ಆರೋಗ್ಯ ಮಾಹಿತಿ

ನೀರು ಮತ್ತು ಆರೋಗ್ಯ:
124 ರೋಗಗಳನ್ನು ತಡೆಯಲು 4 ಸರಳ ನಿಯಮಗಳು, ಇವುಗಳನ್ನು ಪಾಲೋ ಮಾಡಿದರೆ ಆಸ್ಪತ್ರೆಯ ಮೆಟ್ಟಿಲು ಹತ್ತಬೇಕಾಗಿಲ್ಲ…!

‘ಆರೋಗ್ಯವೇ ಮಹಾಭಾಗ್ಯ’ ಎಂಬ ಮಾತು ಅಕ್ಷರಶಃ ಸತ್ಯ… ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗೆಗಿನ ಅರಿವು ಹೆಚ್ಚಾಗುತ್ತಿದೆ. ಆರೋಗ್ಯವಾಗಿರುವುದಕ್ಕೆ ಬೇಕಾದ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಿಮಗೆ ತಿಳಿಯದ ವಿಷಯವೇನೆಂದರೆ… ಈಗ ಹೇಳುವ 4 ನಿಯಮಗಳನ್ನು ಆಚರಿಸಿದರೆ ಸಾಕು ಸುಮಾರು 124 ರೋಗಗಳನ್ನು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು. ಈ 4 ನಿಯಮಗಳು ನಾವು ಕುಡಿಯುವ ನೀರಿಗೆ ಸಂಬಂಧಿಸಿದಂತಹವುಗಳು ಆಗಿರುದೇ ವಿಶೇಷ…! ಅವನ್ನು ಒಮ್ಮೆ ನೋಡೋಣ ಬನ್ನಿ…..
ತಿನ್ನುವುದಕ್ಕೆ 40 ನಿಮಿಷಗಳ ಮುಂಚೆ, ತಿಂದ ನಂತರ 1 ಗಂಟೆಯವರೆಗೂ ನೀರು ಕುಡಿಯಬೇಡಿ:
ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್…. ಯಾವುದಾದರೂ ಆಹಾರವನ್ನು ತಿಂದ ನಂತರ 1 ಗಂಟೆಯ ಕಾಲ ನೀರು ಕುಡಿಯಬೇಡಿ, ಏಕೆಂದರೆ ನಾವು ತಿಂದ ಆಹಾರ ಹೊಟ್ಟೆಯಲ್ಲಿನ ಅನ್ನನಾಳದ ಒಳಗೆ ಹೊಗುತ್ತದೆ. ಅಲ್ಲಿ ಹೈಡ್ರೋಕ್ಲೋರಿಕ್ ಯಾಸಿಡ್ ಸೂಕ್ಷ್ಮ ಕ್ರಿಮಿಗಳನ್ನು ಸಾಯಿಸಿ, ಸ್ವಲ್ಪ ಆಹಾರವನ್ನು ಯಾಂತ್ರಿಕವಾಗಿ ಚೂರು ಮಾಡುತ್ತದೆ. ಕಡಿಮೆ PH ಮೌಲ್ಯವಿರುವ ಹೈಡ್ರೋಕ್ಲೋರಿಕ್ ಯಾಸಿಡ್, ಕಿಣ್ವಗಳಿಗೆ ಉಪಯೋಗವಾಗಿ ಆಹಾರ ಜೀರ್ಣವಾಗುವುದರಿಂದ ಶಕ್ತಿ ಬಿಡುಗಡೆಯಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಆಹಾರ ತಿಂದ ತಕ್ಷಣ ನೀರು ಕುಡಿದರೆ ಜೀರ್ಣ ವ್ಯವಸ್ಥೆ ನಿಧಾನವಾಗುತ್ತದೆ. ನೀರು ಹೆಚ್ಚಾಗಿ ಸೇರುವುದರಿಂದ ಹೈಡ್ರಾಲಿಕ್ ಯಾಸಿಡ್, ಹೈಡ್ರೋಕ್ಲೋರಿಕ್ ಯಾಸಿಡ್’ಗಳು ಡೈಲ್ಯೂಟ್ ಆಗುತ್ತವೆ. ಆದ್ದರಿಂದ ವ್ಯರ್ಥ ಪದಾರ್ಥಗಳು ಹಾಗೆಯೇ ಉಳಿಯುತ್ತವೆ. ಇವು ಅನೇಕ ರೋಗಗಳಿಗೆ ಕಾರಣವಾಗುತ್ತವೆ. ಹಾಗಾಗಿ ತಿನ್ನುವುದಕ್ಕೆ 20 ನಿಮಿಷಗಳ ಮುಂಚೆ, ತಿಂದ 1 ಗಂಟೆಯ ವರೆಗೂ ನೀರು ಕುಡಿಯಬೇಡಿ.
ನೀರನ್ನು ಯಾವಾಗಲೂ ಗಟಗಟ ಎಂದು ಅತುರಾತುರಾವಾಗಿ ಕುಡಿಯಬೇಡಿ:
ನೀರನ್ನು ಒಂದೇಸಾರಿ ಗಟಗಟ ಎಂದು ಕುಡಿಯದೇ.. ಟೀ, ಕಾಫೀ ಕುಡಿದಂತೆ ಸಿಫ್ ಮಾಡುತ್ತಾ ಕುಡಿಯಬೇಕು. ಹೀಗೆ ಮಾಡುವುದರಿಂದ ಪ್ರತಿ ಸಾರಿ ನೀರು ಬಾಯಿಯಲ್ಲಿ ಉತ್ಪತ್ತಿಯಾದ ಲಾಲಾರಸ ಸ್ವಲ್ಪ ಪ್ರಮಾಣದಲ್ಲಿ ಶರೀರದಲ್ಲಿ ಹೋಗುತ್ತದೆ. ಆದ್ದರಿಂದ ಸಮಸ್ಯೆ ಇರುವುದಿಲ್ಲ. ಹಾಗಲ್ಲದೆ ನೀರನ್ನು ಗಟಗಟ ಕುಡಿದರೆ… ಅದರ ಮೇಲೆ ಶರೀರದ ಹೈಡ್ರೋಕ್ಲೋರಿಕ್ ಯಾಸಿಡ್ ಅಧಿಕ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಸಂಧರ್ಭದಲ್ಲಿ ಅಧಿಕ ಎಸಿಡಿಟಿ ಉಂಟಾಗುತ್ತದೆ. ಇದು ರಕ್ತದ ಮೇಲೆ ಪರಿಣಾಮ ಬೀರುತ್ತದೆ. ಇದರ ಮೂಲಕ ಅನೇಕ ರೋಗಗಳು ಬರುವ ಸಾಧ್ಯತೆಗಳಿವೆ. ಅದಕ್ಕೆ ನೀರನ್ನು ಯವಾಗಲೂ ಗಟಗಟ ಕುಡಿಯಬೇಡಿ.
ಕೂಲ್ ವಾಟರ್, ಐಸ್ ವಾಟರ್ ಕುಡಿಯಬೇಡಿ:
ಹೆಚ್ಚು ಕೂಲ್ ಆಗಿರುವ ನೀರನ್ನು ಕುಡಿಯಬೇಡಿ ಇದು ಬಹಳ ಅಪಾಯಕಾರಿ ಏಕೆಂದರೆ ಶರೀರದಲ್ಲಿ ಪ್ರತಿ ಸಮಯದಲ್ಲೂ ಒಂದು ಕ್ರಿಯೆ ನಡೆದು ದೇಹವೆಲ್ಲವೂ ಬಿಸಿಯಾಗಿರುತ್ತದೆ. ಈ ಸಮಯದಲ್ಲಿ ಕೂಲ್ ವಾಟರ್ ಕುಡಿದರೆ ಎರಡು ವಿರುದ್ದವಾಗಿ ಟೆಂಪರೇಚರ್ ದೇಹದ ಮೇಲೆ ಪರಿಣಾಮ ಬೀರುತ್ತದೆ. ಕುಡಿಯಲೇ ಬೇಕೆಂದಿದ್ದರೆ ಮಡಿಕೆಯಲ್ಲಿನ ನೀರು ಕುಡಿದರೆ ಒಳ್ಳೆಯದು. ಅಷ್ಟೆ ಆಗಲಿ ಐಸ್ ವಾಟರ್ ಕುಡಿಯಬೇಡಿ.
ನಿದ್ದೆಯಿಂದ ಎದ್ದ ತಕ್ಷಣ 2-3 ಗ್ಲಾಸ್ ನೀರನ್ನು ಕುಡಿಯಬೇಕು:
ಈಗೀಗ ಈ ಸೂತ್ರವನ್ನು ಬಹಳ ಜನರು ಆಚರಿಸುತ್ತಿದ್ದಾರೆ. ನಿದ್ದೆ ಮಾಡುವುದರಿಂದ ಒಂದು ಮೂರು ಲೋಟ ನೀರು ಕುಡಿಯಬೇಕು. ಆ ನೀರು ಶರೀರದಲ್ಲಿ ಸೇರಿಕೊಂಡಿರುವ ವ್ಯರ್ಥವನ್ನು ಮಲವಿಸರ್ಜನೆ ರೂಪದಲ್ಲಿ ಹೊರ ಹಾಕುತ್ತದೆ. 3 ನಿಮಿಷಗಳಲ್ಲಿ ನಂಬರ್ -2 ಕೆಲಸ ಪೂರ್ತಿಯಾಗುವಂತೆ ಮಾಡುತ್ತದೆ. ಒಂದೇ ಸಾರಿ ಶರೀರದ ವ್ಯರ್ಥಪದಾರ್ಥಗಳನ್ನು ವಿಸರ್ಜಿಸುವವರಿಗೆ ರೋಗಬರುವ ಅವಕಾಶ ಬಹಳ ಕಡಿಮೆಯಾಗಿರುತ್ತದೆ.
ಇವು ನೀರಿನೊಂದಿಗೆ ಇರುವ 4 ಸೂತ್ರಗಳನ್ನು ತಪ್ಪದೇ ಕ್ರಮವಾಗಿ ಆಚರಿಸಿದರೇ ಆರೋಗ್ಯ ರಕ್ಷಣೆಯಾಗುತ್ತದೆ.

ಕೆಲವು ಜನಪ್ರಿಯ ಒಗಟುಗಳು

.ಜನಪ್ರಿಯ ಒಗಟುಗಳು೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ

ನೋಡುತ್ತದೆ- ಕಣ್ಣು

೨. ಕಾಸಿನ ಕುದುರೆಗೆ ಬಾಲದ ಲಗಾಮು-

ಸೂಜಿ ದಾರ

೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ

ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ

ಹಸಿರಾಗಿದೆ- ಗಿಳಿ

೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ ,

ಮುಚ್ಚಿದರೆ ಹಾನಿ ಇದೇನು?- ಮೂಗು , ಬಾಯಿ

೫. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ

ನೋಡಿದರೂ ಬಾಗಿಲಿಲ್ಲ ಇದು ಏನು?-

ಮೊಟ್ಟೆ

೬. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ

ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ

ಮಾತಾಡುವುದು ಇದು ಏನು? ಕೋಳಿ

೭. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ,

ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ

ನಾನ್ಯಾರು?- ರೈಲು

೮. ಊಟಕ್ಕೆ ಕುಳಿತವರು ಹನ್ನೆರಡು ಜನರು,

ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ

ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು

ಜನಕ್ಕೂ ಬಡಿಸಿರುತ್ತಾನೆ- ಗಡಿಯಾರ

೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ,

ಹೇಳದಿದ್ದರೆ ನಿಮ್ಮ ದೇವರಾಣಿ- ಕಲ್ಲಂಗಡಿ

ಹಣ್ಣು

೧೦. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ

ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು

ಬಾರೋ ಹಾಗಿಲ್ಲ- ತೆಂಗು

೧೨. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ

ಮುಟ್ಟೋಕೆ ಸಿಗೋಲ್ಲ- ನೀರು

೧೩.ಒಂದು ರುಮಾಲು ನಮ್ಮಪ್ಪನೂ

ಸುತ್ತಲಾರ.- ದಾರಿ

೧೪. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ

ತಂತು.- ಯುಗಾದಿ

೧೫. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ

ಹಾಕಿರುತ್ತೆ .- ಬದನೆಕಾಯಿ.

೧೬. ಸಾಗರ ಪುತ್ರ ,ಸಾರಿನ ಮಿತ್ರ.- ಉಪ್ಪು

೧೭. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ

ನೀರಿಗಿಳಿತವೆ.- ಅಕ್ಕಿ

೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು

ಅರಳುವುದು.- ನವಿಲು.

೧೯. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ

ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.- ನದಿ

೨೦. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ

ಮರಿಗಳು.- ಕೋಳಿ

೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.-

ಮೂಗುಬೊಟ್ಟು

೨೨. ಹೊಂಚು ಹಾಕಿದ ದೆವ್ವ, ಬೇಡ ಬೇಡ

ಎಂದರೂ ಜೂತೆಯೇ ಬರುತ್ತೆ.- ನೆರಳು

೨೩. ಮರನು ಮರನೇರಿ ಮತ್ತೆ ಮರನೇರಿ

ಬಸವನಾ ಕತ್ತೇರಿ ತಿರುಗುತ್ತಿದೆ- ಗಾಣ

೨೪. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು

ನೂರಾಗಿ- ಶ್ಯಾವಿಗೆ

೨೫. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು

ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು

ಸಿಕ್ಕಿತು- ತೆಂಗಿನಕಾಯಿ

೨೬. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ

ಕುಯ್ಯೋ, ಮರ್ರೋ ಅಂತವಳೇ- ತಂಬೂರಿ

೨೭. ಹಾರಿದರೆ ಹನುಮಂತ, ಕೂತರೆ ಮುನಿ,

ಕೂಗಿದರೆ ಕಾಡಿನ ಒಡೆಯ- ಕಪ್ಪೆ

೨೮. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ

ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪ

ೊರಕೆ

೨೯. ಗಿಡ ಕೊಡಲಾರದು, ಮರ ಬೆಳೆಸಲಾರದು

ಅದಿಲ್ಲದೆ ಊಟ ಸೇರಲಾರದು- ಉಪ್ಪು

೩೦. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ,

ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?- ನಕ್ಷೆ

೩೧. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು

ಗೊತ್ತಾಗುತ್ತದೆ.- ಅನ್ನದ ಅಗುಳು.

೩೨. ಮೇಲೆ ನೋಡಿದರೆ ನಾನಾ ಬಣ್ಣ,

ಉಜ್ಜಿದರೆ ಒಂದೇ ಬಣ್ಣ.- ಸಾಬೂನು.

೩೩. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ

ಮುಳ್ಳು.- ಬದನೆಕಾಯಿ.

೩೪. ನಾನು ತುಳಿದೆ ಅದನ್ನ, ಅದು ತುಳಿಯೆತು

ನನ್ನನ್ನ.- ನೀರು

೩೫. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು

ಇಲ್ಲ ,ನೀರು ಇಲ್ಲ.- ಎಣ್ಣೆ ದೀಪ.

೩೬. ಬಡ ಬಡ ಬಂದ ಅಂಗಿ ಕಳಚಿದ

,ಬಾವಿಯೊಳಗೆ ಬಿದ್ದ.- ಬಾಳೆ ಹಣ್ಣು .

೩೭. ನೋಡಿದರೆ ನೋಟಗಳು ,ನಕ್ಕರೆ ನಗುಗಳು

,ಒಡೆದರೆ ತುಂಡುಗಳು.- ಕನ್ನಡಿ

೩೮. ಅಕ್ಕ ಪಕ್ಕ ಚದುರಂಗ ,ಅದರ ಹೂವು

ಪದುರಂಗ ಅದರ ಹೆಸರು ಅಯ್ಯಯ್ಯಪ್ಪ

.ಇದು ಏನು?- ದತ್ತುರಿಯ ಮುಳ್ಳು.

೩೯. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು

,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-

ಕಮಲ.

೪೦. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ

ಹಾಕುತ್ತಾನೆ.- ಗಿರಣಿ

೪೧. ಸಾವಿರ ತರುತ್ತೆ ಲಕ್ಷ ತರುತ್ತೆ

ನೀರಿನಲ್ಲಿ ಹಾಕಿದರೆ ಸಾಯುತ್ತೆ.- ದುಡ್ಡು.

೪೨. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ,

ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.- ಸಗಣಿ.

೪೩. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ

ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ

ದಾಗಿನ ಅಲ್ಲ.- ಗರಗಸ.

೪೪. ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ

ಬಚ್ಚಲ ಪಾಲು ಆಗುತ್ತೆ.- ಹಲ್ಲುಪುಡಿ.

೪೫. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ

ಕುಂತವಳೇ ಚಂಪರಾಣಿ.- ಗಡಿಗೆಮಜ್ಜಿಗೆ.

೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ,

ಒಬ್ಬ ಇಳಿಯುತ್ತಾನೆ .-ರೊಟ್ಟಿ , ದೋಸೆ

೪೭. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು,

ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ- ಬೆಂಕಿ,

ಸುಣ್ಣ ಹಚ್ಚಿದ ಹಂಚು , ಹೊಗೆ , ರೊಟ್ಟಿ

೪೮. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ

ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು

ಓಡ್ಯಾಡುತಾರೆ.- ಕಣ್ಣು.

೪೯. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ

ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.- ಬೆಣ್ಣೆ

ಉಂಡೆ.

೫೦.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ

ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.- ಅಂಗಿ .

೫೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-

ಮಲ್ಲಿಗೆ

೫೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು

ಉಪ್ಪಿನಕಾಯಿ- ಆಕಾಶ , ನಕ್ಷತ್ರ

೫೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲ

೫೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ-

ಹಲಸಿನ ಹಣ್ಣು , ಬೀಜ

೫೫. ಅಂಗೈ ಕೊಟ್ಟರೆ ಮುಂಗೈನೂ

ನುಂಗುತ್ತದೆ- ಬಳೆ

೫೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ

೫೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ-

ಹುಣಸೇಹಣ್ಣು

೫೮. ನೀಲಿ ಕೆರೆಯಲಿ ಬಿಳಿ ಮೀನು- ನಕ್ಷತ್ರ

೫೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ,

ಒಂದು ಕರಗುತ್ತೆ.- ವಾರ,ತಿಂಗಳು,ವರ್ಷ

೬೦. ಬಾ ಅಂದರೆ ಬರೋಲ್ಲ , ಹೋಗು ಅಂದರೆ

ಹೋಗೋಲ್ಲ- ಮಳೆ

೬೧. ನಾ ಇರುವಾಗ ಬರುತ್ತೆ , ನಾ ಹೋದ

ಮೇಲೂ ಇರುತ್ತೆ- ಕೀರ್ತಿ

೬೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-

ಕಣ್ಣು

೬೩ ಅಕ್ಕನ ಮೇಲೆ ಛತ್ರಿ- ರೆಪ್ಪೆ

೬೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ

ಒಂದೇ ಕಣ್ಣು- ತೆಂಗಿನ ಕಾಯಿ

೬೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-

ಕಣ್ಣು

೬೬.ಅಮ್ಮನ ಆಕಾಶವಾಣಿ ನಾನು- ಮಗು

೬೭. ಅಂಗಡಿಯಿಂದ ತರೋದು

ಮುಂದಿಟ್ಟುಕೊಂಡು ಅಳೋದು-ಈರುಳ್ಳಿ

೬೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು

ನುಂಗಣ್ಣ- ಬಾಳೆಹಣ್ಣು

೬೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ

ನೋಡುತ್ತೆ-ಕಣ್ಣು

೭೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ,

ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ

೭೧. ನೀನಿಲ್ಲದೆ ಊಟವಿಲ್ಲ- ಉಪ್ಪು

೭೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ

೭೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ –

ಸೂಜಿ

೭೪. ಮೂರು ಕಾಸಿನ ಕುದುರೆಗೆ ಮುನ್ನೂರು

ರೂಪಾಯಿನ ಹಗ್ಗ- ಹೇನು ಕೂದಲು

೭೫. ಕೆಂಪು ಕುದುರೆಗೆ ಲಗಾಮು, ಓಬ್ಬ

ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-

ಬೆಂಕಿ,ಬಾಣಲೆ , ದೋಸೆ

೭೬ . ಒಂದು ಮನೆಗೆ ಒಂದೇ ತೊಲೆ- ತಲೆ

೭೭. ಕಂದ ಬಂದ ಕೊಂದ ತಂದ-ಶ್ರೀ ರಾಮ

ಚಂದ್ರ

೭೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ

ಮರುಭೂಮಿ- ಭೂಪಟ

೭೯. ಚಿಕ್ಕಕ್ಕನಿಗೆ ಪುಕ್ಕುದ್ದ- ಸೌಟು

೮೦. ಎರಡು ಮನೆಗೆ ಒಂದೇ ದೂಲ- ಮೂಗು

೮೧. ನೀರಿರೋತಾವ ನಿಲ್ಲಲೇ ಕೋಣ- ಚಪ್ಪಲಿ

೮೨. ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ-

ನೆರಳು

೮೩. ಮರದೊಳಗೆ ಮರ ಹುಟ್ಟಿ ಮರ ಚಕ್ರ

ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ-

ಮನುಷ್ಯನ ಹುಟ್ಟು ಮಗು

೮೪. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ,

ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು

ಹೇಳಿ -ಸುಣ್ಣ

೮೫. ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ

ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ –

ದೀಪ

೮೬. ಹೋಗುತ್ತಾ, ಬರುತ್ತಾ ಇರುವುದು

ಎರಡು,ಹೋದ ಮೇಲೆ ಬರಲಾರವು ಎರಡು-

ಸಿರಿತನ-ಬಡತನ , ಪ್ರಾಣ -ಬಡತನ

೮೭. ಒಂದು ಹಸ್ತಕ್ಕೆ ನೂರೆಂಟು ಬೆರಳು-

ಬಾಳೆಗೊನೆ

೮೮. ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ –

ಜರಡಿ

೮೯. ಎಂದರೆ ತೆರಿತಾವ, ಅಪ್ಪ ಎಂದರೆ

ಮುಚ್ಚುತಾವ- ಬಾಯಿ

೯೦. ದಾಸ್ ಬುರುಡೆ ದೌಲಥ ಬುರುಡೆ,

ಲೋಕಕ್ಕೆಲ್ಲ ಎರಡೇ ಬುರುಡೆ- ಸೂರ್ಯ ,

ಚಂದ್ರ

೯೧. ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ

ವ್ಯಾಪಾರಕ್ಕೆ ಮಗಳು ಮದುವೆಗೆ – ಅಡಿಕೆ ಮರ

೯೨.ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ

ಮೂರಿರುವುದು ಕಾಮನಬಿಲ್ಲಲ್ಲ- ಧ್ವಜ

೯೩. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು

ನಾನ್ಯಾರು?- ತಾರೆಗಳು

೯೪. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು

,ಇದು ಏನು?- ಛತ್ರಿ

೯೫. ಆರು ಕಾಲು ಅಂಕಣ್ಣ ಮೂರು ಕಾಲು

ದೊಂಕಣ್ಣ ಸದಾ ಮೀಸೆ ತಿರುವಣ್ಣ- ನೊಣ

೯೬. ಒಂಟಿಕಾಲಿನ ಕುಂಟ. ನಾನ್ಯಾರು?- ಬುಗರಿ

೯೭. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ

ಮಾಡೋಕೆ ಹೊಂಟ- ಇಲಿ

೯೮. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು

ಹಾಕಿದರೆ ಕೆಡುತ್ತೇ- ಕಳ್ಳಿ

೯೯. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ

ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-

ಶ್ರೀಗಂಧ

೧೦೦. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ

ಕೋಟೆ ಈ ಕೋಟೆಯೊಳಗೆ ಕಪ್ಪು

ಸಿಪಾಯಿಗಳು- ಪರಂಗಿ ಹಣ್ಣು

೧೦೧.ಒಂದು ಮನೆಯಲ್ಲಿ ಮೂರು ಜನ ಅಕ್ಕ-

ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ

ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ

೧೦೨. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ

ಮುಕ್ಕ ನೀರಿಲ್ಲ- ಕಿವಿ

೧೦೩. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ

ಒಬ್ಬ ಇಳಿತಾನೆ-ರೊಟ್ಟಿ

೧೦೪. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ

ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ

೧೦೫. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ

ರಾಣಿ- ಬಾಳೆಲೆ

೧೦೬. ಎರಡು ಬಾವಿಗಳ ನಡುವೆಯೊಂದು

ಸೇತುವೆ- ಮೂಗು

೧೦೭. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು

ಬೆರಳಿಲ್ಲ-ಕೋಟು ಅಂಗಿ

೧೦೮. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ

ಸಾವು -ವಿಷ

೧೦೯ . ಒಬ್ಬಳು ಮುಲುಗಿದಳು, ಒಬ್ಬಳು

ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ

೧೧೦.ಹೋಗೋದು ಮುಳುಗೋದು ತರೋದು

ಏನು?- ಬಿಂದಿಗೆ

೧೧೧. ಕಿರೀಟ ಇದೆ ರಾಜ ಅಲ್ಲ, ಕಲ

ತಿಳಿಸುತ್ತ್ತೆ ಗಡಿಯಾರವಲ್ಲ- ಕೋಳಿ

೧೧೨. ಒಂದು ಹಣ್ಣಿಗೆ ಹನ್ನೆರಡು ತೊಳೆ

ಮತ್ತೂ ಮೂವತ್ತು ಬೀಜ- ವರ್ಷ

೧೧೩. ಗುಂಡಾಕಾರ ಮೈಯೆಲ್ಲಾ ತೂತು- ದೋಸೆ

೧೧೪.ಬಂಗಾರದ ಗುಬ್ಬಿ ಬಾಲದಲ್ಲೇ

ನೀರನ್ನು ಕುಡಿಯುತ್ತೆ- ಚಿಮಿಣಿ

೧೧೫. ಒಂದು ಮರ , ಮರದಾಗ ಅಲ್ಲ,

ಅಲ್ಲಿನಾಗ ಕೊಬ್ರಿ ಗುಂಡ- ಆಕಾಶ ನಕ್ಷತ್ರ

ಚಂದ್ರ

೧೧೬. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ

ಯಾವುದು- ಏಲಕ್ಕಿ

೧೧೭. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-

ತಾರೆ

೧೧೮. ಲಟಪಟ ಲೇಡಿಗೆ ಒಂದೇ ಕಣ್ಣು- ಸೂಜಿ

೧೧೯. ಹಸಿರು ಕೋಲಿಗೆ ಮುತ್ತಿನ ತುರಾಯಿ-

ಜೋಳದ ತೆನೆ

೧೨೦. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ- ನಾಲಿಗೆ

೧೨೧. ಸೂಜಿ ಸಣ್ಣಕಾಗೆ ಬಣ್ಣ – ಕೂದಲು

೧೨೨. ಹೋದರು ಇರುತ್ತೆ ಬಂದರೂ

ಕಾಡುತ್ತೆ.ಇದು ಏನು?- ನೆನಪು

೧೨೩. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು

ಕುಡಿಯಲ್ಲ- ನುಸಿ

೧೨೪. ಊರಿಗೆಲ್ಲ ಒಂದೇ ಕಂಬಳಿ- ಆಕಾಶ

೧೨೫. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ- ಕುಂಕುಮ

೧೨೬. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-

ಬೈತಲೆ

೧೨೭. ಒಂದು ಬತ್ತಿ ಮನೆಯೆಲ್ಲ ಬೆಳಕು- ಸೂರ್ಯ

೧೨೮.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ

-ಗಾಳಿ

೧೨೯. ಕಣ್ಣಿಗೆ ಹತ್ತಿರ ಕಾಲಿಗೆ ದೂರ- ಬೆಟ್ಟ

೧೩೦. ಊಟಕ್ಕೆ ಮೊದಲು ನಾನು ಅಂತ ಬರುತ್ತೆ

-ಬಾಳೆ ಎಲೆ , ತಟ್ಟೆ

೧೩೧. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು

ಎಲ್ಲರನ್ನು ಕರೆಯುತ್ತೆ- ಮಾವು

೧೩೨. ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-

ಬೆಕ್ಕು

೧೩೩. ಕೂಗಿದರೆ ರಾವಣ, ಹಾರಿದರೆ ಹನುಮಂತ,

ಕೂತರೆ ಮುನಿ- ಕಪ್ಪೆ

೧೩೪. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ

ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು-

ಸುಣ್ಣ

೧೩೫. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ

ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ

ಪಕ್ಷಿಗೆ ಮರಣ- ದೀಪ

೧೩೬. ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ,

ನೀರು ಕಂಡ್ರೆ ನಿಲ್ಲುತ್ತೆ- ಚಪ್ಪಲಿ

೧೩೭. ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ

ನುಡಿಯುವುದು, ಮೇಲು ಕೆಳಗಾಗಿ ಓದುವುದು- ನದಿ

೧೩೮. ಜಂಬು ನೇರಳೆ ಮರ, ಎಳೆದರೆ ನಾಲ್ಕು

ಬಾವಿ ನೀರು ಒಂದೇ ಆಗುತ್ತದೆ- ಮೇಡು

೧೩೯. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ

ತೆರೆದರೆ ಮೂಗು ಮುಚ್ಚುತ್ತಿ-ಆಕಾಶ

೧೪೦. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ,

ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ

ಇಡುತ್ತದೆ- ಜೋಳದ ದಂಟು

೧೪೧. ಎತ್ತ ಹೋದರು ಕುತ್ತಿಗೆಗೆ ಕೈ

ಹಾಕುತ್ತಾರೆ! ನಾನ್ಯಾರು?- ಸಾಲಿಗ್ರಾಮ

೧೪೨. ಕರಿ ಹುಡುಗನಿಗೆ ಬಿಳಿ ಟೋಪಿ – ಹೆಂಡದ

ಮಡಿಕೆ

೧೪೩. ಬಿಳಿ ಆಕಾಶದಲ್ಲಿ ಕಪ್ಪು

ನಕ್ಷತ್ರಗಳು,ಇದನ್ನು ನೋಡಲು ಜನ

ಕಾದಿಹರು-ನಾಣ್ಯ

೧೪೪. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ

ಇಲ್ಲಪ್ಪ.- ತಿಗಣೆ

೧೪೫. ಕುದುರೆ ಬಾಲದಿಂದ ನೀರು

ಕುಡಿಯುತ್ತದೆ- ಹೇನು

೧೪೬. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು

ಪ್ರಜೆಗಳು.- ಸೀತ ಫಲ

೧೪೭. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-

ಕಣ್ಣು

೧೪೮. ಮನೆ ಮೇಲೆ ಮಲ್ಲಿಗೆ ಹೂವು.- ಮಂಜು

೧೪೯. ಹಾರಿದರೆ ಹನುಮಂತ ಕೂಗಿದರೆ ಶಂಖ.-

ಕಪ್ಪೆ

೧೫೦. ನೋಡಿದರೆ ಕಲ್ಲು ನೀರು ಹಾಕಿದರೆ

ಮಣ್ಣು.- ಸುಣ್ಣ

೧೫೧.ಸುದ್ದಿ ಸೂರಪ್ಪ ದೇಶವೆಲ್ಲಾ

ಸುತ್ತಾಡ್ತಾನೆ.- ಪೋಸ್ಟ್ ಕಾರ್ಡ್

೧೫೨. ಬಿಳಿ ಕುದುರೆಗೆ ಹಸಿರು ಬಾಲ.- ಮೂಲಂಗಿ

೧೫೩. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-

ಕುಂಕುಮ

೧೫೪. ಬರೋದ ಕಂಡು ಕೈ ಒಡ್ತಾರೆ.- ಬಸ್

೧೫೫. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ

ಮೇಲೆ ಜುಟ್ಟು-ಹುಂಜ

೧೫೬. ಹಸಿರು ಮುಖಕ್ಕೆ ವಿಪರೀತ ಕೋಪ ,

ಕೋಪ ಮಾಡಿಕೊಳ್ಳದೆ ನಾನ್ಯಾರೆಂದು

ಹೇಳಿ?- ಮೆಣಸಿನಕಾಯಿ

೧೫೭. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು

ಈಗ ಹೇಳಿ ನಾನ್ಯಾರು- ಬೆಳ್ಳುಳ್ಳಿ

೧೫೮. ಹಗಲಲ್ಲಿ ಮಾಯಾ ರಾತ್ರಿಯಲ್ಲಿ

ಪ್ರತ್ಯಕ್ಷ ?ನಾನ್ಯಾರು ಹೇಳಿ?- ನಕ್ಷತ್ರ

೧೫೯.ಹಗ್ಗ ಹಾಸಿದೆ ಕೋಣ ಮಲಗಿದೆ-

ಕುಂಬಳಕಾಯಿ , ಬಳ್ಳಿ

೧೬೦. ನನ್ನ ಕಂಡರೆ ಎಲ್ಲರು ಓದೀತಾರೆ –

ಚೆಂಡು

೧೬೧. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ

ಕೆಲವು ಪದಗಳ ವಾಸ್ತವಿಕ ಅರ್ಥಗಳು. 

.
*ಹುಟ್ಟು:* ನಾವು ಕೇಳದೇ ಸಿಗುವ ವರ(ಶಾಪ)*ಸಾವು:* ನಾವು ಹೇಳದೇ ಹೋಗುವ ಜಾಗ.

*ಬಾಲ್ಯ:* ಮೈಮರೆತು ಆಡುವ ಸ್ವರ್ಗ.

*ಯೌವನ:* ಅರಿವಿದ್ದರೂ ಅರಿಯದ ಮಾಯೆ.

*ಮುಪ್ಪು:* ಕಡೆಯ ಆಟ.

*ಸ್ನೇಹ:* ಶಾಶ್ವತವಾಗಿ ಉಳಿಯೋ ಬಂಧ.

*ಪ್ರೀತಿ:* ಪ್ರಾಣಕ್ಕೆ ಹಿತವಾದ ಅನುಬಂಧ.

*ಪ್ರೇಮ:* ತ್ಯಾಗಕ್ಕೆ ಸ್ಪೂರ್ತಿ.

*ಕರುಣೆ:* ಕಾಣುವ ದೇವರು.

*ಮಮತೆ:* ಕರುಳಿನ ಬಳ್ಳಿ.

*ದ್ವೇಷ:* ಉರಿಯುವ ಕೊಳ್ಳಿ.

*ತ್ಯಾಗ:* ದೀಪ.

*ಉಸಿರು:* ಮೌನದಲೆ ಜೊತೆಗಿರುವ ಗೆಳೆಯ.

*ಹ್ರದಯ:* ಎಚ್ಚರಿಕೆ ಗಂಟೆ.

*ಕಣ್ಣು:* ಸ್ರಷ್ಟಿಯ ಕನ್ನಡಿ.

*ಮಾತು:* ಬೇಸರ ನೀಗುವ ವಿದ್ಯೆ.

*ಮೌನ:* ಭಾಷೆಗೂ ನಿಲುಕದ ಭಾವ.

*ಕಣ್ಣೀರು:* ಅಸ್ತ್ರ

*ನೋವು:* ಅಸಹಾಯಕತೆ

*ನಗು:* ಔಷಧಿ.

*ಹಣ:* ಅವಶ್ಯಕತೆ.

*ಗುಣ:* ಆಸ್ತಿ.

*ಕಲೆ:* ಜ್ಞಾನ.

*ಧರ್ಮ:* ಬುನಾದಿ.

*ಕರ್ಮ:* ಕಾಣದಾ ಕೈ ಆಟ.

*ಕಾಯಕ:* ದೇಹ, ಮನಸಿಗೆ ಮಿತ್ರ.

*ಸಂಸ್ಕೃತಿ:* ನೆಲೆ

*ಸಾಧನೆ:* ಜೀವಕ್ಕೆ ಜೀವನಕ್ಕೆ ಬೆಲೆ.

Respect your Parents.

Minimum 35 Ways to Respect your Parents. Must read

1. Put away your phone in their
     presence.

2. Pay attention to what they
    are saying.

3. Accept their opinions.

4. Engage in their     
     conversations.

5. Look at them with respect.

6. Always praise them.

7. Share good news with them.

8. Avoid sharing bad news with
    them.

9. Speak well of their friends
    and loved ones to them.

10. Keep in remembrance the 
      good things they did.

11. If they repeat a story, listen
      like it’s the first time they
      tell it.

12. Don’t bring up painful
       memories from the past.

13. Avoid side conversations in
      their presence.

14. Sit respectfully around
       them.

15. Don’t belittle/criticize their
      opinions and thoughts.

16. Avoid cutting them off when    they speak.

17. Respect their age.

18. Avoid hitting/disciplining
      their grandchildren around
      them.

19. Accept their advice and
      direction.

20. Give them the power of 
      leadership when they are
      present.

21. Avoid raising your voice at
      them.

22. Avoid walking in front or
      ahead of them.

23. Avoid eating before them.

24. Avoid glaring at them.

25. Fill them with ur
      appreciation even when
      they don’t think they
       deserve it.

26. Avoid putting your feet up in front of them or sitting with your back to them.

27. Don’t speak ill of them to
      the point where others
      speak ill of them too.

28. Keep them in your prayers
      always possible.

29. Avoid seeming bored or
      tired of them in their
      presence.

30. Avoid laughing at their
      faults/mistakes.

31. Do a task before they ask
      you to.

32. Continuously visit them.

33. Choose your words carefully    when speaking with them.

34. Call them by names they
       like.

35. Make them your priority
      above anything.

Parents are treasure on this land and sooner than you think, that treasure will be buried. Appreciate your parents while you still can.
Today lets make loads of  prayers for our beloved parents.

ಪಿಯುವರೆಗೆ ಏಕರೂಪ ಶಿಕ್ಷಣ: ಜ್ಞಾನ ಆಯೋಗ ಶಿಫಾರಸು.

*ಪಿಯುವರೆಗೆ ಏಕರೂಪ ಶಿಕ್ಷಣ: ಜ್ಞಾನ ಆಯೋಗ ಶಿಫಾರಸು.
ಬಹುಭಾಷಾ ಮಾಧ್ಯಮ ನೀತಿಗೆ ಜ್ಞಾನ ಆಯೋಗ ಶಿಫಾರಸು

ಎಲ್ಲರಿಗೂ ಸಿಬಿಎಸ್‌ಇ ಪಠ್ಯಕ್ರಮ /ಇತಿಹಾಸ, ಸಂಸ್ಕೃತಿಯೂ ಅಗತ್ಯ / ಹೆಣ್ಣುಮಕ್ಕಳಿಗೆ ಪದವಿ ಶಿಕ್ಷಣ ಖಾತರಿ / ಶಿಕ್ಷಕರಿಗೆ ಬಿ.ಇಡಿ ಕಡ್ಡಾಯ

ಬೆಂಗಳೂರು: ಪ್ರತಿ ಮಗುವಿಗೂ 12ನೇ ತರಗತಿ ವರೆಗೆ ಏಕರೂಪದ ಗುಣ ಮಟ್ಟದ ಶಿಕ್ಷಣ, ಪದವಿ ವರೆಗೆ ಪ್ರತಿ ಹೆಣ್ಣುಮಕ್ಕಳಿಗೂ ಶಿಕ್ಷಣದ ಖಾತರಿ, ಪಂಚಾಯತಿ ಮಟ್ಟದಲ್ಲಿ 12ನೇ ತರಗತಿ ವರೆಗೆ ಶಾಲಾ ಕ್ಯಾಂಪಸ್, ಶೇ.1 ಶಿಕ್ಷಕರಿಗೆ ಪ್ರತಿವರ್ಷ ವಿದೇಶಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ, ಶಿಕ್ಷಕರಿಗೆ ಕನಿಷ್ಠ ಬಿ.ಇಡಿ ಪದವಿ ಕಡ್ಡಾಯ, ಭವಿಷ್ಯದ ಸವಾಲು ಮತ್ತು ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಬಹುಭಾಷಾ ನೀತಿ ಆಯ್ಕೆ ಮಾಡಿಕೊಳ್ಳುವಂತೆ ಕರ್ನಾಟಕ ಜ್ಞಾನ ಆಯೋಗ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

ಖ್ಯಾತ ವಿಜ್ಞಾನಿ ಕೆ. ಕಸ್ತೂರಿರಂಗನ್ ಅಧ್ಯಕ್ಷತೆಯ 42 ಮಂದಿ ಗಣ್ಯರು ಹಾಗೂ ತಜ್ಞರನ್ನು ಒಳಗೊಂಡ ಆಯೋಗ ‘ಕರ್ನಾಟಕ ರಾಜ್ಯ ಶಿಕ್ಷಣ ನೀತಿ’ಗೆ ಸಂಬಂಧಿಸಿದಂತೆ ಕರಡು ಸಿದ್ಧಪಡಿಸಿ ಶನಿವಾರ ಸರಕಾರಕ್ಕೆ ಸಲ್ಲಿಸಿತು. ವಾಸ್ತವಿಕ ಸಂದರ್ಭ ಹಾಗೂ ಭವಿಷ್ಯದ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ಸಂಬಂಧ ಮಹತ್ವದ ಶಿಫಾರಸು ಮಾಡಿದೆ. ವಿಷಯಾಧರಿತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಬ್ರೇಕ್ ಹಾಕಿ, ವೃತ್ತಿಪರ ಕೋರ್ಸ್ ಸೇರಿ ಎಲ್ಲ ವಿಷಯಗಳ (ಅಂತರ ಶಿಸ್ತೀಯ) ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಸಾಂಪ್ರದಾಯಿಕ ವಿವಿಗಳ ಕಲ್ಪನೆಯನ್ನೇ ಆಯೋಗ ಸಮರ್ಥಿಸಿದೆ.

ಆಯೋಗದ ವರದಿ ಸ್ವೀಕರಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ‘‘ಆಯೋಗವು ಸಾಕಷ್ಟು ಅಧ್ಯಯನ ನಡೆಸಿ ಮಹತ್ವದ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಿದೆ. ವರದಿಯನ್ನು ಪರಿಶೀಲಿಸಿ ಆದಷ್ಟು ಶೀಘ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಅನುಷ್ಠಾನಕ್ಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’’ ಎಂದು ಭರವಸೆ ನೀಡಿದರು.

*ಏಕರೂಪ ಶಿಕ್ಷಣ ಹೇಗೆ?*
* ಹುಟ್ಟಿದ ಸ್ಥಳ, ಭೌಗೋಳಿಕ ಕಾರಣಕ್ಕಾಗಿ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಬಾರದು.

* ಪ್ರತಿ ಮಗುವಿಗೂ 12ನೇ ತರಗತಿ ವರೆಗೆ ಏಕರೂಪದ ಗುಣಮಟ್ಟದ ಶಿಕ್ಷಣ ಸಿಗಬೇಕು.

* ಖಾಸಗಿ-ಸರಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪತೆ ಮತ್ತು ಗುಣಮಟ್ಟಕ್ಕೆ ಒತ್ತು ಸಿಕ್ಕರೆ ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಸಾಧ್ಯ.

* ಏಕರೂಪತೆ ಮತ್ತು ಗುಣಮಟ್ಟಕ್ಕಾಗಿ ಸಿಬಿಎಸ್‌ಸಿ ಪಠ್ಯಕ್ರಮ ಅಳವಡಿಸಿಕೊಳ್ಳಬೇಕು.

* ಇತಿಹಾಸ, ಸಂಸ್ಕೃತಿ, ಭೂಗೋಳ ಮತ್ತಿತರ ರಾಜ್ಯದ ವಿಷಯಗಳೂ ಪಠ್ಯಕ್ರಮದಲ್ಲಿ ರಬೇಕು.

* ಪರೀಕ್ಷೆ, ಮೌಲ್ಯಮಾಪನ ಅಗತ್ಯವಾದರೂ, ಕನಿಷ್ಠ 15ನೇ ವರ್ಷದ ವರೆಗೆ ಎಲ್ಲ ಮಕ್ಕಳೂ ಶಾಲೆಯಲ್ಲೇ ಇರಬೇಕು.

* ಶಾಲಾ ಶಿಕ್ಷಣಕ್ಕೆ ಖಾಸಗಿ ವಲಯದ ಹೂಡಿಕೆ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕು.

*ಶಿಕ್ಷಕರಿಗೆ ವಿದೇಶದಲ್ಲಿ ತರಬೇತಿ*

* ಶಿಕ್ಷಕರಿಗೆ ಬಿ.ಇಡಿ ಕನಿಷ್ಠ ಅರ್ಹತೆಯಾಗಬೇಕು. ಈಗಿರುವ ಶಿಕ್ಷಕರು ಬಿ.ಇಡಿ ಮಾಡಲು ಅವಕಾಶ ಕಲ್ಪಿಸಬೇಕು.

* ಶಿಕ್ಷಕರ ವೃತ್ತಿಪರತೆಗೆ ಮಾನ್ಯತೆ ಸಿಗುವಂತಾಗಬೇಕು,

* ಶಿಕ್ಷಕರಲ್ಲಿ ಶೇ. 1 ಮಂದಿಗೆ ಪ್ರತಿವರ್ಷ ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಕೊಡಿಸಬೇಕು.

*ಕೌಶಲ್ಯಾಭಿವೃದ್ಧಿ ಪರ ಒಲವು*

* ವಿಷಯ ಆಧರಿತ ವಿಶ್ವವಿದ್ಯಾಲಯಗಳ ಕಲ್ಪನೆ ಅಂತ್ಯಗೊಂಡು ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಹಾಗೂ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳು ಸೇರಿದಂತೆ ಎಲ್ಲ ವಿಷಯಗಳ ಅಂತರ ಶಿಸ್ತೀಯ ಅಧ್ಯಯನಕ್ಕೆ ವಿವಿಗಳಲ್ಲಿ ಅವಕಾಶ ಸಿಗಬೇಕು.

* ಸ್ಮಾರ್ಟ್‌ರ್ಟ್ ಕ್ಲಾಸ್‌ರೂಮ್ಸ್, ಡಿಜಿಟಲ್ ಟೀಚಿಂಗ್, ಡಿಜಿಟಲ್ ಲೈಬ್ರರಿ, ಸೆಟಲೈಟ್ ತಂತ್ರಜ್ಞಾನ ಆಧರಿತ ಶಿಕ್ಷಣ ಜಾಲ ನಿರ್ಮಾಣ.

* ಭೌಗೋಳಿಕ ಮಿತಿ ಮೀರಿ ಯಾವುದೇ ವಿವಿಯಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ.

ಉನ್ನತ ಶಿಕ್ಷಣ ಸಂಬಂಧಿ ಶಿಫಾರಸು

* ವಿಶ್ವವಿದ್ಯಾಲಯಗಳ ಆಡಳಿತ, ಶೈಕ್ಷಣಿಕ ಹಾಗೂ ಹಣಕಾಸು ಸಂಬಂಧಿ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಷರತ್ತಿಗೊಳಪಟ್ಟು ಸಂಪೂರ್ಣ ಸ್ವಾಯತ್ತತೆ ನೀಡಬೇಕು.

* ಶೈಕ್ಷಣಿಕ ಪಾಲುದಾರಿಕೆ, ಇಂಡಸ್ಟ್ರಿ ಗ್ರಾಂಟ್ ಮತ್ತಿತರ ವಿಧಾನದಿಂದ ಹೆಚ್ಚುವರಿ ಅನುದಾನ ಸಂಗ್ರಹಕ್ಕೆ ವಿಶ್ವವಿದ್ಯಾಲಯಗಳಿಗೆ ಅವಕಾಶ ಕಲ್ಪಿಸಬೇಕು.

* ವಿಶ್ವವಿದ್ಯಾಲಯ, ಸಂಸ್ಥೆಗಳಿಗೆ ಅನುದಾನ ಕಾರ್ಯಕ್ರಮತೆ ಆಧರಿಸಿ ನಿಗದಿಯಾಗಬೇಕು.

* ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಸಂಪರ್ಕ ಕೊಂಡಿಗಳಾಗಿ ರೂಪುಗೊಳ್ಳಲು ಉತ್ತೇಜನ ನೀಡಬೇಕು.

* ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಬಹುಆಯಾಮಗಳ ಸಂಶೋಧನೆಗೆ ಒತ್ತು ನೀಡುವ ಶಿಕ್ಷಣ ವಿಭಾಗ ಇರಲೇಬೇಕು.

* ಕಾಲೇಜು, ವಿ.ವಿ.ಗಳಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹಕ್ಕಾಗಿ ‘ಕರ್ನಾಟಕ ವಿಜ್ಞಾನ, ತಂತ್ರಜ್ಞಾನ, ಮಾನವೀಯ ಅಧ್ಯಯನ ಮತ್ತು ಸಾಮಾಜಿಕ ವಿಜ್ಞಾನಗಳ ಪ್ರತಿಷ್ಠಾನ’ ಸ್ಥಾಪಿಸಬೇಕು.

* ಪ್ರತಿ ವಿಶ್ವವಿದ್ಯಾಲಯವೂ ರಾಷ್ಟ್ರೀಯ ಮತ್ತು ಜಾಗತಿಕ ಸ್ಪರ್ಧೆ ಎದುರಿಸಲು ಸಹಾಯವಾಗುವಂತೆ ಸ್ವಾಯತ್ತತೆ ನೀಡುವ ಪ್ರತ್ಯೇಕ ಶಾಸನ ರೂಪಿಸಬೇಕು.

*ಇನ್ನಿತರ ಶಿಫಾರಸುಗಳು*

* ರಾಜ್ಯದಲ್ಲಿ ಶಿಕ್ಷಣದ ಸಾಮಾಜಿಕ ಆಯಾಮವನ್ನು ಗುರುತಿಸಿ ಭವಿಷ್ಯದ ಶಿಕ್ಷಣಕ್ಕೆ ನೀತಿಯ ನಾಯಕತ್ವ ನೀಡಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಸಚಿವರು ಸದಸ್ಯರಾಗಿರುವ ‘ಮಿನಿಸ್ಟೀರಿಯಲ್ ಗ್ರೂಪ್ ಆನ್ ಎಜುಕೇಷನ್’ ರಚಿಸಬೇಕು.

* ಶಿಕ್ಷಣ, ಶಿಕ್ಷಕ ಸೇರಿ ಶಿಕ್ಷಣದ ಎಲ್ಲ ಆಯಾಮಗಳ ನಿಯಂತ್ರಣ, ಪರಾಮರ್ಶೆ ಮತ್ತು ಮೌಲ್ಯಮಾಪನಕ್ಕಾಗಿ ‘ಕರ್ನಾಟಕ ರಾಜ್ಯ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ ಎಂ ಸ್ವಾಯತ್ತ ಸಂಸ್ಥೆ ರಚಿಸಬೇಕು. ಶಿಕ್ಷಣದಲ್ಲಿ ಪಾರದರ್ಶಕತೆ ಮತ್ತು ಏಕರೂಪತೆ ತರಲು ಈ ವ್ಯವಸ್ಥೆ ಅತ್ಯಗತ್ಯ.

* ಸದ್ಯದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೂ ಪ್ರಾತಿನಿಧ್ಯ ಕಲ್ಪಿಸಬೇಕು.

ಬಹುಭಾಷಾ ಮಾಧ್ಯಮ ಚಿಂತನೆ

ಮಾತೃಭಾಷಾ ಮಾಧ್ಯಮ ನೀತಿ ಕಡ್ಡಾಯ ನಿಲುವಿಗೆ ಸರಕಾರ ಬದ್ಧವಾಗಿದ್ದರೆ, ಮಕ್ಕಳ ಪಾಲಕರು ಸ್ಪರ್ಧಾತ್ಮಕ ಸನ್ನಿವೇಶ ದೃಷ್ಟಿಯಲ್ಲಿಟ್ಟುಕೊಂಡು ಆಂಗ್ಲ ಮಾಧ್ಯಮದತ್ತ ಆಕರ್ಷಿತರಾಗಿದ್ದಾರೆ. ಮಾತೃಭಾಷಾ ಮಾಧ್ಯಮ ನೀತಿ ಜಾರಿಗೆ ಸುಪ್ರೀಂಕೋರ್ಟ್ ‘ನೋ’ ಎಂದಿದೆ. ಈ ಇಕ್ಕಟ್ಟಿನ ಸಂದರ್ಭದಲ್ಲಿ ಜ್ಞಾನ ಆಯೋಗ ಪರಿಹಾರ ಸೂತ್ರವನ್ನು ಪ್ರಸ್ತಾಪಿಸಿದೆ.

* 4ನೇ ತರಗತಿ ವರೆಗೆ ಕನ್ನಡ ಮಾಧ್ಯಮ

* 5ರಿಂದ ಇಂಗ್ಲಿಷ್ ಮಾಧ್ಯಮ ಆಯ್ಕೆಗೆ ಅವಕಾಶ

* 1ನೇ ತರಗತಿಯಿಂದಲೇ ಇಂಗ್ಲಿಷ್ ದ್ವಿತೀಯ ಭಾಷೆ