ಆರೋಗ್ಯ ಮಾಹಿತಿ

ನೀರು ಮತ್ತು ಆರೋಗ್ಯ:
124 ರೋಗಗಳನ್ನು ತಡೆಯಲು 4 ಸರಳ ನಿಯಮಗಳು, ಇವುಗಳನ್ನು ಪಾಲೋ ಮಾಡಿದರೆ ಆಸ್ಪತ್ರೆಯ ಮೆಟ್ಟಿಲು ಹತ್ತಬೇಕಾಗಿಲ್ಲ…!

‘ಆರೋಗ್ಯವೇ ಮಹಾಭಾಗ್ಯ’ ಎಂಬ ಮಾತು ಅಕ್ಷರಶಃ ಸತ್ಯ… ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗೆಗಿನ ಅರಿವು ಹೆಚ್ಚಾಗುತ್ತಿದೆ. ಆರೋಗ್ಯವಾಗಿರುವುದಕ್ಕೆ ಬೇಕಾದ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಿಮಗೆ ತಿಳಿಯದ ವಿಷಯವೇನೆಂದರೆ… ಈಗ ಹೇಳುವ 4 ನಿಯಮಗಳನ್ನು ಆಚರಿಸಿದರೆ ಸಾಕು ಸುಮಾರು 124 ರೋಗಗಳನ್ನು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು. ಈ 4 ನಿಯಮಗಳು ನಾವು ಕುಡಿಯುವ ನೀರಿಗೆ ಸಂಬಂಧಿಸಿದಂತಹವುಗಳು ಆಗಿರುದೇ ವಿಶೇಷ…! ಅವನ್ನು ಒಮ್ಮೆ ನೋಡೋಣ ಬನ್ನಿ…..
ತಿನ್ನುವುದಕ್ಕೆ 40 ನಿಮಿಷಗಳ ಮುಂಚೆ, ತಿಂದ ನಂತರ 1 ಗಂಟೆಯವರೆಗೂ ನೀರು ಕುಡಿಯಬೇಡಿ:
ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್…. ಯಾವುದಾದರೂ ಆಹಾರವನ್ನು ತಿಂದ ನಂತರ 1 ಗಂಟೆಯ ಕಾಲ ನೀರು ಕುಡಿಯಬೇಡಿ, ಏಕೆಂದರೆ ನಾವು ತಿಂದ ಆಹಾರ ಹೊಟ್ಟೆಯಲ್ಲಿನ ಅನ್ನನಾಳದ ಒಳಗೆ ಹೊಗುತ್ತದೆ. ಅಲ್ಲಿ ಹೈಡ್ರೋಕ್ಲೋರಿಕ್ ಯಾಸಿಡ್ ಸೂಕ್ಷ್ಮ ಕ್ರಿಮಿಗಳನ್ನು ಸಾಯಿಸಿ, ಸ್ವಲ್ಪ ಆಹಾರವನ್ನು ಯಾಂತ್ರಿಕವಾಗಿ ಚೂರು ಮಾಡುತ್ತದೆ. ಕಡಿಮೆ PH ಮೌಲ್ಯವಿರುವ ಹೈಡ್ರೋಕ್ಲೋರಿಕ್ ಯಾಸಿಡ್, ಕಿಣ್ವಗಳಿಗೆ ಉಪಯೋಗವಾಗಿ ಆಹಾರ ಜೀರ್ಣವಾಗುವುದರಿಂದ ಶಕ್ತಿ ಬಿಡುಗಡೆಯಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಆಹಾರ ತಿಂದ ತಕ್ಷಣ ನೀರು ಕುಡಿದರೆ ಜೀರ್ಣ ವ್ಯವಸ್ಥೆ ನಿಧಾನವಾಗುತ್ತದೆ. ನೀರು ಹೆಚ್ಚಾಗಿ ಸೇರುವುದರಿಂದ ಹೈಡ್ರಾಲಿಕ್ ಯಾಸಿಡ್, ಹೈಡ್ರೋಕ್ಲೋರಿಕ್ ಯಾಸಿಡ್’ಗಳು ಡೈಲ್ಯೂಟ್ ಆಗುತ್ತವೆ. ಆದ್ದರಿಂದ ವ್ಯರ್ಥ ಪದಾರ್ಥಗಳು ಹಾಗೆಯೇ ಉಳಿಯುತ್ತವೆ. ಇವು ಅನೇಕ ರೋಗಗಳಿಗೆ ಕಾರಣವಾಗುತ್ತವೆ. ಹಾಗಾಗಿ ತಿನ್ನುವುದಕ್ಕೆ 20 ನಿಮಿಷಗಳ ಮುಂಚೆ, ತಿಂದ 1 ಗಂಟೆಯ ವರೆಗೂ ನೀರು ಕುಡಿಯಬೇಡಿ.
ನೀರನ್ನು ಯಾವಾಗಲೂ ಗಟಗಟ ಎಂದು ಅತುರಾತುರಾವಾಗಿ ಕುಡಿಯಬೇಡಿ:
ನೀರನ್ನು ಒಂದೇಸಾರಿ ಗಟಗಟ ಎಂದು ಕುಡಿಯದೇ.. ಟೀ, ಕಾಫೀ ಕುಡಿದಂತೆ ಸಿಫ್ ಮಾಡುತ್ತಾ ಕುಡಿಯಬೇಕು. ಹೀಗೆ ಮಾಡುವುದರಿಂದ ಪ್ರತಿ ಸಾರಿ ನೀರು ಬಾಯಿಯಲ್ಲಿ ಉತ್ಪತ್ತಿಯಾದ ಲಾಲಾರಸ ಸ್ವಲ್ಪ ಪ್ರಮಾಣದಲ್ಲಿ ಶರೀರದಲ್ಲಿ ಹೋಗುತ್ತದೆ. ಆದ್ದರಿಂದ ಸಮಸ್ಯೆ ಇರುವುದಿಲ್ಲ. ಹಾಗಲ್ಲದೆ ನೀರನ್ನು ಗಟಗಟ ಕುಡಿದರೆ… ಅದರ ಮೇಲೆ ಶರೀರದ ಹೈಡ್ರೋಕ್ಲೋರಿಕ್ ಯಾಸಿಡ್ ಅಧಿಕ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಸಂಧರ್ಭದಲ್ಲಿ ಅಧಿಕ ಎಸಿಡಿಟಿ ಉಂಟಾಗುತ್ತದೆ. ಇದು ರಕ್ತದ ಮೇಲೆ ಪರಿಣಾಮ ಬೀರುತ್ತದೆ. ಇದರ ಮೂಲಕ ಅನೇಕ ರೋಗಗಳು ಬರುವ ಸಾಧ್ಯತೆಗಳಿವೆ. ಅದಕ್ಕೆ ನೀರನ್ನು ಯವಾಗಲೂ ಗಟಗಟ ಕುಡಿಯಬೇಡಿ.
ಕೂಲ್ ವಾಟರ್, ಐಸ್ ವಾಟರ್ ಕುಡಿಯಬೇಡಿ:
ಹೆಚ್ಚು ಕೂಲ್ ಆಗಿರುವ ನೀರನ್ನು ಕುಡಿಯಬೇಡಿ ಇದು ಬಹಳ ಅಪಾಯಕಾರಿ ಏಕೆಂದರೆ ಶರೀರದಲ್ಲಿ ಪ್ರತಿ ಸಮಯದಲ್ಲೂ ಒಂದು ಕ್ರಿಯೆ ನಡೆದು ದೇಹವೆಲ್ಲವೂ ಬಿಸಿಯಾಗಿರುತ್ತದೆ. ಈ ಸಮಯದಲ್ಲಿ ಕೂಲ್ ವಾಟರ್ ಕುಡಿದರೆ ಎರಡು ವಿರುದ್ದವಾಗಿ ಟೆಂಪರೇಚರ್ ದೇಹದ ಮೇಲೆ ಪರಿಣಾಮ ಬೀರುತ್ತದೆ. ಕುಡಿಯಲೇ ಬೇಕೆಂದಿದ್ದರೆ ಮಡಿಕೆಯಲ್ಲಿನ ನೀರು ಕುಡಿದರೆ ಒಳ್ಳೆಯದು. ಅಷ್ಟೆ ಆಗಲಿ ಐಸ್ ವಾಟರ್ ಕುಡಿಯಬೇಡಿ.
ನಿದ್ದೆಯಿಂದ ಎದ್ದ ತಕ್ಷಣ 2-3 ಗ್ಲಾಸ್ ನೀರನ್ನು ಕುಡಿಯಬೇಕು:
ಈಗೀಗ ಈ ಸೂತ್ರವನ್ನು ಬಹಳ ಜನರು ಆಚರಿಸುತ್ತಿದ್ದಾರೆ. ನಿದ್ದೆ ಮಾಡುವುದರಿಂದ ಒಂದು ಮೂರು ಲೋಟ ನೀರು ಕುಡಿಯಬೇಕು. ಆ ನೀರು ಶರೀರದಲ್ಲಿ ಸೇರಿಕೊಂಡಿರುವ ವ್ಯರ್ಥವನ್ನು ಮಲವಿಸರ್ಜನೆ ರೂಪದಲ್ಲಿ ಹೊರ ಹಾಕುತ್ತದೆ. 3 ನಿಮಿಷಗಳಲ್ಲಿ ನಂಬರ್ -2 ಕೆಲಸ ಪೂರ್ತಿಯಾಗುವಂತೆ ಮಾಡುತ್ತದೆ. ಒಂದೇ ಸಾರಿ ಶರೀರದ ವ್ಯರ್ಥಪದಾರ್ಥಗಳನ್ನು ವಿಸರ್ಜಿಸುವವರಿಗೆ ರೋಗಬರುವ ಅವಕಾಶ ಬಹಳ ಕಡಿಮೆಯಾಗಿರುತ್ತದೆ.
ಇವು ನೀರಿನೊಂದಿಗೆ ಇರುವ 4 ಸೂತ್ರಗಳನ್ನು ತಪ್ಪದೇ ಕ್ರಮವಾಗಿ ಆಚರಿಸಿದರೇ ಆರೋಗ್ಯ ರಕ್ಷಣೆಯಾಗುತ್ತದೆ.

Some Facts About Human Body

*Some Facts About Human Body*

Number of bones – 206

Number of muscles – 639

Number of kidneys – 2

Number of milk teeth – 20

Number of ribs – 24 (12 pairs)

Number of chambers in the heart – 4

Largest artery – Aorta

Normal Blood pressure – 120 – 80

Ph of blood – 7.4

Number of vertebrae in the spine – 33

Number of vertebrae in the Neck – 7

No of bones in middle Ear – 6

Number of bones in Face – 14

Number of bones in Skull – 22

Number of bones in Chest – 25

Number of bones in Arms – 6

Number of bones in each human ear – 3

Number of muscles in the human arm – 72

Number of pumps in heart – 2

Largest organ – Skin

Largest gland – Liver

Smallest cell – Blood cell

Biggest cell – Egg cell (ovum)

Smallest bone – Stapes

First transplanted organ – Heart

Average length of small intestine – 7 m

Average length of large intestine – 1.5 m

Average weight of new born baby – 2.6 kg.

Pulse rate in one minute – 72 times

Body Temperature – 36.9o C (98.4o F)

Average blood volume – 4 – 5 liters

Average life of RBC – 120 days

Pregnancy period – 280 days

Number of bones in human foot – 33

Number of bones in each wrist – 8

Number of bones in hand – 27

Largest endocrine gland – Thyroid

Largest lymphatic organ – Spleen

Largest cell – Nerve cell

Largest part of brain – Cerebrum
Largest &

strongest bone – Femur

Smallest muscle – Stapedius (Middle ear )

Number of chromosomes in human cell – 46 (23
pairs)

Number of bones in New born body – 300

Largest muscle – Buttock (Gluteus Maximus)

ಮಧುಮೇಹಕ್ಕೆ ಮನೆಯಲ್ಲೇ ಪರಿಹಾರ

ಮಧುಮೇಹಕ್ಕೆ ಮನೆಯಲ್ಲೇ ಪರಿಹಾರ

| ಡಾ. ವೆಂಕಟ್ರಮಣ ಹೆಗಡೆ.

~ ಅಗಸೆಬೀಜವು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

~ ಹಸಿಶುಂಠಿಯು ನೋವು ನಿವಾರಕವಾಗಿದ್ದು ಕಾಲುನೋವು ಶಮನಕ್ಕೆ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ.

~ ಬೇಯಿಸಿದ ಅಥವಾ ಹಸಿಯಾದ ಕಡಲೆಕಾಯಿ ಬೀಜವನ್ನು (ಶೇಂಗಾ) ಹೆಚ್ಚಾಗಿ ಉಪಯೋಗಿಸಬೇಕು.

~ ಅಲಸಂದಿಕಾಳು, ಕೆಂಪು ಕಡಲೆ ಹಾಗೂ ಇನ್ನಿತರೆ ಮೊಳಕೆಕಾಳನ್ನು ತಿನ್ನುವುದು ಮಧುಮೇಹಿಗಳಿಗೆ ಉತ್ತಮ.

~ ಮೆಂತ್ಯೆಯನ್ನು ಮಜ್ಜಿಗೆಯೊಂದಿಗೆ ಸೇರಿಸಿ ಉಪಯೋಗಿಸಬೇಕು.

~ ಕಪ್ಪು ಎಳ್ಳು ಹಾಗೂ ಬಿಳಿ ಎಳ್ಳುಗಳ ಹೆಚ್ಚಿನ ಬಳಕೆಯು ಸಕ್ಕರೆ ಕಾಯಿಲೆ ಇರುವವರಿಗೆ ಆರೋಗ್ಯ ವರ್ಧನೆಗೆ ಸಹಕಾರಿ.

~ ಗ್ರೀನ್ ಟೀಯ ಬಳಕೆ (ಅದಕ್ಕೆ ಬೇಕಾದಲ್ಲಿ ನಿಂಬೆರಸ ಶುಂಠಿ ಮತ್ತು ಚಕ್ಕೆ ಪುಡಿಯನ್ನು ಸೇರಿಸಿಕೊಂಡು) ಮಾಡಿದಲ್ಲಿ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

~ ಪ್ರತಿದಿನ ಬೆಳಿಗ್ಗೆ ಅರ್ಧಗ್ಲಾಸ್ ಹಾಗಲಕಾಯಿಯ ರಸವನ್ನು ತೆಗೆದು ಅಥವಾ ಜ್ಯೂಸ ಮಾಡಿಕೊಂಡು ಕುಡಿಯುವುದು. ಇದರಿಂದ ಸಕ್ಕರೆ ಕಾಯಿಲೆ ಹತೋಟಿಗೆ ಬಂದು ಕಾಲು ಉರಿ, ಕಾಲು ಜೋಮು ಬರುವುದು. ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

~ ಹೀಗೆ ಈ ಮೇಲಿನಂತೆ ಸುಲಭವಾದ ವಿಧಾನಗಳನ್ನು ಅನುಸರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಹಾಗೆಯೇ ಇದರಿಂದ ಬರುವಂತಹ ಕಾಲು ಉರಿ, ಕಾಲು ಜೋಮು, ಕಾಲು ನೋವು ಇವುಗಳನ್ನು ಸಹ ಬಗೆಹರಿಸಿಕೊಳ್ಳಬಹುದು.

~ ಒಂದು ಪಾತ್ರೆಯಲ್ಲಿ ಅರ್ಧ ಚಮಚದಷ್ಟು ತ್ರಿಫಲಾ ಪೌಡರ್ ಹಾಗೂ ಅಷ್ಟೇ ಪ್ರಮಾಣದ ಅಮೃತ ಬಳ್ಳಿಯಪುಡಿಯನ್ನು ತೆಗೆದುಕೊಂಡು ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಹಾಕಿ ಸರಿಯಾಗಿ ಕದಕಬೇಕು. ಹೀಗೆ ತಯಾರಿಸಿಕೊಂಡಂತಹ ದ್ರವ್ಯವನ್ನು ಪ್ರತಿನಿತ್ಯ ಕುಡಿಯುತ್ತ ಬಂದಲ್ಲಿ ಸಕ್ಕರೆ ಪ್ರಮಾಣವನ್ನು ದೇಹದಲ್ಲಿ ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಸ್ವಲ್ಪ ಒಗರು ರುಚಿಯನ್ನು ಹೊಂದಿರುವ ಈ ಮಿಶ್ರಣವನ್ನು ಸೇವಿಸಿದ ನಂತರದಲ್ಲಿ ಬೇಕಾದಲ್ಲಿ ಅರ್ಧ ಲೋಟ ಬರಿಯ ಹಾಲನ್ನೂ ಸಹ ಕುಡಿಯಬಹುದು.

~ ಎರಡು ಬಾದಾಮಿ, ಅರ್ಧಚಮಚದಷ್ಟು ಕಲ್ಲಂಗಡಿ ಹಣ್ಣಿನ ಬೀಜಗಳು ಮತ್ತು ಒಂದು ಏಲಕ್ಕಿ (ಸಿಪ್ಪೆ ತೆಗೆದು)ಯನ್ನು ತರಿತರಿಯಾಗಿ ಜಜ್ಜಿಕೊಳ್ಳಬೇಕು. ಅದಕ್ಕೆ ಒಂದೊಂದು ಚಮಚ ತರಿಯಾಗಿ ಪೇಸ್ಟ್ ಮಾಡಿಟ್ಟುಕೊಂಡ ಬೂದು ಗುಂಬಳಕಾಯಿ ಹಾಗೂ ಬೆಟ್ಟದ ನೆಲ್ಲಿಕಾಯಿಯನ್ನು ಹಾಕಿ ಆ ಮಿಶ್ರಣಕ್ಕೆ ನೀರನ್ನು ಸೇರಿಸಿ ಕುಡಿಯಬೇಕು. ಪ್ರತಿನಿತ್ಯ ದಿನಕ್ಕೆ ಎರಡು ಬಾರಿಯಂತೆ ಆಹಾರಕ್ಕೆ ಮೊದಲು ಅಥವಾ ನಂತರದ ಒಂದು ತಾಸಿಗೆ ಕುಡಿಯುತ್ತ ಬಂದರೆ ಮಧುಮೇಹ ನಿಯಂತ್ರಣದಲ್ಲಿ ಬಂದು ಕಾಲಿನ ತೊಂದರೆಗಳು ಉಪಶಮನವಾಗುತ್ತವೆ.

~ ಕುದಿಯುತ್ತಿರುವ ನೀರಿಗೆ ಅರ್ಧ ಚಮಚ ಜ್ಯೇಷ್ಠಮಧು ಪೌಡರ್, ಅಷ್ಟೇ ಪ್ರಮಾದ ಶತಾವರಿ ಪುಡಿ ಹಾಗೂ ಸ್ವಲ್ಪ ಅಶ್ವಗಂಧ ಪುಡಿಯನ್ನು ಹಾಕಿ 5 ನಿಮಿಷ ಮಂದಗತಿಯ ಬೆಂಕಿಯಲ್ಲಿ ಕುದಿಯಲು ಬಿಡಬೇಕು. ನಂತರದಲ್ಲಿ ಅದನ್ನು ಕುಡಿಯಬೇಕು. ಹೀಗೆ ಪ್ರತಿದಿನ ಮಾಡುತ್ತ ಬಂದಲ್ಲಿ 30 ದಿನಗಳಲ್ಲಿ ಇದರ ಉತ್ತಮ ಪರಿಣಾಮಗಳು ತಿಳಿದು ಆರೋಗ್ಯ ಸಂರಚನೆಯಲ್ಲಿ ಅನುಕೂಲವಾಗುತ್ತದೆ.

* ಕೊನೇ ಹನಿ

1 ಚಮಚ ಜೇನುತುಪ್ಪ, 1 ಕಪ್ ಚಕೋತ ಹಣ್ಣಿನ ರಸ ಮತ್ತು 2 ಚಮಚ ಎಪಲ್ ಸಿಡೆರ್ ವಿನೆಗರ್ ಸೇರಿಸಿ ಪ್ರತಿನಿತ್ಯ ಆಹಾರದ ಮೊದಲು ಎರಡು ಬಾರಿ ಕುಡಿಯುತ್ತ ಬಂದಲ್ಲಿ ತೂಕ ಕಡಿಮೆಯಾಗುತ್ತದೆ.

(ಇದು ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ. ಇದೇ ಅಂತಿಮವಲ್ಲ. ಯಾವುದೇ ಆರೋಗ್ಯ ಸಮಸ್ಯೆಗೆ ತಜ್ಞವೈದ್ಯರನ್ನು ಸಂರ್ಪಸಲು ಮರೆಯಬೇಡಿ.)

ಕ್ರಿಮಿನಿವಾರಕ ಮನೆಮದ್ದು

| ಡಾ. ವೆಂಕಟ್ರಮಣ ಹೆಗಡೆ

ಜಂತುಹುಳುವಿನ ಭಾದೆ ತಪ್ಪಿಸಲು ಮತ್ತಷ್ಟು ಮನೆಮದ್ದುಗಳ ಪರಿಚಯ ಇಲ್ಲಿವೆ.

ಬೆಳ್ಳುಳ್ಳಿ : 5-6 ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ಹಾಲಿನಲ್ಲಿ ಕುದಿಸಿ ಸೇವಿಸಬೇಕು .

ಈರುಳ್ಳಿ : ಈರುಳ್ಳಿ ರಸವನ್ನು ಜೇನು ತುಪ್ಪದ ಜೊತೆ ಸೇವಿಸುದರಿಂದಲೂ ಕ್ರಿಮಿ ಬಾಧೆ ಕಡಿಮೆಯಾಗುತ್ತದೆ.

ನಿಂಬೆ ರಸ : ದಿನಕ್ಕೆ 3-4 ಬಾರಿ ನಿಂಬೆ ರಸವನ್ನು ಸೇವಿಸುತ್ತಾ ಬಂದರೆ ಕ್ರಿಮಿಬಾಧೆ ನಿವಾರಣೆಯಾಗುತ್ತದೆ.

ಹಾಗಲಕಾಯಿ : ದಿನನಿತ್ಯ 4-5 ಚಮಚ ಹಾಗಲಕಾಯಿ ರಸ ಮತ್ತು 1 ಲೋಟ ಮಜ್ಜಿಗೆಯನ್ನು ಖಾಲಿ ಹೊಟ್ಟೆಯಲ್ಲಿ ದಿನ ನಿತ್ಯ 7 ದಿನಗಳವರೆಗೆ ಸೇವಿಸಬೇಕು.

ಹಸಿ ತರಕಾರಿ ರಸಗಳು : ಸೌತೆಕಾಯಿ, ಬೀಟ್ರೂಟ್, ಕ್ಯಾರೆಟ್ ಸಿಹಿ ಕುಂಬಳಕಾಯಿ ಬೀಜಗಳನ್ನು ಪುಡಿ ಮಾಡಿ ಬಿಸಿ ನೀರಿಗೆ ಹಾಕಿ ಸೇವಿಸಬೇಕು.

ನೀರು:

ದಿನಕ್ಕೆ 3-5 ಲೀಟರ್ ವರೆಗೆ ಶುದ್ಧ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ’
ಯಾವುದೇ ತರಕಾರಿ ಹಣ್ಣುಗಳನ್ನು ಸೇವಿಸುವ ಮುನ್ನ ಅವುಗಳನ್ನು ಉಗುರುಬೆಚ್ಚಗಿನ ಉಪ್ಪು ನೀರಲ್ಲಿ ನೆನೆಸಿಟ್ಟು ನಂತರ ತೊಳೆದು ಬಳಸಬೇಕು.
ಆಡುಸೋಗೆ ಸೊಪ್ಪು:

ಈ ಸೊಪ್ಪಿನ ಹೂವುಗಳ ಕಷಾಯದ ಸೇವನೆಯಿಂದ ಕ್ರಿಮಿಬಾಧೆ ಕಡಿಮೆಯಾಗುತ್ತದೆ.
5-6 ದಿನಗಳು ಕೇವಲ ಹಣ್ಣು ತರಕಾರಿಗಳ ಸೇವನೆ ಹಾಗೂ ಏಳನೇ ದಿನ ಎನಿಮಾ ಚಿಕಿತ್ಸೆ (ಎನಿಮಾ ಚಿಕಿತ್ಸೆ: ಇದರಲ್ಲಿ ಗುದದ್ವಾರದಲ್ಲಿ ನಳಿಕೆಯ ಮುಖಾಂತರ ಶುದ್ಧವಾದ ಬೆಚ್ಚಗಿನ ಕುಡಿಯುವ ನೀರನ್ನು ಹರಿಸಿ , ಒಳಗಡೆ ಹಿಡಿದುಕೊಂಡು. ಕೆಲವು ಕ್ಷಣಗಳ ನಂತರ ತೆಳುವಾದ ಮಲವನ್ನು ದೇಹದಿಂದ ಹೊರ ಹಾಕುವಂತಹ ಸುಲಭ ಚಿಕಿತ್ಸೆ . ಮೊದಲು ತಜ್ಞರಿಂದ ಚಿಕಿತ್ಸೆ ಪಡೆದುಕೊಂಡು ನಂತರ ಸ್ವತಃ ಮನೆಯಲ್ಲಿಯೇ ಮಾಡಿಕೊಳ್ಳುವ ಚಿಕಿತ್ಸೆ.)
ವೈಯಕ್ತಿಕ ಸ್ವಚ್ಛತೆ :

ಬರಿಗಾಲಿನಲ್ಲಿ ಕೊಳಚೆ/ಕೆಸರು ಇರುವ ಜಾಗಗಳಲ್ಲಿ ಅಡ್ಡಾಡಬಾರದು, ಕೊಕ್ಕೆ ಹುಳುಗಳು ಚರ್ಮದ ಮೂಲಕ ದೇಹ ಸೇರುತ್ತವೆ.
ಶೌಚಾಲಯದ ಉಪಯೋಗದ ನಂತರ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು, ಮುಖ್ಯವಾಗಿ, ಆಹಾರ ತಯಾರಿಸುವವರು ಕೈ ಶುದ್ಧವಾಗಿಡಬೇಕು.
ಪ್ರತಿ ಬಾರಿ ಆಹಾರ ಸೇವನೆಯ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
ಲವಂಗ ಕಷಾಯ : ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ 10-15 ಲವಂಗಗಳನ್ನು ಹಾಕಿ ಅದನ್ನು 10 ನಿಮಿಷ ಮುಚ್ಚಿಟ್ಟು ನಂತರ ತಾಜಾ ಇರುವಾಗಲೇ ಸೇವಿಸಬೇಕು. ಒಂದು ವಾರ ಸೇವಿಸಿ.

ಕ್ಯಾರೆಟ್: ಬೆಳಿಗ್ಗೆ ಖಾಲಿ ಹೊಟ್ಟೆಗೆ ಚೆನ್ನಾಗಿ ತೊಳೆದು ತುರಿದಿರುವ ಗೆಜ್ಜರಿಗಳನ್ನು ಸೇವಿಸಿ .

ಅರಿಶಿಣ ಕೊಂಬು : ದಿನನಿತ್ಯ ಎರಡು ಬಾರಿ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿಣದ ಕೊಂಬಿನ ಪುಡಿಯನ್ನು ಹಾಕಿ ಸೇವಿಸಿ.

ಕೊನೇ ಹನಿ

ಪ್ರತಿದಿವಸ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಬೂದುಗುಂಬಳಕಾಯಿ ರಸ ಕುಡಿಯುವುದರಿಂದ ಆಸಿಡಿಟಿ ಕಡಿಮೆಯಾಗುವುದು.

ಇವುಗಳನ್ನು ಫ್ರಿಜ್ ನಲ್ಲಿ ಇಡಲೇಬಾರದು!

ಇವುಗಳನ್ನು ಫ್ರಿಜ್‌ನಲ್ಲಿ ಇಡಲೇಬೇಡಿ. ಏಕೆಂದರೆ?

ಕೆಲವು ಆಹಾರಗಳನ್ನು ರೆಫ್ರಿಜರೇಟರಿನಲ್ಲಿ ಇಡುವುದು ಧೀರ್ಘ ಸಮಯದವರೆಗೆ ತಾಜಾ ಆಗಿರಲು ನೆರವಾಗುತ್ತದೆ. ಆದರೆ ಕೆಲವು ಆಹಾರಗಳು ಫ್ರಿಜ್ಜಲ್ಲಿ ಇಟ್ಟರೆ ಹಾಳಾಗುತ್ತದೆ. ಕೆಲವು ಆಹಾರ ವಸ್ತುಗಳನ್ನು ಫ್ರಿಜ್ಜಲ್ಲಿ ಇಡುವ ಅಗತ್ಯವೇ ಇರುವುದಿಲ್ಲ. ಏಕೆಂದರೆ ಅವುಗಳಿಗೆ ಯಾವುದೇ ರೂಪದ ಬ್ಯಾಕ್ಟೀರಿಯ ಬರುವುದಿಲ್ಲ. ಬದಲಾಗಿ ಅವುಗಳನ್ನು ತಂಪಾದ ಮತ್ತು ಒಣಗಿದ ಸ್ಥಳಗಳಲ್ಲಿ ಅಂದರೆ ಕೋಣೆಯ ಉಷ್ಣತೆಯಲ್ಲಿ ಇಟ್ಟಲ್ಲಿ ಅವು ಇನ್ನೂ ಹೆಚ್ಚು ತಾಜಾವಾಗಿ ಇರುತ್ತವೆ. ಆದರೆ ಬೇಸಗೆಯಲ್ಲಿ ಕೋಣೆಯ ಉಷ್ಣತೆ ಅತ್ಯಧಿಕವಾಗಿರುವ ಕಾರಣ ಈ ವಾದ ಒಪ್ಪುವುದಿಲ್ಲ. ರೆಫ್ರಿಜರೇಟರಲ್ಲಿ ಇಡಬಾರದ ಆಹಾರ ವಸ್ತುಗಳ ವಿವರಗಳು ಇಲ್ಲಿವೆ.

ಬಟಾಟೆಗಳು

ಬಟಾಟೆಗಳನ್ನು ಫ್ರಿಜ್ಜಲ್ಲಿಟ್ಟರೆ ಅವುಗಳ ಫ್ಲೇವರ್ ಹಾಲಾಗುತ್ತದೆ ಮತ್ತು ಅದಕ್ಕೆ ಸ್ಟಾರ್ಚ್ ತಾಗುವ ಕಾರಣ ಬೇಗನೇ ಸಕ್ಕರೆ ರೂಪ ತಾಳುತ್ತದೆ. ಅವುಗಳನ್ನು ಕೋಣೆಯ ಉಷ್ಣತೆಯಲ್ಲಿ ಪೇಪರ್ ಬ್ಯಾಗಲ್ಲಿ ಹಾಕಿಡಬಹುದು. ಸ್ಟಾರ್ಚ್ ಸಕ್ಕರೆಯಾಗಿ ಪರಿಣಮಿಸಿದಾಗ ಸಿಹಿಯಾದ ಜಡವಾದ ಬಟಾಟೆ ಉಳಿಯುತ್ತದೆ.

ಜೇನುತುಪ್ಪ

ಜೇನುತುಪ್ಪವನ್ನು ರೆಫ್ರಿಜರೇಟರಲ್ಲಿ ಹಾಕಿದಾಗ ಅದು ಹರಳಾಗುತ್ತದೆ. ಹೀಗಾಗಿ ಗಾಜಿನ ಬಾಟಲಿಯಲ್ಲಿ ಕೋಣೆಯ ವಾತಾವರಣದಲ್ಲಿಡುವುದು ಉತ್ತಮ ಮತ್ತು ಹೆಚ್ಚು ತಾಜಾವಾಗಿದ್ದು ಧೀರ್ಘಕಾಲ ಇರುತ್ತದೆ.

ಕಲ್ಲಂಗಡಿ ಹಣ್ಣು

ಇಡೀ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರಲ್ಲಿಡುವುದು ಸರಿಯಲ್ಲ. ಕಲ್ಲಂಗಡಿ ಅಥವಾ ಕರಬೂಜಗಳು ರೆಫ್ರಿಜರೇಟರಲ್ಲಿ ಇಟ್ಟಾಗ ಚಳಿಗೆ ಗಾಯವಾಗಿಬಿಡುತ್ತವೆ. ಹಾಗೆ ಹಣ್ಣುಗಳು ಬಣ್ಣ ಮತ್ತು ರುಚಿ ಎರಡನ್ನೂ ಕಳೆದುಕೊಳ್ಳುತ್ತವೆ. ಒಮ್ಮೆ ಹಣ್ಣುಗಳನ್ನು ಕತ್ತರಿಸಿದರೆ ನಂತರ ಬೇಕಾದರೆ ಫ್ರಿಜ್ಜಿನಲ್ಲಿ ಇಡಬಹುದು. ಆದರೆ ಚಳಿ ಗಾಯವಾದ ಹಣ್ಣಿನ ಮೇಲೆ ಬ್ಯಾಕ್ಟೀರಿಯ ಕಾಣಿಸಿಕೊಂಡು ಸೇವಿಸುವುದು ಅಸಾಧ್ಯವಾಗುತ್ತದೆ.

ಬ್ರೆಡ್

ಮುಖ್ಯವಾಗಿ ಬಿಳಿ ಬ್ರೆಡ್ಡನ್ನು ಫ್ರಿಜ್ಜಲ್ಲಿ ಇಡಬಾರದು. ಅದನ್ನು ಒಣಗಿದ ಸ್ಥಳದಲ್ಲಿ ಇಡಬೇಕು. ಬ್ರೆಡ್ಡುಗಳು ಬೇಗನೇ ಒಣಗುತ್ತವೆ. ನಾಲ್ಕು ದಿನಗಳಿಗಾಗುವಷ್ಟು ಬ್ರೆಡ್ಡನ್ನು ಡೀಪ್ ಫ್ರೀಜ್ ಮಾಡಿಟ್ಟುಕೊಳ್ಳಬಹುದು. ಕಾಫಿ: ಕಾಫಿಯನ್ನು ಫ್ರಿಜ್ಜಲ್ಲಿಟ್ಟರೆ ಅದು ರುಚಿ ಕಳೆದುಕೊಳ್ಳುವುದು ಮಾತ್ರವಲ್ಲ, ಇತರ ಆಹಾರಗಳಿಂದ ವಾಸನೆಯನ್ನೂ ಸ್ವೀಕರಿಸುತ್ತದೆ. ಫ್ರಿಜ್ಜಿನಲ್ಲಿರುವ ತೇವಾಂಶವು ಕಾಫಿಯನ್ನು ಬೇಗನೇ ಕೊಳೆಯುವಂತೆ ಮಾಡುತ್ತದೆ. ಕಾಫಿಯನ್ನು ವಾತಾವರಣದ ಉಷ್ಣತೆಗೆ ಇಡಬೇಕು.

ಬಾಳೆಹಣ್ಣುಗಳು

ನಮಗೆ ಗೊತ್ತಿದ್ದಂತೆ ಬಾಳೆಹಣ್ಣು ಬಲಿತಷ್ಟು ಸಿಹಿ ಹೆಚ್ಚಾಗಿ ಆರೋಗ್ಯಕರವಾಗುತ್ತದೆ. ಆದರೆ ನಾವು ಬಾಳೆಹಣ್ಣುಗಳನ್ನು ರೆಫ್ರಿಜರೇಟರಲ್ಲಿಟ್ಟರೆ ಬಲಿಯುವುದು ನಿಧಾನವಾಗುತ್ತದೆ. ಹೀಗಾಗಿ ಬಾಳೆಹಣ್ಣುಗಳನ್ನು ವಾತಾವರಣದ ಉಷ್ಣತೆಗೆ ಇಡಬೇಕು. ಹೀಗಿಟ್ಟ ಹಣ್ಣುಗಳಲ್ಲಿ ಹೆಚ್ಚು ಆರೋಗ್ಯಕರ ಅಂಶವಿರುತ್ತದೆ. ಹಣ್ಣನ್ನು ಫ್ರಿಜ್ಜಲ್ಲಿಟ್ಟಾಗ ಪೊಟಾಶಿಯಂ ಅಂಶ ಕಳೆದು ಹೋಗುತ್ತದೆ.

ಈರುಳ್ಳಿಗಳು

ಇವನ್ನು ಫ್ರಿಜ್ಜಲ್ಲಿಟ್ಟಾಗ ಮೆದುವಾಗಿಬಿಡುತ್ತವೆ. ಈರುಳ್ಳಿಗಳ್ನನು ಒಣಗಿದ ಸ್ಥಳದಲ್ಲಿಡಬೇಕು. ಆದರೆ ತರಕಾರಿಗಳ ಜೊತೆಗಿಡಬಾರದು. ಅಗತ್ಯವಿದ್ದಲ್ಲಿ ಒಂದು ದಿನಕ್ಕೆ ಫ್ರಿಜ್ಜಲ್ಲಿಡಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆಯನ್ನು ಫ್ರಿಜ್ಜಲ್ಲಿಟ್ಟರೆ ತುಪ್ಪದಂತೆ ದಪ್ಪವಾಗುತ್ತದೆ. ಒಣ ಸ್ಥಳದಲ್ಲಿಡುವುದು ಉತ್ತಮ. ಫ್ರಿಜ್ಜಲ್ಲಿಟ್ಟಾಗ ಕೆಲವು ಕಣಗಳು ಉತ್ಪನ್ನವಾಗಿ ದೇಹಕ್ಕೆ ಹಾನಿಯುಂಟು ಮಾಡಬಹುದು.

ಟೊಮ್ಯಾಟೋಗಳು

ಇವುಗಳನ್ನು ಫ್ರಿಜ್ಜಲ್ಲಿಟ್ಟರೆ ರುಚಿ ಕಳೆದುಕೊಳ್ಳುತ್ತವೆ. ಅಲ್ಲದೆ ಫಂಗಲ್ ಸೋಂಕಾಗಿ ಸೇವನೆಗೆ ಅರ್ಹವಾಗುವುದಿಲ್ಲ.

ಬೆಳ್ಳುಳ್ಳಿ

ಇದನ್ನು ಫ್ರಿಜ್ಜಲ್ಲಿಟ್ಟರೆ ಮೊಳಕೆಯೊಡೆಯುತ್ತದೆ. ಅಲ್ಲದೆ ರಬ್ಬರಿನಂತಾಗುತ್ತದೆ. ಇದರಿಂದ ಬಾಳ್ವಿಕೆ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯನ್ನು ತುಂಡು ಮಾಡದ ಹೊರತು ಫ್ರಿಜ್ಜಲ್ಲಿಡಬಾರದು

ಮಂಜಾನೆಯ ಒಂದು ಗ್ಲಾಸ್ ನೀರು ಆರೋಗ್ಯಕ್ಕೆ ಉಪಯುಕ್ತ.

ಮುಂಜಾನೆ ಎದ್ದ ಕೂಡಲೇ ಒಂದು ಗ್ಲಾಸ್ ನೀರು ಕುಡಿಯಿರಿ !

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಜಪಾನಿನಲ್ಲಿ ಆರಂಭವಾದ ಕಲ್ಪನೆ. ಅಲ್ಲಿ ಜನರು ಉಪಹಾರ ಸೇವಿಸುವ 30 ನಿಮಿಷ ಮೊದಲು ಖಾಲಿ ಹೊಟ್ಟೆಗೆ ನಾಲ್ಕು ಗ್ಲಾಸು ನೀರು ಕುಡಿಯುತ್ತಾರೆ. ಅದು ಸಕ್ರಿಯವಾಗಿರಲು ಮತ್ತು ಆರೋಗ್ಯಕರವಾಗಿರಲು ನೆರವಾಗುತ್ತದೆ.

ಆರೋಗ್ಯಕರ ಹೊಟ್ಟೆ ಮತ್ತು ಫಿಟ್ ಆಗಿರುವ ಜೀವನ ಶೈಲಿಗೆ ಬೆಳಗಿನ ಜಾವ ಮೊದಲು ಮಾಡಬೇಕಾದ ವಿಷಯವೆಂದರೆ ನೀರು ಕುಡಿಯುವುದು. ಅದರಿಂದ ಈ ಕೆಳಗಿನ ಲಾಭಗಳು ಸಿಗುತ್ತವೆ.

ಸ್ಪಷ್ಟವಾದ ಬಣ್ಣ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜಠರದ ಚಲನೆ ಚೆನ್ನಾಗಿರುತ್ತದೆ. ದೇಹದ ವಿಷಕಾರಿಗಳನ್ನು ಹೊರಗೆ ಹಾಕಿ ದುರ್ಬಲ ಚರ್ಮಕ್ಕೆ ಹೊಳಪು ನೀಡುತ್ತದೆ.

ಕರುಳನ್ನು ಸ್ವಚ್ಛಗೊಳಿಸಲು ನೆರವು

ಖಾಲಿ ಹೊಟ್ಟೆಗೆ ಒಂದು ಉದ್ದದ ಗ್ಲಾಸಿನಲ್ಲಿ ನೀರು ಕುಡಿದರೆ ಕರುಳನ್ನು ಮತ್ತು ಅಲ್ಲಿ ತುಂಬಿದ ಕೊಳೆ ಸ್ವಚ್ಛಗೊಳಿಸಲು ನೆರವಾಗುತ್ತದೆ. ಪೌಷ್ಠಿಕಾಂಶಗಳನ್ನು ವೇಗವಾಗಿ ಮತ್ತು ಉತ್ತಮವಾಗಿ ಹೀರಿಕೊಳ್ಳಲೂ ನೆರವಾಗುತ್ತದೆ.

ಶಕ್ತಿಯುತವಾಗಿ ಮಾಡುತ್ತದೆ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕೆಂಪು ರಕ್ತಕಣಗಳು ಪ್ರಚೋದನೆಗೊಂಡು ವೇಗವಾಗಿ ಬೆಳೆಯುತ್ತವೆ. ಅದರಿಂದ ರಕ್ತಕ್ಕೆ ಹೆಚ್ಚು ಆಮ್ಲಜನಕ ಸರಬರಾಜು ಆಗುತ್ತದೆ. ಇಡೀ ದಿನ ನಿಮಗೆ ಸಕ್ರಿಯವಾಗಲು ಹೆಚ್ಚು ಶಕ್ತಿ ಕೊಡುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ನೀರಿನಲ್ಲಿ ಶೂನ್ಯ ಕ್ಯಾಲರಿಗಳು ಇರುವ ಕಾರಣ ಬೇಕಾದಷ್ಟು ಕುಡಿಯಬಹುದು. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಟಾಕ್ಸಿನುಗಳನ್ನು ಹೊರಗೆ ಹಾಕಿ ದೇಹ ಉಬ್ಬುವುದನ್ನು ತಡೆಯುತ್ತದೆ. ಅದು ಚಯಾಪಚಯ ಕ್ರಿಯೆಗೂ ನೆರವಾಗುತ್ತದೆ ಮತ್ತು ಕ್ಯಾಲರಿಗಳನ್ನು ವೇಗವಾಗಿ ಕಡಿಮೆ ಮಾಡುತ್ತದೆ.

ಬಲಿಷ್ಠ ನಿರೋಧಕ ವ್ಯವಸ್ಥೆ ನಿರ್ಮಿಸುತ್ತದೆ

ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ದೇಹದಲ್ಲಿ ಫ್ಲೂಯಿಡ್ ಸಮತೋಲನದಲ್ಲಿಡಲು ನೆರವಾಗುತ್ತದೆ. ಹಾಗೆ ನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ. ಇದು ನಿಮಗೆ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡಿ ಕಡಿಮೆ ರೋಗಗ್ರಸ್ತರಾಗುತ್ತೀರಿ.

ಮಜ್ಜಿಗೆ

ದಿನನಿತ್ಯ ಸೇವಿಸುವ ಮಜ್ಜಿಗೆಯಲ್ಲಿದೆ ಹಲವು ಔಷಧೀಯ ಗುಣಗಳು

image

ಬಿರು ಬಿಸಿಲಲ್ಲಿ ದಾಹ ನೀಗುವ ಸಲುವಾಗಿ ಹಾಗೂ ದೇಹ ನಿರ್ಜಲೀಕರಣ ಆಗದಂತೆ ತಡೆಯಲು ಮಜ್ಜಿಗೆ ಕುಡಿಯುವುದು ಬಹಳ ಉಪಕಾರಿ.
ನಾವು ಕುಡಿಯುವ ಮಜ್ಜಿಗೆಯಲ್ಲಿ ಹಲವು ಆರೋಗ್ಯಕರ ಅಂಶಗಳು ಅಡಗಿದೆ. ಮಜ್ಜಿಗೆ ಕೇವಲ ದಾಹ ನೀಗುವ ಹಾಗೂ ದೇಹಕ್ಕೆ ತಂಪನ್ನು ನೀಡುವ ಪಾನೀಯ ಅಲ್ಲಾ. ಬದಲಾಗಿ ಇದು ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.
ಮಜ್ಜಿಗೆಯಲ್ಲಿರುವ ಪ್ರೊಬಯೋಟಿಕ್ಸ್‌ ಜೀರ್ಣಕ್ರಿಯೆ ಹೆಚ್ಚಾಗಲು ಸಹಾಯ ಮಾಡುತ್ತದೆ. ಬೇಸಿಗೆಯ ಬಿಸಿಲಿನಿಂದ ದೇಹ ಬಿಸಿಯಾಗುತ್ತದೆ. ಇದನ್ನು ತಣಿಸಲು ಮಜ್ಜಿಗೆ ಸಹಾಯ ಮಾಡುತ್ತದೆ. ಮಜ್ಜಿಗೆ ಕುಡಿಯುವುದರಿಂದ ಆ್ಯಸಿಡಿಟಿ ದೂರಾಗುತ್ತದೆ.
ಹೆಚ್ಚು ಖಾರ ಹಾಗೂ ಮಸಾಲೆ ಪದಾರ್ಥ ಸೇವನೆ ಮಾಡಿದ್ದರೆ, ಹೊಟ್ಟೆ ಹಾಗೂ ಎದೆ ಉರಿಯನ್ನು ನಿವಾರಿಸಲು ಮಜ್ಜಿಗೆ ಸಹಾಯ ಮಾಡುತ್ತದೆ.
ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಅಂಶವನ್ನು ನಿವಾರಣೆ ಮಾಡಲು ಮಜ್ಜಿಗೆ ಸಹಕಾರಿ. ಕೆಲವು ಜನರಿಗೆ ಲ್ಯಾಕ್ಟೋಸ್‌ ಸೇವನೆಯಿಂದ ಅಜೀರ್ಣ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಮಜ್ಜಿಗೆ ಕುಡಿದರೆ ದೇಹಕ್ಕೆ ಕ್ಯಾಲ್ಸಿಯಂ ದೊರೆಯುತ್ತದೆ.
ನಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ, ವಿಟಮಿನ್‌, ಪ್ರೊಟೀನ್‌ಗಳನ್ನು ಮಜ್ಜಿಗೆ ನೀಡುತ್ತದೆ. ಕ್ಯಾನ್ಸರ್‌ ತಡೆ, ಕೊಲೆಸ್ಟ್ರಾಲ್‌ ಕಡಿಮೆ ಹಾಗೂ ರಕ್ತದೊತ್ತಡ ನಿಯಂತ್ರಿಸಲು ಮಜ್ಜಿಗೆ ರಾಮಬಾಣವಾಗಿದೆ. ಇನ್ನು ಮಜ್ಜಿಗೆ ಕುಡಿಯುವುದರಿಂದ ಹಲವು ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದಾಗಿದೆ.

Home-made mask for hair fall.

Use this mask once a week and your hair will be thicker and stronger than ever!

Hair loss is a common problem nowadays. As hair is regarded as an asset that enhances one’s physical appearance, balding or thinning hair is a problem that many want to correct as soon as possible.

Some of the common factors contributing to thinning hair are excessive physical or emotional stress, hormonal imbalances, nutritional deficiencies, pollution, allergies, use of wrong hair care products, poor hair care routine, and heredity.

image

According to the proponents of the said mask, it is very good at stimulating the growth of new hair to replace the strands that you shed off on a daily basis. What’s more, the mask is capable of conditioning and moisturizing each and every strand, preventing breakage that can contribute further to hair thinning.

The simple once-a-week application of this homemade mask can give you all of the aforementioned benefits. Because the ingredients are inexpensive, the creation and application of the said mask should not leave your pocket with a gigantic hole.

Needed ingredients:

1 ripe banana
1 egg
1/2 cup (125 milliliters) flat beer
1 tablespoon of honey
Mash the banana in a small bowl. Stir in one egg and blend until the two create a smooth mixture. Add the beer and honey and mix well. Apply to scalp and massage into hair for about 5 minutes. Once the mask is on your scalp, you should also put on a shower cap and allow it to stay there for an hour, then shampoo as normal. Also can apply it after shampooing to make sure that your scalp is free of dirt and excess oils that can keep the ingredients of the mask from doing their job. After an hour just wash the hair with water.

Bananas are rich in potassium & vitamin E, C, and A. These make them as a perfect remedy regarding how to make your hair thicker. These vitamins are very essential for the healthy and strong hair growth.

Eggs are rich source of protein and hair is made up of protein, so it is essentially required to make your hair long and thick. It also has healing properties and is well known for its ability to refurbish hair softness and shine.

Because beer is fermented, the hoppy beverage contains generous supplies of yeast, which is said to plump limp tresses. B vitamins found in the beer tighten the hair’s cuticle.

Honey is a humectant, it attracts and retains moisture in your hair and an emollient, helping to soften and smoothen. Full of vitamins, it’s also skin food for your scalp. Honey can lighten your hair over time, but if you only use this treatment once a week, you probably won’t see any changes.

ಮಧುಮೇಹ ಸೋಲಿಸಿ

image

ಆಚರಣೆಯ ಹಿನ್ನೆಲೆ-ಉದ್ದೇಶ

ವಿಶ್ವ ಆರೋಗ್ಯ ದಿನಾಚರಣೆ 1950ರಲ್ಲಿ ಆರಂಭವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸ್ಥಾಪನೆಯಾದ ಏ. 7ರಂದು ಪ್ರತಿ ವರ್ಷ ಈ ದಿನ ಆಚರಿಸಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿ ಪ್ರತಿ ವರ್ಷ ಒಂದೊಂದು ಆಶಯ ನಿಗದಿ ಮಾಡಿ, ಅಂತಾರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಹಂತದವರೆಗೆ ಅದಕ್ಕೆ ಸಂಬಂಧಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಈ ದಿನ ಮಾಡಲಾಗುತ್ತದೆ. ರಾಷ್ಟ್ರಗಳು ಹಾಗೂ ಸರ್ಕಾರೇತರ ಸಂಘಟನೆಗಳು ಈ ಅಭಿಯಾನ ದಲ್ಲಿ ಪಾಲ್ಗೊಳ್ಳುತ್ತವೆ. ಡಬ್ಲ್ಯೂಎಚ್​ಒ ದಿಂದ ಕ್ಷಯರೋಗ ದಿನ, ಮಲೇರಿಯಾ ದಿನ, ತಂಬಾಕು ರಹಿತ ದಿನ, ರಕ್ತದಾನ ದಿನ, ಹೆಪಟೈಟಿಸ್ ದಿನ, ಏಡ್ಸ್ ದಿನಗಳನ್ನೂ ಪ್ರತಿ ವರ್ಷ ಆಚರಿಸಲಾಗುತ್ತದೆ.

ಈ ಸಲದ ಥೀಮ್ ‘ಮಧುಮೇಹ ಸೋಲಿಸಿ’

ಈ ಬಾರಿ ವಿಶ್ವ ಆರೋಗ್ಯ ದಿನಕ್ಕೆ ‘ಮಧುಮೇಹ ಮಣಿಸಿ’ ಎಂಬ ಥೀಮ್ ಹಾಕಿಕೊಳ್ಳಲಾಗಿದೆ. ನಿಯಂತ್ರಣ ಮಾಡಬಹುದಾದ ಕಾಯಿಲೆ ಯಾಗಿದ್ದರೂ ಮಧುಮೇಹಿಗಳ ಸಂಖ್ಯೆಯಲ್ಲಿ ಹೆಚ್ಚಳ ವಾಗುತ್ತಿದೆ. ಹಿಂದೆ ಸಿರಿವಂತರಿಗಷ್ಟೇ ಈ ಕಾಯಿಲೆ ಬರುತ್ತದೆ ಎಂಬ ಭಾವನೆ ಸಾರ್ವತ್ರಿಕವಾಗಿತ್ತು. ಆದರೆ ಈಗ ಮಧ್ಯಮ, ಕೆಳ ಮಧ್ಯಮವರ್ಗದವರೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅಂದಾಜಿನ ಪ್ರಕಾರ, ಜಗತ್ತಿನಲ್ಲಿ 35 ಕೋಟಿ ಜನರಿಗೆ ಮಧುಮೇಹ ವಿದ್ದು, ವರ್ಷಕ್ಕೆ 1 ಕೋಟಿ ಜನರು ಮಧುಮೇಹಕ್ಕೆ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಈ ಬಾರಿ ರೋಗ ನಿಯಂತ್ರಣ, ರೋಗಿಗಳ ಆರೈಕೆ, ನಿವಾರಣೆ ಕುರಿತು ಜಾಗೃತಿ ಮೂಡಿಸುವ ಗುರಿ ಹಾಕಿಕೊಳ್ಳಲಾಗಿದೆ.

2030ರಲ್ಲಿ ದ್ವಿಗುಣವಾಗುತ್ತೆ ರೋಗಿಗಳ ಸಂಖ್ಯೆ

ಅಂತಾರಾಷ್ಟ್ರೀಯ ಮಧುಮೇಹಿಗಳ ಒಕ್ಕೂಟದ ವರದಿ ಪ್ರಕಾರ 2013ರಲ್ಲಿ ವಿಶ್ವದಲ್ಲಿ ಮಧುಮೇಹಿಗಳ ಸಂಖ್ಯೆ 38.1 ಕೋಟಿಯಷ್ಟಾಗಿತ್ತು. 2030ರ ವೇಳೆಗೆ ಈ ಸಂಖ್ಯೆ ದ್ವಿಗುಣವಾಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಟೈಪ್ 2 ಡಯಾಬಿಟಿಸ್ ರೋಗಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 2030ರ ವೇಳೆ ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ನಗರೀಕರಣದ ಪ್ರಭಾವ ಮತ್ತು ಜೀವನಶೈಲಿ ಬದಲಾಗಿರುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪಾಶ್ಚಾತ್ಯ ಶೈಲಿಯ ಆಹಾರ ಕ್ರಮ ಹೆಚ್ಚಿನ ಜನರನ್ನು ಮಧುಮೇಹಕ್ಕೆ ತುತ್ತಾಗುವಂತೆ ಮಾಡುತ್ತಿದೆ ಎಂದು ಒಕ್ಕೂಟದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಧುಮೇಹಿಗಳ ರಾಜಧಾನಿ ಭಾರತ

ಅಂತಾರಾಷ್ಟ್ರೀಯ ಮಧುಮೇಹ ಸಂಸ್ಥೆಯ ದಾಖಲೆಗಳ ಪ್ರಕಾರ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದೆ. ಸದ್ಯ ದೇಶದಲ್ಲಿ 6.2 ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂದರೆ ಭಾರತದ ವಯಸ್ಕರ ಜನಸಂಖ್ಯೆಯ ಶೇ.7.1ರಷ್ಟು ಜನರಿಗೆ ಮಧುಮೇಹವಿದೆ. 2035ರ ವೇಳೆಗೆ ಈ ಸಂಖ್ಯೆ 10.9 ಕೋಟಿಗೆ ಏರಿಕೆಯಾಗಲಿದೆ ಎಂದು ಐಎಚ್​ಎ ತಿಳಿಸಿದೆ. ಮಧುಮೇಹದಿಂದಲೇ ದೇಶದಲ್ಲಿ ವರ್ಷದಲ್ಲಿ 10 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಧ್ಯಮವರ್ಗದ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಕ್ರಮಗಳ ಪರಿಣಾಮದಿಂದಾಗಿ ಸಕ್ಕರೆರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಡಯಟ್ ಸೋಡಾ ಕುಡಿದ್ರೆ ಮಧುಮೇಹ ಬಂದೀತು

ಡಯಟ್ ಸೋಡ ಕುಡಿಯುವುದರಿಂದ ದೇಹದ ತೂಕವನ್ನು ಹತೋಟಿಯಲ್ಲಿಬಹುದೆಂಬುದು ಹಲವರ ಕಲ್ಪನೆ. ಆದರೆ ಇದು ಸುಳ್ಳು ಎಂದು ಅಧ್ಯಯನವೊಂದು ತಿಳಿಸಿದೆ. ಜತೆಗೆ ಡಯಟ್ ಸೋಡಾ ಕುಡಿಯುವುದರಿಂದ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಯೂ ಹೆಚ್ಚು ಎಂದು ಅಮೆರಿಕದ ಡಯಾಬಿಟಿಸ್ ಅಸೋಸಿಯೇಷನ್ ತಿಳಿಸಿದೆ. ಪ್ರತಿನಿತ್ಯ ಡಯಟ್ ಸೋಡಾ ಕುಡಿಯುವುದರಿಂದ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಶೇ.67 ಹೆಚ್ಚಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಇದರ ಜತೆಗೆ ರಕ್ತ ದೊತ್ತಡ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳ, ಕೊಲೆಸ್ಟ್ರಾಲ್ ಮತ್ತು ಸೊಂಟದ ಸುತ್ತಲಿನ ಕೊಬ್ಬಿನ ಅಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸಾಮಾನ್ಯವಾಗುತ್ತಿದೆ ಟೈಪ್2 ಡಯಾಬಿಟಿಸ್

ಟೈಪ್2 ಡಯಾಬಿಟಿಸ್ ಅನ್ನು ಸಾಮಾನ್ಯವಾಗಿ ಜೀವನಶೈಲಿಯ ಕಾಯಿಲೆ ಎನ್ನುವುದುಂಟು. ಇದು ನಮ್ಮ ಜೀವನಶೈಲಿಯ ಮೇಲೆಯೇ ಅವಲಂಬಿಸಿರು ವಂತದ್ದು. ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ತೂಕದ ಹೆಚ್ಚಳದಿಂದಾಗಿ ಇದು ಕಂಡುಬರುತ್ತದೆ. ಇದನ್ನು ಆಹಾರ ಕ್ರಮದ ಬದಲಾವಣೆ ಮತ್ತು ಔಷಧಗಳ ಸಹಾಯದಿಂದ ಹತೋಟಿಯಲ್ಲಿಡಲು ಸಾಧ್ಯವಿದೆ. ಆದರೆ ಪೂರ್ಣಪ್ರಮಾಣದಲ್ಲಿ ರೋಗದಿಂದ ಮುಕ್ತರಾಗಲು ಸಾಧ್ಯವಿಲ್ಲ. ಮಾನವನ ದೇಹದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಗ್ಲುಕೋಸ್​ನ ಅಂಶ ಸಂಗ್ರಹ ವಾದಾಗ, ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಸರಿಯಾಗಿ ಬಳಸಿಕೊಳ್ಳದಿರುವಾಗ ಸಕ್ಕರೆ ಪ್ರಮಾಣ ಹೆಚ್ಚಳವಾಗಿ ಮಧುಮೇಹ ಕಂಡುಬರುತ್ತದೆ.

ಟಿವಿ ನೋಡಿದ್ರೆ ಡಯಾಬಿಟಿಸ್ ಅಪಾಯ

ಟಿವಿ ನೋಡುವುದರಿಂದ ಡಯಾಬಿಟಿಸ್ ಅಪಾಯ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ 3000 ಅಮೆರಿಕನ್ನರನ್ನು ಆಧರಿಸಿ ಪಿಟ್ಸ್​ಬರ್ಗ್ ವಿಶ್ವವಿದ್ಯಾ ಲಯ ಅಧ್ಯಯನ ನಡೆಸಿದ್ದು, ದಿನಕ್ಕೆ 4 ಗಂಟೆಗಳ ಕಾಲ ಟಿವಿ ನೋಡುವವರಿಗೆ ಮಧುಮೇಹ ಬರುವ ಸಾಧ್ಯತೆಗಳು ಶೇ.14 ಹೆಚ್ಚಾಗಿರುತ್ತದೆ ಎಂದು ತಿಳಿಸಿದೆ. ಅಮೆರಿಕನ್ನರು ಸರಾಸರಿ ದಿನಕ್ಕೆ 5.11 ಗಂಟೆ ಟಿವಿ ನೋಡುತ್ತಾರೆ. ಪ್ರತಿಗಂಟೆಗೂ ಮಧುಮೇಹ ಬರುವ ಸಾಧ್ಯತೆ ಶೇ.3.4 ಹೆಚ್ಚಾಗಿರುತ್ತದೆ. ಇದರಂತೆ ಹೆಚ್ಚು ಕಾಲ ಕಂಪ್ಯೂಟರ್ ಎದುರು ಕಳೆಯುವುದು, ವಿಡಿಯೋ ಗೇಮ್ ಆಡುವುದು ಕೂಡಾ ಮಧುಮೇಹ ಬರುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಆಹಾರ ಕ್ರಮ

ಉತ್ತಮ ಮತ್ತು ನಿಯಮಿತ ಪ್ರಮಾಣದ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಗಳು ಮಧುಮೇಹ ರೋಗದಿಂದ ಬಳಲುತ್ತಿರುವವರ ಆರೋಗ್ಯ ರಕ್ಷಣೆಗೆ ಸಹಕಾರಿ. ನಾರಿನ ಅಂಶ ಹೆಚ್ಚಾಗಿರುವ ಆಹಾರ, ಹಣ್ಣು, ತರಕಾರಿ, ಕಾಳುಗಳು, ಮೀನು ಮುಂತಾದವುಗಳ ಸೇವನೆ ಉತ್ತಮ. ಕೊಬ್ಬು, ಉಪ್ಪಿನಂಶ ಕಡಿಮೆಯಿರುವ ಆಹಾರ ಸೇವನೆ ಮಧುಮೇಹದ ನಿಯಂತ್ರಣಕ್ಕೆ ಹೆಚ್ಚು ಸಹಕಾರಿ. ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ತೆರಳುವವರಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಪ್ರತಿನಿತ್ಯ 30 ರಿಂದ 60 ನಿಮಿಷಗಳ ಕಾಲ ವ್ಯಾಯಾಮ ಮುಂತಾದ ದೈಹಿಕ ಚಟುವಟಿಕೆಗಳು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿವೆ.

ಆಯುರ್ವೆದದಲ್ಲಿದೆ ಪರಿಹಾರ

ಮಧುಮೇಹದ ಬಗ್ಗೆ ಆಯುರ್ವೆದದಲ್ಲೂ ಉಲ್ಲೇಖವಿದೆ. ಆಯುರ್ವೆದದ ಪ್ರಕಾರ 20 ಬಗೆ ಮಧುಮೇಹ ಬರುತ್ತದೆ. ವಾತದಿಂದ ನಾಲ್ಕು, ಪಿತ್ತದಿಂದ 6 ಮತ್ತು ಕಫದಿಂದ 10 ಬಗೆಯ ಮಧುಮೇಹ ಬರುತ್ತದೆ. ಇದರ ಚಿಕಿತ್ಸೆಗಾಗಿ ಆರು ಬಗೆಯ ಔಷಧಗಳನ್ನು ಬಳಸಲಾಗುತ್ತದೆ. ಇದರ ಜತೆಗೆ ಆಹಾರ ಮತ್ತು ಹವ್ಯಾಸಗಳಲ್ಲಿ ಕೆಲ ಬದಲಾವಣೆಗೆ ಹೇಳಲಾಗಿದೆ. ನಿಯಮಿತ ಪ್ರಮಾಣದಲ್ಲಿ ಆಹಾರ ಸೇವನೆ, ಕಫ ದೋಷ ಉಂಟು ಮಾಡುವಂತ ಆಹಾರ ಸೇವನೆ ತ್ಯಜಿಸುವಂತೆ ಸೂಚಿಸಲಾಗುತ್ತದೆ. ಹಗಲಲ್ಲಿ ನಿದ್ರಿಸದಿರುವುದು, ಧೂಮಪಾನ ತ್ಯಜಿಸುವಂತೆಯೂ ಆಯುರ್ವೆದದಲ್ಲಿ ಉಲ್ಲೇಖಿಸಲಾಗಿದೆ.

ಬಾಲ್ಯದಲ್ಲೇ ಕಾಡುತ್ತದೆ ಟೈಪ್1 ಡಯಾಬಿಟಿಸ್

ಟೈಪ್1 ಡಯಾಬಿಟಿಸ್ ರೋಗಪ್ರತಿರೋಧಕ ವ್ಯವಸ್ಥೆ ಮೇಲೆಯೇ ಪ್ರಭಾವ ಬೀರುತ್ತದೆ. ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳನ್ನೇ ಹಾಳು ಗೆಡವುತ್ತದೆ. ಇದರಿಂದ ದೇಹದಲ್ಲಿ ಇನ್ಸುಲಿನ್​ನ ಉತ್ಪತ್ತಿ ಆಗುವುದಿಲ್ಲ. ಆದರೆ ದೇಹದಲ್ಲಿರುವ ಸಕ್ಕರೆ ಅಂಶವನ್ನು ಶಕ್ತಿಯಾಗಿ ಪರಿವರ್ತಿಸುವುದರಲ್ಲಿ ಇನ್ಸುಲಿನ್ ಪ್ರಮುಖ ಪಾತ್ರವಹಿಸುವುದರಿಂದ ಇವುಗಳಿಲ್ಲದೆಯೇ ದೇಹದಲ್ಲಿ ಸಕ್ಕರೆ ಪ್ರಮಾಣ ಭಾರಿ ಏರಿಕೆಯಾಗುತ್ತದೆ. ಟೈಪ್1 ಡಯಾಬಿಟಿಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದರೂ, ಮಕ್ಕಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ತುತ್ತಾಗುವವರು ಚುಚ್ಚುಮದ್ದಿನ ಮೂಲಕ ಆಗಿಂದಾಗೆ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ.

ಯೋಗ ಮಾಡಿದರೆ ಮಧುಮೇಹದ ಚಿಂತೆಯಿಲ್ಲ

ಭಾರತೀಯ ಪುರಾತನ ಪದ್ಧತಿಗಳಲ್ಲಿ ಒಂದಾಗಿರುವ ಯೋಗ ಮಧುಮೇಹವನ್ನು ದೂರವಿರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪಾಶ್ಚಾತ್ಯ ರಾಷ್ಟ್ರಗಳ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನಗಳ ಪ್ರಕಾರ ಯೋಗ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಯೋಗ ಮಾಡುವಾಗ ಮನುಷ್ಯ ಹೆಚ್ಚಿನ ಶಕ್ತಿ ವ್ಯಯಿಸುವ ಅಗತ್ಯವಿರುವುದರಿಂದ ದೇಹದಲ್ಲಿರುವ ಕೊಬ್ಬು ಮತ್ತು ಸಕ್ಕರೆ ಪ್ರಮಾಣ ಹೆಚ್ಚು ಬಳಕೆಯಾಗುತ್ತದೆ. ಇದರಿಂದ ನೈಸರ್ಗಿಕವಾಗಿಯೇ ದೇಹದಲ್ಲಿರುವ ಸಕ್ಕರೆ ಪ್ರಮಾಣ ಹತೋಟಿಯಲ್ಲಿರುತ್ತದೆ. ಅರ್ಧ ಮತ್ಸ್ಯೇಂದ್ರಾಸನ, ಧನುರಾಸನ, ವಕ್ರಾಸನ, ಮತ್ಸ್ಯೇಂದ್ರಾಸನ, ಹಲಾಸನ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿವೆ.

ಮಧುಮೇಹದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಬಹುತೇಕವಾಗಿ ಮಧುಮೇಹ ಇದೆಯೇ ಎಂಬ ಬಗ್ಗೆ ಯಾರೂ ಪರೀಕ್ಷೆಗಳನ್ನು ನಡೆಸುವುದೇ ಇಲ್ಲ. ಸಕ್ಕರೆ ಕಾಯಿಲೆಯ ಅಡ್ಡ ಪರಿಣಾಮಗಳು ಬೀರಿದ ಬಳಿಕವಷ್ಟೇ ಇದರ ಅರಿವಾಗುತ್ತದೆ. ಮಧುಮೇಹದ ಕಾರಣದಿಂದ ಹೃದಯರೋಗ, ಕುರುಡುತನ, ನರಸಂಬಂಧಿ ಕಾಯಿಲೆ, ಲಕ್ವ, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್​ಗೆ ಒಳಗಾಗುವ ಸಾಧ್ಯತೆಯಿದೆ. ದಾಖಲೆಗಳ ಪ್ರಕಾರ ಪ್ರತೀವರ್ಷ 2 ಲಕ್ಷ ಅಮೆರಿಕನ್ನರು ಇದಕ್ಕೆ ಬಲಿಯಾಗುತ್ತಾರೆ. ಹಾಗೆಂದು ರೋಗಿಗಳು ಈ ಬಗ್ಗೆ ಚಿಂತಾಕ್ರಾಂತರಾಗುವ ಅಗತ್ಯವಿಲ್ಲ. ಸರಿಯಾದ ನಿರ್ವಹಣೆಯಿಂದ ಡಯಾಬಿಟಿಸ್ ಅನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಾಧ್ಯವಿದೆ.

ಸಕ್ಕರೆ ಪ್ರಮಾಣ ತಿಳಿಯಲು ನೂತನ ಆಪ್

ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆ ಪ್ರಮಾಣ ವನ್ನು ಪರೀಕ್ಷಿಸಲು ಡೆಕ್ಸ್ ಕಾಮ್ ಶೇರ್ ಡಿವೈಸ್ ಮತ್ತು ಡೆಕ್ಸ್​ಕಾಮ್ ಜಿ4 ಎಂಬ ಆಪ್ ರೂಪಿಸಲಾಗಿದ್ದು, ಇದರಲ್ಲಿ ಒಂದನ್ನು ರೋಗಿಯ ಮೊಬೈಲ್​ನಲ್ಲೂ ಇನ್ನೊಂದನ್ನು ರೋಗಿಯ ಸಂಬಂಧಿಕರ ಮೊಬೈಲ್​ನಲ್ಲೂ ಅಳವಡಿಸಲಾಗಿರುತ್ತದೆ. ರೋಗಿಯ ದೇಹಕ್ಕೆ ಅಳವಡಿಸಿರುವ ಸಣ್ಣ ಸೆನ್ಸರ್​ನ ಸಹಾಯದಿಂದ ಆತನ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಆಪ್ ಗ್ರಹಿಸುತ್ತದೆ. ನಂತರ ಈ ಬಗ್ಗೆ ರೋಗಿಗೆ ಮಾಹಿತಿ ನೀಡುವುದರ ಜತೆಗೆ ಅವರ ಸಂಬಂಧಿಕ ರಿಗೂ ಮಾಹಿತಿ ರವಾನಿಸುತ್ತದೆ. ಇದರಿಂದ ಆಗಿಂದ್ದಾಗೆ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕಾದವರಿಗೆ ಅನುಕೂಲವಾಗುತ್ತದೆ.