ಸಾಮಾಜಿಕ ಸ್ವಾಸ್ಥ್ಯ ಹರಿಕಾರ ವಿಶ್ವಗುರು ಬಸವಣ್ಣ.

ಸಾಮಾಜಿಕ ಸ್ವಾಸ್ಥ್ಯ ಹರಿಕಾರ ವಿಶ್ವಗುರು ಬಸವಣ್ಣ

Saturday, 29.04.2017.

ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ.
ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನದ ಪ್ರಕಾರ ಸ್ವಾಸ್ಥ್ಯ ಅಥವಾ ಆರೋಗ್ಯವೆಂದರೆ- ‘ಆರ್ಥಿಕವಾಗಿ, ಸಾಮಾಜಿಕವಾಗಿ ಫಲಕಾರಿ ಜೀವನ ನಡೆಸುವ ಸಾಮರ್ಥ್ಯವಿರುವುದು’. ನಮ್ಮಲ್ಲಿ ಎಷ್ಟೋ ಜನ ವೈಜ್ಞಾನೀಕರಣಗೊಂಡ ಆರೋಗ್ಯಕ್ಕೂ ಆಧ್ಯಾತ್ಮೀಕರಣಗೊಂಡ ಶರಣ ಸಂಸ್ಕೃತಿಯ ಹರಿಕಾರ ವಿಶ್ವಗುರು ಬಸವಣ್ಣನವರಿಗೂ ಹೇಗೆ ಸಾಮ್ಯವೆಂದು ಕೇಳಬಹುದು! ಆದರೆ ನಾವು ತಾತ್ತಿ್ವಕವಾಗಿ ವಿಚಾರಮಂಥನ ಮಾಡಿದರೆ, 12ನೇ ಶತಮಾನದಲ್ಲಿ ಬಸವಣ್ಣನವರ ಮುಂದಾಳತ್ವದಲ್ಲಿ ಬೆಳೆದ ಶರಣ ಸಂಸ್ಕೃತಿಯ ಪರಿಕಲ್ಪನೆ ಇಂದಿನ 21ನೇ ಶತಮಾನದ ವೈಜ್ಞಾನಿಕ ವಿದ್ಯಮಾನಕ್ಕಿಂತ ಉತ್ತಮವಾಗಿತ್ತೆಂದರೆ, ನಿಮಗೆ ಪರಮಾಶ್ಚರ್ಯವಾಗಬಹುದು! ಆರ್ಥಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಧಾರ್ವಿುಕವಾಗಿ ಸಮಾಜವನ್ನು ಸ್ವಸ್ಥಗೊಳಿಸಿದ್ದು ಬಸವಣ್ಣನವರು!

ಆರ್ಥಿಕವಾಗಿ, ಸಾಮಾಜಿಕವಾಗಿ ಫಲಕಾರಿ ಜೀವನ ನಡೆಸಲು ಸಾಮರ್ಥ್ಯ ಇಂದು ನಮಗೆ ಬರಬೇಕೆಂದರೆ, ವಿದ್ಯೆ, ಬುದ್ಧಿ, ವಿಶ್ವವಿದ್ಯಾಲಯಗಳ ಪದವಿ ಮತ್ತು ಕೈತುಂಬ ಸಂಪಾದನೆಯ ಕೆಲಸ ಬೇಕು! ಚೆನ್ನಾಗಿ ಸಂಪಾದಿಸುವವರೆಲ್ಲ ಇಂದು ಸಮಾಜಮುಖಿಗಳಾಗಿಲ್ಲ! ವಾಮಮಾರ್ಗದಿಂದ ಸಂಪಾದಿಸಿದ್ದನ್ನು ಸ್ವಿಸ್ ಬ್ಯಾಂಕಿನಲ್ಲಿ ಪನಾಮಾದಲ್ಲಿ ಇಟ್ಟು, ಇಲ್ಲಿ ಜನರ ಶೋಚನೀಯ ಸ್ಥಿತಿಗೆ ಕಾರಣರಾದ ಈ ವಿಕೃತ ಮನಸ್ಸಿನವರು ಸಾಮಾಜಿಕವಾಗಿ ಅಸ್ವಸ್ಥರು! ಅವರಿಗೆ ಚಿಕಿತ್ಸೆ ಆಗಲೇಬೇಕು. ಆದರೆ ವಿಶ್ವಗುರು ಬಸವಣ್ಣನವರು ಕೊಟ್ಟ ದಿವ್ಯಮಂತ್ರ ‘ಕಾಯಕವೇ ಕೈಲಾಸ’- ಇದು ಒಬ್ಬ ವ್ಯಕ್ತಿಯನ್ನಲ್ಲ ಇಡೀ ಸಮಾಜವನ್ನೇ ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಸ್ಥರನ್ನಾಗಿಸಿ ಫಲಕಾರಿ ಜೀವನ ನಡೆಸಲು ಅನುವುಮಾಡಿಕೊಡುತ್ತದೆ! ಯಾವುದೇ ಕೆಲಸ ಮಾಡಿದರೂ ಅದು ದೈವೀಸ್ವರೂಪವಾದ ಸಮಾಜಕ್ಕೆ ದಾಸನಾಗಿ ಎಂದು ಮಾಡಿದಾಗ ಎಲ್ಲರೂ ಸುಖ ಸಂತೃಪ್ತಿಯಿಂದ ಇರಬಹುದು ಎಂಬುದು ಬಸವಣ್ಣನವರ ಪರಿಕಲ್ಪನೆ.

ಸ್ವತಃ ಆರ್ಥಿಕತಜ್ಞರಾಗಿ ಬಿಜ್ಜಳ ರಾಜರ ಹಣಕಾಸು ನೋಡಿಕೊಳ್ಳುತ್ತಿದ್ದ, ಅವರ ಬೊಕ್ಕಸ ತುಂಬಿದ ಬಸವಣ್ಣನವರು ಆರ್ಥಿಕವಾಗಿ ಹಿಂದುಳಿದ ಬಡಬಗ್ಗರನ್ನು ಸಬಲೀಕರಣಗೊಳಿಸಿ, ಅದೇ ಸಮಯಕ್ಕೆ ಸಾಹುಕಾರರಲ್ಲಿ ಸ್ವಾರ್ಥ ಹೋಗಿ ಸದ್ಬುದ್ಧಿ ತರಲು ‘ಕಾಯಕವೇ ಕೈಲಾಸ’ ಎನ್ನುವ ದಿವ್ಯಮಂತ್ರನ್ನು ಕೊಟ್ಟರು. ಹೊಟ್ಟೆಪಾಡಿಗೆ ಕೆಲಸ ಮಾಡಿದರೆ ಅದರಲ್ಲಿ ಸ್ವಾರ್ಥ, ಲಾಭ-ನಷ್ಟಗಳ ಲೆಕ್ಕಾಚಾರ ಬರುತ್ತದೆ. ಆದರೆ ಪ್ರತಿಯೊಂದು ಕೆಲಸವನ್ನೂ ದೈವೀಸ್ವರೂಪ ಸಮಾಜಕ್ಕಾಗಿ ದಾಸನಾಗಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಅದು ಕಾಯಕವಾಗುತ್ತದೆ! ಇದೇ ಜೀವನ. ಹೀಗೆ ಸತ್ಯಶುದ್ಧ ಕಾಯಕದಲ್ಲಿ ಸವೆಸಿದರೆ ‘ಕಾಯಕಯೋಗಿಗಳು’ ಆಗುತ್ತಾರೆ. ಉದಾಹರಣೆಗೆ, ಸರ್ ಎಂ. ವಿಶ್ವೇಶ್ವರಯ್ಯ, ದಿ. ಬಾಳೇಕುಂದ್ರಿಯವರು ಕಾಯಕಯೋಗಿಗಳು! ಅವರು ಕಾವೇರಿ ಮತ್ತು ಕೃಷ್ಣೆಯ ನೀರಿನ ಸಮರ್ಪಕ ಬಳಕೆಗೆ ಶ್ರಮಿಸಿ, ಬಡರೈತರ ಹೊಲಕ್ಕೆ ನೀರುಣಿಸಿ ಕೈಲಾಸ ಕಟ್ಟಲು ಶ್ರದ್ಧೆಯಿಂದ ಶ್ರಮಿಸಿದ ಕಾಯಕಯೋಗಿಗಳು. ಆದ್ದರಿಂದ “Work is Worship’ಗಿಂತಲೂ ಅದ್ಭುತ ಪರಿಕಲ್ಪನೆ ‘ಕಾಯಕವೇ ಕೈಲಾಸ’. ಕಾರಣ “Worship’ ಎಂದಾಗ ಜನರು, ‘ಭಗವಂತ ನಿನಗೆ ಜೋಡುಗಾಯಿ ಒಡೆಸುತ್ತೇನೆ, ಅದು ಕೊಡಪ್ಪ ಇದು ಕೊಡಪ್ಪ’ ಎನ್ನುತ್ತಾರೆ! ಆದರೆ ಬಸವಣ್ಣನವರ ಸತ್ಯಶುದ್ಧ ಕಾಯಕದ ಪರಿಕಲ್ಪನೆಯಲ್ಲಿ ಸ್ವಾರ್ಥದ ಲವಲೇಶವಿಲ್ಲ. ಫಲಾಫಲದ ಅಪೇಕ್ಷೆ ಇಲ್ಲದೇ ಪರಿಶುದ್ಧ ಮನಸ್ಸಿನಿಂದ ಕಾಯಕ ಮಾಡುವುದನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡರೆ, ಎಲ್ಲರ ಬದುಕಿನಲ್ಲೂ ಸಮೃದ್ಧಿ ತಾನಾಗಿಯೇ ಬರುತ್ತದೆ.

ಅಂದಿನ ಕಾಲದ ಶರಣರು ಕಾಯಕಮಾಡಿ, ಕಲ್ಯಾಣವು ಕೈಲಾಸದಂತೆ ಕಂಗೊಳಿಸುವಂತೆ ಮಾಡಿದ್ದರು! ಯಾವ ಕೆಲಸವೂ ದೊಡ್ಡದಲ್ಲ, ಚಿಕ್ಕದಲ್ಲ; ಅದು ಕೀಳಲ್ಲ, ಕ್ಷುಲ್ಲಕವೂ ಅಲ್ಲ- ‘ಅಸಿಯಾಗಲಿ ಕೃಷಿಯಾಗಲಿ, ವಾಚಕ ವಾಣಿಜ್ಯ ಮಸಿಯಾಗಲಿ, ಮಾಡುವಲ್ಲಿ ಹುಸಿ ಇಲ್ಲದಿರಬೇಕು’- ಅಂದರೆ ಯಾವುದೇ ಕಾಯಕ ಮಾಡಿದರೂ ಅದರಲ್ಲಿ ಸುಳ್ಳು, ವಂಚನೆ ಇರಕೂಡದು ಎಂದರು. ಇಂದು ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕ ಮಾಡಿದರೆ, ಆರ್ಥಿಕವಾಗಿ ವಿಶ್ವದಲ್ಲಿ ಭಾರತ ಪ್ರಥಮವಾಗುವುದರಲ್ಲಿ ಸಂದೇಹವೇ ಇಲ್ಲ.

ಆದರೆ, ಎಷ್ಟೇ ಆರ್ಥಿಕವಾಗಿ ಬೆಳೆದರೂ ಇಂದಿನ ಸಮಾಜದಲ್ಲಿ ಎಲ್ಲಿ ನೋಡಿದರಲ್ಲಿ ಮೋಸ, ವಂಚನೆ, ಲಂಚ ಹೆಚ್ಚಾಗಿವೆ. ಇದಕ್ಕೆ ಬಸವಣ್ಣನವರು ಪಾಪದಿಂದ ಪ್ರಾಪ್ತಿಯಾದ ಹಣ ಪ್ರಾಯಶ್ಚಿತ್ತಕ್ಕೆ ಮಾತ್ರ ಪ್ರಯೋಜನ ಎಂದು ಹೇಳಿದ್ದಾರೆ.

ಬಸವಣ್ಣನವರ ವಿಚಾರದಿಂದ ಪ್ರಭಾವಿತರಾದ ಶರಣರು ಎಂದೂ ವಾಮಮಾರ್ಗದಿಂದ ಹಣವನ್ನು ಸಂಪಾದಿಸಲಿಲ್ಲ. ಅಷ್ಟೇ ಅಲ್ಲ, ಇತರರ ಹಣಕ್ಕೆ ಆಸೆಪಡಲಿಲ್ಲ. ಇದನ್ನು ಶರಣೆ ಸತ್ಯಕ್ಕ ಮನಮುಟ್ಟುವಂತೆ ಹೇಳುತ್ತಾರೆ- ‘ಲಂಚ ವಂಚನಕ್ಕೆ ಕೈಯಾನದ ಭಾಷೆ, ಬಟ್ಟೆಯಲ್ಲಿ ಹೊನ್ನವಸ್ತ್ರ ಬಿದ್ದಿದ್ದಡೆ ಕೈಮುಚ್ಚಿ ಎತ್ತಿದೊಡೆ ಅಯ್ಯಾ ನಿಮ್ಮಾಣೆ ನೀವಿಕ್ಕಿದ ಭಿಕ್ಷೆಯೊಳಗಾನಿಪ್ಪೆನಯ್ಯಾ ಶಂಭು ಜಕ್ಕೇಶ್ವರ ದೇವಯ್ಯ’. ಒಬ್ಬ ಮಹಿಳೆಯು ಪ್ರಾಮಾಣಿಕತೆಯ ಪರಾಕಾಷ್ಠೆ ಮೆರೆದಂತೆ, ಇಂದು ಜನ ಶರಣೆ ಸತ್ಯಕ್ಕನಂತೆ ಆಣೆ, ಪ್ರಮಾಣ ಮಾಡಿ ಪ್ರಾಮಾಣಿಕರಾಗಿ ಬದುಕಿದರೆ, ಬದುಕು ಬಂಗಾರವಾಗುತ್ತದೆ.

ದುರದೃಷ್ಟಕರ ಸಂಗತಿ ಎಂದರೆ, ಇಂದು ಜನರು ಹಣದ ಹಿಂದೆ ಸಾಗುವ ಹುಚ್ಚರಾಗಿದ್ದಾರೆ. ಧಾವಂತದ ಆಧುನಿಕ ಬದುಕಿನಲ್ಲಿ ಅವರು ಹೆಂಡತಿ, ಮಕ್ಕಳು, ಮನೆ-ಮಠ, ದೇವರನ್ನು ಮರೆತು ಬದುಕಿನ ಒತ್ತಡಕ್ಕೆ ಅಕಾಲಿಕವಾಗಿ ಹೃದಯಾಘಾತವಾಗಿ ಸಾಯುತ್ತಿದ್ದಾರೆ. ಇಂಥವರು ಬಸವಣ್ಣನವರ ಈ ವಚನವನ್ನು ಮನನ ಮಾಡಿಕೊಳ್ಳಬೇಕು-

ಕಾಂಚನವೆಂಬ ನಾಯ ನೆಚ್ಚಿ, ನಿಮ್ಮ ನಾನು ಮರೆದೆನಯ್ಯ.

ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ!

ಹಡಿಕಿಗೆ ಮೆಚ್ಚಿದ ಸೊಣಗ ಅಮೃತದ ಸವಿಯ ಬಲ್ಲುದೇ ?

ಕೂಡಲಸಂಗಮದೇವಾ.

ಇನ್ನು ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದು ಉಪಮಾತೀತ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ, ಸಮಾಜ ಕಟ್ಟುವ ನಿಟ್ಟಿನಲ್ಲಿ ಅವರು ಸರ್ವರಿಗೂ ಸಮಬಾಳ್ವೆ, ಸರ್ವರಿಗೂ ಸಮಪಾಲು ತರುವ ಸಮಾನತೆಯನ್ನು ಸಾರಿದರು. ಬಸವಣ್ಣನವರು ಬಡವರ ಆರ್ಥಿಕ ಸಬಲೀಕರಣದ ಜತೆಗೆ, ಅವರಿಗೆ ಸಮಬಾಳ್ವೆ, ಸಮಾನತೆ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದವರಲ್ಲಿ ಪ್ರಥಮರು. ಪರಮಾತ್ಮನ ಅಂಶವಾದ ಆತ್ಮ ಎಲ್ಲರಲ್ಲೂ ಇರುವುದರಿಂದ ಎಲ್ಲರೂ ದೈವಾಂಶಸಂಭೂತರು ಎಂದು ಅವರು ಪ್ರತಿಪಾದಿಸಿದರು.

ಸಮಾಜದ ಎಲ್ಲ ವರ್ಗದವರಿಗೆ ಸಮಾನತೆ ಕಲ್ಪಿಸಿಕೊಡಲು ವಿಶ್ವದ ಪ್ರಪ್ರಥಮ ಸಂಸತ್ತು ಎಂದು ಪ್ರಸಿದ್ಧಿಯಾಗಿರುವ ‘ಅನುಭವ ಮಂಟಪ’ ಕಟ್ಟಿಸಿ, ಅದರ ಶೂನ್ಯ ಸಿಂಹಾಸನದಲ್ಲಿ ಜ್ಞಾನದ ಮೇರುಪರ್ವತವಾದ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿಸಿದರು. ಇಡೀ ವಿಶ್ವದಲ್ಲಿಯೇ ಒಂದೇ ಸ್ಥಳದಲ್ಲಿ ಏಕಕಾಲಕ್ಕೆ 365 ಜನ ಸಾಹಿತ್ಯ ರಚಿಸಿ ವಾಚಿಸಿದ್ದು ಈ ಅನುಭವ ಮಂಟಪದಲ್ಲಿ! ‘ವಚನ ಸಾಹಿತ್ಯ’ವೆಂಬ ವಿಶಿಷ್ಟ ವಿನೂತನ ಸಾಹಿತ್ಯ ರಚಿಸುವುದರಲ್ಲಿ ಮಹಿಳೆಯರು ಹಿಂದೆಬೀಳಲಿಲ್ಲ. ಅಕ್ಕಮಹಾದೇವಿ ಕನ್ನಡದ ಪ್ರಥಮ ಕವಯಿತ್ರಿಯಾಗಿ ಉತ್ಕೃಷ್ಟ ವಚನಗಳನ್ನು ರಚಿಸಿದ ಮಹಾನ್ ದಾರ್ಶನಿಕಳಾದಳು. ಜನರು, ಜನರಿಗಾಗಿ ರಚಿಸಿದ ಸಾಹಿತ್ಯವೇ ವಚನ. ಇದರಲ್ಲಿ ‘ವ’ ಎಂದರೆ ವಚಿಸುವುದು, ‘ಚ’ ಎಂದರೆ ಚಲನಶೀಲರಾಗಿರುವುದು, ‘ನ’ ಎಂದರೆ ನರತ್ವ ನೀಗಿ ಹರತ್ವ ಸಾಧಿಸುವುದು ಎಂದರ್ಥ.

ಇಂಥ ವಚನಗಳಲ್ಲಿ ಶರಣರು ತಮ್ಮ ಅನುಭವ ಮತ್ತು ಅನುಭಾವ ಎರಡನ್ನೂ ಸೇರಿಸಿದರು. ಆದ್ದರಿಂದ ಜ್ಞಾನ, ವಿಜ್ಞಾನ ಮತ್ತು ತತ್ತ್ವಜ್ಞಾನದ ಸುಂದರ ಸಂಗಮವಾದ ವಚನಗಳನ್ನು ಕನ್ನಡದ ವೇದವೆಂದು ಕರೆದರು! ವಚನಗಳು ಜನರಿಗೆ ಬಿಡಿಸಿದ ಬಾಳೆಹಣ್ಣಿನಂತೆ ಸುಲಭವಾಗಿ ಅರ್ಥವಾಗುವಂತಾದವು. ಬಸವಣ್ಣನವರ ವಚನಗಳ ಪ್ರಭಾವ ವರಕವಿ ದ.ರಾ. ಬೇಂದ್ರೆಯವರ ಮೇಲೆ ತುಂಬಾ ಆಗಿತ್ತು. ಬಸವಣ್ಣನವರು- ‘ಎನ್ನ ಚಿತ್ತವು ಅತ್ತಿಯಹಣ್ಣು ನೋಡಯ್ಯ, ವಿಚಾರಿಸಿದರೇನು ಹುರುಳಿಲ್ಲವಯ್ಯ. ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ ನೀವಿರಿಸಿದಿರಯ್ಯ ಕೂಡಲಸಂಗಮದೇವಾ’ ಎಂದದ್ದನ್ನು ಕೆಲವು ಪಾಮರರು ‘ಅತ್ತಿಹಣ್ಣಿನಲ್ಲಿ ಹುಳ ಇರುವುದು’ ಎಂದರೆ, ಸ್ವತಃ ಅನುಭಾವಿಯಾದ ದ.ರಾ. ಬೇಂದ್ರೆಯವರು ಸರಿಯಾಗಿ ಅರ್ಥೈಸಿಕೊಂಡು ತಮ್ಮ ‘ಔದುಂಬರಗಾಥೆ’ ಕೃತಿಯಲ್ಲಿ ಅತ್ತಿಹಣ್ಣಿನ ವಿಶೇಷತೆ ಬಗ್ಗೆ ಬರೆಯುತ್ತಾರೆ. ಸಾಮಾನ್ಯವಾಗಿ ಹೂವು ಕಾಯಿ ಆಗಿ ನಂತರ ಹಣ್ಣಾಗುತ್ತದೆ. ಆದರೆ ಅತ್ತಿಹಣ್ಣು ಹೂವಾಗದೇ ನೇರ ಹಣ್ಣಾಗುತ್ತದೆ. ಅತ್ತಿಹಣ್ಣು ಬಿಡಿಸಿ ನೋಡಿದಾಗ ಅದು ಹೂವನ್ನು ತನ್ನಲ್ಲಿ ಇಟ್ಟುಕೊಂಡಿದ್ದು ಕಾಣುತ್ತದೆ. ಇದನ್ನು ಬೇಂದ್ರೆಯವರು ಚೆನ್ನಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಸಾಧಕರು ಮುಂದೆ ಸಿದ್ಧರಾಗುತ್ತಾರೆ. ಆದರೆ ಬಸವಣ್ಣನವರು ಹುಟ್ಟು ಸಿದ್ಧರಾಗಿದ್ದರಿಂದ ಅವರು ಸಾಧನೆಯನ್ನು ಮುಂದುವರಿಸಿದ ಮಹಾನ್ ಸಿದ್ಧರಾದರು!

ಇನ್ನು ಸಾಂಸ್ಕೃತಿಕವಾಗಿ ಬಸವಣ್ಣನವರು ದೊಡ್ಡ ಕ್ರಾಂತಿಯನ್ನೇ ಮಾಡಿದರು. ಶರಣಸಂಸ್ಕೃತಿ ಜಗತ್ತಿನಲ್ಲಿ ಎಲ್ಲೂ ಕಂಡರಿಯದಂಥ ಅದ್ಭುತ ಸಂಸ್ಕೃತಿ. ಇದು ಸಮಾಜದ ಅವಗುಣಗಳನ್ನು ತೆಗೆದು ಜನರು ಸದ್ಗುಣಿಗಳಾಗಿ, ಸದಾಚಾರಿಗಳಾಗಿ, ಸದ್ಭಾವನೆ, ಸದ್ಭಕ್ತಿಯಿಂದ ಬದುಕುವಂತೆ ಮಾಡಿದ ಅದ್ಭುತ ಪರಿಕಲ್ಪನೆ. ಶರಣ ಸಂಸ್ಕೃತಿಯನ್ನು ಪರಿಪಾಲಿಸಿದ್ದೇ ಆದರೆ, ಸಕಲ ಚರಾಚರರ ಸರ್ವಾಂಗೀಣ ಸ್ವಾಸ್ಥ್ಯ ವಿಕಾಸ ಮತ್ತು ಸಮೃದ್ಧಿಗೆ ನಾಂದಿಯಾಗುತ್ತದೆ. ‘ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಕೂಡಲಸಂಗಮದೇವಾ ನೀವೇ ಪ್ರಮಾಣ’ ಎಂದು ಜನರನ್ನು ಸನ್ಮಾರ್ಗದಲ್ಲಿ ನಡೆಸಿದವರು ಬಸವಣ್ಣನವರು. ಇದರಿಂದ, ಕಾಶ್ಮೀರ, ಅಫ್ಘಾನಿಸ್ತಾನ, ಒಡಿಶಾ ಹೀಗೆ ಹತ್ತು ಹಲವು ಕಡೆಯಿಂದ ಸದ್ಭಕ್ತರು ಕಲ್ಯಾಣಕ್ಕೆ ಆಗಮಿಸಿದರು, ಅದನ್ನು ಸಮೃದ್ಧಗೊಳಿಸಿದರು!

ಬಸವಣ್ಣನವರ ಮಹಾಮನೆಗೆ 1000 ಕಂಬಗಳಿದ್ದವು, 5 ಮಹಾದ್ವಾರಗಳಿದ್ದವು. ದಿನಕ್ಕೆ 1,95,000 ಜನ ಜಂಗಮರು ದಾಸೋಹ ಮಾಡುತ್ತಿದ್ದರು. ಬಸವಣ್ಣನವರ ತತ್ತ್ವಸಿದ್ಧಾಂತದಿಂದ ಪ್ರಭಾವಿತರಾದ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಲವು ವಿಚಾರಗಳನ್ನು ಸರ್ವರಿಗೂ ಸಮಾನತೆ ಕೊಡಲು ಸಂವಿಧಾನದಲ್ಲಿ ಅಳವಡಿಸಿದರು!ಆದ್ದರಿಂದ, ಬಸವಣ್ಣನವರನ್ನು ಒಂದು ಗುಂಪಿಗೆ, ಒಂದು ಪಂಗಡಕ್ಕೆ, ವೀರಶೈವ ಧರ್ಮಕ್ಕೆ ಸೀಮಿತಗೊಳಿಸದೇ ವಿಶ್ವಕ್ಕೆ ಕಾಯಕ ದಾಸೋಹದ ಮುಖಾಂತರ ಸಕಲ ಜೀವಾತ್ಮರ ಸ್ವಾಸ್ಥ್ಯ್ಕೆ ಶ್ರಮಿಸಿದ ವಿಶ್ವಗುರುವೆಂದು ಪರಿಗಣಿಸಿ ಅವರ ನುಡಿಗಳಂತೆ ನಡೆದರೆ ಭೂಮಿಯು ಖಂಡಿತ ‘ಭೂಕೈಲಾಸ’ವೇ ಆಗುವುದು.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

***

ಕ್ರಾಂತಿಕಾರಕ ನಾಯಕತ್ವಕ್ಕೆ ಮಾದರಿ ಯುಗಪುರುಷ
29.04.2017.
ಸಂಕೀರ್ಣ ಜನಾಂದೋಲನ ಎನಿಸಿದ್ದ ‘ಕಲ್ಯಾಣ ಕ್ರಾಂತಿ’ ಅನೇಕ ಅನುಕರಣೀಯ ಅಂಶಗಳನ್ನು ಒಡಲಲ್ಲಿ ತುಂಬಿಕೊಂಡಿತ್ತು. ಸಮಷ್ಟಿಯ ಹಿತಕ್ಕಾಗಿ ವ್ಯಷ್ಟಿಪ್ರಜ್ಞೆ ಅಡಿಗಲ್ಲಾಗಿರಬೇಕು ಎಂಬುದನ್ನು ಸಾರಿದ ಈ ಸಮಾಜಮುಖಿ ಚಳವಳಿಯ ಅಧ್ವರ್ಯುವಾಗಿದ್ದ ಬಸವಣ್ಣನವರು ‘ನಾಯಕತ್ವದ ಗುಣ’ ಎಂಬ ಪರಿಕಲ್ಪನೆಯ ಸಾಕಾರಮೂರ್ತಿಯಾಗಿದ್ದರು. ಆ ಕುರಿತಾದ ಒಂದು ಕಿರುನೋಟವಿದು.

| ಡಿ.ಪಿ. ಪ್ರಕಾಶ್.

ಜಗತ್ತು ವಿವಿಧ ರಂಗಗಳಲ್ಲಿ ಅನೇಕ ಆಂದೋಲನಗಳನ್ನು ಕಂಡಿದೆ. ಯಾವುದೇ ಆಂದೋಲನಕ್ಕೆ ನಾಯಕನ ಅಗತ್ಯ ಎಷ್ಟು ಮುಖ್ಯವೋ ನಾಯಕತ್ವದ ಗುಣವೂ ಅಷ್ಟೇ ಮುಖ್ಯ. ವಿವಿಧ ಕಾಲಘಟ್ಟಗಳಲ್ಲಿ ನಡೆದುಹೋಗಿರುವ ಆಂದೋಲನಗಳನ್ನು ಪರಾಮಶಿಸಿದಾಗ, ಕೆಲವು ನಾಯಕತ್ವ ಗುಣಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅಂಥವುಗಳನ್ನು ಮಾದರಿ ನಾಯಕನಿಗಿರಬೇಕಾದ ಗುಣಗಳಿಗೆ ಹೋಲಿಸಿ ನೋಡಲಾಗುತ್ತದೆ. ಎಲ್ಲ ಸ್ತರಗಳಲ್ಲಿನ ವ್ಯಕ್ತಿಗಳನ್ನು ಸಂಘಟಿಸಿ ಅವರಲ್ಲಿ ಹೊರಹೊಮ್ಮಿದ ಒಮ್ಮತದ ಶಕ್ತಿಯಿಂದ ಪರ್ಯಾಯ ಸಮಾಜ ನಿರ್ವಿುಸಿದ ಬಸವಣ್ಣನವರ ಕ್ರಾಂತಿಕಾರಕ ನಾಯಕತ್ವ ಇಂದಿಗೂ ಜಗತ್ತನ್ನು ಬೆರಗುಗೊಳಿಸುವಂಥದ್ದು. ಯಾವುದೇ ಸಂವಹನ ಸೌಲಭ್ಯಗಳಿಲ್ಲದೆ ಕೇವಲ ಬಾಯಿಂದ ಬಾಯಿಗೆ ಸಂಗತಿಗಳು ಪ್ರಚಾರಗೊಳ್ಳುತ್ತಿದ್ದ ಆ ಕಾಲದಲ್ಲಿ ಕೆಲವೇ ದಶಕಗಳಲ್ಲಿ ಒಂದು ಪರ್ಯಾಯ ಸಮಾಜ ಅಸ್ತಿತ್ವಕ್ಕೆ ಬಂದಿತೆಂದರೆ ಬಸವಣ್ಣನವರದು ಒಂದು ರೀತಿಯಲ್ಲಿ ಅಸಾಧಾರಣ ನಾಯಕತ್ವವೇ ಸರಿ.

‘ಕಲ್ಯಾಣ ಕ್ರಾಂತಿ’ ಒಂದು ಸಂಕೀರ್ಣ ಜನಾಂದೋಲನ. ಪ್ರಗತಿಪರ ಚಳವಳಿಗಳಿಗೆ ಅನೇಕ ಅನುಕರಣೀಯ ಅಂಶಗಳು ಅಲ್ಲಿ ಅಡಕವಾಗಿರುವುದನ್ನು ಗಮನಿಸಬಹುದು. ಇದು ಪ್ರಮುಖವಾಗಿ ಸಮಾಜಮುಖಿಯಾಗಿದ್ದು, ಸಾಮೂಹಿಕ ನಾಯಕತ್ವ ಮತ್ತು ಬಸವಣ್ಣನವರ ನಾಯಕತ್ವ ಎರಡೂ ಅದರಲ್ಲಿ ಐಕ್ಯಗೊಂಡಿವೆ. ಸಮಷ್ಟಿಯ ಹಿತಕ್ಕಾಗಿ ವ್ಯಷ್ಟಿಪ್ರಜ್ಞೆ ತನ್ನನ್ನು ತಾನು ಅಡಿಗಲ್ಲಾಗಿರಿಸಿಕೊಂಡಿರುವುದು ಈ ಕ್ರಾಂತಿಯ ವೈಶಿಷ್ಟ್ಯ ಆದ್ದರಿಂದಲೇ ಇಂದಿನ ಅನೇಕ ಸಮಸ್ಯೆ, ಪಿಡುಗುಗಳಿಗೆ ಮತ್ತೊಮ್ಮೆ ಸಮಷ್ಟಿಹಿತ ಕ್ರಾಂತಿಯಾಗಬೇಕೆಂದರೆ ಕಲ್ಯಾಣ ಕ್ರಾಂತಿ ಮಾದರಿಯಾಗಿ ನಿಲ್ಲುತ್ತದೆ. ಜನಾಂದೋಲನಕ್ಕೆ ಹೊಸ ವ್ಯಾಖ್ಯಾನ ಬರೆಯಿತೇನೋ ಎನ್ನುವಂತೆ ಕಲ್ಯಾಣ ಕ್ರಾಂತಿ ನಡೆಯಿತು. ಸಮಾಜದ ಎಲ್ಲ ವಲಯಗಳಿಂದ ಜನರನ್ನು ಸೆಳೆದು ಸಾಮೂಹಿಕ ಶಕ್ತಿಗೆ ಉದಾಹರಣೆಯಾಯಿತು. ಆದ್ದರಿಂದಲೇ ಕಲ್ಯಾಣ ಕ್ರಾಂತಿ ಇಂದು ಜಗತ್ತು ಬಯಸುವ ಪರಿವರ್ತನೆಯ ಶಕ್ತಿಗೆ ಪರಮೋಚ್ಚ ಉದಾಹರಣೆ. ಅಲ್ಲಿ ಉತ್ತರದಾಯಿತ್ವದ ನೆರಳಡಿಯಲ್ಲೇ ಅನೇಕ ಶರಣರು ಸಂದಭೋಚಿತ ನಾಯಕತ್ವದೊಂದಿಗೆ ಸಹಜವೊ ಎಂಬಂತೆ ಕೈ ಜೋಡಿಸಿದರು. ಅಸಾಧ್ಯವಾದುದನ್ನು ಸಾಧಿಸಿದರು. ಈ ಯಶೋಗಾಥೆಯೇ ಕಲ್ಯಾಣ ಕ್ರಾಂತಿಯ ವ್ಯಾಕರಣವಾಗಿದೆ.

ಉತ್ತರದಾಯಿತ್ವಕ್ಕೆ ಉತ್ತಮ ಉದಾಹರಣೆ: ಕಲ್ಯಾಣ ಕ್ರಾಂತಿಯುದ್ದಕ್ಕೂ ಪ್ರತಿ ಶರಣರಲ್ಲೂ ನಿಚ್ಚಳವಾಗಿ ಕಾಣುವುದೆಂದರೆ ಜವಾಬ್ದಾರಿ ಹಾಗೂ ಉತ್ತರದಾಯಿತ್ವ. ಇದು ಮೇಲಿಂದ ಹೇರಲ್ಪಟ್ಟದ್ದಲ್ಲ; ಅದು ಅವಶ್ಯಕ ಮತ್ತು ಅನಿವಾರ್ಯ ಎನ್ನುವ ಪ್ರಜ್ಞೆ ಶರಣರಲ್ಲಿ ತಂತಾನೇ ಬೆಳೆಯಿತು. ಬಸವಣ್ಣನವರ ಹೊಸನೋಟದಲ್ಲಿ ತಮ್ಮ ಹೊಸಜೀವನದ ದಿಕ್ಕು-ದೆಸೆ ಅಡಗಿದೆ ಎಂಬುದು ಅವರಿಗೆ ವೇದ್ಯವಾಗಿತ್ತು. ಆದ್ದರಿಂದಲೇ ಜವಾಬ್ದಾರಿ ವಹಿಸಿಕೊಳ್ಳಲು ಯಾರೂ ಹಿಂಜರಿಯಲಿಲ್ಲ; ಎಂಥ ಬಲಿದಾನಕ್ಕೂ ಸಿದ್ಧರಾದರು. ಹೊಸ ವ್ಯವಸ್ಥೆ ಕಟ್ಟುವಲ್ಲಿ ಸಮಷ್ಟಿಪ್ರಜ್ಞೆಯೇ ದಿಕ್ಸೂಚಿಯಾಗಬೇಕು ಎಂದರಿತರು. ವ್ಯಷ್ಟಿಪ್ರಜ್ಞೆ ಸೋಪಾನವಾಯಿತು. ಸಮಷ್ಟಿಪ್ರಜ್ಞೆ ಅದನ್ನೇರಿ ಮಾನವನ ಔನ್ನತ್ಯದ ಅರಿವನ್ನು ಸಾರಿಹೇಳಿತು. ಬಸವಣ್ಣನವರ ನಾಯಕತ್ವ ಪ್ರತಿಯೊಬ್ಬರಲ್ಲೂ ಪ್ರತಿಫಲನಗೊಂಡಿತು. ಅವರ ಕಾಳಜಿ ಪ್ರತಿ ಶರಣರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿತು.

ಪರಿವರ್ತನೆಗೆ ಮುನ್ನುಡಿ: ಇವೆಲ್ಲವನ್ನೂ ಸಾಧ್ಯಗೊಳಿಸಿದ ಬಸವಣ್ಣನವರ ಕಾರ್ಯಕ್ಷಮತೆ ಹೇಗಿತ್ತು ಎಂಬುದೇ 12ನೇ ಶತಮಾನದ ಕುತೂಹಲಕರ ಸಂಗತಿ. ಸಾಮಾನ್ಯರ ಆಧ್ಯಾತ್ಮಿಕ ಉನ್ನತಿಯ ಜತೆಗೆ ಇಡೀ ವ್ಯವಸ್ಥೆಯ ಸುಧಾರಣೆಯಲ್ಲಿ ಅವರೆಲ್ಲರೂ ಕಾಯಾ-ವಾಚಾ-ಮನಸಾ ಪಾಲ್ಗೊಳ್ಳುವಂತೆ ಮಾಡಿದ ಬಸವಣ್ಣನವರ ಮುಂದಾಳತ್ವ ಅಚ್ಚರಿದಾಯಕ. ಸ್ಪಷ್ಟವಾದ ತಾತ್ತಿ್ವಕ ನಿಲುವಿನಿಂದ ಸಾವಿರಾರು ಶರಣರನ್ನು ಸೆಳೆದ ಅವರ ನಿಲುವು ಹಾಗೂ ಸಮರ್ಪಣಾ ಮನೋಭಾವ, ನಾಯಕತ್ವಕ್ಕೆ ಹಿಂದೆಂದೂ ಸಿಗದ ಹೊಸ ಆಯಾಮ ದೊರಕಿಸಿಕೊಡುತ್ತವೆ. ಯಾವ ಧಾರ್ವಿುಕ ಸಂಸ್ಕಾರವಿಲ್ಲದೆ ನಿಕೃಷ್ಟರೆನಿಸಿದ್ದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ವಿಧಾನ ಇಂದಿಗೂ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಳ್ಳುತ್ತದೆ. ಬಸವಣ್ಣನವರ ವ್ಯಕ್ತಿತ್ವದ ಅಂಥ ಒಳಸುಳಿವುಗಳನ್ನು ಅವರ ಅನೇಕ ವಚನಗಳಲ್ಲಿ ಕಾಣಬಹುದು. ಅವುಗಳಲ್ಲಿ ಒಂದು-

ಭಕ್ತಿಯಿಲ್ಲದ ಬಡವ ನಾನಯ್ಯ

ಕಕ್ಕಯ್ಯನ ಮನೆಯಲ್ಲೂ ಬೇಡಿದೆ

ಚನ್ನಯ್ಯನ ಮನೆಯಲ್ಲೂ ಬೇಡಿದೆ

ದಾಸಯ್ಯನ ಮನೆಯಲ್ಲೂ ಬೇಡಿದೆ

ಎಲ್ಲಾ ಪುರಾತರು ನೆರೆದು ಭಕ್ತಿ ಭಿಕ್ಷವನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ.

ಬಸವಣ್ಣನವರು ಹೇಳುತ್ತಿದ್ದಾರೆ ‘ಭಕ್ತಿಯಿಲ್ಲದ ಬಡವ ನಾನಯ್ಯ’ ಎಂದು!

ವ್ಯವಸ್ಥೆಯು ಮಾನವನ ಕಲ್ಯಾಣಗುಣಗಳನ್ನು ಪೋಷಿಸದೆ, ಸಮಾಜದ ಆಮೂಲಾಗ್ರ ಬೆಳವಣಿಗೆಗೆ ಪೂರಕವಾಗಿ ನಿಲ್ಲದೆ ಹೋದಾಗ ನಾಗರಿಕತೆ ಮುಗ್ಗರಿಸುತ್ತದೆ. ಅದನ್ನು ಎತ್ತಲು ಹೊಸ ವ್ಯವಸ್ಥೆಯೊಂದು ಅನಿವಾರ್ಯವಾಗುತ್ತದೆ. ಅಂಥ ಪರ್ಯಾಯ ವ್ಯವಸ್ಥೆಯ ನಿರ್ಮಾಣ ಕಠಿಣವೇ. ವ್ಯವಸ್ಥೆಯಲ್ಲಿ ಮೂಲೆಗುಂಪಾದವರನ್ನು ಸಂಘಟಿಸಿ ಆತ್ಮವಿಶ್ವಾಸ ತುಂಬುವ ಜತೆಗೆ ಅವರೊಂದಿಗೆ ಯಾವುದೇ ಮಾನಸಿಕ ದೂರ ಇಲ್ಲದಂತೆ ನೋಡಿಕೊಳ್ಳುವುದು ಆ ನಾಯಕನ ದೂರದೃಷ್ಟಿಗೆ ಒಡ್ಡಿದ ಸವಾಲೇ ಸರಿ. ಅಂಥ ಸವಾಲನ್ನು ಬಸವಣ್ಣ ಸಹಜವಾಗಿ, ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. ತನ್ನ ಸಾಮರ್ಥ್ಯವನ್ನು ಪ್ರದರ್ಶಿಸದೆ, ಮೂಲೆಯವರಿಗಿಂತ ಮೂಲೆಯವನೆಂದು ತನ್ನನ್ನು ಕರೆದುಕೊಂಡು, ಮೂಲೆಗುಂಪಾಗಿದ್ದವರ ಮನಸ್ಸನ್ನು ಅಣಿಗೊಳಿಸಲು ಅನುವಾಗುವ ಮಾನಸಿಕ ಬುನಾದಿಯನ್ನು ಈ ವಚನದಲ್ಲಿ ಗಮನಿಸಬಹುದು. ‘ನಾನು ಭಕ್ತಿಭಂಡಾರಿ ಬಸವಣ್ಣ; ಬನ್ನಿ ನಾವೆಲ್ಲರೂ ಭಕ್ತಿಪಥದಲ್ಲಿ ಸಾಗೋಣ’ ಎಂದು ಕರೆನೀಡಿದ್ದರೆ, ಶೋಷಿತರ ಮನವನ್ನು ಅವರು ಮುಟ್ಟುತ್ತಿದ್ದರೇ? ಬದಲಿಗೆ ಅವರ ನಡುವೆ ಸಾಗರದಷ್ಟು ಅಂತರ ಬೆಳೆಯುತ್ತಿತ್ತು. ‘ನಾವೆಲ್ಲಿ, ಬಸವಣ್ಣನೆಲ್ಲಿ?’ ಎಂದು ಮನಸ್ಸುಗಳು ತಮ್ಮ ಮತ್ತು ಬಸವಣ್ಣನವರ ನಡುವಿನ ಅಂತರವನ್ನು ತೂಗಿನೋಡಲು ಪ್ರಾರಂಭಿಸುತ್ತಿದ್ದವು. ಅಲ್ಲಿಗೆ ದುರ್ಬಲರನ್ನು ಸಂಘಟಿಸುವ ಕಾರ್ಯ ಸೋತುಬಿಡುತ್ತಿತ್ತು. ‘ಭಕ್ತಿಯಿಲ್ಲದ ಬಡವ ನಾನಯ್ಯಾ’ ಎನ್ನುವ ಬಸವಣ್ಣನವರ ‘ಕಿಂಕರ ಮನೋಭಾವ’ ಅವರ ಹಾಗೂ ಶೋಷಿತರೊಂದಿಗಿನ ಮಾನಸಿಕ ಬೆಸುಗೆಗೆ ಅನುವುಮಾಡಿಕೊಡುವುದಲ್ಲದೆ ಮುಂದೆ ಜರುಗುವ ಭಾರಿ ಪರಿವರ್ತನೆಗೆ ಮುನ್ನುಡಿ ಬರೆಯುತ್ತದೆ.

ಬಸವಣ್ಣ ಮುಂದುವರಿದು ಹೇಳುತ್ತಾರೆ- ‘ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ’ ಎಂದು! ‘ಬೇಡಿದೆ’ ಎನ್ನುವ ಅವರ ನಿಲುವು ಇಡೀ ನಾಯಕತ್ವಕ್ಕೆ ಹೊಸ ಆಯಾಮ ತಂದುಕೊಡುತ್ತದೆ. ಬೇಡಿದೆ ಎನ್ನುವ ಶಬ್ದ ಸಾಂಕೇತಿಕವಾಗಿದ್ದು ಶರಣರ ಆಮೂಲಾಗ್ರ ಬದಲಾವಣೆಯ ಸಚೇತಕ ಶಕ್ತಿ ಯಾವುದೆಂಬುದನ್ನು ನಿರ್ದೇಶಿಸುತ್ತದೆ. ‘ಬೇಡಿದೆ’ ಎಂಬ ಈ ನಿಲುವೇ ನಾಯಕತ್ವ ವಿಚಾರದಲ್ಲಿ ಕ್ರಾಂತಿಕಾರಿಯಾದುದು. ಇದು ‘ನಿರ್ದೇಶನಯುಕ್ತ ನಾಯಕತ್ವ’ದ ಸಂಪ್ರದಾಯಕ್ಕೆ ಹೊರತಾಗಿ ‘ಉತ್ತೇಜನಯುಕ್ತ ನಾಯಕತ್ವ’ದ ನಡೆಗೆ ಒತ್ತುಕೊಡುವಂತಿದೆ. ಮಾನವಕುಲವನಲ್ಲದೆ ಸಕಲ ಜೀವಿಗಳ ಶ್ರೇಯಸ್ಸನ್ನೇ ಬಯಸುವ ಬಸವಣ್ಣನವರ ಸಹಜ ಗುಣದಿಂದ ಮೂಡಿದ ಸಹಜ ನಾಯಕತ್ವದ ಲಕ್ಷಣ ಇದು. ಆದ್ದರಿಂದಲೇ ಬಸವಣ್ಣನವರು ಪ್ರತಿಯೊಬ್ಬರನ್ನೂ ‘ಇವ ನಮ್ಮವ, ಇವ ನಮ್ಮವ’ ಎಂದು ಜತೆಗಿಟ್ಟುಕೊಂಡೇ ವ್ಯವಸ್ಥೆಯ ಪಲ್ಲಟಕ್ಕೆ ಹೆಜ್ಜೆಯಿಟ್ಟರು. ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಚೈತನ್ಯಶಕ್ತಿಯನ್ನು ಸಚೇತನಗೊಳಿಸುವುದು ಬಹುಶಃ ಮಾನವಕುಲಕ್ಕೆ ನೀಡಬಹುದಾದ ಅಮೂಲ್ಯ ಕೊಡುಗೆ. ಅದು ಯಾವುದೇ ಸಾಂಪ್ರದಾಯಿಕ ನಾಯಕತ್ವದಿಂದ ಸಾಧ್ಯವಾಗುವಂಥದಲ್ಲ. ಬಸವಣ್ಣನವರ ‘ಬೇಡುವ’ ಪರಿ ಅವರ ಹೃದಯದಲ್ಲಿ ಶಾಶ್ವತ ಬದಲಾವಣೆಗೆ ನಾಂದಿಹಾಡಿತು. ಶೋಷಿತರ ಸಾಮರ್ಥ್ಯ ಗುರುತಿಸಿ ಅವರ ವ್ಯಕ್ತಿತ್ವದ ರೂಪಾಂತರಕ್ಕೆ ಸಾಧಕವಾಗುವ ನಡೆಯಿದು.

ನೇರಹೇರಿಕೆಯಿಂದ ಕೆಲಸಗಳು ನಡೆಯುವುದಿಲ್ಲ. ಇದನ್ನು ಆಧುನಿಕ ಸಮಾಜ ಅರಿತಿದೆ. ಹೇರಿಕೆಯಿಲ್ಲದೆ ಮುನ್ನಡೆದರಷ್ಟೇ ಆಂದೋಲನ ರ್ತಾಕ ಅಂತ್ಯ ಕಂಡೀತು. ಆದ್ದರಿಂದಲೇ ನಾಯಕತ್ವದ ಬಗ್ಗೆ ಅಸಂಖ್ಯ ವಿಚಾರಧಾರೆಗಳು ಹರಿದಿವೆ. ಆದರೂ ಹೇರಿಕೆಯಿಲ್ಲದೇ ಕಾಯಾ-ವಾಚಾ-ಮನಸಾ ಪಾಲ್ಗೊಳ್ಳುವಂತೆ ಮಾಡುವಲ್ಲಿ ಆಧುನಿಕ ನಾಯಕತ್ವ ಅನೇಕ ಸಲ ಸೋತಿರುವುದನ್ನು ಕಾಣುತ್ತೇವೆ. ಅಸಾಧ್ಯ ಕೆಲಸಗಳಿಗೆ ಮನಸುಗಳನ್ನು ಪರೋಕ್ಷವಾಗಿ ಅಣಿಗೊಳಿಸುವುದು ಕಠಿಣ ಸವಾಲೇ ಸರಿ. ವ್ಯವಸ್ಥೆಯೊಂದಿಗೆ ಒಲ್ಲದ ಮನಸ್ಸಿನಿಂದ ಒಗ್ಗಿಕೊಂಡು ಬದುಕುತ್ತಿರುವ ಶೋಷಿತರನ್ನು ಪ್ರೇರೇಪಿಸಲು ಸೂಕ್ಷ್ಮಮನದ ನಾಯಕನೇ ಬೇಕು. ಆತ ಸಂಕೀರ್ಣತೆ ಅರಿಯುವುದರ ಜತೆಗೆ ಅದನ್ನು ಸರಳಗೊಳಿಸಿ ಸಹಜಮಾರ್ಗ ಹಾಕುವ ಚಾಣಾಕ್ಷನಾಗಿರಬೇಕು. ಬಸವಣ್ಣನವರ ‘ಬೇಡುವ’ ನಿಲುವು ಒಂದು ರೀತಿಯಲ್ಲಿ ದೂಡಲ್ಪಟ್ಟವರ ಮೇಲೆ ಆದರದ ಸೂಚನೆಯಂತೆ ಕೆಲಸ ಮಾಡುತ್ತದೆ. ಬಿಜ್ಜಳನ ಅರಸೊತ್ತಿಗೆಯಲ್ಲಿ ಪ್ರಧಾನ ಮಂತ್ರಿಯಾಗಿದ್ದು, ಅಂದಿನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲುಕುಲದವರಾಗಿದ್ದ ಬಸವಣ್ಣನವರೇ ನಮ್ಮ ಕೇರಿಗೆ ಬಂದಿದ್ದಾರೆ, ಬೇಡುತ್ತಿದ್ದಾರೆ ಎನ್ನುವ ಸಂಗತಿಯೇ ಊಹೆಗೂ ನಿಲುಕದಷ್ಟು ಇವರನ್ನು ಉತ್ತೇಜಿಸುತ್ತದೆ. ತಮ್ಮ ಕೇರಿಯಿಂದಾಚೆ ಹೆಜ್ಜೆಯಿಡಲು ನಡುಗುತ್ತಿದ್ದ ಕಕ್ಕಯ್ಯ, ಚೆನ್ನಯ್ಯ, ಹರಳಯ್ಯ, ಧೂಳಯ್ಯ, ನಾಗಿದೇವರಂಥವರು ಬಸವಣ್ಣನವರ ಜತೆ ಬೆರೆಯಲು, ತಮ್ಮ ಚಿಪ್ಪಿನಿಂದ ಹೊರಬರಲು ಅಣಿಯಾಗುತ್ತಾರೆ. ದೇವರು-ಧರ್ಮದ ಪರಿಕಲ್ಪನೆಗಳನ್ನು ಬಸವಣ್ಣನವರ ಅರ್ಥಕೋಶದ ಮೂಲಕ ಅರಿತು ಬದಲಾವಣೆಗೆ ಒಡ್ಡಿಕೊಳ್ಳುತ್ತಾರೆ.

ಕಲ್ಯಾಣ ಕ್ರಾಂತಿ: ನಾಯಕನ ಯಶಸ್ಸು ಅವಲಂಬಿತವಾಗಿರುವುದೇ ಆತ ಮನಸ್ಸುಗಳನ್ನು ಎಷ್ಟರಮಟ್ಟಿಗೆ ಪ್ರಭಾವಿಸುತ್ತಾನೆ ಎಂಬುದರ ಮೇಲೆ. ಅದರಲ್ಲೂ ಯುಗದ ವ್ಯವಸ್ಥೆಯ ಪಲ್ಲಟಕ್ಕೆ ಸಜ್ಜಾಗುವ ಆಂದೋಲನ ತಾತ್ತಿ್ವಕವಾಗಿ ಗಟ್ಟಿಯಿದ್ದರೆ ಮಾತ್ರ ಅದರ ದಿಕ್ಕು-ದೆಸೆಯೂ ಸರಿಯಿರುತ್ತದೆ. ಆ ಗಟ್ಟಿತನ ಕೊಡುವ ಬಸವಣ್ಣನವರು ಶರಣರನ್ನು ಹುರಿದುಂಬಿಸುವ ವಿಧಾನ ವಿನೂತನ. ಯಾರಿಗಾಗಿ ಆಂದೋಲನವೋ ಅವರೇ ಅದಕ್ಕೆ ಕೇಂದ್ರಿತವಾಗಬೇಕು; ಇಲ್ಲದಿದ್ದರೆ ಅದು ಯಶಸ್ಸಾಗದು. ಬಸವಣ್ಣ ‘ಭಕ್ತಿಪಾತ್ರೆ’ ಹಿಡಿದು ಸಮಾಜದಲ್ಲಿ ನಿಕೃಷ್ಟಕ್ಕೆ ಒಳಗಾಗಿದ್ದ ಕಕ್ಕಯ್ಯನ ಮನೆಯ ಮುಂದೆ ಭಕ್ತಿಯ ಭಿಕ್ಷೆ ‘ಬೇಡಿ’ದರೆ ಕಕ್ಕಯ್ಯನವರಿಗೆ ಹೇಗಾಗಿರಬೇಡ? ಯುಗಪುರುಷನೊಬ್ಬ ತಮ್ಮ ಮೇಲೆ ಅಂಥ ನಂಬಿಕೆ, ಭರವಸೆಯಲ್ಲಿ ಕೈಚಾಚಿದ್ದು ಅವರ ಮೇಲೆ ಬೀರಿರಬಹುದಾದ ಸಕಾರಾತ್ಮಕ ಪರಿಣಾಮ ಊಹಾತೀತ.

ಎಲ್ಲ ಪುರಾತರು ನೆರೆದು ಭಕ್ತಿ ಭಿಕ್ಷೆಯನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ

ಬಸವಣ್ಣನವರ ಇಡೀ ಕಲ್ಯಾಣ ಕ್ರಾಂತಿಯನ್ನು ಈ ಎರಡು ಸಾಲಿನಲ್ಲಿ ಹಿಡಿದಿಟ್ಟಂತೆ ತೋರುತ್ತಿದೆ! ಚೆನ್ನಯ್ಯ, ದಾಸಯ್ಯ, ಕಕ್ಕಯ್ಯ ಮುಂತಾದವರೆಲ್ಲರೂ ಶ್ರೇಷ್ಠ ಶರಣರಾಗಿ ಹೊಮ್ಮಿ ಬಸವಣ್ಣನವರ ಪಾತ್ರೆಗೆ ಭಕ್ತಿಭಿಕ್ಷೆಯನಿತ್ತರು! ಯಾರೂ ಊಹಿಸಲಾಗದ ಪರಿವರ್ತನೆ ಹಾಗೂ ಅದರ ಫಲಿತಾಂಶ ಸಾಧ್ಯವಾದದ್ದು ತನ್ನಿಂದಲ್ಲ, ಚೆನ್ನಯ್ಯ, ಕಕ್ಕಯ್ಯ, ದಾಸಯ್ಯ ಇವರ ಸಾಧನೆಯಿಂದ ಎಂಬ ತೃಪ್ತಿ ಬಸವಣ್ಣನವರಲ್ಲಿ ಕಾಣುತ್ತದೆ. ಭಿಕ್ಷಾಪಾತ್ರೆಯೂ, ಅದು ತುಂಬುವುದೂ ಕಲ್ಯಾಣ ಕ್ರಾಂತಿಯಲ್ಲಿನ ಎರಡು ಪ್ರಮುಖ ಬೆಳವಣಿಗೆಗಳ ಸೂಚಕ. ಭಿಕ್ಷಾಪಾತ್ರೆ ಎಂದರೆ ಬಸವಣ್ಣನವರ ಯಾಚನೆಯನ್ನೂ, ತುಂಬಿತ್ತು ಎಂಬುದು ಆ ಬೇಡಿಕೆ ಈಡೇರಿದ್ದು ಎಂಬುದನ್ನೂ ಸಂಕೇತಿಸುತ್ತವೆ. ಜಗತ್ತಿನ ಇತರೆಡೆ ಮಾನವಕುಲ ಅವೈಜ್ಞಾನಿಕ ಮನೋಭಾವದಿಂದ ತೆವಳುತ್ತಿದ್ದರೆ, ಕಲ್ಯಾಣದಲ್ಲಿ ವೈಚಾರಿಕ-ವೈಜ್ಞಾನಿಕ ಮನೋಭಾವದ ಮೇಲೆ ಹೊಸ ಸಮಾಜವನ್ನು ಪರ್ಯಾಯವಾಗಿ ಕಟ್ಟುತ್ತಿತ್ತು. ‘ಭಕ್ತಿಯ ಭಿಕ್ಷೆ’ ಎನ್ನುವ ಬಸವಣ್ಣನವರು ಕಲ್ಯಾಣ ಕ್ರಾಂತಿಯನ್ನು ಭಕ್ತಿಯ ಸೋಪಾನದಲ್ಲಿ ಸಾಧಿಸುತ್ತಾರೆ. ಇದೊಂದು ನವೀನ ನಾಯಕತ್ವದ ಶೈಲಿ. ರಾಜಾಜ್ಞೆಯ ಹೇರಿಕೆ, ಕಾನೂನಿನ ಬೆದರಿಕೆಯಿಲ್ಲದೆ, ನಾಯಕನ ವ್ಯಕ್ತಿತ್ವ ಎಲ್ಲೂ ವಿಜೃಂಭಿಸದೆ ಸಾಧ್ಯವಾದದ್ದು! ಒಂದು ಮೂರ್ಖ ಮನಸ್ಸು ಸಾಕು ವ್ಯವಸ್ಥೆಯನ್ನು ಕೆಡಿಸಲು, ಆದರೆ ಅದನ್ನು ಸರಿಪಡಿಸಲು ಒಬ್ಬ ಯುಗಪುರುಷನೇ ಬರಬೇಕು. ಬಸವಣ್ಣನವರು ಇದನ್ನೇ ಮಾಡಿದ್ದು. ಹದಗೆಟ್ಟಿದ್ದ ಸಮಾಜವನ್ನು ಸರಿಪಡಿಸಿದ್ದು ಅವರ ಈ ಅದ್ಭುತ ನಾಯಕತ್ವದ ನಡೆಯೇ!

ಕೇವಲ ಕೆಲ ದಶಕಗಳಲ್ಲಿ ಸ್ಥಾಪನೆಗೊಂಡ ಇಂಥ ಪರ್ಯಾಯ ಸಮಾಜವನ್ನು 900 ವರ್ಷಗಳಾದರೂ ಸರಿಯಾಗಿ ಅರ್ಥೈಸಿಕೊಳ್ಳಲು ವಿಫಲರಾಗಿದ್ದೇವೆ. ಹೀಗೆ ನಿರ್ವಿುತ ವಾದ ಸಮಾಜವು ಒಳಜಾತಿಗಳ ಹೆಸರಿನಲ್ಲಿ ಒಂದೊಂದು ಪಂಗಡಗಳಾಗಿ ಮೂಲ ಆಶಯವನ್ನೇ ಮರೆತುಬಿಟ್ಟಿವೆ. ರಾಷ್ಟ್ರ ರಾಷ್ಟ್ರಗಳ ನಡುವಿನ ಗೋಡೆಗಳು ಬಿದ್ದಿದ್ದರೂ, ಮನಸು ಮನಸುಗಳ ನಡುವೆ ಗೋಡೆಗಳು ಎದ್ದುನಿಲ್ಲುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ. ಪರರಾಷ್ಟ್ರವೊಂದು ಬಸವಣ್ಣನವರ ನಾಯಕತ್ವದ ಪಾಠಗಳನ್ನು ನಮಗೇ ಮನವರಿಕೆ ಮಾಡಿಕೊಡುವ ಕಾಲ ಮುಂದೊಮ್ಮೆ ಬಂದರೂ ಅಚ್ಚರಿಯಿಲ್ಲ!

(ಲೇಖಕರು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು)

ಒನ್ನಿಮಿಷ! ಇದನ್ನು ಓದಿಬಿಡಿ.
ಖಾಸಗಿ ಜೀವನದಲ್ಲಿ ಎಲ್ಲವನ್ನೂ ಅವಡುಗಚ್ಚಿ ಸಹಿಸಿಕೊಂಡು, ತಮ್ಮ ನಡೆವಳಿಕೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ವ್ಯಕ್ತಿಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಇವೆಲ್ಲ ಕಷ್ಟವಾಗಿಬಿಡುತ್ತವೆ. ಕಚೇರಿಯಲ್ಲಿ, ಮನೆಯಲ್ಲಿ ಉತ್ತಮ ವ್ಯಕ್ತಿ ಎನ್ನಿಸಿಕೊಂಡವರು, ಸಾರ್ವಜನಿಕ ವಲಯದಲ್ಲಿ ಅದೇ ಅಭಿಪ್ರಾಯ ಕಾಯ್ದುಕೊಳ್ಳುವಲ್ಲಿ ಸೋಲುವುದೇಕೆ?

‘ಉತ್ತಮ ನಾಗರೀಕರು’ಎಂದೆನಿಸಿಕೊಳ್ಳುವುದು ಕೂಡ ಒಂದು ಜವಾಬ್ದಾರಿ. ಒಂದಲ್ಲಾ ಒಂದು ರೀತಿಯಲ್ಲಿ ಹೊರ ಜಗತ್ತಿನ ಒಡನಾಟಕ್ಕೆ ಬೀಳುವ ನಾವು, ಸದಾ ಸಾರ್ವಜನಿಕ ಪ್ರಪಂಚದಲ್ಲಿಯೇ ಬದುಕುವುದು ಅನಿವಾರ್ಯ. ನಮ್ಮ ವ್ಯಕ್ತಿತ್ವ, ಪ್ರಭಾವ ಹೇಗೇ ಇದ್ದರೂ, ಸಮಾಜದ ಪರಿಧಿಯಲ್ಲಿ ನಾವು ಜನಸಾಮಾನ್ಯರೇ. ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ವರ್ತನೆಯನ್ನ ಕಾಯ್ದುಕೊಳ್ಳಲು ನಮ್ಮಲ್ಲಿಯ ಸ್ಥಿತಪ್ರಜ್ಞತೆ ಸದಾ ಜಾಗ್ರತವಾಗಬೇಕು. ಆದರೆ, ನಮ್ಮ ಸಮಾಜದ ಸ್ಥಿತಿ ಹೇಗಿದೆ ಅಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೊಳಗೂ, ಒಬ್ಬ ತಾಳ್ಮೆಗೇಡಿ ಎದ್ದು ಕುಳಿತುಬಿಡುತ್ತಾನೆ. ಆತ ಒಮ್ಮೊಮ್ಮೆ ಯಾವುದಕ್ಕೂ, ಯಾರಿಗೂ ಕಾಳಜಿ ತೋರಿಸದ ಒರಟನಾಗಿಬಿಡುತ್ತಾನೆ. ತನ್ನ ಜತೆಗಿರುವವರು, ತನ್ನಂತೇ ಮನುಷ್ಯರು ಎಂಬ ಸಂಗತಿಯನ್ನೂ ಮರೆತು, ಅವರೊಂದಿಗೆ ಸ್ಪರ್ಧೆಗೆ ಬಿದ್ದುಬಿಡುತ್ತಾನೆ.

ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ, ಸಾಮಾನ್ಯವಾಗಿ ನಮ್ಮ ಅನುಭವಕ್ಕೆ ಬರುವ ಸಮಸ್ಯೆ ಅಂದರೆ ತಳ್ಳಾಟ. ಮೊದಲು ವಾಹನವನ್ನು ಏರಿ, ತನ್ನ ಸೀಟನ್ನು ಭದ್ರಗೊಳಿಸಿಕೊಳ್ಳಬೇಕು ಎಂಬ ತವಕ. ಆ ಸಂದರ್ಭದಲ್ಲಿ ಅಡ್ಡಬರುವ ಯಾವುದಕ್ಕೂ ಮೌಲ್ಯವೇ ಇಲ್ಲ. ಅದು ವಸ್ತುವಾಗಿರಲಿ, ಪ್ರಾಣಿಯಾಗಿರಲಿ, ಅಥವಾ ಸಹಪ್ರಯಾಣಿಕರೇ ಆಗಿರಲಿ ಅದೇನೇ ಇದ್ದರೂ ಒಮ್ಮೆಲೆ ಅವುಗಳನ್ನೆಲ್ಲ ನೂಕಿ ವಾಹನದೊಳಗೆ ತೂರಿಕೊಳ್ಳಬೇಕು ಅಷ್ಟೆ! ಇಲ್ಲಿ ಉಳಿದವರ ಬಗ್ಗೆ ಕಿಂಚಿತ್ತೂ ಯೋಚಿಸದೇ, ಕೇವಲ ಸ್ವಾರ್ಥ ಮಾತ್ರ ತಲೆಯಲ್ಲಿಟ್ಟುಕೊಂಡವರೇ ಎಲ್ಲೆಡೆ ಸಹಜವಾಗಿ ಕಾಣಸಿಗುತ್ತಾರೆ.

ಇನ್ನು, ಬಸ್ಸಿನಲ್ಲಿ ಕುಳಿತಿರುವ ಸಂದರ್ಭವನ್ನೇ ತೆಗೆದುಕೊಳ್ಳಿ, ಅಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ತೀರ ಅಪರೂಪ. ತುಂಬಿ ತುಳುಕುವ ಬಸ್ಸಿನಲ್ಲಿ ವೃದ್ಧರೋ, ಕೈಲಾಗದ ಅಂಗವಿಕಲರೋ, ಗರ್ಭಿಣಿಯರೋ, ರೋಗಿಗಳೋ ಕಷ್ಟಪಡುತ್ತಿರುವುದು ಕಾಣಿಸಿದರೂ ಕೂಡ ಅದು ತನ್ನ ಕಷ್ಟವಲ್ಲ ಎಂಬ ಧೋರಣೆಯಿಂದ ತಾವು ಕುಳಿತ ಸೀಟಿನಲ್ಲಿ ಇನ್ನಷ್ಟು ಗಟ್ಟಿಯಾಗಿ ಕುಳಿತುಬಿಡುತ್ತಾರೆ. ನಿರ್ವಾಹಕನೇ ಬಂದು ಏಳಿ, ಸೀಟ್ ಬಿಟ್ಟುಕೊಡಿ ಎಂದು ಕೋರಿಕೊಂಡರೂ ಅಲುಗಾಡದ ಜನ ಇದ್ದಾರೆ. ತಮ್ಮಂತೆಯೇ ಬಸ್ಸಿನಲ್ಲಿ ಬಂದಿರುವ ಅಸಹಾಯಕ ಪರಿಸ್ಥಿತಿಯ ಜನರಿಗೆ ನೆರವಾಗುವ ಕಿಂಚಿತ್ತೂ ಜವಾಬ್ದಾರಿಯನ್ನು ತೋರಿಸದವರು ಹೇಗೆ ನಾಗರೀಕರೆನ್ನಿಸಿಕೊಳ್ಳುತ್ತಾರೆ? ಸಾರ್ವಜನಿಕವಾಗಿ ಇಂಥ ಉದಾಸೀನದ ಮನಸ್ಥಿತಿಯನ್ನು ತೋರಿಸುವ ಜನ ತಮಗೆ ಸಂಬಂಧಪಟ್ಟ ಜನರೊಂದಿಗೆ ತಮ್ಮ ನಡೆವಳಿಕೆಯನ್ನು ಬದಲಿಸಿಕೊಳ್ಳುತ್ತಾರೆ ಎನ್ನುವುದು ಗಮನಾರ್ಹ ಅಂಶ.

ತಮ್ಮ ಕುಟುಂಬಸ್ಥರೋ, ರಕ್ತಸಂಬಂಧಿಗಳಿಗೋ ಸಹಕರಿಸುವ ಭಾವನೆ ಇಟ್ಟುಕೊಂಡಿರುವ ಶ್ರೀಸಾಮಾನ್ಯನೊಬ್ಬ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ತನ್ನ ಸಹಕಾರ ಮನೋಭಾವನೆಯನ್ನ ಕಳೆದುಕೊಂಡುಬಿಡುತ್ತಾನೆ. ಉದಾ: ವಿದ್ಯುತ್ ಬಿಲ್ ಪಾವತಿಸಲು ಇರುವ ಕೊನೆಯ ದಿನ ಅಂದು. ಬೆಳಗ್ಗೆಯಿಂದಲೇ ಸರದಿಸಾಲಿನಲ್ಲಿ ಜನ ನಿಂತೇ ಇದ್ದಾರೆ. ಜನರ ಉದ್ದನೆಯ ಸಾಲು, ಪಕ್ಕದಲ್ಲಿಯೇ ಇರುವ ಬಸ್‌ಸ್ಟಾಪ್ ತನಕ ಬಂದಿತ್ತು. ಬೆಳಗ್ಗೆ ಸುಮಾರು 11 ಗಂಟೆಯ ವೇಳೆ ಅದು. ಸಾಲಿನಲ್ಲಿ ನಿಂತವರಲ್ಲಿ ಛತ್ರಿ ಹಿಡಿದು ನಿಂತಿದ್ದ ಓರ್ವ ಮಹಿಳೆ, ಸರದಿಯಲ್ಲಿ ನಿಂತು ಯಾರನ್ನೋ ನಿರೀಕ್ಷಿಸುತ್ತಿದ್ದಳು. ಅವಳ ನಿರೀಕ್ಷೆಯಂತೆ ಆಕೆಯ ಗಂಡ ಬಂದು, ಅವಳ ಜಾಗದಲ್ಲಿ ತಾನು ನಿಂತು, ಅವಳಿಗೆ ವಿಶ್ರಮಿಸುವುದಕ್ಕಾಗಿ ಬಸ್‌ಸ್ಟಾಪ್ ಒಳಗೆ ಕಳುಹಿಸಿಕೊಟ್ಟ. ಅವನಿಗಿಂತ ಹಿಂದೆ ನಿಂತಿದ್ದ ವೃದೆಟಛಿಯೊಬ್ಬಳು ಬಿಸಿಲಿನಿಂದ ಬಳಲಿ, ತಲೆ ಸುತ್ತಿ ಬಿದ್ದೇಬಿಟ್ಟಳು.

ಅಲ್ಲಿರುವ ಕೆಲವರು ಅವಳನ್ನ ನೆರಳಿಗೆ ಕರೆತಂದು, ನೀರು ಕೊಟ್ಟು ಸಂತೈಸಿದ್ದಲ್ಲದೇ, ಅವರಲ್ಲೊಬ್ಬ ವೃದೆಟಛಿಯ ಬಿಲ್ ಪಾವತಿಸಲು ಸರದಿ ಸಾಲನ್ನ ಬಿಟ್ಟು ಖುದ್ದು, ಪಾವತಿ ಕೇಂದ್ರದೊಳಕ್ಕೆ ಹೋದ. ಅಲ್ಲದೆ, ಅಲ್ಲಿ ಪರಿಸ್ಥಿತಿ ವಿವರಿಸಿ, ಆಕೆಯ ಬಿಲ್ಲನ್ನು ಪಾವತಿಸಿ ಆತ ವಾಪಾಸ್ ಬರುತ್ತಿದ್ದಂತೆ, ಸಾಲಿನಲ್ಲಿ ನಿಂತಿದ್ದ ಜನ ಕ್ಯಾತೆ ತೆಗೆದರು. ಅವರೆಲ್ಲರ ಮುಖಂಡತ್ವ ವಹಿಸಿದ್ದೇ, ಹೆಂಡತಿಗೆ ನೆರವಾಗಲು ಬಂದಿದ್ದ ಆ ಗಂಡ ಮಹಾಶಯ. ಸರದಿ ಬಿಟ್ಟು ತಮ್ಮೆಲ್ಲರಿಗಿಂತ ಹಿಂದೆ ನಿಂತಿದ್ದ ವೃದ್ಧಯ ಬಿಲ್ ಪಾವತಿಸಿಕೊಂಡು ಬಂದಿದ್ದಕ್ಕೆ ಆ ಯುವಕ ಬೈಗುಳ ತಿನ್ನಬೇಕಾಯಿತು. ಆತನೂ ವಾದಿಸಲು ಪ್ರಯತ್ನಪಟ್ಟನಾದರೂ, ಅವರೆಲ್ಲರ ಜಗಳಕ್ಕೆ ಆತ ಸುಮ್ಮನಾಗಬೇಕಾಯಿತು. ಇಲ್ಲಿ ಈ ಸಂದರ್ಭದಲ್ಲಿ, ತನ್ನ ಹೆಂಡತಿಗೆ ಬಿಸಿಲು ಹೆಚ್ಚಾಗಬಹುದು ಎಂಬ ಕಾಳಜಿಯಿಂದ ಅಂಗಡಿಯ ಕೆಲಸ ಬಿಟ್ಟು ಬಂದು, ತಾನು ಸರದಿ ಸಾಲಿನಲ್ಲಿ ನಿಂತಿದ್ದ ಆ ವ್ಯಕ್ತಿಗೆ ತನ್ನ ತಾಯಿಯ ವಯಸ್ಸಿನ ವೃದ್ಧ ನೆರವಾಗುವುದು ಬೇಕಿರಲಿಲ್ಲ.

ಬೇರೆಯೊಬ್ಬ ಸಹಾಯ ಮಾಡಿದ್ದಕ್ಕೆ ಮಾಡಬಾರದ ಪ್ರಮಾದವಾಗಿದೆ ಎಂಬ ರೀತಿಯಲ್ಲಿ ವರ್ತಿಸಿಬಿಟ್ಟ. ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಒಂದಲ್ಲಾ ಒಂದು ಘಟನಾವಳಿಗಳು ಸದಾ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತವೆ. ಸಾರ್ವಜನಿಕರ ಸರದಿ ಸಾಲು ಅಂದಾಕ್ಷಣ ಒಬ್ಬಲ್ಲಾ ಒಬ್ಬ ಕೂಗಾಡುತ್ತಿರುವುದನ್ನೋ, ನೂಕಾಡುತ್ತಿರುವ ದೃಶ್ಯ ಅತ್ಯಂತ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಬಸ್‌ಸ್ಟಾಪ್‌ನಲ್ಲಿ, ದೂರವಾಣಿ, ವಿದ್ಯುತ್ ಬಿಲ್ ಪಾವತಿಸುವ ವೇಳೆ, ಪಡಿತರಚೀಟಿಯಿಂದ ಸಾಮಾನು ಖರೀದಿಸುವ ವೇಳೆ ಸಾರ್ವಜನಿಕ ಎಂಬಾತನಲ್ಲಿ ತಾಳ್ಮೆ ಕಣ್ಮರೆಯಾಗಿರುತ್ತದೆ. ಖಾಸಗಿ ಜೀವನದಲ್ಲಿ ಎಲ್ಲವನ್ನೂ ಅವಡುಗಚ್ಚಿ ಸಹಿಸಿಕೊಂಡು, ತಮ್ಮ ನಡುವಳಿಕೆಗಳನ್ನ ಹಿಡಿತದಲ್ಲಿಟ್ಟುಕೊಳ್ಳುವ ವ್ಯಕ್ತಿಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಇವೆಲ್ಲ ಕಷ್ಟವಾಗಿಬಿಡುತ್ತವೆ.

ಕಚೇರಿಯಲ್ಲಿ, ಮನೆಯಲ್ಲಿ ಒಂದೊಳ್ಳೆ ವ್ಯಕ್ತಿಯಾಗಿರುವಾತ, ಆದರ್ಶ ಸಾರ್ವಜನಿಕನಾಗಿರುತ್ತಾನೆ ಎನ್ನುವಂತಿಲ್ಲ. ಪ್ರಜ್ಞಾವಂತನಾಗಿದ್ದರೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಆತನ ವರ್ತನೆ ಬೇರೆಯದೇ ಆಗಿರಬಹುದು. ಇದೆಲ್ಲ ಏಕೆ ಎಂದು ಹುಡುಕುತ್ತಾ ಹೋದರೆ, ಅಲ್ಲಿ ಸ್ಥಿತಪ್ರಜ್ಞತೆಯ ಕೊರತೆ ಕಾಣುತ್ತದೆ. ಕಚೇರಿಯಲ್ಲಾಗಲಿ, ಮನೆಯಲ್ಲಾಗಲಿ ಅಥವಾ ತಮಗೆ ಸಂಬಂಧಪಟ್ಟ ಇನ್ಯಾವುದೇ ಸ್ಥಳದಲ್ಲಾಗಲಿ ಅವನದ್ದೇ ಆದ ಪರಿಧಿಯೊಳಗೆ ಜೀವಿಸುವಾತ ಅವನ ಸುತ್ತ ಒಂದು ಕಂಫರ್ಟ್ ರೆನನ್ನು ನಿರ್ಮಾಣ ಮಾಡಿಕೊಂಡಿರುತ್ತಾನೆ. ಆತ ಆ ವರ್ತುಲದಲ್ಲಿ ಸುಖವಾಗಿದ್ದುಬಿಡುತ್ತಾನೆ. ಆದರೆ ಅದರ ಹೊರತಾಗಿರುವ ಸಾರ್ವಜನಿಕ ಜಗತ್ತಿನಲ್ಲಿ ಅವನ ಕಂಫರ್ಟ್ ರೆನಿಗೆ ಸವಾಲು ನೀಡುವಂಥ ಸ್ಥಿತಿ ಎದುರಾಗಬಹುದು. ಅಂಥ ಸಂದರ್ಭವೇ ಆ ವ್ಯಕ್ತಿಯ ನೈಜ ವರ್ತನೆ ಹೊರ ಬರುತ್ತದೆ.

ಸಾರ್ವಜನಿಕ ಜೀವನದಿಂದ ಹೊರತಾಗಿ ಬದುಕುವುದಕ್ಕೆ ಯಾವೊಬ್ಬ ವ್ಯಕ್ತಿಗೂ ಸಾಧ್ಯವಿಲ್ಲ. ಹಲವು ಬಗೆಯ ಜನರೊಂದಿಗೆ, ಹಲವು ಬಗೆಯ ಪರಿಸ್ಥಿತಿಯಲ್ಲಿ, ಹಲವಾರು ಸಂದರ್ಭಗಳಲ್ಲಿ ತಮ್ಮ ನಡುವಳಿಕೆಯನ್ನ ಸ್ಥಿರವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಎದುರಾಗುವ ಸವಾಲು. ಇಲ್ಲಿ ಸಹಾಯಕ್ಕೆ ಬರುವುದೇ ಸ್ಥಿತಪ್ರಜ್ಞತೆ. ಸಮಸ್ಯೆ ಎದುರಾದ ಸಂದರ್ಭವನ್ನ ನಿರ್ವಹಿಸುವುದಕ್ಕೆ ಒಂದು ಮಟ್ಟದ ಸ್ಥಿತ ಪ್ರಜ್ಞತೆ ಬೇಕಾಗುತ್ತದೆ. ಅಂದರೆ, ಗೊಂದಲದ ಆ ಕ್ಷಣಗಳನ್ನ ತಿಳಿಗೊಳಿಸುವುದಕ್ಕಾಗಿ ಪ್ರಜ್ಞಾಪೂರ್ವಕವಾಗಿ ನಾವು ಸುಮ್ಮನಿರಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಲ್ಪಮಟ್ಟಿಗಿನ ಕಿರಿಕಿರಿಯನ್ನು ಸಹಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ, ಪ್ರಜ್ಞಾಪೂರ್ವಕವಾದ ತಟಸ್ಥ ಧೋರಣೆಯನ್ನ ಅನುಸರಿಸಿದರೆ, ಪರಿಸ್ಥಿತಿ ತಿಳಿಗೊಳ್ಳುವುದಕ್ಕೆ ಬಹಳ ಸಮಯ ಬೇಡವೇ ಬೇಡ.

ಇದಕ್ಕೊಂದು ಉದಾಹರಣೆ ಹೇಳಬೇಕೆಂದರೆ, ಬೆಂಗಳೂರಿನಂಥ ನಗರದ ರಸ್ತೆಗಳಲ್ಲಿ, ಓಡಾಡುವ ವಾಹನಗಳ ನಡುವೆ ಅಲ್ಲಲ್ಲಿ ಚಿಕ್ಕಪುಟ್ಟ ತಿಕ್ಕಾಟವಾದಾಗ, ಅದನ್ನೇ ದೊಡ್ಡದಾಗಿ ವೈಭವೀಕರಿಸಿ, ಜಗಳವಾಡಿ ಟ್ರಾಫಿಕ್ ಜಾಮ್ ಮಾಡುವಂಥ ಸಾರ್ವಜನಿಕರು ಸ್ಥಿತಪ್ರಜ್ಞರಲ್ಲ. ಚಿಕ್ಕಪುಟ್ಟ ತಿಕ್ಕಾಟಕ್ಕೆ ಅತಿಯಾಗಿ ವರ್ತಿಸುವ ಇದೇ ಮಂದಿ, ದೊಡ್ಡ ಅಪಘಾತವಾಗಿ ರಕ್ತಪಾತವಾಗಿರುವ ಸಮಯದಲ್ಲಿ ತಟಸ್ಥರಾಗಿಬಿಡುತ್ತಾರೆ. ಗಾಯಾಳುಗಳ ಬಗ್ಗೆ ಸ್ವಲ್ಪವೂ ಕಾಳಜಿ ತೋರಿಸದೇ ತಮ್ಮಪಾಡಿಗೆ ತಾವು ಹೊರಟುಹೋಗುವಂಥ ಧೋರಣೆಯನ್ನ ವ್ಯಕ್ತಪಡಿಸಿಬಿಡುತ್ತಾರೆ. ಇದೆಂಥಾ ವಿಪರ್ಯಾಸ ಅಲ್ಲವೇ? ಹೀಗಾಗಬಾರದು. ಇಂಥ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಸಮಯಪ್ರಜ್ಞೆ ಮುಖ್ಯ. ಸಮಯ ಪ್ರಜ್ಞೆ ಮತ್ತು ಸ್ಥಿತಪ್ರಜ್ಞೆಯನ್ನ ಸಂದರ್ಭಕ್ಕೆ ಸರಿಯಾಗಿ ಉಪಯೋಗಿಸುವಷ್ಟು ವಿಚಾರ ಶಕ್ತಿ ನಮ್ಮಲ್ಲಿರಬೇಕು.

ಸ್ಥಿತಪ್ರಜ್ಞ ಧೋರಣೆಯನ್ನ ಯಾವಾಗ ತೆಗೆದುಕೊಳ್ಳುತ್ತೇವೆ ಎಂಬುದು ಕೂಡ ಬಹಳ ಮುಖ್ಯ. ತಟಸ್ಥವಾಗಿರುವ ಮೂಲಕ ಸಾರ್ವಜನಿಕ ಪ್ರಪಂಚದಲ್ಲಿ ನಾವು ಮುಖ್ಯ ಪಾತ್ರ ವಹಿಸಬಹುದು ಮತ್ತು ಇದರಿಂದ ಹಲವು ಅಹಿತಕರ ಘಟನೆಗಳನ್ನ ತಡೆಯಬಹದು ಕೂಡ. ತಾಳ್ಮೆಗೆಟ್ಟು ಸುತ್ತಲಿನ ವಾತಾವರಣವನ್ನೇ ಹಾಳುಗೆಡಹುವಂಥ ವರ್ತನೆಯನ್ನು ತಟಸ್ಥನಾಗಿದ್ದು ನಿಭಾಯಿಸಬಹುದು. ಇಲ್ಲಿ ನಾವು ಹೇಳಲು ಹೊರಟಿರುವ ಸ್ಥಿತಪ್ರಜ್ಞತೆ, ನಿರ್ಲಕ್ಷ್ಯವಲ್ಲ. ಇದರಿಂದ ನನಗೇನೂ ಆಗಬೇಕಾಗಿಲ್ಲ. ಅದಕ್ಕೆ ತಟಸ್ಥವಾಗಿದ್ದೇನೆಂಬ ಮನಸ್ಥಿತಿಯದಲ್ಲ.

ಪರಿಸ್ಥಿತಿಯನ್ನ ಸುಧಾರಿಸುವುದಕ್ಕಾಗಿ ಸಾರ್ವಜನಿಕ ತೆಗೆದುಕೊಳ್ಳಲೇಬೇಕಾದ ಪ್ರಜ್ಞಾಪೂರ್ವಕ ತಟಸ್ಥ ಧೋರಣೆ ಇದು. ಆ ಗಳಿಗೆ ಮುಗಿದರೆ ಎಲ್ಲವೂ ಸರಿ ಹೋಗುತ್ತದೆ, ಎಂಬ ಮಾತಿನಂತೆ ನಮ್ಮ ಒಂದೇ ಒಂದು ಕ್ಷಣದ ತಾಳ್ಮೆಯಿಂದ ಸಾರ್ವಜನಿಕವಾಗಿ ನಡೆಯಲಿದ್ದ ಅಹಿತಕರ ಘಟನೆ ಅಲ್ಲಿಗೇ ಮುಗಿದುಹೋಗಬಹುದು. ಮೇಲೆ ಹೇಳಿದ ಘಟನಾವಳಿಯಲ್ಲಿಯೂ ಕೂಡ, ಆ ವ್ಯಕ್ತಿಯಲ್ಲಿ ಸ್ಥಿತಪ್ರಜ್ಞೆ ಇದ್ದಿದ್ದರೆ, ವೃದ್ಧೆಯೊಬ್ಬಳಿಗೆ ಯಾರೋ ಮಾಡಿದ ಸಹಾಯವನ್ನು ಪ್ರಶ್ನೆ ಮಾಡಿ, ಅದಕ್ಕಾಗಿಯೇ ಜಗಳ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ.

ಸ್ಥಿತಪ್ರಜ್ಞೆ ಮನುಷ್ಯನ ಪರಿಪಕ್ವತೆಯನ್ನು ತೋರಿಸುತ್ತದೆ. ಹರುಷಕ್ಕೆ ಹಿಗ್ಗದ ದುಃಖಕ್ಕೆ ಬಗ್ಗದ, ನೋವು ನಲಿವಿಗೆ ಸ್ಥಿರವಾಗಿ ನಿಲ್ಲುವಾತ ಸ್ಥಿತಪ್ರಜ್ಞೆ ಎಂದು ಅರ್ಥೈಸಬಹುದು. ಆದರೆ, ಸಾರ್ವಜನಿಕ ಜಗತ್ತಿನ ಸ್ಥಿತಪ್ರಜ್ಞೆಗೆ ಅಂಥ ಬಿಗಿತ ಇಲ್ಲ. ಇಲ್ಲಿಯ ಸ್ಥಿತಪ್ರಜ್ಞೆ ಅಂದರೆ ತಕ್ಷಣಕ್ಕೆ ಭುಗಿಲೆದ್ದುಬಿಡುವ ಒಂದು ಗಲಾಟೆ, ದೊಂಬಿಯನ್ನ ನಿಯಂತ್ರಿಸಬಲ್ಲ ಒಂದು ತಟಸ್ಥ ಧೋರಣೆ ಅಷ್ಟೆ. ದೊಡ್ಡ ಗಲಾಟೆಗಳು, ಹೊಡೆದಾಟಗಳು ಕೂಡ ಶುರುವಾಗುವುದು ಯಾವನೋ ಒಬ್ಬ ಸಾರ್ವಜನಿಕನ ಅಸಮಾಧಾನದಿಂದಲೇ ತಾನೆ? ಹೀಗಾಗಿ ಸಾರ್ವಜನಿಕ ಜೀವನವನ್ನ ಸುಸ್ಥಿತಿಯಲ್ಲಿಡುವಂಥ ಮನಸ್ಥಿತಿ ಸಾರ್ವಜನಿಕರಲ್ಲಿ ಬೆಳೆದುಬರಬೇಕು.

ಇಂದಿನ ಜವಾಬ್ದಾರಿಯುತ ನಾಗರೀಕರು ತಾಳ್ಮೆ, ಸಂಯಮ, ಸಹನೆಯ ಲೇಪನವಿರುವ ಸ್ಥಿತ ಪ್ರಕ್ಞೆ ರೂಢಿಸಿಕೊಂಡರೆ, ಎಲ್ಲರ ಮನಸ್ಸಿನಲ್ಲಿ ಇಂಥ ಸ್ಥಿತಪ್ರಾಜ್ಞನೊಬ್ಬ ನೆಲೆಸಿಬಿಟ್ಟರೆ, ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡುವ ನೂಕು ನುಗ್ಗಲು, ಕಾಲ್ತುಳಿತ, ತಳ್ಳಾಟ, ಹೊಡೆದಾಟ, ಜಗಳ ಇಂಥ ಎಷ್ಟೋ ಅಹಿತಕರ ಘಟನೆ ನಡೆಯುವುದೇ ಇಲ್ಲ. ನೀವೇನಂತೀರಿ?

ಅಮೃತಾ ಹೆಗಡೆ

ಭಾರತ್ ಕ್ಯೂಆರ್.

​ಭಾರತದ್ದೇ ಆದ ಭಾರತ್​ಕ್ಯುಆರ್Monday, 03.04.2017, 1:09 AM

ಭಾರತೀಯ ರಿಸರ್ವ್ ಬ್ಯಾಂಕ್​ನ ಡೆಪ್ಯುಟಿ ಗವರ್ನರ್ ಆರ್. ಗಾಂಧಿ ಅವರು ‘BharatQR’ ಎಂಬ ಕ್ಷಿಪ್ರ ಪ್ರತಿಸ್ಪಂದನೆಯ (Quick Response- QR) ‘ಪ್ರಮಾಣೀಕೃತ ಕೋಡ್’ ಒಂದನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದಾರೆ. ಇದನ್ನು ಅಭಿವೃದ್ಧಿಪಡಿಸಿದ್ದು ಮಾಸ್ಟರ್​ಕಾರ್ಡ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ ಮತ್ತು ವೀಸಾದಂಥ ಸಂಸ್ಥೆಗಳು. ಸದರಿ ‘ಭಾರತ್​ಕ್ಯುಆರ್’ ಸಂಕೇತದಕುರಿತಾದ ಒಂದು ಇಣುಕುನೋಟ ಇಲ್ಲಿದೆ. ಭಾರತ್​ಕ್ಯುಆರ್ಕೋಡ್ ಎಂದರೆ… ಕ್ಯುಆರ್ ಕೋಡ್ ಎಂಬುದು ಯಂತ್ರದ ನೆರವಿನಿಂದ ಓದಬಹುದಾದ ಒಂದು ಮ್ಯಾಟ್ರಿಕ್ಸ್ (ಪರಸ್ಪರ ಬಂಧಿಸಲ್ಪಟ್ಟಿರುವ ಮಂಡಲಧಾತುಗಳ ಒಂದು ಜಾಲ) […]ಭಾರತೀಯ ರಿಸರ್ವ್ ಬ್ಯಾಂಕ್​ನ ಡೆಪ್ಯುಟಿ ಗವರ್ನರ್ ಆರ್. ಗಾಂಧಿ ಅವರು ‘BharatQR’ ಎಂಬ ಕ್ಷಿಪ್ರ ಪ್ರತಿಸ್ಪಂದನೆಯ (Quick Response- QR) ‘ಪ್ರಮಾಣೀಕೃತ ಕೋಡ್’ ಒಂದನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದಾರೆ. ಇದನ್ನು ಅಭಿವೃದ್ಧಿಪಡಿಸಿದ್ದು ಮಾಸ್ಟರ್​ಕಾರ್ಡ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ ಮತ್ತು ವೀಸಾದಂಥ ಸಂಸ್ಥೆಗಳು. ಸದರಿ‘ಭಾರತ್​ಕ್ಯುಆರ್’ ಸಂಕೇತದ ಕುರಿತಾದ ಒಂದು ಇಣುಕುನೋಟ ಇಲ್ಲಿದೆ.ಭಾರತ್​ಕ್ಯುಆರ್ ಕೋಡ್ ಎಂದರೆ…ಕ್ಯುಆರ್ ಕೋಡ್ ಎಂಬುದು ಯಂತ್ರದ ನೆರವಿನಿಂದ ಓದಬಹುದಾದ ಒಂದು ಮ್ಯಾಟ್ರಿಕ್ಸ್ (ಪರಸ್ಪರ ಬಂಧಿಸಲ್ಪಟ್ಟಿರುವ ಮಂಡಲಧಾತುಗಳ ಒಂದು ಜಾಲ) ಆಗಿದ್ದು, ಪಾವತಿಗಳನ್ನು ಮಾಡುವ ಸಂದರ್ಭದಲ್ಲಿ ಸ್ಮಾರ್ಟ್​ಫೋನ್ ನೆರವಿನಿಂದ ಇದನ್ನು ಸ್ಕ್ಯಾನ್ ಮಾಡಬಹುದಾಗಿರುತ್ತದೆ. ಇತರ ಉತ್ಪನ್ನ ಅಥವಾ ವ್ಯವಸ್ಥೆಗೆ ಸಂಬಂಧಿಸಿದ ಪಾರಸ್ಪರಿಕ ಕಾರ್ಯಾಚರಣೆಗೂ ಭಾರತ್​ಕ್ಯುಆರ್ ಕೋಡ್ ಅನ್ನು ಬಳಸಿಕೊಳ್ಳಬಹು ದಾಗಿದೆ. ಇಂಥದೊಂದು ಪ್ರಕ್ರಿಯೆಗೆ ಸದರಿ ಮ್ಯಾಟ್ರಿಕ್ಸ್ ಅನ್ನುಅನುವಾಗಿಸಲು, ವೀಸಾ, ಮಾಸ್ಟರ್​ಕಾರ್ಡ್, ರುಪೇ ಮತ್ತು ಅಮೆರಿಕನ್ ಎಕ್ಸ್​ಪ್ರೆಸ್​ನಂಥ ಪಾವತಿಜಾಲದ ಕಂಪನಿಗಳು ಪರಸ್ಪರ ಕೈಜೋಡಿಸಿವೆ. ಪ್ರಸ್ತುತ, ಅಮೆರಿಕನ್ ಎಕ್ಸ್​ಪ್ರೆಸ್ ಕಂಪನಿಯು ಈ ಕುರಿತಾದ ಸಮಗ್ರೀಕರಣ ಪ್ರಕ್ರಿಯೆಯ ಅಂತಿಮ ಹಂತದಲ್ಲಿದ್ದು, ಕಾರ್ಯರೂಪಕ್ಕೆ ಬರುವುದು ಬಾಕಿಯಿದೆ. ಆಂಡ್ರಾಯ್್ಡ ಮತ್ತು ‘iOS’ ಪ್ಲ್ಯಾಟ್​ಫಾರಂ/ವೇದಿಕೆ ಅಥವಾ ನೆಲೆಗಟ್ಟಿನಲ್ಲಿ ಭಾರತ್​ಕ್ಯುಆರ್ ಸಂಕೇತ ಕಾರ್ಯನಿರ್ವಹಿಸುತ್ತದೆಯೇ ಹೊರತು, ವಿಂಡೋಸ್ ಅಂತರ್ಗತವಾಗಿರುವ ವ್ಯವಸ್ಥೆಯಲ್ಲಲ್ಲ. ಆದಾಗ್ಯೂ, ಸ್ಮಾರ್ಟ್​ಫೋನ್ ಬಳಕೆದಾರರಲ್ಲದವರಿಗೂ ಒತ್ತಾಸೆಯಾಗಿ ನಿಲ್ಲುವ ದೃಷ್ಟಿಯಿಟ್ಟುಕೊಂಡು USSD (Unstructured Supplementary Service Data) ಮೂಲಕ ಪರಿಣಾಮಕಾರಿ ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ತರಲು ತಂತ್ರಜ್ಞರು ಕಸರತ್ತು ಮಾಡುತ್ತಿದ್ದಾರೆ.ಇದನ್ನು ಯಾರೆಲ್ಲ ಬಳಸಬಹುದು?ಪ್ರಸ್ತುತ, 15 ಬ್ಯಾಂಕುಗಳಷ್ಟೇ ಈ ನಿಟ್ಟಿನಲ್ಲಿ ಸನ್ನದ್ಧವಾಗಿದ್ದು, ಭಾರತ್​ಕ್ಯುಆರ್ ಸಂಕೇತದ ಪರಿಣಾಮಕಾರಿ ಅಳವಡಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಈ 15ಬ್ಯಾಂಕುಗಳಲ್ಲಿ ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್, ಡಿಸಿಬಿ ಬ್ಯಾಂಕ್ ಲಿಮಿಟೆಡ್, ಕರೂರ್ ವೈಶ್ಯ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆರ್​ಬಿಎಲ್ ಬ್ಯಾಂಕ್ ಲಿಮಿಟೆಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವಿಜಯಾ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಸೇರಿವೆ. ಓರ್ವ ಗ್ರಾಹಕರಾಗಿ ಭಾರತ್​ಕ್ಯುಆರ್ ಸಂಕೇತವನ್ನು ಬಳಸಲು ನೀವು ಸ್ಮಾರ್ಟ್ ಫೋನನ್ನು ಹೊಂದಿರಬೇಕಾಗುತ್ತದೆ ಮತ್ತು ಸದರಿ ಸಂಕೇತದೊಂದಿಗೆ ಹೊಂದಿಕೆಯಾಗುವ ‘ಬ್ಯಾಂಕ್ ಆಪ್’ ಅನ್ನು ಡೌನ್​ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಬಹುತೇಕ ಬ್ಯಾಂಕುಗಳು ಒಂದಕ್ಕಿಂತ ಹೆಚ್ಚು ಆಪ್​ಗಳನ್ನು ಹೊಂದಿರುತ್ತವೆಯಾದ್ದರಿಂದ, ಆಯ್ದ ಆಪ್​ಗಳನ್ನಷ್ಟೇ ಗುರಿಯಾಗಿಸಿಕೊಂಡು ಭಾರತ್​ಕ್ಯುಆರ್ ಸಂಕೇತವನ್ನು ಕಾರ್ಯರೂಪಕ್ಕೆ ತರಲಾಗಿದೆ. ಆದ್ದರಿಂದ ಭಾರತ್​ಕ್ಯುಆರ್ ಸಂಕೇತಕ್ಕೆ ಎಲ್ಲ ಆಪ್​ಗಳೂ ಸ್ಪಂದಿಸಲಾರವು. ಉದಾಹರಣೆಗೆ, ‘Pockets’ ಮತ್ತು ಐಸಿಐಸಿಐ ಮೊಬೈಲ್ ಬ್ಯಾಂಕಿಂಗ್ ಆಪ್ ಅನ್ನು ಐಸಿಐಸಿಐ ಬ್ಯಾಂಕು ಆಯ್ದುಕೊಂಡಿದ್ದರೆ, ಎಚ್​ಡಿಎಫ್​ಸಿ ಬ್ಯಾಂಕು ‘PayZapp’ನೊಂದಿಗೆ ಇದನ್ನು ಬಿಡುಗಡೆ ಮಾಡಿದೆ. ಪ್ರಸ್ತುತ, ಸದಸ್ಯ ಬ್ಯಾಂಕುಗಳೊಂದಿಗೆ ಡೆಬಿಟ್, ಕ್ರೆಡಿಟ್ ಮತ್ತು ಪ್ರೀಪೇಯ್್ಡ ಕಾರ್ಡಗಳನ್ನು ಹೊಂದಿರುವವರು ಈ ಸೇವೆಯನ್ನುಬಳಸಿಕೊಳ್ಳಬಹುದಾಗಿದ್ದು,‘Unified Payment Interface’ (UPI) ಒಳಗೊಂಡ ವ್ಯವಸ್ಥೆಯಲ್ಲಿ ಈ ಸೇವೆ ಲಭ್ಯವಿರುವುದಿಲ್ಲ. ಕೆಲಸ ಮಾಡುವುದು ಹೇಗೆ?ಭಾರತ್​ಕ್ಯುಆರ್ ಸಂಕೇತದಲ್ಲಿ ಸ್ಥಿರ/ಸ್ಥಾಯಿ ಮತ್ತು ಚಲನಶೀಲ (Static ಮತ್ತು dynamic) ಎಂಬ ಎರಡು ಬಗೆಗಳಿವೆ. ಸ್ಥಿರ/ಸ್ಥಾಯಿ ಕ್ಯುಆರ್ ಸಂಕೇತದ ವ್ಯವಸ್ಥೆಯಲ್ಲಿ, ಮೊದಲಿಗೆ ನೀವು ಸಂಕೇತವನ್ನು ಸ್ಕ್ಯಾನ್ ಮಾಡಿ, ಮೊತ್ತವನ್ನು ನಮೂದಿಸಿ, ಪಿನ್ ಸಂಖ್ಯೆಯನ್ನು ದಾಖಲಿಸುವ ಮೂಲಕ ವ್ಯವಹಾರಕ್ಕೆ ಅಧಿಕೃತತೆ ಒದಗಿಸಬೇಕಾಗುತ್ತದೆ. ಈ ಹಂತಗಳ ನಂತರ ಹಣವು ಸಂಬಂಧಿತ ಖಾತೆಯಿಂದ ಕಡಿತಗೊಳ್ಳುತ್ತದೆ. ಉದಾಹರಣೆಗೆ, ತರಕಾರಿ ವ್ಯಾಪಾರಿಯೊಬ್ಬನಿಂದನೀವು 500 ರೂ. ಮೌಲ್ಯದ ತರಕಾರಿ ಖರೀದಿಸಿದಿರಿ ಎಂದುಕೊಳ್ಳಿ; ಭಾರತ್​ಕ್ಯುಆರ್ ಬಳಸಿ ಈ ಸಂಬಂಧದ ಹಣ ಪಾವತಿಸಲು, ಸದರಿ ಮಳಿಗೆಯಲ್ಲಿ ನೀವು ಕ್ಯುಆರ್ ಸಂಕೇತವನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ.ನಂತರದಲ್ಲಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಮೊತ್ತವನ್ನು (ಈ ಸಂದರ್ಭದಲ್ಲಾದರೆ 500 ರೂ.) ಹಾಗೂ ನಿಮ್ಮ ಪಿನ್ ಸಂಖ್ಯೆಯನ್ನುನಮೂದಿಸಬೇಕಾಗುತ್ತದೆ. ಆಗ ಹಣವು ನಿಮ್ಮ ಸಂಬಂಧಿತ ಖಾತೆಯಿಂದ ಕಡಿತಗೊಂಡು ಸದರಿ ವ್ಯಾಪಾರಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಚಲನಶೀಲ ಕ್ಯುಆರ್ ಸಂಕೇತದ ವ್ಯವಸ್ಥೆಯಲ್ಲಾದರೆ, ವ್ಯಾಪಾರಿಯು ಪ್ರತಿ ಬಾರಿಯೂ ಹೊಸ ಕ್ಯುಆರ್ ಸಂಕೇತವನ್ನು ಸೃಷ್ಟಿಸುತ್ತಾನೆ. ಉದಾಹರಣೆಗೆ, ನೀವೊಂದು ರೆಸ್ಟೋರಂಟಿನಲ್ಲಿದ್ದು 1,000 ರೂ.ನಷ್ಟು ಬಿಲ್ ಆಗಿದೆ ಎಂದಿಟ್ಟುಕೊಳ್ಳಿ. ಅದರ ಮಾಲೀಕ/ನಿರ್ವಾಹಕನು ಕ್ಯುಆರ್ ಸಂಕೇತವೊಂದನ್ನು ಒಳಗೊಂಡಿರುವ ಬಿಲ್ ಅನ್ನುನಿಮಗೆ ನೀಡುತ್ತಾನೆ. ನೀವು ಸದರಿ ಸಂಕೇತವನ್ನೊಮ್ಮೆ ಸ್ಕ್ಯಾನ್ ಮಾಡಿ, ನಿಮ್ಮ ಪಿನ್ ಸಂಖ್ಯೆಯನ್ನು ನಮೂಸಿದರಾಯ್ತು; ಪಾವತಿ ಪ್ರಕ್ರಿಯೆ ನೆರವೇರುತ್ತದೆ. ನೀವು ಬಿಲ್ ಮೊತ್ತವನ್ನು ನಮೂದಿಸುವ ಅಗತ್ಯ ಬರುವುದಿಲ್ಲ.