ವಿಶ್ವದ 100 ಪ್ರಭಾವಿಗಳು

image

ರಾಜನ್ , ಸಾನಿಯಾ, ಪ್ರಿಯಾಂಕಾ, ಪಿಚೈ.  
ನ್ಯೂಯಾರ್ಕ್‌ (ಪಿಟಿಐ):  22-4- 16.
ಟೈಮ್‌ ನಿಯತ ಕಾಲಿಕವು ‘ವಿಶ್ವದ 100 ಪ್ರಭಾವಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌, ಟೆನಿಸ್ ತಾರೆ ಸಾನಿಯಾ ಮಿರ್ಜಾ, ನಟಿ ಪ್ರಿಯಾಂಕಾ ಛೋಪ್ರಾ, ಗೂಗಲ್‌ ಸಿಇಒ ಭಾರತ ಮೂಲದ ಸುಂದರ್ ಪಿಚೈ ಮತ್ತು ಪ್ಲಿಪ್‌ಕಾರ್ಟ್‌ ಸ್ಥಾಪಕರಾದ ಬಿನ್ನಿ ಬನ್ಸಾಲ್‌ ಹಾಗೂ ಸಚಿನ್‌ ಬನ್ಸಾಲ್‌ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಮೆರಿಕದ ಗೀತೆ ರಚನೆಕಾರ ಲಿನ್‌ ಮಾನ್ಯುಯೆಲ್‌ ಮಿರಾಂಡ, ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡೆ, ಆಸ್ಕರ್‌ ವಿಜೇತ ಲಿಯಾನಾರ್ಡೊ ಡಿ ಕ್ಯಾಪ್ರಿಯೊ ಹೆಸರು ಸಹ ಪಟ್ಟಿಯಲ್ಲಿದೆ. ‘ಭಾರತದ ಭವಿಷ್ಯತ್ತಿನ ಜ್ಞಾನವುಳ್ಳ ಬ್ಯಾಂಕರ್‌’ ಎಂದು ರಾಜನ್‌ ಅವರನ್ನು ಬಣ್ಣಿಸಿರುವ ಟೈಮ್‌, ‘ಆರ್ಥಿಕ ಸಂತರ’ ಅಪರೂಪದ ತಳಿ ಎಂದು ವರ್ಣಿಸಿದೆ.  ಜಾಗತಿಕ ಆರ್ಥಿಕ ಕುಸಿತದ ಅವಧಿ ಯಲ್ಲೂ ಭಾರತವನ್ನು ಪ್ರವರ್ದಮಾನಕ್ಕೆ ಬರುತ್ತಿರುವ ಮಾರುಕಟ್ಟೆಯ ನಕ್ಷತ್ರವಾಗಿ  ಮಾಡುವಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಹೊಗಳಿದೆ.

2003ರಿಂದ 2006ರವರೆಗೆ ಐಎಂ ಎಫ್‌ನ ಮುಖ್ಯ ಆರ್ಥಿಕ ತಜ್ಞರಾಗಿದ್ದ ರಾಜನ್‌ ಅವರು ಆರ್ಥಿಕ ಕುಸಿತದ ಬಗ್ಗೆ  ಮೊದಲೇ ಊಹಿಸಿದ್ದರು ಎಂದಿದೆ.

ಮೋದಿ ಹೆಸರಿಲ್ಲ: ಪ್ರಧಾನಿ ನರೇಂದ್ರ ಮೋದಿ ಹೆಸರು ಕಳೆದ ವರ್ಷ ಟೈಮ್‌ ನಿಯತಕಾಲಿಕದ ಪ್ರಭಾವಿಗಳ ಪಟ್ಟಿಯ ಲ್ಲಿತ್ತು. ಆದರೆ ಈ ಬಾರಿ ಟೈಮ್‌ ಸಂಪಾ ದಕೀಯ ಮೋದಿ ಹೆಸರನ್ನು  ಸೇರಿಸಿಲ್ಲ.