ಉಪಯುಕ್ತ ಮಾಹಿತಿಗಳು

*Krntk. Graduate Teachers Recruitment -2016-17 CET_SYLLABUS_
*ಶಿಕ್ಷಕರ_ನೇಮಕಾತಿ_ಪಠ್ಯಕ್ರಮ*
.
★*1* *ರಿಂದ 5 ನೇ ತರಗತಿಗಳಿಗೆ* *ಶಿಕ್ಷಕರಾಗಬಯಸುವ ಅಭ್ಯರ್ಥಿಗಳು TET ಪತ್ರಿಕೆ 1 ನ್ನು* *ತೇರ್ಗಡೆಯಾಗಿರಬೇಕು ಅಲ್ಲದೇ ಪಿಯೂಸಿ ಜೊತೆಗ D.ed ವಿದ್ಯಾರ್ಹತೆಯನ್ನು ಹೊಂದಿರಬೇಕು. PUC – 35%, D. ED – 15%, TET- 15% CET-35% ಅನುಪಾತದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ*
*SYLLABUS*
*1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 15 ಪ್ರಶ್ನೆಗಳು = 15 ಅಂಕಗಳು*
*2] ಶಿಶು ಮನೋವಿಜ್ಞಾನ ಮತ್ತು ವಿಕಸನ, ಬೋಧನಾ ಸಾಮರ್ಥ್ಯ = 25 ಪ್ರಶ್ನೆಗಳು = 25 ಅಂಕ*
*3] ಭಾಷೆ-1 (ಕನ್ನಡ, ಉರ್ದು, ಮರಾಠಿ ಇತ್ಯಾದಿ = 20 ಪ್ರಶ್ನೆ = 20 ಅಂಕ*
*4] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ*
*5] ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ) = 20 ಪ್ರಶ್ನೆ = 20 ಅಂಕ*
*6] ಗಣಿತ = 20 ಪ್ರಶ್ನೆ = 20 ಅಂಕ*
*7] ಕಂಪ್ಯೂಟರ್ ಸಾಕ್ಷರತೆ = 25* *ಪ್ರಶ್ನೆ = 25 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು*.
.
★* *6 TO 8TH CET SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ* ::*
.
*6 ರಿಂದ 8 ನೇ ತರಗತಿಗಳಿಗೆ ಶಿಕ್ಷಕರಾಗಬಯಸುವ ಅಭ್ಯರ್ಥಿಗಳು* *TET ಪತ್ರಿಕೆ 2 ನ್ನು ತೇರ್ಗಡೆಯಾಗಿರಬೇಕು ಅಲ್ಲದೇ BA-B.Ed, B. Sc- B. Ed or D. Ed with BA ವಿದ್ಯಾರ್ಹತೆಯನ್ನು ಹೊಂದಿರಬೇಕು. BA – 35%, CET-* *35%, TET- 15%, (B. Ed with BA-15% ಇದು ಬಿ.ಇಡಿ ಹಾಗೂ ಬಿಎ ಪದವಿ ಹೊಂದಿದವರಿಗೆ ಮಾತ್ರ ) ಅನುಪಾತದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ*.
*6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 1 ನೇ ಪತ್ರಿಕೆ ಸಾಮಾನ್ಯ ಪತ್ರಿಕೆ ಕಡ್ಡಾಯವಾಗಿರುತ್ತದೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಯಾವುದಾದರೊಂದು ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎರಡಕ್ಕೂ ಅರ್ಹತೆ ಇದ್ದರೆ ಎರಡನ್ನು ಬರೆಯಬಹುದು*.
*PAPER-1 ಸಾಮಾನ್ಯ ಜ್ಞಾನ SYLLABUS :*
*1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 30 ಪ್ರಶ್ನೆಗಳು = 30 ಅಂಕಗಳು*
*2] ಶಿಶು ಮನೋವಿಜ್ಞಾನ ಮತ್ತು ವಿಕಸನ = 40 ಪ್ರಶ್ನೆಗಳು = 40 ಅಂಕ*
*3] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ*
*4] ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ = 30 ಪ್ರಶ್ನೆ = 30 ಅಂಕ*
*5] ಕಂಪ್ಯೂಟರ್ ಸಾಕ್ಷರತೆ = 25 ಪ್ರಶ್ನೆ = 25 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು*
.
★ *6 TO 8TH CET PAPER-2, *OPTIONAL PAPER-2 =* *ENGLISH ::*
*SYLLABUS : ಶಿಕ್ಷಕರ ನೇಮಕಾತಿ* *ಪಠ್ಯಕ್ರಮ*
*6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ*
*PAPER-2*
*Optional Paper-2*
*ENGLISH*
*SYLLABUS*
*1] English Grammar = 75 ಪ್ರಶ್ನೆಗಳು = 75 ಅಂಕಗಳು*
*2] English language Terms and Literature = 75 ಪ್ರಶ್ನೆಗಳು = 75 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು*
.
★ *6 TO 8TH CET *SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ :: PAPER-2*
*OPTIONAL-PAPER-1*
*6 ರಿಂದ 8 ನೇ ತರಗತಿ ಶಿಕ್ಷಕರ* *ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಯಾವುದಾದರೊಂದು ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎರಡಕ್ಕೂ ಅರ್ಹತೆ ಇದ್ದರೆ ಎರಡನ್ನು ಬರೆಯಬಹುದು.*
* *PAPER-2*
*OPTIONAL PAPER-I*
*ಕನ್ನಡ ಮತ್ತು ಸಮಾಜ ವಿಜ್ಞಾನ SYLLABUS :*
*1] ಕನ್ನಡ ಸಾಹಿತ್ಯ ಚರಿತ್ರೆ ಮತ್ತು ವ್ಯಾಕರಣ ಹಾಗೂ ಭಾಷಾ ಬೋಧನಾ ತತ್ವಗಳು = 75 ಪ್ರಶ್ನೆಗಳು = 75 ಅಂಕಗಳು*
*2] ಸಮಾಜವಿಜ್ಞಾನ -ಇತಿಹಾಸ, ಪೌರನೀತಿ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ = 75 ಪ್ರಶ್ನೆಗಳು = 75 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು….

@

ನಿಮ್ಮ ಫೋನ್ ವೇಗ ಹೆಚ್ಚಿಸಬೇಕೇ? ಆ್ಯಪ್‌ಗಳ Cache ಕ್ಲಿಯರ್ ಮಾಡಿ!

ಅವಿನಾಶ್ ಬಿ.

ಸ್ಮಾರ್ಟ್ ಫೋನ್ ಬಳಸುತ್ತಿರುವವರಲ್ಲಿ ಇದೀಗ ಇಂಟರ್ನೆಟ್ ಬಳಕೆಯೂ ಹೆಚ್ಚಾಗಿದೆ. ಇದಕ್ಕೆ ಒಂದು ಪ್ರಧಾನ ಕಾರಣವೆಂದರೆ ಇಂಟರ್ನೆಟ್ ಸೇವಾದಾರರು (ಅಂದರೆ ಏರ್‌ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಸೆನ್ನೆಲ್, ಜಿಯೋ ಮುಂತಾದ ಐಎಸ್‌ಪಿಗಳು) ಪೈಪೋಟಿಗೆ ಬಿದ್ದು ಡೇಟಾ (ಇಂಟರ್ನೆಟ್) ಶುಲ್ಕಗಳನ್ನು ಸ್ಫರ್ಧಾತ್ಮಕ ದರದಲ್ಲಿ ನೀಡುತ್ತಿರುವುದು. ಇನ್ನೂ ಕೆಲವು ಕಾರಣಗಳೆಂದರೆ, ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಕೂಡ ಎಲ್ಲರಿಗೂ ತಲುಪುತ್ತಿರುವುದು, ಡೀಮಾನಿಟೈಸೇಶನ್‌ನಿಂದಾಗಿ ಜನರು ಬ್ಯಾಂಕಿಂಗ್, ಖರೀದಿ ವ್ಯವಹಾರಗಳನ್ನು ಕೂಡ ಮೊಬೈಲ್‌ನಲ್ಲೇ ನಿಭಾಯಿಸಲಾರಂಭಿಸಿರುವುದು ಜತೆಜತೆಗೆ, ವಾಟ್ಸಾಪ್, ಫೇಸ್‌ಬುಕ್, ಟೆಲಿಗ್ರಾಂ ಮುಂತಾದ ಸಾಮಾಜಿಕ ತಾಣಗಳ ಬಿಟ್ಟೂಬಿಡಲಾರದ ಆಕರ್ಷಣೆ ಹೆಚ್ಚಾಗಿರುವುದು.

ಆನ್‌ಲೈನ್ ಶಾಪಿಂಗ್, ಮ್ಯೂಸಿಕ್, ಟಿವಿ ಹಾಗೂ ಇನ್ನಿತರ ಎಲ್ಲ ಅಗತ್ಯತೆಗಳನ್ನು ಪೂರೈಸಲು ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಆ್ಯಪ್‌ಗಳನ್ನು ನಾವು ಅಳವಡಿಸಿಕೊಂಡಿರುತ್ತೇವೆ. ಬೇಡವೆಂದಾಗ ಅನ್‌ಇನ್‌ಸ್ಟಾಲ್ ಮಾಡುತ್ತೇವೆ, ಬೇಕೆಂದಾಗ ಅಳವಡಿಸಿಕೊಳ್ಳುತ್ತೇವೆ. ಕಂಪ್ಯೂಟರಿನಲ್ಲಿ ವಿಭಿನ್ನ ತಂತ್ರಾಂಶಗಳನ್ನು ಅಳವಡಿಸಿಕೊಂಡು, ಅನ್‌ಇನ್‌ಸ್ಟಾಲ್ ಮಾಡಿದಾಗ ಕೆಲವೊಂದು ಜಂಕ್ ಫೈಲ್‌ಗಳು, ಕ್ಯಾಶ್ (Cache) ಫೈಲ್‌ಗಳೆಂಬ ತಾತ್ಕಾಲಿಕ ಫೈಲುಗಳು ಆಪರೇಟಿಂಗ್ ಸಿಸ್ಟಂ ಅಳವಡಿಸಲಾಗಿರುವ ಡ್ರೈವ್‌ನ ನಿರ್ದಿಷ್ಟ ಫೋಲ್ಡರ್‌ನಲ್ಲಿ (ಟೆಂಪರರಿ ಇಂಟರ್ನೆಟ್ ಫೈಲ್ಸ್) ಉಳಿದುಕೊಳ್ಳುತ್ತವೆ ಎಂಬುದು ಹೆಚ್ಚಿನವರಿಗೆ ಗೊತ್ತು. ಅದೇ ರೀತಿ, ನಮ್ಮ ಸ್ಮಾರ್ಟ್ ಫೋನ್ ಕೂಡ ಒಂದು ಪುಟ್ಟ ಕಂಪ್ಯೂಟರೇ ಆಗಿರುವುದರಿಂದ, ಇಲ್ಲಿಯೂ ಕ್ಯಾಶ್ ಫೈಲ್‌ಗಳು ಉಳಿದುಕೊಳ್ಳುತ್ತವೆ. ಹೆಚ್ಚು ಹೆಚ್ಚು ಇಂಟರ್ನೆಟ್ ಬಳಸಿದಷ್ಟೂ ಈ ಕ್ಯಾಶ್ ಫೈಲ್‌ಗಳ ಗಾತ್ರವೂ ಹೆಚ್ಚುತ್ತಾ ಹೋಗುತ್ತದೆ ಮತ್ತು ನಮ್ಮ ಸಿಸ್ಟಂನ ಕೆಲಸ ಕಾರ್ಯಗಳು ನಿಧಾನವಾಗತೊಡಗುತ್ತವೆ. ಇವುಗಳನ್ನು ನಿವಾರಿಸುವುದರಿಂದ ನಮ್ಮ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಫೋನ್‌ಗಳು ಹೆಚ್ಚು ವೇಗವಾಗಿ ಕೆಲಸ ಮಾಡುವಂತೆ ಮಾಡಬಹುದಾಗಿದೆ. ಇದು ಮಾಡುವುದೇನೂ ದೊಡ್ಡ ರಾಕೆಟ್ ಸೈನ್ಸ್ ಅಲ್ಲ. ನೀವು ಕೂಡ ಸುಲಭವಾಗಿ ಮಾಡಬಹುದು.

ಒಂದೊಂದೇ ಆ್ಯಪ್‌ಗಳನ್ನು ನೋಡಿ, ಅದರ ಮೂಲಕ ಶೇಖರಣೆಯಾಗಿರಬಹುದಾದ ಕ್ಯಾಶ್ ಫೈಲ್‌ಗಳನ್ನು ನಿವಾರಿಸಲು ಮುಂದೆ ವಿವರಿಸಿದಂತೆ ಮಾಡಿ.

ಸ್ಮಾರ್ಟ್‌ಫೋನ್‌ನಲ್ಲಿ Settings ತೆರೆಯಿರಿ. Apps ಎಂದಿರುವಲ್ಲಿ ನ್ಯಾವಿಗೇಟ್ ಮಾಡಿ. ನೀವು ತಾತ್ಕಾಲಿಕ ಫೈಲ್‌ಗಳನ್ನು ಅಳಿಸಬೇಕೆಂದುಕೊಂಡಿರುವ ಆ್ಯಪ್ ಅನ್ನು ಒಮ್ಮೆ ಒತ್ತಿ. ಕೆಲವು ಮಾದರಿಯ ಫೋನ್‌ಗಳಲ್ಲಿ (ಅಂದರೆ ಮಾರ್ಷ್‌ಮೆಲೋಗಿಂತ ಕೆಳಗಿನ ಆವೃತ್ತಿಯ) ಅಲ್ಲೇ ಕ್ಲಿಯರ್ ಕ್ಯಾಶ್ ಎಂಬ ಬಟನ್ ಕಾಣಿಸಿಕೊಂಡರೆ, ಹೊಸ ಆವೃತ್ತಿಯ ಫೋನುಗಳಲ್ಲಿ Storage ಎಂದು ಬರೆದಿರುವಲ್ಲಿ ಸ್ಪರ್ಶಿಸಿದ ಬಳಿಕ ಈ ಬಟನ್ ಕಾಣಿಸಿಕೊಳ್ಳುತ್ತದೆ. ‘ಕ್ಲಿಯರ್ ಕ್ಯಾಶ್’ ಒತ್ತಿದರೆ ಸಾಕಾಗುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಡೇಟಾಕ್ಕೇನೂ ಸಮಸ್ಯೆಯಾಗುವುದಿಲ್ಲ.

ಅಲ್ಲೇ ಪಕ್ಕದಲ್ಲಿ Clear Data ಎಂಬೊಂದು ಬಟನ್ ಕಾಣಿಸುತ್ತದೆ. ಅದರದ್ದೇನು ಕೆಲಸ ಎಂಬ ಕುತೂಹಲವೇ? ಆ್ಯಪ್‌ಗಳನ್ನು ನೀವು ಬಳಸುವಾಗ, ಅದಕ್ಕೆ ಲಾಗಿನ್ ಆಗಿರುತ್ತೀರಿ ಅಥವಾ ನಿಮಗೆ ಬೇಕಾದ ರೀತಿಯಲ್ಲಿ ಅದನ್ನು ಬಳಸುತ್ತಿರುತ್ತೀರಿ (ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ ಕಸ್ಟಮೈಸ್ ಮಾಡಿರುತ್ತೀರಿ). Clear Data ಎಂಬುದನ್ನು ಒತ್ತಿಬಿಟ್ಟರೆ, ನಿಮ್ಮ ಲಾಗಿನ್ ಮಾಹಿತಿ, ನೀವು ಆ ಆ್ಯಪ್‌ನ ಸೆಟ್ಟಿಂಗ್‌ಗೆ ಮಾಡಿರುವ ಮಾರ್ಪಾಡುಗಳು, ಆ್ಯಪ್‌ನಲ್ಲಿ ನಿಮ್ಮ ಸರ್ಚ್ ಹಿಸ್ಟರಿ, ಶಾಪಿಂಗ್ ಆ್ಯಪ್‌ಗಳಲ್ಲಿ ನೀವು ಹುಡುಕಾಡಿದ, ಖರೀದಿಸಿದ ಮಾಹಿತಿ… ಇತ್ಯಾದಿ ವಿಷಯಗಳೆಲ್ಲವೂ ಅಳಿಸಿಹೋಗುತ್ತವೆ. ಸರಳವಾಗಿ ಹೇಳಬೇಕಾದರೆ, ಹೊಸದಾಗಿ ಇನ್‌ಸ್ಟಾಲ್ ಮಾಡಿಕೊಂಡ (ಫ್ಯಾಕ್ಟರಿ ಡೀಫಾಲ್ಟ್) ರೂಪಕ್ಕೆ ಆ್ಯಪ್ ಮರಳುತ್ತದೆ.

ಉದಾಹರಣೆಗೆ, ಫೇಸ್‌ಬುಕ್ ಮೆಸೆಂಜರ್ ಆ್ಯಪ್‌ನಲ್ಲಿ ನೀವು ಲಾಗಿನ್ ಆದಾಗ, ನಿಮ್ಮ ಸ್ನೇಹಿತರ ವರ್ಗದಿಂದ ಸಂದೇಶಗಳು ಬರುತ್ತಿರುತ್ತವೆ. ಮೆಸೆಂಜರ್ ಕಿರಿಕಿರಿ ಸದ್ಯಕ್ಕೆ ಬೇಡ ಅಂದುಕೊಂಡರೆ, ಅದರಿಂದ ಲಾಗೌಟ್ ಆಗುವ ಮಾರ್ಗ ತೋಚುತ್ತಿಲ್ಲ. ಅನ್‌ಇನ್‌ಸ್ಟಾಲ್ ಮಾಡಿದರೆ, ಬೇಕಾದಾಗ ಪುನಃ ಆ್ಯಪ್ ಡೌನ್‌ಲೋಡ್ ಮಾಡಬೇಕಾಗುತ್ತದೆ. ಆ್ಯಪ್ ಇರಬೇಕು, ಆದರೆ ಲಾಗಿನ್ ಆಗಿರಬಾರದು ಎಂಬ ಭಾವನೆ ನಿಮ್ಮದಾಗಿರುತ್ತದೆ. ಇದಕ್ಕಾಗಿ ಏನು ಮಾಡಬಹುದು? ಮೇಲೆ ಹೇಳಿದಂತೆ ಆ್ಯಪ್ ಆಯ್ಕೆ ಮಾಡಿಕೊಂಡು, Clear Data ಒತ್ತಿದರೆ, ಲಾಗೌಟ್ ಆಗಿರುತ್ತೀರಿ. ಬೇಕಾದಾಗ ಮಾತ್ರ ಲಾಗಿನ್ ಆಗಬಹುದು.

ಇನ್ನು ಕೆಲವು ಕಂಪನಿಗಳು ತಯಾರಿಸಿದ ಫೋನ್‌ಗಳಲ್ಲಿ ಕೆಲವೊಂದು ಆ್ಯಪ್‌ಗಳು ಮೊದಲೇ ಇನ್‌ಸ್ಟಾಲ್ ಆಗಿ ಬರುತ್ತವೆ. ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಇಂಥ ಆ್ಯಪ್‌ಗಳು ನಿಜಕ್ಕೂ ನಿಮ್ಮ ಕೆಲಸಕ್ಕೆ ಬಾರದವು ಅಂತ ನೀವಂದುಕೊಂಡರೆ, ಏನು ಮಾಡಬಹುದು ಗೊತ್ತೇ? ಮೇಲೆ ಹೇಳಿರುವಂತೆಯೇ Settings ನಲ್ಲಿ Apps ಎಂಬಲ್ಲಿಗೆ ಹೋಗಿ, ಬೇಡವೆನಿಸುವ ಆ್ಯಪ್ ಹುಡುಕಿ, ಕ್ಲಿಕ್ ಮಾಡಿ. ನಂತರ Disable ಎಂಬ ಬಟನ್ ಒತ್ತಿಬಿಡಿ. ಅದು ಅದರ ಮೂಲ (ಡೀಫಾಲ್ಟ್) ರೂಪಕ್ಕೆ ಮರಳುತ್ತದೆ ಮತ್ತು ಪದೇ ಪದೇ ಅಪ್‌ಡೇಟ್ ಕೇಳುವುದೂ ನಿಂತು ಹೋಗುತ್ತದೆ. ಡಿಸೇಬಲ್ ಮಾಡದಿದ್ದರೆ, ಆ್ಯಪ್ ಬಳಸದಿದ್ದರೂ, ಅದರ ಅಪ್‌ಡೇಟೆಡ್ ಆವೃತ್ತಿ ಬಂದಾಗ ಅನಗತ್ಯವಾಗಿ ಡೌನ್‌ಲೋಡ್ ಆಗುತ್ತಾ ಇರುತ್ತದೆ ಮತ್ತು ಡೇಟಾ (ಇಂಟರ್ನೆಟ್) ಶುಲ್ಕ ಅನಗತ್ಯ ವ್ಯಯವಾಗುತ್ತದೆ. ಇದರ ತಡೆಗೂ ಈ ಬಟನ್ ಉಪಕಾರಿ.

ಟೆಕ್ ಟಾನಿಕ್: ಸೆಟ್ಟಿಂಗ್‌ಗೆ ಸುಲಭವಾಗಿ ಹೋಗಲು
ಇತ್ತೀಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೋಟಿಫಿಕೇಶನ್ ಡ್ರಾಯರ್ (ಅಂದರೆ ಫೋನ್ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಟಚ್ ಮಾಡಿ ಕೆಳಗೆ ಎಳೆದಾಗ ನೋಟಿಫಿಕೇಶನ್ ಕಾಣಿಸುವ ವ್ಯವಸ್ಥೆ) ನೋಡುವ ಬಗ್ಗೆ ಹಲವರಿಗೆ ಸಂದೇಹವಿದೆ. ಫೋನ್‌ನ ಸೆಟ್ಟಿಂಗ್ಸ್ ಎಂಬ ಆ್ಯಪ್‌ಗೆ ಹೋಗಲು ಎರಡೆರಡು ಬಾರಿ ಬೆರಳಿನಿಂದ ಕೆಳಗೆ ಎಳೆಯಬೇಕಾಗುತ್ತದೆ ಎಂಬುದು ಹಲವರ ದೂರಾಗಿತ್ತು. ಒಂದು ಸಲ ಎಳೆದರೆ ನೋಟಿಫಿಕೇಶನ್‌ಗಳು ಮಾತ್ರ ಕಾಣಿಸುತ್ತವೆ, ಎರಡನೇ ಸಲ ಎಳೆದರೆ ಮಾತ್ರವೇ ಸೆಟ್ಟಿಂಗ್ಸ್ ಹಾಗೂ ಇತರ ಶಾರ್ಟ್‌ಕಟ್‌ಗಳು ಗೋಚರಿಸುತ್ತವೆ. ನೇರವಾಗಿ ಒಮ್ಮೆಲೇ ಈ ಶಾರ್ಟ್‌ಕಟ್ ಇರುವಲ್ಲಿಗೆ ಹೋಗಬೇಕಿದ್ದರೆ, ಎರಡು ಬೆರಳುಗಳನ್ನು ಸ್ಕ್ರೀನ್ ಮೇಲೆ ಸ್ಪರ್ಶಿಸುತ್ತಾ ನೋಟಿಫಿಕೇಶನ್ ಏರಿಯಾದಿಂದ ಕೆಳಗೆ ಎಳೆದುಬಿಡಿ. ನೇರವಾಗಿ ಶಾರ್ಟ್‌ಕಟ್‌ಗಳಿರುವ ಮೆನು ಗೋಚರಿಸುತ್ತದೆ.

@

One thought on “ಉಪಯುಕ್ತ ಮಾಹಿತಿಗಳು

  1. Pingback: ಶಿಕ್ಷಕರ_ನೇಮಕಾತಿ_ಪಠ್ಯಕ್ರಮ | ಎಸ್.ಪಿ Live ನ್ಯೂಸ್

Leave a comment