ವಿದ್ಯಾರ್ಥಿ ಪುಟ Students page

.

🌺

🌺

*

ನೆನಪಿನ ಬುತ್ತಿಯನ್ನು ಗಟ್ಟಿಗೊಳಿಸೋಣ*🌺🌺

26 Dec, 2016(ಪರಮೇಶ್ವರಯ್ಯ ಸೊಪ್ಪಿಮಠ)

_ಮಕ್ಕಳಲ್ಲಿ ಜ್ಞಾಪಕಶಕ್ತಿಯ ಕೊರತೆ ಅವರ ಶಿಕ್ಷಣ ಮತ್ತು ವೈಯಕ್ತಿಕ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಜ್ಞಾಪಕಶಕ್ತಿಯ ಕೊರತೆ ಮಕ್ಕಳ ಆತ್ಮವಿಶ್ವಾಸವನ್ನೂ ಕಸಿದುಕೊಳ್ಳುತ್ತದೆ.  ನಮ್ಮ ಮೆದುಳು ತನ್ನದೇ ಆದ ನಿರ್ದಿಷ್ಟ ರೀತಿಯ ಕಾರ್ಯವೈಖರಿಯನ್ನು ಹೊಂದಿದೆ. ಕಲಿಕೆ ಮತ್ತು ಕಲಿತದ್ದು ಉಳಿಯುವಿಕೆ – ವಿಶೇಷ ಪ್ರಕಿಯೆಗಳು. ಜ್ಞಾಪಕಶಕ್ತಿಯು ನೊಂದಣಿ, ಮುದ್ರಣ, ಸ್ಮರಣೆ – ಈ ಮೂರು ಹಂತಗಳಲ್ಲಿ ನಡೆಯುತ್ತದೆ. ಇವು ಜ್ಞಾಪಕಶಕ್ತಿ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ._

 ನೆನಪಿನ ಶಕ್ತಿ ಕಡಿಮೆಗೆ ಕಾರಣಗಳು

  • ಮನೋರಂಜನಗೆ ಮಾತ್ರ ಆದ್ಯತೆ:

ದೂರದರ್ಶನ, ಮೊಬೈಲ್, ಕಂಪ್ಯೂಟರ್ ಮುಂತಾದವು ಮಕ್ಕಳನ್ನು ಹೆಚ್ಚು ಹಿಡಿದಿಡುತ್ತಿವೆ. ಮಕ್ಕಳು ಈ ಯಂತ್ರಗಳ ದಾಸರಾಗಿ ಗೇಮ್‌ಗಳಲ್ಲಿ ಮುಳುಗಿಹೋಗುತ್ತಾರೆ. ಇವು ಓದಿನ ಆಸಕ್ತಿಯನ್ನು ಕಡಿಮೆಗೊಳಿಸುತ್ತವೆ. ಹಾಗೆಂದು ಇವುಗಳಿಂದ ಸಂಪೂರ್ಣ ದೂರವಿರುವುದು ಒಳ್ಳೆಯದಲ್ಲ.  ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ಬಳಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕಿದೆ.

  • ಮೆದುಳಿಗೆ ಮೇವು ಹಾಕುತ್ತಿಲ್ಲ:

 ನಾವು ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸುವ ಬದಲು ಪ್ರತಿಯೊಂದು ವಿಷಯಕ್ಕೂ ಕ್ಯಾಲ್ಕುಲೇಟರ್, ಮೊಬೈಲ್‌ಗಳನ್ನು ಬಳಸುವುದು ಜಾಸ್ತಿಯಾಗಿದೆ. ಯಾವುದಾದರು ಮಾಹಿತಿ ಬಗ್ಗೆ ತಿಳಿಯಲು ತಕ್ಷಣ ಅಂತರ್ಜಾಲದ ಮೊರೆಹೋಗುವುದು, ಸಣ್ಣ ಪುಟ್ಟ ಲೆಕ್ಕಚಾರಕ್ಕೆ ಎಲ್ಲರೂ ಕ್ಯಾಲ್ಕುಲೇಟರ್ ಬಳಸುವುದು ಸಾಮಾನ್ಯವಾಗಿದೆ. ನಾವು ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸದೆ ಅದು ಜಡವಾಗುತ್ತದೆ. 

  • ಅನವಶ್ಯಕ ಗೊಂದಲಗಳು.

ಬಹುತೇಕ ಮಕ್ಕಳು ಬಹಳ ಚೆನ್ನಾಗಿ ಓದಿದ್ದರೂ ಪರೀಕ್ಷಾ ಸಮಯದಲ್ಲಿ ಒತ್ತಡಕ್ಕೆ ಒಳಗಾಗಿ ಗೊಂದಲ ಮಾಡಿಕೊಂಡು ಸರಿಯಾಗಿ ಉತ್ತರಿಸುವಲ್ಲಿ ವಿಫಲರಾಗುತ್ತಾರೆ. ಆ ವಿಷಯ, ಪಾಠ, ಪರೀಕ್ಷೆಗಳ ಬಗ್ಗೆ ಮಕ್ಕಳು ಮೊದಲೇ ಪೂರ್ವಗ್ರಹ ಪೀಡಿತರಾಗಿ ಮಾನಸಿಕವಾಗಿ ಕುಸಿದುಹೋಗಿರುತ್ತಾರೆ.  ಇಂತಹ ಗೊಂದಲಗಳು ಜ್ಞಾಪಕಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. 

  • ಅನಾರೋಗ್ಯ;

 ಮಕ್ಕಳು ಸದಾ ಅಸ್ವಸ್ಥರಾಗುವುದು, ದೀರ್ಘ ಕಾಲದ ಕಾಯಿಲೆಗಳಿಂದ ಬಳಲುತ್ತಿರುವಾಗ ಆರೋಗ್ಯಸಮಸ್ಯೆ ಇದ್ದಾಗ ಓದುವುದು ಒಳ್ಳೆಯದಲ್ಲ. ಓದಿದರೂ ಅದು ಹೆಚ್ಚು ಪ್ರಯೋಜನವಾಗುವುದಿಲ್ಲ. ಸಾಧ್ಯವಾದಷ್ಟು ಆ ಸಮಸ್ಯೆಯಿಂದ ಮುಕ್ತವಾಗಿ ಕಲಿಕೆಯಲ್ಲಿ ತೊಡಗಿಕೊಂಡರೆ ಅದು ನಿರೀಕ್ಷಿತ ಫಲ ಕೊಡುವುದರಲ್ಲಿ ಅನುಮಾನವಿಲ್ಲ. 

  • ಸಾಮಾಜಿಕ ಸಮಸ್ಯೆಗಳು:

 ಆರ್ಥಿಕ, ಸಾಮಾಜಿಕ, ಕುಟುಂಬದ ಸಮಸ್ಯೆಗಳು ಮನಸ್ಸಿಗೆ ಘಾಸಿ ಮಾಡಿ ಮಕ್ಕಳ ಮನಸ್ಸನ್ನು ಕುಗ್ಗಿಸುತ್ತವೆ. ದುಃಖದಿಂದ ಮಕ್ಕಳ  ಉತ್ಸಾಹ ಮತ್ತು ಲವಲವಿಕೆ ಕುಂಠಿತವಾಗುತ್ತದೆ. ಬೇಸರ, ಸಿಟ್ಟುಗಳು ವಿದ್ಯಾರ್ಥಿಗಳ ಅಂತಃಶಕ್ತಿಯನ್ನು ನಾಶಪಡಿಸುತ್ತವೆ. ಇದರಿಂದಾಗಿ ಮಕ್ಕಳು ದುಃಖಕ್ಕೆ ಒಳಗಾಗಿ ಚಿಂತೆ ಮಾಡುತ್ತಾ, ಸರಿಯಾದ ಮಾರ್ಗದರ್ಶನ ಸಿಗದೆ, ಏಕಾಗ್ರತೆಯನ್ನು ಸಾಧಿಸಲು ಅಸಮರ್ಥರಾಗುತ್ತಾರೆ. ಇಂಥ ಸಮಸ್ಯೆಗಳು ಮಕ್ಕಳ ನೆನಪಿನ ಬುತ್ತಿ ಗಟ್ಟಿಯಾಗಲು ಬಹುದೊಡ್ಡ ಅಡ್ಡಗಾಲು ಹಾಕುವುದರಲ್ಲಿ ಅನುಮಾನವಿಲ್ಲ. 

  • ಜ್ಞಾಪಕಶಕ್ತಿ ಹೆಚ್ಚಳಕ್ಕೆ ಸರಳ ಉಪಾಯಗಳು

  • ಶೇ. 100ರಷ್ಟು ಓದು.

 ಓದುವಾಗ ನೂರಕ್ಕೆ ನೂರರಷ್ಟು ಗಮನಕೊಟ್ಟು ಓದಬೇಕು. 30ರಿಂದ 45 ನಿಮಿಷ ಓದಿ ನಂತರ ಅದನ್ನು ಅರ್ಥಮಾಡಿಕೊಳ್ಳುತ್ತಾ, ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಮುಖ್ಯಾಂಶಗಳನ್ನು ಬರೆಯುವುದರಿಂದ ಅದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. ಮಕ್ಕಳು ತರಗತಿ ವಿಷಯ/ಪಾಠಗಳನ್ನು  ಪ್ರೀತಿಸುವುದನ್ನು ಕಲಿಯಬೇಕು. ಸಮಸ್ಯೆಗಳಿದ್ದರೆ ಶಿಕ್ಷಕರ ಜೊತೆ ಚರ್ಚೆ ಮಾಡಿ ಅದನ್ನು ತಕ್ಷಣ ಪರಿಹರಿಸಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಷ್ಟೆ ಓದುವ ಅಭ್ಯಾಸ ಒಳ್ಳೆಯದಲ್ಲ.  ಓದಿದ್ದರ ಕುರಿತು ಗೆಳೆಯರೊಂದಿಗೆ ಚರ್ಚೆ ನಡೆಸುವುದು ಉತ್ತಮ. 

  • ಧನಾತ್ಮಕ ಧೋರಣೆ:

 ನನ್ನ ಜ್ಞಾಪಕಶಕ್ತಿ ಹೆಚ್ಚಾಗುತ್ತಿದೆ ಎಂದು ಮಕ್ಕಳು ತಮ್ಮಷ್ಟಕ್ಕೆ ತಾವೇ ಹೇಳಿಕೊಳ್ಳಬೇಕು.  ‘ಈ ಪಾಠಗಳು ಯಾವಾಗಲೂ ನನಗೆ ನೆನಪಿಗೆ ಬರುವುದಿಲ್ಲ’ ಎಂಬ ನಕಾರಾತ್ಮಕ ಧೋರಣೆಯನ್ನು ಮೊದಲು ತಲೆಯಿಂದ ಕಿತ್ತು ಹಾಕಬೇಕು.  

  • ಮಾತ್ರೆಗಳು ಪವಾಡ ಮಾಡುವುದಿಲ್ಲ:

ನೆನಪಿನ ಸಮಸ್ಯೆಯಲ್ಲಿ ಎರಡು ವಿಧ ಕಾಣುತ್ತೇವೆ. ಒಂದು ಏಕಾಗ್ರತೆಯ ಕೊರತೆ; ಮತ್ತೊಂದು ಆರೋಗ್ಯ ಸಮಸ್ಯೆ. ಆರೋಗ್ಯಸುಧಾರಣೆಗೆ ಔಷಧಗಳನ್ನು ಬಳಸಬಹುದು.  ಸ್ವತಃ ಮಾತ್ರೆಗಳನ್ನು ತೆಗೆದುಕೊಳ್ಳದೇ ನುರಿತ ವೈದ್ಯರ ಸಲಹೆ ಪಡೆದು ಬಳಸಬೇಕು. ಏಕಾಗ್ರತೆಯ ಕೊರತೆಗೆ ಮುಖ್ಯವಾಗಿ ಪೋಷಕರು ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಬಹಳ ಮುಖ್ಯ. ಪೋಷಕರು ಮಕ್ಕಳ ನೆನಪಿನ ಶಕ್ತಿಗೆ ಎಂದು ಮಾತ್ರೆಗಳನ್ನು ನೀಡುವ ಬದಲು ಅವರ ಜೀವನಶೈಲಿಯನ್ನು ಬದಲಾಯಿಸಬೇಕು. 

  • ಓದು ನಿಮ್ಮ ಕೈಲಿ:

ಮಾನಸಿಕ ನೆಮ್ಮದಿ ಮತ್ತು ಸತತ ಅಧ್ಯಯನದಿಂದ ಮಾತ್ರ ಯಶಸ್ಸು ಸಿಗುತ್ತದೆ. ಓದಿದ್ದನ್ನು ಮನನ ಹಾಗೂ ಪುನಃಸ್ಮರಣೆಯಿಂದ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಪ್ರಶಾಂತವಾದ ವಾತಾವರಣದಲ್ಲಿ ಓದಬೇಕು. ಮಕ್ಕಳು ತಲೆಗೆ ಕೆಲಸ ಕೊಡುವಂತಹ ಆಟಗಳನ್ನು ಆಡುವುದು ಸೂಕ್ತ. ಪದಬಂಧ, ಚೆಸ್, ಮೋಜಿನ ಗಣಿತ, ವಿನೋದವಿಜ್ಞಾನ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ.

  • ನೆನಪಿನ ತಂತ್ರಗಳು:

 ಮಕ್ಕಳು ವಿಚಾರಗಳನ್ನು ನೆನಪಿಟ್ಟುಕೊಳ್ಳಲು ತಮ್ಮವೇ ತಂತ್ರಗಳನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಪಾಠ, ಪದ್ಯ, ಸೂತ್ರ ಇತ್ಯಾದಿಗಳನ್ನು ನೆನಪಿಟ್ಟುಕೊಳ್ಳಲು ತಮ್ಮದೇ ಆದ ಕೌಶಲಗಳನ್ನು ಬಳಸುತ್ತಿರುತ್ತಾರೆ. ಕೆಲವು ಅವರ ಅರಿವಿಗೆ ಬಂದರೆ ಕೆಲವು ಅರಿವಿಲ್ಲದೆ ಬಳಸುತ್ತಾರೆ. ಮಕ್ಕಳ ಎಷ್ಟು ಕೌಶಲಗಳನ್ನು ಬಳಸುತ್ತಾರೋ ಅಷ್ಟು ಹೆಚ್ಚು ನೆನಪಿಡಬಹುದು. 

  • ಮೈಂಡ್-ಚಿತ್ರ:

 ಮಕ್ಕಳು ತಮ್ಮ ನೋಟ್ಸ್‌ನ್ನು ಹೆಚ್ಚು ಕಾಲ ನೆನಪಿಟ್ಟುಕೊಳ್ಳಬೇಕಾದರೆ, ಅದರಲ್ಲಿ ಹೆಚ್ಚಿನ ಸಂಖ್ಯೆಯ ಆಕೃತಿ, ಚಿತ್ರಗಳು, ಬಣ್ಣ, ಸಂಕೇತಗಳನ್ನು ಬಳಸುವಂತೆ ಮಾಡಬೇಕು. ಇದಕ್ಕೆ ಒಂದು ಸರಳವಾದ ಉದಾಹರಣೆ ನೀಡಬಹುದಾದರೆ, ನೋಟ್ಸ್ ಬರೆಯುವಾಗ ವಿಷಯ/ಶೀರ್ಷಿಕೆಯ ಚಿತ್ರವು ಪುಟದ ಮಧ್ಯದಲ್ಲಿರಲಿ. ನಂತರ ಅದಕ್ಕೆ ಪೂರಕವಾದ ಅತ್ಯಂತ ಮುಖ್ಯಪದಗಳನ್ನು ಸುತ್ತಲೂ ಬೇರೆ ಬೇರೆ ಬಣ್ಣಗಳಿಂದ ಬರೆಯಬೇಕು. ಅಲ್ಲಿ ವಿವರಣಾತ್ಮಕ ವಾಕ್ಯಗಳಿಗೆ ಅವಕಾಶವೇ ಇಲ್ಲ.  ಅತ್ಯಂತ ಪ್ರಮುಖ ಪದಗಳನ್ನು ಗುರುತು ಮಾಡುವುದು, ಬಾಣದ ಗೆರೆ ಎಳೆಯುವುದು, ಇಲ್ಲವೇ ಯಾವುದೇ ರೀತಿಯಲ್ಲಿ ಒತ್ತು ನೀಡಿ ತಕ್ಷಣ ಎದ್ದುಕಾಣುವಂತಿರಬೇಕು. ಅದರ ಕುರಿತು ಹೊಸ ಆಲೋಚನೆಗಳು ಬಂದರೆ ಸಂಗ್ರಹಿಸಿ ಅವನ್ನೂ ಗುರುತು ಹಾಕಿಕೊಳ್ಳಬೇಕು. ನಂತರ ಆ ಚಿತ್ರ ನೋಡಿದ ತಕ್ಷಣ ಎಲ್ಲವೂ ನೆನಪಿಗೆ ಬರುತ್ತದೆ. 

  • ಸನ್ನಿವೇಶಗಳನ್ನು ಬಳಸಿ:

ಗೆಳೆಯನೊಬ್ಬ ಶಾಲೆಯಲ್ಲಿ ನೋಟ್ಸ್ ಕೇಳಿ ಪಡೆದುಕೊಂಡ ಎಂದಿಟ್ಟುಕೊಳ್ಳೋಣ. ಸ್ವಲ್ಪ ಸಮಯದ ನಂತರ ನೋಟ್ಸ್ ಕೊಟ್ಟಿರುವುದು ನೆನಪಿರುತ್ತದೆ. ಆದರೆ ಯಾರಿಗೆ ಕೊಟ್ಟೆ, ಎಲ್ಲಿ ಎಂದು – ನೆನಪೇ ಆಗುವುದಿಲ್ಲ. ಆಗ ಮಕ್ಕಳು ಅದನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ? ‘ನಾನು ಮನೆಯಲ್ಲಿ ನೋಟ್ಸ್‌ನ್ನು ಬ್ಯಾಗಿನಲ್ಲಿ ಹಾಕಿಕೊಂಡೆ, ಶಾಲೆಗೆ ಹೋದಾಗ ಇತ್ತು, ಮತ್ತೆ ನನ್ನ ಡೆಸ್ಕ್‌ನಲ್ಲಿ ಕುಳಿತಾಗ ಇತ್ತು. ಅಲ್ಲಿ ಪ್ರಶ್ನೋತ್ತರ ಬರೆದೆ, ಶಿಕ್ಷಕರಿಗೆ ತೋರಿಸಿ ಸಹಿ ಮಾಡಿಸಿದ್ದೆ … ಆನಂತರ …..’ ಹೀಗೆ ತಮ್ಮ  ನೋಟ್ಸ್ ಸಂಬಂಧಿಸಿದ ಎಲ್ಲ ಘಟನೆಗಳನ್ನು ನೆನಪಿಸುತ್ತಾ ಹೋಗುತ್ತಾರೆ. ಅಂದರೆ ನಮ್ಮ ನೆನಪು ಸನ್ನಿವೇಶಗಳಾಗಿ ಉಳಿಸಿ ಕೊಂಡಿರುತ್ತೇವೆ. ನಾವು ನಮ್ಮ ಒಳಗಣ್ಣಿನಿಂದ ನೋಡುತ್ತಾ, ಅನುಭವಿಸುತ್ತೇವೆ. ಆಗ ನಮ್ಮ ಆ ಘಟನೆಯಲ್ಲಿ ಬರುವ ಎಲ್ಲ ವಿಚಾರಗಳನ್ನು ಗುರುತಿಸಲು ಒಳಗಣ್ಣಿನಿಂದ ಕಾಣಲು ಶ್ರಮಿಸುತ್ತೇವೆ. ಅಂದರೆ ನೆನಪು ಘಟನೆಯ ರೂಪದಲ್ಲಿದ್ದರೆ ಜ್ಞಾಪಕದಲ್ಲಿಟ್ಟುಕೊಳ್ಳುವುದು ಸರಳವಾಗುತ್ತದೆ. ಮಕ್ಕಳಿಗೆ ಈ ಸ್ವಭಾವ ಸಹಜವಾಗಿರುತ್ತದೆ; ಅದನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸಿ.

  • ಘಟನೆಗಳಾಗಿ ಬದಲಾಯಿಸಿಕೊಳ್ಳಿ:

ಮಕ್ಕಳು ಪಠ್ಯದ ಪಾಠಗಳನ್ನೂ ಓದುತ್ತಾರೆ, ಅದೇ ರೀತಿ ಕಥಾಪುಸ್ತಕಗಳನ್ನೂ ಓದುತ್ತಾರೆ. ಅವುಗಳಲ್ಲಿ ಕಥೆಗಳೇ ಹೆಚ್ಚು ನೆನಪಿನಲ್ಲಿರುತ್ತವೆ. ಏಕೆ ಅಂದರೆ, ಕಥೆಗಳನ್ನು ಮಕ್ಕಳು ಘಟನೆಗಳಾಗಿ ನೆನಪಿಟ್ಟುಕೊಳ್ಳುತ್ತಾರೆ. ಅಂದರೆ ಕಥೆಯಲ್ಲಿ ಬರುವ ಸ್ಥಳಗಳು ಅವರಿಗೆ ತಿಳಿದಿರುವ ಮತ್ತು ನೋಡಿರುವ ಸ್ಥಳಗಳಾಗಿ ಕಲ್ಪಿಸಿಕೊಳ್ಳುತ್ತಾರೆ. ಜೊತೆಗೆ ಪಾತ್ರಗಳು ಮಕ್ಕಳು ತಿಳಿದಿರುವ ವ್ಯಕ್ತಿಗಳೊಂದಿಗೆ ಹೋಲಿಸಿಕೊಳ್ಳುತ್ತಾರೆ. ಆದ್ದರಿಂದ ಮಕ್ಕಳು ಅನುಭವಿಸಿದ ಒಂದು ಘಟನೆಯಾಗಿ ಅದು ಅವರ ಮನಸ್ಸಲ್ಲಿರುತ್ತದೆ. ಆದರೆ ಪಾಠ ಹಾಗಿರುವುದಿಲ್ಲ. ಇನ್ನು ಕೆಲವರಿಗೆ ಕೆಲವು ಪಾಠಗಳು ನೆನಪಿರಬಹುದು. ಅಲ್ಲೂ ‘ಘಟನೆ’ ಎಂಬ ವಿಚಾರ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬಹುದು.

  • ಒಳ್ಳೆಯ ಆಹಾರವನ್ನು ನೀಡಿ:

ಮಕ್ಕಳಿಗೆ ಹಸಿ ಸೊಪ್ಪು, ತರಕಾರಿಯಂಥ ಆರೋಗ್ಯಭರಿತ ಆಹಾರ ಅತ್ಯಂತ ಅಗತ್ಯ. ಧಾರಾಳವಾಗಿ ನೀರು ಕುಡಿಯಬೇಕು ಮತ್ತು  ತಾಜಾ ಹಣ್ಣುಗಳನ್ನು ಸೇವಿಸುವುದು ಉತ್ತಮ. ಸಮತೋಲನ ಆಹಾರಶೈಲಿಯನ್ನು ಅಳವಡಿಸಿಕೊಂಡರೆ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೇ ಜ್ಞಾಪಕಶಕ್ತಿಯೂ ಹೆಚ್ಚುತ್ತದೆ. ಆದರೆ ಮಕ್ಕಳು ಹೆಚ್ಚು ಇಷ್ಟ ಪಡುವ ಜಂಕ್ ಫುಡ್, ಮಸಾಲೆ ಪದಾರ್ಥ, ಕರಿದ ತಿಂಡಿ, ಬೇಕರಿ ಪದಾರ್ಥ, ಕೂಲ್ ಡ್ರಿಂಕ್ಸ್‌ಗಳಿಂದ ಸಾಧ್ಯವಿದ್ದಷ್ಟು ಅವರನ್ನು ದೂರವಿರಬೇಕು. ಅಗತ್ಯಕ್ಕಿಂತ ಹೆಚ್ಚು ಯಾವುದನ್ನೂ ತಿನ್ನುವುದು ಒಳಿತಲ್ಲ. ಪ್ರತಿದಿನ ಮಕ್ಕಳು ತಮ್ಮ ವಯೋಮಾನಕ್ಕೆ ಸರಿಹೊಂದುವ ವ್ಯಾಯಾಮ/ಯೋಗಾಭ್ಯಾಸವನ್ನು ಮಾಡಬೇಕು. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಆಮ್ಲಜನಕ ಹೆಚ್ಚು ಪೂರೈಕೆಯಾಗಿ, ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿಗಳು ವೃದ್ಧಿಸುತ್ತವೆ.

ವೇಸ್ಟ್ ಆಗದಿರಲಿ ಟ್ಯಾಲಂಟ್.

ವೇಸ್ಟ್ ಆಗದಿರಲಿ ಟ್ಯಾಲಂಟ್ಮನುಷ್ಯ-ಮನುಷ್ಯರ ಮಧ್ಯೆಯೂ ಬುದ್ಧಿವಂತಿಕೆ ಹಾಗೂ ಪ್ರತಿಭೆಗೆ ಸಂಬಂಧಿಸಿದಂತೆ ಭಿನ್ನತೆಗಳಿವೆ. ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ಬುದ್ಧಿವಂತಿಕೆ ಇರಬಹುದು. ಎಲ್ಲರೂ ಪ್ರತಿಭಾವಂತರಲ್ಲದೇ ಇರಬಹುದು ಕೂಡ. ಪ್ರತಿಭೆ ಇದ್ದವರೂ ಕೆಲವೊಮ್ಮೆ ಅದನ್ನು ಹೊರತರಲಾಗದೇ, ಮೊನಚುಗೊಳಿಸಲಾಗದೇ ಹೋಗಬಹುದು. ಆದ್ದರಿಂದ ನಮ್ಮ ಶಕ್ತಿಯನುಸಾರ, ಆಯ್ಕೆ ಮಾಡಿಕೊಂಡು ಅದರಲ್ಲೇ ಏನಾದರೂ ಸಾಧಿಸುವುದು ಜಾಣ ಯುವ ಜನರ ಲಕ್ಷಣ. ಸುಮ್ಮನೆ ಬೇಡದ್ದನ್ನು ತಲೆ ಮೇಲೆ ಹೊತ್ತುಕೊಂಡು ಏದುರುಸಿರು ಬಿಡುತ್ತ ಗುಡ್ಡ ಏರುವುದು ಕಷ್ಟದ ಕೆಲಸ. ಹಾಗಾದರೆ ಆಯ್ಕೆ ಹೇಗಿರಬೇಕು? ಪ್ರಾರಂಭದಲ್ಲೇ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಹೇಗೆ ನಡೆಯಬೇಕು? ಎಂಬ ಮಾಹಿತಿ ಇಲ್ಲಿದೆ.

  • ಮಲ್ಲಿಕಾರ್ಜುನ ತಳವಾರ ಬೆಳಗಾವಿ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಹಾಗೂ ದೇಶಿ ಕ್ರಿಕೆಟ್​ನಲ್ಲಿ ಸಾವಿರು ರನ್ ಗಳಿಸಿ ದಾಖಲೆ ಮಾಡಿದ್ದ ಪ್ರಣವ್ ಧನವಾಡೆ ಎಂಬ ಹುಡುಗನ ಕುರಿತು ಚರ್ಚೆಯೊಂದು ನಡೆದಿತ್ತು. ನಿಂತ ನಿಲುವಿನಲ್ಲಿ ಸಾವಿರ ರನ್ ಗಳಿಸಿದ ಪ್ರಣವ್​ಗೆ ಸಿಗದಿರುವ ಅವಕಾಶ ತೆಂಡುಲ್ಕರ್ ಮಗ ಅರ್ಜುನ್​ಗೆ ಯಾಕೆ ಸಿಕ್ಕೀತು? ಎಂಬ ಪ್ರಶ್ನೆ ಇಟ್ಟುಕೊಂಡು ಜಾಲತಾಣಿಗರು ಸಿಕ್ಕಾಪಟ್ಟೆ ಚರ್ಚೆ ಮಾಡಿದರು. ಅಸಾಮಾನ್ಯ ಪ್ರತಿಭೆ ಇದ್ದ ಹುಡುಗನೊಬ್ಬ ಕ್ರೀಡಾ ರಾಜಕೀಯದ ಮಸಲತ್ತಿನಿಂದಾಗಿ ಅವಕಾಶ ವಂಚಿತನಾದ ಎನ್ನುವುದು ಪ್ರಣವ್ ಕುರಿತು ಹಲವರ ಕಳಕಳಿ ಆಗಿತ್ತು. ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಅಂಥ ಚರ್ಚೆ ಆಶಾದಾಯಕ ಬೆಳವಣಿಗೆ ಅನಿಸಿದ್ದು ಹೌದು. ಪ್ರಣವ್ ಧನವಾಡೆ ಒಬ್ಬರೇ ಅಲ್ಲ! ಅಂಥ ನೂರಾರು ಪ್ರತಿಭೆಗಳು ಹಲವು ಕಾರಣಗಳಿಗಾಗಿ ನಮ್ಮ ಕಣ್ಣೆದುರಿಗೆ ಬಾಡಿ ಹೋಗುತ್ತಿವೆ.

ಮನುಷ್ಯ ಅಂದ ಮೇಲೆ ಒಬ್ಬೊಬ್ಬ ಒಂದೊಂದು ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿರುತ್ತಾನೆ. ಕ್ಷೇತ್ರ ಯಾವುದೇ ಆದರೂ ಎಲ್ಲರಲ್ಲೂ ಒಂದೊಂದು ತೆರನಾದ ಪ್ರತಿಭೆ ಇರುತ್ತದೆ. ಆದರೆ ಬಹಳಷ್ಟು ಸಲ ಅದಕ್ಕೊಂದು ವೇದಿಕೆ ಸಿಗುವುದಿಲ್ಲ. ಸಿಕ್ಕರೂ ಅದು ಸಮರ್ಪಕವಾಗಿ, ಉಜ್ವಲವಾಗಿ ಬೆಳಗದೇ ಹೋಗಬಹುದು. ಅದಕ್ಕೆ ಇಂತಹದ್ದೇ ನಿರ್ದಿಷ್ಟ ಕಾರಣ ಕೊಡಲಾಗುವುದಿಲ್ಲವಾದರೂ ಮನುಷ್ಯನ ಇಚ್ಛಾಶಕ್ತಿ ಹಾಗೂ ದೀರ್ಘಕಾಲಿಕ ತಾಳ್ಮೆಯ ಕೊರತೆ, ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಮಾನಸಿಕ ಕಾರಣಗಳಿಂದಾಗಿ ಪ್ರತಿಭೆ ಮಣ್ಣು ಪಾಲಾಗುತ್ತಿರುತ್ತದೆ ಅನ್ನುವುದು ಮಾತ್ರ ಮೇಲ್ನೋಟಕ್ಕೆ ಸತ್ಯ.

ಭಾರತೀಯ ಶಿಕ್ಷಣ ವ್ಯವಸ್ಥೆಯ ಕುರಿತು ಹಲವು ಟೀಕೆಗಳಿವೆ. ಅವು ವ್ಯಕ್ತವಾಗುತ್ತ, ಮತ್ತೆ ಹಳತಾಗುತ್ತಲೂ ಇವೆ. ಆಗಾಗ ಕೆಲ ಬದಲಾವಣೆಗಳಾಗಿರಬಹುದಾರೂ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪ್ರತಿಭೆಯುಳ್ಳ ಮನುಷ್ಯ ಹೇಗಾದರೂ ಮಾಡಿ ತಾನೇ ತನಗೊಂದು ವೇದಿಕೆ ಹುಡುಕಿಕೊಳ್ಳಬೇಕು ಅನಿಸುವುದರಲ್ಲಿ ತಪ್ಪೇನೂ ಕಾಣುವುದಿಲ್ಲ. ವೇದಿಕೆ ಹುಡುಕಿಕೊಳ್ಳುವುದೇ ಇಲ್ಲಿ ದೊಡ್ಡ ಕೆಲಸ. ನಿಜಕ್ಕೂ ಪ್ರತಿಭಾವಂತನಾದ ವ್ಯಕ್ತಿ ಹೇಗಿದ್ದರೂ ಒಂದು ನೆಲೆ ಕಂಡುಕೊಳ್ಳುತ್ತಾನೆ. ವೇದಿಕೆ ಸಿಕ್ಕ ನಂತರ ಪ್ರತಿಭೆಗೆ ಸಾಣೆ ಹಿಡಿದು, ಹರಿತಗೊಂಡು, ಪಕ್ವಗೊಳ್ಳಬೇಕಾದ್ದು ಪ್ರತಿಭಾವಂತ ಅನ್ನಿಸಿಕೊಂಡವನ ಹೊಣೆ. ಅದಷ್ಟು ಸುಲಭದ ಹಾದಿಯಲ್ಲ ಅನ್ನೋದು ನಿಜವಾದರೂ ಅಸಾಧ್ಯವಂತೂ ಅಲ್ಲ.

ಯಡವಟ್ಟಾಗದಿರಲಿ ಕೋರ್ಸ್ ಆಯ್ಕೆ

ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿಷಯವಾರು ಆಯ್ಕೆಗೆ ಅವಕಾಶವಿರುವುದಿಲ್ಲವಾದರೂ ಕಾಲೇಜು ಹಂತದ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆಯ ಅವಕಾಶವಿರುತ್ತದೆ. ಆದರೂ ಬಹಳಷ್ಟು ವಿದ್ಯಾರ್ಥಿಗಳು ವಿಷಯಗಳ ಆಯ್ಕೆಯಲ್ಲಿ ಯಡವಟ್ಟು ಮಾಡಿಕೊಂಡಿರುವುದು ಕಾಣುತ್ತದೆ. ಪ್ರಾವೀಣ್ಯತೆ ಹಾಗೂ ಆಸಕ್ತ ವಿಷಯದ ಕೋರ್ಸ್ ಆಯ್ಕೆ ಮಾಡಿಕೊಂಡಾಗ ಸಾಮರ್ಥ್ಯದ ಸಂಪೂರ್ಣ ಸದ್ಬಳಕೆ ಸಾಧ್ಯವಾಗುತ್ತದೆ. ಆದರೆ ತುಂಬ ಸಲ ಹಾಗಾಗುವುದಿಲ್ಲ. ಪಟಪಟ ಕನ್ನಡ ಓದುವ, ಬರೆಯುವ, ವ್ಯಾಕರಣದಲ್ಲಿ ಬುದ್ಧಿವಂತನಿರುವ ಆದರೆ, ಇಂಗ್ಲಿಷ್ ಎಂದರೆ ಮಾರುದೂರ ಓಡುವ ಓರ್ವ ವಿದ್ಯಾರ್ಥಿ, ವಿಜ್ಞಾನ ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೂ ಆ ಕ್ಷೇತ್ರಕ್ಕೆ ಪ್ರವೇಶ ಪಡೆದರೆ ಆತನಿಂದ ನ್ಯಾಯಪರ ಸಾಧನೆ ನಿರೀಕ್ಷೆ ಮಾಡಲಾಗುವುದಿಲ್ಲ. ಹಾಗಂತ ಇದು ಮೇಲ್ನೋಟದ ಸತ್ಯವಲ್ಲ. ಮನೋಶಾಸ್ತ್ರಜ್ಞರು ಹಾಗೂ ಸಮಾಜವಿಜ್ಞಾನಿಗಳು ಈ ವಾದ ಪುಷ್ಠೀಕರಿಸುತ್ತಾರೆ ಕೂಡ.

ಇತಿಹಾಸದಲ್ಲಿ ಆಸಕ್ತಿ ಇರುವ, ಗಣಿತವೆಂದರೆ ಮೂಗು ಮುರಿಯುವ, ಕನಿಷ್ಠ ಮಟ್ಟದ ಗಣಿತ ಜ್ಞಾನ ಹಾಗೂ ಆಸಕ್ತಿ ಇಲ್ಲದ ವಿದ್ಯಾರ್ಥಿಗೆ ಗಣಿತ ಪ್ರಧಾನವಾಗಿರುವ ಕೋರ್ಸ್ ಕೊಡಿಸಿದರೆ ಆತ ಅದನ್ನು ದಕ್ಕಿಸಿಕೊಳ್ಳದೇ ಹೋಗಬಹುದು. ಇವು ಕೇವಲ ಉದಾಹರಣೆಗಳಷ್ಟೇ. ಕೋರ್ಸ್ ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದ ವಿದ್ಯಾರ್ಥಿ ಜೀವನ ಪರ್ಯಂತ ಎಡವುತ್ತಲೇ ಇರುತ್ತಾನೆ. ವಿಷಯದ ಆಯ್ಕೆಯ ತಪ್ಪು ಹೆಜ್ಜೆ ಬರೀ ಫಲಿತಾಂಶದ ಮೇಲೆ ಮಾತ್ರವಲ್ಲ, ನೇರವಾಗಿ ಜೀವನದ ಮೇಲೆಯೂ ಪರಿಣಾಮ ಬೀರಬಲ್ಲದು.

ಪೋಲಾಗುವ ಸಾಮರ್ಥ್ಯ!

ಪ್ರತಿಯೊಬ್ಬರಲ್ಲೂ ಒಂದೊಂದು ತೆರನಾದ ಪ್ರತಿಭೆ ಇರುತ್ತದೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ ಅದನ್ನು ಗುರುತಿಸುವ ಹಾಗೂ ಬೆಳೆಸುವ ಗೋಜಿಗೆ ಎಲ್ಲರೂ ಹೋಗುವುದಿಲ್ಲ. ಸಾಮಾನ್ಯವಾಗಿ ಬಾಲ್ಯದಲ್ಲಿಯೇ ಮಕ್ಕಳ ಪ್ರತಿಭೆ ಗೋಚರಿಸತೊಡಗಿರುತ್ತದೆ. ಪ್ರತಿಭೆ ಪತ್ತೆ ಹಚ್ಚಿ, ಬೆಳಗುವಂತೆ ಮಾಡುವುದು ಸುಲಭದ ಮಾತಲ್ಲ. ಹಾಗಂತ ಅಸಾಧ್ಯವೂ ಅಲ್ಲ. ಮನುಷ್ಯನ ಆಸಕ್ತಿ ಪ್ರಧಾನವಾದ ಕ್ಷೇತ್ರದ, ವಿಷಯದ ಆಯ್ಕೆ ಮಾತ್ರ ಅವನನ್ನು ದಡ ಸೇರಿಸಬಲ್ಲದು ಎಂಬುದು ಗೊತ್ತಿದ್ದರೂ ತುಂಬ ಜನರು ಅದರ ಬೆನ್ನು ಹತ್ತುವುದಿಲ್ಲ. ಡಾಟಾ ಎಂಟ್ರಿ ಮಾಡುವ ಕೆಲಸಕ್ಕೆ ಸೇರಿದರೆ ಸಾಕು, ಸಾವಿರಾರು ರೂಪಾಯಿ ಗಳಿಸಬಹುದು ಎನ್ನುವ ಅಲ್ಪ ಸಂತೃಪ್ತಿ, ಮುಂದೆ ಬಿಕಾಂ ಮಾಡಿ ಚಾರ್ಟರ್ಡ್ ಅಕೌಂಟಂಟ್ ಆಗಬಲ್ಲೆ ಎಂಬ ಮಹಾದಾಸೆಯನ್ನು ಆರಂಭದಲ್ಲಿ ಕೊಂದು ಬಿಡುತ್ತದೆ. ಹಾಗಾಗಿ ಗರಿಷ್ಠ ಮಟ್ಟದಲ್ಲಿ ನೈಪುಣ್ಯತೆ ಬಳಸಿಕೊಳ್ಳುವತ್ತ ಗಮನ ಹರಿಸುವುದು ಸಾಧನೆಯ ಮೊದಲ ಮೆಟ್ಟಿಲಾಗಬಹುದು.

ಏನೇ ಆದರೂ ಇದು ಬುದ್ಧಿವಂತರ ಲೋಕ. ಅದರಲ್ಲೂ ಎಲ್ಲ ಕ್ಷೇತ್ರಗಳಲ್ಲಿ ಈಚೆಗೆ ವಿಪರೀತ ಸ್ಪರ್ಧೆ ಏರ್ಪಡುತ್ತಿದೆ. ಸಾಕಷ್ಟು ಪೂರ್ವ ತಯಾರಿ, ಜಾಣ್ಮೆ, ಕೌಶಲಗಳಿದ್ದರೂ ಇನ್ನೂ ಏನೋ ಕಲಿಯಬೇಕಿತ್ತೆಂದು ಪ್ರತಿಯೊಬ್ಬರೂ ಯೋಚಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಹೊಸತು ಕಲಿಯಲು ಹಂಬಲಿಸುವುದು ಹಾಗೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದು ಪ್ರತಿಭೆಗೆ ಸಾಣೆ ಹಿಡಿಯುವ ಮೊದಲ ಹೆಜ್ಜೆಯಾಗಬಹುದು. ಎಲ್ಲ ಕ್ಷೇತ್ರಗಳಲ್ಲೂ ಆರೋಗ್ಯಕರ ಸ್ಪರ್ಧೆ ಇರುವಂತೆಯೇ ಅನಾರೋಗ್ಯಕರ ಸ್ಪರ್ಧೆಯೂ ಇದೆ. ಅದರ ಮಧ್ಯೆಯೇ ನಮ್ಮ ಪ್ರತಿಭೆಗೊಂದು ನೆಲೆ ಸಿಗುವ ಹಾಗೇ ಮತ್ತು ಅದು ಸಕಾರಾತ್ಮಕವಾಗಿ ವ್ಯಕ್ತವಾಗಿ ಫಲ ನೀಡುವ ಬಗೆಯ ಹಾದಿಯಲ್ಲಿ ನಾವೇ ಚಲಿಸಬೇಕು. ಹಾಗಂತ ಬರೀ ಪ್ರತಿಭೆಯೊಂದೇ ಇದ್ದರೆ ಸಾಲದು. ಜತೆಗೆ ನಿರಂತರ ಪರಿಶ್ರಮವೂ ಬೇಕು. ಒಮ್ಮೆ ಪ್ರಶಸ್ತಿ ಗೆದ್ದ ಓಟಗಾರ ನಿರಂತರ ಅಭ್ಯಾಸ ಮಾಡದಿದ್ದರೆ ಮತ್ತೊಂದು ಕ್ರೀಡಾಕೂಟದಲ್ಲಿ ಹೇಳ ಹೆಸರಿಲ್ಲ್ಲಂತಾಗಬಹುದು. ಹಾಗಾಗಿ ಪರಿಶ್ರಮಿಗಳು, ಒಮ್ಮೊಮ್ಮೆ ಪ್ರತಿಭಾವಂತರನ್ನೂ ಮೀರಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನಮ್ಮೊಳಡಗಿರುವ ಪ್ರತಿಭೆಯನ್ನು ನಾವೇ ಗುರುತಿಸಿಕೊಳ್ಳಬೇಕು. ಅದನ್ನು ಬೇರೆಯವರೂ ಗುರುತಿಸಲು ನಾವು ಶ್ರಮ ಪಡಬೇಕು. ಆ ಶ್ರಮ ಫಲ ನೀಡಲು ನಿರಂತರ ಅಭ್ಯಾಸವಿರಲೇಬೇಕು. ಚೂರು ಮೈಮರೆತರೆ ಪಕ್ಕದಲ್ಲಿ ಓಡುತ್ತಿರುವ ಪ್ರತಿಸ್ಪರ್ಧಿ ನಮ್ಮನ್ನು ದಾಟಿಕೊಂಡು ಹೋಗಬಹುದು. ಕುಡುಗೋಲು ಮೊಂಡಾದರೆ ಸಾಣೆ ಹಿಡಿದು ಹರಿತುಗೊಳಿಸುವಂತೆ ಆಗಾಗ ಆಲಸ್ಯಗೊಳ್ಳುವ, ಮೈ ಮುರಿಯುವ, ಒಲ್ಲೆ ಎನ್ನುವ, ಸೆಟಗೊಳ್ಳುವ ಪ್ರತಿಭೆಯನ್ನು ಸತತ ಪ್ರಯತ್ನ ಹಾಗೂ ದೃಢ ಇಚ್ಛಾಶಕ್ತಿಯ ಮೂಲಕ ಬಡಿದೇಳಿಸುತ್ತಲೇ ಇದ್ದರೆ ನಮಗೂ ಒಂದು ಗೆಲುವಿನ ದಡ ದಕ್ಕಬಹುದು. ಆ ನಿಟ್ಟಿನಲ್ಲಿ ಸಿಗಬಹುದಾದ ಯಶಸ್ಸು ನಮ್ಮ ದೃಢ ಸಂಕಲ್ಪವನ್ನು ಅವಲಂಬಿಸಿರುತ್ತದೆ ಅಷ್ಟೇ.

ಶಿಕ್ಷಕರು ಏನು ಮಾಡಬಹುದು?

  • ವಿದ್ಯಾರ್ಥಿಗಳ ವಿಷಯವಾರು ಜಾಣತನ ಗುರುತಿಸುವುದು. ಆ ಕುರಿತು ಮಕ್ಕಳಿಗೆ ವಿಶೇಷ ಸಲಹೆ ನೀಡುವುದು.
  • ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳಿಗಿರುವ ಆಸಕ್ತಿ ಹಾಗೂ ತೊಡಗಿಸಿಕೊಳ್ಳುವಿಕೆ ಗಮನಿಸುವುದು.
  • ಪ್ರತಿಭಾನ್ವೇಷಣೆ ಹಾಗೂ ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತೋರುವ ಪ್ರದರ್ಶನದಲ್ಲಿ ಅವರ ವಿಭಿನ್ನ, ವಿಶೇಷ ಹೊಳವುಗಳನ್ನು ಆರಿಸಿಟ್ಟು, ಸಾಧ್ಯವಾದರೆ ಸಲಹೆ ನೀಡುವುದು.
  • ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮಕ್ಕಳು ನಿರ್ದಿಷ್ಟ ಕ್ರೀಡೆ ಅಥವಾ ಆಟದಲ್ಲಿ ಹೊಂದಿರುವ ಸಾಮರ್ಥ್ಯವನ್ನು ತೂಕಕ್ಕಿಟ್ಟು ನೋಡುವುದು. ಆ ಕುರಿತು ಮಕ್ಕಳಿಗೆ ವಿಶೇಷ ಸಲಹೆ, ತರಬೇತಿಗೆ ಸೂಚನೆ ನೀಡುವುದು. ಮಕ್ಕಳ ಬೇಡಿಕೆಗಳನ್ನು ಚೌಕಟ್ಟಿನೊಳಗೇ ಪೂರೈಸಲು ಯತ್ನಿಸುವುದು.
  • ಮಕ್ಕಳ ಮನರಂಜನೆಗೆ ಏರ್ಪಡಿಸುವ ಸ್ಪರ್ಧೆಗಳಲ್ಲಿ ವ್ಯಕ್ತವಾಗುವ ಪ್ರತಿಭೆಯನ್ನು ಸಾಧ್ಯವಾದಷ್ಟು ಸಾಣೆ ಹಿಡಿಯಲು ಅನುವಾಗುವಂತೆ ಬಳಸಿಕೊಳ್ಳುವುದು.
  • ಪ್ರತಿಭೆ ಬಳಸಿಕೊಳ್ಳಲು ಲಭ್ಯವಿರುವ ವೇದಿಕೆಗಳನ್ನು ಮಕ್ಕಳಿಗೆ ಒದಗಿಸಿಕೊಡುವುದು.
  • ತರಗತಿ, ಅಂತರ್ ತರಗತಿ, ಶಾಲೆಯಲ್ಲಿ, ಅಂತರ್ ಶಾಲೆ, ವಲಯ, ಜಿಲ್ಲೆ ಹಾಗೂ ರಾಜ್ಯಮಟ್ಟದ ವೇದಿಕೆಗಳನ್ನು ಗರಿಷ್ಠಮಟ್ಟದಲ್ಲಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು.
  • ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಅದು ಹರಳುಗಟ್ಟಿ ಫಲ ನೀಡುವ ಬಗೆಯ ಕುರಿತು ಮಕ್ಕಳ ಪಾಲಕರೊಂದಿಗೆ ರ್ಚಚಿಸುವುದು. ಸಾಧ್ಯವಾದರೆ ಮಕ್ಕಳ ಪ್ರತಿಭಾ ಪ್ರದರ್ಶನದ ಕಾರ್ಯಕ್ರಮಗಳಿಗೆ ಪಾಲಕರನ್ನು ಕರೆಯುವುದು. ಮಕ್ಕಳು ಹಾಗೂ ಪಾಲಕರೊಂದಿಗೆ ಪ್ರತಿಭೆ ಬೆಳೆಸುವ ಬಗ್ಗೆ ರ್ಚಚಿಸುವುದು.

ಪಾಲಕರು ಮಾಡಬಹುದಾದದ್ದೇನು?

  • ಮಕ್ಕಳಲ್ಲಿರುವ ವಿಶೇಷ ಆಸಕ್ತಿ ಗುರುತಿಸಿ, ಆ ಕುರಿತು ತರಬೇತಿ ಹಾಗೂ ಕಠಿಣ ಅಭ್ಯಾಸ ಮಾಡುವಂತೆ ಪ್ರೇರೇಪಿಸುವುದು.
  • ಬೇರೆ ಮಕ್ಕಳಿಗಿಂತ ನಮ್ಮ ಮಕ್ಕಳು ಯಾವುದರಲ್ಲಿ ಭಿನ್ನ, ಅವರ ತಾಕತ್ತೇನು, ಅದನ್ನು ಮತ್ತಷ್ಟು ಬೆಳೆಸುವ ಬಗೆ ಹೇಗೆ? ಎಂಬ ಕುರಿತು ಗಹನ ವಿಚಾರ ಮಾಡುವುದು.
  • ಮಕ್ಕಳ ವರ್ತನೆ ಕುರಿತು ಆಗಾಗ ಶಿಕ್ಷಕರ ಬಳಿ ವರದಿ ಕೇಳುವುದು.
  • ಮಕ್ಕಳು ಪ್ರತಿಭೆ, ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಈಗಾಗಲೇ ಸಾಧನೆ ಮಾಡಿದ ಜಗತ್ತಿನ ಸಾಧಕರ ಕುರಿತಾದ ಪುಸ್ತಕ, ಸಿನಿಮಾ, ಸಾಕ್ಷ್ಯತ್ರ, ಚಿತ್ರಪಟ, ವಿವರಗಳು ಮಕ್ಕಳಿಗೆ ಸಿಗುವಂತೆ ಮಾಡುವುದು. ಮಕ್ಕಳ ಋಣಾತ್ಮಕ ಹವ್ಯಾಸಗಳನ್ನು ಅತ್ಯಂತ ಎಚ್ಚರಿಕೆಯಿಂದಲೇ ಚಿವುಟುವುದು.
  • ನಿರಂತರ ಅಭ್ಯಾಸ ಮಾಡುವುದರಿಂದ ಮಾತ್ರ ದೃಢ ಸಾಧನೆ ಸಾಧ್ಯ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಸುವುದು.
  • ಪ್ರತಿಭೆ ಬೆಳೆಸುವ ಹಾದಿಯಲ್ಲಿ ಹಾಗೂ ಜಗತ್ತಿಗೆ ಅದನ್ನು ತೋರಿಸುವ ಧಾವಂತದಲ್ಲಿ ಮಕ್ಕಳ ಮೇಲೆ ಅನವಶ್ಯಕ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು. ಸಣ್ಣ ತಪ್ಪಿಗೂ ಬೇರೆಯವರ ಮಕ್ಕಳೊಂದಿಗೆ ಹೋಲಿಸಿ ಮಾತನಾಡದಿರುವುದು ಒಳಿತು.

ಅಧ್ಯಯನಕ್ಕೆ ಸಂಬಂಧಪಟ್ಟ ಮಾಹಿತಗಳು.

  • @

  • @
  • ಉನ್ನತ ಶಿಕ್ಷಣ ಸಾಲ ಸೌಲಭ್ಯ

04.01.2017, ವಿಜಯವಾಣಿ 

ಕೇಂದ್ರ, ರಾಜ್ಯ ಸರ್ಕಾರಗಳು ಕಾಲ ಕಾಲಕ್ಕೆ ಜಾರಿಗೊಳಿಸುತ್ತಿರುವ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ ಪ್ರತಿ ವಾರ ಯೋಜನೆಗಳ ಮಾಹಿತಿ ಕೈಪಿಡಿ ನೀಡುತ್ತಿದ್ದು, ಈ ವಾರ ‘ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗಾಗಿ ನೀಡುವ ರಾಜೀವ್​ಗಾಂಧಿ ವಿದ್ಯಾರ್ಥಿವೇತನದ’ ಕುರಿತ ಮಾಹಿತಿ ನಿಮ್ಮ ಮುಂದೆ… 

ಇತ್ತೀಚಿನ ವರ್ಷಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್ ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ದುಬಾರಿಯಾಗಿದೆ. ವ್ಯಕ್ತಿಯ ಆರ್ಥಿಕ ದುರ್ಬಲತೆಯ ಕಾರಣಕ್ಕಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗಾಗಿ ಸರ್ಕಾರ ವೃತ್ತಿಪರ ಕೋರ್ಸ್​ಗಳಿಗೆ ನೀಡುತ್ತಿರುವ ಸಾಲ ಸೌಲಭ್ಯವನ್ನು 2013ರಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ರಾಜೀವ್ ಗಾಂಧಿ ಸಾಲ ವಿದ್ಯಾರ್ಥಿ ವೇತನ ಮಾರ್ಗಸೂಚಿಯಂತೆ ಸರ್ಕಾರಿ ವಿಶ್ವವಿದ್ಯಾಲಯ, ಸರ್ಕಾರಿ ಮತ್ತು ಅನುದಾನಿತ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಸೇರುವ ಅಭ್ಯರ್ಥಿಗಳು ಇದರ ಫಲಾನುಭವ ಪಡೆಯಬಹುದು.

  • ಸಾಲದ ಮೊತ್ತವೆಷ್ಟು?

ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿಸಿಎ ಸೇರಿದಂತೆ ಪದವಿ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ 60,000 ರೂ.ನಂತೆ ಮೂರು ವರ್ಷಕ್ಕೆ 1.80 ಲಕ್ಷ ರೂ. ನೀಡಲಾಗುತ್ತದೆ.

5 ವರ್ಷದ ಇಂಟಿಗ್ರೇಟೆಡ್ ಕೋರ್ಸ್​ಗಳಿಗೆ ಪ್ರತಿ ವರ್ಷ 60,000 ರೂ.ಗಳಂತೆ 3 ಲಕ್ಷ ರೂ. ಸಾಲ ಒದಗಿಸಲಾಗುತ್ತದೆ.

6 ತಿಂಗಳ ಒಳಗಿನ ಕೋರ್ಸ್​ಗಳಿಗೆ 2 ಸಾವಿರ, 6-1ವರ್ಷದ ಕೋರ್ಸ್​ಗೆ 40 ಸಾವಿರ, 1ವರ್ಷಕ್ಕಿಂತ ಅಧಿಕ ಅವಧಿಯ ಕೋರ್ಸ್​ಗೆ 60 ಸಾವಿರದಿಂದ 1ಲಕ್ಷ ರೂ. ನಿಗದಿಪಡಿಸಲಾಗಿದೆ.

4 ಲಕ್ಷ ರೂ.ಗೆ ಶೇ.12ರಷ್ಟು ಬಡ್ಡಿಯನ್ನು ಹುಡುಗರಿಗೆ, ಶೇ.11ರ ಬಡ್ಡಿಯನ್ನು ಹುಡುಗಿಯರಿಗೆ ರಾಷ್ಟ್ರೀಕೃತ ಬ್ಯಾಂಕ್​ಗಳು ನಿಗದಿಪಡಿ ಸಿವೆ. (ಕೋರ್ಸ್ ಮುಗಿದು 6 ತಿಂಗಳ ನಂತರ ಇದು ಅನ್ವಯ.)

  • ಸಾಲ ಮರುಪಾವತಿ ಹೇಗೆ?

ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿದು 6 ತಿಂಗಳವರೆಗೂ ಸಾಲದ ಬಡ್ಡಿ ದರವನ್ನು ಸರ್ಕಾರವೇ ಪಾವತಿಸುತ್ತದೆ. ಆ ನಂತರ ಬಡ್ಡಿ ಸಮೇತವಾಗಿ 50,000ವರೆಗಿನ ಸಾಲಕ್ಕೆ 2ವರ್ಷ, 50,000 ದಿಂದ 1ಲಕ್ಷದವರೆ ಗಿನ ಸಾಲಕ್ಕೆ 2 ರಿಂದ 5 ವರ್ಷ ಹಾಗೂ 1ಲಕ್ಷಕ್ಕೂ ಅಧಿಕ ಪ್ರಮಾಣದ ಸಾಲದ ಮರುಪಾವತಿಗೆ 7ವರ್ಷಗಳ ಕಾಲಾವಕಾಶ ಕಲ್ಪಿಸಲಾಗುತ್ತದೆ.

  • ಬಡ್ಡಿಯ ಸಹಾಯಧನ ಹೇಗೆ?

ಪ್ರಥಮ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಕೋರ್ಸ್​ಗೆ ಒಮ್ಮೆಗೆ ಮಾತ್ರ ಅರ್ಹ ವಿದ್ಯಾರ್ಥಿಗಳಿಗೆ ಯೋಜನೆಯ ಬಡ್ಡಿ ಸಹಾಯಧನದ ಸೌಲಭ್ಯ ದೊರಕುತ್ತದೆ. ಸಂಯುಕ್ತ ಕೋರ್ಸ್​ಗಳ ವಿದ್ಯಾರ್ಥಿಗಳಿಗೂ (ಪದವಿ ಮತ್ತು ಸ್ನಾತಕೋತ್ತರ ಪದವಿ ಒಟ್ಟಿಗೆ ಇರುವುದು) ಬಡ್ಡಿ ಸಹಾಯಧನ ಲಭ್ಯವಿದೆ. ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಲ್ಲಿ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಕಾಲೇಜು ಬಿಟ್ಟರೆ ಅಥವಾ ಅಶಿಸ್ತಿನ ಮೇಲೆ ವಜಾಗೊಂಡಾಗ ಬಡ್ಡಿಯ ಸಬ್ಸಿಡಿ ಲಭ್ಯವಾಗುವುದಿಲ್ಲ. ವೈದ್ಯಕೀಯ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಂಡಿದ್ದಕ್ಕೆ ಸೂಕ್ತ ವೈದ್ಯಕೀಯ ದಾಖಲೆ ಹಾಗೂ ವಿದ್ಯಾಸಂಸ್ಥೆಯ ತೃಪ್ತಿಕರ ದೃಢೀಕರಣ ಪತ್ರ ಸಲ್ಲಿಸಿದ್ದಲ್ಲಿ ಬಡ್ಡಿಯ ಸಹಾಯಧನ ಲಭ್ಯವಾಗುತ್ತದೆ.

  • ಆಧಾರ್ ಕಡ್ಡಾಯ.

ಈ ಸಾಲ ಪಡೆಯಲು ಫಲಾನುಭವಿ, ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಬ್ಯಾಂಕ್​ಗೆ ಕಡ್ಡಾಯವಾಗಿ ನೀಡಬೇಕು.

  • ಅರ್ಜಿ ಎಲ್ಲಿ ಲಭ್ಯ?

ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಸಾಲ ಸೌಲಭ್ಯ ಲಭ್ಯವಿದ್ದು, ಪದವಿ ಕಾಲೇಜುಗಳಲ್ಲಿ ಅರ್ಜಿ ದೊರೆಯಲಿದೆ. ಇಲ್ಲವೆ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಡಿಡಿಡಿ.ಛ್ಚಛಿ.kಚ್ಟ.ಜ್ಚಿ.ಜ್ಞಿ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಕಾಲೇಜಿನ ಪ್ರಾಂಶುಪಾಲರ ಸಹಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಇಲಾಖೆಗೆ ಸಲ್ಲಿಸಬೇಕು.

  • ಯಾರಿಗೆ ಅನ್ವಯ, ಹೇಗೆ?

ಈ ಯೋಜನೆಯನ್ನು ರಾಷ್ಟ್ರೀಕೃತ ಬ್ಯಾಂಕ್​ಗಳ ಸಹಯೋಗದಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ರಾಜ್ಯದ ವಿಶ್ವವಿದ್ಯಾಲಯ ಅಥವಾ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯ. ವಿದ್ಯಾಭ್ಯಾಸದ ಅವಧಿಗೆ ಪೂರ್ಣ ಬಡ್ಡಿ ಸಹಾಯಧನವನ್ನು ಸರ್ಕಾರದಿಂದ ಬ್ಯಾಂಕ್​ಗೆ ಪಾವತಿಸಲಾಗುತ್ತದೆ. ಕೋರ್ಸ್​ನ ನಂತರ ಸಾಲದ ಅಸಲು ಮತ್ತು ಬಡ್ಡಿಯನ್ನು ಕಂತುಗಳ ಮೂಲಕ ವಿದ್ಯಾರ್ಥಿಗಳೇ ಪಾವತಿಸಬೇಕು.

  • ಯಾರು ಅರ್ಹರು?

ಭಾರತೀಯನಾಗಿರಬೇಕು, ದ್ವಿತೀಯ ಪಿಯುಸಿ ಅಥವಾ 10+2 ಕೋರ್ಸ್​ನಲ್ಲಿ ಶೇ.50ರಷ್ಟು ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ. ಮಿತಿ (ತಹಸೀಲ್ದಾರ್​ರಿಂದ ಕುಟುಂಬದ ವರಮಾನ ದೃಢೀಕರಣ ಪತ್ರ)

  • ಉದ್ದೇಶ

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಿಸುವುದು

ರಾಜ್ಯದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಭವಿಷ್ಯ ಉಜ್ವಲಗೊಳಿಸುವುದು

ಕನಿಷ್ಠ 50 ಸಾವಿರ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡುವುದು

ಹೆಚ್ಚಿನ ಮಾಹಿತಿಗೆ: ಕಾಲೇಜು ಶಿಕ್ಷಣ ಇಲಾಖೆ, 2ನೇ ಮಹಡಿ, ತಾಂತ್ರಿಕ ಶಿಕ್ಷಣ ಭವನ, ಅರಮನೆ ರಸ್ತೆ, ಬೆಂಗಳೂರು – 560 001, ವೆಬ್​ಸೈಟ್: http://www.dce.kar.nic.in

 ನಿರೂಪಣೆ: ಭಾಗ್ಯ ಚಿಕ್ಕಣ್ಣ
@

  • ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನದ ಆ್ಯಪ್‌.

13 Dec, 2016
*ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ಕಲಿತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ‘ಸ್ವಾಧ್ಯಾಯ’ ಎಂಬ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಪಠ್ಯ, ವಿಡಿಯೊ ಪಾಠ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಈ ಆ್ಯಪ್‌ ಮೂಲಕ ಮೊಬೈಲ್‌ನಲ್ಲೇ ಪಡೆದು ಅಧ್ಯಯನ ಮಾಡಬಹುದಾಗಿದೆ. ಮೊಬೈಲ್ ಆಧಾರಿತ ಅಧ್ಯಯನವನ್ನು ಉತ್ತೇಜಿಸಲು ನುರಿತ ಸಾಫ್ಟವೇರ್‌ ಉದ್ಯೋಗಿಗಳು ಈ ಆ್ಯಪ್‌ ರೂಪಿಸಿದ್ದಾರೆ.

*ಆ್ಯಪ್‌ನಲ್ಲಿ ಇರುವುದು: 

150ಕ್ಕಿಂತಲೂ ಹೆಚ್ಚು ವಿಡಿಯೊ ಪಾಠಗಳು, 500 ಸಂಭವನೀಯ  ಪ್ರಶ್ನೆಗಳು (ಉತ್ತರ ಸಹಿತ), 350ಕ್ಕೂ ಹೆಚ್ಚು ಹಿಂದಿನ ಪರೀಕ್ಷೆಗಳ ಪ್ರಶ್ನೆಗಳು, ಆಯ್ದ ವಿಷಯಗಳ ಮೇಲೆ ಟಿಪ್ಪಣಿಗಳು ಇವೆ. ಆಫ್‌ಲೈನ್‌ನಲ್ಲೂ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ.

(ಮಾಹಿತಿಗೆ: www.m-swadhyaya.com

ಸಂಪರ್ಕ ಸಂಖ್ಯೆ: 91088 54441)

How do Hackers Hack Bank Accounts and Personal Information? 

.

  • How do Hackers Hack Bank Accounts and Personal Information? 

The prevailing perception that it is almost impossible to hack credit cards, debit cards, or net banking passwords, which is true to an extent. Today I will discuss with you why hacking bank account information is tough and considered to be almost impossible. We will also discuss the different, contemporary methods that hackers use to hack bank accounts.
Almost everybody uses the internet nowadays to pay bills, book reservations and tickets, purchase items, or simply to transfer money. All of these online transactions involve money, meaning they’re using banking information, credit or debit card payments, or simply net banking. Most banks use SSL (Secured Sockets Layer) connection and at least 128 or 256 bit encryption for online banking and transaction purposes. An additional layer of security that companies are introducing is called “transaction PIN layer” which means that for each and every online transaction you have to enter your password, and that during transactions you have to enter a PIN, a type of password between 4 and 8 characters in length. Thus, banks do a lot of work to protect your credentials from the eyes of the world that may wish to gain access to your vital information.

Below, examples will illustrate to you how powerful the encryption method is:

# 40 bit encryption means there are 2^40 possible keys that could fit into the lock that holds your account information. That means there are billions of possible keys and using brute force is not an option. The only thing left now is a dictionary and rainbow attack. But it’s not only the security measure that banks use to secure information.

# 128 bit encryption means there are 2^88 times as many key combinations that are possible for 40 bit encryption. That means a computer would require exponentially more processing power and time than a 40-bit encryption to find the correct key.

That’s a very powerful method of encrypting data sent from your machine to bank machine. But it’s all useless once your system has been compromised or hacked.

 Now we’re going to discuss how all these security encryption can be bypassed and your system can be compromised online. There are several methods for exploiting such account information. Note: This is for educational purposes only 

  • Some of them are:

1. Phishing: Phishing is a technique used to hack password and login details of a website. Phish pages are simply fake pages that look the original webpage where you’re taking the information from. The only difference between a phish page and the original page is the address bar link (for a normal user), redirection post, and get method (inside source for advanced users). How do you identify a fake link? Just check the address bar URL for a fake page or Phish page. It will be showing a different URL than the original. You can install a web security tool bar in your browser (like AVG and Crawler web security tool bars) to detect the phishing automatically, and to stop your browser from visiting Phishing pages.

 2. Trojans: Trojans are a type of virus that steals your information. It can come in many forms like keyloggers or RATs (remote administration tools). A keylogger monitors all the keys that you have pressed on your physical keyboard, stores them in a log, and sends the details to hackers. RATs are an advanced form of keylogger that remotely monitors all your activities, whereas a keylogger is simply a functionality. Using RAT, a hacker can connect to your system anonymously, without your information when you are online. RATs have a huge list of functionalities and they are the best type of hacking tools available on the market. Now, how do you protect yourself from a keylogger? Just keep your antivirus software updated and install a keyscrambler that encrypts your keystrokes. Unfortunately, once the RAT enters your system you cannot do anything other than formatting your system. An RATs attack can only can be prevented before it enters in your system. For RAT prevention, please do not download any software or keygens online. Also avoid downloading freewares from new websites, only use certified websites like CNET, filehippo, etc. Avoid testing fake hack tools because most hacking tools have keylogger and RATs attached to them. Test it under secured conditions like on Virtual Users. 

 3. Session Hijacking: Most of us use wireless networks to access the internet and data flow in the form of packets and channels. We know that wireless networks are easier to hack due to their weak encryption. When hackers hack wireless networks, they take control of the internet data transfer and redirect the user to their intended path. Suppose you visit Gmail or Facebook, a hacker gains access and then he redirects you to somewhere on the page and captures your account details. Packet sniffing is another way to hack account information and credentials using the wireless networks. Hackers capture packets and decrypt information to get data in the form of plain text. Now how do you prevent this? The solution is also relatively simple, you just need to hide your SSID and BSSID from being discovered by the other networks. Leave the SSID or BSSID empty. Now hackers will not be able to discover your wireless router in order to hack it.

Student tracking system ಅಲ್ಲಿ ಆಧಾರ್ ಸಂಖ್ಯೆಯನ್ನು ಅಳವಡಿಸುವ ವಿಧಾನ.

.
👬👬👬👬👬👬

👬👬*Student tracking system ಅಲ್ಲಿ ಆಧಾರ್ ಸಂಖ್ಯೆಯನ್ನು ಅಳವಡಿಸುವ ವಿಧಾನ.*

👉ಮೊದಲಿಗೆ user id ಮತ್ತು password ಹಾಕಿ login ಆಗಿ.

👉ಅನಂತರ ಮುಖ್ಯ ಪುಟದಲ್ಲಿ reports /graphs ಎಂಬ option ಗೆ ಹೋಗಿ, 

👉ಅದರಲ್ಲಿ serach aadhar card student report ಮೇಲೆ click ಮಾಡಿರಿ. 

👉ಅನಂತರ ನಿಮ್ಮ ಶಾಲೆಯ ಹೆಸರನ್ನು ಆಯ್ಕೆ ಮಾಡಿ,with aadhar card select ಮಾಡಿ, 

👉ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ ತಪ್ಪಿದ್ದರೆ ಸರಿಪಡಿಸಿ update ಕೊಡಿ. 

👉With out aadhar select ಮಾಡಿ search ಕೊಡಿ. ಅದರಲ್ಲಿ ಆಧಾರ್ ಸಂಖ್ಯೆಯನ್ನು ಸೇರಿಸದ ಮಕ್ಕಳ list ಬರುವುದು, ಕೊನೆಯ ಸಾಲಿನಲ್ಲಿ 0 ಎಂಬ ಸಂಖ್ಯೆ ಇದೆ.ಅದರ ಮೇಲೆ 2 ಬಾರಿ mouse ಮೂಲಕ click ಕೊಡಿ.ಆಗ ಅಲ್ಲಿ blue ಬಣ್ಣ ಬರುವುದು. ಅಲ್ಲಿ ಮಕ್ಕಳ ಆಧಾರ್ ಸಂಖ್ಯೆಯನ್ನು ನಮೂದಿಸಿ update ಕೊಡಿ.

🎄🎄🎄🎄🎄🎄🎄🎄🎄
 *ಆನ್ ಲೈನ್ ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾಯಿಸಿಕೊಳ್ಳಿ*
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಲಿಂಗ, ವಿಳಾಸ, ಜನ್ಮ ದಿನಾಂಕ, ಮೊಬೈಲ್ ನಂಬರ್, ಇ-ಮೇಲ್ ಐಡಿಯಲ್ಲೇನಾದ್ರೂ ತಪ್ಪುಗಳಿದ್ರೆ ಅದನ್ನು ಆನ್ ಲೈನ್ ನಲ್ಲೇ ಸರಿಪಡಿಸಿಕೊಳ್ಳಬಹುದು. ವಿಳಾಸ ಬದಲಾವಣೆಯನ್ನು ಕೂಡ ಮಾಡಿಕೊಳ್ಳಬಹುದು.
ಇದಕ್ಕಾಗಿ ನೀವು UIADI ಪೋರ್ಟಲ್ ನಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಆದ್ರೆ ಮೊಬೈಲ್ ನಂಬರ್ ಬದಲಾವಣೆ ಮತ್ತು ಲಿಂಗ ಬದಲಾವಣೆಗೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ.

✍Shivu Y

👉 *ಮೊದಲು UIADI ಅಧಿಕೃತ ವೆಬ್ ಸೈಟ್ ಗೆ ವಿಸಿಟ್ ಮಾಡಿ.*

https://ssup.uiadi.gov.in/web/guest/update

👉 *ಆಧಾರ್ ಡಿಟೇಲ್ಸ್ ಅಪ್ ಲೋಡ್ ಎಂಬುದರ ಮೇಲೆ ಕ್ಲಿಕ್ ಮಾಡಿ.*

👉 *ವನ್ ಟೈಮ್ ಪಾಸ್ ವರ್ಡ್ (ಓಟಿಪಿ) ಜನರೇಟ್ ಮಾಡಲು ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ.*

👉 *ಓಟಿಪಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುತ್ತದೆ.*

👉 *ಓಟಿಪಿ ಬಂದ ಬಳಿಕ ಅದನ್ನು ವೆರಿಫಿಕೇಶನ್ ಬಾಕ್ಸ್ ನಲ್ಲಿ ನಮೂದಿಸಿ.*

👉 *ಆಗ ಹೆಸರು ಬದಲಾವಣೆ, ಜನ್ಮದಿನಾಂಕ, ಲಿಂಗ, ವಿಳಾಸ ಬದಲಾವಣೆ ಹೀಗೆ ವಿವಿಧ ಆಯ್ಕೆಗಳು ಬರುತ್ತವೆ.*

👉 *ಅಲ್ಲಿ ನಿಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಿ.*

👉 *ನಿಮ್ಮ ಹೊಸ ವಿಳಾಸದ ವಿವರವನ್ನು ಭರ್ತಿ ಮಾಡಿ.*

👉 *ಮುಂದಿನ ಹಂತದಲ್ಲಿ ನೀವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.*

👉 *ನಿಮಗೆ ಎರಡು ಬಿಪಿಓ ಸರ್ವೀಸ್ ಪ್ರೊವೈಡರ್ ಸೆಲೆಕ್ಷನ್ ಇದ್ದು, ಅದರಲ್ಲಿ ಒಂದನ್ನು ಕ್ಲಿಕ್ ಮಾಡಿ.*

👉 *ಕೊನೆಗೆ ಅಂತಿಮವಾಗಿ ಸಲ್ಲಿಸಬಹುದು.*

👉 *ಪ್ರಕ್ರಿಯೆ ಪೂರ್ಣಗೊಂಡ ನಂತರ ಯು ಆರ್ ಎನ್ ನಂಬರ್ ದೊರೆಯುತ್ತದೆ.*

👉 *ಬದಲಾವಣೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಈ ನಂಬರ್ ಅನ್ನು ನೆನಪಿನಲ್ಲಿಟ್ಟುಕೊಳ್ಳಿ*

Your bank in your mobile. ಮೊಬೈಲ್ನಲ್ಲೇ ನಿಮ್ಮ ಬ್ಯಾಂಕ್. 

.*ಮೊಬೈಲ್​ನಲ್ಲೇ ಬ್ಯಾಂಕ್!*

ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿ ನಗದು ರಹಿತ ವಹಿವಾಟಿಗೆ ಒತ್ತು ನೀಡುತ್ತಿರುವ ಈ ಹೊತ್ತಿನಲ್ಲಿ ಯುಪಿಐ (ಯುನಿಕ್ ಪೇಮೆಂಟ್ ಇಂಟರ್ಫೇಸ್) ಎಂಬ ಮೊಬೈಲ್ ಆಪ್ ವರದಾನವಾಗಿದೆ. ಎಟಿಎಂಗಳ ಮುಂದೆ ಕ್ಯೂ ನಿಲ್ಲದೆ, ಬ್ಯಾಂಕ್ಗಳಿಗೆ ಅಲೆದಾಟ ನಡೆಸದೆ, ಹ್ಯಾಕರ್ಗಳ ಕಾಟವೂ ಇಲ್ಲದೆ ಒಂದೇ ಒಂದು ಮೊಬೈಲ್ ಫೋನ್ನಲ್ಲೇ ದಿನನಿತ್ಯ 1 ಲಕ್ಷ ರೂ.ವರೆಗೆ ವಹಿವಾಟ ನಡೆಸುವ ಸುವರ್ಣಾವಕಾಶವನ್ನು ಈ ಯುಪಿಐ ಆಪ್ ಸಾಧ್ಯವಾಗಿಸಿದೆ. ಹಳ್ಳಿಯಿಂದ-ದಿಲ್ಲಿವರೆಗೆ ಎಲ್ಲಿ ಬೇಕಾದರೂ, ಯಾರು ಬೇಕಾದರೂ ಬಳಸಲು ಅವಕಾಶವಿರುವ ಈ ಸೌಲಭ್ಯದ ವಿವರ ಇಲ್ಲಿದೆ.

* ಏನಿದು ಯುಪಿಐ?*

ವಿಶಿಷ್ಟ ಪಾವತಿ ಅಂತರ ಸಂಪರ್ಕ ಅಪ್ಲಿಕೇಷನ್ (ಯುಪಿಐ) ಎನ್ನುವುದು ನಮ್ಮಲ್ಲಿರುವ ಸ್ಮಾರ್ಟ್ ಫೋನ್ ಮೂಲಕ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಲು, ಹಣ ಪಡೆದುಕೊಳ್ಳಲು ಹಾಗೂ ವಿವಿಧ ಬಿಲ್ಗಳನ್ನು ಪಾವತಿ ಮಾಡಲು ಬಿಡುಗಡೆ ಮಾಡಿರುವ ಆಪ್. ಇದರ ಬಳಕೆಗೆ ಗ್ರಾಹಕರು ಬ್ಯಾಂಕ್ ಖಾತೆಯ ಹೆಚ್ಚಿನ ವಿವರಗಳನ್ನು ನೀಡುವ ಅಗತ್ಯವಿಲ್ಲ. ಐಎಫ್ಎಸ್ ಕೋಡ್, ನೆಟ್ಬ್ಯಾಂಕಿಂಗ್ ಅಥವಾ ವಾಲೆಟ್ ಯಾವುದರ ಪಾಸ್ವರ್ಡ್ ಕೂಡ ನೀಡಬೇಕಿಲ್ಲ. ಹಿಂದಿನ ಆರ್ಬಿಐ ಗವರ್ನರ್ ರಘುರಾಂ ರಾಜನ್ ಕಳೆದ ಏಪ್ರಿಲ್ನಲ್ಲೇ ಈ ಸೇವೆಯನ್ನು ಪರಿಚಯಿಸಿದ್ದು, ಆಗಸ್ಟ್ನಿಂದಲೇ ಇದು ಕಾರ್ಯಾಚರಣೆಯಲ್ಲಿದೆ.

*ಬಳಸುವುದು ಹೇಗೆ?*

ವಸ್ತುಗಳ ಖರೀದಿ ಅಥವಾ ಯಾವುದೇ ಸೇವೆಗೆ ಹಣ ಪಾವತಿಸಬೇಕಾದಲ್ಲಿ ಸ್ಮಾರ್ಟ್ಫೋನ್ ಮೂಲಕ ಖರೀದಿ ಎಂದು ಒತ್ತುತ್ತಿದ್ದಂತೆ ಯುಪಿಐ ಪೇಮೆಂಟ್ ಲಿಂಕ್ ಕಾಣಿಸುತ್ತದೆ. ಇದಕ್ಕೆ ಕ್ಲಿಕ್ ಮಾಡುತ್ತಿದ್ದಂತೆಯೇ ಯುಪಿಐ ಆಪ್ ತೆರೆದುಕೊಳ್ಳುತ್ತದೆ. ಇದರಲ್ಲಿ ವಹಿವಾಟಿನ ಮಾಹಿತಿ ಲಭ್ಯವಿರುತ್ತದೆ. ಗ್ರಾಹಕರು ಎಲ್ಲವನ್ನೂ ಗಮನಿಸಿ ಸೆಕ್ಯೂರ್ ಪಿನ್ ಹಾಕುತ್ತಿದ್ದಂತೆಯೇ ಖರೀದಿ ಅಥವಾ ಪಾವತಿ ಪೂರ್ಣಗೊಳ್ಳುತ್ತದೆ. ವಸ್ತುಗಳ ಮಾರಾಟ ಮಾಡುವಾಗಲೂ ಅಷ್ಟೇ ಮಾರಾಟಗಾರ ತನ್ನ ಗ್ರಾಹಕನ ಯುನಿಕ್ ವರ್ಚುವಲ್ ಅಡ್ರೆಸ್ಗೆ (ಇ-ಮೇಲ್) ಮನವಿ ಕಳುಹಿಸುತ್ತಾನೆ. ಗ್ರಾಹಕ ಓಕೆ ಎಂದು ನಮೂದಿಸುತ್ತಿದ್ದಂತೆ ಹಣ ಪಾವತಿ ಪೂರ್ಣಗೊಳ್ಳುತ್ತದೆ.


*ಉಳಿದವುಗಳಿಗಿಂತ ಭಿನ್ನ:*

 ದೇಶದಲ್ಲಿ ಚಾಲ್ತಿಯಲ್ಲಿರುವ ಉಳಿದ ಎಲೆಕ್ಟ್ರಾನಿಕ್ ಪೇಮೆಂಟ್ ವ್ಯವಸ್ಥೆಗಳೆಂದರೆ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ (ಎನ್ಇಎಫ್ಟಿ), ಇಮಿಡಿಯೇಟ್ ಪೇಮೆಂಟ್ ಸರ್ವಿಸ್(ಐಎಂಪಿಎಸ್) ಅಥವಾ ರಿಯಲ್ ಟೈಮ್ ಗ್ರಾಸ್ ಸೆಟಲ್ವೆುಂಟ್ (ಆರ್ಟಿಜಿಎಸ್). ಇವುಗಳನ್ನು ಬಳಕೆ ಮಾಡಬೇಕಾದರೆ ಗ್ರಾಹಕರು ಬ್ಯಾಂಕ್ನ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಬೇಕು. ಆದರೆ ಯುಪಿಐನಲ್ಲಿ ಇದರ ಅಗತ್ಯವಿರುವುದಿಲ್ಲ. ಅಲ್ಲದೆ ದಿನದ 24 ಗಂಟೆಯೂ ವಹಿವಾಟು ನಡೆಸಬಹುದಾಗಿದೆ. ಅದೇ ಎನ್ಇಎಫ್ಟಿ, ಐಎಂಪಿಎಸ್ ಮೂಲಕವಾದರೆ ಬ್ಯಾಂಕ್ಗಳ ಕಾರ್ಯಾಚರಣೆ ಅವಧಿಯಲ್ಲಿ ಮಾತ್ರ ವಹಿವಾಟು ಸಾಧ್ಯ. ಜತೆಗೆ ಪ್ರತಿಯೊಂದು ವಹಿವಾಟಿಗೂ ಐಎಫ್ಎಸ್ ಕೋಡ್ ನೀಡುವುದೂ ಅಗತ್ಯವಾಗಿರುತ್ತದೆ.

*ಸೇವೆ ಆರಂಭದ ಉದ್ದೇಶ ಹ್ಯಾಕರ್ಗಳ ಆತಂಕವಿಲ್ಲ*

ಗ್ರಾಹಕರು ಆಪ್ನಲ್ಲಿ ಇ-ಮೇಲ್ ಅಡ್ರೆಸ್ ಮಾತ್ರ ನೀಡಿರುತ್ತಾರೆ. ಬ್ಯಾಂಕ್ ಖಾತೆಯ ಬಗೆಗೆ ಉಳಿದ ಯಾವುದೇ ಮಾಹಿತಿ ನೀಡದಿರುವುದರಿಂದ ಹ್ಯಾಕ್ ಆಗಿ ಮಾಹಿತಿ ಸೋರಿಕೆಯಾಗುವ ಭಯವಿರುವುದಿಲ್ಲ.

*ಯಾವ್ಯಾವ ಬ್ಯಾಂಕ್ಗಳಲ್ಲಿದೆ?*

ಸದ್ಯ 18 ಬ್ಯಾಂಕುಗಳು ಯುಪಿಐ ಆಪ್ ಸೇವೆ ಆರಂಭಿಸಿವೆ. ಆಂಧ್ರಾ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಭಾರತೀಯ ಮಹಿಳಾ ಬ್ಯಾಂಕ್, ಕೆನರಾ ಬ್ಯಾಂಕ್, ಡಿಸಿಬಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಿಜೆಎಸ್ಬಿ ಸಹಕಾರಿ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಕರ್ನಾಟಕ ಬ್ಯಾಂಕ್, ಯುಸಿಒ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಪ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್

*ಎಲ್ಲೆಲ್ಲಿ ಬಳಸಬಹುದು?*

ಉಬರ್ ಹಾಗೂ ಓಲಾ ಟ್ಯಾಕ್ಸಿ ಸೇವೆ, ಝೊಮಾಟೋ ಹಾಗೂ ಫುಡ್ ಪಾಂಡಾದಂತಹ ಆನ್ಲೈನ್ ಆಹಾರ ಮಾರಾಟ ಸೇವೆಗಳು, ಬಿಗ್ ಬ್ಯಾಸ್ಕೆಟ್ನಂತಹ ಆನ್ಲೈನ್ ದಿನಸಿ ಅಂಗಡಿಗಳು ಯುಪಿಐ ಪಾವತಿ ಸ್ವೀಕರಿಸುತ್ತವೆ. ಕೆಲ ಐಟಿ ಸಂಸ್ಥೆಗಳು ಕೂಡ ಈ ವ್ಯವಸ್ಥೆ ಅಳವಡಿಸಿಕೊಂಡಿದೆ. ಇದರೊಂದಿಗೆ, ಜನರು ತಮಗೆ ಬೇಕಾದವರ ಖಾತೆಗೆ ಸುಲಭವಾಗಿ ಹಣ ವರ್ಗಾವಣೆ ಮಾಡಲು ಸಾಧ್ಯವಿದೆ. ದಿನಸಿ ಖರೀದಿ, ಆಟೋ ರಿಕ್ಷಾದವರಿಗೆ ಪಾವತಿ, ತರಕಾರಿ, ದೋಭಿ ಮತ್ತಿತರ ನಿತ್ಯದ ಖರ್ಚುವೆಚ್ಚಗಳನ್ನೂ ಈ ಆಪ್ ಮೂಲಕವೇ ನಿಭಾಯಿಸಬಹುದಾಗಿದೆ.
*ಆಪ್ ಅಳವಡಿಕೆ ಹೇಗೆ?*

ಗೂಗಲ್ ಪ್ಲೇಸ್ಟೋರ್ನಲ್ಲಿ ಬೇರೆ ಬೇರೆ ಬ್ಯಾಂಕುಗಳ ಯುಪಿಐಗಳು ಲಭ್ಯವಿದೆ. ಇವುಗಳನ್ನು ಒಂದು ಆಯ್ಕೆ ಮಾಡಿಕೊಂಡು ಮೊದಲು ಡೌನ್ಲೋಡ್ ಮಾಡಿಕೊಳ್ಳಬೇಕು. ಆಪ್ ಕೇಳುವ ಮಾಹಿತಿ ನೀಡಿ ಲಾಗಿನ್ ಆಗಬೇಕು. ನಂತರ, ಅಲ್ಲಿ ವರ್ಚುವಲ್ ವಿಳಾಸ (ಇ-ಮೇಲ್ ವಿಳಾಸ) ನೀಡಬೇಕು. ಬ್ಯಾಂಕ್ ಖಾತೆ ಸಂಖ್ಯೆ ದಾಖಲಿಸಬೇಕು. ಆನಂತರ ತಕ್ಷಣದ ಹಣ ಪಾವತಿಯನ್ನು ದೃಢೀಕರಿಸುವ ನಾಲ್ಕು ಸಂಖ್ಯೆಯ ಎಂ-ಪಿನ್ ಸೆಟ್ ಮಾಡಬೇಕು. (ನಿಮ್ಮ ಮೊಬೈಲ್ಗೆ ಖರೀದಿ ದೃಢೀಕರಿಸುವ ಬರುವ ನಾಲ್ಕು ಸಂಖ್ಯೆಯ ಸಂದೇಶ ) ಸಂಖ್ಯೆಯನ್ನು ನಮೂದಿಸಿ ಬಳಕೆ ಆರಂಭಿಸಬಹುದು. ನಂತರ ವಹಿವಾಟು ನಡೆಸಲು, ಹಣ ವರ್ಗಾವಣೆ, ಟ್ಯಾಕ್ಸಿ ಮತ್ತಿತರರ ಅವಶ್ಯಕತೆಗಳ ಪಾವತಿಗೆ ಕೂಡ ಈ ಎಂ-ಪಿನ್ ಅಗತ್ಯ.

ನ್ಯಾಯಾಲಯದ ತೀರ್ಪುಗಳು

  • ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಸಮಾನ ಪಾಲಿಲ್ಲ: ಸುಪ್ರೀಂಕೋರ್ಟ್‌.

ಉದಯವಾಣಿ,

ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ, 2005ಕ್ಕಿಂತ ಮುಂಚೆ ತಂದೆ ಮೃತಪಟ್ಟಿದ್ದು, ತನ್ನ ಪಾಲಿನ ಆಸ್ತಿಯನ್ನು ಗಂಡುಮಕ್ಕಳಿಗೆ ವಿಲ್‌ ಮಾಡಿಟ್ಟಿದ್ದರೆ ಹೆಣ್ಣುಮಕ್ಕಳು ತವರುಮನೆಯ ಆಸ್ತಿಯಲ್ಲಿ ಯಾವುದೇ ಪಾಲು ಕೇಳುವಂತಿಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆಗೆ 2005ರಲ್ಲಿ ಮಾಡಿರುವ ತಿದ್ದುಪಡಿ ಉತ್ತರಾನ್ವಯವಾಗುತ್ತದೆಯೇ ಹೊರತು ಪೂರ್ವಾನ್ವಯವಾಗುವುದಿಲ್ಲ.

ಪಿತ್ರಾರ್ಜಿತ ಆಸ್ತಿಗೆ ಗಂಡು ಹಾಗೂ ಹೆಣ್ಣುಮಕ್ಕಳು ಸಮಾನ ಪಾಲುದಾರರು ಎಂದು 2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಈ ಸಂಬಂಧಿ ವ್ಯಾಜ್ಯಗಳು ಕೋರ್ಟುಗಳಲ್ಲಿ ಹೆಚ್ಚೆಚ್ಚು ದಾಖಲಾಗುತ್ತಿವೆ. ಮದುವೆಯಾದ ಹೆಣ್ಣುಮಕ್ಕಳು ತವರುಮನೆಯ ಆಸ್ತಿಯಲ್ಲಿ ತನಗೆ ಪಾಲು ಬೇಕೆಂದು ಸೋದರರ ವಿರುದ್ಧ ಕೋರ್ಟಿಗೆ ಹೋಗುತ್ತಿದ್ದಾರೆ. ಆದರೆ, ಈ ವಿಷಯದಲ್ಲಿ ಕೆಲವೆಡೆ ಗೊಂದಲಕಾರಿ ತೀರ್ಪುಗಳು ಹೊರಬಂದಿವೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ಈ ಬಗ್ಗೆ ಸ್ಪಷ್ಟ ಆದೇಶವೊಂದನ್ನು ನೀಡಿದ್ದು, ಅದರಲ್ಲಿ ಬಹುತೇಕ ಗೊಂದಲಗಳು ಬಗೆಹರಿದಿವೆ. ಈ ತೀರ್ಪಿನ ಪ್ರಕಾರ 2005ಕ್ಕಿಂತ ಮೊದಲೇ ತಂದೆ ಮೃತಪಟ್ಟಿದ್ದರೆ ಹೆಣ್ಣು ಮಕ್ಕಳಿಗೆ ತವರುಮನೆಯ ಆಸ್ತಿಯಲ್ಲಿ ಸಮಾನ ಪಾಲು ಸಿಗುವುದಿಲ್ಲ. ಒಂದು ವೇಳೆ ತಂದೆ ತನ್ನ ಪಾಲಿನ ಆಸ್ತಿಯನ್ನೂ ಗಂಡುಮಕ್ಕಳಿಗೆ ವಿಲ್‌ ಮಾಡಿ 2005ಕ್ಕಿಂತ ಮೊದಲು ಮೃತಪಟ್ಟಿದ್ದರೆ ಆಗ ತವರುಮನೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಯಾವ ಪಾಲೂ ಸಿಗುವುದಿಲ್ಲ.

ಕಳೆದ ಅಕ್ಟೋಬರ್‌ 16ರಂದು ಸರ್ವೋಚ್ಚ ನ್ಯಾಯಾಲಯ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಶಾಸನ-2005 ಇದರ ಕುರಿತು ಬಹಳ ಮಹತ್ವದ ತೀರ್ಪು ನೀಡಿದೆ. ಸದ್ರಿ ಶಾಸನದ 2005ರ ತಿದ್ದುಪಡಿ ಪೂರ್ವಾನ್ವಯ (Retrospective) ಉಳ್ಳದ್ದೇ ಅಥವಾ ಕೇವಲ ಉತ್ತರಾನ್ವಯ (Prospective)ವೇ ಎಂಬುದರ ಕುರಿತು ದೇಶದ ಹಲವು ಉಚ್ಚ ನ್ಯಾಯಾಲಯಗಳಲ್ಲಿ ದಾವೆಗಳಿದ್ದವು. ಈ ಪ್ರಶ್ನೆಯ ಇತ್ಯರ್ಥಕ್ಕಾಗಿ ದಾವೆಗಳು ಇರುವ ಹೊತ್ತಿನಲ್ಲಿ ಒಮ್ಮತದ ಅಭಿಪ್ರಾಯವಿಲ್ಲದಿರುವುದರಿಂದ, ಸರ್ವೋಚ್ಚ ನ್ಯಾಯಾಲಯ ಈ ಕುರಿತು ಅಂತಿಮ ಹಾಗೂ ಅಧಿಕೃತ ಅಭಿಪ್ರಾಯ ನೀಡಿದೆ. 

ಮುಖ್ಯವಾಗಿ ಹಿಂದೂ ಅವಿಭಕ್ತ ಕುಟುಂಬದಲ್ಲಿ ಮಗಳಿಗೆ ಮಗನಿಗಿರುವಂತೆ ಆಸ್ತಿಯಲ್ಲಿ ಜನ್ಮಸಿದ್ಧ ಹಾಗೂ ಸರಿಸಮಾನ ಹಕ್ಕು ಇರುತ್ತದೆ. ಮಗ ಮತ್ತು ಮಗಳು ಜನ್ಮಸಿದ್ಧ ಹಕ್ಕುಳ್ಳ ಸಮಷ್ಟಿ ಸದಸ್ಯರು (Coprceners) ಎಂದು ಈ ತಿದ್ದುಪಡಿ ಶಾಸನ ಹೇಳುತ್ತದೆ ಎಂಬುದಾಗಿ ನ್ಯಾಯಾಲಯ ಈ ತೀರ್ಪಿನಲ್ಲಿ ಘೋಷಿಸಿದೆ. ಅಲ್ಲದೆ, ಈ ಶಾಸನವು ಕೇವಲ ಉತ್ತರಾನ್ವಯವಾಗಿದೆ ಎಂದೂ ಸ್ಪಷ್ಟಪಡಿಸಿದೆ. 

  • ಹಿನ್ನೆಲೆ ಏನು? ತೀರ್ಪು ಏನು?

ಸುಮಾರು 1956ಕ್ಕಿಂತ ಹಿಂದೆ ಹಿಂದೂ ಕುಟುಂಬದ ಹೆಣ್ಣುಮಕ್ಕಳಿಗೆ ತಾವು ಹುಟ್ಟಿ ಬೆಳೆದ ಕುಟುಂಬದ ಆಸ್ತಿಯಲ್ಲಿ ಕಾಯಿದೆಯನ್ವಯ ಜಾರಿಗೊಳಿಸಬಹುದಾದ ಯಾವುದೇ ಹಕ್ಕುಗಳಿರಲಿಲ್ಲ. ಪ್ರತಿಯೊಬ್ಬ ಮಗನೂ ಕುಟುಂಬದಲ್ಲಿ ಸಮಷ್ಟಿ ಸದಸ್ಯ (Coparcener), ಆಸ್ತಿಯಲ್ಲಿ ಆತನಿಗೆ ಜನ್ಮಸಿದ್ಧ ನಿರ್ದಿಷ್ಟ ಹಕ್ಕುಗಳಿದ್ದವು. ತಂದೆಯು ಕುಟುಂಬದ ಯಜಮಾನ, ಆತನಿಗೆ ಸಮನಾಗಿ ಮಗನೂ ಆಸ್ತಿಯಲ್ಲಿ ಪಾಲು ಪಡೆಯಬಹುದು. ಆದರೆ ತಾಯಿ, ಪತ್ನಿ ಮತ್ತು ಮಗಳಿಗೆ ಹಕ್ಕು ಇರಲಿಲ್ಲ. ಅವರು ಗಂಡು ಸದಸ್ಯರೊಂದಿಗೆ ಕೇವಲ ಉಂಡು ಬದುಕುವ ಸದಸ್ಯರು ಎಂಬುದಾಗಿತ್ತು.

ಗಂಡು ಮತ್ತು ಹೆಣ್ಣಿನ ನಡುವಿನ ಈ ವಿಧದ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ ಸಂಸತ್ತು 1956ರಲ್ಲಿ ಹಿಂದೂ ಉತ್ತರಾಧಿಕಾರ ಶಾಸನವನ್ನು ರಚಿಸಿತು. ಆದರೆ ಈ ಶಾಸನದ ಪ್ರಕಾರವೂ ಮಗ ಮತ್ತು ಮಗಳು ಕುಟುಂಬದ ಆಸ್ತಿಯಲ್ಲಿ ಸರಿಸಮಾನ ಪಾಲುದಾರರಲ್ಲ. ಈ ಶಾಸನದ ಕರಡು ಸಿದ್ಧಪಡಿಸಿದ ಕಾರ್ಯದರ್ಶಿ ಬೆನಗಲ್‌ ನರಸಿಂಗರಾಯರು ಮತ್ತು ಅದನ್ನು ಸಂಸತ್ತಿನಲ್ಲಿ ಮಂಡಿಸಿದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಕಲ್ಪನೆಯ ಆದರ್ಶ ಹಿಂದೂ ಉತ್ತರಾಧಿಕಾರ ಶಾಸನದ ವಿರೂಪಪಡಿಸಿದ ಹೃಸ್ವರೂಪ ಮಾತ್ರ ಅದಾಗಿತ್ತು. ಈ ಕಾಯಿದೆಯಂತೆ ಹಿಂದೂ ಕುಟುಂಬದ ಉತ್ತರಾಧಿಕಾರಿ ತಂದೆಯು ವೀಲುನಾಮೆ ಬರೆಯದೆ ಮೃತಪಟ್ಟರೆ ಮಾತ್ರ ಕುಟುಂಬದ ಆಸ್ತಿಯಲ್ಲಿ ಆತನಿಗೆ ಇರುವ ಆಂಶಿಕ ಹಕ್ಕು ಗಂಡು ಮತ್ತು ಹೆಣ್ಣುಮಕ್ಕಳು, ತಾಯಿ ಮತ್ತು ಪತ್ನಿಗೆ ಸರಿಸಮಾನವಾಗಿ ಬರತಕ್ಕದ್ದು. ಉದಾಹರಣೆಗೆ, ಒಬ್ಬನಿಗೆ ತಾಯಿ, ಪತ್ನಿ; ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಇರುವುದಾದರೆ, ಆತನು ಮತ್ತು ಇಬ್ಬರು ಗಂಡುಮಕ್ಕಳು ಜನ್ಮಸಿದ್ಧ ಹಕ್ಕುಳ್ಳ ಸಮಷ್ಟಿ ಸದಸ್ಯ (Coparcener) ರಾಗಿರುತ್ತಾರೆ. ಆದುದರಿಂದ ಪ್ರತಿಯೊಬ್ಬನೂ ಮೂರನೇ ಒಂದು ಅಂಶ ಆಸ್ತಿಗೆ ಹಕ್ಕುದಾರರು. ಯಜಮಾನ (ತಂದೆ) ಮೃತಪಟ್ಟಾಗ ಆತನದ್ದಾದ ಮೂರನೇ ಒಂದು ಅಂಶದ ಆಸ್ತಿಯಲ್ಲಿ ತಾಯಿ, ಪತ್ನಿ ಮತ್ತು ಗಂಡು ಹಾಗೂ ಹೆಣ್ಣುಮಕ್ಕಳು ಸರಿಸಮಾನ ಪಾಲುದಾರರಾಗಿ ಪಾಲು ಪಡೆಯತಕ್ಕದ್ದು. ಯಜಮಾನ ತಂದೆ, ಆತನ ಮೂರನೇ ಒಂದು ಅಂಶವನ್ನು ವೀಲನಾಮೆ ಮೂಲಕ ಅವನಿಚ್ಛೆಯಂತೆ ಯಾರಿಗೂ ಕೊಡಬಹುದು. ಆ ಕಾರಣದಿಂದ ಬಹು ಮಂದಿ ತಂದೆಯಂದಿರು ಮೃತಪಡುವ ಮುಂಚೆಯೇ ವೀಲುನಾಮೆ ಬರೆದು ಅವರ ಆಂಶಿಕ ಹಕ್ಕನ್ನು ಗಂಡುಮಕ್ಕಳಿಗೆ ಮಾತ್ರ ಮೀಸಲಿಡುತ್ತಾರೆ ಅಥವಾ ಇಡುತ್ತಿದ್ದರು. 

ಈ ಲೋಪವನ್ನು ನಿವಾರಿಸಿ ಗಂಡು ಮತ್ತು ಹೆಣ್ಣುಮಕ್ಕಳೊಳಗೆ ಸರಿಸಮಾನವಾಗಿ ಕುಟುಂಬದ ಆಸ್ತಿಯ ಹಂಚಿಕೆಯನ್ನು ಸಾಧಿಸುವ ಉದ್ದೇಶದಿಂದ 1956ರ ಶಾಸನವನ್ನು 2005ರಲ್ಲಿ ತಿದ್ದುಪಡಿಗೊಳಿಸಲಾಯಿತು. ಈ ತಿದ್ದುಪಡಿ ಶಾಸನ 2005ರ ಸೆಪ್ಟಂಬರ್‌ 9ರಂದು ಜಾರಿಗೆ ಬಂದಿದೆ. ಈ ಶಾಸನವು ಆ ದಿನದಿಂದ ಮುಂದಕ್ಕೆ ಮಾತ್ರ ಅನ್ವಯಿಸತಕ್ಕದ್ದೆಂದು ಬರೆದಿರುವುದರಿಂದ, ಅದು ಪೂರ್ವಾನ್ವಯವಾಗಲಾರದು. ಆದುದರಿಂದ ದಿನಾಂಕ 9-9-2005ರಿಂದ ಈಚೆಗೆ ಮಾತ್ರ ಗಂಡು ಮತ್ತು ಹೆಣ್ಣುಮಕ್ಕಳು ಕುಟುಂಬದ ಆಸ್ತಿಯಲ್ಲಿ ಸರಿಸ ಮಾನ ಹಕ್ಕುಳ್ಳವರು. ಆ ದಿನಾಂಕಕ್ಕಿಂತ ಮೊದಲು ಹೆಣ್ಣುಮಕ್ಕಳಿಗೆ ಕುಟುಂಬದ ಆಸ್ತಿಯಲ್ಲಿರುತ್ತಿದ್ದ ಹಕ್ಕು ಗಂಡುಮಕ್ಕಳಿಗಿಂತ ಕಡಿಮೆಯಾ ಗಿದ್ದುದರಿಂದ, ಸರಿಸಮಾನ ಹಕ್ಕು ಪಡೆಯಲು ಸಾಧ್ಯವಿಲ್ಲ. 

ಹಿಂದೂ ಕುಟುಂಬದ ಯಜಮಾನನು ಈ ತಿದ್ದುಪಡಿ ಶಾಸನ ಜಾರಿಗೊಳ್ಳುವ ಮುಂಚೆಯೇ, ಅಂದರೆ 2005ರ ಸೆಪ್ಟೆಂಬರ್‌ 9ಕ್ಕಿಂತ ಮುಂಚೆ, ಮೃತಪಟ್ಟಿದ್ದರೆ ಹೆಣ್ಣುಮಕ್ಕಳು ಈ ಶಾಸನದಡಿಯಲ್ಲಿ ಮಗನಿಗೆ ಸರಿಸಮಾನವಾಗಿ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ. ಈ ಶಾಸನ ಜಾರಿಗೊಳ್ಳುವ ದಿನದಂದು ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿರಲೇಬೇಕು. ಈ ತಿದ್ದುಪಡಿ ಶಾಸನದ ವ್ಯಾಪ್ತಿಯಲ್ಲಿ ಕುಟುಂಬದ ಯಜಮಾನನ ಪತ್ನಿ ಮತ್ತು ತಾಯಿ ಬರುವುದಿಲ್ಲ. ಈ ತಿದ್ದುಪಡಿ ಶಾಸನವು ನ್ಯಾಯಾಲಯದಲ್ಲಿ ಈಗ ತನಿಖೆಯಲ್ಲಿರುವ ದಾವೆಗಳಿಗೂ ಅನ್ವಯಿಸುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟ ಘೋಷಣೆ ಇದೆ. ಈ ಶಾಸನಕ್ಕೆ ಪೂರ್ವಾನ್ವಯವಿದೆ ಎಂಬ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. 

ಅಂದರೆ, 2005ಕ್ಕಿಂತ ಮುಂಚೆಯೇ ತಂದೆ ಮೃತಪಟ್ಟಿದ್ದರೆ ಆತನ ಹೆಣ್ಣುಮಕ್ಕಳು ಸೋದರರಿಂದ ಆಸ್ತಿಯಲ್ಲಿ ಸಮಾನ ಪಾಲು ಕೇಳುವಂತಿಲ್ಲ. ಬದಲಿಗೆ, ಒಟ್ಟು ಕುಟುಂಬದ ಆಸ್ತಿಯಲ್ಲಿ ತಂದೆಯ ಪಾಲಿನ ಆಸ್ತಿ ಏನಿರುತ್ತಿತ್ತೋ ಅದರಲ್ಲಿ ಪಾಲು ಕೇಳಬಹುದು. ಆದರೆ, 2005ಕ್ಕಿಂತ ಮುಂಚೆ ತಂದೆ ಸಾಯುವ ಮೊದಲು ತನ್ನ ಆಸ್ತಿ ಗಂಡುಮಕ್ಕಳಿಗೆ ಸಲ್ಲತಕ್ಕದ್ದು ಎಂದು ಬರೆದಿಟ್ಟಿದ್ದರೆ ಆ ಆಸ್ತಿಯಲ್ಲೂ ಪಾಲು ಕೇಳುವಂತಿಲ್ಲ. ವಿಲ್‌ ಬರೆಯದೆ ಮೃತಪಟ್ಟಿದ್ದರೆ ಮಾತ್ರ ತಂದೆಯ ಪಾಲಿನ ಆಸ್ತಿಯಲ್ಲಿ ಪಾಲು ಕೇಳಬಹುದು. 

ಇನ್ನೊಂದು ಪ್ರಮುಖ ಅಂಶವೆಂದರೆ, 2005ಕ್ಕಿಂತ ಮುಂಚೆ ಮೃತಪಟ್ಟ ತಂದೆಯ ಆಸ್ತಿಯಲ್ಲಿ 2005ರ ನಂತರ ಪಾಲು ಕೇಳುವು ದಾದರೆ ಹೆಣ್ಣುಮಕ್ಕಳು ಬದುಕಿರಬೇಕು. ಅವರು ಮೃತಪಟ್ಟಿದ್ದರೆ ಅವರ ಪರವಾಗಿ ಅವರ ಮಕ್ಕಳು ಪಾಲು ಕೇಳುವಂತಿಲ್ಲ.

  • ತಾರತಮ್ಯ ಇನ್ನೂ ಇದೆ.

ನನಗನ್ನಿಸುವಂತೆ, ಕುಟುಂಬದ ಯಜಮಾನನ ಪತ್ನಿ ಮತ್ತು ತಾಯಿ, ಯಜಮಾನನ ಮೃತ್ಯುವಿನ ಬಳಿಕವೂ ಕುಟುಂಬದ ವಾಸದ ಮನೆಯಲ್ಲಿ ವಾಸಿಸುವ ಮತ್ತು ಆತನಕ ಇದ್ದಂತೆ ಸಕಲ ಸೌಕರ್ಯ ಸೌಲಭ್ಯಗಳನ್ನು ಪಡೆಯುತ್ತ ಜೀವಿಸುವ ಹಕ್ಕು ಹಾಗೂ ಅಧಿಕಾರವನ್ನು ಒಟ್ಟು ಆಸ್ತಿಯ ಜವಾಬ್ದಾರಿಯಲ್ಲಿ ಪಡೆಯುವಂತೆ ಕೂಡ ತಿದ್ದುಪಡಿ ಶಾಸನದಲ್ಲಿ ಸ್ಪಷ್ಟ ಘೋಷಣೆ ಇರಬೇಕಿತ್ತು. ಪತ್ನಿ ಮತ್ತು ತಾಯಿಯ ಜೀವನದ ಹಕ್ಕನ್ನು ಶಾಸನ ದೃಢಪಡಿಸಿದ್ದರೆ ತಾರತಮ್ಯವನ್ನು ಸಂಪೂರ್ಣ ಹೋಗಲಾಡಿಸಬಹುದಿತ್ತು. ಆ ತನಕ ಕಾಯಿದೆಯ ಉದ್ದೇಶ ಅಸಂಪೂರ್ಣ.

@

  • ಅಪ್ಪ, ಅಮ್ಮನ ಸ್ವಯಾರ್ಜಿತ ಆಸ್ತಿಯಲ್ಲಿ ಮಗನಿಗೆ ಹಕ್ಕಿಲ್ಲ Tuesday, 29.11.2016,

  ವಿಜಯವಾಣಿ ಸುದ್ದಿಜಾಲ    

  • ಹೆತ್ತವರ ಕೃಪೆಯ ಮೇಲಷ್ಟೇ ಮಗ, ಸೊಸೆ ಮನೆಯಲ್ಲಿ ವಾಸಿಸಬಹುದು.

ನವದೆಹಲಿ: ಮದುವೆಯಾಗಿರಲಿ ಅಥವಾ ಮದುವೆಯಾಗಿರದೇ ಇರಲಿ, ಪುತ್ರನಿಗೆ ತನ್ನ ಹೆತ್ತವರ ಸ್ವಯಾರ್ಜಿತ ಮನೆಯಲ್ಲಿ ವಾಸಿಸುವ ಕಾನೂನುಬದ್ಧ ಹಕ್ಕು ಇಲ್ಲ, ಅವರ ಕೃಪೆಯ ಮೇರೆಗೆ ಮಾತ್ರವೇ ಆತ ಆ ಮನೆಯಲ್ಲಿ ವಾಸವಾಗಿರಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ(29-11-16) ತೀರ್ಪು ನೀಡಿದೆ.

ಸೌಹಾರ್ದಯುತ ಬಾಂಧವ್ಯ ಇರುವವರೆಗೂ ಹೆತ್ತವರು ಮಗನಿಗೆ ತಮ್ಮ ಸ್ವಯಾರ್ಜಿತ ಮನೆಯಲ್ಲಿ ವಾಸವಾಗಿರಲು ಅವಕಾಶ ನೀಡಬಹುದು. ಆದರೆ ಅದರ ಅರ್ಥ ಜೀವಮಾನಪೂರ್ತಿ ಆತನ ಹೊರೆಯನ್ನು ಪಾಲಕರು ಹೊತ್ತುಕೊಳ್ಳಬೇಕು ಎಂದು ಅಲ್ಲ ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿದೆ.

ವಿಚಾರಣಾ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಒಬ್ಬ ವ್ಯಕ್ತಿ ಮತ್ತು ಆತನ ಪತ್ನಿ ಮಾಡಿದ್ದ ಮೇಲ್ಮನವಿಯನ್ನು ವಜಾ ಮಾಡುತ್ತಾ ದೆಹಲಿ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಮೇಲ್ಮನವಿದಾರನ ಹೆತ್ತವರ ಪರವಾಗಿ ತೀರ್ಪು ನೀಡಿತ್ತು. ತಮ್ಮ ಸ್ವಾಧೀನದಲ್ಲಿ ಇರುವ ಮನೆಯ ಮಹಡಿಯನ್ನು ತೆರವುಗೊಳಿಸುವಂತೆ ತನ್ನ ಪುತ್ರ ಹಾಗೂ ಸೊಸೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೆತ್ತವರು ವಿಚಾರಣಾ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದ್ದರು.

ಪಾಲಕರಿಬ್ಬರು ಹಿರಿಯ ನಾಗರಿಕರಾಗಿದ್ದು, ತಮ್ಮ ಜೊತೆಗೆ ವಾಸವಾಗಿರುವ ಮಗ ಮತ್ತು ಸೊಸೆ ತಮ್ಮ ಜೀವನವನ್ನು ‘ನರಕ’ವನ್ನಾಗಿ ಮಾಡಿದ್ದಾರೆ ಎಂದು ಹೆತ್ತವರು ನ್ಯಾಯಾಲಯದಲ್ಲಿ ದೂರಿದ್ದರು. ತಮಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ತೆರವುಗೊಳಿಸುವಂತೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಸಾರ್ವಜನಿಕ ಪ್ರಕಟಣೆಯನ್ನು ನೀಡಲಾಗಿತ್ತು. ಆ ಬಳಿಕ ಅವರ ಕಿರುಕುಳ ಜಾಸ್ತಿಯಾಯಿತು ಎಂದು ಹೆತ್ತವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆಪಾದಿಸಿದ್ದರು.