ಕೂಲಿಯ ಮಗ, ಇಂದು ಐದು ಕಂಪನಿಗಳ ಮಾಲೀಕ!

image

ಕೂಲಿಯ ಮಗ, ಇಂದು ಐದು ಕಂಪನಿಗಳ ಮಾಲೀಕ!
ಓದಿನಲ್ಲಿ ಮುಂದಿದ್ದರೂ ಬಡತನದಿಂದಾಗಿ ಬಾಲ್ಯದಲ್ಲೇ ಬಾಡಿದ ಪ್ರತಿಭೆಗಳಿಗೆ ಲೆಕ್ಕವಿಲ್ಲ. ಇಂಗ್ಲಿಷ್ ಬಾರದ ಕಾರಣ ಓದನ್ನೇ ತ್ಯಜಿಸಿದ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಈ ಎರಡೂ ಸಮಸ್ಯೆಗಳನ್ನು ಜಯಿಸಿ, ಸಮಾಜದಲ್ಲಿ ಬೆಳೆದವರೂ ನಮ್ಮ ನಡುವೆ ಇದ್ದಾರೆ. ಅಂತಹ ಸಾಧಕರಲ್ಲಿ ಕಟೀಲು ಮೂಲದ ಗೌರೀಶ್ ಕುಮಾರ್ ಕೂಡ ಒಬ್ಬರು. 32 ವರ್ಷದ ಗೌರೀಶ್ ಇವತ್ತು ಐದು ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಅವರ ಜೀವನದ ರೋಚಕ ಕಥೆಯನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಓದಿ ಅವರದ್ದೇ ಮಾತುಗಳಲ್ಲಿ…|ಬ್ಯಾಡನೂರು ಹರ್ಷವರ್ಧನ್, ಬೆಂಗಳೂರುಬಡತನವನ್ನು ಹೊದ್ದು ಮಲಗಿದ ಬಾಲ್ಯನಾನು ಹುಟ್ಟಿ, ಬೆಳೆದದ್ದು ಕಟೀಲಿನಲ್ಲಿ. ಅಪ್ಪ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಮ್ಮ ಮನೆಯಲ್ಲಿ ಇದ್ದರು. ನಾನೇ ದೊಡ್ಡ ಮಗ. ನನಗೆ ಮೂವರು ತಮ್ಮಂದಿರು, ಒಬ್ಬ ತಂಗಿ. ಹೀಗಾಗಿ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು. ಅಪ್ಪನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಬರುತ್ತಿತ್ತು. ಅದರಲ್ಲೇ ಏಳು ಮಂದಿಯ ಹೊಟ್ಟೆ ತುಂಬಿಸಬೇಕಿತ್ತು.ಶಾಲೆಗೆ ಹೋಗುತ್ತಿರುವಾಗ ಮನೆಯಲ್ಲಿ ಒಂದು ಹೊತ್ತು ಊಟ ಮಾತ್ರ ಸಿಗುತ್ತಿತ್ತು. ಬೆಳಗ್ಗೆ ಮನೆಯಲ್ಲಿ ತಿಂಡಿಯಿರುತ್ತಿರಲಿಲ್ಲ. ಶಾಲೆಯಲ್ಲಿ ಮಧ್ಯಾಹ್ನದ ಊಟವಾಗುತ್ತಿತ್ತು. ನಂತರ ರಾತ್ರಿ ಮನೆಯಲ್ಲಿ ಊಟ. ಹೀಗೆ ಕಷ್ಟಗಳನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಆದರೆ ಅಪ್ಪ ದೊಡ್ಡವನಾದ ನೀನು ಓದನ್ನು ಬಿಟ್ಟುಕೆಲಸ ಮಾಡು ಅಂತ ಒತ್ತಡ ಹೇರುತ್ತಿರಲಿಲ್ಲ. ಸಣ್ಣ ವಯಸ್ಸಿನಲ್ಲೆ ಮನೆಯ ಕಷ್ಟವನ್ನರಿತ ನಾನೇ, ನಾಲ್ಕನೇ ತರಗತಿಯಲ್ಲಿ ಅವರಿಗೆ ಕೆಲಸ ಮಾಡಿಕೊಂಡು ಓದುತ್ತೇನೆ ಅಂತ ಹೇಳಿಬಿಟ್ಟೆ. ಸಂಜೆ 5ರಿಂದ ರಾತ್ರಿ 8ರವರೆಗೆ ಹೋಟೆಲ್​ನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದೆ. ಪ್ರತಿದಿನ 10ರಿಂದ 15 ರೂಪಾಯಿ ಸಿಗುತ್ತಿತ್ತು. ಹೀಗೆ ನನ್ನ ಶಿಕ್ಷಣದ ಖರ್ಚನ್ನು ನಾನೇ ಭರಿಸುತ್ತಿದ್ದೆ. ನಂತರ ಪಿಯು, ಡಿಗ್ರಿ ಸಮಯದಲ್ಲಿ ರಜೆ ದಿನಗಳಲ್ಲಿ ಕೂಲಿ, ಗಾರೆ, ಪೇಂಟಿಂಗ್ ಕೆಲಸ ಮಾಡುವ ಮೂಲಕ ಓದಿನ ಖರ್ಚಿಗೆ ಹಣ ಸಂಪಾದಿಸಿಕೊಳ್ಳುತ್ತಿದ್ದೆ. ಬಿಕಾಂ ಕೂಡ ಕಟೀಲಿನಲ್ಲೆ ಮುಗಿಸಿದೆ. ಪದವಿ ಮುಗಿಯುವವರೆಗೂ ಮನೆಯಲ್ಲಿ ಸರಿಯಾದ ವಿದ್ಯುತ್ ಸಂಪರ್ಕವಿರಲಿಲ್ಲ. ಪಿಯುಸಿಗೆ ಹೊಲಿಸಿದ್ದ ಎರಡು ಪ್ಯಾಂಟುಗಳಲ್ಲೇ ಮೂರು ವರ್ಷಗಳ ಡಿಗ್ರಿ ಮುಗಿಸಿದ್ದೇನೆ.ಬೆಂಗಳೂರಿಗೆ ಬಂದಿದ್ದೇ ದೊಡ್ಡ ಸಾಧನೆಬಿಕಾಂ ಓದುತ್ತಿರುವಾಗಲೇ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಮಾಡುವ ಆಸೆ ಚಿಗುರಿತು. ತಡ ಮಾಡದೇ ಆಗಿನಿಂದಲೇ ಸಿದ್ಧತೆ ಪ್ರಾರಂಭಿಸಿದೆ. ಹಣವಿಲ್ಲದ ಕಾರಣ ಕಟೀಲಿನ ವಿಜಯ ಬ್ಯಾಂಕ್​ನಲ್ಲಿ ಲೋನ್ ಕೇಳಿದೆ. ಆಗ ಸಿಎ ಶಿಕ್ಷಣಕ್ಕೆ ಲೋನ್ ನೀಡುತ್ತಿರಲಿಲ್ಲ. ಆದರೆ ಯೋಗಾನಂದ್ ಎಂಬುವವರು ಪರ್ಸನಲ್ ಲೋನ್ ಕೊಡಿಸಿಕೊಟ್ಟರು. ನನ್ನ ಸಿಎ ಓದಿಗೆ ಮನೆಯಲ್ಲಿ ಬೆಂಬಲ ಇದ್ದರೂ, ಸಂಬಂಧಿಗಳ ವಿರೋಧವಿತ್ತು. ಆದರೆ ಐದು ವರ್ಷ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ ಎಂದು ಪಾಲಕರಿಗೆ ಹೇಳಿದೆ. ಅವರೂ ಒಪ್ಪಿಕೊಂಡರು. ಹೀಗೆ ಪದವಿ ಮುಗಿದ ತಕ್ಷಣ ಸಿಎ ಕನಸು ಹೊತ್ತು 2003ರಲ್ಲಿ ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದಿದ್ದೇ ನನ್ನ ದೊಡ್ಡ ಸಾಧನೆಗಳಲ್ಲಿ ಒಂದು. ಆದರೆ ಇಲ್ಲಿ ನಾನು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಚಿಕ್ಕ ರೂಮಿನಲ್ಲಿಮೂವರು ಸ್ನೇಹಿತರು ಬಾಡಿಗೆಗೆ ಸೇರಿಕೊಂಡೆವು. ಪ್ರತಿ ತಿಂಗಳ ಖರ್ಚಿಗೆ 650 ರೂಪಾಯಿ ಬೇಕಿತ್ತು.ಆದರೆ ನನ್ನ ಬಳಿ ಇರುತ್ತಿದ್ದುದೇ ಇನ್ನೂರು ರೂಪಾಯಿ. ಹೀಗಾಗಿಯೇ ಪ್ರತಿದಿನ ಬಿಟಿಎಂ ಲೇಔಟ್​ನಿಂದ ಕಸ್ತೂರಿ ಬಾ ರಸ್ತೆಯಲ್ಲಿದ್ದ ಕಚೇರಿಗೆ 11 ಕಿಲೋಮೀಟರ್ ನಡೆದುಕೊಂಡೇ ಓಡಾಡುತ್ತಿದ್ದೆ. ಮೊದಲ ಎರಡು ಮೂರು ತಿಂಗಳು ಪ್ರತಿದಿನ 22 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಓಡಾಟ. ಇದುವರೆಗೂ ನಾನು ಈ ಕಷ್ಟಗಳನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಹೀಗಾಗಿಯೇ ಈಗ ನನ್ನನ್ನು ನೋಡಿದವರು ಶ್ರೀಮಂತ ಕುಟುಂಬದಿಂದ ಬಂದಿರುವವನು ಎಂದೇ ಅಂದುಕೊಳ್ಳುತ್ತಾರೆ.ಬ್ರಾಹ್ಮರಿ ಅಕಾಡೆಮಿನಾನು ಓದಿನಲ್ಲಿ ಮುಂದಿದ್ದ ಕಾರಣ ನನ್ನ ಬಳಿ ಪಾಠ ಹೇಳಿಸಿಕೊಳ್ಳಲು ಮೊದಲು ಮೂವರು ಬಂದರು, ಮೂವರೂ ಪಾಸ್ ಆದರು. ಅವರನ್ನು ನೋಡಿ ಏಳು ಮಂದಿ ಬಂದರು. ಅವರಲ್ಲೂ ನಾಲ್ವರು ಪಾಸ್. ಕ್ರಮೇಣ ಕಲಿಸುವುದೇ ಪ್ಯಾಶನ್ ಆಯಿತು. ನಂತರ ಮಕ್ಕಳೇ ಬಂದು ನಾವೇ ಜಾಗ ಕೊಡುತ್ತೇವೆ, ನೀವು ಪಾಠ ಮಾಡಿ ಸಾಕು ಎಂದರು. ಅವರಿಗೆಲ್ಲ ಕೋಚಿಂಗ್ ಕ್ಲಾಸ್ ಶುರುಮಾಡಿದೆ. ಹೀಗೆ ಬ್ರಾಹ್ಮರಿ ಅಕಾಡೆಮಿ ಪ್ರಾರಂಭವಾಯಿತು. ಮೊದಲ ಮೂರು ಬ್ಯಾಚ್​ವರೆಗೂ ನಾನು ಹಣ ಪಡೆದಿರಲಿಲ್ಲ. ಕ್ರಮೇಣ ಅವರೇ ಹಣ ನೀಡತೊಡಗಿದರು. ಈ 8 ವರ್ಷಗಳಲ್ಲಿ ಬೆಂಗಳೂರು, ಕೇರಳ, ಪುಣೆ, ಹೈದರಾಬಾದ್, ಮಂಗಳೂರು, ಮೈಸೂರು, ವಿಜಯವಾಡಾಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಸಿಎ ಟೂಷನ್ಸ್ ಮಾಡಿದ್ದೇನೆ. ಇದು ನನಗೆ ದೊಡ್ಡ ಹೆಸರು ನೀಡಿತು. ನನ್ನ ವಿದ್ಯಾರ್ಥಿಗಳು ಸಿಎ ಪರೀಕ್ಷೆಯಲ್ಲಿ ಭಾರತದಲ್ಲೆ ಮೊದಲ ರ್ಯಾಂಕ್ ಪಡೆದಿದ್ದಾರೆ, ಸಿಎಸ್​ನಲ್ಲಿ ನಾಲ್ಕನೇ ರ್ಯಾಂಕ್, 11ನೇ ರ್ಯಾಂಕ್ ಪಡೆದಿದ್ದಾರೆ. ಹೀಗೆ ಸುಮಾರು 60ಕ್ಕೂ ಹೆಚ್ಚು ಮಂದಿ ರ್ಯಾಂಕ್ ಬಂದಿದ್ದಾರೆ. ಈಗ ವಿದ್ಯಾರ್ಥಿಗಳಿಗಾಗಿಯೇ ಆಪ್ ಕೂಡ ಮಾಡುತ್ತಿದ್ದೇವೆ.ಕನ್ನಡ ಮೀಡಿಯಂನಿಂದ ಇಂಗ್ಲಿಷ್​ಗೆನಾನು ಓದಿರೋದು ಕನ್ನಡ ಮೀಡಿಯಂ. ಆದರೆ ಸಿಎಗಾಗಿ ಇಂಗ್ಲಿಷ್ ಕಲಿಯಬೇಕಿತ್ತು. ಹೀಗಾಗಿ ಬೆಂಗಳೂರಿಗೆ ಬಂದ ಮೊದಲ ಎರಡು ವರ್ಷ ತುಂಬ ಕಷ್ಟವಾಯಿತು. ಆದರೆ ನನಗೆ ಗೊತ್ತಿದ್ದಿದ್ದು ಒಂದೇ, ಅದುಓದು. ಉಳಿದದ್ದೆಲ್ಲವನ್ನು ದೇವರ ಮೇಲೆ ಹಾಕಿ ಓದತೊಡಗಿದೆ. ಪುಸ್ತಕಗಳನ್ನು ಓದಿಯೇ ಇಂಗ್ಲಿಷ್ ಕಲಿತೆ. ನಂತರ ಸಿಎಸ್ (ಕಂಪನಿ ಸೆಕ್ರೆಟರಿ), ಎಂ.ಕಾಂ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಕೋರ್ಸ್ ನಂತರ ಈಗ ಪಿಎಚ್​ಡಿ ಮಾಡುತ್ತಿದ್ದೇನೆ.ಭವಿಷ್ಯದ ಯೋಜನೆಗಳುನನಗೆ ಗೊತ್ತಿರುವುದು ಬೆಳೆಯುವುದು, ಅದಕ್ಕೆ ಬೇಕಾದಷ್ಟು ಕಷ್ಟಪಡುವುದು. ಈ ಸಂಸ್ಥೆಯನ್ನು ಬೆಳೆಸಬೇಕು, ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡಬೇಕು. 2020ಕ್ಕೆ ನಾವು 202 ಉದ್ಯೋಗಿಗಳಾಗುವಷ್ಟರ ಮಟ್ಟಿಗೆ ಬೆಳೆಯುವ ಗುರಿಯಿದೆ. ಇನ್ನು 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಪಾಲಿಸಿ ಮಟ್ಟಕ್ಕೆ ಬೆಳೆಯಬೇಕು. ಈಗಾಗಲೇ ನಮ್ಮ ಸಂಸ್ಥೆ ಬೆಂಗಳೂರು, ಮೈಸೂರು, ಮಂಗಳೂರು, ಕೇರಳಗಳಲ್ಲಿದೆ. ಅದನ್ನು ಪುಣೆ, ಮುಂಬೈಗಳಿಗೆ ವಿಸ್ತರಣೆ ಮಾಡುವ ಪ್ಲ್ಯಾನ್ ಇದೆ. ಈಗ ವಾರ್ಷಿಕವಾಗಿ ಎರಡೂವರೆ ಕೋಟಿರೂಪಾಯಿ ಟರ್ನ್ ಓವರ್ ಆಗುತ್ತದೆ. 2020ಕ್ಕೆ ಅದನ್ನು 10 ಕೋಟಿಗೆ ಹೆಚ್ಚಿಸುವ ಗುರಿಯಿದೆ. ನಮ್ಮ ಕಂಪನಿಯೀಗ 5ರಿಂದ 6 ಕೋಟಿ ಬಾಳುತ್ತದೆ. ಅದು 2020ಕ್ಕೆ 25 ಕೋಟಿಗೆ ಏರಲಿದೆ.ಸಿಎ ಪಾಸ್ ಆಗಿದ್ದು ಸಿಎ ಮಾಡಿದ್ದು ಸಾಧನೆ ಅನ್ನೋದಕ್ಕಿಂತ ನನ್ನ ಹಠ ಅಂತ ಹೇಳಲು ಇಷ್ಟಪಡುತ್ತೇನೆ. ನಾನು ಬೆಂಗಳೂರಿನಲ್ಲಿ ಸಿಎ ಓದುವಾಗ ಅಮ್ಮ ಹುಷಾರು ತಪ್ಪಿದರು. ಅದರಿಂದಾಗಿ ಕೆಲ ತಿಂಗಳು ನಾನು ಓದು ನಿಲ್ಲಿಸಿ ಕೆಲಸಕ್ಕೆ ಸೇರಬೇಕಾಯಿತು. ಅಮ್ಮನ ಆರೋಗ್ಯ ಸರಿಹೋದ ಬಳಿಕ ಮತ್ತೆ ಸಿಎ ಮುಂದುವರಿಸಿದೆ. 2010ರಲ್ಲಿ ಸಿಎ ಮುಗಿಯಿತು. ಇನ್ಪೋಸಿಸ್​ನಲ್ಲಿ ಕೆಲಸ ದೊರೆಯಿತು. ಬಳಿಕ ಡೆಲಾಯ್್ಟ್ಸಲ್ಲಿ ಕೆಲಸ ಮಾಡಿದೆ. ಹೀಗೆ ನಾಲ್ಕು ವರ್ಷಗಳ ಕಾಲ ಅನುಭವ ಪಡೆದೆ. ನಂತರ ನಾನೇ ಏನಾದರೂ ಸ್ವಂತಮಾಡಲು ಯೋಚಿಸಿದೆ. ಹೀಗೆ ಪ್ರಾರಂಭವಾಗಿದ್ದು ಜಿಕೆಸಿ ಆಂಡ್ ಕಂಪನಿ.ಜಿಕೆಸಿಎ ಪ್ರಾರಂಭನಾನೀಗ ಐದು ಕಂಪನಿಗಳನ್ನು ಮುನ್ನಡೆಸುತ್ತಿದ್ದೇನೆ. ಬ್ರಾಹ್ಮರಿ ಅಕಾಡೆಮಿ (ಟೂಷನ್ಸ್), ಜಿಕೆಸಿ ಆಂಡ್ ಕಂಪನಿ (ಚಾರ್ಟರ್ಡ್ ಅಕೌಂಟ್), ಜಿಕೆ ಕಾರ್ಪೆರೇಟ್ ಅಡ್ವೈಸರಿ ಪ್ರೖೆವೇಟ್ ಲಿಮಿಟೆಡ್ (ಸ್ಟ್ರಾಟೆಜಿಕ್ ಕನ್ಸಲ್ಟನ್ಸಿ), ಬ್ರಾಹ್ಮರಿ ಫೌಂಡೇಶನ್ (ಎನ್​ಜಿಒ). ಇಲ್ಲಿ ಒಟ್ಟು 37 ಜನ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ 10 ಮಂದಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಎ, ಸಿಎಸ್ ಉಚಿತ ತರಬೇತಿ ನೀಡುತ್ತೇವೆ. ನಮ್ಮ ಕಚೇರಿಗೆ ಟೀ ಕೊಡಲು ಬರುತ್ತಿದ್ದ ಹುಡುಗನನ್ನೇ ಕೆಲಸ ಬಿಡಿಸಿ ಶಾಲೆಗೆ ಸೇರಿಸಿದ್ದೇವೆ. ಆಗಾಗ ಎನ್​ಜಿಒಗಳಿಗೆ ಆಹಾರ ಧಾನ್ಯ ನೀಡುತ್ತೇವೆ. ನನ್ನ ಬಾಲ್ಯದಲ್ಲಿನನಗೂ ಇಂತಹ ಸಹಾಯಗಳು ಬಂದಿದ್ದವು. ಈಗ ನಾನು ಬೇರೆಯವರಿಗೆ ಅದೇ ರೀತಿ ಸಹಾಯ ಮಾಡುತ್ತಿದ್ದೇನೆ.ನಂಬಿಕೆಯೇ ಸಾಧನೆಯ ತಳಹದಿಪಿಯುಸಿ ಓದುವಾಗ ಒಬ್ಬರು ಲೆಕ್ಚರರ್ ನನ್ನನ್ನು ಕರೆದು ಚೆನ್ನಾಗಿ ಓದು ನಿನಗೆ ಒಳ್ಳೆ ಭವಿಷ್ಯವಿದೆ ಅಂತ ಹೇಳಿದರು. ಹಾಗೇ ಬೆಳೆಯಲು ಎರಡು ದಾರಿಯಿದೆ. ಒಂದು ಶಿಕ್ಷಣದ ಆಧಾರದ ಮೇಲೆ ಮತ್ತೊಂದುನೇಮ್ ಫೇಮ್ ಮೂಲಕ ಎಂದರು. ನನಗೆ ಎರಡನೇ ಆಯ್ಕೆಯಿಲ್ಲ. ಹೀಗಾಗಿಯೇ ಓದನ್ನು ಆಯ್ಕೆ ಮಾಡಿಕೊಂಡು, ಮುಂದಿನ ಐದು ವರ್ಷಗಳ ಕಾಲ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ಅದೇ ನನ್ನ ಈ ಬೆಳವಣಿಗೆಗೆಕಾರಣ. ಇದುವರೆಗಿನ ಸಾಧನೆ, ಮುಂದೆ ಮಾಡುವ ಸಾಧನೆ ಎಲ್ಲವನ್ನು ನಾನು ಕಟೀಲು ದುರ್ಗಾಪರಮೇಶ್ವರಿಗೆ ಅರ್ಪಿಸಬೇಕು ಅಂತ ಇಷ್ಟಪಡುತ್ತೇನೆ. ಯಾಕೆಂದರೆ ಆ ಕ್ಷೇತ್ರದ ಮಹಿಮೆಯೇ ಅಂಥದ್ದು. ನಾನು ಅಲ್ಲಿರದಿದ್ದರೆ, ಈ ಮಟ್ಟಿಗೆಬೆಳೆಯಲು ಸಾಧ್ಯವಾಗುತ್ತಿರಲಿಲ್ಲವೇನೋ. ಒಟ್ಟಿನಲ್ಲಿ ಗಟ್ಟಿಯಾದ ನಂಬಿಕೆಯೇ ನನ್ನ ಸಾಧನೆಯ ತಳಹದಿ.ಯುವಪೀಳಿಗೆಗೆ ಕಿವಿಮಾತುನನಗೆ ಹೇಳಿಕೊಟ್ಟವರು ಕಡಿಮೆ. ಕನಸು ಕಾಣಬೇಕು. ಗುರಿ ಇರಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಈಗ್ಗೆ ಏಳೆಂಟು ವರ್ಷಗಳ ಹಿಂದೆ ನನ್ನ ಬಳಿ ಏನೂ ಇರಲಿಲ್ಲ. ಇವತ್ತು ನನ್ನದೇ ಕಂಪನಿಗಳಿವೆ. ನೀವು ಕಷ್ಟಪಡಲು ರೆಡಿಯಿದ್ದರೆ, ಎಲ್ಲವೂ ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ. ನನಗೆ ಗೊತ್ತಿರುವಂತೆ ಒಂದೊಂದು ದಿನ 18ರಿಂದ 19 ತಾಸು ಓದಿರುವ ನೆನಪೂ ಇದೆ. ಹಣವಿಲ್ಲದಿದ್ದರೆ, ಪಾರ್ಟ್ ಟೈಮ್ ಕೆಲಸ ಮಾಡಿ.ಸಾಧನೆ ಮಾಡುವಾಗ ಅವಮಾನಗಳು ಇದ್ದಿದ್ದೇ. ಅದರ ಬಗ್ಗೆ ಯೋಚಿಸಲೇಬೇಡಿ. ಒಂದು ಸರಿಯಾದ ಗುರಿ ಇರಬೇಕು, ಅದನ್ನು ಪಡೆಯುವ ಛಲ ಇರಬೇಕು. ಅವೆರಡೂ ಇದ್ದರೆ ಎಷ್ಟೇ ಕಷ್ಟ ಬಂದರೂ ಸಾಧಿಸಬಹುದು. ಕಷ್ಟಗಳು ಕ್ಷಣಿಕ.

ಮೊದಲ ಪ್ರಯತ್ನದಲ್ಲಿಯೇ ಎವರೆಸ್ಟ್ ಏರಿದ ಹುಬ್ಬಳ್ಳಿ ನಾರಿ.

image

ಸಾಹಸದ ತುಡಿತ…ಮೊದಲ ಪ್ರಯತ್ನದಲ್ಲೇ ಎವರೆಸ್ಟ್ ಏರಿದ ಹುಬ್ಬಳ್ಳಿ ಯುವತಿ!
ವಾಣಿಜ್ಯ ನಗರಿಯ ಯುವತಿಯೊಬ್ಬರು ಪ್ರಥಮ ಪ್ರಯತ್ನದಲ್ಲೇ ಮೌಂಟ್ ಎವರೆಸ್ಟ್ ಏರುವ ಮೂಲಕ ಸಾಧನೆ ಮಾಡಿದ್ದಾರೆ. ವಿದ್ಯಾನಗರದ ನಂದಿತಾ ನಾಗನಗೌಡ ಎಂಬುವರೇ ಈ ಸಾಧನೆಗೈದ ಯುವತಿ.

ಅಮೆರಿಕದಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ

27 ವರ್ಷದ ನಂದಿತಾ, ನಗರದ ಬಿವಿಬಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರೈಸಿ ಅಮೆರಿಕದಲ್ಲಿ ಎಂಬಿಎ ಪದವಿ ಪಡೆದು ಅಲ್ಲೇ ಸಾಫ್ಟ್‌‌‌‌ವೇರ್‌‌‌‌‌‌‌‌‌‌‌‌‌‌‌‌‌‌‌‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಚಿಕ್ಕನಿಂದಲೂ ಸಾಹಸ ಕ್ರೀಡೆಯಲ್ಲಿ ಆಸಕ್ತಿ

ಚಿಕ್ಕಂದಿನಿಂದಲೂ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ನಂದಿತಾ, ಸುಮಾರು 8 ಸಾವಿರ ಮೀಟರ್ ಎತ್ತರದ ದಕ್ಷಿಣ ವಿಭಾಗದ ಹಿಮಾಲಯ ಪರ್ವತ ಏರಿ ಸಾಧನೆ ಮಾಡಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ ಹೊಂದಿದ್ದ ನಂದಿತಾ, ತಮ್ಮ ಜೀವನದಲ್ಲಿ ಅದ್ಭುತ ಸಾಧನೆಯನ್ನೇ ಮಾಡಿದ್ದಾರೆ. ಮಾರ್ಚ್‌ 15 ರಿಂದ ತಮ್ಮ ಮೂವರು ಸ್ನೇಹಿತರೊಂದಿಗೆ ಮೌಂಟ್ ಎವರೆಸ್ಟ್ ಏರಲು ಆರಂಭಿಸಿದ ನಂದಿತಾ ಮೇ 6 ರ ವೇಳೆಗೆ 8 ಸಾವಿರ ಮೀಟರ್ ಕ್ರಮಿಸಿ ತಮ್ಮ ಗುರಿ ತಲುಪಿದ್ದರು.  

ಇವರೊಂದಿಗೆ ಅಮೆರಿಕದ ಇಬ್ಬರು ಸ್ನೇಹಿತರು ಕೈ ಜೋಡಿಸಿದ್ದರು. ಇದೊಂದು ಅದ್ಭುತ ಅನುಭವ ಎಂದು ಹೇಳುವ ನಂದಿತಾ, ಒಬ್ಬರೇ ಶಿಖರ ಏರುವುದು ಬಹಳ ಕಷ್ಟ. ಆದರೆ ಜೊತೆಯಲ್ಲಿ ಯಾರಾದರೂ ಇದ್ದರೆ ಶಿಖರ ಏರುವುದು ಕಷ್ಟದ ವಿಷಯವೇನಲ್ಲ ಎನ್ನುತ್ತಾರೆ.

ಪೂರ್ವ ತರಬೇತಿ ಅಗತ್ಯ

ಮೌಂಟ್‌ ಎವರೆಸ್ಟ್ ಏರಲು ಇಚ್ಛಿಸುವವರು ಪೂರ್ವ ತರಬೇತಿ ಪಡೆದುಕೊಳ್ಳುವುದು ಉತ್ತಮ ಎಂಬುದು ನಂದಿತಾ ಅಭಿಪ್ರಾಯ. ಮೌಂಟ್‌ ಎವರೆಸ್ಟ್ ಏರುವ ಇವರ ನಿರ್ಧಾರಕ್ಕೆ ತಾಯಿ ಕಸ್ತೂರಿ ಮೊದಲು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಮಗಳ ಸಾಧನೆಗೆ ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ.

ಅಮ್ಮನ ಹಿತನುಡಿ

image

ಮಗೂ,
ಪ್ರೀತಿಸಿದವನನ್ನು
ಮದುವೆಯಾಗಲು
ನೂರು ಬಾರಿ
ಯೋಚಿಸು,
ಹೆತ್ತವರೊ೦ದಿಗೆ
ಇದರ ಬಗ್ಗೆ
ಚರ್ಚಿಸು,
ಮಗೂ, ಮದುವೆ
ಅ೦ದರೆ ಅಲ್ಲ
ಗೊ೦ಬೆಯಾಟ
ಆಗದಿರಲಿ
ನಿನ್ನ ಜೀವನ
ತೂಗುಯ್ಯಾಲೆಯ
ಆಟ,,,👭,,,,

ನಮ್ಮನ್ನು ನಾವೇ ಗುರಿತಿಸಿಕೊಳ್ಳೋಣ.

ನಾವು ಯಾರು?

image

ಪ್ರಪಂಚದಲ್ಲಿ ನಾಲ್ಕು ತರಹದ ಮನುಷ್ಯರು ನಮ್ಮೊಂದಿಗೆ ಇರುತ್ತಾರೆ. ನಾವು ಕೂಡ ಅರಿವಿದ್ದೋ ಅರಿವಿಲ್ಲದೆಯೋ ಈ ನಾಲ್ವರಲ್ಲಿ ಒಬ್ಬರಾಗಿರುತ್ತೇವೆ. ಆ ನಾಲ್ಕು ವಿಧದ ಮನುಷ್ಯರೆಂದರೆ,
1) ಉತ್ತಮ
2) ಮಧ್ಯಮ
3) ಕನಿಷ್ಠ
4) ನೀಚ

1) ಉತ್ತಮ:  ಯಾರು ತಮಗೆ ಅಪಕಾರ ಮಾಡಿದವರಿಗೂ ಅಪಕರಿಸದೆ ಉಪಕಾರವನ್ನೇ ಮಾಡುವರೋ ಅವರು ಉತ್ತಮವರ್ಗಕ್ಕೆ ಸೇರಿದವರು. ತಮಗೆ ಯಾವುದೇ ರೀತಿಯ ಅಪಕಾರ-ಅನಿಷ್ಟಗಳು ಸಂಭವಿಸಿದರೂ ಅದು ತಮ್ಮ ಪ್ರಾರಬ್ಧಕರ್ಮದ ಫಲವೇ ಹೊರತು ಬೇರೆ ಏನೂ ಅಲ್ಲ. ಅದರಲ್ಲಿ ಬೇರೆಯವರ ಪಾತ್ರವಿದ್ದರೂ ಅವರು ಅದಕ್ಕೆ ನಿಮಿತ್ತಮಾತ್ರರೇ ಹೊರತು ನಿಜವಾದ ಕಾರಣರಲ್ಲ ಎಂಬ ಭಾವನೆ ಈ ರೀತಿಯ ಮನುಷ್ಯರಲ್ಲಿರುತ್ತದೆ. ಪರರ ದೋಷವನ್ನು ಉತ್ತಮ ಜನರು ಗಮನಿಸುವುದಿಲ್ಲ.

2) ಮಧ್ಯಮ: ಇವರು ಉತ್ತಮರಿಗಿಂತ ಸ್ವಲ್ಪ ಭಿನ್ನರು. ಅವರು ತಮಗೆ ತೊಂದರೆ ಕೊಡುವವರಿಗೆ ಅಪಕಾರವನ್ನಂತೂ ಮಾಡುವುದಿಲ್ಲ. ಆದರೆ ಅವರಿಗೆ ಎಂದೂ ಉಪಕಾರವನ್ನೂ ಮಾಡುವುದಿಲ್ಲ.

3) ಕನಿಷ್ಟ: ಮೂರನೇ ವರ್ಗಕ್ಕೆ ಸೇರಿದ ಕನಿಷ್ಠ ಜನರು ಹಾಗಲ್ಲ. ಅಪಕಾರ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಪ್ರತಿಯಾಗಿ ಅಪಕಾರವನ್ನು ಮಾಡುತ್ತ ಅವರನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ.

ಈ ಮೂರನೇ ವರ್ಗದವರಲ್ಲಿಯೂ ನಾಲ್ಕು ವಿಧವಿದೆ. ಮೊದಲನೆಯವರು, ತಮಗೆ ತೊಂದರೆ ಕೊಟ್ಟವರಿಗೆ ಪ್ರತಿಯಾಗಿ ತೊಂದರೆಯನ್ನು ಕೊಟ್ಟು ಬದಲಾಯಿಸಲು ಪ್ರಯತ್ನಿಸುವವರು.
ಎರಡನೆಯವರು ತಮಗೆ ತೊಂದರೆ ಕೊಟ್ಟವರಿಗೆ ತಾವಾಗಿಯೇ ಏನೂ ಮಾಡದೇ ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವವರು. ಮೂರನೆಯವರು ನ್ಯಾಯಾಲಯಕ್ಕೆ ಹೋಗದೆ ಪಂಚರ ಮುಖಾಂತರ ದಂಡವನ್ನು ಕೊಡಿಸುತ್ತಾರೆ. ನಾಲ್ಕನೆಯವರು ಎಲ್ಲಿಯೂ ಹೋಗದೆ ತಮ್ಮ ಕೈಲಾಗದಿದ್ದರೆ ಅವರಿಗೆ ಮನಸ್ಸಿನಲ್ಲೇ ಸದಾ ಅನಿಷ್ಟವನ್ನು ಬಯಸುವವರು. ಈ ರೀತಿಯ ನಾಲ್ವರು ಕನಿಷ್ಠವರ್ಗಕ್ಕೆ ಸೇರಿದವರು.

4) ನೀಚರು: ಇನ್ನು ಕೊನೆಯ ವರ್ಗದವರು ನೀಚರು. ಇವರು ಎಲ್ಲರಿಗೂ ಕೆಟ್ಟದ್ದನ್ನೇ ಮಾಡುವವರು. ಕೆಟ್ಟದ್ದನ್ನೇ ಬಯಸುವವರು. ಒಂದುವೇಳೆ ಇವರಿಗೆ ಕಿಂಚಿತ್ ತೊಂದರೆಯಾದರೂ ಜಗತ್ತನ್ನೇ ನಿಂದಿಸುವರು. ಹಾಗಾದರೆ ಈ ರೀತಿಯ ನಾಲ್ಕು ವಿಧದ ಜನರ ಗುಂಪಿನಲ್ಲಿ ನಾವು ಯಾರು? ಪ್ರಪಂಚ ಗುರುತಿಸುವ ಮೊದಲು ನಮ್ಮನ್ನು ನಾವೇ ಗುರುತಿಸಿಕೊಳ್ಳಬೇಕು.