ಕಲ್ಯಾಣ ಕರ್ನಾಟಕ ದಿನಾಚರಣೆ

🌹🌷🌹💛🇮🇳❤️ಕಲ್ಯಾಣ ಕರ್ನಾಟಕ💛🇮🇳❤️ ಉತ್ಸವ ದಿನಾಚರಣೆ🌹🌷🌹

ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಜನತೆಯ ಪಾಲಿಗೆ ಮರೆಯಲಾಗದ ಮಹಾನ್ ದಿನ. ನಿಜಾಮನ ಕಪಿಮುಷ್ಠಿಯಿಂದ ವಿಮೋಚನೆಗೊಂಡ ಪುಣ್ಯ ದಿನ. ದೇಶಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ ಸಿಕ್ಕರೆ, ಕಲ್ಯಾಣ (ಹೈದ್ರಾಬಾದ್) ಕರ್ನಾಟಕ ಭಾಗ ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡದ್ದು ಬರೋಬ್ಬರಿ ಒಂದು ವರ್ಷ ಮೂವತ್ತೆರಡು ದಿನಗಳ ನಂತರ. ಅಂದರೆ, 1948 ಸೆಪ್ಟೆಂಬರ್ 17 ರಂದು.
ದೇಶಕ್ಕೇ ಸ್ವಾತಂತ್ರ್ಯ ಸಿಕ್ಕಿದ್ದರೂ ಕಲ್ಯಾಣ ಕರ್ನಾಟಕ ನಿಜಾಮರ ಹಿಡಿತದಲ್ಲಿತ್ತು. ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಅಂತಾನೇ ಗುರುತಿಸಿಕೊಂಡಿದೆ. ಅಭಿವೃದ್ಧಿಯಲ್ಲಿ ಮಾತ್ರವಲ್ಲ. ಈ ಪ್ರದೇಶ ಸ್ವಾತಂತ್ರ ಪಡೆಯುವಲ್ಲಿಯೂ ಹಿಂದೆಯೇ ಉಳಿದಿತ್ತು. 1947 ಆಗಸ್ಟ್ 15 ರಂದು ಭಾರತ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆಯಿತು. ಆದರೆ, ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಮತ್ತು ಆಂಧ್ರ, ಮಹಾರಾಷ್ಟ್ರದ ಕೆಲ ಪ್ರದೇಶಗಳು 1947 ರ ನಂತರವೂ ಸ್ವಾತಂತ್ರ್ಯಗೊಂಡಿರಲಿಲ್ಲ. ಹೈದ್ರಾಬಾದ್ ರಾಜ್ಯದ ನಿಜಾಮ ಮೀರ್ ಉಸ್ಮಾನ್ ಅಲಿ ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ಸುತಾರಾಂ ಒಪ್ಪಲಿಲ್ಲ.

🌷 200 ಸ್ವಾತಂತ್ರ್ಯ ಹೋರಾಟಗಾರರ ಬಲಿ: 🌷

ಭಾರತದ ಒಕ್ಕೂಟ ವ್ಯವಸ್ಥೆ ಒಪ್ಪದ ನಿಜಾಮರ ವಿರುದ್ಧ ಜನ ದಂಗೆ ಏಳಲಾರಂಭಿಸಿದರು. ಆದರೆ, ದಂಗೆ ಎದ್ದ ಜನರನ್ನ ಹತ್ತಿಕ್ಕಲು ನಿಜಾಮನ ಮತಾಂಧ ಸೇನಾನಿ ಖಾಸಿಂ ರಜ್ವಿ ತನ್ನ ರಜಾಕಾರ್ ಸಂಘಟನೆಯ ಮೂಲಕ ಅನಾಚರದ ಹಾದಿ ಹಿಡಿದಿದ್ದ. ರಜಾಕಾರರಿಂದ ಕೊಲೆ, ಲೂಟಿ, ಅತ್ಯಾಚಾರುಗಳು ತೀವ್ರವಾದವು. ರಜಾಕಾರರ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಹೋರಾಟಗಳು ನಡೆದವು. ಸಾಕಷ್ಟು ಜನ ಈ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದರು. ಸ್ವಾತಂತ್ರ್ಯ ಬಂದಾಗಲೂ ತ್ರಿವರ್ಣ ಧ್ವಜ ಹಿಡಿದು ಓಡಾಡೋದು ಕಷ್ಟವಾಗಿತ್ತು. ಯಾಕಂದ್ರೆ ರಜಾಕಾರರ ಕ್ರೌರ್ಯ ಎಲ್ಲೆ ಮೀರಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಟರ್ ಗ್ರಾಮದ ಲಕ್ಷ್ಮಿ ದೇವಾಲಯದ ಮುಂದೆ 200ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನಿಜಾಮರ ಕಟ್ಟಾಳುಗಳಾದ ರಜಾಕಾರರು ನಿರ್ದಯವಾಗಿ ಕೊಂದಿದ್ದರು.

🌷 ಸರ್ದಾರ್ ವಲ್ಲಭಾಯ್ ಪಟೇಲರಿಂದ ಸಿಕ್ಕಿತು ಸ್ವಾತಂತ್ರ್ಯ:🌷

ಜನರ ಮೇಲೆ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ ಆಡಳಿತಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ ಉಕ್ಕಿನ ಮನುಷ್ಯ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ‘ಆಪರೇಷನ್ ಪೋಲೋ’ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಇದರ ಫಲವಾಗಿ 1948, ಸೆಪ್ಟೆಂಬರ್ 17 ರಂದು ನಿಜಾಮರ ಆಳ್ವಿಕೆ ಕೊನೆಗೊಂಡಿತು ಕಲ್ಯಾಣ ಕರ್ನಾಟಕ ಭಾಗ ವಿಮೋಚನೆಗೊಂಡು ಅಖಂಡ ಭಾರತದಲ್ಲಿ ಸೇರ್ಪಡೆಯಾಯಿತು. ಮೊದ ಮೊದಲು ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಕೆಲವು ಸಂಘಟನೆಗಳಷ್ಟೇ ಆಚರಿಸುತ್ತಿದ್ದವು. 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ, ಕೃಷ್ಣ, ಈ ಮಹತ್ವದ ದಿನವನ್ನು ಸರಕಾರದ ವತಿಯಿಂದಲೇ ಆಚರಿಸಲು ನಿರ್ಧರಿಸಿದರು. ಅಂದಿನಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನದಂದು ರಾಜ್ಯದ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಪರಂಪರೆ ಇದೆ. ಇಷ್ಟೆಲ್ಲ ಹೋರಾಟ ನಡೆಸಿದ ಈ ಭಾಗ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿದ್ದು.. ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಾಗಿದೆ‌.. ಸಂವಿಧಾನದ 371J ನೇ ಕಲಂನಿಂದ ಈ ಭಾಗದಲ್ಲಿ ಇನ್ನೂ ಅಭಿವೃದ್ಧಿಯಾಗಬೇಕಿದೆ
2019ರಿಂದ ಕಲ್ಯಾಣ ಕರ್ನಾಟಕ ಉತ್ಸವ’ ಎಂಬ ಹೆಸರಿನಿಂದ ಪ್ರತಿವರ್ಷ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ವಿಭಾಗದ ಆರು ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಸರ್ಕಾರಿ ಕಛೇರಿಗಳು ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ *🌹🌷🌹🇮🇳 *ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತದೆ*🇮🇳🌹🌷🌹 *ಕಲ್ಯಾಣ ಕರ್ನಾಟಕದ ಹೋರಾಟಗಾರರಿಗೆ ನಮನ ಸಲ್ಲಿಸಲಾಗುತ್ತದೆ*
🌹🌷🙏🏻🌹🌷ಧನ್ಯವಾದಗಳೊಂದಿಗೆ..🌹
ಸರ್ವರಿಗೂ 🌹🌷🌹 ಕಲ್ಯಾಣ ಕರ್ನಾಟಕ ❤️🇮🇳💛ಉತ್ಸವ ದಿನಾಚರಣೆಯ ಶುಭಾಶಯಗಳು🌹🌷🌹

ರೈತರ ದಿನಾಚರಣೆ

ಇವತ್ತು ಡಿ.23, “ರೈತ ದಿನಾಚರಣೆ” ನಮ್ಮ ಜನರಿಗೆ ಈ ಕುರಿತು ಎಷ್ಟು ಅರಿವಿದೆಯೋ ತಿಳಿಯದು. ಭಾರತದ ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತದೆ, ಕೃಷಿಯೇ ದೇಶದ ಆರ್ಥಿಕತೆಯೂ ಮೂಲವಾಗಿತ್ತು ಎಂಬುದು ಯಾರಿಗೂ ತಿಳಿಯದ ಸಂಗತಿಯೇನಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ, ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ, ಕೃಷಿ ಜೀವನದ ಉಸಿರು ಯಾಕೆ ಎಂಬ ಪ್ರಶ್ನೆ ಕಾಡಬೇಕು ಮತ್ತು ಮಂಥನವಾಗಬೇಕು, ಈ ದಿನ ಇಂತಹದ್ದೊಂದು ಚರ್ಚೆಗೆ ವೇದಿಕೆಯಾಗಬಹುದು.

ವಿಚಾರದ ಮಂಥನಕ್ಕೆ ಮುನ್ನಾ ರೈತ ದಿನಾಚರಣೆಯ ಕುರಿತು ಒಂದು ಸಂಗತಿಯನ್ನು ಹೇಳಲೇಬೇಕು, ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಅತೀ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧುರಿ ಚರಣ್ ಸಿಂಗ್ ರ ಜನ್ಮ ದಿನವನ್ನು ಭಾರತ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಧಿಕೃತವಾಗಿ ಈ ಕುರಿತು ಸರ್ಕಾರಿ ಘೋಷಣೆಯಿಲ್ಲದಿದ್ದರೂ 80ರ ದಶಕದಲ್ಲಿ ಬಂದ ರೈತ ಚಳುವಳಿಯ ಸಂಧರ್ಭದಲ್ಲಿ ರೈತರು ಡಿ.23ರಂದು ರೈತದಿನಾಚರಣೆ ಆಚರಿಸುತ್ತಾರೆ.ಸಮಾಜವಾದಿ ರಾಮಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ರ ಒಡನಾಡಿಯಾಗಿ ಗುರುತಿಸಿಕೊಂಡ ಚೌಧುರಿ ಚರಣ್ ಸಿಂಗ್ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ನೂರ್ ಪುರ್ ಎಂಬ ಸಣ್ಣ ಹಳ್ಳಿಯವರು. ಡಿ.23, 1902ರಂದು ಜನಿಸಿದ ಚರಣ್ ಸಿಂಗ್ ಪ್ರತಿಭಾವಂತ ಯುವಕ. ಎಕಾನಮಿಕ್ಸ್ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್ ಸಿಂಗ್ ತನ್ನ 34ನೇ ವಯಸ್ಸಿಗೆ ಮೊದಲ ಭಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾಗಿ ಆಯ್ಕೆಯಾದರು.ಕೃಷಿ ಬದುಕನ್ನು ಪ್ರೀತಿಸುತ್ತಿದ್ದ ಚರಣ್ ಸಿಂಗ್ ರೈತರ ಬದುಕು ಸುಧಾರಣೆಗೆ ತುಡಿತವನ್ನಿಟ್ಟುಕೊಂಡಿದ್ದರು.ಆದ್ದರಿಂದಲೇ 1938ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು, ಆ ಮೂಲಕ ರೈತ ಪರವಾದ ಧೋರಣೆ ಪ್ರದರ್ಶಿಸಿದರು. ಮದ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆಯನ್ನು ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲಾ ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು, ಪಂಜಾಬ್ ರಾಜ್ಯ ಇದನ್ನು ಅನುಷ್ಟಾನಕ್ಕೆ ತಂದ ಮೊದಲ ರಾಜ್ಯವಾಯಿತು. 1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿಯನ್ನು ನಿಷೇದಿಸುವ ಮತ್ತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮಹತ್ವದ ನಿರ್ಧಾರ ಕೈಗೊಂಡರು. ಮುಂದೆ ಇದು ಇಡೀ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು. ಅದೇ ರೀತಿ ದೇಶದ ಹಿತದೃಷ್ಟಿಯಿಂದ ಅನೇಕ ಮಹತ್ವದ ದೂರದೃಷ್ಟಿ ನಿಲುವುಗಳನ್ನು ಹೊಂದಿದ್ದ ಚರಣ್ ಸಿಂಗ್ ಭಾರತೀಯ ಕಾರ್ಮಿಕ ಕಾಯ್ದೆಗೆ ಹೊಸ ರೂಪುರೇಷೆ ನೀಡಿದರು. ರೈತ ಪರವಾದ ಚಿಂತನೆಗಳು ದೇಶದ ರೈತ ಸಮುದಾಯದಲ್ಲಿ ಚರಣ್ ಸಿಂಗ್ ರ ಹೆಸರನ್ನು ಹಸಿರಾಗಿಸಿದವು. ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚಿರಸ್ಥಾಯಿಯಾದ ಚರಣ್ ಸಿಂಗ್ ರೈತ ಸಮುದಾಯದಲ್ಲಿ ಸ್ಥಿರವಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತದಿನಾಚರಣೆ ಆಚರಣೆಗೆ ಬಂದಿದೆ.

ಭಾರತದ ದೇಶದ ಕೃಷಿಗೆ 9000ಕ್ರಿ ಪೂ. ದ ಇತಿಹಾಸ ಇರುವುದು ಕಾಣಬರುತ್ತದೆ. ಅಲ್ಲಿಂದ ಅನೇಕ ಕಾಲಘಟ್ಟಗಳು ಸವೆದು ಹೋಗಿದ್ದರೂ ಆಧುನಿಕ ಪರಿಸರದ ನಿಲುವುಗಳು ಕೃಷಿ ಬದುಕನ್ನು ವರ್ತಮಾನದಲ್ಲಿ ತಲ್ಲಣಗೊಳಿಸುವಂತೆ ಮಾಡಿವೆ. ಉಸಿರಾಗಬೇಕಿದ್ದ ರೈತರ ಹಸಿರು ಭೂಮಿ ಕಾರ್ಪೋರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕುತ್ತಿರುವುದರಿಂದ ರೈತನ ಬದುಕು ಅಸಹನೀಯವಾಗಿದೆ, ಕೃಷಿ ಜಗತ್ತಿನ ಹೊಸ ಅವಿಷ್ಕಾರ ಮತ್ತು ಪದ್ದತಿಗಳು ರೈತನನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡಿವೆ, ಕೃಷಿ ಕುರಿತ ಸರ್ಕಾರಿ ಪಾಲಸಿಗಳೂ ಜಾಗತಿಕ ವ್ಯಾಪಾರದ ಅನುಸಾರವಾಗಿ ನಡೆಯುತ್ತಿರುವುದರಿಂದ ಭವಿಷ್ಯದ ದಿನಗಳು ಮತ್ತಷ್ಟು ಅಯೋಮಯವಾಗುವ ಸ್ಪಷ್ಟ ಸೂಚನೆಯಿದೆ. ರೈತ ಜಾಗೃತನಾಗಬೇಕು ಜನಸಾಮಾನ್ಯ ಎಚ್ಚೆತ್ತುಕೊಳ್ಳಬೇಕು ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಶ್ರೀರಾಮ ನವಮಿ ವಿಶೇಷ

ವಿಶೇಷ: ಲೋಕಪಾವನ ಈ ರಘುನಂದನ

ಶ್ರೀರಾಮನವಮಿ.

ಶ್ರೀ ರಾಮಚಂದ್ರನದು ಜನಮಾನಸದಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿದ ವ್ಯಕ್ತಿ. ರಾಮನ ಆರಾಧನಾ ತಾಣಗಳು ರಾಜ್ಯದೆಲ್ಲೆಡೆ ಪಸರಿಸಿವೆ. ರಾಮ ವನವಾಸದ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ನೀಡಿದ್ದಾನೆಂಬ ನಂಬಿಕೆ ನಮ್ಮಲ್ಲಿದ್ದು, ಅಂಥ ಕೆಲವು ತಾಣಗಳು ಇಂದು ಭಕ್ತಿಕೇಂದ್ರಗಳಾಗಿವೆ, ಪ್ರವಾಸಿಧಾಮಗಳಾಗಿವೆ. ರಾಜ್ಯಗಳಲ್ಲಿರುವ ಆ ರಾಮತಾಣಗಳತ್ತ ಕಿರು ನೋಟ.

ಶ್ರೀ ರಾಮ ಜನಿಸಿದ ಚೈತ್ರಮಾಸದ ಶುಕ್ಲ ಪಕ್ಷದ ನವಮಿಯಂದು (ಮಾರ್ಚ್- ಏಪ್ರಿಲ್ ತಿಂಗಳಲ್ಲಿ ) ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪಾನಕ, ಕೋಸಂಬರಿ ವಿತರಣೆ ಮಾಡುವ ಮೂಲಕ ನವಮಿ ಆಚರಿಸಲಾಗುತ್ತದೆ. ಅಲ್ಲದೆ, ಕೆಲವೆಡೆ ಸಂಗೀತೋತ್ಸವ ನಡೆಸುವುದು ರೂಢಿ. ಇನ್ನು ಕೆಲವರ ರಾಮನವಮಿಯನ್ನು 9 ದಿನಗಳ ಕಾಲ ಆಚರಿಸುವುದೂ ಉಂಟು. ಚೈತ್ರಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿಯವರೆಗೆ ರಾಮಾಯಣ ಪಾರಾಯಣ ಮಾಡಿ, ನವಮಿ ದಿನ ರಾಮಪಟ್ಟಾಭಿಷೇಕ ಮಾಡಿ ಪಾರಾಯಣ ಹಬ್ಬವನ್ನು ಮುಗಿಸುತ್ತಾರೆ. ಶಕ್ತಿಯ ಸಂಕೇತವಾಗಿರುವ ಸೂರ‌್ಯದೇವರ ಆರಾಧನೆಯೊಂದಿಗೆ ಹಬ್ಬ ಆಚರಣೆ ಆರಂಭವಾಗುತ್ತದೆ. ರಾಮಸ್ತ್ರೋತ್ತ, ಭಜನೆಗಳ ಮೂಲಕ ದೇವರನ್ನು ಸಂಪ್ರೀತಗೊಳಿಸುವುದು ಸಂಪ್ರದಾಯ. ಸೂರ‌್ಯಾಸ್ತದ ನಂತರ ರಾಮನವಮಿ ವ್ರತ ಸಮಾಪನಗೊಳ್ಳುತ್ತದೆ.

ಸದ್ವರ್ತನೆಯೆಂಬ ಸುಗಂಧ ಸೂಸಿದ ಶ್ರೀರಾಮ
– ಸದ್ಗುರು ಜಗ್ಗಿ ವಾಸುದೇವ್
ಮರ್ಯಾದಾ ಪುರುಷ ಶ್ರೀರಾಮನನ್ನು ಭಾರತದ ಬಹುತೇಕ ಜನಸಮುದಾಯಗಳು ತಲತಲಾಂತರಗಳಿಂದಲೂ ಭಕ್ತಿ ಗೌರವದಿಂದ ಪೂಜಿಸುತ್ತಿವೆ. ಆದರ್ಶಗಳ ಬಗ್ಗೆ ಉಪಬೋಧೆ ಮಾಡುವ ಸಂದರ್ಭದಲ್ಲಿಯೂ ಜನರು ಸಾಮಾನ್ಯವಾಗಿ ರಾಮನ ಆದರ್ಶಗಳನ್ನೇ ಉದಾಹರಣೆ ನೀಡುತ್ತಾರೆ. ಆದರೆ ಅಂತಹ ರಾಮ ತನ್ನ ಜೀವನದಲ್ಲಿ ಎಷ್ಟೆಷ್ಟು ಸಂಕಷ್ಟಗಳನ್ನು ಎದುರಿಸಿದ ನೋಡಿ. ಅವನ ಇಡೀ ಬದುಕೇ ದುರಂತಗಳ ಸರಮಾಲೆಯಂತಿತ್ತು. ನ್ಯಾಯಯುತವಾಗಿ ತನಗೆ ಸೇರಬೇಕಾಗಿದ್ದ ರಾಜ್ಯವನ್ನು ಕಳೆದುಕೊಂಡು ಆತ ಕಾಡಿಗೆ ಹೋಗಬೇಕಾಯಿತು. ಕಷ್ಟವೋ ನಷ್ಟವೋ ಅನುಭವಿಸಿಕೊಂಡು ಕಾಡಿನಲ್ಲಿ ಬದುಕಿಬಿಡುತ್ತೇನೆ ಅಂದುಕೊಂಡರೆ ಅಲ್ಲಿ ಅವನ ಹೆಂಡತಿಯ ಅಪಹರಣವಾಯಿತು. ಯುದ್ಧ ಅವನಿಗೆ ಬೇಡವಾಗಿದ್ದರೂ ಗತ್ಯಂತರವಿಲ್ಲದೆ ಘನಘೋರವಾದ ಯುದ್ಧದಲ್ಲಿ ಭಾಗವಹಿಸಬೇಕಾಯಿತು. ಅಷ್ಟು ಕಷ್ಟಪಟ್ಟು ಹೆಂಡತಿಯನ್ನು ಕರೆತಂದರೂ ಅವಳ ಬಗ್ಗೆ ಸುತ್ತಮುತ್ತಲಿನವರು ಇಲ್ಲಸಲ್ಲದ ಮಾತುಗಳನ್ನಾಡಿದರು. ಅಂತಹ ಕಠೋರ ಮಾತುಗಳನ್ನು ಕೇಳಿಸಿಕೊಂಡ ರಾಮ, ತನ್ನ ಪ್ರೀತಿಯ ಮಡದಿಯನ್ನು ಮತ್ತೆ ಕಾಡಿಗೆ ಬಿಟ್ಟು ಬಂದ. ಆ ವೇಳೆಗೆ ಆಕೆ ಗರ್ಭಿಣಿ. ಹೊಟ್ಟೆಯಲ್ಲಿ ಅವಳಿ ಮಕ್ಕಳು. ಮುಂದೊಂದು ದಿನ ತನಗೇ ಅರಿವಿಲ್ಲದೆ ತನ್ನಿಬ್ಬರು ಮಕ್ಕಳ ಜತೆ ರಾಮ ಯುದ್ಧ ಮಾಡಬೇಕಾಯಿತು. ಅಂತಿಮವಾಗಿ ಹೆಂಡತಿಯನ್ನು ಕಳೆದುಕೊಳ್ಳಬೇಕಾಯಿತು. ಇದು ರಾಮನ ಬದುಕಿನಲ್ಲಿ ನಡೆದ ದುರಂತಗಳ ಸರಮಾಲೆಯ ಸಂಕ್ಷಿಪ್ತ ರೂಪ. ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿದ ರಾಮನನ್ನು ಇಷ್ಟೊಂದು ಜನ ಯಾಕೆ ಪೂಜಿಸುತ್ತಾರೆ?

ರಾಮನ ಮಹತ್ವ ಇರೋದು ಆತ ತನ್ನ ಜೀವನದಲ್ಲಿ ಎಂತೆಂಥ ಪರಿಸ್ಥಿತಿಗಳನ್ನು ಎದುರಿಸಿದ ಎಂಬುದರಲ್ಲಿ ಅಲ್ಲ. ಆ ದುರಂತ ಸರಣಿಯನ್ನು ಆತ ಹೇಗೆ ಒಂದು ರೀತಿಯ ಗಾಂಭೀರ್ಯದಿಂದ, ಸ್ಥಿತಪ್ರಜ್ಞನಾಗಿ ನಿಭಾಯಿಸಿದ ಎಂಬುದರಲ್ಲಿ ರಾಮನ ಮಹತ್ವ ಅಡಗಿದೆ. ಒಮ್ಮೆಯೂ ಆತ ಯಾರ ಮೇಲೂ ಸಿಟ್ಟಾಗಲಿಲ್ಲ, ಯಾರನ್ನೂ ಬೈಯಲಿಲ್ಲ, ಯಾರ ವಿರುದ್ಧವೂ ಅಬ್ಬರಿಸಲಿಲ್ಲ. ಎಲ್ಲ ಸಂದರ್ಭಗಳಲ್ಲೂ ಗಾಂಭೀರ್ಯವನ್ನು ಕಾಪಾಡಿಕೊಂಡ. ರಾಗದ್ವೇಷಗಳಿಗೆ ಕಟ್ಟುಬೀಳದೆ ಸ್ಥಿತಪ್ರಜ್ಞನಾಗಿ ವರ್ತಿಸಿದ.

ಆದ್ದರಿಂದಲೇ ಜಗದ ಜಂಜಡಗಳಿಂದ ವಿಮೋಚನೆಯಯನ್ನು ಬಯಸುವ, ಗಂಭೀರ ಸ್ಥಿತಪ್ರಜ್ಞ ಬದುಕನ್ನು ಇಷ್ಟಪಡುವ ಸಾಮಾನ್ಯ ಜನರಿಗೆ ರಾಮನೆಂದರೆ ಅಪಾರವಾದ ಪ್ರೀತಿ ಮತ್ತು ಗೌರವ. ಬದುಕಿನಲ್ಲಿ ಬಾಹ್ಯ ಪರಿಸ್ಥಿತಿಗಳು ಯಾವುದೇ ಕ್ಷಣದಲ್ಲಿಯೂ ನಮ್ಮ ನಿಯಂತ್ರಣ ಮೀರಿ ಹೋಗಬಹುದು ಎಂಬುದನ್ನು ಈ ಜನ ಅರ್ಥ ಮಾಡಿಕೊಂಡರು. ಎಲ್ಲಿಯೂ ಯಾವ ಅಡೆತಡೆಯೂ ಆಗದ ಹಾಗೆ ಮೈಮೇಲೆ ಪೂರ್ತಿ ಎಚ್ಚರ ಇಟ್ಟುಕೊಂಡು ಕೆಲಸ ಮಾಡಿದರೂ ಕೆಲವೊಮ್ಮೆ ಬಾಹ್ಯ ಸಂಗತಿಗಳು ನಮ್ಮ ಇರಾದೆಗೆ ವಿರುದ್ಧವಾಗಿ ಘಟಿಸಿಬಿಡುತ್ತವೆ. ಒಂದು ಹುಲ್ಲು ಕಡ್ಡಿಯೂ ಅಲ್ಲಾಡದ ಹಾಗೆ ವ್ಯವಸ್ಥೆ ಮಾಡಿಟ್ಟ ಮರುಕ್ಷಣವೇ ಚಂಡಮಾರುತ ಬೀಸಿಬಿಟ್ಟರೆ ಆಗೇನು ಮಾಡುತ್ತೀರಿ? ಅದು ನಿಮ್ಮ ಮನೆಯನ್ನೇ ತರಗೆಲೆ ಮಾಡಿಬಿಡಬಲ್ಲದು. ಇನ್ನು ಕೆಲವರು ಯೋಚಿಸುವ ರೀತಿಯೇ ವಿಚಿತ್ರವಾಗಿರುತ್ತದೆ. ಱಱಬೇರೆಯವರಿಗೆ ಏನು ಬೇಕಾದರೂ ಆಗಬಹುದು. ನನಗೆ ಮಾತ್ರ ಅಂಥದ್ದೆಲ್ಲ ಆಗಲು ಸಾಧ್ಯವೇ ಇಲ್ಲ,ೞೞ ಎನ್ನುತ್ತಿರುತ್ತಾರೆ. ಅಂಥವರು ಕಡುಮೂರ್ಖರು ಎನ್ನದೆ ವಿಧಿ ಇಲ್ಲ. ಅಂತಹ ಸ್ಥಿತಿ ನನಗೆ ಎದುರಾದರೆ ನಾನದನ್ನು ಗಂಭೀರವಾಗಿ ಸ್ಥಿತಪ್ರಜ್ಞನಾಗಿ ನಿಭಾಯಿಸುತ್ತೇನೆ,ೞೞ ಎನ್ನುವವರು ನಿಜಕ್ಕೂ ಜಾಣರು. ಅವರಿಗೆ ಬದುಕುವ ಬಗೆ ಗೊತ್ತು, ಬದುಕಿನ ಬೆಲೆ ಗೊತ್ತು. ಇಂತಹ ಜ್ಞಾನ ಶ್ರೀರಾಮನಲ್ಲಿ ಇತ್ತು. ಅರಿತವರು ಅದನ್ನು ಗುರುತಿಸಿದರು. ನಿಮ್ಮ ಬದುಕಿನಲ್ಲಿ ನೀವು ಏನೇನು ಸಾಧನೆ ಮಾಡಿದಿರಿ, ಎಷ್ಟೆಷ್ಟು ಗಳಿಸಿದಿರಿ, ಎಂತೆಂಥ ಸಂದರ್ಭಗಳನ್ನು ಎದುರಿಸಿದಿರಿ ಅಥವಾ ಎಂಥ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂಬುದೆಲ್ಲವೂ ಮುಖ್ಯವಲ್ಲವೇ ಅಲ್ಲ. ಅಂತಹ ಸಂದರ್ಭಗಳಲ್ಲೆಲ್ಲ ನೀವು ಹೇಗೆ ನಡೆದುಕೊಂಡಿರಿ ಎಂಬುದಷ್ಟೇ ಪರಿಗಣನೆಗೆ ಬರುವಂಥದ್ದು.

ಹಾಗಾದರೆ ನಾವು ನಮ್ಮ ಜೀವನವನ್ನು ಅದರ ಪಾಡಿಗೆ ಬಿಟ್ಟುಬಿಡಬೇಕೆ, ನಾವು ಸರಿಯಾದ ಕ್ರಮದಲ್ಲಿ ನಿರ್ವಹಿಸುವ ಅವಶ್ಯಕತೆ ಇಲ್ಲ ಎಂದರ್ಥವೇ? ಅಲ್ಲ. ನಾವು ನಮ್ಮ ಸುತ್ತಮುತ್ತ ನಡೆಯುತ್ತಿರುವುದನ್ನು ಕ್ರಮಬದ್ಧವಾಗಿ ಏಕೆ ನಿರ್ವಹಿಸುತ್ತೇವೆ ಎಂದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವನೆಯಿಂದ. ಯಾವುದೇ ಒಂದು ಪರಿಸ್ಥಿತಿಯಲ್ಲಿ ಎಲ್ಲವೂ ಸುಸೂತ್ರವಾಗಿ ನಿರ್ವಹಣೆಯಾದರೆ ಅದರಲ್ಲಿ ಅಚ್ಚರಿಪಡುವಂಥದ್ದು, ಸಂತೋಷಪಡುವಂಥದ್ದು ಏನೂ ಇಲ್ಲ. ಪ್ರತಿಯೊಂದು ಪರಿಸ್ಥಿತಿಯನ್ನೂ ಸುಸೂತ್ರವಾಗಿ ನಿರ್ವಹಿಸುವುದು ಸಾಧ್ಯವಾದರೆ ಆಗ ನನಗೆ ಅಚ್ಚರಿಯೂ ಸಂತೋಷವೂ ಆಗುತ್ತದೆ. ಸರ್ವ ಸ್ಥಿತಿ ಸಂದರ್ಭಗಳೂ ಸುರಳೀತವಾಗಿ ಸಂದು ಮುಂದೆ ಹೋಗಿಬಿಡಲಿ ಎಂದು ನಾವು ಆಶಿಸುವುದು, ಅದಕ್ಕೆ ಪೂರಕವಾಗಿ ಕಷ್ಟಪಟ್ಟು ನಿರ್ವಹಿಸುವುದು, ಯಾವುದೇ ಅಡೆತಡೆಗಳಿರದಂತೆ ತಪ್ಪುತಡೆಗಳಾಗದಂತೆ ಎಚ್ಚರ ವಹಿಸುವುದು. ಇದೆಲ್ಲವೂ ಯಾವುದರ ದ್ಯೋತಕ? ನಮಗೆ ನಮ್ಮ ಬಗ್ಗೆ ಮತ್ತು ನಮ್ಮ ಸುತ್ತಮುತ್ತಲಿನವರ ಬಗ್ಗೆ ಇರುವ ಕಾಳಜಿಯನ್ನು ಇದು ಸೂಚಿಸುತ್ತದೆ.

ಶ್ರೀರಾಮ ಕೂಡ ತನ್ನ ಜೀವನದಲ್ಲಿ ಇಂತಹ ಹಲವು ಪರಿಸ್ಥಿತಿಗಳನ್ನು ಎದುರುಗೊಂಡ. ಪ್ರತಿ ಬಾರಿಯೂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ಗೆಲುವು ಸಾಧಿಸಿದ, ಎಲ್ಲರಿಂದಲೂ ಸೈ ಎನಿಸಿಕೊಂಡ ಎಂದು ಹೇಳಲು ಬಾರದು. ಬಹಳಷ್ಟು ಕಷ್ಟಕಾರ್ಪಣ್ಯದ ಪರಿಸ್ಥಿತಿಗಳು ಅವನಿಗೆ ಎದುರಾದವು. ಹಲವಾರು ಸಲ ಪರಿಸ್ಥಿತಿ ಆತನ ನಿಯಂತ್ರಣ ಮೀರಿ ಹೋಯಿತು. ಆದರೆ ಆ ಯಾವ ಕಾಲಘಟ್ಟದಲ್ಲಿಯೂ ರಾಮ ಧೃತಿಗೆಡಲಿಲ್ಲ. ಗಾಂಭೀರ‌್ಯವನ್ನು ಬಿಟ್ಟುಕೊಡಲಿಲ್ಲ. ಸ್ಥಿತಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ. ಕರ್ತವ್ಯದಿಂದ ವಿಮುಖನಾಗಲಿಲ್ಲ. ಪಲಾಯನ ಮಾಡಲಿಲ್ಲ. ಯಾರ ಮೇಲೂ ಹರಿಹಾಯಲಿಲ್ಲ. ಹೀಗಳೆಯಲಿಲ್ಲ. ಹಳಿದುಕೊಳ್ಳಲಿಲ್ಲ. ತದೇಕಚಿತ್ತನಾಗಿ ಶ್ರದ್ಧೆಯಿಂದ ಆಯಾ ಕಾಲಘಟ್ಟವನ್ನು ಮತ್ತು ಅದು ತಂದೊಡ್ಡಿದ ಸವಾಲನ್ನು ಅವಲೋಕಿಸಿದ. ಅದಕ್ಕೆ ಅನುಗುಣವಾಗಿ ನ್ಯಾಯೋಚಿತ ಮಾರ್ಗದಲ್ಲಿ ಸ್ಪಂದಿಸಿದ. ಗೆಲ್ಲುವುದೊಂದೇ ಗುರಿಯಾಗಿರಲಿಲ್ಲ. ತನ್ನವರಿಗೆ ವಿನಾಕಾರಣ ಕೇಡಾಗದಂತೆ, ಅಸುರೀ ಶಕ್ತಿಗಳೆಂಬ ಅನ್ಯರಿಗೆ ಆಯವಾಗದಂತೆ ಎಚ್ಚರ ವಹಿಸುವುದಷ್ಟೇ ಆತನ ಆದ್ಯತೆಯಾಗಿತ್ತು. ಈ ನಡೆಯೇ ಆಧ್ಯಾತ್ಮದ ಕಡೆಗಿನ ಮೊದಲ ಮೆಟ್ಟಿಲು. ಇದುವೇ ಮನ ಮಂಥನದ ಮೂಲದ್ರವ್ಯ. ಮನವೆಂಬ ಮರ್ಕಟನನ್ನು ಹೆಡೆಮುರಿಗೆ ಕಟ್ಟಿ ಮೂಲೆಯಲ್ಲಿ ಕೂರಿಸಲು ಈ ಗಾಂಭೀರ್ಯ, ಸ್ಥಿತಪ್ರಜ್ಞತೆ ಬೇಕು. ಅದನ್ನು ಪ್ರಜ್ಞಾಪೂರ್ವಕವಾಗಿ, ಪ್ರಯತ್ನಪರರಾಗಿ ರೂಢಿಸಿಕೊಂಡರೆ ಮಾತ್ರ ಮನಸ್ಸೆಂಬುದು ಪ್ರಫುಲ್ಲವಾಗಿ ಪುಷ್ಪದ ರೀತಿಯಲ್ಲಿ ಅರಳಬಲ್ಲದು. ಸುತ್ತಲಿನ ಜಗತ್ತಿಗೆ ಸುಗಂಧವನ
ನು ಸೂಸಬಲ್ಲದು.

ರಾಮಾಯಣಕ್ಕೂ ಹಂಪಿಗೂ ಅವಿನಾಭಾವ ನಂಟು
ದಕ್ಷಿಣ ಭಾರತದ ಕಾಶಿ ಎನಿಸಿರುವ ಹಂಪಿಗೂ, ರಾಮಾಯಣಕ್ಕೂ ಅವಿನಾಭಾವ ಸಂಬಂಧ. ಶ್ರೀರಾಮಚಂದ್ರ, ಸೀತಾ ಮಾತೆ, ಲಕ್ಷ್ಮಣ, ಹಂಪಿಯ ನೆಲದಲ್ಲಿ ನಡೆದಾಡಿರುವುದರ ಕುರುಹುಗಳಿವೆ ಎಂದು ಜನರು ಈಗಲೂ ನಂಬುತ್ತಾರೆ. ಸೀತಾ ಮಾತೆಯನ್ನು ರಾವಣ ತನ್ನ ಪುಷ್ಪಕ ವಿಮಾನದಲ್ಲಿ ಹೊತ್ತುಕೊಂಡು ಹೋಗಿದ್ದರ ಸುಳಿವವನ್ನು ಜಟಾಯು ಶ್ರೀರಾಮನಿಗೆ ನೀಡಿದ್ದು ಇದೇ ಪ್ರದೇಶದಲ್ಲೇ ಎಂಬುದು ಪ್ರತೀತಿ. ತುಂಗಭದ್ರಾ ನದಿ ತಟದಲ್ಲಿ ಶ್ರೀರಾಮ, ಸೀತಾದೇವಿಯನ್ನು ಹುಡುಕುವುದಲ್ಲದೇ ಸೀತೆಯನ್ನು ರಾವಣ ಎಳೆದುಕೊಂಡು ಹೋದಾಗ ಆಕೆ ಧರಿಸಿದ್ದ ಸೀರೆಯ ಸೆರಗಿನ ಅಂಚಿನ ಚಿತ್ರಾವಳಿ ಹಂಪಿಯ ಬಂಡೆಯೊಂದರ ಮೇಲೆ ಮೂಡಿದೆ ಎಂಬುದನ್ನು ಜನಪದರು ಇಲ್ಲಿ ಗುರುತಿಸುತ್ತಾರೆ. ಈ ಸ್ಥಳ ‘ಸೀತೆ ಸೆರಗು’ ಎಂದು ಜನಜನಿತವಾಗಿದೆ. ಈಗಲೂ ದೇಶದ ಸಾವಿರಾರು ಪ್ರವಾಸಿಗರು ಈ ಸ್ಥಳದ ವೀಕ್ಷಣೆಗೆ ಆಗಮಿಸುತ್ತಾರೆ. ಶ್ರೀರಾಮ ಸೀತೆಯನ್ನು ಹುಡುಕುತ್ತ ಬರುತ್ತಿದ್ದಾಗ, ಹಂಪಿಯ ಮಾಲ್ಯವಂತ ರಘುನಾಥ ದೇಗುಲದಲ್ಲಿ ವಿಶ್ರಮಿಸಿದ್ದರು. ಇದೇ ಜಾಗದಲ್ಲಿ ಅವರು ಪ್ರಾರ್ಥನೆ ಮಾಡಿದ್ದರು. ಶ್ರೀವಿರೂಪಾಕ್ಷೇಶ್ವರ ಸ್ವಾಮಿಯನ್ನು ಕೂಡ ಭಜಿಸಿದ್ದರು ಎಂಬುದು ಪೌರಾಣಿಕ ಕಥನದಿಂದ ತಿಳಿದು ಬರುತ್ತದೆ. ಕಪಿಸೈನ್ಯದೊಂದಿಗೆ ರಾವಣನ ವಿರುದ್ಧ ಜಯಶಾಲಿಯಾಗಿ ಶ್ರೀರಾಮ ಮರಳಿ ಬಂದಾಗ ಭರತ ಸ್ವಾಗತಿಸಿದ್ದು ಇದೇ ಹಂಪಿಯಲ್ಲೇ. ಅದರ ಕುರುಹು ಆಗಿ ಕೋದಂಡರಾಮ ದೇಗುಲ ಕೂಡ ನಿರ್ಮಾಣಗೊಂಡಿದೆ ಎಂಬ ಪ್ರತೀತಿ ಇದೆ. ಇಲ್ಲಿಯ ಹಲವು ಸ್ಮಾರಕಗಳಲ್ಲಿ ರಾಮಾಯಣದ ಎಲ್ಲ ಪ್ರಮುಖ ಘಟನೆಗಳ ಕೆತ್ತನೆಗಳನ್ನು ಒಳಗೊಂಡಿರುವುದು ವಿಶೇಷ.

ಹನುಮನುದಿಸಿದ ಕಿಷ್ಕಿಂದೆ
ಹಂಪಿ ಪ್ರದೇಶದಲ್ಲೇ ಬರುವ ತಾಲೂಕಿನ ಕಿಷ್ಕಿಂದೆ (ಆನೆಗೊಂದಿ)ಯ ಅಂಜನಾದ್ರಿ ಬೆಟ್ಟದಲ್ಲಿ ಸೂರ್ಯದೇವನ ಕೃಪೆಯಿಂದ ಹನುಮಂತದೇವರು ಜನಿಸಿದ್ದ ಎಂಬುದು ಪ್ರತೀತಿ. ತುಂಗಭದ್ರಾ ನದಿ ತಟದಲ್ಲಿರುವ ಇದೇ ಸ್ಥಳದಲ್ಲೇ ಶ್ರೀರಾಮಚಂದ್ರನಿಗೆ ಕಾಯ, ವಾಚ, ಮನಸಾ ಸಹಕಾರ ನೀಡಿದ ಹನುಮಂತ, ಸೀತೆಯ ಸುಳಿವು ಕಂಡುಹಿಡಿಯಲು ಇದೇ ಸ್ಥಳದಲ್ಲೇ ಹಲವು ಪ್ರಯತ್ನ ನಡೆಸಿದ್ದ ಎನ್ನಲಾಗುತ್ತದೆ. ಸುಗ್ರೀವ, ಹನುಮಂತ, ಜಾಂಬವಂತ, ವಾಯು ಶ್ರೀರಾಮನಿಗೆ ಭೇಟಿಯಾಗಿದ್ದು ಆನೆಗೊಂದಿ ಬೆಟ್ಟದಲ್ಲೇ. ವಾಲಿಯನ್ನು ಶ್ರೀರಾಮ ವಧೆಮಾಡಿದ್ದು ಇದೇ ಕ್ಷೇತ್ರದಲ್ಲೇ ಎಂಬುದು ಜನಪದರ ನಂಬಿಕೆ. ವಾನರ ಸೈನ್ಯದ ನೆರವಿನೊಂದಿಗೆ ಸೀತೆಯ ಸುಳಿವು ಕಂಡುಹಿಡಿಯುವಲ್ಲಿ ಯಶಸ್ವಿಯಾಗುವುದೂ ಇದೇ ಸ್ಥಳದಲ್ಲಿ ಎಂದೂ ಹೇಳಲಾಗುತ್ತದೆ. ಈ ಪ್ರದೇಶದಲ್ಲಿ

ತುಂಗಭದ್ರಾ ನದಿ, ಎರಡು ಟಿಸಿಲಾಗಿ ಹರಿಯುತ್ತಿದ್ದು, ಒಂದು ಭಾಗವನ್ನು ಹನುಮನ ಸೆಳವು ಎನ್ನಲಾಗುತ್ತದೆ.

ಇಡಗುಂದಿಗೆ ಆಗಮಿಸಿದ್ದ ಶ್ರೀ ರಾಮಚಂದ್ರ
ತ್ರೇತಾಯುಗದ ಕಾಲದಲ್ಲಿ ಶ್ರೀ ರಾಮಚಂದ್ರನು ಸೀತಾ ಲಕ್ಷ್ಮಣರೊಂದಿಗೆ ದಂಡಕಾರಣ್ಯಕ್ಕೆ ವನವಾಸ ಪೂರ್ತಿಗಾಗಿ ಬಂದವನು ಇಳಾಗುಂಜಿ (ಇಡಗುಂದಿ)ಗೆ ಬಂದು ಪವಿತ್ರವಾದ ವನಭೂಮಿಯನ್ನು ಕಂಡನು. ಅನೇಕ ಸಣ್ಣ ನದಿಗಳನ್ನು, ದಟ್ಟವಾದ ಅರಣ್ಯವನ್ನು ದಾಟಿ ಋಷಿಗಳು ವಾಸವಾಗಿರುವ ಪುಣ್ಯಭೂಮಿಯಾದ ಇಳಾಗುಂಜಿಗೆ ಬಂದಾಗ ಅವರನ್ನು ಕಣ್ವ, ಶಾಂಡಿಲ್ಯ, ಗರ್ಗ ಮುಂತಾದ ಮಹರ್ಷಿಗಳು ಅತ್ಯಾನಂದದಿಂದ ಸ್ವಾಗತಿಸಿದರು. ನಭೋ ವಾಣಿಯನ್ನು ಕೇಳಿ ಈ ಸ್ಥಳಕ್ಕೆ ಬಂದಿದ್ದಾಗಿ ಶ್ರೀರಾಮಚಂದ್ರನು ಅವರಿಗೆ ತಿಳಿಸಿದನು. ನಂತರದಲ್ಲಿ ಭಕ್ತರ ಉದ್ಧಾರಕ್ಕಾಗಿ ಪವಿತ್ರ ಶಿವಲಿಂಗವನ್ನು ಇಲ್ಲಿನ ಹರೀತಕೀವನದಲ್ಲಿ ಸ್ಥಾಪಿಸಿ, ಪೂಜಿಸಿ, ಸ್ತುತಿಸಿದನು. ಇದರಿಂದ ಸುಪ್ರೀತನಾದ ಶಿವನು ಪ್ರತ್ಯಕ್ಷನಾಗಿ ತಾನು ಇಲ್ಲಿಯೇ ರಾಮಲಿಂಗೇಶ್ವರನೆಂಬ ಅಭಿದಾನದಿಂದ ವಾಸಿಸುವುದಾಗಿಯೂ ಈ ಕ್ಷೇತ್ರವು ತನ್ನ ವಾಸಸ್ಥಾನವಾಗುವುದರಿಂದ ಪುಣ್ಯ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯಲೆಂದು ಹರಿಸಿದನೆಂದು ಐತಿಹ್ಯವಿದೆ. ಅಂದು ಇಳಾಗುಂಜಿ ಎಂದು ಪ್ರಸಿದ್ಧಿ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ ಇಂಥ ಪುರಾಣ ಪ್ರಸಿದ್ಧ ಶ್ರೀರಾಮಲಿಂಗ ದೇವಸ್ಥಾನವಿದೆ. ರಾಮಲಿಂಗೇಶ್ವರ ದೇವರ ಜತೆಯಲ್ಲಿ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದಿ ಮುಂತಾದ ಪರಿವಾರ ದೇವತೆಗಳಿವೆ. ಈ ದೇವಸ್ಥಾನ ಯಲ್ಲಾಪುರ ಪಟ್ಟಣದಿಂದ ಕಾರವಾರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ 10 ಕಿ.ಮೀ. ದೂರದಲ್ಲಿದೆ . ಈ ದೇವಸ್ಥಾನ ಆಗ ಮೋಕ್ಷ ಸ್ಥಳವಾಗಿದ್ದು, ನಿತ್ಯ ಪೂಜಾ ಕಾರ್ಯಗಳು, ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ, ಉತ್ಸವಗಳು ಜರುಗುತ್ತವೆ. ಮಹಾಶಿವರಾತ್ರಿಯಂದು ಜಾತ್ರಾ ಮಹೋತ್ಸವ, ಮಹಾರಥೋತ್ಸವ ನಡೆಯುತ್ತದೆ. ಅದರಂತೆ ರಾಮ ನವಮಿಯಂದು ವಿಶೇಷ ಪೂಜೆ, ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ತಾಲೂಕು ಅಲ್ಲದೇ ಜಿಲ್ಲೆ, ಹೊರ ಜಿಲ್ಲೆಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ.

ರಾಮತೀರ್ಥ
ಶ್ರೀ ರಾಮಚಂದ್ರನ ಸೂರ್ಯೋಪಾಸನೆ ಐತಿಹ್ಯ ಹೊಂದಿರುವ ರಾಮತೀರ್ಥ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಅಥಣಿ ತಾಲೂಕಿನ ಪುಟ್ಟ ಹಳ್ಳಿ. ಶ್ರೀರಾಮನ ಸೂರ್ಯೋಪಾಸನೆ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಿದ್ದು, ರಾಮತೀರ್ಥ ಗ್ರಾಮ ಶ್ರೀರಾಮ ಭಕ್ತರಿಗೆ ಪವಿತ್ರ ಯಾತ್ರಾ ಸ್ಥಳವಾಗಿ ದಕ್ಷಿಣದ ಕಾಶಿ ಎಂದು ಹೆಸರಾಗಿದೆ. ಶ್ರೀ ರಾಮಚಂದ್ರ ತನ್ನ ವನವಾಸದ ಸಂದರ್ಭ ಸೀತೆಯನ್ನು ಹುಡುಕಲು ಉತ್ತರದಿಂದ ದಕ್ಷಿಣದ ಶ್ರೀಲಂಕಾದತ್ತ ಪಯಣ ಮಾಡುತ್ತಿರುವಾಗ ತಾಲೂಕಿನ ಕೋಹಳ್ಳಿಗೆ ಭೇಟಿ ನೀಡಿದ ಬಗ್ಗೆ ರಾಮಾಯಣದಲ್ಲಿ ಪ್ರಸ್ತಾಪವಿದೆ. ಕೋಹಳ್ಳಿಯಲ್ಲಿ ಕಹೋಳ ಋಷಿಗಳ ಆಶ್ರಮಕ್ಕೆ ಬಂದು ವಿಶ್ರಮಿಸಿದಾಗ ಸಮೀಪದ ಓಂಕಾರೇಶ್ವರ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಸೂರ್ಯನ ಅಭಿಮುಖವಾಗಿ ಸೂರ್ಯೋಪಾಸನೆ ಮಾಡು, ಇದರಿಂದ ನಿನ್ನ ಇಷ್ಟಾರ್ಥ ಈಡೇರುವುದು ಎಂದು ಕಹೋಳ ಋಷಿಗಳು ಉಪದೇಶಿಸಿದರು. ಶ್ರೀರಾಮಚಂದ್ರ ಓಂಕಾರೇಶ್ವರ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ 30 ದಿನ ಸೂರ್ಯೋಪಾಸನೆ ಮಾಡಿದ. ಅಂದಿನಿಂದ ಕೋಹಳ್ಳಿ ಓಂಕಾರೇಶ್ವರನನ್ನು ರಾಮೇಶ್ವರ ಲಿಂಗ ಎಂದು ಕರೆಯುವ ರೂಢಿಯಾಗಿ ಮುಂದೆ ಅದೇ ರಾಮತೀರ್ಥ ಎಂದು ಪ್ರಸಿದ್ಧಿಯಾಯಿತು. ಈ ರಾಮತೀರ್ಥ ಗ್ರಾಮ ಈ ಶ್ರೀರಾಮನ ಭಕ್ತರ ಪುಣ್ಯಕ್ಷೇತ್ರ ಎಂದೇ ಹೆಸರಾಗಿದೆ. ಶ್ರೀ ರಾಮಚಂದ್ರ ಕೈಗೊಂಡ ಸೂರ್ಯೋಪಾಸನೆಯ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿದೆ. ಶ್ರೀರಾಮ ವನವಾಸಕ್ಕೆ ಹೋದ ಸ್ಥಳಗಳನ್ನು ಗುರುತಿಸುವ ಕಾರ್ಯ ಇತ್ತೀಚೆಗೆ ನಡೆದಿತ್ತು. ಇತಿಹಾಸ ಸಂಶೋಧಕರು ಕೆಲ ದಿನಗಳ ಹಿಂದೆ ರಾಮತೀರ್ಥಕ್ಕೂ ಆಗಮಿಸಿದ್ದರು. ಇಲ್ಲಿ ಶ್ರೀರಾಮ ಪಾದುಕೆಗಳನ್ನು ಕೂಡ ಸ್ಥಾಪಿಸಲಾಗಿದೆ.

ಶಬರಿಕೊಳ್ಳದಲ್ಲಿ ಶ್ರೀರಾಮನ ದೇವಸ್ಥಾನ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನದಿಂದ 3 ಕೀ.ಮಿ. ಅಂತರದ ಅರಣ್ಯ ಪ್ರದೇಶದಲ್ಲಿರುವ ಶ್ರೀ ಶಬರಿಕೊಳ್ಳಕ್ಕೆ ಶ್ರೀರಾಮನ ಭೇಟಿ ನೀಡಿರುವ ಬಗ್ಗೆ ಐತಿಹ್ಯವಿದೆ. ಶಬರಿಯು ಮಧ್ಯಪ್ರದೇಶದ ಶಭರ ಮಹಾರಾಜನ ಒಬ್ಬಳೇ ಮಗಳು. ತನ್ನ ಸ್ವಯಂವರಕ್ಕೆ ಪ್ರಾಣಿಗಳ ಜೀವ ತೆಗೆಯುವುದನ್ನು ನೋಡಲಾಗದೆ, ಜೀವನದಲ್ಲಿ ಹಿಂಸೆಗಿಂತ ಅಹಿಂಸಾಮಾರ್ಗ ಒಳ್ಳೆಯದು ಎಂದುಕೊಂಡು ಅದರಂತೆ ವೈರಾಗ್ಯ ತಳೆದು, ನಾರುಮಡಿಯನ್ನುಟ್ಟು ದೇಶ ಸಂಚಾರಿಯಾಗಿ ಶಬರಿಯು ಸುರೇಬಾನ ಗ್ರಾಮಕ್ಕೆ ಹೊಂದಿದ ಅರಣ್ಯದಲ್ಲಿ ನೆಲೆಸುತ್ತಾಳೆ. ಶ್ರೀ ರಾಮನ ಬರುವಿಗಾಗಿ ಸಾವಿರ ವರುಷ ತಪಗೈದು ರಾಮನಿಗಾಗಿ ಬೋರೆ ಹಣ್ಣುಗಳನ್ನು ಆಯ್ದು ತಂದು ರುಚಿನೋಡಿ ಸಿಹಿಯಾದ ಹಣ್ಣುಗಳನ್ನು ಬೇರ್ಪಡಿಸಿ ಇಡುತ್ತಿದ್ದಳು. ರಾಮನು ಸೀತೆಯನ್ನು ಹುಡುಕುತ್ತಾ ಬಂದು ಈ ಅಭಯಾರಣ್ಯದಲ್ಲಿ ನೆಲೆಸಿದ ಶಬರಿಮಾತೆಗೆ ದರ್ಶನವಿತ್ತು ಸಿಹಿ ಬೋರೆಹಣ್ಣುಗಳನ್ನು ಸೇವಿಸಿದರು. ಈ ಕ್ಷೇತ್ರಕ್ಕೆ ನೂರಾರು ಜನ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಿಂದ ಸಾಧು-ಸಂತರು ಬಂದು ಶಬರಿಯ ಸನ್ನಿಧಿಯಲ್ಲಿ ಜಪ-ತಪ ಗೈದು ಪುನೀತರಾಗಿರುವರು. ಅಲ್ಲದೇ ಮನಿಹಾಳ ಗ್ರಾಮದ ಸದ್ಗುರು ಶ್ರೀ ಶಿವಾನಂದರು 18 ದಿನಗಳವರೆಗೆ ಅನುಷ್ಠಾನಗೈದು ಶಬರಿ ತಾಯಿ ಕಪೆಗೆ ಪಾತ್ರರಾಗಿರುವುದು ಒಂದು ತಾಜಾ ನಿದಶರ್ನ. ಶ್ರೀರಾಮ ಮಂದಿರ ಹಾಗೂ ಮಳೆರಾಜನ ಮಂದಿರವು ಇದೆ, ಈ ದೇವಸ್ಥಾನದಲ್ಲಿ ಸುಂದರವಾದ ಶ್ರೀರಾಮ, ಲಕ್ಷ್ಮಣ, ಸಿತಾಮಾತೆ ಹಾಗೂ ಧೀರ ಮಾರುತಿ ವಿಗ್ರಹಗಳು ಇವೆ.

ಬಾಗಲಕೋಟ ಜಿಲ್ಲೆ
ಬಾಗಲಕೋಟ ತಾಲೂಕಿನ ಸೀತಿಮನಿಯಲ್ಲಿರುವ ಸೀತಾದೇವಿ ದೇವಸ್ಥಾನದ ಬಳಿ ಲವ, ಕುಶ ಎಂಬ ಹೊಂಡಗಳಿವೆ. ಸೀತಾದೇವಿ ಲವ, ಕುಶರಿಗೆ ಜನ್ಮ ನೀಡಿದ್ದು ಈ ಸ್ಥಳದಲ್ಲಿ ಎಂಬುದು ನಂಬಿಕೆ. ಈ ಹೊಂಡಗಳಲ್ಲಿ ಬೇಸಿಗೆಯಲ್ಲೂ ನೀರಿರುತ್ತದೆ. ಇಲ್ಲಿ ಬಾಣಂತಿಯರಿಗಾಗಿ ಕಷಾಯ ಸಿದ್ಧಪಡಿಸಲಾಗುವ ಕಲ್ಲುಗಳು ದೊರೆತಿವೆ. ಲವ ಹಾಗೂ ಕುಶ ಇಲ್ಲಿ ಬಿಲ್ಲು ವಿದ್ಯೆ ಕಲಿತರು ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ. ಸೀತಾದೇವಿ ದೇವಸ್ಥಾನ ಹಾಗೂ ಸೀತಾಚಲವಾಸ ವೆಂಕಟೇಶ್ವರ ದೇವಾಲಯಗಳಿಗೆ ಪ್ರತಿ ದಿನ ನೂರಾರು ಜನ ಭೇಟಿ ನೀಡುತ್ತಾರೆ. ಸರಕಾರದ ನೇತೃತ್ವದಲ್ಲಿ ಹೊಂಡಗಳನ್ನು ಸಂರಕ್ಷಿಸುವ ಕಾರ್ಯ ಕೈಗೊಳ್ಳಲಾಗಿದೆ. ಹೊಂಡಗಳ ಪಕ್ಕದಲ್ಲಿ ಎರಡು ಕೋಣೆಗಳಿದ್ದು ಸೀತಾದೇವಿಯ ಸಹಾಯಕರಿಗಾಗಿ ಈ ಕೋಣೆಗಳನ್ನು ನಿರ್ಮಿಸಲಾಗಿತ್ತು ಎನ್ನುವುದು ಜನರ ನಂಬಿಕೆಯಾಗಿದೆ.

ಕಣಿವೆ ರಾಮಲಿಂಗೇಶ್ವರ
ಕೊಡಗು ಜಿಲ್ಲೆ ಕುಶಾಲನಗರ ಸಮೀಪ ಕಾವೇರಿ ನದಿ ದಂಡೆಯಲ್ಲಿರುವ ರಾಮಸ್ವಾಮಿ ಕಣಿವೆಯ ಶ್ರೀರಾಮಲಿಂಗೇಶ್ವರ ಲಿಂಗವು ಸೀತಾಪಹರಣದ ಕಥೆ ಹೇಳುತ್ತದೆ. ಶ್ರೀರಾಮ, ಲಕ್ಷಣರು ಸೀತೆಯನ್ನು ಹುಡುಕುತ್ತ ದಕ್ಷಿಣಾಭಿಮುಖವಾಗಿ ಬರುವ ಸಂದರ್ಭ ಇಲ್ಲಿನ ಪ್ರಕತಿ ಸೌಂಧರ್ಯವನ್ನು ಕಂಡು ವಿಶ್ರಾಂತಿ ಪಡೆಯಲು ಮುಂದಾದರು. ಸರೋವರದ ದಡದಲ್ಲಿ ತಪಸ್ಸು ನಿರತರಾಗಿದ್ದ ವ್ಯಾಘ್ರ ಮಹರ್ಷಿಗಳು ತನ್ನ ಪೂಜಾ ಕೈಂಕರ್ಯಕ್ಕೆ ಅವಶ್ಯವಿರುವ ಶಿವಲಿಂಗವನ್ನು ತರುವಂತೆ ಶ್ರೀರಾಮನಿಗೆ ಆಜ್ಞೆ ಮಾಡುತ್ತಾರೆ. ಅಂತೆಯೇ ಶಿವಲಿಂಗ ತರಲೆಂದು ಕಾಶಿಗೆ ತೆರಳಿದ ಆಂಜನೇಯ ಹಿಂತಿರುಗುವುದು ತಡವಾಗುತ್ತದೆ. ಇದನ್ನರಿತ ರಾಮ ಸ್ಥಳದಲ್ಲಿಯೇ ಮರಳಿನಿಂದ ಶಿವಲಿಂಗವನ್ನು ತಯಾರಿಸಿ ಪೂಜೆ ಆರಂಭಿಸಿದ. ಅಷ್ಟರಲ್ಲಿ ಆಂಜನೇಯನೂ ಶಿವಲಿಂಗವನ್ನು ತಂದನು. ಆತನಿಗೆ ಬೇಸರ ಆಗಬಾರದೆಂಬ ಕಾರಣಕ್ಕೆ ಕಾಶಿಯಿಂದ ತಂದ ಶಿವಲಿಂಗವನ್ನು ಶ್ರೀರಾಮ ಸನ್ನಿಧಿಯ ಹಿಂಬದಿಯಲ್ಲಿ ಲಕ್ಷ್ಮಣನ ಮೂಲಕ ಪ್ರತಿಷ್ಠಾಪಿಸುತ್ತಾನೆ. ಈ ಕಾರಣಕ್ಕೆ ಇದೀಗ ಲಕ್ಷ್ಮಣೇಶ್ವರ ಕ್ಷೇತ್ರವಾಗಿದೆ ಎನ್ನುವುದು ಪ್ರತೀತಿ. ಈಗಲೂ,ಯುಗಾದಿ ಬಳಿಕ ನಡೆಯುವ ರಾಮಲಿಂಗೇಶ್ವರ ಬ್ರಹ್ಮ ರಥೋತ್ಸವ ಸಂದರ್ಭ ಅಂಚೆ ಮೂಲಕ ಕಾಶಿಯಿಂದ ಗಂಗಾಜಲ ಹೆಬ್ಬಾಲೆ ಅಂಚೆ ಕಛೇರಿಗೆ ಬರುತ್ತದೆ. ಅದನ್ನ್ನು ನಾದಸ್ವರ, ವಾದ್ಯಗೋಷ್ಠಿಗಳೊಂದಿಗೆ ಕಣಿವೆ ಗ್ರಾಮಸ್ಥರು ಗ್ರಾಮಕ್ಕೆ ತಂದು ರಾಮಲಿಂಗಕ್ಕೆ ಅಭಿಷೇಕ ಮಾಡಿದ ಬಳಿಕ ರಥೋತ್ಸವ ಆರಂಭವಾಗುತ್ತದೆ.

ಚುಂಚನಕಟ್ಟೆಯ ಕೋದಂಡರಾಮ
ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಪ್ರವಾಸಿ ತಾಣ ಚುಂಚನಕಟ್ಟೆಗೂ ಶ್ರೀರಾಮನು ತನ್ನ ವನವಾಸ ಕಾಲದಲ್ಲಿ ಪತ್ನಿ ಸೀತೆಯೊಂದಿಗೆ ಬಂದಿದ್ದನೆಂಬ ಐತಿಹ್ಯವಿದೆ. ಇಲ್ಲಿನ ಕೋದಂಡರಾಮ ದೇವಾಲಯವು ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಶ್ರೀರಾಮನ ಪರಮಭಕ್ತನಾಗಿದ್ದ ಚುಂಚ ಎಂಬ ಋಷಿ ಇಲ್ಲಿ ನೆಲೆಸಿ ಶ್ರೀರಾಮನ ನಿರೀಕ್ಷೆಯಲ್ಲಿದ್ದನೆಂದೂ, ಶ್ರೀರಾಮ ಅರಣ್ಯ ವಾಸದಲ್ಲಿದ್ದಾಗ ಸೀತಾ, ಲಕ್ಷ್ಮಣ ಸಮೇತನಾಗಿ ಇಲ್ಲಿಗೆ ಆಗಮಿಸಿ ಚುಂಚ ಮಹರ್ಷಿಗಳಿಗೆ ದರ್ಶನ ನೀಡಿದನೆಂದೂ ಹೀಗಾಗಿ ಈ ಕ್ಷೇತ್ರ ಚುಂಚನಕಟ್ಟೆ ಎಂದು ಹೆಸರಾಯಿತು ಎನ್ನುತ್ತದೆ ಸ್ಥಳ ಪುರಾಣ. ಈ ಪ್ರದೇಶದಲ್ಲಿ ಚುಂಚ,ಚುಂಚಿಯರೆಂಬ ರಾಕ್ಷಸರು ವಾಸವಾಗಿದ್ದರು. ಸುತ್ತಮುತ್ತಲ ನಿವಾಸಿಗಳಿಗೆ ಅವರು ವಿಪರೀತ ಕಾಟ ಕೊಡುತ್ತಿದ್ದರು. ಋಷಿ ಮುನಿಗಳಿಗೆ ಯಜ್ಞಯಾಗ ಮಾಡದಂತೆ ಅಡ್ಡಿಪಡಿಸುತ್ತಿದ್ದರು. ವನವಾಸ ಕಾಲದಲ್ಲಿ ರಾಮ ಇಲ್ಲಿಗೆ ಬಂದಾಗ ಋಷಿ ಮುನಿಗಳು, ಜನರು ರಾಕ್ಷಸರಿಂದ ಮುಕ್ತಿ ನೀಡುವಂತೆ ಕೋರಿದರು. ಆಗ ಶ್ರೀರಾಮ ಚುಂಚ ಚುಂಚಿಯರನ್ನು ಸಂಹರಿಸಿ, ಒಂದು ಕಟ್ಟೆಯ ಮೇಲೆ ಕುಳಿತನಂತೆ. ಹೀಗಾಗಿ ಈ ಪ್ರದೇಶಕ್ಕೆ ಚುಂಚನ ಕಟ್ಟೆ ಎಂದು ಹೆಸರು ಬಂದಿತು ಎನ್ನುತ್ತದೆ ಇನ್ನೊಂದು ಕತೆ. ದ್ರಾವಿಡ ಶೈಲಿಯ ದೇವಾಲಯಕ್ಕೆ ಹೋಗಲು 30 ಮೆಟ್ಟಿಲುಗಳನ್ನು ಏರಿದರೆ, ವಿಜಯನಗರ ಶೈಲಿಯ ರಾಜಗೋಪುರ ಸ್ವಾಗತಿಸುತ್ತದೆ. ಮೂರು ಅಂತಸ್ತಿನ ಗೋಪುರದಲ್ಲಿ ಜಯವಿಜಯರ ಹಾಗೂ ದೇವತೆಗಳ ಗಾರೆ ಶಿಲ್ಪಗಳಿವೆ. ಪ್ರವೇಶ ದ್ವಾರದ ಒಳ ಪ್ರವೇಶಿಸಿದರೆ ದೊಡ್ಡ ಪ್ರಾಕಾರವಿದೆ. ಒಳ ಭಿತ್ತಿಗಳಲ್ಲಿ ದಶಾವತಾರ ಚಿತ್ರಗಳಿವೆ. ದೇವಾಲಯದ ಸುತ್ತ ಹಲವು ಪುಟ್ಟ ಮಂಟಪಗಳಿವೆ. ದೇವಾಲಯ ಪ್ರಾಂಗಣದಲ್ಲಿ ಶ್ರೀರಾಮನ ವಿವಿಧ ಅವತಾರಗಳ ತೈಲ ವರ್ಣಚಿತ್ರಣಗಳಿವೆ. ಗೋಡೆಗಳ ಮೇಲೆ ರಾಮ ಸೀತೆ, ಲಕ್ಷ್ಮಣರ ಅನೇಕ ಬಗೆಯ ಚಿತ್ರಗಳಿವೆ.

‘ರಾಮತೀರ್ಥ’: ಇದಂ ಸ್ಥಳಂ ನರಾವಣಂ!
ರಾಮ-ರಾವಣರ ಯುದ್ಧದಲ್ಲಿ ಲಂಕೇಶ್ವರ ಅಸುನೀಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾವಣನ ಹತ್ಯೆಯ ಕಾರಣದಿಂದಾಗಿ ಬಂದ ಬ್ರಹ್ಮಹತ್ಯಾ ದೋಷ ಪರಿಹಾರಕ್ಕಾಗಿ ಶಿವಲಿಂಗ ಸ್ಥಾಪಿಸಿ, ಪೂಜೆ ಸಲ್ಲಿಸಿ ’ರಾವಣಾ’ ಎಂದು ಕರೆದಾಗ ಅದಕ್ಕೆ ಧ್ವನಿಯ ಪ್ರತಿಕ್ರಿಯೆ ಕೇಳಿ ಬರುತ್ತಿತ್ತು. ರಾಮ ಹೀಗೆ ಸ್ಥಾಪಿಸಿದ ಲಿಂಗಗಳನ್ನು ’ರಾಮಲಿಂಗ’ ಎಂದು ಗುರುತಿಸಲಾಗುತ್ತದೆ. ಹಾಗೆ ಪೂಜೆ ಸಲ್ಲಿಸುವ ಮುಂಚೆ ಸ್ನಾನ ಮಾಡಿದ ತೀರ್ಥಗಳನ್ನು ’ರಾಮತೀರ್ಥ’ ಎಂದು ಕರೆಯಲಾಗುತ್ತದೆ. ಒಂದೊಂದು ಶಿವಲಿಂಗದ ಪೂಜೆಯ ನಂತರವೂ ಪ್ರತಿಕ್ರಿಯೆಯ ಧ್ವನಿ ಕ್ಷೀಣವಾಗುತ್ತ ಹೋಗುತ್ತದೆ. ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ’ನರೋಣಾ’ ಗ್ರಾಮದಲ್ಲಿ ರಾಮನು ಶಿವಲಿಂಗ ಸ್ಥಾಪಿಸಿ ಪೂಜೆ ಸಲ್ಲಿಸಿದ ನಂತರ ಕೂಗಿದಾಗ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಂತೆ. ಅದೇ ’ನ ರಾವಣ’ ಎಂದಾಗಿ ಚಾಲ್ತಿಯಲ್ಲಿ ನರೋಣಾ ಎಂದಾಯಿತಂತೆ. ಲಂಕೆಯಿಂದ ಅಯೋಧ್ಯೆಗೆ ಮರಳುವ ಮಾರ್ಗ ಮಧ್ಯೆ ರಾಮ ಈ ಸ್ಥಳಕ್ಕೆ ಭೇಟಿದಾಗ ಲಿಂಗ ಸ್ಥಾಪಿಸಿದ ಪೂಜಿಸಿದ. ಆಗ ರಾವಣಹತ್ಯಾ (ಬ್ರಹ್ಮ ಹತ್ಯಾ) ದೋಷ ಕಳೆಯಿತಂತೆ. ಹೀಗಾಗಿ ಸ್ವಯಂ ಶ್ರೀರಾಮ ಈ ಕ್ಷೇತ್ರಕ್ಕೆ ‘ನರಾವಣ(ಇದಂ ಸ್ಥಳಂ ನರಾವಣಂ) ಎಂದು ನಾಮಕರಣ ಮಾಡಿದರು ಎನ್ನಲಾಗುತ್ತದೆ. ‘ಇಲ್ಲಿಂದ ಮುಂದೆ ರಾವಣನಿಲ್ಲ’ ಎಂಬುದು ಇದರ ಅರ್ಥ.

ಕಣ್ಣೀರಿಂದ ಹುಟ್ಟಿದ ಸೀತಾ ಬಾವಿ
ಮಂಗಳೂರಿನ ಕದ್ರಿ ದೇವಸ್ಥಾನದ ಮೇಲ್ಭಾಗದಲ್ಲಿರುವ ಕದಳೀವನದಲ್ಲಿ ‘ಸೀತಾ ಬಾವಿ’ ಇದೆ. ಚಿತ್ರಕೂಟದಿಂದ ಪುಷ್ಪಕ ವಿಮಾನದ ಮೂಲಕ ರಾವಣನು ಸೀತೆಯನ್ನು ಅಪಹರಿಸುವಾಗ ಕಣ್ಣೀರಿಟ್ಟ ಸೀತೆಯ ಅಶ್ರುಬಿಂದುವೊಂದು ಜಾರಿ ಬಿದ್ದು ಬಾವಿಯೊಂದು ನಿರ್ಮಾಣವಾಯಿತು ಎಂಬ ಐತಿಹ್ಯವಿದೆ. ಸದಾ ಕಾಲ ನೀರು ಇರುವ ಈ ಬಾವಿಗೆ ಭಕ್ತರು ಕಾಣಿಕೆ ಹಾಕುತ್ತಾರೆ.
ಸೀತೆಯ ಮೂಗುತಿ: ಕದ್ರಿ ದೇವಸ್ಥಾನದ ಎದುರು ಭಾಗದಲ್ಲಿರುವ ದೀಪ ಸ್ತಂಭದ ಪಂಚಾಂಗದಲ್ಲಿ ಸೀತೆ-ರಾಮ-ಲಕ್ಷ್ಮಣದ ಚಿತ್ರವಿದ್ದು, ಒಳಗೆ ಸೀತೆಯ ಮೂಗುತಿ ಇದೆ ಜನ ನಂಬಿದ್ದಾರೆ.

ಕಾರಿಂಜದಲ್ಲಿ ಸೀತೆ ಕಲ್ಲು
ಬಂಟ್ವಾಳ ತಾಲೂಕಿನ ವಗ್ಗದ ಬಳಿ ಇರುವ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿರುವ ಪ್ರಮಾಣದ ಕಲ್ಲಿಗೂ ಸೀತಾ ಪ್ರಮಾಣಕ್ಕೂ ಸಂಬಂಧವಿದೆ. ಎತ್ತರದ ಗುಡ್ಡದ ಮೇಲೆ ಇರುವ ಈಶ್ವರ ದೇವಸ್ಥಾನದ ಪಕ್ಕ ಎರಡು ಗುಡ್ಡಗಳ ನಡುವೆ ದೊಡ್ಡ ಗಾತ್ರದ ಎರಡು ಕಲ್ಲುಗಳಿವೆ. ಅಗ್ನಿಪರೀಕ್ಷೆಗೆ ಒಳಗಾದ ಬಳಿಕ ಸೀತೆಯನ್ನು ಇಲ್ಲಿಗೆ ಕರೆದುಕೊಂಡು ಬಂದ ರಾಮ ಈ ಕಲ್ಲುಗಳನ್ನು ಹಾರಿ ದಾಟುವಂತೆ ತಾಕೀತು ಮಾಡಿದನೆಂದು ಪ್ರತೀತಿ. ಈ ಕಲ್ಲುಗಳ ನಡುವೆ ಸುಮಾರು 10-12 ಅಡಿ ಅಂತರವಿದ್ದು, ಸ್ವಲ್ಪವೇ ತಪ್ಪಿದರೂ 100ಕ್ಕೂ ಅಡಿ ಆಳದ ಪ್ರಪಾತಕ್ಕೆ ಬೀಳಬೇಕು!

ಹಿರೇಮಗಳೂರು ಕೋದಂಡರಾಮ
ಶಿವಮೊಗ್ಗದ ಶಿವಪ್ಪನಾಯಕ ಅರಮನೆ ಪಕ್ಕದ ತುಂಗೆ ತಟದಲ್ಲಿರುವ ದೂರ್ವಾಸ ಕ್ಷೇತ್ರ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ಕ್ಷೇತ್ರ ತ್ರೇತಾಯುಗದಲ್ಲಿ ದೂರ್ವಾಸ ಮುನಿಗಳಿಗೆ ಆಂಜನೇಯ ದರ್ಶನ ಕೊಟ್ಟ ಐತಿಹ್ಯದ ಸ್ಥಳವಾಗಿದೆ. ದೂರ್ವಾಸ ಮಹರ್ಷಿಗಳಿಂದ ಹೆಬ್ಬಂಡೆಯ ಮೇಲೆ ಬಾಲಹನುಮನ ಯಂತ್ರ ಸ್ಥಾಪನೆ, ದ್ವಾಪರ ಯುಗದಲ್ಲಿ ಭೀಮ, ಜನಮೇಜಯ ರಾಜರಿಂದ ವಿಗ್ರಹ ಸ್ಥಾಪನೆಯಾಗಿದ್ದು, 75 ವರ್ಷಗಳ ಹಿಂದೆ ಶ್ರೀ ಸೀತಾರಾಮಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿಶ್ವದಲ್ಲಿಯೇ ಆಂಜನೇಯ ಮೊದಲು ಪೂಜೆಗೊಂಡ ಸ್ಥಳವೆಂಬ ಪ್ರಸಿದ್ಧಿ ಪಡೆದಿದೆ.

ದಕ್ಷಿಣ ಭಾರತದ ಮೊದಲ ಶ್ರೀರಾಮ ದೇಗುಲ
ಚಿಕ್ಕಮಗಳೂರು ನಗರದಿಂದ 2ಕಿ.ಮೀ ದೂರದಲ್ಲಿರುವ ಹಿರೇಮಗಳೂರು ದಕ್ಷಿಣ ಭಾರತದ ಪ್ರಪ್ರಥಮ ಶ್ರೀರಾಮ ದೇವಸ್ಥಾನ ಹೊಂದಿದ ಹೆಗ್ಗಳಿಕೆ ಹೊಂದಿದೆ. ದರ್ಪಿಷ್ಟ ಪರಶುರಾಮನನ್ನು ಮಣಿಸಿದ ಶ್ರೀರಾಮಚಂದ್ರ ಪರಶುರಾಮನ ಕೋರಿಕೆಯಂತೆ ಸೀತಾಕಲ್ಯಾಣದ ದರ್ಶನ ನೀಡಿದ ಸ್ಥಳವೇ ಇದು ಎಂಬ ಪೌರಾಣಿಕ ಹಿನ್ನೆಲೆ ಇದೆ. ಸೀತೆಯನ್ನು ಬಲಕ್ಕೆ ಹಾಗೂ ಲಕ್ಷ್ಮಣನನ್ನು ಎಡಕ್ಕೆ ನಿಲ್ಲಿಸಿ ಪರಶುರಾಮನಿಗೆ ಶ್ರೀರಾಮಚಂದ್ರನು ದರುಶನ ನೀಡಿದ ಎಂದು ಸ್ಥಳ ಪುರಾಣ ಹೇಳುತ್ತದೆ. ಇದೇ ಶೈಲಿಯ ವಿಗ್ರಹಗಳು ಇಲ್ಲಿವೆ. ಸಿದ್ಧ ಪುಷ್ಕರಣಿ, ಜನಮೇಜಯರಾಯ ಮಾಡಿದ ಸರ್ಪಯಾಗದ ಕುರುಹಿಗೆ ಯೂಪಸ್ತಂಭ, ಶಿವದೇವಾಲಯ, ಜಡೆಮುನಿ ಎಂಬ ವಿಚಿತ್ರ ವಿಗ್ರಹ, ಪರಶುರಾಮನ ಗುಡಿಗಳು ಇಲ್ಲಿವೆ. ಕನ್ನಡಪೂಜೆ ಈ ದೇವಾಲಯದ ವಿಶೇಷತೆ.

ಮಾಹಿತಿ: ಕೃಷ್ಣ ಎನ್.ಲಮಾಣಿ, ಹೊಸಪೇಟೆ, ರವಿ ಪಿ.ನಾಯಕ, ಗಂಗಾವತಿ, ಕಂಚೀಕೈ ವಿರೂಪಾಕ್ಷ ಹೆಗಡೆ, ಶಿರಸಿ, ಮೃತ್ಯುಂಜಯ ಯಲ್ಲಾಪುರಮಠ (ಚಿಕ್ಕೋಡಿ), ವೆಂಕಟೇಶ ದೇಶಪಾಂಡೆ (ಅಥಣಿ), ಮಲ್ಲಿಕಾರ್ಜುನರಡ್ಡಿ ಗೊಂದಿ, ರಾಮದುರ್ಗ, ರವಿರಾಜ್ ಆರ್. ಗಲಗಲಿ, ಆತೀಶ್ ಬಿ. ಕನ್ನಾಳೆ ಕಲಬುರಗಿ, ಸಿರಿವಂತೆ ಕೆ.ಚಂದ್ರಶೇಖರ್, ಶಿವಮೊಗ್ಗ, ಆರಗ ರವಿ, ಚಿಕ್ಕಮಗಳೂರು

ಡಿ.ದೇವರಾಜ ಅರಸು

ಮೌನ ಕ್ರಾಂತಿಯ ಹರಿಕಾರ ಡಿ. ದೇವರಾಜ ಅರಸು.

 ಈ ರಾಷ್ಟ್ರ ಕಂಡ ಮಹಾನ್ ಮುತ್ಸದಿ ರಾಜಕಾರಣಿಗಳಲ್ಲಿ ಡಿ. ದೇವರಾಜ ಅರಸ್ ಅವರು ಅಗ್ರ ಗಣ್ಯರು. 1969 ರಿಂದ 1979 ದಶಕದಲ್ಲಿ “ಅರಸು ಯುಗ” ವೆಂದು ಹೇಳುವುದು ವಾಡಿಕೆಯಾಗಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗಿ ಅತೀ ದೀರ್ಘಕಾಲ ಆಡಳಿತ ನಡೆಸಿ, ಸಮಾಜದ ಹಿಂದುಳಿದ ವರ್ಗದವರು, ದಲಿತರು ಮತ್ತು ಬಡಜನರನ್ನು ಜಾಗೃತಗೊಳಿಸಿ, ಅವರ ಕನಸು ಮನಸಿನಲ್ಲೂ ನೆನಸಲಾಗದಿದ್ದ ಅಧಿಕಾರದ ಅರಮನೆಗೆ ಕರೆದುಕೊಂಡು ಹೋದ ಮುತ್ಸದ್ದಿ. ಹೀಗಾಗಿ ಅವರು ಈ ರಾಜ್ಯದ, ಈ ದೇಶದ ಹಿಂದುಳಿದ ವರ್ಗಗಳ, ದಲಿತರ, ಬಡವರ ಮನಸ್ಸಿನಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿರುತ್ತಾರೆ. ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಮಾಡಿ ತೋರಿಸಿದ ಅವರನ್ನು “ ಮೌನಕ್ರಾಂತಿಯ ಹರಿಕಾರ” ಎಂದು ಹೇಳುತ್ತಾರೆ.
ಬಡವರ ಬದುಕಿನಲ್ಲಿ ಹೊಸ ಭರವಸೆ ತಂದುಕೊಟ್ಟ ಡಿ. ದೇವರಾಜ ಅರಸು ಕರ್ನಾಟಕದಲ್ಲಿ ಆರ್ಥಿಕ, ಸಾಮಾಜಿಕ ಆಂದೋಲನದ ಮೂಲಕ ಹಲವಾರು ಹಲವಾರು ಜನಹಿತ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಯಶಸ್ಸು ಸಾಧಿಸಿದವರು. ಚಿಕ್ಕಂದಿನಿಂದಲೂ ಹೊಸದನ್ನು ಕಟ್ಟುವ ಧೋರಣೆ ಹೊಂದಿದ್ದ ದೇವರಾಜ ಅರಸರು ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಎಂಟು ವರ್ಷಗಳ ಕಾಲ ಕರ್ನಾಟಕದ ಮುಂಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ನವ ಸಮಾಜದ ನಿರ್ಮಾಣಕ್ಕಾಗಿ ಭದ್ರ ಬುನಾದಿಯನ್ನು ಹಾಕಿ ಕೊಟ್ಟು ಆಡಿದ್ದನ್ನು ಮಾಡಿ ತೋರಿಸಿದವರು.
ದೇವರಾಜ ಅರಸು ಅವರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ 20-08-1915ರಂದು ಜನಿಸಿದರು. ತಂದೆ ದೇವರಾಜು ಅರಸು ತಾಯಿ ದೇವಿರಮ್ಮಣಿ. ಇವರ ಮನೆತನ ಕ್ಷತ್ರಿಯ ವಂಶಕ್ಕೆ ಸೇರಿದ್ದಾದರೂ ಬದುಕಿಗಾಗಿ ಬೇಸಾಯವನ್ನು ಆಯ್ದುಕೊಂಡಿತ್ತು. ಒಂದೆಡೆ ಕೃಷಿ ಮಾಡುತ್ತಲೇ ಓದಿನಲ್ಲೂ ಮುಂದೆ ಬಂದ ದೇವರಾಜ ಅರಸು ಮೈಸೂರಿನಲ್ಲಿ ಇಂಟರ್‍ಮೀಡಿಯಟ್ ಓದಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಪಡೆದರು. ಪದವಿ ನಂತರ ಹುಟ್ಟೂರು ಕಲ್ಲಹಳ್ಳಿಗೆ ಬೇಸಾಯ ಮಾಡಲು ಹಿಂದಿರುಗಿದರು. ಗ್ರಾಮದ ನ್ಯಾಯ ಪಂಚಾಯ್ತಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅರಸರನ್ನು ರಾಜಕೀಯ ಅರಸಿ ಬಂತು. ಹೀಗಾಗಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಚುನಾಯಿತರಾದರು (1941). ಮೈಸೂರು ಅರಸರ ಸಂಬಂಧಿಗಳಾಗಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ (1942) ಸಕ್ರಿಯರಾಗಿದ್ದ ಅವರು ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ, ಕಾರಾಗೃಹವಾಸವನ್ನೂ ಅನುಭವಿಸಿದರು.

ಮಾನವತಾ ವಾದಿ :

ಅರಸು ಮಹಾ ಮಾನವತಾ ವಾದಿ, ಸಂಕಷ್ಟದಲ್ಲಿರುವವರನ್ನು ಕಂಡರೆ ಮರುಗುವ ಹೆಂಗರುಳು.  ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ನಿಸ್ಸಹಾಯಕರ ಬಗ್ಗೆ ಅನುಕಂಪ, ಬದುಕಿನ ಸಂಧ್ಯಾಕಾಲದಲ್ಲಿ ಅನಾದರಣೆಗೆ ತುತ್ತಾಗುವ ವೃದ್ದರಿಗೆ ನೆಮ್ಮದಿ ನೀಡಲು 40 ರೂ. ಗಳ ಮಾಸಾಶನ ನೀಡಿ “ವೃದ್ಧಾಪ್ಯ” ವೇತನ ಜಾರಿಗೆ ತಂದರು. ಅಂಗವಿಕಲರು ಮತ್ತು ಅನಾಥರಿಗೆ ಆರ್ಥಿಕ ನೆರವು ನೀಡಿದರು. ಅಕ್ಷರ ಕಲಿತು ಪದವಿ ಪಡೆದ ಲಕ್ಷಾಂತರ ನಿರುದ್ಯೋಗಿ ಪದವೀಧರರ ಬಾಳಿನ ನಿರಾಸೆಯನ್ನು ದೂಡಲು “ಸ್ಟೈಫೆಂಡರಿ” ಯೋಜನೆ ಜಾರಿಗೆ ತಂದರು. ಗ್ರಾಮಾಂತರ ಮಕ್ಕಳ ಆರೋಗ್ಯ ರಕ್ಷಣೆಗೆ “ಪೌಷ್ಟಿಕ ಆಹಾರ” ಯೋಜನೆ, ದುರ್ಬಲ ಮತ್ತು ಹಿಂದುಳಿದ ವರ್ಗಗಳಿಗೆ “ಉಚಿತ ನಿವೇಶನ, ಮತ್ತು ಕಡಿಮೆ ವೆಚ್ಚದ ಮನೆ ನಿರ್ಮಾಣ” ಯೋಜನೆ, “ಭಾಗ್ಯಜ್ಯೋತಿ” ಯೋಜನೆ ಮೂಲಕ ದುರ್ಬಲರ ಮನೆಗಳಿಗೆ ದೀಪ ಬೆಳಗಿಸಿದರು. ಬಡವರ ನೆರವಿಗಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಿದರು.

ಸಾಧನೆಗಳು :

1941 ರಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆ. 1952 ರಲ್ಲಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ. 1962 ರಲ್ಲಿ ಎಸ್. ನಿಜಲಿಂಗಪ್ಪನವರ ಮಂತ್ರಿಮಂಡಳದಲ್ಲಿ ಸಚಿವ ಸ್ಥಾನ. 1967ರ ಮಂತ್ರಿಮಂಡಳದಲ್ಲಿ ಸಚಿವ ಸ್ಥಾನ. ಪ್ರವಾಸ್ಯೋದ್ಯಮ, ಕಾರ್ಮಿಕ, ಸಾರಿಗೆ, ಪ್ರವಾಸೋದ್ಯಮ, ಪಶುಸಂಗೋಪನೆ, ವಾರ್ತಾ ಮತ್ತು ಪ್ರಚಾರ, ರೇಷ್ಮೆ, ಮೀನುಗಾರಿಕೆ ಖಾತೆಗಳನ್ನು ನಿರ್ವಸಿದರು. 20-03-1972 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ. 20-02-1978 ರಲ್ಲಿ 2ನೇ ಬಾರಿ ಮುಖ್ಯಮಂತ್ರಿ.

ಮೌನಕ್ರಾಂತಿಯ ಹರಿಕಾರ :

 ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆಯ ಬಯಕೆಯನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದವರು ಡಿ. ದೇವರಾಜ ಅರಸು ಅವರು. ಅವರು ಕನ್ನಡನಾಡಿನ ಜನಜೀವನದ ಮೇಲೆ ಬೀರಿದ ಮೇರು ಪ್ರಭಾವ ನಿರಂತರ ಸ್ಮರಣಯೋಗ್ಯ. ಎಂಟು ವರ್ಷಗಳ ಸುದೀರ್ಘಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಅರಸು ಇಟ್ಟ ದಿಟ್ಟ ಹೆಜ್ಜೆಗಳು ಭವಿಷ್ಯದ ಜನಾಂಗವನ್ನೇ ಬದಲಾಯಿಸಲು ನಾಂದಿಯಾದವು. ದುರ್ಬಲ ವರ್ಗದವರಲ್ಲಿ ಸ್ವಾಭಿಮಾನದ ಕಲ್ಪನೆ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದ ಅರಸು ಅವರು ಯುಗಪುರುಷ. ಈ ನಾಡಿನ ಮಹಾನ್ ಚೇತನಗಳಲ್ಲಿ ಅರಸರ ವ್ಯಕ್ತಿತ್ವ ವಿಶಿಷ್ಟವಾದವು. ಅವರಲ್ಲಿ ರೈತನ ಆತ್ಮಾಭಿಮಾನವಿತ್ತು, ಶತ್ರುವನ್ನು ಪ್ರೀತಿಸುವ ಮಾನವ ಪ್ರೇಮವಿತ್ತು, ಎಡತಾಕ್ಕಿದ್ದನ್ನು ಎದುರಿಸಿ ಮುಂಬರುವ ಗುಣವಿತ್ತು. ಅವರು ದುಡಿದು ತಿಂದವರು, ಕೊಟ್ಟು ಬಾಳಿದವರು, ಸಾಧಿಸಿ ಶ್ರೇಯಸ್ಸು ಗಳಿಸಿದವರು, ದನಿಯಿಲ್ಲದವರ ಬದುಕಿಗೆ ಬಾಯಾದವರು. ಸಮಾಜವನ್ನು ಏಕಾಂಗಿಯಾಗಿಯೇ ಎದುರಿಸಿ ಪರಿವರ್ತನೆಯ ಹರಿಕಾರರಾಗಿ ಯಶಸ್ಸು ಕಂಡವರು. ಅವರ ಬದುಕು ನಿರಂತರ ಹೋರಾಟ ಗಾಥೆ.

 ಗೇಣಿದಾರರ ವಿಮೋಚನೆ :

 ದೇವರಾಜ ಅರಸು ಸ್ವಾಭಿಮಾನಿ, ಆತ್ಮಗೌರವದಲ್ಲಿ ಅವರಿಗೆ ಅಚಲ ನಂಬಿಕೆ. ಇನ್ನೊಬ್ಬರ ಹಂಗಿನಲ್ಲಿ ಬಾಳದ ಆತ್ಮಾಭಿಮಾನಿ. ಈ ಗುಣ ಅವರು ಓದುತ್ತಿರುವಾಗಲೇ ಸುವ್ಯಕ್ತಗೊಂಡಿತ್ತು. ಮೈಸೂರಿನ ಅರಸು “ಬೋರ್ಡಿಂಗ್ ಶಾಲೆ” ಯಲ್ಲಿ ಓದುವುದನ್ನು ನಿರಾಕರಿಸಿ, ಸ್ವತಂತ್ರವಾಗಿಯೇ ಓದು ಮುಂದುವರಿಸಿದ ವ್ಯಕ್ತಿ. ಗೇಣಿಯನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು “ಭೂ ಸುಧಾರಣೆ”ಯನ್ನು ಅತ್ಯದ್ಭುತ ರೀತಿಯಲ್ಲಿ ಜಾರಿಗೆ ತಂದರು. ಅದುವರೆವಿಗೂ “ಉಳುವವನೇ ಹೊಲದೊಡೆಯ” ಎಂಬ ನೀತಿ ಬರೀ ಘೋಷಣೆಯಾಗಿತ್ತು. ಭೂ ಸುಧಾರಣೆಯನ್ನು ತ್ವರಿತವಾಗಿ ಜಾರಿಗೆ ತರಲು ನಿಶ್ಚಿತ ಅವಧಿಯಲ್ಲಿ ಉಳುವವನೇ ಹೊಲದೊಡೆಯನಾಗಲು ಪ್ರಗತಿಪರ ಶಾಸನವನ್ನು ತಂದರು. ನ್ಯಾಯಾಲಯ ಕಛೇರಿ ಕಾನೂನಿನ ಲೋಪದೋಷಗಳ ಸುಳಿಯಲ್ಲಿ ಸಿಕ್ಕ ಮುಗ್ದ ಹಳ್ಳಿಗರಿಗೆ ಜಯ ಅಸಾಧ್ಯ ಎಂದರಿತ ಅರಸು ಅವರು ಭೂ ಸುಧಾರಣಾ ಮಂಡಳಿಯನ್ನು ರಚಿಸಿದರು. ಭೂ ಸುಧಾರಣಾ ಮಂಡಳಿಗಳಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿರುವಂತೆ ಹಾಗೂ ಪ್ರತಿನಿಧಿಗಳು ನೀಡಿದ ತೀರ್ಪನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಿರುವ ಹಾಗೆ ಮಾಡಿದರು. ಶತಮಾನಗಳಿಂದ ಅಜ್ಞಾನ, ಗುಲಾಮಗಿರಿಯಲ್ಲಿ ಸೊರಗಿದ್ದ ಗೇಣಿದಾರರಿಗೆ ವಿಮೋಚನೆಯ ಮಾರ್ಗ ತೋರಿದರು.

ಸಾಮಾಜಿಕ ಪರಿವರ್ತನೆ :

ಅಸಮಾನತೆಯನ್ನು ತೊಡೆದು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದ ಅರಸರು ಜೀತ ವಿಮುಕ್ತಿಯನ್ನು ಜಾರಿಗೆ ತಂದರು. ಶೋಷಿತ ಜನಾಂಗದ ಬೆನ್ನೆಲುಬಿಗೆ ಕಸುಬನ್ನು ತುಂಬಿದರು.  ಮಲಹೊರುವಂತ ಅಮನುಷ ಪದ್ದತಿ ಇವರ ಆಡಳಿತ ಕಾಲದಲ್ಲಿ ಕೊನೆಗೊಂಡಿತು. ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿಪಡಿಸಿ ಆರ್ಥಿಕ ಬೆಂಬಲ ನೀಡಿದರು. ಸಾಲದ ಸಂಕೋಲೆಯಿಂದ ಪರಿತಪ್ಪಿಸುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಋಣಪರಿಹಾರ ತಂದು ಅವರ ಕಣ್ಣೀರು ಒರೆಸಿದರು. ಅರಸರು ಜಾರಿಗೆ ತಂದ ಭೂ ಸುಧಾರಣೆ, ಜೀತವಿಮುಕ್ತಿ ಮತ್ತು ಋಣಪರಿಹಾರ ಕಾರ್ಯಕ್ರಮಗಳು ವ್ಯವಸ್ಥೆಯ ವಿರುದ್ಧ ಸಾರಿದ ಸಮರ ದುರ್ಬಲ ವರ್ಗದಲ್ಲಿ ಸ್ವಾಭಿಮಾನದ ಕಲ್ಪನೆ ಸೃಷ್ಟಿಸಿ ಅವರ ಬದುಕಿಗೆ ಸ್ವಾವಲಂಬನೆಯ ನೆಲೆ ಒದಗಿಸಿದರು. ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಅನೇಕ ಮೂಲಭೂತ ಕಾರ್ಯಕ್ರಮಗಳನ್ನು ಕೈಗೊಂಡರು. ಶಿಷ್ಯವೇತನ, ಶುಲ್ಕ ರಿಯಾಯಿತಿ, ಉಚಿತ ಊಟ ವ್ಯವಸ್ಥೆ ಹೀಗೆ ಅವರು ಹಿಂದುಳಿದ ವರ್ಗದವರು ಸಾಂಸ್ಕøತಿಕವಾಗಿಯೂ ಮೇಲೆ ಬರಲು ಅನುಕೂಲ ಕಲ್ಪಿಸಿದರು. ಈ ವರ್ಗದ ಜನರು ಹೊಸ ಬದುಕು ಪಡೆದು ಹೊಸ ಚೈತನ್ಯದಿಂದ ಬದುಕಲು ಅರಸು ರೂವಾರಿಯಾದರು.

ಸತ್ವಶಾಲಿ ವ್ಯಕ್ತಿ :

ನಮ್ಮ ನಾಡಿನ ಇತಿಹಾಸದುದ್ದಕ್ಕೂ ಆಗಾಗ್ಗೆ ಸತ್ವಶಾಲಿ ವ್ಯಕ್ತಿಗಳ ಉಗಮವಾಗಿದೆ. ಸಂಪ್ರದಾಯದ ಬಿಗಿಮುಷ್ಟಿಯಲ್ಲಿ ಜಡ್ಡುಗಟ್ಟಿ ಜನ ವಿರೋಧಿಯಾಗಿ ರೂಪಗೊಂಡ ಸಮಾಜಕ್ಕೆ ಚಿಕಿತ್ಸೆ ನೀಡಿ, ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಿದರು. ಇವರು ದೀನದಲಿತರ ಒಡಲಲ್ಲಿ ಭರವಸೆಯ ವಿಶಿಷ್ಟ ಬಯಕೆಯನ್ನು ಸೃಷ್ಟಿಸುತ್ತಾರೆ. ಸಮಾಜದ ವಿಮೋಜನೆಗೆ ಹೋರಾಡುತ್ತಾರೆ. ಇಂತಹ ಚಿಂತನಶೀಲ ಮಾನವತಾ ವಾದಿಗಳ ಸಾಲಿನಲ್ಲಿ ಗೌತಮ ಬುದ್ಧ, ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಮುಂತಾದವರು ಬರುತ್ತಾರೆ. ಕನ್ನಡ ನಾಡಿನ ಜನಸಮೂಹದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಬಹುಸಂಖ್ಯಾತ ದುರ್ಬಲ ವರ್ಗಗಳ ಚೇತನವನ್ನು ಬುದ್ಧಿಪೂರ್ವಕವಾಗಿ ಹುಡಿಕಿ ತಗೆದು, ಅವರ ಬರಡು ಬದುಕಿಗೆ ಆಸರೆಯ ನೀರುಣಿಸಿದವರಾಗಿದ್ದಾರೆ ದಿವಂಗತ ದೇವರಾಜ ಅರಸು ಅವರು. ಈ ಮಹಾನ್ ಚೇತನಗಳ ಸಾಲಿನಲ್ಲಿ ಸೇರಿ ಹೋಗಿರುವುದು ಈ ನಾಡಿನ ಪುಣ್ಯ, ವಿಶೇಷ; ಕನ್ನಡ ಜನರು ಹೆಮ್ಮೆ ಪಡುವ ವಿಷಯ.

ಎಲ್ಲರಿಗೂ ಡಿ.ದೇವರಾಜ ಅರಸು 102 ನೇ ಜಯಂತಿಯ ಶುಭಾಶಯಗಳು.

71ನೇ ಸ್ವಾತಂತ್ರ್ಯ ದಿನಾಚರಣೆ.

ಭಾರತದ ಸ್ವಾತಂತ್ರ್ಯ ದಿನಾಚರಣೆ:

ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಬ್ರಿಟೀಷರಿಂದ ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶದಾದ್ಯಂತ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು-ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ,ಭಾರತದ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿ ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತರೆ. ಈ ಭಾಷಣದಲ್ಲಿ, ದೇಶದ ಸಾಧನೆ,ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಣಿದ ನಾಯಕರನ್ನು ಸ್ಮರಿಸಲಾಗುತ್ತದೆ.
ಸ್ವಾತ್ರಂತ್ರ್ಯದ ಹಾದಿ
ಜೂನ್ ೩,೧೯೪೭ ರಂದು ಅಂದಿನ ಗವರ್ನರ್ ಜನರಲ್ ಅಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿಶ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ರನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ, ಜವಾಹರ್ ‌ಲಾಲ್ ನೆಹರು ರವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ತ್ರವನ್ನುದ್ದೇಶಿಸಿ,ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( ‘ಭಾಗ್ಯದೊದನೆ ಒಪ್ಪಂದ’ ಭಾಷಣ) ಮಾಡಿದರು.
ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ….. ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ, ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ .
ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆಯಲು ಕೋರಿದರು. ಜೂನ್ ೧೯೪೮ ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಬಂದರು. ಪಟೇಲರು ೫೬೫ ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನೂ ಉಪಯೋಗಿಸಿ “ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ” ತಂತ್ರವನ್ನು ಉಪಯೋಗಿಸಿದರು.
ಸಂವಿಧಾನ ರಚನಾಸಭೆಯು ಸಂವಿಧಾನದ ಕರಡನ್ನು 26 ನವೆಂಬರ್ 1949; ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿ ಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು. ನಂತರ ಸ್ವತಂತ್ರ ಸಾರ್ವಭೌಮ ಭಾರತವು ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ತುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು ೧೯೫೪ರಲ್ಲಿ ಒಪ್ಪಿಸಿದ ಪಾಂಡಿಚೇರಿ . ೧೯೫೨ ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. ೬೨ ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾಯಿತು .

ಎಲ್ಲರಿಗೂ ೭೧ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
The Independence Day of India is celebrated on 15 August to commemorate its independence from British rule and its birth as a sovereign nation on 15 August 1947. India achieved independence following a largely peaceful civil disobedience movement led by the Indian National Congress and other political parties. The independence coincided with partition of India wherein the British Indian Empire was divided along religious line into two new nation—Dominion of India (later Republic of India) and Dominion of Pakistan; the partition was stricken with violent communal riot.
The Independence day is a national holiday in India. All over the country, flag-hoisting ceremonies are conducted by institutions as well as private meetings. The flagship event takes place in Delhi, the capital city of India, where the Prime Minister hoists the national flag at the Red Fort and delivers a nationally televised speech from its ramparts.
History
The present-day India was a part of the British Indian Empire. Although the British East India Company started trading in India in the seventeenth century, Company rule in India started effectively from 1757 after the Company’s victory in the Battle of Plassey. In 1858, following the Indian Rebellion of 1857, the Government of India Act 1858 led to the British Crown assuming direct control of India in the new British Raj. The struggle for independence from the British rule started in the nineteenth century, but became organized and forceful from 1910s, spearheaded by the Indian National Congress. The freedom struggle was characterized by largely peaceful non-violent civil disobedience led by Mahatma Gandhi; however, partition of India associated with the independence led to communal strife and violent riot in many parts of the subcontinent.

Wish you and all 71st HAPPY INDEPENDENCE DAY.

ಗುರು ಪೂರ್ಣಿಮಾ


ಗುರು ಪೂರ್ಣಿಮಾ ದಿನದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ವ್ರತ ಆಚರಿಸುವವರಿಗೆ ಸಮದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್ಸಂತಾನ ದೊರೆಯುವುದೆಂಬ ನಂಬಿಕೆಯಿದೆ.

ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮಾ ದಿನವನ್ನು ಗುರು ಪೂರ್ಣಿಮ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. 

ಗುರು ಪೂರ್ಣಿಮವು ಗುರು – ಶಿಷ್ಯ ಪರಂಪರೆಯ ಸಂಕೇತವಾಗಿದೆ. ಸಂಸ್ಕೃತದಲ್ಲಿ ಗು’ ಎಂದರೆ ಕತ್ತಲು ರು’ ಎಂದರೆ ಹೋಗಲಾಡಿಸುವುದು. ಅಂದರೆ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವವರಿಗೆ ಗುರು’ ಎಂದು ಕರೆಯುತ್ತೇವೆ. ಗುರು ಪೂರ್ಣಿಮಾ ದಿನವು ಅಜ್ಞಾನವನ್ನು ತೊಡೆದುಹಾಕಿ ಸಾರ್ಥಕ ಜೀವನದ ಜ್ಞಾನೋದಯ ಉಂಟುಮಾಡುವ ಸ್ಫೂರ್ತಿದಾಯಕ ದಿನವಾಗಿದೆ. (ಜ್ಞಾನವೇ ಮೋಕ್ಷ, ಅಜ್ಞಾನವೇ ಸಂಸಾರ)

ಇದು ಋಷಿಗಳಿಗೆ ಮಾತ್ರವಲ್ಲದೇ ವೇದಾಧ್ಯಯನ ಮಾಡುವವರಿಗೂ ಪವಿತ್ರವಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಗುರುಗಳಿಗೆ ವಿಶೇಷವಾದ ಗೌರವ ಸ್ಥಾನ ಇರುವುದರಿಂದ ಗುರು ಪೂರ್ಣಿಮಾ ಸರ್ವರಿಗೂ ಪವಿತ್ರವಾಗಿದೆ. ಈ ದಿನ ಪ್ರತಿಯೊಬ್ಬರೂ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಬೇಕಾದುದು ಧಾರ್ಮಿಕ ಕರ್ತವ್ಯವಾಗಿದೆ. ಈ ದಿನ ವೇದವ್ಯಾಸರ ಜಯಂತಿ. ವೇದವ್ಯಾಸ’ ಸಾಂಕೇತಿಕ ಅರ್ಥವುಳ್ಳ ರಹಸ್ಯ ಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಅವರು ಅಧ್ಯಾತ್ಮ, ಇತಿಹಾಸ, ಜ್ಞಾನ, ವಿಜ್ಞಾನಗಳ ಕಣಜವಾಗಿದ್ದರು. ವ್ಯಾಸ ಮಹರ್ಷಿ ಎಂದು ಪ್ರಸಿದ್ಧರಾದ ಕಷ್ಣೆದ್ವೈಪಾಯನರು ವೇದಾಧ್ಯಯನಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು. ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ವೇದಮಂತ್ರಗಳನ್ನು ಯಜ್ಞಕಾರ್ಯಗಳಿಗೆ ಅನ್ವಯವಾಗುವಂತೆ ಬೋಧಿಸಿದರು. ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸ ಎಂಬ ಬಿರುದಾಂಕಿತರಾದರು. ಈ ಮಹತ್ಕಾರ್ಯದ ಸಲುವಾಗಿ ಅವರು ಮಹಾಗುರು ಎಂಬ ಕೀರ್ತಿಗೆ ಪಾತ್ರರಾದರು.

ವೇದವ್ಯಾಸರು ನಾಲ್ಕು ವೇದಗಳ ರಚನೆ, ಪರಿಷ್ಕರಣೆ ಮತ್ತು ಕ್ರೋಢಿಕರಣವನ್ನು ಮುಗಿಸಿದ್ದು , ಬ್ರಹ್ಮಸೂತ್ರ ಬರೆದು ಪೂರ್ಣಗೊಳಿಸಿದ್ದು ಆಷಾಢ ಹುಣ್ಣಿಮೆಯ ದಿನ.

ವೇದವ್ಯಾಸರು ರಚಿಸಿದ ಗ್ರಂಥಗಳು ನಾಲ್ಕುವೇದಗಳು, ಅಷ್ಟದಶ ಪುರಾಣಗಳು (18 ಪುರಾಣಗಳು) ಬ್ರಹ್ಮಸೂತ್ರ ಮತ್ತು ಮಹಾಭಾರತ ಇತಿಹಾಸ.

ವಿಶ್ವದ ಅತಿ ಶ್ರೇಷ್ಠ ಸರ್ಪ್ತರ್ಷಿಗಳಾದ ಅತ್ರಿ, ಬ್ರುಗು, ಪುಲಸ್ಯ, ವಶಿಷ್ಠ, ಗೌತಮ, ಅಂಗೀರಸ ಮತ್ತು ಮರೀಚಿ ಮಹರ್ಷಿಗಳು ವಿಶ್ವ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಸಂಪೂರ್ಣವಾಗಿ ತೊಡಗಿಸಿಕೊಂಡರು. ಮತ್ತು ಅಂತರಾಳದ ಪರಿಪೂರ್ಣತೆ ಮತ್ತು ಜ್ಞಾನದ ಬೆಳಕನ್ನು ಮಾನವ ಧರ್ಮಕ್ಕೆ ಕೊಡುಗೆಯಾಗಿ ನೀಡಿದರು. ಇವರು ಮನುಕುಲಕ್ಕೆ ಜೀವನ ಮತ್ತು ವಿಶ್ವದ ರಹಸ್ಯಗಳನ್ನು

ಭೋದಿಸಿದರು. ಮುಖ್ಯವಾಗಿ ಅನಿರ್ಬಂಧಿತ ಪ್ರೀತಿ, ಧರ್ಮಶ್ರದ್ಧೆ, ಪರಿಪೂರ್ಣ ಸಂತೋಷ ಮತ್ತು ಕ್ಷಮಾ ಶೀಲತೆಯನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅವಕಾಶಗಳನ್ನು ಜ್ಞಾಪಿಸಿಕೊಂಡು ಪೂಜಿಸುವುದು ಸೂಕ್ತ.

ಈ ಗುರು ಪೂರ್ಣಿಮಾ ದಿನದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುವವರಿಗೆ ಸಮದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿನವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು.

ವೇದವ್ಯಾಸರ ಮೂಲ ಹೆಸರು ಕಷ್ಣ ದ್ವೈಪಾಯನ. ತಂದೆ ಪರಾಶರರು, ತಾಯಿ ಸತ್ಯವತಿ. ಒಮ್ಮೆ ಮಹರ್ಷಿ ಪರಾಶರರು ಯಾತ್ರೆಯ ಸಲುವಾಗಿ ಗಂಗಾನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಕೆಟ್ಟ ವಾಸನೆ ಬರುತ್ತಿತ್ತು. ಹೋಗಿ ನೋಡಿದಾಗ ಒಬ್ಬ ಕುರೂಪಿಯಾದ ಸ್ತ್ರೀ ಕುಳಿತಿದ್ದಳು. ಆಕೆಯ ದೇಹದಿಂದಲೇ ಈ ಕೆಟ್ಟ ವಾಸನೆ ಬರುತ್ತಿತ್ತು. ಆಕೆ ಪರಾಶರ ಮುನಿಗಳನ್ನು ನೋಡಿ, ಬಳಿಗೆ ಬಂದು ಅವರ ಪಾದಕ್ಕೆರಗಿದಳು. ಆಕೆಯ ಹೆಸರು ಸತ್ಯವತಿ. ಬೆಸ್ತರ ಮಗಳು. ವಸುದೇವರಿಂದ ಶಾಪಗ್ರಸ್ತಳಾಗಿ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು. ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ನನ್ನ ಶಾಪ ವಿಮೋಚನೆ ಮಾಡಬೇಕೆಂದು ಪ್ರಾರ್ಥಿಸಿದಾಗ, ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡಿದರು. ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವಂತಳಾದಳು. ನಂತರ ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ, ಗಾಂಧರ್ವ ರೀತಿಯಲ್ಲಿ ಆಕೆಯ ವಿವಾಹವಾದರು. ಇವರಿಂದ ಜನಿಸಿದ ಮಗುವೇ ಕಷ್ಣ ದ್ವೈಪಾಯನ. ಕಷ್ಣ ಎಂದರೆ ಕಪ್ಪು, ಕತ್ತಲೆ; ದ್ವೈಪ ಎಂದರೆ ದ್ವೀಪ. ಆಯನ ಎಂದರೆ ಸುತ್ತಲೂ ನೀರಿನಿಂದ ಆವತವಾದ ಪ್ರವೇಶ. ಹೀಗಾಗಿ ಕಷ್ಣದ್ವೈಪಯನ ಎಂಬ ಹೆಸರು ಬಂದಿತು.

***

ಹಿನ್ನಲೆ:

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.

ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.

ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ.ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.

ಹಿಂದೂ ಪುರಾಣ :

ಇದೇ ದಿನ ಮಹಾಭಾರತದ ಕರ್ತೃರಾದ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಒಬ್ಬ ಮೀನುಗಾರನ ಮಗಳಾದ ಸತ್ಯವತಿಗೆ ಜನ್ಮಿಸಿದರು.ವೇದವ್ಯಾಸರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ರಿಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಸುಮಂತು, ವೈಷಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು.

ಬೌದ್ಧ ಪುರಾಣ:

ಬುದ್ಧನು ತನಗೆ ಜ್ಞಾನೋದಯವಾಗಿ ೫ ವಾರಗಳ ನಂತರ ಬೋಧಗಯಾ ಇಂದ ಸಾರನಾಥಕ್ಕೆ ಹೋದನು. ಜ್ಞಾನೋದಯಕ್ಕಿಂತ ಮುಂಚೆ (ಬುದ್ಧನಾಗಬೇಕಿದ್ದ) ಗೌತಮನು ತಾನು ಮಾಡುತ್ತಿದ್ದ ತೀವ್ರ ತಪಸ್ಸನ್ನು ಒಂದು ದಿನ ಬಿಟ್ಟು ಬಿಟ್ಟ. ಆಗ ಅವನ ಗೆಳೆಯರಾದ ಪಂಚವಗ್ಗೀಯ ಸನ್ಯಾಸಿಗಳು ಗೌತಮನನ್ನು ಬಿಟ್ಟು ಇಸಿಪತನ (ಸಾರನಾಥ್)ಗೆ ಹೋದರು. ಬುದ್ದನಿಗೆ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಆ ತನ್ನ ಐದು ಸಂಗಾತಿಳು ಧರ್ಮ ಬೋಧನೆಗೆ ಯೋಗ್ಯರಾದವರು ಎಂದು ತಿಳಿದಿದ್ದರಿಂದ ತನಗೆ ಜ್ಞಾನೋದಯವಾದ ನಂತರ ಅವರನ್ನು ಹುಡುಕಿಕೊಂಡು ಉರುವೇಲಾಯಿಂದ ಇಸಿಪತನಕ್ಕೆ ಹೊರಟನು. ಸಾರನಾಥಕ್ಕೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಾಯಿತು. ನಾವಿಕರಿಗೆ ಕೊಡಲು ದುಡ್ಡು ಇಲ್ಲದ ಕಾರಣ ಗೌತಮ ಬುದ್ಧನು ಗಂಗಾ ನದಿಯನ್ನು ಗಾಳಿಯಲ್ಲಿಯೇ ದಾಟಿದನು. ಇದನ್ನು ಕೇಳಿದ ಅಲ್ಲಿನ ರಾಜಾ ಬಿಂಬಸಾರನು ನದಿ ದಾಟುವ ಸನ್ಯಾಸಿಗಳಿಗೆ ಯಾವುದೇ ರೀತಿಯ ಹಣ ಕೇಳಬಾರದೆಂದು ಆದೇಶ ಹೊರಡಿಸಿದನು. ಗಂಗಾ ನದಿ ದಾಟಿ ಅವನ ಹಳೆಯ ಸಂಗಾತಿಗಳು ಮತ್ತೆ ಸಿಕ್ಕಾಗ ಗೌತಮ ಬುದ್ಧನು ಅವರಿಗೆ ಧರ್ಮ ಬೋಧನೆ ಮಾಡಿದನು. ಅದನ್ನು ಸ್ವೀಕರಿಸಿ ಅರ್ಥ ಮಾಡಿಕೊಂಡ ಆ ಸಂಗಾತಿಗಳಿಗೂ ಜ್ಞಾನೋದಯವಾಯಿತು. ಅವರಿಂದ ಸಂಘ ಎಂಬ ಜ್ಞಾನೋದಯವಾದವರ ಪಂಗಡ ಶುರುವಾಯಿತು. ಅಂದು ಬುದ್ಧ ನೀಡಿದ ಬೋಧನೆ ಅವನ ಮೊದಲನೇಯ ಬೋಧನೆಯಾಗಿದ್ದು ಅದನ್ನು ಧಮ್ಮಚಕ್ಕಪ್ಪವತ್ತನ ಸುತ್ತ (ಧರ್ಮಚಕ್ರ ಪ್ರವರ್ತನ ಸೂತ್ರ) ಎಂದು ಕರೆಯಲಾಗುತ್ತದೆ. ಇದು ನಡೆದಿದ್ದು ಆಷಾಢ ಪೂರ್ಣಿಮೆಯ ದಿನ. ಮುಂದೆ ಬುದ್ಧನು ತನ್ನ ಮೊದಲನೇಯ ಮಳೆಗಾಲ, ಅಂದರೆ ವರ್ಷ(ವಸ್ಸ), ಇಲ್ಲೇ ಸಾರನಾಥದಲ್ಲಿನ ಮುಲಗಂಧಕುಟಿಯಲ್ಲಿ ಕಳೆದನು. ಆ ಸಮಯಕ್ಕೆ ಯಾಸ ಮತ್ತು ಅವನ ಸ್ನೇಹಿತರು ಸೇರಿದ್ದರಿಂದ ಸಂಘದಲ್ಲಿ ೬೦ ಸನ್ಯಾಸಿಗಳಿದ್ದರು. ಬುದ್ಧ ಅವರೆಲ್ಲರನ್ನು ಒಬ್ಬೊಬ್ಬರಾಗಿ ಎಲ್ಲ ದಿಕ್ಕುಗಳಲ್ಲಿ ಧರ್ಮದ ಬೋಧನೆ ಮತ್ತು ಪ್ರಚಾರ ಮಾಡಲು ಕಳಿಸಿದನು. ಆ ೬೦ ಜನರನ್ನು ಅರಹಂತರು ಎಂದು ಕರೆಯುತ್ತಾರೆ .

ಹಿಂದೂ ಮತ್ತು ಬೌದ್ಧ ಆಚರಣೆಗಳು:

ಈ ದಿನ ಬೌದ್ಧರು ೮ ತತ್ವಗಳನ್ನು ಪಾಲಿಸುವ ಉಪೋಸಥ ಎಂಬ ಪದ್ಧತಿಯನ್ನು ಆತರಿಸುತ್ತಾರೆ. ವಿಪಸ್ಯನಾ ಧ್ಯಾನಿಗಳು ಈ ದಿನ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮಾಡುತ್ತಾರೆ. ಮಳೆಗಾಲ, ಅಂದರೆ ವರ್ಷ (ವಸ್ಸ) ಇಂದಿನಿಂದಲೇ ಪ್ರಾರಂಭವಾಗುತ್ತದೆ. ಜುಲೈ ಇಂದ ಅಕ್ಟೋಬರ್ ವರೆಗೆ ಚಾಂದ್ರಮಾನ ಪಂಚಾಂಗದ ಮೂರು ತಿಂಗಳುಗಳ ಕಾಲ ಇರುವ ಈ ಮಳೆಗಾಲದಲ್ಲಿ ಬೌದ್ಧ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಇರುತ್ತಾರೆ, ಅದೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಇರುತ್ತಾರೆ. ಕೆಲವೊಂದು ಆಶ್ರಮಗಳಲ್ಲಿ ಸನ್ಯಾಸಿಗಳು ಈ ವಸ್ಸ ಕಾಲದಲ್ಲಿ ತೀವ್ರ ತಪಸ್ಸಿಗೆ ಒಳಗಾಗುತ್ತಾರೆ. ವಸ್ಸ ಕಾಲದಲ್ಲಿ ಹಲವಾರು ಸಾಮಾನ್ಯ ಬೌದ್ಧರು ತಮ್ಮ ಆಧ್ಯಾತ್ಮಿಕ ಅಭ್ಯಾಸ ತೀವ್ರಗೊಳಿಸಿ ಮಾಂಸ, ಮಧ್ಯ ಅಥವಾ ಧೂಮಪಾನವನ್ನು ತ್ಯಾಗ ಮಾಡುವಂತಹ ವಿರಕ್ತ ಪದ್ಧತಿಗಳನ್ನು ಪಾಲಿಸುತ್ತಾರೆ.

ಸಾಂಪ್ರದಾಯಿಕವಾಗಿ ಚಾತುರ್ಮಾಸದ ಪದ್ಧತಿಗಳಲ್ಲಿ ಒಂದಾದ ಗುರು ಪೂರ್ಣಿಮೆಯ ಆಂಗವಾಗಿ ವ್ಯಾಸ ಪೂಜೆ ಮಾಡುತ್ತಿರುವ ಸನ್ಯಾಸಿ.

ಹಿಂದೂ ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಹಾಗೂ ಅವರ ಬೋಧನೆಗಳನ್ನು ನೆನೆಸಿಕೊಂಡು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆ ಎರ್ಪಿಡಿಸಿ, ಹೂವಿನ ಅಲಂಕಾರ ಹಾಗೂ ಹಲವು ಸಾಂಕೇತಿಕ ಕಾಣಿಕೆಗಳು ಅರ್ಪಣೆಯಿಂದ ವೇದವ್ಯಾಸರಿಗೆ ಹಾಗೂ ಬ್ರಹ್ಮಾಂಡದ ಸದ್ಗುರುವಿಗೆ ಗೌರವ ಸಲ್ಲಿಸಲಾಗುತ್ತದೆ. ಪೂಜೆ ಪುನಸ್ಕಾರಗಳ ನಂತರ, ಗುರುಗಳ ಕೃಪೆಯ ರೂಪಿಯಾದ ಗುರುಗಳ ಪಾದಪೂಜೆಯಿಂದ ದೊರೆತ ಚರಣಾಮೃತವನ್ನು ಪ್ರಸಾದದ ಜೊತೆ ಶಿಶ್ಯರಿಗೆ ಹಂಚಲಾಗುತ್ತದೆ. ಯಾವ ಗುರುವಿನ ಮೂಲಕ ಭಗವಂತನು ಎಲ್ಲ ಶಿಶ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾನೋ, ಅಂತಹ ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ ಗುರು ಗೀತಾ ಮಂತ್ರದ ಪಠಣ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಭಜನೆ, ಕೀರ್ತನೆ ಮತ್ತು ಹೋಮಗಳನ್ನು ಆಯೋಜಿಸುತ್ತಾರೆ. ಈ ದಿನ ಗುರುಗಳ ಪಾದಪೂಜೆ ಮಾಡುವ ಮೂಲಕ ಶಿಶ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ. ಎಂದಿನಂತೆ ಬರುವ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಶಿಶ್ಯರು ಸಂಕಲ್ಪ ಮಾಡುತ್ತಾರೆ. ಈ ದಿನದಂದು ವಿಶೇಷವಾಗಿ ಪಠಿಸುವ ಮಂತ್ರ ಇದು ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ.

ನೇಪಾಳದಲ್ಲಿನ ಆಚರಣೆಗಳಆಚರಣೆಗಳು:

 ಶಾಲೆಗಳಲ್ಲಿ ಗುರು ಪೂರ್ಣಿಮೆಯನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ರುಚಿಯಾದ ತಿಂಡಿಗಳನ್ನು, ಹಾರಗಳನ್ನು ಮತ್ತು ಅಲ್ಲಿನ ನಾರಿನಿಂದ ಮಾಡಲಾದ ಟೋಪಿ ಎಂಬ ವಿಶೇಷ ಟೊಪಗಿಗಳನ್ನು ಕೊಡುವ ಮೂಲಕ ಗೌರವ ಸಲ್ಲಿಸುತ್ತಾರೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಪ್ರದರ್ಶನಗಳನ್ನು ಆಯೋಜಿಸಿ ಶಿಕ್ಷಕರ ಶ್ರಮಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಈ ದಿನ ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಇನ್ನಷ್ಟು ಸಧೃಡಗೊಳಿಸಿಕೊಳ್ಳುತ್ತಾರೆ.
ಭಾರತ ಶೈಕ್ಷಣಿಕ ವೃಂದದಲ್ಲಿ ಅಚರಣಅಚರಣೆ:

 ಶೈಕ್ಷಣಿಕ ವೃಂದದಲ್ಲಿ ಈ ಹಬ್ಬವನ್ನು ಧರ್ಮಾತೀತವಾಗಿ ಆಚರಿಸಲಾಗುತ್ತದೆ. ಹಲವಾರು ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿತವಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ ಮತ್ತು ಹಿಂದಿನ ವಿದ್ವಾಂಸರನ್ನು ನೆನೆಸುತ್ತಾರೆ. ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.
ಜೈನ ಧರ್ಮದಲ್ಲಿ ಆಚರಣೆಗಳು:

ಆಚರಣೆಗಳಪ್ರದಾಯದ ಪ್ರಕಾರ ನಾಲ್ಕು ತಿಂಗಳದ ಮಳೆಗಾಲದ ಚೌಮಾಸಗಳ ಪ್ರಾರಂಭ ದಿನದಂದು ಬರುವ ಈ ಗುರು ಪೂರ್ಣಿಮೆಯ ದಿನ, ೨೪ನೇಯ ತೀರ್ಥಂಕರರು ಆದ ಮಹಾವೀರ, ಕೈವಲ್ಯ ಪಡೆದ ನಂತರ ಇಂದ್ರಭೂತಿ ಗೌತಮ (ಮುಂದೆ ಗೌತಮ ಸ್ವಾಮಿ ಎಂದೇ ಪ್ರಸಿದ್ಧರಾದರು) ಎಂಬ ಗಣಧಾರನನ್ನು ತಮ್ಮ ಶಿಶ್ಯನಾಗಿ ಸ್ವೀಕರಿಸಿದರು, ಜೊತೆಗೆ ತಾವೂ ಗುರುವಾದರು. ಆದ್ದರಿಂದ ಜೈನ ಸಂಪ್ರದಾಯದಲ್ಲಿ ಈ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸುತ್ತಾರೆ.

ವಿಶ್ವ ಅಪ್ಪಂದಿರ ದಿನ

ಇಂದು ವಿಶ್ವ ಅಪ್ಪಂದಿರ ದಿನ, ಮರೆಯದೆ ಇದನ್ನೊಮ್ಮೆ ಓದಿ
June 18,World Fathers Day, ಅಪ್ಪಂದಿರ ದಿನ

ಮನುಷ್ಯ ಹುಟ್ಟಿದಾಗಿನಿಂದ ಮನೆ ನಂತರ ಹೊರಪ್ರಪಂಚದೊಂದಿಗೆ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಬೆಸೆದುಕೊಂಡು ಜೀವನ ನಡೆಸುತ್ತಾನೆ. ಅದರಲ್ಲಿ ತಂದೆ-ತಾಯಿಯರದು ವಿಶೇಷ ಸ್ಥಾನ. ಅಪ್ಪ ಎಂದಾಗ ಎಂತದೋ ಸೆಳೆತ. ಪ್ರತಿ ಮಗುವಿಗೂ ತಿದ್ದಿ ತೀಡುವ ತಂದೆ-ತಾಯಿ ದೇವರ ಸಮಾನ ಎಂದೇ ಭಾವಿಸುವ ಸಂಸ್ಕೃತಿ ನಮ್ಮದು. ಈ ಸಂಸ್ಕೃತಿಯೇ ಕೂಡು ಕುಟುಂಬದ ಸೂತ್ರವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆ, ಔದ್ಯೋಗಿಕ ಪರಿಸರ, ನಾಗರಿಕತೆ ಬೆಳೆದಂತೆ ಅವಿಭಕ್ತ ಕುಟುಂಬಗಳು ಮರೆಯಾದರೂ ತಂದೆತಾಯಿ ಮಕ್ಕಳೊಂದಿಗೆ ಜೀವನ ನಡೆಸುವ ಪುಟ್ಟ ಕುಟುಂಬಗಳು ಹೆಚ್ಚಾಗುತ್ತಿವೆ.

ಇದರಲ್ಲಿ ತಮ್ಮ ಪ್ರೀತಿಯ ಧಾರೆಯನ್ನೆಲ್ಲ ತಂದೆತಾಯಿ ಇರುವ ಒಂದಿಬ್ಬರು ಮಕ್ಕಳಿಗೆ ಎರೆದಿರುತ್ತಾರೆ. ಅದೇ ರೀತಿ ಮಕ್ಕಳಿಂದ ತಂದೆತಾಯಿ ಸಹ ಅದೆಷ್ಟೋ ಭರವಸೆಗಳನ್ನಿಟ್ಟುಕೊಂಡು ಬದುಕುವುದು ಸಾಮಾನ್ಯ. ತಾಯಿಯನ್ನು ಕಂಡರೆ ಸಲುಗೆ, ಏನೇ ಮಾಡಿದರೂ ಅಮ್ಮ ಬುದ್ದಿ ಹೇಳಿ ಸಲಹುವ ರೀತಿಯೇ ಬೇರೆ. ತಂದೆ ಎಂದರೆ ಏನೋ ಒಂದು ರೀತಿ ಅವ್ಯಕ್ತ ಭಯ. ಮೊದಲೆಲ್ಲ ಅಪ್ಪನ ಗದರಿಕೆ ಮಾತ್ರ ಕಾಣುತ್ತಿದ್ದ ಕಣ್ಣಿಗೆ ಬೆಳೆಯುತ್ತಿದ್ದಂತೆ ರಕ್ಷಣೆಯ ದ್ಯೋತಕವಾಗಿ ನಮ್ಮನ್ನೆಲ್ಲ ಪ ರೆಯುವ ಪಾಲಕನಾಗಿ ಎಲ್ಲ ಅವಶ್ಯಕತೆಗಳನ್ನು ಪೂರೈಸುವವರಾಗಿ ಗೋಚರಿಸುತ್ತಾರೆ.

ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ಪ್ರೀತಿ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಿಸಿಯೇ ಬೆಳೆಯಬೇಕು. ಅದು ಮಕ್ಕಳ ಏಳಿಗೆಯಲ್ಲಿ ಪ್ರತಿಫಲನವಾಗದೇ ಇರದು. ತಾಯಿಯೊಂದಿಗೆ ನಕ್ಕು ನಲಿಯುವ ಮಕ್ಕಳು ತಂದೆಯಿಂದ ಅನತಿ ದೂರದಲ್ಲೇ ನಿಂತು ಆಜ್ಞೆಗಳನ್ನು ಪಾಲಿಸುತ್ತಾ ಅವಶ್ಯಕತೆಗಳು ಬಂದಾಗ ಹಿಂಜರಿಯುತ್ತಲೇ ಅಪ್ಪನಿಗೆ ಹೇಳುತ್ತಿದ್ದ ಮಕ್ಕಳು ಅಪ್ಪನ ಮಾತುಗಳನ್ನು ಮೀರದೆ ಆ ಸಂಬಂಧಕ್ಕೆ ಒಂದುಗೌರವ ತಂದುಕೊಟ್ಟಿರುತ್ತಾರೆ.

ಇದು ಅಪ್ಪ, ಅಮ್ಮನ ಬಗ್ಗೆ ಇರಬೇಕಾದ ನಿಜವಾದ ಪ್ರೀತಿ-ಆದರ, ಆದರೆ ಬದಲಾದ ಕಾಲಘಟ್ಟದಲ್ಲಿ ವಯಸ್ಸಾದ ತಂದೆತಾಯಿಗಳನ್ನು ಗೌರವದಿಂದ ಕಂಡು ಪ್ರೀತಿಯಿಂದ ನೋಡಿಕೊಂಡರೆ ನಾವು ಧನ್ಯರು ಎಂದು ಅಪ್ಪ , ಅಮ್ಮ ಹೇಳಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಸಂಸ್ಕೃತಿಯ ನೆಲವೀಡಾದ ಭಾರತದಲ್ಲೂ ಇಂದು ಪಾಶ್ಚಾತ್ಯ ಸಂಸ್ಕೃತಿಯ ನೆರಳು ದಟ್ಟವಾಗೇ ಹಬ್ಬಿದೆ. ನಮ್ಮಲ್ಲಿ ಮದರ್ಸ್ ಡೇ, ಫಾದರ್ಸ್ ಡೇ ಯಾವುದೇ ದಿನಾಚರಣೆ ಚಾಲ್ತಿಯಲ್ಲಿರಲಿಲ್ಲ. ಇತ್ತೀಚೆಗೆ ಅದು ನಮ್ಮಲ್ಲೂ ಜನಜನಿತವಾಗಿದೆ. ಜನ್ಮಭೂಮಿ ಹಾಗೂ ಜನ್ಮದಾತರನ್ನು ಕಡೆಗಣಿಸಿರುವುದೇ ಹೆಚ್ಚಾಗಿರುವ ಈ ದಿನಗಳಲ್ಲಿ ಈ ನೆಪದಲ್ಲಾದರೂ ಅಪ್ಪಂದಿರ ದಿನಾಚರಣೆಯೊಂದಿಗೆ ಅವರ ಪ್ರೀತಿಗೂ ಪಾತ್ರರಾಗುವುದು ಒಳ್ಳೆಯದು.

ಈಗಿನ ಕಾಲದಲ್ಲಿ ಪತಿಪತ್ನಿ ಇಬ್ಬರು ದುಡಿದರೆ ಸಂಸಾರ ಸಾಗಿಸಲು ಸಾಧ್ಯ. ಒಂದೆರಡು ಮಕ್ಕಳ ನಿರ್ವಹಣೆಗೂ ಅಪ್ಪ-ಅಮ್ಮ ಇಬ್ಬರೂ ದುಡಿಯಲೇ ಬೇಕಾಗುತ್ತದೆ. ಮಕ್ಕಳ ಜವಾಬ್ದಾರಿ ಏನಿದ್ದರೂ ಅಮ್ಮನದೇ ಎಂದು ಆರಾಮವಾಗಿರಲು ಸಾಧ್ಯವಿಲ್ಲ. ಎಲ್ಲ ಕೆಲಸವನ್ನು ಕೂಡಿಯೇ ಮಾಡಬೇಕಾಗುತ್ತದೆ. ಆಗ ಮಕ್ಕಳೊಂದಿಗಿನ ಸಂಬಂಧ ಹೆಚ್ಚಲು ಸಾಧ್ಯ. ಆದರೆ ಐಟಿಬಿಟಿ ಸೇರಿದಂತೆ ಇನ್ನಿತರ ಕೆಲಸಗಳಲ್ಲಿರುವ ನಗರ ಪ್ರದೇಶದವರು ಮಕ್ಕಳೊಡನೆ ಮಾತನಾಡಲು ಸಮಯ ಸಿಗದಂತಹ ಪರಿಸ್ಥಿತಿಯಿಂದ ಅದೆಷ್ಟೋ ಅಪ್ಪಂದಿರುವ ಮಕ್ಕಳ ಪ್ರೀತಿಯನ್ನು ಕಳೆದುಕೊಂಡಿರುತ್ತಾರೆ. ವಾರದ ಕೊನೆಯ ದಿನಗಳಲ್ಲಿ ಮಾತ್ರ ಅವರೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತದೆ. ಇದರಿಂದ ಆತ್ಮೀಯತೆ ಬೆಳೆಯಲು ಸ್ವಲ್ಪ ಕಷ್ಟ.

ಬೆಂಗಳೂರಿನ ಉತ್ತರಹಳ್ಳಿಯ ಎಂಎನ್‍ಸಿಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ರಾಘವೇಂದ್ರರವರು ಹೇಳುವ ಪ್ರಕಾರ ನನ್ನ ಮಗಳು ರಾಶಿಯ ಲಾಲನೆಪಾಲನೆಯನ್ನು ನಾನು ಬಹಳ ಸಂತೋಷದಿಂದಲೇ ಮಾಡುತ್ತೇನೆ. ದಿನಪೂರ್ತಿ ಕೆಲಸದ ಒತ್ತಡದಲ್ಲೇ ಇರುವ ನನಗೆ ಮನೆಗೆ ಬಂದು ಮಗಳ ಮುಖ ನೋಡಿದರೇನೇ ಏನೋ ಸಮಾಧಾನ, ಅವಳ ನಗು, ಮಾತು, ನನ್ನ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಿ ನನ್ನ ಅಯಾಸ ಟೆನ್ಷನ್ ಎಲ್ಲವೂ ಮಾಯವಾಗುತ್ತದೆ.

ನನ್ನೆಲ್ಲ ಕೆಲಸಗಳನ್ನು ಅವಳೊಂದಿಗೆ ಮಾತನಾಡುತ್ತಲೇ ನಿರ್ವಹಿಸುತ್ತೇನೆ. ನನ್ನ ಆಫೀಸ್ ಕೆಲಸಗಳಿಗೆ ತೊಂದರೆ ನೀಡದೆ ಪ್ರೀತಿಯಿಂದ ಇರುವಳು. ಅವರು ಹೇಳುವ ಪ್ರಕಾರ ಮಕ್ಕಳಿಗೆ ಪ್ರೀತಿಯೇ ಮುಖ್ಯ.

ನನಗೆ ನನ್ನ ಮಗಳೇ ಸ್ಪೂರ್ತಿ:

ಬಹುತೇಕ ತಂದೆಯರಿಗೆ ಮಗಳು ತಮ್ಮ ದಿನನಿತ್ಯದ ಕೆಲಸದ ಒತ್ತಡದಿಂದ ಹಿಡಿದು ದೊಡ್ಡ ಒತ್ತಡಗಳನ್ನು ಕೂಡ ಹೇಳಿಕೊಂಡು ಮನಸ್ಸು ಹಗರು ಮಾಡಿಕೊಳ್ಳುತ್ತಾರೆ. ನನಗೆನನ್ನ ಮಗಳೇ ಗೈಡ್ ಹಾಗೂ ಫ್ರೆಂಡ್ ಎಲ್ಲವೂ, ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾಳೆ, ನನ್ನ ಸರಿ ತಪ್ಪುಗಳನ್ನು ತಿದ್ದಿ.. ಮುಖ್ಯವಾಗಿ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾಳೆ. ಅಪ್ಪನೊಂದಿಗೆ ನಾನು ಇರುವೆ ಎನ್ನುತ್ತಾಳೆ. ನನಗೆ ನನ್ನ ಮಗಳೇ ಸ್ಪೂರ್ತಿ ಎನ್ನುತ್ತಾರೆ 60ರ ಹರೆಯದ ರವೀಂದ್ರನಾಥ್ ಜೋಯ್ಸರು.

ಅಪ್ಪಂದಿರೆ ನೀವು ಮಕ್ಕಳ ಜೊತೆ ಹೀಗೆ ಇರಿ:

ಮಕ್ಕಳ ವಿಚಾರದಲ್ಲಿ ಅತಿಯಾದ ಶಿಸ್ತು ಬೇಡ. ಮಗ/ಮಗಳ ಸಂತಸದಲ್ಲಿ ಪಾಲ್ಗೊಳ್ಳುವುದನ್ನು ಕಲಿಯಿರಿ, ಮಕ್ಕಳ ಕೆಲವು ಸಲಹೆಯನ್ನು ಕೇಳಿರಿ.
ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿ, ಮಕ್ಕಳ ಮೇಲೆ ಸಿಟ್ಟಿನ ಪ್ರಯೋಗ ಮಾಡಬೇಡಿ, ಆಸ್ತಿ ನೀಡದಿದ್ದರೂ ಮನಃಪೂರ್ವಕವಾಗಿ ಪ್ರೀತಿ ನೀಡಿ, ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ನೀವೇ ತಂದೆ ತಾಯಿಯಾಗಿ ಪ್ರೀತಿಯನ್ನು ನೀಡಿ. ಆಫೀಸಿನ ಕೆಲಸ ಎಷ್ಟೇ ಇರಲಿ ಮಕ್ಕಳಿಗಾಗಿ ಸಮಯ ಮೀಸಲಿಡಿ.

ಮಕ್ಕಳೇ ಅಪ್ಪನ ಪ್ರೀತಿಗಾಗಿ ನೀವು ಹೀಗೆ ಮಾಡಿ:

ಫಾದರ್ಸ್ ಡೇ ಹಾಗೂ ಮದರ್ಸ್ ಡೇನಲ್ಲಿ ನಿಮ್ಮ ಕೈನಲ್ಲಿ ಆದ(ಉಡುಗೊರೆ) ವಸ್ತುವನ್ನು ಅಪ್ಪ ಹಾಗೂ ಅಮ್ಮನಿಗೆ ನೀಡಿ. ದಿನದ ಹೆಚ್ಚು ಸಮಯವನ್ನು ಸ್ನೇಹಿತರಿಗೆ ಕಳೆಯುವ ಬದಲು ಅಪ್ಪನ ಜೊತೆಗೆ ಸ್ವಲ್ಪ ಹೊತ್ತು ಕಳೆಯಿರಿ. ಅಪ್ಪನ ಮನಸ್ಸನ್ನು ಅರ್ಥಮಾಡಿಕೊಂಡು ಮಾತನಾಡಿ, ಯಾವಾಗಲೂ ಅಪ್ಪನಿಗೆ ಎದುರುತ್ತರ ನೀಡಬೇಡಿ, ಅಪ್ಪ, ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳಬೇಡಿ..

ಗಂಗಾವತಿ ತಾಲೂಕ ಶಿಕ್ಷಕರ ದಿನಾಚರಣೆ 2016-17

ಗಂಗಾವತಿ ತಾಲೂಕ ಶಿಕ್ಷಕರ ದಿನಾಚರಣೆ 2016-17

ವಿಶೇಷ ಸೂಚನೆ:
ಈ ದಿನಾಚರಣೆ ಕುರಿತು ಉತ್ತಮ ಫೋಟೋಗಳಿದ್ದರೆ 9480242835 ವಾಟ್ಸಾಪ್ ಗೆ ಕಳುಹಿಸಿರಿ.

image

image

image

image

image

image

image

image

image

image

image

image

image

image

image

image

image

image

image

image

image

image

ಹೈದರಾಬಾದ್ ಸಂಸ್ಥಾನದ ವಿಮೋಚನೆ

ಹೈದರಾಬಾದ ವಿಮೋಚನಾ ಕಾರ್ಯಾಚರಣೆ

೧೯೪೭ ಅಗಸ್ಟ ೧೫ರಂದು ಭಾರತಸ್ವತಂತ್ರವಾಯಿತು.ಆದರೆ ಆಗ ಭಾರತದೊಡನೆ ವಿಲೀನವಾಗಲು ಬಯಸಿದ ತನ್ನ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ವಿರೋಧಿಸಿದ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ, “ಡೆಕ್ಕನ್ ರೇಡಿಯೋ” (ಅಥವಾ “ನಿಜಾಮ್ ರೇಡಿಯೋ” ) ಮೂಲಕ ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ನಿರೀಕ್ಷೆಯಂತೆ ಪಾಕಿಸ್ತಾನವು ಹೈದರಾಬಾದ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಹಲವು ವರ್ಷಗಳು ಮೊದಲಿನಿಂದ, ನಿಜಾಮ್ “ಸೋಲರಿಯದ ಅಲ್ಲಾಹುವಿನ ಸೈನಿಕರು” ಎಂದು ಕರೆದು ಕೊಳ್ಳುತ್ತಿದ್ದ ತನ್ನ ಸೇನೆಗೆ ಮತ್ತು ನಿಜಾಂ ಪೋಲಿಸರಿಗೆ ಬ್ರಿಟಿಷರ ಸೇನಾಧಿಕಾರಿಗಳಿಂದ ತರಬೇತಿ ಶಿಬಿರಗಳನ್ನು ನೆಡೆಸಿದ್ದ ಮತ್ತು ಆಗ ಪ್ರಸಿದ್ಧವಾಗಿದ್ದ ಸಿಡ್ನಿ ಕಾಟನ್ ಬಂದೂಕುಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದ.ಆ ಕಾಲಲ್ಲಿ ವಿಶ್ವದ ಗಣನೀಯ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ ಮೀರ್ ಉಸ್ಮಾನ್ ಅಲಿಗೆ, ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಬ್ರಿಟಿಷ್ ಹಾಗು ಪಾಕಿಸ್ತಾನಿ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಿತ್ತು.

ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದರಾಬಾದ ಪ್ರಜೆಗಳು ಗಾಂಧೀ ಪ್ರಣೀತ ಅಹಿಂಸಾತ್ಮಕ ಚಳುವಳಿ ಪ್ರಾರಂಭಿಸಿದ್ದರು. ಇದರ ನೇತೃತ್ವವನ್ನು ಸಂಸ್ಥಾನ ಕಾಂಗ್ರೆಸ್ ಮುಖಂಡರಾದ ಸ್ವಾಮಿ ರಾಮಾನಂದ ತೀರ್ಥರು ವಹಿಸಿದ್ದರು. ಈ ಚಳುವಳಿಯನ್ನು ಹತ್ತಿಕ್ಕಲು ನಿಜಾಮನು ತನ್ನ ಪೋಲೀಸ್ ಬಲವನ್ನು ಅತ್ಯಂತ ಕ್ರೂರವಾಗಿ ಉಪಯೋಗಿಸಿದನು. ಇದಲ್ಲದೆ, ತನ್ನ ವಿರೋಧಿಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಕಾಸಿಂ ರಜವಿ ಎಂಬ ಭಯೋತ್ಪಾದಕನ ನೇತ್ರತ್ವದಲ್ಲಿ ರಜಾಕಾರ(-ರಜಾಕಾರ ಎನ್ನುವದು ಪರ್ಶಿಯನ್ ಭಾಷೆಯ ಪದ ಮತ್ತು ಇದರ ಅರ್ಥ ಸ್ವಯಂಸೇವಕ-) ಹೆಸರಿನ ಭಯೋತ್ಪಾದಕರ ಪಡೆಯನ್ನು ಕೂಡಾ ನಿಸ್ಸಹಾಯಕ ಪ್ರಜೆಗಳ ಮೇಲೆ ದಾಳಿಗಿಳಿಸಿದನು. ಕಾಸಿಂ ರಜವಿ ಈಗ ಮಹಾರಾಷ್ಟ್ರರಾಜ್ಯದಲ್ಲಿರು ಲಾತೂರಿನಲ್ಲಿ ಒಬ್ಬ ಮಾಮೂಲಿ ವಕೀಲನಾಗಿದ್ದ. ಈತ ಉಗ್ರವಾದಿ ಸಂಘಟನೆ‘ಇತಿಹಾದುಲ್ ಮುಸಲ್ಮಾನ್’ದ ಅಧ್ಯಕ್ಷನಾಗಿದ್ದ ಕೂಡಾ. ನಿಜಾಮನು ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ ದಿನದಂದು, ಈ ರಜಾಕಾರರು,ವಿಶೇಷವಾಗಿ ಹೈದರಾಬಾದಿನಲ್ಲಿ ಸಾವಿರಾರು ಜನ ಅಮಾಯಕರ ಮೇಲೆ ದಾಳಿಯಿಟ್ಟು ಲೂಟಿ, ಅತ್ಯಾಚಾರ, ದೌರ್ಜನ್ಯ ನೆಡೆಸಿದರು. ಇಂದಿನ ತೆಲಂಗಾಣ ಪ್ರದೇಶ, ದಕ್ಷಿಣ ಮಹಾರಾಷ್ಟ್ರ ಮತ್ತು ಹೊಸಪೇಟೆಯ ಬಳಿಯಿರುವ ತುಂಗಭದ್ರಾ ತೀರದವರೆಗೆ ವಿಸ್ತರಿಸಿದ್ದ ಹೈದರಾಬಾದ ಸಂಸ್ಥಾನದ ಜನ, ೧೮ ಸಪ್ಟಂಬರ ೧೯೪೮ಸಂಜೆ ಆರು ಗಂಟೆಯವರೆಗೆ ನಿರಂತರವಾಗಿ ಹಿಂಸೆ, ಕೊಲೆ, ಸುಲಿಗೆ ಮತ್ತು ದೌರ್ಜನ್ಯಕ್ಕೆ ಸಿಲುಕಿದರೂ, ಭಾರತದೊಡನೆ ಹೈದರಾಬಾದ ಸಂಸ್ಥಾನದ ವಿಲೀನಕ್ಕಾಗಿ ಹೋರಾಡಿದರು.

೧.ರಜಾಕಾರರ ದೌರ್ಜನ್ಯ :

ಗ್ರಾಮಗಳಲ್ಲಿರುವ ಹಿಂದು ಸಮುದಾಯದ ಮೇಲೆ ದಾಳಿ ಮಾಡಿ ಜಮೀನುಗಳಲ್ಲಿಯ ಬೆಳೆ ನಾಶ ಮಾಡುವದು, ಮನೆಗಳನ್ನು ಹಾಗು ದೇವಸ್ಥಾನಗಳನ್ನು ಲೂಟಿ ಮಾಡುವದು, ಹೆಂಗಸರ ಮೇಲೆ ಅತ್ಯಾಚಾರಗೈದು ವಿರೂಪಗೊಳಿಸುವದು, ಮಕ್ಕಳು ಮುದುಕರೆನ್ನದೆ ಕಂಡವರನ್ನೆಲ್ಲ ಕತ್ತಿ, ಕೊಡಲಿ, ಬಂದೂಕುಗಳಿಂದ ಹಿಂಸಿಸಿ ಕೊಲ್ಲುವದು, ರಾಷ್ಟ್ರೀಯ ವಿದ್ಯಾಲಯಗಳ ಮೇಲೆ ದಾಳಿ ಮಾಡುವದು ಇವೆಲ್ಲ ಪ್ರಜಾ ಚಳುವಳಿಯನ್ನು ಹತ್ತಿಕ್ಕಲು ರಜಾಕಾರರು ಕಂಡುಕೊಂಡ ತಂತ್ರಗಗಳು. ೧೯೪೬-೪೮ರ ನಡುವೆ ರಜಾಕಾರರು ನಡೆಯಿಸಿದ ದೌರ್ಜನ್ಯಗಳ ಅಂಕಿ ಅಂಶಗಳು ಇಂತಿವೆ:

೧. ಕಲಬುರ್ಗಿ ಜಿಲ್ಲೆಯಲ್ಲಿ ೮೭ ಗ್ರಾಮಗಳ ಮೇಲೆ ದಾಳಿ, ೪೨ ಕೊಲೆ, ೩೬ ದರೋಡೆ ಹಾಗು ೩೪ ಮಹಿಳೆಯರ ಮೇಲೆ ದೌರ್ಜನ್ಯ.

೨. ಬೀದರ ಜಿಲ್ಲೆಯಲ್ಲಿ ೧೭೬ ಗ್ರಾಮಗಳ ಮೇಲೆ ದಾಳಿ, ೧೨೦ ಕೊಲೆ, ೨೩ ಮಹಿಳೆಯರ ಮೇಲೆ ದೌರ್ಜನ್ಯ.

೩. ರಾಯಚೂರು ಜಿಲ್ಲೆಯಲ್ಲಿ ೯೪ ಗ್ರಾಮಗಳ ಮೇಲೆ ದಾಳಿ, ೨೫ ಕೊಲೆ, ೬೩ ಮಹಿಳೆಯರ ಮೇಲೆ ದೌರ್ಜನ್ಯ.

‘ಕಾಟೊ, ಲೂಟೊ ಔರ ಬಾಟೊ’ ಎನ್ನುವದು ರಜಾಕಾರರಿಗೆ ಕಾಶೀಮ ರಜವಿಯ ಆದೇಶವಾಗಿತ್ತು.

ಈ ಸಂದರ್ಭದಲ್ಲಿ ರಾಮಚಂದ್ರ ವೀರಪ್ಪ ಎನ್ನುವವರ ಸಾಹಸದ ಕೃತ್ಯವೊಂದನ್ನು ಇಲ್ಲಿ ನೆನೆಯಬೇಕು. ಹುಮನಾಬಾದದಲ್ಲಿಯ ಬಸವೇಶ್ವರ ಗುಡಿಗೆ ಹೋಗಿ ಪೂಜೆ ಮುಗಿಸಿಕೊಂಡು ಬರುತ್ತಿದ್ದ ಮಾನಿನಿಯೊಬ್ಬಳನ್ನು ನೋಡಿದ ರಜಾಕಾರರು ನಡುಬೀದಿಯಲ್ಲಿಯೇ ಅವಳ ಮಾನಹರಣಕ್ಕೆ ಮುಂದಾದರು. ಈ ಸಮಯದಲ್ಲಿ ಅಲ್ಲಿ ಹೋಗುತ್ತಿದ್ದ ರಾಮಚಂದ್ರ ವೀರಪ್ಪ ಎನ್ನುವ ತರುಣ ಜೀವದ ಹಂಗು ತೊರೆದು ಅವಳನ್ನು ರಕ್ಷಿಸಿದ. ಇವನನ್ನು ಸಾಯಹೊಡೆದು ರಜಾಕಾರರು ಅಲ್ಲಿಂದ ತೆರಳಿದರು. ಆದರೆ ರಾಮಚಂದ್ರ ಬದುಕುಳಿದ ಹಾಗು ಸ್ವತಂತ್ರ ಭಾರತದಲ್ಲಿ ಲೋಕಸಭೆಗೆ – ತನ್ನ ಜೀವಿತಾವಧಿವರೆಗೂ- ಸದಸ್ಯರಾಗಿ ಚುನಾಯಿತರಾಗುತ್ತಿದ್ದರು.

೨.ಪೋಲೀಸ ದೌರ್ಜನ್ಯ :

ಪೋಲೀಸರೂ ಸಹ ರಜಾಕಾರರಿಗೆ ಕಡಿಮೆ ಇಲ್ಲದಂತೆ ವರ್ತಿಸುತ್ತಿದ್ದರು. . ನಿಜಾಮನು ಹೊರಡಿಸಿದ ‘ಕೊಡಲಿ ಬರಾದ್’ ಫರ್ಮಾನ ಮೇರೆಗೆ ಪೋಲೀಸರು ಹಿಂದುಗಳ ಬಳಿಯಿದ್ದ ನಿಯಮಬದ್ಧ ಬಂದೂಕುಗಳನ್ನಲ್ಲದೆ, ಕೊಡಲಿ, ಕುಡಗೋಲುಗಳನ್ನು ಸಹ ಕಿತ್ತುಕೊಂಡು ರಜಾಕಾರರಲ್ಲಿ ಹಂಚಿದರು.

೧೯೪೬ನೆಯ ಇಸವಿಯ ಕಾರಹುಣ್ಣಿವೆಯೆಂದು ಕಲ್ಬುರ್ಗಿಯ ಮಹಾಗಾಂವದ ಗ್ರಾಮಸ್ಥರೆಲ್ಲ ಸೇರಿ ಹಬ್ಬವನ್ನು ಆಚರಿಸುತ್ತಿದ್ದಾಗ, ರಜಾಕಾರರ ದೊಡ್ಡ ಗುಂಪೊಂದು ಗ್ರಾಮದ ಮೇಲೆ ದಾಳಿ ಮಾಡಿತು. ಗಂಡಸರೆಲ್ಲ ಊರಿನ ಒಂದು ಪಾರ್ಶ್ವಕ್ಕೆ ನಡೆದಾಗ ರಜಾಕಾರರು ಊರಿನಲ್ಲಿ ನುಗ್ಗಿ, ಮನೆಗಳನ್ನು ಲೂಟಿ ಮಾಡುತ್ತ, ಹೆಂಗಸರ ಮೇಲೆ ಅತ್ಯಾಚಾರಕ್ಕೂ ಮುಂದಾದರು. ತಕ್ಷಣವೇ ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ಸೂಗಮ್ಮ, ಹಟ್ಟಿ ಗುರುಬಸವ್ವ ಮೊದಲಾದ ಮಹಿಳೆಯರು ಮನೆಗಳ ಮಹಡಿ ಏರಿ ರಜಾಕಾರರ ಮೇಲೆ ಕವಣೆಗಲ್ಲುಗಳನ್ನು ಬೀಸಿದ್ದಲ್ಲದೆ ಕಾದ ಎಣ್ಣೆಯನ್ನು ಸುರುವತೊಡಗಿದರು. ರಜಾಕಾರರು ಹಿಮ್ಮೆಟ್ಟಬೇಕಾಯಿತು. ಆ ದಿನದಿಂದ ಹಲವು ಮಹಿಳೆಯರು ಸಾರ್ವಜನಿಕವಾಗಿ ಗಾಂಧಿ ಟೊಪ್ಪಿಗೆ ಧರಿಸಲಾರಂಭಿಸಿದರು.

ಚಿಕ್ಕೇನಕೊಪ್ಪದಲ್ಲಿ ಶ್ರಾವಣಮಾಸದಲ್ಲಿ ಬಸವೇಶ್ವರ ಜಾತ್ರೆ ನಡೆಯುವ ದಿನದಂದು, ೧೨ ಸಪ್ಟಂಬರ೧೯೪೭ರಂದು ಮಹದೇವಪ್ಪ ಹುಚ್ಚಪ್ಪ ದೊಡ್ಡಮನಿ, ತೇದಿ ಒಕ್ಕಲದ ಚನ್ನಪ್ಪ, ಅಡಿಗೆ ಮನಿ ಶಿವಲಿಂಗಪ್ಪ, ಮಲ್ಲಪ್ಪ ಹಕಾರಿ, ಮಹಾಲಿಂಗಯ್ಯ, ಅಕ್ಕಸಾಲಿ ಗುರಪ್ಪ, ದೇವಪ್ಪ ಮೊದಲಾದವರು “ವಂದೇ ಮಾತರಮ್” ಎಂದು ಘೋಷಿಸುತ್ತ ಚಳುವಳಿ ನಡೆಸಿದರು. ಈ ಸತ್ಯಾಗ್ರಹಿಗಳನ್ನು ಬಂಧಿಸಿದ ಪೋಲೀಸರು , ಪ್ರತೀಕಾರವಾಗಿ ರಜಾಕಾರರೊಡನೆ ಚಿಕ್ಕೇನಕೊಪ್ಪದ ಮೇಲೆ ದಾಳಿ ಮಾಡಿದರು. ಗ್ರಾಮಸ್ಥರನ್ನು ಬಗೆಬಗೆಯಾಗಿ ಹಿಂಸಿಸಿ ಮನೆಗಳನ್ನು ಲೂಟಿ ಮಾಡಿದರು. ಮಹಾದೇವಪ್ಪ ಸ್ಥಾಪಿಸಿದ ವಾಚನಾಲಯವನ್ನು ಸುಟ್ಟು ಬೂದಿ ಮಾಡಿದರು.

ಮಳ್ಳಿ ಕೃಷ್ಣರಾವ ಎನ್ನುವ ವಿದ್ಯಾರ್ಥಿ ಸತ್ಯಾಗ್ರಹಿಯನ್ನು ಹುಡುಕುತ್ತ ಮಳ್ಳಿ ಗ್ರಾಮಕ್ಕೆ ಬಂದ ಪೋಲೀಸರು ಕೃಷ್ಣರಾಯರ ತಂದೆ ಮಹಿಪತಿರಾಯರನ್ನು, ಚಿಕ್ಕಪ್ಪ ರಾಮರಾಯರನ್ನು, ಅಣ್ಣ ನಾರಾಯಣರಾಯರನ್ನು ಹಾಗು ತಮ್ಮ ಗುರುರಾಯನನ್ನು ಮನೆಯಂಗಳದಲ್ಲಿಯೆ ಗುಂಡಿಟ್ಟು ಕೊಂದರು. ಅದು ಸಾಲದೆ, ಊರಿನಲ್ಲಿ ಸಿದ್ದರಾಮ, ಶೇಷಪ್ಪ ಪತ್ತಾರ, ಕುರುಬರ ಯಲ್ಲಪ್ಪ, ಹರಿಜನ ಹಳ್ಳೆಪ್ಪ, ನಾಗೋಜಿ,ಔದೋಜಿ ಮತ್ತು ಬಸಲಿಂಗಪ್ಪ ಎನ್ನುವ ಗ್ರಾಮಸ್ಥರನ್ನು ಸಹ ಗುಂಡಿಟ್ಟು ಕೊಂದರು

೧೯೪೮ ಮೇ ತಿಂಗಳ ಮೊದಲ ವಾರದಲ್ಲಿ ರಜಾಕಾರರು ಬೀದರ ಜಿಲ್ಲೆಯ ಗೋರ್ಟಾ ಎನ್ನುವ ಗ್ರಾಮದ ಮೇಲೆ ದಾಳಿ ಮಾಡಿ, ಅಲ್ಲಿದ್ದ ಎರಡುನೂರು ಹಿಂದುಗಳನ್ನೆಲ್ಲ ಒಟ್ಟುಗೂಡಿಸಿ, ಸುಟ್ಟುಹಾಕಿದರು. ದಕ್ಷಿಣ ಭಾರತದ ಜಾಲಿಯನವಾಲಾಬಾಗ ದುರಂತವೆಂದು ಇದು ಕುಪ್ರಸಿದ್ದವಾಯಿತು. ಭಾಲ್ಕಿಯ ಹಿರೇಮಠ ಸಂಸ್ಥಾನವು ಗಡಿಭಾಗದಲ್ಲಿ ಸಂತ್ರಸ್ಥರಿಗೆ ಆಶ್ರಯ ನೀಡಿತು. ಭೀಮಣ್ಣ ಖಂಡ್ರೆ, ಶಿವಾ ಖಂಡ್ರೆ, ಬಂಡೆಪ್ಪ ಮೊದಲಾದವರು ಬೀದರ ಜಿಲ್ಲೆಯಲ್ಲಿ ರಜಾಕಾರರ ವಿರುದ್ಧ ಹೋರಾಟ ನೆಡೆಸಿದರು. ಇದರ ಪರಿಣಾಮವಾಗಿ, ನಿಜಾಮ್ ಸರ್ಕಾರವು ಅವರ ಆಸ್ತಿಯನ್ನು ಜಪ್ತಿ ಮಾಡಿ, ಅನೇಕ ರೀತಿಯಲ್ಲಿ ತೊಂದರೆ ನೀಡಿತು.

ತುಮರಿಕೊಪ್ಪದಲ್ಲಿ ಸಭೆ ನಡೆಯಿಸುತ್ತಿದ್ದ ಜನರ ಮೇಲೆ ಪೋಲೀಸರು ಗುಂಡಿನ ದಾಳಿ ಮಾಡಿ ಹಿರೆಗೊಣ್ಣಾಗರದ ಪಿಂಜಾರ ಅಲಿಸಾಬ ಮತ್ತು ಕುನ್ನಾಪುರದ ಹನುಮಂತಪ್ಪ ಎನ್ನುವವರನ್ನು ಬಲಿ ತೆಗೆದುಕೊಂಡರು. ಅದೇ ಊರಿನ ಮೇಲೆ ಮರುದಿನ ರಜಾಕಾರರ ಜೊತೆಗೆ ಮತ್ತೊಮ್ಮೆ ದಾಳಿ ಮಾಡಿದರು. ಬಾಂದಿನಾಳದ ಮರಗವ್ವನನ್ನು ಹಿಡಿದುಕೊಂಡು ಹಾಡುಹಗಲಲ್ಲೆ ಅತ್ಯಾಚಾರ ಮಾಡಿ ಸಾಯಿಸಿದರು. ಹಾಬಲಕಟ್ಟೆಯ ವೃದ್ಧೆ ಯಮುನವ್ವನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದು ಹಾಕಿದರು.

ಈ ಕಾರಣಗಳಿಂದಾಗಿ ಚಳುವಳಿಗಾರರು ವಿಮೋಚನಾ ಚಳುವಳಿಯನ್ನು ಎರಡು ಸ್ತರಗಳಲ್ಲಿ ಸಂಘಟಿಸಬೇಕಾಯಿತು:

I. ಅಹಿಂಸಾತ್ಮಕ ಚಳುವಳಿಯನ್ನು ಮುಂದುವರಿಸುವದು.

II. ರಜಾಕಾರರ ವಿರುದ್ಧ ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆಯನ್ನು ಏರ್ಪಡಿಸುವದು.

I. ಅಹಿಂಸಾತ್ಮಕ ಚಳುವಳಿ:

ಭಾರತಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣ ಹೈದರಾಬಾದ ಸಂಸ್ಥಾನದಲ್ಲಿ ಅಹಿಂಸಾತ್ಮಕ ಚಳುವಳಿಯ ನೇತಾರರಾದಸ್ವಾಮಿ ರಾಮಾನಂದ ತೀರ್ಥರು , ಡಾ: ಮೇಲ್ಕೋಟೆಯವರು ಹಾಗು ಇತರ ಕೆಲವು ಚಳುವಳಿಗಾರರು ೧೫ ಅಗಸ್ಟ ೧೯೪೭ರ ಮುಂಜಾವಿನ ಮೂರು ಗಂಟೆಯ ಸಮಯಕ್ಕೆ ಹೈದರಾಬಾದದ ಸುಲ್ತಾನ ಬಜಾರ ಎನ್ನುವ ಸಾರ್ವಜನಿಕ ಸ್ಥಳದಲ್ಲಿ ಭಾರತದ ತ್ರಿವರ್ಣಧ್ವಜ ಹಾರಿಸಿದರು.

ರಾಯಚೂರಿನಲ್ಲಿ ಅಗಸ್ಟ ೧೪ರ ನಟ್ಟಿರುಳಿನಲ್ಲಿ ಮಟಮಾರಿ ನಾಗಪ್ಪ, ಚಂದ್ರಯ್ಯ, ಶರಭಯ್ಯ ಮತ್ತು ಬಸಣ್ಣ ಎನ್ನುವ ವಿದ್ಯಾರ್ಥಿಗಳು ಪೋಲೀಸ ಕಾವಲನ್ನು ಭೇದಿಸಿ ಜಿಲ್ಲಾಧಿಕಾರಿಯ ಕಚೇರಿಯ ಮೇಲೆ ತ್ರಿವರ್ಣಧ್ವಜ ಹಾರಿಸಿದರು.

ಕಲಬುರ್ಗಿಯಲ್ಲಿ ಅನಿರುದ್ಧ ದೇಸಾಯಿ ಎನ್ನುವ ವಿದ್ಯಾರ್ಥಿಯ ಮುಂದಾಳ್ತನದಲ್ಲಿ ೫೦-೬೦ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಮೆರವಣಿಗೆ ತೆಗೆದರು.

ಇದರಂತೆ ಕನಕಗಿರಿಯಲ್ಲಿ ಜಯತೀರ್ಥ ರಾಜಪುರೋಹಿತರು, ಆಳಂದದಲ್ಲಿ ಎ.ವಿ.ಪಾಟೀಲರು, ಯಾದಗಿರಿಯಲ್ಲಿ ಕೋಲೂರು ಮಲ್ಲಪ್ಪನವರು, ಚಿತ್ತಾಪುರದಲ್ಲಿ ಬಸಪ್ಪ ಸಜ್ಜನಶೆಟ್ಟರು, ಕಾರಟಗಿಯಲ್ಲಿ ಬೆನಕಲ್ ಭೀಮಸೇನರಾಯರು ಹೀಗೆ ಎಲ್ಲೆಡೆಗೂ ಭಾರತದ ತ್ರಿವರ್ಣಧ್ವಜ ಹಾರಾಡಿತು.

ಸ್ವಾಮಿ ರಾಮಾನಂದ ತೀರ್ಥರು ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ “Quit college, Act now” ಕರೆಯ ಮೇರೆಗೆ ಸಾವಿರಾರು ಕಾಲೇಜ ಹಾಗು ಶಾಲಾ ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸಿದರು. ಅನಿರುದ್ಧ ದೇಸಾಯಿ ಎನ್ನುವ ಹದಿಹರೆಯದ ಬಾಲಕ ಜೇಲು ಸೇರಿದ್ದ. ಇವನ ತಂದೆ ಸಹ ಸತ್ಯಾಗ್ರಹ ಮಾಡಿ ಅದೇ ಜೇಲಿನಲ್ಲಿ ಸೆರೆಯಾಳಾದರು. ಇದೇ ಜೈಲಿನ ಮತ್ತೊಂದು ಬರಾಕಿನಲ್ಲಿ ಅನಿರುದ್ಧ ದೇಸಾಯಿಯ ಚಿಕ್ಕಪ್ಪ ಬೆಣಕಲ್ ಭೀಮಸೇನರಾವ ಸಹ ಇದ್ದರು. ಜೈಲಿನಲ್ಲಿ “ವಂದೇ ಮಾತರಮ್ ” ಹಾಡಿದುದರ ಪ್ರತೀಕಾರಾರ್ಥವಾಗಿ ಜೈಲಿನ ಅಧಿಕಾರಿಗಳು ಹಾಗು ರಜಾಕಾರರು ಸೆರೆಯಾಳುಗಳನ್ನು ಲಾಠಿಗಳಿಂದ ಚಚ್ಚಿದರು. ಇದರ ಪರಿಣಾಮವಾಗಿ ಅನೇಕ ಸೆರೆಯಾಳುಗಳು ಕೈಕಾಲು ಮುರಿದುಕೊಂಡು ತೀವ್ರ ಗಾಯಾಳುಗಳಾದರು ಹಾಗು ಬೆಣಕಲ್ ಭೀಮಸೇನರಾವ ಮರಣ ಹೊಂದಿದರು.

ಆರ್ಯಸಮಾಜದ ಚಂದ್ರಶೇಖರ ಪಾಟೀಲರಿಗೆ ಔರಂಗಾಬಾದ ಜೇಲಿನಲ್ಲಿ ಕೊರಡೇಟಿನ ಶಿಕ್ಷೆ ಕೊಡಲು ಜೈಲಿನ ಅಧಿಕಾರಿಗಳು ಮುಂದಾದಾಗ, ಅಲ್ಲಿಯ ಸೆರೆಯಾಳುಗಳು, ತಾವು ಸತ್ತೇವೆಯೆ ಹೊರತು, ಚಂದ್ರಶೇಖರ ಪಾಟೀಲರಿಗೆ ತೊಂದರೆಯಾಗಗೊಡುವದಿಲ್ಲವೆಂದು, ಇವರ ಸುತ್ತ ಮಾನವ ಕೋಟೆಯನ್ನು ನಿರ್ಮಿಸಿದ್ದು ಅಭೂತಪೂರ್ವ ಘಟನೆಯಾಗಿದೆ.

೧೯೪೮ ಫೆಬ್ರುವರಿ ೧೫ರಂದು ಮರಡಿ ಆಶ್ರಮದ ತಪಸ್ವಿ ಭೀಮಜ್ಜನವರು ಸಾರ್ವಜನಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸತ್ಯಾಗ್ರಹದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಒಮ್ಮಿಂದೊಮ್ಮಿಗೆ ದಾಳಿ ಮಾಡಿದ ಪೋಲೀಸರು ಹಾಗು ರಜಾಕಾರರು ಸತ್ಯಾಗ್ರಹಿಗಳ ಮೇಲೆ ಲಾಠಿ ಪ್ರಹಾರ ಮಾಡಿದರು. ಭೀಮಜ್ಜನವರನ್ನಲ್ಲದೆ, ಕೊರ್ಲಹಳ್ಳಿ ಶ್ರೀನಿವಾಸಾಚಾರಿ, ಕಾಟಾಪುರದ ಹನುಮಂತರಾವ, ಕಿಶನರಾವ ದೇಸಾಯಿ, ಅಪ್ಪಣ್ಣ ಮರಾಠೆ, ಬಸಯ್ಯ ಗೌಡಪ್ಪ ಹಾಗು ನೂರಾರು ಜನರನ್ನು ಲಾರಿಗಳಲ್ಲಿ ತುಂಬಿ ಒಯ್ದು ಕುಷ್ಟಗಿ ಜೈಲಿಗೆ ಸೇರಿಸಿದರು.

೧೯೪೭ ಅಗಸ್ಟ ತಿಂಗಳ ಮೊದಲ ವಾರದಲ್ಲೆ ನಿಜಾಮ ಸರಕಾರವು ತ್ರಿವರ್ಣಧ್ವಜವನ್ನು ನಿಷೇಧಿಸಿತು. ಆ ಸಮಯದಲ್ಲಿ ಮಾಲಗಿತ್ತಿಯಲ್ಲಿ ನಡೆದ ಬಹಿರಂಗ ಮೆರವಣಿಗೆಯಲ್ಲಿ, ಇದ್ದಕ್ಕಿದ್ದಂತೆ ಸೀತಮ್ಮ ಬಡಿಗೇರಎನ್ನುವ ೨೪ ವಯಸ್ಸಿನ ಹೆಣ್ಣು ಮಗಳು ವೀರಗಚ್ಚೆ ಹಾಕಿಕೊಂಡು, ಹಣೆ ತುಂಬ ಕುಂಕುಮ ಹಾಗು ಗಲ್ಲಕ್ಕೆ ಅರಿಶಿಣ ಹಚ್ಚಿಕೊಂಡು, ಒಂದು ಕೈಯಲ್ಲಿ ತ್ರಿವರ್ಣಧ್ವಜ ಹಾಗು ಇನ್ನೊಂದು ಕೈಯಲ್ಲಿ ಕುಡಗೋಲು ಹಿಡಿದುಕೊಂಡು ಕಾಳಿಯಂತೆ ಕುಣಿಯುತ್ತ ಬಂದಳು. “ವಂದೇ ಮಾತರಮ್” ಘೋಷಣೆ ಮುಗಿಲು ಮುಟ್ಟಿತು.

II: ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆ:

ಹೈದರಾಬಾದ್ ಕಾಂಗ್ರೆಸ್ ಅಧ್ಯಕ್ಷರಾದ ಸ್ವಾಮಿ ರಾಮಾನಂದ ತೀರ್ಥರ ಬಂಧನದ ನಂತರ ಹೈದರಾಬಾದಿನ ಪರಿಸ್ಥಿತಿ ಗಂಭೀರವಾಯಿತು. ಆಗ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮುಖಂಡರಾದ ಅನ್ನದಾನಯ್ಯ ಪುರಾಣಿಕ,ಪ್ರಭುರಾಜ ಪಾಟೀಲ ಮೊದಲಾದ ಯುವಕರು, ಸ್ಥಳೀಯ ಗಣ್ಯರಾದ ಅನ್ನಪೂರ್ಣಯ್ಯ ಸ್ವಾಮಿ ಮೊದಲಾದವರ ಸಹಾಯದಿಂದ ರಜಾಕಾರರ ಹಾವಳಿಗೆ ತುತ್ತಾದ ಹಿಂದು-ಮುಸ್ಲಿಂರ ರಕ್ಷಣೆ ಮಾಡಿದರು. ಹೈದರಾಬಾದ್ ನಿಜಾಮ್ ನ ಹತ್ತಿರ ದಿವಾನರಾಗಿದ್ದ ಮಿರ್ಜಾ ಇಸ್ಮ್ಐಲ್ ಹಿಂದೂಗಳ ರಕ್ಷಣೆಗೆ ವಿಶೇಷ ಸಹಾಯ ನೀಡಿದರು.ತಮ್ಮ ವಿದ್ಯಾಭ್ಯಾಸ ತೊರೆದು, ಮುಂಡರಗಿಗೆ ಬಂದ ಈ ಯುವಕರು, ಹಳೆಯ ಅನ್ನದಾನೀಶ್ವರ ಮಠದಲ್ಲಿ ಪ್ರಪ್ರಥಮ ಶಿಬಿರವನ್ನು ಸ್ಥಾಪಿಸಿದರು. ಶಿವಮೂರ್ತಿ ಸ್ವಾಮಿ ಅಳವಂಡಿ,ಡಾ.ಚುರ್ಚಿಹಾಳ್ ಮಠಮೊದಲಾದವರು ಈ ಶಿಬಿರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಪೋಲಿಸ್ ಕೆಲಸದಲ್ಲಿದ್ದರೂ, ಫೌಜದಾರ್ ಹೆಬ್ಬಸ್ಸೂರ್, ಈ ಶಿಬಿರದವರಿಗೆ ಅಗತ್ಯ ಮಾಹಿತಿ ಮತ್ತು ಬಂದೂಕು ಬಳಸುವ ತರಬೇತಿ ನೀಡಿದರು. ಅನೇಕ ದಿನಗಳ ಕಾಲ ಒಂದು ಹೊತ್ತು ಊಟಕ್ಕೂ ಶಿಬಿರಾರ್ಥಿಗಳು ಪರದಾಡ ಬೇಕಾಯಿತು.

ಕಾಲಕ್ರಮೇಣ,ಕಲ್ಬುರ್ಗಿ ಮತ್ತು ರಾಯಚೂರು ಜಿಲ್ಲೆಗಳ ಗಡಿಗಳಲ್ಲಿ ಸುಮಾರು ೩೦ ಶಿಬಿರಗಳಿದ್ದವು.

ಗಜೇಂದ್ರಗಡದ ಶಿಬಿರಕ್ಕೆ ಪುಂಡರೀಕಪ್ಪ ಜ್ಞಾನಮೋಠೆ ಶಿಬಿರಾಧಿಪತಿಯಾಗಿದ್ದರು. ಬಿ.ವಿ.ದೇಸಾಯಿ ಇವರಿಗೆ ಸಹಾಯಕರು. ಮಂತ್ರಾಲಯದ ಗಡಿಶಿಬಿರಕ್ಕೆ ನಾಗಪ್ಪನವರು ಶಿಬಿರಾಧಿಪತಿಗಳು. ಚಂದ್ರಯ್ಯ, ಈಶ್ವರಯ್ಯ, ಅಯನೂರು ನರಸಪ್ಪ ಇವರೆಲ್ಲ ಸಹಾಯಕರು. ಅಯನೂರು ಹೋಬಳಿಯ ಹತ್ತಿರದ ಶಿಬಿರಕ್ಕೆ ಕುರ್ಲಹಳ್ಳಿ ರಾಘವೇಂದ್ರರಾಯರು ಶಿಬಿರಾಧಿಪತಿಗಳು.

ಮುಂಡರಗಿಯ ಶಿಬಿರಕ್ಕೆ ಅಳವಂಡಿ ಶಿವಮೂರ್ತಿ ಸ್ವಾಮಿ ಶಿಬಿರಾಧಿಪತಿ. ಅನ್ನದಾನಯ್ಯ ಪುರಾಣಿಕರು ಕಾರ್ಯಾಚರಣೆ, ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ಪ್ರಚಾರದ ಮುಖ್ಯಸ್ಥರು. ಇವರ ಸಹಾಯಕರಾಗಿ ಕೆಲಸ ಮಾಡಿದವರು ಪ್ರಭುರಾಜ್ ಪಾಟೀಲ, ಡಂಬಳ ಸೋಮಪ್ಪ, ದೇವೇಂದ್ರ ಕುಮಾರ ಹಕಾರಿ,ನೀಲಕಂಠಗೌಡ, ಮೊದಲಾದವರು. ಗಾಯಗೊಂಡ ಶಿಬಿರಾರ್ಥಿಗಳಿಗೆ ನೆರವು ನೀಡಿದ್ದು ಡಾ.ಚುರ್ಚಿಹಾಳ್ ಮಠ. ಕೊಪ್ಪಳ ಕೋಟೆಯಲ್ಲಿ ಭಾರತದ ಧ್ವಜ ಹಾರಿಸಲು ಯತ್ನಿಸಿದ ಬಾಲಕ ಪಂಚಾಕ್ಷರಿ ಹಿರೇಮಠನನ್ನು ಪರಿಚಿತ ಪೋಲಿಸನೊಬ್ಬ ಬಂಧಿಸದೆ, ಆತನನ್ನು ಸುರಕ್ಷಿತ ಸ್ಥಾನಕ್ಕೆ ಕಳುಹಿಸಿದ.

ಹಾಲು-ಮೊಸರು ಮಾರಲು ಹಳ್ಳಿ-ಹಳ್ಳಿ ತಿರುಗುತ್ತಿದ್ದ ಮಹಿಳೆಯರು, ದನಗ್ರಾಹಿಗಳು, ಹೀಗೆ ಜನಸಾಮಾನ್ಯರು ರಜಾಕಾರರ ಮತ್ತು ನಿಜಾಮ್ ಪೋಲೀಸರ ಕುರಿತ ಮಾಹಿತಿಯನ್ನು ಮುಂಡರಗಿಯ ಶಿಬಿರಕ್ಕೆ ತಲುಪಿಸುವಂತಹ ಗುಪ್ತಚಾರ ವ್ಯವಸ್ಥೆಯನ್ನುಅನ್ನದಾನಯ್ಯ ಪುರಾಣಿಕ ನೆಡೆಸುತ್ತಿದ್ದರು. ಶಿಬಿರದ ಕಾರ್ಯಾಚರಣೆಗಳನ್ನು ಕುರಿತ ಗುಪ್ತ ಮಾಹಿತಿ, ಕೈಬರಹದ ಪತ್ರಗಳ ಮೂಲಕ ರವಾನೆಯಾಗುತ್ತಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್ , ಮುಂಡರಗಿಯ ಶಿಬಿರದ ಕಾರ್ಯಾಚರಣೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಅವರ ಸೂಚನೆಯ ಮೆರೆಗೆ, ಕೇಂದ್ರ ಮಂತ್ರಿ ಗಾಡ್ಗೀಳ, ಕಾಂಗ್ರೆಸ್ ಮುಖಂಡ ನಿಜಲಿಂಗಪ್ಪ ಮೊದಲಾದವರು ರಹಸ್ಯವಾಗಿ ಈ ಶಿಬಿರಕ್ಕೆ ಬಂದು, ಉತ್ತೇಜನ ನೀಡಿದ್ದರು. ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದ ವಿವರಗಳನ್ನು ರಾಷ್ಟ್ರೀಯ ವೃತ್ತ ಪರ್ತಿಕೆಗಳಲ್ಲಿ ಪ್ರಮುಖವಾಗಿ ಪ್ರಕಟಿಸುವಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಸೂಚನೆ ನೀಡಿದ್ದರು. ಈ ಪತ್ರಿಕೆಗಳಿಗೆ ವರದಿಯನ್ನು ಅಲ್ಲಮ ಹೆಸರಿನಲ್ಲಿ ಬರೆದು ಕಳುಹಿಸುವ ಕೆಲಸವನ್ನು ಅವರು, ಅನ್ನದಾನಯ್ಯ ಪುರಾಣಿಕರಿಗೆ ವಹಿಸಿದ್ದರು. ಆಗ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ,ಸಂಯುಕ್ತ ಕರ್ನಾಟಕ ಪತ್ರಿಕೆ ನಿರ್ಭಿತಿಯಿಂದ ಹೋರಾಟದ ವರದಿಗಳನ್ನು ಪ್ರಕಟಿಸಿದ್ದು, ಇಲ್ಲಿ ಗಮನಾರ್ಹ.

ಬಿಜಾಪುರ ಜಿಲ್ಲೆಯ ಕಕ್ಕಲಮೇಳದಲ್ಲಿ ಸ್ಥಾಪಿತವಾದಸರದಾರ ಶರಣಗೌಡ ಇನಾಮದಾರರ ಇವರ ಶಿಬಿರದಲ್ಲಿಯ ಯೋಧರಂತೂ ರಕ್ತಪ್ರತಿಜ್ಞೆಯನ್ನೇ ಮಾಡಿದರು. ಶರಣಗೌಡರ ಪ್ರತಿದಾಳಿಗಳು ರಜಾಕಾರರಲ್ಲಿ ನಡುಕವನ್ನೆ ಹುಟ್ಟಿಸಿದವು.ಶಂಕರೇಗೌಡ ಮತ್ತು ಅಮರೇಶ ಎನ್ನುವ ಹೈಸ್ಕೂಲ ವಿದ್ಯಾರ್ಥಿಗಳು ಮಾನವಿಯಲ್ಲಿ ರಜಾಕಾರರ ಪರೇಡಿನ ಮೇಲೆ ಕೈಬಾಂಬ್ ಎಸೆದರು. (ಕೈಬಾಂಬ್ ಸ್ಫೋಟಗೊಳ್ಳಲಿಲ್ಲ. ಈ ಇಬ್ಬರೂ ವಿದ್ಯಾರ್ಥಿಗಳು ಪಾರಾಗಿ ಓಡಿಹೋದರು). ಹಡಗಿನಹಾಳ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ತಹಶೀಲದಾರನ ಡೇರೆಗೆ ರಾತ್ರಿಯಲ್ಲಿ ಬೆಂಕಿ ಹಚ್ಚಿ ಅವನನ್ನು ಅಲ್ಲಿಂದ ಓಡಿಸಲಾಯಿತು. ಅಯನೂರು ಹೋಬಳಿಯ ಮಂಗಳೂರಿನಲ್ಲಿ ಪೋಲೀಸ ಅಧಿಕಾರಿಯ ಕ್ಯಾಂಪ್ ಮೇಲೆ ದಾಳಿ ಮಾಡಿ ಅವರನ್ನು ಓಡಿಸಿದರು. ಗುಡದೂರಿನಲ್ಲಿ ನಿಜಾಮನ ಸೇನಾ ತುಕಡಿಯ ಮೇಲೆ ರಾತ್ರಿದಾಳಿ ಮಾಡಿ ಅಲ್ಲಿ ತ್ರಿವರ್ಣಧ್ವಜ ಹಾರಿಸಿದರು.

ರಜಾಕಾರರ ಪ್ರಬಲ್ಯವಿದ್ದ ಕುಕುನೂರಿನಲ್ಲಿದ್ದ ಪ್ರಮುಖ ಪೋಲಿಸ್ ಠಾಣೆಯ ಮೇಲೆ ದಾಳಿ ನೆಡೆಸಲು ಪ್ರಭುರಾಜ ಪಾಟೀಲ, ಮುರುಘೇಂದ್ರಯ್ಯ ಶಿರೂರಮಠ ಮೊದಲಾಗಿ ಸುಮಾರು ಅರವತ್ತು ಯುವಕರನ್ನು ಮುಂಡರಗಿಯ ಶಿಬಿರದಿಂದ ಬಸರಿಗಿಡ ವೀರಪ್ಪನವರ ಬಸ್ಸಿನಲ್ಲಿ ಕಳುಹಿಸಿದ ಅನ್ನದಾನಯ್ಯ ಪುರಾಣಿಕ, ಮತ್ತೊಂದೆಡೆ ಕುಕುನೂರಿನಲ್ಲಿದ್ದ ರಜಾಕಾರರು ಮತ್ತು ಪೋಲಿಸ್ ಅಧಿಕಾರಿ ರಾಮಿ ರೆಡ್ಡಿಯನ್ನು ಚಿಕೇನಕೊಪ್ಪದಲ್ಲಿ ನೆಡೆಯುತ್ತಿದ್ದ ಜಾತ್ರೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದರು. ಪೂರ್ವ ಯೋಜನೆಯಂತೆ ಕುಕುನೂರಿನ ಪೋಲಿಸ್ ಠಾಣೆಯ ಮೇಲೆ ನೆಡೆದ ದಾಳಿಯಲ್ಲಿ ಮುಂಡರಗಿ ಶಿಬಿರದ ಯುವಕರು ವಿಜಯ ಸಾಧಿಸಿ, ಅಪಾರ ಪ್ರಮಾಣದ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ಈ ದಾಳಿಯಲ್ಲಿ ನಿಜಾಮ್ ಪೋಲಿಸರ ಗುಂಡಿಗೆ ಬಲಿಯಾಗಲಿದ್ದ ಪ್ರಭುರಾಜ ಪಾಟೀಲರನ್ನು ಅಸಾಮಾನ್ಯ ಸಾಹಸ ಪ್ರದರ್ಶಿಸಿ ಮುರುಘೇಂದ್ರಯ್ಯ ಶಿರೂರಮಠರಕ್ಷಿಸಿದರು. ಈ ಕಾರ್ಯಾಚರಣೆಯಿಂದಾಗಿ, ನಿಜಾಮ್ ಪೋಲೀಸರು ಮತ್ತು ರಜಾಕಾರರ ವಿರುದ್ಧ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರು ಜಯಗಳಿಸಿದ್ದರು. ಸೋಲಿನಿಂದ ಕುಪಿತನಾದ ನಿಜಾಮ್, ಅಳವಂಡಿ ಶಿವಮೂರ್ತಿ ಸ್ವಾಮಿ, ಅನ್ನದಾನಯ್ಯ ಪುರಾಣಿಕರನ್ನು ಜೀವಂತ ಅಥವಾ ಶವವಾಗಿ ತಂದವರಿಗೆ ಭಾರೀ ಬಹುಮಾನ ನೀಡುವುದಾಗಿ ಘೋಷಿಸಿದ.

ಕೆಲವು ಕಾಂಗ್ರೆಸ್ ಮುಖಂಡರ ಪಿತೂರಿಯಿಂದಾಗಿ ಮುಂಬಯಿ ಸರ್ಕಾರದ ಮುಖ್ಯಸ್ಥರಾದ ಮುರಾರ್ಜಿ ದೇಸಾಯಿ, ಪೋಲಿಸರಿಗೆಮುಂಡರಗಿ ಶಿಬಿರದ ಮೇಲೆ ದಾಳಿ ನೆಡೆಸಿ, ಹೋರಾಟಗಾರರನ್ನು ಜೀವಂತವಾಗಿ ಅಥವಾ ಕೊಂದು ತರಬೇಕೆಂಬ ಆಜ್ಞೆ ಮಾಡಿದರು. ಪೋಲಿಸರು ಬರುತ್ತಿರುವ ಮಾಹಿತಿಯನ್ನು ಹೆಬ್ಬಸೂರಬಂದು ತಿಳಿಸಿದಾಗ, ಅನ್ನದಾನಯ್ಯ ಪುರಾಣಿಕ ಮುಂಡರಗಿ ಶಿಬಿರವನ್ನು ಖಾಲಿ ಮಾಡಿಸಿ, ಎಲ್ಲರನ್ನು ಸುರಕ್ಷಿತ ಸ್ಥಾನಗಳಿಗೆ ಕಳುಹಿಸಿದರು. ನಂತರ ಅವರು, ಪ್ರಮುಖ ದಾಖಲೆಗಳೊಂದಿಗೆ ಮುಂಡರಗಿಯಿಂದ, ತುಂಗಭದ್ರಾ ತೀರದಲ್ಲಿರುವ ಹೊಸೂರು ಶಿಬಿರಕ್ಕೆ ಓಡುತ್ತಾ ,ಪೋಲಿಸರ ಕೈಗೆ ಸಿಗದಂತೆ ಬಂದು ತಲುಪಿದರು. ಹೊಸೂರು ಶಿಬಿರದಲ್ಲಿದ್ದ ಹೋರಾಟಗಾರರನ್ನು ಕೂಡಾ ಪೋಲೀಸರಿಂದ ರಕ್ಷಿಸಲಾಯಿತು. ಮುಂದೆ, ಧಾರವಾಡದದ ಜಿಲ್ಲಾಧಿಕಾರಿ ಈ ಆದೇಶವನ್ನು ರದ್ದುಗೊಳಿಸುವ ತನಕ, ಹೋರಾಟಗಾರರ ಪರಿಸ್ಥಿತಿ ಬಹಳ ಕಠಿಣವಿತ್ತು.

ಮರುದಿನ,ಸ್ವಾಮಿ ರಾಮಾನಂದ ತೀರ್ಥ, ಗದುಗಿಗೆ ಬರುವ ಕಾರ್ಯಕ್ರಮವಿದ್ದ ಕಾರಣ, ಅಳವಂಡಿ ಶಿವಮೂರ್ತಿ ಸ್ವಾಮಿ ಆಗ ಗದುಗಿನಲ್ಲಿದ್ದು, ಈ ಪೋಲೀಸ ಕಾರ್ಯಾಚರಣೆಯಿಂದ ಸುರಕ್ಷಿತವಾಗಿದ್ದರು. ಸ್ವಾಮಿ ರಾಮಾನಂದ ತೀರ್ಥರ ಭೇಟಿಗಾಗಿ ಅನ್ನದಾನಯ್ಯ ಪುರಾಣಿಕ,ಬೆಟಗೇರಿ ವಿರೂಪಾಕ್ಷಪ್ಪ ಸರಕು ಸಾಗಾಣಿಕೆ ರೈಲಿನಲ್ಲಿ ಹೊಸಪೇಟೆಯಿಂದ ಗದುಗಿಗೆ ಹೊರಟರು. ಇವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಕೊಪ್ಪಳ ರೈಲ್ವೇ ನಿಲ್ದಾಣದಲ್ಲಿ ರಜಾಕಾರರು ತುಂಬಿದ್ದರೆ, ಬನ್ನಿಕೊಪ್ಪ ನಿಲ್ದಾಣದಲ್ಲಿ ರಾಮಿರೆಡ್ಡಿ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಫೋಲಿಸರು ಕಾದಿದ್ದರು. ಇವರ ಕಣ್ಣು ತಪ್ಪಿಸಿ, ಗದಗ ತಲುಪಿ ಸ್ವಾಮಿ ರಾಮಾನಂದ ತೀರ್ಥರ ಭೇಟಿ ಮಾಡಿದರು. ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟವನ್ನು ತೀವ್ರಗೊಳಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು.

ಗೌರಪುರದಲ್ಲಿ ಜನಸಂಘಟನೆಗಾಗಿ ತೆರಳಿದ್ದ ಜಯತೀರ್ಥ ರಾಜಪುರೋಹಿತರನ್ನು ಪೋಲೀಸರು ಬೆನ್ನಟ್ಟಿ ಬಂದಾಗ, ಈ ತರುಣ ಕ್ರಾಂತಿಕಾರಿಗೆ ಆಶ್ರಯವಿತ್ತವನು ಉಪ್ಪಾಲದಿನ್ನೆಯ ಮಡಿವಾಳಪ್ಪ ಎನ್ನುವ ರೈತ. ಪೋಲೀಸರು ಮಡಿವಾಳಪ್ಪನ ಮನೆಗೆ ಶೋಧನೆಗೆ ಬಂದಾಗ , ರಾಜಪುರೋಹಿತರು ಅಲ್ಲಿಂದ ಹೊರಬರಲು ಉದ್ಯುಕ್ತರಾದರು. ಆ ಸಂದರ್ಭದಲ್ಲಿ ರೈತ ಮಡಿವಾಳಪ್ಪ ಹೇಳಿದ ಮಾತು ಹೈದರಾಬಾದ ಪ್ರಜೆಗಳ ಹೃದಯವನ್ನು ತೆರೆದು ತೋರಿಸುವಂತಹ ಮಾತಾಗಿದೆ: “ಅಲ್ಲೇ ನನ್ ಹೇಣ್ತಿ ಹಂತೇಕ್ ಹೋಗಿ, ಕೌದಿ ಹೊಚ್ಕೊಂಡ್ ಮಲಕೋರಿ, ನನ್ ಮಗಾ ಮಲಗ್ಯಾನ ಅಂತ ಹೇಳ್ತೀನಿ”!

ಇಟಗಿ ಸೀಮೆ ವಿಮೋಚನೆ:

೧೯೪೭ ನವಂಬರ ೧೦ರಂದು ಸ್ವಾತಂತ್ರ್ಯಸಂಗ್ರಾಮದ ಕ್ರಿಯಾಸಮಿತಿಯು ಚೆನ್ನೈನಲ್ಲಿ ಸಭೆ ಸೇರಿದರು. ಹಿರಿಯ ಸ್ವಾತಂತ್ರ್ಯ ಸೇನಾನಿ ಸಿರೂರು ವೀರಭದ್ರಪ್ಪನವರು, ಗಜೇಂದ್ರಗಡ ಶಿಬಿರದ ಪುಂಡರೀಕ ಜ್ಞಾನಮೋಠೆಯವರು, ಮುಂಡರಗಿ ಶಿಬಿರದ ಅಳವಂಡಿ ಶಿವಮೂರ್ತಿ ಸ್ವಾಮಿಯವರು, ಅನ್ನದಾನಯ್ಯ ಪುರಾಣಿಕ, ರಾಮಾಚಾರ್ಯ ಪುರೋಹಿತ, ನಾಗಪ್ಪ, ಶಂಕರೇಗೌಡ ಮೊದಲಾದವರು ಕೂಡಿಕೊಂಡು ಇಟಗಿ ಸೀಮೆಯ ವಿಮೋಚನೆಯ ನಿರ್ಧಾರ ತೆಗೆದುಕೊಂಡರು. ಇಟಗಿ ಸೀಮೆಯ ೧೩ ಹಳ್ಳಿಗಳು ನಿಜಾಮ ಸಂಸ್ಥಾನದಲ್ಲಿದ್ದರೂ ಸಹ, ನಾಲ್ಕೂ ದಿಕ್ಕುಗಳಲ್ಲಿ ಭಾರತದಿಂದ ಆವೃತವಾಗಿತ್ತು. ನಿರ್ಣಯದ ಮೇರೆಗೆ ಹದಿಮೂರೂ ಗ್ರಾಮಗಳಲ್ಲಿ ಒಂದೇ ದಿನ ಸ್ವಾತಂತ್ರ್ಯಯೋಧರ ಪಡೆಗಳು ಮುನ್ನುಗ್ಗಿ ಅಲ್ಲಿದ್ದ ಎಲ್ಲ ಸರಕಾರಿ ಕಚೇರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಭಾರತದ ತ್ರಿವರ್ಣಧ್ವಜವನ್ನು ಹಾರಿಸಿದವು. ಆ ಗ್ರಾಮಗಳಲ್ಲಿದ್ದ ರಜಾಕಾರರು ಹಾಗು ಪಠಾಣರು ದಿಕ್ಕೆಟ್ಟು ಓಡಿ ಹೋದರು. ಈ ಗ್ರಾಮಗಳಲ್ಲಿ ಸ್ವತಂತ್ರ ಆಡಳಿತವನ್ನು ಸಾರಲಾಯಿತು.

ಭಾರತ ಸರಕಾರದ ಪೋಲೀಸ ಕಾರ್ಯಾಚರಣೆ:

೧೯೪೮ ಸಪ್ಟಂಬರ ೧೨ರಂದು ಪ್ರಧಾನಿ ನೆಹರೂ ಸಂಪುಟ ಸಭೆಯನ್ನು ಕರೆದರು. ಸಭೆಯಲ್ಲಿ ಪ್ರಧಾನಿ ನೆಹರೂ, ಗೃಹಮಂತ್ರಿ ಪಟೇಲ, ರಕ್ಷಣಾ ಮಂತ್ರಿ ಬಲದೇವ ಸಿಂಗ. ಗೋಪಾಲಸ್ವಾಮಿ ಅಯ್ಯಂಗಾರ, ಜನರಲ್ ಬುಕರ್,ಜನರಲ್ ಕರಿಯಪ್ಪ ಮತ್ತು ಏರ್ ಮಾರ್ಶಲ್ ಎಲ್ಮ್‍ಹರ್ಸ್ಟ್ ಉಪಸ್ಥಿತರಿದ್ದರು. ಜನರಲ್ ಬುಕರ್ ಹೈದರಾಬಾದದ ಮೇಲೆ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ಒಪ್ಪಲಿಲ್ಲ. ಸಶಸ್ತ್ರ ಕ್ರಮ ತೆಗೆದುಕೊಳ್ಳುವದೆ ಆದರೆ, ತಾವು ರಾಜೀನಾಮೆ ಕೊಡುವದಾಗಿ ಘೋಷಿಸಿದರು. ಚಿಂತಾಕ್ರಾಂತರಾದ ನೆಹರೂ ಅತ್ತಿತ್ತ ನೋಡತೊಡಗಿದಾಗ, ಸರದಾರ ವಲ್ಲಭಭಾಯಿ ಪಟೇಲ ಮರುನುಡಿದರು: “ಜನರಲ್ ಬುಕರ್, ನೀವು ರಾಜೀನಾಮೆ ಕೊಡಬಹುದು; ಸಶಸ್ತ್ರ ಕ್ರಮ ನಾಳೆ ಪ್ರಾರಂಭವಾಗುವದು!”

ಸರದಾರ ಪಟೇಲರ ಆದೇಶದಂತೆ ಸಪ್ಟಂಬರ ೧೩ ರಂದು ಭಾರತೀಯ ಸೇನೆ ಹೈದರಾಬಾದ ಸಂಸ್ಥಾನಕ್ಕೆ ಲಗ್ಗೆ ಇಟ್ಟಿತು. ಸಪ್ಟಂಬರ ೧೮ರಂದು, ಸಂಜೆ ನಾಲ್ಕು ಗಂಟೆಗೆ ಭಾರತೀಯ ಸೇನೆಯ ಮುಖಂಡ ಜನರಲ್ ಚೌಧರಿಗೆ ಹೈದರಾಬಾದ ಸೇನೆಯ ಮುಖಂಡ ಎಲ್ ಎದ್ರೂಸ್ (-ಈತ ಒಬ್ಬ ಅರಬ-) ಶರಣಾಗತನಾದ. ನಿಜಾಮ ಹಾಗು ರಜಾಕಾರರ ದೌರ್ಜನ್ಯದಿಂದ ಜನತೆಗೆ ವಿಮೋಚನೆ ದೊರೆಯಿತು. ಮೊದಲ ಕೆಲದಿನಗಳ ಮಟ್ಟಿಗೆ ಚೌಧರಿ ಸೈನಿಕ ಆಡಳಿತಗಾರರಾಗಿದ್ದರು . ಆ ನಂತರ ಕೆ.ಎಮ್.ಮುನ್ಶಿರಾಜ್ಯಪಾಲರೆಂದು ನಿಯಮಿಸಲ್ಪಟ್ಟರು. ಹೈದರಾಬಾದ ಸಂಸ್ಥಾನವು ಪ್ರಜೆಗಳ ಅಪೇಕ್ಷೆಯಂತೆ ಭಾರತಕ್ಕೆ ಮರಳಿತು.

ಆಧಾರ: ೧.ಡಾ|ಎಂ.ಬಿ.ಮರಕಿಣಿಯವರ ಕೃತಿ: ನೂರು ಘಟನೆ-ಸಾವಿರ ನೆನಪುಗಳು

೨. ಕೆ.ಎಂ.ಮುನ್ಶಿಯವರ ಕೃತಿ: The End of an Era

3. ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟ ಕುರಿತು, ಕರ್ನಾಟಕ ರಾಜ್ಯ ಸರ್ಕಾರಕ್ಕೆ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಮಾಜಿ ಉಪರಾಷ್ಟ್ರಪತಿಬಿ.ಡಿ.ಜತ್ತಿ,ಮಾಜಿ ಸಂಸದ ಮತ್ತು ಮುಂಡರಗಿ ಶಿಬಿರಾಧಿಪತಿ ಅಳವಂಡಿ ಶಿವಮೂರ್ತಿ ಸ್ವಾಮಿ ಬರೆದಿರುವ ಅಧಿಕೃತ ಪತ್ರಗಳು.
ಸಂಗ್ರಹ : ಬಾಬುರಾವ ಹಾಗರಗುಂಡಗಿ.

ರಾಷ್ಟ್ರೀಯ ಕ್ರೀಡಾ ದಿನಾಚರಣೆ

ರರಾಷ್ಟ್ರೀಯ ಕ್ರೀಡಾ ದಿನಾಚರಣೆಧ್ಯಾನ್ ಚಂದ್ ದೇಶದ ಹೆಮ್ಮೆಯ ಪುತ್ರ.

ಅಮರೇಶ ಗೌತಮ್ ಮರಸೂರು, ಆನೇಕಲ್ಮೇಜರ್ ಧ್ಯಾನ್ ಚಂದ್‌ರ ಜನ್ಮದಿನವಾದ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಧ್ಯಾನ್ ಚಂದ್ ಅಪ್ಪಟ ದೇಶಭಕ್ತ, ಅಪ್ರತಿಮ ಹಾಕಿ ಆಟಗಾರ, ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯೇ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಅಂದರೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್‌ಗಳನ್ನು ತಂದು ಕೊಟ್ಟ ದೇಶದ ಹೆಮ್ಮೆಯ ಪುತ್ರ.ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಧ್ಯಾನ್‌ಚಂದ್, ಕುಸ್ತಿಯಲ್ಲಿಯಾವಾಗಲೂ ಮಗ್ನರಾಗಿರುತ್ತಿದ್ದರು. ಆದರೆ ಅವರನ್ನು ಒಬ್ಬ ಪ್ರಸಿದ್ಧ ಕ್ರೀಡಾಪಟು ಅಂತ ಮಾಡಿದ್ದು ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿ.1922ರಲ್ಲಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಭಾರತೀಯ ಸೈನ್ಯಕ್ಕೆ ಸೇರಿದ್ದಾರೆ.ಆ ಸಂದರ್ಭದಲ್ಲಿ ಭಾರತೀಯ ಸೈನ್ಯಗಳ ವಿವಿಧ ರೆಜಿಮೇಂಟ್‌ಗಳ ನಡುವೆ ಹಾಕಿಯ ಸ್ನೇಹಪರವಾದ ಟೂರ್ನಿಗಳನ್ನು ಪ್ರತೀ ವರ್ಷ ಆಯೋಜಿಸುತ್ತಿದ್ದರು. ಆಗ ಪಂಜಾಬ್‌ನ ಹದಿನಾಲ್ಕನೇ ರೆಜಿಮೇಂಟ್‌ನ ಪರವಾಗಿ ಆಡುತ್ತಿದ್ದ ಇವರ ಆಟದ ಸೊಬಗು, ನಿಖರತೆ, ವೈಶಿಷ್ಟ್ಯತೆ, ಹಾಗೂ ಶ್ರದ್ದೆಯನ್ನು ಕಂಡು 1926ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.1928ರಲ್ಲಿ ನೆದರ್‌ಲ್ಯಾಂಡ್‌ನ ಅಮ್‌ಸ್ಟರ್‌ಡಮ್‌ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್, 1932ರಲ್ಲಿ ಅಮೆರಿಕದ ಲಾಸ್ ಎಂಜಲೀಸ್ ಮತ್ತು 1936ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ಸ್, ಹೀಗೆ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್‌ಗಳನ್ನು ತಂದು ಕೊಟ್ಟರು.1936ರಲ್ಲಿ ನಡೆದ ಬರ್ಲಿನ್ ಒಲಿಂಪಿಕ್‌ನಲ್ಲಿ ಹಾಕಿಯಲ್ಲಿ ಭಾರತ ಮತ್ತು ಜರ್ಮನಿ ಫೈನಲ್ ಗೆ ಬಂದಾಗ ಆಟವನ್ನು ಖುದ್ದು ನೋಡಲು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಂದಿದ್ದರು. ಧ್ಯಾನ್ ಚಂದ್‌ರ ಆಟವನ್ನು ನೋಡಿದ ಹಿಟ್ಲರ್, ‘‘ಧ್ಯಾನ್ ಚಂದ್‌ರಕೈಯಲ್ಲಿ ಇರುವುದು ಹಾಕಿ ದಂಡವೋ, ಅಥವಾ ಮಂತ್ರ ದಂಡವೋ?’’ ಎಂದು ಉದ್ಗರಿಸುತ್ತಾರೆ. ಆ ಪಂದ್ಯವನ್ನು ಭಾರತ 81 ಗೋಲುಗಳಿಂದ ಜಯಗಳಿಸುತ್ತದೆ. ಪಂದ್ಯ ಮುಗಿದ ನಂತರ ಹಿಟ್ಲರ್ ಖುದ್ದಾಗಿ ಧ್ಯಾನ್ ಚಂದ್‌ರನ್ನು ಭೇಟಿ ಮಾಡಿ ‘‘ನೀನು ನನ್ನ ದೇಶದ ಪರವಾಗಿ ಆಡುವುದಾದರೆ ನಿನಗೆ ಸಕಲ ಸವಲತ್ತುಗಳನ್ನು ಬಳುವಳಿಯಾಗಿ ನೋಡುತ್ತೇನೆ’’ ಎಂದಾಗ ಧ್ಯಾನ್ ಚಂದ್‌ರು ನಮ್ರತೆಯಿಂದ ತಿರಸ್ಕರಿಸಿ ‘‘ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆ ಇದೆ’’ ಎಂದುದೇಶಪ್ರೇಮವನ್ನು ಸಾರುತ್ತಾರೆ.1926 ರಿಂದ 1948ರ ವರಗೆ ಭಾರತೀಯ ತಂಡದಲ್ಲಿ ಪಾರ್ವರ್ಡ್ ಆಟಗಾರನಾಗಿ, ನಾಯಕನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 400ಕ್ಕೂ ಹೆಚ್ಚಿನ ಗೋಲುಗಳನ್ನು ಗಳಿಸಿದ್ದ ಧ್ಯಾನ್‌ಚಂದ್ ತಮ್ಮ 42ನೆ ವಯಸ್ಸಿನಲ್ಲಿ (1948ರಲ್ಲಿ) ಭಾರತೀಯ ಹಾಕಿ ತಂಡದಿಂದ ನಿವೃತ್ತಿಯನ್ನು ಪಡೆಯುತ್ತಾರೆ. ಧ್ಯಾನ್‌ಚಂದ್ ಹಾಕಿಯ ದಂತಕಥೆ ಆಗಿದ್ದಾರೆ. ಆಗಿನ ಕಾಲದಲ್ಲಿ ಪುಟ್ಬಾಲ್‌ನಲ್ಲಿ ಪೀಲೆ, ಕ್ರಿಕೆಟ್‌ನಲ್ಲಿ ಡೊನಾಲ್ಡ್ ಬ್ರಾಡ್ಮನ್‌ರವರ ಸಾಧನೆಗೆ ಸಮನಾದ ಸಾಧನೆ ಇವರದು. ಧ್ಯಾನ್ ಚಂದ್‌ರಿಗೆ ಭಾರತದಲ್ಲಿ ಒಂದು ಪುತ್ಥಳಿ ಇರುವುದು ಒಂದು ವಿಶೇಷವಲ್ಲ. ಆದರೆ ಅವರ ಪುತ್ಥಳಿಯನ್ನು ಮೊದಲ ಸ್ಥಾಪಿಸಿದ್ದು ಆಸ್ಟ್ರೀಯಾ ದೇಶದ ವಿಯನ್ನಾದಲ್ಲಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಖ್ಯಾತಿ ಎಷ್ಟು ಇತ್ತು ಎಂದುತಿಳಿಯುತ್ತದೆ. ಧ್ಯಾನ್ ಚಂದ್‌ರು ಭಾರತದ ಹಾಕಿಗೆ ಅಪೂರ್ವ ಕೊಡುಗೆ ನೀಡಿದ್ದರೂ ಅವರ ಜೀವಿತದ ಕೊನೆಯ ದಿನಗಳು ಸುಖಕರವಾಗಿರಲ್ಲಿಲ್ಲ. ಆರ್ಥಿಕವಾಗಿ ಸೊರಗದ್ದರು. ಕ್ಯಾನ್ಸರ್ ಪೀಡಿತರಾಗಿದ್ದ ಇವರಿಗೆ ದಿಲ್ಲಿಯ ಏಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ದೊರಕದೆ, ಸರಕಾರದ ನೆರವು ಕೂಡಾ ದೊರಕದೆ ಅವರನ್ನು ಜನರಲ್ ವಾರ್ಡ್‌ಗೆ ದಬ್ಬಿ ಕೆಟ್ಟದಾಗಿ ನೋಡಿಕೊಳ್ಳಲಾಯಿತು. ಕೊನೆಗೆ ದಿನಾಂಕ ಡಿಸೆಂಬರ್ 03, 1979ರಲ್ಲಿ ನಿಧನರಾಗುತ್ತಾರೆ.ಕ್ರೀಡಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಇವರನ್ನು ಇಡೀ ವಿಶ್ವವೇ ಈಗ ಸ್ಮರಿಸುತ್ತಿದೆ. ಲಂಡನ್ನಿನ ಹಾಕಿ ಕ್ರೀಡಾಂಗಣಕ್ಕೆ ಇವರ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ ಬ್ರಿಟಿಷ್ ಸಂಸತ್ತು ಧ್ಯಾನ್‌ಚಂದ್‌ರಿಗೆ ಗೌರವವನ್ನು ಸೂಚಿಸಿದ್ದಾರೆ.ಭಾರತ ಸರಕಾರ 1956ರಲ್ಲಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದಾರೆ. 

ದಿಲ್ಲಿಯಲ್ಲಿ ಇವರ ಹೆಸರಿನಲ್ಲಿ ರಾಷ್ಟ್ರೀಯಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಇವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಘೋಷಿಸಿ, ಅಂದು ರಾಷ್ಟ್ರಪತಿಯವರಿಂದ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿಯನ್ನು ರಾಷ್ಟ್ರಪತಿಭವನದಲ್ಲಿ ನೀಡಿದರೆ ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ರಾಜ್ಯ ಮಟ್ಟದಲ್ಲಿ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಭಾರತರತ್ನ ಪ್ರಶಸ್ತಿಯನ್ನು ಕ್ರೀಡಾಕ್ಷೇತ್ರಕ್ಕೂ ಕೊಡ ಬಹುದು ಎಂಬ ಕಾನೂನನ್ನು ಕೆಲ ವರ್ಷಗಳ ಹಿಂದೆ ಜಾರಿ ಮಾಡಿದ್ದಾರೆ. ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ ರವರಗೆ ಭಾರತರತ್ನ ನೀಡಲಾಗಿದೆ ಆದರೆ ಧ್ಯಾನ್ ಚಂದ್ ರಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ಸಿಗಲಿ ಎಂದು ಹಾರೈಸೋಣ.