How do Hackers Hack Bank Accounts and Personal Information? 

.

  • How do Hackers Hack Bank Accounts and Personal Information? 

The prevailing perception that it is almost impossible to hack credit cards, debit cards, or net banking passwords, which is true to an extent. Today I will discuss with you why hacking bank account information is tough and considered to be almost impossible. We will also discuss the different, contemporary methods that hackers use to hack bank accounts.
Almost everybody uses the internet nowadays to pay bills, book reservations and tickets, purchase items, or simply to transfer money. All of these online transactions involve money, meaning they’re using banking information, credit or debit card payments, or simply net banking. Most banks use SSL (Secured Sockets Layer) connection and at least 128 or 256 bit encryption for online banking and transaction purposes. An additional layer of security that companies are introducing is called “transaction PIN layer” which means that for each and every online transaction you have to enter your password, and that during transactions you have to enter a PIN, a type of password between 4 and 8 characters in length. Thus, banks do a lot of work to protect your credentials from the eyes of the world that may wish to gain access to your vital information.

Below, examples will illustrate to you how powerful the encryption method is:

# 40 bit encryption means there are 2^40 possible keys that could fit into the lock that holds your account information. That means there are billions of possible keys and using brute force is not an option. The only thing left now is a dictionary and rainbow attack. But it’s not only the security measure that banks use to secure information.

# 128 bit encryption means there are 2^88 times as many key combinations that are possible for 40 bit encryption. That means a computer would require exponentially more processing power and time than a 40-bit encryption to find the correct key.

That’s a very powerful method of encrypting data sent from your machine to bank machine. But it’s all useless once your system has been compromised or hacked.

 Now we’re going to discuss how all these security encryption can be bypassed and your system can be compromised online. There are several methods for exploiting such account information. Note: This is for educational purposes only 

  • Some of them are:

1. Phishing: Phishing is a technique used to hack password and login details of a website. Phish pages are simply fake pages that look the original webpage where you’re taking the information from. The only difference between a phish page and the original page is the address bar link (for a normal user), redirection post, and get method (inside source for advanced users). How do you identify a fake link? Just check the address bar URL for a fake page or Phish page. It will be showing a different URL than the original. You can install a web security tool bar in your browser (like AVG and Crawler web security tool bars) to detect the phishing automatically, and to stop your browser from visiting Phishing pages.

 2. Trojans: Trojans are a type of virus that steals your information. It can come in many forms like keyloggers or RATs (remote administration tools). A keylogger monitors all the keys that you have pressed on your physical keyboard, stores them in a log, and sends the details to hackers. RATs are an advanced form of keylogger that remotely monitors all your activities, whereas a keylogger is simply a functionality. Using RAT, a hacker can connect to your system anonymously, without your information when you are online. RATs have a huge list of functionalities and they are the best type of hacking tools available on the market. Now, how do you protect yourself from a keylogger? Just keep your antivirus software updated and install a keyscrambler that encrypts your keystrokes. Unfortunately, once the RAT enters your system you cannot do anything other than formatting your system. An RATs attack can only can be prevented before it enters in your system. For RAT prevention, please do not download any software or keygens online. Also avoid downloading freewares from new websites, only use certified websites like CNET, filehippo, etc. Avoid testing fake hack tools because most hacking tools have keylogger and RATs attached to them. Test it under secured conditions like on Virtual Users. 

 3. Session Hijacking: Most of us use wireless networks to access the internet and data flow in the form of packets and channels. We know that wireless networks are easier to hack due to their weak encryption. When hackers hack wireless networks, they take control of the internet data transfer and redirect the user to their intended path. Suppose you visit Gmail or Facebook, a hacker gains access and then he redirects you to somewhere on the page and captures your account details. Packet sniffing is another way to hack account information and credentials using the wireless networks. Hackers capture packets and decrypt information to get data in the form of plain text. Now how do you prevent this? The solution is also relatively simple, you just need to hide your SSID and BSSID from being discovered by the other networks. Leave the SSID or BSSID empty. Now hackers will not be able to discover your wireless router in order to hack it.

ಬಿಲ್‌ ಪಾವತಿ, ಹಣ ರವಾನೆ ಇನ್ನಷ್ಟು ಸುಲಭ

*ಬಿಲ್‌ ಪಾವತಿ, ಹಣ ರವಾನೆ ಇನ್ನಷ್ಟು ಸುಲಭ*

ಭಾರತದ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಹಣದ ಚಲಾವಣೆ ಕಡಿಮೆ ಮಾಡುವ ನಗದುರಹಿತ ವ್ಯವಸ್ಥೆಗೆ ಪೂರಕವಾದ  ಎರಡು ಹೊಸ ಸೇವೆಗಳನ್ನು ಪರಿಚಯಿಸಿದೆ.

ಸ್ಮಾರ್ಟ್‌ಫೋನ್‌ ಮೂಲಕ ಅತ್ಯಂತ  ಸುಲಭವಾಗಿ ಹಣ ಪಾವತಿಸುವ ಮತ್ತು ಸ್ವೀಕರಿಸುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌  (Unified PaymentsInterface – UPI)  ಸೌಲಭ್ಯ ಅಭಿವೃದ್ಧಿಪಡಿಸಿದೆ.  ಇದರ ಜತೆಗೆ,  ನಾಗರಿಕ ಸೇವೆಗಳಾದ  ವಿದ್ಯುತ್‌, ನೀರು, ಅಡುಗೆ ಅನಿಲ, ದೂರವಾಣಿ ಮತ್ತು ಮನೆಗೆ ನೇರ ಪ್ರಸಾರದ (ಡಿಟಿಎಚ್‌) ಮಾಸಿಕ ಸೇವಾ ಶುಲ್ಕ ಪಾವತಿಸಲು ನೆರವಾಗುವ ಭಾರತ್‌ಬಿಲ್‌ ಪೇಮೆಂಟ್‌ ಆಪರೇಟಿಂಗ್‌ ಯೂನಿಟ್ಸ್‌ (Bharat Bi** PaymentOperating Units –BBPOUs)  ಸೇವೆಯ ಪ್ರಾಯೋಗಿಕ ಬಳಕೆಗೆ ಚಾಲನೆ ನೀಡಿದೆ. ಪ್ರಮುಖ ನಾಗರಿಕ ಸೇವೆಗಳನ್ನು ಒದಗಿಸುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಅವುಗಳ ಬಳಕೆದಾರರಮಧ್ಯೆ ಸಂಪರ್ಕ ಏರ್ಪಡಿಸಿ ಬಿಲ್‌ ಪಾವತಿಯನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ.  ಈ ಸೌಲಭ್ಯ ಜಾರಿಗೆ ತರಲು 62 ಸಂಸ್ಥೆಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಅನುಮೋದನೆ ಪಡೆದಿದೆ. ‘ಬಿಬಿಪಿಎಸ್‌’ ಆಧಾರಿತ ಬಿಲ್‌ ಪಾವತಿ ಸೇವೆಗೆ ಖಾಸಗಿ ವಲಯದ ಆಕ್ಸಿಸ್‌ ಬ್ಯಾಂಕ್‌ ಚಾಲನೆ ನೀಡಿದ್ದು, ಆಯ್ದ ಶಾಖೆಗಳಲ್ಲಿ ಈ ಸೇವೆ ಲಭ್ಯ ಇದೆ.

*ಯುಪಿಐ:*
ಸುಲಭ ವ್ಯವಸ್ಥೆ ಯಾರಿಗಾದರೂ ತುಂಬ ಸುಲಭವಾಗಿ ಹಣ ರವಾನಿಸುವ ಅಥವಾ ಯಾರಿಂದಲಾದರೂ ಹಣ ಸ್ವೀಕರಿಸುವ ಕಿರಿಕಿರಿ ಮುಕ್ತ ವಿಶಿಷ್ಟ ವ್ಯವಸ್ಥೆ ಇದಾಗಿದೆ.ಏನಿದು ಯುಪಿಐವ್ಯಕ್ತಿಯಿಂದ ವ್ಯಕ್ತಿಗೆ ಹಣ ಪಾವತಿಯ ಮೊಬೈಲ್‌ ಆ್ಯಪ್‌ ಆಧಾರಿತ ಹೊಸ ವಿಧಾನ ಇದಾಗಿದೆ. ‘ಯುಪಿಎ’ ಅಳವಡಿಸಿಕೊಂಡ ಎಲ್ಲ  ಬ್ಯಾಂಕ್‌ಗಳ ಖಾತೆಗಳಿಂದ ವಹಿವಾಟು ನಿರ್ವಹಿಸಬಹುದು. ಸದ್ಯಕ್ಕೆ ಆ್ಯಂಡ್ರಾಯ್ಡ್‌ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯ.

*ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು*

ಈ ಆ್ಯಪ್‌ ಬಳಕೆಗೆ ಗ್ರಾಹಕರು ತಮ್ಮಖಾತೆ ಇರುವ ಬ್ಯಾಂಕ್‌ನ ಆ್ಯಪ್‌ ಅನ್ನೇ ಬಳಸಬೇಕಾದ ಅನಿವಾರ್ಯತೆ  ಇಲ್ಲ.ಗ್ರಾಹಕರು ಏನು ಮಾಡಬಹುದು?* ಸ್ನೇಹಿತರು, ಸಂಬಂಧಿಕರು, ಅಂಗಡಿ ಮಾಲೀಕ, ಮನೆ ಬಾಗಿಲಿಗೆ ಸರಕು  ತಂದು ಕೊಡುವವರಿಗೆ ಮತ್ತು ಇ–ಕಾಮರ್ಸ್‌ನ ಅಂತರ್ಜಾಲ ಮಳಿಗೆಗಳಲ್ಲಿನ ಖರೀದಿಗೆ ಸುಲಲಿತವಾಗಿ ಹಣ ಪಾವತಿಸಬಹುದು.

*ಮೊಬೈಲ್‌ ವಾಲೆಟ್‌ಗಳಿಗೆ ಹಣ ಭರ್ತಿ ಮಾಡಬಹುದು*

ಹಣ ಪಾವತಿ ಮತ್ತು ಸ್ವೀಕೃತಿ ಕುರಿತು ನೆನಪೋಲೆ ನಿಗದಿಪಡಿಸಬಹುದುಕಾರ್ಯಾರಂಭ ಹೇಗೆಡೌನ್‌ಲೋಡ್‌ ಮಾಡಿಕೊಂಡ ಆ್ಯಪ್‌ಗೆ ಬಳಕೆದಾರರು ತಮ್ಮ ಬ್ಯಾಂಕ್‌ ಖಾತೆ ಸಂಪರ್ಕಿಸಬೇಕು. ಇಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆ, ಹೆಸರು, ಡೆಬಿಟ್‌ ಕಾರ್ಡ್‌ನ ಕೊನೆಯ 6 ಸಂಖ್ಯೆ ಮತ್ತು ಕಾರ್ಡ್‌ ಮುಕ್ತಾಯದ ದಿನದ ವಿವರ ದಾಖಲಿಸಬೇಕು. ಒಂದು ಬಾರಿ ಮಾತ್ರ ಈ ವಿವರ ನೀಡಬೇಕು.ಎಸ್‌ಎಂಎಸ್‌ ಮೂಲಕ ಮೊಬೈಲ್‌ ಸಂಖ್ಯೆಯನ್ನು ಆ್ಯಪ್‌ ತನ್ನಷ್ಟಕ್ಕೇ ತಾನೇ ದೃಢೀಕರಣ ಮಾಡಿಕೊಳ್ಳುತ್ತದೆ. ಈ ಆ್ಯಪ್‌ ಬಳಕೆಗೆ ಬಳಕೆದಾರರ ಹೆಸರು ಮತ್ತು ಅದಕ್ಕೊಂದು ರಹಸ್ಯ ಸಂಖ್ಯೆ (ಪಾಸ್‌ವರ್ಡ್‌) ನಿಗದಿಪಡಿಸಿಕೊಳ್ಳಬೇಕು. ಹಣದ ವಹಿವಾಟಿಗೆ ಇಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆ, ಬ್ಯಾಂಕ್‌ನ ಐಎಫ್‌ಎಸ್‌ಸಿ ಸೇರಿದಂತೆ ಇತರ ವಿವರಗಳು ಬೇಕಾಗುವುದಿಲ್ಲ.ಹಣ ವರ್ಗಾವಣೆಗೆಖಾತೆದಾರನ ಹೆಸರು ಅಥವಾ ಮೊಬೈಲ್‌ ಸಂಖ್ಯೆ@ಬ್ಯಾಂಕ್‌ಹೆಸರಿನ ವಿಳಾಸದಗುರುತು  ನಮೂದಿಸಿದರೆ ಸಾಕು. ಇದಕ್ಕೆವರ್ಚುವಲ್‌ ಐಡಿ (virtua* ID) ಎನ್ನುತ್ತಾರೆಉದಾಹರಣೆಗೆ– xyz@vijb or 1234567890@vijb (*vijb– ವಿಜಯಾಬ್ಯಾಂಕ್‌)

*ಹಣ ಪಾವತಿ ಹೇಗೆ?*

ಯಾರಿಗೆ ಹಣ ಪಾವತಿಸಬೇಕಾಗಿದೆಯೋ ಅವರ ವರ್ಚುವಲ್‌ ಐಡಿ ನಮೂದಿಸಿ, ಹೆಸರು ಸೂಚಿಸಿ, ಪಾವತಿಸಬೇಕಾದ ಮೊತ್ತ ನಮೂದಿಸಬೇಕು. ಹಣ ಸ್ವೀಕರಿಸುವವರು ಯುಪಿಐ ಆ್ಯಪ್‌ ಬಳಸುತ್ತಿದ್ದರೆ ಅವರ ಖಾತೆಗೆ ತಕ್ಷಣಹಣ ಪಾವತಿಯಾಗುತ್ತದೆ. ಅಂತರ್ಜಾಲ ತಾಣಗಳಲ್ಲಿ ಖರೀದಿಸುವ ಸರಕುಗಳಿಗೆ ಹಣ ಪಾವತಿ ಸಂದರ್ಭದಲ್ಲಿ ನೆಟ್‌ ಬ್ಯಾಂಕಿಂಗ್‌, ಕ್ರೆಡಿಟ್‌  / ಡೆಬಿಟ್‌ ಕಾರ್ಡ್‌ ಆಯ್ಕೆ ಮಾಡಿಕೊಳ್ಳುವಾಗ ಇನ್ನು ಮುಂದೆ ‘ಯುಪಿಐ’ ಆಯ್ಕೆ ಅವಕಾಶವೂ ಇರಲಿದೆ.

ರಾಜನ್‌ ಕನಸಿನ ಕೂಸುಈ ಯೋಜನೆಯು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಯಿಂದ ನಿರ್ಗಮಿಸಿರುವ ರಘುರಾಂ ರಾಜನ್‌ ಅವರಕನಸಿನ ಕೂಸು.  ಈ ಹೊಸ ಸೌಲಭ್ಯವನ್ನು ಜಾರಿಗೆ ತರುವುದಾಗಿ ಅವರು ಏಪ್ರಿಲ್‌ನಲ್ಲಿಯೇ ಪ್ರಕಟಿಸಿದ್ದರು.21 ಬ್ಯಾಂಕ್‌ಗಳುಈಗಾಗಲೇ ಸರ್ಕಾರಿ ಸ್ವಾಮ್ಯ ಮತ್ತು ಖಾಸಗಿ ವಲಯ ಸೇರಿದಂತೆ 21 ಬ್ಯಾಂಕ್‌ಗಳು ಈ ಆ್ಯಪ್‌ ಬಿಡುಗಡೆ ಮಾಡಿವೆ. ಇವುಗಳಲ್ಲಿ ವಿಜಯಾ ಬ್ಯಾಂಕ್‌, ಕೆನರಾ ಬ್ಯಾಂಕ್‌, ಕರ್ಣಾಟಕ ಬ್ಯಾಂಕ್‌, ಆಂಧ್ರಾ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌ ಸೇರಿವೆ.3 ತಿಂಗಳು ವಿಳಂಬಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌ಗಳು ನವೆಂಬರ್‌ ಹೊತ್ತಿಗೆ ಈ ಆ್ಯಪ್‌ ಬಿಡುಗಡೆ ಮಾಡಲಿವೆ.ಆಂಡ್ರಾಯ್ಡ್‌ ಫೋನ್‌ನಲ್ಲಿ ಮಾತ್ರ…ಆ್ಯಪಲ್‌ ಅಥವಾ ವಿಂಡೋಸ್‌ ಫೋನ್‌ ಬಳಸುತ್ತಿದ್ದರೆ ಸದ್ಯಕ್ಕೆ ಈ ಆ್ಯಪ್‌ ಬಳಕೆಗೆ ಸಾಧ್ಯವಿಲ್ಲ.  ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಸೌಲಭ್ಯ ಇರಲಿದೆ. ಬ್ಯಾಂಕ್‌ ಖಾತೆ ಸ್ಥಗಿತಗೊಂಡಿದ್ದರೆ ಈ  ಸೌಲಭ್ಯ ದೊರೆಯಲಾರದು. ಖಾತೆಗೆ ಚಾಲನೆ ನೀಡಿ ಈಸೇವೆ ಬಳಸಬಹುದು.ಬ್ಯಾಂಕ್‌ನಲ್ಲಿ ಮೊಬೈಲ್‌ ಸಂಖ್ಯೆ ನೋಂದಾಯಿಸಿದ್ದರೆ ಮಾತ್ರ ಈ ಆ್ಯಪ್‌ ಬಳಸಬಹುದು.  ಬ್ಯಾಂಕ್‌ನಲ್ಲಿ  ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬದಲಾಗಿ ಬೇರೆ ಮೊಬೈಲ್‌ ಸಂಖ್ಯೆ ಬಳಸುತ್ತಿದ್ದರೂ  ‘ಯುಪಿಐ’ ಬಳಸಲು ಸಾಧ್ಯವಾಗಲಾರದು.

ಉದ್ಯೋಗಿಗಳ ಪಿಂಚಣಿ ಯೋಜನೆ: ಪೆನ್ಷನ್ ಅಲ್ಪ

ಉದ್ಯೋಗಿಗಳ ಪಿಂಚಣಿ ಯೋಜನೆ: ಪೆನ್ಷನ್ ಅಲ್ಪ

ಉದ್ಯೋಗಿಗಳ ಭವಿಷ್ಯನಿಧಿ (ಇಪಿಎಫ್‌) ಬಗ್ಗೆ ಅನೇಕ ಮಂದಿಗೆ ಗೊತ್ತಿದೆ. ಆದರೆ ಇದರ ಜತೆಯಲ್ಲೇ ಸಿಗುವ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್‌ ) ಬಗ್ಗೆ ಮಾಹಿತಿಯ ಕೊರತೆ ಅನೇಕ ಮಂದಿಗೆ ಇರಬಹುದು. ಇಪಿಎಫ್‌ ಜತೆಗೆ ಇರುವ ಇಪಿಎಸ್‌ ಮೂಲಕ ನಿಮಗೆಷ್ಟು ಪಿಂಚಣಿ ಸಿಗಬಹುದು? ಇಲ್ಲಿದೆ ವಿವರ. —– ಹೊಸದಿಲ್ಲಿ: ಸಂಘಟಿತ ವಲಯದ ಬಹುತೇಕ ಎಲ್ಲ ಉದ್ಯೋಗಿಗಳಿಗೂ ಉದ್ಯೋಗಿಗಳ ಪಿಂಚಣಿ ಕಾಯಿದೆಯ (ಇಪಿಎಸ್‌) 1995 ಪ್ರಕಾರ ಪಿಂಚಣಿ ಸೌಲಭ್ಯವಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಂದಿಗೆ ಸಾಕಷ್ಟು ಅರಿವಿನ ಕೊರತೆ ಇದೆ. ಇದಕ್ಕೆ ಕಾರಣ ಇಪಿಎಸ್‌ ಎನ್ನುವುದು ಪ್ರತ್ಯೇಕ ಯೋಜನೆಯಲ್ಲ. ಇದು ಉದ್ಯೋಗಿಗಳ ಭವಿಷ್ಯ ಯೋಜನೆಯ (ಇಪಿಎಫ್‌) ಜತೆಯಲ್ಲೇ ಬರುತ್ತದೆ. ಹಾಗೂ ಎಲ್ಲ ಇಪಿಎಫ್‌ ಸದಸ್ಯರೂ ತನ್ನಿಂತಾನೆ ಇಪಿಎಸ್‌ ಸದಸ್ಯರೂ ಆಗಿರುತ್ತಾರೆ. ಈ ಇಪಿಎಸ್‌ನಲ್ಲಿ ಕೆಲವು ಸಮಸ್ಯೆಗಳು ಇವೆ. ಮೊದಲನೆಯದಾಗಿ ಇದರಲ್ಲಿ ಸಿಗುವ ಪಿಂಚಣಿ ಅತ್ಯಲ್ಪ. (ಉದಾಹರಣೆಗೆ ಇಪಿಎಸ್‌ ಅಡಿಯಲ್ಲಿ ಈಗ ಕನಿಷ್ಠ ಪಿಂಚಣಿ ತಿಂಗಳಿಗೆ 1,000 ರೂ.) ಇಪಿಎಸ್‌ಗೆ 10 ವರ್ಷಗಳ ಕಾಲ ನಿಗದಿತ ಹಣ ಸಲ್ಲಿಕೆಯಾದ ನಂತರ ಇಪಿಎಫ್‌ ಸದಸ್ಯ ಪಿಂಚಣಿಗೆ ಅರ್ಹತೆ ಪಡೆಯುತ್ತಾನೆ. ಪ್ರಸ್ತುತ ಉದ್ಯೋಗಿ ಈ ಇಪಿಎಸ್‌ಗೆ ಕೊಡುಗೆ ನೀಡಬೇಕಿಲ್ಲ. ಉದ್ಯೋಗದಾತರು ತಮ್ಮ ಉದ್ಯೋಗಿಗಳ ವೇತನದ ಶೇ.8.33 ಪಾಲನ್ನು ( ಮೂಲವೇತನ ಮತ್ತು ತುಟ್ಟಿ ಭತ್ಯೆ) ಇಪಿಎಸ್‌ಗೆ ನೀಡಬೇಕು. ಇಪಿಎಸ್‌ ಕುರಿತ ಕೊಡುಗೆಗೆ ಮಾಸಿಕ 1,250 ರೂ. ಅಥವಾ ವಾರ್ಷಿಕ 15,000 ರೂ.ಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಹಾಗೆಯೇ ವೇತನದ ಮಿತಿಯನ್ನು 15,000 ರೂ.ಗೆ ನಿರ್ಬಂಧಿಸಲಾಗಿದೆ. ಅಂದರೆ ನಿಮ್ಮ ವೇತನ ಮತ್ತು ಭತ್ಯೆಗಳು 15,000 ರೂ.ಗಳನ್ನು ದಾಟಿದರೆ, ಪಿಂಚಣಿ 15,000 ರೂ.ಗೆ ಮಾತ್ರ ಅನ್ವಯವಾಗಲಿದೆ. ಆದ್ದರಿಂದ ಇಪಿಎಸ್‌ನಲ್ಲಿ ವ್ಯಕ್ತಿಯೊಬ್ಬ (35 ವರ್ಷ ಸೇವೆ ಸಲ್ಲಿಸಿದರೆ) ಗರಿಷ್ಠ 7,500 ರೂ. ಮಾಸಿಕ ಪಿಂಚಣಿ ಪಡೆಯಬಹುದು. ಇಪಿಎಸ್‌ ಯೋಜನೆಗೆ ಉದ್ಯೋಗಿಗಳು ಸ್ವಯಂ ಪ್ರೇರಿತರಾಗಿ ಹೆಚ್ಚು ಹಣವನ್ನು ಸಲ್ಲಿಸುವ ಬಗ್ಗೆ ಇಪಿಎಫ್‌ಒ ಪರಿಶೀಲಿಸುತ್ತಿದೆ ಎಂಬ ವರದಿಗಳಿವೆ. ಇದರಿಂದ ಅವರಿಗೆ ಪಿಂಚಣಿ ಹೆಚ್ಚಬಹುದು. ಹೀಗಿದ್ದರೂ, ಉದ್ಯೋಗಿ ತನ್ನ ಸೇವಾವಧಿಯಲ್ಲಿ ಇದಕ್ಕಾಗಿ ಎಷ್ಟು ವರ್ಷ ದೇಣಿಗೆ ಸಲ್ಲಿಸಿದ್ದಾನೆ ಎಂಬುದರ ಮೇಲೆ ಪಿಂಚಣಿ ಹೆಚ್ಚಳ ನಿರ್ಧಾರವಾಗುತ್ತದೆಯೇ ಹೊರತು, ಕಳೆದ 5 ವರ್ಷಗಳಲ್ಲಿ ಸರಾಸರಿ ಗಳಿಸಿರುವ ವೇತನ ಪರಿಗಣನೆಯಾಗುವುದಿಲ್ಲ. ಹಾಗೆಯೇ ಇಪಿಎಎಸ್‌ ಪಿಂಚಣಿ ಹಣದುಬ್ಬರ ಆಧಾರಿತ ಪಿಂಚಣಿಯಾಗಿರುವುದಿಲ್ಲ. ಆದ್ದರಿಂದ ಹಣದುಬ್ಬರ ಹೆಚ್ಚಿದಂತೆ ಇದು ಹೆಚ್ಚುವ ಸಂಭವ ಇರುವುದಿಲ್ಲ. ಇಪಿಎಸ್‌ಗೆ ಹೊಸ ಉದ್ಯೋಗಿಗಳು ತಮ್ಮ ಕೊಡುಗೆಯನ್ನು ಕೊಡಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದ್ದರೂ, ಇದು ದೀರ್ಘಕಾಲಿಕವಾಗಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಹೇಳುವುದು ಕಷ್ಟ ಎನ್ನುತ್ತಾರೆ ಹಣಕಾಸು ತಜ್ಞರು. ಯಾಕೆಂದರೆ ಭಾರತದಲ್ಲಿ ಒಂದೆಡೆ ಭಾರಿ ಸಂಖ್ಯೆಯಲ್ಲಿ ಯುವಜನತೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಕೆಲಸದ ನೇಮಕಾತಿ ಸ್ವರೂಪ ಬದಲಾಗುತ್ತಿದೆ. ಅನೇಕ ಕಂಪನಿಗಳು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತವೆ.

ಯುಪಿಐ ಆಪ್

ನಗದು ರಹಿತ ವರ್ಗಾವಣೆಗೆ ಯುಪಿಐ ಆಪ್.
Aug 26, 2016.
ಕೇವಲ 50 ರೂ.ಗಳಿಂದ 1 ಲಕ್ಷ ರೂ. ತನಕ ನಗದುರಹಿತ ಹಣ ವರ್ಗಾವಣೆಗೆ ಅನುಕೂಲ.

ಹೊಸದಿಲ್ಲಿ: ಭಾರತ ನಗದು ರಹಿತ ಹಣ ವರ್ಗಾವಣೆಯನ್ನು ವ್ಯಾಪಕಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಅವರ ಕನಸಿನ ಕೂಸಾದ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ಗೆ (ಯುಪಿಐ) ಕೆಲ ದಿನಗಳಲ್ಲಿ ಚಾಲನೆ ಸಿಗಲಿದೆ. ಈ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ನಗದು ರಹಿತ ಹಣ ವರ್ಗಾವಣೆ ಸುಲಭವಾಗಲಿದೆ. ಕಳೆದ ಏಪ್ರಿಲ್‌ 11ರಂದು ಮುಂಬಯಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದೀಗ ಮತ್ತಷ್ಟು ವ್ಯಾಪಕವಾಗಿ ಅನುಷ್ಠಾನವಾಗಲಿದ್ದು, ಈ ಸಂಬಂಧ ಬ್ಯಾಂಕ್‌ಗಳು ಹಾಗೂ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಜತೆಗೆ ಸಿದ್ಧತೆ ನಡೆಯುತ್ತಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇದರ ಮೊಬೈಲ್‌ ಆ್ಯಪ್‌ನ ಸೇವೆ ಪಡೆಯಲು ಸಾಧ್ಯ. ನಿಮ್ಮ ಬ್ಯಾಂಕ್‌ ಯುಪಿಐ ಜತೆ ನೋಂದಣಿಯಾಗಿರಬೇಕು. ನಂತರ ಆ ಬ್ಯಾಂಕಿನ ಗ್ರಾಹಕರು ಅದರ ಸೇವೆ ಪಡೆಯಬಹುದು. ನೋಂದಣಿಯ ಬಳಿಕ ವಿಶಿಷ್ಟ ‘ವರ್ಚುವಲ್‌ ಅಡ್ರೆಸ್‌’ ನೀಡಲಾಗುತ್ತದೆ. ಈ ಆ್ಯಪ್‌ನಿಂದ 50 ರೂ.ಗಳಿಂದ 1 ಲಕ್ಷ ರೂ. ತನಕ ನಗದು ರಹಿತ ಹಣ ವರ್ಗಾವಣೆ ಸಾಧ್ಯ.ಸ್ನೇಹಿತರಿಗೆ ಹಣ ಕಳಿಸಬಹುದು. ವ್ಯಾಪಾರಿಗಳಿಗೆ ದುಡ್ಡು ಕೊಡಬಹುದು. ಸ್ವಾರಸ್ಯವೆಂದರೆ ಒಂದು ಸಲ ಯುಪಿಐ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿದ ನಂತರ, ಅದರ ಮೂಲಕ ಹಣ ವರ್ಗಾವಣೆಗೆ ಐಎಫ್‌ಎಸ್‌ಸಿ ಕೋಡ್‌ ಮತ್ತು ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಮತ್ತು ಬ್ಯಾಂಕ್‌ ಶಾಖೆಗಳ ವಿವರಗಳನ್ನು ನಮೂದಿಸಬೇಕಾದ ಅಗತ್ಯ ಇರುವುದಿಲ್ಲ. ನೀವು ವಿಶಿಷ್ಟ ಐಡಿ ಪಡೆದ ನಂತರ ಯುಪಿಐ ಆ್ಯಪ್‌ ಅನ್ನು ತೆರೆದು, ಕಳಿಸಬೇಕಾದ ಮೊತ್ತವನ್ನು ನಮೂದಿಸಿ, ಕಳಿಸಬೇಕಾದ ವ್ಯಕ್ತಿಯ ವಿಶಿಷ್ಟ ಐಡಿಯನ್ನು ಸೇರಿಸಿ ‘ ಸೆಂಡ್‌’ ಆಯ್ಕೆ ಮಾಡಿದರಾಯಿತು. ವರ್ಗಾವಣೆ ದೃಢೀಕರಣಕ್ಕಾಗಿ ಮೊಬೈಲ್‌ ಪಿನ್‌ ಸಂಖ್ಯಯೊಂದನ್ನು ಆ್ಯಪ್‌ ಕೇಳುತ್ತದೆ ಅಷ್ಟೇ. ನಂತರ ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ. ದೈನಂದಿನ ಶಾಪಿಂಗ್‌, ಹಣ್ಣು ಹಂಪಲು, ದಿನಸಿ ಅಂಗಡಿಗಳಲ್ಲೂ ಇದನ್ನು ಬಳಸಬಹುದು. ಸದ್ಯಕ್ಕೆ 29 ಬ್ಯಾಂಕ್‌ಗಳು ಯುಪಿಐ ನೆಟ್‌ವರ್ಕ್‌ನ ಭಾಗವಾಗಿದೆ. ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌ ಇವುಗಳಲ್ಲಿ ಸೇರಿದೆ. ಹೀಗಿದ್ದರೂ ಎಸ್‌ಬಿಐ ಇನ್ನೂ ಸೇರಿಲ್ಲ. ಆದರೆ ಈ ಕುರಿತ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದೆ.

ಇ–ಫೈಲಿಂಗ್‌: ‘ಫಾರಂ 16’ ಬಳಕೆ ಹೇಗೆ?

ಇ–ಫೈಲಿಂಗ್‌: ‘ಫಾರಂ 16’ ಬಳಕೆ ಹೇಗೆ?

6 Jul, 2016
@ ಅರ್ಚಿತ್‌ ಗುಪ್ತ ಮತ್ತು ಆನಂದ್‌ ಧೆಲಿಯಾ.
  
ಮಾಸಿಕ ವೇತನ ಪಡೆಯುವವರು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದರೆ, ಪ್ರತಿ ವರ್ಷ ಜುಲೈ ತಿಂಗಳಲ್ಲಿ ತಮ್ಮ ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್‌) ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇದಕ್ಕೆ ಉದ್ಯೋಗದಾತರು ನೀಡುವ ‘ಫಾರಂ ನಂಬರ್‌ 16’ ಆಧರಿಸಿ ‘ಇ–ಫೈಲಿಂಗ್‌’ ಮಾಡುವ ಅಗತ್ಯವನ್ನು ಅರ್ಚಿತ್‌ ಗುಪ್ತ  ಮತ್ತು ಆನಂದ್‌ ಧೆಲಿಯಾ ಅವರು ಇಲ್ಲಿ ವಿವರಿಸಿದ್ದಾರೆ.

ಉದ್ಯೋಗದಲ್ಲಿದ್ದು, ಸಂಬಳದ ರೂಪದಲ್ಲಿ ಆದಾಯ ಪಡೆಯುತ್ತಿರುವವರಿಗೆ ‘ಫಾರಂ ನಂಬರ್‌ 16’ ಅತ್ಯಂತ ಮುಖ್ಯ ದಾಖಲೆ. ಉದ್ಯೋಗದಾತರಿಂದ  ಉದ್ಯೋಗಿಗಳು ಪಡೆಯುವ ಈ ದಾಖಲೆ ನಿಜವಾಗಿಯೂ ಒಂದು ಪ್ರಮಾಣಪತ್ರ.

ಈ ‘ಫಾರಂ 16’  ಅನ್ನು ಉದ್ಯೋಗ ನೀಡಿದ್ದಕ್ಕೆ ಮತ್ತು ಮಾಡಿದ ಕೆಲಸಕ್ಕೆ ಪಡೆಯುವ ವೇತನಕ್ಕೆ ಪುರಾವೆ ಎಂದೂ ನಾವು ಭಾವಿಸಬಹುದು. ಒಂದು ನಿರ್ದಿಷ್ಟ ಅವಧಿಗೆ ಉದ್ಯೋಗದಾತರಿಂದ ಸಂಬಳ ಪಡೆದಿದ್ದೀರಿ ಮತ್ತು ಮಾಲೀಕರು  ನೀಡಿದ ಸಂಬಳದಲ್ಲಿ ಮೂಲದಲ್ಲಿಯೇ ತೆರಿಗೆ ಕಡಿತ ಮಾಡಿಕೊಂಡಿದ್ದಾರೆ (ಟಿಡಿಎಸ್‌) ಎಂಬುದನ್ನು ಇದು ಪ್ರಮಾಣೀಕರಿಸುತ್ತದೆ.

ವೇತನ ಪಡೆಯುವ ಉದ್ಯೋಗಿಗಳು ಹಣಕಾಸು ವರ್ಷ ಕೊನೆಗೊಂಡ ಬಳಿಕ ವರ್ಷಕ್ಕೆ ಒಮ್ಮೆ ಈ ‘ಫಾರಂ 16’ ಪಡೆಯುತ್ತಾರೆ. ಸಾಮಾನ್ಯವಾಗಿ ಮೇ ಅಥವಾ ಜೂನ್‌ನಲ್ಲಿ ಈ ‘ಫಾರಂ 16’ ಉದ್ಯೋಗಿಗಳ ಕೈಸೇರುತ್ತದೆ.

ಆದಾಯ ತೆರಿಗೆ ಲೆಕ್ಕಪತ್ರ  (ಐ.ಟಿ ರಿಟರ್ನ್ಸ್‌) ಸಲ್ಲಿಸುವ ಒಂದೆರಡು ತಿಂಗಳ ಮೊದಲೇ ‘ಫಾರಂ 16’  ಬಗ್ಗೆ ಮಾತು ಕೇಳಿ ಬರತೊಡಗುತ್ತವೆ. ತೆರಿಗೆ ರಿಟರ್ನ್ಸ್‌ನಲ್ಲಿ ಭರ್ತಿ ಮಾಡಬೇಕಾದ ಬಹುತೇಕ ಎಲ್ಲ ಮಾಹಿತಿಗಳು ಈ ‘ಫಾರಂ 16’ ನಲ್ಲಿ ಇರುತ್ತದೆ.

‘ಫಾರಂ 16’ನಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ವಿಭಾಗಗಳಿವೆ. ‘ಎ’ ವಿಭಾಗದಲ್ಲಿ ಉದ್ಯೋಗದಾತರ ವಿವರ,   ಸಂಸ್ಥೆಯಲ್ಲಿ ಉದ್ಯೋಗದ ಅವಧಿಯ ಮಾಹಿತಿ ಇರುತ್ತದೆ. ‘ಬಿ’ ವಿಭಾಗ ಬಹಳ ಮುಖ್ಯವಾದುದು. ಅದರಲ್ಲಿ  ವೇತನದ ವಿವರವಾದ ಬಿಡಿ ಬಿಡಿ ವಿವರಗಳು ಇರುತ್ತವೆ. ಕೆಲವು ಹೂಡಿಕೆಗಳು ಮತ್ತು ವೆಚ್ಚಗಳ ರೂಪದಲ್ಲಿ ನೀವು ಕ್ಲೇಮು ಮಾಡಿಕೊಂಡಂತಹ ತೆರಿಗೆ ಉಳಿತಾಯದ ಕಡಿತಗಳ ಮಾಹಿತಿ ಅಲ್ಲಿರುತ್ತದೆ.

ಉದ್ಯೋಗಿಗಳಿಗೆ ‘ಫಾರಂ 16’  ನೀಡುವುದು   ಉದ್ಯೋಗದಾತರ ಕರ್ತವ್ಯ. ಯಾಕೆಂದರೆ  ನೌಕರರ ಆದಾಯದ ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಂಡಿರುವವರು ಉದ್ಯೋಗದಾತರು. ಯಾರೇ ಆಗಲಿ ‘ಫಾರಂ 16’  ಪಡೆದಿಲ್ಲವೆಂದಾದರೆ  ಉದ್ಯೋಗದಾತರಲ್ಲಿ ಕೇಳಿ ಅದನ್ನು ಪಡೆದುಕೊಳ್ಳಬೇಕು. ಇದು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳದಂತಹ ದಾಖಲೆ.

‘ಫಾರಂ 16’  ಬಳಸಿ ಇ–ಫೈಲಿಂಗ್ ಮಾಡಿ
ಆದಾಯ ತೆರಿಗೆ ಇಲಾಖೆಯ ಅಂತರ್ಜಾಲ ತಾಣದಲ್ಲಿ ‘ಫಾರಂ 16’ ರಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ ತೆರಿಗೆ ರಿಟರ್ನ್ಸ್‌ಗಳನ್ನು ‘ಇ–ಫೈಲ್‌’ ಮಾಡಬಹುದು. ಸಂಬಂಧಪಟ್ಟ ವಿಭಾಗಗಳಲ್ಲಿ ಉದ್ಯೋಗಿಯೆ ಕೈಯಾರೆ ಮಾಹಿತಿಗಳನ್ನು ತುಂಬಬೇಕು.

‘ಕ್ಲಿಯರ್‌ ಟ್ಯಾಕ್ಸ್‌’ನಂತಹ ಖಾಸಗಿ ತೆರಿಗೆ ಫೈಲಿಂಗ್‌ ವೇದಿಕೆಗಳಲ್ಲಿ ‘ಫಾರಂ 16’  ಅನ್ನು ಅಪ್‌ಲೋಡ್ ಮಾಡಿದರೆ ಮುಗಿಯಿತು. ವೆಬ್‌ಸೈಟ್‌ ಸ್ವಯಂಚಾಲಿತವಾಗಿ ರಿಟರ್ನ್‌ಗಳನ್ನು ತಯಾರಿಸಿಕೊಡುತ್ತದೆ. ತೆರಿಗೆಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಎಲ್ಲ ಮಾಹಿತಿಗಳೂ ಇವೆ ಎಂದಾದರೆ ‘ಫಾರಂ 16’  ಇಲ್ಲದೆ ಇದ್ದರೂ ‘ಇ – ಫೈಲ್’ ಮಾಡಬಹುದು.

ಇತರ ಫಾರಂ 16:
‘ಫಾರಂ 16ಎ’ ನಂತಹ ಇತರ ದಾಖಲೆಯೂ ಇದೆ. ‘ಫಾರಂ 16’ ರಲ್ಲಿ ವೇತನದ ವಿವರ ಇದ್ದರೆ, ‘ಫಾರಂ 16 ಎನಲ್ಲಿ ಇತರ ಆದಾಯಗಳ ಮೂಲದಿಂದ ತೆರಿಗೆ ಕಡಿತಗೊಂಡಿರುವ ವಿವರ ಇರುತ್ತದೆ. ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿ, ವಿಮೆ ಕಮಿಷನ್‌, ಮನೆ ಆಸ್ತಿಗಳಂತಹ ಆದಾಯಗಳು ಈ ‘ಫಾರಂ 16 ಎ’ನಲ್ಲಿ ಸೇರುತ್ತದೆ.

‘ಫಾರಂ 16ಎ’ ಅನ್ನು ತೆರಿಗೆ ಮುರಿದುಕೊಳ್ಳುವವರು ನೀಡುತ್ತಾರೆ. ಇಂತಹ ತೆರಿಗೆ ಮುರಿದುಕೊಳ್ಳುವವರು ಹಲವು ಮಂದಿ ಇರಬಹುದು. ಉದಾಹರಣೆಗೆ,  ಯಾರಾದರು ಎರಡು ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಹೊಂದಿದ್ದರೆ ಮತ್ತು ಈ ಎರಡೂ ಕಡೆಗಳಲ್ಲಿ ಟಿಡಿಎಸ್‌ ಕಡಿತಗೊಳ್ಳುತ್ತಿದ್ದರೆ, ಎರಡೂ ಬ್ಯಾಂಕ್‌ಗಳು ‘ಫಾರಂ 16ಎ’ ಗಳನ್ನು ಪ್ರತ್ಯೇಕವಾಗಿ ನೀಡುತ್ತವೆ.

‘ಫಾರಂ 16’  ಎಂಬುದು ತೆರಿಗೆ ಲೆಕ್ಕಪತ್ರ ಪಾವತಿ ಮಾಡುವಾಗ ಇರುವಂತಹ ಅವಿಭಾಜ್ಯ ದಾಖಲೆ. ಟಿಡಿಎಸ್‌ ಮುರಿದುಕೊಂಡ ಬಳಿಕವೂ  ಉದ್ಯೋಗದಾತರು ‘ಫಾರಂ 16’  ನೀಡದೆ ಇದ್ದರೂ ನೀವು ರಿಟರ್ನ್ ಸಲ್ಲಿಸಲೇಬೇಕು.

‘ಫಾರಂ 16’  ಕೊಡದೆ ಇರುವುದು ಉದ್ಯೋಗದಾತರ ತಪ್ಪು ಮತ್ತು ಅದಕ್ಕೆ ದಂಡವನ್ನೂ ಪಾವತಿಸಬೇಕಾಗುತ್ತದೆ. ತೆರಿಗೆ ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ನೀವು ಗಳಿಸುತ್ತಿದ್ದರೆ ತೆರಿಗೆ ರಿಟರ್ನ್ಸ್‌ ಸಲ್ಲಿಸುವುದು ನಿಮ್ಮ ಹೊಣೆಗಾರಿಕೆ ಹಾಗೂ ‘ಫಾರಂ 16’ ನಿಮ್ಮ ಈ ಕೆಲಸವನ್ನು ಸುಲಭಗೊಳಿಸುತ್ತದೆ.

ಮಾಹಿತಿ ಮುಚ್ಚಿಡುವಂತಿಲ್ಲ
ದೇಶದ ಜನಸಂಖ್ಯೆಯಲ್ಲಿ ಸುಮಾರು ಶೇ 4ರಷ್ಟು ಮಂದಿ ಮಾತ್ರ ತೆರಿಗೆ ಪಾವತಿಸುತ್ತಾರೆ ಹಾಗೂ ಅದಕ್ಕಿಂತಲೂ ಕಡಿಮೆ ಮಂದಿ ತೆರಿಗೆ ರಿಟರ್ನ್ಸ್‌  ಸಲ್ಲಿಸುತ್ತಾರೆ. ಎಲ್ಲ ತೆರಿಗೆ ಪಾವತಿಸಿ ಆಗಿದೆ, ತೆರಿಗೆ ರಿಟರ್ನ್ಸ್‌ ಸಲ್ಲಿಸಿದ್ದೇ ಆದರೆ ಇನ್ನಷ್ಟು ತೆರಿಗೆಗೆ ಬೇಡಿಕೆ ಬರಬಹುದು ಅಥವಾ ಲೆಕ್ಕಪರಿಶೋಧನೆ ನಡೆಯಬಹುದು ಎಂದೇ  ರಿಟನ್ಸ್‌ ಫೈಲ್‌ ಮಾಡದ ಅನೇಕರು ಭಾವಿಸುತ್ತಾರೆ.

ಎಲ್ಲಾ ಸಂದರ್ಭಗಳಲ್ಲೂ ಇದು ಸತ್ಯವಲ್ಲ.  ತೆರಿಗೆ ರಿಟರ್ನ್ಸ್‌ಗಳನ್ನು ಸರಿಯಾಗಿ ಸಲ್ಲಿಸಲಾಗಿದೆಯೇ ಎಂದು ಪರಿಶೀಲಿಸುವ ಅಗತ್ಯ ಇದ್ದೇ ಇದೆ. ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ಸ್ವಲ್ಪ ಎಚ್ಚರ ವಹಿಸಿದರೆ ಮುಂದೆ ತೆರಿಗೆ ಪಾವತಿಸಲು ಬೇಡಿಕೆ ಬರುವುದು ಅಥವಾ ನೋಟಿಸ್‌ ಪಡೆದುಕೊಳ್ಳುವ ಪ್ರಮೇಯದಿಂದ ಪಾರಾಗಬಹುದು.

‘ಫಾರಂ 26ಎಎಸ್‌’  ವ್ಯಕ್ತಿಯ ಆದಾಯದ ಮೂಲದಿಂದ ತೆರಿಗೆ ಕಡಿತ ಮಾಡಿಕೊಂಡಿದ್ದನ್ನು ತಿಳಿಸುವ ಸಂಪೂರ್ಣ ಮಾಹಿತಿ ಕಣಜವಾಗಿರುತ್ತದೆ. ಅದರಲ್ಲಿ ಅಡ್ವಾನ್‌್ಸ ಟ್ಯಾಕ್ಸ್ ಅಥವಾ ಸ್ವಯಂಘೋಷಿತ ತೆರಿಗೆಗಳಂತಹ ತೆರಿಗೆಗಳೂ ಸೇರಿಕೊಂಡಿರುತ್ತವೆ. ತೆರಿಗೆ ಕಡಿತ ಮಾಡಿದ್ದಕ್ಕೆ ಪ್ರತಿಯಾಗಿ   ನೀಡಿದಂತಹ ಆದಾಯದ ಮಾಹಿತಿಯೂ ಅದರಲ್ಲಿ ಇರುತ್ತದೆ. ‘ಫಾರಂ 26ಎಎಸ್‌’ನಲ್ಲಿನ ಮಾಹಿತಿಗೂ, ತೆರಿಗೆ ರಿಟರ್ನ್ಸ್‌ಗೂ ಹೊಂದಾಣಿಕೆ ಆಗದಿದ್ದರೆ ನೋಟಿಸ್‌
ಜಾರಿಗೊಳ್ಳುವ ಸಾಧ್ಯತೆಯೂ ಇರುತ್ತದೆ.

ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಸೂಕ್ತ ರೀತಿಯ ಫಾರಂ ಬಳಸುವುದು ಬಹಳ ಮುಖ್ಯ.  ವೇತನ, ಒಂದು ಮನೆಯ ಆಸ್ತಿ ಮತ್ತು ಇತರ ಆದಾಯ ಮೂಲಗಳಿದ್ದರೆ ‘ಐಟಿಆರ್‌–1’ ಅನ್ನು ಬಳಸಬೇಕು.   ಒಂದಕ್ಕಿಂತ ಅಧಿಕ ಮನೆಗಳಿಂದ ಆದಾಯ ಬರುತ್ತಿದ್ದರೆ ಅಥವಾ ನಷ್ಟಗಳೇನಾದರೂ ಇದ್ದರೆ ‘ಐಟಿಆರ್‌–2ಎ’ ಬಳಸಬೇಕು. ಬಂಡವಾಳ ಗಳಿಕೆ ಲಾಭ (ಕ್ಯಾಪಿಟಲ್‌ ಗೇನ್‌) ಇದ್ದಲ್ಲಿ, ವಿದೇಶದಲ್ಲಿ ಆಸ್ತಿ ಹೊಂದಿದ್ದರೆ ಅಥವಾ ತೆರಿಗೆ ಒಪ್ಪಂದದಂತೆ ಪರಿಹಾರ ಪಡೆದುಕೊಳ್ಳುವುದೇನಾದರೂ ಇದ್ದಲ್ಲಿ ‘ಐಟಿಆರ್‌–2’ ಅನ್ನು ಸಲ್ಲಿಸಬೇಕಾಗುತ್ತದೆ.

ತೆರಿಗೆ ರಿಟರ್ನ್ಸ್‌ ಫಾರಂನಲ್ಲಿ ಈ ವರ್ಷ ಸೇರ್ಪಡಗೊಂಡಿರುವ ಹೊಸ ವಿಷಯವೇನೆಂದರೆ, ಒಟ್ಟು ಆದಾಯ ₹ 50 ಲಕ್ಷಕ್ಕಿಂತ ಅಧಿಕ ಇದ್ದರೆ, ಭಾರತದಲ್ಲಿ  ಹೊಂದಿರುವ ಆಸ್ತಿಗಳು ಮತ್ತು ಸಾಲಗಳ ಬಗ್ಗೆ ಹಣಕಾಸು ವರ್ಷದ ಕೊನೆಯಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಬೇಕಿರುವುದು. ಹೀಗೆ ಮಾಹಿತಿ ನೀಡುವಲ್ಲಿ ಈ ಕೆಳಗಿನ ವಿಚಾರಗಳನ್ನು ನಮೂದಿಸಬೇಕಾಗುತ್ತದೆ.

ಹೊಂದಿರುವ ಜಮೀನು, ಕಟ್ಟಡ, ಆಭರಣ, ಚಿನ್ನ, ವಾಹನಗಳು, ದೋಣಿ, ವಿಮಾನಗಳ ಮಾಹಿತಿ ನೀಡಬೇಕು. ಇಂತಹ ಆಸ್ತಿಗಳನ್ನು ಉಡುಗೊರೆ ರೂಪದಲ್ಲಿ ಅಥವಾ ಹಿರಿಯರಿಂದ ಬಳುವಳಿಯಾಗಿ ಬಂದಿದ್ದರೆ, ಈ ಹಿಂದಿನ ಮಾಲೀಕರು ಭರಿಸಿದಂತಹ ವೆಚ್ಚದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ.

ವಿದೇಶದಲ್ಲಿ ಬ್ಯಾಂಕ್‌ ಖಾತೆಗಳಂತಹ ಆಸ್ತಿಗಳು ಇದ್ದರೆ, ಅಂತಹ ಖಾತೆಗಳಲ್ಲಿ ವ್ಯವಹಾರ ಇಲ್ಲದಿದ್ದರೂ ತೆರಿಗೆ ರಿಟರ್ನ್ಸ್‌ನಲ್ಲಿ ಅದರ ವಿವರ ನೀಡಲೇಬೇಕು.ಉದ್ಯೋಗದಾತರ ವಿದೇಶಿ ಮಾತೃ ಸಂಸ್ಥೆಯಿಂದ ಷೇರುಗಳನ್ನು ಪಡೆದಿದ್ದರೆ ಸಹ ಅದನ್ನು ರಿಟರ್ನ್ಸ್‌ನಲ್ಲಿ ತೋರಿಸಬೇಕಾಗುತ್ತದೆ.

ಕಳೆದ ವರ್ಷದಿಂದೀಚೆಗೆ ಎಲ್ಲ ಉಳಿತಾಯ ಮತ್ತು ಚಾಲ್ತಿ ಬ್ಯಾಂಕ್‌ ಖಾತೆಗಳು, ಆ ವರ್ಷ ಕೊನೆಗೊಳಿಸಿದಂತಹ ಖಾತೆಗಳ ವಿವರಗಳನ್ನು ನೀಡಬೇಕಾಗುತ್ತದೆ. ಅದಕ್ಕಿಂತ ಮೊದಲು ತೆರಿಗೆ ಹಣ ವಾಪಸ್‌ ಪಡೆದುಕೊಳ್ಳಲು ಒಂದು ಬ್ಯಾಂಕ್‌ ಖಾತೆಯ ವಿವರ ನೀಡಿದ್ದರೆ ಸಾಕಾಗುತ್ತಿತ್ತು. ನಿಮ್ಮ ಉಳಿತಾಯ ಬ್ಯಾಂಕ್‌ ಖಾತೆಗೆ ಬರುವಂತಹ ಬಡ್ಡಿಯ ವಿವರವನ್ನೂ ನೀಡುವುದಕ್ಕೆ ಮರೆಯಬೇಡಿ. ಈ ಬಡ್ಡಿಗೆ ₹ 10 ಸಾವಿರದ ತನಕ ತೆರಿಗೆ ಕಡಿತದ ಅವಕಾಶ ಇದೆ.

‘ಇ–ಫೈಲಿಂಗ್‌’ ನಂತರ ರಿಟರ್ನ್ಸ್‌ ಅನ್ನು ಡಿಜಿಟಲ್‌ ರೂಪದಲ್ಲಿ ಸಹಿ ಮಾಡದೆ ಇದ್ದಲ್ಲಿ, ನಿಮ್ಮ ತೆರಿಗೆ ರಿಟರ್ನ್ಸ್‌ ಬಗ್ಗೆ 120 ದಿನದೊಳಗೆ ಪರಿಶೀಲನೆ ನಡೆಸಬೇಕು. ಅದಕ್ಕಾಗಿ ಸಹಿ ಮಾಡಿದಂತಹ ಐಟಿಆರ್‌–5 ಅನ್ನು ಆದಾಯ ತೆರಿಗೆ ಇಲಾಖೆಯ ಕೇಂದ್ರೀಕೃತ ನಿರ್ವಹಣಾ ಕೇಂದ್ರಕ್ಕೆ ಕಳುಹಿಸಬೇಕು ಅಥವಾ ಎಲೆಕ್ಟ್ರಾನಿಕ್‌ ವೆರಿಫಿಕೇಷನ್‌ ಕೋಡ್‌ನ   ಆನ್‌ಲೈನ್‌ ವೆಲಿಡೇಷನ್ ಗಮನಿಸಬೇಕು.

ಈ ರೀತಿ ಮಾಡದೆ ಇದ್ದಲ್ಲಿ ನಿಮ್ಮ ತೆರಿಗೆ ರಿಟರ್ನ್ಸ್‌ ಸಂಸ್ಕರಣೆ ನಡೆದಿಲ್ಲ ಮತ್ತು ನೀವು ಸಲ್ಲಿಸಿದ ರಿಟರ್ನ್ಸ್‌ ಅಸಮರ್ಪಕ ಎನಿಸುತ್ತದೆ. ತೆರಿಗೆ ರಿಟರ್ನ್ಸ್‌ ಗೆ ಸಂಬಂಧಿಸಿದಂತೆ ಹೀಗೆ ಮಾಡಬೇಕು, ಹೀಗೆ ಮಾಡಬಾರದು ಎಂಬ ದೊಡ್ಡ ಪಟ್ಟಿಯೇ ಇದೆ. ಇಲ್ಲಿ ತಿಳಿಸಿದ ವಿಚಾರಗಳನ್ನು ಅನುಸರಿಸಿದ್ದೇ ಆದಲ್ಲಿ ರಿಟರ್ನ್ಸ್‌ ಸಲ್ಲಿಕೆಯ ತಪ್ಪುಗಳನ್ನು ಮತ್ತು ಅದಕ್ಕಾಗಿ ನೋಟಿಸ್‌ ಪಡೆಯುವುದನ್ನು ತಪ್ಪಿಸಬಹುದು.

(ಅಜಿತ್‌– ಕ್ಲಿಯರ್‌ ಟ್ಯಾಕ್‌್ಸ ಸಂಸ್ಥೆಯ  ಸಂಸ್ಥಾಪಕ ಮತ್ತು ಸಿಇಒ) (ಆನಂದ್‌ ಧೆಲಿಯಾ–ಪೀಪಲ್‌ ಅಡ್ವೈಸರಿ ಸರ್ವೀಸಸ್‌ನ ತೆರಿಗೆ ನಿರ್ದೇಶಕ. ಹಿರಿಯ ತೆರಿಗೆ ತಜ್ಞ ಅಮ್ನು ಸದಾನಂದನ್‌ ಸಹ ಪೂರಕ ಮಾಹಿತಿ ನೀಡಿದ್ದಾರೆ)

ಬಡ್ಡಿಗಿಂತಲೂ ಹೆಚ್ಚು ಬೆದರಿಸುವ ದರ ಸಾಲದಲ್ಲಿದೆ!

ಸಾಮಾನ್ಯವಾಗಿ ಈಗಿನ ದೀರ್ಘಾವಧಿ ಸಾಲಗಳಿಗೆ ಬಡ್ಡಿ ದರ ಬದಲಾಗುತ್ತಿರುತ್ತದೆ. ಎಂಸಿಎಲ್​ಆರ್ ಎಂಬ ಸೂತ್ರವನ್ನು ಅಳವಡಿಸಲಾಗಿದ್ದು, ಪ್ರತಿ ವರ್ಷವೂ ಬಡ್ಡಿ ದರವನ್ನು ಬದಲಿಸಲಾಗುತ್ತದೆ. ಹೀಗಾಗಿ ಗೃಹ ಸಾಲ ಪಡೆದವರು ಪ್ರತಿ ವರ್ಷವೂ ಬಡ್ಡಿ ದರವನ್ನು ಪರಿಶೀಲಿಸುತ್ತಿರಬೇಕು. ಬಡ್ಡಿ ದರದ ಹೊರತಾಗಿ ಕಾಣದಿರುವ ಹಲವು ಶುಲ್ಕಗಳ ಅರಿವಿಲ್ಲದೇ ಹೋದರೆ, ‘ಸಾಲ’ ಶೂಲವಾದೀತು.

|ಕೃಷ್ಣ ಭಟ್

ಸಾಲ ಎಂದ ತಕ್ಷಣ ನಾವು ‘ಬಡ್ಡಿ ಎಷ್ಟು?’ ಎಂದು ಕೇಳುತ್ತೇವೆ. ಇದು ಹಿಂದಿನ ಕಾಲದಿಂದಲೂ ರೂಢಿಯಲ್ಲಿರುವ ಸಂಪ್ರದಾಯ. ಹಿಂದೆ ಊರಿನ ಅಥವಾ ಪರವೂರಿನ ದಲ್ಲಾಳಿ ಹಣ ಕೊಡುವಾಗ ಬಡ್ಡಿ ದರವನ್ನು ಮಾತ್ರ ಹೇಳುತ್ತಿದ್ದ. ಇತರ ಶುಲ್ಕಗಳ ಬಗ್ಗೆ ಸಾಲ ಕೊಟ್ಟಮೇಲೇ ತಿಳಿಯುತ್ತಿತ್ತು. ಆದರೆ ಈಗ ಸಾಲ ಕೊಡಲು ಬ್ಯಾಂಕ್​ಗಳಿವೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿವೆ, ಸಹಕಾರಿ ಸಂಸ್ಥೆಗಳಿವೆ… ಎಲ್ಲದರಲ್ಲೂ ಬಡ್ಡಿ ದರವಿದೆ. ಇದರ ಜತೆಗೇ ಇತರ ಶುಲ್ಕಗಳೂ ಇರುತ್ತವೆ. ಸಾಮಾನ್ಯವಾಗಿ ಒಂದು ಸಾಲದಲ್ಲಿ ಬಡ್ಡಿಯ ಹೊರತಾಗಿ ಕನಿಷ್ಠ ನಾಲ್ಕರಿಂದ ಐದು ರೀತಿಯ ಶುಲ್ಕಗಳಿರುತ್ತವೆ. ಸಾಲ ಪಡೆಯುವ ಹೊತ್ತಲ್ಲಿ ಕೆಲವು ಶುಲ್ಕಗಳು ಕಡ್ಡಾಯವಾದರೆ, ಇನ್ನು ಕೆಲವು ಕಾಲಕಾಲಕ್ಕೆ ಜಾರಿಗೆ ಬರುತ್ತವೆ. ಉದಾಹರಣೆಗೆ ಪ್ರೊಸೆಸಿಂಗ್ ಫೀ ಕಡ್ಡಾಯ. ಆದರೆ ನೀವು ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ವಿಫಲವಾದರೆ ಮಾತ್ರ ದಂಡ ವಿಧಿಸಲ್ಪಡುತ್ತದೆ. ಅದೇ ರೀತಿ ಪ್ರೀ ಕ್ಲೋಶರ್ ಶುಲ್ಕ ಕೂಡ. ಅವಧಿಗೂ ಮುನ್ನವೇ ಸಾಲವನ್ನು ಚುಕ್ತಾ ಮಾಡುತ್ತೀರಿ ಎಂದಾದರೆ ನೀವು ಈ ಶುಲ್ಕ ತೆರಬೇಕಾಗುತ್ತದೆ.

ಕೆಲವು ವರ್ಷಗಳ ಹಿಂದೆ ಸಾಲ ಮಾರುಕಟ್ಟೆ ಬೆಳೆಯುತ್ತಿದ್ದಂತೆ ಬಡ್ಡಿಯ ಜತೆಗೇ ಬ್ಯಾಂಕ್​ಗಳು ಪ್ರೊಸೆಸಿಂಗ್ ಫೀಯನ್ನೂ ಸೇರಿಸಿಬಿಡುತ್ತಿದ್ದವು. ಗ್ರಾಹಕರು ಈ ಬಗ್ಗೆ ಸ್ಪಷ್ಟ ಅರಿವು ಪಡೆದುಕೊಳ್ಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಆದರೆ ನಂತರದಲ್ಲಿ ಆರ್​ಬಿಐ ನಿಯಮ ಬಿಗಿಗೊಳಿಸಿದೆ. ಪ್ರೊಸೆಸಿಂಗ್ ಫೀ ಸೇರಿದಂತೆ ಗ್ರಾಹಕನಿಗೆ ವಿಧಿಸುವ ಎಲ್ಲ ಶುಲ್ಕ ಹಾಗೂ ದರಗಳ ವಿವರಗಳನ್ನು ಮೊದಲೇ ವಿಸõತವಾಗಿ ಒದಗಿಸುವುದು ಈಗ ಕಡ್ಡಾಯವಾಗಿದೆ.

ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಬಡ್ಡಿ ದರವಿದ್ದರೆ, ಪ್ರೊಸೆಸಿಂಗ್ ಫೀ, ಅಪ್​ಫ್ರಂಟ್ ಫೀ ಕೂಡ ಪ್ರಮುಖವಾದವು. ಈ ಪೈಕಿ ಕೆಲವು ಬ್ಯಾಂಕ್​ಗಳು ಹಾಗೂ ಹಣಕಾಸು ಸಂಸ್ಥೆಗಳು ಮಾತ್ರ ಅಪ್​ಫ್ರಂಟ್ ಶುಲ್ಕ ವಿಧಿಸುತ್ತವೆ. ಸಾಲದ ಅರ್ಜಿ ಸಲ್ಲಿಸುವಾಗಲೇ ಈ ಶುಲ್ಕವನ್ನು ಭರಿಸಬೇಕಿರುತ್ತದೆ. ಅರ್ಜಿ ತಿರಸ್ಕೃತವಾಗಲೀ ಅಥವಾ ಅನುಮೋದಿಸಲ್ಪಡಲಿ ಈ ಶುಲ್ಕ ವಾಪಸ್ ಬರುವುದಿಲ್ಲ. ನಿಮ್ಮ ಅರ್ಜಿಯನ್ನು ಪ್ರೋಸೆಸ್ ಮಾಡಲು ಈ ಶುಲ್ಕವನ್ನು ಹಣಕಾಸು ಸಂಸ್ಥೆಗಳು ವಿಧಿಸುತ್ತವೆ. ಇದರ ನಂತರ ಸಾಲ ಮಂಜೂರಾದರೆ ಅಡ್ಮಿನ್ ಫೀ, ಕಾನೂನು ಶುಲ್ಕ, ತೆರಿಗೆಗಳು ಮತ್ತು ಸೆಸ್​ಗಳನ್ನು ವಿಧಿಸಲಾಗುತ್ತದೆ. ಈ ಪೈಕಿ ಯಾವುದು ಎಷ್ಟು ಮೊತ್ತದಲ್ಲಿರುತ್ತವೆ ಎಂಬುದನ್ನು ಬ್ಯಾಂಕ್​ನಿಂದ ವಿವರವಾಗಿ ಮೊದಲೇ ಪಡೆಯುವುದು ಒಳಿತು. ಇಲ್ಲವಾದರೆ ಮರುಪಾವತಿ ಮೊತ್ತ ಹೆಚ್ಚಾದೀತು. ಗೃಹ ಸಾಲವಾದರೆ ನಿಮ್ಮ ಕೈಗೆ ಬರುವ ಮೊತ್ತ ಕಡಿಮೆಯಾದೀತು.

ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ವಿಮೆ ಕಂಪನಿಯ ಜತೆ ಒಪ್ಪಂದ ಮಾಡಿಕೊಂಡಿರುತ್ತವೆ. ಸಾಲಗಾರರಿಗೆ ವಿಮೆಯನ್ನೂ ಮಾರಲಾಗುತ್ತದೆ. ಆದರೆ ಸಾಲದ ಜತೆಗೆ ವಿಮೆ ಪಡೆಯುವುದು ಕಡ್ಡಾಯವಲ್ಲ. ಬ್ಯಾಂಕ್​ಗಳು ಸಾಲ ಪಡೆಯುವವರಿಗೆ ಈ ಬಗ್ಗೆ ವಿವರಿಸುತ್ತವೆಯಾದರೂ, ಗ್ರಾಹಕರು ಯಾವುದೋ ಮುಜುಗರಕ್ಕೆ ಕಟ್ಟುಬಿದ್ದು ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಬ್ಯಾಂಕ್​ನ ಎಕ್ಸಿಕ್ಯೂಟಿವ್, ಈ ವಿಮೆ ಕಡ್ಡಾಯ ಎಂದರೆ ನಂಬಬೇಡಿ. ಸಾಮಾನ್ಯವಾಗಿ ಉತ್ಪನ್ನ ವಿಮೆ ಮತ್ತು ಜೀವ ವಿಮೆ ಪಾಲಿಸಿಗಳನ್ನು ಸಾಲದ ಜತೆಗೆ ಮಾರಲಾಗುತ್ತದೆ. ಗೃಹ ಸಾಲವಾದರೆ ಜೀವ ವಿಮೆ ಹಾಗೂ ಉತ್ಪನ್ನಗಳ ಮೇಲೆ ನೀಡಲಾಗುವ ಸಾಲವಾದರೆ ಉತ್ಪನ್ನಗಳಿಗೆ ವಿಮೆಯ ಆಫರ್ ಮಾಡಲಾಗುತ್ತದೆ. ಈ ವಿಮೆ ಕಂತಿನಿಂದ ನಿಮ್ಮ ಸಾಲದ ಕಂತಿನ ಮೊತ್ತ ಹೆಚ್ಚುತ್ತದೆ. ಬ್ಯಾಂಕ್​ನ ಎಕ್ಸಿ್ಸ್ಯೂಟಿವ್​ಗಳಿಗೆ ಉತ್ತಮ ಕಮಿಷನ್ ಲಭ್ಯವಾಗುತ್ತದೆ ಎಂಬ ಕಾರಣಕ್ಕೆ ನಿಮ್ಮನ್ನು ಬಲವಂತ ಮಾಡಬಹುದು. ಆದರೆ ನೀವು ಈಗಾಗಲೇ ವಿಮೆ ಹೊಂದಿದ್ದರೆ ಮತ್ತೊಂದು ಇಂತಹ ವಿಮೆ ಪಾಲಿಸಿ ಖರೀದಿಸುವ ಅಗತ್ಯವಿರುವುದಿಲ್ಲ. ಉತ್ಪನ್ನ ವಿಮೆ ಐಚ್ಛಿಕ ಹಾಗೂ ಕೆಲವು ಸನ್ನಿವೇಶದಲ್ಲಿ ಅಗತ್ಯವೂ ಹೌದು. ಹೀಗಾಗಿ ವಿಮೆ ಪಾಲಿಸಿ ಖರೀದಿಸುವ ಮುನ್ನ ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿಯೇ ಮುಂದುವರಿಯುವುದು ಒಳಿತು.

ಇದರ ಹೊರತಾಗಿ ಸರ್ಕಾರ ವಿಧಿಸಿದ ಕೆಲವು ಶುಲ್ಕಗಳನ್ನು ಸಾಲದ ಮೇಲೆ ವಿಧಿಸಲಾಗುತ್ತದೆ. ನಿಮ್ಮ ಪ್ರತಿಯೊಂದು ರೂಪಾಯಿಯೂ ಪ್ರಮುಖವೇ. ಹೀಗಾಗಿ ಇತರ ಬ್ಯಾಂಕ್​ಗಳೂ ಇದೇ ರೀತಿಯ ಶುಲ್ಕ ವಿಧಿಸುತ್ತಿವೆಯೇ ಎಂದು ಪರಿಶೀಲಿಸಿ. ಇವೆಲ್ಲವನ್ನೂ ಸಾಲ ಮಂಜೂರಾಗಿ ನಿಮ್ಮ ಖಾತೆಗೆ ಹಣ ಬರುವ ಮೊದಲೇ ವಿಚಾರಿಸಿದರೆ, ಸಾಲ ಬೇಕೋ ಬೇಡವೋ ಎಂಬ ನಿರ್ಧಾರ ಮಾಡುವ ಆಯ್ಕೆಗೆ ಅವಕಾಶವಿರುತ್ತದೆ. ಇವೆಲ್ಲದರ ಜತೆಗೆ ಇತರ ಶುಲ್ಕಗಳೂ ಇರುತ್ತವೆ. ಅವಧಿಗೂ ಮುನ್ನ ಸಾಲ ತೀರಿಸುತ್ತೀರಾದರೆ ಅದಕ್ಕೆ ನಿರ್ದಿಷ್ಟ ಶುಲ್ಕವನ್ನು ಕೆಲವು ಬ್ಯಾಂಕ್​ಗಳು ಹೊಂದಿರುತ್ತವೆ. ಅಲ್ಲದೆ ಕಂತು ಪಾವತಿ ವಿಳಂಬವಾಗಿದ್ದಕ್ಕೂ ಶುಲ್ಕ ವಿಧಿಸಲಾಗುತ್ತದೆ. ಅವಧಿ ಮೀರಿದ ನಂತರ ಕಂತು ಪಾವತಿಗೆ ಕನಿಷ್ಠ 500 ರೂ. ವಿಧಿಸುವ ಬ್ಯಾಂಕುಗಳೂ ಇವೆ. ಇದಲ್ಲದೆ ಫ್ಲೋಟಿಂಗ್ ಬಡ್ಡಿ ದರದಿಂದ ಫಿಕ್ಸೆಡ್ ಬಡ್ಡಿ ದರಕ್ಕೆ ಬದಲಾಗಲು, ಮರುಪಾವತಿ ವಿಧಾನವನ್ನು ಇಸಿಎಸ್​ನಿಂದ ಚೆಕ್​ಗೆ ಅಥವಾ ಚೆಕ್​ನಿಂದ ಇಸಿಎಸ್​ಗೆ ಬದಲಿಸಲು, ಸಾಲ ಪಡೆಯುವಾಗ ನೀಡಲಾಗಿದ್ದ ದಾಖಲಾತಿಗಳನ್ನು ಹಿಂಪಡೆಯಲು, ಚೆಕ್ ಬೌನ್ಸ್ ಆದರೆ, ನಿರಾಕ್ಷೇಪಣಾ ಪತ್ರದ ನಕಲು ಪ್ರತಿ ನೀಡಲು (ಎನ್​ಒಸಿ) ಬ್ಯಾಂಕ್​ಗಳು ಶುಲ್ಕ ವಿಧಿಸುತ್ತವೆ. ಈ ಎಲ್ಲ ಶುಲ್ಕಗಳೂ 100 ರೂ.ನಿಂದ 500 ಅಥವಾ 1,000 ರೂ.ಗಳವರೆಗೂ ಇರಬಹುದು. ಸಾಲ ಪಡೆಯುವಾಗಲೇ ಕೆಲವು ಎಕ್ಸಿಕ್ಯೂಟಿವ್​ಗಳು ಈ ವಿವರವನ್ನು ನೀಡುತ್ತಾರೆ. ಇಲ್ಲವಾದರೆ ಬಹುತೇಕ ಎಲ್ಲ ಬ್ಯಾಂಕ್​ಗಳೂ ಶುಲ್ಕಗಳ ವಿವರಗಳುಳ್ಳ ಕೈಪಿಡಿಯನ್ನು
ಮುದ್ರಿಸುತ್ತದೆ. ಇವುಗಳನ್ನು ತಂದು ಮನೆಯಲ್ಲಿ ಕುಳಿತು ಸಮಾಧಾನದಿಂದ ಲೆಕ್ಕ ಹಾಕಿಕೊಳ್ಳಿ. ಸಾಮಾನ್ಯವಾಗಿ ಈಗಿನ ದೀರ್ಘಾವಧಿ ಸಾಲಗಳಿಗೆ ಬಡ್ಡಿ ದರ ಬದಲಾಗುತ್ತಿರುತ್ತದೆ. ಎಂಸಿಎಲ್​ಆರ್ ಎಂಬ ಸೂತ್ರವನ್ನು ಅಳವಡಿಸಲಾಗಿದ್ದು, ಪ್ರತಿ ವರ್ಷವೂ ಬಡ್ಡಿ ದರವನ್ನು ಬದಲಿಸಲಾಗುತ್ತದೆ. ಹೀಗಾಗಿ ಗೃಹ ಸಾಲ ತೆಗೆದುಕೊಂಡಿದ್ದರೆ ಪ್ರತಿ ವರ್ಷವೂ ಬಡ್ಡಿ ದರವನ್ನು ಪರಿಶೀಲಿಸುತ್ತಿರಬೇಕು. ಬಡ್ಡಿ ದರದ ಹೊರತಾಗಿ ಕಾಣದಿರುವ ಹಲವು ಶುಲ್ಕಗಳ ಬಗ್ಗೆ ಅರಿವಿಲ್ಲದೇ ಸಾಲ ತೆಗೆದುಕೊಂಡರೆ, ಸಾಲದ ಮೊತ್ತದಿಂದ ಪಡೆದ ಸೌಲಭ್ಯದ ನಿಜವಾದ ಖುಷಿಯೇ ಹೊರಟುಹೋದೀತು.

ಹಣಕಾಸು ಸೇವೆ.

ಹಣಕಾಸು ಸೇವೆಗಳನ್ನು ಇಲ್ಲಿ ಸುಲಭವಾಗಿ ಪಡೆಯಬಹುದು

ಬ್ಯಾಂಕ್ ಅಥವಾ ಇನ್ನಾವುದೇ ಹಣಕಾಸು ಸಂಸ್ಥೆಗಳಲ್ಲಿನ ವ್ಯವಹಾರಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆ ಇದ್ದಂತೆ. ಅದರಲ್ಲೂ ಸಾಲ ಪಡೆಯಲು ಗ್ರಾಹಕರು ಅನೇಕ ಪ್ರಕ್ರಿಯೆಗಳನ್ನು ದಾಟಿ, ದಿನಗಟ್ಟಲೆ ಕಾದನಂತರ ಸಾಲ ಮಂಜೂರಾಗುತ್ತದೆ. ಕೆಲವೊಮ್ಮೆ ಕಾಯ್ದೆ ಕಾನೂನುಗಳಿಂದಾಗಿ ಗ್ರಾಹಕರು ಹತ್ತಾರು ಬಾರಿ ಬ್ಯಾಂಕ್​ಗಳ ಮೆಟ್ಟಿಲು ತುಳಿಯಬೇಕಾಗುತ್ತದೆ. ಇದು ಕೇವಲ ಸಾಲಕ್ಕಷ್ಟೇ ಸೀಮಿತವಾಗಿರದೆ, ಕ್ರೆಡಿಟ್ ಕಾರ್ಡ್, ವಿಮೆ, ನಿಶ್ಚಿತ ಠೇವಣಿ (ಊಈ)ಯಂತಹ ಇತರೆ ಹಣಕಾಸು ಉತ್ಪನ್ನಗಳನ್ನು ಪಡೆಯುವಾಗಲೂ ಜನ ಅನುಭವಿಸುವ ಸಾಮಾನ್ಯ ಸಮಸ್ಯೆಗಳಿವು. ಇಂತಹ ಸಮಸ್ಯೆಗಳಿಗೆ ತೆರೆ ಎಳೆದು ಈ ಎಲ್ಲ ಸೇವೆಗಳನ್ನು ಸುಲಭವಾಗಿ ಪಡೆಯುವಂತಹ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್​ಬಝಾರ್ ಡಾಟ್ ಕಾಮ್ ಒಂದು ಸರಳ ಹಾಗೂ ಗ್ರಾಹಕಸ್ನೇಹಿ ವೇದಿಕೆ ರೂಪಿಸಿದೆ. ಬ್ಯಾಂಕ್​ಬಝಾರ್​ನ ಸಂಸ್ಥಾಪಕರಲ್ಲೊಬ್ಬರಾದ ಅರ್ಜುನ್ ಶೆಟ್ಟಿ, ಗೃಹ ಸಾಲ ಪಡೆಯಲು ಬ್ಯಾಂಕೊಂದಕ್ಕೆ ತೆರಳಿದಾಗ ಅನುಭವಿಸಿದ ಸಮಸ್ಯೆಗಳೇ ಈ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು. ಅನೇಕ ಬ್ಯಾಂಕ್​ಗಳು ಹಾಗೂ ಹಣಕಾಸು ಸಂಸ್ಥೆಗಳನ್ನು ತನ್ನ ವೇದಿಕೆಗೆ ತರುವ ಮೂಲಕ ಇಂದು ಬ್ಯಾಂಕ್​ಬಝಾರ್ ಕ್ಷಿಪ್ರವಾಗಿ ಹಣಕಾಸು ಉತ್ಪನ್ನಗಳನ್ನು ಒದಗಿಸುವ ಆನ್​ಲೈನ್ ಮಾರ್ಕೆಟ್​ಪ್ಲೇಸ್ ಆಗಿ ಕಾರ್ಯನಿರ್ವಹಿಸುತ್ತಿದೆ. ಇದು ಜಗತ್ತಿನಲ್ಲೇ ಮೊಟ್ಟಮೊದಲ ಇಂತಹ ವೇದಿಕೆ ಎಂಬ ಹೆಗ್ಗಳಿಕೆ ಗಳಿಸಿದೆ.

ಬ್ಯಾಂಕ್​ಬಝಾರ್ ಡಾಟ್ ಕಾಮ್ 2008ರಲ್ಲಿ ಆದಿಲ್ ಶೆಟ್ಟಿ, ಅರ್ಜುನ್ ಶೆಟ್ಟಿ ಹಾಗೂ ರತಿ ರಾಜ್​ಕುಮಾರ್​ರಿಂದ ಚೆನ್ನೈನಲ್ಲಿ ಸಂಸ್ಥಾಪಿತವಾದ ಕಂಪನಿ. ಆರಂಭದಲ್ಲಿ 45 ಲಕ್ಷ ರೂಪಾಯಿ ಬಂಡವಾಳ ಹಾಗೂ 6 ಜನರ ತಂಡದೊಂದಿಗೆ ಆರಂಭವಾದ ಬ್ಯಾಂಕ್​ಬಝಾರ್ ಇಂದು ಸುಮಾರು ಸಾವಿರ ಉದ್ಯೋಗಿಗಳೊಂದಿಗೆ 1300 ಕ್ಕೂ ಅಧಿಕ ನಗರಗಳಲ್ಲಿ ತನ್ನ ಸೇವೆ ಒದಗಿಸುತ್ತಿದೆ. ಬ್ಯಾಂಕ್​ಬಝಾರ್ ಸ್ಥಾಪಿಸುವುದಕ್ಕೂ ಮುನ್ನ ಸಂಸ್ಥಾಪಕರು ಅಮೆರಿಕದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆ ನಿರ್ವಹಿಸುತ್ತಿದ್ದರು. ಆದರೆ, ಭಾರತದಲ್ಲಿ ಜನ ಸಾಮಾನ್ಯರು ಬ್ಯಾಂಕ್ ವ್ಯವಹಾರಗಳಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಆಲೋಚನೆಯಿಂದ ತಮ್ಮ ಹುದ್ದೆಗಳನ್ನು ತ್ಯಜಿಸಿ ಭಾರತಕ್ಕೆ ಮರಳಿದರು.

ಬ್ಯಾಂಕ್​ಬಝಾರ್ ಡಾಟ್ ಕಾಮ್ ಉತ್ಕೃಷ್ಟ ತಂತ್ರಜ್ಞಾನದ ಬಳಕೆಯಿಂದ ವೆಬ್​ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ, ಗೃಹ ಸಾಲ, ಕಾರ್ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಖಾತೆ, ಜೀವ ವಿಮೆ, ಕಾರ್ ವಿಮೆ, ಆರೋಗ್ಯ ವಿಮೆ, ಉಳಿತಾಯ ಯೋಜನೆಗಳಂತಹ ಉತ್ಪನ್ನಗಳನ್ನು ಗ್ರಾಹಕರು ಸುಲಭವಾಗಿ ಪಡೆಯುವಂತೆ ಮಾಡಿದೆ. ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸಿಟಿ ಬ್ಯಾಂಕ್, ಟಾಟಾ ಕ್ಯಾಪಿಟಲ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಎಚ್​ಡಿಎಫ್​ಸಿ ಸೇರಿದಂತೆ 85ಕ್ಕೂ ಅಧಿಕ ಹಣಕಾಸು ಸಂಸ್ಥೆಗಳಿಂದ ಗ್ರಾಹಕರು ಸುಲಭವಾಗಿ ಹಣಕಾಸು ಸೇವೆಗಳನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದ ಹಿಡಿದು, ಅರ್ಜಿಯೊಂದಿಗೆ ಗ್ರಾಹಕರ ದಾಖಲೆ ಹಾಗೂ ವಿವರಗಳನ್ನು ಬ್ಯಾಂಕ್/ಹಣಕಾಸು ಸಂಸ್ಥೆಗೆ ತಲುಪಿಸುವುದು, ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮೂಲಕ ನಂತರದ ಪ್ರಕ್ರಿಯೆಗಳ ಮಾಹಿತಿ ಪಡೆಯುವುದು ಹಾಗೂ ಸೇವೆ ಮಂಜೂರಾಗುವವರೆಗೆ ಬ್ಯಾಂಕ್​ಬಝಾರ್ ಗ್ರಾಹಕರ ನೆರವಿಗೆ ನಿಲ್ಲುತ್ತದೆ. ಇಲ್ಲಿ ಗ್ರಾಹಕರ ಖಾಸಗಿತನಕ್ಕೆ ಧಕ್ಕೆ ಬಾರದಂತೆ, ಅಂದರೆ, ಗ್ರಾಹಕರ ಮಾಹಿತಿಗಳು ಮೂರನೇ ವ್ಯಕ್ತಿಯ ಕೈ ಸೇರುವುದನ್ನು ತಪ್ಪಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ತನ್ನ ತಂತ್ರಜ್ಞಾನದ ಮೂಲಕ ಸೋರ್ಸಿಂಗ್ ಹಾಗೂ ಪ್ರೊಸೆಸಿಂಗ್ ವೆಚ್ಚ (ಗುತ್ತಿಗೆ ಹಾಗೂ ಪ್ರಕ್ರಿಯೆ ಶುಲ್ಕ) ಕಡಿಮೆ ಮಾಡುವ ಮೂಲಕ ಹಾಗೂ ಮಧ್ಯವರ್ತಿಗಳನ್ನು ದೂರ ಮಾಡುವ ಮೂಲಕ ಗ್ರಾಹಕರಿಗೆ ಕಡಿಮೆ ಪ್ರಕ್ರಿಯೆ ವೆಚ್ಚ ಹಾಗೂ ಉತ್ತಮ ಸೇವೆ ದೊರೆಯುವಂತೆ ಮಾಡಿದೆ ಬ್ಯಾಂಕ್​ಬಝಾರ್. ಇಲ್ಲಿ ಕೆಲವೇ ನಿಮಿಷಗಳಲ್ಲಿ ಜಂಜಾಟರಹಿತವಾಗಿ ಸಾಲ ಪಡೆಯಬಹುದಾಗಿದ್ದು ಸಾಂಪ್ರದಾಯಿಕ ಆಫ್​ಲೈನ್ ಮಾದರಿಯಲ್ಲಿ ದಿನಗಟ್ಟಲೆ ಕಾಯುವ ಪ್ರಕ್ರಿಯೆಗೆ ತೆರೆ ಎಳೆಯಲಾಗಿದೆ. ಗ್ರಾಹಕರು ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಉತ್ಪನ್ನಗಳನ್ನು ತುಲನೆ ಮಾಡಿ ತಮಗೆ ಅನುಕೂಲಕರವಾದ ಹಾಗೂ ಉತ್ತಮ ದರದ ಗ್ರಾಹಕೀಕೃತ ಉತ್ಪನ್ನಗಳನ್ನು ಆಯ್ಕೆ ಮಾಡಿ ಖರೀದಿಸುವ/ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ವಿವಿಧ ಬ್ಯಾಂಕ್​ಗಳಿಗೆ ಅಲೆದು ಅವುಗಳ ಉತ್ಪನ್ನಗಳನ್ನು ತುಲನೆ ಮಾಡಿ ಸೇವೆ ಪಡೆಯುವ ಶ್ರಮ ತಪ್ಪಿಸಿದೆ. ಎಲ್ಲ ಹಣಕಾಸು ಸೇವೆಗಳನ್ನೂ ಒಂದೇ ಸೂರಿನಡಿ ಒದಗಿಸುವ ವೇದಿಕೆಯಾಗಿ ಪರಿವರ್ತಿತವಾಗುತ್ತಿದೆ ಬ್ಯಾಂಕ್​ಬಝಾರ್. ಹೆಚ್ಚಿನ ಸಂಖ್ಯೆಯ ಬ್ಯಾಂಕ್​ಗಳು ಹಾಗೂ ಉತ್ಪನ್ನಗಳನ್ನು ಹೊಂದಿರುವ ಬ್ಯಾಂಕ್​ಬಝಾರ್, ಈ ಕ್ಷೇತ್ರದಲ್ಲಿ ಅಗ್ರ ಸ್ಥಾನದಲ್ಲಿದೆ ಹಾಗೂ ಆನ್​ಲೈನ್ ಮಾರುಕಟ್ಟೆ ಕೇವಲ ಒಂದು ಪ್ರತಿಶತದಷ್ಟಿದ್ದು ಉಳಿದ ಶೇಕಡ 99ರಷ್ಟಿರುವ ಸಾಂಪ್ರದಾಯಿಕ ಮಾರುಕಟ್ಟೆಯೊಂದಿಗೆ ಪೈಪೋಟಿ ನಡೆಸಬೇಕಿದೆ. ಇನ್ನೆರಡು ವರ್ಷಗಳಲ್ಲಿ ಈ ಸಂಖ್ಯೆ ಶೇಕಡ 15ಕ್ಕೇರುವ ನಿರೀಕ್ಷೆ ಇದೆ.

ಎವಿಟಿ ಇನ್ಪೋಟೆಕ್, ವಾಲ್ಡನ್ ಇಂಟರ್ ನ್ಯಾಷನಲ್, ಸೀಕ್ವೋಯಾ ಕ್ಯಾಪಿಟಲ್ ಹಾಗೂ ಅಮೆಜಾನ್ ನಿಂದ ಒಟ್ಟು ಮೂರು ಸುತ್ತುಗಳಲ್ಲಿ ಸುಮಾರು 80 ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಪಡೆದಿರುವ ಬ್ಯಾಂಕ್ ಬಝಾರ್, ಆ ಹಣವನ್ನು ಉದ್ಯಮ ವಿಸ್ತರಣೆ ಹಾಗೂ ತಂತ್ರಜ್ಞಾನವನ್ನು ಉನ್ನತೀಕರಿಸುವ ಮೂಲಕ ಎಲ್ಲ ವ್ಯವಹಾರವನ್ನೂ ಕಾಗದರಹಿತವಾಗಿಸಲು ಬಳಸುವುದಾಗಿ ಹೇಳಿಕೊಂಡಿದೆ. ಭಾರತದಲ್ಲಿ ಚೆನ್ನೈ ಹೊರತುಪಡಿಸಿ ಬೆಂಗಳೂರು, ಮುಂಬೈ ಹಾಗೂ ಗುರ್​ಗಾಂವ್​ಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ. ಭಾರತ ಹೊರತುಪಡಿಸಿ, ಸಿಂಗಾಪುರ, ಮಲೇಷ್ಯಾ, ಫಿಲಿಪ್ಪೈನ್ಸ್, ಯುಎಇ ಹಾಗೂ ಮೆಕ್ಸಿಕೋಗಳಲ್ಲಿ ತನ್ನ ಸೇವೆ ಒದಗಿಸುತ್ತಿರುವ ಕಂಪನಿ, ಮುಂಬರುವ ದಿನಗಳಲ್ಲಿ ಮತ್ತಷ್ಟು ದೇಶಗಳಿಗೆ ಸೇವೆ ವಿಸ್ತರಿಸುವ ಗುರಿ ಹೊಂದಿದೆ. ವಿದೇಶಿ ವ್ಯವಹಾರಗಳಿಗಾಗಿ ಸಿಂಗಾಪುರದಲ್ಲಿ ಕಚೇರಿ ಹೊಂದಿದ್ದು, ಅದಕ್ಕಾಗಿ ಸ್ಟ್ಯಾಂಡರ್ಡ್ ಚಾರ್ಟರ್ಡ್​ನಲ್ಲಿ ಜಾಗತಿಕ ಡಿಜಿಟಲ್ ಬ್ಯಾಂಕಿಂಗ್ ಮುಖ್ಯಸ್ಥರಾಗಿದ್ದ ಅಮನ್ ನರೈನ್​ರನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಿಸಿದೆ.

ಗ್ರಾಹಕರು ಸಾಲ ಇತ್ಯಾದಿ ಹಣಕಾಸು ಸೇವೆಗಳಿಗಾಗಿ ಬ್ಯಾಂಕ್​ನಿಂದ ಬ್ಯಾಂಕ್​ಗೆ ಅಲೆದಾಡುವ ಹಾಗೂ ಅನೇಕಾನೇಕ ಪ್ರಕ್ರಿಯೆಗಳ ಕಿರಿಕಿರಿಯೊಂದಿಗೆ ಸೇವೆ ಪಡೆಯಲು ದಿನಗಟ್ಟಲೆ ಕಾಯುವುದನ್ನು ತಪ್ಪಿಸುವುದರೊಂದಿಗೆ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೂ ಹೆಚ್ಚೆಚ್ಚು ಗ್ರಾಹಕರನ್ನು ಒದಗಿಸುವ ಮೂಲಕ ಉತ್ತಮ ಉದ್ಯಮ ಮಾದರಿಯಾಗಿ ಹೊರಹೊಮ್ಮಿದೆ.

‘ಇ ಸಿ ಎಸ್’ ಕುರಿತು ಮಾಹಿತಿ

ಕಂತು ತುಂಬುವ ಇಲೆಕ್ಟ್ರಾನಿಕ್ ವ್ಯವಸ್ಥೆ.

ಇತ್ತೀಚೆಗೆ ಹಲವು ಬ್ಯಾಂಕ್​ಗಳ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ವ್ಯವಸ್ಥೆ (ಇಸಿಎಸ್)ಯಲ್ಲಿನ ಬದಲಾವಣೆಯಿಂದ ಮಾಸಿಕ ಸಾಲದ ಕಂತು ತುಂಬುವ ಬಹಳಷ್ಟು ಜನರಿಗೆ ತೊಂದರೆ ಉಂಟಾಗಿತ್ತು. ಇಸಿಎಸ್ ನಿಗದಿತ ದಿನದಂದು ಬ್ಯಾಂಕ್​ಗೆ ಬಂದಿರಲಿಲ್ಲ. ಕಂತಿನ ಮೊತ್ತ ಖಾತೆಯಲ್ಲೇ ಕುಳಿತಿತ್ತು. ಇನ್ನೂ ಕೆಲವು ತಿಂಗಳು ಈ ವ್ಯವಸ್ಥೆಯಲ್ಲಿನ ಸಮಸ್ಯೆ ಮುಂದುವರಿಯಬಹುದೆನ್ನಲಾಗಿದೆ. ಕ್ಲಿಯರಿಂಗ್ ಹೌಸ್ ಬದಲಾವಣೆ ಮಾಡಿದ ನಂತರ ತಮ್ಮ ದತ್ತಾಂಶಗಳಲ್ಲಿ ಸೂಕ್ತ ಅಪ್​ಡೇಟ್ ಮಾಡದಿರುವುದೇ ಈ ವ್ಯತ್ಯಯಕ್ಕೆ ಕಾರಣವಂತೆ. ಹಾಗಾದರೆ ಇಸಿಎಸ್ ವ್ಯವಸ್ಥೆಯಲ್ಲಿ ಕ್ಲಿಯರಿಂಗ್ ಹೌಸ್ ಎಂದರೇನು?

ಸಾಮಾನ್ಯವಾಗಿ ಸಾಲದ ಮರುಪಾವತಿ ಮಾಡುವಾಗ ಚೆಕ್​ಗಳನ್ನು ಕೊಡಲಾಗುತ್ತದೆ. ಪ್ರತಿ ತಿಂಗಳಿಗೂ ಒಂದೊಂದು ಚೆಕ್ಕನ್ನು ಬರೆದು ಸಾಲ ಮಾಡಿದ ಬ್ಯಾಂಕ್​ಗೆ ಕೊಟ್ಟರೆ ಅವರು ನಮ್ಮ ಖಾತೆಯಿಂದ ಹಣ ಮರುಪಾವತಿ ಮಾಡಿಕೊಳ್ಳುವ ವ್ಯವಸ್ಥೆ ಇಂದಿಗೂ ಜನಪ್ರಿಯವಾದ ವಿಧಾನ. ಆದರೆ ಇದಕ್ಕೆ ಪರ್ಯಾಯವಾಗಿ ಇಸಿಎಸ್ ಎಂಬ ವ್ಯವಸ್ಥೆಯ ಬಗ್ಗೆಯೂ ಬಹಳಷ್ಟು ಜನರಿಗೆ ತಿಳಿದಿರಬಹುದು. ಇತ್ತೀಚೆಗೆ ತೊಂದರೆಯಾಗಿರುವುದು ಇದೇ ಇಸಿಎಸ್ ವ್ಯವಸ್ಥೆಯಲ್ಲಿ. ಸಾಲದ ಮರುಪಾವತಿಗಾಗಿ ಗ್ರಾಹಕರಿಂದ ಬ್ಯಾಂಕುಗಳು ಪೋಸ್ಟ್ ಡೇಟೆಡ್ ಚೆಕ್​ಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಹಲವು ವರ್ಷಗಳೇ ಆಗಿವೆ. ಆ ಚೆಕ್​ಗಳನ್ನು ಸಂಗ್ರಹಿಸುವುದು, ಅವುಗಳನ್ನು ಕಾಲಕಾಲಕ್ಕೆ ಪ್ರೊಡ್ಯೂಸ್ ಮಾಡುವುದು ಬ್ಯಾಂಕ್​ಗಳಿಗೆ ದೊಡ್ಡ ಸಮಸ್ಯೆ. ಹೀಗಾಗಿ ಹಲವು ವರ್ಷಗಳ ಹಿಂದೆಯೇ ಈ ಕಿರಿಕಿರಿಯನ್ನು ತಪ್ಪಿಸಲು ಇಸಿಎಸ್ ವ್ಯವಸ್ಥೆಯನ್ನು ಆರ್​ಬಿಐ ಜಾರಿಗೆ ತಂದಿದೆ. ಆದರೆ ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಮೇಲ್ನೋಟಕ್ಕೆ ಇದು ಸರಳ ಎಂಬಂತೆ ಕಂಡರೂ ಇಲ್ಲಿ ಕೆಲವು ಸೂಕ್ಷ್ಮಗಳಿರುತ್ತವೆ.

ಸಾಲ ಮಾಡುವಾಗ ಬ್ಯಾಂಕ್ ನಮ್ಮಿಂದ ಇಲೆಕ್ಟ್ರಾನಿಕ್ ಕ್ಲಿಯರೆನ್ಸ್​ನ ನಮೂನೆಗೆ ಸಹಿ ಹಾಕಿಸಿಕೊಂಡಿರುತ್ತದೆ. ಇದರಲ್ಲಿ ನಮ್ಮ ಖಾತೆ ಸಂಖ್ಯೆ, ಖಾತೆಯಲ್ಲಿರುವ ಹೆಸರು, ಪ್ರತಿ ತಿಂಗಳೂ ಖಾತೆಯಿಂದ ಸಾಲದ ಕಂತಿಗೆ ಕಟ್ಟಬೇಕಿರುವ ಮೊತ್ತ, ದಿನಾಂಕ ಸೇರಿದಂತೆ ಸಾಲಕ್ಕೆ ಸಂಬಂಧಿಸಿದ ಎಲ್ಲ ವಿವರವೂ ಇರುತ್ತದೆ. ಸಾಲ ಪಡೆದ ನಂತರ ಎಚ್ಚರದಿಂದ ಗಮನಿಸಬೇಕಿರುವುದು ಈ ನಮೂನೆಯನ್ನೇ. ಯಾಕೆಂದರೆ ಇದರಲ್ಲಿ ಬರೆದಿರುವ ಕಂತಿನ ಮೊತ್ತವೇ ನಮ್ಮ ಖಾತೆಯಿಂದ ವಿತ್​ಡ್ರಾ ಆಗುತ್ತದೆ. ಈ ನಮೂನೆಗೆ ನಮ್ಮಿಂದ ಸಹಿ ಹಾಕಿಸಿಕೊಂಡ ನಂತರ ಒಂದು ಕ್ಯಾನ್ಸಲ್ಡ್ ಚೆಕ್ ಪಡೆಯಲಾಗುತ್ತದೆ. ಈ ಚೆಕ್ಕನ್ನು ಪ್ರೊಡ್ಯೂಸ್ ಮಾಡುವುದಿಲ್ಲ. ಆದರೆ ಇದು ಈ ಇಸಿಎಸ್ ನಮೂನೆಯ ಜತೆಗೇ ರವಾನೆಯಾಗುತ್ತದೆ.

ಅಂದಹಾಗೆ, ನಾವು ಸಾಲ ಮಾಡಿದ ಬ್ಯಾಂಕ್​ಗೆ ಕೊಟ್ಟ ಈ ಇಸಿಎಸ್ ನಮೂನೆ ನಂತರ ಏನಾಗುತ್ತದೆ ಎಂಬುದು ಕುತೂಹಲಕಾರಿ ಸಂಗತಿ. ಆರ್​ಬಿಐ ಇಸಿಎಸ್ ಎಂಬ ವ್ಯವಸ್ಥೆ ರೂಪಿಸಿದ ನಂತರದಲ್ಲಿ ಇದು ಸರಳವಾಗಿ ಕಾರ್ಯಾಚರಿಸುವುದಕ್ಕೆಂದೇ ಕ್ಲಿಯರಿಂಗ್ ಹೌಸ್​ಗಳನ್ನು ಸ್ಥಾಪಿಸಿದೆ. ಯಾಕೆಂದರೆ ಚೆಕ್​ಗಳಂತೆ ಇದರಲ್ಲಿ ಪ್ರತಿ ತಿಂಗಳೂ ನಮ್ಮ ಖಾತೆಯಿರುವ ಬ್ಯಾಂಕ್​ನ ಶಾಖೆಗೆ ತಲುಪಿಸುವ ಭೌತಿಕ ದಾಖಲೆ ಇರುವುದಿಲ್ಲ. ಬದಲಿಗೆ ಇದನ್ನು ಕಂಪ್ಯೂಟರೀಕರಿಸಿ ದತ್ತಾಂಶಗಳನ್ನು ಮಾತ್ರ ಕಳುಹಿಸಲಾಗುತ್ತದೆ. ಒಂದು ಬ್ಯಾಂಕ್ ಶಾಖೆಯಲ್ಲಿ ಸಾಲ ಮಾಡಿರುವ ನೂರು ಜನರೂ ನೂರು ಬ್ಯಾಂಕ್​ಗಳ ಶಾಖೆಗಳ ಇಸಿಎಸ್ ನೀಡಿರಬಹುದು. ಆಗ ಎಲ್ಲ ಬ್ಯಾಂಕ್​ಗಳಿಗೂ ಒಂದೇ ಹಣಕಾಸು ಸಂಸ್ಥೆ ಇಸಿಎಸ್ ಡೇಟಾ ಕಳುಹಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಹೀಗಾಗಿ ಆರ್​ಬಿಐ 60ಕ್ಕೂ ಹೆಚ್ಚು ಕ್ಲಿಯರಿಂಗ್ ಹೌಸ್​ಗಳನ್ನು ಸ್ಥಾಪಿಸಿದೆ. ಇದರ ಜತೆಗೇ ಬ್ಯಾಂಕ್​ಗಳೇ ಸೇರಿ ಕ್ಲಿಯರಿಂಗ್ ಹೌಸ್​ಗಳನ್ನು ಸ್ಥಾಪಿಸಲೂ ಅನುವು ಮಾಡಿದೆ. ನಾವು ಸಾಲ ಮಾಡಿದ ಬ್ಯಾಂಕ್​ಗೆ ಕೊಟ್ಟ ಇಸಿಎಸ್ ನಮೂನೆ ನೇರವಾಗಿ ಈ ಕ್ಲಿಯರಿಂಗ್ ಹೌಸ್​ಗೆ ತೆರಳುತ್ತದೆ. ಈ ಕ್ಲಿಯರಿಂಗ್ ಹೌಸ್ ಪ್ರತಿ ತಿಂಗಳೂ ರವಾನೆಯಾಗಬೇಕಾದ ಹಣದ ಮೊತ್ತ ಹಾಗೂ ವಿವರವನ್ನು ಪಾವತಿ ಮಾಡಬೇಕಾದವರ ಖಾತೆಯಿರುವ ಬ್ಯಾಂಕ್​ಗಳಿಗೆ ರವಾನಿಸುತ್ತದೆ. ಇಲ್ಲಿಂದ ನೇರವಾಗಿ ಸಾಲ ಮಾಡಿದ ಬ್ಯಾಂಕ್​ನ ಖಾತೆಗೆ ಹಣ ರವಾನೆಯಾಗುತ್ತದೆ. ಇದು ಸಂಪೂರ್ಣ ಇಲೆಕ್ಟ್ರಾನಿಕ್ ರೀತಿಯ ವ್ಯವಸ್ಥೆ. ಅಂದರೆ ಸಾಲ ಮಾಡಿದ ಬ್ಯಾಂಕ್​ಗಳಿಂದ ಕ್ಲಿಯರಿಂಗ್ ಹೌಸ್​ಗೆ ಇಲೆಕ್ಟ್ರಾನಿಕ್ ರೂಪದಲ್ಲಿ ಕಡತಗಳು ರವಾನೆಯಾಗುತ್ತವೆ. ಅದೇ ರೀತಿ ಕ್ಲಿಯರಿಂಗ್ ಹೌಸ್​ಗಳು ಪಾವತಿ ಮಾಡಬೇಕಿರುವ ಬ್ಯಾಂಕ್​ಗಳಿಗೆ ಇಲೆಕ್ಟ್ರಾನಿಕ್ ಕಡತಗಳನ್ನು ರವಾನಿಸುತ್ತವೆ. ಹೀಗಾಗಿ ಕಂತಿನ ದಿನದಂದೇ ನಿಖರವಾಗಿ ಮರುಪಾವತಿಯಾಗಿರುತ್ತದೆ.

ಈ ಕ್ಲಿಯರಿಂಗ್ ಹೌಸ್​ಗಳನ್ನೇ ಇತ್ತೀಚೆಗೆ ಹಲವು ಬ್ಯಾಂಕ್ಗಳು ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ ಎಂಬ ಸಂಸ್ಥೆಗೆ ಬದಲಿಸಿವೆ. ಈ ಡೇಟಾಗಳನ್ನು ಬ್ಯಾಂಕ್​ಗಳು ತಮ್ಮ ಸಿಸ್ಟಂಗಳಲ್ಲಿ ಸರಿಯಾಗಿ ಅಪ್​ಡೇಟ್ ಮಾಡದ್ದರಿಂದ ಮತ್ತು ಸಂವಹನ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ. ಹೀಗೆ ಸಮಸ್ಯೆ ಎದುರಿಸಿದವರು ಸಂಬಂಧಿಸಿದ ಬ್ಯಾಂಕ್ ಸಂರ್ಪಸಿ ತೊಂದರೆ ಪರಿಹರಿಸಿಕೊಳ್ಳಬಹುದಾಗಿದೆ.

ಆರ್ ಬಿ ಐ ರೂಪಿಸಿರುವ ಇಸಿಎಸ್ ಸಂಪೂರ್ಣ ಉಚಿತ ಸೇವೆ. ಇದಕ್ಕಾಗಿ ಯಾವದೇ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್​ಗಳು ಗ್ರಾಹಕರಿಂದ ಹಣ ಪಡೆಯುವಂತಿಲ್ಲ. ಅಂದಹಾಗೆ ಇಲ್ಲಿ ಸಾಲದ ಉದಾಹರಣೆ ಕೊಡಲಾಗಿದೆಯಷ್ಟೇ. ಆದರೆ ಇದು ಬರಿ ಸಾಲಕ್ಕಷ್ಟೇ ಅಲ್ಲ, ಸಾಕಷ್ಟು ವಿಧದ ಹಣಕಾಸು ವಹಿವಾಟಿಗೆ ಅನುಕೂಲ. ನಿಗದಿತ ದಿನದಂದು ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ನಡೆಯುವ ಪುನರಾವರ್ತಿತ ವಹಿವಾಟುಗಳನ್ನು ಈ ಇಸಿಎಸ್ ಮೂಲಕ ಮಾಡಬಹುದು. ಆದರೆ ಇತ್ತೀಚೆಗೆ ಮೊಬೈಲ್ ಹಾಗೂ ಇಂಟರ್​ನೆಟ್ ಬ್ಯಾಂಕಿಂಗ್ ಬಂದ ನಂತರ ಈ ವ್ಯವಸ್ಥೆಯ ಬಳಕೆ ಸಾಲಕ್ಕಷ್ಟೇ ಸೀಮಿತವಾದಂತಿದೆ. ಇಂಟರ್ನೆಟ್ ಬ್ಯಾಂಕಿಂಗ್​ನಲ್ಲಿ ಅಟೋ ಪೇಮೆಂಟ್ ಸೌಲಭ್ಯವಿರುವುದರಿಂದ ವಿದ್ಯುತ್ ಹಾಗೂ ನೀರಿನ ಬಿಲ್ ಸೇರಿದಂತೆ ಪ್ರತಿ ತಿಂಗಳೂ ಮಾಡಬೇಕಾದ ಪಾವತಿಗಳನ್ನು ನೇರವಾಗಿ ಖಾತೆಯಿಂದ ವ್ಯವಸ್ಥೆ ಮಾಡಬಹುದಾಗಿದೆ.

ಆಧಾರ್ ಕಾರ್ಡ್ ಕುರಿತು ಒಂದಷ್ಟು ಮಾಹಿತಿ.

image

3 ವರ್ಷ ಬಳಸದಿದ್ದರೆ ಆಧಾರ್‌ ನಿಷ್ಕ್ರಿಯ!
Updated Jun 24, 2017.
ಹೊಸದಿಲ್ಲಿ: ಸತತ ಮೂರು ವರ್ಷಗಳ ಕಾಲ ಯಾವುದೇ ವ್ಯವಹಾರ ಅಥವಾ ಚಟುವಟಿಕೆಗೆ ಆಧಾರ್‌ ಸಂಖ್ಯೆಯನ್ನು ಬಳಸದಿದ್ದರೆ, ಅದು ನಿಷ್ಕ್ರಿಯಗೊಳ್ಳುತ್ತದೆ ಎಂದು ಆಧಾರ್‌ ಪ್ರಾಧಿಕಾರ ತಿಳಿಸಿದೆ.

ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆ ಸಂಖ್ಯೆ, ಪ್ಯಾನ್‌ ಸಂಖ್ಯೆ ಅಥವಾ ಇಪಿಎಫ್‌ಒ ಇತ್ಯಾದಿ ಯಾವುದೇ ಖಾತೆಯ ಜತೆ ಲಿಂಕ್‌ ಮಾಡಿದ್ದರೆ ಮಾತ್ರ, ಅದು ಸತತವಾಗಿ ಚಾಲ್ತಿಯಲ್ಲಿರುತ್ತದೆ. ಇಲ್ಲವಾದಲ್ಲಿ ಅದು ‘ಡಿಆಕ್ಟಿವೇಟ್‌’ ಆಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ನಿಷ್ಕ್ರಿಯಗೊಂಡರೆ ಮುಂದೇನು?

ಒಂದು ವೇಳೆ, ಆಧಾರ್‌ ಸಂಖ್ಯೆ ನಿಷ್ಕ್ರಿಯಗೊಂಡರೆ, ನೀವು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾರ್‌ ಎನ್‌ರೋಲ್‌ಮೆಂಟ್‌ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ‘ಆಧಾರ್‌ ಅಪ್‌ಡೇಟ್‌’ ಅರ್ಜಿಯನ್ನು ತುಂಬಬೇಕು. ನಿಷ್ಕ್ರಿಯಗೊಂಡ ಆಧಾರ್‌ಗೆ ಸಂಬಂಧಿಸಿದ ಬಯೋಮೆಟ್ರಿಕ್‌ ದಾಖಲೆಗಳನ್ನು ಮತ್ತೊಮ್ಮೆ ಪುನರ್‌ ಪರಿಶೀಲನೆ ಮಾಡಲಾಗುತ್ತದೆ. ಅಂದರೆ ನೀವು ಮತ್ತೊಮ್ಮೆ ಬೆರಳ ಮುದ್ರೆ ಮತ್ತು ಕಣ್ಣಿನ ಅಕ್ಷಿಪಟಲ ಸ್ಕ್ಯಾ‌ನ್‌ಗೆ ಒಳಪಡಬೇಕು. ಈ ಮುನ್ನ ನೀಡಲಾದ ಬಯೋಮೆಟ್ರಿಕ್‌ ದಾಖಲೆಗಳಿಗೂ, ಪ್ರಸ್ತುತ ಬಯೋಮೆಟ್ರಿಕ್‌ ದಾಖಲೆಗಳಿಗೂ ಹೊಂದಾಣಿಕೆಯಾದರೆ ಮಾತ್ರ ಆಧಾರ್‌ ಸಂಖ್ಯೆಯನ್ನು ಮತ್ತೆ ಸಕ್ರಿಯಗೊಳಿಸಲಾಗುತ್ತದೆ. ಇದಕ್ಕೆ 25 ರೂ. ಚಾರ್ಜ್‌ ಮಾಡಲಾಗುತ್ತದೆ. ಈ ಪ್ರಕ್ರಿಯೆ ವೇಳೆ ಬಳಕೆಯಲ್ಲಿರುವ ಮೊಬೈಲ್‌ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿದೆ.

ಬಯೋಮೆಟ್ರಿಕ್‌ ದಾಖಲೆಗಳ ಮರುಪರಿಶೀಲನೆ ಅಗತ್ಯವಿರುವ ಹಿನ್ನೆಲೆಯಲ್ಲಿ ವ್ಯಕ್ತಿಯು ಖುದ್ದು ಆಧಾರ್‌ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಆನ್‌ಲೈನ್‌ ಮೂಲಕ ಅಥವಾ ಪೋಸ್ಟ್‌ ಮುಖಾಂತರ ಇದು ಸಾಧ್ಯವಿಲ್ಲ.

ತಿಳಿಯುವುದು ಹೇಗೆ?

‘UIDAI’ ವೆಬ್‌ಸೈಟ್‌ ಮೂಲಕ ಆಧಾರ್‌ ‘ಸ್ಟೇಟಸ್‌’ ಪರೀಕ್ಷಿಸಬಹುದಾಗಿದೆ. UIDAI ಹೋಂ ಪೇಜ್‌ನಲ್ಲಿ ‘ಆಧಾರ್‌ ಸವೀರ್‍ಸಸ್‌’ ಟ್ಯಾಬ್‌ ಒತ್ತಿ, ಅಲ್ಲಿರುವ ‘ವೆರಿಫೈ ಆಧಾರ್‌ ನಂಬರ್‌’ ಆಪ್ಶನ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ನಿಮ್ಮನ್ನು ಮತ್ತೊಂದು ವೆಬ್‌ಪೇಜ್‌ಗೆ ಕರೆದೊಯ್ಯುತ್ತದೆ. ಅಲ್ಲಿ ನಿಮ್ಮ ಆಧಾರ್‌ ಸಂಖ್ಯೆ ಮತ್ತು ಅಲ್ಲಿ ನೀಡಲಾಗಿರುವ ಅಕ್ಷರ ಮತ್ತು ಸಂಖ್ಯೆಗಳನ್ನು (ಕ್ಯಾಪ್ಚಾ) ಟೈಪಿಸಿ, ‘ವೆರಿಫೈ’ ಒತ್ತಬೇಕು. ಈ ವೇಳೆ ಆಧಾರ್‌ ಸಂಖ್ಯೆ ಮುಂದೆ ‘ಹಸಿರು’ ಚೆಕ್‌ಮಾರ್ಕ್‌ ಕಾಣಿಸಿದರೆ ನಿಮ್ಮ ಆಧಾರ್‌ ಸಂಖ್ಯೆ ಸಕ್ರಿಯವಾಗಿದೆ ಎಂದರ್ಥ.

***

Government of India
Ministry of Communications & Information Technology

UIDAI cautions public against sharing of their Personal Information with unauthorized Agencies for Printing PVC (Plastic) Aadhaar Card

The Unique Identification Authority of India (UIDAI) cautions people not to fall to ploys of some unscrupulous entities who are charging anywhere between Rs.50 to Rs.200 for printing Aadhaar on a plastic card in the name of smart card, as the Aadhaar letter or its cutaway portion or downloaded version of Aadhaar on ordinary paper is perfectly valid.
Some entities have also been charging far more for simply laminating the downloaded version of Aadhaar.

“The Aadhaar card or the downloaded Aadhaar card printed on ordinary paper is perfectly valid for all uses. If a person has a paper Aadhaar card, there is absolutely no need to get his/her Aadhaar card laminated or obtain a plastic Aadhaar card or so called SMART Aadhaar card by paying money. There is no concept such as smart Aadhaar card,” said Director General & Mission Director of UIDAI, Dr. Ajay Bhushan Pandey.

In case a person loses his Aadhaar card, he can download his Aadhaar card free of cost from https://eaadhaar.uidai.gov.in/. The print out of the downloaded Aadhaar, even in black and white form, is as valid as the original Aadhaar letter sent by UIDAI. There is absolutely no need to print it on plastic card or get it laminated.

In case a person still wants to get his Aadhaar card laminated or printed on plastic card, he may do so only at authorized Common Service Centres or Aadhaar Permanent Enrolment Centres by paying no more than the prescribed rate, which is not more than Rs. 30.

The public for protection of their privacy are advised not to share their Aadhaar number or personal details to unauthorized agencies for getting it laminated, or printed on plastic card.

E-commerce companies such E-bay, Flipkart, Amazon etc., are hereby informed not to allow their merchants to collect Aadhaar information from general public for printing Aadhaar card as collecting such information or unauthorized printing of Aadhaar card or aiding such persons in any manner may amount to a criminal offence punishable with imprisonment under Indian Penal Code and also Chapter VI of The Aadhaar (Targeted Delivery of Financial and Other Subsidies, Benefits and Services) Act, 2016.

ಹಣ ಪಾವತಿಸಿ ಸ್ಮಾರ್ಟ್ ಕಾರ್ಡ್ ಹೊಂದುವ ಅಗತ್ಯವಿಲ್ಲ: ಯುಐಡಿಎಐ
ಕಾಗದದ ಮೇಲಿನ ಮುದ್ರಿತ ಕಾರ್ಡ್ ಸಿಂಧುತ್ವ ಹೊಂದಿದೆ

ಆಧಾರ್‌ ಕಾರ್ಡ್‌
ನವದೆಹಲಿ: ಕಾಗದದ ಮೇಲೆ ಮುದ್ರಿತವಾದ ಆಧಾರ್‌ ಕಾರ್ಡ್‌, ಅಧಿಕೃತ ಉದ್ದೇಶದ ಬಳಕೆಗೆ ಪರಿಪೂರ್ಣ ಸಿಂಧುತ್ವ ಹೊಂದಿದೆ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ)  ಸ್ಪಷ್ಟಪಡಿಸಿದೆ. ಪ್ಲಾಸ್ಟಿಕ್‌ ಕಾರ್ಡ್‌ನಲ್ಲಿ (ಸ್ಮಾರ್ಟ್‌ ಕಾರ್ಡ್‌) ಆಧಾರ್‌ ಸಂಖ್ಯೆ ಮುದ್ರಿಸಿಕೊಡಲು ಕೆಲವು ಸಂಸ್ಥೆಗಳು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಎಚ್ಚರ ವಹಿಸಿ ಎಂದು  ಪ್ರಾಧಿಕಾರವು ತಿಳಿಸಿದೆ.
ಸ್ಮಾರ್ಟ್‌ ಆಧಾರ್‌ ಕಾರ್ಡ್‌ ಮುದ್ರಿಸಿ ಕೊಡಲು ರು. 50ರಿಂದ  ರು. 200 ಹಣ ವಸೂಲಿ ಮಾಡಲು  ಮುಂದಾಗಿರುವ ಸಂಸ್ಥೆಗಳು, ಈ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು ಆನ್‌ಲೈನ್‌ ಮಾರಾಟ ತಾಣಗಳಾದ  ಇ–ಬೆ, ಫ್ಲಿಕ್‌ಕಾರ್ಟ್‌ ಮತ್ತು ಅಮೆಜಾನ್‌ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದಕ್ಕೂ ಪ್ರಾಧಿಕಾರವು ತನ್ನ ತೀವ್ರ ಆಕ್ಷೇಪ ದಾಖಲಿಸಿದೆ.
ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರನ್ನು ಕ್ರಿಮಿನಲ್‌ ಅಪರಾಧದಡಿ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ ಎಂದು ಎಚ್ಚರಿಸಿದೆ.
ಗ್ರಾಹಕರಿಗೆ ವಿತರಿಸಲಾದ ಆಧಾರ್‌ ಕಾರ್ಡ್ ಅಥವಾ ಆನ್‌ಲೈನ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಕಾಗದದ ಮೇಲೆ ಮುದ್ರಿಸಿದ ಕಾರ್ಡ್‌ ವಿವರಗಳು ಎಲ್ಲ ಕಡೆಗಳಲ್ಲಿ ಬಳಸಲು ಅರ್ಹವಾಗಿವೆ.
ಅದೇ ವೇಳೆ ಕಾಗದದ ರೂಪದಲ್ಲಿ ಆಧಾರ್‌ ಕಾರ್ಡ್‌ ಹೊಂದಿದವರು ಅದನ್ನು ಲ್ಯಾಮಿನೇಟ್‌ ಮಾಡುವ ಅಥವಾ ಹಣ  ಪಾವತಿಸಿ ಸ್ಮಾರ್ಟ್‌ ಕಾರ್ಡ್‌ ಹೊಂದುವ (ಪ್ಲಾಸ್ಟಿಕ್‌ ಕಾರ್ಡ್‌) ಅಗತ್ಯ ಇಲ್ಲ ಎಂದು ಪ್ರಾಧಿಕಾರದ ಮಹಾ ನಿರ್ದೇಶಕ ಅಜಯ್‌ ಭೂಷಣ್‌ ಪಾಂಡೆ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲ  ಸಂಸ್ಥೆಗಳು ಸ್ಮಾರ್ಟ್‌ ಕಾರ್ಡ್‌ ಹೆಸರಿನಲ್ಲಿ ರು.50 ರಿಂದ ರು. 200ವರೆಗೆ ಶುಲ್ಕ ವಿಧಿಸಿ ಪ್ಲಾಸ್ಟಿಕ್‌ ಕಾರ್ಡ್‌ ನೀಡುವುದಾಗಿ ಹೇಳಿಕೊಳ್ಳುತ್ತಿರುವುದು ತಪ್ಪು. ಪ್ರಾಧಿಕಾರವು ರವಾನಿಸಿದ ಆಧಾರ್‌ ಪತ್ರ ಅಥವಾ ಅದರಲ್ಲಿ ಕಾರ್ಡ್‌ ಸಂಖ್ಯೆ ಬೇರ್ಪಡಿಸಿದ ಭಾಗ ಇಲ್ಲವೆ ಅಂತರ್ಜಾಲ ತಾಣದಿಂದ ಪಡೆದ ಕಾಗದ ಮೇಲಿನ ಆಧಾರ್‌ ಸಂಖ್ಯೆ ಎಲ್ಲೆಡೆ ಊರ್ಜಿತವಾಗಿರುತ್ತದೆ.
ಒಂದು ವೇಳೆ ಆಧಾರ್‌ ಕಾರ್ಡ್‌ ಕಳೆದುಕೊಂಡರೆ, ‘ಯುಐಡಿಎಐ’ ಅಂತರ್ಜಾಲ ತಾಣದಿಂದ ಉಚಿತವಾಗಿ ಪಡೆಯಬಹುದಾಗಿದೆ. ಕಪ್ಪು ಬಿಳುಪಿನ ಕಾರ್ಡ್‌, ಪ್ರಾಧಿಕಾರವು ರವಾನಿಸಿದ ಮೂಲ ಕಾರ್ಡ್‌ನಷ್ಟೇ ಸಿಂಧುತ್ವ ಹೊಂದಿದೆ ಎಂದು ಪಾಂಡೆ ಸ್ಪಷ್ಟ ಪಡಿಸಿದ್ದಾರೆ.
ಇಷ್ಟಕ್ಕೂ ವ್ಯಕ್ತಿಗಳು ಆಧಾರ್‌ ಕಾರ್ಡ್ ಲ್ಯಾಮಿನೇಟ್‌ ಮಾಡಿಸಲು ಅಥವಾ ಪ್ಲಾಸ್ಟಿಕ್‌ ಕಾರ್ಡ್‌ ಮೇಲೆ ಮುದ್ರಿಸಿ ಇಟ್ಟುಕೊಳ್ಳಲು ಬಯಸುವವರು ಅಧಿಕೃತ ಸೇವಾ ಕೇಂದ್ರಗಳು ಅಥವಾ ಆಧಾರ್ ಶಾಶ್ವತ ನೋಂದಣಿ ಕೇಂದ್ರಗಳಲ್ಲಿ ರು. 30 ಪಾವತಿಸಿ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದು, ಸಾರ್ವಜನಿಕರಿಂದ ಆಧಾರ್‌ ಮಾಹಿತಿ ಪಡೆಯಲು ಯಾರಿಗೂ ಅನುಮತಿ ನೀಡಬಾರದು ಎಂದು ಇ–ವಾಣಿಜ್ಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.

*

ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಡೌನ್ ಲೋಡ್ ಹೇಗೆ?

ವಿಶಿಷ್ಟ ಗುರುತಿನ ಚೀಟಿ -ಆಧಾರ್ ಕಾರ್ಡ್ ಗಾಗಿ ಅರ್ಜಿ ಹಾಕಿದ ಮೇಲೆ ಕಾರ್ಡ್ ಗಾಗಿ ಕಾಯಲೇಬೇಕಾಗುತ್ತದೆ. ಆದರೆ, ಇದಕ್ಕೂ ಮುನ್ನ ನಿಮ್ಮ ದಾಖಲೆಗಳೆಲ್ಲ ಸರಿ ಇದ್ದರೆ ತ್ವರಿತವಾಗಿ ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ. ಆನ್ ಲೈನ್ ಮೂಲಕ ಇ-ಆಧಾರ್ ಕಾರ್ಡ್ ಡೌನ್ ಲೋಡ್ ಹೇಗೆ? ಇಲ್ಲಿದೆ ಮಾಹಿತಿ.
ಇ ಅಧಾರ್ ಕಾರ್ಡ್ ಪಡೆಯಲು ನಿಮಗೆ ತಿಳಿದಿರಬೇಕಾದ ಸಂಗತಿಗಳು:
* ನೋಂದಣಿ ಸಂಖ್ಯೆ
[ನೋಂದಣಿ ಸಂಖ್ಯೆ ಎಂದರೆ ನೀವು ಆಧಾರ್ ಕಾರ್ಡಿಗೆ ಅರ್ಜಿ ಹಾಕಿದ ಮೇಲೆ ಸಿಗುವ ಸ್ವೀಕೃತಿ ಪತ್ರದಲ್ಲಿರುವ ಸಂಖ್ಯೆ]
* ಪೂರ್ತಿ ಹೆಸರು (ಸ್ವೀಕೃತಿ ಪತ್ರದಲ್ಲಿರುವಂತೆ ಇರಬೇಕು)
* ಪೋಸ್ಟಲ್ ಇಂಡೆಕ್ಸ್ ನಂಬರ್ (ಪಿನ್)
* ನೋಂದಾಯಿತ ಮೊಬೈಲ್ ನಂಬರ್
* ಮೊದಲಿಗೆ ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ ಲಿಂಕ್ ಇಲ್ಲಿದೆ ಕ್ಲಿಕ್ಕಿಸಿ.

* 14 ಅಂಕಿಗಳ ನೋಂದಣಿ ಸಂಖ್ಯೆ ದಿನಾಂಕ ಹಾಗೂ ಸಮಯ ಸಮೇತ ಅಥವಾ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. [ಎನ್ನಾರೈಗಳು ಆಧಾರ ಕಾರ್ಡ್ ಪಡೆಯಲು ಮಾರ್ಗಸೂಚಿ]
* ನಂತರ ನಿಮ್ಮ ಪೂರ್ತಿ ಹೆಸರನ್ನು ದಾಖಲಿಸಿ
* ಅಮೇಲೆ ಪಿನ್ ಕೋಡ್ ಹಾಕಿ
* ಬಾಕ್ಸಿನಲ್ಲಿರುವ Captcha code ಸಂಖ್ಯೆಗಳನ್ನು ಟೈಪ್ ಮಾಡಿ.
* ನಂತರ ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು ಕಳುಹಿಸಿಕೊಡಲಾಗುವುದು.
* ಒಟಿಪಿ(one time password) ಯನ್ನು ಹಾಕಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಿ
* ಪಿಡಿಎಫ್ ಮಾದರಿಯಲ್ಲಿ ಸಿಕ್ಕ ಆಧಾರ್ ಕಾರ್ಡ್ ಓಪನ್ ಮಾಡಲು ಮತ್ತೊಮ್ಮೆ ಪಿನ್ ಕೋಡ್ ದಾಖಲಿಸಿ.
* ಹೀಗೆ ಲಭ್ಯವಾಗುವ ಇ-ಆಧಾರ್ ಕಾರ್ಡನ್ನು ಪ್ರಿಂಟ್ ಔಟ್ ತೆಗೆದುಕೊಂಡು ಗುರುತು ಚೀಟಿಯಾಗಿ ಬಳಸಬಹುದಾಗಿದೆ.
ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಆಧಾರ್ ಕಾರ್ಡ್ ಸಂಖ್ಯೆ ಎಂದರೆ ಆಧಾರ್ ಕಾರ್ಡ್ ನಿಮಗೆ ಸಿಕ್ಕ ನಂತರ ಅದರಲ್ಲಿರುವ 12 ಅಂಕಿ ಸಂಖ್ಯೆ ಇದ್ದರೆ ಆರಂಭದಲ್ಲೇ ನನ್ನ ಬಳಿ ಆಧಾರ್ ಕಾರ್ಡ್ ಇದೆ ಎಂದು ಆಯ್ಕೆ ಮಾಡಿಕೊಂಡು ಇನ್ನೂ ಸುಲಭವಾಗಿ ಇ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಉಳಿತಾಯಕ್ಕಿರಲಿ ಯೋಜನಾಬದ್ದತೆ.

image

ಸೇವಿಂಗ್ಸಲ್ಲಿ ನೀವೆಷ್ಟು ಸ್ಮಾರ್ಟ್?

ಮಲ್ಲಿಕಾರ್ಜುನ ತಳವಾರ
ಇಂದಿನ ಯುವಜನತೆ 21-22 ವರ್ಷಕ್ಕೇ ದುಡಿಯಲು ಪ್ರಾರಂಭಿಸುತ್ತಾರೆ ಎನ್ನುವುದೇನೋ ನಿಜ. ಆದರೆ ಉಳಿತಾಯದ ವಿಚಾರಕ್ಕೆ ಬಂದರೆ ಅವರ ಸಾಧನೆ ಶೂನ್ಯವೇ. ಇರುವಷ್ಟು ದಿನವನ್ನು ಮಜವಾಗಿ ಕಳೆಯಬೇಕು ಎನ್ನುವ ಸಿದ್ಧಾಂತದಿಂದಾಗಿ ಉದ್ಯೋಗಕ್ಕೆ ಸೇರಿ 4-6 ವರ್ಷಗಳು ಕಳೆದರೂ ಯಾವುದೇ ಸೇವಿಂಗ್ಸ್ ಮಾಡಿರುವುದಿಲ್ಲ. ಹೀಗಾಗಲು ಕಾರಣವೇನು?

ಆತ ಕೈತುಂಬ ಸಂಬಳ ತರುವ ಕೆಲಸದಲ್ಲಿರುವಾತ. ಮನೆಯಲ್ಲೂ ಹೇಳಿಕೊಳ್ಳುವಂಥ ತೊಂದರೆಗಳಿಲ್ಲ. ಆದರೆ ದುಡಿದ ಸಂಬಳ ಕೈಗೆ ಹತ್ತುತ್ತಿಲ್ಲ ಎನ್ನುವುದು ಆತನ ದೂರು. ಮನೆಯಲ್ಲಿನ ಎಲ್ಲ ಖರ್ಚುಗಳನ್ನು ಆತನೇನೂ ಸಂಭಾಳಿಸುವುದಿಲ್ಲ. ಆದರೆ ಎಷ್ಟು ದುಡಿದರೂ ಮೇಲೇರದ ಬ್ಯಾಂಕ್ ಬ್ಯಾಲೆನ್ಸು ತನ್ನ ತಪ್ಪಿನಿಂದಾಗಿಯೇ ನಿಂತಲ್ಲಿ ನಿಂತಿರಬಹುದು ಎಂಬುದನ್ನು ಆತ ಪರಾಮರ್ಶೆ ಮಾಡಿಕೊಳ್ಳಲೊಲ್ಲ. ಮನೆಯಲ್ಲಿ ವೃದ್ಧ ತಂದೆ-ತಾಯಿ ಆತನನ್ನು ಯಾವುದಕ್ಕೂ ಅವಲಂಬಿಸಿರಲಿಲ್ಲ. ಆದರೆ ಗೆಳೆಯರೊಂದಿಗೆ ಮೋಜು, ಮಸ್ತಿ ಮಾಡುತ್ತ ಹಣ ಉಡಾಯಿಸುತ್ತಿದ್ದ ಯುವಕನಿಗೆ ತನ್ನ ಭವಿಷ್ಯದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ‘ನಮಗೆ ಕೊಡುವುದು ಬೇಡ. ನಿನ್ನ ಭವಿಷ್ಯಕ್ಕೋಸ್ಕರವಾದರೂ ಉಳಿತಾಯ ಮಾಡು’ ಎಂದು ಅಪ್ಪ ಹೇಳುವುದು ಆತನ ಕಿವಿಯೊಳಗೆ ಹೋಗುತ್ತಿರಲಿಲ್ಲ. ಉಳಿತಾಯ ಯುವಜನರ ಪ್ರಿಯಾರಿಟಿಯಾಗಬೇಕು ಅನ್ನೋ ರಿಯಾಲಿಟಿ ಅರ್ಥ ಮಾಡಿಕೊಳ್ಳದಿರುವುದು ಆತನ ಆರ್ಥಿಕ ಹಿನ್ನಡೆಗೆ ಕಾರಣವಾಗಿತ್ತು.

ಆಕೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು ಆರು ವರ್ಷಗಳಾದವು. ಚೆಂದ ಓದಿದ್ದಕ್ಕೆ ಅದಕ್ಕಿಂತ ಚೆಂದದ ಕೆಲಸ ಸಿಕ್ಕಿತ್ತು. ಮನೆಯಿಂದ ಹೊರಡುವಾಗ ಅಪ್ಪ-ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ, ಪ್ರತಿ ತಿಂಗಳು ತಪ್ಪದೇ ದುಡ್ಡು ಕಳಿಸುವ ಭಾವುಕ ಮಾತನಾಡಿ ಬ್ಯಾಗು ಎತ್ತಿಕೊಂಡು ಬೆಂಗಳೂರಿನ ಬಸ್ಸು ಏರಿದ್ದಳು. ಆದರೆ ಇಲ್ಲಿ ಬಂದ ಮೇಲೆ ದುಡ್ಡಿನ ಮೇಲಿನ ನಿಯಂತ್ರಣದ ಹದ ತಪ್ಪತೊಡಗಿತ್ತು. ಮನೆಗೆ ಕಳುಹಿಸುವ ದುಡ್ಡಿನ ಪ್ರಮಾಣ ತಿಂಗಳಿಗೊಮ್ಮೆ ಕ್ಷೀಣಿಸುತ್ತ ಬರತೊಡಗಿತು. ವಾಸ್ತವ್ಯಕ್ಕೆ ರೂಂ, ಊಟ, ಉಪಾಹಾರ, ಇನ್ನಿತರ ವೆಚ್ಚದಿಂದಾಗಿ ಕೆಲವೊಮ್ಮೆ ಆದಾಯಕ್ಕಿಂತ ಖರ್ಚೇ ಹೆಚ್ಚು ತೋರುತ್ತಿತ್ತು. ಅದಕ್ಕಿಂತ ಮುಖ್ಯವಾಗಿ ಅನಗತ್ಯ ವಿಷಯಗಳಿಗಾಗಿ ಮಾಡುತ್ತಿದ್ದ ಖರ್ಚು ಆಕೆಯ ಗಮನಕ್ಕೆ ಬರುತ್ತಿರಲಿಲ್ಲ. ಅಷ್ಟಾದರೂ ಸಂಬಳ ಹೆಚ್ಚು ಮಾಡದ ಕಂಪನಿಯನ್ನೇ ಬೈದು ಖುಷಿ ಪಡುತ್ತಿದ್ದಳೇ ವಿನಾ ಖರ್ಚಿನ ಬಾಬತ್ತಿಗೆ ಕಡಿವಾಣ ಹಾಕಲು ಮನಸ್ಸು ಮಾಡುತ್ತಿರಲಿಲ್ಲ.

ದುಡ್ಡು ಎಂಬ ವಿಷಯದ ಕುರಿತು ಹುಟ್ಟಿಕೊಂಡಷ್ಟು ಕುತೂಹಲ, ಆಸೆ, ದುರಾಸೆ, ಮಮಕಾರ ಹಾಗೂ ಒಣ ಫಿಲಾಸಫಿ ಬೇರಿನ್ಯಾವ ವಿಷಯದ ಕುರಿತೂ ಹುಟ್ಟಿಕೊಂಡಿರಲಿಕ್ಕಿಲ್ಲ. ದುಡ್ಡು ಯಾರಿಗೆ ಬೇಡ? ಎಲ್ಲರಿಗೂ ಬೇಕು. ಕೂಡಿಡುವ ಹಣ ನಮ್ಮನ್ನು ಕಾಪಾಡುತ್ತದೆ ಎನ್ನುವ ಅನಾದಿಕಾಲದ ನಂಬಿಕೆಯಿಂದಾಗಿ ಹಾಗೂ ಕಾಲ ಎಷ್ಟೇ ವೇಗವಾಗಿ ಉರುಳಿದರೂ ಅದು ದುಡ್ಡಿನ ಸುತ್ತವೇ ಸುತ್ತುತ್ತ್ತೆ ಎಂಬ ಕಟುವಾಸ್ತವದಿಂದಾಗಿ ದುಡ್ಡಿನ ಬೆಲೆ ಕಡಿಮೆ ಆಗಿಲ್ಲ; ಬಹುಶಃ ಆಗಲಿಕ್ಕೂ ಇಲ್ಲ. ಸಣ್ಣ ಅವಶ್ಯಕತೆಗಳಿಂದ ಹಿಡಿದು ದೊಡ್ಡ ಆಕಾಂಕ್ಷೆ ಈಡೇರಿಸಿಕೊಳ್ಳಲು ದುಡ್ಡು ಬೇಕು. ಆದರೆ ದುಡ್ಡು ಬೇಕೆಂದಾಗ ಉದುರುವ ಮರದ ಎಲೆ ಅಲ್ಲ ಎಂಬ ಕಟುಸತ್ಯ ಗೊತ್ತಿದ್ದರೂ ಬಹುತೇಕರು ದುಡ್ಡಿನ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸುವುದಿಲ್ಲ. ಅದಕ್ಕೆ ನೂರು ಕಾರಣಗಳನ್ನು, ಕುಂಟುನೆಪಗಳನ್ನು ಕೊಡಬಹುದಾದರೂ ದುಡ್ಡು ಅಷ್ಟು ಸುಲಭಕ್ಕೆ ಪಳಗುವ ವಸ್ತುವಲ್ಲ. ಅದನ್ನು ಪಳಗಿಸುವಲ್ಲಿ ಇಂದಿನ ಯುವಜನತೆ ಹರಸಾಹಸ ಪಡುತ್ತಿದ್ದಾರೆ. ದುಡಿಯುವುದು, ಹಣ ಗಳಿಸುವುದಕ್ಕಿಂತ ಅದನ್ನು ಉಳಿಸುವುದೇ ಈಗ ದೊಡ್ಡ ಸವಾಲಾಗುತ್ತಿದೆ. ದುಡ್ಡು ಗಳಿಸುವುದು ಒಂದು ಕಲೆಯಾದರೆ, ಅದನ್ನು ಉಳಿಸಿಕೊಳ್ಳುವುದು ಇನ್ನೊಂದು ಕಲೆ. ಉಳಿಸಿದ ದುಡ್ಡನ್ನು ಸದುಪಯೋಗ ಮಾಡುವುದು ನಿಜಕ್ಕೂ ಚಾತುರ್ಯದ ಕೆಲಸ. ಹೀಗಾಗಿ ಉಳಿತಾಯ ಎಂಬುದು ಮೇಲೆ ತಿಳಿಸಿದ ಯುವಕ, ಯುವತಿ ಸೇರಿದಂತೆ ಇಂದಿನ ಬಹುತೇಕ ಯುವಜನರ ಬಹುದೊಡ್ಡ ಸಮಸ್ಯೆಗಳಲ್ಲೊಂದು.

ಬದಲಾದ ಜೀವನ ಶೈಲಿ

ಮನುಷ್ಯ ಇವತ್ತಿದ್ದಂತೆ ನಾಳೆ ಇರುವುದಿಲ್ಲ. ನಾಡಿದ್ದು ಮತ್ತೆ ಬೇರೆ ವೇಷ. ಬದಲಾವಣೆ ಜಗದ ನಿಯಮ ಅನ್ನೋದು ನಿಜ. ಆದರೆ ಕಾಲನ ಮಹಿಮೆಯಲ್ಲಿ ಜೇಬಿಗೆ ಬಿದ್ದ ತೂತು ದೊಡ್ಡದಿದೆ ಎಂಬುದು ಅರ್ಥವಾಗದಷ್ಟು ಕುರುಡರಾದರೆ ಜೀವನ ಕಷ್ಟ. ಮೊದಲಾದರೆ ಒಂದಿತ್ತು ಮತ್ತೊಂದಿಲ್ಲ ಎಂದರೂ ಜೀವನ ಹೇಗೋ ಸಾಗುತ್ತಿತ್ತು ಎಂದು ದೊಡ್ಡವರು ಹೇಳುತ್ತಿರುತ್ತಾರೆ. ಆದರೆ ಇಂದಿನ ಯುವಕರ ಜೀವನ ಶೈಲಿ ಬಹಳ ಬದಲಾಗಿದೆ. ಅದಕ್ಕೆ ತಕ್ಕಂತೆ ಖರ್ಚು ಕೂಡ ಹೆಚ್ಚಾಗಿದೆ. ಅಗತ್ಯಕ್ಕಿಂತ ಅನಗತ್ಯವಾದವುಗಳೇ ನಮ್ಮ ಜೇಬಿಗೆ ಭಾರವಾಗುತ್ತಿವೆ. ನಮಗದು ಗೊತ್ತಾದರೂ ಏನೂ ಮಾಡಲಾಗದ ಸ್ಥಿತಿಯನ್ನು ಈಗಾಗಲೇ ತಲುಪಿಯಾಗಿದೆ. ಖರ್ಚಿನ ಕುದುರೆ ಓಡುವುದನ್ನು ತಡೆಯಲಾಗುತ್ತಿಲ್ಲ. ಒಂದೇ ಜೊತೆ ಪಾದರಕ್ಷೆ ಇಟ್ಟುಕೊಂಡರೂ ಬದುಕು ನಡೆಯುತ್ತದೆ ನಿಜ. ಆದರೆ ಖರೀದಿಸುವ ಖಯಾಲಿಯವರಿಗೆ ಬಗೆಬಗೆಯ ಪಾದರಕ್ಷೆಗಳು ಕಣ್ಣುಕುಕ್ಕುತ್ತವೆ. ಹಾಗಾಗಿ ದುಡ್ಡಿನ ನಿರ್ವಹಣೆ ಸಲೀಸಾಗುತ್ತಿಲ್ಲ.

ಕೊಳ್ಳುಬಾಕತನ: ಯುವಜನರ ಖರೀದಿಸುವ ಹುಚ್ಚು ದಿನೇದಿನೆ ಏರತೊಡಗಿದೆ. ಕೈಯಲ್ಲಿ ಒಂದೇ ಮೊಬೈಲಿದ್ದರೆ ಸಾಲುತ್ತಿಲ್ಲ; ಎರಡು-ಮೂರಾದರೂ ಬೇಕು. ಹಾಕುವ ಬಟ್ಟೆ, ತೊಡುವ ಪಾದರಕ್ಷೆ ಎಲ್ಲವೂ ಅಗತ್ಯಕ್ಕಿಂತ ಹೆಚ್ಚಾಗಿಯೇ ಖರೀದಿಯಾಗುತ್ತಿವೆ. ಯಾವಾಗ ಅಗತ್ಯ ವಸ್ತುಗಳ ಖರೀದಿಗಿಂತ, ‘ಅದಿಲ್ಲದಿದ್ದರೂ ನಡೆಯುತ್ತಿತ್ತು’ ಎಂಬಂಥ ವಸ್ತುಗಳನ್ನು ಹೆಚ್ಚಾಗಿ ಖರೀದಿಸುತ್ತೇವೋ ಆಗಲೇ ಸಮಸ್ಯೆ ಶುರುವಾಗಿಬಿಡುತ್ತದೆ. ಇನ್ನು ತಿನ್ನುವ ವಿಷಯದಲ್ಲೂ ಇತ್ತೀಚೆಗೆ ಹಣ ನೀರಿನಂತೆ ಖರ್ಚಾಗುತ್ತಿದೆ. ಕುಗ್ರಾಮದಲ್ಲಿ ಬೆಳೆದು, ಜೋಳದ ರೊಟ್ಟಿ, ಹಿಡಿಮುದ್ದೆ, ಒಂದು ಕಬ್ಬು, ತಟ್ಟೆ ತುಂಬ ಅನ್ನ ತಿಂದು ಬೆಳೆದವರೂ ಇಂದು ಪಿಜ್ಜಾ, ಬರ್ಗರ್ ಸಖ್ಯ ಬೆಳೆಸತೊಡಗಿದ್ದಾರೆ. ಅದು ಆರೋಗ್ಯವೋ, ಅನಾರೋಗ್ಯಕ್ಕೆ ದಾರಿಯೋ ಎಂಬುದು ಬೇರೆ ಮಾತು. ಆದರೆ ಬೆಲೆಯ ದೃಷ್ಟಿಯಿಂದ ನೋಡಿದಾಗ, ಮತ್ತದು ಗೀಳಾದಾಗ ಖರ್ಚು ಹೆಚ್ಚಾಗುವುದು ಮಾತ್ರ ಖಂಡಿತ.

ಜವಾಬ್ದಾರಿಗಳಿಂದ ವಿಮುಖತೆ: ಯುವಜನರು ದುಡ್ಡು ಉಳಿಸುವಲ್ಲಿ ಸೋಲಲು ಮತ್ತೊಂದು ಕಾರಣ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು. ಆರ್ಥಿಕ ವಿಷಯಗಳಲ್ಲಿ ನಿಖರ ಜವಾಬ್ದಾರಿಗಳಿಲ್ಲದೇ ಹೋದರೆ ಯಡವಟ್ಟು ಆರಂಭವಾಗೋದು ದಿಟ. ಏಕೆಂದರೆ ಜವಾಬ್ದಾರಿಗೂ ಅರ್ಥಿಕ ಶಿಸ್ತಿಗೂ ಅನೂಹ್ಯ ಸಂಬಂಧವಿದೆ. ತಮಗಿರುವ ಸಾಂಸಾರಿಕ, ಕೌಟುಂಬಿಕ ಜವಾಬ್ದಾರಿಗಳನ್ನು ಶಿಸ್ತಿನಿಂದ ನಿಭಾಯಿಸಲು ಕಲಿತ ಮನುಷ್ಯ ದುಡ್ಡನ್ನೂ ಅಷ್ಟೇ ಚೆಂದವಾಗಿ ನಿರ್ವಹಿಸುತ್ತಾನೆ. ಹಾಗಾಗಿ ಮನೆಯ ಜವಾಬ್ದಾರಿಯೊಂದಿಗೆ, ದುಡ್ಡನ್ನೂ ಅಷ್ಟೇ ನೀಟಾಗಿ ಕ್ಯಾರಿ ಮಾಡುವ ಮೂಲಕ ಆರ್ಥಿಕ ಲೆಕ್ಕ ಚುಕ್ತಾ ಆಗಿರುವಂತೆ ನೋಡಿಕೊಳ್ಳುವುದೊಳಿತು.

ವ್ಯಸನಗಳ ಹಿಂದಿದೆ ದುಡ್ಡಿನ ಮರ್ಮ!: ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳ ಹಿಂದೆ ದುಡ್ಡಿನ ಮಸಲತ್ತು ಇರುವುದು ಬಹಳ ಸಲ ಸಾಬೀತಾಗಿದೆ. ಕೆಲ ಪ್ರಕರಣಗಳಲ್ಲಿ ಪೊಲೀಸರೇ ಬೆಚ್ಚಿ ಬೀಳುವಂತಹ ಸತ್ಯಗಳನ್ನು ಆರೋಪಿಗಳು ಬಾಯಿ ಬಿಟ್ಟಿರುತ್ತಾರೆ. ಕಳವು ಪ್ರಕರಣದ ಆರೋಪಿಗಳನ್ನು ಕೇಳಿದರೆ ‘ವ್ಯಸನ ಪೂರೈಸಿಕೊಳ್ಳಲು’ ಎಂಬುದೇ ಅವರ ಉತ್ತರ. ಏಕೆಂದರೆ ದುಡ್ಡಿಲ್ಲದೇ ಹೋದರೆ ಯಾವ ಚಟವನ್ನು ಮಾಡಲಾಗುವುದಿಲ್ಲ. ದುಡ್ಡಿಲ್ಲದೇ ಹೋದಾಗ ಚಟಕ್ಕೆ ಅಂಟಿಕೊಂಡ ಮನುಷ್ಯ ಅದನ್ನು ಪೂರೈಸಿಕೊಳ್ಳಲು ಅಡ್ಡದಾರಿ ಹಿಡಿದು ಬಿಡುತ್ತಾನೆ. ದುಬಾರಿ ಮೊತ್ತ ನಿರೀಕ್ಷಿಸುವ ವ್ಯಸನಗಳಿಂದಾಗಿ ಕೆಲ ಯುವಜನರು ಏನೇನೋ ಮಾಡುತ್ತಿರುತ್ತಾರೆ. ಇನ್ನು ದುಡಿಯುವ ಕೈಗಳು ವ್ಯಸನದ ಹಿಂದೆ ಓಡತೊಡಗಿದರೆ ನಿಲ್ಲದ ಕಂಪನ ಆರಂಭವಾಗೋದು ಖಾತರಿ. ಸಣ್ಣ ಸಂಬಳವಿದ್ದ ವ್ಯಕ್ತಿ ಚಟಕ್ಕೆ ದಾಸನಾದರೆ ಆತನ ಆರ್ಥಿಕ ಸ್ಥಿತಿ ಯಾವತ್ತಿಗೂ ಸುಧಾರಿಸದು.

ಏನೇ ಆದರೂ ಹಣದ ಕುರಿತು ಹಾಗೂ ಅದರ ಉಳಿತಾಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಮನುಷ್ಯನ ಆಸೆ ಆಕಾಂಕ್ಷೆಗಳು ಮೊದಲೇ ಅಪರಿಮಿತವಾಗಿದ್ದು, ಅವುಗಳ ಪೂರೈಕೆಗೆ ಹಣ ಬೇಕು. ಒಂದು ವೇಳೆ ದುಡ್ಡು ಕೂಡಿಡಲು ನಾವೂ ಸೋತಿದ್ದೇ ಆದಲ್ಲಿ ಹಣದ ಕಿಮ್ಮತ್ತು ನಮಗೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಅರ್ಥವಾಗುತ್ತದೆ. ನಮ್ಮವರು ಅಂದುಕೊಂಡವರು ನಮಗೆ ಸಹಾಯ ಮಾಡಬಹುದು; ಮಾಡದಿರಬಹುದು. ಆದರೆ ನಮ್ಮ ದುಡ್ಡು ನಮಗೆ ಖಂಡಿತ ಸಹಾಯ ಮಾಡುತ್ತದೆ. ಸುಮ್ಮನೇ ದುಡ್ಡಿನ ಪ್ರಾಮುಖ್ಯತೆ ಬಗ್ಗೆ ಸಲ್ಲದ ಮಾತನಾಡುತ್ತ, ಅದನ್ನು ತೆಗಳುತ್ತ ಇರುವುದರಲ್ಲಿ ಅರ್ಥವಿಲ್ಲ. ಎಲ್ಲ ಸಂಬಂಧಗಳನ್ನು ದುಡ್ಡಿನಿಂದಲೇ ಬಂಧಿಸಿಡಲು ಸಾಧ್ಯವಿಲ್ಲ ಎನ್ನುವುದೋ ಎಷ್ಟು ಸತ್ಯವೋ, ದುಡ್ಡಿಲ್ಲದೇ ಹೋದರೆ ಎಲ್ಲ ಸಂಬಂಧಗಳು ಸ್ಥಿರವಾಗಿರುತ್ತವೆ ಎಂದು ಹೇಳಲಾಗುವುದಿಲ್ಲ ಎಂಬುದು ಅಷ್ಟೇ ಸತ್ಯ. ಹಾಗಾಗಿ ನಮ್ಮ ಬೆವರಿನ ಫಲದಿಂದ ಕೈಗೊದಗಿದ ಹಣದಲ್ಲಿ ಒಂದಿಷ್ಟು ಕೂಡಿಡಲು ಮನಸ್ಸು ಮಾಡೋಣ.

ಹಣ ಉಳಿಸುವ ಮಾರ್ಗ

ಹಣ ಉಳಿಸುವುದು ನಿಜಕ್ಕೂ ಸವಾಲಿನ ಕೆಲಸವೇ. ಆದರೆ ಒಂದು ಶಿಸ್ತು ಹಾಗೂ ನಿಖರ ಲೆಕ್ಕಾಚಾರದ ಮೂಲಕ ದುಡ್ಡು ಉಳಿಸುವುದನ್ನು ರೂಢಿಸಿಕೊಳ್ಳಬಹುದು. ಅದಕ್ಕೊಂದಿಷ್ಟು ಸುಲಭ ಉಪಾಯಗಳು ಇಲ್ಲಿವೆ.

ಮೊದಲು ದುಡ್ಡನ್ನು ಗೌರವಿಸುವುದನ್ನು ಕಲಿಯಬೇಕು. ದುಡ್ಡಿನ ಬಗ್ಗೆ ನಮಗೆ ಗೌರವ ಇಲ್ಲದೇಹೋದರೆ ಹಣ ನಮ್ಮ ಬಳಿ ನಿಲ್ಲುವುದಿಲ್ಲ.
ಸಂಬಂಧಗಳಿಗಿಂತ ದುಡ್ಡು ದೊಡ್ಡದಲ್ಲ ಎಂಬುದು ನಿಜವೇ ಆದರೂ ಕೆಲವೊಮ್ಮೆ ದುಡ್ಡಿನಿಂದಲೇ ಸಂಬಂಧಗಳು ಗಟ್ಟಿಯಾಗುವುದರಿಂದ ಅವುಗಳನ್ನು ಉಳಿಸಿಕೊಳ್ಳಲಿಕ್ಕಾದರೂ ನಮ್ಮ ಬಳಿ ದುಡ್ಡಿರಬೇಕು.
ದೊಡ್ಡ ಪ್ರಮಾಣದಲ್ಲಿ ಆಗದೇ ಇದ್ದರೂ ಸಣ್ಣ ಸಣ್ಣ ಉಳಿತಾಯದ ಹಾದಿಯನ್ನು ಕಂಡುಕೊಳ್ಳಬೇಕು. ಅಲ್ಪಾವಧಿಯ ಠೇವಣಿಗಳಲ್ಲಿ ಹಣ ತೊಡಗಿಸಿದರೂ ಪರವಾಗಿಲ್ಲ.
ವೈಯಕ್ತಿಕ ಖರ್ಚುಗಳನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಬೇಕು.
ಸಂಬಳಕ್ಕೂ, ಖರ್ಚಿಗೂ ಸಮತೋಲನವಿರಬೇಕು. ದುಡಿಯುವುದು ನಾಕಾಣೆ, ಖರ್ಚು ಎಂಟಾಣೆ ಆದರೆ ಬದುಕಿನ ಬಂಡಿ ಪಲ್ಟಿಯಾಗೋದು ಖಾತರಿ.
ದುಡಿದ ಸಂಬಳದಲ್ಲಿ ಒಂದಷ್ಟು ಉಳಿತಾಯ ಮಾಡುವುದನ್ನು ತಪಸ್ಸಿನಂತೆ ಮಾಡಬೇಕು. ಏಕೆಂದರೆ ಇಲ್ಲ ಎಂದಾಗ ಯಾರೂ ಚೂರು ಬೆಲ್ಲವನ್ನೂ ಕೊಡಲ್ಲ.
ದಾಕ್ಷಿಣ್ಯಕ್ಕೆ ಒಳಗಾಗಿ ಇನ್ನೊಬ್ಬರಿಗೆ ಸಹಾಯ ಮಾಡುವುದು, ಅರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿಯೂ ಸಾಲ ನೀಡುವುದನ್ನು ನಿಲ್ಲಿಸಬೇಕು.
ದುಡ್ಡು ಉಳಿಸಲು ತಜ್ಞರ ಸಲಹೆ ಪಡೆಯವುದು ಉಚಿತವೆನಿಸುತ್ತದೆ. ನಿಮಗೆ ಸರಿ ಅನ್ನಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ದುಡ್ಡು ಉಳಿಸುವ ಕುರಿತು ಸಲಹೆ ಪಡೆಯಬಹುದು.
ದೊಡ್ಡ ಮೊತ್ತದ ಖರ್ಚುಗಳಿಗಿಂತ ಸಣ್ಣ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಏಕೆಂದರೆ ದೋಣಿ ಮುಳುಗುವುದು ಸಣ್ಣ ರಂಧ್ರದಿಂದಲೇ!
ಸಾಲ ಮಾಡುವ ಮುಂಚೆ ಅದನ್ನು ತೀರಿಸುವ ಬಗ್ಗೆ ಯೋಜನೆ ಹಾಕಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಸಾಲಗಾರರು ಮಾನವನ್ನೂ ಹರಾಜಿಗಿಡುವುದು ದಿಟ.
ಸಣ್ಣ ಕೈಗಡಗಳು ಕೆಲವೊಮ್ಮೆ ದೊಡ್ಡ ಮೊತ್ತದ ಸಾಲಕ್ಕಿಂತ ದುಬಾರಿ. ಹಾಗಾಗಿ ಚಿಲ್ಲರೆ ಸಾಲ ಇರದಂತೆ, ಇದ್ದರೂ ಲೆಕ್ಕ ಚುಕ್ತಾ ಆಗಿರುವಂತೆ ನೋಡಿಕೊಳ್ಳುವುದು ಉತ್ತಮ.
ಯಾರಿಗಾದರೂ ಸಾಲದ ವಿಷಯಕ್ಕೆ ಸಂಬಂಧಿಸಿದಂತೆ ಜಾಮೀನು ಆಗುವಾಗಲೂ ಎಚ್ಚರಿಕೆ ಅಗತ್ಯ.

ಇಂದಿನ ಯುವಜನರು ಆಮಿಷಗಳಿಗೆ ಒಳಗಾಗಿರುವುದು ಹಾಗೂ ಅವರ ಖರ್ಚು, ಆದಾಯವನ್ನು ಮೀರಿ ಹೋಗುತ್ತಿರುವುದರಿಂದ ಉಳಿತಾಯ ಸಾಧ್ಯವಾಗುತ್ತಿಲ್ಲ. ಅವಸರದ ಜೀವನ ಹಾಗೂ ಸ್ವೇಚ್ಛಾ ಪ್ರವೃತ್ತಿಯಿಂದಾಗಿ ಗಳಿಸಿದ ಹಣ ಹಿಡಿತಕ್ಕೆ ಸಿಗುವುದಿಲ್ಲ. ಸ್ವಯಂ ನಿಯಂತ್ರಣ ಮತ್ತು ಪಾಲಕರ ಮಾತಿಗೆ ಬೆಲೆ ಕೊಡುವುದರ ಮೂಲಕ ಯುವಜನರು ಉಳಿತಾಯ ಹೆಚ್ಚಿಸಿಕೊಳ್ಳಬಹುದು. ಈ ಕುರಿತು ಆತ್ಮಾವಲೋಕನ ಅಗತ್ಯ.

| ವಿ.ಎಂ.ಅಂಬಲಿ ಪ್ರಾಚಾರ್ಯರು, ಸರ್ಕಾರಿ ಪಿಯು ಕಾಲೇಜು ಹಳ್ಳೂರು.