ಕ್ಷೀಣಿಸುತ್ತಿರುವ ಸರ್ಕಾರಿಶಾಲೆಗಳ ಮಕ್ಕಳ ಸಂಖ್ಯೆ.

image

ಸರಕಾರಿ ಶಾಲೆಗಳಿಗೆ ಪ್ರತಿ ವರ್ಷ 50 ಸಾವಿರ ಮಕ್ಕಳು ‘ಗುಡ್‌ ಬೈ’
ಆರ್‌ಟಿಇ ಎಫೆಕ್ಟ್ : ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ ಶಿವರಾಮ್‌ ಬೆಂಗಳೂರು 2016-17ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭೋತ್ಸವದ ದಿನ ಶಾಲಾ ಆವರಣ ಸಿಂಗರಿಸಿ, ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಹಾರ್ದಿಕ ಸ್ವಾಗತ ಕೋರುವಂತೆ ಸರಕಾರ ಸುತ್ತೋಲೆ ಹೊರಡಿಸಿದ್ದು, ಇನ್ನೊಂದು ಕಡೆ ಪ್ರತಿ ವರ್ಷ ಸರಕಾರ ಶಾಲೆಗೆ 50 ಸಾವಿರ ಮಕ್ಕಳು ಗುಡ್‌ಬೈ ಹೇಳಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಒಂದೆಡೆ ಇಂಗ್ಲಿಷ್‌ ವ್ಯಾಮೋಹದಿಂದ ಗ್ರಾಮೀಣ ಮಕ್ಕಳು ಕೂಡ ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗುತ್ತಿದ್ದರೆ, ಮತ್ತೊಂದೆಡೆ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಮೂಲಕ ಅಲ್ಪಧಿಸಂಖ್ಯಾಧಿತಧಿವಲ್ಲದ ಅನುಧಿದಾಧಿನಧಿರಧಿಹಿತ ಶಾಲೆಧಿಗಧಿಳಿಗೆ ಸೇರ್ಪಡೆಯಾಗುವ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಸರಕಾರವೇ ಶುಲ್ಕ ಭರಿಸುವ ಮೂಲಕ ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಉತ್ತೇಜನ ನೀಡುತ್ತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಈ ವರ್ಷ ಕೂಡ ಆರ್‌ಟಿಇ ಮೂಲಕ 1,01,315 ಮಕ್ಕಳಿಗೆ ಸರಕಾರವೇ ಶುಲ್ಕ ಭರಿಸುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಸರಕಾರಕ್ಕೆ 100 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ. ಕಳೆದ ವರ್ಷ ಕೂಡ ಸರಕಾರ ಈ ಉದ್ದೇಶಕ್ಕಾಗಿ 316 ಕೋಟಿ ರೂ. ಶುಲ್ಕ ಭರಿಸಿದೆ. ಆರ್‌ಧಿಟಿಇ ಕಾಯಿದೆ ಸೆಕ್ಷನ್‌ (12)(1)(ಸಿ) ಅನ್ವಯ ಅವಧಿಕಾಶ ವಂಚಿಧಿತರು ಹಾಗೂ ದುರ್ಬಲ ವರ್ಗಧಿದಧಿವರ ಮಕ್ಕಧಿಳಿಗೆ ಉಚಿತವಾಗಿ ಶೇ 25ರಷ್ಟು ಸೀಟುಧಿಗಳನ್ನು ಮೀಸಧಿಲಿಧಿಡಧಿಲಾಗುತ್ತದೆ. ಆದರೆ, ಉಳ್ಳವರು ಕೂಡ ಇದರ ದುರ್ಬಳಕೆಗೆ ಇಳಿದಿರುವುದು ಬೆಳಕಿಗೆ ಬಂದಿದೆ. ಕೆಲವರು ನಕಲಿ ಜಾತಿ ಪ್ರಮಾಣ ಸಲ್ಲಿಸಿರುವುದನ್ನೂ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಪತ್ತೆ ಮಾಡಿದೆ. ”ಆರ್‌ಟಿಇ ಪ್ರವೇಶಕ್ಕೆ ಮಿತಿ ಹೇರಬೇಕು. ಹೆಚ್ಚಿನ ನೆರವನ್ನೂ ಸರಕಾರ ನೀಡದೆ ಅದನ್ನು ಸರಕಾರಿ ಶಾಲೆಗಳ ಪ್ರಗತಿಗೆ ಬಳಸಬೇಕು,” ಎಂದು ಹೆಸರೇಳಲಿಚ್ಛಿಸದ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೆಚ್ಚುವರಿ ಶಿಕ್ಷಕರ ಹೊರೆ: ಈ ನಡುವೆ, ಸರಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತಿರುವುದರಿಂದ ವಿದ್ಯಾರ್ಥಿ- ಶಿಕ್ಷಕರ ಅನುಪಾತದಂತೆ ಹೆಚ್ಚುವರಿ ಶಿಕ್ಷಕರ ಸಂಖ್ಯೆಯೂ ಹೊರೆಯೂ ಸರಕಾರಕ್ಕೆ ಹೆಚ್ಚುತ್ತಿದೆ. 2016-17ನೇ ಸಾಲಿನಲ್ಲಿ ಜಿಲ್ಲಾ ಶೈಕ್ಷಣಿಕ ಮಾಹಿತಿ ವ್ಯವಸ್ಥೆ (ಡೈಸ್‌)ಯ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 13,633 ಹೆಚ್ಚುವರಿ ಶಿಕ್ಷಕರಿದ್ದಾರೆ ಎಂದು ಗುರುತಿಸಲಾಗಿದೆ. ಈ ರೀತಿ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಮರು ಹಂಚಿಕೆ ಮಾಡುವಂತೆ ಈಗಾಗಲೇ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ನೆರವಿಗೆ ಬಾರದ ಸರಕಾರದ ಭಾಗ್ಯ ಮತ್ತೊಂದೆಡೆ ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆ ಮೂಲಕ ಹಾಲು, ಸಮವಸ್ತ್ರ, ಶೂ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾಗಿರುವ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆ ಮಾಡುತ್ತಿರುವುದು ಸರಕಾರಿ ಶಾಲೆಗಳ ಅಧೋಗತಿಗೆ ಕಾರಣವಾಗುತ್ತಿದೆ. ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಸರಕಾರ ಪೂರಕ ವಾತಾವರಣ ನಿರ್ಮಿಸಬೇಕೆನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಇತ್ತೀಚೆಗೆ ನಡೆದ ಸಭೆಯಲ್ಲಿ ಖಾಸಗಿ ಶಾಲೆಗಳಲ್ಲೂ ನರ್ಸರಿ ಮಾದರಿಯ ಶಿಕ್ಷಣ ನೀಡಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್‌ ಅವರಿಗೆ ಸೂಚನೆ ನೀಡಿ, ಸರಕಾರಿ ಶಾಲಾ ಮಕ್ಕಳ ಪ್ರವೇಶ ಕುರಿತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ತರಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಇಂಗ್ಲಿಷ್‌ ಮಾಧ್ಯಮ ಶುರು ಮಾಡಲಿ: ”ಖಾಸಗಿ ಶಾಲೆಗಳತ್ತ ಮಕ್ಕಳು ವಲಸೆ ಹೋಗುವುದನ್ನು ತಪ್ಪಿಸಬೇಕಾದರೆ ಸರಕಾರಿ ಶಾಲೆಗಳಲ್ಲೂ ಒಂದು ಭಾಷೆಯಾಗಿ ಇಂಗ್ಲಿಷ್‌ ಕಲಿಸುವುದು ಅನಿವಾರ್ಯ. ಕೇರಳದಲ್ಲಿ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಹೀಗಾಗಿ, ಅಲ್ಲಿನ ಸರಕಾರಿ ಶಾಲೆಗಳು ಮಕ್ಕಳಿಂದ ತುಂಬಿ ತುಳುಕುತ್ತಿವೆ. ತಮಿಳುನಾಡಿನಲ್ಲೂ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡಲಾಗಿದೆ. ಆದರೆ, ತಮಿಳು ಕಲಿಯುವುದು ಅನಿವಾರ್ಯ. ಅದೇ ರೀತಿ, ಕರ್ನಾಟಕದಲ್ಲೂ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಿದರೆ ಸೂಕ್ತ,” ಎಂದು ತಜ್ಞರು ಸಲಹೆ ಮಾಡುತ್ತಾರೆ. — ಸರಕಾರಿ ಶಾಲೆಗಳ ಸಬಲೀಕರಣವೇ ಎಲ್ಲದಕ್ಕೂ ಮದ್ದು. ಖಾಸಗಿಯಂತೆ ಸರಕಾರಿ ಶಾಲೆಗಳಲ್ಲೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು. ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್‌ ಕಲಿಸಲು ಈಗಾಗಲೇ ಸರಕಾರದ ಆದೇಶ ನೀಡಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಮೊದಲು ಶಿಕ್ಷಕರಿಗೆ ಇಂಗ್ಲಿಷ್‌ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಆನಂತರ ಮಕ್ಕಳಿಗೆ ಕಲಿಸಬೇಕು. ಇದರಿಂದ ಖಾಸಗಿ ಶಾಲೆಗಳ ವ್ಯಾಮೋಹ ತಪ್ಪಿಸಬಹುದು
– ಡಾ.ಎಲ್‌. ಹನುಮಂತಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ.

ಮಕ್ಕಳ ಶಿಕ್ಷಣ-ನೀವು ಎಷ್ಟು ಹಣ ಉಳಿಸಿರುವಿರಿ?

image

ಮಕ್ಕಳ ಎಜುಕೇಷನ್‌ಗೆ ನೀವು ಎಷ್ಟು ಕಾಸು ಉಳಿಸಿದ್ದೀರಿ?
ಮಹಾನಗರಗಳ ಕತೆ ಬಿಡಿ, ಒಂದು ತಾಲೂಕು ಕೇಂದ್ರದಲ್ಲಿ ಎಲ್‌ಕೆಜಿ ಮುಗಿಸಲು ಒಂದು ಮಗುವಿಗೆ 25ರಿಂದ 30 ಸಾವಿರ ರೂ. ಖರ್ಚಾಗುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಂತಗಳಲ್ಲಿ ಖರ್ಚು ಏರಿಕೆಯಾಗುತ್ತಲೇ ಹೋಗುತ್ತದೆ. ಉನ್ನತ ಶಿಕ್ಷಣಗಳಿಗೆ ಲಕ್ಷ ಗಟ್ಟಲೇ ಹಣ ಬೇಕು. ಈ ಖರ್ಚುಗಳನ್ನು ನಿಭಾಯಿಸಲು ಪೋಷಕರಿಗೆ ಫೈನಾನ್ಸಿಯಲ್‌ ಪ್ಲಾನ್‌ ಅತ್ಯಗತ್ಯ. —– * ಹ.ಚ.ನಟೇಶ ಬಾಬು ಪಿಯುಸಿ ಫಲಿತಾಂಶಗಳು ಮೊನ್ನೆಯಷ್ಟೆ ಬಂದಿವೆ. ಮೆಡಿಕಲ್‌, ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳನ್ನು ಮಾಡಲು ಈಗ 5 ಲಕ್ಷ ರೂ.ಗಳಾದರೂ ಬೇಕು. 5 ವರ್ಷಗಳ ನಂತರ ಶೇ.6ರಷ್ಟು ಹಣದುಬ್ಬರ ಲೆಕ್ಕ ಹಾಕಿದರೆ ಅದು 6.69 ಲಕ್ಷ ರೂ. ಮುಟ್ಟುತ್ತದೆ. 10 ವರ್ಷಗಳಿಗೆ 8.95 ಲಕ್ಷ ರೂ., 15 ವರ್ಷಗಳ ನಂತರ 11.98 ಲಕ್ಷ ರೂ. ಹೀಗೆ ಏರಿಕೆಯಾಗುತ್ತಲೇ ಹೋಗುತ್ತದೆ. ಹಣದುಬ್ಬರ ಪ್ರಮಾಣ ಶೇ.8ರಿಂದ 10ರಷ್ಟು ಹೆಚ್ಚಳವಾದರೆ ಈ ಮೊತ್ತ ಗಾಬರಿ ಹುಟ್ಟುವಷ್ಟು ದೊಡ್ಡದಾಗುತ್ತದೆ. ಹೌದು, ವರ್ಷದಿಂದ ವರ್ಷಕ್ಕೆ ಮಕ್ಕಳ ಎಜುಕೇಷನ್‌ ದುಬಾರಿಯಾಗುತ್ತಿದೆ. ಪೋಷಕರ ದುಡಿಮೆಯ ಬಹುಪಾಲು ಹಣ ಇದಕ್ಕಾಗಿಯೇ ಖರ್ಚಾಗುತ್ತಿದೆ.ಇನ್ನು ಐಐಎಂನಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2007ರಿಂದ ಈಚೆಗೆ ಶುಲ್ಕಗಳು ಶೇ.400 ಪಟ್ಟು ಹೆಚ್ಚಳವಾಗಿವೆ! 2007ರಲ್ಲಿ ಐಐಎಂ ಅಹಮದಾಬಾದ್‌ ಮತ್ತು ಕೋಲ್ಕೊತಾದಲ್ಲಿ ಎರಡು ವರ್ಷಗಳ ಶುಲ್ಕವು 4 ಲಕ್ಷ ರೂ.ಗಳಷ್ಟಿತ್ತು. ಅದೀಗ 19 ಲಕ್ಷ ರೂ.ಗಳಿಗೆ ಮುಟ್ಟಿದೆ. ಟ್ರೆಂಡ್‌ ಹೀಗೆಯೇ ಮುಂದುವರಿದರೆ ಇನ್ನು 10 ವರ್ಷಕ್ಕೆ ಶುಲ್ಕವು 95 ಲಕ್ಷ ರೂ.ತಲುಪಿದರೂ ಅಚ್ಚರಿಯೇನಿಲ್ಲ. ಕಳೆದ ಒಂದೇ ವರ್ಷದಲ್ಲಿ ಐಐಎಂ-ಅಹಮದಾಬಾದ್‌ನಲ್ಲಿ ಶುಲ್ಕವು ಶೇ.5ರಷ್ಟು, ಐಐಎಂ-ಲಖನೌನಲ್ಲಿ ಶೇ.37ರಷ್ಟು ಹೆಚ್ಚಳವಾಗಿವೆ(ಮಾಹಿತಿ: ಸಂಕೇತ್‌ ಧನೋರ್ಕರ್‌). ಮಕ್ಕಳು ಡಾಕ್ಟರ್‌, ಎಂಜಿನಿಯರ್‌, ಸೈಂಟಿಸ್ಟ್‌ ಆಗಬೇಕು, ಐಎಎಸ್‌ ಮಾಡಬೇಕು ಎನ್ನುವ ಕನಸುಗಳು ಪೋಷಕರಿಗೆ ಸಹಜ. ಆದರೆ, ಉನ್ನತ ಶಿಕ್ಷ ಣವೆಂದರೆ ಸುಮ್ಮನೇ ಅಲ್ಲ. ನಿರ್ದಿಷ್ಟ ಶುಲ್ಕದ ಜತೆಗೆ ನಾನಾ ವೆಚ್ಚಗಳನ್ನೂ ಪೋಷಕರು ಭರಿಸಬೇಕಾಗುತ್ತದೆ. ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ರೂ.45,000, ಪರೀಕ್ಷಾ ಶುಲ್ಕ ರೂ.500, ನೋಂದಣಿ ಶುಲ್ಕ ರೂ.500, ಹಾಸ್ಟೆಲ್‌ ಶುಲ್ಕ ರೂ.2,000 ಸೇರಿದಂತೆ ಒಂದು ಲಕ್ಷ ರೂ.ಗಳ ತನಕ ನಾನಾ ಖರ್ಚುಗಳು ಸೇರಿಕೊಳ್ಳುತ್ತವೆ. ಇಂಥ ಪರಿಸ್ಥಿತಿ ನಿಭಾಯಿಸಲು ಪೋಷಕರು ಸಜ್ಜಾಗಬೇಕು. ಅಂದರೆ, ಮಕ್ಕಳ ಎಜುಕೇಷನ್‌ಗಾಗಿ ಆರಂಭದಿಂದಲೂ ಹಣಕಾಸಿನ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಮಕ್ಕಳ ಶಿಕ್ಷ ಣಕ್ಕೆ ಪೂರಕವಾಗಿ ಉಳಿತಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಶಿಕ್ಷ ಣ ಶುಲ್ಕಗಳ ಏರಿಕೆಯನ್ನು ಅಂದಾಜಿಸಿ ಪ್ಲಾನ್‌ ಮಾಡಬೇಕು. ಇಲ್ಲದೇ ಹೋದರೆ, ನಿಮ್ಮ ಕನಸಿನ ಜತೆಗೆ ಮಕ್ಕಳ ಕನಸುಗಳೂ ಬಾಡಿ ಹೋಗುತ್ತವೆ. ಮಕ್ಕಳು ಸಣ್ಣವರಾಗಿದ್ದಾಗಲೇ ಉಳಿತಾಯ ಆರಂಭಿಸಿ: ಕಾಲನ ವೇಗಕ್ಕೆ ಸಾಟಿಯಿಲ್ಲ. ನಿಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ಉನ್ನತ ಶಿಕ್ಷ ಣದ ಕೋರ್ಸ್‌ಗಳಿಗೆ ಬಂದಾಗ ಆಯಾ ಸಂದರ್ಭಕ್ಕೆ ತಕ್ಕಂತೆ ಹಣಕಾಸಿನ ವೆಚ್ಚಗಳು ಎದುರಾಗುತ್ತವೆ. ಅದಕ್ಕೆ ತಕ್ಕನಾದ ಹಣಕಾಸಿನ ಪ್ಲಾನ್‌ಗಳನ್ನು ಪೋಷಕರು ಅನುಸರಿಸಬೇಕು. ಮಕ್ಕಳ ಉನ್ನತ ಶಿಕ್ಷ ಣಕ್ಕೆ ಅಗತ್ಯವಾದ ಲಕ್ಷಾಂತರ ರೂಪಾಯಿಯನ್ನು ಹೊಂದಿಸುವುದು ಸುಲಭದ ಮಾತಲ್ಲ. ಹೀಗಾಗಿ ಅತಿ ಬೇಗ ಹೂಡಿಕೆಯನ್ನು ಆರಂಭಿಸಬೇಕು. ನಿಮ್ಮ ಮಗ/ಮಗಳಿಗೆ 18 ವರ್ಷವಾದಾಗ 25 ಲಕ್ಷ ರೂ.ಗಳು ಬರುವಂತಾಗಬೇಕು ಅನ್ನುವಿರಾದರೆ ನಿಮ್ಮ ಮಗುವಿಗೆ 3 ವರ್ಷವಾಗಿದ್ದಾಗಲಿಂದಲೇ ಉಳಿತಾಯ ಆರಂಭಿಸಬೇಕು. 15 ವರ್ಷಗಳ ಕಾಲ ತಿಂಗಳಿಗೆ 5000 ರೂ.ಗಳನ್ನು ಉಳಿತಾಯ ಮಾಡುತ್ತಾ ಹೋಗಬೇಕು. ನಿಮ್ಮ ಮಗುವಿನ 9ನೇ ವರ್ಷದಿಂದ ಉಳಿತಾಯ ಆರಂಭಿಸುವಿರಾದರೆ ತಿಂಗಳಿಗೆ 9,195 ರೂ. ಹಣವನ್ನು 9 ವರ್ಷ ಉಳಿಸಬೇಕು. ನಿಮ್ಮ ಮಗ/ಮಗಳಿಗೆ 12ನೇ ವರ್ಷವಾದಾಗ ನಿಮ್ಮ ಉಳಿತಾಯದ ಪ್ಲಾನ್‌ ಆರಂಭವಾದರೆ 6 ವರ್ಷಗಳ ಕಾಲ ತಿಂಗಳಿಗೆ 23,875 ರೂ. ತೆಗೆದಿಡಬೇಕಾಗುತ್ತದೆ. ಅಂದರೆ ನೀವು ತಡ ಮಾಡಿದಷ್ಟು ತೊಂದರೆ ತಪ್ಪಿದ್ದಲ್ಲ. ಉಳಿತಾಯದ ಮೊತ್ತವನ್ನು ಹೆಚ್ಚಿಸಿ: ”ಮೂರು ಈಕ್ವಿಟಿ ಫಂಡ್‌ಗಳಲ್ಲಿ 5,000 ರೂ.ಗಳ ಹೂಡಿಕೆ ಮಾಡಿ, ಪ್ರತಿ ವರ್ಷ ಈ ‘ಸಿಪ್‌* ಮೊತ್ತವನ್ನು 5,000 ರೂಪಾಯಿ ಹೆಚ್ಚಿಸುತ್ತಾ ಬಂದರೆ 13 ವರ್ಷಗಳಲ್ಲಿ ಸುಮಾರು ಒಂದು ಕೋಟಿ ರೂಪಾಯಿಯನ್ನು ನೀವು ಉಳಿಸಬಹುದು. ಸದ್ಯಕ್ಕೆ ಇಂದು ಒಂದು ಕೋಟಿ ಅನ್ನುವುದು ದೊಡ್ಡ ಮೊತ್ತವಾಗಿ ಕಂಡರೂ, ಮುಂದಿನ 10-15 ವರ್ಷಗಳಲ್ಲಿ ಉತ್ತಮ ವೃತ್ತಿಪರ ಕೋರ್ಸ್‌ಗಳಿಗೆ ಅದಕ್ಕೂ ಹೆಚ್ಚಿನ ಹಣ ತೆರಬೇಕಾಗುತ್ತದೆ,** ಎನ್ನುವುದು ತಜ್ಞರ ಅಭಿಪ್ರಾಯ. ಹೂಡಿಕೆ ಸಂಬಂಧ ಹಣಕಾಸು ತಜ್ಞರ ಸಲಹೆಗಳನ್ನು ಪಡೆಯಬಹುದು. ಹೂಡಿಕೆ ಎಲ್ಲಿ, ಹೇಗೆ? ಮಕ್ಕಳ ಶಿಕ್ಷ ಣಕ್ಕಾಗಿ ಉಳಿತಾಯ ಮಾಡಲು ನಾನಾ ಆಯ್ಕೆಗಳಿವೆ. ರಿಸ್ಕ್‌ ಇದ್ದರೂ ಪರವಾಗಿಲ್ಲ ಎನ್ನುವವರು ಸ್ಟಾಕ್ಸ್‌ ಮತ್ತು ಈಕ್ವಿಟಿ ಫಂಡ್‌ಗಳನ್ನು ಆಯ್ದುಕೊಳ್ಳಬಹುದು. ಮಕ್ಕಳು ಚಿಕ್ಕವರಾಗಿದ್ದ ಪಕ್ಷ ದಲ್ಲಿ ಈ ಆಯ್ಕೆಗಳನ್ನು ಬಳಸಬಹುದು. ಒಂದು ವೇಳೆ ಮಗ/ಮಗಳಿಗೆ 15ರಿಂದ 17 ವರ್ಷವಾಗಿದ್ದರೆ, ಆಗ ನೀವು ಉಳಿತಾಯ ಆರಂಭವಿಸುವುದಾದರೆ ಮ್ಯೂಚುವಲ್‌ ಫಂಡ್‌ಗಳಿಗೆ ಹಣ ಹಾಕಬಹುದು. ಈ ಹಂತದಲ್ಲಿ ರಿಸ್ಕ್‌ಗಳು ಬೇಡ. ಆರ್‌ಡಿ ಮತ್ತು ಅಲ್ಪಾವಧಿಯ ಡೆಬ್ತ್‌ ಫಂಡ್‌ಗಳತ್ತ ಗಮನ ಹರಿಸಬಹುದು. ಮಕ್ಕಳಿಗೆ ಹಣ ಮತ್ತು ನಿಮ್ಮ ತೆರಿಗೆ ಉಳಿಸುವ ನಿಟ್ಟಿನಲ್ಲಿ ಪಿಪಿಎಫ್‌ ಅಥವಾ ಹೆಣ್ಣು ಮಕ್ಕಳಿಗಾಗಿ ಮೀಸಲಾದ ಸುಕನ್ಯ ಸಮೃದ್ಧಿ ಯೋಜನೆಗಳನ್ನು ಆಯ್ದುಕೊಳ್ಳಬಹುದು. ಜೀವವಿಮೆ ಯೋಜನೆಯನ್ನು ನೋಡುವುದಾದರೆ ಮನಿ ಬ್ಯಾಕ್‌ ಯೋಜನೆಯನ್ನು ಆಯ್ದುಕೊಳ್ಳಬಹುದು. ಮಗ/ಮಗಳಿಗೆ 18 ವರ್ಷವಾದಾಗ ಪಾಲಿಸಿ ಮೆಚ್ಯೂರ್ಡ್‌ ಆಗುವಂತೆ ವ್ಯವಸ್ಥೆ ಮಾಡಿ, 5 ವರ್ಷಕ್ಕೆ ಒಂದು ಸಲ ಬರುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಬಹುದು. ಇನ್ನು ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕ 30,000ರಿಂದ 40,000 ರೂ. ಮತ್ತು ಪಿಪಿಎಫ್‌ನಲ್ಲಿ 30 ಸಾವಿರ ರೂ. ಹಣ ಉಳಿಸ
ುವುದರಿಂದ ತೆರಿಗೆ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗುತ್ತದೆ. ಮಕ್ಕಳ ಎಜುಕೇಷನ್‌ಗೆ ಹಣ ಉಳಿತಾಯ ಮಾಡಬೇಕೇ? ಕೆಲವು ತಿಂಗಳ ನಂತರ ಶುರು ಮಾಡೋಣ ಎಂದು ಯೋಚಿಸಬೇಡಿ… ಒಂದು ತಿಂಗಳು ಸಹ ಪೋಸ್ಟ್‌ಪೋನ್‌ ಮಾಡಬೇಡಿ. ಈ ತಿಂಗಳಿನಿಂದಲೇ ಆರಂಭಿಸಿ… ಒಳ್ಳೆ ಕೆಲಸ ಮಾಡುವುದನ್ನು ತಡಮಾಡಬಾರದು. ಇರಲಿ ಪರ್ಫೆಕ್ಟ್ ಪ್ಲಾನ್‌: ಪಿಯುಸಿಯಲ್ಲಿ ಪ್ರವೀಣ್‌ ಕುಮಾರ್‌ ಉತ್ತಮ ಅಂಕ ಪಡೆದಿದ್ದಾನೆ. ಆತನಿಗೆ ಎಂಜಿನಿಯರ್‌ ಆಗುವ ಹಂಬಲ. ಹೆತ್ತವರಿಗೂ ಅದೇ ಕನಸು. ಇಲ್ಲಿ ಮಗನ 18ನೇ ವರ್ಷಕ್ಕೆ ಹಣ ಬರುವಂತೆ ತಂದೆ ಗೋಪಾಲ್‌ ರಾವ್‌ ಅವರು ಎಲ್‌ಐಸಿ ಮಾಡಿಸಿದ್ದರು. 3 ಲಕ್ಷ ರೂ. ವಿಮೆ ಹಣ ಕೈಯಲ್ಲಿದ್ದು, ಉಳಿದ ಹಣವನ್ನು ತಮ್ಮ ಪಿಎಫ್‌ ಮತ್ತು ಉಳಿತಾಯದ ಹಣದಲ್ಲಿ ಹೊಂದಿಸುವುದು ಅವರಿಗೆ ಕಷ್ಟವೇನಲ್ಲ. ಇಂಥ ನಿರ್ದಿಷ್ಟ ಯೋಜನೆಗಳು ಇಲ್ಲದೇ ಹೋದರೆ ಮಕ್ಕಳ ಶಿಕ್ಷ ಣ ಕುಂಟುತ್ತದೆ.

ಮೊದಲ ಪ್ರಯತ್ನದಲ್ಲಿಯೇ ಎವರೆಸ್ಟ್ ಏರಿದ ಹುಬ್ಬಳ್ಳಿ ನಾರಿ.

image

ಸಾಹಸದ ತುಡಿತ…ಮೊದಲ ಪ್ರಯತ್ನದಲ್ಲೇ ಎವರೆಸ್ಟ್ ಏರಿದ ಹುಬ್ಬಳ್ಳಿ ಯುವತಿ!
ವಾಣಿಜ್ಯ ನಗರಿಯ ಯುವತಿಯೊಬ್ಬರು ಪ್ರಥಮ ಪ್ರಯತ್ನದಲ್ಲೇ ಮೌಂಟ್ ಎವರೆಸ್ಟ್ ಏರುವ ಮೂಲಕ ಸಾಧನೆ ಮಾಡಿದ್ದಾರೆ. ವಿದ್ಯಾನಗರದ ನಂದಿತಾ ನಾಗನಗೌಡ ಎಂಬುವರೇ ಈ ಸಾಧನೆಗೈದ ಯುವತಿ.

ಅಮೆರಿಕದಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ

27 ವರ್ಷದ ನಂದಿತಾ, ನಗರದ ಬಿವಿಬಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರೈಸಿ ಅಮೆರಿಕದಲ್ಲಿ ಎಂಬಿಎ ಪದವಿ ಪಡೆದು ಅಲ್ಲೇ ಸಾಫ್ಟ್‌‌‌‌ವೇರ್‌‌‌‌‌‌‌‌‌‌‌‌‌‌‌‌‌‌‌‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಚಿಕ್ಕನಿಂದಲೂ ಸಾಹಸ ಕ್ರೀಡೆಯಲ್ಲಿ ಆಸಕ್ತಿ

ಚಿಕ್ಕಂದಿನಿಂದಲೂ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ನಂದಿತಾ, ಸುಮಾರು 8 ಸಾವಿರ ಮೀಟರ್ ಎತ್ತರದ ದಕ್ಷಿಣ ವಿಭಾಗದ ಹಿಮಾಲಯ ಪರ್ವತ ಏರಿ ಸಾಧನೆ ಮಾಡಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ ಹೊಂದಿದ್ದ ನಂದಿತಾ, ತಮ್ಮ ಜೀವನದಲ್ಲಿ ಅದ್ಭುತ ಸಾಧನೆಯನ್ನೇ ಮಾಡಿದ್ದಾರೆ. ಮಾರ್ಚ್‌ 15 ರಿಂದ ತಮ್ಮ ಮೂವರು ಸ್ನೇಹಿತರೊಂದಿಗೆ ಮೌಂಟ್ ಎವರೆಸ್ಟ್ ಏರಲು ಆರಂಭಿಸಿದ ನಂದಿತಾ ಮೇ 6 ರ ವೇಳೆಗೆ 8 ಸಾವಿರ ಮೀಟರ್ ಕ್ರಮಿಸಿ ತಮ್ಮ ಗುರಿ ತಲುಪಿದ್ದರು.  

ಇವರೊಂದಿಗೆ ಅಮೆರಿಕದ ಇಬ್ಬರು ಸ್ನೇಹಿತರು ಕೈ ಜೋಡಿಸಿದ್ದರು. ಇದೊಂದು ಅದ್ಭುತ ಅನುಭವ ಎಂದು ಹೇಳುವ ನಂದಿತಾ, ಒಬ್ಬರೇ ಶಿಖರ ಏರುವುದು ಬಹಳ ಕಷ್ಟ. ಆದರೆ ಜೊತೆಯಲ್ಲಿ ಯಾರಾದರೂ ಇದ್ದರೆ ಶಿಖರ ಏರುವುದು ಕಷ್ಟದ ವಿಷಯವೇನಲ್ಲ ಎನ್ನುತ್ತಾರೆ.

ಪೂರ್ವ ತರಬೇತಿ ಅಗತ್ಯ

ಮೌಂಟ್‌ ಎವರೆಸ್ಟ್ ಏರಲು ಇಚ್ಛಿಸುವವರು ಪೂರ್ವ ತರಬೇತಿ ಪಡೆದುಕೊಳ್ಳುವುದು ಉತ್ತಮ ಎಂಬುದು ನಂದಿತಾ ಅಭಿಪ್ರಾಯ. ಮೌಂಟ್‌ ಎವರೆಸ್ಟ್ ಏರುವ ಇವರ ನಿರ್ಧಾರಕ್ಕೆ ತಾಯಿ ಕಸ್ತೂರಿ ಮೊದಲು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಮಗಳ ಸಾಧನೆಗೆ ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ.

ಸಂಪ್ರದಾಯ ಮತ್ತು ಪರಂಪರೆ

ಅರಿವು ಮತ್ತು ಆಚಾರ ಇವು ಯಾವುದೇ ಜನರ-ದೇಶದ ಅವಿಭಾಜ್ಯ ಅಂಗ. ಆಚಾರದಲ್ಲಿ ಹೇಳದಿದ್ದರೂ ಅರಿವು ಅಡಗಿರುತ್ತದೆ. ಕೆಲವೊಮ್ಮೆ ಅದು ವಿವರಣೆಗೆ ಸಿಗಬಹುದು; ಹಲವು ಸಲ ಸಿಗದೆ ಹೋಗಬಹುದು. ಹಾಗೆಂದ ಮಾತ್ರಕ್ಕೆ ಆಚರಣೆಗೆ ಅರ್ಥವೇ ಇಲ್ಲ ಎಂದಲ್ಲ. ಇದೆ, ಇತ್ತು, ನಮ್ಮ ಕೈಗೆ ಸಿಕ್ಕುತ್ತಿಲ್ಲ, ಅಥವಾ ನಮ್ಮ ಕಾಲದ ಜನರಿಗೆ ಸಿಗುತ್ತಿಲ್ಲ ಎಂದು ತಿಳಿದುಕೊಳ್ಳಬೇಕು. ಆಗ ನಮ್ಮ ಹಳಬರ, ಅವರಿಗಿಂತ ಸಾವಿರಾರು ವರ್ಷ ಹಳಬರ ಮತ್ತು ಈಗಿನ ಆಚರಣೆಗಳು ಎಷ್ಟು ಅರ್ಥಪೂರ್ಣ ಎಂಬುದು ಅರಿವಾಗುತ್ತದೆ. ಅರಿವು ಬೇರು, ಆಚಾರ ಹೂವು. ಬೇರಿಲ್ಲದೆ ಹೂವಿಲ್ಲ ಎಂದು ತಿಳಿದುಕೊಂಡರೆ ಸಾಕು. ಉದಾಹರಣೆಗಳ ಮೂಲಕ ಈ ವಿಷಯವನ್ನು ನೂರಾರು ಮುಖಗಳಲ್ಲಿ ವಿವರಿಸಿ, ವ್ಯಾಖ್ಯಾನ ಮಾಡಬಹುದು. ಆದರೆ ಆರಂಭದಲ್ಲಿ ತಿಳಿಯಬೇಕಾದ ವಿಷಯವೊಂದಿದೆ. ಅದೆಂದರೆ ಪರಂಪರೆ ಬೇರೆ, ಸಂಪ್ರದಾಯ ಬೇರೆ. ಯಾವುದು ಒಂದು ಭೂಪ್ರದೇಶದಲ್ಲಿ ಇರುತ್ತದೋ ಅದೆಲ್ಲ ನಮಗೆ ಬೇಕೋ ಬೇಡವೋ ‘ಪರಂಪರೆ’ ಆಗುತ್ತದೆ. ಇದನ್ನು ಇಂಗ್ಲಿಷ್​ನಲ್ಲಿ ಹೆರಿಟೇಜ್ ಎನ್ನುತ್ತಾರೆ. ಅಂದರೆ ಬಂದದ್ದು ಎಂದು ಅರ್ಥ. ಯಾವುದನ್ನು ನಾವು ಮನಃಪೂರ್ವಕವಾಗಿ ಪ್ರೀತಿ- ಶ್ರದ್ಧೆಯಿಂದ ಒಪ್ಪಿದ್ದೇವೆಯೋ ಅದು ‘ಸಂಪ್ರದಾಯ’ವಾಗುತ್ತದೆ. ಇದನ್ನು ಇಂಗ್ಲಿಷ್​ನಲ್ಲಿ ಟ್ರಡಿಷನ್ ಎನ್ನುತ್ತಾರೆ. ಗಂಡ ಸತ್ತಾಗ ಹೆಂಡತಿಯು ಬಳೆ, ಕುಂಕುಮ ತೆಗೆಸುವುದು ಪರಂಪರೆಯ ಭಾಗವಿರಬಹುದು, ಆದರೆ ಆಚರಿಸದೆ ಇದ್ದಾಗ ಅದು ಸಂಪ್ರದಾಯವೆನಿಸದು. ಪರಂಪರೆ ಯಾಂತ್ರಿಕವಾದೀತು, ಸಂಪ್ರದಾಯ ಸಂವೇದನೆಯ ಭಂಡಾರ.

ಇವುಗಳನ್ನು ಫ್ರಿಜ್ ನಲ್ಲಿ ಇಡಲೇಬಾರದು!

ಇವುಗಳನ್ನು ಫ್ರಿಜ್‌ನಲ್ಲಿ ಇಡಲೇಬೇಡಿ. ಏಕೆಂದರೆ?

ಕೆಲವು ಆಹಾರಗಳನ್ನು ರೆಫ್ರಿಜರೇಟರಿನಲ್ಲಿ ಇಡುವುದು ಧೀರ್ಘ ಸಮಯದವರೆಗೆ ತಾಜಾ ಆಗಿರಲು ನೆರವಾಗುತ್ತದೆ. ಆದರೆ ಕೆಲವು ಆಹಾರಗಳು ಫ್ರಿಜ್ಜಲ್ಲಿ ಇಟ್ಟರೆ ಹಾಳಾಗುತ್ತದೆ. ಕೆಲವು ಆಹಾರ ವಸ್ತುಗಳನ್ನು ಫ್ರಿಜ್ಜಲ್ಲಿ ಇಡುವ ಅಗತ್ಯವೇ ಇರುವುದಿಲ್ಲ. ಏಕೆಂದರೆ ಅವುಗಳಿಗೆ ಯಾವುದೇ ರೂಪದ ಬ್ಯಾಕ್ಟೀರಿಯ ಬರುವುದಿಲ್ಲ. ಬದಲಾಗಿ ಅವುಗಳನ್ನು ತಂಪಾದ ಮತ್ತು ಒಣಗಿದ ಸ್ಥಳಗಳಲ್ಲಿ ಅಂದರೆ ಕೋಣೆಯ ಉಷ್ಣತೆಯಲ್ಲಿ ಇಟ್ಟಲ್ಲಿ ಅವು ಇನ್ನೂ ಹೆಚ್ಚು ತಾಜಾವಾಗಿ ಇರುತ್ತವೆ. ಆದರೆ ಬೇಸಗೆಯಲ್ಲಿ ಕೋಣೆಯ ಉಷ್ಣತೆ ಅತ್ಯಧಿಕವಾಗಿರುವ ಕಾರಣ ಈ ವಾದ ಒಪ್ಪುವುದಿಲ್ಲ. ರೆಫ್ರಿಜರೇಟರಲ್ಲಿ ಇಡಬಾರದ ಆಹಾರ ವಸ್ತುಗಳ ವಿವರಗಳು ಇಲ್ಲಿವೆ.

ಬಟಾಟೆಗಳು

ಬಟಾಟೆಗಳನ್ನು ಫ್ರಿಜ್ಜಲ್ಲಿಟ್ಟರೆ ಅವುಗಳ ಫ್ಲೇವರ್ ಹಾಲಾಗುತ್ತದೆ ಮತ್ತು ಅದಕ್ಕೆ ಸ್ಟಾರ್ಚ್ ತಾಗುವ ಕಾರಣ ಬೇಗನೇ ಸಕ್ಕರೆ ರೂಪ ತಾಳುತ್ತದೆ. ಅವುಗಳನ್ನು ಕೋಣೆಯ ಉಷ್ಣತೆಯಲ್ಲಿ ಪೇಪರ್ ಬ್ಯಾಗಲ್ಲಿ ಹಾಕಿಡಬಹುದು. ಸ್ಟಾರ್ಚ್ ಸಕ್ಕರೆಯಾಗಿ ಪರಿಣಮಿಸಿದಾಗ ಸಿಹಿಯಾದ ಜಡವಾದ ಬಟಾಟೆ ಉಳಿಯುತ್ತದೆ.

ಜೇನುತುಪ್ಪ

ಜೇನುತುಪ್ಪವನ್ನು ರೆಫ್ರಿಜರೇಟರಲ್ಲಿ ಹಾಕಿದಾಗ ಅದು ಹರಳಾಗುತ್ತದೆ. ಹೀಗಾಗಿ ಗಾಜಿನ ಬಾಟಲಿಯಲ್ಲಿ ಕೋಣೆಯ ವಾತಾವರಣದಲ್ಲಿಡುವುದು ಉತ್ತಮ ಮತ್ತು ಹೆಚ್ಚು ತಾಜಾವಾಗಿದ್ದು ಧೀರ್ಘಕಾಲ ಇರುತ್ತದೆ.

ಕಲ್ಲಂಗಡಿ ಹಣ್ಣು

ಇಡೀ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರಲ್ಲಿಡುವುದು ಸರಿಯಲ್ಲ. ಕಲ್ಲಂಗಡಿ ಅಥವಾ ಕರಬೂಜಗಳು ರೆಫ್ರಿಜರೇಟರಲ್ಲಿ ಇಟ್ಟಾಗ ಚಳಿಗೆ ಗಾಯವಾಗಿಬಿಡುತ್ತವೆ. ಹಾಗೆ ಹಣ್ಣುಗಳು ಬಣ್ಣ ಮತ್ತು ರುಚಿ ಎರಡನ್ನೂ ಕಳೆದುಕೊಳ್ಳುತ್ತವೆ. ಒಮ್ಮೆ ಹಣ್ಣುಗಳನ್ನು ಕತ್ತರಿಸಿದರೆ ನಂತರ ಬೇಕಾದರೆ ಫ್ರಿಜ್ಜಿನಲ್ಲಿ ಇಡಬಹುದು. ಆದರೆ ಚಳಿ ಗಾಯವಾದ ಹಣ್ಣಿನ ಮೇಲೆ ಬ್ಯಾಕ್ಟೀರಿಯ ಕಾಣಿಸಿಕೊಂಡು ಸೇವಿಸುವುದು ಅಸಾಧ್ಯವಾಗುತ್ತದೆ.

ಬ್ರೆಡ್

ಮುಖ್ಯವಾಗಿ ಬಿಳಿ ಬ್ರೆಡ್ಡನ್ನು ಫ್ರಿಜ್ಜಲ್ಲಿ ಇಡಬಾರದು. ಅದನ್ನು ಒಣಗಿದ ಸ್ಥಳದಲ್ಲಿ ಇಡಬೇಕು. ಬ್ರೆಡ್ಡುಗಳು ಬೇಗನೇ ಒಣಗುತ್ತವೆ. ನಾಲ್ಕು ದಿನಗಳಿಗಾಗುವಷ್ಟು ಬ್ರೆಡ್ಡನ್ನು ಡೀಪ್ ಫ್ರೀಜ್ ಮಾಡಿಟ್ಟುಕೊಳ್ಳಬಹುದು. ಕಾಫಿ: ಕಾಫಿಯನ್ನು ಫ್ರಿಜ್ಜಲ್ಲಿಟ್ಟರೆ ಅದು ರುಚಿ ಕಳೆದುಕೊಳ್ಳುವುದು ಮಾತ್ರವಲ್ಲ, ಇತರ ಆಹಾರಗಳಿಂದ ವಾಸನೆಯನ್ನೂ ಸ್ವೀಕರಿಸುತ್ತದೆ. ಫ್ರಿಜ್ಜಿನಲ್ಲಿರುವ ತೇವಾಂಶವು ಕಾಫಿಯನ್ನು ಬೇಗನೇ ಕೊಳೆಯುವಂತೆ ಮಾಡುತ್ತದೆ. ಕಾಫಿಯನ್ನು ವಾತಾವರಣದ ಉಷ್ಣತೆಗೆ ಇಡಬೇಕು.

ಬಾಳೆಹಣ್ಣುಗಳು

ನಮಗೆ ಗೊತ್ತಿದ್ದಂತೆ ಬಾಳೆಹಣ್ಣು ಬಲಿತಷ್ಟು ಸಿಹಿ ಹೆಚ್ಚಾಗಿ ಆರೋಗ್ಯಕರವಾಗುತ್ತದೆ. ಆದರೆ ನಾವು ಬಾಳೆಹಣ್ಣುಗಳನ್ನು ರೆಫ್ರಿಜರೇಟರಲ್ಲಿಟ್ಟರೆ ಬಲಿಯುವುದು ನಿಧಾನವಾಗುತ್ತದೆ. ಹೀಗಾಗಿ ಬಾಳೆಹಣ್ಣುಗಳನ್ನು ವಾತಾವರಣದ ಉಷ್ಣತೆಗೆ ಇಡಬೇಕು. ಹೀಗಿಟ್ಟ ಹಣ್ಣುಗಳಲ್ಲಿ ಹೆಚ್ಚು ಆರೋಗ್ಯಕರ ಅಂಶವಿರುತ್ತದೆ. ಹಣ್ಣನ್ನು ಫ್ರಿಜ್ಜಲ್ಲಿಟ್ಟಾಗ ಪೊಟಾಶಿಯಂ ಅಂಶ ಕಳೆದು ಹೋಗುತ್ತದೆ.

ಈರುಳ್ಳಿಗಳು

ಇವನ್ನು ಫ್ರಿಜ್ಜಲ್ಲಿಟ್ಟಾಗ ಮೆದುವಾಗಿಬಿಡುತ್ತವೆ. ಈರುಳ್ಳಿಗಳ್ನನು ಒಣಗಿದ ಸ್ಥಳದಲ್ಲಿಡಬೇಕು. ಆದರೆ ತರಕಾರಿಗಳ ಜೊತೆಗಿಡಬಾರದು. ಅಗತ್ಯವಿದ್ದಲ್ಲಿ ಒಂದು ದಿನಕ್ಕೆ ಫ್ರಿಜ್ಜಲ್ಲಿಡಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆಯನ್ನು ಫ್ರಿಜ್ಜಲ್ಲಿಟ್ಟರೆ ತುಪ್ಪದಂತೆ ದಪ್ಪವಾಗುತ್ತದೆ. ಒಣ ಸ್ಥಳದಲ್ಲಿಡುವುದು ಉತ್ತಮ. ಫ್ರಿಜ್ಜಲ್ಲಿಟ್ಟಾಗ ಕೆಲವು ಕಣಗಳು ಉತ್ಪನ್ನವಾಗಿ ದೇಹಕ್ಕೆ ಹಾನಿಯುಂಟು ಮಾಡಬಹುದು.

ಟೊಮ್ಯಾಟೋಗಳು

ಇವುಗಳನ್ನು ಫ್ರಿಜ್ಜಲ್ಲಿಟ್ಟರೆ ರುಚಿ ಕಳೆದುಕೊಳ್ಳುತ್ತವೆ. ಅಲ್ಲದೆ ಫಂಗಲ್ ಸೋಂಕಾಗಿ ಸೇವನೆಗೆ ಅರ್ಹವಾಗುವುದಿಲ್ಲ.

ಬೆಳ್ಳುಳ್ಳಿ

ಇದನ್ನು ಫ್ರಿಜ್ಜಲ್ಲಿಟ್ಟರೆ ಮೊಳಕೆಯೊಡೆಯುತ್ತದೆ. ಅಲ್ಲದೆ ರಬ್ಬರಿನಂತಾಗುತ್ತದೆ. ಇದರಿಂದ ಬಾಳ್ವಿಕೆ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯನ್ನು ತುಂಡು ಮಾಡದ ಹೊರತು ಫ್ರಿಜ್ಜಲ್ಲಿಡಬಾರದು

ಸೆಂಟ್ರಲ್ ಸೆಲೆಬಸ್ ಮತ್ತು ಸ್ಟೇಟ್ ಸೆಲೆಬಸ್.

image

ಸೆಂಟ್ರಲ್ ಸಿಲಬಸ್ ಯಾಕೆ..? : ಸ್ಟೇಟ್ ಸಿಲಬಸ್ ಓ.ಕೆ.

ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್ ತುಂಬಾ ಕಷ್ಟ. ಎಷ್ಟೇ ಕಷ್ಟ ಪಟ್ಟರೂ ಹೈಯೆಸ್ಟ್ ಪರ್ಸೆಂಟೇಜ್ ತೆಗೆಯೋಕ್ಕಾಗಲ್ಲ. ಬಂದಿರೋ ಅಂಕಗಳಿಗೆ ಕಾಲೇಜುಗಳಲ್ಲಿ ಸೀಟ್ ಸಿಕ್ಕೊಲ್ಲ. ಅದಕ್ಕಾಗಿ ನಾವು ನಮ್ಮ ಮಕ್ಕಳನ್ನು ಸ್ಟೇಟ್ ಸಿಲಬಸ್‌ಗೆ ಸೇರಿಸುತ್ತೇವೆ. ಇದು ಈಗ ಪೋಷಕರು ತೆಗೆದುಕೊಳ್ಳುತ್ತಿರುವ ಸಾಮಾನ್ಯ ನಿರ್ಧಾರವಾಗಿದೆ. ನರ್ಸರಿಯಿಂದಲೂ ನಮ್ಮ ಮಕ್ಕಳು ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್ ಓದುತ್ತಿದ್ದಾರೆ ಎಂದು ಬಹುತೇಕ ಪೋಷಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಸ್ಟೇಟ್ ಸಿಲಬಸ್ ಓದಿದವರು ಮತ್ತು ಸೆಂಟ್ರಲ್ ಸಿಲಬಸ್ ಓದಿದವರ ಫಲಿತಾಂಶವನ್ನು ಹೋಲಿಸಿ ನೋಡಿದರೆ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ.

ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್ ಕಷ್ಟ. ಹೈಯೆಸ್ಟ್ ಎಂದರೆ ಶೇ.95ರಿಂದ 97ರಷ್ಟು ಅಂಕ ಪಡೆದಿದ್ದಾರೆ. ಆದರೆ ಸ್ಟೇಟ್ ಸಿಲಬಸ್ ಓದಿರುವವರು ಶೇ.100ಕ್ಕೆ 100ರಷ್ಟು ಅಂಕ ಗಳಿಸಿದ್ದಾರೆ. ಶೇ.30ರಷ್ಟು ಪ್ರಮಾಣದಲ್ಲಿ ಡಿಸ್ಟಿಂಕ್ಷನ್ ಪಡೆದವರಿದ್ದಾರೆ. ಸ್ಟೇಟ್ ಸಿಲಬಸ್‌ನಲ್ಲಿ ಭದ್ರಾವತಿಯ ಹುಡುಗ ರಂಜನ್ 625ಕ್ಕೆ 625 ಅಂಕ ಗಳಿಸಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಆದರೆ ಐಸಿಎಸ್‌ಇ ಸಿಲಬಸ್‌ನಲ್ಲಿ ಹೈಯೆಸ್ಟ್ ಎಂದರೆ ಶೇ.98 ಮಾತ್ರವಾಗಿದೆ. ದೆಹಲಿಯ ಕೃತ್ತಿಕಾ ಈ ಸಾಧನೆ ಮಾಡಿದ್ದಾರೆ.

ಪ್ರತಿಷ್ಠಿತ ಕಾಲೇಜುಗಳಲ್ಲಿ ಸೈನ್ಸ್ ಕೋರ್ಸ್ ಸೇರಲು ಶೇ.95 ಕಟಾಫ್ ಮಾಡಲಾಗಿದೆ. ಪೂರ್ಣಪ್ರಜ್ಞಾ ಕಾಲೇಜು, ಎಂಇಎಸ್ ಕಾಲೇಜು, ವಿದ್ಯಾವರ್ಧಕ, ನ್ಯಾಷನಲ್ ಪಬ್ಲಿಕ್ ಶಾಲೆ, ಕೆಎಲ್‌ಇ ಶಾಲೆ, ಬಿಷಪ್ ಕಾಟನ್, ವಿಜಯಾ ಕಾಲೇಜು, ಜೆಎಸ್‌ಎಸ್ ಕಾಲೇಜು, ಕ್ರೈಸ್ಟ್ ಕಾಲೇಜು ಸೇರಿದಂತೆ ಎಲ್ಲಾ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಕ್ಕೆ ಶೇ.95ರಷ್ಟು ಅಂಕ ಪಡೆದಿದ್ದರೆ ಮಾತ್ರ ಪ್ರವೇಶ ದೊರೆಯುತ್ತದೆ. ಸೆಂಟ್ರಲ್ ಸಿಲಬಸ್‌ನಲ್ಲಿ ಇಷ್ಟು ಅಂಕ ಗಳಿಸುವುದು ಕಷ್ಟಸಾಧ್ಯ. ಶೇ.80, 90ರಷ್ಟು ಪಡೆದರೆ ಹೆಚ್ಚು. ಕೆಲವೇ ಕೆಲವು ಕಾಲೇಜುಗಳಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್‌ನಲ್ಲಿ ಓದಿದವರೆಂದು ಬೆರಳಣಿಕೆಯ ವಿದ್ಯಾರ್ಥಿಗಳಿಗಷ್ಟೇ ಸೀಟು ನೀಡುವ ಪರಿಪಾಠವಿದೆ.

ಬಹುತೇಕ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಅದಕ್ಕಾಗಿ 7ನೆ ತರಗತಿ ವರೆಗೆ ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್ ಓದಿ, ಹೈಸ್ಕೂಲ್‌ಗೆ ಸ್ಟೇಟ್ ಸಿಲಬಸ್ ಆಯ್ಕೆ ಮಾಡಿಕೊಳ್ಳುವವರು ಬಹುತೇಕ ಮಂದಿ ಇದ್ದಾರೆ. ಕೆಲವು ಶಾಲೆಗಳು ಕೂಡ 7ನೆ ತರಗತಿ ಮುಗಿದ ಮೇಲೆ ಹೈಸ್ಕೂಲ್‌ನಿಂದ ಸ್ಟೇಟ್ ಸಿಲಬಸ್ಸನ್ನೇ ಬೋಧಿಸುತ್ತವೆ. ಇದರಲ್ಲಿ ಹೆಚ್ಚು ಅಂಕ ಪಡೆದರೆ ಪಿಯುಸಿಗೆ ಸೇರಲು ಅನುಕೂಲವಾಗುತ್ತದೆ. ಮುಂದೆ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರ ಪೋಷಕರದ್ದು.

ನಮ್ಮ ಶಿಕ್ಷಣ ವ್ಯವಸ್ಥೆ ಏಕರೂಪವಾಗಿಲ್ಲ. ಈ ಕಾರಣದಿಂದ ಈ ಎಲ್ಲಾ ಗೊಂದಲ ಸೃಷ್ಟಿಯಾಗುತ್ತದೆ. ರಾಜ್ಯ ಪಠ್ಯ ಬೇರೆ, ಕೇಂದ್ರ ಪಠ್ಯ ಬೇರೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಏಕರೂಪ ಶಿಕ್ಷಣವಾದರೆ ಅನುಕೂಲವಾಗುತ್ತದೆ ಎಂಬುದು ಪೋಷಕರ ಆಗ್ರಹವಾಗಿದೆ. 7ನೆ ತರಗತಿ ವರೆಗೆ ಸೆಂಟ್ರಲ್ ಸಿಲಬಸ್ ಓದಿದರೆ ಹೈಸ್ಕೂಲ್‌ನಲ್ಲಿ ಸ್ಟೇಟ್ ಸಿಲಬಸ್ ಓದಲು ಸುಲಭವಾಗುತ್ತದೆ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆಯಬಹುದಾಗಿದೆ. ಆಗ ಪಿಯುಸಿ ಸೈನ್ಸ್‌ಗೆ ಪ್ರವೇಶಾವಕಾಶ ಸುಲಭವಾಗಿ ಪ್ರತಿಷ್ಠಿತ ಕಾಲೇಜುಗಳಲ್ಲಿ ದೊರೆಯುತ್ತದೆ. ಈ ಲೆಕ್ಕಾಚಾರ ಪೋಷಕರು ಮತ್ತು ವಿದ್ಯಾರ್ಥಿಗಳದ್ದಾಗಿದೆ. ಹೀಗಾಗಿ ಬಹುತೇಕರು ಸ್ಟೇಟ್ ಸಿಲಬಸ್ ಮೊರೆ ಹೋಗುತ್ತಿದ್ದಾರೆ.

ಕೇಂದ್ರೀಯ ವಿದ್ಯಾಲಯಗಳಲ್ಲಿ 12ನೆ ತರಗತಿವರೆಗೆ ಶಿಕ್ಷಣದ ಅವಕಾಶವಿರುತ್ತದೆ. ಅಲ್ಲಿ ಓದುವವರಿಗೆ ಅನುಕೂಲವಾಗುತ್ತದೆ. ಉಳಿದ ಕಡೆ ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್ ಓದುವವರಿಗೆ ಕಾಲೇಜು ಶಿಕ್ಷಣಕ್ಕೆ ಅಡಚಣೆಯಾಗುತ್ತದೆ. ಹಾಗಾಗಿ ಬಹುತೇಕ ಮಂದಿ ಹೈಸ್ಕೂಲ್ ಹಂತದಲ್ಲೇ ಸ್ಟೇಟ್ ಸಿಲಬಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರ ಕಾಲೇಜುಗಳಲ್ಲಿ ಸ್ಟೇಟ್ ಸಿಲಬಸ್ ಓದಿದವರಿಗೆ ಇಂತಿಷ್ಟು ಸೀಟುಗಳು ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್ ಓದಿದವರಿಗೆ ಇಂತಿಷ್ಟು ಸೀಟುಗಳು ಎಂದು ನಿಗದಿಮಾಡಿದರೆ ಎಲ್ಲರಿಗೂ ಅವಕಾಶ ಸಿಗುವ ಸಾಧ್ಯತೆ ಇರುತ್ತದೆ. ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ.

ಮೊದಲು ಹಲವು ಉದ್ಯೋಗಗಳಿಗೆ ಎಸ್‌ಎಸ್‌ಎಲ್‌ಸಿ ಶಿಕ್ಷಣವನ್ನು ಪರಿಗಣಿಸಲಾಗುತ್ತಿತ್ತು. ಈಗ ಎಲ್ಲಾ ಉದ್ಯೋಗಗಳಿಗೆ ಪಿಯುಸಿಯನ್ನು ಮಾನದಂಡವನ್ನಾಗಿ ಮಾಡಲಾಗುತ್ತಿದೆ. ಹಾಗಾಗಿ ಪಿಯುಸಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿರುವ ಹಿನ್ನೆಲೆಯಲ್ಲಿ ಪ್ರವೇಶಕ್ಕೆ ಹೆಚ್ಚು ಡಿಮ್ಯಾಂಡ್ ಇರುತ್ತದೆ. ಜನರು ಸುಲಭದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರ ಕೇಂದ್ರ ಹಾಗೂ ರಾಜ್ಯ ಪಠ್ಯ ಓದಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಸಿಗುವಂತೆ ಮಾನದಂಡಗಳನ್ನು ರೂಪಿಸಬೇಕಾಗಿದೆ.

ಅಮ್ಮನ ಹಿತನುಡಿ

image

ಮಗೂ,
ಪ್ರೀತಿಸಿದವನನ್ನು
ಮದುವೆಯಾಗಲು
ನೂರು ಬಾರಿ
ಯೋಚಿಸು,
ಹೆತ್ತವರೊ೦ದಿಗೆ
ಇದರ ಬಗ್ಗೆ
ಚರ್ಚಿಸು,
ಮಗೂ, ಮದುವೆ
ಅ೦ದರೆ ಅಲ್ಲ
ಗೊ೦ಬೆಯಾಟ
ಆಗದಿರಲಿ
ನಿನ್ನ ಜೀವನ
ತೂಗುಯ್ಯಾಲೆಯ
ಆಟ,,,👭,,,,

ನಮ್ಮನ್ನು ನಾವೇ ಗುರಿತಿಸಿಕೊಳ್ಳೋಣ.

ನಾವು ಯಾರು?

image

ಪ್ರಪಂಚದಲ್ಲಿ ನಾಲ್ಕು ತರಹದ ಮನುಷ್ಯರು ನಮ್ಮೊಂದಿಗೆ ಇರುತ್ತಾರೆ. ನಾವು ಕೂಡ ಅರಿವಿದ್ದೋ ಅರಿವಿಲ್ಲದೆಯೋ ಈ ನಾಲ್ವರಲ್ಲಿ ಒಬ್ಬರಾಗಿರುತ್ತೇವೆ. ಆ ನಾಲ್ಕು ವಿಧದ ಮನುಷ್ಯರೆಂದರೆ,
1) ಉತ್ತಮ
2) ಮಧ್ಯಮ
3) ಕನಿಷ್ಠ
4) ನೀಚ

1) ಉತ್ತಮ:  ಯಾರು ತಮಗೆ ಅಪಕಾರ ಮಾಡಿದವರಿಗೂ ಅಪಕರಿಸದೆ ಉಪಕಾರವನ್ನೇ ಮಾಡುವರೋ ಅವರು ಉತ್ತಮವರ್ಗಕ್ಕೆ ಸೇರಿದವರು. ತಮಗೆ ಯಾವುದೇ ರೀತಿಯ ಅಪಕಾರ-ಅನಿಷ್ಟಗಳು ಸಂಭವಿಸಿದರೂ ಅದು ತಮ್ಮ ಪ್ರಾರಬ್ಧಕರ್ಮದ ಫಲವೇ ಹೊರತು ಬೇರೆ ಏನೂ ಅಲ್ಲ. ಅದರಲ್ಲಿ ಬೇರೆಯವರ ಪಾತ್ರವಿದ್ದರೂ ಅವರು ಅದಕ್ಕೆ ನಿಮಿತ್ತಮಾತ್ರರೇ ಹೊರತು ನಿಜವಾದ ಕಾರಣರಲ್ಲ ಎಂಬ ಭಾವನೆ ಈ ರೀತಿಯ ಮನುಷ್ಯರಲ್ಲಿರುತ್ತದೆ. ಪರರ ದೋಷವನ್ನು ಉತ್ತಮ ಜನರು ಗಮನಿಸುವುದಿಲ್ಲ.

2) ಮಧ್ಯಮ: ಇವರು ಉತ್ತಮರಿಗಿಂತ ಸ್ವಲ್ಪ ಭಿನ್ನರು. ಅವರು ತಮಗೆ ತೊಂದರೆ ಕೊಡುವವರಿಗೆ ಅಪಕಾರವನ್ನಂತೂ ಮಾಡುವುದಿಲ್ಲ. ಆದರೆ ಅವರಿಗೆ ಎಂದೂ ಉಪಕಾರವನ್ನೂ ಮಾಡುವುದಿಲ್ಲ.

3) ಕನಿಷ್ಟ: ಮೂರನೇ ವರ್ಗಕ್ಕೆ ಸೇರಿದ ಕನಿಷ್ಠ ಜನರು ಹಾಗಲ್ಲ. ಅಪಕಾರ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಪ್ರತಿಯಾಗಿ ಅಪಕಾರವನ್ನು ಮಾಡುತ್ತ ಅವರನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ.

ಈ ಮೂರನೇ ವರ್ಗದವರಲ್ಲಿಯೂ ನಾಲ್ಕು ವಿಧವಿದೆ. ಮೊದಲನೆಯವರು, ತಮಗೆ ತೊಂದರೆ ಕೊಟ್ಟವರಿಗೆ ಪ್ರತಿಯಾಗಿ ತೊಂದರೆಯನ್ನು ಕೊಟ್ಟು ಬದಲಾಯಿಸಲು ಪ್ರಯತ್ನಿಸುವವರು.
ಎರಡನೆಯವರು ತಮಗೆ ತೊಂದರೆ ಕೊಟ್ಟವರಿಗೆ ತಾವಾಗಿಯೇ ಏನೂ ಮಾಡದೇ ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವವರು. ಮೂರನೆಯವರು ನ್ಯಾಯಾಲಯಕ್ಕೆ ಹೋಗದೆ ಪಂಚರ ಮುಖಾಂತರ ದಂಡವನ್ನು ಕೊಡಿಸುತ್ತಾರೆ. ನಾಲ್ಕನೆಯವರು ಎಲ್ಲಿಯೂ ಹೋಗದೆ ತಮ್ಮ ಕೈಲಾಗದಿದ್ದರೆ ಅವರಿಗೆ ಮನಸ್ಸಿನಲ್ಲೇ ಸದಾ ಅನಿಷ್ಟವನ್ನು ಬಯಸುವವರು. ಈ ರೀತಿಯ ನಾಲ್ವರು ಕನಿಷ್ಠವರ್ಗಕ್ಕೆ ಸೇರಿದವರು.

4) ನೀಚರು: ಇನ್ನು ಕೊನೆಯ ವರ್ಗದವರು ನೀಚರು. ಇವರು ಎಲ್ಲರಿಗೂ ಕೆಟ್ಟದ್ದನ್ನೇ ಮಾಡುವವರು. ಕೆಟ್ಟದ್ದನ್ನೇ ಬಯಸುವವರು. ಒಂದುವೇಳೆ ಇವರಿಗೆ ಕಿಂಚಿತ್ ತೊಂದರೆಯಾದರೂ ಜಗತ್ತನ್ನೇ ನಿಂದಿಸುವರು. ಹಾಗಾದರೆ ಈ ರೀತಿಯ ನಾಲ್ಕು ವಿಧದ ಜನರ ಗುಂಪಿನಲ್ಲಿ ನಾವು ಯಾರು? ಪ್ರಪಂಚ ಗುರುತಿಸುವ ಮೊದಲು ನಮ್ಮನ್ನು ನಾವೇ ಗುರುತಿಸಿಕೊಳ್ಳಬೇಕು.

ಪ್ರಮುಖ ಪಿತಾಮಹರುಗಳು

✌ಪ್ರಮುಖ ಪಿತಾಮಹರುಗಳು✌

1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೊಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದುಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್

SSLC 10 ಟಾಪರ್ಸ್.

1. ರಂಜನ್ ಎಸ್ – ಪೂರ್ಣ ಪ್ರಜ್ಞಾ ಶಾಲೆ, ಭದ್ರಾವತಿ- 625 ಅಂಕಗಳು

2. ಈಶು ಎನ್ಎಸ್ – ಮರಿಮಲ್ಲಪ್ಪ ಶಾಲೆ, ಮೈಸೂರು – 624

3. ಸುಪ್ರಿತ ಎಂಎ – ಹೋಲಿ ಚೈಲ್ಡ್ ಇಂಗ್ಲಿಷ್ ಸ್ಕೂಲ್ ಬನಶಂಕರಿ – 624

4. ಶುಶೃತ್ ಯುಕೆ – ಸೇಂಟ್ ಮೇರಿಸ್ ಇಂಗ್ಲಿಷ್ ಸ್ಕೂಲ್ ಬೆಳ್ತಂಗಡಿ, ದಕ್ಷಿಣ ಕನ್ನಡ- 624

5. ಶ್ವೇತ ಎಎಸ್ – ಸೇಂಟ್ ಸೋಫಿಯಾ ಹೈ ಸ್ಕೂಲ್ ನಾಗರಬಾವಿ ಬೆಂಗಳೂರು- 624

6. ಮಹಿಮಾ ಭಟ್ – ಶ್ರೀದೇವಿ ಹೈ ಸ್ಕೂಲ್ ಹುಲಿಕಲ್, ಶಿರಸಿ, ಉತ್ತರ ಕನ್ನಡ- 624

7. ಸ್ವಾತಿ ಎಸ್ – ಶ್ರೀ ಸಿಕೆಎಸ್ ಗಲ್ರ್ಸ್ ಹೈ ಸ್ಕೂಲ್ ಹಾಸನ – 624

8. ಅಕ್ಷಯ್ ರಾವ್- ವಿಜಯ್ ವಿಠಲ ಹೈ ಸ್ಕೂಲ್ ಮೈಸೂರು – 624

9. ಶ್ರೀನಿಧಿ ಟಿಎಸ್ ವಿಜಯ್ ವಿಠಲ ಹೈ ಸ್ಕೂಲ್ ಮೈಸೂರು – 623

10 ವಿಜಯಲಕ್ಷ್ಮಿ- ವಿಜಯ ಹೈ ಸ್ಕೂಲ್, ಹಾಸನ- 623 .