ನು ತರುವ ಸಲುವಾಗಿ, ಉತ್ತಮ ಕೆಲಸ ಸಿಗುವ ಅವಕಾಶವನ್ನೂ ಬದಿಗಿಟ್ಟು, ಬೈಜುಸ್ ಕ್ಲಾಸಸ್​ನ ಪೋಷಕ ಸಂಸ್ಥೆ, ಥಿಂಕ್ ಅಂಡ್ ಲರ್ನ್ ಸ್ಥಾಪನೆಗೆ ಮುಂದಾದರು. ಇಂದು ಅವರು ವಾರಾಂತ್ಯದಲ್ಲಿ ನಡೆಸಿಕೊಡುವ ತರಗತಿಗಳಿಗೆ ಸಾವಿರಾರು ವಿದ್ಯಾರ್ಥಿಗಳು ಖುದ್ದು ಹಾಜರಾದರೆ, ದೇಶದ ವಿವಿಧ ಭಾಗಗಳಿಂದ 60ಕ್ಕೂ ಹೆಚ್ಚು ವಿಸ್ಯಾಟ್ ತರಗತಿಗಳ ಮೂಲಕ ಸುಮಾರು 20-30 ಸಾವಿರ ವಿದ್ಯಾರ್ಥಿಗಳು ಈ ತರಗತಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಆ ಮೂಲಕ ಅವರ ಈ ತರಗತಿ ವಾಸ್ತವದಲ್ಲಿ ಭಾರತದ ಅತಿದೊಡ್ಡ ತರಗತಿಯಾಗುತ್ತದೆ. ಆರಂಭದಲ್ಲಿ ಸಿಎಟಿ, ಜೆಇಇ, ಜಿಮ್ಯಾಟ್, ಜಿಆರ್​ಇ, ವೈದ್ಯಕೀಯ ಹಾಗೂ ಯುಪಿಎಸ್​ಸಿ ಐಎಎಸ್​ನಂತಹ ಸಾರ್ವಜನಿಕ ಸೇವಾ ಪರೀಕ್ಷೆಗಳಿಗೆ ವಿವಿಧ ಕೋರ್ಸ್​ಗಳನ್ನು ಒದಗಿಸುತ್ತಿದ್ದ ಬೈಜುಸ್, ನಂತರ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ, ಆನಂತರ ಆರನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿಗಳಿಗೂ ಕೋರ್ಸ್​ಗಳನ್ನು ಆರಂಭಿಸಿದೆ. ಕೆಲ ಕೋರ್ಸ್​ಗಳು ಉಚಿತವಾಗಿದ್ದು, ಅದರ ಮುಂದುವರಿದ ಭಾಗವನ್ನು ಹಣ ಪಾವತಿಸಿ ಪಡೆಯಬೇಕಾಗುತ್ತದೆ.

ಆರಂಭದಲ್ಲಿ ಬೆಂಗಳೂರು, ಚೆನ್ನೈ, ಮುಂಬೈ, ಪುಣೆ ನಗರಗಳಿಗೆ ತೆರಳಿ ವಾರಾಂತ್ಯದಲ್ಲಿ ತರಗತಿಗಳನ್ನು ನಡೆಸಿಕೊಡುತ್ತಿದ್ದ ರವೀಂದ್ರನ್ ನಂತರ ಅದರ ಜೊತೆಗೆ, ವಿಡಿಯೋ, 2ಡಿ, 3ಡಿ ಅನಿಮೇಷನ್​ಗಳ ಮೂಲಕ ಆನ್​ಲೈನ್ ಕಂಟೆಂಟ್​ಗಳನ್ನು(ವಿಷಯ) ಸಿದ್ಧಪಡಿಸಿ ಕೋರ್ಸ್​ಗಳನ್ನು ನೀಡಲು ಆರಂಭಿಸಿದರು. ಇದರೊಂದಿಗೆ ಟ್ಯಾಬ್ಲೆಟ್​ಗಳ ಮೂಲಕವೂ ಬೈಜುಸ್ ತನ್ನ ಕೋರ್ಸ್​ಗಳನ್ನು ಮಾರಾಟ ಮಾಡಲು ಆರಂಭಿಸಿತು. ಕಳೆದ ವರ್ಷ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ ನಂತರ ಅದು ಹೆಚ್ಚು ಜನಪ್ರಿಯವಾಗಿದ್ದು ಹೆಚ್ಚೆಚ್ಚು ಡೌನ್​ಲೋಡ್​ಗಳನ್ನು ಕಂಡಿದೆ. ಶ್ರೇಷ್ಠ ಗುಣಮಟ್ಟದ ಶಿಕ್ಷಕರನ್ನು ತನ್ನ ವೇದಿಕೆಯಲ್ಲಿ ಹೊಂದಿರುವ ಬೈಜುಸ್, ವಿಡಿಯೋ ಹಾಗೂ ಅನಿಮೇಷನ್ ಮೂಲಕ ಸರಳವಾಗಿ ಕಲಿಯಲು ನೆರವಾಗುವಂತೆ ಪಠ್ಯ ವಿಷಯಗಳನ್ನು ಸಿದ್ಧಪಡಿಸುತ್ತದೆ. ಕೆಲ ಪರಿಚಯಾತ್ಮಕ ಆವೃತ್ತಿಗಳನ್ನು ನೀಡಲಾಗಿದ್ದು, ಅದರ ಮೂಲಕ ವಿದ್ಯಾರ್ಥಿಗಳು/ ಪಾಲಕರು ಬೈಜುಸ್​ನ ಕಲಿಕಾ ವಿಧಾನವನ್ನು ಅರಿತು ನಂತರ ಕೋರ್ಸ್​ಗಳನ್ನು ನಾವು ಆನ್​ಲೈನ್, ಟ್ಯಾಬ್ಲೆಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಖರೀದಿಸಬಹುದು. ಆರನೇ ತರಗತಿಯಿಂದ ಐಎಎಸ್ ಪರೀಕ್ಷೆ ವರೆಗಿನ ವಿವಿಧ ಕೋರ್ಸ್​ಗಳಿಗೆ ವರ್ಷಕ್ಕೆ 10,000 ರೂಪಾಯಿಯಿಂದ ಹಿಡಿದು 30,000 ರೂಪಾಯಿವರೆಗೆ ಶುಲ್ಕ ನಿಗಧಿಪಡಿಸಲಾಗಿದೆ. ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲರೂ ಆಪ್ ಅಥವಾ ಆನ್ ಲೈನ್ ಮೂಲಕ ಕೋರ್ಸ್ ಖರೀದಿಸಿ ಈ ವೇದಿಕೆಯಲ್ಲಿರುವ ಉತ್ತಮ ಶಿಕ್ಷಕರ ಬೋಧನೆ ಪಡೆಯಬಹುದಾಗಿದೆ. ಜೊತೆಗೆ ವಿಡಿಯೋ ಅಥವಾ ಅನಿಮೇಷನ್ ಮಾದರಿಯಲ್ಲಿರುವ ಪಠ್ಯವನ್ನು ಬೇಕಾದಲ್ಲಿ ನಿಲ್ಲಿಸಿ, ಅಥವಾ ಅರ್ಥವಾಗದ್ದನ್ನು ಪುನಃ ನೋಡಿ, ನಮ್ಮ ವೇಗಕ್ಕೆ ತಕ್ಕಂತೆ ಕಲಿಯುವ ಹಾಗೂ ಪನರಾವರ್ತನೆ ಮಾಡುವ ಅವಕಾಶ ದೊರೆಯುತ್ತದೆ. ಇದರೊಂದಿಗೆ ವಿದ್ಯಾರ್ಥಿಯ ಕಲಿಕಾ ಕ್ರಮವನ್ನು ಅವರ ಸಾಮರ್ಥ್ಯಕ್ಕನುಗುಣವಾಗಿ ಮಾರ್ಪಾಟು ಮಾಡಿಕೊಳ್ಳುವ ಸಲಹೆ ಕೂಡಾ ಬೈಜೂಸ್​ನಿಂದ ಲಭ್ಯ.

ವಿವಿಧ ಹೂಡಿಕೆದಾರರಿಂದ ಬೈಜುಸ್ ಈಗಾಗಲೇ ಸಾಕಷ್ಟು ಬಂಡವಾಳ ಪಡೆದಿದ್ದು, ತಿಂಗಳಿನಿಂದ ತಿಂಗಳಿಗೆ ಶೇಕಡಾ 15ರಷ್ಟು ಅಭಿವೃದ್ಧಿ ಸಾಧಿಸುತ್ತಿದೆ. ಪ್ರಸ್ತುತ ಸುಮಾರು 1,20,000 ಶುಲ್ಕ ಪಾವತಿಸುವ ವಿದ್ಯಾರ್ಥಿಗಳನ್ನು ಹೊಂದಿರುವ ಈ ವೇದಿಕೆಗೆ ಪ್ರತಿ ತಿಂಗಳು 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರುತ್ತಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ 120 ಕೋಟಿ ರೂಪಾಯಿ ಆದಾಯ ಗಳಿಸಿರುವ ಬೈಜುಸ್ ತನ್ನ ಕೋರ್ಸ್​ಗಳನ್ನು ಪೂರ್ವ ಏಷ್ಯಾದ ಕೆಲ ದೇಶಗಳಲ್ಲೂ ಒದಗಿಸುತ್ತಿದೆ. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಇದು ತನ್ನ ಮಡಿಗೇರಿಸಿಕೊಂಡಿದೆ.

ವಿಡಿಯೋ ಹಾಗೂ ಅನಿಮೇಷನ್ ಮೂಲಕ ಕಲಿಕೆಗೆ ವಿಭಿನ್ನ ಆಯಾಮ ಒದಗಿಸುವುದರೊಂದಿಗೆ, ಪಠ್ಯವನ್ನು ಸರಳ ಹಾಗೂ ಮೋಜಿನೊಂದಿಗೆ ಕಲಿಯುವಂತೆ ಮಾಡಿರುವ ಬೈಜುಸ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಕೋರ್ಸ್​ಗಳನ್ನು ಖರೀದಿಸುತ್ತಿರುವುದನ್ನು ಗಮನಿಸಿದರೆ, ಅವರು ಬೈಜುಸ್ ನ ಕಲಿಕಾ ವಿಧಾನವನ್ನು ನಿಜಕ್ಕೂ ಇಷ್ಟಪಟ್ಟಿದ್ದಾರೆ ಜೊತೆಗೆ ಕಲಿಕೆಯೆಡೆಗೆಅವರ ಒಲವು ಹೆಚ್ಚುತ್ತಿದೆ ಎಂದೇ ಅರ್ಥ. ಬೈಜು ರವೀಂದ್ರನ್, ಕಲಿಕೆಯನ್ನು ಚಟವಾಗಿಸುವ ತಮ್ಮ ಕನಸನ್ನು ನನಸಾಗುವತ್ತ ಸಾಕಷ್ಟು ಹಾದಿಯನ್ನು ಈಗಾಗಲೇ ಕ್ರಮಿಸಿದ್ದಾರೆ!

‘ಈದುಲ್ ಫಿತ್ರ್’ ಯಾಕಾಗಿ ಈ ಸಂತೋಷಾಚರಣೆ?

‘ಈದುಲ್ ಫಿತ್ರ್’ ಯಾಕಾಗಿ ಈ ಸಂತೋಷಾಚರಣೆ?

4 Jul, 2016
ಬಿ.ಎಸ್.ಶರ್ಫುದ್ದೀನ್, ಕುವೈತ್

image

ರಮಝಾನ್ ತಿಂಗಳಿನ ಕೊನೆಯಲ್ಲಿ ಆಚರಿಸಲಾಗುವ ಹಬ್ಬವೇ ಈದುಲ್ ಫಿತ್ರ್ ಅಥವಾ ಪಾರಣೆಯ ಹಬ್ಬ. ಒಂದು ತಿಂಗಳಿನ ಉಪವಾಸವ್ರತ ಆತ್ಮಸಂಸ್ಕರಣೆ, ಕುರ್‌ಆನ್ ಅಧ್ಯಯನ ಇತ್ಯಾದಿಗಳ ಮೂಲಕ ಗಳಿಸಲಾದ ಸಾಧನೆಗಳನ್ನು ಈ ಸಂದರ್ಭದಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ.

ಪ್ರವಾದಿ ಮುಹಮ್ಮದ್(ಸ)ರು ಹೇಳುತ್ತಾರೆ.‘‘ ಉಪವಾಸ ಆಚರಿಸುವವರಿಗೆ ಸಂತೋಷದ ಎರಡು ಸಂದರ್ಭಗಳಿವೆ. ಒಂದು ಉಪವಾಸ ಬಿಡುವ ಸಂದರ್ಭ. ಎರಡನೆಯದು ಮರಣಾನಂತರ ಅವನ ಪ್ರಭುವನ್ನು ಭೇಟಿಯಾಗುವ ಸಂದರ್ಭ’’ ಇಲ್ಲಿ ‘‘ಉಪವಾಸ ಬಿಡುವ ಸಂದರ್ಭ’’ ಎಂಬುದಕ್ಕೆ ಎರಡು ಅರ್ಥವಿದೆ. ಮೊದಲನೆಯದು ಪ್ರತಿನಿತ್ಯ ಉಪವಾಸ ಬಿಡುವಾಗ ಉಪವಾಸಿಗ ಆ ದಿನದಂದು ಗಳಿಸಿದ ಆತ್ಮ ಸಂಯಮ, ತ್ಯಾಗ ಮನೋಭಾವ, ಇತರರ ಸಂಕಷ್ಟದೊಂದಿಗೆ ಸ್ಪಂದಿಸುವ ಮನೋಭಾವ ಇತ್ಯಾದಿಗಳನ್ನು ಗಳಿಸಿದ ಸಾರ್ಥಕತೆಯನ್ನು ತನ್ನದಾಗಿಸಿ ಸಂತುಷ್ಟನಾಗುತ್ತಾನೆ. ಎರಡನೆಯದಾಗಿ ಒಂದು ತಿಂಗಳ ಉಪವಾಸದ ನಂತರ ಉಪವಾಸ ತೊರೆಯುವಾಗ ತಿಂಗಳಿನಾದ್ಯಂತ ಗಳಿಸಿದ ಜ್ಞಾನ, ವ್ಯಕ್ತಿತ್ವ ಬದಲಾವಣೆ, ತಾಳ್ಮೆ ಇತ್ಯಾದಿಗಳನ್ನು ಸ್ಮರಿಸಿ ವ್ಯಕ್ತಿ ಸಂತುಷ್ಟನಾಗುತ್ತಾನೆ. ಹಾಗೆಯೇ ಮರಣಾನಂತರ ಉಪವಾಸಿಗನಿಗೆ ಖಂಡಿತ ವಿಶೇಷವಾದ ಪುರಸ್ಕಾರ ಮತ್ತು ಸಂತೋಷ ಕಾದಿದೆ ಎಂಬುದು ಪ್ರವಾದಿ ವರ್ಯ(ಸ)ರ ಈ ಮಾತಿನ ಇಂಗಿತ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಒಮ್ಮೆ ನಿಜವಾದ ಸಂತೋಷ ಯಾವುದರಲ್ಲಿ ಅಡಕವಾಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಯಿತು. ಅಧ್ಯಯನದ ಭಾಗವಾಗಿ ಜೀವನದ ಹಲವು ರಂಗಗಳಲ್ಲಿ ಕಾರ್ಯಪ್ರವೃತರಾಗಿರುವ ವ್ಯಕ್ತಿಗಳನ್ನು ಸಂದರ್ಶಿಸಲಾಯಿತು. ಆ ಪೈಕಿ ಕೈಗಾರಿಕೋದ್ಯಮಿಗಳು, ಶಿಕ್ಷಣವೇತ್ತರು, ವ್ಯಾಪಾರಿಗಳು, ರಾಜಕಾರಣಿಗಳು ಮುಂತಾದ ಹಲವು ಕ್ಷೇತ್ರಗಳಿಗೆ ಸೇರಿದ ವ್ಯಕ್ತಿಗಳು ಸೇರಿದ್ದರು. ಕೊನೆಗೆ ಸಂಶೋಧನೆಯಿಂದ ಕಂಡುಕೊಂಡ ಅಂಶವೆಂದರೆ ನಿಜವಾದ ಸಂತೊಷ ‘ಅರ್ಥಪೂರ್ಣವಾದ ಸಂಬಂಧ’ದಲ್ಲಿ ಅಡಕವಾಗಿದೆ ಎಂಬುದಾಗಿದೆ.
ರಮಝಾನ್ ತಿಂಗಳು ಅರ್ಥಪೂರ್ಣವಾದ ಸಂಬಂಧಗಳನ್ನು ಸೃಷ್ಟಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ‘ಇಫ್ತಾರ್’ ಎಂದೇ ಖ್ಯಾತವಾಗಿರುವ ಉಪವಾಸ ತೊರೆಯುವ ಭೋಜನಕ್ಕೆ ಕುಟುಂಬಸ್ಥರನ್ನು, ಮಿತ್ರರನ್ನು, ಬಡವರನ್ನು ಕರೆದು ಆತಿಥ್ಯ ವಹಿಸುವ ಸಂಪ್ರದಾಯ ಇಡೀ ವಿಶ್ವದಲ್ಲೇ ಇದೆ. ಸುಮಾರು ಒಂದುವರೆ ಶತಕೋಟಿಯಷ್ಟಿರುವ ಮುಸ್ಲಿಮ್ ಜನಸಂಖ್ಯೆಯಲ್ಲಿ ನಡೆಯುವ ‘ಸಂಬಂಧಗಳ ಪುನಶ್ಚೇತನ’ದ ಈ ಪ್ರಕ್ರಿಯೆ ನಿಜವಾಗಿ ಮಾನವ ಸಮಾಜದಲ್ಲಿ ಸಂತೋಷವನ್ನು ವ್ಯಾಪಕವಾಗಿ ಹರಡುತ್ತದೆ ಎಂದು ಹೇಳಬಹುದು.

ಫಿತ್ರ್ ಝಕಾತ್ ಅಥವಾ ಹಬ್ಬದ ದಿನದ ಕಡ್ಡಾಯದಾನ:

ಈದುಲ್ ಫಿತ್ರ್‌ನ ವಿಧಿಗಳ ಪೈಕಿ ಆ ದಿನದ ಖರ್ಚಿಗೆ ಇರುವ ಪ್ರತಿಯೊಬ್ಬ ವ್ಯಕ್ತಿ ತನ್ನ ಕುಟುಂಬಸ್ಥರ ಪರವಾಗಿ ಕೊಡಬೇಕಾದ ‘ಫಿತ್ರ್ ಝಕಾತ್’ ಅಥವಾ ಹಬ್ಬದ ದಿನದ ಕಡ್ಡಾಯ ದಾನವೂ ಒಂದಾಗಿದೆ. ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕುಟುಂಬದವರ ಪರವಾಗಿ ತಲಾ ಸುಮಾರು ಎರಡುವರೆ ಕಿಲೋ ಧಾನ್ಯ ಅಥವಾ ಅದಕ್ಕೆ ತುಲ್ಯವಾದ ಮೊತ್ತವನ್ನು ಹಬ್ಬದ ನಮಾಝಿಗೆ ಹೊರಡುವ ಮೊದಲು ಅಪೇಕ್ಷಿತರಿಗೆ ಅಥವಾ ಬಡವರಿಗೆ ದಾನ ಮಾಡಬೇಕಾಗಿದೆ. ಈ ವಿಧಿಯನ್ನು ಸರಿಯಾಗಿ ಪಾಲಿಸಿದರೆ ಈದುಲ್‌ಫಿತ್ರ್ ಹಬ್ಬದಂದು ಯಾವ ಬಡವ್ಯಕ್ತಿ ಅಥವಾ ಬಡಕುಟುಂಬ ಹಸಿವೆಯಿಂದ ಇರಲು ಸಾಧ್ಯವಿಲ್ಲ. ಕೊಲ್ಲಿಯಂತಹ ಸಂಪನ್ನ ರಾಷ್ಟ್ರಗಳಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಂತಹ ವ್ಯಕ್ತಿ ಅಥವಾ ಕುಟುಂಬಗಳನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದಲೇ ಫಿತ್ರ್‌ದಾನವನ್ನು ಮುಂಗಡ ಸಂಗ್ರಹಿಸಿ ಅಪೇಕ್ಷಿತರು ಹೆಚ್ಚಾಗಿರುವ ಬಡ ರಾಷ್ಟ್ರಗಳಿಗೆ ಕಳುಹಿಸುವಂತಹ ಸಂಪ್ರದಾಯವನ್ನು ಗಲ್ಫ್ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ. ಇದು ಕೂಡ ಸಿರಿವಂತರ ಮತ್ತು ಬಡವರ ನಡುವೆ ಆರೋಗ್ಯಪೂರ್ಣ ಸಂಬಂಧವನ್ನು ಬೆಳೆಸಲು ಸಹಕಾರಿಯಾಗುತ್ತದೆ.

ಸಂತೋಷಕ್ಕೆ ಇನ್ನೊಂದು ಕಾರಣ ‘ಕುರ್‌ಆನ್’

ರಮಝಾನ್ ತಿಂಗಳನ್ನು ಉಪವಾಸದ ತಿಂಗಳು ಎಂದು ಕರೆಯುವುದು ರೂಢಿ. ಇದು ನಿಜವೂ ಹೌದು. ಆದರೆ ಕುರ್‌ಆನ್‌ನಲ್ಲಿ ಒಂದು ಕಡೆ ಮಾತ್ರ (ಅಧ್ಯಾಯ 2, ಸೂಕ್ತ 185) ರಮಝಾನ್ ತಿಂಗಳ ಪ್ರಸ್ತಾಪ ಬಂದಿದೆ. ಅಲ್ಲಿ ಕುರ್‌ಆನ್ ಆ ತಿಂಗಳನ್ನು ಉಪವಾಸ ದ ತಿಂಗಳು ಎಂದು ಪರಿಚಯಿಸುವುದಿಲ್ಲ. ಬದಲಾಗಿ ಇದು ಕುರ್‌ಆನ್‌ನ ತಿಂಗಳು ಎಂದು ಪರಿಚಯಿಸುತ್ತದೆ. ‘‘ರಮಝಾನ್ ತಿಂಗಳು ಕುರ್‌ಆನ್ ಅವತೀರ್ಣವಾದ ತಿಂಗಳಾಗಿದೆ. ಅದು ಮಾನವರಿಗೆ ಸನ್ಮಾರ್ಗದರ್ಶನ ಮಾಡುವ ಗ್ರಂಥವಾಗಿದೆ. ಹಾಗೆಯೇ ಅದು ಸತ್ಯಾಸತ್ಯಗಳ ನಡುವಿನ ಅಂತರವನ್ನು ಸುಸ್ಪಷ್ಟವಾಗಿ ಸಾರುವ ಗ್ರಂಥ’’ ಎಂದು ಕುರ್‌ಆನ್ ಹೇಳುತ್ತದೆ. ರಮಝಾನ್ ತಿಂಗಳು ನಿಜವಾಗಿಯೂ ಕುರ್‌ಆನ್‌ನ ವರ್ಷಾಚರಣೆಯಾಗಿದೆ. ಈ ತಿಂಗಳಿನ ಉಪವಾಸವ್ರತವೂ ಈ ಕಾರಣಕ್ಕಾಗಿಯೇ ಆಗಿದೆ.
ಕುರ್‌ಆನ್‌ನಲ್ಲಿ ಇನ್ನೊಂದೆಡೆ, ಹೀಗೆ ಹೇಳಲಾಗಿದೆ, ‘‘ ಓ ಮನುಷ್ಯರೇ! ನಿಮಗಿದೋ ನಿಮ್ಮ ಪ್ರಭುವಿನ ಕಡೆಯಿಂದ ಉಪದೇಶ ಬಂದಿದೆ. ಇದು ಹೃದಯದಲ್ಲಿರುವ ರೋಗಗಳಿಗೆ ಸಿದ್ಧೌಷಧವಾಗಿದೆ. ಅಂತೆಯೇ ಇದು ಸತ್ಯ ವಿಶ್ವಾಸಿಗಳಿಗೆ ಅನುಗ್ರಹವಾಗಿದೆ. ಹೇಳಿರಿ. ಇದು ನಿಮ್ಮ ಪ್ರಭುವಿನ ಅಪಾರವಾದ ಕಾರುಣ್ಯ ಮತ್ತು ಅನುಗ್ರಹದಿಂದ ಬಂದ ಗ್ರಂಥ. ಆದ್ದರಿಂದ ಅವರು ಈ ಕಾರಣಕ್ಕಾಗಿ ಸಂತೋಷಾಚರಣೆ ಮಾಡಲಿ. ಈ ಗ್ರಂಥ ನೀವು ಶೇಖರಿಸುವ ಎಲ್ಲ ವಸ್ತುಗಳಿಗಿಂತ ಉತ್ತಮವಾದುದಾಗಿದೆ.’’ (ಅಧ್ಯಾಯ 10, ಸೂಕ್ತ 58,59)

ಐತಿಹಾಸಿಕವಾಗಿ ನೋಡುವುದಾದರೂ ಕುರ್‌ಆನ್ ಮಾನವಕುಲಕ್ಕೆ ಹಲವು ವಿಧದ ಸಂತೋಷವನ್ನೂ ತಂದು ಕೊಟ್ಟಿದೆ. ಕುರ್‌ಆನ್ ಅವತೀರ್ಣವಾಗುವ ಮೊದಲು ಏಳನೆ ಶತಮಾನದ ಅರಬರು ಎಲ್ಲ ರಂಗದಲ್ಲೂ ಹಿಂದುಳಿದವರಾಗಿದ್ದರು. ಯಾವುದೇ ನೈಸರ್ಗಿಕ ಸಂಪನ್ಮೂಲ ಗಳಿಲ್ಲದ ಮರಳುಗಾಡಿನಲ್ಲಿ ಅವರು ವಾಸವಾಗಿದ್ದುದರಿಂದ ಆಗಿನ ಕಾಲದ ದೊಡ್ಡ ಸಾಮ್ರಾಜ್ಯಗಳು ಅವರನ್ನು ಆಕ್ರಮಿಸುವ ಗೊಡವೆಗೂ ಹೋಗಿರಲಿಲ್ಲ. ಆದರೆ ಕುರ್‌ಆನ್ ಅವತೀರ್ಣವಾದ ನಂತರ ಆ ಸಮಾಜದಲ್ಲಿ ಆದ ಬದಲಾವಣೆ ಮಾನವ ಇತಿಹಾಸದ ಅದ್ಭುತಗಳಲ್ಲೊಂದಾಗಿದೆ. ಕುರ್‌ಆನ್‌ನನ್ನು ಅನುಸರಿಸಿದ ಜನ ಶಿಕ್ಷಣ, ಸಾಂಸ್ಕೃತಿಕ, ರಾಜಕೀಯ ಹೀಗೆ ಎಲ್ಲ ರಂಗಗಳಲ್ಲೂ ಹಿರಿಯ ಮತ್ತು ಅಚ್ಚರಿದಾಯಕ ಸಾಧನೆ ಮಾಡಿದರು.

ಆರಂಭ ಕಾಲದ ಕುರ್‌ಆನ್ ಅನುಯಾಯಿಗಳಾದ ಆ ಮುಸ್ಲಿಮರು ಲೋಕವನ್ನೇ ಬದಲಿಸುವಂತಹ ಸ
ಾಧನೆಗಳನ್ನು ಮಾಡಿದರು. ಇಂದಿನ ಕಾಲದ ‘ಲ್ಯಾಪ್‌ಟಾಪ್’ಗಳ ಉಗಮಕ್ಕೂ ಅತ್ಯಂತ ಮುಖ್ಯವಾದ ‘ಅಲ್‌ಜಿಬ್ರಾ’(ಬೀಜಗಣಿತ) ಎಂಬ ಗಣಿತ ಶಾಸ್ತ್ರವನ್ನೂ ಕಂಡು ಹಿಡಿದವರು ‘ಮುಹಮ್ಮದ್ ಇಬ್ನ್ ಮೂಸಾ ಅಲ್ ಖವಾರಝ್‌ಮಿ ಎಂಬ ಗಣಿತ ಶಾಸ್ತ್ರಜ್ಞ. ಮೂಲತಃ ಅರಬಿ ಭಾಷೆಯಲ್ಲಿದ್ದ ಈ ಶಾಸ್ತ್ರವನ್ನು ಆನಂತರ ಲ್ಯಾಟಿನ್ ಭಾಷೆಗೆ ಭಾಷಾಂತರಿಸಲಾಯಿತು ಹಾಗೂ ಯೂರೋಪಿನ ವಿಶ್ವ ವಿದ್ಯಾನಿಲಯಗಳಲ್ಲಿ ಅದನ್ನು ನೂರಾರು ವರ್ಷಗಳ ತನಕ ಕಲಿಸಲಾಗುತ್ತಿತ್ತು.
ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪ್ರದಾನ ಮಾಡುವ ಸಂಪ್ರದಾಯವೂ ಮುಸ್ಲಿಮರು ಆಳ್ವಿಕೆ ನಡೆಸುತ್ತಿದ್ದ ಸ್ಪೇನ್‌ನ ಮೂಲಕ ಯೂರೋಪಿಗೆ ತಲುಪಿತು. ಆನಂತರ 12ನೆ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ‘ಆಕ್ಸ್‌ಫರ್ಡ್’ ವಿಶ್ವವಿದ್ಯಾನಿಲಯ ಈ ಸಂಪ್ರಾದಾಯವನ್ನ್ನು ಮುಂದುವರಿಸಿತು. ಇಂದಿನ ಕಾಲದ ಕ್ಯಾಮರಾಗಳ ಉಗಮಕ್ಕೆ ಕಾರಣವಾದ ‘ಬೆಳಕಿನ ವಕ್ರೀಭವನ’ವನ್ನು ಕಂಡುಹಿಡಿದವರು ಹನ್ನೊಂದನೆ ಶತಮಾನದ ಮುಸ್ಲಿಮ್ ವಿಜ್ಞಾನಿ ಇಬ್ನ್ ಅಲ್ ಹೈತಮ್ ಎಂಬವರು. ಎಂಟನೆ ಶತಮಾನದಲ್ಲಿ ಹುಟ್ಟಿದ ಜಾಬರ್ ಇಬ್ನ್ ಹಯ್ಯೂನ್ ಆಧುನಿಕ ರಸಾಯನ ಶಾಸ್ತ್ರದ ಜನಕ ಎಂದು ಕರೆಯಲ್ಪಡುತ್ತಾರೆ. ಪಾಶ್ಚಿಮಾತ್ಯ ಗ್ರಂಥಗಳಲ್ಲಿ ‘ ಅವಿಸೆನ್ನಾ’ (Avicenna)ಎಂದು ಕರೆಯಲ್ಪಡುವ ಇಬ್ನ್ ಸೀನಾ ಆಧುನಿಕ ವೈದ್ಯಕೀಯ ಶಾಸ್ತ್ರದ ಜನಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈದ್ಯಕೀಯ ಶಾಸ್ತ್ರದ ಬಗ್ಗೆ ಅವರು ಬರೆದ ಗ್ರಂಥಗಳು 19ನೆ ಶತಮಾನದ ತನಕ ವಿಶ್ವದಾದ್ಯಂತದ ವಿಶ್ವವಿದ್ಯಾನಿಲಯಗಳಲ್ಲಿ ಅಧಿಕೃತ ಗ್ರಂಥವಾಗಿತ್ತು. ಈ ಸರಣಿ ಮುಂದುವರಿಯುತ್ತದೆ. ಇಂದಿನ ಕಾಲದಲ್ಲಿ ಈ ಅದ್ಭುತ ಐತಿಹಾಸಿಕ ಸಾಧನೆಗಳನ್ನು ಅಂತರ್ಜಾಲದ ಮೂಲಕ ‘ಸರ್ಚ್’ಮಾಡಿ ತಿಳಿದುಕೊಳ್ಳಬಹುದಾಗಿದೆ.

ಇನ್ನು ಆರಂಭ ಕಾಲದ ಮುಸ್ಲಿಮರು ಗಳಿಸಿದ ರಾಜಕೀಯ ಮೇಲ್ಮೆಯೂ ಅಚ್ಚರಿದಾಯಕವಾದುದಾಗಿದೆ. ಪ್ರವಾದಿ ಮುಹಮ್ಮದ್(ಸ)ರು ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗುವಾಗ ಅವರ ಜತೆಗೂಡಿದವರು ಸುಮಾರು ನೂರು ಮಂದಿ ಮಾತ್ರ. ಆದರೆ ನಂತರದ ಹದಿನೈದು ವರ್ಷದಲ್ಲಿ ಮುಸ್ಲಿಮರು ಆಗಿನ ಕಾಲದ ಬೃಹತ್ ಶಕ್ತಿಗಳಾದ, ಸುಮಾರು ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿದ್ದ ಅತ್ಯಂತ ಶಕ್ತಿಯುತ ರೋಮನ್ ಮತ್ತು ಪರ್ಶಿಯನ್ ಸಾಮ್ರಾಜ್ಯವನ್ನು ಜಯಿಸಿದರು ಮತ್ತು ಶಾಶ್ವತವಾಗಿ ಅದನ್ನು ಇತಿಹಾಸದ ಪುಟಗಳಿಗೆ ಸೇರಿಸಿದರು. ಈ ರಾಜಕೀಯ ಸಾಧನೆಗಳು ಸಾವಿರಾರು ವರ್ಷಗಳ ತನಕ ಮುಂದುವರಿಯಿತು.

ಒಟ್ಟಿನಲ್ಲಿ ಕುರ್‌ಆನ್ ಮಾನವ ಕುಲಕ್ಕೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ನೈತಿಕ ಮೇಲ್ಮೆಯನ್ನು ಸಾಧಿಸಲು ಸಹಕಾರಿಯಾಯಿತು. ಆದ್ದರಿಂದ ಸಹಜವಾಗಿಯೇ ಇದು ಸಂತೋಷಾಚರಣೆಗೆ ಗ್ರಾಸವನ್ನೊದಗಿಸುತ್ತದೆ.

ಈದ್‌ನ ಸಂಭ್ರಮ:

ಇಸ್ಲಾಮಿನ ಇನ್ನೊಂದು ವಿಶೇಷತೆಯೆಂದರೆ ಅದು ಯಾವುದೇ ಪ್ರಾದೇಶಿಕ ಸಂಸ್ಕೃತಿ ಮತ್ತು ಆಚರಣೆಗಳನ್ನು ಸಂಪೂರ್ಣ ಕೊನೆಗೊಳಿಸುವುದಿಲ್ಲ. ಬದಲಾಗಿ ಅದಕ್ಕೆ ಇಸ್ಲಾಮಿನ ಇತಿಮಿತಿ ಮತ್ತು ಮೆರುಗನ್ನು ನೀಡುತ್ತದೆ. ಆದ್ದರಿಂದ ಹಬ್ಬದ ಸಂತೋಷಾಚರಣೆಯಲ್ಲೂ ಲೋಕದಾದ್ಯಂತ ಪ್ರಾದೇಶಿಕ ಸಂಸ್ಕೃತಿ ಮತ್ತು ಸಂಪ್ರದಾಯಗಳ ಛಾಪು ಕಂಡುಬರುತ್ತದೆ. ಉಪಖಂಡದಲ್ಲಿ ಮುಸ್ಲಿಮರು ‘ಈದ್‌ಗಾಹ್’ ಮೈದಾನದಲ್ಲಿ ಕುಟುಂಬ ಸಮೇತರಾಗಿ ಹೊಸಬಟ್ಟೆಗಳನ್ನು ಧರಿಸಿ ಹೆಚ್ಚುವರಿ ನಮಾಝ್ ನಿರ್ವಹಿಸುತ್ತಾರೆ. ಮಕ್ಕಳಿಗೆ ‘ಈದಿ’ ಅಥವಾ ಈದ್‌ನ ಹಣ ಕೊಡುವ ಸಂಪ್ರದಾಯವೂ ಸಾಮಾನ್ಯವಾಗಿದೆ. ಬಿರಿಯಾನಿ ಮೃಷ್ಟಿ ಭೋಜನವೂ ಈದ್‌ನ ಭಾಗವಾಗಿದೆ. ಹತ್ತಿರದ ಕುಟುಂಬಸ್ಥರನ್ನು ಮತ್ತು ಮಿತ್ರರನ್ನು ಸಂದರ್ಶಿಸಿ ಆಲಿಂಗನದೊಂದಿಗೆ ಈದ್‌ನ ಶುಭಾಶಯಗಳನ್ನು ಕೋರುವ ದೃಶ್ಯವೂ ಸಾಮಾನ್ಯ. ಮೆರವಣಿಗೆಯಲ್ಲಿ ಪ್ರಕೀರ್ತನೆ ಮೊಳಗಿಸುತ್ತಾ ಈದ್‌ಗಾಹ್ ಕಡೆಗೆ ಸಾಗುವ ಪದ್ಧತಿಯೂ ಎಲ್ಲೆಡೆ ಕಂಡುಬರುತ್ತದೆ. ಈ ಸಂದರ್ಭದಲ್ಲಿ ‘ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್. ಲಾ ಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್. ಅಲ್ಲಾಹು ಅಕ್ಬರ್ ವಲಿಲ್ಲಾಹ್ ಹಮ್ದ್’ ಎಂಬ ಪ್ರಕೀರ್ತನೆಯನ್ನು ಲಯಬದ್ಧವಾಗಿ ಮೊಳಗಿಸಲಾಗುತ್ತದೆ. ಅದರ ಅರ್ಥ ಹೀಗಿದೆ. ‘‘ಅಲ್ಲಾಹನೇ ಮಹಾನನು. ಅಲ್ಲಾಹನೇ ಮಹಾನನು. ಅಲ್ಲಾಹನ ಹೊರತು ಬೇರೆ ಆರಾಧ್ಯರಿಲ್ಲ. ಅಲ್ಲಾಹನೇ ಮಹಾನನು. ಅಲ್ಲಾಹನೇ ಮಹಾನನು. ಎಲ್ಲ ಸ್ತುತಿ ಸ್ತೋತ್ರಗಳು ಅವನಿಗೇ ಮೀಸಲು’’.

ಬೇರೆ ಬೇರೆ ರಾಷ್ಟ್ರಗಳಲ್ಲಿ ಆ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಈ ಸಂಭ್ರಮವನ್ನು ಪ್ರಾದೇಶಿಕ ಸೊಬಗಿನೊಂದಿಗೆ ಆಚರಿಸಲಾಗುತ್ತದೆ. ಈದ್‌ನ ಉಡುಗೆ ತೊಡುಗೆ, ತಿಂಡಿ ತಿನಿಸು ಹಾಗೂ ಹರ್ಷಾಚರಣೆಯ ಸಂಪ್ರದಾಯಗಳು ಪ್ರತಿಯೊಂದು ರಾಷ್ಟ್ರಗಳಲ್ಲೂ ಭಿನ್ನವಾಗಿದೆ. ಆದರೆ ಹಬ್ಬದ ಕುರಿತಾದ ಇಸ್ಲಾಮಿನ ಮೂಲಭೂತ ಶಿಷ್ಟಾಚಾರಗಳಾದ ಫಿತ್ರ್ ದಾನ, ಈದ್‌ಗಾಹ್‌ನಲ್ಲಿ ಮಾಡಲಾಗುವ ಹೆಚ್ಚುವರಿ ನಮಾಝ್, ಶುಭ ಹಾರೈಕೆಗಳೆಲ್ಲವೂ ಎಲ್ಲಾ ಕಡೆಗಳಲ್ಲೂ ಸಮಾನವಾಗಿದೆ.

ಅರಬ್ ರಾಷ್ಟ್ರಗಳಲ್ಲಿ ಬಿರಿಯಾನಿಯ ಬದಲು ಅದೇ ತೆರನಾದ ಮಾಂಸ ಮತ್ತು ಅಕ್ಕಿಯಿಂದ ತಯಾರಿಸಲಾಗುವ ‘ಮಜ್ಬೂಸ್’(ಚ್ಜಚಿಟಟ) ಮತ್ತು ‘ಮಂದಿ’ ಇತ್ಯಾದಿಗಳನ್ನು ಸಿದ್ಧಪಡಿಸಲಾಗುತ್ತದೆ. ಈದ್ ಸಿಹಿ ತನಿಸುಗಳು ಕೂಡ ಭಾರತದ ವಿವಿಧೆಡೆಗಳಲ್ಲಿ ಬೇರೆ ಬೇರೆಯಾಗಿರುವಂತೆಯೇ ವಿಶ್ವದ ವಿವಿಧೆಡೆಗಳಲ್ಲೂ ತರತರದ ಸಿಹಿತಿನಿಸುಗಳನ್ನು ತಯಾರಿಸಲಾಗುತ್ತದೆ. ಅತ್ಯಧಿಕ ಮುಸ್ಲಿಮ್ ಜನಸಂಖ್ಯೆಯಿರುವ ಇಂಡೋನೇಷ್ಯದಲ್ಲಿ ಈ ಹಬ್ಬವನ್ನು ‘ಈದುಲ್‌ಫಿತ್ರಿ’ ಎಂದು ಕರೆಯುತ್ತಾರೆ. ಈದ್‌ಗಾಗಿ ಎಲ್ಲರೂ ಎಲ್ಲಿದ್ದರೂ ಮನೆಗೆ ಮರಳಿ ಹಿರಿಯರೊಂದಿಗೆ ತಪ್ಪಿಗಾಗಿ ಕ್ಷಮೆಕೋರುವ ಸಂಪ್ರಾದಾಯ ಸಾಮಾನ್ಯವಾಗಿದೆ. ಈದ್‌ನ ಈ ವಲಸೆಯನ್ನು ‘ಲೆಬರಾನ್’(ಔಛಿಚಿಚ್ಟಚ್ಞ) ಎಂದು ಕರೆಯಲಾಗುತ್ತದೆ. ಅದಕ್ಕಾಗಿ ರಾಷ್ಟ್ರೀಯ ರಜೆಯನ್ನೂ ಕೊಡಲಾಗುತ್ತದೆ. ಅಲ್ಲದೆ ಹೇರಳ ಸಂಖ್ಯೆಯ ವಲಸಿಗರ ಅನುಕೂಲಕ್ಕಾಗಿ ವಿಶೇಷ ಯಾತ್ರಾ ಸೌಕರ್ಯವನ್ನು ಸರಕಾರದ ಮೂಲಕ ಕಲ್ಪ್ಪಿಸಲಾಗುತ್ತದೆ. ಈದ್‌ನ ಹಿಂದಿನ ರಾತ್ರಿಯನ್ನು ‘ತಕ್ಬೀರಾನ್’ಎಂದು ಕರೆಯುತ್ತಾರೆ. ಎಲ್ಲರೂ ಆ ಸಂದರ್ಭ ಪ್ರಕೀರ್ತನೆಗಳನ್ನು ಮೊಳಗಿಸುತ್ತಾರೆ. ಮಲೇಷ್ಯದಲ್ಲಿ ಈ ಹಬ್ಬವನ್ನು ‘ಹರಿ ರಾಯ ಈದುಲ್ ಫಿತ್ರಿ’ ಎಂದು ಕರೆಯುತ್ತಾರೆ. ‘ಹರಿ ರಾಯ’ ಎಂದರೆ ಸಂಭ್ರಮದ ದಿನ. ಮುಸ್ಲಿಮ್ ಜನಸಂಖ್ಯೆ ಕಳೆದ ಐವತ್ತು ವರ್ಷಗಳಲ್ಲಿ 200 ಶೇಕಡಾ ಹೆಚ್ಚಾಗಿರುವ ಪಾಶ್ಚಿಮಾತ್ಯ ದೇಶಗಳಲ್ಲ್ಲಿ ಈದ್‌ನ್ನು ತನ್ನದೇ ಆದ ಮೆರಗು ಮತ್ತು ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಆಚರಿಸಲಾಗುತ್ತದೆ.

ಒಟ್ಟಿನಲ್ಲಿ ಕುರ್‌ಆನ್ ದಯಪಾಲಿಸಿದ, ಜ್ಞಾನ ಕಲ್ಪಿಸಿದ, ಪುಣ್ಯವರ್ಧನೆ ಮತ್ತು ಪಾಪ ವಿಮೋಚನೆಯ ವಸಂತ ಕಾಲವನ್ನೊದಗಿಸಿದ ದೇವನಿಗೆ ಸ್ತುತಿ ಸಲ್ಲಿಸುವ ಹಬ್ಬವೇ ‘ಈದುಲ್ ಫಿತ್ರ್’ ಅದರ ಆಚರಣೆಗಳಲ್ಲೂ ಸಾಂದರ್ಭಿಕ ಸಂತೋಷದ ಜತೆಗೆ ಸಂತೋಷದ ನೈಜ ಬುನಾದಿಗಳನ್ನೂ ಭದ್ರ ಪಡಿಸುವ ಸಂದೇಶ ಅಡಕವಾಗಿದೆ.

image

ಬಿ.ಎಸ್.ಶರ್ಫುದ್ದೀನ್, ಕುವೈತ್

ಮಧುಮೇಹಕ್ಕೆ ಮನೆಯಲ್ಲೇ ಪರಿಹಾರ

ಮಧುಮೇಹಕ್ಕೆ ಮನೆಯಲ್ಲೇ ಪರಿಹಾರ

| ಡಾ. ವೆಂಕಟ್ರಮಣ ಹೆಗಡೆ.

~ ಅಗಸೆಬೀಜವು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

~ ಹಸಿಶುಂಠಿಯು ನೋವು ನಿವಾರಕವಾಗಿದ್ದು ಕಾಲುನೋವು ಶಮನಕ್ಕೆ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ.

~ ಬೇಯಿಸಿದ ಅಥವಾ ಹಸಿಯಾದ ಕಡಲೆಕಾಯಿ ಬೀಜವನ್ನು (ಶೇಂಗಾ) ಹೆಚ್ಚಾಗಿ ಉಪಯೋಗಿಸಬೇಕು.

~ ಅಲಸಂದಿಕಾಳು, ಕೆಂಪು ಕಡಲೆ ಹಾಗೂ ಇನ್ನಿತರೆ ಮೊಳಕೆಕಾಳನ್ನು ತಿನ್ನುವುದು ಮಧುಮೇಹಿಗಳಿಗೆ ಉತ್ತಮ.

~ ಮೆಂತ್ಯೆಯನ್ನು ಮಜ್ಜಿಗೆಯೊಂದಿಗೆ ಸೇರಿಸಿ ಉಪಯೋಗಿಸಬೇಕು.

~ ಕಪ್ಪು ಎಳ್ಳು ಹಾಗೂ ಬಿಳಿ ಎಳ್ಳುಗಳ ಹೆಚ್ಚಿನ ಬಳಕೆಯು ಸಕ್ಕರೆ ಕಾಯಿಲೆ ಇರುವವರಿಗೆ ಆರೋಗ್ಯ ವರ್ಧನೆಗೆ ಸಹಕಾರಿ.

~ ಗ್ರೀನ್ ಟೀಯ ಬಳಕೆ (ಅದಕ್ಕೆ ಬೇಕಾದಲ್ಲಿ ನಿಂಬೆರಸ ಶುಂಠಿ ಮತ್ತು ಚಕ್ಕೆ ಪುಡಿಯನ್ನು ಸೇರಿಸಿಕೊಂಡು) ಮಾಡಿದಲ್ಲಿ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

~ ಪ್ರತಿದಿನ ಬೆಳಿಗ್ಗೆ ಅರ್ಧಗ್ಲಾಸ್ ಹಾಗಲಕಾಯಿಯ ರಸವನ್ನು ತೆಗೆದು ಅಥವಾ ಜ್ಯೂಸ ಮಾಡಿಕೊಂಡು ಕುಡಿಯುವುದು. ಇದರಿಂದ ಸಕ್ಕರೆ ಕಾಯಿಲೆ ಹತೋಟಿಗೆ ಬಂದು ಕಾಲು ಉರಿ, ಕಾಲು ಜೋಮು ಬರುವುದು. ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

~ ಹೀಗೆ ಈ ಮೇಲಿನಂತೆ ಸುಲಭವಾದ ವಿಧಾನಗಳನ್ನು ಅನುಸರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಹಾಗೆಯೇ ಇದರಿಂದ ಬರುವಂತಹ ಕಾಲು ಉರಿ, ಕಾಲು ಜೋಮು, ಕಾಲು ನೋವು ಇವುಗಳನ್ನು ಸಹ ಬಗೆಹರಿಸಿಕೊಳ್ಳಬಹುದು.

~ ಒಂದು ಪಾತ್ರೆಯಲ್ಲಿ ಅರ್ಧ ಚಮಚದಷ್ಟು ತ್ರಿಫಲಾ ಪೌಡರ್ ಹಾಗೂ ಅಷ್ಟೇ ಪ್ರಮಾಣದ ಅಮೃತ ಬಳ್ಳಿಯಪುಡಿಯನ್ನು ತೆಗೆದುಕೊಂಡು ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಹಾಕಿ ಸರಿಯಾಗಿ ಕದಕಬೇಕು. ಹೀಗೆ ತಯಾರಿಸಿಕೊಂಡಂತಹ ದ್ರವ್ಯವನ್ನು ಪ್ರತಿನಿತ್ಯ ಕುಡಿಯುತ್ತ ಬಂದಲ್ಲಿ ಸಕ್ಕರೆ ಪ್ರಮಾಣವನ್ನು ದೇಹದಲ್ಲಿ ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಸ್ವಲ್ಪ ಒಗರು ರುಚಿಯನ್ನು ಹೊಂದಿರುವ ಈ ಮಿಶ್ರಣವನ್ನು ಸೇವಿಸಿದ ನಂತರದಲ್ಲಿ ಬೇಕಾದಲ್ಲಿ ಅರ್ಧ ಲೋಟ ಬರಿಯ ಹಾಲನ್ನೂ ಸಹ ಕುಡಿಯಬಹುದು.

~ ಎರಡು ಬಾದಾಮಿ, ಅರ್ಧಚಮಚದಷ್ಟು ಕಲ್ಲಂಗಡಿ ಹಣ್ಣಿನ ಬೀಜಗಳು ಮತ್ತು ಒಂದು ಏಲಕ್ಕಿ (ಸಿಪ್ಪೆ ತೆಗೆದು)ಯನ್ನು ತರಿತರಿಯಾಗಿ ಜಜ್ಜಿಕೊಳ್ಳಬೇಕು. ಅದಕ್ಕೆ ಒಂದೊಂದು ಚಮಚ ತರಿಯಾಗಿ ಪೇಸ್ಟ್ ಮಾಡಿಟ್ಟುಕೊಂಡ ಬೂದು ಗುಂಬಳಕಾಯಿ ಹಾಗೂ ಬೆಟ್ಟದ ನೆಲ್ಲಿಕಾಯಿಯನ್ನು ಹಾಕಿ ಆ ಮಿಶ್ರಣಕ್ಕೆ ನೀರನ್ನು ಸೇರಿಸಿ ಕುಡಿಯಬೇಕು. ಪ್ರತಿನಿತ್ಯ ದಿನಕ್ಕೆ ಎರಡು ಬಾರಿಯಂತೆ ಆಹಾರಕ್ಕೆ ಮೊದಲು ಅಥವಾ ನಂತರದ ಒಂದು ತಾಸಿಗೆ ಕುಡಿಯುತ್ತ ಬಂದರೆ ಮಧುಮೇಹ ನಿಯಂತ್ರಣದಲ್ಲಿ ಬಂದು ಕಾಲಿನ ತೊಂದರೆಗಳು ಉಪಶಮನವಾಗುತ್ತವೆ.

~ ಕುದಿಯುತ್ತಿರುವ ನೀರಿಗೆ ಅರ್ಧ ಚಮಚ ಜ್ಯೇಷ್ಠಮಧು ಪೌಡರ್, ಅಷ್ಟೇ ಪ್ರಮಾದ ಶತಾವರಿ ಪುಡಿ ಹಾಗೂ ಸ್ವಲ್ಪ ಅಶ್ವಗಂಧ ಪುಡಿಯನ್ನು ಹಾಕಿ 5 ನಿಮಿಷ ಮಂದಗತಿಯ ಬೆಂಕಿಯಲ್ಲಿ ಕುದಿಯಲು ಬಿಡಬೇಕು. ನಂತರದಲ್ಲಿ ಅದನ್ನು ಕುಡಿಯಬೇಕು. ಹೀಗೆ ಪ್ರತಿದಿನ ಮಾಡುತ್ತ ಬಂದಲ್ಲಿ 30 ದಿನಗಳಲ್ಲಿ ಇದರ ಉತ್ತಮ ಪರಿಣಾಮಗಳು ತಿಳಿದು ಆರೋಗ್ಯ ಸಂರಚನೆಯಲ್ಲಿ ಅನುಕೂಲವಾಗುತ್ತದೆ.

* ಕೊನೇ ಹನಿ

1 ಚಮಚ ಜೇನುತುಪ್ಪ, 1 ಕಪ್ ಚಕೋತ ಹಣ್ಣಿನ ರಸ ಮತ್ತು 2 ಚಮಚ ಎಪಲ್ ಸಿಡೆರ್ ವಿನೆಗರ್ ಸೇರಿಸಿ ಪ್ರತಿನಿತ್ಯ ಆಹಾರದ ಮೊದಲು ಎರಡು ಬಾರಿ ಕುಡಿಯುತ್ತ ಬಂದಲ್ಲಿ ತೂಕ ಕಡಿಮೆಯಾಗುತ್ತದೆ.

(ಇದು ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ. ಇದೇ ಅಂತಿಮವಲ್ಲ. ಯಾವುದೇ ಆರೋಗ್ಯ ಸಮಸ್ಯೆಗೆ ತಜ್ಞವೈದ್ಯರನ್ನು ಸಂರ್ಪಸಲು ಮರೆಯಬೇಡಿ.)

ಸಾ.ಜ್ಞಾ- ವೈಜ್ಞಾನಿಕ ಉಪಕರಣಗಳು

★ಕೆಲವು ಕನ್ನಡ ತಾಂತ್ರಿಕ/ವೈಜ್ಞಾನಿಕ ಪದಗಳು★
.
★ಇಮೇಲ್=ಮಿಂಚಂಚೆ
★ಕಂಪ್ಯೂಟರ್=ಗಣಕಯಂತ್ರ
★ಲ್ಯಾಪ್ ಟಾಪ್=ಮಡಿಲು ಗಣಕಯಂತ್ರ
★ಡೌನಲೋಡ=ಕೆಳಭರಣ
&ಅಪ್ ಲೋಡ=ಮೇಲ್ಭರಣ
★ಕಾರ್ಬನ್ ಕಾಪಿ=ಕಾಡಿಗೆ ಪ್ರತಿ
★ಬ್ಲೈಂಡ ಕಾರ್ಬನ್ ಕಾಪಿ=ಕುರುಡು ಕಾಡಿಗೆ ಪ್ರತಿ
★ಮೌಸ್=ಮೂಷಕ
★ಮೌಸ್ ಪಾಯಿಂಟ್=ಮೂಷಕ ಸೂಚಕ
★ಕರ್ಸರ್=ಮಿಂಚುಕಡ್ಡಿ
★ಕಾಪಿ=ಪ್ರತಿ ಮಾಡು
★ಪೇಸ್ಟ=ಅಂಟಿಸು ★ಇಂಟರ್ನೆಟ್=ಅಂತರ್ಜಾಲ ★ಬ್ರೌಜಿಂಗ=ಅಂತರ್ಜಾಲಾಡು ★ವಿಂಡೊ=ಕಿಟಕಿ
★ಟೈಟಲ್ ಬಾರ=ಶೀರ್ಷಿಕೆ ಪಟ್ಟಿ
★ಟಾಸ್ಕಬಾರ್=ಕಾರ್ಯಕ್ಷೇತ್ರ ಸೂಚಕ ಪಟ್ಟಿ ★ಟೂಲ್ ಬಾರ್=ಸಾಮಗ್ರಿಗಳ ಪಟ್ಟಿ
★ಮೆನು ಭಾರ್= ಆಯ್ಕೆಗಳ ಪಟ್ಟಿ ★ಫಾರ್ಮ್ಯಾಟಿಂಗ್ ಬಾರ್ = ಓರಣ ಪಟ್ಟಿ
★ಪೆನ್ ಡ್ರೈವ್=ಲೇಖನಿ ಚಾಲಕ
ಪ್ರಮುಖ ಕಂಪನಿಗಳು *******
posco- southkorea (ಉಕ್ಕಿನ ಕಂಪನಿ)
boeing- ಯುಎಸ್ಎ (ವಿಮಾನ)
airbus- ಫ್ರಾನ್ಸ್ (ವಿಮಾನ ತಯಾರಕ)
ಅಧಿಕೃತ – Itly (ವಾಹನಗಳು)
ನಿಸ್ಸಾನ್-ಜಪಾನ್ (ವಾಹನಗಳು)
Toyta – ಜಪಾನ್ (ವಾಹನಗಳು)
ಹೋಂಡಾ – ಜಪಾನ್ (ವಾಹನಗಳು)
BMW- ಜರ್ಮನಿ (ವಾಹನಗಳು)
ಆಡಿ – ಜರ್ಮನಿ (ವಾಹನಗಳು)
Volkswagon– ಜರ್ಮನಿ (ವಾಹನಗಳು)
Hyundai– Southkorea (ವಾಹನಗಳು)
ford– ಯುಎಸ್ಎ (ವಾಹನಗಳು)
Suzaki– ಜಪಾನ್ (ವಾಹನಗಳು)
ರೆನಾಲ್ಟ್ – ಫ್ರಾನ್ಸ್ (ವಾಹನಗಳು)
Volvo– Sweedon (ವಾಹನಗಳು)
ಅಶೋಕ Leyland– ಭಾರತ
Samsung– Southkorea (ಎಲೆಕ್ಟ್ರಾನಿಕ್ಸ್
andelectrical)
ಹಿಟಾಚಿ — ಜಪಾನ್ (ElectricalAppliances)
ಎಲ್ಜಿ — ದಕ್ಷಿಣ ಕೊರಿಯಾ (ಎಲೆಕ್ಟ್ರಾನಿಕ್ಸ್
andelectrical)
Whirlpool– ಯುಎಸ್ಎ (ವಿದ್ಯುತ್ ವಸ್ತುಗಳು)
Ericssion — Swedon (ಟೆಲಿಕಾಂ)
Nokia– ಫಿನ್ಲ್ಯಾಂಡ್ (ಟೆಲಿಕಾಂ)
ಮೊಟೊರೊಲಾ – ಯುಎಸ್ಎ (ಟೆಲಿಕಾಂ)
Vodaphone– ಯುಕೆ, ಬ್ರಿಟನ್ (ಟೆಲಿಕಾಂ)
ಬಾರ್ಕ್ಲೇಸ್ Bank– ಯುಕೆ (ಹಣಕಾಸು)
DeutscheBank– ಜರ್ಮನಿ (ಹಣಕಾಸು)
GoldmanSachs – ಯುಎಸ್ಎ (ಹಣಕಾಸು)
ಅಸೆಂಚರ್ – ಐರ್ಲೆಂಡ್ (ಐಟಿ)
ಇನ್ಫೋಸಿಸ್ – ಭಾರತ (ಐಟಿ)
TCS– ಭಾರತ (ಐಟಿ)
WIPRO– ಭಾರತ (ಐಟಿ)
Apple– ಯುಎಸ್ಎ (ಎಲೆಕ್ಟ್ರಾನಿಕ್ ವಸ್ತುಗಳು)
Google- ಯುಎಸ್ಎ (IT ಸೇವೆಗಳು)
Yahoo– ಯುಎಸ್ಎ (IT ಸೇವೆಗಳು)
Sony– ಜಪಾನ್ (ಎಲೆಕ್ಟ್ರಾನಿಕ್ ವಸ್ತುಗಳು)
Intel– ಅಮೇರಿಕಾ (ಯಂತ್ರಾಂಶ).

★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು:
(Scientific equipments(tools) and their Uses)
1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ.
2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ.
3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ.
4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ.
5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ.
6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ.
7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ.
8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ.
9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ.
10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ.
11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ.
12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ.
13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ.
14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ.
15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ.
16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ.
17) ಆಡಿಯೋಮೀಟರ್ —————> ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ.
18) ಬೈನಾಕ್ಯೂಲರ್ —————> ದೂರದಲ್ಲಿರುವ ವಸ್ತುಗಳನ್ನು ಹತ್ತಿರದಲ್ಲಿ ನೋಡಲು ಬಳಸುವ ಸಾಧನ.
19) ಬ್ಯಾರೋಗ್ರಾಫ್ —————> ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ.
20) ಕಂಪಾಸ್ —————> ಹಡಗಿನ ದಿಕ್ಕನ್ನು ಸೂಚಿಸುವ ಸಾಧನ.
21) ರೈನ್ ಗೇಜ್ —————> ಬಿದ್ದ ಮಳೆಯನ್ನು ಅಳೆಯುವ ಸಾಧನ.
22) ಸ್ಟೆತೋಸ್ಕೋಪ್ —————> ಹೃದಯ ಬಡಿತವನ್ನು ಅಳೆಯುವ ಸಾಧನ.
23) ಥರ್ಮೋಕೊಪಲ್ —————> ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ.
24) ರಿಕ್ಟರ್ ಮಾಪಕ —————> ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ.
25) ರೇಡಾರ್ —————> ರೇಡಿಯೊ ತರಂಗಗಳನ್ನು ಉಪಯೋಗಿಸಿ ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನ.
26) ಸೋನಾರ್ —————> ಶೃವಣಾತೀತ ಧ್ವನಿಯನ್ನು ಉಪಯೋಗಿಸಿ ನೀರಿನೊಳಗಿನ ವಸ್ತುಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನ.
27) ಕ್ಯಾಲೋರಿ —————> ಶಾಖವನ್ನು ಅಳೆಯುವ ಸಾಧನ.
28) ಮೈಕ್ರೋಸ್ಕೋಪ್ —————> ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ.

✌ಪ್ರಮುಖ100 ಪಿತಾಮಹರುಗಳು✌
1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ👉ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ👉ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾ ಜ ಅಯ್ಯಂ
ಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ👉ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ👉ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ👉ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ👉 ಬಿ.ಆರ್.ಅಂಬೇಡ್ಕರ್