ನೀಟ್ ಸೀಟು ಹಂಚಿಕೆ ಹೀಗಿರಲಿದೆ.

image

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಈ ಸಲದಿಂದಲೇ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ದೇಶದಾದ್ಯಂತ ಏಕರೂಪದ  ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಯುತ್ತದೆ. ಆದರೆ ಸೀಟು ಹಂಚಿಕೆ ರಾಜ್ಯಮಟ್ಟದಲ್ಲಿ ನಡೆಯಲಿದೆ.

ಎನ್‌ಇಇಟಿ ಪರೀಕ್ಷೆ ನಂತರ ರಾಷ್ಟ್ರ ಮತ್ತು ರಾಜ್ಯಮಟ್ಟದ ಎರಡು ಪ್ರತ್ಯೇಕ ರ‍್ಯಾಂಕ್‌ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅಖಿಲ ಭಾರತ ಕೋಟಾ ಸೀಟುಗಳ ಭರ್ತಿಗೆ ರಾಷ್ಟ್ರಮಟ್ಟದ ರ‍್ಯಾಂಕ್‌ ಹಾಗೂ ಆಯಾ ರಾಜ್ಯಗಳ ವ್ಯಾಪ್ತಿಯ ಕೋಟಾದ ಸೀಟುಗಳ ಭರ್ತಿಗೆ ರಾಜ್ಯಮಟ್ಟದ ರ‍್ಯಾಂಕ್‌ ಪಟ್ಟಿ ಪರಿಗಣಿಸಲಾಗುತ್ತದೆ.

ಸರ್ಕಾರಿ ಮತ್ತು ಇಎಸ್ಐ ವೈದ್ಯ ಕಾಲೇಜುಗಳಲ್ಲಿ ಲಭ್ಯವಿರುವ ಅಖಿಲ ಭಾರತ ಕೋಟಾ ಸೀಟುಗಳನ್ನು ರಾಷ್ಟ್ರಮಟ್ಟದ ರ‍್ಯಾಂಕ್‌ ಪಟ್ಟಿ ಮೂಲಕ ತುಂಬಲಾಗುತ್ತದೆ. ‘ಹೊರ ರಾಜ್ಯಗಳಿಗೆ ಹೋಗಿ ವ್ಯಾಸಂಗ ಮಾಡಲು ಇಷ್ಟವಿಲ್ಲದ ಅಭ್ಯರ್ಥಿಗಳು  ಅಖಿಲ ಭಾರತ ಕೋಟಾ ಮೂಲಕ ಲಭ್ಯವಾದ ಸೀಟನ್ನು ತಿರಸ್ಕರಿಸಬಹುದು. ಅಲ್ಲದೆ ಎರಡೂ ಕೋಟಾದಡಿ ಸೀಟು ಲಭ್ಯವಾದಾಗ ಆಯ್ಕೆಗೆ ಅವಕಾಶ ಇರುತ್ತದೆ. ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲ’ ಎನ್ನುತ್ತಾರೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು.

ಸೀಟು ಹಂಚಿಕೆ: ರಾಜ್ಯ ಸರ್ಕಾರದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿಯೇ ಸೀಟುಗಳ ಹಂಚಿಕೆ ಆಗಲಿದೆ. ಸರ್ಕಾರಿ ಕೋಟಾದ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡಲಾಗುತ್ತದೆ.

ಕಾಮೆಡ್-ಕೆ ಕೋಟಾ ಸೀಟುಗಳನ್ನು ಸರ್ಕಾರದ ಮೂಲಕ ಭರ್ತಿ ಮಾಡಬೇಕೇ ಅಥವಾ ಈಗಿರುವಂತೆ ಕಾಮೆಡ್-ಕೆ ಮೂಲಕವೇ ಭರ್ತಿ ಮಾಡಬೇಕೇ ಎಂಬ ಬಗ್ಗೆ ವೈದ್ಯಕೀಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವರು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಡೀಮ್ಡ್‌ ವಿಶ್ವವಿದ್ಯಾಲಯಗಳು, ಕಾಮೆಡ್-ಕೆ, ಕರ್ನಾಟಕ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳೂ  ಎನ್‌ಇಇಟಿ ವ್ಯಾಪ್ತಿಗೆ ಒಳಪಡಲಿವೆ. ಇದರಿಂದಾಗಿ ಈ ಸಂಸ್ಥೆಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ಇಲ್ಲ ಎಂದರು.

ಸ್ವಲ್ಪ ಭಿನ್ನ: ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮಕ್ಕೆ ಪೂರಕವಾಗಿ ಎನ್‌ಇಇಟಿ ಪಠ್ಯಕ್ರಮವನ್ನು 2013ರಲ್ಲಿ ನಿಗದಿಪಡಿಸಲಾಗಿತ್ತು (ಆದರೆ ಆಗ ಪರೀಕ್ಷೆ ನಡೆದಿರಲಿಲ್ಲ). ಅದು ಪಿಯುಸಿಗಿಂತ ಸ್ವಲ್ಪ ಭಿನ್ನವಾಗಿದ್ದರೂ ಕಠಿಣವಾಗಿರಲಿಲ್ಲ. ಈಗ ಅದೇ ಪಠ್ಯಕ್ರಮವನ್ನು ಅನುಸರಿಸುವ ಸಾಧ್ಯತೆ ಇದೆ.

‘ಮೊದಲ ಬಾರಿಗೆ ಎನ್‌ಇಇಟಿ ನಡೆಯುತ್ತಿದ್ದು, ಎಲ್ಲ ರಾಜ್ಯಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ವೈದ್ಯ ಕೋರ್ಸ್‌ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಪ್ರವೇಶ ಪರೀಕ್ಷೆಗಳನ್ನು ಬರೆಯುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಲು ಒಂದೇ ಪ್ರವೇಶ ಪರೀಕ್ಷೆ ನಡೆಸುವುದು ಸ್ವಾಗತಾರ್ಹ. ಆದರೆ, ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿರ್ಧಾರ ತೆಗೆದುಕೊಂಡಿದ್ದರೆ ವಿದ್ಯಾರ್ಥಿಗಳಿಗೆ ಸಿದ್ಧತೆ ನಡೆಸಲು ಕಾಲಾವಕಾಶ ಸಿಗುತ್ತಿತ್ತು’ ಎಂದು ಉಪನ್ಯಾಸಕ ಬಿ.ಶಿವಣ್ಣ ಅಭಿಪ್ರಾಯಪಟ್ಟರು.

ಸಿದ್ಧರಾಗಿಲ್ಲ: ‘ರಾಜ್ಯದ ವಿದ್ಯಾರ್ಥಿಗಳನ್ನು  ಎನ್‌ಇಇಟಿಗೆ ಸಜ್ಜುಗೊಳಿಸುವ ಉದ್ದೇಶದಿಂದ ಪಿಯುಸಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮವನ್ನು 2013ರಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್‌ ಎನ್‌ಇಇಟಿ ರದ್ದುಪಡಿಸಿದ ಕಾರಣ ಸಿಬಿಎಸ್‌ಇ ಪಠ್ಯಕ್ರಮ ಪೂರ್ಣವಾಗಿ ಜಾರಿಗೆ ಬರಲಿಲ್ಲ. ಈಗ ಏಕಾಏಕಿ ಎನ್‌ಇಇಟಿ ಜಾರಿಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ’ ಎಂದು ಮತ್ತೊಬ್ಬ ಉಪನ್ಯಾಸಕ ವಿ. ನಾರಾಯಣಸ್ವಾಮಿ ತಿಳಿಸಿದರು.

ಎಕ್ಸಲೆಂಟ್ ಎಕ್ಸೆಲ್.

ಎಕ್ಸಲೆಂಟ್ ಎಕ್ಸೆಲ್

ಈಗ ಬಹುತೇಕ ಉದ್ಯೋಗಕ್ಕೆ ಮೈಕ್ರೊಸಾಫ್ಟ್ ಎಕ್ಸೆಲ್ ಸ್ಕಿಲ್ ಬೇಕು. ನೀವು ಯಾವುದಾದರೂ ಕಂಪ್ಯೂಟರ್ ತರಬೇತಿ ಕೇಂದ್ರಗಳಲ್ಲಿ ಕಲಿತಿರುವ ಬೇಸಿಕ್ ಎಕ್ಸೆಲ್ ಕೆಲವೊಮ್ಮೆ ಸಾಕಾಗದು. ಅಲ್ಲಿ ತಿಳಿಸಿಕೊಡುವ ಸೂತ್ರಗಳು, ಫಾರ್ಮುಲಾಗಳು ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಲಾಗದು. ಎಕ್ಸೆಲ್‌ನಲ್ಲಿ ಅಡ್ವಾನ್ಸಡ್ ಆಗಿರುವ ಕೋರ್ಸ್‌ಗಳನ್ನು ಮಾಡಿದರೆ ನಿಮಗೆ ಸಿಗುವ ಉದ್ಯೋಗಾವಕಾಶ ಹೆಚ್ಚಬಹುದು. ಇದಕ್ಕೆ ಸಂಬಂಧಿಸಿದ ಸರ್ಟಿಫಿಕೇಷನ್ ಕೋರ್ಸ್‌ಗಳನ್ನು ನೀವು ಮಾಡಬಹುದು. ಇಂತಹ ಕೋರ್ಸ್‌ಗಳನ್ನು ಮಾಡುವಂತೆ ನಿಮ್ಮ ಮಕ್ಕಳಿಗೆ ಅಥವಾ ಪರಿಚಯಸ್ಥರಿಗೂ ಸೂಚಿಸಬಹುದು.

ಎಕ್ಸೆಲ್ ಫಾರ್ಮುಲಾಗಳು: ಎಕ್ಸೆಲ್ ಅನ್ನು ಸ್ಮಾರ್ಟ್ ಆಗಿ ಬಳಕೆ ಮಾಡಲು ಫಾರ್ಮುಲಾಗಳು ಬೇಕು. ಅದಿಲ್ಲದಿದ್ದರೆ ಎಕ್ಸೆಲ್ ಎನ್ನುವುದು ಕೇವಲ ಮಾಹಿತಿ ಸಂಗ್ರಹಗಾರವಾಗಿ ಬಿಡುತ್ತದೆ. ಫಾರ್ಮುಲಾಗಳನ್ನು ಬಳಸುವ ಮೂಲಕ ಮಾಹಿತಿಗಳನ್ನು ವಿಶ್ಲೇಷಿಸಬಹುದು. ಕಠಿಣ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಸರ್ಟಿಫಿಕೇಷನ್ ಕೋರ್ಸ್‌ಗಳಲ್ಲಿ ಎಕ್ಸೆಲ್ ಫಾರ್ಮುಲಾಗಳನ್ನು ಎಕ್ಸೆಲೆಂಟ್ ಆಗಿ ಕಲಿಯಲು ಸಹಕರಿಸುತ್ತವೆ. ಇಲ್ಲಿ ನೀವು ಖಖಿಐಊಖ, ಖಖಿಕ್ಕೃಈಖಿಇ, ್ಖಔಓಖಿ, ಐಘೆಈಉಗಿ + ಅಇಏ, ಫಾರ್ಮುಲಾ ಎರರ್‌ಗಳ ನಿರ್ವಹಣೆ, ಅರ‌್ರೆ ಫಾರ್ಮುಲಾ, ಸಕ್ಯುಲರ್ ರೆಫರೆನ್ಸ್, ಫಾರ್ಮುಲಾ ಅಡಿಟಿಂಗ್ ಇತ್ಯಾದಿಗಳ ಫಾರ್ಮುಲಾಗಳನ್ನು ಕಲಿಯಬಹುದು.

ಟೇಬಲ್ ಮತ್ತು ಫಾರ್ಮೆಟಿಂಗ್: ಎಕ್ಸೆಲ್‌ನ ಇನ್ನೊಂದು ಆಕರ್ಷಣೆ ಟೇಬಲ್‌ಗಳು ಮತ್ತು ಫಾರ್ಮೆಟಿಂಗ್. ಅಲ್ಲಿ ನೀಡುವ ಮಾಹಿತಿಯನ್ನು ಆಕರ್ಷಕವಾಗಿ ಪ್ರಸ್ತುತ ಪಡಿಸಲು ಈ ಟೂಲ್‌ಗಳು ನೆರವು ನೀಡುತ್ತವೆ. ಟೇಬಲ್‌ಗಳು, ಸೆಲ್ ಸ್ಟೈಲ್‌ಗಳು, ಫಾರ್ಮೆಟಿಂಗ್ ಆಯ್ಕೆಗಳನ್ನು ಅಡ್ವಾನ್ಸಡ್ ಎಕ್ಸೆಲ್ ಕೋರ್ಸ್‌ಗಳಲ್ಲಿ ಕಲಿಯಬಹುದು. ಟೇಬಲ್ ರಚಿಸಲು ಟಿಪ್ಸ್‌ಗಳು, ಫಾರ್ಮುಲಾಗಳನ್ನು ಕಲಿಯಲು ಎಕ್ಸೆಲ್ ಸರ್ಟಿಫಿಕೇಷನ್ ಕೋರ್ಸ್‌ಗಳು ಉತ್ತಮ ವೇದಿಕೆ.

ಕಂಡಿಷನಲ್ ಫಾರ್ಮೆಟಿಂಗ್: ಇದಕ್ಕೆ ಶಾರ್ಟ್ ಮತ್ತು ಸ್ವೀಟಾಗಿ ಸಿಎಫ್ ಎನ್ನುತ್ತಾರೆ. ಇದು ಎಕ್ಸೆಲ್‌ನ ಪವರ್‌ಫುಲ್ ಫೀಚರ್. ನಿರ್ಬಂಧಿತ ಫಾರ್ಮೆಟಿಂಗ್‌ನಲ್ಲಿ ನೀವು ನೀಡಿರುವ ಮಾಹಿತಿಯಲ್ಲಿ ಯಾವ ಭಾಗವು ಹೈಲೈಟ್ ಆಗಬೇಕೆಂದು ಸೂಚಿಸಲು ಸಾಧ್ಯವಿದೆ. ಅಂದರೆ ಟಾಪ್ 10 ಗ್ರಾಹಕರು, ಟಾಪ್ 10 ಶಾಲೆಗಳು, ಉನ್ನತ್ತ ಅಧಿಕಾರಿಗಳು, ಕೆಳ ಅಧಿಕಾರಿಗಳು, ಉತ್ತಮ ಕಾರ್ಯಕ್ಷಮತೆ ತೋರುವವರು, ಕಳಪೆ ಕಾರ್ಯಕ್ಷಮತೆಯ ಉದ್ಯೋಗಿಗಳು ಹೀಗೆ ಯಾವುದನ್ನು ಮಾತ್ರ ಹೈಲೈಟ್ ಮಾಡಬೇಕೋ ಅದನ್ನು ಮಾತ್ರವೇ ಹೈಲೈಟ್ ಮಾಡಲು ಸಾಧ್ಯವಿದೆ. ಸರಳವಾಗಿರುವ ಕಂಡಿಷನಲ್ ಫಾರ್ಮೆಟಿಂಗ್ ರೂಲ್ಸ್‌ನಲ್ಲಿ ಯಾರೂ ಬೇಕಾದರು ಸುಲಭವಾಗಿ ಸೆಟಪ್ ಮಾಡಬಹುದು.

ಅಡ್ವಾನ್ಸಡ್ ಚಾರ್ಟಿಂಗ್: ಸ್ಪ್ರೆಡ್‌ಶೀಟ್‌ನಲ್ಲಿ ಎಲ್ಲಾ ವಿಶ್ಲೇಷಣೆಗಳನ್ನು ಗುಡ್ಡೆ ಹಾಕಿ ಏನೂ ಪ್ರಯೋಜನವಿಲ್ಲ. ಚಾರ್ಟ್‌ಗಳನ್ನು ಬಳಕೆ ಮಾಡುವುದನ್ನು ಕಲಿತರೆ ಎಕ್ಸೆಲ್‌ನಲ್ಲಿ ಇನ್ನೂ ಅಂದವಾಗಿ ಮಾಹಿತಿಗಳನ್ನು ಪ್ರಸ್ತುತಪಡಿಸಬಹುದಾಗಿದೆ. ಇದಕ್ಕಾಗಿ ಸಂದರ್ಭಕ್ಕೆ ಸೂಕ್ತವಾಗುವ ಚಾರ್ಟ್‌ಗಳನ್ನು ಬಳಸಲು ತಿಳಿದಿರಬೇಕಾಗುತ್ತದೆ. ವಿವಿಧ ಚಾರ್ಟ್‌ಗಳನ್ನು ಒಂದಾಗಿಸುವ ಕಲೆ ಕಲಿತಿರಬೇಕಾಗುತ್ತದೆ. ಇನ್-ಸೆಲ್ ಚಾರ್ಟ್ಸ್, ಕಂಡಿಷನಲ್ ಫಾರ್ಮೆಟಿಂಗ್ ಚಾರ್ಟ್ಸ್ ಇತ್ಯಾದಿ ಫೀಚರ್‌ಗಳನ್ನು ಬಳಕೆ ಮಾಡಲು ಗೊತ್ತಿರಬೇಕಾಗುತ್ತದೆ. ಕ್ರಿಯಾತ್ಮಕ ಮತ್ತು ಹೊಂದಾಣಿಕೆಯ ಚಾರ್ಟ್‌ಗಳನ್ನೂ ಅಡ್ವಾನ್ಸಡ್ ಚಾರ್ಟಿಂಗ್ ಕಲಿತರೆ ಮಾಡಬಹುದು.

ಪಿವೊಟ್ ಟೇಬಲ್‌ಗಳು ಮತ್ತು ರಿಪೋರ್ಟಿಂಗ್: ಬೃಹತ್ ಗಾತ್ರದ ಮಾಹಿತಿಗಳನ್ನು ವಿಶ್ಲೇಷಿಸಲು ಮತ್ತು ಪ್ರಶ್ನೆಗಳಿಗೆ ಕೆಲವೇ ಕ್ಲಿಕ್‌ಗಳ ಮೂಲಕ ಉತ್ತರ ಕಂಡುಕೊಳ್ಳಲು ಪಿವೊಟ್ ಟೇಬಲ್‌ಗಳು ಮತ್ತು ಪಿವೊಟ್ ರಿಪೋರ್ಟಿಂಗ್ ಫೀಚರ್ ಸಹಕಾರಿ. ಸರ್ಟಿಫಿಕೇಷನ್ ಕೋರ್ಸ್‌ಗಳಲ್ಲಿ ಇಂತಹ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಇದರ ಮೂಲಕ ಗ್ರೂಪಿಂಗ್, ಸ್ಲೈಸರ್ಸ್‌, ಕ್ಯಾಲ್ಕುಲೇಷನ್ಸ್, ಸಮ್ಮರಿ ಇತ್ಯಾದಿಗಳನ್ನು ಮಾಡಬಹುದು.

ಎಕ್ಸೆಲ್ ಭಾಷೆ: ಎಕ್ಸೆಲ್‌ಗೆ ತನ್ನದೇ ಆದ ಭಾಷೆಯಿದೆ. ಅದರ ಹೆಸರು ವಿಬಿಎ. ನಾವು ನೀಡಿದ ಸೂಚನೆಗಳಿಗೆ ತಕ್ಕಂತೆ ಎಕ್ಸೆಲ್ ಕಾರ್ಯನಿರ್ವಹಿಸಲು ವಿಬಿಎ ನೆರವಾಗುತ್ತದೆ. ಇದು ಸರಳ ಮತ್ತು ಶಕ್ತಿಶಾಲಿ ಟೂಲ್. ನಿಮಗೆ ವಿಬಿಎ ಬಗ್ಗೆ ಹೆಚ್ಚು ಜ್ಞಾನವಿದ್ದರೆ ಹಲವು ಗಂಟೆಗಳಲ್ಲಿ ಮಾಡುವ ಕೆಲಸವನ್ನು ಕೆಲವೇ ಕೆಲವು ಗಂಟೆಗಳಲ್ಲಿ ಮಾಡಿ ಮುಗಿಸಬಹುದು. ಇದರಿಂದ ಹಣ ಮತ್ತು ಶ್ರಮದ ಉಳಿತಾಯವೂ ಆಗುತ್ತದೆ.

ಎಕ್ಸೆಲ್ ಕೌಶಲಗಳು: ಎಂಎಸ್ ಎಕ್ಸೆಲ್‌ನಲ್ಲಿರುವ ಫೀಚರ್‌ಗಳನ್ನು ಕಲಿತರೆ ಸಾಲದು. ಅದನ್ನು ಸರಳವಾಗಿ ಬಳಸುವ ವಿಧಾನವನ್ನು ಕಲಿಯಬೇಕು. ಕೀಬೋರ್ಡ್ ಶಾರ್ಟ್‌ಕಟ್‌ಗಳು, ಮೌಸ್ ಶಾರ್ಟ್‌ಕಟ್ ಇತ್ಯಾದಿಗಳನ್ನು ಕಲಿಯಬೇಕು. ಆಗ ಕೆಲಸ ಸುಲಲಿತವಾಗುತ್ತದೆ. ಸರ್ಟಿಫಿಕೇಷನ್ ಕೋರ್ಸ್‌ಗಳಿಂದ ಇವನ್ನೆಲ್ಲ ಕಲಿಯಬಹುದಾಗಿದೆ. ಇದರೊಂದಿಗೆ ಡೇಟಾ ಟೇಬಲ್‌ಗಳು, ಸಿಮ್ಯುಲೇಷನ್ಸ್, ಸಾಲ್ವರ್ ಇತ್ಯಾದಿ ಫೀಚರ್‌ಗಳನ್ನು ಬಳಸಲು ಕಲಿಯಬೇಕಾಗುತ್ತದೆ. ಎಕ್ಸೆಲ್ ಜೊತೆಗೆ ಕಾರ್ಯನಿರ್ವಹಿಸುವ ಎಂಎಸ್ ಆ್ಯಕ್ಸೆಸ್, ಔಟ್‌ಲುಕ್ ಅಥವಾ ಪವರ್‌ಪಾಯಿಂಟ್‌ಗಳನ್ನು ಸಮರ್ಥವಾಗಿ ಬಳಸಲು ಅಡ್ವಾನ್ಸಡ್ ಎಕ್ಸೆಲ್ ಕೋರ್ಸ್ ಕಲಿತವರಿಗೆ ಸಾಧ್ಯವಾಗುತ್ತದೆ.

ಇಲ್ಲಿ ಕೋರ್ಸ್ ಮಾಡಬಹುದು

* ಮೈಕ್ರೊಸಾಫ್ಟ್‌ನಿಂದ ಸರ್ಟಿಫಿಕೇಷನ್: ಮೈಕ್ರೋಸಾಫ್ಟ್ ಸಂಸ್ಥೆಯು ಎಂಎಸ್ ಎಕ್ಸೆಲ್ ಸಂಬಂಧಿಸಿದಂತೆ ಪರೀಕ್ಷೆ ನಡೆಸಿ ಸರ್ಟಿಫಿಕೇಟ್ ನೀಡುತ್ತದೆ. ಹೆಚ್ಚಿನ ಮಾಹಿತಿಗೆ ಲಿಂಕ್ ಪ್ರವೇಶಿಸಬಹುದು. ಹೆಚ್ಚಿನ ಮಾಹಿತಿಗೆ http://bit.ly/1mTjENP ಲಿಂಕ್‌ಗೆ ಭೇಟಿ ನೀಡಿ: ಅಥವಾ ಗೂಗಲ್‌ಗೆ ಹೋಗಿ ಮೈಕ್ರೊಸಾಫ್ಟ್ ಎಕ್ಸೆಲ್ ಸರ್ಟಿಫಿಕೇಷನ್ ಎಂದು ಸರ್ಚ್ ಮಾಡಿ.

* ಮಣಿಪಾಲ್ ಪ್ರೊಲರ್ನ್ ಸರ್ಟಿಫಿಕೇಷನ್: ಇಲ್ಲಿ ಎಂಎಸ್ ಎಕ್ಸೆಲ್‌ಗೆ ಸಂಬಂಧಿಸಿದ ಅಡ್ವಾನ್ಸಡ್ ಕೋರ್ಸ್ ಅನ್ನು ಆನ್‌ಲೈನ್ ಮೂಲಕ ನೀಡಲಾಗುತ್ತದೆ. ಈ ಕೋರ್ಸ್ ಕಲಿಯಲು 5,725 ರೂ. ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ:
http://www.manipalprolearn.com

* ಸಿಂಪ್ಲಿಲರ್ನ್‌ಡಾಟ್‌ಕಂನಲ್ಲೂ ಮೈಕ್ರೊಸಾಫ್ಟ್ ಎಕ್ಸೆಲ್ 2013 ಅಡ್ವಾನ್ಸಡ್ ಟ್ರೈನಿಂಗ್ ದೊರಕುತ್ತದೆ. ಈ ಆನ್‌ಲೈನ್ ಕೋರ್ಸಿಗೆ ಸುಮಾರು 3 ಸಾವಿರ ರೂ. ಶುಲ್ಕ ವಿಧಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ: http://bit. ly/1YQYiSq

ಉಳಿತಾಯಕ್ಕಿರಲಿ ಯೋಜನಾಬದ್ದತೆ.

image

ಸೇವಿಂಗ್ಸಲ್ಲಿ ನೀವೆಷ್ಟು ಸ್ಮಾರ್ಟ್?

ಮಲ್ಲಿಕಾರ್ಜುನ ತಳವಾರ
ಇಂದಿನ ಯುವಜನತೆ 21-22 ವರ್ಷಕ್ಕೇ ದುಡಿಯಲು ಪ್ರಾರಂಭಿಸುತ್ತಾರೆ ಎನ್ನುವುದೇನೋ ನಿಜ. ಆದರೆ ಉಳಿತಾಯದ ವಿಚಾರಕ್ಕೆ ಬಂದರೆ ಅವರ ಸಾಧನೆ ಶೂನ್ಯವೇ. ಇರುವಷ್ಟು ದಿನವನ್ನು ಮಜವಾಗಿ ಕಳೆಯಬೇಕು ಎನ್ನುವ ಸಿದ್ಧಾಂತದಿಂದಾಗಿ ಉದ್ಯೋಗಕ್ಕೆ ಸೇರಿ 4-6 ವರ್ಷಗಳು ಕಳೆದರೂ ಯಾವುದೇ ಸೇವಿಂಗ್ಸ್ ಮಾಡಿರುವುದಿಲ್ಲ. ಹೀಗಾಗಲು ಕಾರಣವೇನು?

ಆತ ಕೈತುಂಬ ಸಂಬಳ ತರುವ ಕೆಲಸದಲ್ಲಿರುವಾತ. ಮನೆಯಲ್ಲೂ ಹೇಳಿಕೊಳ್ಳುವಂಥ ತೊಂದರೆಗಳಿಲ್ಲ. ಆದರೆ ದುಡಿದ ಸಂಬಳ ಕೈಗೆ ಹತ್ತುತ್ತಿಲ್ಲ ಎನ್ನುವುದು ಆತನ ದೂರು. ಮನೆಯಲ್ಲಿನ ಎಲ್ಲ ಖರ್ಚುಗಳನ್ನು ಆತನೇನೂ ಸಂಭಾಳಿಸುವುದಿಲ್ಲ. ಆದರೆ ಎಷ್ಟು ದುಡಿದರೂ ಮೇಲೇರದ ಬ್ಯಾಂಕ್ ಬ್ಯಾಲೆನ್ಸು ತನ್ನ ತಪ್ಪಿನಿಂದಾಗಿಯೇ ನಿಂತಲ್ಲಿ ನಿಂತಿರಬಹುದು ಎಂಬುದನ್ನು ಆತ ಪರಾಮರ್ಶೆ ಮಾಡಿಕೊಳ್ಳಲೊಲ್ಲ. ಮನೆಯಲ್ಲಿ ವೃದ್ಧ ತಂದೆ-ತಾಯಿ ಆತನನ್ನು ಯಾವುದಕ್ಕೂ ಅವಲಂಬಿಸಿರಲಿಲ್ಲ. ಆದರೆ ಗೆಳೆಯರೊಂದಿಗೆ ಮೋಜು, ಮಸ್ತಿ ಮಾಡುತ್ತ ಹಣ ಉಡಾಯಿಸುತ್ತಿದ್ದ ಯುವಕನಿಗೆ ತನ್ನ ಭವಿಷ್ಯದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ‘ನಮಗೆ ಕೊಡುವುದು ಬೇಡ. ನಿನ್ನ ಭವಿಷ್ಯಕ್ಕೋಸ್ಕರವಾದರೂ ಉಳಿತಾಯ ಮಾಡು’ ಎಂದು ಅಪ್ಪ ಹೇಳುವುದು ಆತನ ಕಿವಿಯೊಳಗೆ ಹೋಗುತ್ತಿರಲಿಲ್ಲ. ಉಳಿತಾಯ ಯುವಜನರ ಪ್ರಿಯಾರಿಟಿಯಾಗಬೇಕು ಅನ್ನೋ ರಿಯಾಲಿಟಿ ಅರ್ಥ ಮಾಡಿಕೊಳ್ಳದಿರುವುದು ಆತನ ಆರ್ಥಿಕ ಹಿನ್ನಡೆಗೆ ಕಾರಣವಾಗಿತ್ತು.

ಆಕೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು ಆರು ವರ್ಷಗಳಾದವು. ಚೆಂದ ಓದಿದ್ದಕ್ಕೆ ಅದಕ್ಕಿಂತ ಚೆಂದದ ಕೆಲಸ ಸಿಕ್ಕಿತ್ತು. ಮನೆಯಿಂದ ಹೊರಡುವಾಗ ಅಪ್ಪ-ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ, ಪ್ರತಿ ತಿಂಗಳು ತಪ್ಪದೇ ದುಡ್ಡು ಕಳಿಸುವ ಭಾವುಕ ಮಾತನಾಡಿ ಬ್ಯಾಗು ಎತ್ತಿಕೊಂಡು ಬೆಂಗಳೂರಿನ ಬಸ್ಸು ಏರಿದ್ದಳು. ಆದರೆ ಇಲ್ಲಿ ಬಂದ ಮೇಲೆ ದುಡ್ಡಿನ ಮೇಲಿನ ನಿಯಂತ್ರಣದ ಹದ ತಪ್ಪತೊಡಗಿತ್ತು. ಮನೆಗೆ ಕಳುಹಿಸುವ ದುಡ್ಡಿನ ಪ್ರಮಾಣ ತಿಂಗಳಿಗೊಮ್ಮೆ ಕ್ಷೀಣಿಸುತ್ತ ಬರತೊಡಗಿತು. ವಾಸ್ತವ್ಯಕ್ಕೆ ರೂಂ, ಊಟ, ಉಪಾಹಾರ, ಇನ್ನಿತರ ವೆಚ್ಚದಿಂದಾಗಿ ಕೆಲವೊಮ್ಮೆ ಆದಾಯಕ್ಕಿಂತ ಖರ್ಚೇ ಹೆಚ್ಚು ತೋರುತ್ತಿತ್ತು. ಅದಕ್ಕಿಂತ ಮುಖ್ಯವಾಗಿ ಅನಗತ್ಯ ವಿಷಯಗಳಿಗಾಗಿ ಮಾಡುತ್ತಿದ್ದ ಖರ್ಚು ಆಕೆಯ ಗಮನಕ್ಕೆ ಬರುತ್ತಿರಲಿಲ್ಲ. ಅಷ್ಟಾದರೂ ಸಂಬಳ ಹೆಚ್ಚು ಮಾಡದ ಕಂಪನಿಯನ್ನೇ ಬೈದು ಖುಷಿ ಪಡುತ್ತಿದ್ದಳೇ ವಿನಾ ಖರ್ಚಿನ ಬಾಬತ್ತಿಗೆ ಕಡಿವಾಣ ಹಾಕಲು ಮನಸ್ಸು ಮಾಡುತ್ತಿರಲಿಲ್ಲ.

ದುಡ್ಡು ಎಂಬ ವಿಷಯದ ಕುರಿತು ಹುಟ್ಟಿಕೊಂಡಷ್ಟು ಕುತೂಹಲ, ಆಸೆ, ದುರಾಸೆ, ಮಮಕಾರ ಹಾಗೂ ಒಣ ಫಿಲಾಸಫಿ ಬೇರಿನ್ಯಾವ ವಿಷಯದ ಕುರಿತೂ ಹುಟ್ಟಿಕೊಂಡಿರಲಿಕ್ಕಿಲ್ಲ. ದುಡ್ಡು ಯಾರಿಗೆ ಬೇಡ? ಎಲ್ಲರಿಗೂ ಬೇಕು. ಕೂಡಿಡುವ ಹಣ ನಮ್ಮನ್ನು ಕಾಪಾಡುತ್ತದೆ ಎನ್ನುವ ಅನಾದಿಕಾಲದ ನಂಬಿಕೆಯಿಂದಾಗಿ ಹಾಗೂ ಕಾಲ ಎಷ್ಟೇ ವೇಗವಾಗಿ ಉರುಳಿದರೂ ಅದು ದುಡ್ಡಿನ ಸುತ್ತವೇ ಸುತ್ತುತ್ತ್ತೆ ಎಂಬ ಕಟುವಾಸ್ತವದಿಂದಾಗಿ ದುಡ್ಡಿನ ಬೆಲೆ ಕಡಿಮೆ ಆಗಿಲ್ಲ; ಬಹುಶಃ ಆಗಲಿಕ್ಕೂ ಇಲ್ಲ. ಸಣ್ಣ ಅವಶ್ಯಕತೆಗಳಿಂದ ಹಿಡಿದು ದೊಡ್ಡ ಆಕಾಂಕ್ಷೆ ಈಡೇರಿಸಿಕೊಳ್ಳಲು ದುಡ್ಡು ಬೇಕು. ಆದರೆ ದುಡ್ಡು ಬೇಕೆಂದಾಗ ಉದುರುವ ಮರದ ಎಲೆ ಅಲ್ಲ ಎಂಬ ಕಟುಸತ್ಯ ಗೊತ್ತಿದ್ದರೂ ಬಹುತೇಕರು ದುಡ್ಡಿನ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸುವುದಿಲ್ಲ. ಅದಕ್ಕೆ ನೂರು ಕಾರಣಗಳನ್ನು, ಕುಂಟುನೆಪಗಳನ್ನು ಕೊಡಬಹುದಾದರೂ ದುಡ್ಡು ಅಷ್ಟು ಸುಲಭಕ್ಕೆ ಪಳಗುವ ವಸ್ತುವಲ್ಲ. ಅದನ್ನು ಪಳಗಿಸುವಲ್ಲಿ ಇಂದಿನ ಯುವಜನತೆ ಹರಸಾಹಸ ಪಡುತ್ತಿದ್ದಾರೆ. ದುಡಿಯುವುದು, ಹಣ ಗಳಿಸುವುದಕ್ಕಿಂತ ಅದನ್ನು ಉಳಿಸುವುದೇ ಈಗ ದೊಡ್ಡ ಸವಾಲಾಗುತ್ತಿದೆ. ದುಡ್ಡು ಗಳಿಸುವುದು ಒಂದು ಕಲೆಯಾದರೆ, ಅದನ್ನು ಉಳಿಸಿಕೊಳ್ಳುವುದು ಇನ್ನೊಂದು ಕಲೆ. ಉಳಿಸಿದ ದುಡ್ಡನ್ನು ಸದುಪಯೋಗ ಮಾಡುವುದು ನಿಜಕ್ಕೂ ಚಾತುರ್ಯದ ಕೆಲಸ. ಹೀಗಾಗಿ ಉಳಿತಾಯ ಎಂಬುದು ಮೇಲೆ ತಿಳಿಸಿದ ಯುವಕ, ಯುವತಿ ಸೇರಿದಂತೆ ಇಂದಿನ ಬಹುತೇಕ ಯುವಜನರ ಬಹುದೊಡ್ಡ ಸಮಸ್ಯೆಗಳಲ್ಲೊಂದು.

ಬದಲಾದ ಜೀವನ ಶೈಲಿ

ಮನುಷ್ಯ ಇವತ್ತಿದ್ದಂತೆ ನಾಳೆ ಇರುವುದಿಲ್ಲ. ನಾಡಿದ್ದು ಮತ್ತೆ ಬೇರೆ ವೇಷ. ಬದಲಾವಣೆ ಜಗದ ನಿಯಮ ಅನ್ನೋದು ನಿಜ. ಆದರೆ ಕಾಲನ ಮಹಿಮೆಯಲ್ಲಿ ಜೇಬಿಗೆ ಬಿದ್ದ ತೂತು ದೊಡ್ಡದಿದೆ ಎಂಬುದು ಅರ್ಥವಾಗದಷ್ಟು ಕುರುಡರಾದರೆ ಜೀವನ ಕಷ್ಟ. ಮೊದಲಾದರೆ ಒಂದಿತ್ತು ಮತ್ತೊಂದಿಲ್ಲ ಎಂದರೂ ಜೀವನ ಹೇಗೋ ಸಾಗುತ್ತಿತ್ತು ಎಂದು ದೊಡ್ಡವರು ಹೇಳುತ್ತಿರುತ್ತಾರೆ. ಆದರೆ ಇಂದಿನ ಯುವಕರ ಜೀವನ ಶೈಲಿ ಬಹಳ ಬದಲಾಗಿದೆ. ಅದಕ್ಕೆ ತಕ್ಕಂತೆ ಖರ್ಚು ಕೂಡ ಹೆಚ್ಚಾಗಿದೆ. ಅಗತ್ಯಕ್ಕಿಂತ ಅನಗತ್ಯವಾದವುಗಳೇ ನಮ್ಮ ಜೇಬಿಗೆ ಭಾರವಾಗುತ್ತಿವೆ. ನಮಗದು ಗೊತ್ತಾದರೂ ಏನೂ ಮಾಡಲಾಗದ ಸ್ಥಿತಿಯನ್ನು ಈಗಾಗಲೇ ತಲುಪಿಯಾಗಿದೆ. ಖರ್ಚಿನ ಕುದುರೆ ಓಡುವುದನ್ನು ತಡೆಯಲಾಗುತ್ತಿಲ್ಲ. ಒಂದೇ ಜೊತೆ ಪಾದರಕ್ಷೆ ಇಟ್ಟುಕೊಂಡರೂ ಬದುಕು ನಡೆಯುತ್ತದೆ ನಿಜ. ಆದರೆ ಖರೀದಿಸುವ ಖಯಾಲಿಯವರಿಗೆ ಬಗೆಬಗೆಯ ಪಾದರಕ್ಷೆಗಳು ಕಣ್ಣುಕುಕ್ಕುತ್ತವೆ. ಹಾಗಾಗಿ ದುಡ್ಡಿನ ನಿರ್ವಹಣೆ ಸಲೀಸಾಗುತ್ತಿಲ್ಲ.

ಕೊಳ್ಳುಬಾಕತನ: ಯುವಜನರ ಖರೀದಿಸುವ ಹುಚ್ಚು ದಿನೇದಿನೆ ಏರತೊಡಗಿದೆ. ಕೈಯಲ್ಲಿ ಒಂದೇ ಮೊಬೈಲಿದ್ದರೆ ಸಾಲುತ್ತಿಲ್ಲ; ಎರಡು-ಮೂರಾದರೂ ಬೇಕು. ಹಾಕುವ ಬಟ್ಟೆ, ತೊಡುವ ಪಾದರಕ್ಷೆ ಎಲ್ಲವೂ ಅಗತ್ಯಕ್ಕಿಂತ ಹೆಚ್ಚಾಗಿಯೇ ಖರೀದಿಯಾಗುತ್ತಿವೆ. ಯಾವಾಗ ಅಗತ್ಯ ವಸ್ತುಗಳ ಖರೀದಿಗಿಂತ, ‘ಅದಿಲ್ಲದಿದ್ದರೂ ನಡೆಯುತ್ತಿತ್ತು’ ಎಂಬಂಥ ವಸ್ತುಗಳನ್ನು ಹೆಚ್ಚಾಗಿ ಖರೀದಿಸುತ್ತೇವೋ ಆಗಲೇ ಸಮಸ್ಯೆ ಶುರುವಾಗಿಬಿಡುತ್ತದೆ. ಇನ್ನು ತಿನ್ನುವ ವಿಷಯದಲ್ಲೂ ಇತ್ತೀಚೆಗೆ ಹಣ ನೀರಿನಂತೆ ಖರ್ಚಾಗುತ್ತಿದೆ. ಕುಗ್ರಾಮದಲ್ಲಿ ಬೆಳೆದು, ಜೋಳದ ರೊಟ್ಟಿ, ಹಿಡಿಮುದ್ದೆ, ಒಂದು ಕಬ್ಬು, ತಟ್ಟೆ ತುಂಬ ಅನ್ನ ತಿಂದು ಬೆಳೆದವರೂ ಇಂದು ಪಿಜ್ಜಾ, ಬರ್ಗರ್ ಸಖ್ಯ ಬೆಳೆಸತೊಡಗಿದ್ದಾರೆ. ಅದು ಆರೋಗ್ಯವೋ, ಅನಾರೋಗ್ಯಕ್ಕೆ ದಾರಿಯೋ ಎಂಬುದು ಬೇರೆ ಮಾತು. ಆದರೆ ಬೆಲೆಯ ದೃಷ್ಟಿಯಿಂದ ನೋಡಿದಾಗ, ಮತ್ತದು ಗೀಳಾದಾಗ ಖರ್ಚು ಹೆಚ್ಚಾಗುವುದು ಮಾತ್ರ ಖಂಡಿತ.

ಜವಾಬ್ದಾರಿಗಳಿಂದ ವಿಮುಖತೆ: ಯುವಜನರು ದುಡ್ಡು ಉಳಿಸುವಲ್ಲಿ ಸೋಲಲು ಮತ್ತೊಂದು ಕಾರಣ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು. ಆರ್ಥಿಕ ವಿಷಯಗಳಲ್ಲಿ ನಿಖರ ಜವಾಬ್ದಾರಿಗಳಿಲ್ಲದೇ ಹೋದರೆ ಯಡವಟ್ಟು ಆರಂಭವಾಗೋದು ದಿಟ. ಏಕೆಂದರೆ ಜವಾಬ್ದಾರಿಗೂ ಅರ್ಥಿಕ ಶಿಸ್ತಿಗೂ ಅನೂಹ್ಯ ಸಂಬಂಧವಿದೆ. ತಮಗಿರುವ ಸಾಂಸಾರಿಕ, ಕೌಟುಂಬಿಕ ಜವಾಬ್ದಾರಿಗಳನ್ನು ಶಿಸ್ತಿನಿಂದ ನಿಭಾಯಿಸಲು ಕಲಿತ ಮನುಷ್ಯ ದುಡ್ಡನ್ನೂ ಅಷ್ಟೇ ಚೆಂದವಾಗಿ ನಿರ್ವಹಿಸುತ್ತಾನೆ. ಹಾಗಾಗಿ ಮನೆಯ ಜವಾಬ್ದಾರಿಯೊಂದಿಗೆ, ದುಡ್ಡನ್ನೂ ಅಷ್ಟೇ ನೀಟಾಗಿ ಕ್ಯಾರಿ ಮಾಡುವ ಮೂಲಕ ಆರ್ಥಿಕ ಲೆಕ್ಕ ಚುಕ್ತಾ ಆಗಿರುವಂತೆ ನೋಡಿಕೊಳ್ಳುವುದೊಳಿತು.

ವ್ಯಸನಗಳ ಹಿಂದಿದೆ ದುಡ್ಡಿನ ಮರ್ಮ!: ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳ ಹಿಂದೆ ದುಡ್ಡಿನ ಮಸಲತ್ತು ಇರುವುದು ಬಹಳ ಸಲ ಸಾಬೀತಾಗಿದೆ. ಕೆಲ ಪ್ರಕರಣಗಳಲ್ಲಿ ಪೊಲೀಸರೇ ಬೆಚ್ಚಿ ಬೀಳುವಂತಹ ಸತ್ಯಗಳನ್ನು ಆರೋಪಿಗಳು ಬಾಯಿ ಬಿಟ್ಟಿರುತ್ತಾರೆ. ಕಳವು ಪ್ರಕರಣದ ಆರೋಪಿಗಳನ್ನು ಕೇಳಿದರೆ ‘ವ್ಯಸನ ಪೂರೈಸಿಕೊಳ್ಳಲು’ ಎಂಬುದೇ ಅವರ ಉತ್ತರ. ಏಕೆಂದರೆ ದುಡ್ಡಿಲ್ಲದೇ ಹೋದರೆ ಯಾವ ಚಟವನ್ನು ಮಾಡಲಾಗುವುದಿಲ್ಲ. ದುಡ್ಡಿಲ್ಲದೇ ಹೋದಾಗ ಚಟಕ್ಕೆ ಅಂಟಿಕೊಂಡ ಮನುಷ್ಯ ಅದನ್ನು ಪೂರೈಸಿಕೊಳ್ಳಲು ಅಡ್ಡದಾರಿ ಹಿಡಿದು ಬಿಡುತ್ತಾನೆ. ದುಬಾರಿ ಮೊತ್ತ ನಿರೀಕ್ಷಿಸುವ ವ್ಯಸನಗಳಿಂದಾಗಿ ಕೆಲ ಯುವಜನರು ಏನೇನೋ ಮಾಡುತ್ತಿರುತ್ತಾರೆ. ಇನ್ನು ದುಡಿಯುವ ಕೈಗಳು ವ್ಯಸನದ ಹಿಂದೆ ಓಡತೊಡಗಿದರೆ ನಿಲ್ಲದ ಕಂಪನ ಆರಂಭವಾಗೋದು ಖಾತರಿ. ಸಣ್ಣ ಸಂಬಳವಿದ್ದ ವ್ಯಕ್ತಿ ಚಟಕ್ಕೆ ದಾಸನಾದರೆ ಆತನ ಆರ್ಥಿಕ ಸ್ಥಿತಿ ಯಾವತ್ತಿಗೂ ಸುಧಾರಿಸದು.

ಏನೇ ಆದರೂ ಹಣದ ಕುರಿತು ಹಾಗೂ ಅದರ ಉಳಿತಾಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಮನುಷ್ಯನ ಆಸೆ ಆಕಾಂಕ್ಷೆಗಳು ಮೊದಲೇ ಅಪರಿಮಿತವಾಗಿದ್ದು, ಅವುಗಳ ಪೂರೈಕೆಗೆ ಹಣ ಬೇಕು. ಒಂದು ವೇಳೆ ದುಡ್ಡು ಕೂಡಿಡಲು ನಾವೂ ಸೋತಿದ್ದೇ ಆದಲ್ಲಿ ಹಣದ ಕಿಮ್ಮತ್ತು ನಮಗೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಅರ್ಥವಾಗುತ್ತದೆ. ನಮ್ಮವರು ಅಂದುಕೊಂಡವರು ನಮಗೆ ಸಹಾಯ ಮಾಡಬಹುದು; ಮಾಡದಿರಬಹುದು. ಆದರೆ ನಮ್ಮ ದುಡ್ಡು ನಮಗೆ ಖಂಡಿತ ಸಹಾಯ ಮಾಡುತ್ತದೆ. ಸುಮ್ಮನೇ ದುಡ್ಡಿನ ಪ್ರಾಮುಖ್ಯತೆ ಬಗ್ಗೆ ಸಲ್ಲದ ಮಾತನಾಡುತ್ತ, ಅದನ್ನು ತೆಗಳುತ್ತ ಇರುವುದರಲ್ಲಿ ಅರ್ಥವಿಲ್ಲ. ಎಲ್ಲ ಸಂಬಂಧಗಳನ್ನು ದುಡ್ಡಿನಿಂದಲೇ ಬಂಧಿಸಿಡಲು ಸಾಧ್ಯವಿಲ್ಲ ಎನ್ನುವುದೋ ಎಷ್ಟು ಸತ್ಯವೋ, ದುಡ್ಡಿಲ್ಲದೇ ಹೋದರೆ ಎಲ್ಲ ಸಂಬಂಧಗಳು ಸ್ಥಿರವಾಗಿರುತ್ತವೆ ಎಂದು ಹೇಳಲಾಗುವುದಿಲ್ಲ ಎಂಬುದು ಅಷ್ಟೇ ಸತ್ಯ. ಹಾಗಾಗಿ ನಮ್ಮ ಬೆವರಿನ ಫಲದಿಂದ ಕೈಗೊದಗಿದ ಹಣದಲ್ಲಿ ಒಂದಿಷ್ಟು ಕೂಡಿಡಲು ಮನಸ್ಸು ಮಾಡೋಣ.

ಹಣ ಉಳಿಸುವ ಮಾರ್ಗ

ಹಣ ಉಳಿಸುವುದು ನಿಜಕ್ಕೂ ಸವಾಲಿನ ಕೆಲಸವೇ. ಆದರೆ ಒಂದು ಶಿಸ್ತು ಹಾಗೂ ನಿಖರ ಲೆಕ್ಕಾಚಾರದ ಮೂಲಕ ದುಡ್ಡು ಉಳಿಸುವುದನ್ನು ರೂಢಿಸಿಕೊಳ್ಳಬಹುದು. ಅದಕ್ಕೊಂದಿಷ್ಟು ಸುಲಭ ಉಪಾಯಗಳು ಇಲ್ಲಿವೆ.

ಮೊದಲು ದುಡ್ಡನ್ನು ಗೌರವಿಸುವುದನ್ನು ಕಲಿಯಬೇಕು. ದುಡ್ಡಿನ ಬಗ್ಗೆ ನಮಗೆ ಗೌರವ ಇಲ್ಲದೇಹೋದರೆ ಹಣ ನಮ್ಮ ಬಳಿ ನಿಲ್ಲುವುದಿಲ್ಲ.
ಸಂಬಂಧಗಳಿಗಿಂತ ದುಡ್ಡು ದೊಡ್ಡದಲ್ಲ ಎಂಬುದು ನಿಜವೇ ಆದರೂ ಕೆಲವೊಮ್ಮೆ ದುಡ್ಡಿನಿಂದಲೇ ಸಂಬಂಧಗಳು ಗಟ್ಟಿಯಾಗುವುದರಿಂದ ಅವುಗಳನ್ನು ಉಳಿಸಿಕೊಳ್ಳಲಿಕ್ಕಾದರೂ ನಮ್ಮ ಬಳಿ ದುಡ್ಡಿರಬೇಕು.
ದೊಡ್ಡ ಪ್ರಮಾಣದಲ್ಲಿ ಆಗದೇ ಇದ್ದರೂ ಸಣ್ಣ ಸಣ್ಣ ಉಳಿತಾಯದ ಹಾದಿಯನ್ನು ಕಂಡುಕೊಳ್ಳಬೇಕು. ಅಲ್ಪಾವಧಿಯ ಠೇವಣಿಗಳಲ್ಲಿ ಹಣ ತೊಡಗಿಸಿದರೂ ಪರವಾಗಿಲ್ಲ.
ವೈಯಕ್ತಿಕ ಖರ್ಚುಗಳನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಬೇಕು.
ಸಂಬಳಕ್ಕೂ, ಖರ್ಚಿಗೂ ಸಮತೋಲನವಿರಬೇಕು. ದುಡಿಯುವುದು ನಾಕಾಣೆ, ಖರ್ಚು ಎಂಟಾಣೆ ಆದರೆ ಬದುಕಿನ ಬಂಡಿ ಪಲ್ಟಿಯಾಗೋದು ಖಾತರಿ.
ದುಡಿದ ಸಂಬಳದಲ್ಲಿ ಒಂದಷ್ಟು ಉಳಿತಾಯ ಮಾಡುವುದನ್ನು ತಪಸ್ಸಿನಂತೆ ಮಾಡಬೇಕು. ಏಕೆಂದರೆ ಇಲ್ಲ ಎಂದಾಗ ಯಾರೂ ಚೂರು ಬೆಲ್ಲವನ್ನೂ ಕೊಡಲ್ಲ.
ದಾಕ್ಷಿಣ್ಯಕ್ಕೆ ಒಳಗಾಗಿ ಇನ್ನೊಬ್ಬರಿಗೆ ಸಹಾಯ ಮಾಡುವುದು, ಅರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿಯೂ ಸಾಲ ನೀಡುವುದನ್ನು ನಿಲ್ಲಿಸಬೇಕು.
ದುಡ್ಡು ಉಳಿಸಲು ತಜ್ಞರ ಸಲಹೆ ಪಡೆಯವುದು ಉಚಿತವೆನಿಸುತ್ತದೆ. ನಿಮಗೆ ಸರಿ ಅನ್ನಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ದುಡ್ಡು ಉಳಿಸುವ ಕುರಿತು ಸಲಹೆ ಪಡೆಯಬಹುದು.
ದೊಡ್ಡ ಮೊತ್ತದ ಖರ್ಚುಗಳಿಗಿಂತ ಸಣ್ಣ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಏಕೆಂದರೆ ದೋಣಿ ಮುಳುಗುವುದು ಸಣ್ಣ ರಂಧ್ರದಿಂದಲೇ!
ಸಾಲ ಮಾಡುವ ಮುಂಚೆ ಅದನ್ನು ತೀರಿಸುವ ಬಗ್ಗೆ ಯೋಜನೆ ಹಾಕಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಸಾಲಗಾರರು ಮಾನವನ್ನೂ ಹರಾಜಿಗಿಡುವುದು ದಿಟ.
ಸಣ್ಣ ಕೈಗಡಗಳು ಕೆಲವೊಮ್ಮೆ ದೊಡ್ಡ ಮೊತ್ತದ ಸಾಲಕ್ಕಿಂತ ದುಬಾರಿ. ಹಾಗಾಗಿ ಚಿಲ್ಲರೆ ಸಾಲ ಇರದಂತೆ, ಇದ್ದರೂ ಲೆಕ್ಕ ಚುಕ್ತಾ ಆಗಿರುವಂತೆ ನೋಡಿಕೊಳ್ಳುವುದು ಉತ್ತಮ.
ಯಾರಿಗಾದರೂ ಸಾಲದ ವಿಷಯಕ್ಕೆ ಸಂಬಂಧಿಸಿದಂತೆ ಜಾಮೀನು ಆಗುವಾಗಲೂ ಎಚ್ಚರಿಕೆ ಅಗತ್ಯ.

ಇಂದಿನ ಯುವಜನರು ಆಮಿಷಗಳಿಗೆ ಒಳಗಾಗಿರುವುದು ಹಾಗೂ ಅವರ ಖರ್ಚು, ಆದಾಯವನ್ನು ಮೀರಿ ಹೋಗುತ್ತಿರುವುದರಿಂದ ಉಳಿತಾಯ ಸಾಧ್ಯವಾಗುತ್ತಿಲ್ಲ. ಅವಸರದ ಜೀವನ ಹಾಗೂ ಸ್ವೇಚ್ಛಾ ಪ್ರವೃತ್ತಿಯಿಂದಾಗಿ ಗಳಿಸಿದ ಹಣ ಹಿಡಿತಕ್ಕೆ ಸಿಗುವುದಿಲ್ಲ. ಸ್ವಯಂ ನಿಯಂತ್ರಣ ಮತ್ತು ಪಾಲಕರ ಮಾತಿಗೆ ಬೆಲೆ ಕೊಡುವುದರ ಮೂಲಕ ಯುವಜನರು ಉಳಿತಾಯ ಹೆಚ್ಚಿಸಿಕೊಳ್ಳಬಹುದು. ಈ ಕುರಿತು ಆತ್ಮಾವಲೋಕನ ಅಗತ್ಯ.

| ವಿ.ಎಂ.ಅಂಬಲಿ ಪ್ರಾಚಾರ್ಯರು, ಸರ್ಕಾರಿ ಪಿಯು ಕಾಲೇಜು ಹಳ್ಳೂರು.

ಮಂಜಾನೆಯ ಒಂದು ಗ್ಲಾಸ್ ನೀರು ಆರೋಗ್ಯಕ್ಕೆ ಉಪಯುಕ್ತ.

ಮುಂಜಾನೆ ಎದ್ದ ಕೂಡಲೇ ಒಂದು ಗ್ಲಾಸ್ ನೀರು ಕುಡಿಯಿರಿ !

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಜಪಾನಿನಲ್ಲಿ ಆರಂಭವಾದ ಕಲ್ಪನೆ. ಅಲ್ಲಿ ಜನರು ಉಪಹಾರ ಸೇವಿಸುವ 30 ನಿಮಿಷ ಮೊದಲು ಖಾಲಿ ಹೊಟ್ಟೆಗೆ ನಾಲ್ಕು ಗ್ಲಾಸು ನೀರು ಕುಡಿಯುತ್ತಾರೆ. ಅದು ಸಕ್ರಿಯವಾಗಿರಲು ಮತ್ತು ಆರೋಗ್ಯಕರವಾಗಿರಲು ನೆರವಾಗುತ್ತದೆ.

ಆರೋಗ್ಯಕರ ಹೊಟ್ಟೆ ಮತ್ತು ಫಿಟ್ ಆಗಿರುವ ಜೀವನ ಶೈಲಿಗೆ ಬೆಳಗಿನ ಜಾವ ಮೊದಲು ಮಾಡಬೇಕಾದ ವಿಷಯವೆಂದರೆ ನೀರು ಕುಡಿಯುವುದು. ಅದರಿಂದ ಈ ಕೆಳಗಿನ ಲಾಭಗಳು ಸಿಗುತ್ತವೆ.

ಸ್ಪಷ್ಟವಾದ ಬಣ್ಣ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜಠರದ ಚಲನೆ ಚೆನ್ನಾಗಿರುತ್ತದೆ. ದೇಹದ ವಿಷಕಾರಿಗಳನ್ನು ಹೊರಗೆ ಹಾಕಿ ದುರ್ಬಲ ಚರ್ಮಕ್ಕೆ ಹೊಳಪು ನೀಡುತ್ತದೆ.

ಕರುಳನ್ನು ಸ್ವಚ್ಛಗೊಳಿಸಲು ನೆರವು

ಖಾಲಿ ಹೊಟ್ಟೆಗೆ ಒಂದು ಉದ್ದದ ಗ್ಲಾಸಿನಲ್ಲಿ ನೀರು ಕುಡಿದರೆ ಕರುಳನ್ನು ಮತ್ತು ಅಲ್ಲಿ ತುಂಬಿದ ಕೊಳೆ ಸ್ವಚ್ಛಗೊಳಿಸಲು ನೆರವಾಗುತ್ತದೆ. ಪೌಷ್ಠಿಕಾಂಶಗಳನ್ನು ವೇಗವಾಗಿ ಮತ್ತು ಉತ್ತಮವಾಗಿ ಹೀರಿಕೊಳ್ಳಲೂ ನೆರವಾಗುತ್ತದೆ.

ಶಕ್ತಿಯುತವಾಗಿ ಮಾಡುತ್ತದೆ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕೆಂಪು ರಕ್ತಕಣಗಳು ಪ್ರಚೋದನೆಗೊಂಡು ವೇಗವಾಗಿ ಬೆಳೆಯುತ್ತವೆ. ಅದರಿಂದ ರಕ್ತಕ್ಕೆ ಹೆಚ್ಚು ಆಮ್ಲಜನಕ ಸರಬರಾಜು ಆಗುತ್ತದೆ. ಇಡೀ ದಿನ ನಿಮಗೆ ಸಕ್ರಿಯವಾಗಲು ಹೆಚ್ಚು ಶಕ್ತಿ ಕೊಡುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ನೀರಿನಲ್ಲಿ ಶೂನ್ಯ ಕ್ಯಾಲರಿಗಳು ಇರುವ ಕಾರಣ ಬೇಕಾದಷ್ಟು ಕುಡಿಯಬಹುದು. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಟಾಕ್ಸಿನುಗಳನ್ನು ಹೊರಗೆ ಹಾಕಿ ದೇಹ ಉಬ್ಬುವುದನ್ನು ತಡೆಯುತ್ತದೆ. ಅದು ಚಯಾಪಚಯ ಕ್ರಿಯೆಗೂ ನೆರವಾಗುತ್ತದೆ ಮತ್ತು ಕ್ಯಾಲರಿಗಳನ್ನು ವೇಗವಾಗಿ ಕಡಿಮೆ ಮಾಡುತ್ತದೆ.

ಬಲಿಷ್ಠ ನಿರೋಧಕ ವ್ಯವಸ್ಥೆ ನಿರ್ಮಿಸುತ್ತದೆ

ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ದೇಹದಲ್ಲಿ ಫ್ಲೂಯಿಡ್ ಸಮತೋಲನದಲ್ಲಿಡಲು ನೆರವಾಗುತ್ತದೆ. ಹಾಗೆ ನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ. ಇದು ನಿಮಗೆ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡಿ ಕಡಿಮೆ ರೋಗಗ್ರಸ್ತರಾಗುತ್ತೀರಿ.

ಹನುಮ ಜಯಂತಿ

image

ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ
ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ.

ಆದಿಕಾವ್ಯವಾದ ವಾಲ್ಮೀಕಿ ಮಹರ್ಷಿಯ ರಾಮಾಯಣದ ಪಾತ್ರಗಳು ನಮ್ಮ ಜೀವನದ ಮೇಲೆ ವಿಶೇಷ ಪ್ರಭಾವವನ್ನು ಬೀರಿವೆ. ರಾಮಲಕ್ಷ್ಮಣರು ಎಂದರೆ ನಮ್ಮ ಜನರಿಗೆ ತಮ್ಮ ಮನೆಯವರಷ್ಟೇ ಹತ್ತಿರದವರು ಎಂಬ ಭಾವನೆಯಿದೆ. ಇಂಥ ರಾಮಾಯಣದ ಪಾತ್ರಗಳಲ್ಲಿ ಜನಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ರಾಮನ ಗುಡಿಯಿಲ್ಲದ ಊರಿರಬಹುದು ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ. ಎಷ್ಟರ ಮಟ್ಟಿಗೆ ಹನುಮಂತನ ಪ್ರಭಾವವಿದೆ ಎಂದರೆ ‘ರಾಮಾಯಣ’ ಎನ್ನುವ ಕಾವ್ಯಕ್ಕೆ ಇನ್ನೊಂದು ಹೆಸರಿಡಬಹುದಾದರೆ ‘ಸೀತಾಯಾಶ್ಚರಿತಂ’ ಎಂದು ಕರೆಯಬಹುದಂತೆ. ಮತ್ತೊಂದು ಹೆಸರಿನಿಂದ ಕರೆಯಬಹುದಾದರೆ ಅದು ‘ಹನುಮಾಯಣ’. ಅಂದರೆ ರಾಮಾಯಣದಲ್ಲಿ ಆಂಜನೇಯನ ಪಾತ್ರ ಅಷ್ಟು ಪ್ರಾಮುಖ್ಯವಾಗಿದೆ. ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ ‘ಸುಂದರಕಾಂಡ’ವೆಂದು ಕರೆದಿದ್ದರೆ

image

ರಾಮಾಯಣದಲ್ಲಿ ಕಿಷ್ಕಿಂಧಾಕಾಂಡದ ನಂತರ ರಾಮಾಯಣದ ಕಥೆಯು ಆಂಜನೇಯನನ್ನೇ ಅವಲಂಬಿಸಿದೆ. ಶ್ರೀರಾಮನಿಗೂ ಸುಗ್ರೀವನಿಗೂ ಸಖ್ಯವನ್ನು ಮಾಡಿಸಿದವನು, ವಾಲಿವಧೆಯ ನಂತರ ತಾರಾದೇವಿಯೂ, ಅಂಗದನೂ, ಸುಗ್ರೀವನೂ ಶೋಕದಲ್ಲಿ ಮುಳುಗಿದ್ದಾಗ ಅವರಿಗೆ ವಿವೇಕವನ್ನು ಹೇಳಿ ಮುಂದಿನ ಕರ್ತವ್ಯವನ್ನು ಸೂಚಿಸಿದವನು ಈತನೇ. ದಕ್ಷಿಣದ ದಿಕ್ಕಿನಲ್ಲಿ ಸೀತಾನ್ವೇಷಣೆಗೆ ಹೊರಟ ವಾನರರ ಮುಖಂಡನಾಗಿ ಲಂಕೆಗೆ ಹೋಗಿ ಸೀತೆಯ ವಿಷಯ ತಿಳಿಸಿದವನು ಆಂಜನೇಯನೇ. ಯುದ್ಢ ಸಮಯದಲ್ಲಿ ರಾಮನಿಗೊರಗಿದ ಅನೇಕ ಕಷ್ಟಗಳನ್ನು ತನ್ನ ಮಹತ್ ಶಕ್ತಿ ಹಾಗೂ ಬುದ್ದಿವಂತಿಕೆಯಿಂದ ನಿವಾರಣೆ ಮಾಡಿದವನೂ ಈತನೇ. ಇಂಥ ಮಹಾಮಹಿಮನನ್ನು ಇಡೀ ಭರತಖಂಡವೇ ಹಾಡಿ ಹೊಗಳುತ್ತಿದೆ. ಪುರಾಣಗಳು ಸ್ತುತಿಸುತ್ತಿವೆ. ಸೃಷ್ಟಿಕರ್ತನಾದ ಬ್ರಹ್ಮನಿಗೆ ನೇರವಾಗಿ ಪೂಜೆಯಿಲ್ಲ. ಆದರೆ ಮುಂದಿನ ಬ್ರಹ್ಮನಾಗುವ ಆಂಜನೇಯನಿಗೆ ಪೂಜೆ ಇದೆ. ಇವತ್ತು ಏಕಮುಖೀ ಹನುಮಂತನಿಂದ ಹಿಡಿದು ಸಹಸ್ರಮುಖಿ ಹನುಮಂತನವರೆಗೆ ಅನೇಕ ರೂಪಗಳಲ್ಲಿ ಅವನ ಉಪಾಸನೆ ನಡೆಯುತ್ತಿದೆ.

ಆಂಜನೇಯನು ಅಂಜನಾದೇವಿಯ ಪುತ್ರನು. ವಾಯುದೇವನಿಂದ ಹುಟ್ಟಿದವನು. ಆತನು ಹುಟ್ಟುತ್ತಿದ್ದ ಹಾಗೆಯೇ ಸೂರ್ಯನನ್ನು ನೋಡಿ ಹಣ್ಣೆಂದು ಭ್ರಮಿಸಿ ಹಿಡಿಯುವುದಕ್ಕೆಂದು ಹಾರಿದನು. ಇವನನ್ನು ನಿಗ್ರಹಿಸಬೇಕೆಂದು ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿದ. ಅದರಿಂದ ಹನುಮಂತ ಮೂರ್ಛೆಹೋದ. ಇದಕ್ಕೆ ಕೋಪಗೊಂಡ ವಾಯು ಚಲಿಸದೆ ನಿಂತ. ಆಗ ಲೋಕದ ಚರಾಚರ ಪ್ರಾಣಿಗಳು ಮರಣ ಬಂದಂತಾಗಿ ತತ್ತರಿಸಿದವು. ಆಗ ಬ್ರಹ್ಮನು ವಾಯುವನ್ನು ಸಮಾಧಾನಪಡಿಸಿದ. ಆ ಸಮಯದಲ್ಲಿ ದೇವಾನುದೇವತೆಗಳು ಆಂಜನೇಯನಿಗೆ ವರದಾನ ಮಾಡಿದರು. ಜೊತೆಗೆ ತನ್ನ ಬಲ, ವೀರ್ಯ, ಸಾಮರ್ಥ್ಯಗಳಿಂದ ಆಂಜನೇಯ ಗರುಡನಿಗೂ, ವಾಯುವಿಗೂ ಸಮಾನನಾದನು. ಯೋಗಶಾಸ್ತ್ರದ ಪರಮ ರಹಸ್ಯವೆಲ್ಲವನ್ನೂ ಅರಿತನು. ಅವನ ಸಾಮರ್ಥ್ಯ ಕೇವಲ ದೇಹದ್ದು ಮಾತ್ರವಲ್ಲ; ಬುದ್ಧಿಯದು, ಮನಸ್ಸಿನದು ಕೂಡ.

ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಆದ್ದರಿಂದ ವೇದಿಕೆಯಲ್ಲಿ ಒಂದು ಮಣೆ ಹಾಕಿ ಅವನನ್ನು ಆಹ್ವಾನಿಸುತ್ತಾರೆ.

ಯತ್ರಯತ್ರ ರಘುನಾಥ ಕೀರ್ತನಂ

ತತ್ರತತ್ರ ಕೃತ ಮಸ್ತಕಾಂಜಲಿಂ

ಭಾಷ್ಫಾವಾರಿ ಪರಿಪೂರ್ಣ ಲೋಚನಂ

ಮಾರುತಿಂ ನಮತಾ

ರಾಮಾಯಣ ಕಥೆಯಲ್ಲಿ ಹನುಮಂತನ ಪ್ರವೇಶವಾಗುವುದು ಕಿಷ್ಕಿಂಧಾಕಾಂಡದಲ್ಲಿ. ‘ಕಿಷ್ಕಿಂಧೆ’ ಎಂದರೆ ನಮ್ಮ ಕನ್ನಡ ನಾಡಿನ ಹಂಪೆಯ ಪ್ರದೇಶ. ಇಲ್ಲಿಂದ ಮುಂದೆ ಹನುಮನ ಸಾಧನೆಯ ಪ್ರಭಾವ ವಿಶೇಷವಾಗಿದೆ. ಆತನ ದೇಹಬಲ, ಮನೋಬಲ, ಬುದ್ಧಿಬಲ, ತಪೋಬಲ, ಯೋಗಶಕ್ತಿ ಎಲ್ಲವೂ ಕಂಡುಬರುವುದು ಇಲ್ಲಿಯೇ. ರಾಮಚಂದ್ರ ವನವಾಸಕ್ಕೆ ಬರಲು ಕೈಕೆ-ಮಂಥರೆಯರು ಹೇಗೆ ಕಾರಣರೋ ಹಾಗೆ ಆಂಜನೇಯ ರಾಮಚಂದ್ರನ ಆಗಮನಕ್ಕಾಗಿ ಅಂತರಂಗದಲ್ಲಿ ಹಾರೈಸುತ್ತಿದ್ದನಂತೆ. ಭಗವಂತ ಭಕ್ತನ ಹಾರೈಕೆಯನ್ನು ಈಡೇರಿಸಲು ಪ್ರತ್ಯಕ್ಷವಾಗುವಂತೆ ರಾಮಚಂದ್ರ ಆಂಜನೇಯನಿಗೆ ಕಂಡ. ಶ್ರೀರಾಮನ ಸಂದರ್ಶನವಾಗುವುದಕ್ಕೆ ಒಂದೆರೆಡು ದಿನ ಮುಂಚಿತವಾಗಿ ಆಂಜನೇಯ ಬೆಟ್ಟದ ಮೇಲೆ ಧ್ಯಾನ ಮಗ್ನನಾಗಿದ್ದ. ನಂತರ ಕಣ್ದೆರೆದು ನೋಡಿದರೆ ದೂರದಲ್ಲಿ ಪಂಪಾ ಸರೋವರದ ತೀರದಲ್ಲಿ ನಡೆದುಬರುತ್ತಿರುವ ನರಾಕೃತಿಗಳನ್ನು ಕಂಡನಂತೆ. ಹಾಗೆಯೇ, ರಾಮ ಬೆಟ್ಟದ ತುದಿಯನ್ನು ದಿಟ್ಟಿಸಿ ನೋಡಿ ಹೇಳುತ್ತಾನೆ. “ಲಕ್ಶ್ಮಣಾ, ಇಲ್ಲಿಯೋ ಎಲ್ಲಿಯೋ ಕಾಣೆ! ಆದರೆ ನನ್ನ ಮನಸ್ಸಿಗೆ ಸುಳಿದಿದೆ ಇಲ್ಲಿಯೇ ನನ್ನ ಬಾಳ ಗೆಳೆಯನನ್ನು ಕಾಣುವೆನೆಂದು”. ಕೊನೆಗೆ ಎದುರಿಗಿದ್ದ ಕಲ್ಬಂಡೆಯನ್ನು ಉದ್ದೇಶಿಸಿ ಆಂಜನೇಯನನ್ನು ಎಚ್ಚರಿಸಿ ಎಬ್ಬಿಸುತ್ತಾನೆ. ಇಬ್ಬರೂ ಪರಸ್ಪರ ನೋಡಿದರು. ಒಂದಾದರು. ರಾಮ-ಆಂಜನೇಯ ಎಂಬ ಎರಡು ನದಿಗಳು ಕೂಡಿ ಒಂದಾಗಿ ಮುಂದುವರಿದಂತೆ ಆಯಿತು. ರಾಮ ಮೊದಲ ನೋಟದಲ್ಲೇ ಆಂಜನೇಯನ ಹಿರಿಮೆ ತಿಳಿದ. ಅವನ ಶುದ್ಧವಾದ ಮಾತು, ಮಿತ ಭಾಷೆ, ಶಾಂತ ಸ್ವಭಾವ, ಬ್ರಹ್ಮಚರ್ಯದ ತೇಜಸ್ಸು ಕಂಡು ರಾಮನಿಗೆ ಅಚ್ಚರಿ. ಆಂಜನೇಯನೇ ರಾಮನಿಗೆ ಕಿಷ್ಕಿಂದೆಯನ್ನು ಪರಿಚಯಿಸಿ, ರಾಮಾ ಸುಗ್ರೀವರಿಗೆ ಸಖ್ಯ ಉಂಟಾಗುವಂತೆ ಮಾಡುತ್ತಾನೆ.

‘ಸೀತಾನ್ವೇಷಣೆ’ ಆಂಜನೇಯನ ಬಹುಮುಖ್ಯ ಸಾಹಸಗಳಲ್ಲೊಂದು. ಸುಗ್ರೀವನ ಸೈನ್ಯದಲ್ಲಿದ್ದ ಉಳಿದೆಲ್ಲ ವೀರರ ಶಕ್ತಿ ಒಂದು ತೂಕವಾದರೆ ಆಂಜನೇಯನೊಬ್ಬನದೇ ಒಂದು ತೂಕ. ಕುವೆಂಪು ರಾಮಾಯಣ ದರ್ಶನದಲ್ಲಿ ಈ ಭಾಗ ಬಹಳ ಸುಂದರವಾಗಿ ಬರುತ್ತದೆ. ಸುಗ್ರೀವ, ಆಂಜನೇಯನನ್ನು ‘ನೀನು ನಮ್ಮ ಕುಲದ ಕಣ್ಣು, ಸಾಹಸದ ಧೈರ್ಯ, ಎಲ್ಲವೂ. ವಾಯುಪುತ್ರನಾದ್ದರಿಂದ ನೀನು ಚಲಿಸದ ಪ್ರದೇಶವೇ ಇಲ್ಲ. ಮೂರು ಲೋಕಗಳಲ್ಲಿ ನಿನಗೆ ಬುದ್ಧಿಯಲ್ಲೂ ಬಲದಲ್ಲೂ ಸಮಾನರಿಲ್ಲ’ ಎಂದು ಕೊಂಡಾಡಿ ಸೀತಾನ್ವೇಷಣೆಗೆ ಕಳುಹಿಸುತ್ತಾನೆ.

ಸೀತೆಯನ್ನು ಅರಸುತ್ತಾ ಹೋದಂತೆ ಸಂಪಾತಿಯಿಂದ, ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಬಚ್ಚಿಟ್ಟಿರುವ ಸುದ್ದಿ ತಿಳಿಯುತ್ತದೆ. ಲಂಕೆಗೆ ಹೋಗುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಆಗ ಜಾಂಬವಂತ ಈ ಮಹಾಕಾರ್ಯಕ್ಕೆ ಆಂಜನೇಯನೇ ಸಮರ್ಥನೆಂದು ಹೇಳುತ್ತನೆ. ಉಳಿದ ಕಪಿವೀರರೆಲ್ಲಾ ಸಮುದ್ರ ಲಂಘನಕ್ಕೆ ತಮ್ಮತಮ್ಮ ಸಾಮರ್ಥವೆಷ್ಟು ಎಂದು ಜಂಭದ ಮಾತಾಡುತ್ತಿರುವಾಗ, ಆಂಜನೇಯ ಒಂದು ಬಂಡೆಯ ಮೇಲೆ ಕುಳಿತು ಕಣ್ಣಿನಲ್ಲೇ ಸಮುದ್ರದ ದೂರವನ್ನು, ತನ್ನ ಸಾಮರ್ಥ್ಯವನ್ನು ಅಳೆಯುತ್ತಿದ್ದನಂತೆ. ಆಗ ಜಾಂಬವಂತ

ಯೋಗಿ ನೀನಭ್ಯಾಸದಿಂದೆಯುಂ ತಪದಿಂದೆ, ಮೇಣ್

ಬ್ರಹ್ಮಚರ್ಯದ ಮಹಿಮೆಯಿಂದಷ್ಟಸಿದ್ಧಿಗಳ್

ನಿನಗಿಷ್ಟ ಕಿಂಕರರಲಾ, ಹನುಮಂತ ದೇವಾ ನೀಂ

ಧ್ಯಾನದಿಂದಿಕ್ಕಿಸಿದರಾವುದಾಗದೊ? ನಿನಗೆ

ಎಂದು ಅವನ ಮಹಿಮೆಯನ್ನು ಸ್ತುತಿಸಿ, ಶಕ್ತಿಯ ಅರಿವನ್ನು ನೆನಪಿಸುತ್ತಾನೆ. ಅವನಿಗೆ ಅಣಿಮಾದಿ ಸಿದ್ಧಿಗಳೆಲ್ಲಾ ತನ್ನಿಷ್ಟದಂತೆ ವರ್ತಿಸುವ ಸೇವಕರು. ಅವನು ಇಚ್ಛೆಯಿಂದ ಏನು ಬೇಕಾದರೂ ಸಾಧಿಸಬಲ್ಲ ಸಿದ್ಧಪುರುಷ. ಇಷ್ಟಾದರೂ ಯಾರಿಗೂ ಅದನ್ನು ತೋರಗೊಡದೆ ದೂರದ ಬಂಡೆಯ ಮೇಲೆ ಕುಳಿತಿದ್ದಾನೆ. ಅಹಂಕಾರವನ್ನೇ ಕಾಣದವನು ಹನುಮಂತ. ಜಾಂಬವಂತ ಹೇಳುವವರೆಗೆ ಆಂಜನೇಯ ಏಕೆ ಸುಮ್ಮನಿದ್ದ ಎಂದು ನಮಗೆ ಅನಿಸಬಹುದು. ಆದರೆ ತನ್ನ ನಿಶ್ಚಯವನ್ನು ಆತ ಮೊದಲೇ ಮಾಡಿದ್ದ. ಮಾಡುವುದನ್ನು ಆಡದೆಯೇ ಮಾಡಿ ತೋರಿಸುವ ಗುಣ ಇವನದು.

ಆಂಜನೇಯ ಸಮುದ್ರ ಲಂಘನ ಮಾಡುವ ಸನ್ನಿವೇಶ ಸುಂದರವಾಗಿದೆ. ತನ್ನ ಯೋಗಶಕ್ತಿಯನ್ನು ಜಾಗೃತಗೊಳಿಸಿ, ತನ್ನ ಜಡದೇಹವನ್ನು ಬಿಟ್ಟು ಚೇತನವಾಗಿ ರೂಪಾಂತರ ಹೊಂದಿದ. ಅದನ್ನು ನೋಡಿ ಕಪಿವೀರರೆಲ್ಲ ಜಯ-ಘೋಷವನ್ನು ಮಾಡಿದರು. ಅನಂತರ ಆಂಜನೇಯ ರುದ್ರರೂಪವನ್ನು ತಾಳಿ, ಮನುಷ್ಯನ ಕಲ್ಪನೆಯೇ ತತ್ತರಿಸುವಂತೆ ನೆಲಕ್ಕೂ ಬಾನಿಗೂ ಒಂದೇಯ ಆಗಿ ನಿಲ್ಲುತ್ತಾನೆ. ಹನುಮನ ಪಾದದ ಹೊಡೆತಕ್ಕೆ ಇಡೀ ಬೆಟ್ಟವೆ ಅಲುಗಾಡಿ ಪ್ರಾಣಿ-ಪಕ್ಷಿಗಳ ಚಿತ್ಕಾರದಿಂದ ಆ ವನಭೂಮಿ ಮಗುವಿನ ಕೈಯ್ಯ ಗಿಲಿಗಿಚ್ಚಿಯಾಯಿತಂತೆ. ಹನುಮತ ಆಗಸದಲ್ಲಿ ಹಾರುತ್ತಿದ್ದರೆ, ಆಕಾಶಕ್ಕೆ ಸಿಡಿದ ಪರ್ವತದಂತೆ ಕಾಣುತ್ತಿದ್ದ. ಹೀಗೆ ಸಾಹಸದಿಂದ ಲಂಕೆಯನ್ನು ತಲುಪಿ ಸೀತೆಗೆ ರಾಮನ ಮುದ್ರಿಕೆ ಕೊಟ್ಟ. ಭಗವಂತನ ಕೆಲಸವನ್ನು ಭಕ್ತಿಯಿಂದ ಮಾಡಿದ.

ಹನುಮಂತನ ಯೋಗಶಕ್ತಿಯನ್ನು ಗುರುತಿಸುವ ಮತ್ತೊಂದು ಸಂದರ್ಭ ನಿಕುಂಭಿಲಾ ಯಾಗ. ರಾವಣ ಮಗ ಇಂದ್ರಜಿತು ಈ ಯಾಗದಲ್ಲಿ ಶಕ್ತಿ ಸಂಪಾದಿಸಲು ತೊಡಗಿದ್ದ. ಅದನ್ನು ಕೆಡಿಸಲು ಲಕ್ಷ್ಮಣ ಬರುತ್ತಾನೆ. ಎಲ್ಲೆಲ್ಲೂ ಅಗ್ನಿಯೇ ಇರುತ್ತದೆ. ಅದನ್ನು ದಾಟುವಾಗ ಲಕ್ಷ್ಮಣ ಸೀದ ಶವದಂತಾಗುತ್ತಾನೆ. ಅವನನ್ನು ಬದುಕಿಸಲು ಇದ್ದುದು ಒಂದೇ ದಾರಿ. ಓಷಧೀ ಪರ್ವತದಲ್ಲಿದ್ದ ಸಂಜೀವಿನೀ ಬಳ್ಳಿ ತರುವುದು. ಅದನ್ನು ತರಲು ಆಂಜನೇಯ ಯೋಗಶಕ್ತಿಯನ್ನು ಬಳಸಬೇಕಾಯಿತು. ಸಾಮಾನ್ಯ ಮಾರ್ಗದಲ್ಲಿ ಸಂಚರಿಸಿದರೆ ಪರ್ವತಕ್ಕೆ ಹೋಗಿ ಬರಲು ಒಂದು ದಿನ ಬೇಕು. ಆಂಜನೇಯ ತನ್ನ ಯೋಗಶಕ್ತಿಯಿಂದ ಪರ್ವತಕ್ಕೆ ತೆರಳಿ ಸಂಜೀವಿನಿ ತಂದು ಲಕ್ಷ್ಮಣನಿಗೆ ಬಂದ ವಿಪತ್ತು ಪರಿಹಾರವಾಗಲು ಸಹಾಯ ಮಾಡುತ್ತಾನೆ.

ಆಂಜನೇಯ ಎಂತಹ ನೀತಿ ವಿಶಾರದ ಎಂಬುದನ್ನು ‘ವಿಭೀಷಣ ಶರಣಾಗತಿ’ಯಲ್ಲಿ ನೋಡಬೇಕು. ಅದು ಯುಧ್ಹದ ಸಂದರ್ಭ. ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಪಿವೀರರು ಚರ್ಚೆಮಾಡುತ್ತಿದ್ದರು. ಆಗ ಆಂಜನೇಯ ಎರಡೇ ಎರಡು ಮಾತಿನಿಂದ ತನ್ನ ಅಭಿಪ್ರಾಯವನ್ನು ರಾಮನಿಗೆ ತಿಳಿಸುತ್ತಾನೆ “ಮಹಾ ಪ್ರಭುವೆ ನಿನಗೆ ಬೃಹಸ್ಪತಿಯೂ ಸಮನಲ್ಲ ಆದರೂ ನಮ್ಮ ಸಲಹೆಗಳನ್ನು ಕೇಳುತ್ತಿರುವೆ. ವಿಭೀಷಣನನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಇದು ಸರಿಯಾದ ಕಾಲ. ಅಣ್ಣನ ದುಷ್ಟತನವನ್ನು ನಿನ್ನ ಗುಣ ಎರಡನ್ನೂ ಕಂಡು ನಿನಗೆ ಶರಣಾಗಿದ್ದಾನೆ. ನನಗೇನೋ ಅವನು ಕಪಟಿಯಲ್ಲ ಎನ್ನಿಸುತ್ತಿದೆ. ಇದರ ಮೇಲೆ ನಿಮ್ಮ ಚಿತ್ತ” ಎಂದು ಹೇಳುತ್ತಾನೆ. ಅಪರಿಚೆತನನ್ನೂ ಸೂಕ್ಷ್ಮ ದೃಷ್ಟಿಯಿಂದ ಅಳೆಯುವ ಗುಣ ಈತನದು.

ಆಂಜನೇಯನ ಇಂಥಾ ಗುಣಗಳೇ ಇಂದಿಗೂ ಜನಸಾಮಾನ್ಯರಲ್ಲಿ ನೆಲೆಸಿದೆ. ಜನಪದರು, ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ತಮ್ಮ ಊರುಗಳಾ ಮುಂದೆಯೇ ಹೋದನೆಂದು ನಂಬುತ್ತಾರೆ. ಮಕ್ಕಳು ರಕ್ಷೆಗಾಗಿ ಆಂಜನೇಯನ ತಾಯತ ಕಟ್ಟುತ್ತಾರೆ. ಊರಿನ ಗಡಿಯಲ್ಲಿ ಆಂಜನೇಯನವ ಗುಡಿ ಕಟ್ಟಿಸಿ ಊರ ರಕ್ಷಕನೆಂದು ಭಾವಿಸುತ್ತಾರೆ. ಹಾಗೆಯೇ ಕನ್ನಡದ ಕವಿಗಳು ತಮ್ಮ ವಿಶೇಷ ದರ್ಶನವನ್ನು ಆಂಜನೇಯನ ಪಾತ್ರದಲ್ಲಿ ಕಾಣಿಸಿದ್ದಾರೆ.

ಇತ್ತೀಚೆಗೆ ಆಂಜನೇಯನನ್ನು ಕುರಿತು ಕನ್ನಡದಲ್ಲಿ ಒಂದು ಸ್ವತ೦ತ್ರ ಕಾವ್ಯವೇ ರಚನೆಯಾಗಿದೆ. ಇದುವರೆಗೆ ರಾಮಾಯಣದ ಕಥೆಯಲ್ಲಿ ಬರುವ ಹನುಮ೦ತಹ ಮಹತ್ವವನ್ನು ಹೇಳಿದರೆ ಇಲ್ಲಿ ಹನುಮ೦ತನ ಕಥೆಯೇ ‘ವತಾಲ್ಯಾಲಿಂಗನ’ ಎಂಬ ಕಾವ್ಯದಲ್ಲಿ ಮುಖ್ಯವಾಗಿದೆ. ಈ ಗದ್ಯ ಕಾವ್ಯವನ್ನು ಡಾ||ಎ.ಎಸ್.ವೇಣುಗೋಪಾಲರವರು ಬರೆದಿದ್ದಾರೆ. ರಾಮಾಯಣದ ಕಥೆಗೆ ವಿರಾಮವೇ ಇಲ್ಲ. ಕಾಲಕಾಲಕ್ಕೆ ಈ ಕಥೆ ಅನೇಕ ಕವಿಗಳಿಂದ ಪುನಃ ಸೃಷ್ಟಿಯಾಗುತ್ತಲೇ ಇದೆ. ‘ಮೌಲ್ಯಾಲಿ೦ಗನ’ ಕಾವ್ಯದಲ್ಲಿ ರಾಮಾಯಣದ ಆಂಜನೇಯನ ಪಾತ್ರವನ್ನು ಮುಖ್ಯವಾಗಿ ಚಿತ್ರಿಸಿದ್ದಾರೆ. ಈ ಕಾವ್ಯದಲ್ಲಿ ರಾಮಾಯಣದ ಕಿಷ್ಯಂಧಾ ಕಾಂಡದ ಕಥೆಯನ್ನು ಮಾರ್ಪಾಡು ಮಾಡಿಕೊ೦ಡು ಬರೆದಿದ್ದಾರೆ. ಈ ಕಾವ್ಯದ ಕಥೆ ವಿಶಿಷ್ವವಾಗಿದೆ. ಇದು ಪ್ರಾರ೦ಭವಾಗುವುದು ಅಂಜನಾದೇವಿಯ ಗರ್ಭವತರಣದಿಂದ. ಜನನಿಯೇ ಮಗುವಿಗೆ ಮೊದಲ ಗುರುವಾಗುತ್ತಾಳೆ. ಆ ಮಗು ಅದೆಷ್ಟು ಚುರುಕಾಗಿತ್ತೆಂದರೆ ಅದರ ಪ್ರೌಢಿಮೆಗೆ ಎಲ್ಲಿರೂ ಬೆರಗಾಗುತ್ತಾರೆ. ಕಿಷ್ಯ೦ಧೆಯ ನಿಸರ್ಗದ ಜೊತೆಯಲ್ಲೇ ಅವನ ಬಾಲಲೀಲೆ. ದಿನನಿತ್ಯದ ಅಭ್ಯಾಸ. ಒಂದು ರಾತ್ರಿಯ೦ತೂ ವಾಯುದೇವನೇ ಬ೦ದು ಆಂಜನೇಯನಿಗೆ ಸೃಷ್ಟಿಯ ರಹಸ್ಯ ಬೋಧಿಸುತ್ತಾನೆ. ಸೂರ್ಯದೇವನೂ ಅನೇಕ ವಿದ್ಯೆಯನ್ನು ಬೋಧಿಸುತ್ತಾನೆ.

ಬಾಲ್ಯದಲ್ಲೇ ಪ್ರಾಬುದ್ಧನಾದ ಆ೦ಜನೇಯ ಉತ್ತರ ದೇಶದಿ೦ದ ದಕ್ಷಿಣ ಕಡೆಗೆ ಬರುವ ಅಗಸ್ತ್ಯಮನಿಯನ್ನು ನೋಡುತ್ತಾನೆ. ಆದರೆ ಆಂಜನೇಯನ ತೇಜಸ್ವನ್ನು ಕ೦ಡಾಗ ಅಗಸ್ತ್ಯರಿಗೇ ಆಶ್ಚರ್ಯವಾಗುತ್ತದೆ. ಆ೦ಜನೇಯ ಕೇಳುತ್ತಾನೆ, ‘ಪುಣ್ಯಭೂಮಿಯೆ೦ದು ಹೆಸರಾದ ಉತ್ತರ ಭಾರತವನ್ನು ತೊರೆದು ಬರಲು ಕಾರಣವೇನು’ ಎಂದು. ಅದಕ್ಕೆ ಅವರು “ದಕ್ಷಿಣದ ಭಾಷೆಗಳ ಸತ್ಯ ಸೌಂದರ್ಯಗಳ ಹೃದಯವನ್ನು ಪಿಡಿದಾಡುವ ಹುಚ್ಚು ಹಂಬಲ ನನ್ನನಿತ್ತಲು ಸೆಳೆಯಿತು” ಎಂದು ಹೇಳುತ್ತಾರೆ. ಅಗಸ್ತ್ಯರಂತಹ ಖುಷಿಗಳು ಈ ನಾಡಿನ ಭಾಷೆ, ಸಂಸೃತಿಗಳನ್ನು ತಿಳಿಯಬೇಕೆಂದು ಹೇಳುವಲ್ಲಿ ಈ ನಾಡಿನ ಹಿರಿಮೆ ವ್ಯಕ್ತವಾಗುತ್ತದೆ.

ಈ ಕಾವ್ಯದಲ್ಲಿ ಬೇರೆ ರಾಮಾಯಣಗಳಲ್ಲಿ ಅಪೂರ್ವವಾದ ಒಂದು ದೃಶ್ಯವಿದೆ. ಲಂಕೆಯ ಯುದ್ಧ ಮುಗಿಯುತ್ತಿದಂತೆ ಸೀತಾ ರಾಮ ಲಕ್ಷ್ಮಣರು ಭರತನಿಗೆ ನೀಡಿದ್ದ ವಾಗ್ದಾನ ಈಡೇರಿಸಲು (೧೪ ವರ್ಷಗಳ ನಂತರ ಮರಳಿ ಅಯೋಧ್ಯೆಗೆ ಬರುವುದಾಗಿ) ನಂದಿಗ್ರಾಮಕ್ಕೆ ಬರುತ್ತಿದ್ದಾರೆ. ಆದರೆ ಬರುವಾಗ ಅವರು ತಮಗಾಗಿ ಸೇವೆ ಮಾಡಿದ ವಾನರವೀರರಿಗೆ ತಮ್ಮ ಕೃತಜ್ನತೆಯನ್ನು ಸಲ್ಲಿಸಬೇಕಾದುದು ಅವರ ಕರ್ತವ್ಯವಾಗಿತ್ತು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ‘ಲೋಕದಲ್ಲಿ ಮಾನವರಿಗೆ ಕೃತಜ್ನತೆ ಎಂಬುದೇ ಪರಮ ಮೌಲ್ಯ’. ಎಂದು ಭಾವಿಸಿದ ರಾಮ. ಅಯೋಧ್ಯೆಯಲ್ಲಿ ರಾಮನ ಪಟ್ಟಭಿಷೇಕ ಮುಗಿದ ಮೇಲೆ ಸೀತಾ ಲಕ್ಷ್ಮಣರ ಸಮೇತ ಕಿಷ್ಯಂಧೆಗೆ ಬರುತ್ತಾನೆ. ಅಲ್ಲಿ ಸೀತಾ ರಾಮ ಲಕ್ಶ್ಮಣರಿಗೆ ಸಂಭ್ರಮದ ಸ್ವಾಗತವಿತ್ತು. ಆದರೆ ಸುಗ್ರೀದ ಸಹ ಅಧಿಕಾರ ಬಂದೊಡನೆ ಸಾನಮತ್ತನಾಗಿ, ಕಾಮಿನೀಲೋಲನಾಗಿ ಮೆರೆಯುತ್ತಿದ. ಇದನ್ನು ಕಂಡ ಲಕ್ಶ್ಮಣನಿಗೆ ದುಃಖವಾಗುತ್ತದೆ. ಆದರೆ ಆಂಜನೇಯ ಬ್ರಹ್ಮಚಾರಿಯಾಗಿ ಮೆರೆದವನು. ಕಿಷ್ಯಂಧೆಯ ಅರಮನೆಯ ವಿಲಾಸ ವಿಕೃತಿಗಳನ್ನು ಮನ್ನಿಸುವಂತೆ ಕೇಳಿಕೋಳುತ್ತಾನೆ. ಎಲ್ಲ ದೇಶದಲ್ಲೂ ಹೀಗೆಯೇ ಅಲ್ಲವೆ. ಇಡೀ ಭರತ ಖಂಡದ ದೃಶ್ಯವೇ ಇಂದಿಗೂ ಹೀಗೆಯೇ ಆಗಿದೆ ಎನ್ನುತ್ತಾರೆ ಕವಿ.

ಈ ಕಾವ್ಯದಲ್ಲಿ ಬಹಳ ವಿಶೇಷವಾದದ್ದು ಏನೆಂದರೆ ಆಂಜನೇಯ ಮತ್ತು ಕನ್ನಡನಾಡು. ಇದು ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದಿದೆ. ಕನ್ನಡ ನಾಡಿನ ಸೌಂದರ್ಯ, ಅನನ್ಯಪ್ರೇಮ, ಕಾಡು, ಬೆಟ್ಟ, ನದಿಗಳು, ಹಿರಿಯರ ನಡೆನುಡಿ-ಸ್ನೇಹ, ಕಾರ್ಯ ಸಾಧನೆ ಇವೆಲ್ಲವು ಆಕರ್ಷಸುತ್ತದೆ.

ಆಂಜನೇಯನನ್ನು ಇಲ್ಲಿ ಮುಖ್ಯವಾಗಿ ‘ಕನ್ನಡದ ಕುವರ’ನೆಂದೇ ವರ್ಣಿಸುತ್ತಾರೆ. ಕರುನಾಡ ಸಂಸ್ಕ್ರತಿಯ ಸಾರಸ್ವರುಪ, ಕರುನಾಡು ಕಣ್ಮಣಿ, ಕರುನಾಡ ಸಂಸ್ಕ್ರತಿಯ ಸಂವರ್ಧನ- ಹೀಗೆ ಹನುಮಂತನನ್ನು ಎಷ್ಟು ಬಣ್ಣಿಸಿದರೂ ಕವಿಗೆ ತೃಪ್ತಿಯಿಲ್ಲ. ಆಂಜನೇಯನ ವ್ಯಕ್ತಿತ್ವ ಅದೆಷ್ಟು ಎತ್ತರದಲ್ಲಿದೆ ಎಂಬುದನ್ನು-ಅರಿಯಲು ಆಂಜನೇಯ ಸೀತೆಯ ಬಗ್ಗೆ ತೋರಿದ ಮಾತೃಪ್ರೇಮವೇ ಉದಹರಣೆಯಾಗಿದೆ. ಆಂಜನೇಯನಿಗೆ ಸೀತೆಯ ಬಗ್ಗೆ ಪರಮಭಕ್ತಿ, ಮಾತೃಪ್ರೇಮ. ಹೆಣ್ಣನ್ನು ಭೋಗದ ದೃಷ್ಠಿಯಿಂದ ಕಾಣುವ ಸಮಾಜದಲ್ಲಿ ಆಂಜನೇಯ ಅದೆಷ್ಟು ಗೌರವದಿಂದ ಹೆಣ್ಣನ್ನು ನೋಡಿದ ಎನ್ನುವುದೇ ಅವನ ಹಿರಿಮೆ. ಒಮ್ಮೆಯಂತೂ ಸೀತೆಯನ್ನು ಕಂಡ ಆಂಜನೇಯ ಮಗುವಾಗಿ ಅವಳ ತೊಡೆಯ ಮೇಲೆ ಮಲಗಬೇಕೆಂದು ಬಯಸಿದನಂತೆ. ರೂಪರಾವರ್ತನ ವಿದ್ಯೆಯನ್ನು ಪಡೆದಿರುವ ಆಂಜನೇಯ ತನ್ನ ರೂಪವನ್ನು ಕಿರಿದಾಗಿಸಿಕೊಂಡು ಶಿಶುವಾಗಿ ಸೀತೆಯ ತೊಡೆಯ ಮೇಲೆ ಮಲಗಿ ಆಕೆಯ ಮುಖವನ್ನು ಮಾತೃಪ್ರೇಮದಿಂದ ನೋಡತೊಡಗಿದ. ಮಹಾಯೋಗಿಯಾದವನು ವಾತ್ಸಲ್ಯವೆಂದ ಸುಧೆಯನ್ನು ಸವಿಯುತ್ತಾ ತೊದಲು ನುಡಿಯಲ್ಲಿ ಅಮ್ಮ ಅಮ್ಮ ಎಂದು ನುಡಿದನಂತೆ. ಈ ಸನ್ನಿವೇಶದಲ್ಲಿ ಸೀತೆಯು ಮೈಮರೆತಳು. ತಾನು ಲೋಕಮಾತೆ, ರಾಮಚಂದ್ರನ ಪತ್ನಿ, ಅಯೋಧ್ಯೆಯ ರಾಣಿ ಎನ್ನುವುದನ್ನೆಲ್ಲ ಮರೆತು ಕೇವಲ ಒಬ್ಬ ತಾಯಿಯಾಗಿ ಆ ಶಿಶುವನ್ನು ಅಕ್ಕರೆಯಿಂದ ಎತ್ತಿ ಮುದ್ದಾಡಿದಳು ನಲಿದಳು. ಇದನ್ನು ಕಂಡ ರಾಮ ಹೇಳುತ್ತಾನೆ, ‘ಜನ ಮನೆ ಮನೆಗಳಲಿ ಈ ವೀರ ಮಾರುತಿಯಂತೆ ಸ್ನೇಹ-ಪ್ರೀತಿ-ಸಾಹಸ ಎಲ್ಲ ಗುಣಗಳನ್ನು ಪಡೆದ ಮಕ್ಕಳು ಬೆಳೆಯಲಿ’ ಎಂದು ಹೇಳುತ್ತಾ ಅವನ್ನು ಮಾರುತಿಯನ್ನು ಬಾಚಿ ತಬ್ಬಿದನಂತೆ.

ಈ ಕಾವ್ಯದ ಮೂಲಕ ಕವಿ ಹೇಳುತ್ತಾರೆ. ಆಂಜನೇಯ ಭಕ್ತನೆಂದರೆ ಭಕ್ತ, ವೀರವಿರಕ್ತ, ಪರಮಜ್ನನಿ, ಅಮ್ಮನ ಅಕ್ಕರೆಯ ಕಂದ, ಕರುನಾಡ ಕುವರ. ಜೀವನದ ಎಲ್ಲ ಮಹಾ ಮೌಲ್ಯಗಳ ಗಣಿ ಇವನು ಎಳೆತನದಲ್ಲಿ ತುಂಟಾಟವಾಡಿದ. ಅನಂತರ ಆಕಾಶದೆತ್ತರಕ್ಕೆ ಬೆಳೆದ ವ್ಯಕ್ತಿತ್ವ, ಲೋಕದ ಶೋಕವನ್ನು ನಾಶಮಾಡಿದವನು. ಲೋಕದಲ್ಲಿ ಶುದ್ಧವಾದ ಜೀವನ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅವನು ನಿದರ್ಶನ. ಇಂಥ ಗುಣಗಳಿರುವುದರಿಂದಲೇ ನಮ್ಮ ಸಮಾಜ ಅವನನ್ನು ಪೂಜಿಸಿ ಕೊಂಡಾಡುತ್ತಿದೆ. ಎಲ್ಲ ದೇವರುಗಳಿಗಿಂತ ಮೇಲೆ ಸ್ಥಾನ ನೀಡಿದೆ. ಈತನ ಚರಿತ್ರೆಯಲ್ಲಿ ಬರುವ ಅದ್ಭುತಗಳನ್ನು ಅರ್ಥ ಮಾಡಿಕೊಂಡರೆ ನಾವೂ ಪವಿತ್ರರಾಗುತ್ತೇವೆಂದೇ ಹೇಳುತ್ತಾರೆ.

ವಿಶ್ವ ಭೂದಿನ-ನಮ್ಮ ಬದುಕು ನಮ್ಮ ಭೂಮಿ.

image

ಭೂಮಿಯ ದಿನ, ಅರ್ಥಾತ್ ಭೂಮಿಯನ್ನು ಕಾಪಾಡಿಕೊಳ್ಳುವ ದಿನವನ್ನು (ಏ. 22) ಕಳೆದ 50 ವರ್ಷಗಳಿಂದಲೂ ವಿಶ್ವದಾದ್ಯಂತ ಅನೇಕ ದೇಶಗಳು ಆಚರಿಸುತ್ತಾ ಬಂದಿವೆ.

ಆದರೆ ಪರಿಸರದ ಸಮತೋಲನ ಮಾತ್ರ ದಿನೇದಿನೇ ಅಧೋಗತಿಗೆ ಇಳಿಯುತ್ತಿದೆ. ಭೂಮಿಯಿಂದ ಆಕಾಶದವರೆಗೂ ಪರಿಸರ ಮಾಲಿನ್ಯ ಹರಡಿಕೊಳ್ಳುತ್ತಿದೆ. ಹಿಮಾಲಯ ಪರ್ವತ ಶ್ರೇಣಿಗಳು, ಉತ್ತರ ದಕ್ಷಿಣ ಧ್ರುವಗಳು ಕೂಡ ಮಾಲಿನ್ಯದಿಂದ ತುಂಬಿಕೊಂಡಿವೆ. ಅಷ್ಟೇಕೆ ಭೂಮಿಯ ಸುತ್ತಲೂ ಅಗಾಧ ಬಾಹ್ಯಾಕಾಶ ತ್ಯಾಜ್ಯ ಉರುಳಾಡುತ್ತಿದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಆಶಾದಾಯಕ ಭವಿಷ್ಯವನ್ನು ನಿರೀಕ್ಷಿಸುತ್ತ ಅನೇಕ ದೇಶಗಳ ಸಂಘ–ಸಂಸ್ಥೆಗಳು, ಖಾಸಗಿ ಕಂಪೆನಿಗಳು ಹಾಗೂ ಭೂಮಿಯನ್ನು ಪ್ರೀತಿಸುವ ಎಲ್ಲರೂ ಒಟ್ಟುಗೂಡಿ ವಿಶ್ವದಾದ್ಯಂತ ಭೂಮಿಯ ದಿನವನ್ನು ಆಚರಿಸುತ್ತಿದ್ದಾರೆ.

ಕೇವಲ ಕೆಲವು ದಶಕಗಳ ಹಿಂದೆ ನಾವೆಲ್ಲ ಮಕ್ಕಳಾಗಿದ್ದಾಗ ಮಣ್ಣಿನಲ್ಲಿ, ನೀರಿನಲ್ಲಿ ಎಷ್ಟು ಬೇಕೋ ಅಷ್ಟು ಆಡುತ್ತಿದೆವು. ನಮ್ಮ ಪೋಷಕರು ಮಣ್ಣಿನಲ್ಲಿ ಆಡುವುದನ್ನು, ಹೊಲಗದ್ದೆಗಳಲ್ಲಿ ಕೆಲಸ ಮಾಡುವುದನ್ನು ಪ್ರೋತ್ಸಾಹಿಸುತ್ತಿದ್ದರು. ಈಗಿನ  ಅಮ್ಮಂದಿರು ಅವರ ಮಕ್ಕಳು ತುಸುವೇ ಮಣ್ಣು ಮುಟ್ಟಿದರೂ ಸಾಕು ಮುಖಗಳನ್ನು ಕಿವುಚಿಕೊಂಡು ‘ಛೀ, ಛೀ… ಅಯ್ಯಯ್ಯಾ… ಹಾಗೆಲ್ಲ ಮಣ್ಣು ಮುಟ್ಟಬಾರದು. ಅದರಲ್ಲಿ ಲಕ್ಷಾಂತರ, ಕೋಟ್ಯಂತರ ಕ್ರಿಮಿಗಳಿರುತ್ತವೆ’ ಎಂದು  ವಿಧವಿಧ ಸಾಬೂನು ಮತ್ತು ದ್ರವ್ಯಗಳನ್ನು ಕೊಟ್ಟು ಕೈಗಳನ್ನು ತೊಳೆಸುತ್ತಾರೆ.

ಆಧುನಿಕ ಮಹಿಳೆಯರು ಹೀಗೆ ಮಕ್ಕಳಿಗೆ ಮಣ್ಣಿನ ಸಂಬಂಧವನ್ನೇ ಕಡಿದು ಹಾಕುತ್ತಿದ್ದಾರೆ. ವೈಜ್ಞಾನಿಕವಾಗಿ ಹೇಳುವುದಾದರೆ, ಮಕ್ಕಳು ಬೆಳೆಯುವ ಸಮಯದಲ್ಲಿ ಆಯಾ ಪ್ರದೇಶದ ಮಣ್ಣಿನಲ್ಲಿ ಎದ್ದುಬಿದ್ದು, ಮೈಗೆ ಮಣ್ಣು ಮೆತ್ತಿಸಿಕೊಂಡು, ನೀರಿನಲ್ಲಿ ಈಜಾಡಿ ಆಟವಾಡಿದರೆ ಗಟ್ಟಿಮುಟ್ಟಾಗುತ್ತಾರೆ.

ಅಂದರೆ ಮಗುವಿನ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿ ಯಾವುದೇ ಕಾಯಿಲೆ ಬಂದರೂ ಅದನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಪಡೆಯುತ್ತದೆ. ಅದಕ್ಕೇ, ಒಳ್ಳೆ ತಾಕತ್ತಿರುವ ಮನುಷ್ಯನನ್ನು ನೋಡಿದ ಜನ ‘ಇವನು ಯಾವ ಮಣ್ಣಿನಿಂದ ಮಾಡಿದವನು?’ ಎನ್ನುತ್ತಾರೆ. ಅದು ಮಣ್ಣಿನ ಮಹಿಮೆ. ಈಗ ಬಿಸಿಲೇ ಕಾಣದ ಮಕ್ಕಳು ‘ವಿಟಮಿನ್ ಡಿ’ ಕೊರತೆಯಿಂದ ಅನೇಕ ರೀತಿಯ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ.

ಒಂದು ಕಡೆ ಭೂಮಿ ಮೇಲಿನ ಪರಿಸರವನ್ನು ಉಳಿಸಿಕೊಳ್ಳಲು ಮತ್ತು ಜನರ ಮಧ್ಯೆ ಅರಿವು ಮೂಡಿಸಲು ಕೆಲವರು ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದು ಕಡೆ ನಮ್ಮ ಸುತ್ತಲಿನ ಪರಿಸರದ ಮೇಲೆ ಅತ್ಯಾಚಾರ ನಿರಂತರವಾಗಿ ನಡೆಯುತ್ತಲೇ ಇದೆ. ಇದರಿಂದ ನಮ್ಮ ಮನೆಯ ಪರಿಸರ, ಹೊಲಗದ್ದೆ, ಕೆರೆಕುಂಟೆ, ನಾವು ಬದುಕುತ್ತಿರುವ ಪ್ರದೇಶವನ್ನೇ ವಿನಾಶ ಮಾಡುತ್ತಿದ್ದೇವೆ. ಪ್ರಕೃತಿಯ ಸಮತೋಲನ ಮತ್ತು ಪರಿಸರದ ಸ್ವಚ್ಛತೆಯನ್ನು ಛಿದ್ರಛಿದ್ರ ಮಾಡುತ್ತಿದ್ದೇವೆ.

ಕೈಗಾರಿಕೀಕರಣದ ಹೆಸರಿನಲ್ಲಿ ನಮ್ಮೊಂದಿಗಿನ ಜೀವಜಗತ್ತನ್ನು ಸಂಪೂರ್ಣವಾಗಿ ಮರೆತುಹೋಗಿದ್ದೇವೆ. ಈ ಎಲ್ಲದರ ಕಾರಣದಿಂದ ಪ್ರತಿ ವರ್ಷವೂ ಭೂಮಿಯ ಉಷ್ಣಾಂಶ ಹೆಚ್ಚುತ್ತಲೇ ಹೋಗುತ್ತಿದೆ. ಬೆಂಗಳೂರಿನ ಉಷ್ಣಾಂಶ ಇದಕ್ಕೆ ಒಳ್ಳೆಯ ಉದಾಹರಣೆ. ಬೆಂಗಳೂರು ಈ ದಿನ ಇಷ್ಟು ತಾಪಮಾನ ಏರಿಸಿಕೊಂಡಿರುವುದಕ್ಕೆ ಮುಖ್ಯವಾಗಿ ವಾಹನಗಳು ಉಗುಳುವ ಇಂಗಾಲದ ಡೈಆಕ್ಸೈಡ್, ಕೆರೆಗಳ ಒತ್ತುವರಿ, ಕೊಳವೆ ಬಾವಿಗಳಿಂದ ಮಿತಿಯಿಲ್ಲದೆ ನೀರು ತೆಗೆದು ಖಾಲಿ ಮಾಡಿರುವುದು, ಮರಗಿಡಗಳನ್ನು ಕಡಿದು ಹಸಿರು ಇಲ್ಲದಂತೆ ಕಾಂಕ್ರೀಟ್ ಕಾಡು ಮಾಡಿದ್ದು ಕಾರಣ.

ಪರಿಸರದಲ್ಲಿ ಆಮ್ಲಜನಕ ಕಡಿಮೆಯಾಗುತ್ತಿದ್ದಂತೆ ಮನುಷ್ಯನೇ ಅಲ್ಲದೆ ಸಕಲ ಜೀವರಾಶಿಯೂ ಉಸಿರುಗಟ್ಟಿ ಸಾಯಬೇಕಾಗುತ್ತದೆ.  ಹಸುಗಳಿಂದ ಸಮುದ್ರ ಹಕ್ಕಿಗಳವರೆಗೆ ಅನೇಕ ಪ್ರಾಣಿ ಪಕ್ಷಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ತಿಂದು ಸಾವನ್ನಪ್ಪುತ್ತಿವೆ. ಇವೆಲ್ಲವೂ ನಮ್ಮ ಕಣ್ಣು ಮುಂದೆಯೇ ನಡೆಯುತ್ತಿದ್ದರೂ ನಾವು ಬುದ್ಧಿವಂತ ಮನುಷ್ಯರು ಪರಿಸರದ ಬಗ್ಗೆ ಕಾಳಜಿ ತೋರದೆ ಹೆಚ್ಚು ಕಸ ಸುರಿಯುತ್ತ ಪರಿಸರವನ್ನು ಇನ್ನಷ್ಟು ಕೊಳಕು ಮಾಡುತ್ತಿದ್ದೇವೆ. ನಮ್ಮ ಕಾಲಿಗೆ ನಾವೇ ಕೊಡಲಿ ಹಾಕಿಕೊಳ್ಳುತ್ತಿದ್ದೇವೆ. ಸುತ್ತಮುತ್ತಲಿನ ಹಸಿರನ್ನು ನಾಶ ಮಾಡಿ ಅನಾರೋಗ್ಯಕರ ಆಹಾರ ಸೇವಿಸುತ್ತಾ ಬದುಕನ್ನು ಇನ್ನಷ್ಟು ಅಸಹನೀಯವಾಗಿಸುತ್ತಿದ್ದೇವೆ.

ಇಷ್ಟಾದರೂ ಪ್ರಕೃತಿ ಇನ್ನೂ ಸಹನಶೀಲತೆಯಿಂದಲೇ ನಮ್ಮನ್ನು ಮಡಿಲಲ್ಲಿ ಹಾಕಿಕೊಂಡು ಮಕ್ಕಳನ್ನು ಕಾಪಾಡುವಂತೆ ಪೋಷಿಸುತ್ತಾ ಬಂದಿದೆ. ಆದರೆ ಮನುಷ್ಯನ ಕ್ರೌರ್ಯ ತಾಳಿಕೊಳ್ಳಲಾರದೆ ಭೂಮಿ ತಾಪಮಾನ ಹೆಚ್ಚಿಸಿಕೊಳ್ಳುತ್ತ ಬಿರುಗಾಳಿ, ಚಂಡಮಾರುತ, ಸುನಾಮಿಗಳನ್ನು ಸೃಷ್ಟಿ ಮಾಡುತ್ತ ಎಚ್ಚರಿಕೆಯ ಗಂಟೆ ಬಾರಿಸುತ್ತಲೇ ಬರುತ್ತಿದೆ.

ಆದರೂ ಮಾನವ ಎಚ್ಚೆತ್ತುಕೊಂಡಿಲ್ಲ. ಆಗಾಗ ನೈಸರ್ಗಿಕ ವಿಪತ್ತುಗಳು ಕಾಣಿಸಿಕೊಂಡು ಅಪಾರ ಪ್ರಾಣ ಹಾನಿಯಾಗಿ, ಆಸ್ತಿಪಾಸ್ತಿ ನಷ್ಟಕ್ಕೊಳಗಾದಾಗ ಸ್ವಲ್ಪ ದಿನ ಹಲುಬಿ ಮತ್ತೆ ಅದೇ ಕೆಲಸ ಮುಂದುವರಿಸುತ್ತಿದ್ದಾನೆ. ಈಗಾಗಲೇ ನಿಯಂತ್ರಿಸಲಾಗದ ಪರಿಸ್ಥಿತಿ ಉಂಟಾಗಿದ್ದು ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ನಿಜವಾಗಿಯೂ ಭೂಮಿ ಬೆಂಕಿಯ ಗೋಳವಾಗಿ ಎಲ್ಲವೂ ಉರಿದು ಬೂದಿಯಾಗುತ್ತದೆ ಎಂದು ವಾಯುಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ನಾವು ವರ್ಷಕ್ಕೆ ಒಮ್ಮೆ ಬರುವ ಭೂಮಿಯ ದಿನವೇ ಅಲ್ಲದೆ ಎಲ್ಲಾ ದಿನಗಳಲ್ಲಿ ಭೂಮಿಯನ್ನು ಉಳಿಸಿಕೊಳ್ಳಲು ಮತ್ತು ನಮ್ಮ ಬದುಕು ಹಸನಾಗಿಸಿಕೊಳ್ಳಲು ಕೆಲವು ಕನಿಷ್ಠ ನಿಯಮಿತ ಕೆಲಸಗಳನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ. ‘ವಿಶ್ವ ಮಟ್ಟದಲ್ಲಿ ಆಲೋಚಿಸುತ್ತ ಮನೆ ಮಟ್ಟದಲ್ಲಿ ಆಚರಣೆಗೆ ತರಬೇಕು’ ಎನ್ನುವ ನಾಣ್ಣುಡಿ ಇದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಆದಷ್ಟೂ ಕಡಿಮೆ ಬಳಸಿ ಪರಿಸರ ಸ್ನೇಹಿ ಮತ್ತು ಹೆಚ್ಚು ಶ್ರಮ ಬೇಡುವ ಉಪಕರಣಗಳನ್ನು ಮಾತ್ರ ಉಪಯೋಗಿಸಬೇಕಿದೆ.

ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಕೆ ಮಾಡದ ಸಮಯದಲ್ಲಿ ಸ್ವಿಚ್ ಆಫ್ ಮಾಡಬೇಕಿದೆ. ಸಾಧ್ಯವಾದಷ್ಟೂ ಸೌರ ಶಕ್ತಿಉಪಯೋಗಿಸುವುದು ಉತ್ತಮ. ಅಡುಗೆ ತಯಾರಿಸಲು ಸೌದೆ ಉರಿಸುವುದನ್ನು ನಿಲ್ಲಿಸಬೇಕಿದೆ. ಮನೆಗಳ ಹೊರಗೆ ಮತ್ತು ಒಳಗೆ ಗಿಡ ಮರಗಳನ್ನು ನೆಟ್ಟು ಪೋಷಿಸಬೇಕಿದೆ. ಪಕ್ಷಿ-ಪ್ರಾಣಿಗಳು ಬದುಕುವುದಕ್ಕೆ ಸಹಾಯ ಮಾಡಿ ಪರಿಸರ ಸ್ನೇಹಿಗಳಾಗಿ ಬದುಕು ನಡೆಸಬೇಕಿದೆ.

ಮನೆಯಲ್ಲಿ ಕೀಟನಾಶಕಗಳ ಬಳಕೆ, ಕೃಷಿಯಲ್ಲಿ ಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಯಂತ್ರಿಸಿ ಅದರ ಬದಲಿಗೆ ಸಾವಯವ ಗೊಬ್ಬರ ಮತ್ತು ದೇಶಿ ಔಷಧಿಗಳನ್ನು ಬಳಸಬೇಕಿದೆ. ಬಹಳಷ್ಟು ಗಾಜು, ಪ್ಲಾಸ್ಟಿಕ್, ಅಲ್ಯೂಮಿನಿಯಂ, ಕಾಗದ ಇತ್ಯಾದಿ ವಸ್ತುಗಳನ್ನು ಮರುಬಳಕೆ ಮಾಡಬೇಕು. ಬಟ್ಟೆ ಚೀಲಗಳನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು.

ಇಂಗಾಲದ ಡೈಆಕ್ಸೈಡ್ ಪರಿಸರ ಸೇರುವುದನ್ನು ಎಲ್ಲ ರೀತಿಯಲ್ಲೂ ಕಡಿಮೆಗೊಳಿಸಬೇಕಿದೆ. ವಾಟರ್ ಹೀಟರ್‌ಗಳು ಮತ್ತು ಏರ್ ಕಂಡೀಷನರ್‌ಗಳ ಬಳಕೆಯನ್ನು ಕಡಿಮೆ ಮಾಡಬೇಕಿದೆ. ಕಡಿಮೆ ವಿದ್ಯುತ್‌ನಿಂದ ಹೆಚ್ಚು ಬೆಳಕು ನೀಡುವ ಎಲ್‌ಇಡಿ ಬಲ್ಬ್‌ಗಳನ್ನು ಬಳಸಬೇಕಿದೆ. ಪಾತ್ರೆಗಳನ್ನು ಕೈಗಳಲ್ಲಿ ತೊಳೆದು ನೀರನ್ನು ಉಳಿಸಬೇಕಿದೆ.

ಸಾಧ್ಯವಾದಷ್ಟೂ ಆಹಾರ ಧಾನ್ಯಗಳು, ಹಣ್ಣು ತರಕಾರಿಗಳನ್ನು ಸ್ಥಳೀಯವಾಗಿ ಬೆಳೆದರೆ, ಸಾಗಿಸುವ ಖರ್ಚು ಕಡಿಮೆಯಾಗಿ ಇಂಧನ ಬಳಕೆಯೂ ಉಳಿಯುತ್ತದೆ. ಆರೋಗ್ಯಕರ ಪರಿಸರ ಮನೆಯಿಂದಲೇ ಪ್ರಾರಂಭವಾಗಬೇಕಿದೆ ಎನ್ನುವುದು  ಮುಖ್ಯ ವಿಷಯ. ಅದರ ಜೊತೆಗೆ ತಾಜ್ಯವನ್ನು ಕೂಡ ಅಷ್ಟೇ ಮುತುವರ್ಜಿಯಿಂದ ವಿಲೇವಾರಿ ಮಾಡಬೇಕಿದೆ.

ವಿಶ್ವದ 100 ಪ್ರಭಾವಿಗಳು

image

ರಾಜನ್ , ಸಾನಿಯಾ, ಪ್ರಿಯಾಂಕಾ, ಪಿಚೈ.  
ನ್ಯೂಯಾರ್ಕ್‌ (ಪಿಟಿಐ):  22-4- 16.
ಟೈಮ್‌ ನಿಯತ ಕಾಲಿಕವು ‘ವಿಶ್ವದ 100 ಪ್ರಭಾವಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌, ಟೆನಿಸ್ ತಾರೆ ಸಾನಿಯಾ ಮಿರ್ಜಾ, ನಟಿ ಪ್ರಿಯಾಂಕಾ ಛೋಪ್ರಾ, ಗೂಗಲ್‌ ಸಿಇಒ ಭಾರತ ಮೂಲದ ಸುಂದರ್ ಪಿಚೈ ಮತ್ತು ಪ್ಲಿಪ್‌ಕಾರ್ಟ್‌ ಸ್ಥಾಪಕರಾದ ಬಿನ್ನಿ ಬನ್ಸಾಲ್‌ ಹಾಗೂ ಸಚಿನ್‌ ಬನ್ಸಾಲ್‌ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಮೆರಿಕದ ಗೀತೆ ರಚನೆಕಾರ ಲಿನ್‌ ಮಾನ್ಯುಯೆಲ್‌ ಮಿರಾಂಡ, ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡೆ, ಆಸ್ಕರ್‌ ವಿಜೇತ ಲಿಯಾನಾರ್ಡೊ ಡಿ ಕ್ಯಾಪ್ರಿಯೊ ಹೆಸರು ಸಹ ಪಟ್ಟಿಯಲ್ಲಿದೆ. ‘ಭಾರತದ ಭವಿಷ್ಯತ್ತಿನ ಜ್ಞಾನವುಳ್ಳ ಬ್ಯಾಂಕರ್‌’ ಎಂದು ರಾಜನ್‌ ಅವರನ್ನು ಬಣ್ಣಿಸಿರುವ ಟೈಮ್‌, ‘ಆರ್ಥಿಕ ಸಂತರ’ ಅಪರೂಪದ ತಳಿ ಎಂದು ವರ್ಣಿಸಿದೆ.  ಜಾಗತಿಕ ಆರ್ಥಿಕ ಕುಸಿತದ ಅವಧಿ ಯಲ್ಲೂ ಭಾರತವನ್ನು ಪ್ರವರ್ದಮಾನಕ್ಕೆ ಬರುತ್ತಿರುವ ಮಾರುಕಟ್ಟೆಯ ನಕ್ಷತ್ರವಾಗಿ  ಮಾಡುವಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಹೊಗಳಿದೆ.

2003ರಿಂದ 2006ರವರೆಗೆ ಐಎಂ ಎಫ್‌ನ ಮುಖ್ಯ ಆರ್ಥಿಕ ತಜ್ಞರಾಗಿದ್ದ ರಾಜನ್‌ ಅವರು ಆರ್ಥಿಕ ಕುಸಿತದ ಬಗ್ಗೆ  ಮೊದಲೇ ಊಹಿಸಿದ್ದರು ಎಂದಿದೆ.

ಮೋದಿ ಹೆಸರಿಲ್ಲ: ಪ್ರಧಾನಿ ನರೇಂದ್ರ ಮೋದಿ ಹೆಸರು ಕಳೆದ ವರ್ಷ ಟೈಮ್‌ ನಿಯತಕಾಲಿಕದ ಪ್ರಭಾವಿಗಳ ಪಟ್ಟಿಯ ಲ್ಲಿತ್ತು. ಆದರೆ ಈ ಬಾರಿ ಟೈಮ್‌ ಸಂಪಾ ದಕೀಯ ಮೋದಿ ಹೆಸರನ್ನು  ಸೇರಿಸಿಲ್ಲ.

ಮಜ್ಜಿಗೆ

ದಿನನಿತ್ಯ ಸೇವಿಸುವ ಮಜ್ಜಿಗೆಯಲ್ಲಿದೆ ಹಲವು ಔಷಧೀಯ ಗುಣಗಳು

image

ಬಿರು ಬಿಸಿಲಲ್ಲಿ ದಾಹ ನೀಗುವ ಸಲುವಾಗಿ ಹಾಗೂ ದೇಹ ನಿರ್ಜಲೀಕರಣ ಆಗದಂತೆ ತಡೆಯಲು ಮಜ್ಜಿಗೆ ಕುಡಿಯುವುದು ಬಹಳ ಉಪಕಾರಿ.
ನಾವು ಕುಡಿಯುವ ಮಜ್ಜಿಗೆಯಲ್ಲಿ ಹಲವು ಆರೋಗ್ಯಕರ ಅಂಶಗಳು ಅಡಗಿದೆ. ಮಜ್ಜಿಗೆ ಕೇವಲ ದಾಹ ನೀಗುವ ಹಾಗೂ ದೇಹಕ್ಕೆ ತಂಪನ್ನು ನೀಡುವ ಪಾನೀಯ ಅಲ್ಲಾ. ಬದಲಾಗಿ ಇದು ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.
ಮಜ್ಜಿಗೆಯಲ್ಲಿರುವ ಪ್ರೊಬಯೋಟಿಕ್ಸ್‌ ಜೀರ್ಣಕ್ರಿಯೆ ಹೆಚ್ಚಾಗಲು ಸಹಾಯ ಮಾಡುತ್ತದೆ. ಬೇಸಿಗೆಯ ಬಿಸಿಲಿನಿಂದ ದೇಹ ಬಿಸಿಯಾಗುತ್ತದೆ. ಇದನ್ನು ತಣಿಸಲು ಮಜ್ಜಿಗೆ ಸಹಾಯ ಮಾಡುತ್ತದೆ. ಮಜ್ಜಿಗೆ ಕುಡಿಯುವುದರಿಂದ ಆ್ಯಸಿಡಿಟಿ ದೂರಾಗುತ್ತದೆ.
ಹೆಚ್ಚು ಖಾರ ಹಾಗೂ ಮಸಾಲೆ ಪದಾರ್ಥ ಸೇವನೆ ಮಾಡಿದ್ದರೆ, ಹೊಟ್ಟೆ ಹಾಗೂ ಎದೆ ಉರಿಯನ್ನು ನಿವಾರಿಸಲು ಮಜ್ಜಿಗೆ ಸಹಾಯ ಮಾಡುತ್ತದೆ.
ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಅಂಶವನ್ನು ನಿವಾರಣೆ ಮಾಡಲು ಮಜ್ಜಿಗೆ ಸಹಕಾರಿ. ಕೆಲವು ಜನರಿಗೆ ಲ್ಯಾಕ್ಟೋಸ್‌ ಸೇವನೆಯಿಂದ ಅಜೀರ್ಣ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಮಜ್ಜಿಗೆ ಕುಡಿದರೆ ದೇಹಕ್ಕೆ ಕ್ಯಾಲ್ಸಿಯಂ ದೊರೆಯುತ್ತದೆ.
ನಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ, ವಿಟಮಿನ್‌, ಪ್ರೊಟೀನ್‌ಗಳನ್ನು ಮಜ್ಜಿಗೆ ನೀಡುತ್ತದೆ. ಕ್ಯಾನ್ಸರ್‌ ತಡೆ, ಕೊಲೆಸ್ಟ್ರಾಲ್‌ ಕಡಿಮೆ ಹಾಗೂ ರಕ್ತದೊತ್ತಡ ನಿಯಂತ್ರಿಸಲು ಮಜ್ಜಿಗೆ ರಾಮಬಾಣವಾಗಿದೆ. ಇನ್ನು ಮಜ್ಜಿಗೆ ಕುಡಿಯುವುದರಿಂದ ಹಲವು ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದಾಗಿದೆ.

Home-made mask for hair fall.

Use this mask once a week and your hair will be thicker and stronger than ever!

Hair loss is a common problem nowadays. As hair is regarded as an asset that enhances one’s physical appearance, balding or thinning hair is a problem that many want to correct as soon as possible.

Some of the common factors contributing to thinning hair are excessive physical or emotional stress, hormonal imbalances, nutritional deficiencies, pollution, allergies, use of wrong hair care products, poor hair care routine, and heredity.

image

According to the proponents of the said mask, it is very good at stimulating the growth of new hair to replace the strands that you shed off on a daily basis. What’s more, the mask is capable of conditioning and moisturizing each and every strand, preventing breakage that can contribute further to hair thinning.

The simple once-a-week application of this homemade mask can give you all of the aforementioned benefits. Because the ingredients are inexpensive, the creation and application of the said mask should not leave your pocket with a gigantic hole.

Needed ingredients:

1 ripe banana
1 egg
1/2 cup (125 milliliters) flat beer
1 tablespoon of honey
Mash the banana in a small bowl. Stir in one egg and blend until the two create a smooth mixture. Add the beer and honey and mix well. Apply to scalp and massage into hair for about 5 minutes. Once the mask is on your scalp, you should also put on a shower cap and allow it to stay there for an hour, then shampoo as normal. Also can apply it after shampooing to make sure that your scalp is free of dirt and excess oils that can keep the ingredients of the mask from doing their job. After an hour just wash the hair with water.

Bananas are rich in potassium & vitamin E, C, and A. These make them as a perfect remedy regarding how to make your hair thicker. These vitamins are very essential for the healthy and strong hair growth.

Eggs are rich source of protein and hair is made up of protein, so it is essentially required to make your hair long and thick. It also has healing properties and is well known for its ability to refurbish hair softness and shine.

Because beer is fermented, the hoppy beverage contains generous supplies of yeast, which is said to plump limp tresses. B vitamins found in the beer tighten the hair’s cuticle.

Honey is a humectant, it attracts and retains moisture in your hair and an emollient, helping to soften and smoothen. Full of vitamins, it’s also skin food for your scalp. Honey can lighten your hair over time, but if you only use this treatment once a week, you probably won’t see any changes.

ಮಹಿಳಾ ಸಮಾನತೆ.

💃🏽ಮಹಿಳಾ ಸಮಾನತೆಗೆ ಜೈಕಾರ ದೇಶದ ಏಳಿಗೆ ಸಾಕಾರ👫

ಭಾರತದ ಪುತ್ರರು ಹಾಗೂ ಪುತ್ರಿಯರು ತಾಯಿ ಭಾರತಿಯ ಎರಡು ಕೈಗಳಿದ್ದಂತೆ, ಅವರನ್ನು ಸಮಾನವಾಗಿ ಕಾಣಬೇಕು. ಎರಡೂ ಕೈಗಳು ಸಮನ್ವಯದಿಂದ ಕೆಲಸಮಾಡದಿದ್ದರೆ ತಾಯ್ನೆಲದ ಅಭಿವೃದ್ಧಿ ಸಾಧ್ಯವಿಲ್ಲ.
ಸಮಾನತೆಯ ಅಂಶಗಳು ಸಮರ್ಪಕವಾಗಿ ಜಾರಿಗೊಳ್ಳಬೇಕಾದರೆ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಅಗತ್ಯ.

✍ ಸಜನ್ ಪೂವಯ್ಯ.

ವ್ಯಕ್ತಿಯೊಬ್ಬನಿಗೆ ಯಾವುದೋ ಒಂದು ವಿಷಯದ ಬಗ್ಗೆ ಅತ್ಯುತ್ಸಾಹ ಇದ್ದಲ್ಲಿ, ಅದನ್ನು ಅಂಧಾಭಿಮಾನ ಎನ್ನುತ್ತಾರೆ. ಅದೇ ರೀತಿ, ಧರ್ಮದ ಬಗ್ಗೆ ಅತ್ಯುತ್ಸಾಹ ಅಥವಾ ತಪ್ಪುಗ್ರಹಿಕೆ ಇದ್ದಲ್ಲಿ ಅದನ್ನು ಮತಾಂಧತೆ ಎನ್ನುತ್ತಾರೆ. ಮನುಷ್ಯ ನಡವಳಿಕೆಯನ್ನು ಪರಿಶುದ್ಧವಾಗಿಸುವ ಏಕಮಾತ್ರ ಉದ್ದೇಶದೊಂದಿಗೆ ಧರ್ಮಸ್ಥಾಪನೆಯಾಗಿದೆ. ಅಂದರೆ, ಪ್ರತಿಯೊಬ್ಬನ ಆತ್ಮೋದ್ಧಾರ ಅಥವಾ ಪರಿಪೂರ್ಣತೆಯೆಡೆಗೆ ಸಾಗುವ ಪಯಣ ಅರ್ಥಾತ್ ಮೋಕ್ಷ ಪ್ರಾಪ್ತಿಯ ಹಾದಿ ಎಂದರ್ಥ. ಆದರೆ, ಈ ಆದರ್ಶವನ್ನು ಜನ ಮರೆತು, ಬಾಹ್ಯ ನಡವಳಿಕೆ ಮತ್ತು ಕ್ರಿಯೆಗಳಿಗೆ ಸಂಬಂಧಿಸಿದ ಸಾಮಾನ್ಯ ನಿಯಮಗಳಿಗೆ ಜೋತುಬಿದ್ದಿದ್ದಕ್ಕೆ ಏನೆನ್ನಬೇಕು? ಇದೇ ನಿಯಮಗಳೀಗ ಪದ್ಧತಿಯಾಗಿಯೇ ಮಾರ್ಪಟ್ಟಿವೆ. ಎಷ್ಟರಮಟ್ಟಿಗೆಂದರೆ, ಪರಿಷ್ಕರಿಸಲಾಗದ ಮಟ್ಟಿಗೆ ಜನಜೀವನದೊಂದಿಗೆ ಬೆರೆತುಹೋಗಿದೆ ಮತ್ತು ಈ ನಿಯಮಗಳಿಗೆ ಗುರುಗಳು, ಪಾದ್ರಿಗಳು ಮತ್ತು ಮುಲ್ಲಾಗಳು ರಕ್ಷಕರಾಗಿದ್ದಾರೆ. ಇಂತಹ ಸನ್ನಿವೇಶಗಳೇ ಕ್ರಮೇಣ ಕೋಮುವಾದ ಹಾಗೂ ಮತಾಂಧತೆಗೆ ಕಾರಣವಾದವು. ಇನ್ನೊಂದೆಡೆ, ಮಹಿಳೆಯರ ಸ್ಥಿತಿಗತಿ ಕುಸಿಯುತ್ತಲೇ ಬಂದು ಅವರನ್ನು ಕೇವಲ ಮಕ್ಕಳನ್ನು ಹೆರುವ ಯಂತ್ರಗಳಂತೆ ಪರಿಭಾವಿಸಲಾಯಿತು.

ಎಲ್ಲ ವರ್ಗ, ಸಮುದಾಯದವರನ್ನು ಯಾವುದೇ ಭೇದವಿಲ್ಲದೆ ಏಕವೇದಿಕೆಯಡಿ ತರುವ ಪ್ರಯತ್ನ ಅಂದರೆ ಸಮಾನ ನಾಗರಿಕ ಸಂಹಿತೆ ರೂಪಿಸುವ ಆಲೋಚನೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೂ ಇತ್ತು ಮತ್ತು ನಂತರ ಸಂವಿಧಾನ ರಚಿಸುವಾಗಲೂ ಇತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಅಷ್ಟೆ. ಆದಾಗ್ಯೂ, ಸ್ವಾತಂತ್ರ್ಯೊತ್ತರದ ಕಾಲಮಾನದಲ್ಲಿ ಹಿಂದು ಕಾನೂನಿನ ಕೆಲವು ಭಾಗಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ. ಕೊನೆಗೆ, ಭಾರತದಲ್ಲಿ ಸ್ತ್ರೀಯರ ಸ್ಥಾನಮಾನದ ಕುರಿತಾಗಿ ಅಧ್ಯಯನ ನಡೆಸಲು ಒಂದು ಸಮಿತಿ ರಚಿಸಲಾಯಿತು. ಇದು ತನ್ನ ವರದಿಯನ್ನು 1975ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದಕ್ಕೆ ದೇಶದಲ್ಲಿ ಚಾಲ್ತಿಯಲ್ಲಿರುವ ಅನೇಕ ವೈಯಕ್ತಿಕ ಕಾನೂನುಗಳು ಅಡ್ಡಿಯಾಗಿವೆ; ಕೆಲವು ವೈಯಕ್ತಿಕ ಕಾನೂನುಗಳು ಮಹಿಳೆಯರ ಬಗ್ಗೆ ತಾರತಮ್ಯ ನೀತಿ ಹೊಂದಿವೆ. ವಾಸ್ತವದಲ್ಲಿ ಇವು ಮೂಲಭೂತ ಹಕ್ಕುಗಳಿಗೂ ವಿರುದ್ಧವಾಗಿವೆ ಎಂದು ಆ ಸಮಿತಿ ವರದಿಯಲ್ಲಿ ಹೇಳಿತ್ತು.

ಸತಿಪದ್ಧತಿ, ವಿಧವೆಯರನ್ನು ಕೀಳಾಗಿ ನಡೆಸಿಕೊಳ್ಳುವುದು, ಬಾಲ್ಯವಿವಾಹ, ಬಹುಪತ್ನಿತ್ವ, ಅಸ್ಪೃಶ್ಯತೆ, ದೇಶದ ಕೆಲವು ಭಾಗಗಳಲ್ಲಿ ಮತ್ತು ಕೆಲವು ಸಮುದಾಯಗಳಲ್ಲಿರುವ ಅವಕುಂಠನ(ಪರ್ಧಾ) ವ್ಯವಸ್ಥೆ ಮತ್ತು ನರಬಲಿ ಮುಂತಾದವು ಮಹಿಳೆಯರ ಸ್ವಾತಂತ್ರ್ಯ ಅಭಿವೃದ್ಧಿ ಹಾಗೂ ಉನ್ನತೀಕರಣದ ದಾರಿಯಲ್ಲಿ ದೊಡ್ಡ ತಡೆಗೋಡೆಗಳಾಗಿವೆ. ಇಂತಹ ಅನಿಷ್ಟಗಳ ನಿದರ್ಶನಕ್ಕಾಗಿ ಬಹಳ ಹಿಂದೇನೂ ಹೋಗಬೇಕಿಲ್ಲ. ಸತಿಪದ್ಧತಿಗೆ ಬಲಿಯಾದ ರೂಪಾ ಕನ್ವರ್, ಸುಶಿಕ್ಷಿತ ಮುಸ್ಲಿಂ ಪುರುಷನ ಜತೆಗೆ 50 ವರ್ಷ ಸಂಸಾರ ನಡೆಸಿದ ಬಳಿಕ ತಲಾಕ್ ಪಡೆದು ನಲುಗಿದ ಶಾ ಬಾನೋ ಎಂಬ ತೀರಾ ಇತ್ತೀಚಿನ ಪ್ರಕರಣಗಳು ನಿಮಗೂ ನೆನಪಿರಬೇಕು. ನನ್ನ ಪ್ರಕಾರ, ಇಂಥ ಎಲ್ಲ ಅನಿಷ್ಟಗಳನ್ನು ನಿವಾರಿಸುವ ಉತ್ತಮ ಉಪಾಯ ಎಂದರೆ, ಸಮಾನ ನಾಗರಿಕ ಸಂಹಿತೆಯ ಜಾರಿ.

ಸಂವಿಧಾನದ ಅನುಚ್ಛೇದ 15ರ ಪ್ರಕಾರ, ಜನ್ಮಸ್ಥಳ, ಲಿಂಗ, ಜಾತಿ, ಕೋಮು, ಧರ್ಮಗಳ ಆಧಾರದಲ್ಲಿ ಯಾವುದೇ ರೀತಿ ತಾರತಮ್ಯ ಮಾಡಬಾರದು. ತಾರತಮ್ಯ ಎಂದರೆ ನಡೆಸಿಕೊಳ್ಳುವ ರೀತಿಯಲ್ಲಿನ ವ್ಯತ್ಯಾಸ. ಅಂದರೆ, ವ್ಯತಿರಿಕ್ತವಾಗಿ ನಡೆಸಿಕೊಳ್ಳುವುದು ಅಥವಾ ಇತರರಿಗಿಂತ ಭಿನ್ನವಾಗಿ ನಡೆಸಿಕೊಳ್ಳುವುದು.

ಹಿಂದು ಕಾನೂನನ್ನು ಪರಿಷ್ಕರಿಸಿ ಮಹಿಳೆಯರಿಗೂ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂದು ಭಾರತದ ಕಾನೂನು ಆಯೋಗ ತನ್ನ 174ನೇ ವರದಿಯಲ್ಲಿ ಶಿಫಾರಸು ಮಾಡಿತ್ತು. ಮಿತಾಕ್ಷರ ವ್ಯವಸ್ಥೆ ಪ್ರಕಾರ, ಆಸ್ತಿಯಲ್ಲಿ ಸಮಪಾಲು ಮತ್ತು ಆನುವಂಶಿಕ ಪ್ರಾಪ್ತಿಯ ವಿಚಾರ ಪುತ್ರಿಗೆ ಆನುವಂಶಿಕ ಹಕ್ಕಲ್ಲ. ಬದಲಾಗಿ ಯಾರೂ ವಾರಸುದಾರರಿರದ್ದಾಗ ಆಕೆಗೆ ಅದು ದಕ್ಕುತ್ತದೆ. ಮಹಿಳೆ ಎನ್ನುವ ಕಾರಣಕ್ಕೆ ಪುತ್ರಿಗೆ ಆನುವಂಶಿಕ ಆಸ್ತಿಯ ಸಮಪಾಲು ನೀಡದೆ ತಾರತಮ್ಯ ಮಾಡುವುದು ಸಮಾನತೆಯ ಮೂಲಭೂತ ಹಕ್ಕಿಗೆ ವಿರುದ್ಧವಾದುದು. ಸಂವಿಧಾನದ ಅನುಚ್ಛೇದ 14ರ ಪ್ರಕಾರ ಸಮಾನತೆ ಮತ್ತು ಸಮಾನ ಸಂರಕ್ಷಣೆಯ ಕಾನೂನುಗಳು ಖಾತರಿಪಡಿಸಲ್ಪಟ್ಟಿವೆ. ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಗಳು ಕೂಡ ಈ ಪರಿಚ್ಛೇದದಲ್ಲಿ ಒಳಗೊಂಡಿರುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಅದೃಷ್ಟವಶಾತ್ ನಮ್ಮ ದೇಶದ ಹಿಂದು ಕಾನೂನು ಪರಿಷ್ಕರಣೆಗೊಳಪಟ್ಟಿದ್ದು, ಹಿಂದು ಕುಟುಂಬಗಳ ಪುತ್ರಿಯರಿಗೆ ಪುತ್ರರಷ್ಟೇ ಸಮಾನ ಹಕ್ಕು ಲಭಿಸಿದೆ. ಆದಾಗ್ಯೂ, ಅಂತಹ ಪ್ರಯೋಜನಗಳು ದೇಶದ ಇತರೆ ಸಮುದಾಯದ ಹೆಣ್ಮಕ್ಕಳಿಗೆ ಸಿಕ್ಕಿಲ್ಲ ಎಂಬುದು ವಿಪರ್ಯಾಸವೇ ಸರಿ.

ನಿಮೂಲನೆಗೊಳಿಸಲೇಬೇಕಾದ ಇನ್ನೊಂದು ಸಾಮಾಜಿಕ ಪಿಡುಗು ವರದಕ್ಷಿಣೆಯದ್ದು. ಈ ಸಂಬಂಧ ಕಾನೂನು ಇದ್ದರೂ ಅದು ಪರಿಣಾಮಕಾರಿಯಾಗಿಲ್ಲವಾದ್ದರಿಂದ ಈ ಪಿಡುಗನ್ನು ಆಮೂಲಾಗ್ರ ನಿವಾರಿಸುವುದು ಸಾಧ್ಯವಾಗಿಲ್ಲ. ಶಿಕ್ಷಣ, ಜಾಗೃತಿ ಹಾಗೂ ಮಹಿಳೆಯರ ಬಗ್ಗೆ ಗೌರವ ಮೂಡಿಸಿದಾಗ ಮಾತ್ರ ಈ ಪಿಡುಗನ್ನು ನಿಮೂಲನೆ ಮಾಡಬಹುದು.

☆ ಲಿಂಗ ಸಮಾನತೆ

ದೈಹಿಕ ರಚನೆಯ ಕಾರಣಕ್ಕಾಗಿ ಪುರುಷರು ಮಾಡುವ ಎಲ್ಲ ಕೆಲಸಗಳನ್ನೂ ಮಹಿಳೆ ಮಾಡಲಿಕ್ಕಾಗದು. ಈ ಕಾರಣದಿಂದ ಕೆಲವೊಮ್ಮೆ ಆಕೆಗೆ ರಕ್ಷಣೆ ಅಗತ್ಯವಾಗಬಹುದು. ಆದರೆ ಸಂಪೂರ್ಣ ಲಿಂಗ ಸಮಾನತೆಯು ಇಂಥದನ್ನು ಒಪ್ಪುವುದಿಲ್ಲ. ಹೀಗಾಗಿ ಅಂತಹ ಸಂದರ್ಭದಲ್ಲಿ ಮಹಿಳೆಯನ್ನು ಶೋಷಣೆಯಿಂದ ರಕ್ಷಿಸಲು ಯಾವ ಬಗೆಯ ರಕ್ಷಣಾ ಕ್ರಮಗಳು ಅಗತ್ಯ ಮತ್ತು ನಿರಂತರವಾಗಿ ಈ ರಕ್ಷಣಾ ಕ್ರಮಗಳನ್ನು ಜಾರಿಯಲ್ಲಿಡಬಹುದೇ ಎಂಬ ಪ್ರಶ್ನೆಗಳೂ ಇಂಥ ಸಂದರ್ಭದಲ್ಲಿ ಉದ್ಭವಿಸುತ್ತವೆ.

ಎಲ್ಲ ಮಾನವರೂ ಸಮಾನರು ಎಂದು ವಿಶ್ವಸಂಸ್ಥೆ ಪ್ರತಿಪಾದಿಸುತ್ತದೆ. ಆದರೆ, ಮೂಲಭೂತ ಮಾನವ ಹಕ್ಕುಗಳ ವಿಷಯಕ್ಕೆ ಬಂದಾಗ ಸ್ತ್ರೀಯರ ರಕ್ಷಣಾ ಕ್ರಮಗಳು ತಾರತಮ್ಯ ನೀತಿಯದ್ದು ಎಂದು ವಿಶ್ವಸಂಸ್ಥೆಯೂ ಪರಿಗಣಿಸಲ್ಪಡುವುದಿಲ್ಲ ಎಂಬುದು ಗಮನಾರ್ಹ. ಮಹಿಳೆಯರ ವಿರುದ್ಧದ ತಾರತಮ್ಯ ನಿಮೂಲನಾ (1967) ಘೊಷಣೆಯ 10.3ನೇ ವಿಧಿ ಪ್ರಕಾರ, ‘…..ಮಹಿಳೆಯರ ಶರೀರ ಪ್ರಕೃತಿಯ ಕಾರಣಕ್ಕೆ ಕೆಲವೊಂದು ಉದ್ಯೋಗಗಳಲ್ಲಿ ಅವರ ರಕ್ಷಣೆಗಾಗಿ ಇರುವ ನಿಯಮಗಳನ್ನು ತಾರತಮ್ಯವೆಂದು ಪರಿಗಣಿಸಬಾರದು’.

ಇತಿಹಾಸದ ಪುಟಗಳನ್ನು ತೆರೆದರೆ, ಪ್ರಗತಿಪರ ರಾಷ್ಟ್ರ ಎಂದು ಬೀಗುವ ಅಮೆರಿಕದಲ್ಲೂ ಮಹಿಳೆಯರು ತಾರತಮ್ಯ ನೀತಿಗೊಳಗಾಗಿದ್ದು ಕಂಡುಬರುತ್ತದೆ. ಸಂವಿಧಾನದ 14ನೇ ತಿದ್ದುಪಡಿ ಮೂಲಕ ‘ಎಲ್ಲ ವ್ಯಕ್ತಿಗಳೂ ಸಮಾನ’ರೆಂದು ಹೇಳಲಾಯಿತು. ಆದರೂ, ‘ಮಹಿಳೆಯರ ಶರೀರ ವಿನ್ಯಾಸವು ಅವರನ್ನು ಪುರುಷರಿಂದ ಪ್ರತ್ಯೇಕಿಸುತ್ತಿದ್ದು, ಅವರು ಪುರುಷರು ಮಾಡುವ ಕೆಲವೊಂದು ಶ್ರಮದ ಕೆಲಸಗಳನ್ನು ಮಾಡಲಾರರು. ಇದನ್ನು ಕೂಡ ಪರಿಗಣಿಸಬೇಕಾಗುತ್ತದೆ’ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಕೆಲ ವರ್ಷಗಳ ಹಿಂದೆ ತೀರ್ಪು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಅಮೆರಿಕದ ಸುಪ್ರೀಂ ಕೋರ್ಟ್ ಸಮಾನತೆಯನ್ನು ಉಗ್ರವಾಗಿ ಪ್ರತಿಪಾದಿಸುತ್ತದೆ. ಹಾಗಿದ್ದರೂ, ಮಹಿಳೆಯರ ವಕೀಲಿಕೆ ಹಕ್ಕು, ನಿಗದಿತ ಮಿತಿಯನ್ನು ಮೀರುವ ಭಾರ ಎತ್ತುವ ಅಥವಾ ಹೊರುವ ಕೆಲಸಗಳು ಅಥವಾ ತಡರಾತ್ರಿ ತನಕ ಮಾಡಬೇಕಾದ ಕೆಲಸಗಳು ಮುಂತಾದವುಗಳನ್ನು ನಿಷೇಧಿಸಿದ ಹಾಗೂ ದಿನ ಮತ್ತು ವಾರದಲ್ಲಿ ಎಷ್ಟು ಗಂಟೆ ಮಹಿಳೆಯರು ಕೆಲಸ ಮಾಡಬಹುದು ಎಂಬುದನ್ನು ನಿರ್ದೇಶಿಸುವ ಕಾನೂನುಗಳ ಮಾನ್ಯತೆಯನ್ನು ಅದು ಎತ್ತಿಹಿಡಿದ ನಿದರ್ಶನಗಳು ಕೂಡ ನಮಗೆ ಸಿಗುತ್ತವೆ.

ಮಹಿಳೆಯರ ಶರೀರ ಪ್ರಕೃತಿಯ ಕಾರಣದಿಂದಾಗಿ 18ನೇ ಶತಮಾನದಲ್ಲಿ ಅವರಿಗೆ ಕೆಲವು ಮಿತಿಗಳನ್ನು ವಿಧಿಸಲಾಗಿತ್ತು. ಅದೇ ಕಟ್ಟುಪಾಡುಗಳು ಮುಂದೆ ಮಹಿಳಾ ವಿಮೋಚನಾ ಚಳವಳಿಗೆ ನಾಂದಿಹಾಡಿದವು. ಎಲ್ಲ ವಿಷಯಗಳಲ್ಲಿಯೂ ಮಹಿಳೆಯನ್ನು ಸಮಾನವಾಗಿ ನೋಡಬೇಕು ಎಂಬ ಹಕ್ಕೊತ್ತಾಯ ಕೇಳಿಬಂದು, ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ವ್ಯಾಪಕ ಬದಲಾವಣೆಗೆ ಕಾರಣವಾಯಿತು. ಪರಿಣಾಮ, ಇಂದು ಅಮೆರಿಕದಲ್ಲಿ ಮಹಿಳೆಯರನ್ನು ಪುರುಷರಿಗೆ ಸರಿಸಮಾನವಾಗಿ ಕಾಣಲಾಗುತ್ತದೆ.

☆ ಮಹಿಳಾ ಪರ ನೀತಿ.

ಶತಶತಮಾನಗಳಿಂದ ಮಹಿಳೆಯರನ್ನು ಅಸಮಾನತೆಯಿಂದ ಕಂಡ ಪರಿಣಾಮ ಸಾಮಾಜಿಕ ನ್ಯೂನತೆಗೆ ಕಾರಣವಾದದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಮ್ಮ ದೇಶದ ಸಂವಿಧಾನ ನಿರ್ವತೃರು ಈ ಕಟುವಾಸ್ತವವನ್ನು ಅರ್ಥೈಸಿಕೊಂಡು ಲೋಪವನ್ನು ಸರಿಪಡಿಸುವ ಪ್ರಯತ್ನ ನಡೆಸಿದರು. ಇದರಂತೆ, ಸಂವಿಧಾನದ ಅನುಚ್ಛೇದ 15(3)ರಲ್ಲಿ ಮಹಿಳೆಯರ ಪರವಾಗಿ ‘ರಕ್ಷಣಾತ್ಮಕ ತಾರತಮ್ಯ’ ಅಂಶವನ್ನು ಸೇರ್ಪಡೆಗೊಳಿಸಿದರು. ಕೆಲ ವಿಚಾರಗಳಲ್ಲಿ ಪುರುಷರಿಗೆ ಹೋಲಿಸಿದರೆ ಹೆಚ್ಚು ಮಹಿಳಾಪರ ನೀತಿ ಅನುಸರಿಸಬಹುದು; ಇದರಿಂದ ಸಮಾನತೆಯ ಹಕ್ಕಿಗೆ ಭಂಗವೇನೂ ಆಗದು ಎಂಬುದು ಈ ನೀತಿಯ ಒಟ್ಟಾರೆ ಸಾರಾಂಶ. ತಾರತಮ್ಯ ವಿರೋಧಿ ನಿಯಮಕ್ಕೆ ಇದೊಂದು ಅಪವಾದೆನ್ನಬಹುದು.

ಉದಾಹರಣೆಗೆ ಹೇಳುವುದಾದರೆ, ಮಹಿಳಾ ಕೆಲಸಗಾರರಿಗೆ ನೀಡುವ ಹೆರಿಗೆ ರಜೆಯನ್ನು ತಾರತಮ್ಯ ವಿರೋಧಿ ನೀತಿಗೆ ವಿರುದ್ಧವಾದುದು ಎನ್ನಲಾಗದು. ಅದೇ ರೀತಿ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವಾಸ್ತವ್ಯ, ಪ್ರವೇಶದ್ವಾರ ಇತ್ಯಾದಿ ಸವಲತ್ತುಗಳನ್ನು ಕಲ್ಪಿಸುವುದು ಸಂವಿಧಾನ ಸಮಾನತೆಯ ಹಕ್ಕಿಗೆ ವಿರುದ್ಧವಾಗದು. ಮಹಿಳಾ ಕೆಲಸಗಾರರ ಕೆಲಸದ ಅವಧಿಗೆ ಮಿತಿ ಹೇರುವುದು ಅಥವಾ ಅದನ್ನು ನಿಯಂತ್ರಿಸುವುದು ಕೂಡ ಮಹಿಳಾಪರ ರಕ್ಷಣಾ ತಾರತಮ್ಯವೇ ಆಗುತ್ತದೆ. ಇಂತಹ ಕ್ರಮಗಳು ‘ಪುರುಷ ಕೆಲಸಗಾರ’ರಿಗೆ ಅಗತ್ಯವಿರುವುದಿಲ್ಲ.

ಭಾರತದಲ್ಲಿ ಮಹಿಳೆಯರಿಗಿರುವ ವಿಶಿಷ್ಟ ಸಾಮಾಜಿಕ ಸ್ಥಾನಮಾನದ ಹಿನ್ನೆಲೆಯಲ್ಲಿ ಅವರಿಗೆ ನೀಡುವ ವಿಶೇಷ ಆದರವೂ ಸಮರ್ಥನೀಯವಾದುದೇ. ನೈನ್ ಸುಖ್ ವರ್ಸಸ್ ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ, ತಾರತಮ್ಯ ನೀತಿ ವಿರುದ್ಧದ ಸಾಮಾನ್ಯ ನಿಷೇಧವನ್ನು ರಾಜಕೀಯ ಹಕ್ಕುಗಳಿಗೂ ವಿಸ್ತರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದ್ದರಿಂದಲೇ, ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕ ಮಹಿಳಾ ಪ್ರಾತಿನಿಧ್ಯವನ್ನು ಕೋರ್ಟುಗಳು ಎತ್ತಿಹಿಡಿದಿರುವುದು.

ಸಂವಿಧಾನದಲ್ಲಿ ಕೊಡಮಾಡಲ್ಪಟ್ಟಿರುವ ಸಮಾನತೆಯ ಹಕ್ಕುಗಳನ್ನು ಉಲ್ಲಂಘಿಸದೆ, ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ನೀಡಲಾಗಿರುವ ವಿಶೇಷ ಸವಲತ್ತುಗಳನ್ನು ಸಮಗ್ರವಾಗಿ ಪಟ್ಟಿಮಾಡುವುದು ಅಷ್ಟು ಸುಲಭವಲ್ಲ ಬಿಡಿ. ಅದು ಮಹಿಳೆಯರ ವಿಶೇಷ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ. ಆದಾಗ್ಯೂ ಅಮೆರಿಕದ ಸುಪ್ರೀಂ ಕೋರ್ಟ್, ಮುಲ್ಲರ್ ವರ್ಸಸ್ ಒರೆಗಾನ್ ಪ್ರಕರಣದಲ್ಲಿ ಇಂಥ ಸವಲತ್ತುಗಳನ್ನು ಪಟ್ಟಿ ಮಾಡಲು ಪ್ರಯತ್ನಿಸಿತ್ತು. ಪುರುಷ ಹಾಗೂ ಸ್ತ್ರೀಯರ ಶಾರೀರಿಕ ಭಿನ್ನತೆ, ಇಬ್ಬರೂ ನಿರ್ವಹಿಸುವ ಕೆಲಸಗಳ ಭಿನ್ನತೆ, ದೈಹಿಕ ಬಲ, ನಿರಂತರ ಶ್ರಮದ ಕೆಲಸಗಳನ್ನು ಮಾಡುವ ಸಾಮರ್ಥ್ಯ, ಗೃಹಕೃತ್ಯಗಳ ಸಮರ್ಪಕ ನಿರ್ವಹಣೆ, ಮಕ್ಕಳ ಲಾಲನೆ, ಪಾಲನೆ, ಅವರ ಶಿಕ್ಷಣ ಸೇರಿ ಮಾತೃತ್ವದ ಹೊಣೆಗಾರಿಕೆ, ವಿಧವೆ ಹಾಗೂ ವಿಧುರರ ನಡುವಿನ ಆರ್ಥಿಕ ತಾರತಮ್ಯ… ಇತ್ಯಾದಿಯಾಗಿ ಪಟ್ಟಿ ಸಾಗಿತ್ತು. ಇದಕ್ಕೆ ಅನುಗುಣವಾಗಿ ವಿಶ್ವಸಂಸ್ಥೆ 1967ರಲ್ಲಿ ಹೊರಡಿಸಿದ ‘ಮಹಿಳೆಯರ ವಿರುದ್ಧದ ತಾರತಮ್ಯ ನಿಮೂಲನಾ ಘೊಷಣೆ’ಯ ವಿಧಿ 10.3ರನ್ನು ರೂಪಿಸಲಾಗಿದೆ.

ನಮ್ಮ ಸಂವಿಧಾನ ನಿರ್ವಪಕರು ಅನುಚ್ಛೇದ 15(3) ರೂಪಿಸುವಾಗ ಮತ್ತು ಮಹಿಳಾ ಪರವಾದ ರಕ್ಷಣಾ ತಾರತಮ್ಯದ ನಿಯಮಗಳನ್ನು ರೂಪಿಸುವಾಗ ಅಮೆರಿಕದ ‘ಮುಲ್ಲರ್ ವರ್ಸಸ್ ಒರೆಗಾನ್’ ಪ್ರಕರಣದಿಂದ ಪ್ರೇರಣೆಗೊಳಗಾಗಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಸ್ತ್ರೀ ಹಾಗೂ ಪುರುಷರು ಸಮಾನ ಸನ್ನಿವೇಶದಲ್ಲಿದ್ದಾಗ ತಾರತಮ್ಯ ಎಸಗುವುದು ಸಮಾನ ರಕ್ಷಣೆಯ ಹಕ್ಕನ್ನು ನಿರಾಕರಿಸಿದಂತೆ ಎಂದು ನಮ್ಮ ಕೋರ್ಟುಗಳು ಕಾಲಾನುಕಾಲಕ್ಕೆ ಎಚ್ಚರಿಸುತ್ತ ಬಂದಿರುವುದನ್ನೂ ನಾವಿಲ್ಲಿ ಪರಿಗಣಿಸಬೇಕಾಗುತ್ತದೆ.

ಭಾರತದ ಪುತ್ರರು ಹಾಗೂ ಪುತ್ರಿಯರು ತಾಯಿ ಭಾರತಿಯ ಎರಡು ಕೈಗಳಿದ್ದಂತೆ, ಅವರನ್ನು ಸಮಾನವಾಗಿ ಕಾಣಬೇಕು. ಪುತ್ರಿಯರ ವಿರುದ್ಧ ಭೇದ ಎಣಿಸುವುದೆಂದರೆ ತಾಯಿ ಭಾರತಿಯ ಒಂದು ಕೈಯನ್ನು ಕಟ್ಟಿಹಾಕಿದಂತೆ ಮತ್ತು ಆಕೆ ಒಂದೇ ಕೈಯಿಂದ ಕೆಲಸ ನಿರ್ವಹಿಸುವಂತೆ ಮಾಡಿದಂತೆಯೇ ಸರಿ. ಎರಡೂ ಕೈಗಳು ಸಮನ್ವಯದಿಂದ ಕೆಲಸಮಾಡದಿದ್ದರೆ ತಾಯ್ನೆಲದ ಅಭಿವೃದ್ಧಿ ಸಾಧ್ಯವಿಲ್ಲ. ಏನಂತೀರಿ?