ಸಿಮ್ ಜೋಪಾನ.

ಸಿಮ್ ಜೋಪಾನ!
Wednesday, 11.04.2018.
| ಟಿ. ಜಿ. ಶ್ರೀನಿಧಿ

ನಿಮ್ಮ ಮೊಬೈಲ್ ಫೋನ್ ಎಷ್ಟೇ ಅತ್ಯಾಧುನಿಕವಾಗಿರಲಿ, ಅದರಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿ, ಪರಿಣಾಮಕಾರಿ ಬಳಕೆ ಸಾಧ್ಯವಾಗಬೇಕೆಂದರೆ ಅದರಲ್ಲೊಂದು ಸಿಮ್ ಇರಲೇಬೇಕು. ‘ಸಿಮ್ ಎಂಬ ಹೆಸರು ‘ಸಬ್ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್’(ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಚಂದಾದಾರರ ಗುರುತು ದೃಢೀಕರಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಸಿಮ್ ಪಾತ್ರ ಮಹತ್ವದ್ದು.

ಚಂದಾದಾರರಿಗೆ ಸಂಪರ್ಕ ನೀಡುವುದೇನೋ ಸರಿ, ಅದಕ್ಕೆ ಮೊದಲು ಯಾವ ಚಂದಾದಾರರು ಯಾವ ಸಿಮ್ ಬಳಸುತ್ತಿದ್ದಾರೆ ಎನ್ನುವುದು ಮೊಬೈಲ್ ಸಂಸ್ಥೆಗೆ ಗೊತ್ತಾಗಬೇಕಲ್ಲ! ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್(ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಸಂಖ್ಯೆ, ಪ್ಯಾನ್, ಆಧಾರ್ ಎಲ್ಲ ಇದ್ದ ಹಾಗೆಯೇ ಇದು ನಮ್ಮ ಸಿಮ್ ಅನ್ನು ನಿರ್ದಿಷ್ಟವಾಗಿ ಗುರುತಿಸಬಲ್ಲ ಸಂಖ್ಯೆ.

ಪ್ರಪಂಚದ ಪ್ರತಿಯೊಂದು ಸಿಮ್ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ. ನಮ್ಮ ಖಾತೆಯ ವಿವರಗಳನ್ನು ನಿರ್ದಿಷ್ಟ ಸಿಮ್ೆ ಹೊಂದಿಸಲು, ನಮಗೆ ಬರುವ ಕರೆ, ಸಂದೇಶಗಳನ್ನು ಎಲ್ಲಿಗೆ ಕಳಿಸಬೇಕು ಎನ್ನುವುದನ್ನು ತಿಳಿಯಲು ಮೊಬೈಲ್ ಸಂಸ್ಥೆಗಳು ಈ ಸಂಖ್ಯೆಯನ್ನು ಬಳಸುತ್ತವೆ. ಬ್ಯಾಂಕಿನಿಂದ ಬರುವ ಓಟಿಪಿ, ಕಚೇರಿಯಿಂದ ಬರುವ ದೂರವಾಣಿ ಕರೆಯೇ ಇರಲಿ. ಅದು ನಮ್ಮನ್ನು ತಲುಪಬೇಕೆಂದರೆ ಮೊಬೈಲ್ ಸಂಸ್ಥೆಯಲ್ಲಿ ನಮ್ಮ ಸಿಮ್ ಸಂಖ್ಯೆ(ಐಸಿಸಿಐಡಿ) ಸರಿಯಾಗಿ ದಾಖಲಾಗಿರಬೇಕು.

ಮೊದಲ ಬಾರಿಗೆ ಸಿಮ್ ಪಡೆದುಕೊಂಡಾಗ, ನಮ್ಮ ಖಾತೆ ಆಕ್ಟಿವೇಟ್ ಆಗುವಾಗ ಈ ಸಂಖ್ಯೆಯನ್ನು ಮೊಬೈಲ್ ಸಂಸ್ಥೆಯ ಸಿಬ್ಬಂದಿ ನಮ್ಮ ಖಾತೆಯೊಡನೆ ಜೋಡಿಸಿರುತ್ತಾರೆ. ಯಾವುದೇ ಕಾರಣದಿಂದ ನಾವು ಸಿಮ್ ಬದಲಿಸಿದರೆ ಮಾತ್ರ ಹೊಸ ಸಂಖ್ಯೆಯನ್ನು ಮೊಬೈಲ್ ಸಂಸ್ಥೆಯೊಡನೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೊಸ ಸಿಮ್ ನೀಡಿದ ಸಂದರ್ಭಗಳಲ್ಲಿ ಸಿಮ್ ಸಂಖ್ಯೆಯನ್ನು ನಿರ್ದಿಷ್ಟ ಸಂಖ್ಯೆಗೆ ಎಸ್ಸೆಮ್ಮೆಸ್ ಮೂಲಕ ಕಳಿಸುವಂತೆ ಹೇಳುತ್ತಾರಲ್ಲ, ಅದರ ಉದ್ದೇಶ ಇದು.

ಬ್ಯಾಂಕ್ ಖಾತೆ, ಮೊಬೈಲ್ ವ್ಯಾಲೆಟ್ ಸೇರಿ ಸಕಲವೂ ನಮ್ಮ ಫೋನಿನ ಮೂಲಕವೇ ಕೆಲಸಮಾಡುವ ಈ ದಿನಗಳಲ್ಲಿ ಮೇಲೆ ಹೇಳಿದ ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಎಚ್ಚರವಾಗಿರಬೇಕಾದ್ದು ಅನಿವಾರ್ಯ. ಗ್ರಾಹಕರಿಗೆ ವಂಚಿಸಿ ಅವರ ಖಾತೆಯನ್ನು ತಮ್ಮಲ್ಲಿರುವ ಸಿಮ್ೆ ಜೋಡಿಸಲು ಪ್ರಯತ್ನಿಸುವ ‘ಸಿಮ್ ಸ್ವಾಪ್’ ಹಗರಣದ ಕುರಿತು ಜಾಗೃತರಾಗಿರಬೇಕಾದ್ದು ಈ ಎಚ್ಚರಿಕೆಯ ಒಂದು ಭಾಗ. ಮೊಬೈಲ್ ಸಂಸ್ಥೆಯಿಂದ ಕರೆಮಾಡುತ್ತಿದ್ದೇವೆ, ಇಪ್ಪತ್ತು ಅಂಕಿಯ ಸಂಖ್ಯೆಯೊಂದನ್ನು ಎಸ್ಸೆಮ್ಮೆಸ್ ಮಾಡದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತದೆ ಎಂದೆಲ್ಲ ಹೆದರಿಸುತ್ತಾರಲ್ಲ, ಅವರನ್ನು ಸಾರಾಸಗಟಾಗಿ ಉಪೇಕ್ಷಿಸುವುದು ಒಳ್ಳೆಯದು. ಅವರು ಹೇಳುತ್ತಿರುವುದರ ಬಗ್ಗೆ ಪ್ರಶ್ನೆಗಳಿದ್ದರೆ ಮೊಬೈಲ್ ಸಂಸ್ಥೆಯ ಗ್ರಾಹಕ ಸೇವಾ ವಿಭಾಗಕ್ಕೆ ಕರೆಮಾಡಿ ವಿಚಾರಿಸಿಕೊಳ್ಳುವುದು ಉತ್ತಮ. ಅದರ ಬದಲು ಅವರು ಹೇಳಿದಂತೆ ಮೆಸೇಜ್ ಮಾಡಿದರೆ ನಮ್ಮ ಸಿಮ್ ನಿಷ್ಕ್ರಿಯವಾಗುವುದಷ್ಟೇ ಅಲ್ಲ, ಹೊಸ ಸಿಮ್ ಮೂಲಕ ನಮ್ಮ ಬ್ಯಾಂಕ್ ಖಾತೆಯ ನಿಯಂತ್ರಣ ಖದೀಮರ ಕೈಸೇರುವ ಸಾಧ್ಯತೆಯೂ ಇರುತ್ತದೆ.(ಇಂತಹ ಪ್ರಕರಣಗಳು ನಮ್ಮ ದೇಶದಲ್ಲೂ ಹೆಚ್ಚುತ್ತಿರುವ ಬಗ್ಗೆ ಈಚೆಗೆ ಅನೇಕ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕುರಿತು ಎಚ್ಚರಿಸುವ ಸಂದೇಶಗಳನ್ನು ಮೊಬೈಲ್ ಸಂಸ್ಥೆಗಳೂ ಗ್ರಾಹಕರಿಗೆ ಕಳಿಸುತ್ತಿವೆ).

ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡ್ಗಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೇವಲ್ಲ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಮೊಬೈಲಿನಿಂದ ಸಿಮ್ ಹೊರತೆಗೆದಾಗ ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು, ಮೊಬೈಲ್ ಫೋನ್ ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ಈ ಮೂಲಕ ತಡೆಯಬಹುದು. ಸಿಮ್ ಮಾಹಿತಿ ನಕಲಿಸಿಕೊಂಡು ಬಳಸುವ ಈ ಹಗರಣಕ್ಕೆ ಸಿಮ್ ಕ್ಲೋನಿಂಗ್ ಎಂದು ಹೆಸರು. ನಮ್ಮ ಮೊಬೈಲ್ ಖಾತೆಯ ಚಟುವಟಿಕೆಯ ಬಗ್ಗೆ, ಬಿಲ್ನಲ್ಲಿರುವ ವಿವರಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಸಂಸ್ಥೆಯ ಗ್ರಾಹಕ ಸೇವಾ ವಿಭಾಗವನ್ನು ಸಂರ್ಪಸುವುದು ಒಳ್ಳೆಯದು.

ಚಂದಾದಾರರನ್ನು ಪರೀಕ್ಷಿಸುವ ಸಾಧನ

ಯಾವುದೇ ಮೊಬೈಲ್ ಸಂಸ್ಥೆಯ ಸಿಮ್ ಬಳಸುತ್ತಿರುವವರು ಆ ಸಂಸ್ಥೆಯ ಚಂದಾದಾರರೋ ಅಲ್ಲವೋ ಎಂದು ಪರೀಕ್ಷಿಸಿದ ನಂತರವೇ ಅವರಿಗೆ ಜಾಲದ ಸಂಪರ್ಕ ಒದಗಿಸಿಕೊಡಲಾಗುತ್ತದೆ. ಈ ಉದ್ದೇಶಕ್ಕಾಗಿ ಇಂಟರ್ನ್ಯಾಶನಲ್ ಮೊಬೈಲ್ ಸಬ್ಸ್ಕ್ರೈಬರ್ ಐಡೆಂಟಿಟಿ(ಐಎಂಎಸ್ಐ) ಎಂಬ ವಿಶಿಷ್ಟ ಸಂಖ್ಯೆ ಬಳಕೆಯಾಗುತ್ತದೆ. ಮೊಬೈಲ್ ಚಂದಾದಾರರನ್ನು ಗುರುತಿಸಲು, ಅವರಿಗೆ ಜಾಲದ ಸಂಪರ್ಕ ಒದಗಿಸಿಕೊಡಲು ಬಳಕೆಯಾಗುವ ಈ ಸಂಖ್ಯೆ ಸಿಮ್ಲ್ಲಿ ಶೇಖರವಾಗಿರುತ್ತದೆ. ಫೋನ್ ವಿಷಯ ಐಎಂಇಐ ಎಂಬ ಇನ್ನೊಂದು ಸಂಖ್ಯೆಯ ಪ್ರಸ್ತಾಪ ಬರುತ್ತದಲ್ಲ, ಅದು ‘ಇಂಟರ್ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ’ ಎಂಬ ಹೆಸರಿನ ಹ್ರಸ್ವರೂಪ. ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸಲು ಅದು ಬಳಕೆಯಾಗುತ್ತದೆ. ಐಎಂಎಸ್ಐ ಹಾಗೂ ಐಎಂಇಐ ಪರಸ್ಪರ ಬೇರೆಯವೇ ಆದ ಸಂಖ್ಯೆಗಳು.

ಭಾರತಕ್ಕೆ ಮತ್ತೊಂದು ವಿಶ್ವಸುಂದರಿ ಪಟ್ಟ.

ಹರಿಯಾಣ ಕುವರಿ ವಿಶ್ವಸುಂದರಿ.1

ಸನ್ಯಾ: ಚೀನಾದಲ್ಲಿ ನಡೆದ 2017ರ ವಿಶ್ವಸುಂದರಿ ಸ್ಪರ್ಧೆಯಲ್ಲಿ 108 ಸ್ಪರ್ಧಿಗಳನ್ನು ಹಿಂದಿಕ್ಕಿ ಹರಿಯಾಣದ ಮಾನುಷಿ ಛಿಲ್ಲರ್ ವಿಶ್ವಸುಂದರಿ-2017 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವೈದ್ಯ ದಂಪತಿಯ ಪುತ್ರಿಯಾದ 21 ವರ್ಷದ ಮಾನುಷಿ 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದರು.

2016ರ ವಿಶ್ವ ಸುಂದರಿ ಸ್ಟೇಫಾನಿ ಡೆಲ್ ವ್ಯಾಲೆ ಮಾನುಷಿಗೆ ವಿಶ್ವಸುಂದರಿ ಕಿರೀಟ ತೊಡಿಸಿದರು. 16 ವರ್ಷದ ಬಳಿಕ ವಿಶ್ವಸುಂದರಿ ಕಿರೀಟ ಧರಿಸಿದ 6ನೇ ಮಹಿಳೆಯಾಗಿ ಮಾನುಷಿ ಹೊಮ್ಮಿದ್ದಾರೆ. 2000ದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಈ ಕೀರ್ತಿಗೆ ಪಾತ್ರರಾಗಿದ್ದರು. ‘ಪ್ರಪಂಚದಲ್ಲಿ ಯಾರಿಗೆ ಹೆಚ್ಚು ಸಂಬಳ ನೀಡಬೇಕು?’ ಎಂದು ಸ್ಪರ್ಧೆಯಲ್ಲಿ ಕೇಳಲಾದ ಪ್ರಶ್ನೆಗೆ- ‘ತಾಯಿಗೆ’ ಎಂದ ಮಾನುಷಿ, ನಾವು ಪಡೆಯುವ ವೇತನಕ್ಕಿಂತ ಹೆಚ್ಚಾಗಿ ಪ್ರೀತಿ ಹಾಗೂ ಗೌರವ ಸಂಪಾದಿಸಬೇಕು. ಇದು ಕೇವಲ ತಾಯಿಯಿಂದ ಮಾತ್ರ ಸಾಧ್ಯ. ತಾಯಂದಿರು ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಹಾಗಾಗಿ ನಾವು ಅವರಿಗೆ ಹೆಚ್ಚು ಗೌರವ ನೀಡಬೇಕು’ ಎಂದು ಉತ್ತರಿಸಿದ್ದರು. ಮಾನುಷಿಯ ತಂದೆ ಡಾ. ಮಿತ್ರಾ ಬಸು ಛಿಲ್ಲರ್ ಹರಿಯಾಣದ ಡಿಆರ್​ಡಿಒನಲ್ಲಿ ಓರ್ವ ವಿಜ್ಞಾನಿಯಾಗಿದ್ದರೆ, ಅಮ್ಮ ಡಾ. ನೀಲಂ ಛಿಲ್ಲರ್ ಇನ್​ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಆಂಡ್ ಅಲೈಡ್ ಸೈನ್ಸಸ್​ನಲ್ಲಿನ ನ್ಯೂರೋಕೆಮಿಸ್ಟ್ರಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿದ್ದಾರೆ.

ನವದೆಹಲಿಯ ಸೇಂಟ್ ಥಾಮಸ್ ಶಾಲೆಯಲ್ಲಿ ಅಧ್ಯಯನ ಮಾಡಿದ ಮಾನುಷಿ, ಸೋನಿಪತ್​ನಲ್ಲಿರುವ ಭಗತ್ ಫೂಲ್ ಸಿಂಗ್ ಮಹಿಳಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಈಕೆ ಪರಿಣತ ಕೂಚಿಪುಡಿ ನೃತ್ಯಗಾತಿಯೂ ಹೌದು. ರಾಜಾ ಮತ್ತು ರಾಧಾ ರೆಡ್ಡಿ ಹಾಗೂ ಕೌಶಲ್ಯಾ ರೆಡ್ಡಿಯವರಂಥ ಪ್ರಸಿದ್ಧ ನೃತ್ಯ ಕಲಾವಿದರು ಮಾನುಷಿಗೆ ನೃತ್ಯಪಾಠ ಹೇಳಿದವರಲ್ಲಿ ಪ್ರಮುಖರು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲೂ ಸಕ್ರಿಯರಾಗಿದ್ದಾಕೆ.

2017ರ ಜೂನ್ 25ರಂದು ಫೆಮಿನಾ ಮಿಸ್ ಇಂಡಿಯಾ 2017 ಸ್ಪರ್ಧೆಯಲ್ಲಿ ಹರಿಯಾಣ ರಾಜ್ಯವನ್ನು ಮಾನುಷಿ ಪ್ರತಿನಿಧಿಸಿದ್ದರು. ಈ ಸ್ಪರ್ಧೆಯಲ್ಲಿ ಅವರಿಗೆ ‘ಮಿಸ್ ಫೋಟೋಜೆನಿಕ್’ ಕಿರೀಟ ದಕ್ಕಿದ್ದರ ಜತೆಗೆ ಸ್ಪರ್ಧೆಯಲ್ಲೂ ಗೆಲುವಿನ ನಗೆ ಬೀರಿದರು.

ಮಿಸ್​ವರ್ಲ್ಡ್ ಗೆದ್ದ ಭಾರತ ನಾರಿಯರು

1966 – ರೀತಾ ಫರಿಯಾ

1994 – ಐಶ್ವರ್ಯಾ ರೈ

1997 – ಡಯಾನಾ ಹೇಡನ್

1999 – ಯುಕ್ತಾ ಮುಖಿ

2000 – ಪ್ರಿಯಾಂಕಾ ಚೋಪ್ರಾ

2017 – ಮಾನುಷಿ ಛಿಲ್ಲರ್.

ಆನ್‌ಲೈನ್‌ ಅರ್ಜಿ: ಇರಲಿ ಎಚ್ಚರ

ಆನ್‌ಲೈನ್‌ ಅರ್ಜಿ: ಇರಲಿ ಎಚ್ಚರ

*ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಉದ್ಯೋಗಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
*ಇಂದು ಬಹುತೇಕ ಎಲ್ಲ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ನೇಮಕಾತಿ ನಡೆಸುವಾಗ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿಯೇ ಅರ್ಜಿ ಆಹ್ವಾನಿಸುತ್ತಿವೆ. ಹೀಗಾಗಿ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನವನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಇಲ್ಲದಿದ್ದರೆ, ಅರ್ಜಿ ಸಲ್ಲಿಸಲು ಪರದಾಡಬೇಕಾಗುತ್ತದೆ. ಅಲ್ಲದೆ, ಸರಿಯಾಗಿ ಸಲ್ಲಿಕೆಯಾಗದ ಅರ್ಜಿಗಳು ತಿರಸ್ಕೃತಗೊಳ್ಳುವ ಅಪಾಯವೂ ಇದೆ.
*ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಯಾವುದೇ ಕಂಪ್ಯೂಟರ್‌ನಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನೇಮಕಾತಿ ಅಧಿ ಸೂಚನೆಯ ಜತೆಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆಂಬ ಮಾಹಿತಿಯನ್ನು ಪ್ರಕಟಿಸಲಾಗಿರುತ್ತದೆ. ಅಭ್ಯರ್ಥಿಗಳು ಮೊದಲು ಇದನ್ನು ಓದಿಕೊಳ್ಳಬೇಕು. ಇದರಲ್ಲಿ ಅರ್ಜಿಯೊಂದಿಗೆ ಅಪ್‌ಲೋಡ್‌ ಮಾಡಬೇಕಾಗಿರುವ ದಾಖಲೆಗಳ ಬಗ್ಗೆಯೂ ಮಾಹಿತಿ ನೀಡಲಾಗಿರುತ್ತದೆ. ಇದನ್ನು ಸಿದ್ಧಪಡಿಸಿಟ್ಟುಕೊಂಡೇ ಅರ್ಜಿ ಸಲ್ಲಿಸಲು ಮುಂದಾಗುವುದು ಅವಶ್ಯ.
*ಇ-ಮೇಲ್‌ ವಿಳಾಸವಿರಲಿ
*ನೆನಪಿಡಿ, ಆನ್‌ಲೈನ್‌ನಲ್ಲಿ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲಾದರೂ ಅಭ್ಯರ್ಥಿಯು ಇ-ಮೇಲ್‌ ವಿಳಾಸ ಮತ್ತು ಸಂಪರ್ಕಕ್ಕೆ ಮೊಬೈಲ್‌ ಸಂಖ್ಯೆ ಹೊಂದಿರಬೇಕಾಗಿರುವುದು ಅವಶ್ಯಕ. ಇಂದು ನೇಮಕಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಂಚೆಯ ಮೂಲಕ ಕಳುಹಿಸಲಾಗುವುದಿಲ್ಲ. ಇ-ಮೇಲ್‌ ಮಾಡಲಾಗುತ್ತದೆ, ಇಲ್ಲವೇ ಮೊಬೈಲ್‌ಗೆ ಎಸ್‌ ಎಂಎಸ್‌ ಕಳುಹಿಸಲಾಗುತ್ತದೆ. ಸಂಪರ್ಕದ ಕೊರತೆಯಿಂದ ಅವಕಾಶ ತಪ್ಪದಂತಾಗಲು ಅಭ್ಯರ್ಥಿಗಳು ತಮ್ಮ ಹೆಸರನ್ನು ಹೊಂದಿರುವ ಇ-ಮೇಲ್‌ ವಿಳಾಸವನ್ನು ಸೃಷ್ಟಿಸಿಕೊಂಡು, ಅದನ್ನು ಕೆಲಸ ಸಿಗುವವರೆಗೂ ಬಳಸುವುದು ಒಳ್ಳೆಯದು.
*ಕೇವಲ ಇ-ಮೇಲ್‌ ವಿಳಾಸ ಸೃಷ್ಟಿಸಿಕೊಂಡರಷ್ಟೇ ಸಾಲದು. ಅದನ್ನು ಆಗಾಗ ನೋಡುತ್ತಿರಬೇಕು ಮತ್ತು ಅದು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಒಂದೇ ಮೊಬೈಲ್‌ ನಂಬರ್‌ ಅನ್ನು ಕೂಡ ಕಾಪಾಡಿಕೊಳ್ಳಬೇಕಾದ್ದು ಅವಶ್ಯ.
*ಕೆಲವೊಮ್ಮೆ ಅರ್ಜಿ ಸಲ್ಲಿಸುವಾಗ ಪರ್ಯಾಯ ಇ-ಮೇಲ್‌ ವಿಳಾಸವನ್ನು ನೀಡುವಂತೆಯೂ ಕೇಳಲಾಗಿರುತ್ತದೆ. ಹೀಗಾಗಿ ನೀವು ಪರ್ಯಾಯ ಇ-ಮೇಲ್‌ ವಿಳಾಸವನ್ನೂ ಸೃಷ್ಟಿ ಮಾಡಿಟ್ಟುಕೊಳ್ಳಿ. ಅದನ್ನೂ ಆಗಾಗ ನೋಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರ ಯೂಸರ್‌ ನೇಮ್‌ ಮತ್ತು ಪಾಸ್‌ ವರ್ಡ್‌ ಮರೆತು ಹೋಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅದನ್ನು ಒಂದೆಡೆ ಬರೆದಿಟ್ಟುಕೊಳ್ಳಿ.
*ಸಿದ್ಧತೆ ಮಾಡಿಕೊಳ್ಳಿ
*ಅರ್ಜಿ ಸಲ್ಲಿಸುವ ಮುನ್ನ ಪಾಸ್‌ಪೋರ್ಟ್‌ ಸೈಜಿನ ಫೋಟೋ ಮತ್ತು ಸಹಿಯನ್ನು ಸ್ಕ್ಯಾ‌ನ್‌ ಮಾಡಿ, ಜೆಪಿಜಿ ಇಮೇಜ್‌ ನಲ್ಲಿಟ್ಟುಕೊಳ್ಳಬೇಕು. ಬೇರೆ ಬೇರೆ ಅಧಿಸೂಚನೆಯಲ್ಲಿ ಬೇರೆ ಬೇರೆ ಗಾತ್ರದ ಇಮೇಜ್‌ ಅಪ್‌ಲೋಡ್‌ ಮಾಡುವಂತೆ ಕೇಳಲಾಗಿರುತ್ತದೆ. 4 ರಿಂದ 12 ಕಿಲೋಬೈಟ್‌ ಗಾತ್ರದ ಫೋಟೋ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನವರ ಅರ್ಜಿಗೆ ಅಗತ್ಯವಿದ್ದರೆ, ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗ, ಯುಜಿಸಿ, ಶಿಕ್ಷಕರ ನೇಮಕಾತಿ, ಬ್ಯಾಂಕಿಂಗ್‌ ಮಂಡಳಿಗಳಿಗೆ ಸಲ್ಲಿಸುವ ಅರ್ಜಿಗಳಿಗೆ 10 ರಿಂದ 250 ಕಿಲೋಬೈಟ್‌ ವರೆಗಿನ ಇಮೇಜ್‌ಗಳ ಅಗತ್ಯವಿದೆ. ಎಷ್ಟು ಕೆಬಿಯೊಳಗೆ ಇಮೇಜ್‌ ಇರಬೇಕೆಂಬುದನ್ನು ನೋಡಿಕೊಂಡು, ಸಿದ್ಧಪಡಿಸಿಟ್ಟುಕೊಂಡಿರಬೇಕು.
*ಅರ್ಜಿಯಲ್ಲಿ ಅಭ್ಯರ್ಥಿಗಳು ಐಡಿ ಪ್ರೂಫ್‌ನಲ್ಲಿ ಹಾಗೂ ಇತರೆ ದಾಖಲೆಗಳಲ್ಲಿ ಇರುವಂತೆಯೇ ಮೊದಲ, ಮಧ್ಯದ ಹಾಗೂ ಕೊನೆಯ ಹೆಸರನ್ನು ಭರ್ತಿಮಾಡಬೇಕು. ಏಕೆಂದರೆ ಮುಂದೆ ಅರ್ಜಿಯಲ್ಲಿನ ಹೆಸರು ದಾಖಲೆಗೆ ಹೊಂದಾಣಿಕೆಯಾಗದಿದ್ದರೆ ಅರ್ಜಿಯು ಅನರ್ಹಗೊಳ್ಳುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಕ್ರಿಯೆಟ್‌ ಮಾಡಿಕೊಂಡ ರಿಜಿಸ್ಟೇಷನ್‌ ನಂಬರ್‌ ಹಾಗೂ ಪಾಸ್‌ ವರ್ಡ್‌ ನೇಮಕಾತಿ ಮುಗಿಯುವವರೆಗೂ ಅವಶ್ಯವಾಗಿರುತ್ತದೆ. ಅದನ್ನು ಕೂಡಲೇ ಒಂದೆಡೆ ಬರೆದಿಟ್ಟುಕೊಳ್ಳಬೇಕು.
*ಶುಲ್ಕ ಪಾವತಿಸಲು ಸಿದ್ಧರಾಗಿರಿ
*ಅರ್ಜಿ ಸಲ್ಲಿಸುವಾಗಲೇ ಪರೀಕ್ಷಾ ಶುಲ್ಕವನ್ನೂ ಪಾವತಿಸಬೇಕಾಗಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಅದಕ್ಕೆ ಅನ್‌ಲೈನ್‌ ವ್ಯವಹಾರದ ಸೌಲಭ್ಯ ದೊರಕಿಸಿಕೊಂಡು ಪರೀಕ್ಷಾ ಶುಲ್ಕವನ್ನು ನೆಟ್‌ಬ್ಯಾಂಕಿಂಗ್‌ ಮೂಲಕ ಪಾವತಿ ಮಾಡುವುದು ಒಳ್ಳೆಯದು.
*ಡೆಬಿಟ್‌/ಕ್ರೆಡಿಟ್‌ ಕಾರ್ಡಿನ ಮೂಲಕವೂ ಆನ್‌ಲೈನ್‌ ಪಾವತಿಗೆ ಅವಕಾಶವಿದೆ. ಈ ಎರಡೂ ಸೌಲಭ್ಯ ಇಲ್ಲದವರು ಅರ್ಜಿ ಸಲ್ಲಿಸಿದ ನಂತರದಲ್ಲಿ ಜನರೇಟ್‌ ಆಗುವ ವಿವರಗಳುಳ್ಳ ಚಲನ್‌ ತೆಗೆದುಕೊಂಡು, ನಿಗದಿಪಡಿಸಿದ ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿ, ಅಲ್ಲಿ ನೀಡಲಾಗುವ ಜರ್ನಲ್‌ ನಂಬರ್‌/ ಕೋಡ್‌ ತೆಗೆದುಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಿದ ತಾಣಕ್ಕೆ ಭೇಟಿನೀಡಿ, ಪಾವತಿ ವಿವರಗಳನ್ನು ಕೋಡ್‌ ಸಹಿತ ತುಂಬಿಸಿ ದಾಖಲಿಸಬೇಕು.*
*ಈ ಶುಲ್ಕ ಪಾವತಿಯ ಪ್ರಕ್ರಿಯೆ ಸಂಪೂರ್ಣಗೊಂಡ ನಂತರದಲ್ಲಿ ಸ್ವೀಕೃತಿ ಪತ್ರ ಇಲ್ಲವೇ ಪ್ರವೇಶ ಪತ್ರ / ಅಡ್ಮಿಷನ್‌ ಟಿಕೆಟ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಮುದ್ರಿಸಿಕೊಳ್ಳಲು ಅನುಕೂಲವಾಗುವ ಸಂದೇಶ ಬರುತ್ತದೆ. ಹಾಗೆಯೇ ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಗ್ಗೆ ಕೂಡ ಸಂದೇಶ ಮೊಬೈಲ್‌ ಮತ್ತು ಇ-ಮೇಲ್‌ಗೆ ಬರುತ್ತದೆ. ಕೆಲವೊಮ್ಮೆ ಪರೀಕ್ಷೆಗೆ ಕೆಲವು ದಿನಗಳ ಮೊದಲು ವೆಬ್‌ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬೇಕೆಂಬ ಸಂದೇಶವೂ ದೊರೆಯುತ್ತದೆ.
*ಬಾಕ್ಸ್‌

*ಇತ್ತಗಮನಿಸಿ
* *ಪೊಲೀಸ್‌ ಇಲಾಖೆ ಸೇರಿದಂತೆ ರಾಜ್ಯ ಸರಕಾರದ ವಿವಿಧ ಇಲಾಖೆ, ಸಂಸ್ಥೆಗಳಿಗೆ ನೇಮಕಾತಿ ನಡೆಯುವಾಗ ಕನ್ನಡದಲ್ಲಿಯೇ ಅರ್ಜಿ ಭರ್ತಿ ಮಾಡಲು ಅವಕಾಶವಿರುತ್ತದೆ. ಇದಕ್ಕೆ ನೀವು ನುಡಿ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಂಡಿರಬೇಕಾಗುತ್ತದೆ.
* *ಸ್ವೀಕೃತಿ ಪತ್ರ, ಪ್ರವೇಶ ಪತ್ರ ಮತ್ತಿತರ ದಾಖಲೆಗಳನ್ನು ಪಿಡಿಎಫ್‌ ಫಾರ್ಮೆಟ್‌ನಲ್ಲಿ ಒದಗಿಸಲಾಗುತ್ತದೆ. ಅದಕ್ಕಾಗಿ ಕಂಪ್ಯೂಟರ್‌ ನಲ್ಲಿ ಪಿಡಿಎಫ್‌ ರೀಡರ್‌ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಿ.
* *ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಕೊನೆಯ ದಿನಾಂಕದವರೆಗೂ ಕಾಯುತ್ತಾ ಕೂರಬೇಡಿ. ಏಕೆಂದರೆ ಕೊನೆಯ ದಿನ ವೆಬ್‌ ಸ್ಲೋ ಆಗಿ, ನಿಮಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರಬಹುದು.
* *ತುರ್ತು ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಮೊಬೈಲ್‌ ಮೂಲಕವೇ ಮಾಹಿತಿ ನೀಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸದಾ ಚಾಲ್ತಿಯಲ್ಲಿರುವ ಮೊಬೈಲ್‌ ಸಂಖ್ಯೆಯನ್ನೇ ನಮೂದಿಸಿ.
* *ಇ-ಮೇಲ್‌ನ ಇನ್‌ಬಾಕ್ಸ್‌ನಲ್ಲಿ ಕೆಲವೊಮ್ಮೆ ಬಂದ ಮೇಲ್‌ಗಳು ಕಾಣಿಸದೇ ಗೊಂದಲವಾಗಬಹುದು. ಯಾವುದಕ್ಕೂ ಒಮ್ಮೆ ಸ್ಪ್ಯಾಮ್‌ ಮೆಸೇಜ್‌ಗಳನ್ನು ಪರೀಕ್ಷಿಸಿಕೊಂಡೇ ಮುಂದುವರೆಯಿರಿ.
* *ಬ್ರೌಸಿಂಗ್‌ ಸೆಂಟರ್‌ಗಳಲ್ಲಿ ನೀವು ಅರ್ಜಿ ಭರ್ತಿ ಮಾಡುತ್ತಿದ್ದರೆ, ನಿಮ್ಮ ಅರ್ಜಿ ಸಲ್ಲಿಕೆಯಾದ ಮೇಲೆ ಬೌಸರ್‌ನ ಹಿಸ್ಟರಿಗೆ ಹೋಗಿ ಅಲ್ಲಿರುವ ಮಾಹಿತಿಗಳನ್ನೆಲ್ಲಾ ಡಿಲಿಟ್‌ ಮಾಡಿ. ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸುವಾಗ ನಿಮ್ಮ ಪಾಸ್‌ವರ್ಡ್‌ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿ.
* *ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸುವ ಮೂಲಕ ವಂಚಿಸುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಈ ಬಗ್ಗೆ ಎಚ್ಚರವಿರಲಿ. ವೆಬ್‌ನ ಪೂರ್ವಪರಗಳನ್ನು ಪರೀಕ್ಷಿಸಿಕೊಂಡೇ ಅರ್ಜಿ ಸಲ್ಲಿಸಿ.

ಸಾಮಾಜಿಕ ಸ್ವಾಸ್ಥ್ಯ ಹರಿಕಾರ ವಿಶ್ವಗುರು ಬಸವಣ್ಣ.

ಸಾಮಾಜಿಕ ಸ್ವಾಸ್ಥ್ಯ ಹರಿಕಾರ ವಿಶ್ವಗುರು ಬಸವಣ್ಣ

Saturday, 29.04.2017.

ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ.
ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನದ ಪ್ರಕಾರ ಸ್ವಾಸ್ಥ್ಯ ಅಥವಾ ಆರೋಗ್ಯವೆಂದರೆ- ‘ಆರ್ಥಿಕವಾಗಿ, ಸಾಮಾಜಿಕವಾಗಿ ಫಲಕಾರಿ ಜೀವನ ನಡೆಸುವ ಸಾಮರ್ಥ್ಯವಿರುವುದು’. ನಮ್ಮಲ್ಲಿ ಎಷ್ಟೋ ಜನ ವೈಜ್ಞಾನೀಕರಣಗೊಂಡ ಆರೋಗ್ಯಕ್ಕೂ ಆಧ್ಯಾತ್ಮೀಕರಣಗೊಂಡ ಶರಣ ಸಂಸ್ಕೃತಿಯ ಹರಿಕಾರ ವಿಶ್ವಗುರು ಬಸವಣ್ಣನವರಿಗೂ ಹೇಗೆ ಸಾಮ್ಯವೆಂದು ಕೇಳಬಹುದು! ಆದರೆ ನಾವು ತಾತ್ತಿ್ವಕವಾಗಿ ವಿಚಾರಮಂಥನ ಮಾಡಿದರೆ, 12ನೇ ಶತಮಾನದಲ್ಲಿ ಬಸವಣ್ಣನವರ ಮುಂದಾಳತ್ವದಲ್ಲಿ ಬೆಳೆದ ಶರಣ ಸಂಸ್ಕೃತಿಯ ಪರಿಕಲ್ಪನೆ ಇಂದಿನ 21ನೇ ಶತಮಾನದ ವೈಜ್ಞಾನಿಕ ವಿದ್ಯಮಾನಕ್ಕಿಂತ ಉತ್ತಮವಾಗಿತ್ತೆಂದರೆ, ನಿಮಗೆ ಪರಮಾಶ್ಚರ್ಯವಾಗಬಹುದು! ಆರ್ಥಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಧಾರ್ವಿುಕವಾಗಿ ಸಮಾಜವನ್ನು ಸ್ವಸ್ಥಗೊಳಿಸಿದ್ದು ಬಸವಣ್ಣನವರು!

ಆರ್ಥಿಕವಾಗಿ, ಸಾಮಾಜಿಕವಾಗಿ ಫಲಕಾರಿ ಜೀವನ ನಡೆಸಲು ಸಾಮರ್ಥ್ಯ ಇಂದು ನಮಗೆ ಬರಬೇಕೆಂದರೆ, ವಿದ್ಯೆ, ಬುದ್ಧಿ, ವಿಶ್ವವಿದ್ಯಾಲಯಗಳ ಪದವಿ ಮತ್ತು ಕೈತುಂಬ ಸಂಪಾದನೆಯ ಕೆಲಸ ಬೇಕು! ಚೆನ್ನಾಗಿ ಸಂಪಾದಿಸುವವರೆಲ್ಲ ಇಂದು ಸಮಾಜಮುಖಿಗಳಾಗಿಲ್ಲ! ವಾಮಮಾರ್ಗದಿಂದ ಸಂಪಾದಿಸಿದ್ದನ್ನು ಸ್ವಿಸ್ ಬ್ಯಾಂಕಿನಲ್ಲಿ ಪನಾಮಾದಲ್ಲಿ ಇಟ್ಟು, ಇಲ್ಲಿ ಜನರ ಶೋಚನೀಯ ಸ್ಥಿತಿಗೆ ಕಾರಣರಾದ ಈ ವಿಕೃತ ಮನಸ್ಸಿನವರು ಸಾಮಾಜಿಕವಾಗಿ ಅಸ್ವಸ್ಥರು! ಅವರಿಗೆ ಚಿಕಿತ್ಸೆ ಆಗಲೇಬೇಕು. ಆದರೆ ವಿಶ್ವಗುರು ಬಸವಣ್ಣನವರು ಕೊಟ್ಟ ದಿವ್ಯಮಂತ್ರ ‘ಕಾಯಕವೇ ಕೈಲಾಸ’- ಇದು ಒಬ್ಬ ವ್ಯಕ್ತಿಯನ್ನಲ್ಲ ಇಡೀ ಸಮಾಜವನ್ನೇ ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಸ್ಥರನ್ನಾಗಿಸಿ ಫಲಕಾರಿ ಜೀವನ ನಡೆಸಲು ಅನುವುಮಾಡಿಕೊಡುತ್ತದೆ! ಯಾವುದೇ ಕೆಲಸ ಮಾಡಿದರೂ ಅದು ದೈವೀಸ್ವರೂಪವಾದ ಸಮಾಜಕ್ಕೆ ದಾಸನಾಗಿ ಎಂದು ಮಾಡಿದಾಗ ಎಲ್ಲರೂ ಸುಖ ಸಂತೃಪ್ತಿಯಿಂದ ಇರಬಹುದು ಎಂಬುದು ಬಸವಣ್ಣನವರ ಪರಿಕಲ್ಪನೆ.

ಸ್ವತಃ ಆರ್ಥಿಕತಜ್ಞರಾಗಿ ಬಿಜ್ಜಳ ರಾಜರ ಹಣಕಾಸು ನೋಡಿಕೊಳ್ಳುತ್ತಿದ್ದ, ಅವರ ಬೊಕ್ಕಸ ತುಂಬಿದ ಬಸವಣ್ಣನವರು ಆರ್ಥಿಕವಾಗಿ ಹಿಂದುಳಿದ ಬಡಬಗ್ಗರನ್ನು ಸಬಲೀಕರಣಗೊಳಿಸಿ, ಅದೇ ಸಮಯಕ್ಕೆ ಸಾಹುಕಾರರಲ್ಲಿ ಸ್ವಾರ್ಥ ಹೋಗಿ ಸದ್ಬುದ್ಧಿ ತರಲು ‘ಕಾಯಕವೇ ಕೈಲಾಸ’ ಎನ್ನುವ ದಿವ್ಯಮಂತ್ರನ್ನು ಕೊಟ್ಟರು. ಹೊಟ್ಟೆಪಾಡಿಗೆ ಕೆಲಸ ಮಾಡಿದರೆ ಅದರಲ್ಲಿ ಸ್ವಾರ್ಥ, ಲಾಭ-ನಷ್ಟಗಳ ಲೆಕ್ಕಾಚಾರ ಬರುತ್ತದೆ. ಆದರೆ ಪ್ರತಿಯೊಂದು ಕೆಲಸವನ್ನೂ ದೈವೀಸ್ವರೂಪ ಸಮಾಜಕ್ಕಾಗಿ ದಾಸನಾಗಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಅದು ಕಾಯಕವಾಗುತ್ತದೆ! ಇದೇ ಜೀವನ. ಹೀಗೆ ಸತ್ಯಶುದ್ಧ ಕಾಯಕದಲ್ಲಿ ಸವೆಸಿದರೆ ‘ಕಾಯಕಯೋಗಿಗಳು’ ಆಗುತ್ತಾರೆ. ಉದಾಹರಣೆಗೆ, ಸರ್ ಎಂ. ವಿಶ್ವೇಶ್ವರಯ್ಯ, ದಿ. ಬಾಳೇಕುಂದ್ರಿಯವರು ಕಾಯಕಯೋಗಿಗಳು! ಅವರು ಕಾವೇರಿ ಮತ್ತು ಕೃಷ್ಣೆಯ ನೀರಿನ ಸಮರ್ಪಕ ಬಳಕೆಗೆ ಶ್ರಮಿಸಿ, ಬಡರೈತರ ಹೊಲಕ್ಕೆ ನೀರುಣಿಸಿ ಕೈಲಾಸ ಕಟ್ಟಲು ಶ್ರದ್ಧೆಯಿಂದ ಶ್ರಮಿಸಿದ ಕಾಯಕಯೋಗಿಗಳು. ಆದ್ದರಿಂದ “Work is Worship’ಗಿಂತಲೂ ಅದ್ಭುತ ಪರಿಕಲ್ಪನೆ ‘ಕಾಯಕವೇ ಕೈಲಾಸ’. ಕಾರಣ “Worship’ ಎಂದಾಗ ಜನರು, ‘ಭಗವಂತ ನಿನಗೆ ಜೋಡುಗಾಯಿ ಒಡೆಸುತ್ತೇನೆ, ಅದು ಕೊಡಪ್ಪ ಇದು ಕೊಡಪ್ಪ’ ಎನ್ನುತ್ತಾರೆ! ಆದರೆ ಬಸವಣ್ಣನವರ ಸತ್ಯಶುದ್ಧ ಕಾಯಕದ ಪರಿಕಲ್ಪನೆಯಲ್ಲಿ ಸ್ವಾರ್ಥದ ಲವಲೇಶವಿಲ್ಲ. ಫಲಾಫಲದ ಅಪೇಕ್ಷೆ ಇಲ್ಲದೇ ಪರಿಶುದ್ಧ ಮನಸ್ಸಿನಿಂದ ಕಾಯಕ ಮಾಡುವುದನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡರೆ, ಎಲ್ಲರ ಬದುಕಿನಲ್ಲೂ ಸಮೃದ್ಧಿ ತಾನಾಗಿಯೇ ಬರುತ್ತದೆ.

ಅಂದಿನ ಕಾಲದ ಶರಣರು ಕಾಯಕಮಾಡಿ, ಕಲ್ಯಾಣವು ಕೈಲಾಸದಂತೆ ಕಂಗೊಳಿಸುವಂತೆ ಮಾಡಿದ್ದರು! ಯಾವ ಕೆಲಸವೂ ದೊಡ್ಡದಲ್ಲ, ಚಿಕ್ಕದಲ್ಲ; ಅದು ಕೀಳಲ್ಲ, ಕ್ಷುಲ್ಲಕವೂ ಅಲ್ಲ- ‘ಅಸಿಯಾಗಲಿ ಕೃಷಿಯಾಗಲಿ, ವಾಚಕ ವಾಣಿಜ್ಯ ಮಸಿಯಾಗಲಿ, ಮಾಡುವಲ್ಲಿ ಹುಸಿ ಇಲ್ಲದಿರಬೇಕು’- ಅಂದರೆ ಯಾವುದೇ ಕಾಯಕ ಮಾಡಿದರೂ ಅದರಲ್ಲಿ ಸುಳ್ಳು, ವಂಚನೆ ಇರಕೂಡದು ಎಂದರು. ಇಂದು ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕ ಮಾಡಿದರೆ, ಆರ್ಥಿಕವಾಗಿ ವಿಶ್ವದಲ್ಲಿ ಭಾರತ ಪ್ರಥಮವಾಗುವುದರಲ್ಲಿ ಸಂದೇಹವೇ ಇಲ್ಲ.

ಆದರೆ, ಎಷ್ಟೇ ಆರ್ಥಿಕವಾಗಿ ಬೆಳೆದರೂ ಇಂದಿನ ಸಮಾಜದಲ್ಲಿ ಎಲ್ಲಿ ನೋಡಿದರಲ್ಲಿ ಮೋಸ, ವಂಚನೆ, ಲಂಚ ಹೆಚ್ಚಾಗಿವೆ. ಇದಕ್ಕೆ ಬಸವಣ್ಣನವರು ಪಾಪದಿಂದ ಪ್ರಾಪ್ತಿಯಾದ ಹಣ ಪ್ರಾಯಶ್ಚಿತ್ತಕ್ಕೆ ಮಾತ್ರ ಪ್ರಯೋಜನ ಎಂದು ಹೇಳಿದ್ದಾರೆ.

ಬಸವಣ್ಣನವರ ವಿಚಾರದಿಂದ ಪ್ರಭಾವಿತರಾದ ಶರಣರು ಎಂದೂ ವಾಮಮಾರ್ಗದಿಂದ ಹಣವನ್ನು ಸಂಪಾದಿಸಲಿಲ್ಲ. ಅಷ್ಟೇ ಅಲ್ಲ, ಇತರರ ಹಣಕ್ಕೆ ಆಸೆಪಡಲಿಲ್ಲ. ಇದನ್ನು ಶರಣೆ ಸತ್ಯಕ್ಕ ಮನಮುಟ್ಟುವಂತೆ ಹೇಳುತ್ತಾರೆ- ‘ಲಂಚ ವಂಚನಕ್ಕೆ ಕೈಯಾನದ ಭಾಷೆ, ಬಟ್ಟೆಯಲ್ಲಿ ಹೊನ್ನವಸ್ತ್ರ ಬಿದ್ದಿದ್ದಡೆ ಕೈಮುಚ್ಚಿ ಎತ್ತಿದೊಡೆ ಅಯ್ಯಾ ನಿಮ್ಮಾಣೆ ನೀವಿಕ್ಕಿದ ಭಿಕ್ಷೆಯೊಳಗಾನಿಪ್ಪೆನಯ್ಯಾ ಶಂಭು ಜಕ್ಕೇಶ್ವರ ದೇವಯ್ಯ’. ಒಬ್ಬ ಮಹಿಳೆಯು ಪ್ರಾಮಾಣಿಕತೆಯ ಪರಾಕಾಷ್ಠೆ ಮೆರೆದಂತೆ, ಇಂದು ಜನ ಶರಣೆ ಸತ್ಯಕ್ಕನಂತೆ ಆಣೆ, ಪ್ರಮಾಣ ಮಾಡಿ ಪ್ರಾಮಾಣಿಕರಾಗಿ ಬದುಕಿದರೆ, ಬದುಕು ಬಂಗಾರವಾಗುತ್ತದೆ.

ದುರದೃಷ್ಟಕರ ಸಂಗತಿ ಎಂದರೆ, ಇಂದು ಜನರು ಹಣದ ಹಿಂದೆ ಸಾಗುವ ಹುಚ್ಚರಾಗಿದ್ದಾರೆ. ಧಾವಂತದ ಆಧುನಿಕ ಬದುಕಿನಲ್ಲಿ ಅವರು ಹೆಂಡತಿ, ಮಕ್ಕಳು, ಮನೆ-ಮಠ, ದೇವರನ್ನು ಮರೆತು ಬದುಕಿನ ಒತ್ತಡಕ್ಕೆ ಅಕಾಲಿಕವಾಗಿ ಹೃದಯಾಘಾತವಾಗಿ ಸಾಯುತ್ತಿದ್ದಾರೆ. ಇಂಥವರು ಬಸವಣ್ಣನವರ ಈ ವಚನವನ್ನು ಮನನ ಮಾಡಿಕೊಳ್ಳಬೇಕು-

ಕಾಂಚನವೆಂಬ ನಾಯ ನೆಚ್ಚಿ, ನಿಮ್ಮ ನಾನು ಮರೆದೆನಯ್ಯ.

ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ!

ಹಡಿಕಿಗೆ ಮೆಚ್ಚಿದ ಸೊಣಗ ಅಮೃತದ ಸವಿಯ ಬಲ್ಲುದೇ ?

ಕೂಡಲಸಂಗಮದೇವಾ.

ಇನ್ನು ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದು ಉಪಮಾತೀತ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ, ಸಮಾಜ ಕಟ್ಟುವ ನಿಟ್ಟಿನಲ್ಲಿ ಅವರು ಸರ್ವರಿಗೂ ಸಮಬಾಳ್ವೆ, ಸರ್ವರಿಗೂ ಸಮಪಾಲು ತರುವ ಸಮಾನತೆಯನ್ನು ಸಾರಿದರು. ಬಸವಣ್ಣನವರು ಬಡವರ ಆರ್ಥಿಕ ಸಬಲೀಕರಣದ ಜತೆಗೆ, ಅವರಿಗೆ ಸಮಬಾಳ್ವೆ, ಸಮಾನತೆ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದವರಲ್ಲಿ ಪ್ರಥಮರು. ಪರಮಾತ್ಮನ ಅಂಶವಾದ ಆತ್ಮ ಎಲ್ಲರಲ್ಲೂ ಇರುವುದರಿಂದ ಎಲ್ಲರೂ ದೈವಾಂಶಸಂಭೂತರು ಎಂದು ಅವರು ಪ್ರತಿಪಾದಿಸಿದರು.

ಸಮಾಜದ ಎಲ್ಲ ವರ್ಗದವರಿಗೆ ಸಮಾನತೆ ಕಲ್ಪಿಸಿಕೊಡಲು ವಿಶ್ವದ ಪ್ರಪ್ರಥಮ ಸಂಸತ್ತು ಎಂದು ಪ್ರಸಿದ್ಧಿಯಾಗಿರುವ ‘ಅನುಭವ ಮಂಟಪ’ ಕಟ್ಟಿಸಿ, ಅದರ ಶೂನ್ಯ ಸಿಂಹಾಸನದಲ್ಲಿ ಜ್ಞಾನದ ಮೇರುಪರ್ವತವಾದ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿಸಿದರು. ಇಡೀ ವಿಶ್ವದಲ್ಲಿಯೇ ಒಂದೇ ಸ್ಥಳದಲ್ಲಿ ಏಕಕಾಲಕ್ಕೆ 365 ಜನ ಸಾಹಿತ್ಯ ರಚಿಸಿ ವಾಚಿಸಿದ್ದು ಈ ಅನುಭವ ಮಂಟಪದಲ್ಲಿ! ‘ವಚನ ಸಾಹಿತ್ಯ’ವೆಂಬ ವಿಶಿಷ್ಟ ವಿನೂತನ ಸಾಹಿತ್ಯ ರಚಿಸುವುದರಲ್ಲಿ ಮಹಿಳೆಯರು ಹಿಂದೆಬೀಳಲಿಲ್ಲ. ಅಕ್ಕಮಹಾದೇವಿ ಕನ್ನಡದ ಪ್ರಥಮ ಕವಯಿತ್ರಿಯಾಗಿ ಉತ್ಕೃಷ್ಟ ವಚನಗಳನ್ನು ರಚಿಸಿದ ಮಹಾನ್ ದಾರ್ಶನಿಕಳಾದಳು. ಜನರು, ಜನರಿಗಾಗಿ ರಚಿಸಿದ ಸಾಹಿತ್ಯವೇ ವಚನ. ಇದರಲ್ಲಿ ‘ವ’ ಎಂದರೆ ವಚಿಸುವುದು, ‘ಚ’ ಎಂದರೆ ಚಲನಶೀಲರಾಗಿರುವುದು, ‘ನ’ ಎಂದರೆ ನರತ್ವ ನೀಗಿ ಹರತ್ವ ಸಾಧಿಸುವುದು ಎಂದರ್ಥ.

ಇಂಥ ವಚನಗಳಲ್ಲಿ ಶರಣರು ತಮ್ಮ ಅನುಭವ ಮತ್ತು ಅನುಭಾವ ಎರಡನ್ನೂ ಸೇರಿಸಿದರು. ಆದ್ದರಿಂದ ಜ್ಞಾನ, ವಿಜ್ಞಾನ ಮತ್ತು ತತ್ತ್ವಜ್ಞಾನದ ಸುಂದರ ಸಂಗಮವಾದ ವಚನಗಳನ್ನು ಕನ್ನಡದ ವೇದವೆಂದು ಕರೆದರು! ವಚನಗಳು ಜನರಿಗೆ ಬಿಡಿಸಿದ ಬಾಳೆಹಣ್ಣಿನಂತೆ ಸುಲಭವಾಗಿ ಅರ್ಥವಾಗುವಂತಾದವು. ಬಸವಣ್ಣನವರ ವಚನಗಳ ಪ್ರಭಾವ ವರಕವಿ ದ.ರಾ. ಬೇಂದ್ರೆಯವರ ಮೇಲೆ ತುಂಬಾ ಆಗಿತ್ತು. ಬಸವಣ್ಣನವರು- ‘ಎನ್ನ ಚಿತ್ತವು ಅತ್ತಿಯಹಣ್ಣು ನೋಡಯ್ಯ, ವಿಚಾರಿಸಿದರೇನು ಹುರುಳಿಲ್ಲವಯ್ಯ. ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ ನೀವಿರಿಸಿದಿರಯ್ಯ ಕೂಡಲಸಂಗಮದೇವಾ’ ಎಂದದ್ದನ್ನು ಕೆಲವು ಪಾಮರರು ‘ಅತ್ತಿಹಣ್ಣಿನಲ್ಲಿ ಹುಳ ಇರುವುದು’ ಎಂದರೆ, ಸ್ವತಃ ಅನುಭಾವಿಯಾದ ದ.ರಾ. ಬೇಂದ್ರೆಯವರು ಸರಿಯಾಗಿ ಅರ್ಥೈಸಿಕೊಂಡು ತಮ್ಮ ‘ಔದುಂಬರಗಾಥೆ’ ಕೃತಿಯಲ್ಲಿ ಅತ್ತಿಹಣ್ಣಿನ ವಿಶೇಷತೆ ಬಗ್ಗೆ ಬರೆಯುತ್ತಾರೆ. ಸಾಮಾನ್ಯವಾಗಿ ಹೂವು ಕಾಯಿ ಆಗಿ ನಂತರ ಹಣ್ಣಾಗುತ್ತದೆ. ಆದರೆ ಅತ್ತಿಹಣ್ಣು ಹೂವಾಗದೇ ನೇರ ಹಣ್ಣಾಗುತ್ತದೆ. ಅತ್ತಿಹಣ್ಣು ಬಿಡಿಸಿ ನೋಡಿದಾಗ ಅದು ಹೂವನ್ನು ತನ್ನಲ್ಲಿ ಇಟ್ಟುಕೊಂಡಿದ್ದು ಕಾಣುತ್ತದೆ. ಇದನ್ನು ಬೇಂದ್ರೆಯವರು ಚೆನ್ನಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಸಾಧಕರು ಮುಂದೆ ಸಿದ್ಧರಾಗುತ್ತಾರೆ. ಆದರೆ ಬಸವಣ್ಣನವರು ಹುಟ್ಟು ಸಿದ್ಧರಾಗಿದ್ದರಿಂದ ಅವರು ಸಾಧನೆಯನ್ನು ಮುಂದುವರಿಸಿದ ಮಹಾನ್ ಸಿದ್ಧರಾದರು!

ಇನ್ನು ಸಾಂಸ್ಕೃತಿಕವಾಗಿ ಬಸವಣ್ಣನವರು ದೊಡ್ಡ ಕ್ರಾಂತಿಯನ್ನೇ ಮಾಡಿದರು. ಶರಣಸಂಸ್ಕೃತಿ ಜಗತ್ತಿನಲ್ಲಿ ಎಲ್ಲೂ ಕಂಡರಿಯದಂಥ ಅದ್ಭುತ ಸಂಸ್ಕೃತಿ. ಇದು ಸಮಾಜದ ಅವಗುಣಗಳನ್ನು ತೆಗೆದು ಜನರು ಸದ್ಗುಣಿಗಳಾಗಿ, ಸದಾಚಾರಿಗಳಾಗಿ, ಸದ್ಭಾವನೆ, ಸದ್ಭಕ್ತಿಯಿಂದ ಬದುಕುವಂತೆ ಮಾಡಿದ ಅದ್ಭುತ ಪರಿಕಲ್ಪನೆ. ಶರಣ ಸಂಸ್ಕೃತಿಯನ್ನು ಪರಿಪಾಲಿಸಿದ್ದೇ ಆದರೆ, ಸಕಲ ಚರಾಚರರ ಸರ್ವಾಂಗೀಣ ಸ್ವಾಸ್ಥ್ಯ ವಿಕಾಸ ಮತ್ತು ಸಮೃದ್ಧಿಗೆ ನಾಂದಿಯಾಗುತ್ತದೆ. ‘ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಕೂಡಲಸಂಗಮದೇವಾ ನೀವೇ ಪ್ರಮಾಣ’ ಎಂದು ಜನರನ್ನು ಸನ್ಮಾರ್ಗದಲ್ಲಿ ನಡೆಸಿದವರು ಬಸವಣ್ಣನವರು. ಇದರಿಂದ, ಕಾಶ್ಮೀರ, ಅಫ್ಘಾನಿಸ್ತಾನ, ಒಡಿಶಾ ಹೀಗೆ ಹತ್ತು ಹಲವು ಕಡೆಯಿಂದ ಸದ್ಭಕ್ತರು ಕಲ್ಯಾಣಕ್ಕೆ ಆಗಮಿಸಿದರು, ಅದನ್ನು ಸಮೃದ್ಧಗೊಳಿಸಿದರು!

ಬಸವಣ್ಣನವರ ಮಹಾಮನೆಗೆ 1000 ಕಂಬಗಳಿದ್ದವು, 5 ಮಹಾದ್ವಾರಗಳಿದ್ದವು. ದಿನಕ್ಕೆ 1,95,000 ಜನ ಜಂಗಮರು ದಾಸೋಹ ಮಾಡುತ್ತಿದ್ದರು. ಬಸವಣ್ಣನವರ ತತ್ತ್ವಸಿದ್ಧಾಂತದಿಂದ ಪ್ರಭಾವಿತರಾದ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಲವು ವಿಚಾರಗಳನ್ನು ಸರ್ವರಿಗೂ ಸಮಾನತೆ ಕೊಡಲು ಸಂವಿಧಾನದಲ್ಲಿ ಅಳವಡಿಸಿದರು!ಆದ್ದರಿಂದ, ಬಸವಣ್ಣನವರನ್ನು ಒಂದು ಗುಂಪಿಗೆ, ಒಂದು ಪಂಗಡಕ್ಕೆ, ವೀರಶೈವ ಧರ್ಮಕ್ಕೆ ಸೀಮಿತಗೊಳಿಸದೇ ವಿಶ್ವಕ್ಕೆ ಕಾಯಕ ದಾಸೋಹದ ಮುಖಾಂತರ ಸಕಲ ಜೀವಾತ್ಮರ ಸ್ವಾಸ್ಥ್ಯ್ಕೆ ಶ್ರಮಿಸಿದ ವಿಶ್ವಗುರುವೆಂದು ಪರಿಗಣಿಸಿ ಅವರ ನುಡಿಗಳಂತೆ ನಡೆದರೆ ಭೂಮಿಯು ಖಂಡಿತ ‘ಭೂಕೈಲಾಸ’ವೇ ಆಗುವುದು.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

***

ಕ್ರಾಂತಿಕಾರಕ ನಾಯಕತ್ವಕ್ಕೆ ಮಾದರಿ ಯುಗಪುರುಷ
29.04.2017.
ಸಂಕೀರ್ಣ ಜನಾಂದೋಲನ ಎನಿಸಿದ್ದ ‘ಕಲ್ಯಾಣ ಕ್ರಾಂತಿ’ ಅನೇಕ ಅನುಕರಣೀಯ ಅಂಶಗಳನ್ನು ಒಡಲಲ್ಲಿ ತುಂಬಿಕೊಂಡಿತ್ತು. ಸಮಷ್ಟಿಯ ಹಿತಕ್ಕಾಗಿ ವ್ಯಷ್ಟಿಪ್ರಜ್ಞೆ ಅಡಿಗಲ್ಲಾಗಿರಬೇಕು ಎಂಬುದನ್ನು ಸಾರಿದ ಈ ಸಮಾಜಮುಖಿ ಚಳವಳಿಯ ಅಧ್ವರ್ಯುವಾಗಿದ್ದ ಬಸವಣ್ಣನವರು ‘ನಾಯಕತ್ವದ ಗುಣ’ ಎಂಬ ಪರಿಕಲ್ಪನೆಯ ಸಾಕಾರಮೂರ್ತಿಯಾಗಿದ್ದರು. ಆ ಕುರಿತಾದ ಒಂದು ಕಿರುನೋಟವಿದು.

| ಡಿ.ಪಿ. ಪ್ರಕಾಶ್.

ಜಗತ್ತು ವಿವಿಧ ರಂಗಗಳಲ್ಲಿ ಅನೇಕ ಆಂದೋಲನಗಳನ್ನು ಕಂಡಿದೆ. ಯಾವುದೇ ಆಂದೋಲನಕ್ಕೆ ನಾಯಕನ ಅಗತ್ಯ ಎಷ್ಟು ಮುಖ್ಯವೋ ನಾಯಕತ್ವದ ಗುಣವೂ ಅಷ್ಟೇ ಮುಖ್ಯ. ವಿವಿಧ ಕಾಲಘಟ್ಟಗಳಲ್ಲಿ ನಡೆದುಹೋಗಿರುವ ಆಂದೋಲನಗಳನ್ನು ಪರಾಮಶಿಸಿದಾಗ, ಕೆಲವು ನಾಯಕತ್ವ ಗುಣಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅಂಥವುಗಳನ್ನು ಮಾದರಿ ನಾಯಕನಿಗಿರಬೇಕಾದ ಗುಣಗಳಿಗೆ ಹೋಲಿಸಿ ನೋಡಲಾಗುತ್ತದೆ. ಎಲ್ಲ ಸ್ತರಗಳಲ್ಲಿನ ವ್ಯಕ್ತಿಗಳನ್ನು ಸಂಘಟಿಸಿ ಅವರಲ್ಲಿ ಹೊರಹೊಮ್ಮಿದ ಒಮ್ಮತದ ಶಕ್ತಿಯಿಂದ ಪರ್ಯಾಯ ಸಮಾಜ ನಿರ್ವಿುಸಿದ ಬಸವಣ್ಣನವರ ಕ್ರಾಂತಿಕಾರಕ ನಾಯಕತ್ವ ಇಂದಿಗೂ ಜಗತ್ತನ್ನು ಬೆರಗುಗೊಳಿಸುವಂಥದ್ದು. ಯಾವುದೇ ಸಂವಹನ ಸೌಲಭ್ಯಗಳಿಲ್ಲದೆ ಕೇವಲ ಬಾಯಿಂದ ಬಾಯಿಗೆ ಸಂಗತಿಗಳು ಪ್ರಚಾರಗೊಳ್ಳುತ್ತಿದ್ದ ಆ ಕಾಲದಲ್ಲಿ ಕೆಲವೇ ದಶಕಗಳಲ್ಲಿ ಒಂದು ಪರ್ಯಾಯ ಸಮಾಜ ಅಸ್ತಿತ್ವಕ್ಕೆ ಬಂದಿತೆಂದರೆ ಬಸವಣ್ಣನವರದು ಒಂದು ರೀತಿಯಲ್ಲಿ ಅಸಾಧಾರಣ ನಾಯಕತ್ವವೇ ಸರಿ.

‘ಕಲ್ಯಾಣ ಕ್ರಾಂತಿ’ ಒಂದು ಸಂಕೀರ್ಣ ಜನಾಂದೋಲನ. ಪ್ರಗತಿಪರ ಚಳವಳಿಗಳಿಗೆ ಅನೇಕ ಅನುಕರಣೀಯ ಅಂಶಗಳು ಅಲ್ಲಿ ಅಡಕವಾಗಿರುವುದನ್ನು ಗಮನಿಸಬಹುದು. ಇದು ಪ್ರಮುಖವಾಗಿ ಸಮಾಜಮುಖಿಯಾಗಿದ್ದು, ಸಾಮೂಹಿಕ ನಾಯಕತ್ವ ಮತ್ತು ಬಸವಣ್ಣನವರ ನಾಯಕತ್ವ ಎರಡೂ ಅದರಲ್ಲಿ ಐಕ್ಯಗೊಂಡಿವೆ. ಸಮಷ್ಟಿಯ ಹಿತಕ್ಕಾಗಿ ವ್ಯಷ್ಟಿಪ್ರಜ್ಞೆ ತನ್ನನ್ನು ತಾನು ಅಡಿಗಲ್ಲಾಗಿರಿಸಿಕೊಂಡಿರುವುದು ಈ ಕ್ರಾಂತಿಯ ವೈಶಿಷ್ಟ್ಯ ಆದ್ದರಿಂದಲೇ ಇಂದಿನ ಅನೇಕ ಸಮಸ್ಯೆ, ಪಿಡುಗುಗಳಿಗೆ ಮತ್ತೊಮ್ಮೆ ಸಮಷ್ಟಿಹಿತ ಕ್ರಾಂತಿಯಾಗಬೇಕೆಂದರೆ ಕಲ್ಯಾಣ ಕ್ರಾಂತಿ ಮಾದರಿಯಾಗಿ ನಿಲ್ಲುತ್ತದೆ. ಜನಾಂದೋಲನಕ್ಕೆ ಹೊಸ ವ್ಯಾಖ್ಯಾನ ಬರೆಯಿತೇನೋ ಎನ್ನುವಂತೆ ಕಲ್ಯಾಣ ಕ್ರಾಂತಿ ನಡೆಯಿತು. ಸಮಾಜದ ಎಲ್ಲ ವಲಯಗಳಿಂದ ಜನರನ್ನು ಸೆಳೆದು ಸಾಮೂಹಿಕ ಶಕ್ತಿಗೆ ಉದಾಹರಣೆಯಾಯಿತು. ಆದ್ದರಿಂದಲೇ ಕಲ್ಯಾಣ ಕ್ರಾಂತಿ ಇಂದು ಜಗತ್ತು ಬಯಸುವ ಪರಿವರ್ತನೆಯ ಶಕ್ತಿಗೆ ಪರಮೋಚ್ಚ ಉದಾಹರಣೆ. ಅಲ್ಲಿ ಉತ್ತರದಾಯಿತ್ವದ ನೆರಳಡಿಯಲ್ಲೇ ಅನೇಕ ಶರಣರು ಸಂದಭೋಚಿತ ನಾಯಕತ್ವದೊಂದಿಗೆ ಸಹಜವೊ ಎಂಬಂತೆ ಕೈ ಜೋಡಿಸಿದರು. ಅಸಾಧ್ಯವಾದುದನ್ನು ಸಾಧಿಸಿದರು. ಈ ಯಶೋಗಾಥೆಯೇ ಕಲ್ಯಾಣ ಕ್ರಾಂತಿಯ ವ್ಯಾಕರಣವಾಗಿದೆ.

ಉತ್ತರದಾಯಿತ್ವಕ್ಕೆ ಉತ್ತಮ ಉದಾಹರಣೆ: ಕಲ್ಯಾಣ ಕ್ರಾಂತಿಯುದ್ದಕ್ಕೂ ಪ್ರತಿ ಶರಣರಲ್ಲೂ ನಿಚ್ಚಳವಾಗಿ ಕಾಣುವುದೆಂದರೆ ಜವಾಬ್ದಾರಿ ಹಾಗೂ ಉತ್ತರದಾಯಿತ್ವ. ಇದು ಮೇಲಿಂದ ಹೇರಲ್ಪಟ್ಟದ್ದಲ್ಲ; ಅದು ಅವಶ್ಯಕ ಮತ್ತು ಅನಿವಾರ್ಯ ಎನ್ನುವ ಪ್ರಜ್ಞೆ ಶರಣರಲ್ಲಿ ತಂತಾನೇ ಬೆಳೆಯಿತು. ಬಸವಣ್ಣನವರ ಹೊಸನೋಟದಲ್ಲಿ ತಮ್ಮ ಹೊಸಜೀವನದ ದಿಕ್ಕು-ದೆಸೆ ಅಡಗಿದೆ ಎಂಬುದು ಅವರಿಗೆ ವೇದ್ಯವಾಗಿತ್ತು. ಆದ್ದರಿಂದಲೇ ಜವಾಬ್ದಾರಿ ವಹಿಸಿಕೊಳ್ಳಲು ಯಾರೂ ಹಿಂಜರಿಯಲಿಲ್ಲ; ಎಂಥ ಬಲಿದಾನಕ್ಕೂ ಸಿದ್ಧರಾದರು. ಹೊಸ ವ್ಯವಸ್ಥೆ ಕಟ್ಟುವಲ್ಲಿ ಸಮಷ್ಟಿಪ್ರಜ್ಞೆಯೇ ದಿಕ್ಸೂಚಿಯಾಗಬೇಕು ಎಂದರಿತರು. ವ್ಯಷ್ಟಿಪ್ರಜ್ಞೆ ಸೋಪಾನವಾಯಿತು. ಸಮಷ್ಟಿಪ್ರಜ್ಞೆ ಅದನ್ನೇರಿ ಮಾನವನ ಔನ್ನತ್ಯದ ಅರಿವನ್ನು ಸಾರಿಹೇಳಿತು. ಬಸವಣ್ಣನವರ ನಾಯಕತ್ವ ಪ್ರತಿಯೊಬ್ಬರಲ್ಲೂ ಪ್ರತಿಫಲನಗೊಂಡಿತು. ಅವರ ಕಾಳಜಿ ಪ್ರತಿ ಶರಣರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿತು.

ಪರಿವರ್ತನೆಗೆ ಮುನ್ನುಡಿ: ಇವೆಲ್ಲವನ್ನೂ ಸಾಧ್ಯಗೊಳಿಸಿದ ಬಸವಣ್ಣನವರ ಕಾರ್ಯಕ್ಷಮತೆ ಹೇಗಿತ್ತು ಎಂಬುದೇ 12ನೇ ಶತಮಾನದ ಕುತೂಹಲಕರ ಸಂಗತಿ. ಸಾಮಾನ್ಯರ ಆಧ್ಯಾತ್ಮಿಕ ಉನ್ನತಿಯ ಜತೆಗೆ ಇಡೀ ವ್ಯವಸ್ಥೆಯ ಸುಧಾರಣೆಯಲ್ಲಿ ಅವರೆಲ್ಲರೂ ಕಾಯಾ-ವಾಚಾ-ಮನಸಾ ಪಾಲ್ಗೊಳ್ಳುವಂತೆ ಮಾಡಿದ ಬಸವಣ್ಣನವರ ಮುಂದಾಳತ್ವ ಅಚ್ಚರಿದಾಯಕ. ಸ್ಪಷ್ಟವಾದ ತಾತ್ತಿ್ವಕ ನಿಲುವಿನಿಂದ ಸಾವಿರಾರು ಶರಣರನ್ನು ಸೆಳೆದ ಅವರ ನಿಲುವು ಹಾಗೂ ಸಮರ್ಪಣಾ ಮನೋಭಾವ, ನಾಯಕತ್ವಕ್ಕೆ ಹಿಂದೆಂದೂ ಸಿಗದ ಹೊಸ ಆಯಾಮ ದೊರಕಿಸಿಕೊಡುತ್ತವೆ. ಯಾವ ಧಾರ್ವಿುಕ ಸಂಸ್ಕಾರವಿಲ್ಲದೆ ನಿಕೃಷ್ಟರೆನಿಸಿದ್ದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ವಿಧಾನ ಇಂದಿಗೂ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಳ್ಳುತ್ತದೆ. ಬಸವಣ್ಣನವರ ವ್ಯಕ್ತಿತ್ವದ ಅಂಥ ಒಳಸುಳಿವುಗಳನ್ನು ಅವರ ಅನೇಕ ವಚನಗಳಲ್ಲಿ ಕಾಣಬಹುದು. ಅವುಗಳಲ್ಲಿ ಒಂದು-

ಭಕ್ತಿಯಿಲ್ಲದ ಬಡವ ನಾನಯ್ಯ

ಕಕ್ಕಯ್ಯನ ಮನೆಯಲ್ಲೂ ಬೇಡಿದೆ

ಚನ್ನಯ್ಯನ ಮನೆಯಲ್ಲೂ ಬೇಡಿದೆ

ದಾಸಯ್ಯನ ಮನೆಯಲ್ಲೂ ಬೇಡಿದೆ

ಎಲ್ಲಾ ಪುರಾತರು ನೆರೆದು ಭಕ್ತಿ ಭಿಕ್ಷವನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ.

ಬಸವಣ್ಣನವರು ಹೇಳುತ್ತಿದ್ದಾರೆ ‘ಭಕ್ತಿಯಿಲ್ಲದ ಬಡವ ನಾನಯ್ಯ’ ಎಂದು!

ವ್ಯವಸ್ಥೆಯು ಮಾನವನ ಕಲ್ಯಾಣಗುಣಗಳನ್ನು ಪೋಷಿಸದೆ, ಸಮಾಜದ ಆಮೂಲಾಗ್ರ ಬೆಳವಣಿಗೆಗೆ ಪೂರಕವಾಗಿ ನಿಲ್ಲದೆ ಹೋದಾಗ ನಾಗರಿಕತೆ ಮುಗ್ಗರಿಸುತ್ತದೆ. ಅದನ್ನು ಎತ್ತಲು ಹೊಸ ವ್ಯವಸ್ಥೆಯೊಂದು ಅನಿವಾರ್ಯವಾಗುತ್ತದೆ. ಅಂಥ ಪರ್ಯಾಯ ವ್ಯವಸ್ಥೆಯ ನಿರ್ಮಾಣ ಕಠಿಣವೇ. ವ್ಯವಸ್ಥೆಯಲ್ಲಿ ಮೂಲೆಗುಂಪಾದವರನ್ನು ಸಂಘಟಿಸಿ ಆತ್ಮವಿಶ್ವಾಸ ತುಂಬುವ ಜತೆಗೆ ಅವರೊಂದಿಗೆ ಯಾವುದೇ ಮಾನಸಿಕ ದೂರ ಇಲ್ಲದಂತೆ ನೋಡಿಕೊಳ್ಳುವುದು ಆ ನಾಯಕನ ದೂರದೃಷ್ಟಿಗೆ ಒಡ್ಡಿದ ಸವಾಲೇ ಸರಿ. ಅಂಥ ಸವಾಲನ್ನು ಬಸವಣ್ಣ ಸಹಜವಾಗಿ, ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. ತನ್ನ ಸಾಮರ್ಥ್ಯವನ್ನು ಪ್ರದರ್ಶಿಸದೆ, ಮೂಲೆಯವರಿಗಿಂತ ಮೂಲೆಯವನೆಂದು ತನ್ನನ್ನು ಕರೆದುಕೊಂಡು, ಮೂಲೆಗುಂಪಾಗಿದ್ದವರ ಮನಸ್ಸನ್ನು ಅಣಿಗೊಳಿಸಲು ಅನುವಾಗುವ ಮಾನಸಿಕ ಬುನಾದಿಯನ್ನು ಈ ವಚನದಲ್ಲಿ ಗಮನಿಸಬಹುದು. ‘ನಾನು ಭಕ್ತಿಭಂಡಾರಿ ಬಸವಣ್ಣ; ಬನ್ನಿ ನಾವೆಲ್ಲರೂ ಭಕ್ತಿಪಥದಲ್ಲಿ ಸಾಗೋಣ’ ಎಂದು ಕರೆನೀಡಿದ್ದರೆ, ಶೋಷಿತರ ಮನವನ್ನು ಅವರು ಮುಟ್ಟುತ್ತಿದ್ದರೇ? ಬದಲಿಗೆ ಅವರ ನಡುವೆ ಸಾಗರದಷ್ಟು ಅಂತರ ಬೆಳೆಯುತ್ತಿತ್ತು. ‘ನಾವೆಲ್ಲಿ, ಬಸವಣ್ಣನೆಲ್ಲಿ?’ ಎಂದು ಮನಸ್ಸುಗಳು ತಮ್ಮ ಮತ್ತು ಬಸವಣ್ಣನವರ ನಡುವಿನ ಅಂತರವನ್ನು ತೂಗಿನೋಡಲು ಪ್ರಾರಂಭಿಸುತ್ತಿದ್ದವು. ಅಲ್ಲಿಗೆ ದುರ್ಬಲರನ್ನು ಸಂಘಟಿಸುವ ಕಾರ್ಯ ಸೋತುಬಿಡುತ್ತಿತ್ತು. ‘ಭಕ್ತಿಯಿಲ್ಲದ ಬಡವ ನಾನಯ್ಯಾ’ ಎನ್ನುವ ಬಸವಣ್ಣನವರ ‘ಕಿಂಕರ ಮನೋಭಾವ’ ಅವರ ಹಾಗೂ ಶೋಷಿತರೊಂದಿಗಿನ ಮಾನಸಿಕ ಬೆಸುಗೆಗೆ ಅನುವುಮಾಡಿಕೊಡುವುದಲ್ಲದೆ ಮುಂದೆ ಜರುಗುವ ಭಾರಿ ಪರಿವರ್ತನೆಗೆ ಮುನ್ನುಡಿ ಬರೆಯುತ್ತದೆ.

ಬಸವಣ್ಣ ಮುಂದುವರಿದು ಹೇಳುತ್ತಾರೆ- ‘ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ’ ಎಂದು! ‘ಬೇಡಿದೆ’ ಎನ್ನುವ ಅವರ ನಿಲುವು ಇಡೀ ನಾಯಕತ್ವಕ್ಕೆ ಹೊಸ ಆಯಾಮ ತಂದುಕೊಡುತ್ತದೆ. ಬೇಡಿದೆ ಎನ್ನುವ ಶಬ್ದ ಸಾಂಕೇತಿಕವಾಗಿದ್ದು ಶರಣರ ಆಮೂಲಾಗ್ರ ಬದಲಾವಣೆಯ ಸಚೇತಕ ಶಕ್ತಿ ಯಾವುದೆಂಬುದನ್ನು ನಿರ್ದೇಶಿಸುತ್ತದೆ. ‘ಬೇಡಿದೆ’ ಎಂಬ ಈ ನಿಲುವೇ ನಾಯಕತ್ವ ವಿಚಾರದಲ್ಲಿ ಕ್ರಾಂತಿಕಾರಿಯಾದುದು. ಇದು ‘ನಿರ್ದೇಶನಯುಕ್ತ ನಾಯಕತ್ವ’ದ ಸಂಪ್ರದಾಯಕ್ಕೆ ಹೊರತಾಗಿ ‘ಉತ್ತೇಜನಯುಕ್ತ ನಾಯಕತ್ವ’ದ ನಡೆಗೆ ಒತ್ತುಕೊಡುವಂತಿದೆ. ಮಾನವಕುಲವನಲ್ಲದೆ ಸಕಲ ಜೀವಿಗಳ ಶ್ರೇಯಸ್ಸನ್ನೇ ಬಯಸುವ ಬಸವಣ್ಣನವರ ಸಹಜ ಗುಣದಿಂದ ಮೂಡಿದ ಸಹಜ ನಾಯಕತ್ವದ ಲಕ್ಷಣ ಇದು. ಆದ್ದರಿಂದಲೇ ಬಸವಣ್ಣನವರು ಪ್ರತಿಯೊಬ್ಬರನ್ನೂ ‘ಇವ ನಮ್ಮವ, ಇವ ನಮ್ಮವ’ ಎಂದು ಜತೆಗಿಟ್ಟುಕೊಂಡೇ ವ್ಯವಸ್ಥೆಯ ಪಲ್ಲಟಕ್ಕೆ ಹೆಜ್ಜೆಯಿಟ್ಟರು. ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಚೈತನ್ಯಶಕ್ತಿಯನ್ನು ಸಚೇತನಗೊಳಿಸುವುದು ಬಹುಶಃ ಮಾನವಕುಲಕ್ಕೆ ನೀಡಬಹುದಾದ ಅಮೂಲ್ಯ ಕೊಡುಗೆ. ಅದು ಯಾವುದೇ ಸಾಂಪ್ರದಾಯಿಕ ನಾಯಕತ್ವದಿಂದ ಸಾಧ್ಯವಾಗುವಂಥದಲ್ಲ. ಬಸವಣ್ಣನವರ ‘ಬೇಡುವ’ ಪರಿ ಅವರ ಹೃದಯದಲ್ಲಿ ಶಾಶ್ವತ ಬದಲಾವಣೆಗೆ ನಾಂದಿಹಾಡಿತು. ಶೋಷಿತರ ಸಾಮರ್ಥ್ಯ ಗುರುತಿಸಿ ಅವರ ವ್ಯಕ್ತಿತ್ವದ ರೂಪಾಂತರಕ್ಕೆ ಸಾಧಕವಾಗುವ ನಡೆಯಿದು.

ನೇರಹೇರಿಕೆಯಿಂದ ಕೆಲಸಗಳು ನಡೆಯುವುದಿಲ್ಲ. ಇದನ್ನು ಆಧುನಿಕ ಸಮಾಜ ಅರಿತಿದೆ. ಹೇರಿಕೆಯಿಲ್ಲದೆ ಮುನ್ನಡೆದರಷ್ಟೇ ಆಂದೋಲನ ರ್ತಾಕ ಅಂತ್ಯ ಕಂಡೀತು. ಆದ್ದರಿಂದಲೇ ನಾಯಕತ್ವದ ಬಗ್ಗೆ ಅಸಂಖ್ಯ ವಿಚಾರಧಾರೆಗಳು ಹರಿದಿವೆ. ಆದರೂ ಹೇರಿಕೆಯಿಲ್ಲದೇ ಕಾಯಾ-ವಾಚಾ-ಮನಸಾ ಪಾಲ್ಗೊಳ್ಳುವಂತೆ ಮಾಡುವಲ್ಲಿ ಆಧುನಿಕ ನಾಯಕತ್ವ ಅನೇಕ ಸಲ ಸೋತಿರುವುದನ್ನು ಕಾಣುತ್ತೇವೆ. ಅಸಾಧ್ಯ ಕೆಲಸಗಳಿಗೆ ಮನಸುಗಳನ್ನು ಪರೋಕ್ಷವಾಗಿ ಅಣಿಗೊಳಿಸುವುದು ಕಠಿಣ ಸವಾಲೇ ಸರಿ. ವ್ಯವಸ್ಥೆಯೊಂದಿಗೆ ಒಲ್ಲದ ಮನಸ್ಸಿನಿಂದ ಒಗ್ಗಿಕೊಂಡು ಬದುಕುತ್ತಿರುವ ಶೋಷಿತರನ್ನು ಪ್ರೇರೇಪಿಸಲು ಸೂಕ್ಷ್ಮಮನದ ನಾಯಕನೇ ಬೇಕು. ಆತ ಸಂಕೀರ್ಣತೆ ಅರಿಯುವುದರ ಜತೆಗೆ ಅದನ್ನು ಸರಳಗೊಳಿಸಿ ಸಹಜಮಾರ್ಗ ಹಾಕುವ ಚಾಣಾಕ್ಷನಾಗಿರಬೇಕು. ಬಸವಣ್ಣನವರ ‘ಬೇಡುವ’ ನಿಲುವು ಒಂದು ರೀತಿಯಲ್ಲಿ ದೂಡಲ್ಪಟ್ಟವರ ಮೇಲೆ ಆದರದ ಸೂಚನೆಯಂತೆ ಕೆಲಸ ಮಾಡುತ್ತದೆ. ಬಿಜ್ಜಳನ ಅರಸೊತ್ತಿಗೆಯಲ್ಲಿ ಪ್ರಧಾನ ಮಂತ್ರಿಯಾಗಿದ್ದು, ಅಂದಿನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲುಕುಲದವರಾಗಿದ್ದ ಬಸವಣ್ಣನವರೇ ನಮ್ಮ ಕೇರಿಗೆ ಬಂದಿದ್ದಾರೆ, ಬೇಡುತ್ತಿದ್ದಾರೆ ಎನ್ನುವ ಸಂಗತಿಯೇ ಊಹೆಗೂ ನಿಲುಕದಷ್ಟು ಇವರನ್ನು ಉತ್ತೇಜಿಸುತ್ತದೆ. ತಮ್ಮ ಕೇರಿಯಿಂದಾಚೆ ಹೆಜ್ಜೆಯಿಡಲು ನಡುಗುತ್ತಿದ್ದ ಕಕ್ಕಯ್ಯ, ಚೆನ್ನಯ್ಯ, ಹರಳಯ್ಯ, ಧೂಳಯ್ಯ, ನಾಗಿದೇವರಂಥವರು ಬಸವಣ್ಣನವರ ಜತೆ ಬೆರೆಯಲು, ತಮ್ಮ ಚಿಪ್ಪಿನಿಂದ ಹೊರಬರಲು ಅಣಿಯಾಗುತ್ತಾರೆ. ದೇವರು-ಧರ್ಮದ ಪರಿಕಲ್ಪನೆಗಳನ್ನು ಬಸವಣ್ಣನವರ ಅರ್ಥಕೋಶದ ಮೂಲಕ ಅರಿತು ಬದಲಾವಣೆಗೆ ಒಡ್ಡಿಕೊಳ್ಳುತ್ತಾರೆ.

ಕಲ್ಯಾಣ ಕ್ರಾಂತಿ: ನಾಯಕನ ಯಶಸ್ಸು ಅವಲಂಬಿತವಾಗಿರುವುದೇ ಆತ ಮನಸ್ಸುಗಳನ್ನು ಎಷ್ಟರಮಟ್ಟಿಗೆ ಪ್ರಭಾವಿಸುತ್ತಾನೆ ಎಂಬುದರ ಮೇಲೆ. ಅದರಲ್ಲೂ ಯುಗದ ವ್ಯವಸ್ಥೆಯ ಪಲ್ಲಟಕ್ಕೆ ಸಜ್ಜಾಗುವ ಆಂದೋಲನ ತಾತ್ತಿ್ವಕವಾಗಿ ಗಟ್ಟಿಯಿದ್ದರೆ ಮಾತ್ರ ಅದರ ದಿಕ್ಕು-ದೆಸೆಯೂ ಸರಿಯಿರುತ್ತದೆ. ಆ ಗಟ್ಟಿತನ ಕೊಡುವ ಬಸವಣ್ಣನವರು ಶರಣರನ್ನು ಹುರಿದುಂಬಿಸುವ ವಿಧಾನ ವಿನೂತನ. ಯಾರಿಗಾಗಿ ಆಂದೋಲನವೋ ಅವರೇ ಅದಕ್ಕೆ ಕೇಂದ್ರಿತವಾಗಬೇಕು; ಇಲ್ಲದಿದ್ದರೆ ಅದು ಯಶಸ್ಸಾಗದು. ಬಸವಣ್ಣ ‘ಭಕ್ತಿಪಾತ್ರೆ’ ಹಿಡಿದು ಸಮಾಜದಲ್ಲಿ ನಿಕೃಷ್ಟಕ್ಕೆ ಒಳಗಾಗಿದ್ದ ಕಕ್ಕಯ್ಯನ ಮನೆಯ ಮುಂದೆ ಭಕ್ತಿಯ ಭಿಕ್ಷೆ ‘ಬೇಡಿ’ದರೆ ಕಕ್ಕಯ್ಯನವರಿಗೆ ಹೇಗಾಗಿರಬೇಡ? ಯುಗಪುರುಷನೊಬ್ಬ ತಮ್ಮ ಮೇಲೆ ಅಂಥ ನಂಬಿಕೆ, ಭರವಸೆಯಲ್ಲಿ ಕೈಚಾಚಿದ್ದು ಅವರ ಮೇಲೆ ಬೀರಿರಬಹುದಾದ ಸಕಾರಾತ್ಮಕ ಪರಿಣಾಮ ಊಹಾತೀತ.

ಎಲ್ಲ ಪುರಾತರು ನೆರೆದು ಭಕ್ತಿ ಭಿಕ್ಷೆಯನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ

ಬಸವಣ್ಣನವರ ಇಡೀ ಕಲ್ಯಾಣ ಕ್ರಾಂತಿಯನ್ನು ಈ ಎರಡು ಸಾಲಿನಲ್ಲಿ ಹಿಡಿದಿಟ್ಟಂತೆ ತೋರುತ್ತಿದೆ! ಚೆನ್ನಯ್ಯ, ದಾಸಯ್ಯ, ಕಕ್ಕಯ್ಯ ಮುಂತಾದವರೆಲ್ಲರೂ ಶ್ರೇಷ್ಠ ಶರಣರಾಗಿ ಹೊಮ್ಮಿ ಬಸವಣ್ಣನವರ ಪಾತ್ರೆಗೆ ಭಕ್ತಿಭಿಕ್ಷೆಯನಿತ್ತರು! ಯಾರೂ ಊಹಿಸಲಾಗದ ಪರಿವರ್ತನೆ ಹಾಗೂ ಅದರ ಫಲಿತಾಂಶ ಸಾಧ್ಯವಾದದ್ದು ತನ್ನಿಂದಲ್ಲ, ಚೆನ್ನಯ್ಯ, ಕಕ್ಕಯ್ಯ, ದಾಸಯ್ಯ ಇವರ ಸಾಧನೆಯಿಂದ ಎಂಬ ತೃಪ್ತಿ ಬಸವಣ್ಣನವರಲ್ಲಿ ಕಾಣುತ್ತದೆ. ಭಿಕ್ಷಾಪಾತ್ರೆಯೂ, ಅದು ತುಂಬುವುದೂ ಕಲ್ಯಾಣ ಕ್ರಾಂತಿಯಲ್ಲಿನ ಎರಡು ಪ್ರಮುಖ ಬೆಳವಣಿಗೆಗಳ ಸೂಚಕ. ಭಿಕ್ಷಾಪಾತ್ರೆ ಎಂದರೆ ಬಸವಣ್ಣನವರ ಯಾಚನೆಯನ್ನೂ, ತುಂಬಿತ್ತು ಎಂಬುದು ಆ ಬೇಡಿಕೆ ಈಡೇರಿದ್ದು ಎಂಬುದನ್ನೂ ಸಂಕೇತಿಸುತ್ತವೆ. ಜಗತ್ತಿನ ಇತರೆಡೆ ಮಾನವಕುಲ ಅವೈಜ್ಞಾನಿಕ ಮನೋಭಾವದಿಂದ ತೆವಳುತ್ತಿದ್ದರೆ, ಕಲ್ಯಾಣದಲ್ಲಿ ವೈಚಾರಿಕ-ವೈಜ್ಞಾನಿಕ ಮನೋಭಾವದ ಮೇಲೆ ಹೊಸ ಸಮಾಜವನ್ನು ಪರ್ಯಾಯವಾಗಿ ಕಟ್ಟುತ್ತಿತ್ತು. ‘ಭಕ್ತಿಯ ಭಿಕ್ಷೆ’ ಎನ್ನುವ ಬಸವಣ್ಣನವರು ಕಲ್ಯಾಣ ಕ್ರಾಂತಿಯನ್ನು ಭಕ್ತಿಯ ಸೋಪಾನದಲ್ಲಿ ಸಾಧಿಸುತ್ತಾರೆ. ಇದೊಂದು ನವೀನ ನಾಯಕತ್ವದ ಶೈಲಿ. ರಾಜಾಜ್ಞೆಯ ಹೇರಿಕೆ, ಕಾನೂನಿನ ಬೆದರಿಕೆಯಿಲ್ಲದೆ, ನಾಯಕನ ವ್ಯಕ್ತಿತ್ವ ಎಲ್ಲೂ ವಿಜೃಂಭಿಸದೆ ಸಾಧ್ಯವಾದದ್ದು! ಒಂದು ಮೂರ್ಖ ಮನಸ್ಸು ಸಾಕು ವ್ಯವಸ್ಥೆಯನ್ನು ಕೆಡಿಸಲು, ಆದರೆ ಅದನ್ನು ಸರಿಪಡಿಸಲು ಒಬ್ಬ ಯುಗಪುರುಷನೇ ಬರಬೇಕು. ಬಸವಣ್ಣನವರು ಇದನ್ನೇ ಮಾಡಿದ್ದು. ಹದಗೆಟ್ಟಿದ್ದ ಸಮಾಜವನ್ನು ಸರಿಪಡಿಸಿದ್ದು ಅವರ ಈ ಅದ್ಭುತ ನಾಯಕತ್ವದ ನಡೆಯೇ!

ಕೇವಲ ಕೆಲ ದಶಕಗಳಲ್ಲಿ ಸ್ಥಾಪನೆಗೊಂಡ ಇಂಥ ಪರ್ಯಾಯ ಸಮಾಜವನ್ನು 900 ವರ್ಷಗಳಾದರೂ ಸರಿಯಾಗಿ ಅರ್ಥೈಸಿಕೊಳ್ಳಲು ವಿಫಲರಾಗಿದ್ದೇವೆ. ಹೀಗೆ ನಿರ್ವಿುತ ವಾದ ಸಮಾಜವು ಒಳಜಾತಿಗಳ ಹೆಸರಿನಲ್ಲಿ ಒಂದೊಂದು ಪಂಗಡಗಳಾಗಿ ಮೂಲ ಆಶಯವನ್ನೇ ಮರೆತುಬಿಟ್ಟಿವೆ. ರಾಷ್ಟ್ರ ರಾಷ್ಟ್ರಗಳ ನಡುವಿನ ಗೋಡೆಗಳು ಬಿದ್ದಿದ್ದರೂ, ಮನಸು ಮನಸುಗಳ ನಡುವೆ ಗೋಡೆಗಳು ಎದ್ದುನಿಲ್ಲುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ. ಪರರಾಷ್ಟ್ರವೊಂದು ಬಸವಣ್ಣನವರ ನಾಯಕತ್ವದ ಪಾಠಗಳನ್ನು ನಮಗೇ ಮನವರಿಕೆ ಮಾಡಿಕೊಡುವ ಕಾಲ ಮುಂದೊಮ್ಮೆ ಬಂದರೂ ಅಚ್ಚರಿಯಿಲ್ಲ!

(ಲೇಖಕರು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು)

ಭಾರತ್ ಕ್ಯೂಆರ್.

​ಭಾರತದ್ದೇ ಆದ ಭಾರತ್​ಕ್ಯುಆರ್Monday, 03.04.2017, 1:09 AM

ಭಾರತೀಯ ರಿಸರ್ವ್ ಬ್ಯಾಂಕ್​ನ ಡೆಪ್ಯುಟಿ ಗವರ್ನರ್ ಆರ್. ಗಾಂಧಿ ಅವರು ‘BharatQR’ ಎಂಬ ಕ್ಷಿಪ್ರ ಪ್ರತಿಸ್ಪಂದನೆಯ (Quick Response- QR) ‘ಪ್ರಮಾಣೀಕೃತ ಕೋಡ್’ ಒಂದನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದಾರೆ. ಇದನ್ನು ಅಭಿವೃದ್ಧಿಪಡಿಸಿದ್ದು ಮಾಸ್ಟರ್​ಕಾರ್ಡ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ ಮತ್ತು ವೀಸಾದಂಥ ಸಂಸ್ಥೆಗಳು. ಸದರಿ ‘ಭಾರತ್​ಕ್ಯುಆರ್’ ಸಂಕೇತದಕುರಿತಾದ ಒಂದು ಇಣುಕುನೋಟ ಇಲ್ಲಿದೆ. ಭಾರತ್​ಕ್ಯುಆರ್ಕೋಡ್ ಎಂದರೆ… ಕ್ಯುಆರ್ ಕೋಡ್ ಎಂಬುದು ಯಂತ್ರದ ನೆರವಿನಿಂದ ಓದಬಹುದಾದ ಒಂದು ಮ್ಯಾಟ್ರಿಕ್ಸ್ (ಪರಸ್ಪರ ಬಂಧಿಸಲ್ಪಟ್ಟಿರುವ ಮಂಡಲಧಾತುಗಳ ಒಂದು ಜಾಲ) […]ಭಾರತೀಯ ರಿಸರ್ವ್ ಬ್ಯಾಂಕ್​ನ ಡೆಪ್ಯುಟಿ ಗವರ್ನರ್ ಆರ್. ಗಾಂಧಿ ಅವರು ‘BharatQR’ ಎಂಬ ಕ್ಷಿಪ್ರ ಪ್ರತಿಸ್ಪಂದನೆಯ (Quick Response- QR) ‘ಪ್ರಮಾಣೀಕೃತ ಕೋಡ್’ ಒಂದನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದಾರೆ. ಇದನ್ನು ಅಭಿವೃದ್ಧಿಪಡಿಸಿದ್ದು ಮಾಸ್ಟರ್​ಕಾರ್ಡ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ ಮತ್ತು ವೀಸಾದಂಥ ಸಂಸ್ಥೆಗಳು. ಸದರಿ‘ಭಾರತ್​ಕ್ಯುಆರ್’ ಸಂಕೇತದ ಕುರಿತಾದ ಒಂದು ಇಣುಕುನೋಟ ಇಲ್ಲಿದೆ.ಭಾರತ್​ಕ್ಯುಆರ್ ಕೋಡ್ ಎಂದರೆ…ಕ್ಯುಆರ್ ಕೋಡ್ ಎಂಬುದು ಯಂತ್ರದ ನೆರವಿನಿಂದ ಓದಬಹುದಾದ ಒಂದು ಮ್ಯಾಟ್ರಿಕ್ಸ್ (ಪರಸ್ಪರ ಬಂಧಿಸಲ್ಪಟ್ಟಿರುವ ಮಂಡಲಧಾತುಗಳ ಒಂದು ಜಾಲ) ಆಗಿದ್ದು, ಪಾವತಿಗಳನ್ನು ಮಾಡುವ ಸಂದರ್ಭದಲ್ಲಿ ಸ್ಮಾರ್ಟ್​ಫೋನ್ ನೆರವಿನಿಂದ ಇದನ್ನು ಸ್ಕ್ಯಾನ್ ಮಾಡಬಹುದಾಗಿರುತ್ತದೆ. ಇತರ ಉತ್ಪನ್ನ ಅಥವಾ ವ್ಯವಸ್ಥೆಗೆ ಸಂಬಂಧಿಸಿದ ಪಾರಸ್ಪರಿಕ ಕಾರ್ಯಾಚರಣೆಗೂ ಭಾರತ್​ಕ್ಯುಆರ್ ಕೋಡ್ ಅನ್ನು ಬಳಸಿಕೊಳ್ಳಬಹು ದಾಗಿದೆ. ಇಂಥದೊಂದು ಪ್ರಕ್ರಿಯೆಗೆ ಸದರಿ ಮ್ಯಾಟ್ರಿಕ್ಸ್ ಅನ್ನುಅನುವಾಗಿಸಲು, ವೀಸಾ, ಮಾಸ್ಟರ್​ಕಾರ್ಡ್, ರುಪೇ ಮತ್ತು ಅಮೆರಿಕನ್ ಎಕ್ಸ್​ಪ್ರೆಸ್​ನಂಥ ಪಾವತಿಜಾಲದ ಕಂಪನಿಗಳು ಪರಸ್ಪರ ಕೈಜೋಡಿಸಿವೆ. ಪ್ರಸ್ತುತ, ಅಮೆರಿಕನ್ ಎಕ್ಸ್​ಪ್ರೆಸ್ ಕಂಪನಿಯು ಈ ಕುರಿತಾದ ಸಮಗ್ರೀಕರಣ ಪ್ರಕ್ರಿಯೆಯ ಅಂತಿಮ ಹಂತದಲ್ಲಿದ್ದು, ಕಾರ್ಯರೂಪಕ್ಕೆ ಬರುವುದು ಬಾಕಿಯಿದೆ. ಆಂಡ್ರಾಯ್್ಡ ಮತ್ತು ‘iOS’ ಪ್ಲ್ಯಾಟ್​ಫಾರಂ/ವೇದಿಕೆ ಅಥವಾ ನೆಲೆಗಟ್ಟಿನಲ್ಲಿ ಭಾರತ್​ಕ್ಯುಆರ್ ಸಂಕೇತ ಕಾರ್ಯನಿರ್ವಹಿಸುತ್ತದೆಯೇ ಹೊರತು, ವಿಂಡೋಸ್ ಅಂತರ್ಗತವಾಗಿರುವ ವ್ಯವಸ್ಥೆಯಲ್ಲಲ್ಲ. ಆದಾಗ್ಯೂ, ಸ್ಮಾರ್ಟ್​ಫೋನ್ ಬಳಕೆದಾರರಲ್ಲದವರಿಗೂ ಒತ್ತಾಸೆಯಾಗಿ ನಿಲ್ಲುವ ದೃಷ್ಟಿಯಿಟ್ಟುಕೊಂಡು USSD (Unstructured Supplementary Service Data) ಮೂಲಕ ಪರಿಣಾಮಕಾರಿ ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ತರಲು ತಂತ್ರಜ್ಞರು ಕಸರತ್ತು ಮಾಡುತ್ತಿದ್ದಾರೆ.ಇದನ್ನು ಯಾರೆಲ್ಲ ಬಳಸಬಹುದು?ಪ್ರಸ್ತುತ, 15 ಬ್ಯಾಂಕುಗಳಷ್ಟೇ ಈ ನಿಟ್ಟಿನಲ್ಲಿ ಸನ್ನದ್ಧವಾಗಿದ್ದು, ಭಾರತ್​ಕ್ಯುಆರ್ ಸಂಕೇತದ ಪರಿಣಾಮಕಾರಿ ಅಳವಡಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಈ 15ಬ್ಯಾಂಕುಗಳಲ್ಲಿ ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್, ಡಿಸಿಬಿ ಬ್ಯಾಂಕ್ ಲಿಮಿಟೆಡ್, ಕರೂರ್ ವೈಶ್ಯ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆರ್​ಬಿಎಲ್ ಬ್ಯಾಂಕ್ ಲಿಮಿಟೆಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವಿಜಯಾ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಸೇರಿವೆ. ಓರ್ವ ಗ್ರಾಹಕರಾಗಿ ಭಾರತ್​ಕ್ಯುಆರ್ ಸಂಕೇತವನ್ನು ಬಳಸಲು ನೀವು ಸ್ಮಾರ್ಟ್ ಫೋನನ್ನು ಹೊಂದಿರಬೇಕಾಗುತ್ತದೆ ಮತ್ತು ಸದರಿ ಸಂಕೇತದೊಂದಿಗೆ ಹೊಂದಿಕೆಯಾಗುವ ‘ಬ್ಯಾಂಕ್ ಆಪ್’ ಅನ್ನು ಡೌನ್​ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಬಹುತೇಕ ಬ್ಯಾಂಕುಗಳು ಒಂದಕ್ಕಿಂತ ಹೆಚ್ಚು ಆಪ್​ಗಳನ್ನು ಹೊಂದಿರುತ್ತವೆಯಾದ್ದರಿಂದ, ಆಯ್ದ ಆಪ್​ಗಳನ್ನಷ್ಟೇ ಗುರಿಯಾಗಿಸಿಕೊಂಡು ಭಾರತ್​ಕ್ಯುಆರ್ ಸಂಕೇತವನ್ನು ಕಾರ್ಯರೂಪಕ್ಕೆ ತರಲಾಗಿದೆ. ಆದ್ದರಿಂದ ಭಾರತ್​ಕ್ಯುಆರ್ ಸಂಕೇತಕ್ಕೆ ಎಲ್ಲ ಆಪ್​ಗಳೂ ಸ್ಪಂದಿಸಲಾರವು. ಉದಾಹರಣೆಗೆ, ‘Pockets’ ಮತ್ತು ಐಸಿಐಸಿಐ ಮೊಬೈಲ್ ಬ್ಯಾಂಕಿಂಗ್ ಆಪ್ ಅನ್ನು ಐಸಿಐಸಿಐ ಬ್ಯಾಂಕು ಆಯ್ದುಕೊಂಡಿದ್ದರೆ, ಎಚ್​ಡಿಎಫ್​ಸಿ ಬ್ಯಾಂಕು ‘PayZapp’ನೊಂದಿಗೆ ಇದನ್ನು ಬಿಡುಗಡೆ ಮಾಡಿದೆ. ಪ್ರಸ್ತುತ, ಸದಸ್ಯ ಬ್ಯಾಂಕುಗಳೊಂದಿಗೆ ಡೆಬಿಟ್, ಕ್ರೆಡಿಟ್ ಮತ್ತು ಪ್ರೀಪೇಯ್್ಡ ಕಾರ್ಡಗಳನ್ನು ಹೊಂದಿರುವವರು ಈ ಸೇವೆಯನ್ನುಬಳಸಿಕೊಳ್ಳಬಹುದಾಗಿದ್ದು,‘Unified Payment Interface’ (UPI) ಒಳಗೊಂಡ ವ್ಯವಸ್ಥೆಯಲ್ಲಿ ಈ ಸೇವೆ ಲಭ್ಯವಿರುವುದಿಲ್ಲ. ಕೆಲಸ ಮಾಡುವುದು ಹೇಗೆ?ಭಾರತ್​ಕ್ಯುಆರ್ ಸಂಕೇತದಲ್ಲಿ ಸ್ಥಿರ/ಸ್ಥಾಯಿ ಮತ್ತು ಚಲನಶೀಲ (Static ಮತ್ತು dynamic) ಎಂಬ ಎರಡು ಬಗೆಗಳಿವೆ. ಸ್ಥಿರ/ಸ್ಥಾಯಿ ಕ್ಯುಆರ್ ಸಂಕೇತದ ವ್ಯವಸ್ಥೆಯಲ್ಲಿ, ಮೊದಲಿಗೆ ನೀವು ಸಂಕೇತವನ್ನು ಸ್ಕ್ಯಾನ್ ಮಾಡಿ, ಮೊತ್ತವನ್ನು ನಮೂದಿಸಿ, ಪಿನ್ ಸಂಖ್ಯೆಯನ್ನು ದಾಖಲಿಸುವ ಮೂಲಕ ವ್ಯವಹಾರಕ್ಕೆ ಅಧಿಕೃತತೆ ಒದಗಿಸಬೇಕಾಗುತ್ತದೆ. ಈ ಹಂತಗಳ ನಂತರ ಹಣವು ಸಂಬಂಧಿತ ಖಾತೆಯಿಂದ ಕಡಿತಗೊಳ್ಳುತ್ತದೆ. ಉದಾಹರಣೆಗೆ, ತರಕಾರಿ ವ್ಯಾಪಾರಿಯೊಬ್ಬನಿಂದನೀವು 500 ರೂ. ಮೌಲ್ಯದ ತರಕಾರಿ ಖರೀದಿಸಿದಿರಿ ಎಂದುಕೊಳ್ಳಿ; ಭಾರತ್​ಕ್ಯುಆರ್ ಬಳಸಿ ಈ ಸಂಬಂಧದ ಹಣ ಪಾವತಿಸಲು, ಸದರಿ ಮಳಿಗೆಯಲ್ಲಿ ನೀವು ಕ್ಯುಆರ್ ಸಂಕೇತವನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ.ನಂತರದಲ್ಲಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಮೊತ್ತವನ್ನು (ಈ ಸಂದರ್ಭದಲ್ಲಾದರೆ 500 ರೂ.) ಹಾಗೂ ನಿಮ್ಮ ಪಿನ್ ಸಂಖ್ಯೆಯನ್ನುನಮೂದಿಸಬೇಕಾಗುತ್ತದೆ. ಆಗ ಹಣವು ನಿಮ್ಮ ಸಂಬಂಧಿತ ಖಾತೆಯಿಂದ ಕಡಿತಗೊಂಡು ಸದರಿ ವ್ಯಾಪಾರಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಚಲನಶೀಲ ಕ್ಯುಆರ್ ಸಂಕೇತದ ವ್ಯವಸ್ಥೆಯಲ್ಲಾದರೆ, ವ್ಯಾಪಾರಿಯು ಪ್ರತಿ ಬಾರಿಯೂ ಹೊಸ ಕ್ಯುಆರ್ ಸಂಕೇತವನ್ನು ಸೃಷ್ಟಿಸುತ್ತಾನೆ. ಉದಾಹರಣೆಗೆ, ನೀವೊಂದು ರೆಸ್ಟೋರಂಟಿನಲ್ಲಿದ್ದು 1,000 ರೂ.ನಷ್ಟು ಬಿಲ್ ಆಗಿದೆ ಎಂದಿಟ್ಟುಕೊಳ್ಳಿ. ಅದರ ಮಾಲೀಕ/ನಿರ್ವಾಹಕನು ಕ್ಯುಆರ್ ಸಂಕೇತವೊಂದನ್ನು ಒಳಗೊಂಡಿರುವ ಬಿಲ್ ಅನ್ನುನಿಮಗೆ ನೀಡುತ್ತಾನೆ. ನೀವು ಸದರಿ ಸಂಕೇತವನ್ನೊಮ್ಮೆ ಸ್ಕ್ಯಾನ್ ಮಾಡಿ, ನಿಮ್ಮ ಪಿನ್ ಸಂಖ್ಯೆಯನ್ನು ನಮೂಸಿದರಾಯ್ತು; ಪಾವತಿ ಪ್ರಕ್ರಿಯೆ ನೆರವೇರುತ್ತದೆ. ನೀವು ಬಿಲ್ ಮೊತ್ತವನ್ನು ನಮೂದಿಸುವ ಅಗತ್ಯ ಬರುವುದಿಲ್ಲ.

ಮಕ್ಕಳ ಸಾಹಿತ್ಯ ಜಾತ್ರೆ

ಮಕ್ಕಳ ಸಾಹಿತ್ಯ ಜಾತ್ರೆ:
ಚಿಣ್ಣರಿಂದಲೇ ಮಕ್ಕಳ ಸಾಹಿತ್ಯ ರಚನೆಯಾಗಬೇಕು. ಪುಟಾಣಿಗಳಲ್ಲೂ ಬರವಣಿಗೆ ಶಕ್ತಿ ವೃದ್ಧಿಸಬೇಕು. ಅವರಲ್ಲಿ ಸಾಹಿತ್ಯಭಿಮಾನ ಮೂಡಿಸುವ ಜತೆಗೆ ಬರೆಯುವ ಕೌಶಲಕ್ಕೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಹಾಸನದಲ್ಲಿ ನಡೆಯುವ ಈ ಸಮ್ಮೇಳನದ ಜವಾಬ್ದಾರಿಯನ್ನು ಮಕ್ಕಳೇ ನಿಭಾಯಿಸುವುದು ಮತ್ತೊಂದು ವಿಶೇಷ.

| ಮಂಜು ಬನವಾಸೆ ಹಾಸನ

ಸಾಹಿತ್ಯ ಎಂದರೆ ಹಿರಿಯರು, ಪ್ರಬುದ್ಧರ ಆಸ್ತಿ ಎನ್ನುವ ಭಾವನೆ ಬಲವಾಗಿ ಬೇರೂರಿದೆ. ಮಕ್ಕಳ ಸಾಹಿತ್ಯವನ್ನೂ ದೊಡ್ಡವರೇ ಬರೆದು ಮುಂದಿಡುವಷ್ಟು ಅದು ಗಟ್ಟಿಯಾಗಿದೆ. ಆದರೆ ಈ ಸಂಪ್ರದಾಯ ಮುರಿದು ಮಕ್ಕಳಿಂದಲೇ ಮಕ್ಕಳ ಸಾಹಿತ್ಯ ರಚಿಸುವ, ಅವರಲ್ಲಿನ ಬರವಣಿಗೆ ಶಕ್ತಿಯನ್ನು ಪ್ರೇರೇಪಿಸುವ ಹೊಸ ಪ್ರಯತ್ನಕ್ಕೆ ಸಾಹಿತ್ಯಾಸಕ್ತರ ತಂಡವೊಂದು ಮುಂದಾಗಿದೆ. ಅದರ ಭಾಗವಾಗಿ ಇದೇ ಮೊದಲ ಬಾರಿಗೆ ಹಾಸನದಲ್ಲಿ ಫೆ.9-10ರಂದು ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

ಹಾಸನ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾದ ತಂಡಗಳನ್ನು ಹೊಂದಿರುವ ಚನ್ನರಾಯಪಟ್ಟಣದಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪನೆಯಾದ ಮಕ್ಕಳ ಸಾಹಿತ್ಯ ಪರಿಷತ್, ಈಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವ ರೀತಿಯಿಂದಲೂ ಕಡಿಮೆಯಿಲ್ಲದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವ ಸಾಹಸಕ್ಕೆ ಕೈ ಹಾಕಿದೆ. ಈ ಪ್ರಯತ್ನಕ್ಕೆ ಆದಿಚುಂಚನಗಿರಿ ಹಾಸನ ಶಾಖಾ ಮಠ ಕೈಜೋಡಿಸಿದ್ದು, ಶ್ರೀ ಶಂಭುನಾಥ ಸ್ವಾಮೀಜಿ ಸಮ್ಮೇಳನದ ಮಹಾ ಪೋಷಕ ಸ್ಥಾನದ ಜವಾಬ್ದಾರಿ ಹೊತ್ತಿದ್ದಾರೆ.

ಕನಸು.. ನನಸು: ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ.ನಾ. ಅಶೋಕ್ ಮತ್ತು ಅವರ ಗೆಳೆಯರು ಮಕ್ಕಳ ಸಾಹಿತ್ಯ ಸಮ್ಮೇಳನದ ಪರಿಕಲ್ಪನೆ ಹಿಂದಿರುವ ಪ್ರೇರಕ ಶಕ್ತಿಗಳು. 2 ವರ್ಷಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ಮಕ್ಕಳ ಸಮ್ಮೇಳನ ಆಯೋಜಿಸಿ ಗಮನ ಸೆಳೆದಿದ್ದ ಅವರಲ್ಲಿ ಅಂದೇ ರಾಜ್ಯಮಟ್ಟದ ಸಮ್ಮೇಳನ ನಡೆಸುವ ಕನಸು ಚಿಗುರಿತ್ತು.

ನಮ್ಮ ರಾಜ್ಯದಲ್ಲಿ ಕನ್ನಡ ಓದು, ಸಾಹಿತ್ಯದ ಪರಿಚಯವೇ ಇಲ್ಲದಂತಾಗುತ್ತಿರುವ ಮಕ್ಕಳನ್ನು ಇತ್ತ ಎಳೆದು ತರಬೇಕು. ಆಸಕ್ತಿಯಿದ್ದರೂ ಪಠ್ಯ ಶಿಕ್ಷಣದ ಒತ್ತಡದಲ್ಲಿ ಸಿಲುಕಿ ಸೂಕ್ತ ವೇದಿಕೆ ದೊರೆಯದೆ ಕಮರುತ್ತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶ ಹೊಂದಿದ್ದ ಅವರು ಸಮ್ಮೇಳನ ಸಂಘಟಿಸುವ ಬಗ್ಗೆ ಸಮಾನಮನಸ್ಕರೊಂದಿಗೆ ರ್ಚಚಿಸಿದರು. ಇದಕ್ಕೆ ಎಲ್ಲರಿಂದಲೂ ಸೂಕ್ತ ಸ್ಪಂದನೆ ದೊರೆಯಿತು. ಹಲವು ಸುತ್ತಿನ ಚರ್ಚೆಯ ಬಳಿಕ ಫೆ.9 ಹಾಗೂ 10ರಂದು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಕಾರ್ಯಕ್ರಮದ ಮಹಾಪೋಷಕ ಸ್ಥಾನವನ್ನು ಸಂತೋಷದಿಂದ ಒಪ್ಪಿಕೊಂಡ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಬೆಂಬಲವಾಗಿ ನಿಂತರು. ಹೀಗೆ ಚ.ನಾ. ಅಶೋಕ್ ಅವರ ಕನಸು ನನಸಾಗುತ್ತಿದೆ.

ಸಮ್ಮೇಳನಾಧ್ಯಕ್ಷೆ ಭಾರ್ಗವಿ ಹೇಳಿದ್ದೇನು?

ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರ್ಗವಿ, ದಕ್ಷಿಣ ಕನ್ನಡ ಜಿಲ್ಲೆ, ಉಜಿರೆಯ ಪದ್ಮನಾಭ ಶಬರಾಯ ಹಾಗೂ ಭಾನುಮತಿ ಶಬರಾಯ ದಂಪತಿ ಪುತ್ರಿ. ಎಸ್​ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿರುವ ಅವರಿಗೆ ಕವನಗಳನ್ನು ರಚಿಸುವ ಆಸಕ್ತಿಯಿದೆ. ಅವರ ಹಲವು ಕವನಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಜಯವಾಣಿಯೊಂದಿಗೆ ಭಾರ್ಗವಿ ನಡೆಸಿರುವ ಮಾತುಕತೆ ಇಲ್ಲಿದೆ.

ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೀರಿ, ಹೇಗನ್ನಿಸುತ್ತಿದೆ?
ಆಯ್ಕೆಯಾದ ಆರಂಭದಲ್ಲಿ ಬಹಳ ಖುಷಿಯಾಗಿತ್ತು. ನಾನು ತೀರಾ ಈಚಿನವರೆಗೂ ಯಾವುದೇ ಸಮ್ಮೇಳನ ನೋಡಿರಲಿಲ್ಲ. ಈಚೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದಲ್ಲಿ ಮೂರು ದಿನವೂ ಸಭಿಕಳಾಗಿ ಭಾಗವಹಿಸಿದ್ದೆ. ಅಲ್ಲಿನ ಸಮ್ಮೇಳನಾಧ್ಯಕ್ಷರನ್ನು ನೋಡಿದ ಮೇಲೆ ನಾನು ಹೊರಬೇಕಾದ ಜವಾಬ್ದಾರಿ ಎಷ್ಟು ದೊಡ್ಡದು ಎನ್ನುವುದು ಗೊತ್ತಾಯಿತು. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎನ್ನುವ ವಿಶ್ವಾಸವಿದೆ.

ಈವರೆಗೂ ಕನ್ನಡ ಸಾಹಿತ್ಯ ಓದಿದ್ದೀರಾ? ಯಾವ ಲೇಖಕರು ಇಷ್ಟವಾಗುತ್ತಾರೆ?
ಈವರೆಗೂ ಪಠ್ಯ ಹೊರತುಪಡಿಸಿದರೆ ಕುವೆಂಪು ಅವರ ಕವನಗಳನ್ನು ಇಷ್ಟಪಟ್ಟು ಓದಿದ್ದೇನೆ. ಬೇರೆ ಲೇಖಕರ ಕೃತಿಗಳ ಪರಿಚಯವಿಲ್ಲ.

ಸಾಹಿತ್ಯ, ಬರಹ ಬಗ್ಗೆ ಆಸಕ್ತಿ ಮೂಡಿದ್ದು ಯಾವಾಗ?
7ನೇ ತರಗತಿಯಲ್ಲಿರುವಾಗ ಕವನ ಬರೆಯಲು ಆರಂಭಿಸಿದೆ. ಮನಸ್ಸಿಗೆ ಬಂದ ಭಾವನೆಗಳನ್ನು ಬರೆಯುವ ಮೂಲಕ ಅದು ರೂಢಿಯಾಗತೊಡಗಿತು. ಕೆಲವು ಕವನಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೈ ಜೋಡಿಸಿದ ಸಾಹಿತಿಗಳು

ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಬಿತ್ತುವ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ಕೆ ನಾಡಿನ ಹಲವು ಸಾಹಿತಿಗಳು ಕೈ ಜೋಡಿಸಿದ್ದಾರೆ. ಲಕ್ಷ್ಮಣ್ ಹೊಸಕೋಟೆ, ಬಾನುಮುಷ್ತಾಕ್, ಡಾ.ನಾ.ಸೋಮೇಶ್ವರ್, ನಾ.ಡಿಸೋಜಾ, ಸುಬ್ಬು ಹೊಲೆಯಾರ್ ಅವರು ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಣ ವ್ಯವಸ್ಥೆ ಹಾಗೂ ಸಾಹಿತ್ಯ ಕ್ಷೇತ್ರ ಕುರಿತ 5 ವಿಚಾರಗೋಷ್ಠಿಗಳು, ರಸಪ್ರಶ್ನೆ ಕಾರ್ಯಕ್ರಮ, ಕವಿಗೋಷ್ಠಿ, ಸಂಜೆ ವೇಳೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 20 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದ್ದು, ಊಟ, ವಸತಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಮಕ್ಕಳೇ ಅಧ್ಯಕ್ಷರು

ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಉಜಿರೆ ಎಸ್​ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಭಾರ್ಗವಿ ಆಯ್ಕೆಯಾಗಿದ್ದಾರೆ. ಸಹ ಸಮ್ಮೇಳನಾಧ್ಯಕ್ಷರಾಗಿ ಹಾಸನ ಸರ್ಕಾರಿ ಶಾಲೆಯ ಎಚ್.ಎಸ್. ವಿವೇಕ್, ಬಾಗಲಕೋಟೆ ಜಿಲ್ಲೆಯ ಬಿಳಗಿಯ ಸರ್ಕಾರಿ ಶಾಲೆಯ ಗೌರಮ್ಮ, ಬೆಳ್ತಂಗಡಿ ಸರ್ಕಾರಿ ಶಾಲೆಯ ಅನನ್ಯ ಮತ್ತು ತುಮಕೂರು ಸರ್ಕಾರಿ ಶಾಲೆಯ ಸುಬ್ರಹ್ಮಣ್ಯ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಮಕ್ಕಳಲ್ಲಿನ ಸೃಜನಶೀಲತೆ, ಸಾಹಿತ್ಯಾಭಿರುಚಿ, ಮನೋವಿಕಾಸಕ್ಕೆ ಸಹಕಾರ ಆಗುವಂತಹ ಕಾರ್ಯಕ್ರಮಗಳನ್ನು ಮಕ್ಕಳ ಸಾಹಿತ್ಯ ಪರಿಷತ್ ಮೂಲಕ ನಾಲ್ಕು ವರ್ಷಗಳಿಂದ ನಡೆಸುತ್ತಿದ್ದೇವೆ. ಈ ಬಾರಿ ರಾಜ್ಯಮಟ್ಟದಲ್ಲಿ ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

| ಚ.ನಾ.ಅಶೋಕ್ ಅಧ್ಯಕ್ಷ, ಮಕ್ಕಳ ಸಾಹಿತ್ಯ ಪರಿಷತ್, ಚನ್ನರಾಯಪಟ್ಟಣ

ಪುಟಾಣಿಗಳ ಹೆಗಲಿಗೆ ಜವಾಬ್ದಾರಿ

ಮಕ್ಕಳ ಸಾಹಿತ್ಯ ಸಮ್ಮೇಳನವೆಂದ ಮೇಲೆ ಮಕ್ಕಳ ಹೆಸರಿನಲ್ಲಿ ಹಿರಿಯರು ವೇದಿಕೆಯಲ್ಲಿ ಕುಳಿತು ಉಪದೇಶ ನೀಡುವಂತಾಗಬಾರದು. ಸಮ್ಮೇಳನದ ಸರ್ವಾಧ್ಯಕ್ಷತೆಯಿಂದ ಹಿಡಿದು ಎಲ್ಲ ಜವಾಬ್ದಾರಿ ಮಕ್ಕಳೇ ನಿರ್ವಹಿಸುವಂತಾಗಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ ಸದಸ್ಯರು ನಿರ್ಧರಿಸಿದರು. ಆದರೆ, ಪ್ರತಿಭಾವಂತ ಮಕ್ಕಳನ್ನು ಯಾವುದೇ ಪೂರ್ವಗ್ರಹವಿಲ್ಲದೆ ಆಯ್ಕೆ ಮಾಡುವುದು ಹೇಗೆ ಎನ್ನುವ ಜಿಜ್ಞಾಸೆ ಎದುರಾಯಿತು. ಇದಕ್ಕೆ ಉಪಾಯ ಹುಡುಕಿದ ಹಾಸನದ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ರಾಜ್ಯದ ವಿವಿಧ ಜಿಲ್ಲೆಗಳ ಪ್ರೌಢಶಾಲೆಗಳಿಂದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಸಾಹಿತ್ಯಾಸಕ್ತ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಅವರಲ್ಲಿ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡುವ ಮಾರ್ಗ ಸೂಚಿಸಿದರು. ಈ ಆಹ್ವಾನಕ್ಕೆ ರಾಜ್ಯದ ವಿವಿಧ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟರು. ಅವರಿಗಾಗಿ ಏರ್ಪಡಿಸಿದ್ದ ಕವಿತೆ ರಚನೆ, ಚರ್ಚಾ ಸ್ಪರ್ಧೆಗಳಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತ್ಯಂತ ಪಾರದರ್ಶಕವಾಗಿ ಮೌಲ್ಯಮಾಪನ ನಡೆಸಿ ಒಬ್ಬರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಗೂ ಇತರೆ ನಾಲ್ವರನ್ನು ಸಹ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಉಪಯುಕ್ತ ಮಾಹಿತಿಗಳು

*Krntk. Graduate Teachers Recruitment -2016-17 CET_SYLLABUS_
*ಶಿಕ್ಷಕರ_ನೇಮಕಾತಿ_ಪಠ್ಯಕ್ರಮ*
.
★*1* *ರಿಂದ 5 ನೇ ತರಗತಿಗಳಿಗೆ* *ಶಿಕ್ಷಕರಾಗಬಯಸುವ ಅಭ್ಯರ್ಥಿಗಳು TET ಪತ್ರಿಕೆ 1 ನ್ನು* *ತೇರ್ಗಡೆಯಾಗಿರಬೇಕು ಅಲ್ಲದೇ ಪಿಯೂಸಿ ಜೊತೆಗ D.ed ವಿದ್ಯಾರ್ಹತೆಯನ್ನು ಹೊಂದಿರಬೇಕು. PUC – 35%, D. ED – 15%, TET- 15% CET-35% ಅನುಪಾತದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ*
*SYLLABUS*
*1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 15 ಪ್ರಶ್ನೆಗಳು = 15 ಅಂಕಗಳು*
*2] ಶಿಶು ಮನೋವಿಜ್ಞಾನ ಮತ್ತು ವಿಕಸನ, ಬೋಧನಾ ಸಾಮರ್ಥ್ಯ = 25 ಪ್ರಶ್ನೆಗಳು = 25 ಅಂಕ*
*3] ಭಾಷೆ-1 (ಕನ್ನಡ, ಉರ್ದು, ಮರಾಠಿ ಇತ್ಯಾದಿ = 20 ಪ್ರಶ್ನೆ = 20 ಅಂಕ*
*4] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ*
*5] ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ) = 20 ಪ್ರಶ್ನೆ = 20 ಅಂಕ*
*6] ಗಣಿತ = 20 ಪ್ರಶ್ನೆ = 20 ಅಂಕ*
*7] ಕಂಪ್ಯೂಟರ್ ಸಾಕ್ಷರತೆ = 25* *ಪ್ರಶ್ನೆ = 25 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು*.
.
★* *6 TO 8TH CET SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ* ::*
.
*6 ರಿಂದ 8 ನೇ ತರಗತಿಗಳಿಗೆ ಶಿಕ್ಷಕರಾಗಬಯಸುವ ಅಭ್ಯರ್ಥಿಗಳು* *TET ಪತ್ರಿಕೆ 2 ನ್ನು ತೇರ್ಗಡೆಯಾಗಿರಬೇಕು ಅಲ್ಲದೇ BA-B.Ed, B. Sc- B. Ed or D. Ed with BA ವಿದ್ಯಾರ್ಹತೆಯನ್ನು ಹೊಂದಿರಬೇಕು. BA – 35%, CET-* *35%, TET- 15%, (B. Ed with BA-15% ಇದು ಬಿ.ಇಡಿ ಹಾಗೂ ಬಿಎ ಪದವಿ ಹೊಂದಿದವರಿಗೆ ಮಾತ್ರ ) ಅನುಪಾತದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ*.
*6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 1 ನೇ ಪತ್ರಿಕೆ ಸಾಮಾನ್ಯ ಪತ್ರಿಕೆ ಕಡ್ಡಾಯವಾಗಿರುತ್ತದೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಯಾವುದಾದರೊಂದು ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎರಡಕ್ಕೂ ಅರ್ಹತೆ ಇದ್ದರೆ ಎರಡನ್ನು ಬರೆಯಬಹುದು*.
*PAPER-1 ಸಾಮಾನ್ಯ ಜ್ಞಾನ SYLLABUS :*
*1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 30 ಪ್ರಶ್ನೆಗಳು = 30 ಅಂಕಗಳು*
*2] ಶಿಶು ಮನೋವಿಜ್ಞಾನ ಮತ್ತು ವಿಕಸನ = 40 ಪ್ರಶ್ನೆಗಳು = 40 ಅಂಕ*
*3] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ*
*4] ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ = 30 ಪ್ರಶ್ನೆ = 30 ಅಂಕ*
*5] ಕಂಪ್ಯೂಟರ್ ಸಾಕ್ಷರತೆ = 25 ಪ್ರಶ್ನೆ = 25 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು*
.
★ *6 TO 8TH CET PAPER-2, *OPTIONAL PAPER-2 =* *ENGLISH ::*
*SYLLABUS : ಶಿಕ್ಷಕರ ನೇಮಕಾತಿ* *ಪಠ್ಯಕ್ರಮ*
*6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ*
*PAPER-2*
*Optional Paper-2*
*ENGLISH*
*SYLLABUS*
*1] English Grammar = 75 ಪ್ರಶ್ನೆಗಳು = 75 ಅಂಕಗಳು*
*2] English language Terms and Literature = 75 ಪ್ರಶ್ನೆಗಳು = 75 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು*
.
★ *6 TO 8TH CET *SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ :: PAPER-2*
*OPTIONAL-PAPER-1*
*6 ರಿಂದ 8 ನೇ ತರಗತಿ ಶಿಕ್ಷಕರ* *ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಯಾವುದಾದರೊಂದು ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎರಡಕ್ಕೂ ಅರ್ಹತೆ ಇದ್ದರೆ ಎರಡನ್ನು ಬರೆಯಬಹುದು.*
* *PAPER-2*
*OPTIONAL PAPER-I*
*ಕನ್ನಡ ಮತ್ತು ಸಮಾಜ ವಿಜ್ಞಾನ SYLLABUS :*
*1] ಕನ್ನಡ ಸಾಹಿತ್ಯ ಚರಿತ್ರೆ ಮತ್ತು ವ್ಯಾಕರಣ ಹಾಗೂ ಭಾಷಾ ಬೋಧನಾ ತತ್ವಗಳು = 75 ಪ್ರಶ್ನೆಗಳು = 75 ಅಂಕಗಳು*
*2] ಸಮಾಜವಿಜ್ಞಾನ -ಇತಿಹಾಸ, ಪೌರನೀತಿ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ = 75 ಪ್ರಶ್ನೆಗಳು = 75 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು….

@

ನಿಮ್ಮ ಫೋನ್ ವೇಗ ಹೆಚ್ಚಿಸಬೇಕೇ? ಆ್ಯಪ್‌ಗಳ Cache ಕ್ಲಿಯರ್ ಮಾಡಿ!

ಅವಿನಾಶ್ ಬಿ.

ಸ್ಮಾರ್ಟ್ ಫೋನ್ ಬಳಸುತ್ತಿರುವವರಲ್ಲಿ ಇದೀಗ ಇಂಟರ್ನೆಟ್ ಬಳಕೆಯೂ ಹೆಚ್ಚಾಗಿದೆ. ಇದಕ್ಕೆ ಒಂದು ಪ್ರಧಾನ ಕಾರಣವೆಂದರೆ ಇಂಟರ್ನೆಟ್ ಸೇವಾದಾರರು (ಅಂದರೆ ಏರ್‌ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಸೆನ್ನೆಲ್, ಜಿಯೋ ಮುಂತಾದ ಐಎಸ್‌ಪಿಗಳು) ಪೈಪೋಟಿಗೆ ಬಿದ್ದು ಡೇಟಾ (ಇಂಟರ್ನೆಟ್) ಶುಲ್ಕಗಳನ್ನು ಸ್ಫರ್ಧಾತ್ಮಕ ದರದಲ್ಲಿ ನೀಡುತ್ತಿರುವುದು. ಇನ್ನೂ ಕೆಲವು ಕಾರಣಗಳೆಂದರೆ, ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಕೂಡ ಎಲ್ಲರಿಗೂ ತಲುಪುತ್ತಿರುವುದು, ಡೀಮಾನಿಟೈಸೇಶನ್‌ನಿಂದಾಗಿ ಜನರು ಬ್ಯಾಂಕಿಂಗ್, ಖರೀದಿ ವ್ಯವಹಾರಗಳನ್ನು ಕೂಡ ಮೊಬೈಲ್‌ನಲ್ಲೇ ನಿಭಾಯಿಸಲಾರಂಭಿಸಿರುವುದು ಜತೆಜತೆಗೆ, ವಾಟ್ಸಾಪ್, ಫೇಸ್‌ಬುಕ್, ಟೆಲಿಗ್ರಾಂ ಮುಂತಾದ ಸಾಮಾಜಿಕ ತಾಣಗಳ ಬಿಟ್ಟೂಬಿಡಲಾರದ ಆಕರ್ಷಣೆ ಹೆಚ್ಚಾಗಿರುವುದು.

ಆನ್‌ಲೈನ್ ಶಾಪಿಂಗ್, ಮ್ಯೂಸಿಕ್, ಟಿವಿ ಹಾಗೂ ಇನ್ನಿತರ ಎಲ್ಲ ಅಗತ್ಯತೆಗಳನ್ನು ಪೂರೈಸಲು ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಆ್ಯಪ್‌ಗಳನ್ನು ನಾವು ಅಳವಡಿಸಿಕೊಂಡಿರುತ್ತೇವೆ. ಬೇಡವೆಂದಾಗ ಅನ್‌ಇನ್‌ಸ್ಟಾಲ್ ಮಾಡುತ್ತೇವೆ, ಬೇಕೆಂದಾಗ ಅಳವಡಿಸಿಕೊಳ್ಳುತ್ತೇವೆ. ಕಂಪ್ಯೂಟರಿನಲ್ಲಿ ವಿಭಿನ್ನ ತಂತ್ರಾಂಶಗಳನ್ನು ಅಳವಡಿಸಿಕೊಂಡು, ಅನ್‌ಇನ್‌ಸ್ಟಾಲ್ ಮಾಡಿದಾಗ ಕೆಲವೊಂದು ಜಂಕ್ ಫೈಲ್‌ಗಳು, ಕ್ಯಾಶ್ (Cache) ಫೈಲ್‌ಗಳೆಂಬ ತಾತ್ಕಾಲಿಕ ಫೈಲುಗಳು ಆಪರೇಟಿಂಗ್ ಸಿಸ್ಟಂ ಅಳವಡಿಸಲಾಗಿರುವ ಡ್ರೈವ್‌ನ ನಿರ್ದಿಷ್ಟ ಫೋಲ್ಡರ್‌ನಲ್ಲಿ (ಟೆಂಪರರಿ ಇಂಟರ್ನೆಟ್ ಫೈಲ್ಸ್) ಉಳಿದುಕೊಳ್ಳುತ್ತವೆ ಎಂಬುದು ಹೆಚ್ಚಿನವರಿಗೆ ಗೊತ್ತು. ಅದೇ ರೀತಿ, ನಮ್ಮ ಸ್ಮಾರ್ಟ್ ಫೋನ್ ಕೂಡ ಒಂದು ಪುಟ್ಟ ಕಂಪ್ಯೂಟರೇ ಆಗಿರುವುದರಿಂದ, ಇಲ್ಲಿಯೂ ಕ್ಯಾಶ್ ಫೈಲ್‌ಗಳು ಉಳಿದುಕೊಳ್ಳುತ್ತವೆ. ಹೆಚ್ಚು ಹೆಚ್ಚು ಇಂಟರ್ನೆಟ್ ಬಳಸಿದಷ್ಟೂ ಈ ಕ್ಯಾಶ್ ಫೈಲ್‌ಗಳ ಗಾತ್ರವೂ ಹೆಚ್ಚುತ್ತಾ ಹೋಗುತ್ತದೆ ಮತ್ತು ನಮ್ಮ ಸಿಸ್ಟಂನ ಕೆಲಸ ಕಾರ್ಯಗಳು ನಿಧಾನವಾಗತೊಡಗುತ್ತವೆ. ಇವುಗಳನ್ನು ನಿವಾರಿಸುವುದರಿಂದ ನಮ್ಮ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಫೋನ್‌ಗಳು ಹೆಚ್ಚು ವೇಗವಾಗಿ ಕೆಲಸ ಮಾಡುವಂತೆ ಮಾಡಬಹುದಾಗಿದೆ. ಇದು ಮಾಡುವುದೇನೂ ದೊಡ್ಡ ರಾಕೆಟ್ ಸೈನ್ಸ್ ಅಲ್ಲ. ನೀವು ಕೂಡ ಸುಲಭವಾಗಿ ಮಾಡಬಹುದು.

ಒಂದೊಂದೇ ಆ್ಯಪ್‌ಗಳನ್ನು ನೋಡಿ, ಅದರ ಮೂಲಕ ಶೇಖರಣೆಯಾಗಿರಬಹುದಾದ ಕ್ಯಾಶ್ ಫೈಲ್‌ಗಳನ್ನು ನಿವಾರಿಸಲು ಮುಂದೆ ವಿವರಿಸಿದಂತೆ ಮಾಡಿ.

ಸ್ಮಾರ್ಟ್‌ಫೋನ್‌ನಲ್ಲಿ Settings ತೆರೆಯಿರಿ. Apps ಎಂದಿರುವಲ್ಲಿ ನ್ಯಾವಿಗೇಟ್ ಮಾಡಿ. ನೀವು ತಾತ್ಕಾಲಿಕ ಫೈಲ್‌ಗಳನ್ನು ಅಳಿಸಬೇಕೆಂದುಕೊಂಡಿರುವ ಆ್ಯಪ್ ಅನ್ನು ಒಮ್ಮೆ ಒತ್ತಿ. ಕೆಲವು ಮಾದರಿಯ ಫೋನ್‌ಗಳಲ್ಲಿ (ಅಂದರೆ ಮಾರ್ಷ್‌ಮೆಲೋಗಿಂತ ಕೆಳಗಿನ ಆವೃತ್ತಿಯ) ಅಲ್ಲೇ ಕ್ಲಿಯರ್ ಕ್ಯಾಶ್ ಎಂಬ ಬಟನ್ ಕಾಣಿಸಿಕೊಂಡರೆ, ಹೊಸ ಆವೃತ್ತಿಯ ಫೋನುಗಳಲ್ಲಿ Storage ಎಂದು ಬರೆದಿರುವಲ್ಲಿ ಸ್ಪರ್ಶಿಸಿದ ಬಳಿಕ ಈ ಬಟನ್ ಕಾಣಿಸಿಕೊಳ್ಳುತ್ತದೆ. ‘ಕ್ಲಿಯರ್ ಕ್ಯಾಶ್’ ಒತ್ತಿದರೆ ಸಾಕಾಗುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಡೇಟಾಕ್ಕೇನೂ ಸಮಸ್ಯೆಯಾಗುವುದಿಲ್ಲ.

ಅಲ್ಲೇ ಪಕ್ಕದಲ್ಲಿ Clear Data ಎಂಬೊಂದು ಬಟನ್ ಕಾಣಿಸುತ್ತದೆ. ಅದರದ್ದೇನು ಕೆಲಸ ಎಂಬ ಕುತೂಹಲವೇ? ಆ್ಯಪ್‌ಗಳನ್ನು ನೀವು ಬಳಸುವಾಗ, ಅದಕ್ಕೆ ಲಾಗಿನ್ ಆಗಿರುತ್ತೀರಿ ಅಥವಾ ನಿಮಗೆ ಬೇಕಾದ ರೀತಿಯಲ್ಲಿ ಅದನ್ನು ಬಳಸುತ್ತಿರುತ್ತೀರಿ (ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ ಕಸ್ಟಮೈಸ್ ಮಾಡಿರುತ್ತೀರಿ). Clear Data ಎಂಬುದನ್ನು ಒತ್ತಿಬಿಟ್ಟರೆ, ನಿಮ್ಮ ಲಾಗಿನ್ ಮಾಹಿತಿ, ನೀವು ಆ ಆ್ಯಪ್‌ನ ಸೆಟ್ಟಿಂಗ್‌ಗೆ ಮಾಡಿರುವ ಮಾರ್ಪಾಡುಗಳು, ಆ್ಯಪ್‌ನಲ್ಲಿ ನಿಮ್ಮ ಸರ್ಚ್ ಹಿಸ್ಟರಿ, ಶಾಪಿಂಗ್ ಆ್ಯಪ್‌ಗಳಲ್ಲಿ ನೀವು ಹುಡುಕಾಡಿದ, ಖರೀದಿಸಿದ ಮಾಹಿತಿ… ಇತ್ಯಾದಿ ವಿಷಯಗಳೆಲ್ಲವೂ ಅಳಿಸಿಹೋಗುತ್ತವೆ. ಸರಳವಾಗಿ ಹೇಳಬೇಕಾದರೆ, ಹೊಸದಾಗಿ ಇನ್‌ಸ್ಟಾಲ್ ಮಾಡಿಕೊಂಡ (ಫ್ಯಾಕ್ಟರಿ ಡೀಫಾಲ್ಟ್) ರೂಪಕ್ಕೆ ಆ್ಯಪ್ ಮರಳುತ್ತದೆ.

ಉದಾಹರಣೆಗೆ, ಫೇಸ್‌ಬುಕ್ ಮೆಸೆಂಜರ್ ಆ್ಯಪ್‌ನಲ್ಲಿ ನೀವು ಲಾಗಿನ್ ಆದಾಗ, ನಿಮ್ಮ ಸ್ನೇಹಿತರ ವರ್ಗದಿಂದ ಸಂದೇಶಗಳು ಬರುತ್ತಿರುತ್ತವೆ. ಮೆಸೆಂಜರ್ ಕಿರಿಕಿರಿ ಸದ್ಯಕ್ಕೆ ಬೇಡ ಅಂದುಕೊಂಡರೆ, ಅದರಿಂದ ಲಾಗೌಟ್ ಆಗುವ ಮಾರ್ಗ ತೋಚುತ್ತಿಲ್ಲ. ಅನ್‌ಇನ್‌ಸ್ಟಾಲ್ ಮಾಡಿದರೆ, ಬೇಕಾದಾಗ ಪುನಃ ಆ್ಯಪ್ ಡೌನ್‌ಲೋಡ್ ಮಾಡಬೇಕಾಗುತ್ತದೆ. ಆ್ಯಪ್ ಇರಬೇಕು, ಆದರೆ ಲಾಗಿನ್ ಆಗಿರಬಾರದು ಎಂಬ ಭಾವನೆ ನಿಮ್ಮದಾಗಿರುತ್ತದೆ. ಇದಕ್ಕಾಗಿ ಏನು ಮಾಡಬಹುದು? ಮೇಲೆ ಹೇಳಿದಂತೆ ಆ್ಯಪ್ ಆಯ್ಕೆ ಮಾಡಿಕೊಂಡು, Clear Data ಒತ್ತಿದರೆ, ಲಾಗೌಟ್ ಆಗಿರುತ್ತೀರಿ. ಬೇಕಾದಾಗ ಮಾತ್ರ ಲಾಗಿನ್ ಆಗಬಹುದು.

ಇನ್ನು ಕೆಲವು ಕಂಪನಿಗಳು ತಯಾರಿಸಿದ ಫೋನ್‌ಗಳಲ್ಲಿ ಕೆಲವೊಂದು ಆ್ಯಪ್‌ಗಳು ಮೊದಲೇ ಇನ್‌ಸ್ಟಾಲ್ ಆಗಿ ಬರುತ್ತವೆ. ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಇಂಥ ಆ್ಯಪ್‌ಗಳು ನಿಜಕ್ಕೂ ನಿಮ್ಮ ಕೆಲಸಕ್ಕೆ ಬಾರದವು ಅಂತ ನೀವಂದುಕೊಂಡರೆ, ಏನು ಮಾಡಬಹುದು ಗೊತ್ತೇ? ಮೇಲೆ ಹೇಳಿರುವಂತೆಯೇ Settings ನಲ್ಲಿ Apps ಎಂಬಲ್ಲಿಗೆ ಹೋಗಿ, ಬೇಡವೆನಿಸುವ ಆ್ಯಪ್ ಹುಡುಕಿ, ಕ್ಲಿಕ್ ಮಾಡಿ. ನಂತರ Disable ಎಂಬ ಬಟನ್ ಒತ್ತಿಬಿಡಿ. ಅದು ಅದರ ಮೂಲ (ಡೀಫಾಲ್ಟ್) ರೂಪಕ್ಕೆ ಮರಳುತ್ತದೆ ಮತ್ತು ಪದೇ ಪದೇ ಅಪ್‌ಡೇಟ್ ಕೇಳುವುದೂ ನಿಂತು ಹೋಗುತ್ತದೆ. ಡಿಸೇಬಲ್ ಮಾಡದಿದ್ದರೆ, ಆ್ಯಪ್ ಬಳಸದಿದ್ದರೂ, ಅದರ ಅಪ್‌ಡೇಟೆಡ್ ಆವೃತ್ತಿ ಬಂದಾಗ ಅನಗತ್ಯವಾಗಿ ಡೌನ್‌ಲೋಡ್ ಆಗುತ್ತಾ ಇರುತ್ತದೆ ಮತ್ತು ಡೇಟಾ (ಇಂಟರ್ನೆಟ್) ಶುಲ್ಕ ಅನಗತ್ಯ ವ್ಯಯವಾಗುತ್ತದೆ. ಇದರ ತಡೆಗೂ ಈ ಬಟನ್ ಉಪಕಾರಿ.

ಟೆಕ್ ಟಾನಿಕ್: ಸೆಟ್ಟಿಂಗ್‌ಗೆ ಸುಲಭವಾಗಿ ಹೋಗಲು
ಇತ್ತೀಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೋಟಿಫಿಕೇಶನ್ ಡ್ರಾಯರ್ (ಅಂದರೆ ಫೋನ್ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಟಚ್ ಮಾಡಿ ಕೆಳಗೆ ಎಳೆದಾಗ ನೋಟಿಫಿಕೇಶನ್ ಕಾಣಿಸುವ ವ್ಯವಸ್ಥೆ) ನೋಡುವ ಬಗ್ಗೆ ಹಲವರಿಗೆ ಸಂದೇಹವಿದೆ. ಫೋನ್‌ನ ಸೆಟ್ಟಿಂಗ್ಸ್ ಎಂಬ ಆ್ಯಪ್‌ಗೆ ಹೋಗಲು ಎರಡೆರಡು ಬಾರಿ ಬೆರಳಿನಿಂದ ಕೆಳಗೆ ಎಳೆಯಬೇಕಾಗುತ್ತದೆ ಎಂಬುದು ಹಲವರ ದೂರಾಗಿತ್ತು. ಒಂದು ಸಲ ಎಳೆದರೆ ನೋಟಿಫಿಕೇಶನ್‌ಗಳು ಮಾತ್ರ ಕಾಣಿಸುತ್ತವೆ, ಎರಡನೇ ಸಲ ಎಳೆದರೆ ಮಾತ್ರವೇ ಸೆಟ್ಟಿಂಗ್ಸ್ ಹಾಗೂ ಇತರ ಶಾರ್ಟ್‌ಕಟ್‌ಗಳು ಗೋಚರಿಸುತ್ತವೆ. ನೇರವಾಗಿ ಒಮ್ಮೆಲೇ ಈ ಶಾರ್ಟ್‌ಕಟ್ ಇರುವಲ್ಲಿಗೆ ಹೋಗಬೇಕಿದ್ದರೆ, ಎರಡು ಬೆರಳುಗಳನ್ನು ಸ್ಕ್ರೀನ್ ಮೇಲೆ ಸ್ಪರ್ಶಿಸುತ್ತಾ ನೋಟಿಫಿಕೇಶನ್ ಏರಿಯಾದಿಂದ ಕೆಳಗೆ ಎಳೆದುಬಿಡಿ. ನೇರವಾಗಿ ಶಾರ್ಟ್‌ಕಟ್‌ಗಳಿರುವ ಮೆನು ಗೋಚರಿಸುತ್ತದೆ.

@

Student tracking system ಅಲ್ಲಿ ಆಧಾರ್ ಸಂಖ್ಯೆಯನ್ನು ಅಳವಡಿಸುವ ವಿಧಾನ.

.
👬👬👬👬👬👬

👬👬*Student tracking system ಅಲ್ಲಿ ಆಧಾರ್ ಸಂಖ್ಯೆಯನ್ನು ಅಳವಡಿಸುವ ವಿಧಾನ.*

👉ಮೊದಲಿಗೆ user id ಮತ್ತು password ಹಾಕಿ login ಆಗಿ.

👉ಅನಂತರ ಮುಖ್ಯ ಪುಟದಲ್ಲಿ reports /graphs ಎಂಬ option ಗೆ ಹೋಗಿ, 

👉ಅದರಲ್ಲಿ serach aadhar card student report ಮೇಲೆ click ಮಾಡಿರಿ. 

👉ಅನಂತರ ನಿಮ್ಮ ಶಾಲೆಯ ಹೆಸರನ್ನು ಆಯ್ಕೆ ಮಾಡಿ,with aadhar card select ಮಾಡಿ, 

👉ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ ತಪ್ಪಿದ್ದರೆ ಸರಿಪಡಿಸಿ update ಕೊಡಿ. 

👉With out aadhar select ಮಾಡಿ search ಕೊಡಿ. ಅದರಲ್ಲಿ ಆಧಾರ್ ಸಂಖ್ಯೆಯನ್ನು ಸೇರಿಸದ ಮಕ್ಕಳ list ಬರುವುದು, ಕೊನೆಯ ಸಾಲಿನಲ್ಲಿ 0 ಎಂಬ ಸಂಖ್ಯೆ ಇದೆ.ಅದರ ಮೇಲೆ 2 ಬಾರಿ mouse ಮೂಲಕ click ಕೊಡಿ.ಆಗ ಅಲ್ಲಿ blue ಬಣ್ಣ ಬರುವುದು. ಅಲ್ಲಿ ಮಕ್ಕಳ ಆಧಾರ್ ಸಂಖ್ಯೆಯನ್ನು ನಮೂದಿಸಿ update ಕೊಡಿ.

🎄🎄🎄🎄🎄🎄🎄🎄🎄
 *ಆನ್ ಲೈನ್ ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾಯಿಸಿಕೊಳ್ಳಿ*
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಲಿಂಗ, ವಿಳಾಸ, ಜನ್ಮ ದಿನಾಂಕ, ಮೊಬೈಲ್ ನಂಬರ್, ಇ-ಮೇಲ್ ಐಡಿಯಲ್ಲೇನಾದ್ರೂ ತಪ್ಪುಗಳಿದ್ರೆ ಅದನ್ನು ಆನ್ ಲೈನ್ ನಲ್ಲೇ ಸರಿಪಡಿಸಿಕೊಳ್ಳಬಹುದು. ವಿಳಾಸ ಬದಲಾವಣೆಯನ್ನು ಕೂಡ ಮಾಡಿಕೊಳ್ಳಬಹುದು.
ಇದಕ್ಕಾಗಿ ನೀವು UIADI ಪೋರ್ಟಲ್ ನಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಆದ್ರೆ ಮೊಬೈಲ್ ನಂಬರ್ ಬದಲಾವಣೆ ಮತ್ತು ಲಿಂಗ ಬದಲಾವಣೆಗೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ.

✍Shivu Y

👉 *ಮೊದಲು UIADI ಅಧಿಕೃತ ವೆಬ್ ಸೈಟ್ ಗೆ ವಿಸಿಟ್ ಮಾಡಿ.*

https://ssup.uiadi.gov.in/web/guest/update

👉 *ಆಧಾರ್ ಡಿಟೇಲ್ಸ್ ಅಪ್ ಲೋಡ್ ಎಂಬುದರ ಮೇಲೆ ಕ್ಲಿಕ್ ಮಾಡಿ.*

👉 *ವನ್ ಟೈಮ್ ಪಾಸ್ ವರ್ಡ್ (ಓಟಿಪಿ) ಜನರೇಟ್ ಮಾಡಲು ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ.*

👉 *ಓಟಿಪಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುತ್ತದೆ.*

👉 *ಓಟಿಪಿ ಬಂದ ಬಳಿಕ ಅದನ್ನು ವೆರಿಫಿಕೇಶನ್ ಬಾಕ್ಸ್ ನಲ್ಲಿ ನಮೂದಿಸಿ.*

👉 *ಆಗ ಹೆಸರು ಬದಲಾವಣೆ, ಜನ್ಮದಿನಾಂಕ, ಲಿಂಗ, ವಿಳಾಸ ಬದಲಾವಣೆ ಹೀಗೆ ವಿವಿಧ ಆಯ್ಕೆಗಳು ಬರುತ್ತವೆ.*

👉 *ಅಲ್ಲಿ ನಿಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಿ.*

👉 *ನಿಮ್ಮ ಹೊಸ ವಿಳಾಸದ ವಿವರವನ್ನು ಭರ್ತಿ ಮಾಡಿ.*

👉 *ಮುಂದಿನ ಹಂತದಲ್ಲಿ ನೀವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.*

👉 *ನಿಮಗೆ ಎರಡು ಬಿಪಿಓ ಸರ್ವೀಸ್ ಪ್ರೊವೈಡರ್ ಸೆಲೆಕ್ಷನ್ ಇದ್ದು, ಅದರಲ್ಲಿ ಒಂದನ್ನು ಕ್ಲಿಕ್ ಮಾಡಿ.*

👉 *ಕೊನೆಗೆ ಅಂತಿಮವಾಗಿ ಸಲ್ಲಿಸಬಹುದು.*

👉 *ಪ್ರಕ್ರಿಯೆ ಪೂರ್ಣಗೊಂಡ ನಂತರ ಯು ಆರ್ ಎನ್ ನಂಬರ್ ದೊರೆಯುತ್ತದೆ.*

👉 *ಬದಲಾವಣೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಈ ನಂಬರ್ ಅನ್ನು ನೆನಪಿನಲ್ಲಿಟ್ಟುಕೊಳ್ಳಿ*

ನ್ಯಾಯಾಲಯದ ತೀರ್ಪುಗಳು

  • ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಸಮಾನ ಪಾಲಿಲ್ಲ: ಸುಪ್ರೀಂಕೋರ್ಟ್‌.

ಉದಯವಾಣಿ,

ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ, 2005ಕ್ಕಿಂತ ಮುಂಚೆ ತಂದೆ ಮೃತಪಟ್ಟಿದ್ದು, ತನ್ನ ಪಾಲಿನ ಆಸ್ತಿಯನ್ನು ಗಂಡುಮಕ್ಕಳಿಗೆ ವಿಲ್‌ ಮಾಡಿಟ್ಟಿದ್ದರೆ ಹೆಣ್ಣುಮಕ್ಕಳು ತವರುಮನೆಯ ಆಸ್ತಿಯಲ್ಲಿ ಯಾವುದೇ ಪಾಲು ಕೇಳುವಂತಿಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆಗೆ 2005ರಲ್ಲಿ ಮಾಡಿರುವ ತಿದ್ದುಪಡಿ ಉತ್ತರಾನ್ವಯವಾಗುತ್ತದೆಯೇ ಹೊರತು ಪೂರ್ವಾನ್ವಯವಾಗುವುದಿಲ್ಲ.

ಪಿತ್ರಾರ್ಜಿತ ಆಸ್ತಿಗೆ ಗಂಡು ಹಾಗೂ ಹೆಣ್ಣುಮಕ್ಕಳು ಸಮಾನ ಪಾಲುದಾರರು ಎಂದು 2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಈ ಸಂಬಂಧಿ ವ್ಯಾಜ್ಯಗಳು ಕೋರ್ಟುಗಳಲ್ಲಿ ಹೆಚ್ಚೆಚ್ಚು ದಾಖಲಾಗುತ್ತಿವೆ. ಮದುವೆಯಾದ ಹೆಣ್ಣುಮಕ್ಕಳು ತವರುಮನೆಯ ಆಸ್ತಿಯಲ್ಲಿ ತನಗೆ ಪಾಲು ಬೇಕೆಂದು ಸೋದರರ ವಿರುದ್ಧ ಕೋರ್ಟಿಗೆ ಹೋಗುತ್ತಿದ್ದಾರೆ. ಆದರೆ, ಈ ವಿಷಯದಲ್ಲಿ ಕೆಲವೆಡೆ ಗೊಂದಲಕಾರಿ ತೀರ್ಪುಗಳು ಹೊರಬಂದಿವೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ಈ ಬಗ್ಗೆ ಸ್ಪಷ್ಟ ಆದೇಶವೊಂದನ್ನು ನೀಡಿದ್ದು, ಅದರಲ್ಲಿ ಬಹುತೇಕ ಗೊಂದಲಗಳು ಬಗೆಹರಿದಿವೆ. ಈ ತೀರ್ಪಿನ ಪ್ರಕಾರ 2005ಕ್ಕಿಂತ ಮೊದಲೇ ತಂದೆ ಮೃತಪಟ್ಟಿದ್ದರೆ ಹೆಣ್ಣು ಮಕ್ಕಳಿಗೆ ತವರುಮನೆಯ ಆಸ್ತಿಯಲ್ಲಿ ಸಮಾನ ಪಾಲು ಸಿಗುವುದಿಲ್ಲ. ಒಂದು ವೇಳೆ ತಂದೆ ತನ್ನ ಪಾಲಿನ ಆಸ್ತಿಯನ್ನೂ ಗಂಡುಮಕ್ಕಳಿಗೆ ವಿಲ್‌ ಮಾಡಿ 2005ಕ್ಕಿಂತ ಮೊದಲು ಮೃತಪಟ್ಟಿದ್ದರೆ ಆಗ ತವರುಮನೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಯಾವ ಪಾಲೂ ಸಿಗುವುದಿಲ್ಲ.

ಕಳೆದ ಅಕ್ಟೋಬರ್‌ 16ರಂದು ಸರ್ವೋಚ್ಚ ನ್ಯಾಯಾಲಯ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಶಾಸನ-2005 ಇದರ ಕುರಿತು ಬಹಳ ಮಹತ್ವದ ತೀರ್ಪು ನೀಡಿದೆ. ಸದ್ರಿ ಶಾಸನದ 2005ರ ತಿದ್ದುಪಡಿ ಪೂರ್ವಾನ್ವಯ (Retrospective) ಉಳ್ಳದ್ದೇ ಅಥವಾ ಕೇವಲ ಉತ್ತರಾನ್ವಯ (Prospective)ವೇ ಎಂಬುದರ ಕುರಿತು ದೇಶದ ಹಲವು ಉಚ್ಚ ನ್ಯಾಯಾಲಯಗಳಲ್ಲಿ ದಾವೆಗಳಿದ್ದವು. ಈ ಪ್ರಶ್ನೆಯ ಇತ್ಯರ್ಥಕ್ಕಾಗಿ ದಾವೆಗಳು ಇರುವ ಹೊತ್ತಿನಲ್ಲಿ ಒಮ್ಮತದ ಅಭಿಪ್ರಾಯವಿಲ್ಲದಿರುವುದರಿಂದ, ಸರ್ವೋಚ್ಚ ನ್ಯಾಯಾಲಯ ಈ ಕುರಿತು ಅಂತಿಮ ಹಾಗೂ ಅಧಿಕೃತ ಅಭಿಪ್ರಾಯ ನೀಡಿದೆ. 

ಮುಖ್ಯವಾಗಿ ಹಿಂದೂ ಅವಿಭಕ್ತ ಕುಟುಂಬದಲ್ಲಿ ಮಗಳಿಗೆ ಮಗನಿಗಿರುವಂತೆ ಆಸ್ತಿಯಲ್ಲಿ ಜನ್ಮಸಿದ್ಧ ಹಾಗೂ ಸರಿಸಮಾನ ಹಕ್ಕು ಇರುತ್ತದೆ. ಮಗ ಮತ್ತು ಮಗಳು ಜನ್ಮಸಿದ್ಧ ಹಕ್ಕುಳ್ಳ ಸಮಷ್ಟಿ ಸದಸ್ಯರು (Coprceners) ಎಂದು ಈ ತಿದ್ದುಪಡಿ ಶಾಸನ ಹೇಳುತ್ತದೆ ಎಂಬುದಾಗಿ ನ್ಯಾಯಾಲಯ ಈ ತೀರ್ಪಿನಲ್ಲಿ ಘೋಷಿಸಿದೆ. ಅಲ್ಲದೆ, ಈ ಶಾಸನವು ಕೇವಲ ಉತ್ತರಾನ್ವಯವಾಗಿದೆ ಎಂದೂ ಸ್ಪಷ್ಟಪಡಿಸಿದೆ. 

  • ಹಿನ್ನೆಲೆ ಏನು? ತೀರ್ಪು ಏನು?

ಸುಮಾರು 1956ಕ್ಕಿಂತ ಹಿಂದೆ ಹಿಂದೂ ಕುಟುಂಬದ ಹೆಣ್ಣುಮಕ್ಕಳಿಗೆ ತಾವು ಹುಟ್ಟಿ ಬೆಳೆದ ಕುಟುಂಬದ ಆಸ್ತಿಯಲ್ಲಿ ಕಾಯಿದೆಯನ್ವಯ ಜಾರಿಗೊಳಿಸಬಹುದಾದ ಯಾವುದೇ ಹಕ್ಕುಗಳಿರಲಿಲ್ಲ. ಪ್ರತಿಯೊಬ್ಬ ಮಗನೂ ಕುಟುಂಬದಲ್ಲಿ ಸಮಷ್ಟಿ ಸದಸ್ಯ (Coparcener), ಆಸ್ತಿಯಲ್ಲಿ ಆತನಿಗೆ ಜನ್ಮಸಿದ್ಧ ನಿರ್ದಿಷ್ಟ ಹಕ್ಕುಗಳಿದ್ದವು. ತಂದೆಯು ಕುಟುಂಬದ ಯಜಮಾನ, ಆತನಿಗೆ ಸಮನಾಗಿ ಮಗನೂ ಆಸ್ತಿಯಲ್ಲಿ ಪಾಲು ಪಡೆಯಬಹುದು. ಆದರೆ ತಾಯಿ, ಪತ್ನಿ ಮತ್ತು ಮಗಳಿಗೆ ಹಕ್ಕು ಇರಲಿಲ್ಲ. ಅವರು ಗಂಡು ಸದಸ್ಯರೊಂದಿಗೆ ಕೇವಲ ಉಂಡು ಬದುಕುವ ಸದಸ್ಯರು ಎಂಬುದಾಗಿತ್ತು.

ಗಂಡು ಮತ್ತು ಹೆಣ್ಣಿನ ನಡುವಿನ ಈ ವಿಧದ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ ಸಂಸತ್ತು 1956ರಲ್ಲಿ ಹಿಂದೂ ಉತ್ತರಾಧಿಕಾರ ಶಾಸನವನ್ನು ರಚಿಸಿತು. ಆದರೆ ಈ ಶಾಸನದ ಪ್ರಕಾರವೂ ಮಗ ಮತ್ತು ಮಗಳು ಕುಟುಂಬದ ಆಸ್ತಿಯಲ್ಲಿ ಸರಿಸಮಾನ ಪಾಲುದಾರರಲ್ಲ. ಈ ಶಾಸನದ ಕರಡು ಸಿದ್ಧಪಡಿಸಿದ ಕಾರ್ಯದರ್ಶಿ ಬೆನಗಲ್‌ ನರಸಿಂಗರಾಯರು ಮತ್ತು ಅದನ್ನು ಸಂಸತ್ತಿನಲ್ಲಿ ಮಂಡಿಸಿದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಕಲ್ಪನೆಯ ಆದರ್ಶ ಹಿಂದೂ ಉತ್ತರಾಧಿಕಾರ ಶಾಸನದ ವಿರೂಪಪಡಿಸಿದ ಹೃಸ್ವರೂಪ ಮಾತ್ರ ಅದಾಗಿತ್ತು. ಈ ಕಾಯಿದೆಯಂತೆ ಹಿಂದೂ ಕುಟುಂಬದ ಉತ್ತರಾಧಿಕಾರಿ ತಂದೆಯು ವೀಲುನಾಮೆ ಬರೆಯದೆ ಮೃತಪಟ್ಟರೆ ಮಾತ್ರ ಕುಟುಂಬದ ಆಸ್ತಿಯಲ್ಲಿ ಆತನಿಗೆ ಇರುವ ಆಂಶಿಕ ಹಕ್ಕು ಗಂಡು ಮತ್ತು ಹೆಣ್ಣುಮಕ್ಕಳು, ತಾಯಿ ಮತ್ತು ಪತ್ನಿಗೆ ಸರಿಸಮಾನವಾಗಿ ಬರತಕ್ಕದ್ದು. ಉದಾಹರಣೆಗೆ, ಒಬ್ಬನಿಗೆ ತಾಯಿ, ಪತ್ನಿ; ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಇರುವುದಾದರೆ, ಆತನು ಮತ್ತು ಇಬ್ಬರು ಗಂಡುಮಕ್ಕಳು ಜನ್ಮಸಿದ್ಧ ಹಕ್ಕುಳ್ಳ ಸಮಷ್ಟಿ ಸದಸ್ಯ (Coparcener) ರಾಗಿರುತ್ತಾರೆ. ಆದುದರಿಂದ ಪ್ರತಿಯೊಬ್ಬನೂ ಮೂರನೇ ಒಂದು ಅಂಶ ಆಸ್ತಿಗೆ ಹಕ್ಕುದಾರರು. ಯಜಮಾನ (ತಂದೆ) ಮೃತಪಟ್ಟಾಗ ಆತನದ್ದಾದ ಮೂರನೇ ಒಂದು ಅಂಶದ ಆಸ್ತಿಯಲ್ಲಿ ತಾಯಿ, ಪತ್ನಿ ಮತ್ತು ಗಂಡು ಹಾಗೂ ಹೆಣ್ಣುಮಕ್ಕಳು ಸರಿಸಮಾನ ಪಾಲುದಾರರಾಗಿ ಪಾಲು ಪಡೆಯತಕ್ಕದ್ದು. ಯಜಮಾನ ತಂದೆ, ಆತನ ಮೂರನೇ ಒಂದು ಅಂಶವನ್ನು ವೀಲನಾಮೆ ಮೂಲಕ ಅವನಿಚ್ಛೆಯಂತೆ ಯಾರಿಗೂ ಕೊಡಬಹುದು. ಆ ಕಾರಣದಿಂದ ಬಹು ಮಂದಿ ತಂದೆಯಂದಿರು ಮೃತಪಡುವ ಮುಂಚೆಯೇ ವೀಲುನಾಮೆ ಬರೆದು ಅವರ ಆಂಶಿಕ ಹಕ್ಕನ್ನು ಗಂಡುಮಕ್ಕಳಿಗೆ ಮಾತ್ರ ಮೀಸಲಿಡುತ್ತಾರೆ ಅಥವಾ ಇಡುತ್ತಿದ್ದರು. 

ಈ ಲೋಪವನ್ನು ನಿವಾರಿಸಿ ಗಂಡು ಮತ್ತು ಹೆಣ್ಣುಮಕ್ಕಳೊಳಗೆ ಸರಿಸಮಾನವಾಗಿ ಕುಟುಂಬದ ಆಸ್ತಿಯ ಹಂಚಿಕೆಯನ್ನು ಸಾಧಿಸುವ ಉದ್ದೇಶದಿಂದ 1956ರ ಶಾಸನವನ್ನು 2005ರಲ್ಲಿ ತಿದ್ದುಪಡಿಗೊಳಿಸಲಾಯಿತು. ಈ ತಿದ್ದುಪಡಿ ಶಾಸನ 2005ರ ಸೆಪ್ಟಂಬರ್‌ 9ರಂದು ಜಾರಿಗೆ ಬಂದಿದೆ. ಈ ಶಾಸನವು ಆ ದಿನದಿಂದ ಮುಂದಕ್ಕೆ ಮಾತ್ರ ಅನ್ವಯಿಸತಕ್ಕದ್ದೆಂದು ಬರೆದಿರುವುದರಿಂದ, ಅದು ಪೂರ್ವಾನ್ವಯವಾಗಲಾರದು. ಆದುದರಿಂದ ದಿನಾಂಕ 9-9-2005ರಿಂದ ಈಚೆಗೆ ಮಾತ್ರ ಗಂಡು ಮತ್ತು ಹೆಣ್ಣುಮಕ್ಕಳು ಕುಟುಂಬದ ಆಸ್ತಿಯಲ್ಲಿ ಸರಿಸ ಮಾನ ಹಕ್ಕುಳ್ಳವರು. ಆ ದಿನಾಂಕಕ್ಕಿಂತ ಮೊದಲು ಹೆಣ್ಣುಮಕ್ಕಳಿಗೆ ಕುಟುಂಬದ ಆಸ್ತಿಯಲ್ಲಿರುತ್ತಿದ್ದ ಹಕ್ಕು ಗಂಡುಮಕ್ಕಳಿಗಿಂತ ಕಡಿಮೆಯಾ ಗಿದ್ದುದರಿಂದ, ಸರಿಸಮಾನ ಹಕ್ಕು ಪಡೆಯಲು ಸಾಧ್ಯವಿಲ್ಲ. 

ಹಿಂದೂ ಕುಟುಂಬದ ಯಜಮಾನನು ಈ ತಿದ್ದುಪಡಿ ಶಾಸನ ಜಾರಿಗೊಳ್ಳುವ ಮುಂಚೆಯೇ, ಅಂದರೆ 2005ರ ಸೆಪ್ಟೆಂಬರ್‌ 9ಕ್ಕಿಂತ ಮುಂಚೆ, ಮೃತಪಟ್ಟಿದ್ದರೆ ಹೆಣ್ಣುಮಕ್ಕಳು ಈ ಶಾಸನದಡಿಯಲ್ಲಿ ಮಗನಿಗೆ ಸರಿಸಮಾನವಾಗಿ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ. ಈ ಶಾಸನ ಜಾರಿಗೊಳ್ಳುವ ದಿನದಂದು ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿರಲೇಬೇಕು. ಈ ತಿದ್ದುಪಡಿ ಶಾಸನದ ವ್ಯಾಪ್ತಿಯಲ್ಲಿ ಕುಟುಂಬದ ಯಜಮಾನನ ಪತ್ನಿ ಮತ್ತು ತಾಯಿ ಬರುವುದಿಲ್ಲ. ಈ ತಿದ್ದುಪಡಿ ಶಾಸನವು ನ್ಯಾಯಾಲಯದಲ್ಲಿ ಈಗ ತನಿಖೆಯಲ್ಲಿರುವ ದಾವೆಗಳಿಗೂ ಅನ್ವಯಿಸುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟ ಘೋಷಣೆ ಇದೆ. ಈ ಶಾಸನಕ್ಕೆ ಪೂರ್ವಾನ್ವಯವಿದೆ ಎಂಬ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. 

ಅಂದರೆ, 2005ಕ್ಕಿಂತ ಮುಂಚೆಯೇ ತಂದೆ ಮೃತಪಟ್ಟಿದ್ದರೆ ಆತನ ಹೆಣ್ಣುಮಕ್ಕಳು ಸೋದರರಿಂದ ಆಸ್ತಿಯಲ್ಲಿ ಸಮಾನ ಪಾಲು ಕೇಳುವಂತಿಲ್ಲ. ಬದಲಿಗೆ, ಒಟ್ಟು ಕುಟುಂಬದ ಆಸ್ತಿಯಲ್ಲಿ ತಂದೆಯ ಪಾಲಿನ ಆಸ್ತಿ ಏನಿರುತ್ತಿತ್ತೋ ಅದರಲ್ಲಿ ಪಾಲು ಕೇಳಬಹುದು. ಆದರೆ, 2005ಕ್ಕಿಂತ ಮುಂಚೆ ತಂದೆ ಸಾಯುವ ಮೊದಲು ತನ್ನ ಆಸ್ತಿ ಗಂಡುಮಕ್ಕಳಿಗೆ ಸಲ್ಲತಕ್ಕದ್ದು ಎಂದು ಬರೆದಿಟ್ಟಿದ್ದರೆ ಆ ಆಸ್ತಿಯಲ್ಲೂ ಪಾಲು ಕೇಳುವಂತಿಲ್ಲ. ವಿಲ್‌ ಬರೆಯದೆ ಮೃತಪಟ್ಟಿದ್ದರೆ ಮಾತ್ರ ತಂದೆಯ ಪಾಲಿನ ಆಸ್ತಿಯಲ್ಲಿ ಪಾಲು ಕೇಳಬಹುದು. 

ಇನ್ನೊಂದು ಪ್ರಮುಖ ಅಂಶವೆಂದರೆ, 2005ಕ್ಕಿಂತ ಮುಂಚೆ ಮೃತಪಟ್ಟ ತಂದೆಯ ಆಸ್ತಿಯಲ್ಲಿ 2005ರ ನಂತರ ಪಾಲು ಕೇಳುವು ದಾದರೆ ಹೆಣ್ಣುಮಕ್ಕಳು ಬದುಕಿರಬೇಕು. ಅವರು ಮೃತಪಟ್ಟಿದ್ದರೆ ಅವರ ಪರವಾಗಿ ಅವರ ಮಕ್ಕಳು ಪಾಲು ಕೇಳುವಂತಿಲ್ಲ.

  • ತಾರತಮ್ಯ ಇನ್ನೂ ಇದೆ.

ನನಗನ್ನಿಸುವಂತೆ, ಕುಟುಂಬದ ಯಜಮಾನನ ಪತ್ನಿ ಮತ್ತು ತಾಯಿ, ಯಜಮಾನನ ಮೃತ್ಯುವಿನ ಬಳಿಕವೂ ಕುಟುಂಬದ ವಾಸದ ಮನೆಯಲ್ಲಿ ವಾಸಿಸುವ ಮತ್ತು ಆತನಕ ಇದ್ದಂತೆ ಸಕಲ ಸೌಕರ್ಯ ಸೌಲಭ್ಯಗಳನ್ನು ಪಡೆಯುತ್ತ ಜೀವಿಸುವ ಹಕ್ಕು ಹಾಗೂ ಅಧಿಕಾರವನ್ನು ಒಟ್ಟು ಆಸ್ತಿಯ ಜವಾಬ್ದಾರಿಯಲ್ಲಿ ಪಡೆಯುವಂತೆ ಕೂಡ ತಿದ್ದುಪಡಿ ಶಾಸನದಲ್ಲಿ ಸ್ಪಷ್ಟ ಘೋಷಣೆ ಇರಬೇಕಿತ್ತು. ಪತ್ನಿ ಮತ್ತು ತಾಯಿಯ ಜೀವನದ ಹಕ್ಕನ್ನು ಶಾಸನ ದೃಢಪಡಿಸಿದ್ದರೆ ತಾರತಮ್ಯವನ್ನು ಸಂಪೂರ್ಣ ಹೋಗಲಾಡಿಸಬಹುದಿತ್ತು. ಆ ತನಕ ಕಾಯಿದೆಯ ಉದ್ದೇಶ ಅಸಂಪೂರ್ಣ.

@

  • ಅಪ್ಪ, ಅಮ್ಮನ ಸ್ವಯಾರ್ಜಿತ ಆಸ್ತಿಯಲ್ಲಿ ಮಗನಿಗೆ ಹಕ್ಕಿಲ್ಲ Tuesday, 29.11.2016,

  ವಿಜಯವಾಣಿ ಸುದ್ದಿಜಾಲ    

  • ಹೆತ್ತವರ ಕೃಪೆಯ ಮೇಲಷ್ಟೇ ಮಗ, ಸೊಸೆ ಮನೆಯಲ್ಲಿ ವಾಸಿಸಬಹುದು.

ನವದೆಹಲಿ: ಮದುವೆಯಾಗಿರಲಿ ಅಥವಾ ಮದುವೆಯಾಗಿರದೇ ಇರಲಿ, ಪುತ್ರನಿಗೆ ತನ್ನ ಹೆತ್ತವರ ಸ್ವಯಾರ್ಜಿತ ಮನೆಯಲ್ಲಿ ವಾಸಿಸುವ ಕಾನೂನುಬದ್ಧ ಹಕ್ಕು ಇಲ್ಲ, ಅವರ ಕೃಪೆಯ ಮೇರೆಗೆ ಮಾತ್ರವೇ ಆತ ಆ ಮನೆಯಲ್ಲಿ ವಾಸವಾಗಿರಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ(29-11-16) ತೀರ್ಪು ನೀಡಿದೆ.

ಸೌಹಾರ್ದಯುತ ಬಾಂಧವ್ಯ ಇರುವವರೆಗೂ ಹೆತ್ತವರು ಮಗನಿಗೆ ತಮ್ಮ ಸ್ವಯಾರ್ಜಿತ ಮನೆಯಲ್ಲಿ ವಾಸವಾಗಿರಲು ಅವಕಾಶ ನೀಡಬಹುದು. ಆದರೆ ಅದರ ಅರ್ಥ ಜೀವಮಾನಪೂರ್ತಿ ಆತನ ಹೊರೆಯನ್ನು ಪಾಲಕರು ಹೊತ್ತುಕೊಳ್ಳಬೇಕು ಎಂದು ಅಲ್ಲ ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿದೆ.

ವಿಚಾರಣಾ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಒಬ್ಬ ವ್ಯಕ್ತಿ ಮತ್ತು ಆತನ ಪತ್ನಿ ಮಾಡಿದ್ದ ಮೇಲ್ಮನವಿಯನ್ನು ವಜಾ ಮಾಡುತ್ತಾ ದೆಹಲಿ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಮೇಲ್ಮನವಿದಾರನ ಹೆತ್ತವರ ಪರವಾಗಿ ತೀರ್ಪು ನೀಡಿತ್ತು. ತಮ್ಮ ಸ್ವಾಧೀನದಲ್ಲಿ ಇರುವ ಮನೆಯ ಮಹಡಿಯನ್ನು ತೆರವುಗೊಳಿಸುವಂತೆ ತನ್ನ ಪುತ್ರ ಹಾಗೂ ಸೊಸೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೆತ್ತವರು ವಿಚಾರಣಾ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದ್ದರು.

ಪಾಲಕರಿಬ್ಬರು ಹಿರಿಯ ನಾಗರಿಕರಾಗಿದ್ದು, ತಮ್ಮ ಜೊತೆಗೆ ವಾಸವಾಗಿರುವ ಮಗ ಮತ್ತು ಸೊಸೆ ತಮ್ಮ ಜೀವನವನ್ನು ‘ನರಕ’ವನ್ನಾಗಿ ಮಾಡಿದ್ದಾರೆ ಎಂದು ಹೆತ್ತವರು ನ್ಯಾಯಾಲಯದಲ್ಲಿ ದೂರಿದ್ದರು. ತಮಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ತೆರವುಗೊಳಿಸುವಂತೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಸಾರ್ವಜನಿಕ ಪ್ರಕಟಣೆಯನ್ನು ನೀಡಲಾಗಿತ್ತು. ಆ ಬಳಿಕ ಅವರ ಕಿರುಕುಳ ಜಾಸ್ತಿಯಾಯಿತು ಎಂದು ಹೆತ್ತವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆಪಾದಿಸಿದ್ದರು.

Respect your Parents.

Minimum 35 Ways to Respect your Parents. Must read

1. Put away your phone in their
     presence.

2. Pay attention to what they
    are saying.

3. Accept their opinions.

4. Engage in their     
     conversations.

5. Look at them with respect.

6. Always praise them.

7. Share good news with them.

8. Avoid sharing bad news with
    them.

9. Speak well of their friends
    and loved ones to them.

10. Keep in remembrance the 
      good things they did.

11. If they repeat a story, listen
      like it’s the first time they
      tell it.

12. Don’t bring up painful
       memories from the past.

13. Avoid side conversations in
      their presence.

14. Sit respectfully around
       them.

15. Don’t belittle/criticize their
      opinions and thoughts.

16. Avoid cutting them off when    they speak.

17. Respect their age.

18. Avoid hitting/disciplining
      their grandchildren around
      them.

19. Accept their advice and
      direction.

20. Give them the power of 
      leadership when they are
      present.

21. Avoid raising your voice at
      them.

22. Avoid walking in front or
      ahead of them.

23. Avoid eating before them.

24. Avoid glaring at them.

25. Fill them with ur
      appreciation even when
      they don’t think they
       deserve it.

26. Avoid putting your feet up in front of them or sitting with your back to them.

27. Don’t speak ill of them to
      the point where others
      speak ill of them too.

28. Keep them in your prayers
      always possible.

29. Avoid seeming bored or
      tired of them in their
      presence.

30. Avoid laughing at their
      faults/mistakes.

31. Do a task before they ask
      you to.

32. Continuously visit them.

33. Choose your words carefully    when speaking with them.

34. Call them by names they
       like.

35. Make them your priority
      above anything.

Parents are treasure on this land and sooner than you think, that treasure will be buried. Appreciate your parents while you still can.
Today lets make loads of  prayers for our beloved parents.