ಕಲ್ಯಾಣ ಕರ್ನಾಟಕ ದಿನಾಚರಣೆ

🌹🌷🌹💛🇮🇳❤️ಕಲ್ಯಾಣ ಕರ್ನಾಟಕ💛🇮🇳❤️ ಉತ್ಸವ ದಿನಾಚರಣೆ🌹🌷🌹

ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಜನತೆಯ ಪಾಲಿಗೆ ಮರೆಯಲಾಗದ ಮಹಾನ್ ದಿನ. ನಿಜಾಮನ ಕಪಿಮುಷ್ಠಿಯಿಂದ ವಿಮೋಚನೆಗೊಂಡ ಪುಣ್ಯ ದಿನ. ದೇಶಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ ಸಿಕ್ಕರೆ, ಕಲ್ಯಾಣ (ಹೈದ್ರಾಬಾದ್) ಕರ್ನಾಟಕ ಭಾಗ ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡದ್ದು ಬರೋಬ್ಬರಿ ಒಂದು ವರ್ಷ ಮೂವತ್ತೆರಡು ದಿನಗಳ ನಂತರ. ಅಂದರೆ, 1948 ಸೆಪ್ಟೆಂಬರ್ 17 ರಂದು.
ದೇಶಕ್ಕೇ ಸ್ವಾತಂತ್ರ್ಯ ಸಿಕ್ಕಿದ್ದರೂ ಕಲ್ಯಾಣ ಕರ್ನಾಟಕ ನಿಜಾಮರ ಹಿಡಿತದಲ್ಲಿತ್ತು. ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಅಂತಾನೇ ಗುರುತಿಸಿಕೊಂಡಿದೆ. ಅಭಿವೃದ್ಧಿಯಲ್ಲಿ ಮಾತ್ರವಲ್ಲ. ಈ ಪ್ರದೇಶ ಸ್ವಾತಂತ್ರ ಪಡೆಯುವಲ್ಲಿಯೂ ಹಿಂದೆಯೇ ಉಳಿದಿತ್ತು. 1947 ಆಗಸ್ಟ್ 15 ರಂದು ಭಾರತ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆಯಿತು. ಆದರೆ, ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಮತ್ತು ಆಂಧ್ರ, ಮಹಾರಾಷ್ಟ್ರದ ಕೆಲ ಪ್ರದೇಶಗಳು 1947 ರ ನಂತರವೂ ಸ್ವಾತಂತ್ರ್ಯಗೊಂಡಿರಲಿಲ್ಲ. ಹೈದ್ರಾಬಾದ್ ರಾಜ್ಯದ ನಿಜಾಮ ಮೀರ್ ಉಸ್ಮಾನ್ ಅಲಿ ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ಸುತಾರಾಂ ಒಪ್ಪಲಿಲ್ಲ.

🌷 200 ಸ್ವಾತಂತ್ರ್ಯ ಹೋರಾಟಗಾರರ ಬಲಿ: 🌷

ಭಾರತದ ಒಕ್ಕೂಟ ವ್ಯವಸ್ಥೆ ಒಪ್ಪದ ನಿಜಾಮರ ವಿರುದ್ಧ ಜನ ದಂಗೆ ಏಳಲಾರಂಭಿಸಿದರು. ಆದರೆ, ದಂಗೆ ಎದ್ದ ಜನರನ್ನ ಹತ್ತಿಕ್ಕಲು ನಿಜಾಮನ ಮತಾಂಧ ಸೇನಾನಿ ಖಾಸಿಂ ರಜ್ವಿ ತನ್ನ ರಜಾಕಾರ್ ಸಂಘಟನೆಯ ಮೂಲಕ ಅನಾಚರದ ಹಾದಿ ಹಿಡಿದಿದ್ದ. ರಜಾಕಾರರಿಂದ ಕೊಲೆ, ಲೂಟಿ, ಅತ್ಯಾಚಾರುಗಳು ತೀವ್ರವಾದವು. ರಜಾಕಾರರ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಹೋರಾಟಗಳು ನಡೆದವು. ಸಾಕಷ್ಟು ಜನ ಈ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದರು. ಸ್ವಾತಂತ್ರ್ಯ ಬಂದಾಗಲೂ ತ್ರಿವರ್ಣ ಧ್ವಜ ಹಿಡಿದು ಓಡಾಡೋದು ಕಷ್ಟವಾಗಿತ್ತು. ಯಾಕಂದ್ರೆ ರಜಾಕಾರರ ಕ್ರೌರ್ಯ ಎಲ್ಲೆ ಮೀರಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಟರ್ ಗ್ರಾಮದ ಲಕ್ಷ್ಮಿ ದೇವಾಲಯದ ಮುಂದೆ 200ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನಿಜಾಮರ ಕಟ್ಟಾಳುಗಳಾದ ರಜಾಕಾರರು ನಿರ್ದಯವಾಗಿ ಕೊಂದಿದ್ದರು.

🌷 ಸರ್ದಾರ್ ವಲ್ಲಭಾಯ್ ಪಟೇಲರಿಂದ ಸಿಕ್ಕಿತು ಸ್ವಾತಂತ್ರ್ಯ:🌷

ಜನರ ಮೇಲೆ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ ಆಡಳಿತಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ ಉಕ್ಕಿನ ಮನುಷ್ಯ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ‘ಆಪರೇಷನ್ ಪೋಲೋ’ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಇದರ ಫಲವಾಗಿ 1948, ಸೆಪ್ಟೆಂಬರ್ 17 ರಂದು ನಿಜಾಮರ ಆಳ್ವಿಕೆ ಕೊನೆಗೊಂಡಿತು ಕಲ್ಯಾಣ ಕರ್ನಾಟಕ ಭಾಗ ವಿಮೋಚನೆಗೊಂಡು ಅಖಂಡ ಭಾರತದಲ್ಲಿ ಸೇರ್ಪಡೆಯಾಯಿತು. ಮೊದ ಮೊದಲು ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಕೆಲವು ಸಂಘಟನೆಗಳಷ್ಟೇ ಆಚರಿಸುತ್ತಿದ್ದವು. 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ, ಕೃಷ್ಣ, ಈ ಮಹತ್ವದ ದಿನವನ್ನು ಸರಕಾರದ ವತಿಯಿಂದಲೇ ಆಚರಿಸಲು ನಿರ್ಧರಿಸಿದರು. ಅಂದಿನಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನದಂದು ರಾಜ್ಯದ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಪರಂಪರೆ ಇದೆ. ಇಷ್ಟೆಲ್ಲ ಹೋರಾಟ ನಡೆಸಿದ ಈ ಭಾಗ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿದ್ದು.. ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಾಗಿದೆ‌.. ಸಂವಿಧಾನದ 371J ನೇ ಕಲಂನಿಂದ ಈ ಭಾಗದಲ್ಲಿ ಇನ್ನೂ ಅಭಿವೃದ್ಧಿಯಾಗಬೇಕಿದೆ
2019ರಿಂದ ಕಲ್ಯಾಣ ಕರ್ನಾಟಕ ಉತ್ಸವ’ ಎಂಬ ಹೆಸರಿನಿಂದ ಪ್ರತಿವರ್ಷ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ವಿಭಾಗದ ಆರು ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಸರ್ಕಾರಿ ಕಛೇರಿಗಳು ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ *🌹🌷🌹🇮🇳 *ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತದೆ*🇮🇳🌹🌷🌹 *ಕಲ್ಯಾಣ ಕರ್ನಾಟಕದ ಹೋರಾಟಗಾರರಿಗೆ ನಮನ ಸಲ್ಲಿಸಲಾಗುತ್ತದೆ*
🌹🌷🙏🏻🌹🌷ಧನ್ಯವಾದಗಳೊಂದಿಗೆ..🌹
ಸರ್ವರಿಗೂ 🌹🌷🌹 ಕಲ್ಯಾಣ ಕರ್ನಾಟಕ ❤️🇮🇳💛ಉತ್ಸವ ದಿನಾಚರಣೆಯ ಶುಭಾಶಯಗಳು🌹🌷🌹

ಅಂದು ಇಂದು

ಸಮೂಹ ಅಂದು, ಇಂದು

ಅಂದು,
ಒಂದು ಮನೆಯಿಂದ ಐದಾರು ಮಂದಿ ಒಟ್ಟಿಗೆ ಒಂದೇ ಕಾರಿನಲ್ಲಿ ಒಂದು ಸ್ಥಳಕ್ಕೆ ಹೋಗತ್ತಿದ್ದೆವು.

ಇಂದು,
ಒಂದು ಮನೆಯಿಂದ ಒಂದು ಸ್ಥಳಕ್ಕೆ ಐದಾರು ಮಂದಿ ಐದಾರು ಕಾರಿನಲ್ಲಿ ಹೋಗುತ್ತೇವೆ.

ಅಂದು,
ಒಂದು ಕೋಣೆಯಿರುವ ಮನೆಯಲ್ಲಿ ಹತ್ತಾರು ಮಂದಿ ವಾಸಿಸುತ್ತಿದ್ದೆವು.

ಇಂದು,
ಹತ್ತಾರು ಕೋಣೆಯಿರುವ ಮನೆಯಲ್ಲಿ ಒಂದೋ ಎರಡೋ ಮಂದಿ ವಾಸಿಸುತ್ತಿದ್ದೇವೆ.

ಅಂದು,
ನೂರು ರೂಪಾಯಿ ಕೊಟ್ಟರೆ ಒಂದು ಚೀಲ ತುಂಬಾ ಸಾಮಾಗ್ರಿ ತರುತ್ತಿದ್ದವು.

ಇಂದು,
ಒಂದು ಚೀಲ ತುಂಬಾ ಹಣ ಕೊಟ್ಟು ಒಂದೋ ಎರಡೋ ಸಾಮಾಗ್ರಿ ಖರೀದಿಸುತ್ತೇವೆ.

ಅಂದು,
ಹತ್ತು ಜನ ಊಟ ಮಾಡಲು ಎಂಟು ಜನರಿಗಾಗುವಷ್ಟು ಊಟ ತಯಾರಿಸಿ ಹನ್ನೆರಡು ಮಂದಿ ಊಟ ಮಾಡುತ್ತಿದ್ದೆವು.

ಇಂದು,
ಹತ್ತು ಜನ ಊಟ ಮಾಡಲು, ಇಪ್ಪತ್ತು ಜನರಿಗಾಗುವಷ್ಟು ಊಟ ತಯಾರಿಸಿ, ಎಂಟು ಮಂದಿ ಊಟ ಮಾಡಿ , ಬಾಕಿ ಕಸದ ತೊಟ್ಟಿಗೆ ಹಾಕುತ್ತೇವೆ.

ಅಂದು,
ಸಾವಿರ ಮಂದಿಗೆ ಸಹಾಯ ಮಾಡಿದವರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಇಂದು ,
ಒಬ್ಬನಿಗೆ ಸಹಾಯ ಮಾಡಿದರೆ ಸಾವಿರ ಮಂದಿಗೆ ಗೊತ್ತಾಗುತ್ತದೆ.

ಅಂದು,
ಅರ್ಧ ಹೊಟ್ಟೆ ತುಂಬಿಸಲು ಬೇಕಾಗಿ ಕಿಲೋಮೀಟರ್ ವರೆಗೆ ನಡೆದು ಹೋಗಿ ಕೆಲಸ ಮಾಡತ್ತಿದ್ದೆವು.

ಇಂದು,
ಹೊಟ್ಟೆ ಕರಗಿಸಲು ಬೇಕಾಗೆ ಕಿಲೋಮೀಟರ್ ವರೆಗೆ ನಡೆಯುತ್ತೇವೆ.

ಅಂದು,
ಜೀವಿಸಲಿಕ್ಕಾಗಿ ತಿನ್ನುತ್ತಿದ್ದೆವು.

ಇಂದು,
ತಿನ್ನಲಿಕ್ಕೊ ಸ್ಕರ ಜೀವಿಸುತ್ತಿದ್ದೇವೆ.

ಅಂದು ,
ಮನೆಯೊಳಗೆ ಊಟ ಮಾಡಿ ಹೊರಗಡೆ ಶೌಚಾಲಯಕ್ಕೆ ಹೋಗುತ್ತಿದ್ದೆವು.

ಇಂದು,
ಹೊರಗಡೆ ಊಟ ಮಾಡಿ ಒಳಗೆ ಶೌಚಾಲಯಕ್ಕೆ ಹೋಗುತ್ತೇವೆ.

ಅಂದು,
ಮಾನ ಮುಚ್ಚಲು ವಸ್ತ್ರ ಧರಿಸುತ್ತಿದ್ದೆವು.

ಇಂದು,
ಮಾನ ಇತರರಿಗೆ ತೋರಿಸಲು ವಸ್ತ್ರ ಧರಿಸುತ್ತಿದ್ದೇವೆ.

ಅಂದು ,
ಅಧ್ಯಾಪಕರ ಕೈಯಿಂದ ಪೆಟ್ಟು ಸಿಗಬಾರದು ಎಂದು ಪ್ರಾರ್ಥಿಸುತ್ತಿದ್ದವು.

ಇಂದು,
ವಿದ್ಯಾರ್ಥಿಗಳ ಕೈಯಿಂದ ಪೆಟ್ಟು ಸಿಗದೆ ಇರಲು ಅಧ್ಯಾಪಕರು ಪ್ರಾರ್ಥಿಸುತ್ತಿದ್ದಾರೆ.

ಬದಲಾಗಿರುವುದು ನಾವೇ ಹೊರತು, ಕಾಲವಲ್ಲ.

$$$$$$$$$$

ಯಾರೋ ಸಂಗ್ರಹಿಸಿದ ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ – ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.

೦೧) “ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!”
ಆದರೆ….
“ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ…!!”
“ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!”
“”””””””””””””””””””””””””””””

೦೨) ತುಳಿಯುವವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು.
“”””””””””””””””””””””””””””””

೦೩) ಪ್ರಯತ್ನ ಎಂಬುದು ಬೀಜದ ಹಾಗೆ. ಬಿತ್ತುತ್ತಲೇ ಇರಿ. ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೇ ಕೊಡುತ್ತದೆ….
“”””””””””””””””””””””””””””””

೦೪) ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಏಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.
“”””””””””””””””””””””””””””””

೦೫) ಒಂದು ಕಾಲು ಮುಂದೆ ಒಂದು ಕಾಲು ಹಿಂದೆ. ಆದರೆ ಮುಂದಿನದಕ್ಕೆ ಗರ್ವವಿಲ್ಲ, ಹಿಂದಿನ ಅದಕ್ಕೆ ಬೇಸರವಿಲ್ಲ, ಏಕೆಂದರೆ ಇದು ಕ್ಷಣಿಕ.
“”””””””””””””””””””””””””””””

೦೬) ಸಮುದ್ರ ಎಂದೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ
ಯಶಸ್ಸು ಮತ್ತು ಕೀರ್ತಿಗಳೂ ಹಾಗೆಯೇ. ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತವೆ.
“”””””””””””””””””””””””””””””

೦೭) ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ, ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.
“”””””””””””””””””””””””””””””

೦೮) ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.
“”””””””””””””””””””””””””””””

೦೯) ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ ” ಮತ್ತೆ ” ಬಂತು ಇದೇ – Recycling ??
“”””””””””””””””””””””””””””””

೧೦) ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ, ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.
“”””””””””””””””””””””””””””””

೧೧) ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.
“”””””””””””””””””””””””””””””

೧೨) ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಏಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
“”””””””””””””””””””””””””””””

೧೩) ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ….
“”””””””””””””””””””””””””””””

೧೪) ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು ಚಿಂತಿಸಬೇಕಿಲ್ಲ.
“”””””””””””””””””””””””””””””

೧೫) ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆ ಪಾದುಕೆಯಾಗುವುದು ಶ್ರೇಷ್ಠ…!
ಕಾಲೆಳೆವವರ ನಾಯಕನಾಗುವುದಕ್ಕಿಂತ ಕೈಹಿಡಿವವರ ಸೇವಕನಾಗುವುದು ಉತ್ಕೃಷ್ಟ..!
“”””””””””””””””””””””””””””””

೧೬) ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ, ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ. ಏಕೆಂದರೆ ಸಮಯ ಎಂದೂ ಭೇದ ತೋರುವುದಿಲ್ಲ.
“”””””””””””””””””””””””””””””

೧೭) ಚಿಂತೆಗೂ, ಚಿತೆಗೊ ಇರುವ ವ್ಯತ್ಯಾಸ ಒಂದು “೦” ಮಾತ್ರ…

ಚಿತೆ ಸತ್ತ ದೇಹವನ್ನು ಸುಡುತ್ತದೆ, ಚಿಂತೆ ಬದುಕಿರುವ ದೇಹವನ್ನೇ ಸುಡುತ್ತದೆ.!!
“”””””””””””””””””””””””””””””””

೧೮) ಸಹನೆ ನಿನ್ನದಾದರೆ ಸಕಲ ನಿನ್ನದೇ ವಿನಯ ನಿನ್ನದಾದರೆ ವಿಜಯ ನಿನ್ನದೇ.

೧೯) ಕತ್ತಲೆ ಆವರಿಸಿಕೊಳ್ಳದೆ ನಕ್ಷತ್ರಗಳು ಮಿನುಗುವುದಿಲ್ಲ ಹಾಗೆಯೇ ಕಷ್ಟಗಳು ಬಾರದೆ ವ್ಯಕ್ತಿಯ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯವಿಲ್ಲ.
“”””””””””””””””””””””””””””””””

೨೦) ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ.
“”””””””””””””””””””‘”””””””””‘””

೨೧) ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು ಅವರು ನಿನ್ನ ಮುಂದೆ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.
“”””””””””””””””””””””””””””””””

೨೨) ನಿಮ್ಮ ನಗು ಜಗತ್ತನ್ನು ಬದಲಿಸಲಿ. ಆದರೆ ನಿಮ್ಮ ನಗುವನ್ನು ಬದಲಿಸಲು ಜಗತ್ತಿಗೆ ಅವಕಾಶ ಕೊಡಬೇಡಿ.
“”””””””””””””””””””””””””””””””’

೨೩) “ಸಮಯಕ್ಕೆ ರಜೆ ಇಲ್ಲ ಸ್ವಪ್ನಕ್ಕೆ ಅಂತಿಮ ತಾರೀಖು ಇಲ್ಲ ಜೀವನದಲ್ಲಿ ತಾತ್ಕಾಲಿಕ ವಿರಾಮ ಕೀಲಿ ಇಲ್ಲ …ಜೀವಿಸಿ….ಪ್ರೀತಿಸಿ… ಜೀವನದಲ್ಲಿನ ಪ್ರತೀ ಕ್ಷಣ ಅನುಭವಿಸಿ ಆನಂದಿಸಿ “
“””””””””””””””””””””””””””””

೨೪) ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ. ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ.
“”””””””””””””””””””””””””””””””

೨೫) ಇಲ್ಲಿ ಎಲ್ಲರೂ ಹುಟ್ಟಿದ್ದು ಅಳುವಿನಿಂದ ನಗುವಿಗಾಗಿ ಜೀವನಪರ್ಯಂತ ಶ್ರಮಪಡಲೇ ಬೇಕು.
“”””””””””””””””””””””””””””””””

೨೬) ನಿಮಗೆ ಶತ್ರುಗಳು ಹುಟ್ಟಬೇಕೆಂದರೆ ನೀವು ಅನ್ಯಾಯ ಮಾಡಬೇಕೆಂದಿಲ್ಲ, ಕೆಲವೊಮ್ಮೆ ಜೀವನದಲ್ಲಿ ನೀವು ಸಾಧಿಸುವ ಯಶಸ್ಸುಗಳೇ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತವೆ.
“”””””””””””””””””””””””””””””””

೨೭) ಬೈಯ್ಯೋರು ಬದುಕೋಕೆ ಹೇಳಿದರು…ಹೋಗಳೋರು ಹಾಳಾಗೋಕೆ ಹೇಳಿದರು…

ಬೈಯೋರು ಬಾಗಿಲೊಳಗಿರಬೇಕು, ಹೋಗಳೋರು ಬಾಗಿಲಾಚೆ ಇರಬೇಕು.
“”””””””””””””””””””””””””””””””

೨೮) ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಿಲ್ಲ, ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ ಏಕೆಂದರೆ ಸತ್ತ ಮೇಲೆ ಹೆಗಲು ಕೊಡುವವರು ಅವರೇ, ಶ್ರೀಮಂತರು ನೇರವಾಗಿ ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ”
“””””””””””””””””””””””””””””””

೨೯) ದಾನ ಧರ್ಮಕ್ಕೇ ಕಣ್ಣಿಲ್ಲ ನ್ಯಾಯ ನೀತಿಗೆ ಸಾವಿಲ್ಲ…, ಜೀವ ಚಿಕ್ಕದು ಜೀವನ ದೊಡ್ಡದು…, ಸತ್ತವನಿಗೆ ಒಂದು ದಾರಿ, ಸಾಧಿಸಿದವನಿಗೆ ಸಾವಿರ ದಾರಿ.
“””””””””””””””””””””””‘”””””””

೩೦) ಹಣತೆ ಮಣ್ಣಿನದಾಗಿರಲಿ, ಬಂಗಾರದ್ದಾಗಿರಲಿ ಅದು ಮುಖ್ಯವಲ್ಲ. ಕತ್ತಲಾದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ
ಹಾಗೆಯೇ ಗೆಳೆಯ ಬಡವನಾಗಿರಲಿ ಶ್ರೀಮಂತನಾಗಿರಲಿ ಅದು ಮುಖ್ಯವಲ್ಲ, ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ
“”””””””””””””””””””””””””””””

೩೧) ಗಡಿಯಾರವನ್ನು ನೋಡಿ ಕೆಲಸ ಮಾಡುವವರು ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿಯುತ್ತಾರೆ

ಗಡಿಯಾರವನ್ನು ನೋಡದೆ ದುಡಿಯುವವರು ಮಾಲಿಕರಾಗಿ ಬೆಳೆಯುತ್ತಾರೆ
🌹🌹🌹🙏🏻🙏🏻🙏🏻🙏🏻🙏🏻

ಯುಗಾದಿ ಹಲವು ಹಬ್ಬಗಳಿಗೆ ಮುನ್ನುಡಿ

ಹಬ್ಬಗಳಿಗೆ ಮುನ್ನುಡಿ, ನಿಸರ್ಗದ ಮರುಹುಟ್ಟು ಈ ಯುಗಾದಿ.

ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಹೊಸ ಪುಳಕ. ಗಿಡ ಮರಗಳು ಚಿಗುರಿ ಹಸಿರೆಲೆಗಳಿಂದ ಕಂಗೊಳಿಸುತ್ತಿದ್ದರೆ, ಸುಡು ಬಿಸಿಲ ನಡುವೆಯೂ ಆಗಾಗ್ಗೆ ಬೀಸುವ ತಂಗಾಳಿ ಮನಕ್ಕೆ ಮುದನೀಡುತ್ತದೆ. ನಿಸರ್ಗದ ಮಡಿಲಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅರಳಿ ನಿಂತು ಸುವಾಸನೆ ಬೀರುವ ಕುಸುಮಗಳು… ಅವುಗಳ ಮೇಲೆ ಹಾರಾಡಿ ಮಕರಂದ ಹೀರುವ ಜೇನು ನೊಣಗಳ ಝೇಂಕಾರ ಎಲ್ಲೆಡೆ ಕಂಡು ಬರುತ್ತದೆ.

ಹಾಗೆನೋಡಿದರೆ ಯುಗಾದಿ ಎನ್ನುವುದು ನಿಸರ್ಗಕ್ಕೊಂದು ಮರುಹುಟ್ಟು ಅಷ್ಟೇ ಅಲ್ಲ ಮುಂದೆ ಬರಲಿರುವ ಎಲ್ಲಾ ಹಬ್ಬಗಳಿಗೂ ಇದು ಮುನ್ನುಡಿ ಎಂದರೂ ತಪ್ಪಾಗಲಾರದು.

ಪಾಶ್ಚಿಮಾತ್ಯರು ಜನವರಿ 1ನ್ನು ಹೊಸವರ್ಷವಾಗಿ ಆಚರಿಸಿದರೆ, ಭಾರತೀಯರು ಯುಗಾದಿಯನ್ನು ಹೊಸವರ್ಷವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ವಿಕ್ರಮ ಶಕೆಯ ಮೊದಲ ದಿನವಾದ ಕಾರ್ತಿಕ ಶುದ್ಧ ಪಾಡ್ಯವನ್ನು ಉತ್ತರ ಭಾರತದಲ್ಲಿ ಯುಗಾದಿ ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿರುವುದನ್ನು ನಾವು ಕಾಣಬಹುದು. ಯುಗಾದಿ ಆಚರಣೆಯಲ್ಲಿ ಮೂರು ರೀತಿಯ ಲೆಕ್ಕಾಚಾರ ಜ್ಯೋತಿಷ್ಯ ಶಾಸ್ತ್ರದಲ್ಲಿದ್ದು, ಅವುಗಳೆಂದರೆ, ಬಾರ್ಹಸ್ಪತ್ಯಮಾನ, ಚಾಂದ್ರಮಾನ, ಸೌರಮಾನವಾಗಿದೆ.
ಭಾರತದಲ್ಲಿ ಯುಗಾದಿ ಆಚರಣೆಯೂ ಕೂಡ ವಿಭಿನ್ನವಾಗಿದೆ. ಉತ್ತರ ಭಾರತದಲ್ಲಿ ಬಾರ್ಹಸ್ಪತ್ಯಮಾನದಲ್ಲಿ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಯನ್ನು ಆಚರಿಸುವ ಪದ್ಧತಿಯಿದೆ. ಈ ಎರಡು ಯುಗಾದಿ ಆಚರಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಚಂದ್ರ ಮತ್ತೊಂದು ಸೂರ್ಯನನ್ನು ಅವಲಂಭಿಸಿರುವುದು ಸ್ಪಷ್ಟವಾಗುತ್ತದೆ.
ಚಾಂದ್ರಮಾನ ಯುಗಾದಿ ಕುರಿತಂತೆ ಹೇಳುವುದಾದರೆ, ಚಂದ್ರನ ಚಲನೆಯನ್ನು ಆಧರಿಸಿ ಸಾಮಾನ್ಯವಾಗಿ ಅಮಾವಾಸ್ಯೆ-ಹುಣ್ಣಿಮೆಯನ್ನು ಮತ್ತು ಇವುಗಳ ಆಧಾರದಲ್ಲಿ ತಿಂಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಪದ್ಧತಿಯೇ ಚಾಂದ್ರಮಾನವಾಗಿದೆ. ಈ ಪದ್ಧತಿಯಲ್ಲಿ ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ಕೂಡ ನಿರ್ಧಿಷ್ಟ ದಿನಾಂಕದಲ್ಲಿ ಬಾರದಿರುವುದನ್ನು ನಾವು ಕಾಣಬಹುದಾಗಿದೆ.

ಸೌರಮಾನ ಯುಗಾದಿಯನ್ನು ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನದಂದು ಆಚರಿಸಲಾಗುತ್ತದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರತಿವರ್ಷದ ಚೈತ್ರಮಾಸದಲ್ಲಿ ಬರುವ ಮೊದಲ ದಿನವನ್ನು ಸಂವತ್ಸರಾದಿ ಪಾಡ್ಯಮಿ ಎಂದು ಪರಿಗಣಿಸಿ ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದ ಕೆಲವೆಡೆ ಸೌರಮಾನ ಯುಗಾದಿಯನ್ನು ಆಚರಿಸುವುದು ಕೂಡ ಕಂಡು ಬರುತ್ತದೆ.

ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುವುದನ್ನು ನಾವು ಕಾಣಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವರ್ಷದಲ್ಲಿ ಬರುವ ಮೂರೂವರೆ ದಿನಗಳ ಶುಭಗಳಿಗೆ ಅತ್ಯಂತ ಶ್ರೇಷ್ಠಾವಾದದು ಎಂದು ಹೇಳಲಾಗಿದೆ. ಇದರಲ್ಲಿ ಯುಗಾದಿಯೂ ಒಂದಾಗಿದ್ದು, ಯುಗಾದಿ ದಿನದಂದು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಜನವಲಯದಲ್ಲಿದೆ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಹೊಸ ಕಾರ್ಯ ಚಟುವಟಿಕೆ, ಹೊಸ ಪದಾರ್ಥಗಳ ಖರೀದಿ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಆರಂಭಿಸುವುದನ್ನು ನಾವು ಕಾಣಬಹುದು.
ಮಲ್ಲಿನಾಥನೆಂಬ 14ನೇ ತೀರ್ಥಂಕರ ಹುಟ್ಟಿದ್ದು ಹಾಗೂ ಆದಿ ತೀರ್ಥಂಕರನ ಮಗ ಭರತ ಚಕ್ರವರ್ತಿ ದಿಗ್ವಿಜಯ ಸಾಧಿಸಿದ್ದು ಯಗಾದಿಯ ದಿನವಾದ್ದರಿಂದ ಯುಗಾದಿ ಹಬ್ಬವು ಜೈನರಿಗೂ ಮಹತ್ವದ ದಿನವಾಗಿದೆ ಎಂದರೆ ತಪ್ಪಾಗಲಾರದು.

ಯುಗಾದಿ ಆಚರಣೆ ವೇದಗಳ ಕಾಲದಿಂದಲೂ ನಡೆದು ಬಂದಿದ್ದು, ಈ ಕುರಿತಂತೆ ಅಥರ್ವಣ ವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಬಗ್ಗೆ ಉಲ್ಲೇಖವಿದೆ.
ಹೇಮಾದ್ರಿ ಪಂಡಿತನ “ಚತುರ್ವರ್ಗ ಚಿಂತಾಮಣ” ಎಂಬ ಪುರಾಣ ಗ್ರಂಥದಲ್ಲಿ ಬ್ರಹ್ಮ ದೇವನು ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನದ ಸೂರ್ಯೋದಯ ಕಾಲ ಅರ್ಥಾತ್ ಯುಗಾದಿಯಂದು ಭೂಮಂಡಲವನ್ನು ಸೃಷ್ಟಿಸಿದ್ದು, ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದನೆಂದು ಉಲ್ಲೇಖಿಸಲಾಗಿದೆ.

ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು, ಶಾಲಿವಾಹನ ಶಕೆ ಆರಂಭವಾದದ್ದು ಕೂಡ ಯುಗಾದಿ ದಿನವೇ ಎಂದು ಹೇಳಲಾಗುತ್ತಿದೆ. ಯುಗಾದಿ ಹಬ್ಬದ ಆಚರಣೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿರುವುದನ್ನು ನಾವು ಕಾಣಬಹುದಾದರೂ ಸಾಮಾನ್ಯವಾಗಿ ಹಬ್ಬದ ದಿನದಂದು ಸೂರ್ಯೋದಯಕ್ಕೂ ಮುನ್ನ ಅಂದರೆ ಮುಂಜಾನೆ ಎದ್ದು ಮಂಗಳ ಸ್ನಾನ ಮಾಡಿ ಶ್ರೀರಾಮನನ್ನು ಸ್ಮರಣೆ ಮಾಡಿ ಹೊಸಬಟ್ಟೆ ತೊಟ್ಟು ಮನೆಯನ್ನೆಲ್ಲ ಮಾವು-ಬೇವು ಎಲೆಗಳ ತೋರಣದಿಂದ ಸಿಂಗರಿಸಿ ಹೊಸವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.
ಈ ಸಂದರ್ಭ ಬಾವುಟ ಹಾರಿಸುವುದು, ಬೇವು-ಬೆಲ್ಲ ತಿನ್ನುವುದು, ಪಂಚಾಂಗ ಶ್ರವಣ, ವಸಂತ ನವರಾತ್ರಿ ಆರಂಭ ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲಪುರುಷನ ಮತ್ತು ವರ್ಷಾಧಿಪತಿಯ ಆರಾಧನೆಯೂ ನಡೆಯುತ್ತದೆ.
ಯುಗಾದಿಯಲ್ಲಿ ಬೇವು-ಬೆಲ್ಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹಬ್ಬದ ದಿನದಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಿದರೂ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು ಎಂಬುವುದನ್ನು ಸಾರುತ್ತಾ ಬರಲಾಗುತ್ತಿದೆ. ಹಾಗಾಗಿ ಯುಗಾದಿಯಂದು ಬೇವು-ಬೆಲ್ಲ ಸೇವಿಸುವುದು ಎಂದರೆ ಕಷ್ಟಸುಖಗಳನ್ನು ಸಮಾನವಾಗಿ ಎದುರಿಸಿ ಬದುಕುವುದು ಎಂದರ್ಥವಾಗಿದೆ. ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಯುಗಾದಿ ಹಬ್ಬದಂದು ಸೇವಿಸಲಾಗುತ್ತಿದೆ.

ಯುಗಾದಿ ಹಬ್ಬದ ಮಾರನೆಯ ದಿನವನ್ನು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ‘ವರ್ಷ ತೊಡಕು’ ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕುಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆಯನ್ನು ನೀಡುವುದು ಕಂಡು ಬರುತ್ತದೆ.

ಈ ದಿನ ವಿವಿಧ ಬಗೆಯ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವ ಮೂಲಕ ಮನರಂಜನೆಯನ್ನು ಪಡೆಯುತ್ತಾರೆ. ಅಂದು ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದನ್ನು ವರ್ಷಪೂರ್ತಿ ಮಾಡುತ್ತಾನೆ ಹಾಗೂ ಅಂದು ದೊರೆತ ಸಂಪತ್ತು ವರ್ಷ ಪೂರ್ತಿ ದೊರೆಯುತ್ತಲೇ ಇರುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ.

ಒಂದೆಡೆ ಮಗಳು ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸಿ ಸತ್ಕರಿಸಿದರೆ, ಮತ್ತೊಂದೆಡೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು ಹಬ್ಬದ ಅಡುಗೆ ಬಡಿಸಿ ಸತ್ಕರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇತ್ತೀಚೆಗಿನ ಯಾಂತ್ರಿಕ ಯುಗದಲ್ಲಿ ಯುಗಾದಿ ಹಬ್ಬದ ಆಚರಣೆಗಳಲ್ಲಿ ಒಂದಷ್ಟು ವ್ಯತ್ಯಾಸಗಳು ಆಗಿರಬಹುದಾದರೂ ಹಬ್ಬದ ರಂಗು ಎಂದಿಗೂ ಕಳೆಗುಂದುವುದಿಲ್ಲ ಹಾಗಾಗಿಯೇ ಎಷ್ಟೇ ಯುಗ ಕಳೆದರೂ ಯುಗಾದಿ ಮರಳಿ ಬರುತ್ತಲೇ ಇರುತ್ತದೆ.

ಹೋಳಿ ಹಬ್ಬದ ಮಹತ್ವ

ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶ. ಇಲ್ಲಿ ನಾನಾ ಹಬ್ಬ-ಹರಿದಿನಗಳ ಆಚರಣೆ ಇದೆ. ಅದರಲ್ಲಿ ಹೋಳಿ ಹಬ್ಬ ಒಂದು ರೀತಿ ತುಂಬಾನೇ ಸ್ಪೆಷಲ್. ಯಾಕೆಂದ್ರೆ, ಈ ಹಬ್ಬದಲ್ಲಿ ಬಣ್ಣಗಳ ಜೊತೆ ಆಟ ಆಡಲು ಹಿರಿಯರು-ಕಿರಿಯರು ಅನ್ನೋ ಬೇಧವಿಲ್ಲದೇ ಪ್ರತಿಯೊಬ್ಬರು ಖುಷಿಯಾಗಿ ಪಾಲ್ಗೊಳ್ಳುತ್ತಾರೆ.ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬ ಇದೀಗ ಭಾರತದಾದ್ಯಂತ ಪ್ರಚಲಿತದಲ್ಲಿದೆ. ಮೋಜು-ಮಸ್ತಿಗಾಗಿ ಆಡುವ ಬಣ್ಣದೋಕುಳಿ ಇದೀಗ ಭಾರತದಲ್ಲೇ ದೊಡ್ಡ ಫ್ಯಾಷನ್ ಆಗ್ಬಿಟ್ಟಿದೆ. ಇನ್ನು ಈ ಹಬ್ಬಕ್ಕೆ ಯಾವುದೇ ರಿತೀಯ ವಯಸ್ಸಿನ ಮಿತಿಯಿಲ್ಲ. ಹಿರಿಯರು- ಕಿರಿಯರು ಅನ್ನದೇ ಪ್ರತಿಯೊಬ್ಬರು ಖುಷಿ-ಖುಷಿಯಾಗಿ ಹೋಳಿ ಸಂಭ್ರಮಾಚರಣೆ ಮಾಡುತ್ತಾರೆ. ವಿವಿಧ ಬಣ್ಣಗಳ ಓಕುಳಿ ಹರಿಸಿ, ಇಡೀ ವರ್ಷ ಸಂತೋಷದ ಕೋಡಿಯೇ ಹರಿಯಲಿ ಅಂತ ಹಾರೈಸುವ ರಂಗಿನ ಹಬ್ಬ ಇದು.

ಹೋಳಿ ಹಬ್ಬವನ್ನು ಕಾಮನ ಹಬ್ಬ ಅಂತಲೂ ಕರೆಯಲಾಗುತ್ತೆ. ಈ ಹಬ್ಬದ ಆಚರಣೆಯ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ತಾರಕಾಸುರನೆಂಬ ರಾಕ್ಷಸನು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿ, ತನಗೆ ಸಾವು ಬಾರದಂತೆ ಅನುಗೃಹಿಸು ಅಂತ ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಸಾವು ಎಲ್ಲರಿಗೂ ನಿಶ್ಚಿತ. ಸಾವು ಬಾರದಂತೆ ತಡೆಯಲು ಸಾಧ್ಯವಿಲ್ಲ ಅಂತ ಹೇಳುತ್ತಾನೆ. ಆಗ ತಾರಕಾಸುರನು ಶಿವನಿಗೆ ಏಳು ದಿನದಲ್ಲಿ ಜನಿಸಿದ ಮಗನಿಂದಲೇ ನನಗೆ ಸಾವು ಬರುವಂತೆ ಮಾಡು ಎಂದು ವರ ಬೇಡುತ್ತಾನೆ.ಅದಕ್ಕೆ ಬ್ರಹ್ಮ ಒಪ್ಪಿ ವರ ನೀಡುತ್ತಾನೆ.
ಬ್ರಹ್ಮನಿಂದ ವರ ಪಡೆದ ತಾರಕಾಸುರ ಅಹಂಕಾರದಿಂದ ಲೋಕದೆಲ್ಲಡೆ ಉಪಟಳ ನೀಡುತ್ತಿರುತ್ತಾನೆ. ಇವನ ಕಾಟಕ್ಕೆ ಸುಸ್ತಾದ ದೇವತೆಗಳೆಲ್ಲ ಸಹಾಯ ಕೋರಿ ಶಿವನಲ್ಲಿಗೆ ಓಡೋಡಿ ಹೋಗುತ್ತಾರೆ. ಆಗ ಶಿವನು ಭೋಗಸಮಾಧಿಯಲ್ಲಿ ತಪಸ್ಸು ಮಾಡ್ತಿರುತ್ತಾನೆ. ಶಿವ ಭೋಗಸಮಾಧಿಯಿಂದ ಎದ್ದು ಪಾರ್ವತಿ ಜೊತೆ ಮೋಹಗೊಂಡು ಸೇರುವಂತೆ ಮಾಡಲು ದೇವತೆಗಳೆಲ್ಲರೂ ಸೇರಿ ರತಿ ಮನ್ಮಥರನ್ನು ಒಪ್ಪಿಸುತ್ತಾರೆ.ಈ ಪುಣ್ಯಕಾರ್ಯ ಮಾಡಲು ರತಿ ಮನ್ಮಥರು ಒಪ್ಪುತ್ತಾರೆ. ಅದರಂತೆ ತರಿ-ಮನ್ಮಥರು ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮಹಾದೇವನ ಎದುರು ನೃತ್ಯ ಮಾಡಿ, ಹೂವಿನ ಬಾಣ ಬಿಟ್ಟು ಶಿವನ ಧ್ಯಾನಕ್ಕೆ ಭಂಗ ತರುತ್ತಾರೆ. ಇದರಿಂದ ಕುಪಿತಗೊಂಡ ಶಿವ, ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ನಂತರ ರತಿ ಪತಿ ಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥ ಕಾಣುವಂತೆ ವರ ನೀಡುತ್ತಾನೆ.ಈ ಮನ್ಮಥನಿಗೆ ಕಾಮ ಎಂಬ ಹೆಸರೂ ಕೂಡ ಇದೆ. ಹೀಗಾಗಿ ಕಾಮ ಶಿವನ ಕೆಂಗಣ್ಣಿಗೆ ಗುರಿಯಾಗಿ ಸುಟ್ಟು ಹೋದ ದಿನವನ್ನು ಕಾಮನ ಹಬ್ಬವಾಗಿ ಆಚರಿಸುತ್ತಾರೆ. ಈ ಕಾಮನ ಹಬ್ಬದ ದಿನದಂದೇ ಹೋಳಿ ಹಬ್ಬ ಆಚರಿಸಲಾಗುತ್ತೆ.

ರೈತರ ದಿನಾಚರಣೆ

ಇವತ್ತು ಡಿ.23, “ರೈತ ದಿನಾಚರಣೆ” ನಮ್ಮ ಜನರಿಗೆ ಈ ಕುರಿತು ಎಷ್ಟು ಅರಿವಿದೆಯೋ ತಿಳಿಯದು. ಭಾರತದ ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತದೆ, ಕೃಷಿಯೇ ದೇಶದ ಆರ್ಥಿಕತೆಯೂ ಮೂಲವಾಗಿತ್ತು ಎಂಬುದು ಯಾರಿಗೂ ತಿಳಿಯದ ಸಂಗತಿಯೇನಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ, ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ, ಕೃಷಿ ಜೀವನದ ಉಸಿರು ಯಾಕೆ ಎಂಬ ಪ್ರಶ್ನೆ ಕಾಡಬೇಕು ಮತ್ತು ಮಂಥನವಾಗಬೇಕು, ಈ ದಿನ ಇಂತಹದ್ದೊಂದು ಚರ್ಚೆಗೆ ವೇದಿಕೆಯಾಗಬಹುದು.

ವಿಚಾರದ ಮಂಥನಕ್ಕೆ ಮುನ್ನಾ ರೈತ ದಿನಾಚರಣೆಯ ಕುರಿತು ಒಂದು ಸಂಗತಿಯನ್ನು ಹೇಳಲೇಬೇಕು, ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಅತೀ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧುರಿ ಚರಣ್ ಸಿಂಗ್ ರ ಜನ್ಮ ದಿನವನ್ನು ಭಾರತ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಧಿಕೃತವಾಗಿ ಈ ಕುರಿತು ಸರ್ಕಾರಿ ಘೋಷಣೆಯಿಲ್ಲದಿದ್ದರೂ 80ರ ದಶಕದಲ್ಲಿ ಬಂದ ರೈತ ಚಳುವಳಿಯ ಸಂಧರ್ಭದಲ್ಲಿ ರೈತರು ಡಿ.23ರಂದು ರೈತದಿನಾಚರಣೆ ಆಚರಿಸುತ್ತಾರೆ.ಸಮಾಜವಾದಿ ರಾಮಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ರ ಒಡನಾಡಿಯಾಗಿ ಗುರುತಿಸಿಕೊಂಡ ಚೌಧುರಿ ಚರಣ್ ಸಿಂಗ್ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ನೂರ್ ಪುರ್ ಎಂಬ ಸಣ್ಣ ಹಳ್ಳಿಯವರು. ಡಿ.23, 1902ರಂದು ಜನಿಸಿದ ಚರಣ್ ಸಿಂಗ್ ಪ್ರತಿಭಾವಂತ ಯುವಕ. ಎಕಾನಮಿಕ್ಸ್ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್ ಸಿಂಗ್ ತನ್ನ 34ನೇ ವಯಸ್ಸಿಗೆ ಮೊದಲ ಭಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾಗಿ ಆಯ್ಕೆಯಾದರು.ಕೃಷಿ ಬದುಕನ್ನು ಪ್ರೀತಿಸುತ್ತಿದ್ದ ಚರಣ್ ಸಿಂಗ್ ರೈತರ ಬದುಕು ಸುಧಾರಣೆಗೆ ತುಡಿತವನ್ನಿಟ್ಟುಕೊಂಡಿದ್ದರು.ಆದ್ದರಿಂದಲೇ 1938ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು, ಆ ಮೂಲಕ ರೈತ ಪರವಾದ ಧೋರಣೆ ಪ್ರದರ್ಶಿಸಿದರು. ಮದ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆಯನ್ನು ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲಾ ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು, ಪಂಜಾಬ್ ರಾಜ್ಯ ಇದನ್ನು ಅನುಷ್ಟಾನಕ್ಕೆ ತಂದ ಮೊದಲ ರಾಜ್ಯವಾಯಿತು. 1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿಯನ್ನು ನಿಷೇದಿಸುವ ಮತ್ತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮಹತ್ವದ ನಿರ್ಧಾರ ಕೈಗೊಂಡರು. ಮುಂದೆ ಇದು ಇಡೀ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು. ಅದೇ ರೀತಿ ದೇಶದ ಹಿತದೃಷ್ಟಿಯಿಂದ ಅನೇಕ ಮಹತ್ವದ ದೂರದೃಷ್ಟಿ ನಿಲುವುಗಳನ್ನು ಹೊಂದಿದ್ದ ಚರಣ್ ಸಿಂಗ್ ಭಾರತೀಯ ಕಾರ್ಮಿಕ ಕಾಯ್ದೆಗೆ ಹೊಸ ರೂಪುರೇಷೆ ನೀಡಿದರು. ರೈತ ಪರವಾದ ಚಿಂತನೆಗಳು ದೇಶದ ರೈತ ಸಮುದಾಯದಲ್ಲಿ ಚರಣ್ ಸಿಂಗ್ ರ ಹೆಸರನ್ನು ಹಸಿರಾಗಿಸಿದವು. ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚಿರಸ್ಥಾಯಿಯಾದ ಚರಣ್ ಸಿಂಗ್ ರೈತ ಸಮುದಾಯದಲ್ಲಿ ಸ್ಥಿರವಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತದಿನಾಚರಣೆ ಆಚರಣೆಗೆ ಬಂದಿದೆ.

ಭಾರತದ ದೇಶದ ಕೃಷಿಗೆ 9000ಕ್ರಿ ಪೂ. ದ ಇತಿಹಾಸ ಇರುವುದು ಕಾಣಬರುತ್ತದೆ. ಅಲ್ಲಿಂದ ಅನೇಕ ಕಾಲಘಟ್ಟಗಳು ಸವೆದು ಹೋಗಿದ್ದರೂ ಆಧುನಿಕ ಪರಿಸರದ ನಿಲುವುಗಳು ಕೃಷಿ ಬದುಕನ್ನು ವರ್ತಮಾನದಲ್ಲಿ ತಲ್ಲಣಗೊಳಿಸುವಂತೆ ಮಾಡಿವೆ. ಉಸಿರಾಗಬೇಕಿದ್ದ ರೈತರ ಹಸಿರು ಭೂಮಿ ಕಾರ್ಪೋರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕುತ್ತಿರುವುದರಿಂದ ರೈತನ ಬದುಕು ಅಸಹನೀಯವಾಗಿದೆ, ಕೃಷಿ ಜಗತ್ತಿನ ಹೊಸ ಅವಿಷ್ಕಾರ ಮತ್ತು ಪದ್ದತಿಗಳು ರೈತನನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡಿವೆ, ಕೃಷಿ ಕುರಿತ ಸರ್ಕಾರಿ ಪಾಲಸಿಗಳೂ ಜಾಗತಿಕ ವ್ಯಾಪಾರದ ಅನುಸಾರವಾಗಿ ನಡೆಯುತ್ತಿರುವುದರಿಂದ ಭವಿಷ್ಯದ ದಿನಗಳು ಮತ್ತಷ್ಟು ಅಯೋಮಯವಾಗುವ ಸ್ಪಷ್ಟ ಸೂಚನೆಯಿದೆ. ರೈತ ಜಾಗೃತನಾಗಬೇಕು ಜನಸಾಮಾನ್ಯ ಎಚ್ಚೆತ್ತುಕೊಳ್ಳಬೇಕು ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಸಿಮ್ ಜೋಪಾನ.

ಸಿಮ್ ಜೋಪಾನ!
Wednesday, 11.04.2018.
| ಟಿ. ಜಿ. ಶ್ರೀನಿಧಿ

ನಿಮ್ಮ ಮೊಬೈಲ್ ಫೋನ್ ಎಷ್ಟೇ ಅತ್ಯಾಧುನಿಕವಾಗಿರಲಿ, ಅದರಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿ, ಪರಿಣಾಮಕಾರಿ ಬಳಕೆ ಸಾಧ್ಯವಾಗಬೇಕೆಂದರೆ ಅದರಲ್ಲೊಂದು ಸಿಮ್ ಇರಲೇಬೇಕು. ‘ಸಿಮ್ ಎಂಬ ಹೆಸರು ‘ಸಬ್ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್’(ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಚಂದಾದಾರರ ಗುರುತು ದೃಢೀಕರಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಸಿಮ್ ಪಾತ್ರ ಮಹತ್ವದ್ದು.

ಚಂದಾದಾರರಿಗೆ ಸಂಪರ್ಕ ನೀಡುವುದೇನೋ ಸರಿ, ಅದಕ್ಕೆ ಮೊದಲು ಯಾವ ಚಂದಾದಾರರು ಯಾವ ಸಿಮ್ ಬಳಸುತ್ತಿದ್ದಾರೆ ಎನ್ನುವುದು ಮೊಬೈಲ್ ಸಂಸ್ಥೆಗೆ ಗೊತ್ತಾಗಬೇಕಲ್ಲ! ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್(ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಸಂಖ್ಯೆ, ಪ್ಯಾನ್, ಆಧಾರ್ ಎಲ್ಲ ಇದ್ದ ಹಾಗೆಯೇ ಇದು ನಮ್ಮ ಸಿಮ್ ಅನ್ನು ನಿರ್ದಿಷ್ಟವಾಗಿ ಗುರುತಿಸಬಲ್ಲ ಸಂಖ್ಯೆ.

ಪ್ರಪಂಚದ ಪ್ರತಿಯೊಂದು ಸಿಮ್ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ. ನಮ್ಮ ಖಾತೆಯ ವಿವರಗಳನ್ನು ನಿರ್ದಿಷ್ಟ ಸಿಮ್ೆ ಹೊಂದಿಸಲು, ನಮಗೆ ಬರುವ ಕರೆ, ಸಂದೇಶಗಳನ್ನು ಎಲ್ಲಿಗೆ ಕಳಿಸಬೇಕು ಎನ್ನುವುದನ್ನು ತಿಳಿಯಲು ಮೊಬೈಲ್ ಸಂಸ್ಥೆಗಳು ಈ ಸಂಖ್ಯೆಯನ್ನು ಬಳಸುತ್ತವೆ. ಬ್ಯಾಂಕಿನಿಂದ ಬರುವ ಓಟಿಪಿ, ಕಚೇರಿಯಿಂದ ಬರುವ ದೂರವಾಣಿ ಕರೆಯೇ ಇರಲಿ. ಅದು ನಮ್ಮನ್ನು ತಲುಪಬೇಕೆಂದರೆ ಮೊಬೈಲ್ ಸಂಸ್ಥೆಯಲ್ಲಿ ನಮ್ಮ ಸಿಮ್ ಸಂಖ್ಯೆ(ಐಸಿಸಿಐಡಿ) ಸರಿಯಾಗಿ ದಾಖಲಾಗಿರಬೇಕು.

ಮೊದಲ ಬಾರಿಗೆ ಸಿಮ್ ಪಡೆದುಕೊಂಡಾಗ, ನಮ್ಮ ಖಾತೆ ಆಕ್ಟಿವೇಟ್ ಆಗುವಾಗ ಈ ಸಂಖ್ಯೆಯನ್ನು ಮೊಬೈಲ್ ಸಂಸ್ಥೆಯ ಸಿಬ್ಬಂದಿ ನಮ್ಮ ಖಾತೆಯೊಡನೆ ಜೋಡಿಸಿರುತ್ತಾರೆ. ಯಾವುದೇ ಕಾರಣದಿಂದ ನಾವು ಸಿಮ್ ಬದಲಿಸಿದರೆ ಮಾತ್ರ ಹೊಸ ಸಂಖ್ಯೆಯನ್ನು ಮೊಬೈಲ್ ಸಂಸ್ಥೆಯೊಡನೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೊಸ ಸಿಮ್ ನೀಡಿದ ಸಂದರ್ಭಗಳಲ್ಲಿ ಸಿಮ್ ಸಂಖ್ಯೆಯನ್ನು ನಿರ್ದಿಷ್ಟ ಸಂಖ್ಯೆಗೆ ಎಸ್ಸೆಮ್ಮೆಸ್ ಮೂಲಕ ಕಳಿಸುವಂತೆ ಹೇಳುತ್ತಾರಲ್ಲ, ಅದರ ಉದ್ದೇಶ ಇದು.

ಬ್ಯಾಂಕ್ ಖಾತೆ, ಮೊಬೈಲ್ ವ್ಯಾಲೆಟ್ ಸೇರಿ ಸಕಲವೂ ನಮ್ಮ ಫೋನಿನ ಮೂಲಕವೇ ಕೆಲಸಮಾಡುವ ಈ ದಿನಗಳಲ್ಲಿ ಮೇಲೆ ಹೇಳಿದ ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಎಚ್ಚರವಾಗಿರಬೇಕಾದ್ದು ಅನಿವಾರ್ಯ. ಗ್ರಾಹಕರಿಗೆ ವಂಚಿಸಿ ಅವರ ಖಾತೆಯನ್ನು ತಮ್ಮಲ್ಲಿರುವ ಸಿಮ್ೆ ಜೋಡಿಸಲು ಪ್ರಯತ್ನಿಸುವ ‘ಸಿಮ್ ಸ್ವಾಪ್’ ಹಗರಣದ ಕುರಿತು ಜಾಗೃತರಾಗಿರಬೇಕಾದ್ದು ಈ ಎಚ್ಚರಿಕೆಯ ಒಂದು ಭಾಗ. ಮೊಬೈಲ್ ಸಂಸ್ಥೆಯಿಂದ ಕರೆಮಾಡುತ್ತಿದ್ದೇವೆ, ಇಪ್ಪತ್ತು ಅಂಕಿಯ ಸಂಖ್ಯೆಯೊಂದನ್ನು ಎಸ್ಸೆಮ್ಮೆಸ್ ಮಾಡದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತದೆ ಎಂದೆಲ್ಲ ಹೆದರಿಸುತ್ತಾರಲ್ಲ, ಅವರನ್ನು ಸಾರಾಸಗಟಾಗಿ ಉಪೇಕ್ಷಿಸುವುದು ಒಳ್ಳೆಯದು. ಅವರು ಹೇಳುತ್ತಿರುವುದರ ಬಗ್ಗೆ ಪ್ರಶ್ನೆಗಳಿದ್ದರೆ ಮೊಬೈಲ್ ಸಂಸ್ಥೆಯ ಗ್ರಾಹಕ ಸೇವಾ ವಿಭಾಗಕ್ಕೆ ಕರೆಮಾಡಿ ವಿಚಾರಿಸಿಕೊಳ್ಳುವುದು ಉತ್ತಮ. ಅದರ ಬದಲು ಅವರು ಹೇಳಿದಂತೆ ಮೆಸೇಜ್ ಮಾಡಿದರೆ ನಮ್ಮ ಸಿಮ್ ನಿಷ್ಕ್ರಿಯವಾಗುವುದಷ್ಟೇ ಅಲ್ಲ, ಹೊಸ ಸಿಮ್ ಮೂಲಕ ನಮ್ಮ ಬ್ಯಾಂಕ್ ಖಾತೆಯ ನಿಯಂತ್ರಣ ಖದೀಮರ ಕೈಸೇರುವ ಸಾಧ್ಯತೆಯೂ ಇರುತ್ತದೆ.(ಇಂತಹ ಪ್ರಕರಣಗಳು ನಮ್ಮ ದೇಶದಲ್ಲೂ ಹೆಚ್ಚುತ್ತಿರುವ ಬಗ್ಗೆ ಈಚೆಗೆ ಅನೇಕ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕುರಿತು ಎಚ್ಚರಿಸುವ ಸಂದೇಶಗಳನ್ನು ಮೊಬೈಲ್ ಸಂಸ್ಥೆಗಳೂ ಗ್ರಾಹಕರಿಗೆ ಕಳಿಸುತ್ತಿವೆ).

ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡ್ಗಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೇವಲ್ಲ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಮೊಬೈಲಿನಿಂದ ಸಿಮ್ ಹೊರತೆಗೆದಾಗ ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು, ಮೊಬೈಲ್ ಫೋನ್ ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ಈ ಮೂಲಕ ತಡೆಯಬಹುದು. ಸಿಮ್ ಮಾಹಿತಿ ನಕಲಿಸಿಕೊಂಡು ಬಳಸುವ ಈ ಹಗರಣಕ್ಕೆ ಸಿಮ್ ಕ್ಲೋನಿಂಗ್ ಎಂದು ಹೆಸರು. ನಮ್ಮ ಮೊಬೈಲ್ ಖಾತೆಯ ಚಟುವಟಿಕೆಯ ಬಗ್ಗೆ, ಬಿಲ್ನಲ್ಲಿರುವ ವಿವರಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಸಂಸ್ಥೆಯ ಗ್ರಾಹಕ ಸೇವಾ ವಿಭಾಗವನ್ನು ಸಂರ್ಪಸುವುದು ಒಳ್ಳೆಯದು.

ಚಂದಾದಾರರನ್ನು ಪರೀಕ್ಷಿಸುವ ಸಾಧನ

ಯಾವುದೇ ಮೊಬೈಲ್ ಸಂಸ್ಥೆಯ ಸಿಮ್ ಬಳಸುತ್ತಿರುವವರು ಆ ಸಂಸ್ಥೆಯ ಚಂದಾದಾರರೋ ಅಲ್ಲವೋ ಎಂದು ಪರೀಕ್ಷಿಸಿದ ನಂತರವೇ ಅವರಿಗೆ ಜಾಲದ ಸಂಪರ್ಕ ಒದಗಿಸಿಕೊಡಲಾಗುತ್ತದೆ. ಈ ಉದ್ದೇಶಕ್ಕಾಗಿ ಇಂಟರ್ನ್ಯಾಶನಲ್ ಮೊಬೈಲ್ ಸಬ್ಸ್ಕ್ರೈಬರ್ ಐಡೆಂಟಿಟಿ(ಐಎಂಎಸ್ಐ) ಎಂಬ ವಿಶಿಷ್ಟ ಸಂಖ್ಯೆ ಬಳಕೆಯಾಗುತ್ತದೆ. ಮೊಬೈಲ್ ಚಂದಾದಾರರನ್ನು ಗುರುತಿಸಲು, ಅವರಿಗೆ ಜಾಲದ ಸಂಪರ್ಕ ಒದಗಿಸಿಕೊಡಲು ಬಳಕೆಯಾಗುವ ಈ ಸಂಖ್ಯೆ ಸಿಮ್ಲ್ಲಿ ಶೇಖರವಾಗಿರುತ್ತದೆ. ಫೋನ್ ವಿಷಯ ಐಎಂಇಐ ಎಂಬ ಇನ್ನೊಂದು ಸಂಖ್ಯೆಯ ಪ್ರಸ್ತಾಪ ಬರುತ್ತದಲ್ಲ, ಅದು ‘ಇಂಟರ್ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ’ ಎಂಬ ಹೆಸರಿನ ಹ್ರಸ್ವರೂಪ. ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸಲು ಅದು ಬಳಕೆಯಾಗುತ್ತದೆ. ಐಎಂಎಸ್ಐ ಹಾಗೂ ಐಎಂಇಐ ಪರಸ್ಪರ ಬೇರೆಯವೇ ಆದ ಸಂಖ್ಯೆಗಳು.

ಶ್ರೀರಾಮ ನವಮಿ ವಿಶೇಷ

ವಿಶೇಷ: ಲೋಕಪಾವನ ಈ ರಘುನಂದನ

ಶ್ರೀರಾಮನವಮಿ.

ಶ್ರೀ ರಾಮಚಂದ್ರನದು ಜನಮಾನಸದಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿದ ವ್ಯಕ್ತಿ. ರಾಮನ ಆರಾಧನಾ ತಾಣಗಳು ರಾಜ್ಯದೆಲ್ಲೆಡೆ ಪಸರಿಸಿವೆ. ರಾಮ ವನವಾಸದ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ನೀಡಿದ್ದಾನೆಂಬ ನಂಬಿಕೆ ನಮ್ಮಲ್ಲಿದ್ದು, ಅಂಥ ಕೆಲವು ತಾಣಗಳು ಇಂದು ಭಕ್ತಿಕೇಂದ್ರಗಳಾಗಿವೆ, ಪ್ರವಾಸಿಧಾಮಗಳಾಗಿವೆ. ರಾಜ್ಯಗಳಲ್ಲಿರುವ ಆ ರಾಮತಾಣಗಳತ್ತ ಕಿರು ನೋಟ.

ಶ್ರೀ ರಾಮ ಜನಿಸಿದ ಚೈತ್ರಮಾಸದ ಶುಕ್ಲ ಪಕ್ಷದ ನವಮಿಯಂದು (ಮಾರ್ಚ್- ಏಪ್ರಿಲ್ ತಿಂಗಳಲ್ಲಿ ) ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪಾನಕ, ಕೋಸಂಬರಿ ವಿತರಣೆ ಮಾಡುವ ಮೂಲಕ ನವಮಿ ಆಚರಿಸಲಾಗುತ್ತದೆ. ಅಲ್ಲದೆ, ಕೆಲವೆಡೆ ಸಂಗೀತೋತ್ಸವ ನಡೆಸುವುದು ರೂಢಿ. ಇನ್ನು ಕೆಲವರ ರಾಮನವಮಿಯನ್ನು 9 ದಿನಗಳ ಕಾಲ ಆಚರಿಸುವುದೂ ಉಂಟು. ಚೈತ್ರಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿಯವರೆಗೆ ರಾಮಾಯಣ ಪಾರಾಯಣ ಮಾಡಿ, ನವಮಿ ದಿನ ರಾಮಪಟ್ಟಾಭಿಷೇಕ ಮಾಡಿ ಪಾರಾಯಣ ಹಬ್ಬವನ್ನು ಮುಗಿಸುತ್ತಾರೆ. ಶಕ್ತಿಯ ಸಂಕೇತವಾಗಿರುವ ಸೂರ‌್ಯದೇವರ ಆರಾಧನೆಯೊಂದಿಗೆ ಹಬ್ಬ ಆಚರಣೆ ಆರಂಭವಾಗುತ್ತದೆ. ರಾಮಸ್ತ್ರೋತ್ತ, ಭಜನೆಗಳ ಮೂಲಕ ದೇವರನ್ನು ಸಂಪ್ರೀತಗೊಳಿಸುವುದು ಸಂಪ್ರದಾಯ. ಸೂರ‌್ಯಾಸ್ತದ ನಂತರ ರಾಮನವಮಿ ವ್ರತ ಸಮಾಪನಗೊಳ್ಳುತ್ತದೆ.

ಸದ್ವರ್ತನೆಯೆಂಬ ಸುಗಂಧ ಸೂಸಿದ ಶ್ರೀರಾಮ
– ಸದ್ಗುರು ಜಗ್ಗಿ ವಾಸುದೇವ್
ಮರ್ಯಾದಾ ಪುರುಷ ಶ್ರೀರಾಮನನ್ನು ಭಾರತದ ಬಹುತೇಕ ಜನಸಮುದಾಯಗಳು ತಲತಲಾಂತರಗಳಿಂದಲೂ ಭಕ್ತಿ ಗೌರವದಿಂದ ಪೂಜಿಸುತ್ತಿವೆ. ಆದರ್ಶಗಳ ಬಗ್ಗೆ ಉಪಬೋಧೆ ಮಾಡುವ ಸಂದರ್ಭದಲ್ಲಿಯೂ ಜನರು ಸಾಮಾನ್ಯವಾಗಿ ರಾಮನ ಆದರ್ಶಗಳನ್ನೇ ಉದಾಹರಣೆ ನೀಡುತ್ತಾರೆ. ಆದರೆ ಅಂತಹ ರಾಮ ತನ್ನ ಜೀವನದಲ್ಲಿ ಎಷ್ಟೆಷ್ಟು ಸಂಕಷ್ಟಗಳನ್ನು ಎದುರಿಸಿದ ನೋಡಿ. ಅವನ ಇಡೀ ಬದುಕೇ ದುರಂತಗಳ ಸರಮಾಲೆಯಂತಿತ್ತು. ನ್ಯಾಯಯುತವಾಗಿ ತನಗೆ ಸೇರಬೇಕಾಗಿದ್ದ ರಾಜ್ಯವನ್ನು ಕಳೆದುಕೊಂಡು ಆತ ಕಾಡಿಗೆ ಹೋಗಬೇಕಾಯಿತು. ಕಷ್ಟವೋ ನಷ್ಟವೋ ಅನುಭವಿಸಿಕೊಂಡು ಕಾಡಿನಲ್ಲಿ ಬದುಕಿಬಿಡುತ್ತೇನೆ ಅಂದುಕೊಂಡರೆ ಅಲ್ಲಿ ಅವನ ಹೆಂಡತಿಯ ಅಪಹರಣವಾಯಿತು. ಯುದ್ಧ ಅವನಿಗೆ ಬೇಡವಾಗಿದ್ದರೂ ಗತ್ಯಂತರವಿಲ್ಲದೆ ಘನಘೋರವಾದ ಯುದ್ಧದಲ್ಲಿ ಭಾಗವಹಿಸಬೇಕಾಯಿತು. ಅಷ್ಟು ಕಷ್ಟಪಟ್ಟು ಹೆಂಡತಿಯನ್ನು ಕರೆತಂದರೂ ಅವಳ ಬಗ್ಗೆ ಸುತ್ತಮುತ್ತಲಿನವರು ಇಲ್ಲಸಲ್ಲದ ಮಾತುಗಳನ್ನಾಡಿದರು. ಅಂತಹ ಕಠೋರ ಮಾತುಗಳನ್ನು ಕೇಳಿಸಿಕೊಂಡ ರಾಮ, ತನ್ನ ಪ್ರೀತಿಯ ಮಡದಿಯನ್ನು ಮತ್ತೆ ಕಾಡಿಗೆ ಬಿಟ್ಟು ಬಂದ. ಆ ವೇಳೆಗೆ ಆಕೆ ಗರ್ಭಿಣಿ. ಹೊಟ್ಟೆಯಲ್ಲಿ ಅವಳಿ ಮಕ್ಕಳು. ಮುಂದೊಂದು ದಿನ ತನಗೇ ಅರಿವಿಲ್ಲದೆ ತನ್ನಿಬ್ಬರು ಮಕ್ಕಳ ಜತೆ ರಾಮ ಯುದ್ಧ ಮಾಡಬೇಕಾಯಿತು. ಅಂತಿಮವಾಗಿ ಹೆಂಡತಿಯನ್ನು ಕಳೆದುಕೊಳ್ಳಬೇಕಾಯಿತು. ಇದು ರಾಮನ ಬದುಕಿನಲ್ಲಿ ನಡೆದ ದುರಂತಗಳ ಸರಮಾಲೆಯ ಸಂಕ್ಷಿಪ್ತ ರೂಪ. ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿದ ರಾಮನನ್ನು ಇಷ್ಟೊಂದು ಜನ ಯಾಕೆ ಪೂಜಿಸುತ್ತಾರೆ?

ರಾಮನ ಮಹತ್ವ ಇರೋದು ಆತ ತನ್ನ ಜೀವನದಲ್ಲಿ ಎಂತೆಂಥ ಪರಿಸ್ಥಿತಿಗಳನ್ನು ಎದುರಿಸಿದ ಎಂಬುದರಲ್ಲಿ ಅಲ್ಲ. ಆ ದುರಂತ ಸರಣಿಯನ್ನು ಆತ ಹೇಗೆ ಒಂದು ರೀತಿಯ ಗಾಂಭೀರ್ಯದಿಂದ, ಸ್ಥಿತಪ್ರಜ್ಞನಾಗಿ ನಿಭಾಯಿಸಿದ ಎಂಬುದರಲ್ಲಿ ರಾಮನ ಮಹತ್ವ ಅಡಗಿದೆ. ಒಮ್ಮೆಯೂ ಆತ ಯಾರ ಮೇಲೂ ಸಿಟ್ಟಾಗಲಿಲ್ಲ, ಯಾರನ್ನೂ ಬೈಯಲಿಲ್ಲ, ಯಾರ ವಿರುದ್ಧವೂ ಅಬ್ಬರಿಸಲಿಲ್ಲ. ಎಲ್ಲ ಸಂದರ್ಭಗಳಲ್ಲೂ ಗಾಂಭೀರ್ಯವನ್ನು ಕಾಪಾಡಿಕೊಂಡ. ರಾಗದ್ವೇಷಗಳಿಗೆ ಕಟ್ಟುಬೀಳದೆ ಸ್ಥಿತಪ್ರಜ್ಞನಾಗಿ ವರ್ತಿಸಿದ.

ಆದ್ದರಿಂದಲೇ ಜಗದ ಜಂಜಡಗಳಿಂದ ವಿಮೋಚನೆಯಯನ್ನು ಬಯಸುವ, ಗಂಭೀರ ಸ್ಥಿತಪ್ರಜ್ಞ ಬದುಕನ್ನು ಇಷ್ಟಪಡುವ ಸಾಮಾನ್ಯ ಜನರಿಗೆ ರಾಮನೆಂದರೆ ಅಪಾರವಾದ ಪ್ರೀತಿ ಮತ್ತು ಗೌರವ. ಬದುಕಿನಲ್ಲಿ ಬಾಹ್ಯ ಪರಿಸ್ಥಿತಿಗಳು ಯಾವುದೇ ಕ್ಷಣದಲ್ಲಿಯೂ ನಮ್ಮ ನಿಯಂತ್ರಣ ಮೀರಿ ಹೋಗಬಹುದು ಎಂಬುದನ್ನು ಈ ಜನ ಅರ್ಥ ಮಾಡಿಕೊಂಡರು. ಎಲ್ಲಿಯೂ ಯಾವ ಅಡೆತಡೆಯೂ ಆಗದ ಹಾಗೆ ಮೈಮೇಲೆ ಪೂರ್ತಿ ಎಚ್ಚರ ಇಟ್ಟುಕೊಂಡು ಕೆಲಸ ಮಾಡಿದರೂ ಕೆಲವೊಮ್ಮೆ ಬಾಹ್ಯ ಸಂಗತಿಗಳು ನಮ್ಮ ಇರಾದೆಗೆ ವಿರುದ್ಧವಾಗಿ ಘಟಿಸಿಬಿಡುತ್ತವೆ. ಒಂದು ಹುಲ್ಲು ಕಡ್ಡಿಯೂ ಅಲ್ಲಾಡದ ಹಾಗೆ ವ್ಯವಸ್ಥೆ ಮಾಡಿಟ್ಟ ಮರುಕ್ಷಣವೇ ಚಂಡಮಾರುತ ಬೀಸಿಬಿಟ್ಟರೆ ಆಗೇನು ಮಾಡುತ್ತೀರಿ? ಅದು ನಿಮ್ಮ ಮನೆಯನ್ನೇ ತರಗೆಲೆ ಮಾಡಿಬಿಡಬಲ್ಲದು. ಇನ್ನು ಕೆಲವರು ಯೋಚಿಸುವ ರೀತಿಯೇ ವಿಚಿತ್ರವಾಗಿರುತ್ತದೆ. ಱಱಬೇರೆಯವರಿಗೆ ಏನು ಬೇಕಾದರೂ ಆಗಬಹುದು. ನನಗೆ ಮಾತ್ರ ಅಂಥದ್ದೆಲ್ಲ ಆಗಲು ಸಾಧ್ಯವೇ ಇಲ್ಲ,ೞೞ ಎನ್ನುತ್ತಿರುತ್ತಾರೆ. ಅಂಥವರು ಕಡುಮೂರ್ಖರು ಎನ್ನದೆ ವಿಧಿ ಇಲ್ಲ. ಅಂತಹ ಸ್ಥಿತಿ ನನಗೆ ಎದುರಾದರೆ ನಾನದನ್ನು ಗಂಭೀರವಾಗಿ ಸ್ಥಿತಪ್ರಜ್ಞನಾಗಿ ನಿಭಾಯಿಸುತ್ತೇನೆ,ೞೞ ಎನ್ನುವವರು ನಿಜಕ್ಕೂ ಜಾಣರು. ಅವರಿಗೆ ಬದುಕುವ ಬಗೆ ಗೊತ್ತು, ಬದುಕಿನ ಬೆಲೆ ಗೊತ್ತು. ಇಂತಹ ಜ್ಞಾನ ಶ್ರೀರಾಮನಲ್ಲಿ ಇತ್ತು. ಅರಿತವರು ಅದನ್ನು ಗುರುತಿಸಿದರು. ನಿಮ್ಮ ಬದುಕಿನಲ್ಲಿ ನೀವು ಏನೇನು ಸಾಧನೆ ಮಾಡಿದಿರಿ, ಎಷ್ಟೆಷ್ಟು ಗಳಿಸಿದಿರಿ, ಎಂತೆಂಥ ಸಂದರ್ಭಗಳನ್ನು ಎದುರಿಸಿದಿರಿ ಅಥವಾ ಎಂಥ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂಬುದೆಲ್ಲವೂ ಮುಖ್ಯವಲ್ಲವೇ ಅಲ್ಲ. ಅಂತಹ ಸಂದರ್ಭಗಳಲ್ಲೆಲ್ಲ ನೀವು ಹೇಗೆ ನಡೆದುಕೊಂಡಿರಿ ಎಂಬುದಷ್ಟೇ ಪರಿಗಣನೆಗೆ ಬರುವಂಥದ್ದು.

ಹಾಗಾದರೆ ನಾವು ನಮ್ಮ ಜೀವನವನ್ನು ಅದರ ಪಾಡಿಗೆ ಬಿಟ್ಟುಬಿಡಬೇಕೆ, ನಾವು ಸರಿಯಾದ ಕ್ರಮದಲ್ಲಿ ನಿರ್ವಹಿಸುವ ಅವಶ್ಯಕತೆ ಇಲ್ಲ ಎಂದರ್ಥವೇ? ಅಲ್ಲ. ನಾವು ನಮ್ಮ ಸುತ್ತಮುತ್ತ ನಡೆಯುತ್ತಿರುವುದನ್ನು ಕ್ರಮಬದ್ಧವಾಗಿ ಏಕೆ ನಿರ್ವಹಿಸುತ್ತೇವೆ ಎಂದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವನೆಯಿಂದ. ಯಾವುದೇ ಒಂದು ಪರಿಸ್ಥಿತಿಯಲ್ಲಿ ಎಲ್ಲವೂ ಸುಸೂತ್ರವಾಗಿ ನಿರ್ವಹಣೆಯಾದರೆ ಅದರಲ್ಲಿ ಅಚ್ಚರಿಪಡುವಂಥದ್ದು, ಸಂತೋಷಪಡುವಂಥದ್ದು ಏನೂ ಇಲ್ಲ. ಪ್ರತಿಯೊಂದು ಪರಿಸ್ಥಿತಿಯನ್ನೂ ಸುಸೂತ್ರವಾಗಿ ನಿರ್ವಹಿಸುವುದು ಸಾಧ್ಯವಾದರೆ ಆಗ ನನಗೆ ಅಚ್ಚರಿಯೂ ಸಂತೋಷವೂ ಆಗುತ್ತದೆ. ಸರ್ವ ಸ್ಥಿತಿ ಸಂದರ್ಭಗಳೂ ಸುರಳೀತವಾಗಿ ಸಂದು ಮುಂದೆ ಹೋಗಿಬಿಡಲಿ ಎಂದು ನಾವು ಆಶಿಸುವುದು, ಅದಕ್ಕೆ ಪೂರಕವಾಗಿ ಕಷ್ಟಪಟ್ಟು ನಿರ್ವಹಿಸುವುದು, ಯಾವುದೇ ಅಡೆತಡೆಗಳಿರದಂತೆ ತಪ್ಪುತಡೆಗಳಾಗದಂತೆ ಎಚ್ಚರ ವಹಿಸುವುದು. ಇದೆಲ್ಲವೂ ಯಾವುದರ ದ್ಯೋತಕ? ನಮಗೆ ನಮ್ಮ ಬಗ್ಗೆ ಮತ್ತು ನಮ್ಮ ಸುತ್ತಮುತ್ತಲಿನವರ ಬಗ್ಗೆ ಇರುವ ಕಾಳಜಿಯನ್ನು ಇದು ಸೂಚಿಸುತ್ತದೆ.

ಶ್ರೀರಾಮ ಕೂಡ ತನ್ನ ಜೀವನದಲ್ಲಿ ಇಂತಹ ಹಲವು ಪರಿಸ್ಥಿತಿಗಳನ್ನು ಎದುರುಗೊಂಡ. ಪ್ರತಿ ಬಾರಿಯೂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ಗೆಲುವು ಸಾಧಿಸಿದ, ಎಲ್ಲರಿಂದಲೂ ಸೈ ಎನಿಸಿಕೊಂಡ ಎಂದು ಹೇಳಲು ಬಾರದು. ಬಹಳಷ್ಟು ಕಷ್ಟಕಾರ್ಪಣ್ಯದ ಪರಿಸ್ಥಿತಿಗಳು ಅವನಿಗೆ ಎದುರಾದವು. ಹಲವಾರು ಸಲ ಪರಿಸ್ಥಿತಿ ಆತನ ನಿಯಂತ್ರಣ ಮೀರಿ ಹೋಯಿತು. ಆದರೆ ಆ ಯಾವ ಕಾಲಘಟ್ಟದಲ್ಲಿಯೂ ರಾಮ ಧೃತಿಗೆಡಲಿಲ್ಲ. ಗಾಂಭೀರ‌್ಯವನ್ನು ಬಿಟ್ಟುಕೊಡಲಿಲ್ಲ. ಸ್ಥಿತಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ. ಕರ್ತವ್ಯದಿಂದ ವಿಮುಖನಾಗಲಿಲ್ಲ. ಪಲಾಯನ ಮಾಡಲಿಲ್ಲ. ಯಾರ ಮೇಲೂ ಹರಿಹಾಯಲಿಲ್ಲ. ಹೀಗಳೆಯಲಿಲ್ಲ. ಹಳಿದುಕೊಳ್ಳಲಿಲ್ಲ. ತದೇಕಚಿತ್ತನಾಗಿ ಶ್ರದ್ಧೆಯಿಂದ ಆಯಾ ಕಾಲಘಟ್ಟವನ್ನು ಮತ್ತು ಅದು ತಂದೊಡ್ಡಿದ ಸವಾಲನ್ನು ಅವಲೋಕಿಸಿದ. ಅದಕ್ಕೆ ಅನುಗುಣವಾಗಿ ನ್ಯಾಯೋಚಿತ ಮಾರ್ಗದಲ್ಲಿ ಸ್ಪಂದಿಸಿದ. ಗೆಲ್ಲುವುದೊಂದೇ ಗುರಿಯಾಗಿರಲಿಲ್ಲ. ತನ್ನವರಿಗೆ ವಿನಾಕಾರಣ ಕೇಡಾಗದಂತೆ, ಅಸುರೀ ಶಕ್ತಿಗಳೆಂಬ ಅನ್ಯರಿಗೆ ಆಯವಾಗದಂತೆ ಎಚ್ಚರ ವಹಿಸುವುದಷ್ಟೇ ಆತನ ಆದ್ಯತೆಯಾಗಿತ್ತು. ಈ ನಡೆಯೇ ಆಧ್ಯಾತ್ಮದ ಕಡೆಗಿನ ಮೊದಲ ಮೆಟ್ಟಿಲು. ಇದುವೇ ಮನ ಮಂಥನದ ಮೂಲದ್ರವ್ಯ. ಮನವೆಂಬ ಮರ್ಕಟನನ್ನು ಹೆಡೆಮುರಿಗೆ ಕಟ್ಟಿ ಮೂಲೆಯಲ್ಲಿ ಕೂರಿಸಲು ಈ ಗಾಂಭೀರ್ಯ, ಸ್ಥಿತಪ್ರಜ್ಞತೆ ಬೇಕು. ಅದನ್ನು ಪ್ರಜ್ಞಾಪೂರ್ವಕವಾಗಿ, ಪ್ರಯತ್ನಪರರಾಗಿ ರೂಢಿಸಿಕೊಂಡರೆ ಮಾತ್ರ ಮನಸ್ಸೆಂಬುದು ಪ್ರಫುಲ್ಲವಾಗಿ ಪುಷ್ಪದ ರೀತಿಯಲ್ಲಿ ಅರಳಬಲ್ಲದು. ಸುತ್ತಲಿನ ಜಗತ್ತಿಗೆ ಸುಗಂಧವನ
ನು ಸೂಸಬಲ್ಲದು.

ರಾಮಾಯಣಕ್ಕೂ ಹಂಪಿಗೂ ಅವಿನಾಭಾವ ನಂಟು
ದಕ್ಷಿಣ ಭಾರತದ ಕಾಶಿ ಎನಿಸಿರುವ ಹಂಪಿಗೂ, ರಾಮಾಯಣಕ್ಕೂ ಅವಿನಾಭಾವ ಸಂಬಂಧ. ಶ್ರೀರಾಮಚಂದ್ರ, ಸೀತಾ ಮಾತೆ, ಲಕ್ಷ್ಮಣ, ಹಂಪಿಯ ನೆಲದಲ್ಲಿ ನಡೆದಾಡಿರುವುದರ ಕುರುಹುಗಳಿವೆ ಎಂದು ಜನರು ಈಗಲೂ ನಂಬುತ್ತಾರೆ. ಸೀತಾ ಮಾತೆಯನ್ನು ರಾವಣ ತನ್ನ ಪುಷ್ಪಕ ವಿಮಾನದಲ್ಲಿ ಹೊತ್ತುಕೊಂಡು ಹೋಗಿದ್ದರ ಸುಳಿವವನ್ನು ಜಟಾಯು ಶ್ರೀರಾಮನಿಗೆ ನೀಡಿದ್ದು ಇದೇ ಪ್ರದೇಶದಲ್ಲೇ ಎಂಬುದು ಪ್ರತೀತಿ. ತುಂಗಭದ್ರಾ ನದಿ ತಟದಲ್ಲಿ ಶ್ರೀರಾಮ, ಸೀತಾದೇವಿಯನ್ನು ಹುಡುಕುವುದಲ್ಲದೇ ಸೀತೆಯನ್ನು ರಾವಣ ಎಳೆದುಕೊಂಡು ಹೋದಾಗ ಆಕೆ ಧರಿಸಿದ್ದ ಸೀರೆಯ ಸೆರಗಿನ ಅಂಚಿನ ಚಿತ್ರಾವಳಿ ಹಂಪಿಯ ಬಂಡೆಯೊಂದರ ಮೇಲೆ ಮೂಡಿದೆ ಎಂಬುದನ್ನು ಜನಪದರು ಇಲ್ಲಿ ಗುರುತಿಸುತ್ತಾರೆ. ಈ ಸ್ಥಳ ‘ಸೀತೆ ಸೆರಗು’ ಎಂದು ಜನಜನಿತವಾಗಿದೆ. ಈಗಲೂ ದೇಶದ ಸಾವಿರಾರು ಪ್ರವಾಸಿಗರು ಈ ಸ್ಥಳದ ವೀಕ್ಷಣೆಗೆ ಆಗಮಿಸುತ್ತಾರೆ. ಶ್ರೀರಾಮ ಸೀತೆಯನ್ನು ಹುಡುಕುತ್ತ ಬರುತ್ತಿದ್ದಾಗ, ಹಂಪಿಯ ಮಾಲ್ಯವಂತ ರಘುನಾಥ ದೇಗುಲದಲ್ಲಿ ವಿಶ್ರಮಿಸಿದ್ದರು. ಇದೇ ಜಾಗದಲ್ಲಿ ಅವರು ಪ್ರಾರ್ಥನೆ ಮಾಡಿದ್ದರು. ಶ್ರೀವಿರೂಪಾಕ್ಷೇಶ್ವರ ಸ್ವಾಮಿಯನ್ನು ಕೂಡ ಭಜಿಸಿದ್ದರು ಎಂಬುದು ಪೌರಾಣಿಕ ಕಥನದಿಂದ ತಿಳಿದು ಬರುತ್ತದೆ. ಕಪಿಸೈನ್ಯದೊಂದಿಗೆ ರಾವಣನ ವಿರುದ್ಧ ಜಯಶಾಲಿಯಾಗಿ ಶ್ರೀರಾಮ ಮರಳಿ ಬಂದಾಗ ಭರತ ಸ್ವಾಗತಿಸಿದ್ದು ಇದೇ ಹಂಪಿಯಲ್ಲೇ. ಅದರ ಕುರುಹು ಆಗಿ ಕೋದಂಡರಾಮ ದೇಗುಲ ಕೂಡ ನಿರ್ಮಾಣಗೊಂಡಿದೆ ಎಂಬ ಪ್ರತೀತಿ ಇದೆ. ಇಲ್ಲಿಯ ಹಲವು ಸ್ಮಾರಕಗಳಲ್ಲಿ ರಾಮಾಯಣದ ಎಲ್ಲ ಪ್ರಮುಖ ಘಟನೆಗಳ ಕೆತ್ತನೆಗಳನ್ನು ಒಳಗೊಂಡಿರುವುದು ವಿಶೇಷ.

ಹನುಮನುದಿಸಿದ ಕಿಷ್ಕಿಂದೆ
ಹಂಪಿ ಪ್ರದೇಶದಲ್ಲೇ ಬರುವ ತಾಲೂಕಿನ ಕಿಷ್ಕಿಂದೆ (ಆನೆಗೊಂದಿ)ಯ ಅಂಜನಾದ್ರಿ ಬೆಟ್ಟದಲ್ಲಿ ಸೂರ್ಯದೇವನ ಕೃಪೆಯಿಂದ ಹನುಮಂತದೇವರು ಜನಿಸಿದ್ದ ಎಂಬುದು ಪ್ರತೀತಿ. ತುಂಗಭದ್ರಾ ನದಿ ತಟದಲ್ಲಿರುವ ಇದೇ ಸ್ಥಳದಲ್ಲೇ ಶ್ರೀರಾಮಚಂದ್ರನಿಗೆ ಕಾಯ, ವಾಚ, ಮನಸಾ ಸಹಕಾರ ನೀಡಿದ ಹನುಮಂತ, ಸೀತೆಯ ಸುಳಿವು ಕಂಡುಹಿಡಿಯಲು ಇದೇ ಸ್ಥಳದಲ್ಲೇ ಹಲವು ಪ್ರಯತ್ನ ನಡೆಸಿದ್ದ ಎನ್ನಲಾಗುತ್ತದೆ. ಸುಗ್ರೀವ, ಹನುಮಂತ, ಜಾಂಬವಂತ, ವಾಯು ಶ್ರೀರಾಮನಿಗೆ ಭೇಟಿಯಾಗಿದ್ದು ಆನೆಗೊಂದಿ ಬೆಟ್ಟದಲ್ಲೇ. ವಾಲಿಯನ್ನು ಶ್ರೀರಾಮ ವಧೆಮಾಡಿದ್ದು ಇದೇ ಕ್ಷೇತ್ರದಲ್ಲೇ ಎಂಬುದು ಜನಪದರ ನಂಬಿಕೆ. ವಾನರ ಸೈನ್ಯದ ನೆರವಿನೊಂದಿಗೆ ಸೀತೆಯ ಸುಳಿವು ಕಂಡುಹಿಡಿಯುವಲ್ಲಿ ಯಶಸ್ವಿಯಾಗುವುದೂ ಇದೇ ಸ್ಥಳದಲ್ಲಿ ಎಂದೂ ಹೇಳಲಾಗುತ್ತದೆ. ಈ ಪ್ರದೇಶದಲ್ಲಿ

ತುಂಗಭದ್ರಾ ನದಿ, ಎರಡು ಟಿಸಿಲಾಗಿ ಹರಿಯುತ್ತಿದ್ದು, ಒಂದು ಭಾಗವನ್ನು ಹನುಮನ ಸೆಳವು ಎನ್ನಲಾಗುತ್ತದೆ.

ಇಡಗುಂದಿಗೆ ಆಗಮಿಸಿದ್ದ ಶ್ರೀ ರಾಮಚಂದ್ರ
ತ್ರೇತಾಯುಗದ ಕಾಲದಲ್ಲಿ ಶ್ರೀ ರಾಮಚಂದ್ರನು ಸೀತಾ ಲಕ್ಷ್ಮಣರೊಂದಿಗೆ ದಂಡಕಾರಣ್ಯಕ್ಕೆ ವನವಾಸ ಪೂರ್ತಿಗಾಗಿ ಬಂದವನು ಇಳಾಗುಂಜಿ (ಇಡಗುಂದಿ)ಗೆ ಬಂದು ಪವಿತ್ರವಾದ ವನಭೂಮಿಯನ್ನು ಕಂಡನು. ಅನೇಕ ಸಣ್ಣ ನದಿಗಳನ್ನು, ದಟ್ಟವಾದ ಅರಣ್ಯವನ್ನು ದಾಟಿ ಋಷಿಗಳು ವಾಸವಾಗಿರುವ ಪುಣ್ಯಭೂಮಿಯಾದ ಇಳಾಗುಂಜಿಗೆ ಬಂದಾಗ ಅವರನ್ನು ಕಣ್ವ, ಶಾಂಡಿಲ್ಯ, ಗರ್ಗ ಮುಂತಾದ ಮಹರ್ಷಿಗಳು ಅತ್ಯಾನಂದದಿಂದ ಸ್ವಾಗತಿಸಿದರು. ನಭೋ ವಾಣಿಯನ್ನು ಕೇಳಿ ಈ ಸ್ಥಳಕ್ಕೆ ಬಂದಿದ್ದಾಗಿ ಶ್ರೀರಾಮಚಂದ್ರನು ಅವರಿಗೆ ತಿಳಿಸಿದನು. ನಂತರದಲ್ಲಿ ಭಕ್ತರ ಉದ್ಧಾರಕ್ಕಾಗಿ ಪವಿತ್ರ ಶಿವಲಿಂಗವನ್ನು ಇಲ್ಲಿನ ಹರೀತಕೀವನದಲ್ಲಿ ಸ್ಥಾಪಿಸಿ, ಪೂಜಿಸಿ, ಸ್ತುತಿಸಿದನು. ಇದರಿಂದ ಸುಪ್ರೀತನಾದ ಶಿವನು ಪ್ರತ್ಯಕ್ಷನಾಗಿ ತಾನು ಇಲ್ಲಿಯೇ ರಾಮಲಿಂಗೇಶ್ವರನೆಂಬ ಅಭಿದಾನದಿಂದ ವಾಸಿಸುವುದಾಗಿಯೂ ಈ ಕ್ಷೇತ್ರವು ತನ್ನ ವಾಸಸ್ಥಾನವಾಗುವುದರಿಂದ ಪುಣ್ಯ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯಲೆಂದು ಹರಿಸಿದನೆಂದು ಐತಿಹ್ಯವಿದೆ. ಅಂದು ಇಳಾಗುಂಜಿ ಎಂದು ಪ್ರಸಿದ್ಧಿ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ ಇಂಥ ಪುರಾಣ ಪ್ರಸಿದ್ಧ ಶ್ರೀರಾಮಲಿಂಗ ದೇವಸ್ಥಾನವಿದೆ. ರಾಮಲಿಂಗೇಶ್ವರ ದೇವರ ಜತೆಯಲ್ಲಿ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದಿ ಮುಂತಾದ ಪರಿವಾರ ದೇವತೆಗಳಿವೆ. ಈ ದೇವಸ್ಥಾನ ಯಲ್ಲಾಪುರ ಪಟ್ಟಣದಿಂದ ಕಾರವಾರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ 10 ಕಿ.ಮೀ. ದೂರದಲ್ಲಿದೆ . ಈ ದೇವಸ್ಥಾನ ಆಗ ಮೋಕ್ಷ ಸ್ಥಳವಾಗಿದ್ದು, ನಿತ್ಯ ಪೂಜಾ ಕಾರ್ಯಗಳು, ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ, ಉತ್ಸವಗಳು ಜರುಗುತ್ತವೆ. ಮಹಾಶಿವರಾತ್ರಿಯಂದು ಜಾತ್ರಾ ಮಹೋತ್ಸವ, ಮಹಾರಥೋತ್ಸವ ನಡೆಯುತ್ತದೆ. ಅದರಂತೆ ರಾಮ ನವಮಿಯಂದು ವಿಶೇಷ ಪೂಜೆ, ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ತಾಲೂಕು ಅಲ್ಲದೇ ಜಿಲ್ಲೆ, ಹೊರ ಜಿಲ್ಲೆಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ.

ರಾಮತೀರ್ಥ
ಶ್ರೀ ರಾಮಚಂದ್ರನ ಸೂರ್ಯೋಪಾಸನೆ ಐತಿಹ್ಯ ಹೊಂದಿರುವ ರಾಮತೀರ್ಥ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಅಥಣಿ ತಾಲೂಕಿನ ಪುಟ್ಟ ಹಳ್ಳಿ. ಶ್ರೀರಾಮನ ಸೂರ್ಯೋಪಾಸನೆ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಿದ್ದು, ರಾಮತೀರ್ಥ ಗ್ರಾಮ ಶ್ರೀರಾಮ ಭಕ್ತರಿಗೆ ಪವಿತ್ರ ಯಾತ್ರಾ ಸ್ಥಳವಾಗಿ ದಕ್ಷಿಣದ ಕಾಶಿ ಎಂದು ಹೆಸರಾಗಿದೆ. ಶ್ರೀ ರಾಮಚಂದ್ರ ತನ್ನ ವನವಾಸದ ಸಂದರ್ಭ ಸೀತೆಯನ್ನು ಹುಡುಕಲು ಉತ್ತರದಿಂದ ದಕ್ಷಿಣದ ಶ್ರೀಲಂಕಾದತ್ತ ಪಯಣ ಮಾಡುತ್ತಿರುವಾಗ ತಾಲೂಕಿನ ಕೋಹಳ್ಳಿಗೆ ಭೇಟಿ ನೀಡಿದ ಬಗ್ಗೆ ರಾಮಾಯಣದಲ್ಲಿ ಪ್ರಸ್ತಾಪವಿದೆ. ಕೋಹಳ್ಳಿಯಲ್ಲಿ ಕಹೋಳ ಋಷಿಗಳ ಆಶ್ರಮಕ್ಕೆ ಬಂದು ವಿಶ್ರಮಿಸಿದಾಗ ಸಮೀಪದ ಓಂಕಾರೇಶ್ವರ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಸೂರ್ಯನ ಅಭಿಮುಖವಾಗಿ ಸೂರ್ಯೋಪಾಸನೆ ಮಾಡು, ಇದರಿಂದ ನಿನ್ನ ಇಷ್ಟಾರ್ಥ ಈಡೇರುವುದು ಎಂದು ಕಹೋಳ ಋಷಿಗಳು ಉಪದೇಶಿಸಿದರು. ಶ್ರೀರಾಮಚಂದ್ರ ಓಂಕಾರೇಶ್ವರ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ 30 ದಿನ ಸೂರ್ಯೋಪಾಸನೆ ಮಾಡಿದ. ಅಂದಿನಿಂದ ಕೋಹಳ್ಳಿ ಓಂಕಾರೇಶ್ವರನನ್ನು ರಾಮೇಶ್ವರ ಲಿಂಗ ಎಂದು ಕರೆಯುವ ರೂಢಿಯಾಗಿ ಮುಂದೆ ಅದೇ ರಾಮತೀರ್ಥ ಎಂದು ಪ್ರಸಿದ್ಧಿಯಾಯಿತು. ಈ ರಾಮತೀರ್ಥ ಗ್ರಾಮ ಈ ಶ್ರೀರಾಮನ ಭಕ್ತರ ಪುಣ್ಯಕ್ಷೇತ್ರ ಎಂದೇ ಹೆಸರಾಗಿದೆ. ಶ್ರೀ ರಾಮಚಂದ್ರ ಕೈಗೊಂಡ ಸೂರ್ಯೋಪಾಸನೆಯ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿದೆ. ಶ್ರೀರಾಮ ವನವಾಸಕ್ಕೆ ಹೋದ ಸ್ಥಳಗಳನ್ನು ಗುರುತಿಸುವ ಕಾರ್ಯ ಇತ್ತೀಚೆಗೆ ನಡೆದಿತ್ತು. ಇತಿಹಾಸ ಸಂಶೋಧಕರು ಕೆಲ ದಿನಗಳ ಹಿಂದೆ ರಾಮತೀರ್ಥಕ್ಕೂ ಆಗಮಿಸಿದ್ದರು. ಇಲ್ಲಿ ಶ್ರೀರಾಮ ಪಾದುಕೆಗಳನ್ನು ಕೂಡ ಸ್ಥಾಪಿಸಲಾಗಿದೆ.

ಶಬರಿಕೊಳ್ಳದಲ್ಲಿ ಶ್ರೀರಾಮನ ದೇವಸ್ಥಾನ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನದಿಂದ 3 ಕೀ.ಮಿ. ಅಂತರದ ಅರಣ್ಯ ಪ್ರದೇಶದಲ್ಲಿರುವ ಶ್ರೀ ಶಬರಿಕೊಳ್ಳಕ್ಕೆ ಶ್ರೀರಾಮನ ಭೇಟಿ ನೀಡಿರುವ ಬಗ್ಗೆ ಐತಿಹ್ಯವಿದೆ. ಶಬರಿಯು ಮಧ್ಯಪ್ರದೇಶದ ಶಭರ ಮಹಾರಾಜನ ಒಬ್ಬಳೇ ಮಗಳು. ತನ್ನ ಸ್ವಯಂವರಕ್ಕೆ ಪ್ರಾಣಿಗಳ ಜೀವ ತೆಗೆಯುವುದನ್ನು ನೋಡಲಾಗದೆ, ಜೀವನದಲ್ಲಿ ಹಿಂಸೆಗಿಂತ ಅಹಿಂಸಾಮಾರ್ಗ ಒಳ್ಳೆಯದು ಎಂದುಕೊಂಡು ಅದರಂತೆ ವೈರಾಗ್ಯ ತಳೆದು, ನಾರುಮಡಿಯನ್ನುಟ್ಟು ದೇಶ ಸಂಚಾರಿಯಾಗಿ ಶಬರಿಯು ಸುರೇಬಾನ ಗ್ರಾಮಕ್ಕೆ ಹೊಂದಿದ ಅರಣ್ಯದಲ್ಲಿ ನೆಲೆಸುತ್ತಾಳೆ. ಶ್ರೀ ರಾಮನ ಬರುವಿಗಾಗಿ ಸಾವಿರ ವರುಷ ತಪಗೈದು ರಾಮನಿಗಾಗಿ ಬೋರೆ ಹಣ್ಣುಗಳನ್ನು ಆಯ್ದು ತಂದು ರುಚಿನೋಡಿ ಸಿಹಿಯಾದ ಹಣ್ಣುಗಳನ್ನು ಬೇರ್ಪಡಿಸಿ ಇಡುತ್ತಿದ್ದಳು. ರಾಮನು ಸೀತೆಯನ್ನು ಹುಡುಕುತ್ತಾ ಬಂದು ಈ ಅಭಯಾರಣ್ಯದಲ್ಲಿ ನೆಲೆಸಿದ ಶಬರಿಮಾತೆಗೆ ದರ್ಶನವಿತ್ತು ಸಿಹಿ ಬೋರೆಹಣ್ಣುಗಳನ್ನು ಸೇವಿಸಿದರು. ಈ ಕ್ಷೇತ್ರಕ್ಕೆ ನೂರಾರು ಜನ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಿಂದ ಸಾಧು-ಸಂತರು ಬಂದು ಶಬರಿಯ ಸನ್ನಿಧಿಯಲ್ಲಿ ಜಪ-ತಪ ಗೈದು ಪುನೀತರಾಗಿರುವರು. ಅಲ್ಲದೇ ಮನಿಹಾಳ ಗ್ರಾಮದ ಸದ್ಗುರು ಶ್ರೀ ಶಿವಾನಂದರು 18 ದಿನಗಳವರೆಗೆ ಅನುಷ್ಠಾನಗೈದು ಶಬರಿ ತಾಯಿ ಕಪೆಗೆ ಪಾತ್ರರಾಗಿರುವುದು ಒಂದು ತಾಜಾ ನಿದಶರ್ನ. ಶ್ರೀರಾಮ ಮಂದಿರ ಹಾಗೂ ಮಳೆರಾಜನ ಮಂದಿರವು ಇದೆ, ಈ ದೇವಸ್ಥಾನದಲ್ಲಿ ಸುಂದರವಾದ ಶ್ರೀರಾಮ, ಲಕ್ಷ್ಮಣ, ಸಿತಾಮಾತೆ ಹಾಗೂ ಧೀರ ಮಾರುತಿ ವಿಗ್ರಹಗಳು ಇವೆ.

ಬಾಗಲಕೋಟ ಜಿಲ್ಲೆ
ಬಾಗಲಕೋಟ ತಾಲೂಕಿನ ಸೀತಿಮನಿಯಲ್ಲಿರುವ ಸೀತಾದೇವಿ ದೇವಸ್ಥಾನದ ಬಳಿ ಲವ, ಕುಶ ಎಂಬ ಹೊಂಡಗಳಿವೆ. ಸೀತಾದೇವಿ ಲವ, ಕುಶರಿಗೆ ಜನ್ಮ ನೀಡಿದ್ದು ಈ ಸ್ಥಳದಲ್ಲಿ ಎಂಬುದು ನಂಬಿಕೆ. ಈ ಹೊಂಡಗಳಲ್ಲಿ ಬೇಸಿಗೆಯಲ್ಲೂ ನೀರಿರುತ್ತದೆ. ಇಲ್ಲಿ ಬಾಣಂತಿಯರಿಗಾಗಿ ಕಷಾಯ ಸಿದ್ಧಪಡಿಸಲಾಗುವ ಕಲ್ಲುಗಳು ದೊರೆತಿವೆ. ಲವ ಹಾಗೂ ಕುಶ ಇಲ್ಲಿ ಬಿಲ್ಲು ವಿದ್ಯೆ ಕಲಿತರು ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ. ಸೀತಾದೇವಿ ದೇವಸ್ಥಾನ ಹಾಗೂ ಸೀತಾಚಲವಾಸ ವೆಂಕಟೇಶ್ವರ ದೇವಾಲಯಗಳಿಗೆ ಪ್ರತಿ ದಿನ ನೂರಾರು ಜನ ಭೇಟಿ ನೀಡುತ್ತಾರೆ. ಸರಕಾರದ ನೇತೃತ್ವದಲ್ಲಿ ಹೊಂಡಗಳನ್ನು ಸಂರಕ್ಷಿಸುವ ಕಾರ್ಯ ಕೈಗೊಳ್ಳಲಾಗಿದೆ. ಹೊಂಡಗಳ ಪಕ್ಕದಲ್ಲಿ ಎರಡು ಕೋಣೆಗಳಿದ್ದು ಸೀತಾದೇವಿಯ ಸಹಾಯಕರಿಗಾಗಿ ಈ ಕೋಣೆಗಳನ್ನು ನಿರ್ಮಿಸಲಾಗಿತ್ತು ಎನ್ನುವುದು ಜನರ ನಂಬಿಕೆಯಾಗಿದೆ.

ಕಣಿವೆ ರಾಮಲಿಂಗೇಶ್ವರ
ಕೊಡಗು ಜಿಲ್ಲೆ ಕುಶಾಲನಗರ ಸಮೀಪ ಕಾವೇರಿ ನದಿ ದಂಡೆಯಲ್ಲಿರುವ ರಾಮಸ್ವಾಮಿ ಕಣಿವೆಯ ಶ್ರೀರಾಮಲಿಂಗೇಶ್ವರ ಲಿಂಗವು ಸೀತಾಪಹರಣದ ಕಥೆ ಹೇಳುತ್ತದೆ. ಶ್ರೀರಾಮ, ಲಕ್ಷಣರು ಸೀತೆಯನ್ನು ಹುಡುಕುತ್ತ ದಕ್ಷಿಣಾಭಿಮುಖವಾಗಿ ಬರುವ ಸಂದರ್ಭ ಇಲ್ಲಿನ ಪ್ರಕತಿ ಸೌಂಧರ್ಯವನ್ನು ಕಂಡು ವಿಶ್ರಾಂತಿ ಪಡೆಯಲು ಮುಂದಾದರು. ಸರೋವರದ ದಡದಲ್ಲಿ ತಪಸ್ಸು ನಿರತರಾಗಿದ್ದ ವ್ಯಾಘ್ರ ಮಹರ್ಷಿಗಳು ತನ್ನ ಪೂಜಾ ಕೈಂಕರ್ಯಕ್ಕೆ ಅವಶ್ಯವಿರುವ ಶಿವಲಿಂಗವನ್ನು ತರುವಂತೆ ಶ್ರೀರಾಮನಿಗೆ ಆಜ್ಞೆ ಮಾಡುತ್ತಾರೆ. ಅಂತೆಯೇ ಶಿವಲಿಂಗ ತರಲೆಂದು ಕಾಶಿಗೆ ತೆರಳಿದ ಆಂಜನೇಯ ಹಿಂತಿರುಗುವುದು ತಡವಾಗುತ್ತದೆ. ಇದನ್ನರಿತ ರಾಮ ಸ್ಥಳದಲ್ಲಿಯೇ ಮರಳಿನಿಂದ ಶಿವಲಿಂಗವನ್ನು ತಯಾರಿಸಿ ಪೂಜೆ ಆರಂಭಿಸಿದ. ಅಷ್ಟರಲ್ಲಿ ಆಂಜನೇಯನೂ ಶಿವಲಿಂಗವನ್ನು ತಂದನು. ಆತನಿಗೆ ಬೇಸರ ಆಗಬಾರದೆಂಬ ಕಾರಣಕ್ಕೆ ಕಾಶಿಯಿಂದ ತಂದ ಶಿವಲಿಂಗವನ್ನು ಶ್ರೀರಾಮ ಸನ್ನಿಧಿಯ ಹಿಂಬದಿಯಲ್ಲಿ ಲಕ್ಷ್ಮಣನ ಮೂಲಕ ಪ್ರತಿಷ್ಠಾಪಿಸುತ್ತಾನೆ. ಈ ಕಾರಣಕ್ಕೆ ಇದೀಗ ಲಕ್ಷ್ಮಣೇಶ್ವರ ಕ್ಷೇತ್ರವಾಗಿದೆ ಎನ್ನುವುದು ಪ್ರತೀತಿ. ಈಗಲೂ,ಯುಗಾದಿ ಬಳಿಕ ನಡೆಯುವ ರಾಮಲಿಂಗೇಶ್ವರ ಬ್ರಹ್ಮ ರಥೋತ್ಸವ ಸಂದರ್ಭ ಅಂಚೆ ಮೂಲಕ ಕಾಶಿಯಿಂದ ಗಂಗಾಜಲ ಹೆಬ್ಬಾಲೆ ಅಂಚೆ ಕಛೇರಿಗೆ ಬರುತ್ತದೆ. ಅದನ್ನ್ನು ನಾದಸ್ವರ, ವಾದ್ಯಗೋಷ್ಠಿಗಳೊಂದಿಗೆ ಕಣಿವೆ ಗ್ರಾಮಸ್ಥರು ಗ್ರಾಮಕ್ಕೆ ತಂದು ರಾಮಲಿಂಗಕ್ಕೆ ಅಭಿಷೇಕ ಮಾಡಿದ ಬಳಿಕ ರಥೋತ್ಸವ ಆರಂಭವಾಗುತ್ತದೆ.

ಚುಂಚನಕಟ್ಟೆಯ ಕೋದಂಡರಾಮ
ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಪ್ರವಾಸಿ ತಾಣ ಚುಂಚನಕಟ್ಟೆಗೂ ಶ್ರೀರಾಮನು ತನ್ನ ವನವಾಸ ಕಾಲದಲ್ಲಿ ಪತ್ನಿ ಸೀತೆಯೊಂದಿಗೆ ಬಂದಿದ್ದನೆಂಬ ಐತಿಹ್ಯವಿದೆ. ಇಲ್ಲಿನ ಕೋದಂಡರಾಮ ದೇವಾಲಯವು ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಶ್ರೀರಾಮನ ಪರಮಭಕ್ತನಾಗಿದ್ದ ಚುಂಚ ಎಂಬ ಋಷಿ ಇಲ್ಲಿ ನೆಲೆಸಿ ಶ್ರೀರಾಮನ ನಿರೀಕ್ಷೆಯಲ್ಲಿದ್ದನೆಂದೂ, ಶ್ರೀರಾಮ ಅರಣ್ಯ ವಾಸದಲ್ಲಿದ್ದಾಗ ಸೀತಾ, ಲಕ್ಷ್ಮಣ ಸಮೇತನಾಗಿ ಇಲ್ಲಿಗೆ ಆಗಮಿಸಿ ಚುಂಚ ಮಹರ್ಷಿಗಳಿಗೆ ದರ್ಶನ ನೀಡಿದನೆಂದೂ ಹೀಗಾಗಿ ಈ ಕ್ಷೇತ್ರ ಚುಂಚನಕಟ್ಟೆ ಎಂದು ಹೆಸರಾಯಿತು ಎನ್ನುತ್ತದೆ ಸ್ಥಳ ಪುರಾಣ. ಈ ಪ್ರದೇಶದಲ್ಲಿ ಚುಂಚ,ಚುಂಚಿಯರೆಂಬ ರಾಕ್ಷಸರು ವಾಸವಾಗಿದ್ದರು. ಸುತ್ತಮುತ್ತಲ ನಿವಾಸಿಗಳಿಗೆ ಅವರು ವಿಪರೀತ ಕಾಟ ಕೊಡುತ್ತಿದ್ದರು. ಋಷಿ ಮುನಿಗಳಿಗೆ ಯಜ್ಞಯಾಗ ಮಾಡದಂತೆ ಅಡ್ಡಿಪಡಿಸುತ್ತಿದ್ದರು. ವನವಾಸ ಕಾಲದಲ್ಲಿ ರಾಮ ಇಲ್ಲಿಗೆ ಬಂದಾಗ ಋಷಿ ಮುನಿಗಳು, ಜನರು ರಾಕ್ಷಸರಿಂದ ಮುಕ್ತಿ ನೀಡುವಂತೆ ಕೋರಿದರು. ಆಗ ಶ್ರೀರಾಮ ಚುಂಚ ಚುಂಚಿಯರನ್ನು ಸಂಹರಿಸಿ, ಒಂದು ಕಟ್ಟೆಯ ಮೇಲೆ ಕುಳಿತನಂತೆ. ಹೀಗಾಗಿ ಈ ಪ್ರದೇಶಕ್ಕೆ ಚುಂಚನ ಕಟ್ಟೆ ಎಂದು ಹೆಸರು ಬಂದಿತು ಎನ್ನುತ್ತದೆ ಇನ್ನೊಂದು ಕತೆ. ದ್ರಾವಿಡ ಶೈಲಿಯ ದೇವಾಲಯಕ್ಕೆ ಹೋಗಲು 30 ಮೆಟ್ಟಿಲುಗಳನ್ನು ಏರಿದರೆ, ವಿಜಯನಗರ ಶೈಲಿಯ ರಾಜಗೋಪುರ ಸ್ವಾಗತಿಸುತ್ತದೆ. ಮೂರು ಅಂತಸ್ತಿನ ಗೋಪುರದಲ್ಲಿ ಜಯವಿಜಯರ ಹಾಗೂ ದೇವತೆಗಳ ಗಾರೆ ಶಿಲ್ಪಗಳಿವೆ. ಪ್ರವೇಶ ದ್ವಾರದ ಒಳ ಪ್ರವೇಶಿಸಿದರೆ ದೊಡ್ಡ ಪ್ರಾಕಾರವಿದೆ. ಒಳ ಭಿತ್ತಿಗಳಲ್ಲಿ ದಶಾವತಾರ ಚಿತ್ರಗಳಿವೆ. ದೇವಾಲಯದ ಸುತ್ತ ಹಲವು ಪುಟ್ಟ ಮಂಟಪಗಳಿವೆ. ದೇವಾಲಯ ಪ್ರಾಂಗಣದಲ್ಲಿ ಶ್ರೀರಾಮನ ವಿವಿಧ ಅವತಾರಗಳ ತೈಲ ವರ್ಣಚಿತ್ರಣಗಳಿವೆ. ಗೋಡೆಗಳ ಮೇಲೆ ರಾಮ ಸೀತೆ, ಲಕ್ಷ್ಮಣರ ಅನೇಕ ಬಗೆಯ ಚಿತ್ರಗಳಿವೆ.

‘ರಾಮತೀರ್ಥ’: ಇದಂ ಸ್ಥಳಂ ನರಾವಣಂ!
ರಾಮ-ರಾವಣರ ಯುದ್ಧದಲ್ಲಿ ಲಂಕೇಶ್ವರ ಅಸುನೀಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾವಣನ ಹತ್ಯೆಯ ಕಾರಣದಿಂದಾಗಿ ಬಂದ ಬ್ರಹ್ಮಹತ್ಯಾ ದೋಷ ಪರಿಹಾರಕ್ಕಾಗಿ ಶಿವಲಿಂಗ ಸ್ಥಾಪಿಸಿ, ಪೂಜೆ ಸಲ್ಲಿಸಿ ’ರಾವಣಾ’ ಎಂದು ಕರೆದಾಗ ಅದಕ್ಕೆ ಧ್ವನಿಯ ಪ್ರತಿಕ್ರಿಯೆ ಕೇಳಿ ಬರುತ್ತಿತ್ತು. ರಾಮ ಹೀಗೆ ಸ್ಥಾಪಿಸಿದ ಲಿಂಗಗಳನ್ನು ’ರಾಮಲಿಂಗ’ ಎಂದು ಗುರುತಿಸಲಾಗುತ್ತದೆ. ಹಾಗೆ ಪೂಜೆ ಸಲ್ಲಿಸುವ ಮುಂಚೆ ಸ್ನಾನ ಮಾಡಿದ ತೀರ್ಥಗಳನ್ನು ’ರಾಮತೀರ್ಥ’ ಎಂದು ಕರೆಯಲಾಗುತ್ತದೆ. ಒಂದೊಂದು ಶಿವಲಿಂಗದ ಪೂಜೆಯ ನಂತರವೂ ಪ್ರತಿಕ್ರಿಯೆಯ ಧ್ವನಿ ಕ್ಷೀಣವಾಗುತ್ತ ಹೋಗುತ್ತದೆ. ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ’ನರೋಣಾ’ ಗ್ರಾಮದಲ್ಲಿ ರಾಮನು ಶಿವಲಿಂಗ ಸ್ಥಾಪಿಸಿ ಪೂಜೆ ಸಲ್ಲಿಸಿದ ನಂತರ ಕೂಗಿದಾಗ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಂತೆ. ಅದೇ ’ನ ರಾವಣ’ ಎಂದಾಗಿ ಚಾಲ್ತಿಯಲ್ಲಿ ನರೋಣಾ ಎಂದಾಯಿತಂತೆ. ಲಂಕೆಯಿಂದ ಅಯೋಧ್ಯೆಗೆ ಮರಳುವ ಮಾರ್ಗ ಮಧ್ಯೆ ರಾಮ ಈ ಸ್ಥಳಕ್ಕೆ ಭೇಟಿದಾಗ ಲಿಂಗ ಸ್ಥಾಪಿಸಿದ ಪೂಜಿಸಿದ. ಆಗ ರಾವಣಹತ್ಯಾ (ಬ್ರಹ್ಮ ಹತ್ಯಾ) ದೋಷ ಕಳೆಯಿತಂತೆ. ಹೀಗಾಗಿ ಸ್ವಯಂ ಶ್ರೀರಾಮ ಈ ಕ್ಷೇತ್ರಕ್ಕೆ ‘ನರಾವಣ(ಇದಂ ಸ್ಥಳಂ ನರಾವಣಂ) ಎಂದು ನಾಮಕರಣ ಮಾಡಿದರು ಎನ್ನಲಾಗುತ್ತದೆ. ‘ಇಲ್ಲಿಂದ ಮುಂದೆ ರಾವಣನಿಲ್ಲ’ ಎಂಬುದು ಇದರ ಅರ್ಥ.

ಕಣ್ಣೀರಿಂದ ಹುಟ್ಟಿದ ಸೀತಾ ಬಾವಿ
ಮಂಗಳೂರಿನ ಕದ್ರಿ ದೇವಸ್ಥಾನದ ಮೇಲ್ಭಾಗದಲ್ಲಿರುವ ಕದಳೀವನದಲ್ಲಿ ‘ಸೀತಾ ಬಾವಿ’ ಇದೆ. ಚಿತ್ರಕೂಟದಿಂದ ಪುಷ್ಪಕ ವಿಮಾನದ ಮೂಲಕ ರಾವಣನು ಸೀತೆಯನ್ನು ಅಪಹರಿಸುವಾಗ ಕಣ್ಣೀರಿಟ್ಟ ಸೀತೆಯ ಅಶ್ರುಬಿಂದುವೊಂದು ಜಾರಿ ಬಿದ್ದು ಬಾವಿಯೊಂದು ನಿರ್ಮಾಣವಾಯಿತು ಎಂಬ ಐತಿಹ್ಯವಿದೆ. ಸದಾ ಕಾಲ ನೀರು ಇರುವ ಈ ಬಾವಿಗೆ ಭಕ್ತರು ಕಾಣಿಕೆ ಹಾಕುತ್ತಾರೆ.
ಸೀತೆಯ ಮೂಗುತಿ: ಕದ್ರಿ ದೇವಸ್ಥಾನದ ಎದುರು ಭಾಗದಲ್ಲಿರುವ ದೀಪ ಸ್ತಂಭದ ಪಂಚಾಂಗದಲ್ಲಿ ಸೀತೆ-ರಾಮ-ಲಕ್ಷ್ಮಣದ ಚಿತ್ರವಿದ್ದು, ಒಳಗೆ ಸೀತೆಯ ಮೂಗುತಿ ಇದೆ ಜನ ನಂಬಿದ್ದಾರೆ.

ಕಾರಿಂಜದಲ್ಲಿ ಸೀತೆ ಕಲ್ಲು
ಬಂಟ್ವಾಳ ತಾಲೂಕಿನ ವಗ್ಗದ ಬಳಿ ಇರುವ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿರುವ ಪ್ರಮಾಣದ ಕಲ್ಲಿಗೂ ಸೀತಾ ಪ್ರಮಾಣಕ್ಕೂ ಸಂಬಂಧವಿದೆ. ಎತ್ತರದ ಗುಡ್ಡದ ಮೇಲೆ ಇರುವ ಈಶ್ವರ ದೇವಸ್ಥಾನದ ಪಕ್ಕ ಎರಡು ಗುಡ್ಡಗಳ ನಡುವೆ ದೊಡ್ಡ ಗಾತ್ರದ ಎರಡು ಕಲ್ಲುಗಳಿವೆ. ಅಗ್ನಿಪರೀಕ್ಷೆಗೆ ಒಳಗಾದ ಬಳಿಕ ಸೀತೆಯನ್ನು ಇಲ್ಲಿಗೆ ಕರೆದುಕೊಂಡು ಬಂದ ರಾಮ ಈ ಕಲ್ಲುಗಳನ್ನು ಹಾರಿ ದಾಟುವಂತೆ ತಾಕೀತು ಮಾಡಿದನೆಂದು ಪ್ರತೀತಿ. ಈ ಕಲ್ಲುಗಳ ನಡುವೆ ಸುಮಾರು 10-12 ಅಡಿ ಅಂತರವಿದ್ದು, ಸ್ವಲ್ಪವೇ ತಪ್ಪಿದರೂ 100ಕ್ಕೂ ಅಡಿ ಆಳದ ಪ್ರಪಾತಕ್ಕೆ ಬೀಳಬೇಕು!

ಹಿರೇಮಗಳೂರು ಕೋದಂಡರಾಮ
ಶಿವಮೊಗ್ಗದ ಶಿವಪ್ಪನಾಯಕ ಅರಮನೆ ಪಕ್ಕದ ತುಂಗೆ ತಟದಲ್ಲಿರುವ ದೂರ್ವಾಸ ಕ್ಷೇತ್ರ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ಕ್ಷೇತ್ರ ತ್ರೇತಾಯುಗದಲ್ಲಿ ದೂರ್ವಾಸ ಮುನಿಗಳಿಗೆ ಆಂಜನೇಯ ದರ್ಶನ ಕೊಟ್ಟ ಐತಿಹ್ಯದ ಸ್ಥಳವಾಗಿದೆ. ದೂರ್ವಾಸ ಮಹರ್ಷಿಗಳಿಂದ ಹೆಬ್ಬಂಡೆಯ ಮೇಲೆ ಬಾಲಹನುಮನ ಯಂತ್ರ ಸ್ಥಾಪನೆ, ದ್ವಾಪರ ಯುಗದಲ್ಲಿ ಭೀಮ, ಜನಮೇಜಯ ರಾಜರಿಂದ ವಿಗ್ರಹ ಸ್ಥಾಪನೆಯಾಗಿದ್ದು, 75 ವರ್ಷಗಳ ಹಿಂದೆ ಶ್ರೀ ಸೀತಾರಾಮಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿಶ್ವದಲ್ಲಿಯೇ ಆಂಜನೇಯ ಮೊದಲು ಪೂಜೆಗೊಂಡ ಸ್ಥಳವೆಂಬ ಪ್ರಸಿದ್ಧಿ ಪಡೆದಿದೆ.

ದಕ್ಷಿಣ ಭಾರತದ ಮೊದಲ ಶ್ರೀರಾಮ ದೇಗುಲ
ಚಿಕ್ಕಮಗಳೂರು ನಗರದಿಂದ 2ಕಿ.ಮೀ ದೂರದಲ್ಲಿರುವ ಹಿರೇಮಗಳೂರು ದಕ್ಷಿಣ ಭಾರತದ ಪ್ರಪ್ರಥಮ ಶ್ರೀರಾಮ ದೇವಸ್ಥಾನ ಹೊಂದಿದ ಹೆಗ್ಗಳಿಕೆ ಹೊಂದಿದೆ. ದರ್ಪಿಷ್ಟ ಪರಶುರಾಮನನ್ನು ಮಣಿಸಿದ ಶ್ರೀರಾಮಚಂದ್ರ ಪರಶುರಾಮನ ಕೋರಿಕೆಯಂತೆ ಸೀತಾಕಲ್ಯಾಣದ ದರ್ಶನ ನೀಡಿದ ಸ್ಥಳವೇ ಇದು ಎಂಬ ಪೌರಾಣಿಕ ಹಿನ್ನೆಲೆ ಇದೆ. ಸೀತೆಯನ್ನು ಬಲಕ್ಕೆ ಹಾಗೂ ಲಕ್ಷ್ಮಣನನ್ನು ಎಡಕ್ಕೆ ನಿಲ್ಲಿಸಿ ಪರಶುರಾಮನಿಗೆ ಶ್ರೀರಾಮಚಂದ್ರನು ದರುಶನ ನೀಡಿದ ಎಂದು ಸ್ಥಳ ಪುರಾಣ ಹೇಳುತ್ತದೆ. ಇದೇ ಶೈಲಿಯ ವಿಗ್ರಹಗಳು ಇಲ್ಲಿವೆ. ಸಿದ್ಧ ಪುಷ್ಕರಣಿ, ಜನಮೇಜಯರಾಯ ಮಾಡಿದ ಸರ್ಪಯಾಗದ ಕುರುಹಿಗೆ ಯೂಪಸ್ತಂಭ, ಶಿವದೇವಾಲಯ, ಜಡೆಮುನಿ ಎಂಬ ವಿಚಿತ್ರ ವಿಗ್ರಹ, ಪರಶುರಾಮನ ಗುಡಿಗಳು ಇಲ್ಲಿವೆ. ಕನ್ನಡಪೂಜೆ ಈ ದೇವಾಲಯದ ವಿಶೇಷತೆ.

ಮಾಹಿತಿ: ಕೃಷ್ಣ ಎನ್.ಲಮಾಣಿ, ಹೊಸಪೇಟೆ, ರವಿ ಪಿ.ನಾಯಕ, ಗಂಗಾವತಿ, ಕಂಚೀಕೈ ವಿರೂಪಾಕ್ಷ ಹೆಗಡೆ, ಶಿರಸಿ, ಮೃತ್ಯುಂಜಯ ಯಲ್ಲಾಪುರಮಠ (ಚಿಕ್ಕೋಡಿ), ವೆಂಕಟೇಶ ದೇಶಪಾಂಡೆ (ಅಥಣಿ), ಮಲ್ಲಿಕಾರ್ಜುನರಡ್ಡಿ ಗೊಂದಿ, ರಾಮದುರ್ಗ, ರವಿರಾಜ್ ಆರ್. ಗಲಗಲಿ, ಆತೀಶ್ ಬಿ. ಕನ್ನಾಳೆ ಕಲಬುರಗಿ, ಸಿರಿವಂತೆ ಕೆ.ಚಂದ್ರಶೇಖರ್, ಶಿವಮೊಗ್ಗ, ಆರಗ ರವಿ, ಚಿಕ್ಕಮಗಳೂರು

ಭಾರತಕ್ಕೆ ಮತ್ತೊಂದು ವಿಶ್ವಸುಂದರಿ ಪಟ್ಟ.

ಹರಿಯಾಣ ಕುವರಿ ವಿಶ್ವಸುಂದರಿ.1

ಸನ್ಯಾ: ಚೀನಾದಲ್ಲಿ ನಡೆದ 2017ರ ವಿಶ್ವಸುಂದರಿ ಸ್ಪರ್ಧೆಯಲ್ಲಿ 108 ಸ್ಪರ್ಧಿಗಳನ್ನು ಹಿಂದಿಕ್ಕಿ ಹರಿಯಾಣದ ಮಾನುಷಿ ಛಿಲ್ಲರ್ ವಿಶ್ವಸುಂದರಿ-2017 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವೈದ್ಯ ದಂಪತಿಯ ಪುತ್ರಿಯಾದ 21 ವರ್ಷದ ಮಾನುಷಿ 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದರು.

2016ರ ವಿಶ್ವ ಸುಂದರಿ ಸ್ಟೇಫಾನಿ ಡೆಲ್ ವ್ಯಾಲೆ ಮಾನುಷಿಗೆ ವಿಶ್ವಸುಂದರಿ ಕಿರೀಟ ತೊಡಿಸಿದರು. 16 ವರ್ಷದ ಬಳಿಕ ವಿಶ್ವಸುಂದರಿ ಕಿರೀಟ ಧರಿಸಿದ 6ನೇ ಮಹಿಳೆಯಾಗಿ ಮಾನುಷಿ ಹೊಮ್ಮಿದ್ದಾರೆ. 2000ದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಈ ಕೀರ್ತಿಗೆ ಪಾತ್ರರಾಗಿದ್ದರು. ‘ಪ್ರಪಂಚದಲ್ಲಿ ಯಾರಿಗೆ ಹೆಚ್ಚು ಸಂಬಳ ನೀಡಬೇಕು?’ ಎಂದು ಸ್ಪರ್ಧೆಯಲ್ಲಿ ಕೇಳಲಾದ ಪ್ರಶ್ನೆಗೆ- ‘ತಾಯಿಗೆ’ ಎಂದ ಮಾನುಷಿ, ನಾವು ಪಡೆಯುವ ವೇತನಕ್ಕಿಂತ ಹೆಚ್ಚಾಗಿ ಪ್ರೀತಿ ಹಾಗೂ ಗೌರವ ಸಂಪಾದಿಸಬೇಕು. ಇದು ಕೇವಲ ತಾಯಿಯಿಂದ ಮಾತ್ರ ಸಾಧ್ಯ. ತಾಯಂದಿರು ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಹಾಗಾಗಿ ನಾವು ಅವರಿಗೆ ಹೆಚ್ಚು ಗೌರವ ನೀಡಬೇಕು’ ಎಂದು ಉತ್ತರಿಸಿದ್ದರು. ಮಾನುಷಿಯ ತಂದೆ ಡಾ. ಮಿತ್ರಾ ಬಸು ಛಿಲ್ಲರ್ ಹರಿಯಾಣದ ಡಿಆರ್​ಡಿಒನಲ್ಲಿ ಓರ್ವ ವಿಜ್ಞಾನಿಯಾಗಿದ್ದರೆ, ಅಮ್ಮ ಡಾ. ನೀಲಂ ಛಿಲ್ಲರ್ ಇನ್​ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಆಂಡ್ ಅಲೈಡ್ ಸೈನ್ಸಸ್​ನಲ್ಲಿನ ನ್ಯೂರೋಕೆಮಿಸ್ಟ್ರಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿದ್ದಾರೆ.

ನವದೆಹಲಿಯ ಸೇಂಟ್ ಥಾಮಸ್ ಶಾಲೆಯಲ್ಲಿ ಅಧ್ಯಯನ ಮಾಡಿದ ಮಾನುಷಿ, ಸೋನಿಪತ್​ನಲ್ಲಿರುವ ಭಗತ್ ಫೂಲ್ ಸಿಂಗ್ ಮಹಿಳಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಈಕೆ ಪರಿಣತ ಕೂಚಿಪುಡಿ ನೃತ್ಯಗಾತಿಯೂ ಹೌದು. ರಾಜಾ ಮತ್ತು ರಾಧಾ ರೆಡ್ಡಿ ಹಾಗೂ ಕೌಶಲ್ಯಾ ರೆಡ್ಡಿಯವರಂಥ ಪ್ರಸಿದ್ಧ ನೃತ್ಯ ಕಲಾವಿದರು ಮಾನುಷಿಗೆ ನೃತ್ಯಪಾಠ ಹೇಳಿದವರಲ್ಲಿ ಪ್ರಮುಖರು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲೂ ಸಕ್ರಿಯರಾಗಿದ್ದಾಕೆ.

2017ರ ಜೂನ್ 25ರಂದು ಫೆಮಿನಾ ಮಿಸ್ ಇಂಡಿಯಾ 2017 ಸ್ಪರ್ಧೆಯಲ್ಲಿ ಹರಿಯಾಣ ರಾಜ್ಯವನ್ನು ಮಾನುಷಿ ಪ್ರತಿನಿಧಿಸಿದ್ದರು. ಈ ಸ್ಪರ್ಧೆಯಲ್ಲಿ ಅವರಿಗೆ ‘ಮಿಸ್ ಫೋಟೋಜೆನಿಕ್’ ಕಿರೀಟ ದಕ್ಕಿದ್ದರ ಜತೆಗೆ ಸ್ಪರ್ಧೆಯಲ್ಲೂ ಗೆಲುವಿನ ನಗೆ ಬೀರಿದರು.

ಮಿಸ್​ವರ್ಲ್ಡ್ ಗೆದ್ದ ಭಾರತ ನಾರಿಯರು

1966 – ರೀತಾ ಫರಿಯಾ

1994 – ಐಶ್ವರ್ಯಾ ರೈ

1997 – ಡಯಾನಾ ಹೇಡನ್

1999 – ಯುಕ್ತಾ ಮುಖಿ

2000 – ಪ್ರಿಯಾಂಕಾ ಚೋಪ್ರಾ

2017 – ಮಾನುಷಿ ಛಿಲ್ಲರ್.

ಆನ್‌ಲೈನ್‌ ಅರ್ಜಿ: ಇರಲಿ ಎಚ್ಚರ

ಆನ್‌ಲೈನ್‌ ಅರ್ಜಿ: ಇರಲಿ ಎಚ್ಚರ

*ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಉದ್ಯೋಗಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
*ಇಂದು ಬಹುತೇಕ ಎಲ್ಲ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ನೇಮಕಾತಿ ನಡೆಸುವಾಗ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿಯೇ ಅರ್ಜಿ ಆಹ್ವಾನಿಸುತ್ತಿವೆ. ಹೀಗಾಗಿ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನವನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಇಲ್ಲದಿದ್ದರೆ, ಅರ್ಜಿ ಸಲ್ಲಿಸಲು ಪರದಾಡಬೇಕಾಗುತ್ತದೆ. ಅಲ್ಲದೆ, ಸರಿಯಾಗಿ ಸಲ್ಲಿಕೆಯಾಗದ ಅರ್ಜಿಗಳು ತಿರಸ್ಕೃತಗೊಳ್ಳುವ ಅಪಾಯವೂ ಇದೆ.
*ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಯಾವುದೇ ಕಂಪ್ಯೂಟರ್‌ನಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನೇಮಕಾತಿ ಅಧಿ ಸೂಚನೆಯ ಜತೆಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆಂಬ ಮಾಹಿತಿಯನ್ನು ಪ್ರಕಟಿಸಲಾಗಿರುತ್ತದೆ. ಅಭ್ಯರ್ಥಿಗಳು ಮೊದಲು ಇದನ್ನು ಓದಿಕೊಳ್ಳಬೇಕು. ಇದರಲ್ಲಿ ಅರ್ಜಿಯೊಂದಿಗೆ ಅಪ್‌ಲೋಡ್‌ ಮಾಡಬೇಕಾಗಿರುವ ದಾಖಲೆಗಳ ಬಗ್ಗೆಯೂ ಮಾಹಿತಿ ನೀಡಲಾಗಿರುತ್ತದೆ. ಇದನ್ನು ಸಿದ್ಧಪಡಿಸಿಟ್ಟುಕೊಂಡೇ ಅರ್ಜಿ ಸಲ್ಲಿಸಲು ಮುಂದಾಗುವುದು ಅವಶ್ಯ.
*ಇ-ಮೇಲ್‌ ವಿಳಾಸವಿರಲಿ
*ನೆನಪಿಡಿ, ಆನ್‌ಲೈನ್‌ನಲ್ಲಿ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲಾದರೂ ಅಭ್ಯರ್ಥಿಯು ಇ-ಮೇಲ್‌ ವಿಳಾಸ ಮತ್ತು ಸಂಪರ್ಕಕ್ಕೆ ಮೊಬೈಲ್‌ ಸಂಖ್ಯೆ ಹೊಂದಿರಬೇಕಾಗಿರುವುದು ಅವಶ್ಯಕ. ಇಂದು ನೇಮಕಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಂಚೆಯ ಮೂಲಕ ಕಳುಹಿಸಲಾಗುವುದಿಲ್ಲ. ಇ-ಮೇಲ್‌ ಮಾಡಲಾಗುತ್ತದೆ, ಇಲ್ಲವೇ ಮೊಬೈಲ್‌ಗೆ ಎಸ್‌ ಎಂಎಸ್‌ ಕಳುಹಿಸಲಾಗುತ್ತದೆ. ಸಂಪರ್ಕದ ಕೊರತೆಯಿಂದ ಅವಕಾಶ ತಪ್ಪದಂತಾಗಲು ಅಭ್ಯರ್ಥಿಗಳು ತಮ್ಮ ಹೆಸರನ್ನು ಹೊಂದಿರುವ ಇ-ಮೇಲ್‌ ವಿಳಾಸವನ್ನು ಸೃಷ್ಟಿಸಿಕೊಂಡು, ಅದನ್ನು ಕೆಲಸ ಸಿಗುವವರೆಗೂ ಬಳಸುವುದು ಒಳ್ಳೆಯದು.
*ಕೇವಲ ಇ-ಮೇಲ್‌ ವಿಳಾಸ ಸೃಷ್ಟಿಸಿಕೊಂಡರಷ್ಟೇ ಸಾಲದು. ಅದನ್ನು ಆಗಾಗ ನೋಡುತ್ತಿರಬೇಕು ಮತ್ತು ಅದು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಒಂದೇ ಮೊಬೈಲ್‌ ನಂಬರ್‌ ಅನ್ನು ಕೂಡ ಕಾಪಾಡಿಕೊಳ್ಳಬೇಕಾದ್ದು ಅವಶ್ಯ.
*ಕೆಲವೊಮ್ಮೆ ಅರ್ಜಿ ಸಲ್ಲಿಸುವಾಗ ಪರ್ಯಾಯ ಇ-ಮೇಲ್‌ ವಿಳಾಸವನ್ನು ನೀಡುವಂತೆಯೂ ಕೇಳಲಾಗಿರುತ್ತದೆ. ಹೀಗಾಗಿ ನೀವು ಪರ್ಯಾಯ ಇ-ಮೇಲ್‌ ವಿಳಾಸವನ್ನೂ ಸೃಷ್ಟಿ ಮಾಡಿಟ್ಟುಕೊಳ್ಳಿ. ಅದನ್ನೂ ಆಗಾಗ ನೋಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರ ಯೂಸರ್‌ ನೇಮ್‌ ಮತ್ತು ಪಾಸ್‌ ವರ್ಡ್‌ ಮರೆತು ಹೋಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅದನ್ನು ಒಂದೆಡೆ ಬರೆದಿಟ್ಟುಕೊಳ್ಳಿ.
*ಸಿದ್ಧತೆ ಮಾಡಿಕೊಳ್ಳಿ
*ಅರ್ಜಿ ಸಲ್ಲಿಸುವ ಮುನ್ನ ಪಾಸ್‌ಪೋರ್ಟ್‌ ಸೈಜಿನ ಫೋಟೋ ಮತ್ತು ಸಹಿಯನ್ನು ಸ್ಕ್ಯಾ‌ನ್‌ ಮಾಡಿ, ಜೆಪಿಜಿ ಇಮೇಜ್‌ ನಲ್ಲಿಟ್ಟುಕೊಳ್ಳಬೇಕು. ಬೇರೆ ಬೇರೆ ಅಧಿಸೂಚನೆಯಲ್ಲಿ ಬೇರೆ ಬೇರೆ ಗಾತ್ರದ ಇಮೇಜ್‌ ಅಪ್‌ಲೋಡ್‌ ಮಾಡುವಂತೆ ಕೇಳಲಾಗಿರುತ್ತದೆ. 4 ರಿಂದ 12 ಕಿಲೋಬೈಟ್‌ ಗಾತ್ರದ ಫೋಟೋ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನವರ ಅರ್ಜಿಗೆ ಅಗತ್ಯವಿದ್ದರೆ, ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗ, ಯುಜಿಸಿ, ಶಿಕ್ಷಕರ ನೇಮಕಾತಿ, ಬ್ಯಾಂಕಿಂಗ್‌ ಮಂಡಳಿಗಳಿಗೆ ಸಲ್ಲಿಸುವ ಅರ್ಜಿಗಳಿಗೆ 10 ರಿಂದ 250 ಕಿಲೋಬೈಟ್‌ ವರೆಗಿನ ಇಮೇಜ್‌ಗಳ ಅಗತ್ಯವಿದೆ. ಎಷ್ಟು ಕೆಬಿಯೊಳಗೆ ಇಮೇಜ್‌ ಇರಬೇಕೆಂಬುದನ್ನು ನೋಡಿಕೊಂಡು, ಸಿದ್ಧಪಡಿಸಿಟ್ಟುಕೊಂಡಿರಬೇಕು.
*ಅರ್ಜಿಯಲ್ಲಿ ಅಭ್ಯರ್ಥಿಗಳು ಐಡಿ ಪ್ರೂಫ್‌ನಲ್ಲಿ ಹಾಗೂ ಇತರೆ ದಾಖಲೆಗಳಲ್ಲಿ ಇರುವಂತೆಯೇ ಮೊದಲ, ಮಧ್ಯದ ಹಾಗೂ ಕೊನೆಯ ಹೆಸರನ್ನು ಭರ್ತಿಮಾಡಬೇಕು. ಏಕೆಂದರೆ ಮುಂದೆ ಅರ್ಜಿಯಲ್ಲಿನ ಹೆಸರು ದಾಖಲೆಗೆ ಹೊಂದಾಣಿಕೆಯಾಗದಿದ್ದರೆ ಅರ್ಜಿಯು ಅನರ್ಹಗೊಳ್ಳುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಕ್ರಿಯೆಟ್‌ ಮಾಡಿಕೊಂಡ ರಿಜಿಸ್ಟೇಷನ್‌ ನಂಬರ್‌ ಹಾಗೂ ಪಾಸ್‌ ವರ್ಡ್‌ ನೇಮಕಾತಿ ಮುಗಿಯುವವರೆಗೂ ಅವಶ್ಯವಾಗಿರುತ್ತದೆ. ಅದನ್ನು ಕೂಡಲೇ ಒಂದೆಡೆ ಬರೆದಿಟ್ಟುಕೊಳ್ಳಬೇಕು.
*ಶುಲ್ಕ ಪಾವತಿಸಲು ಸಿದ್ಧರಾಗಿರಿ
*ಅರ್ಜಿ ಸಲ್ಲಿಸುವಾಗಲೇ ಪರೀಕ್ಷಾ ಶುಲ್ಕವನ್ನೂ ಪಾವತಿಸಬೇಕಾಗಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಅದಕ್ಕೆ ಅನ್‌ಲೈನ್‌ ವ್ಯವಹಾರದ ಸೌಲಭ್ಯ ದೊರಕಿಸಿಕೊಂಡು ಪರೀಕ್ಷಾ ಶುಲ್ಕವನ್ನು ನೆಟ್‌ಬ್ಯಾಂಕಿಂಗ್‌ ಮೂಲಕ ಪಾವತಿ ಮಾಡುವುದು ಒಳ್ಳೆಯದು.
*ಡೆಬಿಟ್‌/ಕ್ರೆಡಿಟ್‌ ಕಾರ್ಡಿನ ಮೂಲಕವೂ ಆನ್‌ಲೈನ್‌ ಪಾವತಿಗೆ ಅವಕಾಶವಿದೆ. ಈ ಎರಡೂ ಸೌಲಭ್ಯ ಇಲ್ಲದವರು ಅರ್ಜಿ ಸಲ್ಲಿಸಿದ ನಂತರದಲ್ಲಿ ಜನರೇಟ್‌ ಆಗುವ ವಿವರಗಳುಳ್ಳ ಚಲನ್‌ ತೆಗೆದುಕೊಂಡು, ನಿಗದಿಪಡಿಸಿದ ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿ, ಅಲ್ಲಿ ನೀಡಲಾಗುವ ಜರ್ನಲ್‌ ನಂಬರ್‌/ ಕೋಡ್‌ ತೆಗೆದುಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಿದ ತಾಣಕ್ಕೆ ಭೇಟಿನೀಡಿ, ಪಾವತಿ ವಿವರಗಳನ್ನು ಕೋಡ್‌ ಸಹಿತ ತುಂಬಿಸಿ ದಾಖಲಿಸಬೇಕು.*
*ಈ ಶುಲ್ಕ ಪಾವತಿಯ ಪ್ರಕ್ರಿಯೆ ಸಂಪೂರ್ಣಗೊಂಡ ನಂತರದಲ್ಲಿ ಸ್ವೀಕೃತಿ ಪತ್ರ ಇಲ್ಲವೇ ಪ್ರವೇಶ ಪತ್ರ / ಅಡ್ಮಿಷನ್‌ ಟಿಕೆಟ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಮುದ್ರಿಸಿಕೊಳ್ಳಲು ಅನುಕೂಲವಾಗುವ ಸಂದೇಶ ಬರುತ್ತದೆ. ಹಾಗೆಯೇ ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಗ್ಗೆ ಕೂಡ ಸಂದೇಶ ಮೊಬೈಲ್‌ ಮತ್ತು ಇ-ಮೇಲ್‌ಗೆ ಬರುತ್ತದೆ. ಕೆಲವೊಮ್ಮೆ ಪರೀಕ್ಷೆಗೆ ಕೆಲವು ದಿನಗಳ ಮೊದಲು ವೆಬ್‌ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬೇಕೆಂಬ ಸಂದೇಶವೂ ದೊರೆಯುತ್ತದೆ.
*ಬಾಕ್ಸ್‌

*ಇತ್ತಗಮನಿಸಿ
* *ಪೊಲೀಸ್‌ ಇಲಾಖೆ ಸೇರಿದಂತೆ ರಾಜ್ಯ ಸರಕಾರದ ವಿವಿಧ ಇಲಾಖೆ, ಸಂಸ್ಥೆಗಳಿಗೆ ನೇಮಕಾತಿ ನಡೆಯುವಾಗ ಕನ್ನಡದಲ್ಲಿಯೇ ಅರ್ಜಿ ಭರ್ತಿ ಮಾಡಲು ಅವಕಾಶವಿರುತ್ತದೆ. ಇದಕ್ಕೆ ನೀವು ನುಡಿ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಂಡಿರಬೇಕಾಗುತ್ತದೆ.
* *ಸ್ವೀಕೃತಿ ಪತ್ರ, ಪ್ರವೇಶ ಪತ್ರ ಮತ್ತಿತರ ದಾಖಲೆಗಳನ್ನು ಪಿಡಿಎಫ್‌ ಫಾರ್ಮೆಟ್‌ನಲ್ಲಿ ಒದಗಿಸಲಾಗುತ್ತದೆ. ಅದಕ್ಕಾಗಿ ಕಂಪ್ಯೂಟರ್‌ ನಲ್ಲಿ ಪಿಡಿಎಫ್‌ ರೀಡರ್‌ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಿ.
* *ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಕೊನೆಯ ದಿನಾಂಕದವರೆಗೂ ಕಾಯುತ್ತಾ ಕೂರಬೇಡಿ. ಏಕೆಂದರೆ ಕೊನೆಯ ದಿನ ವೆಬ್‌ ಸ್ಲೋ ಆಗಿ, ನಿಮಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರಬಹುದು.
* *ತುರ್ತು ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಮೊಬೈಲ್‌ ಮೂಲಕವೇ ಮಾಹಿತಿ ನೀಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸದಾ ಚಾಲ್ತಿಯಲ್ಲಿರುವ ಮೊಬೈಲ್‌ ಸಂಖ್ಯೆಯನ್ನೇ ನಮೂದಿಸಿ.
* *ಇ-ಮೇಲ್‌ನ ಇನ್‌ಬಾಕ್ಸ್‌ನಲ್ಲಿ ಕೆಲವೊಮ್ಮೆ ಬಂದ ಮೇಲ್‌ಗಳು ಕಾಣಿಸದೇ ಗೊಂದಲವಾಗಬಹುದು. ಯಾವುದಕ್ಕೂ ಒಮ್ಮೆ ಸ್ಪ್ಯಾಮ್‌ ಮೆಸೇಜ್‌ಗಳನ್ನು ಪರೀಕ್ಷಿಸಿಕೊಂಡೇ ಮುಂದುವರೆಯಿರಿ.
* *ಬ್ರೌಸಿಂಗ್‌ ಸೆಂಟರ್‌ಗಳಲ್ಲಿ ನೀವು ಅರ್ಜಿ ಭರ್ತಿ ಮಾಡುತ್ತಿದ್ದರೆ, ನಿಮ್ಮ ಅರ್ಜಿ ಸಲ್ಲಿಕೆಯಾದ ಮೇಲೆ ಬೌಸರ್‌ನ ಹಿಸ್ಟರಿಗೆ ಹೋಗಿ ಅಲ್ಲಿರುವ ಮಾಹಿತಿಗಳನ್ನೆಲ್ಲಾ ಡಿಲಿಟ್‌ ಮಾಡಿ. ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸುವಾಗ ನಿಮ್ಮ ಪಾಸ್‌ವರ್ಡ್‌ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿ.
* *ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸುವ ಮೂಲಕ ವಂಚಿಸುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಈ ಬಗ್ಗೆ ಎಚ್ಚರವಿರಲಿ. ವೆಬ್‌ನ ಪೂರ್ವಪರಗಳನ್ನು ಪರೀಕ್ಷಿಸಿಕೊಂಡೇ ಅರ್ಜಿ ಸಲ್ಲಿಸಿ.

ಡಿ.ದೇವರಾಜ ಅರಸು

ಮೌನ ಕ್ರಾಂತಿಯ ಹರಿಕಾರ ಡಿ. ದೇವರಾಜ ಅರಸು.

 ಈ ರಾಷ್ಟ್ರ ಕಂಡ ಮಹಾನ್ ಮುತ್ಸದಿ ರಾಜಕಾರಣಿಗಳಲ್ಲಿ ಡಿ. ದೇವರಾಜ ಅರಸ್ ಅವರು ಅಗ್ರ ಗಣ್ಯರು. 1969 ರಿಂದ 1979 ದಶಕದಲ್ಲಿ “ಅರಸು ಯುಗ” ವೆಂದು ಹೇಳುವುದು ವಾಡಿಕೆಯಾಗಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗಿ ಅತೀ ದೀರ್ಘಕಾಲ ಆಡಳಿತ ನಡೆಸಿ, ಸಮಾಜದ ಹಿಂದುಳಿದ ವರ್ಗದವರು, ದಲಿತರು ಮತ್ತು ಬಡಜನರನ್ನು ಜಾಗೃತಗೊಳಿಸಿ, ಅವರ ಕನಸು ಮನಸಿನಲ್ಲೂ ನೆನಸಲಾಗದಿದ್ದ ಅಧಿಕಾರದ ಅರಮನೆಗೆ ಕರೆದುಕೊಂಡು ಹೋದ ಮುತ್ಸದ್ದಿ. ಹೀಗಾಗಿ ಅವರು ಈ ರಾಜ್ಯದ, ಈ ದೇಶದ ಹಿಂದುಳಿದ ವರ್ಗಗಳ, ದಲಿತರ, ಬಡವರ ಮನಸ್ಸಿನಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿರುತ್ತಾರೆ. ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಮಾಡಿ ತೋರಿಸಿದ ಅವರನ್ನು “ ಮೌನಕ್ರಾಂತಿಯ ಹರಿಕಾರ” ಎಂದು ಹೇಳುತ್ತಾರೆ.
ಬಡವರ ಬದುಕಿನಲ್ಲಿ ಹೊಸ ಭರವಸೆ ತಂದುಕೊಟ್ಟ ಡಿ. ದೇವರಾಜ ಅರಸು ಕರ್ನಾಟಕದಲ್ಲಿ ಆರ್ಥಿಕ, ಸಾಮಾಜಿಕ ಆಂದೋಲನದ ಮೂಲಕ ಹಲವಾರು ಹಲವಾರು ಜನಹಿತ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಯಶಸ್ಸು ಸಾಧಿಸಿದವರು. ಚಿಕ್ಕಂದಿನಿಂದಲೂ ಹೊಸದನ್ನು ಕಟ್ಟುವ ಧೋರಣೆ ಹೊಂದಿದ್ದ ದೇವರಾಜ ಅರಸರು ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಎಂಟು ವರ್ಷಗಳ ಕಾಲ ಕರ್ನಾಟಕದ ಮುಂಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ನವ ಸಮಾಜದ ನಿರ್ಮಾಣಕ್ಕಾಗಿ ಭದ್ರ ಬುನಾದಿಯನ್ನು ಹಾಕಿ ಕೊಟ್ಟು ಆಡಿದ್ದನ್ನು ಮಾಡಿ ತೋರಿಸಿದವರು.
ದೇವರಾಜ ಅರಸು ಅವರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ 20-08-1915ರಂದು ಜನಿಸಿದರು. ತಂದೆ ದೇವರಾಜು ಅರಸು ತಾಯಿ ದೇವಿರಮ್ಮಣಿ. ಇವರ ಮನೆತನ ಕ್ಷತ್ರಿಯ ವಂಶಕ್ಕೆ ಸೇರಿದ್ದಾದರೂ ಬದುಕಿಗಾಗಿ ಬೇಸಾಯವನ್ನು ಆಯ್ದುಕೊಂಡಿತ್ತು. ಒಂದೆಡೆ ಕೃಷಿ ಮಾಡುತ್ತಲೇ ಓದಿನಲ್ಲೂ ಮುಂದೆ ಬಂದ ದೇವರಾಜ ಅರಸು ಮೈಸೂರಿನಲ್ಲಿ ಇಂಟರ್‍ಮೀಡಿಯಟ್ ಓದಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಪಡೆದರು. ಪದವಿ ನಂತರ ಹುಟ್ಟೂರು ಕಲ್ಲಹಳ್ಳಿಗೆ ಬೇಸಾಯ ಮಾಡಲು ಹಿಂದಿರುಗಿದರು. ಗ್ರಾಮದ ನ್ಯಾಯ ಪಂಚಾಯ್ತಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅರಸರನ್ನು ರಾಜಕೀಯ ಅರಸಿ ಬಂತು. ಹೀಗಾಗಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಚುನಾಯಿತರಾದರು (1941). ಮೈಸೂರು ಅರಸರ ಸಂಬಂಧಿಗಳಾಗಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ (1942) ಸಕ್ರಿಯರಾಗಿದ್ದ ಅವರು ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ, ಕಾರಾಗೃಹವಾಸವನ್ನೂ ಅನುಭವಿಸಿದರು.

ಮಾನವತಾ ವಾದಿ :

ಅರಸು ಮಹಾ ಮಾನವತಾ ವಾದಿ, ಸಂಕಷ್ಟದಲ್ಲಿರುವವರನ್ನು ಕಂಡರೆ ಮರುಗುವ ಹೆಂಗರುಳು.  ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ನಿಸ್ಸಹಾಯಕರ ಬಗ್ಗೆ ಅನುಕಂಪ, ಬದುಕಿನ ಸಂಧ್ಯಾಕಾಲದಲ್ಲಿ ಅನಾದರಣೆಗೆ ತುತ್ತಾಗುವ ವೃದ್ದರಿಗೆ ನೆಮ್ಮದಿ ನೀಡಲು 40 ರೂ. ಗಳ ಮಾಸಾಶನ ನೀಡಿ “ವೃದ್ಧಾಪ್ಯ” ವೇತನ ಜಾರಿಗೆ ತಂದರು. ಅಂಗವಿಕಲರು ಮತ್ತು ಅನಾಥರಿಗೆ ಆರ್ಥಿಕ ನೆರವು ನೀಡಿದರು. ಅಕ್ಷರ ಕಲಿತು ಪದವಿ ಪಡೆದ ಲಕ್ಷಾಂತರ ನಿರುದ್ಯೋಗಿ ಪದವೀಧರರ ಬಾಳಿನ ನಿರಾಸೆಯನ್ನು ದೂಡಲು “ಸ್ಟೈಫೆಂಡರಿ” ಯೋಜನೆ ಜಾರಿಗೆ ತಂದರು. ಗ್ರಾಮಾಂತರ ಮಕ್ಕಳ ಆರೋಗ್ಯ ರಕ್ಷಣೆಗೆ “ಪೌಷ್ಟಿಕ ಆಹಾರ” ಯೋಜನೆ, ದುರ್ಬಲ ಮತ್ತು ಹಿಂದುಳಿದ ವರ್ಗಗಳಿಗೆ “ಉಚಿತ ನಿವೇಶನ, ಮತ್ತು ಕಡಿಮೆ ವೆಚ್ಚದ ಮನೆ ನಿರ್ಮಾಣ” ಯೋಜನೆ, “ಭಾಗ್ಯಜ್ಯೋತಿ” ಯೋಜನೆ ಮೂಲಕ ದುರ್ಬಲರ ಮನೆಗಳಿಗೆ ದೀಪ ಬೆಳಗಿಸಿದರು. ಬಡವರ ನೆರವಿಗಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಿದರು.

ಸಾಧನೆಗಳು :

1941 ರಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆ. 1952 ರಲ್ಲಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ. 1962 ರಲ್ಲಿ ಎಸ್. ನಿಜಲಿಂಗಪ್ಪನವರ ಮಂತ್ರಿಮಂಡಳದಲ್ಲಿ ಸಚಿವ ಸ್ಥಾನ. 1967ರ ಮಂತ್ರಿಮಂಡಳದಲ್ಲಿ ಸಚಿವ ಸ್ಥಾನ. ಪ್ರವಾಸ್ಯೋದ್ಯಮ, ಕಾರ್ಮಿಕ, ಸಾರಿಗೆ, ಪ್ರವಾಸೋದ್ಯಮ, ಪಶುಸಂಗೋಪನೆ, ವಾರ್ತಾ ಮತ್ತು ಪ್ರಚಾರ, ರೇಷ್ಮೆ, ಮೀನುಗಾರಿಕೆ ಖಾತೆಗಳನ್ನು ನಿರ್ವಸಿದರು. 20-03-1972 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ. 20-02-1978 ರಲ್ಲಿ 2ನೇ ಬಾರಿ ಮುಖ್ಯಮಂತ್ರಿ.

ಮೌನಕ್ರಾಂತಿಯ ಹರಿಕಾರ :

 ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆಯ ಬಯಕೆಯನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದವರು ಡಿ. ದೇವರಾಜ ಅರಸು ಅವರು. ಅವರು ಕನ್ನಡನಾಡಿನ ಜನಜೀವನದ ಮೇಲೆ ಬೀರಿದ ಮೇರು ಪ್ರಭಾವ ನಿರಂತರ ಸ್ಮರಣಯೋಗ್ಯ. ಎಂಟು ವರ್ಷಗಳ ಸುದೀರ್ಘಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಅರಸು ಇಟ್ಟ ದಿಟ್ಟ ಹೆಜ್ಜೆಗಳು ಭವಿಷ್ಯದ ಜನಾಂಗವನ್ನೇ ಬದಲಾಯಿಸಲು ನಾಂದಿಯಾದವು. ದುರ್ಬಲ ವರ್ಗದವರಲ್ಲಿ ಸ್ವಾಭಿಮಾನದ ಕಲ್ಪನೆ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದ ಅರಸು ಅವರು ಯುಗಪುರುಷ. ಈ ನಾಡಿನ ಮಹಾನ್ ಚೇತನಗಳಲ್ಲಿ ಅರಸರ ವ್ಯಕ್ತಿತ್ವ ವಿಶಿಷ್ಟವಾದವು. ಅವರಲ್ಲಿ ರೈತನ ಆತ್ಮಾಭಿಮಾನವಿತ್ತು, ಶತ್ರುವನ್ನು ಪ್ರೀತಿಸುವ ಮಾನವ ಪ್ರೇಮವಿತ್ತು, ಎಡತಾಕ್ಕಿದ್ದನ್ನು ಎದುರಿಸಿ ಮುಂಬರುವ ಗುಣವಿತ್ತು. ಅವರು ದುಡಿದು ತಿಂದವರು, ಕೊಟ್ಟು ಬಾಳಿದವರು, ಸಾಧಿಸಿ ಶ್ರೇಯಸ್ಸು ಗಳಿಸಿದವರು, ದನಿಯಿಲ್ಲದವರ ಬದುಕಿಗೆ ಬಾಯಾದವರು. ಸಮಾಜವನ್ನು ಏಕಾಂಗಿಯಾಗಿಯೇ ಎದುರಿಸಿ ಪರಿವರ್ತನೆಯ ಹರಿಕಾರರಾಗಿ ಯಶಸ್ಸು ಕಂಡವರು. ಅವರ ಬದುಕು ನಿರಂತರ ಹೋರಾಟ ಗಾಥೆ.

 ಗೇಣಿದಾರರ ವಿಮೋಚನೆ :

 ದೇವರಾಜ ಅರಸು ಸ್ವಾಭಿಮಾನಿ, ಆತ್ಮಗೌರವದಲ್ಲಿ ಅವರಿಗೆ ಅಚಲ ನಂಬಿಕೆ. ಇನ್ನೊಬ್ಬರ ಹಂಗಿನಲ್ಲಿ ಬಾಳದ ಆತ್ಮಾಭಿಮಾನಿ. ಈ ಗುಣ ಅವರು ಓದುತ್ತಿರುವಾಗಲೇ ಸುವ್ಯಕ್ತಗೊಂಡಿತ್ತು. ಮೈಸೂರಿನ ಅರಸು “ಬೋರ್ಡಿಂಗ್ ಶಾಲೆ” ಯಲ್ಲಿ ಓದುವುದನ್ನು ನಿರಾಕರಿಸಿ, ಸ್ವತಂತ್ರವಾಗಿಯೇ ಓದು ಮುಂದುವರಿಸಿದ ವ್ಯಕ್ತಿ. ಗೇಣಿಯನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು “ಭೂ ಸುಧಾರಣೆ”ಯನ್ನು ಅತ್ಯದ್ಭುತ ರೀತಿಯಲ್ಲಿ ಜಾರಿಗೆ ತಂದರು. ಅದುವರೆವಿಗೂ “ಉಳುವವನೇ ಹೊಲದೊಡೆಯ” ಎಂಬ ನೀತಿ ಬರೀ ಘೋಷಣೆಯಾಗಿತ್ತು. ಭೂ ಸುಧಾರಣೆಯನ್ನು ತ್ವರಿತವಾಗಿ ಜಾರಿಗೆ ತರಲು ನಿಶ್ಚಿತ ಅವಧಿಯಲ್ಲಿ ಉಳುವವನೇ ಹೊಲದೊಡೆಯನಾಗಲು ಪ್ರಗತಿಪರ ಶಾಸನವನ್ನು ತಂದರು. ನ್ಯಾಯಾಲಯ ಕಛೇರಿ ಕಾನೂನಿನ ಲೋಪದೋಷಗಳ ಸುಳಿಯಲ್ಲಿ ಸಿಕ್ಕ ಮುಗ್ದ ಹಳ್ಳಿಗರಿಗೆ ಜಯ ಅಸಾಧ್ಯ ಎಂದರಿತ ಅರಸು ಅವರು ಭೂ ಸುಧಾರಣಾ ಮಂಡಳಿಯನ್ನು ರಚಿಸಿದರು. ಭೂ ಸುಧಾರಣಾ ಮಂಡಳಿಗಳಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿರುವಂತೆ ಹಾಗೂ ಪ್ರತಿನಿಧಿಗಳು ನೀಡಿದ ತೀರ್ಪನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಿರುವ ಹಾಗೆ ಮಾಡಿದರು. ಶತಮಾನಗಳಿಂದ ಅಜ್ಞಾನ, ಗುಲಾಮಗಿರಿಯಲ್ಲಿ ಸೊರಗಿದ್ದ ಗೇಣಿದಾರರಿಗೆ ವಿಮೋಚನೆಯ ಮಾರ್ಗ ತೋರಿದರು.

ಸಾಮಾಜಿಕ ಪರಿವರ್ತನೆ :

ಅಸಮಾನತೆಯನ್ನು ತೊಡೆದು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದ ಅರಸರು ಜೀತ ವಿಮುಕ್ತಿಯನ್ನು ಜಾರಿಗೆ ತಂದರು. ಶೋಷಿತ ಜನಾಂಗದ ಬೆನ್ನೆಲುಬಿಗೆ ಕಸುಬನ್ನು ತುಂಬಿದರು.  ಮಲಹೊರುವಂತ ಅಮನುಷ ಪದ್ದತಿ ಇವರ ಆಡಳಿತ ಕಾಲದಲ್ಲಿ ಕೊನೆಗೊಂಡಿತು. ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿಪಡಿಸಿ ಆರ್ಥಿಕ ಬೆಂಬಲ ನೀಡಿದರು. ಸಾಲದ ಸಂಕೋಲೆಯಿಂದ ಪರಿತಪ್ಪಿಸುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಋಣಪರಿಹಾರ ತಂದು ಅವರ ಕಣ್ಣೀರು ಒರೆಸಿದರು. ಅರಸರು ಜಾರಿಗೆ ತಂದ ಭೂ ಸುಧಾರಣೆ, ಜೀತವಿಮುಕ್ತಿ ಮತ್ತು ಋಣಪರಿಹಾರ ಕಾರ್ಯಕ್ರಮಗಳು ವ್ಯವಸ್ಥೆಯ ವಿರುದ್ಧ ಸಾರಿದ ಸಮರ ದುರ್ಬಲ ವರ್ಗದಲ್ಲಿ ಸ್ವಾಭಿಮಾನದ ಕಲ್ಪನೆ ಸೃಷ್ಟಿಸಿ ಅವರ ಬದುಕಿಗೆ ಸ್ವಾವಲಂಬನೆಯ ನೆಲೆ ಒದಗಿಸಿದರು. ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಅನೇಕ ಮೂಲಭೂತ ಕಾರ್ಯಕ್ರಮಗಳನ್ನು ಕೈಗೊಂಡರು. ಶಿಷ್ಯವೇತನ, ಶುಲ್ಕ ರಿಯಾಯಿತಿ, ಉಚಿತ ಊಟ ವ್ಯವಸ್ಥೆ ಹೀಗೆ ಅವರು ಹಿಂದುಳಿದ ವರ್ಗದವರು ಸಾಂಸ್ಕøತಿಕವಾಗಿಯೂ ಮೇಲೆ ಬರಲು ಅನುಕೂಲ ಕಲ್ಪಿಸಿದರು. ಈ ವರ್ಗದ ಜನರು ಹೊಸ ಬದುಕು ಪಡೆದು ಹೊಸ ಚೈತನ್ಯದಿಂದ ಬದುಕಲು ಅರಸು ರೂವಾರಿಯಾದರು.

ಸತ್ವಶಾಲಿ ವ್ಯಕ್ತಿ :

ನಮ್ಮ ನಾಡಿನ ಇತಿಹಾಸದುದ್ದಕ್ಕೂ ಆಗಾಗ್ಗೆ ಸತ್ವಶಾಲಿ ವ್ಯಕ್ತಿಗಳ ಉಗಮವಾಗಿದೆ. ಸಂಪ್ರದಾಯದ ಬಿಗಿಮುಷ್ಟಿಯಲ್ಲಿ ಜಡ್ಡುಗಟ್ಟಿ ಜನ ವಿರೋಧಿಯಾಗಿ ರೂಪಗೊಂಡ ಸಮಾಜಕ್ಕೆ ಚಿಕಿತ್ಸೆ ನೀಡಿ, ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಿದರು. ಇವರು ದೀನದಲಿತರ ಒಡಲಲ್ಲಿ ಭರವಸೆಯ ವಿಶಿಷ್ಟ ಬಯಕೆಯನ್ನು ಸೃಷ್ಟಿಸುತ್ತಾರೆ. ಸಮಾಜದ ವಿಮೋಜನೆಗೆ ಹೋರಾಡುತ್ತಾರೆ. ಇಂತಹ ಚಿಂತನಶೀಲ ಮಾನವತಾ ವಾದಿಗಳ ಸಾಲಿನಲ್ಲಿ ಗೌತಮ ಬುದ್ಧ, ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಮುಂತಾದವರು ಬರುತ್ತಾರೆ. ಕನ್ನಡ ನಾಡಿನ ಜನಸಮೂಹದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಬಹುಸಂಖ್ಯಾತ ದುರ್ಬಲ ವರ್ಗಗಳ ಚೇತನವನ್ನು ಬುದ್ಧಿಪೂರ್ವಕವಾಗಿ ಹುಡಿಕಿ ತಗೆದು, ಅವರ ಬರಡು ಬದುಕಿಗೆ ಆಸರೆಯ ನೀರುಣಿಸಿದವರಾಗಿದ್ದಾರೆ ದಿವಂಗತ ದೇವರಾಜ ಅರಸು ಅವರು. ಈ ಮಹಾನ್ ಚೇತನಗಳ ಸಾಲಿನಲ್ಲಿ ಸೇರಿ ಹೋಗಿರುವುದು ಈ ನಾಡಿನ ಪುಣ್ಯ, ವಿಶೇಷ; ಕನ್ನಡ ಜನರು ಹೆಮ್ಮೆ ಪಡುವ ವಿಷಯ.

ಎಲ್ಲರಿಗೂ ಡಿ.ದೇವರಾಜ ಅರಸು 102 ನೇ ಜಯಂತಿಯ ಶುಭಾಶಯಗಳು.